Tag: ಲವ್ಲಿ ಸ್ಟಾರ್ ಪ್ರೇಮ್

  • ಬರ್ತ್‌ಡೇ ಖುಷಿಯಲ್ಲಿದ್ದ ಲವ್ಲಿ ಸ್ಟಾರ್ ಪ್ರೇಮ್‌ಗೆ ಶಾಕ್ ಕೊಟ್ಟ ನಿರ್ಮಾಪಕಿ

    ಬರ್ತ್‌ಡೇ ಖುಷಿಯಲ್ಲಿದ್ದ ಲವ್ಲಿ ಸ್ಟಾರ್ ಪ್ರೇಮ್‌ಗೆ ಶಾಕ್ ಕೊಟ್ಟ ನಿರ್ಮಾಪಕಿ

    ವ್ಲಿ ಸ್ಟಾರ್ ಪ್ರೇಮ್‌ಗೆ (Lovely Star Prem) ಇಂದು (ಏ.18) ಹುಟ್ಟುಹಬ್ಬದ ಸಂಭ್ರಮ. ಆದರೆ ಬರ್ತ್‌ಡೇ ಖುಷಿಯಲ್ಲಿದ್ದ ನಟನ ವಿರುದ್ಧ ನಿರ್ಮಾಪಕಿ ಶ್ರುತಿ ನಾಯ್ಡು (Shruti Naidu) ಗರಂ ಆಗಿದ್ದಾರೆ. ಪ್ರೇಮ್ ವಿರುದ್ಧ ಕಾನೂನು ಸಮರಕ್ಕೆ ನಿಂತಿದ್ದಾರೆ. ಇದನ್ನೂ ಓದಿ:ಉಪ್ಪಿ ಅಣ್ಣನ ಮಗನ ಸಿನಿಮಾದಲ್ಲಿ ಲವ್ಲಿ ಸ್ಟಾರ್‌- ‘ಸ್ಪಾರ್ಕ್‌’ನಲ್ಲಿ ನೆನಪಿರಲಿ ಪ್ರೇಮ್

    ನಟನ ಹುಟ್ಟುಹಬ್ಬದ ಹಿನ್ನೆಲೆ ಇಂದು ‘ಸ್ಪಾರ್ಕ್’ (Spark Film) ಚಿತ್ರತಂಡ ವಿಶೇಷವಾಗಿ ಪ್ರೇಮ್ ಪಾತ್ರದ ಪೋಸ್ಟರ್ ಅನ್ನು ರಿವೀಲ್ ಮಾಡಿತ್ತು. ಆ ಪೋಸ್ಟರ್‌ನಲ್ಲಿ ರಮೇಶ್ ಇಂದಿರಾ ಅವರ ಫೋಟೋವನ್ನು ಸಿಗಾರ್‌ನಿಂದ ಪ್ರೇಮ್ ಸುಡುತ್ತಿರುವಂತೆ ಡಿಸೈನ್ ಮಾಡಲಾಗಿತ್ತು. ಆದರೆ ಆ ರಮೇಶ್ ಇಂದಿರಾ ನಟಿಸಿದ್ದ ‘ಭೀಮ’ ಸಿನಿಮಾದಾಗಿತ್ತು. ಅನುಮತಿ ಪಡೆಯದೇ ರಮೇಶ್ ಇಂದಿರಾ ಅವರ ಫೋಟೋ ಬಳಸಿದ್ದಕ್ಕೆ ಪ್ರೇಮ್ ಮತ್ತು ಚಿತ್ರತಂದ ವಿರುದ್ಧ ಶ್ರುತಿ ನಾಯ್ಡು ಗರಂ ಆಗಿದ್ದಾರೆ. ಇದನ್ನೂ ಓದಿ:‘ಎಡಗೈಯೇ ಅಪಘಾತಕ್ಕೆ ಕಾರಣ’ ಚಿತ್ರಕ್ಕಾಗಿ ಒಂದಾದ ‘ಬ್ಲಿಂಕ್’ ಮತ್ತು ‘ಶಾಖಾಹಾರಿ’ ನಿರ್ಮಾಪಕರು

    ಆ ಪೋಸ್ಟರ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಶ್ರುತಿ ನಾಯ್ಡು, ಈ ಚಿತ್ರತಂಡದವರು ಅನೈತಿಕವಾಗಿ ನಡೆದುಕೊಂಡಿದ್ದಾರೆ. ಪೋಸ್ಟರ್‌ನಲ್ಲಿರುವ ಈ ಚಿತ್ರವನ್ನು ನಟನ ಅನುಮತಿ ಪಡೆಯದೇ ಪೋಸ್ಟ್ ಮಾಡಿದ್ದಾರೆ. ನಟ ಹಿಡಿದುಕೊಂಡ ಪೋಸ್ಟರ್‌ನಲ್ಲಿ ಬಳಸಲಾದ ಈ ಚಿತ್ರವು ರಮೇಶ್ ಇಂದಿರಾ ಅವರು ರಾಜಕಾರಣಿಯ ಪಾತ್ರವನ್ನು ನಿರ್ವಹಿಸಿದ ‘ಭೀಮ’ ಚಿತ್ರದ್ದು. ಅದರಲ್ಲಿರೋ ಫೋಟೋವನ್ನು ಭೀಮ ಚಿತ್ರಕ್ಕಾಗಿ ತೆಗೆದುಕೊಳ್ಳಲಾಗಿತ್ತು. ಆದರೆ ಈ ಫೋಟೋವನ್ನು ಅನುಮತಿ ಇಲ್ಲದೇ ಬಳಸಿಕೊಂಡಿದ್ದಾರೆ. ರಮೇಶ್ ಇಂದಿರಾ ಪರವಾಗಿ ಈ ಚಿತ್ರ ತಂಡ ಮತ್ತು ನಟನಿಗೆ ಕಾನೂನು ನೋಟಿಸ್ ಕಳುಹಿಸುತ್ತೇನೆ ಬರೆದುಕೊಂಡಿದ್ದಾರೆ. ಚಿತ್ರತಂಡ ಈ ನಡೆ ಶ್ರುತಿ ನಾಯ್ಡು ಮುನಿಸಿಗೆ ಕಾರಣವಾಗಿದೆ.

    ಶ್ರುತಿ ನಾಯ್ಡು ಹಂಚಿಕೊಂಡಿರುವ ಪೋಸ್ಟ್‌ಗೆ ಚಿತ್ರತಂಡದವರಾಗಲಿ ಅಥವಾ ನಟನಾಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ವಿಚಾರಕ್ಕೆ ಯಾವ ರೀತಿಯ ಪ್ರತಿಕ್ರಿಯೆ ನೀಡ್ತಾರೆ ಎಂಬುದುನ್ನು ಕಾದುನೋಡಬೇಕಿದೆ.

  • ಉಪ್ಪಿ ಅಣ್ಣನ ಮಗನ ಸಿನಿಮಾದಲ್ಲಿ ಲವ್ಲಿ ಸ್ಟಾರ್‌- ‘ಸ್ಪಾರ್ಕ್‌’ನಲ್ಲಿ ನೆನಪಿರಲಿ ಪ್ರೇಮ್

    ಉಪ್ಪಿ ಅಣ್ಣನ ಮಗನ ಸಿನಿಮಾದಲ್ಲಿ ಲವ್ಲಿ ಸ್ಟಾರ್‌- ‘ಸ್ಪಾರ್ಕ್‌’ನಲ್ಲಿ ನೆನಪಿರಲಿ ಪ್ರೇಮ್

    ನೆನಪಿರಲಿ ಪ್ರೇಮ್‌ (Nenapirali Prem) ಪಾತ್ರಗಳ ಆಯ್ಕೆಯಲ್ಲಿ ವಿಭಿನ್ನವಾಗಿ ಕಾಣಿಸ್ತಾರೆ. ಬರೋ ಎಲ್ಲಾ ಪಾತ್ರಗಳನ್ನೂ ಅವರು ಒಪ್ಪಿಕೊಳ್ಳುವುದಿಲ್ಲ. ಅಳೆದು ತೂಗಿ ಪ್ರೇಕ್ಷಕರಿಗೆ ಇಷ್ಟವಾಗುವ ಸಿನಿಮಾಗಳನ್ನೇ ಮಾಡುತ್ತಾ ಬಂದಿದ್ದಾರೆ. ಈಗ ಪ್ರೇಮ್‌ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ರಿಯಲ್‌ ಸ್ಟಾರ್‌ ಉಪೇಂದ್ರ (Upendra) ಅಣ್ಣನ ಮಗನ ನಿರಂಜನ್‌ ಸುಧೀಂದ್ರ (Niranjan Sudhindra) ನಾಯಕನಾಗಿ ನಟಿಸುತ್ತಿರುವ ‘ಸ್ಪಾರ್ಕ್‌ ಚಿತ್ರಕ್ಕೆ ಅವರು ಎಂಟ್ರಿ ಕೊಟ್ಟಿದ್ದಾರೆ. ಇಂದು (ಏ.18) ಪ್ರೇಮ್‌ ಬರ್ತ್‌ಡೇ ಹಿನ್ನೆಲೆ ಅವರ ಪಾತ್ರದ ಲುಕ್‌ ಅನ್ನು ಚಿತ್ರತಂಡ ರಿವೀಲ್ ಮಾಡಿದೆ.

    ‘ಸ್ಪಾರ್ಕ್‌’ (Spark) ಚಿತ್ರದಲ್ಲಿ ನಿರಂಜನ್‌ ಹೀರೋ ಆಗಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಒಂದು ವಿಶಿಷ್ಟ ಪಾತ್ರದಲ್ಲಿ ನೆನಪಿರಲಿ ಪ್ರೇಮ್ ಕಾಣಿಸಿಕೊಳ್ಳುತ್ತಿದ್ದಾರೆ. ನಿರ್ದೇಶಕ ಮಹಾಂತೇಶ್ ಹಂದ್ರಾಳ್ ಲವ್ಲಿ ಸ್ಟಾರ್‌ ಗೊಂದು ಸ್ಪೆಷಲ್‌ ಪಾತ್ರ ಡಿಸೈನ್‌ ಮಾಡಿದ್ದಾರೆ. ಹಿಂದೆಂದೂ ಕಾಣದ ಲುಕ್‌ ನಲ್ಲಿ ಪ್ರೇಮ್‌ ನಿಮಗೆ ಕಾಣಿಸ್ತಾರೆ. ಸ್ಪೆಷಲ್‌ ಪಾತ್ರವನ್ನು ಅವರಿಗಾಗಿ ಮಹಾಂತೇಶ್‌ ಎಣೆದಿದ್ದು, ಹೀಗಾಗಿ ಪ್ರೇಮ್‌ ಕೂಡ ಇಷ್ಟಪಟ್ಟು ಚಿತ್ರ ಮಾಡಲು ಮುಂದಾಗಿದ್ದಾರೆ. ತಮ್ಮ ಇಷ್ಟುವರ್ಷದ ಪಯಣದ ಅನುಭವಗಳನ್ನು ಇಟ್ಟುಕೊಂಡು ನಿರ್ದೇಶಕ ಮಹಾಂತೇಶ್ ಹಂದ್ರಾಳ್ ಎಲ್ಲರ ಪಾತ್ರಗಳನ್ನು ವಿಶೇಷವಾಗಿ ರೂಪಿಸಿದ್ದಾರೆ. ಇದನ್ನೂ ಓದಿ:‘ಜಾಟ್’ ಚಿತ್ರದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ – ಸನ್ನಿ ಡಿಯೋಲ್ ಸೇರಿ 7 ಮಂದಿ ವಿರುದ್ಧ FIR

    ಜೇಮ್ಸ್, ಭರಾಟೆ, ಕನಕ ಸೇರಿದಂತೆ 15ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕೋ ಡೈರೆಕ್ಟರ್ ಆಗಿ ದುಡಿದಿರುವ ಡಿ.ಮಹಾಂತೇಶ್ ಹಂದ್ರಾಳ್ ‘ಸ್ಪಾರ್ಕ್‌’ ಮೂಲಕ ಡೈರೆಕ್ಟರ್‌ ಕ್ಯಾಪ್‌ ತೊಟ್ಟಿದ್ದಾರೆ. ಚಿತ್ರದಲ್ಲಿ ನಿರಂಜನ್ ಸುಧೀಂದ್ರ ಪತ್ರಕರ್ತನಾಗಿ ನಟಿಸುತ್ತಿದ್ದಾರೆ. ನಾಯಕಿಯಾಗಿ ರಚನಾ ಇಂದರ್ (Rachana Inder) ಅಭಿನಯಿಸುತ್ತಿದ್ದಾರೆ. ಇದನ್ನೂ ಓದಿ: ರಾಕೇಶ್ ಅಡಿಗ ನಟನೆಯ ‘ನಾನು ಮತ್ತು ಗುಂಡ 2’ ಟೀಸರ್ ಔಟ್

    ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಸ್ಪಾರ್ಕ್‌ ಚಿತ್ರ ಡಾ.ಗರಿಮಾ ಅವಿನಾಶ್ ವಸಿಷ್ಠ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಅಶ್ವಿನ್ ಕೆನಡಿ ಛಾಯಾಗ್ರಹಣ, ಸಚಿನ್ ಬಸ್ರೂರ್ ಸಂಗೀತ‌ ನಿರ್ದೇಶನ, ಮಧು ಸಂಕಲನ ಈ ಚಿತ್ರಕ್ಕಿದೆ. ಸದ್ಯ ‘ಸ್ಪಾರ್ಕ್‌’ ಶೂಟಿಂಗ್‌ ಭರದಿಂದ ಸಾಗುತ್ತಿದೆ.

  • ಸೆಟ್ಟೇರಿತು ‘ಅರಸು’ ಡೈರೆಕ್ಟರ್ ಹೊಸ ಸಿನಿಮಾ- ಸ್ಮೈಲ್ ಗುರು ರಕ್ಷಿತ್ ಚಿತ್ರಕ್ಕೆ ಲವ್ಲಿ ಸ್ಟಾರ್ ಪ್ರೇಮ್ ಸಾಥ್

    ಸೆಟ್ಟೇರಿತು ‘ಅರಸು’ ಡೈರೆಕ್ಟರ್ ಹೊಸ ಸಿನಿಮಾ- ಸ್ಮೈಲ್ ಗುರು ರಕ್ಷಿತ್ ಚಿತ್ರಕ್ಕೆ ಲವ್ಲಿ ಸ್ಟಾರ್ ಪ್ರೇಮ್ ಸಾಥ್

    ಕಾಶ್, ಅರಸು (Arasu), ಮೆರವಣಿಗೆಯಂತಹ ಹಿಟ್ ಸಿನಿಮಾಗಳ ನಿರ್ದೇಶಕ ಮಹೇಶ್ ಬಾಬು (Mahesh Babu) ಹೊಸ ಸಿನಿಮಾ ಕೈಗೆತ್ತಿಕೊಂಡಿರುವುದು ಗೊತ್ತಿರುವ ಸಂಗತಿ. ಪ್ರತಿ ಸಿನಿಮಾದಲ್ಲಿಯೂ ಹೊಸ ಪ್ರತಿಭೆಗಳನ್ನು ಪರಿಚಯಿಸುವ ಅವರೀಗ, ಈ ಚಿತ್ರದ ಮೂಲಕ ಕಿರುತೆರೆಯ ಪ್ರತಿಭಾನ್ವಿತ ನಟರಲ್ಲಿ ಒಬ್ಬರಾದ ಸ್ಮೈಲ್ ಗುರು ರಕ್ಷಿತ್ (Smile Guru Rakshit) ಅವರನ್ನು ನಾಯಕನಾಗಿ ಕನ್ನಡ ಬೆಳ್ಳಿಪರದೆಗೆ ಕರೆದುಕೊಂಡು ಬರುತ್ತಿದ್ದಾರೆ. ಮಹೇಶ್ ಬಾಬು ಮತ್ತು ರಕ್ಷಿತ್ ಹೊಸ ಸಿನಿಮಾ ಜು.14ರಂದು ಸೆಟ್ಟೇರಿದೆ. ಬೆಂಗಳೂರಿನ ಅಭಯ ಹಸ್ತ ಬಲಮುರಿ ದೇಗುಲದಲ್ಲಿ ಮುಹೂರ್ತ ನೆರವೇರಿದೆ. ಇದನ್ನೂ ಓದಿ:ಮಗನ ಮದುವೆ ಬೆನ್ನಲ್ಲೇ ಕ್ಷಮೆಯಾಚಿಸಿದ ನೀತಾ ಅಂಬಾನಿ

    ಮಹೇಶ್ ಬಾಬು ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾದ ಶೀರ್ಷಿಕೆ ಏನು ಎಂಬುದು ಇನ್ನೂ ಬಹಿರಂಗ ಆಗಿಲ್ಲ. ಸದ್ಯಕ್ಕೆ ಇದನ್ನು ‘ಪ್ರೊಡಕ್ಷನ್ ನಂ 2’ ಎಂದು ಕರೆಯಲಾಗುತ್ತಿದೆ. ನೆನಪಿರಲಿ ಪ್ರೇಮ್ (Nenapirali Prem) ಈ ಸಿನಿಮಾದ ಮುಹೂರ್ತ ಸಮಾರಂಭಕ್ಕೆ ಮುಖ್ಯ ಅಥಿತಿಯಾಗಿ ಆಗಮಿಸಿದ್ದರು. ಸಿನಿಮಾದ ಮೊದಲ ದೃಶ್ಯಕ್ಕೆ ಅವರು ಆರಂಭ ಫಲಕ ತೋರಿದರು. ಬಳಿಕ ಚಿತ್ರತಂಡಕ್ಕೆ ಅವರು ಶುಭ ಹಾರೈಸಿದರು. ಎ ಕ್ಲಾಸ್ ಸಿನಿ ಫಿಲ್ಮ್ಸ್ ಪ್ರೊಡಕ್ಷನ್ ಸಂಸ್ಥಾಪಕ ಅನುರಾಗ್ ಆರ್ ಅವರ ತಾಯಿ ಕ್ಯಾಮೆರಾ ಚಾಲನೆ ಮಾಡುವ ಮೂಲಕ ಶುಭ ಕೋರಿದರು. ಈ ಸಿನಿಮಾದಲ್ಲಿ ಸ್ಮೈಲ್ ಗುರು ರಕ್ಷಿತ್‌ಗೆ ಜೋಡಿಯಾಗಿ ‘ವೀರ ಮದಕರಿ’ಯಲ್ಲಿ ಬಾಲನಟಿಯಾಗಿ ಅಭಿನಯಿಸಿದ್ದ ಜೆರುಶಾ (Jerusha) ಅವರು ಅಭಿನಯಿಸುತ್ತಿದ್ದಾರೆ. ಮತ್ತೊಬ್ಬ ನಾಯಕಿಯನ್ನು ಚಿತ್ರತಂಡ ಶೀಘ್ರದಲ್ಲಿಯೇ ರಿವೀಲ್ ಮಾಡಲಿದೆ.

    ಕನ್ನಡ ಚಿತ್ರರಂಗಕ್ಕೆ ಸದಭಿರುಚಿಯ ಸಿನಿಮಾ ಕೊಡಬೇಕೆಂಬ ಉದ್ದೇಶದಿಂದ ಎಂಎಂಎಂ ಪಿಕ್ಚರ್ಸ್ ಮತ್ತು ಎ ಕ್ಲಾಸ್ ಸಿನಿ ಫಿಲ್ಮಂಸ್ ಜಂಟಿಯಾಗಿ ಈ ಚಿತ್ರ ನಿರ್ಮಾಣ ಮಾಡುತ್ತಿದೆ. ಈ ನಿರ್ಮಾಣ ಸಂಸ್ಥೆಯಡಿ ಅನುರಾಗ್ ಆರ್ ಹಾಗೂ ಮಿಥುನ್ ಕೆಎಸ್ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಅನೂಪ್ ಸೀಳಿನ್ ಸಂಗೀತ ನಿರ್ದೇಶನ, ಸತ್ಯ ಛಾಯಾಗ್ರಹಣ, ಸತೀಶ್ ಚಂದ್ರಯ್ಯ ಸಂಕಲನ ಚಿತ್ರಕ್ಕಿದೆ.

    ನಾಯಕ ಸ್ಮೈಲ್ ಗುರು ರಕ್ಷಿತ್ ಕಥೆ ಬರೆದಿದ್ದು, ವಿಜಯ್ ಈಶ್ವರ್ ಸಂಭಾಷಣೆ ಒದಗಿಸಲಿದ್ದಾರೆ. ಶೀಘ್ರದಲ್ಲಿಯೇ ಚಿತ್ರತಂಡ ಅದ್ಧೂರಿಯಾಗಿ ಟೈಟಲ್ ರಿವೀಲ್ ಮಾಡುವ ಯೋಜನೆ ಹಾಕಿಕೊಂಡಿದೆ. ಮೊದಲ ಹಂತದ ಚಿತ್ರೀಕರಣವನ್ನು ಬೆಂಗಳೂರಿನಲ್ಲಿ ಮುಗಿಸಲಿರುವ ಚಿತ್ರತಂಡ ಎರಡನೇ ಹಂತದ ಶೂಟಿಂಗ್‌ಗಾಗಿ ಮಲೆನಾಡಿನತ್ತ ಹೆಜ್ಜೆ ಹಾಕಲಿದೆ.

  • ಕರವೇ ಪ್ರತಿಭಟನೆ- ಲವ್ಲಿ ಸ್ಟಾರ್ ಪ್ರೇಮ್, ಪೂಜಾ ಗಾಂಧಿ ಬೆಂಬಲ

    ಕರವೇ ಪ್ರತಿಭಟನೆ- ಲವ್ಲಿ ಸ್ಟಾರ್ ಪ್ರೇಮ್, ಪೂಜಾ ಗಾಂಧಿ ಬೆಂಬಲ

    ರ್ನಾಟಕ ನೆಲದಲ್ಲಿ ಕನ್ನಡಿಗರಿಗೆ ಉದ್ಯೋಗದ ಸಮಗ್ರ ಕಾಯ್ದೆ ರೂಪಿಸಲು ಜುಲೈ 1ರಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾದ್ಯಂತ  ಸತ್ಯಾಗ್ರಹಕ್ಕೆ ಕರೆ ಕೊಟ್ಟಿದ್ದಾರೆ. ಈ ಪ್ರತಿಭಟನೆಗೆ ನಟಿ ಪೂಜಾ ಗಾಂಧಿ ಮತ್ತು ಲವ್ಲಿ ಸ್ಟಾರ್ ಪ್ರೇಮ್ (Lovely Star Prem) ಬೆಂಬಲಿಸಿದ್ದಾರೆ. ಇದನ್ನೂ ಓದಿ:ವಿಶ್ವಕಪ್ ಗೆದ್ದ ಭಾರತ- ಸಂಭ್ರಮಿಸಿದ ಸಿನಿತಾರೆಯರು

    ಒಂದು ಭಾಷೆ ಉಳಿಯಬೇಕಾದರೆ ಎರಡು ಕಾರಣ ಇರುತ್ತದೆ. ಒಂದು ಭಾಷೆಯ ಮೇಲೆ ಪ್ರೀತಿ ಇರಬೇಕು. ಆ ಭಾಷೆಯ ಬಗ್ಗೆ ಹೆಮ್ಮೆ ಇರಬೇಕು. 2ನೇ ಕಾರಣ, ಕನ್ನಡ ಅನ್ನದ ಭಾಷೆಯಾಗಿರಬೇಕು ಎಂದು ‘ಮುಂಗಾರು ಮಳೆ’ ನಟಿ ಪೂಜಾ ಗಾಂಧಿ ಮಾತನಾಡಿದ್ದಾರೆ. ಕರ್ನಾಟಕದಲ್ಲಿ ಕನ್ನಡಿಗರಿಗೆ ಕೆಲಸದಲ್ಲಿ ಶೇಕಡ 100ರಷ್ಟು ಮೀಸಲಾತಿ ಸಿಗಬೇಕು. ಕನ್ನಡಿಗರಿಗೆ ಉದ್ಯೋಗದಲ್ಲಿ ಮೊದಲ ಆಧ್ಯತೆ ಸಿಗಬೇಕು. ಇದು ಕನ್ನಡ ಬೆಳವಣಿಗೆಗೆ ಮುಖ್ಯ ಕಾರಣವಾಗುತ್ತದೆ ಎಂದಿದ್ದಾರೆ.

    ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ ನೇತೃತ್ವದಲ್ಲಿ ಜುಲೈ 1ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಸಮಾವೇಶ ಆಯೋಜನೆ ಆಗುತ್ತಿದೆ. ಈ ಹೋರಾಟಕ್ಕೆ ನಾನು ಇರುತ್ತೇನೆ. ನೀವು ಬನ್ನಿ ಎಂದು ಪೂಜಾ ಗಾಂಧಿ (Pooja Gandhi) ಬೆಂಬಲ ಸೂಚಿಸಿದ್ದಾರೆ.

    ಕರ್ನಾಟಕದಲ್ಲಿ ಕನ್ನಡಿಗರಿಗೆ ಸಾರ್ವಜನಿಕ ಮತ್ತು ಖಾಸಗಿ ವಲಯದಲ್ಲಿ ಉದ್ಯೋಗ ಸಿಗಬೇಕು. ಸರೋಜಿನಿ ಮಹಿಷಿ ವರದಿ ಜಾರಿಗೆ ತರಬೇಕು ಅಂತ ಬೃಹತ್ ಪ್ರತಿಭಟನೆ ಸತ್ಯಾಗ್ರಹವನ್ನು ಜುಲೈ 1ರಂದು ಫ್ರೀಡಂ ಪಾರ್ಕ್‌ನಲ್ಲಿ ಹಮ್ಮಿಕೊಂಡಿದ್ದಾರೆ. ಒಬ್ಬ ಕನ್ನಡಿಗನಾಗಿ ಈ ಪ್ರತಿಭಟನೆಗೆ ನನ್ನ ಬೆಂಬಲವು ಇದೆ ಎಂದು ಲವ್ಲಿ ಸ್ಟಾರ್ ಪ್ರೇಮ್ ಕೂಡ ಮಾತನಾಡಿದ್ದಾರೆ.

  • 11 ವರ್ಷಗಳ ನಂತರ ಮತ್ತೆ ಖಾಕಿ ತೊಟ್ಟ ನೆನಪಿರಲಿ ಪ್ರೇಮ್- ಪೋಸ್ಟರ್ ಔಟ್

    11 ವರ್ಷಗಳ ನಂತರ ಮತ್ತೆ ಖಾಕಿ ತೊಟ್ಟ ನೆನಪಿರಲಿ ಪ್ರೇಮ್- ಪೋಸ್ಟರ್ ಔಟ್

    ವ್ಲಿ ಸ್ಟಾರ್ ಪ್ರೇಮ್ ಹುಟ್ಟುಹಬ್ಬದ (ಏ.18) ಸಂಭ್ರಮದಲ್ಲಿದ್ದಾರೆ. ಬರ್ತ್‌ಡೇಯಂದು ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. 11 ವರ್ಷಗಳ ನಂತರ ಮತ್ತೆ ಖಾಕಿ ತೊಟ್ಟು ಖದರ್ ತೋರಿಸೋಕೆ ನಟ ಪ್ರೇಮ್ ಸಜ್ಜಾಗಿದ್ದಾರೆ. ಸದಾ ಲವರ್‌ ಬಾಯ್‌ ಆಗಿ ಕಾಣಿಸಿಕೊಳ್ಳುತ್ತಿದ್ದ ನಟ ಈಗ ಖಾಕಿ ತೊಟ್ಟು ಪುಂಡರಿಗೆ ಪಾಠ ಮಾಡೋಕೆ ರೆಡಿಯಾಗಿದ್ದಾರೆ.

    ಇಂದು (ಏ.18) ಬಂಡಿ ಮಹಾಕಾಳಮ್ಮ ದೇವಸ್ಥಾನದಲ್ಲಿ ನೆನಪಿರಲಿ ಪ್ರೇಮ್ ನಟಿಸಲಿರುವ ಹೊಸ ಸಿನಿಮಾದ ಮುಹೂರ್ತ ಕಾರ್ಯಕ್ರಮ ನೆರವೇರಿದೆ. ಚಿತ್ರದ ಪೋಸ್ಟರ್ ಲುಕ್ ಕೂಡ ರಿವೀಲ್ ಆಗಿದೆ. ಇದನ್ನೂ ಓದಿ:‘ಉತ್ತರಕಾಂಡ’ ಚಿತ್ರದಲ್ಲಿ ಲಚ್ಚಿ ಪಾತ್ರ ಬಣ್ಣಿಸಿದ ಚೈತ್ರಾ ಆಚಾರ್

    ಪ್ರೇಮ್ ಈ ಸಲ ಬೇರೆ ರೀತಿಯ ಪೊಲೀಸ್ ಪಾತ್ರ ಮಾಡಿದ್ದಾರೆ. ರಫ್ ಆ್ಯಂಡ್ ಟಫ್ ಅಲ್ಲದೇ, ರಗಡ್ ಲುಕ್ ಇರೋ ಪೊಲೀಸ್ ರೀತಿನೂ ಕಾಣಿಸುತ್ತಿದ್ದಾರೆ. ಕೈಯಲ್ಲಿ ಸಿಂಗಲ್ ಬ್ಯಾರಲ್ ಗನ್ ಕೂಡ ಇದೆ. ಅದನ್ನ ಸ್ಟೈಲ್ ಆಗಿ ಪ್ರೇಮ್ ಹಿಡಿದು ಕೊಂಡು, ಗಲಾಟೆ ಮಾಡೋರ ಕಡೆಗೆ ಮುಖ ಮಾಡಿ ನಿಂತಿದ್ದಾರೆ. ಚಿತ್ರದ ಬಗ್ಗೆ ಇಷ್ಟೆಲ್ಲ ವಿಚಾರವನ್ನ ಮೊದಲ ಪೋಸ್ಟರ್ ತೋರಿಸಲಾಗಿದೆ. ಇದನ್ನೂ ಓದಿ:ಶ್ರೀಲೀಲಾ ಕೈಬಿಟ್ಟ ಚಿತ್ರಕ್ಕೆ ರಾಶಿ ಖನ್ನಾ ಎಂಟ್ರಿ

     

    View this post on Instagram

     

    A post shared by Prem Nenapirali (@premnenapirali)

    ಪ್ರೇಮ್ ಹೊಸ ಸಿನಿಮಾಗೆ ತೇಜಸ್ ಬಿ.ಕೆ ಇದ್ದಾರೆ. ಇವರೇ ಚಿತ್ರದ ಕಥೆ ಬರೆದಿದ್ದಾರೆ. ಸಿನಿಮಾಗೆ ಡೈರೆಕ್ಷನ್ ಸಹ ಇವರೇ ಮಾಡುತ್ತಿದ್ದಾರೆ. ಹೆಸರಿಡದ ಈ ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ಕೊಟ್ಟಿದ್ದಾರೆ. ಗೀತಾಂಜಲಿ ಬಿ.ಎಸ್ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸದ್ಯದಲ್ಲೇ ಶೂಟಿಂಗ್ ಕೂಡ ಶುರುವಾಗಲಿದೆ.

    2013ರಲ್ಲಿ ‘ಶತ್ರು’ (Shatru Film) ಎಂಬ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯಾಗಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈಗ 11 ವರ್ಷಗಳ ಬಳಿಕ ಮತ್ತೆ ಪೊಲೀಸ್ ಪಾತ್ರಕ್ಕೆ ಪ್ರೇಮ್ ಬಣ್ಣ ಹಚ್ಚುತ್ತಿದ್ದಾರೆ.

  • ಸೌಂದರ್ಯ ಜಗದೀಶ್‌ ಆತ್ಮಹತ್ಯೆ ಸುದ್ದಿ ಕೇಳಿ ಶಾಕ್‌ ಆಯ್ತು: ಪ್ರೇಮ್

    ಸೌಂದರ್ಯ ಜಗದೀಶ್‌ ಆತ್ಮಹತ್ಯೆ ಸುದ್ದಿ ಕೇಳಿ ಶಾಕ್‌ ಆಯ್ತು: ಪ್ರೇಮ್

    ನ್ನಡ ಚಲನಚಿತ್ರ ನಿರ್ಮಾಪಕ, ಜೆಟ್ ಲ್ಯಾಗ್ ಮಾಲೀಕ ಸೌಂದರ್ಯ ಜಗದೀಶ್ (Soundarya Jagadeesh) ಅವರು ತಮ್ಮ ಮಹಾಲಕ್ಷ್ಮಿ ಲೇಔಟ್ ನಿವಾಸದಲ್ಲಿ ಇಂದು (ಏ.14) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬೆನ್ನಲ್ಲೇ ಲವ್ಲಿ ಸ್ಟಾರ್ ಪ್ರೇಮ್ (Lovely Star Prem) ಅವರು ಜಗದೀಶ್ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಸೌಂದರ್ಯ ಜಗದೀಶ್ ಆತ್ಮಹತ್ಯೆ ಸುದ್ದಿ ಕೇಳಿ ಶಾಕ್‌ ಆಯ್ತು ಎಂದಿದ್ದಾರೆ. ಇದನ್ನೂ ಓದಿ:ಸಲ್ಮಾನ್‌ ಖಾನ್‌ ನಿವಾಸದ ಹೊರಗೆ ಗುಂಡಿನ ದಾಳಿ

    ಸೌಂದರ್ಯ ಜಗದೀಶ್‌ಗೆ ಏನಾಯ್ತು ಎಂಬುದು ನನಗೆ ಗೊತ್ತಿಲ್ಲ. ಒಂದು ಅಪರೂಪದ ಸ್ನೇಹ ನಾವು ಕಳೆದುಕೊಂಡು ಬಿಟ್ಟಿದ್ದೇವೆ. ಯಾರೇ ಸಹಾಯ ಕೇಳಿದ್ರು ಇಲ್ಲ ಎಂದು ಹೇಳುತ್ತಿರಲಿಲ್ಲ. ಇತ್ತೀಚೆಗೆ ಅವರ ಮನೆಯ ಡ್ರೈವರ್ ತೀರಿಕೊಂಡಿದ್ದರು. ಅವರ ಅತ್ತೆ ಕೂಡ ಇತ್ತೀಚೆಗೆ ನಿಧನರಾದರು. ಈಗ ಸೌಂದರ್ಯ ಜಗದೀಶ್ ಆತ್ಮಹತ್ಯೆಯ ಸುದ್ದಿ ಕೇಳಿ ಶಾಕ್ ಆಯ್ತು ಎಂದು ನಟ ಪ್ರೇಮ್ ಮಾತನಾಡಿದ್ದಾರೆ.

    ಇತ್ತೀಚೆಗಷ್ಟೇ ಮಗಳ ಮದುವೆ ಅದ್ಧೂರಿಯಾಗಿ ಮಾಡಿದ್ದರು. ಖುಷಿ ಖುಷಿಯಾಗಿ ಇದ್ದರು. ಎಲ್ಲರನ್ನೂ ಕರೆದು ಪಾರ್ಟಿ ಮಾಡಿದ್ದರು. ಅವರಿಗೆ ಆರ್ಥಿಕ ಸಮಸ್ಯೆ ಏನು ಇರಲಿಲ್ಲ. ಒಂದು ಅಪರೂಪದ ಸ್ನೇಹವನ್ನು ನಾವೆಲ್ಲರೂ ಕಳೆದುಕೊಂಡಿದ್ದೇವೆ. ಅವರ ಕುಟುಂಬಕ್ಕೆ ದುಃಖವನ್ನು ತಡೆದುಕೊಳ್ಳುವ ಶಕ್ತಿ ಕೊಡಲಿ. ಜಗದೀಶ್ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಟ ಪ್ರೇಮ್ ಸಂತಾಪ ಸೂಚಿಸಿದ್ದಾರೆ.

  • ಮಕ್ಕಳು ಜನಿಸಿದಾಗ ಪ್ರೇಮ್ ಪರಿಸ್ಥಿತಿ ಹೇಗಿತ್ತು? ಕಷ್ಟದ ದಿನಗಳ ಬಗ್ಗೆ ನಟನ ಮಾತು

    ಮಕ್ಕಳು ಜನಿಸಿದಾಗ ಪ್ರೇಮ್ ಪರಿಸ್ಥಿತಿ ಹೇಗಿತ್ತು? ಕಷ್ಟದ ದಿನಗಳ ಬಗ್ಗೆ ನಟನ ಮಾತು

    ಕಿರುತೆರೆಯ ಜನಪ್ರಿಯ ಶೋ Weekend With Ramesh ಕಾರ್ಯಕ್ರಮದಲ್ಲಿ ಸಾಧಕರ ಸೀಟ್‌ನ ಲವ್ಲಿ ಸ್ಟಾರ್ ಪ್ರೇಮ್ (Lovely Star Prem) ಅಲಂಕರಿಸಿದ್ದಾರೆ. ಇಬ್ಬರು ಮಕ್ಕಳು ಜನಿಸಿದಾಗ ತಮ್ಮ ಕೈಯಲ್ಲಿದ್ದ ಹಣವೆಷ್ಟು? ಸಿನಿಮಾ ರಂಗಕ್ಕೆ ಕಾಲಿಟ್ಟಾಗ ಪ್ರೇಮ್ ಪರಿಸ್ಥಿತಿ ಹೇಗಿತ್ತು. ಹೀಗೆ ಅವರು ಎದುರಿಸಿದ ಸಂಕಷ್ಟದ ಬಗ್ಗೆ ಪ್ರೇಮ್ ಹಂಚಿಕೊಡಿದ್ದಾರೆ.

    Weekend With Ramesh-5 ಕಾರ್ಯಕ್ರಮದಲ್ಲಿ ನಟ ಪ್ರೇಮ್ ಅವರು, ರಮೇಶ್ ಅರವಿಂದ್ ಜೊತೆ ಸಾಕಷ್ಟು ವಿಚಾರಗಳನ್ನ ಹಂಚಿಕೊಂಡಿದ್ದಾರೆ. ತಮ್ಮ ಏಳು -ಬೀಳಿನ ದಿನಗಳ ಬಗ್ಗೆ ಪ್ರೆಮ್ ಭಾವುಕರಾಗಿದ್ದಾರೆ. ನಟನಾಗಬೇಕು ಎಂದು ಕನಸು ಕಂಡಿದ್ದ ಪ್ರೇಮ್‌ಗೆ ಅವಕಾಶ ಸಿಕ್ಕಿದ್ದು ಟಿಎನ್ ಸೀತಾರಾಂ ಅವರ ಸೀರಿಯಲ್ ‘ಮನ್ವಂತರ’ದಲ್ಲಿ ನಾಯಕ ಸುನೀಲ್ ರಾವ್ ಗೆಳೆಯನಾಗಿ ಪ್ರೇಮ್ ನಟಿಸುತ್ತಿದ್ದರು. ಅದೇ ವೇಳೆಗೆ ಜಾಹಿರಾತೊಂದರ ನೆರವಿನ ಮೂಲಕ ‘ಪ್ರಾಣ’ (Prana Film) ಸಿನಿಮಾಕ್ಕೆ ಆಯ್ಕೆ ಆಗಿ ಮೊತ್ತ ಮೊದಲ ಬಾರಿಗೆ ಪ್ರೇಮ್ ನಾಯಕ ನಟನಾಗಿ ನಟಿಸಿದರು. ಆಗ ಪ್ರೇಮ್ ಜೀವನದ ಮೊದಲ ಸಿನಿಮಾ ‘ಪ್ರಾಣ’ ಮುಹೂರ್ತ ನಡೆದಾಗ ಅವರ ಮಗಳು ಅಮೃತಾ ಇನ್ನೂ ಆರು ದಿನದ ಕೂಸು. ನನ್ನ ಮಗಳು ಜನಿಸಿದಾಗ ನನ್ನ ಹತ್ತಿರ ಮುನ್ನೂರು ರುಪಾಯಿಗಳಿದ್ದವು. ಆದರೆ ನನಗೆ ಮೊತ್ತ ಮೊದಲ ಸಿನಿಮಾ ಅವಕಾಶ ದೊರಕಿತ್ತು. ಆಕೆ ನನಗೆ ಅದೃಷ್ಟ ತಂದುಕೊಟ್ಟಳು. ಆದರೆ ನನ್ನ ಮಗ ಹುಟ್ಟಿದಾಗ ನನ್ನ ಬಳಿ ಭರಪೂರವಾಗಿ ಹಣ ಇತ್ತು. ನನ್ನ ಮಗ ಹುಟ್ಟಿದ ಸಂದರ್ಭದಲ್ಲಿ ನಿರ್ಮಾಪಕ ವಿಜಯ್ ಕಿರಗಂದೂರು ಅವರು ಜೊತೆ-ಜೊತೆಯಲಿ ಸಿನಿಮಾಕ್ಕಾಗಿ ಅಡ್ವಾನ್ಸ್ ಆಗಿ ದೊಡ್ಡ ಮೊತ್ತದ ಹಣ ಕೊಟ್ಟಿದ್ದರು. ಅದು ನನ್ನ ಜೇಬಿನಲ್ಲಿತ್ತು ಎಂದು ನಟ ಪ್ರೇಮ್ ಸ್ಮರಿಸಿದ್ದಾರೆ.

    ಪ್ರೇಮ್‌ಳ ಮಗಳ ಹೆಸರು ಅಮೃತಾ ಮಗನ ಹೆಸರು ಏಕಾಂತ್. ಡಾಲಿ ಧನಂಜಯ್ (Daali Dhananjay) ಅವರ ಡಾಲಿ ಪಿಕ್ಚರ್ಸ್ ನಿರ್ಮಾಣ ಸಂಸ್ಥೆ ನಿರ್ಮಿಸುತ್ತಿರುವ ‘ಟಗರು ಪಲ್ಯ’ (Tagaru Palya) ಸಿನಿಮಾದಲ್ಲಿ ಅಮೃತಾ ಪ್ರೇಮ್ (Amrutha Prem) ನಾಯಕಿಯಾಗಿ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ನಾಗಭೂಷಣ್ ನಾಯಕ. ಇನ್ನು ಪ್ರೇಮ್‌ರ ಪುತ್ರ ಏಕಾಂತ್, ಕಾಲೇಜು ಶಿಕ್ಷಣದಲ್ಲಿದ್ದು ಒಳ್ಳೆಯ ವಿದ್ಯಾರ್ಥಿಯಂತೆ. ಅವರಿಗೂ ಸಿನಿಮಾ ಕ್ಷೇತ್ರಕ್ಕೆ ಬರುವ ಆಸಕ್ತಿ ಇದೆಯಂತೆ. ಈಗಾಗಲೇ ಶರಣ್‌ ನಟನೆಯ ‘ಗುರು ಶಿಷ್ಯರು’ ಸಿನಿಮಾದಲ್ಲಿ ಏಕಾಂತ್‌ ನಟಿಸಿದ್ದಾರೆ. ಇದನ್ನೂ ಓದಿ:ಮಗಳ ಸಿನಿಮಾದಲ್ಲಿ ಮೊಹಿದ್ದೀನ್ ಭಾಯ್ ಆಗಿ ಬಂದ ತಲೈವಾ- ‌’ಲಾಲ್‌ ಸಲಾಂ’ ಪೋಸ್ಟರ್‌ ಔಟ್

    ಇನ್ನು ಪ್ರೇಮ್‌ರ ಪುತ್ರಿ ಅಮೃತಾ (Amrutha) ಬಯೋ ಮೆಡಿಕಲ್ ಓದುತ್ತಿದ್ದರಂತೆ ಅವರಿಗೆ ಡಾಕ್ಟರ್ ಆಗುವ ಕನಸಿತ್ತಂತೆ ಆದರೆ ವಿಧಿ ಅವರನ್ನು ಸಿನಿಮಾದತ್ತ ಕರೆದುಕೊಂಡು ಬಂದಿದೆ ಎಂದ ಪ್ರೇಮ್, ಇಂಥಹಾ ಮಕ್ಕಳನ್ನು ಪಡೆಯಲು ನಾನು ಪುಣ್ಯ ಮಾಡಿದ್ದೇನೆ. ಇಬ್ಬರೂ ಸಹ ಎಂದೂ ಯಾವುದಕ್ಕೂ ಡಿಮ್ಯಾಂಡ್ ಮಾಡಿದವರಲ್ಲ. ನಾವೇ ಏನಾದರೂ ಕೊಡಿಸುವವರೆಗೆ ಏನನ್ನೂ ಕೇಳುವವರಲ್ಲ. ಇಬ್ಬರೂ ಸಹ ಈಗಲೂ ಬಿಎಂಟಿಸಿ ಬಸ್‌ನಲ್ಲೇ ಓಡಾಡುತ್ತಾರೆ. ಮಗ ಬಹಳ ಚೆನ್ನಾಗಿ ಓದುತ್ತಿದ್ದಾನೆ. ಮಗಳು ಚಿತ್ರರಂಗಕ್ಕೆ ಕಾಲಿಟ್ಟಿದ್ದಾಳೆ ಇಂತಹ ಮಕ್ಕಳನ್ನು ಪಡೆದ ನಾನು ಪುಣ್ಯ ಮಾಡಿದ್ದೆ ಎಂದು ಪ್ರೇಮ್ ಭಾವುಕರಾಗಿದ್ದಾರೆ.

  • ಪತ್ನಿ ಮಾಡಿದ ತ್ಯಾಗ, ಲವ್ ಸ್ಟೋರಿ ಬಗ್ಗೆ ಅಸಲಿ ವಿಚಾರ ಬಿಚ್ಚಿಟ್ಟ ಲವ್ಲಿ ಸ್ಟಾರ್ ಪ್ರೇಮ್

    ಪತ್ನಿ ಮಾಡಿದ ತ್ಯಾಗ, ಲವ್ ಸ್ಟೋರಿ ಬಗ್ಗೆ ಅಸಲಿ ವಿಚಾರ ಬಿಚ್ಚಿಟ್ಟ ಲವ್ಲಿ ಸ್ಟಾರ್ ಪ್ರೇಮ್

    ಕಿರುತೆರೆಯ ಜನಪ್ರಿಯ ಶೋ ‘ವೀಕೆಂಡ್ ವಿತ್ ರಮೇಶ್’ (Weekend With Ramesh) ಕಾರ್ಯಕ್ರಮದಲ್ಲಿ ಲವ್ಲಿ ಸ್ಟಾರ್ ಪ್ರೇಮ್ (Lovely Star Prem) ಸಾಧಕರ ಸೀಟ್ ಅಲಂಕರಿಸಿದ್ದಾರೆ. ಈ ವಾರದ ಅತಿಥಿಯಾಗಿ ತಮ್ಮ ಜೀವನ ಕಥೆಯನ್ನ ಬಿಚ್ಚಿದ್ದಾರೆ. ಪತ್ನಿ ಜ್ಯೋತಿ ತ್ಯಾಗದ ಬಗ್ಗೆ ನಟ ಸ್ಮರಿಸಿದ್ದಾರೆ. ಯಾವ ಫಿಲ್ಮಿಂ ಸ್ಟೋರಿಗೂ ಕಮ್ಮಿಯಿಲ್ಲ ಪ್ರೇಮ್ ಲವ್ ಲೈಫ್ ಸ್ಟೋರಿ. ಅಷ್ಟಕ್ಕೂ ಜ್ಯೋತಿ (Wife Jyothi) -ಪ್ರೇಮ್‌ಗೆ ಲವ್ (Love) ಆಗಿದ್ದು ಹೇಗೆ? ಇಲ್ಲಿದೆ ನೋಡಿ..

    ಬಡ ಕುಟುಂಬದಲ್ಲಿ ಹುಟ್ಟಿದ ಪ್ರೇಮ್, ತಂಗಿಯರ ಓದು, ಅವರ ಮದುವೆಗಾಗಿ ಹತ್ತನೇ ತರಗತಿಗೆ ಶಿಕ್ಷಣ ಮೊಟಕುಗೊಳಿಸಿ ತಮ್ಮ ಕುಲಕಸುಬಾದ ನೇಕಾರಿಕೆ ಮಾಡಲು ತೊಡಗಿದ್ದರು. ಹೀಗೆ ಒಮ್ಮೆ ಊಟಕ್ಕೆ ಹೋಗುವಾಗ ಪ್ರಾವಿಜನ್ ಸ್ಟೋರ್ ಬಳಿ ಒಬ್ಬ ಹುಡುಗಿಯೊಬ್ಬಾಕೆಯನ್ನು ಕಂಡಿದ್ದಾರೆ. ಬಹಳ ಮುದ್ದಾಗಿದ್ದ ಆ ಹುಡುಗಿಯನ್ನು ಕಂಡು ಈಕೆಯೇ ನನ್ನ ಹೆಂಡತಿಯಾದರೆ ಎಷ್ಟು ಚೆನ್ನಾಗಿರುತ್ತದೆ ಎಂದುಕೊಂಡು ಮುಂದೆ ಹೋಗಿದ್ದಾರಷ್ಟೆ, ಅಷ್ಟರಲ್ಲಿ ಹುಡುಗನೊಬ್ಬ ಬಂದು ಅಕ್ಕ ನಿಮ್ಮ ಬಳಿ ಮಾತನಾಡಬೇಕಂತೆ ಎಂದಿದ್ದಾರೆ. ಪ್ರೇಮ್ ನಿಮಿಷದ ಹಿಂದೆ ನೋಡಿದ್ದ ಹುಡುಗಿಯೇ ಪ್ರೇಮ್ ಬಳಿ ಬಂದು ಟ್ಯೂಷನ್ ಕುರಿತಾಗಿ ಏನೋ ಮಾತನಾಡಿಸಿ ಹೆಸರು ಕೇಳಿ ಹೋಗಿದ್ದಾರೆ. ಆ ಹುಡುಗಿಯೇ ಜ್ಯೋತಿ.

    ಆದರೆ ಜ್ಯೋತಿ ಸಹ ಯಾವುದೋ ಮದುವೆಯಲ್ಲಿ (Wedding) ಪ್ರೇಮ್‌ರನ್ನು ನೋಡಿದ್ದರಂತೆ. ಆ ಹುಡುಗಿಯ ಸಂಬಂಧಿಯೊಬ್ಬರು ಮದುವೆಯಲ್ಲಿ ವಧು-ವರರ ಜೊತೆ ಪ್ರೇಮ್ ತೆಗೆಸಿಕೊಂಡಿದ್ದ ಫೋಟೊ ತೋರಿಸಿ ಈ ಹುಡುಗನನ್ನು ನಾನು ಮದುವೆಯಾಗುತ್ತೀನಿ ಎಂದಿದ್ದರಂತೆ ಜ್ಯೋತಿ ಬಳಿ, ಆ ಫೋಟೊ ನೋಡಿದ ಜ್ಯೋತಿ ಸಹ ಪ್ರೇಮ್‌ರನ್ನು ಇಷ್ಟಪಟ್ಟಿದ್ದಾರೆ. ಹೀಗೆ ಪ್ರಾವಿಜನ್ ಸ್ಟೋರ್ ಬಳಿ ಆದ ಪರಿಚಯ ಹೀಗೆ ಮುಂದುವರೆದಿದೆ. ಆಗೊಮ್ಮೆ ಪ್ರೇಮ್, ಜ್ಯೋತಿಗೆ ಪತ್ರವೊಂದನ್ನು ಬರೆದು ನನಗೆ ಜೀವನದಲ್ಲಿ ಬಹಳ ಜವಾಬ್ದಾರಿಗಳಿವೆ, ನಾನು ತಂಗಿಯರ ಮದುವೆ ಮಾಡಬೇಕು ನಾನು ಇನ್ನೊಬ್ಬರೊಟ್ಟಿಗೆ ಪ್ರೀತಿಯಲ್ಲಿದ್ದೀನಿ ನನ್ನನ್ನು ಮರೆತುಬಿಡು ಎಂದೆಲ್ಲ ಪತ್ರದಲ್ಲಿ ಬರೆದಿದ್ದರಂತೆ. ಆದರೆ ಅದರಲ್ಲಿ ಬಹಳ ತಪ್ಪುಗಳಿದ್ದಿದ್ದನ್ನು ಕಂಡು ಆ ತಪ್ಪುಗಳನ್ನೆಲ್ಲ ರೌಂಡ್ ಹಾಕಿದ್ದರಂತೆ ಜ್ಯೋತಿ. ಅದಾದ ಬಳಿಕ ಇಬ್ಬರೂ ಭೇಟಿಯಾಗಿ ಈಗಲೇ ಪ್ರೀತಿ-ಗೀತಿ ಎಲ್ಲ ಬೇಡ ಇನ್ನೆರಡು ವರ್ಷ ಹೀಗೆ ಗೆಳೆಯರಾಗಿರೋಣ ಆ ನಂತರವೂ ಪ್ರೀತಿ ಉಳಿದಿದ್ದರೆ ಮದುವೆಯಾಗೋಣ ಎಂದುಕೊಂಡಿದ್ದಾರೆ. ಆದರೆ ಆ ಪ್ರಾಮಿಸ್ ಅನ್ನು ಬಹಳ ಬೇಗ ಅವರೇ ಮುರಿಯುವ ಪರಿಸ್ಥಿತಿ ಎದುರಾಗುತ್ತದೆ.

    ಇಬ್ಬರ ಲವ್ ವಿಚಾರ ವಿಷಯ ಜ್ಯೋತಿಯವರ ಮನೆಯವರಿಗೆ ಗೊತ್ತಾಗಿ ಗಂಡು ಹುಡುಕಲು ಆರಂಭಿಸಿದ್ದಾರೆ. ಇದರಿಂದ ಆತಂಕಗೊಂಡ ಜ್ಯೋತಿ ಹಾಗೂ ಪ್ರೇಮ್ ಮನೆಯವರ ವಿರೋಧದ ನಡುವೆ ಮದುವೆ ಆಗಲು ನಿಶ್ಚಯಿಸಿ ಒಂದು ದಿನಾಂಕ ಗುರುತು ಮಾಡಿಕೊಂಡಿದ್ದಾರೆ. ಆದರೆ ಅದೇ ದಿನ ರಾಜ್‌ಕುಮಾರ್ ಅಪಹರಣ ಆದ ಕಾರಣ ಎಲ್ಲವೂ ಸ್ಥಬ್ಧವಾಗಿಬಿಟ್ಟಿದೆ. ಹಾಗಿದ್ದರೂ ಜ್ಯೋತಿ ತಮ್ಮನನ್ನು ಕರೆದುಕೊಂಡು ತಮ್ಮ ವಸ್ತುಗಳನ್ನು ತೆಗೆದುಕೊಂಡು ಮನೆ ಬಿಟ್ಟು ಬಂದುಬಿಟ್ಟರಂತೆ. ಪ್ರೇಮ್ ಸಹ ಗೆಳೆಯರ ಸಹಾಯದಿಂದ ಜ್ಯೋತಿಯವರನ್ನು ಮದುವೆಯೂ ಆಗಿಬಿಟ್ಟಿದ್ದಾರೆ. ಅದಾದ ಬಳಿಕ ಎರಡು ಕುಟುಂಬದವರನ್ನು ಕರೆಸಿ ಅಂದೇ ರಾಜಿ ಮಾಡಿಸಿ ಎಲ್ಲರನ್ನೂ ಒಪ್ಪಿಸಿದ್ದಾರೆ. ಅಳಿಯನ ಕಷ್ಟ ಗಮನಿಸಿ ಜ್ಯೋತಿಯವರ ತಾಯಿ, ಮಗಳು-ಅಳಿಯನಿಗೆ ಅವರ ಮನೆಯಲ್ಲಿಯೇ ಉಳಿದುಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಾರೆ. ಎರಡು ವರ್ಷ ಅತ್ತೆಯ ಮನೆಯಲ್ಲಿಯೇ ಪ್ರೇಮ್ ವಾಸವಿದ್ದರು. ಇದನ್ನೂ ಓದಿ:ಕಾಣೆಯಾಗಿದ್ದ ನಟಿ ರಮ್ಯಾ ಮುದ್ದಿನ ಶ್ವಾನ ಇನ್ನಿಲ್ಲ

     

    View this post on Instagram

     

    A post shared by Jyothi Prem (@jyothiprem1008)

    ತನ್ನ ಉದ್ದಿಮೆಯಲ್ಲಿ ಬಹಳ ನಷ್ಟವಾಗಿ ಸುಮಾರು ಏಳೆಂಟು ಲಕ್ಷ ಸಾಲ ಮಾಡಿಬಿಟ್ಟರಂತೆ ಪ್ರೇಮ್. ಆಗ ಜ್ಯೋತಿ ಕೆಲಸಕ್ಕೆ ಹೋಗುತ್ತಿದ್ದರಂತೆ. ವರಮಹಾಲಕ್ಷ್ಮಿ ಹಬ್ಬದ ದಿನ ತಮಗೆ ಸಾಲ ಕೊಟ್ಟಿದ್ದ ಗೆಳೆಯ ಸಾಲವನ್ನು ತೀರಿಸುವಂತೆ ಒತ್ತಾಯಿಸಿದ್ದಾನೆ. ಆಗ ಪ್ರೇಮ್ ಪತ್ನಿಯ ಕಚೇರಿ ಬಳಿ ಹೋಗಿ ಪರಿಸ್ಥಿತಿ ವಿವರಿಸಿದ್ದಾರೆ. ಆಗ ಜ್ಯೋತಿ ತಮ್ಮ ಚಿನ್ನದ ತಾಳ ಬಿಚ್ಚಿಕೊಟ್ಟುಬಿಟ್ಟರಂತೆ. ಆ ದಿನ ನನ್ನ ಜೀವನದ ಅತ್ಯಂತ ಕೆಟ್ಟ ದಿನ ಎಂದು ಪ್ರೇಮ್ ಕಣ್ಣೀರು ಹಾಕಿದರು. ನಾನು ಸತ್ತು ಹೋಗಬಾರದ ಎಂದು ಎನಿಸಿತು ನನಗೆ. ಆ ದಿನ ನನ್ನ ಜೀವನದಲ್ಲಿ ಮತ್ತೆಂದೂ ಬರಬಾರದು ಎಂದರು ಪ್ರೇಮ್. ಆದರೆ ಆ ಸಂಕಷ್ಟದ ಸಮಯದಲ್ಲಿ, ಅದೂ ವರಮಹಾಲಕ್ಷ್ಮಿ ಹಬ್ಬದ ದಿನ ತಾಳಿ ನೀಡಿದ ಪತ್ನಿ ನನಗೆ ಎರಡನೇ ತಾಯಿಯಂತೆ ಎಂದರು. ಸಾಕಷ್ಟು ಎದುರಿಸಿದ ಬಳಿಕ ಪ್ರೇಮ್‌ಗೆ ನಟನೆ ಕೈಹಿಡಿಯಿತು. ಚಿತ್ರರಂಗದಲ್ಲಿ ಲವ್ಲಿ ಸ್ಟಾರ್ ಪ್ರೇಮ್ ಆಗಿ ಮಿಂಚ್ತಿದ್ದಾರೆ.

  • ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಈ ವಾರಾಂತ್ಯದ ಅತಿಥಿ ಯಾರು?

    ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಈ ವಾರಾಂತ್ಯದ ಅತಿಥಿ ಯಾರು?

    ಕಿರುತೆರೆಯ ಜನಪ್ರಿಯ ಶೋ Weekend With Ramesh ಕಾರ್ಯಕ್ರಮದಲ್ಲಿ ಈಗಾಗಲೇ ರಮ್ಯಾ, ಪ್ರಭುದೇವ, ಡಾಲಿ, ಡಾ.ಮಂಜುನಾಥ್, ಸಿಹಿ ಕಹಿ ಚಂದ್ರು, ಮಂಡ್ಯ ರಮೇಶ್ ಹೀಗೆ ಹಲವು ಸಾಧಕರ ಸಾಧನೆಯ ಕಥೆಯನ್ನ ಶೋ ಮೂಲಕ ಬಿಚ್ಚಿಟ್ಟಿದ್ದಾರೆ. ಇದೀಗ ಈ ವಾರಾಂತ್ಯ ಯಾವ ನಟ ಅತಿಥಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಕ್ಕೆ ತೆರೆ ಬಿದ್ದಿದೆ.

    ನಟ ರಮೇಶ್ ಅರವಿಂದ್ (Ramesh Aravind) ಅವರು ಕಳೆದ ನಾಲ್ಕು ಸೀಸನ್‌ಗಳನ್ನ ಅದ್ಭುತ ನಿರೂಪಣೆಯ ಮೂಲಕ ಮೋಡಿ ಮಾಡಿದ್ದಾರೆ. ನೂರಾರು ಸಾಧಕರ ಕಥೆಯನ್ನ ಸಾರಿ ಹೇಳಿದ್ದಾರೆ. ವೀಕೆಂಡ್ ವಿತ್ ರಮೇಶ್ ಸೀಸನ್ 5 ಕಾರ್ಯಕ್ರಮ ಕೂಡ ಸದ್ದು ಮಾಡ್ತಿದೆ. ಈ ವಾರ ಲವ್ಲಿ ಸ್ಟಾರ್ ಪ್ರೇಮ್ (Lovely Star prem) ಅವರು ಸಾಧಕರ ಸೀಟ್‌ನ ಅಲಂಕರಿಸಿದ್ದಾರೆ. ಇದನ್ನೂ ಓದಿ:ಎಆರ್ ರೆಹಮಾನ್ ಸಂಗೀತ ಕಾರ್ಯಕ್ರಮಕ್ಕೆ ಬ್ರೇಕ್ ಹಾಕಿದ ಪುಣೆ ಪೊಲೀಸರು

    2004ರಲ್ಲಿ ‘ಪ್ರಾಣ’ (Prana Film) ಸಿನಿಮಾದ ಮೂಲಕ ಲವ್ಲಿ ಸ್ಟಾರ್ ಪ್ರೇಮ್ ಸ್ಯಾಂಡಲ್‌ವುಡ್‌ಗೆ ಹೀರೋ ಆಗಿ ಎಂಟ್ರ ಕೊಟ್ಟರು. ಯಾವುದೇ ಸಿನಿಮಾ ಬ್ಯಾಕ್ ಗ್ರೌಂಡ್ ಇಲ್ಲದೇ ಜೀರೋ ಟು ಹೀರೋ ಆಗಿ ಜನರ ಮನ ಗೆದ್ದರು. ನೆನಪಿರಲಿ, ಜೊತೆ ಜೊತೆಯಲಿ, ಚೌಕ, ಪಲ್ಲಕ್ಕಿ, ಚಾರ್‌ಮಿನಾರ್ ಹೀಗೆ ಸಾಕಷ್ಟು ಹಿಟ್ ಚಿತ್ರಗಳ ಮೂಲಕ ಸೈ ಎನಿಸಿಕೊಂಡರು.

    ಸೋಲು- ಗೆಲುವು ಸಮಾನವಾಗಿ ಎದುರಿಸಿ ಚಿತ್ರರಂಗದಲ್ಲಿ ಗಟ್ಟಿ ನೆಲೆ ಗಿಟ್ಟಿಸಿಕೊಂಡರು. ಈ ವಾರಾಂತ್ಯ ತನ್ನ ಸಾಧನೆಯ ಕಥೆಯನ್ನ ಸಾಧಕರ ಸೀಟ್‌ನಲ್ಲಿ ಕುಳಿತು ಮುಕ್ತವಾಗಿ ನಟ ಪ್ರೇಮ್ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಹಂಚಿಕೊಳ್ಳಲಿದ್ದಾರೆ.

  • 60ರ ದಶಕದ ಕಥೆ ಹೇಳಲು ರೆಡಿಯಾದ ನೆನಪಿರಲಿ ಪ್ರೇಮ್

    60ರ ದಶಕದ ಕಥೆ ಹೇಳಲು ರೆಡಿಯಾದ ನೆನಪಿರಲಿ ಪ್ರೇಮ್

    ವ್ಲಿ ಸ್ಟಾರ್ ಪ್ರೇಮ್ (Lovely Star Prem) ಅವರು ಏ.18ರಂದು ತಮ್ಮ 47ನೇ ವರ್ಷದ ಹುಟ್ಟುಹಬ್ಬದಂದು ಹೊಸ ಸಿನಿಮಾದ ಪೋಸ್ಟರ್ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದರು. ಪ್ರೇಮ್ ನಟನೆಯ 27ನೇ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ಬರಲು ತಯಾರಿ ಮಾಡ್ತಿದ್ದಾರೆ. ಈ ಕುರಿತ ಅಪ್‌ಡೇಟ್ ಇಲ್ಲಿದೆ ನೋಡಿ.

    ನೆನಪಿರಲಿ ಪ್ರೇಮ್ ಅವರು ಕೊನೆಯದಾಗಿ ‘ಪ್ರೇಮಂ ಪೂಜ್ಯಂ’ (Premam Pujyam) ಸಿನಿಮಾದಲ್ಲಿ ನಟಿಸಿದ್ದರು. ಬಳಿಕ ಕಿರುತೆರೆಯ ಶೋವೊಂದರಲ್ಲಿ ಜಡ್ಜ್ ಆಗಿ ಪ್ರೇಮ್ ಕಾಣಿಸಿಕೊಂಡಿದ್ದರು. ಈಗ ಮತ್ತೆ ಬೆಳ್ಳಿಪರದೆಯಲ್ಲಿ ಕೋಪಿಷ್ಠ ಯುವಕನ ಪಾತ್ರದಲ್ಲಿ ನಟಿಸಲು ಸಜ್ಜಾಗಿದ್ದಾರೆ. ಇದನ್ನೂ ಓದಿ:ರಾಕಿ ಭಾಯ್ ಲೆಜೆಂಡ್ ಎಂದು ಹಾಡಿ ಹೊಗಳಿದ ಪೂಜಾ ಹೆಗ್ಡೆ

     

    View this post on Instagram

     

    A post shared by Prem Nenapirali (@premnenapirali)

    ‘ಅಂದೊಂದಿತ್ತು ಕಾಲ’ ಚಿತ್ರದ ನಿರ್ದೇಶಕ ಕೀರ್ತಿ (Director Keerthi) ಅವರು ಲವ್ಲಿ ಸ್ಟಾರ್ ಪ್ರೇಮ್‌ಗೆ ಆ್ಯಕ್ಷನ್ ಕಟ್ ಹೇಳಲು ರೆಡಿಯಾಗಿದ್ದಾರೆ. ಇಡೀ ಸಿನಿಮಾ ಉತ್ತರ ಕರ್ನಾಟಕದಲ್ಲಿ ನಡೆಯಲಿದ್ದು, ಭರ್ಜರಿ ಆ್ಯಕ್ಷನ್ ಸೀನ್ ಇದೆ. 60-80ರ ದಶಕದ ಕಥೆ ಇದಾಗಿದ್ದು, ಉತ್ತರ ಕರ್ನಾಟಕ ಶೈಲಿಯಲ್ಲಿಯೇ ಮೂಡಿ ಬರಲಿದೆ. ಎಂದೂ ಕಾಣಿಸಿಕೊಂಡಿರದ ರೋಲ್‌ನಲ್ಲಿ ಪ್ರೇಮ್ ಕಾಣಿಸಿಕೊಳ್ತಿದ್ದಾರೆ.

     

    View this post on Instagram

     

    A post shared by Prem Nenapirali (@premnenapirali)

    ಒಬ್ಬ ಹಳ್ಳಿಯವ ಕೋಪಿಷ್ಠ ಯುವಕನ ಪಾತ್ರಕ್ಕೆ ಬೇಕಾದ ತಯಾರಿ ಲವ್ಲಿ ಸ್ಟಾರ್ ಪ್ರೇಮ್ ಮಾಡ್ತಿದ್ದಾರೆ. ಸ್ಕ್ರಿಪ್ಟ್ ವರ್ಕ್ ಕೊನೆಯ ಹಂತದಲ್ಲಿದ್ದು, ಹೆಚ್ಚಿನ ವಿವರವನ್ನ ಮುಂದಿನ ದಿನಗಳಲ್ಲಿ ಅಪ್‌ಡೇಟ್ ನೀಡಲಿದೆ ಚಿತ್ರತಂಡ.