Tag: ಲವ್

  • ಭುವನೇಶ್ವರ್ ಕುಮಾರ್ ಇನ್ ಲವ್: ಈ ನಟಿಯೊಂದಿಗೆ `ಡೇಟ್’ಗೆ ಬಂದಿದ್ರು !

    ಭುವನೇಶ್ವರ್ ಕುಮಾರ್ ಇನ್ ಲವ್: ಈ ನಟಿಯೊಂದಿಗೆ `ಡೇಟ್’ಗೆ ಬಂದಿದ್ರು !

    ನವದೆಹಲಿ: ಕ್ರಿಕೆಟಿಗ ಭುವನೇಶ್ವರ್ ಕುಮಾರ್ ಪ್ರೇಮ ಪಾಶದಲ್ಲಿ ಸಿಲುಕಿದ್ದಾರೆ. ತಮ್ಮ ಇನ್‍ಸ್ಟಾಗ್ರಾಮ್ ನಲ್ಲಿ ಒಂದು ಫೋಟೋ ಅಪ್ಲೋಡ್ ಮಾಡಿದ್ದು, ನಾನು ಒಬ್ಬರೊಂದಿಗೆ ಡೇಟ್‍ನಲ್ಲಿದ್ದೇನೆ, ಫುಲ್ ಫೋಟೋ ಶೀಘ್ರವೇ ತೋರಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

    ಈ ಫೋಟೋದಲ್ಲಿ ರೆಸ್ಟೋರೆಂಟ್ ಒಂದರಲ್ಲಿ ಭುವಿ ಜ್ಯೂಸ್ ಕುಡಿಯುವುದನ್ನು ಕಾಣಬಹುದು. ಆದರೆ ಫೋಟೋದಲ್ಲಿ ಅವರ ಗೆಳತಿ ಕಾಣುವುದಿಲ್ಲ. ಗೆಳತಿ ಫೋಟೋ ಇಲ್ಲದೇ ಇದ್ದರೂ ಆ ವ್ಯಕ್ತಿ ಯಾರೂ ಎನ್ನುವುದು ಗೊತ್ತಾಗಿದೆ. ಟಾಲಿವುಡ್‍ನ ನಟಿ ಅನುಸ್ಮೃತಿ ಸರ್ಕಾರ್ ಗೆಳತಿಯ ಜೊತೆ ಡೇಟ್‍ಗೆ ಬಂದಿರುವ ಫೋಟೋ ಒಂದು ಲೀಕ್ ಆಗಿದ್ದು, ಅದು ಈಗ ವೈರಲ್ ಆಗಿದೆ.

    https://www.instagram.com/p/BT8MAJYg-vR/?taken-by=imbhuvi&hl=en

    ರೆಸ್ಟೋರೆಂಟ್ ಜನರು ಇಬ್ಬರ ಫೋಟೋಗಳನ್ನು ತೆಗೆಯುವಷ್ಟರಲ್ಲಿ ಕಾರಿನಲ್ಲಿ ಇಬ್ಬರು ಮರಳಿ ಹೋಗಿದ್ದಾರೆ. ಅನುಸ್ಮೃತಿ ಮುಂದಿನ ದಿನಗಳಲ್ಲಿ ಬಾಲಿವುಡ್ ಸಿನಿಮಾಗಳಲ್ಲಿ ನಟಿಸಲಿದ್ದಾರೆ. ಅನುಸ್ಮೃತಿ ಈಗಾಗಲೇ ತೆಲಗು, ಬಂಗಾಲಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಬೆಂಗಾಲಿಯ ಭೋರೆರ್ ಅಲೋ (2012) ಮತ್ತು ಮೋನರ್ ಮಜೇ ತುಮಿ (2013) ತೆರೆಕಂಡಿವೆ. 2016ರಲ್ಲಿ ತೆರೆಕಂಡ ತೆಲುಗಿನ ಸುಸ್ವಾಗತಂ ಸಿನಿಮಾದಲ್ಲಿ ನಟಿಸಿದ್ದರು.

    ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗುತ್ತಿದ್ದಂತೆ, ಭುವನೇಶ್ವರ್ ಕುಮಾರ್ ಇನ್‍ಸ್ಟಾಗ್ರಾಮ್ ನಲ್ಲಿ ತಾವು ಯುವತಿ ಜೊತೆ ಕಾರಿನಲ್ಲಿರುವ ಫೋಟೋ ಅಪ್ಲೋಡ್ ಮಾಡಿ, ಗಾಳಿ ಮಾತುಗಳನ್ನು ನಂಬಬೇಡಿ, ನೀವು ತಿಳಿದಿರುವ ಹುಡುಗಿ ನನ್ನ ಗರ್ಲ್ ಫ್ರೆಂಡ್ ಅಲ್ಲ. ಸೂಕ್ತ ಸಮಯ ಬಂದಾಗ ನಾನೇ ತಿಳಿಸುತ್ತೇನೆ ಎಂದು ಹೇಳಿದ್ದಾರೆ.

    ಕ್ರಿಕೆಟಿಗರಾದ ಜಹೀರ್ ಖಾನ್, ವಿರಾಟ್ ಕೊಹ್ಲಿ ಬಾಲಿವುಡ್ ನಟಿಯರೊಂದಿಗೆ ಡೇಟ್‍ನಲ್ಲಿದ್ದಾರೆ. ಅಂತೆಯೇ ಹರ್ಭಜನ್ ಸಿಂಗ್ ಮತ್ತು ಯುವರಾಜ್ ಸಿಂಗ್ ನಟಿಯರೊಂದಿಗೆ ಮದುವೆಯಾಗಿದ್ದು, ಅವರ ಸಾಲಿಗೆ ಈಗ ಭುವನೇಶ್ವರ್ ಕುಮಾರ್ ಡೇಟಿಂಗ್ ಆರಂಭಿಸಿದ್ದಾರೆ.

    https://www.instagram.com/p/BURAjGKAr2O/?taken-by=imbhuvi&hl=en

    https://twitter.com/BhuviKingdom/status/865484771647934466

     

  • ಬಾಯ್ ಫ್ರೆಂಡ್ ಮೀಟ್ ಆಗದ್ದಕ್ಕೆ 4ನೇ ಫ್ಲೋರ್‍ನಿಂದ ಹಾರಿ ಟೆಕ್ಕಿ ಆತ್ಮಹತ್ಯೆ

    ಬಾಯ್ ಫ್ರೆಂಡ್ ಮೀಟ್ ಆಗದ್ದಕ್ಕೆ 4ನೇ ಫ್ಲೋರ್‍ನಿಂದ ಹಾರಿ ಟೆಕ್ಕಿ ಆತ್ಮಹತ್ಯೆ

    ಪುಣೆ: 23 ವರ್ಷದ ಟೆಕ್ಕಿಯೊಬ್ಬರು ತನ್ನ ಬಾಯ್ ಫ್ರೆಂಡ್ ಬಂದು ಭೇಟಿಯಾಗಿಲ್ಲ ಎಂದು ನಾಲ್ಕನೇಯ ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಕೊಂಡ್ವಾ ಬುದ್ರಕ್‍ನ ಶಾಂತಿನಗರದ ಸೊಸೈಟಿಯಲ್ಲಿ ನಡೆದಿದೆ.

    ಜುಹಿ ನಿತಿನ್ ಗಾಂಧಿ (23) ಆತ್ಮಹತ್ಯೆಗೆ ಶರಣಾದ ಯುವತಿ. ಜುಹಿ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಜುಹಿ ಪುಣೆಯ ಕಾಲೇಜೊಂದರಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಪದವಿ ಪಡೆದು ಬೆಂಗಳೂರಿನ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ಜುಹಿ ತಾಯಿ ಇತ್ತೀಚಿಗೆ ಶಸ್ತ್ರ ಚಿಕಿತ್ಸೆಗೊಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಮೂರು ದಿನಗಳ ರಜೆ ಪಡೆದು ಪುಣೆಗೆ ಆಗಮಿಸಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿ ಸತೀಶ್ ಗೋವೆಕರ್ ಹೇಳಿದ್ದಾರೆ.

    ಜುಹಿ ಗೆಳೆಯೆ ಪುಣೆಯ ಕಾಲೇಜಿನಲ್ಲಿ ಅಂತಿಮ ವರ್ಷದ ಇಂಜಿನೀಯರ್ ವಿದ್ಯಾರ್ಥಿಯಾಗಿದ್ದು, ಬೆಂಗಳೂರಿನಿಂದ ಪುಣೆಗೆ ಆಗಮಿಸಿ ಗೆಳಯನನ್ನು ಭೇಟಿಯಾಗಲು ಇಚ್ಛಿಸಿದ್ದರು. ಆದರೆ ಗೆಳಯನಿಗೆ ಪರೀಕ್ಷೆ ಪ್ರಾರಂಭವಾಗಿದ್ದರಿಂದ ಭೇಟಿ ಆಗಲು ಬಂದಿರಲಿಲ್ಲ. ಇದರಿಂದ ನಿರಾಶೆಗೊಂಡ ಜುಹಿ ಮನೆಯ ನಾಲ್ಕನೇಯ ಮಹಡಿಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.

    ಜುಹಿ ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಯಾವುದೇ ಡೆತ್ ನೋಟ್ ದೊರಕಿಲ್ಲ. ಜುಹಿಯ ಮೊಬೈಲ್ ಪರೀಕ್ಷಿಸಿದಾಗ ಕೊನೆಯ ಬಾರಿಗೆ ಗೆಳಯನೊಂದಿಗೆ ಮಾತನಾಡಿದ್ದು ತಿಳಿದು ಬಂದಿದೆ. ಯುವಕನ್ನು ಕರೆದು ವಿಚಾರಣೆ ನಡೆಸಿದಾಗ ಈ ವಿಷಯ ಬೆಳಕಿಗೆ ಬಂದಿದೆ. ಇನ್ನು ಯುವಕನಿಗೆ ಪರೀಕ್ಷೆ ಇದ್ದಿದ್ರಿಂದ ಬಿಟ್ಟು ಕಳುಹಿಸಲಾಗಿದೆ ಎಂದು ಇನ್ಸ್ ಪೆಕ್ಟರ್ ಸತೀಶ್ ಗೋವೆಕರ್ ತಿಳಿಸಿದ್ದಾರೆ.

     

  • ಕಿರಿಕ್ ಜೋಡಿಯ ಮದುವೆಯ ಸುದ್ದಿ ಬಗ್ಗೆ ರಶ್ಮಿಕಾ ಹೇಳಿದ್ದು ಹೀಗೆ

    ಕಿರಿಕ್ ಜೋಡಿಯ ಮದುವೆಯ ಸುದ್ದಿ ಬಗ್ಗೆ ರಶ್ಮಿಕಾ ಹೇಳಿದ್ದು ಹೀಗೆ

    ಬೆಂಗಳೂರು: ಕಿರಿಕ್ ಜೋಡಿ ಅಂದ ತಕ್ಷಣ ತಟ್ಟನೆ ನೆನಪಾಗೋದು ರಕ್ಷಿತ್ ಮತ್ತು ರಶ್ಮಿಕಾ ಮಂದಣ್ಣ. ಇವರಿಬ್ಬರ ಆನ್ ಸ್ಕ್ರೀನ್ ಕೆಮಿಸ್ಟ್ರಿ ಸೂಪರ್ ಹಿಟ್ ಆಗಿ ಸಿನಿರಸಿಕರಿಗೆ ಮೋಡಿ ಮಾಡಿತ್ತು. ಈ ಜೋಡಿ ನಿಜ ಜೀವನದಲ್ಲೂ ಒಂದಾಗ್ತಿದೆ. ಈ ಚಿತ್ರದ ಬಳಿಕ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ನಡುವೆ ಲವ್ ಆಗಿದೆ ಎಂಬ ಸುದ್ದಿ ಸ್ಯಾಂಡಲ್‍ವುಡ್ ಅಂಗಳದಲ್ಲಿ ಈಗ ಹರಿದಾಡುತ್ತಿದೆ.

    ಇದೇ ತಿಂಗಳು ಎಂಗೇಜ್‍ಮೆಂಟ್ ಕೂಡ ಆಗುತ್ತದೆ. ಅಷ್ಟೇ ಅಲ್ಲ ಎರಡು ವರ್ಷಗಳಲ್ಲಿ ಮದ್ವೆ ಕೂಡ ಆಗುತ್ತೆ ಅನ್ನೊ ಮಾತು ಜೋರಾಗಿಯೇ ಕೇಳಿ ಬರುತ್ತಿದೆ. ನಿನ್ನೆಯಷ್ಟೇ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ್ದ ರಕ್ಷಿತ್ ನಗುನಗುತ್ತಾ ಆ ವಿಷಯದ ಬಗ್ಗೆ ಸ್ಪಷ್ಟನೆ ಕೊಟ್ಟಿದ್ರು. ಆದರೆ ಇಂದು ರಶ್ಮಿಕಾ ಪಬ್ಲಿಕ್ ಟಿವಿಗೆ ತಮ್ಮ ಮದುವೆ ಬಗ್ಗೆ ಹೀಗೆ ಹೇಳಿದ್ದಾರೆ.

    ನನಗೆ ಇತ್ತೀಚಿಗೆ ಈ ಸುದ್ದಿ ತಿಳಿಯಿತು. ಅದೂವರೆಗೂ ಗೊತ್ತಿರಲಿಲ್ಲ. ಇದು ಸುಳ್ಳು ಸುದ್ದಿ. ಇದರಿಂದ ನನ್ನ ಸಿನಿ ಕೆರಿಯರ್‍ಗೆ ತೊಂದರೆ ಆಗುತ್ತದೆ. ದಯವಿಟ್ಟು ಈ ರೀತಿಯ ಸುದ್ದಿಗಳನ್ನು ಹಬ್ಬಿಸಬೇಡಿ. ನಾನು ಮೂರ್ನಾಲ್ಕು ಫಿಲ್ಮ್‍ಗಳಲ್ಲಿ ಬ್ಯೂಸಿಯಾಗಿದ್ದೇನೆ. ನನ್ನ ಖಾಸಗಿ ವಿಚಾರಗಳಿಗೆ ಸಮಯ ಸಿಗುತ್ತಿಲ್ಲ. ನನಗೆ ಪ್ರತಿದಿನ ತುಂಬಾ ಕೆಲಸಗಳಿರುತ್ತವೆ. ಪರೀಕ್ಷೆಗಳಿವೆ. ಶೂಟಿಂಗ್‍ನಲ್ಲಿ ಬ್ಯೂಸಿಯಿದ್ದೇನೆ. ನನಗೆ ಲವ್ ಮಾಡಲು ಸಮಯವಿಲ್ಲ. ರಕ್ಷಿತ್ ಅವರು ಸಹ ಸಿನಿಮಾದಲ್ಲಿ ಬ್ಯೂಸಿಯಾಗಿದ್ದಾರೆ. ರಕ್ಷಿತ್ ಮತ್ತು ನನ್ನ ನಡುವಿನ ಸುದ್ದಿಗಳೆಲ್ಲಾ ಫೇಕ್ ಎಂದು ರಶ್ಮಿಕಾ ಹೇಳಿದ್ದಾರೆ.

    ಕಿರಿಕ್ ಪಾರ್ಟಿ ನಿರ್ದೇಶಕ ರಿಷಬ್ ಶೆಟ್ಟಿ ಫೆ.9 ರಂದು ಕುಂದಾಪುರದ ಕೋಟೇಶ್ವರದಲ್ಲಿ ಪ್ರಗತಿ ಅವರನ್ನು ಮದುವೆಯಾಗಿದ್ದರು.

     

     

     

  • ಆನೇಕಲ್ ಪ್ರೇಮಿಗಳ ವೈರಲ್ ವಿಡಿಯೋ: ಅಪ್ರಾಪ್ತೆಯನ್ನು ಕಿಡ್ನಾಪ್ ಮಾಡಿದ್ದ ಆರೋಪಿ ಅರೆಸ್ಟ್

    ಆನೇಕಲ್ ಪ್ರೇಮಿಗಳ ವೈರಲ್ ವಿಡಿಯೋ: ಅಪ್ರಾಪ್ತೆಯನ್ನು ಕಿಡ್ನಾಪ್ ಮಾಡಿದ್ದ ಆರೋಪಿ ಅರೆಸ್ಟ್

    ಬೆಂಗಳೂರು: ಅಪ್ರಾಪ್ತೆಯನ್ನು ಕಿಪಡ್ ಮಾಡಿ, ತಮ್ಮ ಪ್ರೇಮಕ್ಕೆ ಪೊಲೀಸರು ಅಡ್ಡಿಪಡಿಸಿದರೆ ತಾವು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಂದು ವಿಡಿಯೋ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಹೊಸಕೋಟೆ ಪೊಲೀಸರು ಯಶ್ವಸಿಯಾಗಿದ್ದಾರೆ.

    ವೇಣು ಬಂಧಿತ ಆರೋಪಿ. ಮೂರು ದಿನಗಳ ಹಿಂದೆ ಅಪ್ರಾಪ್ತ ಯುವತಿಯನ್ನು ವೇಣು ಎಂಬಾತ ಅಪಹರಣ ಮಾಡಿದ್ದಾನೆ ಎಂದು ಬಾಲಕಿಯ ಪೋಷಕರು ನಗರದ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಸಂಬಂಧ ಪೊಲೀಸರು ವೇಣುಗೆ ಕರೆಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು.

    ಇದನ್ನೂ ಓದಿ: ಮನೆ ಬಿಟ್ಟು ಓಡಿ ಹೋಗಿ, ನಮ್ಮನ್ನ ಹುಡ್ಕಬೇಡಿ ಎಂದು ಪೊಲೀಸರಿಗೆ ವಾಟ್ಸಪ್ ವಿಡಿಯೋ ಕಳಿಸಿದ್ರು-ವಿಡಿಯೋ ತಲುಪವ ಮುನ್ನ ಲವ್ ಸ್ಟೋರಿಗೊಂದು ಟ್ವಿಸ್ಟ್

    ಪೊಲೀಸರ ವಿಚಾರಣೆಗೆ ಹೆದರಿದ ವೇಣು ಅಪ್ರಾಪ್ತ ಯುವತಿಗೆ ಪುಸಲಾಯಿಸಿ ತಮ್ಮ ಪ್ರೀತಿಗೆ ಪೊಲೀಸರು ಅಡ್ಡಿಪಡಿಸುತ್ತಿದ್ದಾರೆ ಮತ್ತು ನಮ್ಮನ್ನು ದೂರ ಮಾಡಲು ಯತ್ನಿಸಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

    ಸೋಮವಾರ ತಡರಾತ್ರಿ ಹೊಸಕೋಟೆ ಪೊಲೀಸರು ವೇಣುನನ್ನು ಬಂಧಿಸಿದ್ದಾರೆ. ಅಪ್ರಾಪ್ತ ಬಾಲಕಿಯನ್ನು ಪೋಷಕರ ವಶಕ್ಕೆ ನೀಡಿದ್ದಾರೆ. ಇನ್ನು ವೇಣು ವಿರುದ್ಧ ಪೂಕ್ಸೋ ಕಾಯ್ದೆ ಅಡಿ, ಅಪಹರಣ ಹಾಗು ಆತ್ಮಹತ್ಯೆ ಪ್ರಚೋದನೆ ಕೇಸು ದಾಖಲಿಸಿದ್ದಾರೆ.

    https://www.youtube.com/watch?v=mHzsyglE0is

     

  • ಮನೆ ಬಿಟ್ಟು ಓಡಿ ಹೋಗಿ, ನಮ್ಮನ್ನ ಹುಡ್ಕಬೇಡಿ ಎಂದು ಪೊಲೀಸರಿಗೆ ವಾಟ್ಸಪ್ ವಿಡಿಯೋ ಕಳಿಸಿದ್ರು

    ಮನೆ ಬಿಟ್ಟು ಓಡಿ ಹೋಗಿ, ನಮ್ಮನ್ನ ಹುಡ್ಕಬೇಡಿ ಎಂದು ಪೊಲೀಸರಿಗೆ ವಾಟ್ಸಪ್ ವಿಡಿಯೋ ಕಳಿಸಿದ್ರು

    -ವಿಡಿಯೋ ತಲುಪವ ಮುನ್ನ ಲವ್ ಸ್ಟೋರಿಗೊಂದು ಟ್ವಿಸ್ಟ್

    ಶಿವಮೊಗ್ಗ: ಫೇಸ್‍ಬುಕ್ ಮೂಲಕ ಪರಿಚಯವಾದ ಸ್ನೇಹ ಪ್ರೀತಿಗೆ ತಿರುಗಿ ಈಗ ಪರಸ್ಪರರು ಮೋಸದ ಆರೋಪ ಮಾಡುತ್ತಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

    ಪ್ರೀತಿ ಮಾಡಿ ಮನೆ ಬಿಟ್ಟು ಹೋದ ಪ್ರೇಮಿಗಳು ಶಿವಮೊಗ್ಗದ ಪೊಲೀಸರಿಗೆ ವಾಟ್ಸಪ್ ಮೂಲಕ `ನಮ್ಮನ್ನು ಹುಡುಕಬೇಡಿ’ ಅಂತಾ ಮೆಸೇಜ್ ಕೂಡ ಮಾಡಿದ್ದರು. ಪ್ರೇಮಿಗಳ ವಾಟ್ಸಪ್ ವಿಡಿಯೋ ಪೊಲೀಸರಿಗೆ ತಲುಪುವ ಮುನ್ನವೇ ಈ ಪ್ರೇಮಿಗಳು ಪರಸ್ಪರ ದೂರು, ಮೋಸದ ಆರೋಪ ಮಾಡುತ್ತಿದ್ದಾರೆ.

    ನಡೆದಿದ್ದೇನು?: ಶಿವಮೊಗ್ಗದ ಶೇಷಾದ್ರಿಪುರಂನ ಸೈಯ್ಯದ್ ಅಹ್ಮದ್ ಹಾಗೂ ಬಾಪೂಜಿ ನಗರದ ರೆಚೆಲ್ ಮಚಾಡೋ ಫೇಸ್ಬುಕ್ ಮೂಲಕ ಪರಿಚಯವಾಗಿತ್ತು. ಈ ಪರಿಚಯ ಪ್ರೀತಿಗೆ ಬದಲಾಗಿತ್ತು. ಭಿನ್ನ ಧರ್ಮೀಯರಾದ ಕಾರಣ ಎರಡೂ ಮನೆಯವರು ಒಪ್ಪಲಿಲ್ಲ. ಕೊನೆಗೆ ಇಬ್ಬರೂ ಕಳೆದ ವಾರ ಮನೆ ಬಿಟ್ಟು ಹೋಗಿದ್ದರು.

    ಈ ಮಧ್ಯೆ ಹುಡುಗಿಯ ಪೋಷಕರು ಕೋಟೆ ಠಾಣೆಗೆ ನಾಪತ್ತೆ ದೂರು ಸಲ್ಲಿಸಿದರು. ಆದ್ರೆ ಇತ್ತ ಈ ಜೋಡಿ ಒಟ್ಟಿಗೆ ನಿಂತು ವೀಡಿಯೋ ಮಾಡಿ, ಅದನ್ನು ಸ್ನೇಹಿತರ ಮೂಲಕ ಪೊಲೀಸರಿಗೆ ತಲುಪಿಸುವ ಪ್ರಯತ್ನ ಮಾಡಿದ್ದರು. ಈ ನಡುವೆ ಇಬ್ಬರನ್ನೂ ಪತ್ತೆ ಹಚ್ಚುವ ಕೆಲಸವನ್ನು ಪೊಲೀಸರು ಮಾಡುತ್ತಲೇ ಇದ್ದರು.

    ಒಂದು ವಾರದ ನಂತರ ಬಂದ ಹುಡುಗಿ ಸೀದಾ ಕೋಟೆ ಠಾಣೆಗೆ ತೆರಳಿ, ಸೈಯ್ಯದ್ ನನ್ನನ್ನು ಕಿಡ್ನಾಪ್ ಮಾಡಿ, ಅಕ್ರಮವಾಗಿ ಭಟ್ಕಳದ ಲಾಡ್ಜ್ ನಲ್ಲಿ ಇಟ್ಟಿದ್ದ, ಇಸ್ಲಾಂಗೆ ಮತಾಂತರವಾಗು ಎಂದು ಒತ್ತಾಯ ಮಾಡಿದ್ದ ಎಂದು ದೂರು ನೀಡಿದ್ದಾರೆ. ಆದ್ರೆ ಸಯ್ಯದ್ ಅಹ್ಮದ್ ಮಾತ್ರ ಆಕೆಯೇ ಇಷ್ಟಪಟ್ಟು ಬಂದದ್ದು ಎನ್ನುತ್ತಿದ್ದಾನೆ. ಒಟ್ಟಿನಲ್ಲಿ ಇವರಿಬ್ಬರಲ್ಲಿ ಯಾರು ಸರಿ? ಯಾರು ತಪ್ಪು? ಎಂಬುದನ್ನು ಕೋಟೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ.

    https://youtu.be/8h1yyUmf-R4

     

     

  • ಅಪ್ಪ-ಅಮ್ಮ ಹೊಡೀತಿದ್ದಾರೆ, ಬೇಗ ಬಾ ಎಂದ್ಲು ಯುವತಿ- ಮನೆಗೆ ಹೋದ ಪ್ರಿಯಕರ ಹೆಣವಾದ!

    ಅಪ್ಪ-ಅಮ್ಮ ಹೊಡೀತಿದ್ದಾರೆ, ಬೇಗ ಬಾ ಎಂದ್ಲು ಯುವತಿ- ಮನೆಗೆ ಹೋದ ಪ್ರಿಯಕರ ಹೆಣವಾದ!

    ಬೆಂಗಳೂರು: ಐದು ವರ್ಷ ಪ್ರೀತಿ ಮಾಡಿದ ಗೆಳತಿ ದಿಢೀರನೇ ಮೆಸಜ್ ಮಾಡಿ ಅಪ್ಪ ಅಮ್ಮ ಹೊಡೀತ್ತಿದ್ದಾರೆ. ಮನೆಗೆ ಬೇಗ ಬಾ ಎಂದು ಹೇಳಿದ್ದಳು. ಮೆಸೇಜ್ ನೋಡಿ ಗೆಳತಿಯ ಮನೆಗೆ ಹೋದ ಯುವಕ ಸಾವನ್ನಪ್ಪಿದ್ದಾರೆ.

    ನಗರದ ಹೊರವಲಯದ ಅವಲಹಳ್ಳಿ ನಿವಾಸಿ ಮೋಹನ್ ರಾಜ್ ಮೃತ ಯುವಕ. ಮೋಹನ್ ತನ್ನದೇ ಗ್ರಾಮದ ಯುವತಿಯೊಬ್ಬಳನ್ನು ಪ್ರೀತಿ ಮಾಡುತ್ತಿದ್ದರು. ಅದರೆ ಇವರಿಬ್ಬರದು ಬೇರೆ ಬೇರೆ ಜಾತಿಯಾಗಿದ್ದರಿಂದ ಇಬ್ಬರ ಮನೆಯಲ್ಲೂ ವಿರೋಧವಿತ್ತು. ಹೀಗಿದ್ರೂ ಇವರಿಬ್ಬರೂ ಕಳೆದ ಐದು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು.

    ಇದನ್ನೂ ಓದಿ: 5 ವರ್ಷ ಪ್ರೀತಿಸಿ ಈಗ ನೀನು ಕಪ್ಪಗಿದ್ಯ ಎಂದು ಬೇಡ ಅಂದ್ಳು

    ರವಿವಾರ ರಾತ್ರಿ 11 ಗಂಟೆ ಸುಮಾರಿಗೆ ಮೋಹನ್‍ಗೆ ಯುವತಿ ಮೊಬೈಲ್ ನಿಂದ ಒಂದು ಮಸೇಜ್ ಬಂದಿತ್ತು. ನನ್ನ ಪೋಷಕರು ಹೊಡೆಯುತ್ತಿದ್ದಾರೆ, ಮನೆಗೆ ಬಾ ಎಂದು ಹೇಳಿದ್ದಳು. ಗಾಬರಿಗೊಂಡ ಮೋಹನ್ ಯುವತಿಯ ಮನೆಗೆ ಹೋಗಿದ್ದರು. ಆದರೆ ಯುವತಿಯ ಮನೆಯ ನಾಲ್ಕನೆಯ ಮಹಡಿಯಿಂದ ಬಿದ್ದಿದ್ದಾರೆ. ಕೂಡಲೇ ಮೋಹನ್‍ರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಮೋಹನ್ ಸಾವನ್ನಪ್ಪಿದ್ದಾರೆ.

    ಮೋಹನ್ ರಾಜ್ ತಂದೆ

    ನಮ್ಮ ಮಗನನ್ನು ಯುವತಿಯ ಮನೆಯವರು ಮಹಡಿಯಿಂದ ತಳ್ಳಿ ಕೊಲೆ ಮಾಡಿದ್ದಾರೆ ಎಂದು ಮೋಹನ್ ತಂದೆ ನಾರಾಯಣ್ ಆರೋಪ ಮಾಡುತ್ತಿದ್ದಾರೆ. ಈ ಸಂಬಂಧ ಅವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರ ತನಿಖೆಯಿಂದ ಮಾತ್ರ ಮೋಹನ್ ಸಾವಿನ ಸತ್ಯಾಂಶ ತಿಳಿಯಬೇಕಿದೆ.

  • ಯುವತಿಯರ ನಡುವೆ ಮದ್ವೆ, ಎಸ್ಕೇಪ್: ಬೆಂಗಳೂರಿನಲ್ಲೊಂದು ವಿಚಿತ್ರ ಕೇಸ್

    ಯುವತಿಯರ ನಡುವೆ ಮದ್ವೆ, ಎಸ್ಕೇಪ್: ಬೆಂಗಳೂರಿನಲ್ಲೊಂದು ವಿಚಿತ್ರ ಕೇಸ್

    ಬೆಂಗಳೂರು: ಇಬ್ಬರು ಯುವತಿಯರು ಪರಸ್ಪರ ಪ್ರೀತಿಸಿ ಮದುವೆಯಾಗಿ ಈಗ ನಾಪತ್ತೆಯಾಗಿರುವ ಘಟನೆ ವಿವೇಕನಗರದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

    ನಗರದ ಮಾಲಿನಿ ಮತ್ತು ವೆರೋನಿಕಾ ಪ್ರೀತಿಸಿ ಮದುವೆಯಾಗಿ ಮೂರನೇ ಬಾರಿ ಓಡಿ ಹೋಗಿದ್ದು, ಪೋಷಕರು ದುಃಖದಲ್ಲಿದ್ದಾರೆ.

    ಏನಿದು ಘಟನೆ?
    ಮಾಲಿನಿ ಮತ್ತು ವೆರೋನಿಕಾ ಕಾಲೇಜಿನಲ್ಲಿ ಓದುತ್ತಿದ್ದಾಗ 2016 ಜೂನ್‍ನಲ್ಲಿ ತಾಮಿಳುನಾಡಿನ ವೆಲ್ಲಂಕಣಿಗೆ ಓಡಿ ಹೋಗಿದ್ದರು. ಒಂದು ವಾರದ ಬಳಿಕ ಮನೆಯವವರ ಒತ್ತಡದ ಮೇಲೆ ಮನೆಗೆ ಬಂದಿದ್ದ ಇವರು ಕಳೆದ ವರ್ಷದ ನವೆಂಬರ್‍ನಲ್ಲಿ ಮತ್ತೆ ಮಧುರೈಗೆ ಓಡಿಹೋಗಿದ್ದರು. ಇಲ್ಲಿ ಇವರಿಗೆ ಮಂಗಳಮುಖಿಯರ ಸಂಪರ್ಕವಾಗಿದೆ. ಈ ವಿಚಾರ ತಿಳಿದು ಹೇಗೂ ಇವರನ್ನು ಪೋಷಕರು ಮನ ಒಲಿಸಿ ಮನೆಗೆ ಕರೆ ತರುವಲ್ಲಿ ಯಶಸ್ವಿಯಾಗಿದ್ದರು.

    ಮನೆಗೆ ಬಂದ ಬಳಿಕ ಇವರಿಬ್ಬರು ಚೆನ್ನಾಗಿದ್ದರು. ಆದರೆ ಶುಕ್ರವಾರ ದೇವಸ್ಥಾನಕ್ಕೆ ಹೋಗಿ ಬರುತ್ತೇವೆ ಎಂದು ಹೇಳಿದ ಇಬ್ಬರು ಈಗ ಮನೆಗೆ ಬಾರದೇ ಮೂರನೇ ಬಾರಿ ಓಡಿ ಹೋಗಿದ್ದಾರೆ.

    ಈಗ ಇವರಿಬ್ಬರು ಎಲ್ಲಿದ್ದಾರೆ ಎನ್ನುವುದು ತಿಳಿದು ಬಂದಿಲ್ಲ. ಪೋಷಕರು ಇದೂವರೆಗೂ ಪೊಲೀಸ್ ಠಾಣೆಯಲ್ಲಿ ದೂರು ನೀಡಿಲ್ಲ.

  • ಗರ್ಭಿಣಿಯಾಗಿಸಿ ಕೈಕೊಟ್ಟ ಯುವಕ- ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಯುವತಿ

    ಹಾವೇರಿ: ಪ್ರೀತ್ಸು.. ಪ್ರೀತ್ಸು.. ಅಂತ ಹಿಂದೆ ಬಿದ್ದು 2 ವರ್ಷಗಳ ಕಾಲ ಪ್ರೀತಿ ಮಾಡಿ ಸಂಬಂಧ ಬೆಳೆಸ್ದ. ಕೊನೆಗೆ ಕೈಕೊಟ್ಟು ಎಸ್ಕೇಪ್ ಆದ ವಂಚಕನ ಪತ್ತೆಗಾಗಿ ಯುವತಿ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

    2 ವರ್ಷದ ಹಿಂದೆ ಅನ್ಯಜಾತಿಯ ಯುವಕ ಗಂಗಾಧರ್ ಎಂಬಾತ ಹಾವೇರಿಯ ರಾಣೇಬೆನ್ನೂರಿನ ಹರನಗಿರಿ ನಿವಾಸಿ ದುರ್ಗಾಳ ಬೆನ್ನು ಬಿದ್ದು ಪ್ರೀತಿ ಮಾಡಿದ್ದ. ಬಳಿಕ ದೈಹಿಕ ಸಂಪರ್ಕ ಬೆಳೆಸಿ ಕೈ ಕೊಟ್ಟು ಎಸ್ಕೇಪ್ ಆಗಿದ್ದಾನೆ. ಇದೀಗ ಯುವತಿ ಆರು ತಿಂಗಳ ಗರ್ಭಿಣಿಯಾಗಿದ್ದು, ನನಗೆ ನ್ಯಾಯ ಕೊಡಿಸಿ ಅಂತಿದ್ದಾಳೆ.

    ಯುವತಿ ಸದ್ಯ ಸರಸ್ವತಿ ಸ್ವಾಂತನ ಕೇಂದ್ರದ ಮೂಲಕ ದೂರು ದಾಖಲಿಸಿದ್ದಾಳೆ. ಸಂಸ್ಥೆಯ ಅಧ್ಯಕ್ಷೆ ಶಾರದಾ ಯುವತಿಗೆ ಧೈರ್ಯ ಹೇಳಿ ಮದುವೆ ಮಾಡಿಸುವ ಭರವಸೆ ನೀಡಿದ್ದಾರೆ. ಆದ್ರೆ ಪ್ರೀತಿಸಿ ಕೈ ಕೊಟ್ಟ ಆ ಮಹಾಶಯ ಎಲ್ಲಿದ್ದಾನೋ ಗೊತ್ತಿಲ್ಲ. ಆದ್ರೆ ನನ್ನನ್ನ ಆತನೊಂದಿಗೆ ಮದುವೆ ಮಾಡಿಸಿ, ನನಗೆ ನ್ಯಾಯ ಕೊಡಿಸಿ ಅಂತಾ ಹೇಳ್ತಿದ್ದಾಳೆ ಈ ಯುವತಿ.