Tag: ಲವ್ ಆಜ್ ಕಲ್

  • ಮಾಜಿ ಬಾಯ್‌ಫ್ರೆಂಡ್ ಜೊತೆ ಕಾಣಿಸಿಕೊಂಡ ಸಾರಾ; ವಿಶೇಷ ಬೇಡಿಕೆಯಿಟ್ಟ ಫ್ಯಾನ್ಸ್

    ಮಾಜಿ ಬಾಯ್‌ಫ್ರೆಂಡ್ ಜೊತೆ ಕಾಣಿಸಿಕೊಂಡ ಸಾರಾ; ವಿಶೇಷ ಬೇಡಿಕೆಯಿಟ್ಟ ಫ್ಯಾನ್ಸ್

    `ಲವ್ ಆಜ್ ಕಲ್’ (Love Aaj Kal) ಚಿತ್ರ ಖ್ಯಾತಿಯ ಕಾರ್ತಿಕ್ ಆರ್ಯನ್ (Karthik Aryan) ಮತ್ತು ಸಾರಾ ಅಲಿ ಖಾನ್ (Sara Ali Khan) ಮತ್ತೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಮಾಜಿ ಪ್ರಿಯಕರ ಕಾರ್ತಿಕ್ ಜೊತೆ ಸಾರಾ ಮತ್ತೆ ಜೊತೆಯಾಗಿರುವ ಫೋಟೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವೇಳೆ ಜೋಡಿಗೆ ಅಭಿಮಾನಿಗಳು ವಿಶೇಷ ಬೇಡಿಕೆಯಿಟ್ಟಿದ್ದಾರೆ.

    ಬಾಲಿವುಡ್‌ನಲ್ಲಿ (Bollywood) ಪ್ರೇಮ ಪಕ್ಷಿಗಳಾಗಿ ಬಿಟೌನ್ ಗಲ್ಲಿಯಲ್ಲಿ ಸುತ್ತಾಡಿದ್ದ ಕಾರ್ತಿಕ್ ಮತ್ತು ಸಾರಾ, `ಲವ್ ಆಜ್ ಕಲ್’ (Love Aaj Kal) ಚಿತ್ರದ ಶೂಟಿಂಗ್ ಸಮಯದಲ್ಲಿ ಪ್ರೇಮಾಂಕುರವಾಗಿತ್ತು. ಬ್ರೇಕಪ್‌ನಲ್ಲಿ ಪ್ರೀತಿ ಅಂತ್ಯವಾಗಿತ್ತು. ಈಗ ಸಿದ್-ಕಿಯಾರಾ ಅವರಂತೆಯೇ ಜೊತೆಯಾಗಿ, ಮದುವೆಯಾಗಿ ಎಂದು ಫ್ಯಾನ್ಸ್ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಸಾಲು ಸಾಲು ಸಿನಿಮಾಗಳ ನಡುವೆ ಕಾವಿತೊಟ್ಟು ಅಚ್ಚರಿ ಮೂಡಿಸಿದ ಮಿಲ್ಕಿ ಬ್ಯೂಟಿ

    ಈ ಹಿಂದೆ ಕಿಯಾರಾ-ಸಿದ್ (Kiara – Siddarth) ನಡುವೆ ಬ್ರೇಕಪ್ ಆಗಿದೆ ಎನ್ನಲಾಗಿತ್ತು. ಬಳಿಕ ಇಬ್ಬರು ಪ್ಯಾಚಪ್ ಮಾಡಿಕೊಂಡಿದ್ದರು. ಸಿದ್-ಕಿಯಾರಾ ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ಅಭಿಮಾನಿಗಳಿಗೆ ಶುಭಸುದ್ದಿ ನೀಡಿದ್ದರು. ಹಾಗಾಗಿ ವೈರಲ್ ಆಗಿರುವ ಕಾರ್ತಿಕ್‌ -ಸಾರಾ ಫೋಟೋ ನೋಡಿ ಫ್ಯಾನ್ಸ್‌ ವಿಶೇಷ ಕೋರಿಕೆಯಿಟ್ಟಿದ್ದಾರೆ.

     

    View this post on Instagram

     

    A post shared by Viral Bhayani (@viralbhayani)

    ಕಾರ್ತಿಕ್ ಆರ್ಯನ್- ಸಾರಾ ಅಲಿ ಖಾನ್ (ಫೆ.9)ರಂದು ಉದಯಪುರದಲ್ಲಿ ಒಟ್ಟಿಗೆ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡಿದ್ದಾರೆ. ಇಬ್ಬರು ಮುನಿಸು ಮರೆತು ನಗು ನಗುತ್ತಾ ಮಾತನಾಡಿದ್ದಾರೆ. ಈ ಫೋಟೋ ನೋಡಿ ಫ್ಯಾನ್ಸ್, ಮುನಿಸು ಮರೆತು ಸಿದ್-ಕಿಯಾರಾ ಅವರಂತೆಯೇ ನೀವು ಒಂದಾಗಿ ಎಂದು ಮನವಿ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಅಭಿಮಾನಿಗಳ ಈ ಆಸೆಯನ್ನ ಲವ್ ಆಜ್ ಕಲ್ ಜೋಡಿ ಈಡೇರಿಸುತ್ತಾರಾ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕಾರ್ತಿಕ್ ಕೈಯನ್ನ ಸೊಂಟದ ಮೇಲಿರಿಸಿಕೊಂಡ ಸೈಫ್ ಪುತ್ರಿ ಸಾರಾ

    ಕಾರ್ತಿಕ್ ಕೈಯನ್ನ ಸೊಂಟದ ಮೇಲಿರಿಸಿಕೊಂಡ ಸೈಫ್ ಪುತ್ರಿ ಸಾರಾ

    ಮುಂಬೈ: ಸೊಂಟದ ಮೇಲೆ ಕೈ ಇಡು ಎಂದು ಬಾಲಿವುಡ್‍ನ ಖ್ಯಾತ ನಟ ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್ ಸಹ ನಟ, ಗೆಳೆಯ ಕಾರ್ತಿಕ್ ಆರ್ಯನ್‍ಗೆ ಸೂಚನೆ ನೀಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಸಾರಾ ಅಲಿ ಖಾನ್ ಹಾಗೂ ಕಾರ್ತಿಕ್ ಆರ್ಯನ್ ನಟನೆಯ ‘ಲವ್ ಆಜ್ ಕಲ್’ ಸಿನಿಮಾ ಪ್ರೇಮಿಗಳ ದಿನವಾದ ಫೆಬ್ರವರಿ 14ದಂದು ತೆರೆ ಕಾಣಲಿದೆ. ಹೀಗಾಗಿ ಈ ಜೋಡಿ ಸಿನಿಮಾ ಪ್ರಚಾರದಲ್ಲಿ ಸಖತ್ ಬ್ಯುಸಿ ಆಗಿದ್ದಾರೆ.

    ಸಿನಿಮಾ ಪ್ರಚಾರದ ವೇಳೆ ಸಾರಾ ಅಲಿ ಖಾನ್ ಹಾಗೂ ಕಾರ್ತಿಕ್ ಆರ್ಯನ್ ವೇದಿಕೆ ಮೇಲೆ ನಿಂತಿದ್ದರು. ಕಾರ್ಯಕ್ರಮದ ಬಳಿಕ ಕ್ಯಾಮೆರಾ ಪೋಸ್ ಕೊಡುತ್ತಿದ್ದಾಗ ಸಾರಾ ಗೆಳೆಯ ಆರ್ಯನ್ ಕೈಯನ್ನು ಹಿಡಿದುಕೊಂಡು ಸೊಂಟದ ಮೇಲೆ ಇಟ್ಟುಕೊಂಡರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ನಟ ಕಾರ್ತಿಕ್ ಆರ್ಯನ್ ಜೊತೆ ಸಾರಾ ಪ್ರೀತಿಯಲ್ಲಿದ್ದಾರೆ ಎನ್ನುವ ವಿಚಾರ ಹರಿದಾಡಿತ್ತು. ಚಿತ್ರದ ಲಿಪ್‍ಕಿಸ್ ದೃಶ್ಯ ವೈರಲ್ ಆಗಿತ್ತು. ಆದ್ರೆ ಸೆನ್ಸಾರ್ ಬೋರ್ಡ್ ಕಿಸ್ಸಿಂಗ್ ದೃಶ್ಯಕ್ಕೆ ಕತ್ತರಿ ಹಾಕಿದೆ.

    2009ರಲ್ಲಿ ಸೈಫ್ ಅಲಿ ಖಾನ್ ನಟನೆಯ `ಲವ್ ಆಜ್ ಕಲ್’ ಸಿನಿಮಾ ತೆರೆಗೆ ಬಂದಿತ್ತು. ದೀಪಿಕಾ ನಾಯಕಿಯಾಗಿದ್ದ ಈ ಚಿತ್ರಕ್ಕೆ ಇಮ್ತಿಯಾಜ್ ಅಲಿ ಖಾನ್ ನಿರ್ದೇಶನ ಮಾಡಿದ್ದರು. ಇದಾದ ಸುಮಾರು 10 ವರ್ಷಗಳ ಬಳಿಕ ಇದೇ ಶೀರ್ಷಿಕೆ ಇಟ್ಟುಕೊಂಡು ಅವರು ಆ್ಯಯಕ್ಷನ್ ಕಟ್ ಹೇಳಲಾಗಿದೆ. ಈ ಚಿತ್ರದಲ್ಲಿ ಸಾರಾ ಅಲಿ ಖಾನ್ ಹಾಗೂ ಕಾರ್ತಿಕ್ ಆರ್ಯನ್ ನಟಿಸಿದ್ದಾರೆ.