Tag: ಲವ್

  • ಪ್ರೀತಿ ನಿರಾಕರಿಸಿದ ಯುವತಿ ಕೈಗೆ ಚಾಕು ಇರಿತ!

    ಪ್ರೀತಿ ನಿರಾಕರಿಸಿದ ಯುವತಿ ಕೈಗೆ ಚಾಕು ಇರಿತ!

    ಬೆಂಗಳೂರು: ಪ್ರೀತಿ ಮಾಡಲು ನಿರಾಕರಣೆ ಮಾಡಿದ್ದಕ್ಕೆ ಯುವತಿಗೆ ಚಾಕುವಿನಿಂದ ಇರಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಮಾನಸ (20) ಚಾಕು ಇರಿತಕ್ಕೆ ಒಳಗಾದ ಯುವತಿ. ಬುಧವಾರ ಕಾಲೇಜಿಗೆ ಹೋಗುತ್ತಿರುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

    ಮಾನಸ ನಿನ್ನೆ ಕಾಲೇಜಿಗೆ ಹೋಗುತ್ತಿದ್ದ ವೇಳೆ ಇಬ್ಬರು ದುಷ್ಕರ್ಮಿಗಳು ಆಕೆಯನ್ನು ಅಡ್ಡ ಹಾಕಿ `ಪ್ರೀತಿ ಮಾಡೋದಾದ್ರೆ ನನ್ನನೇ ಪ್ರೀತಿ ಮಾಡ್ಬೇಕು. ಬೇರೊಬ್ಬ ಹುಡುಗನನ್ನು ಪ್ರೀತಿ ಮಾಡುವಂತಿಲ್ಲ. ಬೇರೆ ಹುಡುಗನನ್ನು ನೀನು ಪ್ರೀತಿ ಮಾಡ್ತಾ ಇದ್ದೀಯ ಅಂತ ಗೊತ್ತು. ಅವನ ಜೊತೆ ನಿನ್ನ ಪ್ರೀತಿ ಮುಂದುವರೆಯಬಾರದು’ ಅಂತಾ ಕೈಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ.

    ಸದ್ಯ ನಗರದ ಆಸ್ಪತ್ರೆಯೊಂದರಲ್ಲಿ ಯುವತಿ ಚಿಕಿತ್ಸೆ ಪಡೆಯುತ್ತಿದ್ದು, ಈ ಮೊದಲು ಅಂದ್ರೆ ಕಳೆದ ಮೂರು ದಿನಗಳ ಹಿಂದೆ ದುಷ್ಕರ್ಮಿಗಳು ಲ್ಯಾಂಡ್‍ಲೈನ್‍ನಿಂದ ಫೋನ್ ಮಾಡಿ ಬೆದರಿಕೆ ಕೂಡ ಹಾಕಿದ್ದರು ಅಂತ ಯುವತಿ ಹೇಳಿದ್ದಾಳೆ.

    ಸದ್ಯ ಈ ಕುರಿತು ಬೆಂಗಳೂರಿನ ಅನ್ನಪೂರ್ಣೆಶ್ವರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮನೆಯಲ್ಲಿದ್ದ ಹಣದೊಂದಿಗೆ ಎಸ್ಕೇಪ್ ಆಗಿದ್ದ ಮಾವ-ಸೊಸೆ ಆತ್ಮಹತ್ಯೆಗೆ ಶರಣು

    ಮನೆಯಲ್ಲಿದ್ದ ಹಣದೊಂದಿಗೆ ಎಸ್ಕೇಪ್ ಆಗಿದ್ದ ಮಾವ-ಸೊಸೆ ಆತ್ಮಹತ್ಯೆಗೆ ಶರಣು

    ಹೈದ್ರಾಬಾದ್: ಮನೆಯಲ್ಲಿದ್ದ ಹಣದೊಂದಿಗೆ ಪರಾರಿಯಾಗಿದ್ದ ಮಾವ ಮತ್ತು ಸೊಸೆ ಇಬ್ಬರೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೆಲಂಗಾಣ ರಾಜ್ಯದ ಕಮ್ಮಮಂ ಜಿಲ್ಲೆಯ ಎರ್ರಬೋಡು ಗ್ರಾಮದಲ್ಲಿ ನಡೆದಿದೆ.

    ಸೊಸೆ ಅನಿತಾ ಮತ್ತು ಮಾವ ವೀರಣ್ಣ ಆತ್ಮಹತ್ಯೆ ಶರಣಾದವರು. ಅನಿತಾ ನಾಲ್ಕು ವರ್ಷಗಳ ಹಿಂದೆ ವೀರಣ್ಣನ ಮಗ ಶ್ರೀಕಾಂತ್ ಎಂಬವರೊಂದಿಗೆ ವಿವಾಹವಾಗಿದ್ದಳು. ಆದರೆ ಕಳೆದ ಎರಡು ವರ್ಷಗಳಿಂದ ಅನಿತಾ ಮತ್ತು ಮಾವ ವೀರಣ್ಣ ಅಕ್ರಮ ಸಂಬಂಧ ಹೊಂದಿದ್ದರು.

    ಒಂದು ತಿಂಗಳು ಹಿಂದೆ ಅನಿತಾ ಮತ್ತು ವೀರಣ್ಣ ಮನೆಯಲ್ಲಿದ್ದ 1 ಲಕ್ಷ ರೂ. ನಗದು ಹಣದೊಂದಿಗೆ ಪರಾರಿಯಾಗಿದ್ದರು. ಅನಿತಾ ಹೋಗುವಾಗ ಪತಿ ಶ್ರೀಕಾಂತನ ಎಟಿಎಂ ಕಾರ್ಡ್ ತೆಗದುಕೊಂಡು ಹೋಗಿ ಸುಮಾರು 1 ಲಕ್ಷ ರೂ. ಹಣ ಡ್ರಾ ಮಾಡಿದ್ದಳು. ಈ ಸಂಬಂಧ ಅನಿತಾಳ ಪತಿ ಶ್ರೀಕಾಂತ್ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಹೆಂಡತಿ ಮತ್ತು ತಂದೆ ಕಾಣೆಯಾಗಿದ್ದಾರೆ ಎಂದು ದೂರು ದಾಖಲಿಸಿದ್ದರು.

    ಈ ವೇಳೆ ಶ್ರೀಕಾಂತ್ ತಮ್ಮ ಬ್ಯಾಂಕ್‍ನ ಎಟಿಎಂ ಅಕೌಂಟ್‍ನ್ನು ಕ್ಲೋಸ್ ಮಾಡಿಸಿದ್ದರು. ಕೈಯಲ್ಲಿದ್ದ ಹಣ ಖಾಲಿಯಾದ ಬಳಿಕ ಸ್ವಗ್ರಾಮಕ್ಕೆ ಮಾವ ಮತ್ತು ಸೊಸೆ ಮರಳಿ ಬಂದಿದ್ದರು. ಊರಿಗೆ ಬಂದ್ಮೇಲೆ ಅವಮಾನದಿಂದ ತತ್ತರಿಸಿದ ಇಬ್ಬರು ವಿಷ ಸೇರಿಸಿ ಕುಡಿದು, ಬ್ಲೇಡ್‍ನಿಂದ ಕೈ ಕುಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಬ್ಬರನ್ನೂ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

  • ದೀಪಿಕಾಳಿಗೆ ಮೊದಲು ಈ ನಟನ ಮೇಲೆ ಕ್ರಶ್ ಆಗಿತ್ತಂತೆ

    ದೀಪಿಕಾಳಿಗೆ ಮೊದಲು ಈ ನಟನ ಮೇಲೆ ಕ್ರಶ್ ಆಗಿತ್ತಂತೆ

    ಮುಂಬೈ: ಬಾಲಿವುಡ್‍ನ ಗುಳಿ ಕೆನ್ನೆ ಬೆಡಗಿ ದೀಪಿಕಾ ಪಡುಕೋಣ್ ಯೌವ್ವನದಲ್ಲಿದ್ದಾಗ ಟೈಟಾನಿಕ್ ಹೀರೋ ಲಿಯೋನಾರ್ಡೋ ಡಿಕ್ಯಾಪ್ರಿಯೋ ಮೇಲೆ ಕ್ರಶ್ ಆಗಿತ್ತಂತೆ.

    ದೀಪಿಕಾ ಚಿಕ್ಕವರಿದ್ದಾಗ ತನ್ನ ತಂಗಿಯೊಂದಿಗಿನ ಬಾಂಧವ್ಯದ ಬಗ್ಗೆ ಪತ್ರಿಕೆಯೊಂದರಲ್ಲಿ ಪ್ರಕಟವಾದ ಲೇಖನವೊಂದನ್ನ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ದೀಪಿಕಾ ಮತ್ತು ಆವರ ಮುದ್ದು ತಂಗಿ ಅನೀಷಾರನ್ನು ಕಾಣಬಹುದು. ಅಕ್ಕ-ತಂಗಿಯರ ರೂಂನಲ್ಲಿ ಹಾಲಿವುಡ್ ನ `ಟೈಟಾನಿಕ್’ ಸಿನಿಮಾದ ಪೋಸ್ಟರ್ ಮತ್ತು ಲಿಯೋನಾರ್ಡೋ ಅವರ ಫೋಟೋ ಕಾಣುತ್ತವೆ. ಟೈಟಾನಿಕ್ ಸಿನಿಮಾ ಬಿಡುಗಡೆಗೊಂಡ ವೇಳೆಯಲ್ಲಿ ಲಿಯೋನಾರ್ಡೋ ಎಲ್ಲ ಹುಡುಗಿಯರ ಅಚ್ಚು ಮೆಚ್ಚಾಗಿದ್ದರು. ಅಂತೆಯೇ ದೀಪಿಕಾ ಮತ್ತು ಅನಿಶಾಳಿಗೂ ಲಿಯೋನಾರ್ಡೋ ನೆಚ್ಚಿನ ನಟರಾಗಿದ್ದರು ಎಂದು ಲೇಖನದಲ್ಲಿದೆ.

    ಇದನ್ನೂ ಓದಿ: 70ನೇ ವಯಸ್ಸಿನಲ್ಲಿ ದೀಪಿಕಾ ಪಡುಕೋಣೆ ಈ ರೀತಿ ಇರ್ತಾರಂತೆ!

    ಸದ್ಯ ದೀಪಿಕಾ ಬಾಲಿವುಡ್ ಮತ್ತು ಹಾಲಿವುಡ್ ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ `ಪದ್ಮಾವತಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ದೀಪಿಕಾಗೆ ಜೊತೆಯಾಗಿ ಶಾಹೀದ್ ಕಪೂರ್ ಮತ್ತು ರಣ್‍ವೀರ್ ಸಿಂಗ್ ಕಾಣಿಸಿಕೊಂಡಿದ್ದಾರೆ.

    ಇದನ್ನೂಓದಿ: ದೀಪಿಕಾನ ಮಿಸ್ ಮಾಡ್ಕೊಳ್ತಿದ್ದಾರಂತೆ ರಣ್‍ವೀರ್ ಸಿಂಗ್

    https://www.instagram.com/p/BV-L1ULBFps/?taken-by=deepikapadukone&hl=en

    https://www.instagram.com/p/BVK_tP_BokU/?taken-by=deepikapadukone&hl=en

  • ಐಎಎಸ್ ಅಧಿಕಾರಿ ಜೊತೆ ಶಾಸಕನಿಗೆ ಲವ್ವಾಯ್ತು, ಇಂದು ಮದುವೆಯೂ ಆಯ್ತು!

    ಐಎಎಸ್ ಅಧಿಕಾರಿ ಜೊತೆ ಶಾಸಕನಿಗೆ ಲವ್ವಾಯ್ತು, ಇಂದು ಮದುವೆಯೂ ಆಯ್ತು!

    ತಿರುವನಂತಪುರಂ: ಕೇರಳದ ಅರುವಿಕ್ಕರ ಕಾಂಗ್ರೆಸ್ ಶಾಸಕ ಕೆ.ಎಸ್.ಶಬರೀನಾಥನ್ ಹಾಗೂ ತಿರುವನಂತಪುರಂ ಸಬ್ ಕಲೆಕ್ಟರ್ ಡಾ.ದಿವ್ಯಾ ಎಸ್.ಅಯ್ಯರ್ ವಿವಾಹ ಇಂದು ಕನ್ಯಾಕುಮಾರಿಯಲ್ಲಿ ನಡೆಯಿತು.

    ಇಂದು ಬೆಳಗ್ಗೆ ಕನ್ಯಾಕುಮಾರಿ ಜಿಲ್ಲೆಯ ತಕ್ಕಲ ಕುಮಾರಸ್ವಾಮಿ ದೇವಸ್ಥಾನದಲ್ಲಿ ಸರಳ ವಿವಾಹ ಸಮಾರಂಭ ನಡೆಯಿತು. ಸಂಜೆ 5 ಗಂಟೆಯಿಂದ 9 ಗಂಟೆವರೆಗೆ ನಾಲಂಜಿರ ಎಂಬಲ್ಲಿರುವ ಗಿರಿದೀಪಂ ಕನ್ವೆನ್ಷನ್ ಸೆಂಟರ್ ಹಾಗೂ ನಾಳೆ ಶಾಸಕರ ಕ್ಷೇತ್ರದಲ್ಲಿ ರಿಸೆಪ್ಷನ್ ನಡೆಯಲಿದೆ.

    ಕೇರಳ ವಿಪಕ್ಷ ಮುಖಂಡ ಕಾಂಗ್ರೆಸ್ ನ ರಮೇಶ್ ಚೆನ್ನಿತ್ತಲ, ಮಾಜಿ ಸಿಎಂ ಉಮ್ಮನ್ ಚಾಂಡಿ, ಕೆಸಿ ಜೋಸೆಫ್, ವಿ.ಡಿ.ಸತೀಶನ್, ಆಂಟೋ ಆಂಟನಿ ಮುಂತಾದ ಕಾಂಗ್ರೆಸ್ ಮುಖಂಡರು ನವದಂಪತಿಗಳಿಗೆ ಶುಭಹಾರೈಸಿದರು.

    ಪ್ರೀತಿ ಹುಟ್ಟಿದ್ದು ಹೇಗೆ?: ಕೋಟ್ಟಯಂ ಸಬ್ ಕಲೆಕ್ಟರ್ ಆಗಿದ್ದ ದಿವ್ಯಾ ಅವರಿಗೆ ತಿರುವನಂತಪುರಂಗೆ ವರ್ಗಾವಣೆಯಾಗಿತ್ತು. ಈ ಮೂಲಕ ಶಾಸಕ ಶಬರೀನಾಥ್ ಗೆ ದಿವ್ಯಾ ಜೊತೆ ಫ್ರೆಂಡ್ ಶಿಪ್ ಬೆಳೆಯುತ್ತದೆ. ಇದೇ ಮುಂದೆ ಲವ್ ಆಗಿದೆ.

    ನಾವಿಬ್ಬರೂ ಸುಮಾರು ದಿನಗಳಿಂದ ಪರಿಚಿತರಾಗಿದ್ದೆವು. ಆ ಪರಿಚಯ ಪ್ರೀತಿಗೆ ಬದಲಾಯ್ತು. ಆದರೆ ನಾವು ಇದ್ಯಾವುದನ್ನೂ ಯಾರಿಗೂ ಹೇಳಿರಲಿಲ್ಲ ಎಂದ ಶಬರೀನಾಥ್ ಕಳೆದ ತಿಂಗಳು ಫೇಸ್ ಬುಕ್ ನಲ್ಲಿ ಮದುವೆಯ ವಿಷಯವನ್ನು ಪ್ರಕಟಿಸಿದರು. ಈ ಮೂಲಕ ಅವರು ಕೇರಳದಲ್ಲಿ ಅಚ್ಚರಿ ಮೂಡಿಸಿದ್ದರು.

    ಎಸ್.ಎಸ್.ಎಲ್.ಸಿಯಲ್ಲಿ 3ನೇ ಸ್ಥಾನ ಗಳಿಸಿದ್ದ ದಿವ್ಯಾ ನಂತರ ಎಂಬಿಬಿಎಸ್ ವ್ಯಾಸಂಗ ಮುಗಿಸಿದ್ದರು. ಬಳಿಕ 2014ರಲ್ಲಿ ಐಎಎಸ್ ಪಾಸಾದರು.

     

     

    https://www.facebook.com/SabarinadhanKS/photos/a.381807742010687.1073741828.381641775360617/662658643925594/?type=3&theater

  • ಪ್ರೀತಿಸಿ ಮದ್ವೆಯಾದ ಬಳಿಕ ಹುಡ್ಗನ ಮನೆಗೆ ನುಗ್ಗಿ ದಾಂಧಲೆ- ಹುಡ್ಗಿ ಮನೆಯವ್ರು ಸುಮ್ಮನಾದ್ರೂ, ಸಮುದಾಯದವ್ರು ಬಿಡ್ತಿಲ್ಲ

    ಪ್ರೀತಿಸಿ ಮದ್ವೆಯಾದ ಬಳಿಕ ಹುಡ್ಗನ ಮನೆಗೆ ನುಗ್ಗಿ ದಾಂಧಲೆ- ಹುಡ್ಗಿ ಮನೆಯವ್ರು ಸುಮ್ಮನಾದ್ರೂ, ಸಮುದಾಯದವ್ರು ಬಿಡ್ತಿಲ್ಲ

    ಬಳ್ಳಾರಿ: ಇಲ್ಲೊಂದು ಜೋಡಿ ಪರಸ್ಪರ 5 ವರ್ಷಗಳ ಕಾಲ ಪ್ರೀತಿಸಿ ಒಬ್ಬರಿಗೊಬ್ಬರನ್ನ ಅರ್ಥಮಾಡಿಕೊಂಡು ಮದ್ವೆಯಾಗಿದ್ದಾರೆ. ಮೊದಲು ಹುಡ್ಗಿಯ ಕಡೆಯವರು ವಿರೋಧಿಸಿ ನಂತರ ಸುಮ್ಮನಾದರು. ಆದ್ರೆ ನಮ್ಮ ಮಾತು ಕೇಳದೆ ಹೇಗೆ ಮದ್ವೆ ಆಗಿದ್ದೀರಾ ಅಂತಾ ಅದೇ ಸಮಾಜದ ಮುಖಂಡರು ಆ ಪ್ರೇಮಿಗಳಿಗೆ ಕಾಟ ಕೊಡ್ತಿದ್ದಾರೆ.

     

     

    ಮಾಹೀನ್ ಮತ್ತು ಮಾನಸಿ ಪ್ರೀತಿಸಿ ಮದುವೆಯಾದ ಜೋಡಿ. ಬಳ್ಳಾರಿಯಲ್ಲಿ ಎದುರು ಬದುರು ಮನೆಯಲ್ಲಿ ವಾಸವಿದ್ದ ಕಾರಣ ಪರಿಚಯ ಪ್ರೇಮಕ್ಕೆ ತಿರುಗಿದೆ. 5 ವರ್ಷ ಲವ್ ಮಾಡಿ ದೂರದ ಔರಾಂಗಬಾದ್‍ನಲ್ಲಿ ಮದ್ವೆಯಾಗಿದ್ದಾರೆ.

    ಇವರಿಬ್ಬರ ಮದುವೆಗೆ ಹುಡ್ಗಿ ಪೋಷಕರ ವಿರೋಧವಿದೆ. ಹುಡ್ಗನ ಕುಟುಂಬಕ್ಕೆ ಕಾಟ ಶುರುವಾಗಿದೆ. ಕೊನೆಗೆ ಹುಡ್ಗಿ ಮನೆಯವ್ರು ಸುಮ್ಮನಾದ್ರೂ ಸಮುದಾಯದ ಮುಖಂಡರು ಸುಮ್ಮನಾಗಿಲ್ಲ. ಹುಡ್ಗನ ಮನೆ ಮೇಲೆ ದಾಳಿ ಮಾಡಿದ ಗುಂಪು ಕಿಟಕಿ ಗಾಜುಗಳನ್ನ ಒಡೆದು ಹಾಕಿದ್ದಾರೆ. ಅಷ್ಟೇ ಅಲ್ಲದೇ ಮಾಹೀನ್ ಪೋಷಕರ ಮೇಲೆ ಹಲ್ಲೆ ನಡೆಸಿ, ಸಮುದಾಯದಿಂದ ಬಹಿಷ್ಕಾರ ಹಾಕಿದ್ದಾರೆ.

    ಈ ಬಗ್ಗೆ ಹೊಸಪೇಟೆ ಠಾಣೆಗೆ ದೂರು ನೀಡಿದ್ರೂ ಪೊಲೀಸರು ಮಾತ್ರ ಕ್ರಮ ಕೈಗೊಂಡಿಲ್ಲ. ಬದ್ಲಿಗೆ ಪ್ರಭಾವಿಗಳ ಒತ್ತಡಕ್ಕೆ ಮಣಿದು, ಇವ್ರ ಮೇಲೆ ಶಾಂತಿಭಂಗದ ಕೇಸ್ ದಾಖಲಿಸಿದ್ದಾರೆ.

     

  • ಬಯಲಾಯ್ತು ಹುಚ್ಚ ವೆಂಕಟ್ ಹೈ ಡ್ರಾಮ- ನಮ್ಮ ತಂದೆ ಮೇಲಾಣೆ ನಾನು ಇನ್ನ್ಮುಂದೆ ಮೀಡಿಯಾ ಮುಂದೆ ಬರಲ್ಲ

    ಬಯಲಾಯ್ತು ಹುಚ್ಚ ವೆಂಕಟ್ ಹೈ ಡ್ರಾಮ- ನಮ್ಮ ತಂದೆ ಮೇಲಾಣೆ ನಾನು ಇನ್ನ್ಮುಂದೆ ಮೀಡಿಯಾ ಮುಂದೆ ಬರಲ್ಲ

    ಬೆಂಗಳೂರು: ಫಿನಾಯಿಲ್ ಸೇವನೆ ಮತ್ತು ತಮ್ಮ ಪ್ರೀತಿ ವಿಚಾರವಾಗಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮಗಳ ಪ್ರಶ್ನೆ ವೇಳೆ ಹುಚ್ಚ ವೆಂಕಟ್ ಹೈ ಡ್ರಾಮಾ ಬಯಲಾಗಿದೆ.

    ತಾವು ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ವಿಚಾರವಾಗಿ ಮಂಗಳವಾರ ಮಧ್ಯಾಹ್ನ ಪತ್ರಿಕಾಗೋಷ್ಠಿಯನ್ನು ಹುಚ್ಚ ವೆಂಕಟ್ ಕರೆದಿದ್ದರು. ಪ್ರಾರಂಭದಲ್ಲಿ ಮೊದಲು ನಾನು ಮಾತಾನಾಡುತ್ತೇನೆ ನಂತರ ನೀವುಗಳು ಪ್ರಶ್ನೆ ಕೇಳಿ ಎಂದು ತಮ್ಮ ಲವ್ ಸ್ಟೋರಿ ಹೇಳತೊಡಗಿದ್ರು. ಸಿನಿಮಾದಲ್ಲಿ ನಾನು ಮತ್ತು ರಚನಾ ಮೊದಲಿಗೆ ನಟಿಸಿದ್ದೇವು. ನಂತರ ಖಾಸಗಿ ಚಾನೆಲ್‍ನ ರಿಯಾಲಿಟಿ ಶೋವೊಂದರಲ್ಲಿ ರಚನಾ ನನಗೆ ಪ್ರಪೋಸ್ ಮಾಡಿದರು. ಮುಂದೆ ಅವರು ನನಗೆ ವೈಯಕ್ತಿಕವಾಗಿ ಹತ್ರ ಆದ್ರು. ರಚನಾ ನನಗೆ ಊಟ ಮಾಡಿಸಿದ್ದಾರೆ. ನಾನು ಬಿಟ್ಟ ಎಂಜಲನ್ನು ಊಟ ಮಾಡಿದ್ದಾರೆ ಎಂದು ತಮ್ಮ ಪ್ರೇಮ ಪುರಾಣವನ್ನು ಹೇಳಿದ್ರು.

    ಇನ್ನೂ ವೆಂಕಟ್ ನಾನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದೇನೆ. ಆಸ್ಪತ್ರೆಯಲ್ಲಿ ನನ್ನ ಫ್ರೆಂಡ್ಸ್ 15 ಸಾವಿರ ರೂ. ನೀಡಿದ್ದಾರೆ. ಬಿಲ್‍ನಲ್ಲಿ ಡಾಕ್ಟರ್‍ಗಳು ನೀಡಿರುವ ಚಿಕಿತ್ಸೆಯ ಪಟ್ಟಿಯಿದೆ. ಕೊನೆಗೆ ಸ್ವಲ್ಪ ಕುಡಿದೆ ಎಂದು ಡ್ರಾಮಾ ಮಾಡಿದರು.

    ಈ ವೇಳೆ ಮಾಧ್ಯಮಗಳ ಸರಣಿ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಹುಚ್ಚ ವೆಂಕಟ್, ಕೊನೆಗೆ ನನ್ನಿಂದ ತಪ್ಪಾಗಿದೆ. ನನ್ನ ತಂದೆ ಮೇಲಾಣೆ ಇನ್ನ್ಮುಂದೆ ನನ್ನ ವೈಯಕ್ತಿಕ ವಿಚಾರಗಳನ್ನು ತೆಗೆದುಕೊಂಡು ಮಾಧ್ಯಮಗಳ ಮುಂದೆ ಬರೋದಿಲ್ಲ. ರಚನಾ ಅವ್ರಿಗೆ ಕ್ಷಮೆ ಕೇಳ್ತಿನಿ. ನೂರು ಕಾಲ ಚೆನ್ನಾಗಿ ಬದುಕಿ, ಅವರ ತಂದೆ ತಾಯಿಗೂ ಕ್ಷಮೆ ಕೇಳ್ತಿನಿ. ನಾನೇ ಹೋಗಿ ಅವ್ರಿಗೆ ಪ್ರಪೋಸ್ ಮಾಡಿದ್ದೀನಿ ಎಂದು ತಪ್ಪೊಪಿಕೊಂಡು ಸುದ್ದಿಗೋಷ್ಠಿಯಿಂದ ಹೊರನಡೆದರು.

    ಇದನ್ನೂ ಓದಿ: ಹುಚ್ಚ ವೆಂಕಟ್ ಲವ್ ಸ್ಟೋರಿಗೆ ಟ್ವಿಸ್ಟ್: ನಿಜಕ್ಕೂ ಫಿನಾಯಿಲ್ ಕುಡಿದಿದ್ರಾ ವೆಂಕಟ್?

    https://www.youtube.com/watch?v=HgMY_Dst6Nc

     

  • ಹುಚ್ಚ ವೆಂಕಟ್ ಲವ್ ಸ್ಟೋರಿಗೆ ಟ್ವಿಸ್ಟ್: ನಿಜಕ್ಕೂ ಫಿನಾಯಿಲ್ ಕುಡಿದಿದ್ರಾ ವೆಂಕಟ್?

    ಹುಚ್ಚ ವೆಂಕಟ್ ಲವ್ ಸ್ಟೋರಿಗೆ ಟ್ವಿಸ್ಟ್: ನಿಜಕ್ಕೂ ಫಿನಾಯಿಲ್ ಕುಡಿದಿದ್ರಾ ವೆಂಕಟ್?

    ಬೆಂಗಳೂರು: ಭಾನುವಾರ ಸಂಜೆ ನಟ ಹುಚ್ಚ ವೆಂಕಟ್ ಫಿನಾಯಿಲ್ ಕುಡಿದು ಆಸ್ಪತ್ರೆ ಸೇರಿದ್ದರು. ಆದರೆ ನಿಜಕ್ಕೂ ಹುಚ್ಚ ವೆಂಕಟ್ ಫಿನಾಯಿಲ್ ಕುಡಿದಿದ್ರಾ ಎಂಬ ಪ್ರಶ್ನೆ ಹಲವರಲ್ಲಿ ಕಾಡಿತ್ತು. ಈ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ವೆಂಕಟ್ ದೇಹದಲ್ಲಿ ವಿಷಕಾರಿ ಅಂಶ ಪತ್ತೆಯಾಗಿಲ್ಲ ಎಂದು ಮಲ್ಲಿಗೆ ಆಸ್ಪತ್ರೆ ವೈದ್ಯರು ಪಬ್ಲಿಕ್ ಟಿವಿಗೆ ಹೇಳಿದ್ದಾರೆ.

    ನಾನು ಅರ್ಧಬಾಟಲ್ ಫಿನಾಯಿಲ್ ಕುಡಿದಿದ್ದೆ, ನಂತರ ವಾಂತಿ ಮಾಡಿಕೊಂಡೆ ಎಂದು ಹುಚ್ಚ ವೆಂಕಟ್ ಹೇಳಿದ್ದರು. ಒಂದು ವೇಳೆ ಅರ್ಧ ಬಾಟಲ್ ಫಿನಾಯಿಲ್ ಕುಡಿದಿದ್ರೆ ಎರಡು ದಿನ ಐಸಿಯುನಲ್ಲಿ ಚಿಕಿತ್ಸೆ ಪಡೆಯಬೇಕಾಗಿತ್ತು. ಆಸ್ಪತ್ರೆಗೆ ಬಂದ ಹುಚ್ಚ ವೆಂಕಟ್ ಕೇವಲ ಹೇಳಿಕೆಯನ್ನಷ್ಟೇ ನೀಡಿದ್ರೂ ವಿನಃ ಅಥವಾ ಯಾವುದೇ ಚಿಕಿತ್ಸೆಗೆ ಸ್ಪಂದಿಸಿರಲಿಲ್ಲ. ಆಸ್ಪತ್ರೆಗೆ ಸೇರಿದ ಮೇಲೆ ವೈದ್ಯಾಧಿಕಾರಿಗಳ ಜೊತೆ ಜಗಳ ಮಾಡಿಕೊಂಡು ಹೊರ ಬರುವ ಪ್ರಯತ್ನ ಮಾಡಿದ್ದರು.

    ಹುಚ್ಚ ವೆಂಕಟ್ ದೇಹದಲ್ಲಿ ಯಾವುದೇ ವಿಷಕಾರಿ ಅಂಶ ಪತ್ತೆಯಾಗಿಲ್ಲ. ಸಂಜೆ 5 ಗಂಟೆಗೆ ಆಸ್ಪತ್ರೆಗೆ ಬಂದ ವೆಂಕಟ್, ಹೊರಗೆಯೇ ಒಂದು ಗಂಟೆಯೇ ಹೈಡ್ರಾಮ ಮಾಡಿದ್ದಾರೆ. 6 ಗಂಟೆಯ ವೇಳೆ ಆಸ್ಪತ್ರೆಯ ಒಳಗೆ ಬಂದ ವೆಂಕಟ್ ಯಾವುದೇ ಪರೀಕ್ಷೆಗೆ ಸಹಕರಿಸದೇ ಡಾಕ್ಟರ್ ಜೊತೆ ಜಗಳ ಮಾಡಿಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ಹುಚ್ಚ ವೆಂಕಟ್ ವಾಂತಿ ಮಾಡಿಕೊಂಡಿಲ್ಲ. 6 ಗಂಟೆಯಿಂದ 8 ಗಂಟೆಯವರೆಗೆ ಕೇವಲ ಗ್ಲೊಕೋಸ್ ಮಾತ್ರ ನೀಡಲಾಗಿತ್ತು. 8 ಗಂಟೆಯ ವೇಳೆ ಆಸ್ಪತ್ರೆಗೆ ಮಾಧ್ಯಮಗಳ ಹೊರಟಾಗ ಹೊರಬಂದ ವೆಂಕಟ್ ಮತ್ತೆ ತಮ್ಮ ಹುಚ್ಚಾಟ ಪ್ರಾರಂಭಿಸಿದರು.

    ಇತ್ತ ನಟಿ ರಚನಾ ಅವರು ಮಾಧ್ಯಮಗಳಲ್ಲಿ ಹೇಳಿಕೆಯನ್ನು ನೀಡುತ್ತಿದ್ದಂತೆ ಮಾಧ್ಯಮಗಳ ಸ್ಟುಡಿಯೋದಲ್ಲಿ ಬಂದು ಕುಳಿತುಕೊಳ್ತಾರೆ. ಮೈ ಮೇಲೆಲ್ಲಾ ಫಿನಾಯಿಲ್ ಸುರಿದುಕೊಂಡು ವೆಂಕಟ್ ಹೈ ಡ್ರಾಮ ಮಾಡಿದ್ದಾರೆ ಎಂದು ಹೇಳಲಾಗಿದೆ. ಹುಚ್ಚ ವೆಂಕಟ್ ಕೇವಲ ಜನರನ್ನು ನಂಬಿಸಿಲಿಕ್ಕೆ ಫಿನಾಯಿಲ್‍ನ್ನು ಮೈ ಮೇಲೆ ಸುರಿದುಕೊಂಡು ಡ್ರಾಮ ಮಾಡಿದ್ದಾರೆ.

    ಯಾವಗಾಲೂ ನಾನು ಮಹಿಳೆಯರಿಗೆ ಮರ್ಯಾದೆ ಕೊಡ್ತಿನಿ ಅಂತಾ ಹೇಳ್ತನಿ ಎಂದು ಹೇಳ್ತಾಯಿದ್ದ ವೆಂಕಟ್‍ನ ನಟಿ ರಚನಾಳ ಮಾನವನ್ನು ಹರಾಜು ಹಾಕಿದ್ದು ಸರೀನಾ ಎಂಬ ಪ್ರಶ್ನೆ ಜನರಲ್ಲಿ ಕಾಡುತ್ತಿದೆ.

    https://www.youtube.com/watch?v=wcpLROyAkHg

    https://www.youtube.com/watch?v=DLMQPHIr9A4

    https://www.youtube.com/watch?v=mgo6KUcPubk

  • ಪ್ರೀತ್ಸೆ ಪ್ರೀತ್ಸೆ ಅಂತಾ ಬೆನ್ನುಬಿದ್ದ ಹುಚ್ಚ ವೆಂಕಟ್ – ರಿಯಾಲಿಟಿ ಶೋ ರಚನಾಗೆ ಫುಲ್ ಸಂಕಟ – ಮಧ್ಯರಾತ್ರಿ ನಡೀತು ಹೈಡ್ರಾಮ

    ಪ್ರೀತ್ಸೆ ಪ್ರೀತ್ಸೆ ಅಂತಾ ಬೆನ್ನುಬಿದ್ದ ಹುಚ್ಚ ವೆಂಕಟ್ – ರಿಯಾಲಿಟಿ ಶೋ ರಚನಾಗೆ ಫುಲ್ ಸಂಕಟ – ಮಧ್ಯರಾತ್ರಿ ನಡೀತು ಹೈಡ್ರಾಮ

    ಬೆಂಗಳೂರು: ನಟ ಹುಚ್ಚ ವೆಂಕಟ್ ಪ್ರೇಮ ವೈಫಲ್ಯದ ಹಿನ್ನೆಲೆಯಲ್ಲಿ ಫಿನಾಯಿಲ್ ಕುಡಿದು ಭಾನುವಾರ ಸಂಜೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಆದರೆ ಈ ಕುರಿತು ನಟಿ ರಚನಾ ಹೇಳೋದೇ ಬೇರೆ, ನಾನು ಯಾವತ್ತೂ ವೆಂಕಟ್‍ನ ಲವ್ ಮಾಡ್ತಿನಿ ಅಂತ ಹೇಳಿಲ್ಲ. ಹುಚ್ಚ ವೆಂಕಟ್ ಜೊತೆ ಸ್ನೇಹ ಇತ್ತು ಅಷ್ಟೇ ವಿನಃ ಮದುವೆ ಆಗ್ತಿನಿ ಅಂತ ಹೇಳಿರ್ಲಿಲ್ಲ ಎಂದು ಹೇಳಿದ್ದಾರೆ.

     

    ರಚನಾ ಮತ್ತು ನನಗೂ ಲವ್ ಆಗಿತ್ತು. ರಚನಾ ನನ್ನ ಪ್ರೇಮವನ್ನ ನಿರಾಕರಿಸುತ್ತಿದ್ದಾರೆ. ಹಾಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಹುಚ್ಚ ವೆಂಕಟ್ ಮೊಬೈಲ್ ಸಂದೇಶ ಕಳಿಸಿದ್ದಾರೆ. ಇನ್ನು ಫಿನಾಯಿಲ್ ಕುಡಿದ ಹುಚ್ಚ ವೆಂಕಟ್‍ರನ್ನು ನಗರದ ಮಲ್ಲಿಗೆ ಆಸ್ಪತ್ರೆಗೆ ದಾಖಲಿಸಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೆಂಕಟ್ ಸಹೋದರ ಕುಶಾಲ್ ಬಾಬು ಮಾಹಿತಿ ನೀಡಿದ್ದಾರೆ.

    ಆಸ್ಪತ್ರೆಗೆ ದಾಖಲು ತೆರಳಿದ್ದ ಹುಚ್ಚ ವೆಂಕಟ್ ಅಲ್ಲಿಯೂ ತಮ್ಮ ಹುಚ್ಚಾಟವನ್ನು ಪ್ರದರ್ಶನ ಮಾಡಿದ್ದರು. ಚಿಕಿತ್ಸೆ ಕೊಡುವ ಬದಲು ವೈದ್ಯರು ನನ್ನನ್ನ ಏನೇನೋ ಪ್ರಶ್ನೆ ಮಾಡುತ್ತಿದ್ದಾರೆ ಎಂದು ಆಸ್ಪತ್ರೆಯಿಂದ ಹೊರಗೆ ಬಂದು ರಂಪಾಟ ಮಾಡಿದ್ದರು. ಇನ್ನು ಆಸ್ಪತ್ರೆ ಯಶವಂತಪುರ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರು ಹಾಗು ಹುಚ್ಚ ವೆಂಕಟ್‍ನಿಂದ ಮಾಹಿತಿ ಪಡೆದಿದ್ದಾರೆ.

    https://www.youtube.com/watch?v=wcpLROyAkHg

    https://www.youtube.com/watch?v=DLMQPHIr9A4

  • 16ರ ಪೋರನ ಜೊತೆ 31 ವರ್ಷದ ಎರಡು ಮಕ್ಕಳ ತಾಯಿಯ ಲವ್!

    16ರ ಪೋರನ ಜೊತೆ 31 ವರ್ಷದ ಎರಡು ಮಕ್ಕಳ ತಾಯಿಯ ಲವ್!

    ಲಂಡನ್: ಎರಡು ಮಕ್ಕಳ ತಾಯಿಯೊಂದಿಗೆ 16 ವರ್ಷದ ಪೋರನಿಗೆ ಲವ್ ಆಗಿದ್ದು, ಸದ್ಯ ಆತ 9 ತಿಂಗಳ ಮಗುವಿನ ತಂದೆಯಾಗಿದ್ದಾನೆ.

    ಇಂಗ್ಲೆಂಡಿನ ಡರ್ಹಾಮ್ ಸಿಟಿಯ 31 ವರ್ಷದ ಕ್ಯಾಥಲಿನ್ ಮಾರ್ಟಿನಾ ಮತ್ತು 16 ವರ್ಷದ ಜ್ಯಾಕ್ ಕುಸಾಯಿಲ್ ಇಬ್ಬರು ಸಹ ವಯಸ್ಸಿನ ಭೇದ ಮರೆತು ಪ್ರೇಮದ ಬಲೆಯಲ್ಲಿ ಸಿಲುಕಿದ ಜೋಡಿಗಳು. ಮಾರ್ಟಿನಾ 2015ರಲ್ಲಿ ತನ್ನ ಪತಿಯಿಂದ ವಿಚ್ಚೇದನ ಪಡೆದಿದ್ದು, ಆ ವೇಳೆ ಆಕೆ 11 ವರ್ಷದ ಹಾಗು 3 ವರ್ಷದ ಎರಡು ಗಂಡು ಮಕ್ಕಳನ್ನು ಹೊಂದಿದ್ದಳು.

    ಫೇಸ್‍ಬುಕ್‍ನಲ್ಲಿ ಲವ್: ಪತಿಯ ವಿಚ್ಚೇದನ ಬಳಿಕ ಮಾರ್ಟಿನಾನಗೆ ಫೇಸ್‍ಬುಕ್‍ನಲ್ಲಿ ಜ್ಯಾಕ್‍ನ ಪರಿಚಯವಾಗಿದೆ. ಫೇಸ್‍ಬುಕ್ ಮತ್ತು ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಇಬ್ಬರೂ ಚಾಟಿಂಗ್ ಮಾಡುತ್ತ ಸ್ನೇಹಿತರಾಗಿದ್ದಾರೆ.

    ಒಂದು ದಿನ ಮಾರ್ಟಿನಾ ತನ್ನ ಮನೆಯ ಗಾರ್ಡನ್ ಕೆಲಸಕ್ಕಾಗಿ ಜ್ಯಾಕ್‍ಗೆ ಸಹಾಯ ಕೇಳಿ ಮನೆಗೆ ಬರುವಂತೆ ಹೇಳಿದ್ಳು. ಅಂದು ಇಬ್ಬರೂ ಮೊದಲ ಭೇಟಿಯಾಗಿದ್ದಾರೆ. ಮುಂದೆ ಮಾರ್ಟಿನಾ ಮತ್ತು ಜ್ಯಾಕ್ ಇಬ್ಬರ ನಡುವಿನ ಸ್ನೇಹ ಪ್ರೀತಿಗೆ ಬದಲಾಗಿತ್ತು.

    ಮನೆಯಲ್ಲಿ ವಿರೋಧ: ಇಬ್ಬರ ಪ್ರೀತಿ ಐದು ತಿಂಗಳ ಆದ್ಮೇಲೆ ಜ್ಯಾಕ್ ತಾಯಿ ಇವರಿಬ್ಬರ ಪ್ರೀತಿಗೆ ತೀವ್ರ ವಿರೋಧ ವ್ಯಕ್ತಡಿಸಿದ್ದರು. ಜ್ಯಾಕ್ ತಾಯಿಯ ಪ್ರಕಾರ ತಮ್ಮ ಮಗ ಮಾರ್ಟಿನಾಳ ಅರ್ಧ ವಯಸ್ಸಿನವನಾಗಿದ್ದನು. ಈ ಹಿನ್ನೆಲೆಯಲ್ಲಿ ಜ್ಯಾಕ್‍ರ ತಾಯಿ ಇವರಿಬ್ಬರ ಸಂಬಂಧಕ್ಕೆ ವಿರೋಧಿಸಿದ್ದರು. ಕೊನೆಗೆ ಮಾರ್ಟಿನಾ 5 ತಿಂಗಳ ಗರ್ಭೀಣಿ ಎಂದು ತಿಳಿದಾಗ ಜ್ಯಾಕ್ ತಾಯಿ ಒಪ್ಪಿದ್ದಾರೆ.

    ಜ್ಯಾಕ್ ಈಗ 18 ವರ್ಷದವನಾಗಿದ್ದು, 9 ತಿಂಗಳು ಮಗನ ತಂದೆಯಾಗಿದ್ದಾನೆ.

     

  • ಲಿವಿಂಗ್ ಟುಗೆದರ್ ಬಳಿಕ ಕೈಕೊಟ್ಟ ಪ್ರಿಯಕರ – ನಟಿ ಕಮ್ ಮಾಡೆಲ್‍ಗೆ ದೋಖಾ?

    ಲಿವಿಂಗ್ ಟುಗೆದರ್ ಬಳಿಕ ಕೈಕೊಟ್ಟ ಪ್ರಿಯಕರ – ನಟಿ ಕಮ್ ಮಾಡೆಲ್‍ಗೆ ದೋಖಾ?

    – ಆಕೆ ಮಾಡೆಲ್ ಅಲ್ಲ, ವೇಶ್ಯಾವಾಟಿಕೆಯಿಂದ ಹಣ ಸಂಪಾದಿಸ್ತಿದ್ದಾಳೆ
    – ನನ್ನ ವಿರುದ್ಧ ಆರೋಪ ಸುಳ್ಳು: ಯುವಕನಿಂದ ದೂರು

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲೊಂದು ಲವ್ ಸೆಕ್ಸ್ ದೋಖಾ ಪ್ರಕರಣ ಬೆಳಕಿಗೆ ಬಂದಿದೆ. ಲಿವಿಂಗ್ ಟುಗೆದರ್ ಬಳಿಕ ನಟಿ ಕಮ್ ಮಾಡೆಲ್ ಆಗಿರುವ ಯುವತಿಗೆ ಪ್ರಿಯಕರ ಕೈಕೊಟ್ಟು ಪರಾರಿಯಾಗಿದ್ದಾನೆ ಎಂದು ನಟಿಯಿಂದ ಸದಾಶಿವ ನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇತ್ತ ಯುವಕನೂ ಯುವತಿಯ ವಿರುದ್ಧ ದೂರು ನೀಡಿದ್ದು ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.

    ಯುವತಿ ದೂರಿನಲ್ಲಿ ಏನಿದೆ? ಯಶವಂತಪುರದ ಖಾಸಗಿ ಕಂಪನಿಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಉಲ್ಲಾಸ್ ಜೊತೆ ನನಗೆ ಪ್ರೀತಿ ಇತ್ತು. ಕಳೆದ ಒಂದು ವರ್ಷದಿಂದ ನಾವಿಬ್ಬರು ಸ್ನೇಹಿತರಾಗಿದ್ದೇವು. 8 ತಿಂಗಳ ಹಿಂದೆ ಇಬ್ಬರ ಸ್ನೇಹ ಪ್ರೀತಿಗೆ ತಿರುಗಿತ್ತು. 2 ತಿಂಗಳ ಹಿಂದೆ ಉಲ್ಲಾಸ್ ಮತ್ತು ನಾನು ಲಿವಿಂಗ್ ಟುಗೆದರ್ ಆಗಿ ಒಂದೇ ಮನೆಯಲ್ಲಿ ವಾಸವಾಗಿದ್ದೇವು. ಆದರೆ ಆದರೆ ಈಗ ನನ್ನನ್ನು ಮದುವೆಯಾಗುದಿಲ್ಲ ಎಂದು ಉಲ್ಲಾಸ್ ಹೇಳಿದ್ದು ನನಗೆ ಮೋಸವಾಗಿದೆ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಜೂನ್ 2ರಂದು ಸ್ವಂತ ಊರು ಮೈಸೂರಿಗೆ ಹೋಗಿದ್ದ ಉಲ್ಲಾಸ್, ಮನೆಯಲ್ಲಿ ಮದುವೆಗೆ ಒಪ್ಪುತ್ತಿಲ್ಲ ಎಂದು ತಿಳಿಸಿದ್ದಾನೆ. ಅಷ್ಟೇ ಅಲ್ಲದೇ ಗೆಳೆಯ ಪ್ರೀತಂ ಎಂಬಾತನೊಂದಿಗೆ ಬಂದು ನನ್ನ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ನಟಿ ಉಲ್ಲಾಸ್ ಪಟೇಲ್ ವಿರುದ್ಧ ರೇಪ್, ವಂಚನೆ ದೂರು ದಾಖಲಿಸಿದ್ದಾರೆ.

    ನಟಿ ವಿರುದ್ಧ ದೂರು ದಾಖಲು: ಇತ್ತ ನಟಿ ದೂರು ದಾಖಲಿಸುತ್ತಿದ್ದಂತೆ ಉಲ್ಲಾಸ್ ಕೂಡ ಯುವತಿಯ ವಿರುದ್ಧ ಸಂಜಯ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನನಗೆ ಯುವತಿ ಫೇಸ್ ಬುಕ್ ಮೂಲಕ ಪರಿಚಯವಾಗಿದ್ದು, ಹಿಂದೆ ನಾವು ಸ್ನೇಹಿತರಾಗಿದ್ದೇವು. ಇವಳು ವೇಶ್ಯಾವಾಟಿಕೆ ಮಾಡುತ್ತಿದ್ದು, ಇವಳ ಖಾತೆಗೆ ಹಣಗಳು ಜಮೆ ಆಗುತ್ತಿದೆ. ನಟಿ ನನ್ನ ವಿರುದ್ಧ ಆಧಾರವಿಲ್ಲದೇ ದೂರು ನೀಡಿದ್ದಾಳೆ ಎಂದು ಆರೋಪಿಸಿದ್ದಾರೆ.

    ಆಕೆ ನಕಲಿ ತಾಳಿ ಕಟ್ಟಿಕೊಂಡು ಸುಳ್ಳು ಹೇಳುತ್ತಿದ್ದಾಳೆ. ಹಣಕ್ಕಾಗಿ ನನಗೆ ಈ ರೀತಿಯಾಗಿ ಕಿರುಕುಳ ನೀಡುತ್ತಿದ್ದಾಳೆ. ಆಕೆಯ ಡೈರಿಯಲ್ಲಿ ಎಲ್ಲ ಮಾಹಿತಿ ಇದೆ ಎಂದು ಉಲ್ಲಾಸ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.