Tag: ಲವ್

  • ಪ್ರೀತಿ ಹೆಸರಲ್ಲಿ ಅಪ್ರಾಪ್ತೆಯ ನಗ್ನ ಫೋಟೋ ಇಟ್ಕೊಂಡು ಬ್ಲಾಕ್‍ಮೇಲ್- ಆರೋಪಿ ಅರೆಸ್ಟ್

    ಪ್ರೀತಿ ಹೆಸರಲ್ಲಿ ಅಪ್ರಾಪ್ತೆಯ ನಗ್ನ ಫೋಟೋ ಇಟ್ಕೊಂಡು ಬ್ಲಾಕ್‍ಮೇಲ್- ಆರೋಪಿ ಅರೆಸ್ಟ್

    ತಿರುವನಂತಪುರಂ: ಅಪ್ರಾಪ್ತ ಬಾಲಕಿಯೊಬ್ಬಳನ್ನು ಪ್ರೀತಿಸುವ ನೆಪದಲ್ಲಿ ಆಕೆಯನ್ನು ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಇಬ್ಬರನ್ನು ಪೂವಾರ್ ಪೊಲೀಸರು ಬಂಧಿಸಿದ್ದಾರೆ.

    ಬಂಧಿತರನ್ನು ಆದಿತ್ಯನ್ (18) ಹಾಗೂ ಸೂರ್ಯ (18) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಇನ್ನಿಬ್ಬರು ಪಾಲುದಾರರಾಗಿದ್ದು, ಅವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಇದನ್ನೂ ಓದಿ: ಮಗನನ್ನು ಕೊಲೆಗೈದು ಅಪಘಾತವೆಂದು ಬಿಂಬಿಸಿದ ಪೋಷಕರು ಅರೆಸ್ಟ್

    ತಾನು ನಿನ್ನ ಪ್ರೀತಿಸುವುದಾಗಿ ನಂಬಿಸಿ ಅಪ್ರಾಪ್ತೆಯ ಜೊತೆಗಿನ ಕೆಲವೊಂದಷ್ಟು ಫೋಟೋಗಳನ್ನು ಪಡೆದುಕೊಳ್ಳುತ್ತಾನೆ. ಬಳಿಕ ತನ್ನ ಗೆಳೆಯರಿಗೆ ಆ ಫೋಟೋಗಳನ್ನು ಕಳುಹಿಸುತ್ತಾನೆ. ಇದೀಗ ನಾಲ್ವರು ಅಪ್ರಾಪ್ತೆಯ ಲೈಂಗಿಕ ದೌರ್ಜನ್ಯ (Sexually Abuse) ಪ್ರಕರಣದಲ್ಲಿದ್ದಾರೆ ಎಂಬುದಾಗಿ ತನಿಖೆಯ ವೇಳೆ ಬಯಲಾಗಿದೆ.

    ಇಷ್ಟು ಮಾತ್ರವಲ್ಲದೆ ಆರೋಪಿಗಳು ಅಪ್ರಾಪ್ತೆಗೆ ಬೆದರಿಕೆ ಹಾಕಿ 5 ಸಾವಿರ ರೂ. ಪಟಾಯಿಸಿಕೊಂಡಿದ್ದಾರೆ. ಈ ಎಲ್ಲಾ ಘಟನೆಯ ಬಳಿಕ ಬಾಲಕಿ ತನ್ನ ಪೋಷಕರ ಮುಂದೆ ನಡೆದ ಘಟನೆಯನ್ನು ವಿವರಿಸಿದ್ದಾಳೆ. ಆ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಕೂಡಲೇ ಪೊಲೀಸರು ಆರೋಪಿಗಳ ವಿರುದ್ಧ ಪೂವಾರ್ ಠಾಣೆ (Poovar police Station)ಯಲ್ಲಿ ದೂರು ದಾಖಲಿಸಿದ್ದಾರೆ.

  • ಹಣಕ್ಕಾಗಿ ನಾನು ಯಾರ ಹಿಂದೆಯೂ ಹೋಗಿಲ್ಲ : ನಟಿ ಪವಿತ್ರಾ ಲೋಕೇಶ್

    ಹಣಕ್ಕಾಗಿ ನಾನು ಯಾರ ಹಿಂದೆಯೂ ಹೋಗಿಲ್ಲ : ನಟಿ ಪವಿತ್ರಾ ಲೋಕೇಶ್

    ಟ ನರೇಶ್ ಅವರ ಕೌಟುಂಬಿಕ ಕಲಹಕ್ಕೆ ನಟಿ ಪವಿತ್ರಾ ಲೋಕೇಶ್ (Pavitra Lokesh) ಕಾರಣವೆಂದು ಹೇಳಲಾಗಿತ್ತು. ಪವಿತ್ರಾ ಲೋಕೇಶ್ ವಿರುದ್ಧ ನರೇಶ್ ಅವರ ಪತ್ನಿ ರಮ್ಯಾ ಹಲವು ಆರೋಪಗಳನ್ನು ಮಾಡಿದ್ದರು. ದುಡ್ಡಿಗಾಗಿ ಆಕೆ ನನ್ನ ಗಂಡನನ್ನು ಬುಟ್ಟಿಗೆ ಹಾಕಿಕೊಂಡಿದ್ದಾಳೆ ಎಂದು ರಮ್ಯಾ ಹೇಳಿಕೆ ನೀಡಿದ್ದರು. ಜೊತೆಗೆ ದುಡ್ಡಿನ ಲಾಲಸ್ಯಗಾಗಿ ಪವಿತ್ರಾ ಬೇರೊಬ್ಬ ಗಂಡಸಿನ ಜೊತೆ ಹೋಗಿರಬಹುದು ಎಂದು ನಟ ಸುಚೇಂದ್ರ ಪ್ರಸಾದ್ ಕೂಡ ಮಾತನಾಡಿದ್ದರು.

    ನರೇಶ್ (Naresh) ಮತ್ತು ಪವಿತ್ರಾ ಲೋಕೇಶ್ ಬದುಕಿನ ಕುರಿತು ಸಾಕಷ್ಟು ಗಾಸಿಪ್ ಗಳು ಹರಡಿದ್ದವು. ತಮ್ಮ ಬಗ್ಗೆ ಸಲ್ಲದ ಮಾತುಗಳನ್ನು ಆಡಿರುವ ಜನರಿಗಾಗಿ ಪವಿತ್ರಾ ಲೋಕೇಶ್ ತಿರುಗೇಟು ನೀಡಿದ್ದಾರೆ. ‘ಬೇರೆಯವರ ದುಡ್ಡಿನಲ್ಲಿ ಬದುಕುವ ಅವಶ್ಯಕತೆ ನನಗಿಲ್ಲ. ನಾನು ದುಡಿದ ದುಡ್ಡಿನಲ್ಲೇ ಜೀವನ ನಡೆಸುತ್ತಿರುವ. ಯಾರದೋ ದುಡ್ಡಿನ ಆಸೆಗೆ ಇನ್ನ್ಯಾವುದೋ ಮಾರ್ಗವನ್ನು ಹಿಡಿದಿಲ್ಲ’ ಎಂದಿದ್ದಾರೆ ಪವಿತ್ರಾ ಲೋಕೇಶ್. ಇದನ್ನೂ ಓದಿ:ಜನಾರ್ದನ್ ರೆಡ್ಡಿಗೂ ‘ಆದಿಕೇಶವ’ ಸಿನಿಮಾ ಕಥೆಗೂ ಸಂಬಂಧ ಇದೆಯಾ?

    ತಮ್ಮ ತಂದೆಯು ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟವರು. ನಂತರ ನಟರಾದರು. ನಾನು ಈಗಲೂ ಡಾ.ರಾಜ್ ಕುಮಾರ್ ಕೊಟ್ಟ ಬೆಳ್ಳಿ ಲೋಟದಲ್ಲೇ ಚಹಾ ಕುಡಿಯುತ್ತೇನೆ. ನನ್ನ ವೈಯಕ್ತಿಕ ಬದುಕಿನ ಬಗ್ಗೆ ಮಾತನಾಡಲು ಯಾರಿಗೂ ಹಕ್ಕಿಲ್ಲ. ಈ ವಿಷಯದಲ್ಲಿ ನನಗೆ ನೋವಾಗಿದೆ ಎಂದು ಪವಿತ್ರಾ ಲೋಕೇಶ್ ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ.

    ತೆಲುಗು ನಟ ನರೇಶ್ ಹಾಗೂ ಕನ್ನಡದ ನಟಿ ಪವಿತ್ರಾ ಲೋಕೇಶ್ ನಡುವಿನ ಸಂಬಂಧವೇನು ಎನ್ನುವ ಕುರಿತು ಹಲವು ದಿನಗಳಿಂದ ಚರ್ಚೆ ನಡೆಯುತ್ತಲೇ ಇದೆ. ಪರೋಕ್ಷವಾಗಿ ಅವರಿಬ್ಬರೂ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿದ್ದಾರೆ ಎನ್ನುವಂತೆ ತೋರಿಸುತ್ತಲೇ ಬಂದರು. ಇದೀಗ ತಮ್ಮಿಬ್ಬರ ನಡುವಿನ ಸಂಬಂಧವನ್ನು ಬಹಿರಂಗ ಪಡಿಸಿದ್ದಾರೆ. ತಮ್ಮ ಸಿನಿಮಾ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿದ್ದ ಅವರು, ತಾವು ಸಹಜೀವನ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.

    ಮಾಧ್ಯಮಗಳೊಂದಿಗೆ ಮಾತನಾಡಿದ ನರೇಶ್, ‘ಸುಪ್ರೀಂಕೋರ್ಟ್ ಕೂಡ ಲೀವ್ ಇನ್ ರಿಲೇಶನ್ ಶಿಪ್ ಅನ್ನು ಮದುವೆಗೆ (Marriage) ಸಮ ಎಂದು ಹೇಳಿದೆ. ಹಾಗಾಗಿ ನಾವು ಸಹಜೀವನ ನಡೆಸುತ್ತಿದ್ದೇವೆ. ನಾನು ಸಿಂಗಲ್ ಆಗಿ ಇದ್ದೀನಿ ಅಂತ ಅಂದ್ಕೊಳ್ಳಬೇಡಿ. ನಾವಿಬ್ಬರೂ ಒಟ್ಟಿಗೆ ಇದ್ದೇವೆ. ಖುಷಿಯಾಗಿದ್ದೇವೆ’ ಎಂದು ಪವಿತ್ರಾ ಲೋಕೇಶ್ ಕೈ ಹಿಡಿದುಕೊಂಡೇ ಹೇಳಿದರು.

  • ಡಾಲಿ ಧನಂಜಯ್ ಮದುವೆ ಕುರಿತು ಮಾತನಾಡಿದ ಶಿವರಾಜ್ ಕುಮಾರ್

    ಡಾಲಿ ಧನಂಜಯ್ ಮದುವೆ ಕುರಿತು ಮಾತನಾಡಿದ ಶಿವರಾಜ್ ಕುಮಾರ್

    ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಮೂಲಕ ಡಾಲಿ ಧನಂಜಯ್ (Dolly Dhananjay) ಕುರಿತಾದ ಹಲವು ವಿಷಯಗಳು ಅಭಿಮಾನಿಗಳಿಗೆ ಗೊತ್ತಾಗಿವೆ. ಅವರ ಸಿನಿಮಾ, ವೈಯಕ್ತಿಕ ಬದುಕು, ಅವರ ಸಾಧನೆ ಹೀಗೆ ನಾನಾ ವಿಷಯಗಳನ್ನು ಡಾಲಿ ಹಂಚಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಡಾಲಿಯ ಮದುವೆ (Marriage) ಕುರಿತು ಚರ್ಚೆ ಕೂಡ ನಡೆದಿದೆ. ಸ್ವತಃ ಡಾಲಿ ಕುಟುಂಬವೇ ಬೇಗ ಮದುವೆ ಆಗು ಎಂದು ಕೇಳಿತ್ತು. ಆಗ ನಕ್ಕು ಸುಮ್ಮನಾಗಿದ್ದರು ಧನಂಜಯ್.

    ಡಾಲಿ ಮದುವೆ ಕುರಿತು ಸ್ವತಃ ಶಿವರಾಜ್ ಕುಮಾರ್ (Shivaraj Kumar) ಕೂಡ ಪ್ರಸ್ತಾಪ ಮಾಡಿದ್ದಾರೆ. ಬೇಗ ಮದುವೆ ಆಗು ಡಾಲಿ ಎಂದು ಪ್ರಶ್ನೆ ಮಾಡಿದ್ದಾರೆ. ಶಿವಣ್ಣ ಮದುವೆ ವಿಚಾರ ಕೇಳುತ್ತಿದ್ದಂತೆಯೆ ಡಾಲಿ ನಗುತ್ತಲೇ ‘ನೀವು ಹೇಳಿದ್ಮೇಲೆ ಇಲ್ಲ ಅನ್ನೋಕೆ ಆಗತ್ತಾ ಅಣ್ಣ, ಹುಡುಗಿ ಸಿಕ್ಕ ತಕ್ಷಣವೇ ಮದುವೆ’ ಎಂದಿದ್ದಾರೆ. ಈ ಮೂಲಕ ತಾವು ಹುಡುಗಿ ಹುಡುಕುತ್ತಿರುವ ವಿಚಾರವನ್ನೂ ಅವರು ಅಭಿಮಾನಿಗಳಿಗೆ ತಿಳಿಸಿದ್ದಾರೆ. ಇದನ್ನೂ ಓದಿ:ಸಲ್ಮಾನ್ ಖಾನ್ ನಂಬರ್ ಬ್ಲಾಕ್ ಮಾಡಿದ್ದರಂತೆ ಸಿದ್ಧಾರ್ಥ್ ಶುಕ್ಲಾ ಪ್ರೇಯಸಿ!

    ಡಾಲಿ ಮತ್ತು ಅಮೃತಾ ಅಯ್ಯಂಗಾರ್ ಕುರಿತು ಅನೇಕ ಗಾಸಿಪ್ ಗಳು ಕೇಳಿ ಬಂದಿದ್ದವು. ಡಾಲಿ ಆಪ್ತರು ಕೂಡ ಇದಕ್ಕೆ ಪುಷ್ಠಿ ನೀಡುವಂತಹ ಮಾತುಗಳನ್ನು ಆಡಿದ್ದರು. ಆದರೆ, ಡಾಲಿ ಈ ಕುರಿತು ಯಾವುದೇ ಮಾತುಗಳನ್ನು ಆಡಲಿಲ್ಲ. ಪ್ರೀತಿ ಪ್ರೇಮದ ವಿಷಯವನ್ನೂ ಮಾತನಾಡಲಿಲ್ಲ. ಅಮೃತಾ ಅಯ್ಯಂಗಾರ್ ಜೊತೆಗಿನ ಪ್ರೇಮವನ್ನು ಗಾಸಿಪ್ ಎನ್ನುವಂತೆ ಮತ್ತೆ ತೇಲಿಸಿಬಿಟ್ಟರು.

    ಧನಂಜಯ್ ಕುರಿತಾಗಿ ಸಾಕಷ್ಟು ವಿಚಾರಗಳನ್ನು ಈ ಶೋ ಜನರ ಮುಂದಿಟ್ಟಿದೆ. ಅನೇಕರು ಭಾವುಕರಾಗಿಯೇ ಎರಡೂ ಕಂತುಗಳನ್ನು ನೋಡಿದ್ದಾರೆ. ಧನಂಜಯ್ ಮೇಲೆ ಮತ್ತಷ್ಟು ಅಭಿಮಾನವನ್ನು ತೋರಿದ್ದಾರೆ. ಇಡೀ ಕಾರ್ಯಕ್ರಮ ಒಂದು ರೀತಿಯಲ್ಲಿ ಭಾವುಕತೆಯಲ್ಲಿಯೇ ಕೊನೆಗೊಂಡಿತು.

  • 4 ವರ್ಷದ ಪ್ರೀತಿಗೆ ಎಳ್ಳುನೀರು- ರೊಚ್ಚಿಗೆದ್ದು ಅಪ್ರಾಪ್ತ ಪ್ರಿಯತಮೆಗೆ ಚಾಕು ಇರಿದ!

    4 ವರ್ಷದ ಪ್ರೀತಿಗೆ ಎಳ್ಳುನೀರು- ರೊಚ್ಚಿಗೆದ್ದು ಅಪ್ರಾಪ್ತ ಪ್ರಿಯತಮೆಗೆ ಚಾಕು ಇರಿದ!

    ನವದೆಹಲಿ: 4 ವರ್ಷ ಪ್ರೀತಿಸಿ ಇದೀಗ ಬ್ರೇಕಪ್ ಮಾಡಿಕೊಂಡಿದ್ದಕ್ಕೆ ರೊಚ್ಚಿಗೆದ್ದು ಅಪ್ರಾಪ್ತ ಪ್ರಿಯತಮೆಗೆ ಚಾಕು ಇರಿದ ಘಟನೆ ಆಗ್ನೇಯ ದೆಹಲಿಯ ಬದರ್‍ಪುರ ಪ್ರದೇಶದಲ್ಲಿ ನಡೆದಿದೆ.

    ಆರೋಪಿಯನ್ನು ಮದುವೆಯಾಗಲು ಒಪ್ಪದಿದ್ದಕ್ಕೆ ಈ ಕೃತ್ಯ ಎಸಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಅಪ್ರಾಪ್ತೆ ತನ್ನ ಗೆಳತಿಯ ಮನೆಗೆ ಹೋಗಿದ್ದ ಸಂದರ್ಭದಲ್ಲಿ ಅಂದರೆ ಮಂಗಳವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಇದನ್ನೂ ಓದಿಮಕ್ಕಳಾಗಲಿಲ್ಲ ಎಂಬ‌ ಕೊರಗಿನಿಂದ ಬಾವಿಗೆ ಬಿದ್ದು ಮಹಿಳೆ ಆತ್ಮಹತ್ಯೆ

    ಕಳೆದ 4 ವರ್ಷಗಳಿಂದ ಆರೋಪಿ ಹಾಗೂ ಸಂತ್ರಸ್ತೆ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇತ್ತೀಚೆಗೆ ಬಾಲಕಿ ಬ್ರೇಕಪ್ ಮಾಡಿಕೊಳ್ಳಲು ನಿರ್ಧಾರ ಮಾಡಿದ್ದಾಳೆ. ಮದುವೆಯಾಗಲು ಇಷ್ಟವಿಲ್ಲ ಎಂದು ಹೇಳಿದ್ದಾಳೆ. ಇದರಿಂದ ಸಿಟ್ಟಿಗೆದ್ದಿರುವ ಆರೋಪಿ ಆಕೆಯ ಮೇಲೆ ಮಾರಾಕಾಸ್ತ್ರದಿಂದ ದಾಳಿ ಮಾಡಿದ್ದಾನೆ. ಪರಿಣಾಮ ಬಾಲಕಿ ಕತ್ತು ಹಾಗೂ ತಲೆಗೆ ಗಂಭೀರ ಗಾಯಗಳಾಗಿವೆ. ಕೂಡಲೇ ಆಕೆಯನ್ನು ಸ್ಥಳೀಯ ಏಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

    ಇತ್ತ ಘಟನೆ ಸಂಬಂಧ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಮದುವೆಯಾಗಲು ನಿರಾಕರಿಸಿದ್ದರಿಂದ ಆಕೆಯನ್ನು ಕೊಲೆ ಮಾಡಲು ನಿರ್ಧರಿಸಿದೆ. ಹೀಗಾಗಿ ಚಾಕುವಿನಿಂದ ಆಕೆಯ ಮೇಲೆ ಹಲ್ಲೆ ನಡೆಸಿರುವುದಾಗಿ ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸದ್ಯ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 307 (ಕೊಲೆ ಯತ್ನ), 506 (ಕ್ರಿಮಿನಲ್ ಬೆದರಿಕೆ) ಮೊದಲಾದ ಕೆಸ್ ದಾಖಲಿಸಿಕೊಂಡಿದ್ದಾರೆ.

  • ಲವ್ ಫೆಲ್ಯೂರ್- ಯುವತಿ ನೇಣಿಗೆ ಶರಣು

    ಲವ್ ಫೆಲ್ಯೂರ್- ಯುವತಿ ನೇಣಿಗೆ ಶರಣು

    ಗದಗ: ಯುವತಿಯೊಬ್ಬಳು ನೇಣಿಗೆ ಶರಣಾದ ಘಟನೆ ಗದಗ ತಾಲೂಕಿನ ಕಣಗಿನಹಾಳ ಗ್ರಾಮದಲ್ಲಿ ನಡೆದಿದೆ. ಪಾರ್ವತಿ ಬಾವಿ (24) ಮೃತ ಯುವತಿ. ಯುವತಿ ಆತ್ಮಹತ್ಯೆಗೆ ಲವ್ ಫೆಲ್ಯೂರ್ (Love Failure) ಕಾರಣ ಎಂದು ಹೇಳಲಾಗುತ್ತಿದೆ.

    ರೈಲ್ವೆ ಕೀಪರ್ ಆಗಿ ಕೆಲಸ ಮಾಡ್ತಿದ್ದ ಯುವತಿ, ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈಕೆ ಅನ್ಯ ಕೋಮಿನ ಯುವಕನೊಬ್ಬನನ್ನು ಪ್ರೀತಿ ಮಾಡುತ್ತಿದ್ದಳು. ಇತ್ತೀಚೆಗೆ ಪ್ರೇಮಿಗಳಿಬ್ಬರು ಜಗಳ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

    ಪ್ರಿಯತಮನ ಜೊತೆ ಜಗಳವಾಗಿದ್ದರಿಂದ ನೊಂದ ಯುವತಿ ಮನೆಯಲ್ಲಿಯೇ ನೇಣು ಬಿಗಿದು ಸಾವಿಗೆ ಶರಣಾಗಿದ್ದಾಳೆ. ಆತ್ಮಹತ್ಯೆಗೂ ಮುನ್ನ ಆಕೆ ಡೆತ್ ನೋಟ್ ಬರೆದಿಟ್ಟಿದ್ದು, ಪೊಲೀಸರು ಬಹಿರಂಗಪಡಿಸಿಲ್ಲ.

    ಸ್ಥಳಕ್ಕೆ ಗ್ರಾಮೀಣ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಗದಗ ಗ್ರಾಮೀಣ ಪೊಲೀಸ್ ಠಾಣೆ (Gadag Rural Police Station) ಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಪ್ರೀತಿಸಿ ಮದುವೆಯಾದ ಮೂರೇ ದಿನಕ್ಕೆ ಯುವತಿಯ ಹತ್ಯೆ – ದಲಿತಳು ಎಂದು ಕೊಲೆ ಆರೋಪ

  • ಜಾಕ್ವೆಲಿನ್ ಮೇಲೆ ಮತ್ತೆ ಲವ್? : ಜೈಲಿನಿಂದಲೇ ಸಂದೇಶ ಕಳುಹಿಸಿದ ಸುಕೇಶ್

    ಹುಕೋಟಿ ವಂಚನೆ ಆರೋಪಿ ಸುಕೇಶ್ ಚಂದ್ರಶೇಖರ್ (Sukesh Chandrasekhar) ಜೈಲಿನಲ್ಲಿದ್ದುಕೊಂಡೇ ನಟಿ ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez) ಪರ ಬ್ಯಾಟ್ ಮಾಡುತ್ತಿದ್ದಾನೆ. ಮೊನ್ನೆಯಷ್ಟೇ ಕೋರ್ಟಿಗೆ ಬಂದಿದ್ದ ಸುಕೇಶ್, ನಟಿಯ ಬಗ್ಗೆ ಅಚ್ಚರಿ ಎನ್ನುವಂತಹ ಮಾತುಗಳನ್ನು ಆಡಿದ್ದಾನೆ. ತನ್ನ ಮೇಲಿರುವ ಆರೋಪಕ್ಕೂ ಜಾಕ್ವೆಲಿನ್ ಗೂ ಯಾವುದೇ ಸಂಬಂಧವಿಲ್ಲ. ಆಕೆ ಅಮಾಯಕಿ ಎನ್ನುವ ಅರ್ಥದಲ್ಲಿ ಹೇಳಿಕೆ ನೀಡಿದ್ದಾನೆ.

    ಕೋರ್ಟಿನಲ್ಲಿ ಜಾಕ್ವೆಲಿನ್ ಪರ ಮಾತನಾಡಿದ್ದ ಸುಕೇಶ್, ಆಚೆ ಬಂದ ನಂತರ ಪ್ರೇಮಿಗಳ ದಿನಕ್ಕೆ ಆ ನಟಿಗೆ ಶುಭಾಶಯ ಕೋರಿದ್ದ. ಜಾಕ್ವೆಲಿನ್ ತುಂಬಾ ಒಳ್ಳೆಯ ಹುಡುಗಿ. ಆಕೆ ಯಾವ ತಪ್ಪು ಮಾಡಿಲ್ಲ. ಆಕೆಯ ಮೇಲೆ ಸುಖಾಸುಮ್ಮನೆ ಆರೋಪ ಮಾಡಲಾಗುತ್ತಿದೆ. ಅದಲ್ಲೆವನ್ನೂ ಎದುರಿಸುವ ಶಕ್ತಿ ಆಕೆಗೆ ಇದೆ ಎಂದು ಹೊಗಳಿದ್ದ. ಈ ಕೇಸ್ ನಲ್ಲಿ ಆಕೆ ಗೆದ್ದು ಬರುತ್ತಾಳೆ ಎನ್ನುವ ವಿಶ್ವಾಸವನ್ನೂ ವ್ಯಕ್ತ ಪಡಿಸಿದ್ದ. ಇದನ್ನೂ ಓದಿ: ಹೊಂಬಾಳೆ ಫಿಲ್ಮ್ ಯುವ ಚಿತ್ರಕ್ಕೆ ರುಕ್ಮಿಣಿ ವಸಂತ್ ನಾಯಕಿನಾ? ಸ್ಪಷ್ಟನೆ ನೀಡಿದ ನಟಿ

    ಇದೀಗ ಜೈಲಿನಿಂದ ಮತ್ತೊಂದು ಸಂದೇಶವನ್ನು ಸುಕೇಶ್ ಕಳುಹಿಸಿದ್ದಾನೆ. ‘ಮುಂದಿನ ವರ್ಷ ನಾನು ಚುನಾವಣೆಗೆ ನಿಲ್ಲುತ್ತೇನೆ. ನಾನು ನಿನ್ನನ್ನು ರಕ್ಷಿಸುತ್ತೇನೆ’ ಎಂದು ಅಭಯ ನೀಡಿದ್ದಾನೆ. ಸುಕೇಶ್ ಪ್ರಕರಣದಿಂದಾಗಿ ಜಾಕ್ವೆಲಿನ್ ಕೂಡ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದರು. ಕೋರ್ಟಿಗೂ ಅಲೆದಾಡುತ್ತಿದ್ದಾರೆ. ಅಲ್ಲದೇ, ಹಲವು ರೀತಿಯಲ್ಲೂ ಅವಮಾನ ಎದುರಿಸಿದ್ದಾರೆ. ಅಲ್ಲದೇ, ಸುಕೇಶ್ ವಿರುದ್ಧವೇ ಅವರು ಮಾತನಾಡಿದ್ದಾರೆ. ಆದರೂ, ಸುಕೇಶ್ ಜೈಲಿನಿಂದಲೇ ಜಾಕ್ವೆಲಿನ್ ಪರ ಮಾತನಾಡಿದ್ದಾನೆ.

    ಜಾಕ್ವೆಲಿನ್   ಮತ್ತು ಸುಕೇಶ್ ಇಬ್ಬರೂ ಡೇಟಿಂಗ್ ಮಾಡುತ್ತಿದ್ದರು ಎನ್ನುವ ಕಾರಣಕ್ಕಾಗಿ ಬಹುಕೋಟಿ ವಂಚನೆ ಪ್ರಕರಣದಲ್ಲಿ ಜಾಕ್ವೆಲಿನ್ ಹೆಸರು ಕೇಳಿ ಬಂದಿತ್ತು. ಜಾರಿ ನಿರ್ದೇಶನಾಲಯವು ಜಾಕ್ಲಿನ್ ಮೇಲೆಯೂ ಆರೋಪ ಮಾಡಿತ್ತು. ತನಿಖೆಯನ್ನೂ ನಡೆಸಿತ್ತು. ನಿರಂತರವಾಗಿ ಇಬ್ಬರ ಮೇಲೂ ತನಿಖೆ ನಡೆದಿದೆ. ಹೀಗಾಗಿ ಜಾಕ್ವೆಲಿನ್ ಪರ ಸುಕೇಶ್ ನಿಂತುಕೊಂಡಿದ್ದಾನೆ.

  • ಬೆಂಗಳೂರಲ್ಲಿ ಪಾಕ್ ಪ್ರೇಮಿ ಪತ್ತೆ ಪ್ರಕರಣ – ಪ್ಯೂರ್ ಲವ್‍ಗಾಗಿ ಭಾರತಕ್ಕೆ ಅಕ್ರಮ ಪ್ರವೇಶ

    ಬೆಂಗಳೂರಲ್ಲಿ ಪಾಕ್ ಪ್ರೇಮಿ ಪತ್ತೆ ಪ್ರಕರಣ – ಪ್ಯೂರ್ ಲವ್‍ಗಾಗಿ ಭಾರತಕ್ಕೆ ಅಕ್ರಮ ಪ್ರವೇಶ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಪಾಕಿಸ್ತಾನ (Pakistan) ದ ಯುವತಿ ಪತ್ತೆ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಗಳಿಗೆ ರಾಜ್ಯ ಅಂತರಿಕ ಭದ್ರತಾದಳ ಮತ್ರು ರಾಜ್ಯ ಗುಪ್ತಚರ ಇಲಾಖೆಯಿಂದ ವರದಿ ಸಲ್ಲಿಕೆ ಮಾಡಲಾಗಿದೆ. ಇದು ಪಕ್ಕಾ ಇಂಡಿಯಾ-ಪಾಕಿಸ್ತಾನ ಪ್ರೇಮ್ ಕಹಾನಿಯಾಗಿದ್ದು, ಯಾವುದೇ ಸ್ಪೈ ಉದ್ದೇಶವಿಲ್ಲ.

    ಪಾಕಿಸ್ತಾನದ ಯುವತಿ ಇಕ್ರಾ ಹಾಗೂ ಬಿಹಾರ (Bihar) ದ ಮುಲಾಯಂ ಸಿಂಗ್ ಯಾದವ್ ಇಬ್ಬರಿಗೂ ಯಾವುದೇ ಕ್ರಿಮಿನಲ್ ಬ್ಯಾಗ್ರೌಂಡ್ ಸಹ ಇಲ್ಲ ಅಂತಾ ವರದಿ ನೀಡಲಾಗಿದೆ. ನಾಲ್ಕು ವರ್ಷಗಳ ಪ್ರೀತಿ ಬಳಿಕ ಭಾರತಕ್ಕೆ ಬರಲು ಯುವತಿ ಸಿದ್ದವಾಗಿದ್ದಳು. ಮನೆಯವರ ಒಪ್ಪಿಗೆ ಪಡೆದೆ ಭಾರತಕ್ಕೆ ಬಂದಿದ್ದಾಳೆ. ಇದನ್ನೂ ಓದಿಮದುವೆಗೂ ಮುಂಚೆ ಕಂಡೀಷನ್ಸ್ ಅಪ್ಲೈ- ಬೆಂಗಳೂರಿನ ವಧು, ವರರ ನಯಾ ಟ್ರೆಂಡ್

    ಪಾಕಿಸ್ತಾನದ ಹೈದರಾಬಾದ್‍ (Hyderabad) ನಿಂದ ಕರಾಚಿಗೆ ಹೋಗಿದ್ದ ಯುವತಿ, ಅಲ್ಲಿಂದ ದುಬೈ (Dubai) ಗೆ ಹೋಗಿ ದುಬೈನಿಂದ ನೇಪಾಳಕ್ಕೆ ಬಂದಿದ್ದಳು. ನೇಪಾಳಕ್ಕೆ ಹೋಗಿ ಯುವತಿಯನ್ನ ಕರೆದುಕೊಂಡು ಬಂದಿದ್ದ ಮುಲಾಯಂಸಿಂಗ್ ಯಾದವ್. ಉತ್ತರಪ್ರದೇಶದಿಂದ ಬೆಂಗಳೂರಿಗೆ ಬಂದು ಬೆಳ್ಳಂದೂರು ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ದಳು. ಪೊಲೀಸರು ಪತ್ತೆ ಮಾಡಿದ ಬಳಿಕ ಯುವತಿಯ ಬಗ್ಗೆ ಸಂಪೂರ್ಣ ಮಾಹಿತಿ ಜಾಲಾಡಿದ್ದ ಐಎಸ್‍ಡಿ ಹಾಗೂ ಗುಪ್ತಚರ ಇಲಾಖೆ ಪ್ರೀತಿಗಾಗಿಯೇ ಇಕ್ರಾ ಗಡಿ ದಾಟಿ ಬಂದಿರುವುದು ಧೃಡವಾಗಿದೆ. ಇದನ್ನೂ ಓದಿ: ಪಾಕ್ ಯುವತಿಯ ಮತ್ತೊಂದು ವರಸೆ- ಜೈಲಿಗಾದ್ರೂ ಹಾಕಿ, ನೇಣಿಗಾದ್ರೂ ಹಾಕಿ, ಭಾರತದಲ್ಲೇ ಇರ್ತೀನಿ!

    ಸದ್ಯ ಇನ್ನು ಎಫ್ ಆರ್ ಆರ್ ಒ ವಶದಲ್ಲಿರುವ ಇಕ್ರಾಳನ್ನ ಗಡಿ ಹೊರಗೆ ಬಿಡೋಕೆ ಮಾತುಕತೆ ನಡೆಸ್ತಿದೆ. ಪ್ರೀತಿಗಾಗಿ ಶತೃರಾಷ್ಟ್ರದಿಂದ ಯುವತಿಯನ್ನ ಕರೆತಂದ ಗುರುತರ ಆರೋಪ ಮುಲಾಯಂ ಸಿಂಗ್ ಮೇಲಿದ್ದು, ವಿಚಾರಣೆ ನಡೆಯುತ್ತಿದೆ. ಇದನ್ನೂ ಓದಿ: ಲೂಡೋ ಆಡುವಾಗ ಲವ್‌ – ಪಾಕ್‌ ಗೆಳತಿಯನ್ನು ಮದ್ವೆಯಾಗಿದ್ದ ಬೆಂಗ್ಳೂರು ಸೆಕ್ಯೂರಿಟಿ ಗಾರ್ಡ್‌ ಅರೆಸ್ಟ್‌

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಎಂಜಿನಿಯರಿಂಗ್ ಕಾಲೇಜಿನಲ್ಲೇ ವಿದ್ಯಾರ್ಥಿನಿಗೆ ಚಾಕು ಇರಿದು ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿ

    ಎಂಜಿನಿಯರಿಂಗ್ ಕಾಲೇಜಿನಲ್ಲೇ ವಿದ್ಯಾರ್ಥಿನಿಗೆ ಚಾಕು ಇರಿದು ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿ

    ಬೆಂಗಳೂರು: ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಪ್ರೆಸಿಡೆನ್ಸಿ ಕಾಲೇಜಿನ (Presidency University Bengaluru) ಬಿ.ಟೆಕ್ ವಿದ್ಯಾರ್ಥಿನಿಗೆ (BTech Student) ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಬಳಿಕ ತಾನೂ ಚಾಕು ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ರಾಜಾನುಕುಂಟೆ ಠಾಣಾ (Rajanukunte Police Station) ವ್ಯಾಪ್ತಿಯಲ್ಲಿ ನಡೆದಿದೆ.

    ನೃಪತುಂಗ ರಸ್ತೆಯಲ್ಲಿರುವ ಎಂಜಿನಿಯರಿಂಗ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿ.ಇ ವಿದ್ಯಾರ್ಥಿ ಪವನ್ ಕಲ್ಯಾಣ್ ಕೊಲೆ ಆರೋಪಿ. ಪ್ರೆಸಿಡೆನ್ಸಿ ಕಾಲೇಜಿನ ಲಯಸ್ಮಿತ (19) ಮೃತ ಯುವತಿ. ಘಟನೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಆದ್ರೆ ಪ್ರೀತಿ ವಿಚಾರಕ್ಕೆ ಘಟನೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಕರುವಿನ ಮೇಲೆ ಅನೈಸರ್ಗಿಕ ಲೈಂಗಿಕ ಕ್ರಿಯೆ- ಯುವಕ ಅರೆಸ್ಟ್

    ರಾಜಾನುಕುಂಟೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿ, ಗಾಯಾಳು ವಿದ್ಯಾರ್ಥಿಯನ್ನು ಸ್ಪರ್ಶ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದೀಗ ಘಟನಾ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ (Bengaluru Rural) ಎಸ್ಪಿ ಸಹ ಭೇಟಿ ನೀಡಿ ವಿಚಾರಣೆ ನಡೆಸಲಿದ್ದಾರೆ. ಇದನ್ನೂ ಓದಿ: ಆಸ್ಟ್ರೇಲಿಯಾ ಬೀಚ್‌ನಲ್ಲಿ ಭೀಕರ ಹೆಲಿಕಾಪ್ಟರ್ ದುರಂತ – ನಾಲ್ವರು ಸಾವು, ಮೂವರಿಗೆ ಗಾಯ

    CRIME 2

    19 ವರ್ಷದ ಲಯಸ್ಮಿತ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಬಿ.ಟೆಕ್ ಓದುತ್ತಿದ್ದಳು. ಇಂದು ಅಲ್ಲಿಗೆ ಬಂದಿದ್ದ ಸ್ಪರ್ಶ್ ಕ್ಲಾಸ್ ರೂಮಿನಲ್ಲಿದ್ದ ಲಯಸ್ಮಿತಾಗೆ ಹೊರಗೆ ಬರಲು ಹೇಳಿದ್ದಾನೆ. ಆಕೆ ಬಂದ ಕೂಡಲೇ 10ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ಕೊಂದಿದ್ದಾನೆ. ಬಳಿಕ ತಾನೂ ಕೂಡ ಚಾಕುವಿನಿಂದ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸದ್ಯ ಸ್ಥಳಕ್ಕಾಗಿಮಿಸಿರುವ ಪೊಲೀಸರು ಸ್ಪರ್ಶ್ನನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪವನ್ ಕಲ್ಯಾಣ್ ಸ್ಥಿತಿ ಕೂಡ ಚಿಂತಾಜನಕವಾಗಿದೆ ಎಂದು ತಿಳಿಸಿದ್ದಾರೆ.

    ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊಲೆ ಆರೋಪಿ ಪವನ್ ಕಲ್ಯಾಣ್, ನೃಪತುಂಗ ರಸ್ತೆಯಲ್ಲಿರೋ ಎಂಜಿನಿಯರಿಂಗ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಇ ಪದವಿ ಓದುತ್ತಿದ್ದ.

    Live Tv
    [brid partner=56869869 player=32851 video=960834 autoplay=true]

  • ಬಿಗ್ ಬಾಸ್ : ಅಮೂಲ್ಯಗೆ ಅಹಂಕಾರ ಜಾಸ್ತಿ ಎಂದು ದೂರ ಉಳಿದ ರಾಕೇಶ್ ಅಡಿಗ

    ಬಿಗ್ ಬಾಸ್ : ಅಮೂಲ್ಯಗೆ ಅಹಂಕಾರ ಜಾಸ್ತಿ ಎಂದು ದೂರ ಉಳಿದ ರಾಕೇಶ್ ಅಡಿಗ

    ಬಿಗ್ ಬಾಸ್  (Big Boss) ಮನೆಯಲ್ಲಿ ರಾಕೇಶ್ ಅಡಿಗ ಮತ್ತು ಅಮೂಲ್ಯ (Amulya) ಗೌಡ ಜೋಡಿಯೇ ವಿಚಿತ್ರ. ಇವರು ಯಾವಾಗ ಹೇಗೆ ಇರುತ್ತಾರೆ ಎನ್ನುವುದು ಊಹಿಸಲು ಸಾಧ್ಯವಿಲ್ಲ. ಒಂದು ಹೊತ್ತಲ್ಲಿ ಅಪ್ಪಟ ಪ್ರೇಮಿಗಳಂತೆ ಕಾಣಿಸಿಕೊಂಡರೆ ಮತ್ತೊಂದು ಹೊತ್ತಲ್ಲಿ ಜನ್ಮಜನ್ಮಾಂತರದ ವೈರಿಗಳು ಎನ್ನುವಂತೆ ಮುನಿಸಿಕೊಳ್ಳುತ್ತಾರೆ. ನಿನ್ನೆಯೂ ಹಾಗೆಯೇ ಆಯಿತು. ಮಂಜು ಪಾವಗಡ ಮನೆಗೆ ಎಂಟ್ರಿ ಕೊಟ್ಟ ನಂತರ ಅಮೂಲ್ಯ ಬದಲಾಗಿದ್ದಾರೆ ಎನ್ನುವ ಕಾರಣಕ್ಕಾಗಿ ಅಮೂಲ್ಯಗೆ ಅಹಂಕಾರ ಜಾಸ್ತಿ ಎಂದಿದ್ದಾರೆ ರಾಕೇಶ್. ಹಾಗಾಗಿ ಅಂತರವನ್ನು ಕಾಪಾಡಿಕೊಳ್ಳುತ್ತಿದ್ದಾರೆ.

    ಬಿಗ್ ಬಾಸ್ ಮನೆಗೆ ಹಾಸ್ಯ ಕಲಾವಿದ ಮಂಜು ಪಾವಗಡ (Manju Pavagada) ಪ್ರವೇಶ ಮಾಡಿದ್ದರು. ಈಗಾಗಲೇ ಬಿಗ್ ಬಾಸ್ ಟೈಟಲ್ ಗೆದ್ದಿರುವ ಮಂಜು ಆಗಮನ ಮನೆಯಲ್ಲಿ ನವ ಉಲ್ಲಾಸ ತಂದಿದೆ. ಈ ಉಲ್ಲಾಸವನ್ನು ತಡೆಯುವುದಕ್ಕೆ ಆಗದೇ ಮಂಜು ಪಾವಗಡ ಮುಂದೆ ಕೂತು ಅಮೂಲ್ಯ ಪ್ರೇಮ ನಿವೇದನೆ ಮಾಡಿಕೊಂಡಿದ್ದಾರೆ. ‘ಐ ಲವ್ ಯೂ’ ಎಂದು ಹೇಳುವ ಮೂಲಕ ರಾಕೇಶ್ ಅಡಿಗನಿಗೆ (Rakesh Adiga) ಕಕ್ಕಾಬಿಕ್ಕಿ ಆಗುವಂತೆ ಮಾಡಿದ್ದರು. ಇದನ್ನೂ ಓದಿ : ಬೆಂಗಳೂರು ವಿಶ್ವವಿದ್ಯಾಲಯ ಬಿಕಾಂ ಪಠ್ಯದಲ್ಲಿ ಪುನೀತ್ ರಾಜಕುಮಾರ್

    ರಾಕೇಶ್ ಅಡಿಗ ಮತ್ತು ಅಮೂಲ್ಯ ಬಿಗ್ ಬಾಸ್ ಮನೆಯಲ್ಲಿ ಕ್ಲೋಸ್ ಆಗಿರುವ ಜೋಡಿ. ಪ್ರೇಮಿಗಳ ರೀತಿಯಲ್ಲೇ ಅವರು ಯಾವಾಗಲೂ ವರ್ತಿಸುತ್ತಿರುತ್ತಾರೆ. ಇತ್ತೀಚಿನ ದಿನಗಳಲ್ಲಂತೂ ರಾಕೇಶ್ ಅಡಿಗನ ಜೊತೆಯೇ ಅಮೂಲ್ಯ ಹೆಚ್ಚು ಸಮಯ ಕಳೆಯುತ್ತಾರೆ. ಹೀಗಾಗಿ ಅಮೂಲ್ಯ ಆಡಿದ ಮಾತುಗಳು ರಾಕೇಶ್ ಅಚ್ಚರಿ ಮೂಡಿಸಿದ್ದವು. ಮಂಜು ಪಾವಗಡ ಮನೆಗೆ ಬಂದ ಕೆಲವೇ ಗಂಟೆಗಳಲ್ಲೇ ಅಮೂಲ್ಯಗೆ ಪ್ರೀತಿ ಹುಟ್ಟಲು ಹೇಗೆ ಸಾಧ್ಯ ಎನ್ನುವ ಪ್ರಶ್ನೆಯನ್ನೂ ಮೂಡಿಸಿವೆ.

    ಮಂಜು ಪಾವಗಡ ಮುಂದೆ ಮಂಡೆಯೂರಿ ಕುಳಿತು ‘ಐ ಲವ್ ಯೂ’ ಎಂದು ಅಮೂಲ್ಯ ಹೇಳಿದಾಗ, ಅಲ್ಲಿಯೇ ನಿಂತಿದ್ದ ರಾಕೇಶ್ ಅಡಿಗೆ ಅಚ್ಚರಿಯಿಂದಲೇ ಆ ದೃಶ್ಯವನ್ನು ನೋಡುತ್ತಾ, ‘ಈ ದೃಶ್ಯ ನೋಡ್ತಿದ್ದರೆ, ನನಗೆ ಹಾವು ಕಚ್ಚಿದಂತೆ ಫೀಲ್ ಆಗುತ್ತಿದೆ’ ಎಂದು ಪ್ರತಿಕ್ರಿಯಿಸುತ್ತಾರೆ. ರಾಕಿ ಮಾತಿಗೆ ಅಮೂಲ್ಯ ಸ್ಮೈಲ್ ನೀಡುತ್ತಾರೆ. ಅದು ಹಾವು ಏಣಿಯ ಆಟವಾಗಿದ್ದರಿಂದ, ಆ ಆಟವನ್ನು ಬಳಸಿಕೊಂಡೇ ಈ ಮೂವರು ಮಾತನಾಡುತ್ತಾರೆ. ಆನಂತರ ಅಮೂಲ್ಯ ಮತ್ತು ರಾಕೇಶ್ ನಡುವೆ ಅಂತರದ ಗೇಮ್ ಅಂತೂ ಶುರುವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಮಂಜು ಪಾವಗಡ ಮೇಲೆ ಅಮೂಲ್ಯ ಲವ್: ರಾಕೇಶ್ ಅಡಿಗ ಕಕ್ಕಾಬಿಕ್ಕಿ

    ಮಂಜು ಪಾವಗಡ ಮೇಲೆ ಅಮೂಲ್ಯ ಲವ್: ರಾಕೇಶ್ ಅಡಿಗ ಕಕ್ಕಾಬಿಕ್ಕಿ

    ಬಿಗ್ ಬಾಸ್ ಮನೆಗೆ ಹಾಸ್ಯ ಕಲಾವಿದ ಮಂಜು ಪಾವಗಡ ಪ್ರವೇಶ ಮಾಡಿದ್ದಾರೆ. ಗೆಸ್ಟ್ ರೀತಿಯಲ್ಲಿ ಮಂಜು ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ ಬಿಗ್ ಬಾಸ್ ಟೈಟಲ್ ಗೆದ್ದಿರುವ ಮಂಜು ಆಗಮನ ಮನೆಯಲ್ಲಿ ನವ ಉಲ್ಲಾಸ ತಂದಿದೆ. ಈ ಉಲ್ಲಾಸವನ್ನು ತಡೆಯುವುದಕ್ಕೆ ಆಗದೇ ಮಂಜು ಪಾವಗಡ ಮುಂದೆ ಕೂತು ಅಮೂಲ್ಯ ಪ್ರೇಮ ನಿವೇದನೆ ಮಾಡಿಕೊಂಡಿದ್ದಾರೆ. ‘ಐ ಲವ್ ಯೂ’ ಎಂದು ಹೇಳುವ ಮೂಲಕ ರಾಕೇಶ್ ಅಡಿಗನಿಗೆ ಕಕ್ಕಾಬಿಕ್ಕಿ ಆಗುವಂತೆ ಮಾಡಿದ್ದಾರೆ.

    ರಾಕೇಶ್ ಅಡಿಗ ಮತ್ತು ಅಮೂಲ್ಯ ಬಿಗ್ ಬಾಸ್ ಮನೆಯಲ್ಲಿ ಕ್ಲೋಸ್ ಆಗಿರುವ ಜೋಡಿ. ಪ್ರೇಮಿಗಳ ರೀತಿಯಲ್ಲೇ ಅವರು ಯಾವಾಗಲೂ ವರ್ತಿಸುತ್ತಿರುತ್ತಾರೆ. ಇತ್ತೀಚಿನ ದಿನಗಳಲ್ಲಂತೂ ರಾಕೇಶ್ ಅಡಿಗನ ಜೊತೆಯೇ ಅಮೂಲ್ಯ ಹೆಚ್ಚು ಸಮಯ ಕಳೆಯುತ್ತಾರೆ. ಹೀಗಾಗಿ ಅಮೂಲ್ಯ ಆಡಿದ ಮಾತುಗಳು ರಾಕೇಶ್ ಅಚ್ಚರಿ ಮೂಡಿಸಿದ್ದವು. ಮಂಜು ಪಾವಗಡ ಮನೆಗೆ ಬಂದ ಕೆಲವೇ ಗಂಟೆಗಳಲ್ಲೇ ಅಮೂಲ್ಯಗೆ ಪ್ರೀತಿ ಹುಟ್ಟಲು ಹೇಗೆ ಸಾಧ್ಯ ಎನ್ನುವ ಪ್ರಶ್ನೆಯನ್ನೂ ಮೂಡಿಸಿವೆ. ಇದನ್ನೂ ಓದಿ: ಮಗ ರೂಪಿಗಾಗಿ, ಮಗುವಿನಂತೆ ಗಳಗಳನೇ ಅತ್ತ ಆರ್ಯವರ್ಧನ್‌ ಗುರೂಜಿ

    ಮಂಜು ಪಾವಗಡ ಮುಂದೆ ಮಂಡೆಯೂರಿ ಕುಳಿತು ‘ಐ ಲವ್ ಯೂ’ ಎಂದು ಅಮೂಲ್ಯ ಹೇಳಿದಾಗ, ಅಲ್ಲಿಯೇ ನಿಂತಿದ್ದ ರಾಕೇಶ್ ಅಡಿಗೆ ಅಚ್ಚರಿಯಿಂದಲೇ ಆ ದೃಶ್ಯವನ್ನು ನೋಡುತ್ತಾ, ‘ಈ ದೃಶ್ಯ ನೋಡ್ತಿದ್ದರೆ, ನನಗೆ ಹಾವು ಕಚ್ಚಿದಂತೆ ಫೀಲ್ ಆಗುತ್ತಿದೆ’ ಎಂದು ಪ್ರತಿಕ್ರಿಯಿಸುತ್ತಾರೆ. ರಾಕಿ ಮಾತಿಗೆ ಅಮೂಲ್ಯ ಸ್ಮೈಲ್ ನೀಡುತ್ತಾರೆ. ಅದು ಹಾವು ಏಣಿಯ ಆಟವಾಗಿದ್ದರಿಂದ, ಆ ಆಟವನ್ನು ಬಳಸಿಕೊಂಡೇ ಈ ಮೂವರು ಮಾತನಾಡುತ್ತಾರೆ.

    ಕಳೆದ ಸೀಸನ್ ನಲ್ಲಿ ಸ್ಪರ್ಧಿಯಾಗಿ ಮನೆ ಒಳಗೆ ಪ್ರವೇಶ ಬಯಸಿದ್ದ ಮಂಜು ಪಾವಗಡ ಈ ಬಾರಿ ಮನೆಗೆ ಸ್ಪೆಷಲ್ ಗೆಸ್ಟ್ ಆಗಿ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಎಷ್ಟು ಸಮಯ ಅವರು ಮನೆಯಲ್ಲಿ ಇರುತ್ತಾರೋ, ಅಷ್ಟು ಹೊತ್ತು ನೋಡುಗರಿಗೆ ಮನರಂಜನೆ ದುಪ್ಪಟ್ಟಾಗುವುದು ಖಚಿತ.

    Live Tv
    [brid partner=56869869 player=32851 video=960834 autoplay=true]