Tag: ಲವ್ ಯೂ ರಚ್ಚು

  • ರಚಿತಾ ರಾಮ್ ನಿದ್ದೆ ಗೆಡಿಸಿದ ಗ್ಲಾಮರ್ ಗ್ರಾಮರ್: ಮತ್ತೆ ಬೇಸರಗೊಂಡ ಡಿಂಪಲ್ ಕ್ವೀನ್

    ರಚಿತಾ ರಾಮ್ ನಿದ್ದೆ ಗೆಡಿಸಿದ ಗ್ಲಾಮರ್ ಗ್ರಾಮರ್: ಮತ್ತೆ ಬೇಸರಗೊಂಡ ಡಿಂಪಲ್ ಕ್ವೀನ್

    ಚಿತಾ ರಾಮ್ ಬೇಸರಗೊಂಡಿದ್ದಾರೆ. ಹೀಗೆ ಅವರು ಬೇಸರಗೊಳ್ಳುವುದು ಇದೇ ಮೊದಲೇನೂ ಅಲ್ಲ. ಹಾಟ್ ಹಾಟ್ ದೃಶ್ಯಗಳಲ್ಲಿ ಅವರು ಕಾಣಿಸಿಕೊಂಡಾಗೆಲ್ಲ ಅವರು ಬೇಸರ ಹೊರಹಾಕುತ್ತಾರೆ. ಇದನ್ನೂ ಓದಿ : ಶಿವರಾತ್ರಿ ಸಡಗರಕ್ಕೆ ಸಿದ್ಧಗೊಂಡ ಸ್ಯಾಂಡಲ್ ವುಡ್

    ಈ ಹಿಂದೆ ಉಪೇಂದ್ರ ನಟನೆಯ ‘ಐ ಲವ್ ಯೂ’ ಚಿತ್ರದಲ್ಲಿ ಹಸಿಬಿಸಿ ದೃಶ್ಯಗಳಲ್ಲಿ ಡಿಂಪಲ್ ಕ್ವೀನ್ ಕಾಣಿಸಿಕೊಂಡಿದ್ದರು. ಅದನ್ನು ನಿರ್ದೇಶಕ ಆರ್.ಚಂದ್ರು ಪ್ರಚಾರಕ್ಕಾಗಿ ಬಳಸಿಕೊಂಡಿದ್ದರು. ಈ ಸಂದರ್ಭದಲ್ಲಿ ರಚಿತಾ ಬೇಸರಗೊಂಡಿದ್ದರು. ನಾನು ಅಂತಹ ದೃಶ್ಯಗಳಲ್ಲಿ ನಟಿಸಬಾರದಿತ್ತು. ನನ್ನ ತಂದೆ ಕೂಡ ಅದನ್ನು ಒಪ್ಪಲಿಲ್ಲ. ಐ ಯ್ಯಾಮ್ ಸ್ಸಾರಿ ಎಂದು ಭಾವುಕರಾಗಿದ್ದಾರೆ. ಇದನ್ನೂ ಓದಿ : ಮಾರ್ಚ್ ನಲ್ಲಿ ರಿಲೀಸ್ ಆಗಲಿರುವ ಬಿಗ್ ಬಜೆಟ್ ಸಿನಿಮಾಗಳಿಗೆ ಮತ್ತೆ ಸಂಕಷ್ಟ

    ಇನ್ಮುಂದೆ ರಚಿತಾ ರಾಮ್ ಅಂತ ಸನ್ನಿವೇಶಗಳಲ್ಲಿ ಯಾವುದೇ ಕಾರಣಕ್ಕೂ ಕಾಣಿಸಿಕೊಳ್ಳುವುದಿಲ್ಲ ಎನ್ನುವ ಹೊತ್ತಿಗೆ ‘ಲವ್ ಯೂ ರಚ್ಚು’ ಚಿತ್ರ ಹೊರ ಬಂದಿತ್ತು. ಅರೇ, ಅಲ್ಲಿಯೂ ಅದೇ ಕಥೆ. ಇವರೇ ಹಸಿ ಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಷರತ್ತು ಹಾಕಿದ್ದವರು, ಅಜಯ್ ರಾವ್ ಜತೆ ಅಂಥದ್ದೊಂದು ಸೀನ್ ನಲ್ಲಿ ಮತ್ತೆ ನಟಿಸಿದ್ದರು. ಆಗಲೂ, ಅವರನ್ನು ‘ನೀವೇಕೆ ಅಂತಹ ದೃಶ್ಯದಲ್ಲಿ ಕಾಣಿಸಿಕೊಂಡಿರಿ?’ ಎನ್ನುವ ಪ್ರಶ್ನೆ ಎದುರಾಯಿತು. ಅವತ್ತು ರಾಂಗ್ ಆದರು. ಪ್ರಶ್ನೆ ಕೇಳಿದವರಿಗೆ “ಫಸ್ಟ್ ನೈಟ್ನಲ್ಲಿ ನೀವೇನು ಮಾಡ್ತೀರಿ” ಎಂದು ಮರು ಪ್ರಶ್ನೆ ಹಾಕಿ ಟ್ರೋಲ್ ಆದರು. ಇದು ತಣ್ಣಗಾಗಿತು ಅನ್ನುವಷ್ಟರಲ್ಲಿ ಮತ್ತೊಂದು ಸಿನಿಮಾ ತೆರೆಗೆ ಅ‍ಪ್ಪಳಿಸಿ. ಇದನ್ನೂ ಓದಿ : ವಿಕ್ರಾಂತ್ ರೋಣ 2 ಮುನ್ಸೂಚನೆ ಕೊಟ್ಟರಾ ಸುದೀಪ್?

    ಪ್ರೇಮ್ ನಿರ್ದೇಶನದ ಹೊಸ ಸಿನಿಮಾದಲ್ಲಿ ರಚ್ಚು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಬಾರಿಯಂತೂ ಅವರು ಸಖತ್ ರಾಂಗ್ ಆಗಿದ್ದಾರೆ. ನಾನು ನಟಿಸಿದ ಬೋಲ್ಡ್ ಪಾತ್ರಗಳು ಮಾತ್ರ ನಿಮಗೆ ಕಾಣ್ತಿವೆಯಾ ಅಂತ ರಾಂಗ್ ಆಗಿದ್ದಾರೆ. ಹೌದು, ಒಬ್ಬ ನಟಿಯಾಗಿ ಯಾವ ರೀತಿಯ ಪಾತ್ರ ಮಾಡಬೇಕು, ಮಾಡಬಾರದು ಎನ್ನುವ ಅರಿವು ಅವರಿಗಿರುತ್ತದೆ. ಕಥೆ ಕೇಳುವಾಗಲೇ ಅವರು ಅಂತಹ ಪಾತ್ರ ಅಥವಾ ದೃಶ್ಯಗಳಿಗೆ ಒಪ್ಪಿಗೆ ಸೂಚಿಸಿಯೇ ನಟಿಸಿರುತ್ತಾರೆ. ಅದು ಅವರ ಆಯ್ಕೆ. ಆದರೆ, ಇಂತಹ ಪಾತ್ರ ಮಾಡಿದ್ದಕ್ಕೆ ಮತ್ತೆ ರಚ್ಚು ತಕರಾರು ತಗೆದಿದ್ದಾರೆ. ನಾನು ಆ ರೀತಿಯ ಪಾತ್ರವನ್ನು ಮಾಡಲೇಬಾರದು ಎನ್ನುವ ಪ್ರಶ್ನೆಯನ್ನೂ ಈ ಬಾರಿ ಹಾಕಿದ್ದಾರೆ. ಇದನ್ನೂ ಓದಿ : ಏನಾಯ್ತು ಅಮಿತಾಭ್ ಬಚ್ಚನ್ ಗೆ? ಆತಂಕದಲ್ಲಿ ಅಭಿಮಾನಿಗಳು

    ಯಾಕೋ ಗೊತ್ತಿಲ್ಲ ಇಂತಹ ಪಾತ್ರಗಳನ್ನು ಮಾಡಿದಾಗೆಲ್ಲ ರಚಿತಾ ರಾಮ್ ಗಲಿಬಿಲಿಗೊಳ್ಳುತ್ತಾರೆ. ಅದರಿಂದ ದಾಟಿಕೊಳ್ಳುವ ಮಾರ್ಗ ಮಾತ್ರ ಅವರಿಗೆ ಗೊತ್ತಾಗುತ್ತಿಲ್ಲ.

  • ನಾನು ಫುಲ್ ಥ್ರಿಲ್ ಆಗಿದ್ದೇನೆ ಅಂದ್ರು ಡಿಂಪಲ್ ಕ್ವೀನ್ ರಚಿತಾ

    ನಾನು ಫುಲ್ ಥ್ರಿಲ್ ಆಗಿದ್ದೇನೆ ಅಂದ್ರು ಡಿಂಪಲ್ ಕ್ವೀನ್ ರಚಿತಾ

    ಬೆಂಗಳೂರು: ನಾನು ಫುಲ್ ಥ್ರಿಲ್ ಆಗಿದ್ದೇನೆ ಎಂದು ಚಂದನವನದ ಡಿಂಪಲ್ ಕ್ವೀನ್ ರಚಿತಾ ರಾಮ್ ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಆ ವೀಡಿಯೋ ನೋಡಿದ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ.

    ಆ ಪೋಸ್ಟ್‍ನಲ್ಲಿ ಏನಿದೆ?
    ರಚಿತಾ ರಾಮ್ ಅವರ ಸಹೋದರಿ ನಿತ್ಯ ರಾಮ್ ಮದುವೆಯಾಗಿ ವಿದೇಶಕ್ಕೆ ಹೋಗಿದ್ದರು. ಇದರಿಂದ ರಚಿತಾ ತನ್ನ ಸಹೋದರಿಯನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದರು. ಆದರೆ ಮತ್ತೆ ಇವರಿಬ್ಬರು ಒಂದಾಗಿದ್ದಾರೆ. ರಚಿತಾ ತಮ್ಮ ಇನ್‍ಸ್ಟಾಗ್ರಾಮ್ ನಲ್ಲಿ, ನಾನು ಎಷ್ಟು ಥ್ರಿಲ್ ಆಗಿದ್ದೇನೆ ಎಂದು ವ್ಯಕ್ತಪಡಿಸಲು ಸಾಧ್ಯವಾಗುತ್ತಿಲ್ಲ. ಮತ್ತೆ ನಾವಿಬ್ಬರು ಒಂದಾಗಿದ್ದೇವೆ. ಈ ಖುಷಿಯಿಂದ ನನ್ನ ಹೃದಯ ಕರಗಿದೆ ಎಂದು ಬರೆದು ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಮಾದಕ ನೋಟದಿಂದ ನಿದ್ದೆಗೆಡಿಸಿದ ನಟಿ ಶುಭ್ರ ಅಯ್ಯಪ್ಪ

     

    View this post on Instagram

     

    A post shared by Rachita Ram (@rachita_instaofficial)

    ಈ ವೀಡಿಯೋದಲ್ಲಿ ರಚಿತಾ ಮತ್ತು ನಿತ್ಯ ತುಂಬಾ ಕ್ಯೂಟ್ ಆಗಿ ಕಾಣುತ್ತಿದ್ದು, ವೈ ದಿಸ್ ಕೊಲವೆರಿ ಡಿ ಸಾಂಗ್ ಗೆ ಇಬ್ಬರು ಕ್ಯೂಟ್ ಆಗಿ ಎಕ್ಸ್ ಪ್ರೆಶನ್ ಕೊಟ್ಟಿದ್ದಾರೆ. ಇದನ್ನೂ ಓದಿ:   ಹಾಗಲಕಾಯಿಂದ ಮಾಡಿ ರುಚಿಯಾದ ಪಲ್ಯ

     

    View this post on Instagram

     

    A post shared by Rachita Ram (@rachita_instaofficial)

    ಇತ್ತೀಚೆಗೆ ರಚಿತಾ ನಟನೆಯ ‘ಲವ್ ಯೂ ರಚ್ಚು’ ಸಿನಿಮಾದ ಚಿತ್ರೀಕರಣದ ವೇಳೆ ಫೈಟರ್ ವಿವೇಕ್ ವಿದ್ಯುತ್ ಅವಘಡದಿಂದ ಸಾವನ್ನಪ್ಪಿದ್ದರು. ಈ ದುರಂತಕ್ಕೆ ಚಿತ್ರತಂಡದ ನಿರ್ಲಕ್ಷ್ಯವೇ ಕಾರಣ ಎಂದು ರಚಿತಾ ಮತ್ತು ಚಿತ್ರತಂಡವನ್ನು ಬಿಡದಿ ಪೊಲೀಸರು ವಿಚಾರಣೆಯನ್ನು ಸಹ ಮಾಡಿದ್ದರು. ಪ್ರಸ್ತುತ ಚಿತ್ರತಂಡಕ್ಕೆ ನ್ಯಾಯಾಲಯ ಜಾಮೀನು ನೀಡಿದೆ.

  • ತಪ್ಪು ಸರಿಗಳ ಲೆಕ್ಕ ಆ ಭಗವಂತನ ಬಳಿ ಇರುತ್ತೆ: ರಚಿತಾ ರಾಮ್

    ತಪ್ಪು ಸರಿಗಳ ಲೆಕ್ಕ ಆ ಭಗವಂತನ ಬಳಿ ಇರುತ್ತೆ: ರಚಿತಾ ರಾಮ್

    ಬೆಂಗಳೂರು: ‘ಲವ್ ಯೂ ರಚ್ಚು’ ಸಿನಿಮಾ ಶೂಟಿಂಗ್ ವೇಳೆ ಫೈಟರ್ ವಿವೇಕ್ ಹೈ ಟೆನ್ಷನ್ ವೈಯರ್ ತಗುಲಿ ಮೃತಪಟ್ಟಿದ್ದರು. ಈ ಬಗ್ಗೆ ಚಿತ್ರದ ನಾಯಕಿ ರಚಿತಾ ರಾಮ್ ಇನ್‍ಸ್ಟಾಗ್ರಾಮ್ ಘಟನೆಯ ಬಳಿಕ ತಮಗೆ ಆದ ನೋವನ್ನು ಬರೆದುಕೊಂಡಿದ್ದು, ಆರೋಪಗಳು ಏನೇ ಇದ್ರೂ, ತಪ್ಪು ಸರಿಗಳ ಲೆಕ್ಕ ಆ ಭಗವಂತನ ಬಳಿ ಇರುತ್ತೆ ಅಂತನೂ ನಂಬಿದ್ದೀನಿ ಎಂದಿದ್ದಾರೆ.

    ಪೋಸ್ಟ್ ನಲ್ಲಿ ಏನಿದೆ?
    ಲವ್ ಯೂ ರಚ್ಚು ಸೆಟ್‍ನಲ್ಲಿ ಒಂದು ನಡೀಬಾರದ ಘಟನೆ ನಡೆದಾಗಿನಿಂದ, ಆ ಆಘಾತ ನನ್ನನ್ನು ಸೈಲೆಂಟ್ ಆಗಿರುವ ಹಾಗೆ ಮಾಡಿತ್ತು. ನನ್ನ ಮೌನ ಕೆಲವರಿಗೆ ತಪ್ಪಾಗಿ ಅರ್ಥವಾಗಿದೆ, ತಪ್ಪಾಗಿ ಬಳಕೆ ಆಗುತ್ತಿದೆ. ಇದು ನನಗೆ ನಿಜಕ್ಕೂ ನೋವು ಕೊಟ್ಟಿದೆ.

     

    View this post on Instagram

     

    A post shared by Rachita Ram (@rachita_instaofficial)

    ಆ ದುರ್ಘಟನೆ ನಡೆದಾಗ ನಾನು ಆ ಸೆಟ್‍ನಲ್ಲಿ ಇರಲಿಲ್ಲ. ಅದಂತೂ ಸತ್ಯ. ಆಗಸ್ಟ್ 2ರಂದು ನಾನು ‘ಶಬರಿ’ ಸಿನಿಮಾ ಶೂಟಿಂಗ್‍ಗೋಸ್ಕರ ಮೈಸೂರಿನಲ್ಲಿದ್ದೆ. ಆ ಘಟನೆ ನಡೆದಾಗ ನಾನು ಆ ಜಾಗದಲ್ಲಿ ಇರಲಿಲ್ಲ. ಈ ಸತ್ಯವನ್ನು ಒಂದೇ ಒಂದು ಸಲ ಪುನರ್ ಪರಿಶೀಲಿಸಿದರೆ ನನ್ನ ಬಗ್ಗೆ ಕೆಟ್ಟ ಕಾಮೆಂಟ್‍ಗಳನ್ನು ಬರೆಯೋ ನನ್ನ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡೋ ಪ್ರಮೇಯ ಒದಗಿ ಬರ್ತಿರ್ಲಿಲ್ಲ ಅನ್ಸುತ್ತೆ. ಆ ಜಾಗದಲ್ಲಿ ನಾನು ಇರಲಿ, ಇಲ್ಲದಿರಲಿ, ನಮ್ಮ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದ ಸಹೋದ್ಯೋಗಿಯೊಬ್ಬರು ದುರ್ಘಟನೆಗೆ ಬಲಿಯಾಗಿದ್ದಾರೆ ಅನ್ನೋ ನೋವು ನನ್ನನ್ನೂ ಕಾಡುತ್ತಿದೆ. ಇದನ್ನೂ ಓದಿ: ಶೂಟಿಂಗ್ ವೇಳೆ ಫೈಟರ್ ವಿವೇಕ್ ದುರಂತ ಸಾವು – ರಚಿತಾ ರಾಮ್ ಸಂತಾಪ

    ಆ ಕುಟುಂಬಕ್ಕಾಗಿರುವ ನಷ್ಟಕ್ಕೆ ನನ್ನ ವಿಷಾದವಿದೆ. ಈ ದುಖಃವನ್ನು ಭರಿಸೋ ಶಕ್ತಿ ಭಗವಂತ ಆ ಕುಟುಂಬಕ್ಕೆ ಕೊಡಲಿ ಎಂದು ನಾನು ಬೇಡಿಕೊಳ್ಳುತ್ತೇನೆ. ನನ್ನ ಬೆಳೆಸಿರೋ ಜನ ನನ್ ಬಗ್ಗೆ, ನನ್ನ ಮಾತುಗಳ ಬಗ್ಗೆ ನಂಬುತ್ತಾರೆ ಅಂತ ನಂಬಿದ್ದೀನಿ. ಆರೋಪಗಳು ಏನೇ ಇದ್ರೂ, ತಪ್ಪು ಸರಿಗಳ ಲೆಕ್ಕ ಆ ಭಗವಂತನ ಬಳಿ ಇರುತ್ತೆ ಅಂತನೂ ನಂಬಿದ್ದೀನಿ ಎಂದಿದ್ದಾರೆ.

  • ಶೂಟಿಂಗ್ ವೇಳೆ ಫೈಟರ್ ವಿವೇಕ್ ದುರಂತ ಸಾವು – ರಚಿತಾ ರಾಮ್ ಸಂತಾಪ

    ಶೂಟಿಂಗ್ ವೇಳೆ ಫೈಟರ್ ವಿವೇಕ್ ದುರಂತ ಸಾವು – ರಚಿತಾ ರಾಮ್ ಸಂತಾಪ

    ಬೆಂಗಳೂರು: ಸಿನಿಮಾದ ಶೂಟಿಂಗ್ ಸಮಯದಲ್ಲಿ ಫೈಟರ್ ವಿವೇಕ್ ದುರಂತ ಸಾವಿಗೆ ನಟಿ ರಚಿತಾ ರಾಮ್ ಸಂತಾಪ ಸೂಚಿಸಿದ್ದಾರೆ.

    ಈ ಸಂಬಂಧ ಇನ್‍ಸ್ಟಾದಲ್ಲಿ ಪೋಸ್ಟ್ ಹಾಕಿರುವ ನಟಿ, ವಿವೇಕ್ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಅಮ್ಮ ನಿನ್ನ ಚೆನ್ನಾಗಿ ನೋಡ್ಕೋತ್ತೀನಿ ಅಂದ್ಬಿಟ್ಟು ರಸ್ತೆಯಲ್ಲೇ ಬಿಟ್ಟೋದ: ವಿವೇಕ್ ತಾಯಿ ಕಣ್ಣೀರು

    ”ವಿದ್ಯುತ್ ಅವಘಡದಿಂದ ಸಾವನ್ನಪ್ಪಿದ ಫೈಟರ್ ವಿವೇಕ್ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಹಾಗೆಯೇ ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿ ಸಿಗಲಿ ಎಂದು ನಟಿ ತಿಳಿಸಿದ್ದಾರೆ.

     

    View this post on Instagram

     

    A post shared by Rachita Ram (@rachita_instaofficial)

    ನಿನ್ನೆ ಬಿಡದಿ ಬಳಿಯ ತೋಟದಲ್ಲಿ ನಟ ಅಜಯ್ ರಾವ್ ಹಾಗೂ ರಚಿತಾ ರಾಮ್ ಅಭಿನಯದ ‘ಲವ್ ಯೂ ರಚ್ಚು’ ಸಿನಿಮಾದ ಸಾಹಸ ದೃಶ್ಯದ ಚಿತ್ರೀಕರಣ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ವಿದ್ಯುದಾಘಾತದಿಂದ ಫೈಟರ್ ವಿವೇಕ್ ಸಾವನ್ನಪ್ಪಿದ್ದರು. ಇನ್ನೊಬ್ಬ ಫೈಟರ್ ರಂಜಿತ್ ಸ್ಥಿತಿ ಗಂಭೀರವಾಗಿದ್ದು, ಸಾವು- ಬದುಕಿನ ಹೋರಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ಹೈಟೆನ್ಷನ್ ವೈರ್ ತಗುಲಿದ್ದರಿಂದ ಫೈಟರ್ ಸಾವಾಯ್ತು: ನಟ ಅಜಯ್ ರಾವ್

    ಶೂಟಿಂಗ್ ವೇಳೆ 35 ವರ್ಷದ ಫೈಟರ್ ವಿವೇಕ್ ಧರಿಸಿದ್ದ ಲೋಹದ ಹಗ್ಗ, ಹೈಟೆನ್ಶನ್ ವೈರ್ ತಗುಲಿ ಈ ದುರಂತ ಸಂಭವಿಸಿದೆ. ಗುರು ದೇಶಪಾಂಡೆ ನಿರ್ಮಾಣದ ಈ ಸಿನಿಮಾಗೆ ಫೈಟ್ ಮಾಸ್ಟರ್ ವಿನೋದ್ ಸಾಹಸ ದೃಶ್ಯಗಳನ್ನು ಸಂಯೋಜಿಸಿದ್ದರು. ಇದನ್ನೂ ಓದಿ: ಲವ್ ಯೂ ರಚ್ಚು ದುರಂತ – ಜೆಸಿಬಿ ಡ್ರೈವರ್ ಸೇರಿ ಐವರ ಮೇಲೆ FIR

  • ಶೀಘ್ರವೇ ಸಿನಿಮಾ ಶೂಟಿಂಗ್ ನಿಯಮಗಳಲ್ಲಿ ಬದಲಾವಣೆ: ಬೊಮ್ಮಾಯಿ

    ಶೀಘ್ರವೇ ಸಿನಿಮಾ ಶೂಟಿಂಗ್ ನಿಯಮಗಳಲ್ಲಿ ಬದಲಾವಣೆ: ಬೊಮ್ಮಾಯಿ

    ಬೆಂಗಳೂರು: ಶೀಘ್ರವೇ ಸಿನಿಮಾ ಶೂಟಿಂಗ್ ನಿಯಮಗಳಲ್ಲಿ ಬದಲಾವಣೆ ತರುವುದಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

    ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ‘ಲವ್ ಯೂ ರಚ್ಚು’ ದುರಂತ ಸಂಬಂಧ ಸಿಎಂ ಪ್ರತಿಕ್ರಿಯಿಸಿದರು. ಈ ರೀತಿಯ ಹಲವಾರು ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ಕೆಲವರು ನಿಯಮಗಳನ್ನು ಫಾಲೋ ಮಾಡುತ್ತಿಲ್ಲ. ಹೀಗಾಗಿ ಸಿನಿಮಾ ಶೂಟಿಂಗ್ ನಿಯಮಗಳಲ್ಲಿ ಬದಲಾವಣೆಗಳನ್ನು ತರುತ್ತೇವೆ ಎಂದರು.

    ನಾಳೆ ಅಥವಾ ನಾಡಿದ್ದು ಕೆಲವು ಆದೇಶಗಳನ್ನು ಹೊರಡಿಸುತ್ತೇವೆ. ಅನುಮತಿ ತೆಗೆದುಕೊಳ್ಳಲು ಅನುಕೂಲನೂ ಆಗಬೇಕು. ಹಾಗೆಯೇ ಅನುಮತಿ ಇಲ್ಲದೆ ಶೂಟಿಂಗ್ ನಡೆಯಲು ಬಾರದು ಇಂತಹ ಆದೇಶ ಜಾರಿಗೆ ತರುವುದಾಗಿ ಸಿಎಂ ತಿಳಿಸಿದರು. ಇದನ್ನೂ ಓದಿ: ಅಮ್ಮ ನಿನ್ನ ಚೆನ್ನಾಗಿ ನೋಡ್ಕೋತ್ತೀನಿ ಅಂದ್ಬಿಟ್ಟು ರಸ್ತೆಯಲ್ಲೇ ಬಿಟ್ಟೋದ: ವಿವೇಕ್ ತಾಯಿ ಕಣ್ಣೀರು

    ನಿನ್ನೆ ಬಿಡದಿ ಬಳಿಯ ತೋಟದಲ್ಲಿ ‘ಲವ್ ಯೂ ರಚ್ಚು’ ಸಿನಿಮಾದ ಸಾಹಸ ದೃಶ್ಯದ ಚಿತ್ರೀಕರಣ ನಡೆಸುವ ಸಂದರ್ಭದಲ್ಲಿ ವಿದ್ಯುದಾಘಾತದಿಂದ ಫೈಟರ್ ವಿವೇಕ್ ಸಾವನ್ನಪ್ಪಿದ್ದರು. ಇನ್ನೊಬ್ಬ ಫೈಟರ್ ರಂಜಿತ್ ಸ್ಥಿತಿ ಗಂಭೀರವಾಗಿದ್ದು, ಸಾವು ಬದುಕಿನ ಹೋರಾಟ ನಡೆಸುತ್ತಿದ್ದಾರೆ. ಶೂಟಿಂಗ್ ವೇಳೆ 35 ವರ್ಷದ ಫೈಟರ್ ವಿವೇಕ್ ಧರಿಸಿದ್ದ ಲೋಹದ ಹಗ್ಗ, ಹೈಟೆನ್ಶನ್ ವೈರ್ ತಗುಲಿ ಈ ದುರಂತ ಸಂಭವಿಸಿದೆ. ಗುರು ದೇಶಪಾಂಡೆ ನಿರ್ಮಾಣದ ಈ ಸಿನಿಮಾಗೆ ಫೈಟ್ ಮಾಸ್ಟರ್ ವಿನೋದ್ ಸಾಹಸ ದೃಶ್ಯಗಳನ್ನು ಸಂಯೋಜಿಸಿದ್ದರು.

    ಈ ಹಿಂದೆ ಅಂದರೆ 2016ರಲ್ಲಿ `ಮಾಸ್ತಿ ಗುಡಿ’ ಸಿನಿಮಾದ ವೇಳೆ ಫೈಟರ್ ಅನಿಲ್, ಉದಯ್ ಸಾವನ್ನಪ್ಪಿದ್ದರು. ಇದನ್ನೂ ಓದಿ: ಲವ್ ಯೂ ರಚ್ಚು ದುರಂತ – ಜೆಸಿಬಿ ಡ್ರೈವರ್ ಸೇರಿ ಐವರ ಮೇಲೆ FIR

  • ಅಮ್ಮ ನಿನ್ನ ಚೆನ್ನಾಗಿ ನೋಡ್ಕೋತ್ತೀನಿ ಅಂದ್ಬಿಟ್ಟು ರಸ್ತೆಯಲ್ಲೇ ಬಿಟ್ಟೋದ: ವಿವೇಕ್ ತಾಯಿ ಕಣ್ಣೀರು

    ಅಮ್ಮ ನಿನ್ನ ಚೆನ್ನಾಗಿ ನೋಡ್ಕೋತ್ತೀನಿ ಅಂದ್ಬಿಟ್ಟು ರಸ್ತೆಯಲ್ಲೇ ಬಿಟ್ಟೋದ: ವಿವೇಕ್ ತಾಯಿ ಕಣ್ಣೀರು

    – ಬೇಡ ಹೋಗ್ಬೇಡ ಅಂತ ಹೇಳುತ್ತಿದ್ದೆ

    ಬೆಂಗಳೂರು: ಅಮ್ಮ ನಿನ್ನ ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಯಾವಾಗಲೂ ಹೇಳುತ್ತಿದ್ದ. ಆದರೆ ಇಂದು ನನ್ನ ನಡುರಸ್ತೆಯಲ್ಲಿಯೇ ಬಿಟ್ಟು ಹೋದ ಎಂದು ಫೈಟರ್ ವಿವೇಕ್ ತಾಯಿ ಕಣ್ಣೀರು ಹಾಕಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮಗನಿಗೆ ಏನಾಯಿತು ಅಂತ ಗೊತ್ತಿಲ್ಲ. ನಾನು ಯಾರನ್ನೂ ಕೇಳಿಲ್ಲ. ಮಗ ಸತ್ತೋದ ಅಂತ ಬಂದು ಹೇಳಿದಾಗ ಅಳುತ್ತಾ ಕೂತಿದ್ದೀನಿ. ಶೂಟಿಂಗ್ ಹೋಗುವಾಗ ಚೆನ್ನಾಗಿಯೇ ಇದ್ದ. ಹೋದ ವಾರದಲ್ಲಿ ಎರಡು ದಿವಸ ಶೂಟಿಂಗ್ ಹೋಗಿದ್ದ. ಈ ವಾರದಲ್ಲಿ ಒಂದು ದಿವಸ ಇದೆ ಅಂತ ಹೇಳಿ ಹೋಗಿದ್ದ. ನಾನು ಬೇಡ ಹೋಗ್ಬೇಡ, ಹೋಗ್ಬೇಡ ಅಂತ ಹೇಳ್ತಿದ್ದೆ. ಅನ್ನ ನೀರು ತಿಂದು ಮನೆಯಲ್ಲಿ ಸಂತೋಷವಾಗಿ ಇರೋಣ ಅಂತ ಹೇಳುತ್ತಿದ್ದೆ ಎಂದರು.

    ನಾನು ಪ್ರತಿ ಬಾರಿ ಈ ರೀತಿ ಹೇಳಿದಾಗಲೂ ಅವನು, ಅಮ್ಮ ನಾನು ನಿಮ್ಮನ್ನ ಚೆನ್ನಾಗಿ ನೋಡಿಕೊಳ್ಳಬೇಕು. ನಮಗೆ ಕಷ್ಟಗಳೇ ಬೆಳೆಯುತ್ತಿದೆ. ನಾನು ಚೆನ್ನಾಗಿ ನೋಡಿಕೊಳ್ತೀನಿ ಅಮ್ಮ. ಅದಕ್ಕಾಗಿ 10 ರೂ ಸಂಪಾನೆ ಮಾಡ್ತೀನಿ ಅಂತ ಹೇಳುತ್ತಿದ್ದ. ಹೀಗಾಗಿ ಶೂಟಿಂಗ್ ತೆರಳುತ್ತಿದ್ದ. ಆದರೆ ಈಗ ನನ್ನ ಮಗ ನನ್ನನ್ನು ಬಿಟ್ಟು ಹೊರಟು ಹೋದ. ಈಗ ನನ್ನ ಚೆನ್ನಾಗಿ ನೋಡ್ಕೊಂಡು ಬಿಟ್ಬಿಟ್ಟ ಎಂದು ಕಣ್ಣೀರಾದ್ರು. ಇದನ್ನೂ ಓದಿ: ಲವ್ ಯೂ ರಚ್ಚು ದುರಂತ – ಜೆಸಿಬಿ ಡ್ರೈವರ್ ಸೇರಿ ಐವರ ಮೇಲೆ FIR

    ಶೂಟಿಂಗ್ ನಲ್ಲಿ ಫೈಟ್ ಮಾಡುವುದು ಬಿಟ್ಟು 4 ವರ್ಷ ಆಗಿತ್ತು. ಇತ್ತೀಚೆಗೆ ಮಾಸ್ಟರ್ ಪೋನ್ ಮಾಡಿ ಕರೀತಾ ಇದ್ದಾರೆ ಅಂತ ಹೇಳುತ್ತಿದ್ದ. ನಾನು ಆವಗಾನೂ ಬೇಡ ಅಂದಿದ್ದೆ. ನಾವು ಅಂಬಲಿ ಅನ್ನನೇ ಕುಡಿದುಕೊಂಡು ಜೀವನ ಸಾಗಿಸೋಣ, ನಾವೇನು ಸಾಹುಕಾರರಾಗುವ ಅವಶ್ಯಕತೆ ಇಲ್ಲ. ನೆಮ್ಮದಿಯಾಗಿರೋಣ ಅಮತಿದ್ದೆ. ಆಗ ಅವನು ಇಲ್ಲ ಹೋಗ್ತೀನಿ 10 ರೂ. ಸಂಪಾದನೆ ಮಾಡಿಕೊಂಡು ಬರುತ್ತೇನೆ. ನಾವು ಹಿಂಗೆ ಇದ್ದರೆ ಮೇಲಕ್ಕೆ ಹೋಗಲು ಹೇಗೆ ಸಾಧ್ಯ ಅಂತ ಹೇಳಿ ಶೂಟಿಂಗ್ ಹೋಗುತ್ತಿದ್ದ ಎಂದರು. ಇದನ್ನೂ ಓದಿ: ಫೈಟ್ ಮಾಸ್ಟರ್ ದು ಯಾವುದೇ ತಪ್ಪಿಲ್ಲ: ಗಾಯಾಳು ರಂಜಿತ್

    ನಾನು ಊರಿಗೆ ಹೋಗಿ ಬಂದಿದ್ದೆ. ಮಲಗಿದ್ದರಿಂದ ಅವನು ನನ್ನ ಜೊತೆ ಏನೂ ಹೇಳದೆ ಶೂಟಿಂಗ್ ತೆರಳಿದ್ದ. ನನ್ನ ಮಗನ ಜೊತೆ ಮಾತಾಡಿ 5 ದಿನ ಆಗಿತ್ತು ಎಂದು ಗದ್ಗದಿತರಾದರು. ಇದನ್ನೂ ಓದಿ: ಲವ್ ಯು ರಚ್ಚು ಶೂಟಿಂಗ್ ದುರಂತ – ನಿರ್ದೇಶಕ ಸೇರಿ ನಾಲ್ವರು ಪೊಲೀಸ್ ವಶಕ್ಕೆ

    ಬಿಡದಿ ಬಳಿಯ ತೋಟದಲ್ಲಿ ನಟ ಅಜಯ್ ರಾವ್ ಹಾಗೂ ನಟಿ ರಚಿತಾ ರಾಮ್ ಅಭಿನಯದ ‘ಲವ್ ಯೂ ರಚ್ಚು’ ಸಿನಿಮಾದ ಸಾಹಸ ದೃಶ್ಯದ ಚಿತ್ರೀಕರಣ ನಡೆಸುವ ಸಂದರ್ಭದಲ್ಲಿ ವಿದ್ಯುದಾಘಾತದಿಂದ ಫೈಟರ್ ವಿವೇಕ್ ಸಾವನ್ನಪ್ಪಿದ್ದರು. ಇನ್ನೊಬ್ಬ ಫೈಟರ್ ರಂಜಿತ್ ಸ್ಥಿತಿ ಗಂಭೀರವಾಗಿದ್ದು, ಸಾವು ಬದುಕಿನ ಹೋರಾಟ ನಡೆಸುತ್ತಿದ್ದಾರೆ. ಶೂಟಿಂಗ್ ವೇಳೆ 35 ವರ್ಷದ ಫೈಟರ್ ವಿವೇಕ್ ಧರಿಸಿದ್ದ ಲೋಹದ ಹಗ್ಗ, ಹೈಟೆನ್ಶನ್ ವೈರ್ ತಗುಲಿ ಈ ದುರಂತ ಸಂಭವಿಸಿದೆ. ಗುರು ದೇಶಪಾಂಡೆ ನಿರ್ಮಾಣದ ಈ ಸಿನಿಮಾಗೆ ಫೈಟ್ ಮಾಸ್ಟರ್ ವಿನೋದ್ ಸಾಹಸ ದೃಶ್ಯಗಳನ್ನು ಸಂಯೋಜಿಸಿದ್ದರು.

  • ಲವ್ ಯೂ ರಚ್ಚು ದುರಂತ – ಜೆಸಿಬಿ ಡ್ರೈವರ್ ಸೇರಿ ಐವರ ಮೇಲೆ FIR

    ಲವ್ ಯೂ ರಚ್ಚು ದುರಂತ – ಜೆಸಿಬಿ ಡ್ರೈವರ್ ಸೇರಿ ಐವರ ಮೇಲೆ FIR

    ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ಮತ್ತೊಂದು ದೊಡ್ಡ ಅವಘಡ ಸಂಭವಿಸಿದೆ. 2016ರಲ್ಲಿ ‘ಮಾಸ್ತಿ ಗುಡಿ’ ಸಿನಿಮಾದ ವೇಳೆ ಫೈಟರ್ ಅನಿಲ್, ಉದಯ್ ಸಾವನ್ನಪ್ಪಿದ್ದರು. ಇದೀಗ ಅಂತದ್ದೇ ಇನ್ನೊಂದು ದುರ್ಘಟನೆ ಸಂಭವಿಸಿದೆ. ಘಟನೆ ಸಂಬಂಧ ಇದೀಗ ಐವರ ವಿರುದ್ಧ ಎಫ್‍ಐಆರ್ ದಾಖಲು ಮಾಡಲಾಗಿದೆ.

    ನಿರ್ದೇಶಕ ಶಂಕರ್ ರಾಜ್, ಫೈಟ್ ಮಾಸ್ಟರ್ ವಿನೋದ್ ಹಾಗೂ ಜೆಸಿಬಿ ಡ್ರೈವರ್ ಸೇರಿ ಐವರ ಮೇಲೆ ಬಿಡದಿ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

    ‘ಲವ್ ಯೂ ರಚ್ಚು’ ಶೂಟಿಂಗ್ ವೇಳೆ ಫೈಟರ್ ವಿವೇಕ್ ಹೈ ಟೆನ್ಷನ್ ವೈಯರ್ ತಗುಲಿ ಮೃತಪಟ್ಟಿದ್ದರು. ಈ ಸಂಬಂಧ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ಸ್ವೀಕರಿಸಿರುವ ಪೊಲೀಸರು ಇದೀಗ ಐವರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಫೈಟ್ ಮಾಸ್ಟರ್ ದು ಯಾವುದೇ ತಪ್ಪಿಲ್ಲ: ಗಾಯಾಳು ರಂಜಿತ್

    ಘಟನೆ ಸಂಬಂಧಿಸಿದಂತೆ ಸಾಹಸ ನಿರ್ದೇಶಕ ವಿನೋದ್, ಸಹ ನಿರ್ದೇಶಕ ಶಂಕರ್‍ರಾಜ್, ಜಮೀನು ಮಾಲೀಕ ಪುಟ್ಟರಾಜು, ಕ್ರೇನ್ ಚಾಲಕ ಮುನಿಯಪ್ಪ ಸೇರಿದಂತೆ ನಾಲ್ವರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ನಿರ್ಮಾಪಕ ಗುರುದೇಶಪಾಂಡೆಗಾಗಿ ಶೋಧ ಮುಂದುವರಿದಿದೆ. ಈ ಮಧ್ಯೆ ಚಿತ್ರೀಕರಣ ನಡೆಸಲು ಪೊಲೀಸರ ಅನುಮತಿ ಪಡೆದಿರಲಿಲ್ಲ ಅಂತ ರಾಮನಗರ ಎಸ್‍ಪಿ ಗಿರೀಶ್ ಹೇಳಿದ್ದಾರೆ. ಇದನ್ನೂ ಓದಿ: ಲವ್ ಯು ರಚ್ಚು ಶೂಟಿಂಗ್ ದುರಂತ – ನಿರ್ದೇಶಕ ಸೇರಿ ನಾಲ್ವರು ಪೊಲೀಸ್ ವಶಕ್ಕೆ

    ಅವಘಡದಲ್ಲಿ ಇನ್ನೊಬ್ಬ ಫೈಟರ್ ರಂಜಿತ್ ಸ್ಥಿತಿ ಗಂಭೀರವಾಗಿದ್ದು, ಸಾವು ಬದುಕಿನ ಹೋರಾಟ ನಡೆಸುತ್ತಿದ್ದಾರೆ. ಶೂಟಿಂಗ್ ವೇಳೆ ಫೈಟರ್ ವಿವೇಕ್ ಧರಿಸಿದ್ದ ಲೋಹದ ಹಗ್ಗ, ಹೈಟೆನ್ಶನ್ ವೈರ್ ತಗುಲಿ ಈ ದುರಂತ ಸಂಭವಿಸಿದೆ. ಗುರು ದೇಶಪಾಂಡೆ ನಿರ್ಮಾಣದ ಈ ಸಿನಿಮಾಗೆ ಫೈಟ್ ಮಾಸ್ಟರ್ ವಿನೋದ್ ಸಾಹಸ ದೃಶ್ಯಗಳನ್ನು ಸಂಯೋಜಿಸಿದ್ದರು. ರಾಜರಾಜೇಶ್ವರಿ ಆಸ್ಪತ್ರೆ ಬಳಿ ಮೃತ ವಿವೇಕ್ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು.  ಇದನ್ನೂ ಓದಿ: ಹೈಟೆನ್ಷನ್ ವೈರ್ ತಗುಲಿದ್ದರಿಂದ ಫೈಟರ್ ಸಾವಾಯ್ತು: ನಟ ಅಜಯ್ ರಾವ್

  • ಫೈಟ್ ಮಾಸ್ಟರ್ ದು ಯಾವುದೇ ತಪ್ಪಿಲ್ಲ: ಗಾಯಾಳು ರಂಜಿತ್

    ಫೈಟ್ ಮಾಸ್ಟರ್ ದು ಯಾವುದೇ ತಪ್ಪಿಲ್ಲ: ಗಾಯಾಳು ರಂಜಿತ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಅಜಯ್ ರಾವ್ ಮತ್ತು ರಚಿತಾರಾಮ್ ಅಭಿನಯದ ‘ಲವ್ ಯೂ ರಚ್ಚು’ ಸಿನಿಮಾ ಶೂಟಿಂಗ್ ವೇಳೆ ನಡೆದ ಘಟನೆಗೆ ಮತ್ತೊಂದು ತಿರುವು ಸಿಕ್ಕಿದೆ.

    ಫೈಟರ್ ವಿವೇಕ್ ಜೊತೆಗೆ ಗಾಯಗೊಂಡು ಆಸ್ಪತ್ರೆಯಲ್ಲಿರುವ ರಂಜಿತ್ ಮಾಧ್ಯಮದವರೊಂದಿಗೆ ಮಾತನಾಡಿದ್ದು, ಶೂಟಿಂಗ್ ವೇಳೆ ದುರಂತಕ್ಕೆ ಫೈಟ್ ಮಾಸ್ಟರ್ ಕಾರಣವಲ್ಲ, ಕ್ರೈನ್ ಡ್ರೈವರ್ ಮಾಡಿದ ಎಡವಟ್ಟಿನಿಂದಲೇ ಈ ದುರ್ಘಟನೆ ನಡೆದಿದೆ. ಬೆಳಗ್ಗೆ ಶೂಟಿಂಗ್ ಪ್ರಾರಂಭ ಮಾಡಿದಾಗಲೇ ಕ್ರೈನ್ ಡ್ರೈವರ್ ಮಾದೇವ್ ಕ್ರೈನ್ ಮರಕ್ಕೆ ಗುದ್ದಿದ್ದ. ಆಗ ನಾನು ಸೇರಿದಂತೆ ಅವನಿಗೆ ಸ್ವಲ್ಪ ತಿಳಿ ಹುಷಾರಪ್ಪ ಅಂತ ಹೇಳಿದ್ವಿ ಎಂದಿದ್ದಾರೆ.

    ಬಳಿಕ ಶೂಟಿಂಗ್ ಸ್ಟಾರ್ಟ್ ಮಾಡಿದ್ವಿ. ಆ ವೇಳೆ ಕ್ರೈನ್ ಹೈಟೆನ್ಷನ್ ವೈಯರ್ ಗೆ  ಟಚ್ ಮಾಡಿದ್ದ. ಆಗ ನನಗೆ ಮತ್ತು ವಿವೇಕ್‍ಗೆ ಕರೆಂಟ್ ಶಾಕ್ ಹೊಡೆದಿತ್ತು. ವಿವೇಕ್ ಗಂಭೀರವಾಗಿ ಗಾಯಗೊಂಡ ಕಣ್ಣ ಮುಂದೆಯೇ ಸಾವನ್ನಪ್ಪಿದ. ಶೂಟಿಂಗ್ ನಲ್ಲಿ ಎಲ್ಲರು ಇದ್ದರೂ, ಆದರೆ ಯಾರಿಗೂ ಏನು ಮಾಡಬೇಕು ಎಂಬುದು ತಿಳಿಯಲಿಲ್ಲ. ಯಾರೂ ಹೆಲ್ಪ್ ಕೂಡ ಮಾಡುವುದಕ್ಕೆ ಮುಂದಾಗಲಿಲ್ಲ. ಕ್ಷಣಮಾತ್ರದಲ್ಲೇ ಎಲ್ಲವೂ ನಡೆಯೋಯ್ತು ಎಂದು ಹೇಳಿದ್ದಾರೆ. ಇದನ್ನೂ ಓದಿ: ಲವ್ ಯೂ ರಚ್ಚು’ ಸಿನಿಮಾ ಶೂಟಿಂಗ್ ವೇಳೆ ದುರಂತ – ಹೈಟೆನ್ಷನ್ ವೈರ್ ತಗುಲಿ ಫೈಟರ್ ಸಾವು

    ಈ ಘಟನೆಗೆ ಫೈಟ್ ಮಾಸ್ಟರ್ ಕಾರಣ ಅಂತ ಹೇಳುವುದು ತಪ್ಪಾಗುತ್ತದೆ. ಅವರು ತುಂಬಾ ಕೇರ್ ಫುಲ್ ಆಗಿ ಕೆಲಸ ಮಾಡಿಸಿದ್ದರು. ಫೈಟ್ ಮಾಸ್ಟರ್ ವಿನೋದ್‍ಗೂ ಈ ಸಾವಿಗೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸದ್ಯ ರಂಜಿತ್ ಆರ್.ಆರ್ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾರೆ.

    ಘಟನೆ ಸಂಬಂಧ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಇದನ್ನೂ ಓದಿ:ಲವ್ ಯು ರಚ್ಚು ಶೂಟಿಂಗ್ ದುರಂತ – ನಿರ್ದೇಶಕ ಸೇರಿ ನಾಲ್ವರು ಪೊಲೀಸ್ ವಶಕ್ಕೆ