Tag: ಲವ್ವರ್ಸ್

  • ತನಗಾಗಿ ಕೆನಡಾದಿಂದ ಭಾರತಕ್ಕೆ ಬಂದಿದ್ದ ಪ್ರೇಯಸಿಯನ್ನೇ ಕೊಂದ ಬಾಯ್‌ಫ್ರೆಂಡ್‌

    ತನಗಾಗಿ ಕೆನಡಾದಿಂದ ಭಾರತಕ್ಕೆ ಬಂದಿದ್ದ ಪ್ರೇಯಸಿಯನ್ನೇ ಕೊಂದ ಬಾಯ್‌ಫ್ರೆಂಡ್‌

    – ಲವ್ವರ್‌ ತಲೆಗೆ ಗುಂಡು ಹಾರಿಸಿ ಹತ್ಯೆ ಮಾಡಿ ಹೊಲದಲ್ಲಿ ಹೂತಿಟ್ಟ

    ಚಂಡೀಗಢ: ಪ್ರಿಯಕರನನ್ನು ಮದುವೆಯಾಗಲು ಕೆನಡಾದಿಂದ (Canada) ಭಾರತಕ್ಕೆ (India) ಬಂದಿದ್ದ ಯುವತಿಯ ಮೃತದೇಹ ಹರಿಯಾಣದ (Haryana) ಹೊಲವೊಂದರಲ್ಲಿ ಪತ್ತೆಯಾಗಿದೆ. ಕಳೆದ ವರ್ಷ ಜೂನ್‌ನಲ್ಲಿ ನೀಲಂ (23) ಎಂಬಾಕೆಯನ್ನು ಆಕೆಯ ಪ್ರಿಯಕರನೇ ಗುಂಡಿಟ್ಟು ಕೊಂದಿದ್ದು, ನಂತರ ಮೃತದೇಹವನ್ನು ತನ್ನ ಹೊಲದಲ್ಲಿ ಹೂತು ಹಾಕಿದ್ದಾನೆ.

    ಸುನಿಲ್ ತನಗಾಗಿ ಬಂದ ಪ್ರಿಯತಮೆಗೆ ಗುಂಡಿಟ್ಟು ಕೊಂದು ಹೂತುಹಾಕಿದ್ದಾರೆ. ಆಕೆಯ ಅಸ್ಥಿಪಂಜರದ ಅವಶೇಷಗಳು ಮಂಗಳವಾರ ಭಿವಾನಿಯಲ್ಲಿ ಪೊಲೀಸರಿಗೆ ಪತ್ತೆಯಾಗಿವೆ. ಇದನ್ನೂ ಓದಿ: ಪತಿಯನ್ನು ಕೊಂದು ಪೀಸ್ ಪೀಸ್ ಮಾಡಿ ಸೂಟ್‍ಕೇಸ್‍ನಲ್ಲಿ ತುಂಬಿದ ಪತ್ನಿ

    ಯುವತಿ ನೀಲಂಳನ್ನು ಅಪಹರಿಸಿ ಕೊಂದಿರುವುದಾಗಿ ಸುನೀಲ್ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ತನ್ನ ಅಪರಾಧವನ್ನು ಮರೆಮಾಚಲು ಆಕೆಯ ತಲೆಗೆ ಎರಡು ಬಾರಿ ಗುಂಡು ಹಾರಿಸಿ ನಂತರ ಶವವನ್ನು ತನ್ನ ಹೊಲದಲ್ಲಿ ಹೂತು ಹಾಕಿದ್ದಾನೆ ಎಂದು ಪೊಲೀಸ್ ಅಧಿಕಾರಿ ರವೀಂದ್ರ ಹೇಳಿದ್ದಾರೆ.

    ಕಳೆದ ಜೂನ್‌ನಲ್ಲಿ ನೀಲಂ ಸಹೋದರಿ ರೋಶನಿ ಪೊಲೀಸರಿಗೆ ದೂರು ನೀಡಿದ್ದರು. ನೀಲಂ, ಇಂಟರ್ನ್ಯಾಷನಲ್ ಇಂಗ್ಲಿಷ್‌ ಲ್ಯಾಂಗ್ವೇಜ್ ಟೆಸ್ಟಿಂಗ್ ಸಿಸ್ಟಮ್ (ಐಇಎಲ್ಟಿಎಸ್) ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಳು. ಕೆಲಸಕ್ಕಾಗಿ ಕೆನಡಾಕ್ಕೆ ಹೋಗಿದ್ದಳು. ಕಳೆದ ವರ್ಷ ಜನವರಿಯಲ್ಲಿ ಸುನಿಲ್ ಆಕೆಯನ್ನು ಮದುವೆಯಾಗುವುದಾಗಿ ಭರವಸೆ ನೀಡಿ ಭಾರತಕ್ಕೆ ವಾಪಸ್ ಕರೆಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಕಲ್ಯಾಣಿಯಲ್ಲಿ ಮುಳುಗಿ ಐವರು ಸಾವು

    ಕಸ್ಟಡಿಯಲ್ಲಿದ್ದ ಸುನಿಲ್‌ ವಿಚಾರಣೆಯ ಆಧಾರದ ಮೇಲೆ ಅಧಿಕಾರಿಗಳು ನೀಲಂ ಅಸ್ಥಿಪಂಜರದ ಅವಶೇಷಗಳನ್ನು ಆತನ ಜಮೀನಿನಲ್ಲಿ 10 ಅಡಿ ಆಳದ ಗುಂಡಿಯಿಂದ ಹೊರತೆಗೆದರು. ಮೃತದೇಹವನ್ನು ಸೋನಿಪತ್ ಸಿವಿಲ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ.

  • ಲೇಟ್ ನೈಟ್ ಲಾಂಗ್ ಡ್ರೈವ್ ಹೋಗೋ ಮುನ್ನ ಎಚ್ಚರ- ಸುಲಿಗೆಗೆ ಲವರ್ಸ್‍ಗಳೇ ಟಾರ್ಗೆಟ್

    ಲೇಟ್ ನೈಟ್ ಲಾಂಗ್ ಡ್ರೈವ್ ಹೋಗೋ ಮುನ್ನ ಎಚ್ಚರ- ಸುಲಿಗೆಗೆ ಲವರ್ಸ್‍ಗಳೇ ಟಾರ್ಗೆಟ್

    ಬೆಂಗಳೂರು: ಲೇಟ್ ನೈಟ್ ಲಾಂಗ್ ಡ್ರೈವ್ ಹೋಗೋ ಯುವಕ ಯುವತಿಯರೇ ಎಚ್ಚರವಾಗಿರಿ. ಯಾಕಂದ್ರೆ ನಡುರಸ್ತೆಯಲ್ಲಿ ಬೈಕ್ ಅಡ್ಡ ಹಾಕುತ್ತಾರೆ. ಅಲ್ಲದೆ ಬೆದರಿಸಿ ಸುಲಿಗೆ ಮಾಡುತ್ತಾರೆ. ಅಂತೆಯೇ ಲವರ್ಸ್ ಗಳನ್ನೇ ಟಾರ್ಗೆಟ್ ಮಾಡಿ ಸುಲಿಗೆ ಮಾಡುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ.

    ಬೆಂಗಳೂರಿನ ಹೊರವಲಯದ ದೇವನಹಳ್ಳಿ ಪೊಲೀಸರು ಕಾರು ಚಾಲಕ ಸುಬ್ರಮಣಿ ಸೇರಿ ಅನಿಲ್ ಕುಮಾರ್ ಹಾಗೂ ಪವನ್ ಕುಮಾರ್‍ನನ್ನು ಬಂಧಿಸಿದ್ದಾರೆ. ಇವರು ಸಿಟಿ ಹೊರವಲಯದಲ್ಲಿ ಲೈಟ್ ನೈಟ್ ಲಾಂಗ್ ಬರುವ ಪ್ರೇಮಿಗಳನ್ನು ಸುಲಿಗೆ ಮಾಡುತ್ತಿದ್ದರು. ಇದನ್ನೂ ಓದಿ: ಕುಡಿದ ಮತ್ತಲ್ಲಿ ವಕೀಲನ ಹಲ್ಲು ಮುರಿಯುವಂತೆ ಹಲ್ಲೆ – ದೊಡ್ಡವರ ಮಕ್ಕಳಿಂದ ಗೂಂಡಾವರ್ತನೆ

    ಜುಲೈ 8ರಂದು ಬೈಕ್ ನಲ್ಲಿ ಬರುತ್ತಿದ್ದ ಯುವಕ- ಯುವತಿಯರನ್ನು ಅಡ್ಡಗಟ್ಟಿದ್ರು. ಅಲ್ಲದೆ ಯುವಕನಿಗೆ ರಾಡ್ ನಿಂದ ಹಲ್ಲೆ ಮಾಡಿ ಕತ್ತಿನಲ್ಲಿ ಚಿನ್ನದ ಚೈನ್ ಕಸಿದು, ಯುವತಿ ಮುಂದೆಯೇ ಹಲ್ಲೆ ಮಾಡಿದ್ರು. ನಂತರ ಹತ್ತಿರದ ಎಟಿಎಂ ಗೆ ಕರೆದುಕೊಂಡು ಹೋಗಿ 15,000 ಹಣ ಡ್ರಾ ಮಾಡಿಸಿಕೊಂಡು ಹೋಗಿದ್ದರು.

    ಈ ಸಂಬಂಧ ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ವಿಚಾರಣೆ ವೇಳೆ ನಗರದ ಹೊರವಲಯಕ್ಕೆ ಬರುವ ಲವರ್ಸ್ ಗಳನ್ನೇ ಟಾರ್ಗೆಟ್ ಸುಲಿಗೆ ಮಾಡ್ತಿರೋದು ಬೆಳಕಿಗೆ ಬಂದಿದೆ. ಕೃತ್ಯಕ್ಕೆ ಬಳಸಿದ್ದ ಕಾರು, ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕೆ.ಆರ್.ಎಸ್ ಹಿನ್ನೀರಿಗೆ ಬಿದ್ದು ಪ್ರೇಮಿಗಳು ಆತ್ಮಹತ್ಯೆ

    ಕೆ.ಆರ್.ಎಸ್ ಹಿನ್ನೀರಿಗೆ ಬಿದ್ದು ಪ್ರೇಮಿಗಳು ಆತ್ಮಹತ್ಯೆ

    ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆ.ಆರ್.ಎಸ್‍ನ ನಾರ್ತ್ ಬ್ಯಾಂಕ್ ಬಳಿಯ ಹಿನ್ನೀರಿನಲ್ಲಿ ಮುಳುಗಿ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ನವೀನ್(20) ಮತ್ತು ನಿಸರ್ಗ (19) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು. ಇವರು ಮೈಸೂರಿನ ಮೇಟಗಳ್ಳಿ ನಿವಾಸಿಗಳು. ಪರಸ್ಪರ ಸಂಬಂಧಿಕರಾಗಿರುವ ನಿಸರ್ಗ ಮತ್ತು ನವೀನ್ ಹಲವು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು.

    ನವೆಂಬರ್ 20 ರಂದು ನಿಸರ್ಗಗೆ ಬೇರೆ ಯುವಕನ ಜೊತೆ ಮದುವೆ ಮಾಡಲಾಗಿತ್ತು. ಡಿಸೆಂಬರ್ 1 ರ ಮಧ್ಯಾಹ್ನದಿಂದ ಇಬ್ಬರೂ ಮನೆಯಿಂದ ನಾಪತ್ತೆಯಾಗಿದ್ದರು. ಇದೀಗ ಕೆ.ಆರ್.ಎಸ್ ನ ನಾತ್9ಬ್ಯಾಂಕ್ ನ ಮಿಲ್ಟ್ರಿ ಕ್ಯಾಂಪ್ ಬಳಿ ಹಿನ್ನೀರಿನಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿದೆ. ಇದನ್ನೂ ಓದಿ: ಭೀಮಾತೀರದಲ್ಲಿ ಮತ್ತೆ ಹರಿದ ನೆತ್ತರು- ಪಟ್ಟಣ ಪಂಚಾಯ್ತಿ ಮಾಜಿ ಸದಸ್ಯನ ಬರ್ಬರ ಕೊಲೆ

    ವೆಲ್ ನಿಂದ ಇಬ್ಬರು ಕೈಕಟ್ಟಿಕೊಂಡು ಹಿನ್ನಿರಿಗೆ ಬಿದ್ದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಂಬಂಧ ಕೆಆರ್‍ಎಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಲಾಂಗ್ ಡ್ರೈವ್ ಹೋಗಲು ಹಣಕ್ಕಾಗಿ ಕಳ್ಳತನಕ್ಕಿಳಿದಿದ್ದ ಲವ್ವರ್ಸ್ ಅರೆಸ್ಟ್

    ಲಾಂಗ್ ಡ್ರೈವ್ ಹೋಗಲು ಹಣಕ್ಕಾಗಿ ಕಳ್ಳತನಕ್ಕಿಳಿದಿದ್ದ ಲವ್ವರ್ಸ್ ಅರೆಸ್ಟ್

    – ಬಾಡಿಗೆ ನೆಪದಲ್ಲಿ ಮನೆಗೆ ಹೋಗಿ ಸಿಕ್ಕಿದ್ದು ಕಳವು

    ಬೆಂಗಳೂರು: ಲಾಂಗ್ ಡ್ರೈವ್ ಹೋಗಲು ಹಣವಿಲ್ಲ ಎಂದು ಕಳ್ಳತನಕ್ಕೆ ಇಳಿದ ಜೋಡಿಯೊಂದನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತರನ್ನು ವಿನಯ್ ಹಾಗೂ ಕೀರ್ತನಾ ಎಂದು ಗುರುತಿಸಲಾಗಿದ್ದು, ಇವರನ್ನು ಚಂದ್ರಾಲೇಔಟ್ ಠಾಣೆಯ ಪೊಲೀಸರು ಲಾಕ್ ಮಾಡಿದ್ದಾರೆ.

    ವಿನಯ್ ರಾಜಾಜಿನಗರದ ರೌಡಿಶೀಟರ್ ಆಗಿದ್ದು, ಈತ ಕೀರ್ತನಾಳನ್ನು ಲವ್ ಮಾಡುತ್ತಿದ್ದ. ಅಂತೆಯೇ ಕೀರ್ತನಾ ತನ್ನ ಪ್ರಿಯಕರನ ಬಳಿ ಲಾಂಗ್ ಡ್ರೈವ್ ಹಾಗೂ ಗೋಲ್ಡ್ ಗಿಫ್ಟ್ ಬೇಡಿಕೆಯಿಟ್ಟಿದ್ದಾಳೆ. ಆಗ ವಿನಯ್, ನಾನೇ ಕಳ್ಳ. ನಿನಗೇನೆ ಗಿಫ್ಟ್ ಕೊಡಿಸ್ಲಿ. ನಾನೊಬ್ಬ ರೌಡಿಶೀಟರ್ ಅಂತ ಕೀರ್ತನಾಳನ್ನ ಕಿಚಾಯಿಸುತ್ತಿದ್ದ. ಇತ್ತ ನೀನ್ ರೌಡಿ ಆದರೂ ನಿನ್ನನ್ನು ಲವ್ ಮಾಡಿದ್ದೀನಿ. ನಿನ್ನ ಜೊತೆ ಜೈಲಿಗೆ ಬರೋದಕ್ಕೂ ನಾನು ರೆಡಿ ಇದ್ದೀನಿ ಅಂತ ಕೀರ್ತನಾ, ವಿನಯ್ ಬಳಿ ಹೇಳಿದ್ದಳು. ಅದರಂತೆ ಲವ್ವರ್ ರೌಡಿಶೀಟರ್ ವಿನಯ್ ಜೊತೆ ಕಳ್ಳತನಕ್ಕೆ ಕೀರ್ತನಾ ಕೂಡ ಕೈ ಜೋಡಿಸಿದ್ದಾಳೆ. ಗಂಡ-ಹೆಂಡತಿಯಂತೆ ಬಾಡಿಗೆ ಮನೆ ಕೇಳಲು ಹೋಗುವ ನೆಪದಲ್ಲಿ ಈ ಖರ್ತನಾಕ್ ಲವ್ವರ್ಸ್ ಮನೆಗಳವು ಮಾಡ್ತಿದ್ದರು.

    ಮಾರುತಿ ನಗರದ ಕುಲಶೇಖರ್ ಎಂಬವರ ಮನೆಗೆ ಬಾಡಿಗೆಗೆ ಕೇಳುವ ನೆಪದಲ್ಲಿ ಹೋಗಿ ಕಳ್ಳತನ ಮಾಡಿದ್ದಾರೆ. ಮನೆ ಮಾಲೀಕನ ಮನೆಯಲ್ಲಿ ಬಾಡಿಗೆ ಮಾತಾಡುವ ನೆಪದಲ್ಲಿ ವಿನಯ್ ಮಾತಿಗಿಳಿತಿದ್ದ. ಈ ವೇಳೆ ಮಾಲೀಕರ ಮನೆ ತುಂಬಾ ಚೆನ್ನಾಗಿದೆ ಅಂತ ಮನೆ ನೋಡಲು ಕೀರ್ತನಾ ಮುಂದಾಗುತ್ತಿದ್ದಳು. ವಿನಯ್ ಮಾತಾಡಿಸುತ್ತಾ ಮೈಂಡ್ ಡೈವರ್ಟ್ ಮಾಡ್ತಿದ್ರೆ, ಇತ್ತ ಕೈಗೆ ಸಿಕ್ಕ ವಸ್ತುಗಳನ್ನ ಕೀರ್ತನಾ ಎಗರಿಸ್ತಿದ್ದಳು. ಇದನ್ನೂ ಓದಿ: ಕೆರೆ ನೋಡಲು ಬಂದವರಿಗೆ ಕೊರೊನಾ ವ್ಯಾಕ್ಸಿನ್

    ಕಳೆದ ಅಕ್ಟೋಬರ್ 4 ರಂದು ಕುಲಶೇಖರ್ ಮನೆಯಲ್ಲಿ 1 ಮೊಬೈಲ್ 1 ಲ್ಯಾಪ್ ಟಾಪ್ ಹಾಗೂ 15 ಸಾವಿರ ಹಣ ಎಗರಿಸಿದ್ರು. ಸದ್ಯ ಮನೆ ಮಾಲೀಕ ಕುಲಶೇಖರ್ ಕೊಟ್ಟ ದೂರಿನನ್ವಯ ಕಳ್ಳ ಲವ್ವರ್ಸ್ ಅರೆಸ್ಟ್ ಆಗಿದ್ದಾರೆ. ಸದ್ಯ ರೌಡಿ ಲವ್ವರ್ ಜೊತೆ ಕಳ್ಳತನಕ್ಕೆ ಹೋಗಿ ಪ್ರಿಯತಮೆ ಕೀರ್ತನಾ ಕೂಡ ಜೈಲು ಪಾಲಾಗಿದ್ದಾಳೆ.