Tag: ಲವ್ಲಿನಾ ಬೊರ್ಗೊಹೈನ್

  • Women’s World Boxing Championship: ಭಾರತದ ನಿಖತ್‌, ಲವ್ಲಿನಾ ಚಿನ್ನದ ಪಂಚ್‌

    Women’s World Boxing Championship: ಭಾರತದ ನಿಖತ್‌, ಲವ್ಲಿನಾ ಚಿನ್ನದ ಪಂಚ್‌

    ನವದೆಹಲಿ: ಮಹಿಳೆಯರ ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ (Women’s World Boxing Championship) ನಿಖತ್‌ ಜರೀನ್‌ (Nikhat Zareen), ಲವ್ಲಿನಾ ಬೊರ್ಗೊಹೈನ್ (Lovlina Borgohain) ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟಿದ್ದಾರೆ.

    ನವದೆಹಲಿಯಲ್ಲಿ ನಡೆದ ಮಹಿಳೆಯರ ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ 52 ಕೆ.ಜಿ. ವಿಭಾಗದಲ್ಲಿ ವಿಯೆಟ್ನಾಂನ ಗುಯೆನ್ ಥಿ ಟಾಮ್ ವಿರುದ್ಧ ಭಾರತದ ನಿಖತ್‌ ಜರೀನ್‌ 0-5 ಅಂತರದ ಜಯ ಸಾಧಿಸಿದರು. ಆ ಮೂಲಕ ಎರಡನೇ ಬಾರಿಗೆ ಚಾಂಪಿಯನ್‌ ಎನಿಸಿದರು. ಇದನ್ನೂ ಓದಿ: Women’s World Boxing Championships: ಚಿನ್ನ ಗೆದ್ದು ದಾಖಲೆ ಬರೆದ ನೀತು ಘಂಘಾಸ್

    75 ಕೆಜಿ ವಿಭಾಗದಲ್ಲಿ ಲವ್ಲಿನಾ ಅವರು ಆಸ್ಟ್ರೇಲಿಯಾದ ಕೈಟ್ಲಿನ್ ಪಾರ್ಕರ್ ವಿರುದ್ಧ 5-2 ಅಂತರದಲ್ಲಿ ಗೆದ್ದು ಬೀಗಿದರು.

    ಮೇರಿ ಕೋಮ್‌ ಅವರನ್ನು ಹೊರತುಪಡಿಸಿ ಒಂದಕ್ಕಿಂತ ಹೆಚ್ಚು ಸಲ ಚಾಂಪಿಯನ್‌ ಆದ ಬಾಕ್ಸರ್‌ ಎಂಬ ಖ್ಯಾತಿಯನ್ನು ನಿಖತ್‌ ಗಳಿಸಿದ್ದಾರೆ. ಈ ಹಿಂದೆ ಮೇರಿ ಕೋಮ್‌ ಅವರು ಆರು ಬಾರಿ ವಿಶ್ವ ಚಾಂಪಿಯನ್‌ ಆಗಿದ್ದರು. ಸರಿತಾ ದೇವಿ (2006), ಜೆನ್ನಿ ಆರ್‌.ಎಲ್‌. (2006) ಹಾಗೂ ಲೇಖಾ ಕೆ.ಸಿ. (2006) ಅವರು ಒಂದೊಂದು ಬಾರಿ ಚಾಂಪಿಯನ್‌ ಆಗಿದ್ದರು. ಇದನ್ನೂ ಓದಿ: ಪ್ರಶ್ನೆಪತ್ರಿಕೆಯಲ್ಲಿ ಕೊಹ್ಲಿ ಫೋಟೋ ನೋಡಿ ವಿದ್ಯಾರ್ಥಿಗಳು ಶಾಕ್!

    ನಾನು 2ನೇ ಬಾರಿಗೆ ವಿಶ್ವ ಚಾಂಪಿಯನ್ ಆದದ್ದು ಖುಷಿ ತಂದಿದೆ. ನನಗೆ ಬೆಂಬಲ ನೀಡಿದ ಎಲ್ಲರಿಗೂ ನಾನು ಆಭಾರಿಯಾಗಿದ್ದೇನೆ. ಈ ಪದಕ ನನ್ನ ದೇಶ ಭಾರತಕ್ಕೆ. ಇದು ಕಠಿಣ ಸ್ಪರ್ಧೆಯಾಗಿತ್ತು. ಆದರೆ ಕೊನೆಯಲ್ಲಿ ನಾನು ಚಿನ್ನದ ಪದಕವನ್ನು ಗೆದ್ದೆ ಎಂದು ನಿಖತ್‌ ಖುಷಿ ಹಂಚಿಕೊಂಡಿದ್ದಾರೆ.

  • ಲವ್ಲಿನಾ ಕೋಚ್‌ಗೆ ಕಾಮನ್ ವೆಲ್ತ್ ಗೇಮ್ಸ್ ಪ್ರವೇಶಿಸಲು ಮಾನ್ಯತೆ

    ಲವ್ಲಿನಾ ಕೋಚ್‌ಗೆ ಕಾಮನ್ ವೆಲ್ತ್ ಗೇಮ್ಸ್ ಪ್ರವೇಶಿಸಲು ಮಾನ್ಯತೆ

    ಮುಂಬೈ: 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್ ಅವರ ಕೋಚ್ ಸಂಧ್ಯಾ ಗುರುಂಗ್ ಅವರಿಗೆ ಕಾಮನ್‌ವೆಲ್ತ್ ಗೇಮ್ಸ್-2022 ಕ್ರೀಡಾಕೂಟ ಪ್ರವೇಶಿಸಲು ಮಾನ್ಯತೆ ನೀಡಲಾಗಿದೆ.

    `ನಾನು ಕಾಮನ್‌ವೆಲ್ತ್ ಗೇಮ್ಸ್-2022ಗೆ ಮಾನ್ಯತೆ ಪಡೆದುಕೊಂಡಿದ್ದೇನೆ’ ಎಂದು ಲವ್ಲಿನಾ ಬಾರ್ಗೊಹೈನ್ ಅವರ ಕೋಚ್ ಸಂಧ್ಯಾ ಗುರುಂಗ್ ಹೇಳಿದ್ದಾರೆ. ಇದನ್ನೂ ಓದಿ: ಪ್ಲೇಯಿಂಗ್ 11ನಲ್ಲಿ ಹೆಸರಿಲ್ಲ ಆದ್ರೂ ಬೌಲಿಂಗ್ ಮಾಡಿದ ಪ್ರಸಿದ್ಧ್ ಕೃಷ್ಣ!

    ನನ್ನ ಕೋಚ್ (ತರಬೇತುದಾರ)ಗೆ ಮಾನ್ಯತೆ ಇಲ್ಲದಿರುವುದರಿಂದ ನನಗೆ ಮಾನಸಿಕ ಕಿರುಕುಳ ಎದುರಾಗಿದೆ. ನನ್ನ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟಕ್ಕೂ ಅಡ್ಡಿಯಾಗುತ್ತಿದೆ ಎಂದು ಲವ್ಲಿನಾ ಟ್ವೀಟ್ ಮೂಲಕ ಗಂಭೀರ ಆರೋಪ ಮಾಡಿದ್ದರು.

    ಕ್ರೀಡಾ ಸಚಿವಾಲಯವು ಪರಿಸ್ಥಿತಿಯನ್ನು ಗಮನಿಸಿ ಭಾರತೀಯ ಒಲಿಂಪಿಕ್ಸ್ ಅಸೋಸಿಯೇಷನ್ ಲವ್ಲಿನಾ ಅವರ ಕೋಚ್‌ಗೆ ಮಾನ್ಯತೆ ನೀಡಲು ತಕ್ಷಣವೇ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿತ್ತು. ಇದನ್ನೂ ಓದಿ: ಗಂಡನ ಬೆತ್ತಲೆ ಫೋಟೋ ಶೂಟ್ ಮಾಡಿದ ಖ್ಯಾತ ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ

    https://twitter.com/LovlinaBorgohai/status/1551520397832720385?ref_src=twsrc%5Etfw%7Ctwcamp%5Etweetembed%7Ctwterm%5E1551520397832720385%7Ctwgr%5E%7Ctwcon%5Es1_&ref_url=https%3A%2F%2Fzeenews.india.com%2Fother-sports%2Flovlina-borgohains-coach-sandhya-gurung-gets-accreditation-for-cwg-2022-after-boxer-makes-harassment-claims-2489788.html

    ಯಾರಿದು ಲವ್ಲಿನಾ?
    ಭಾರತೀಯ ಮಹಿಳಾ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್ 2018ರ ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಮತ್ತು 2019ರ ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ಗಳಲ್ಲಿ ಕಂಚಿನ ಪದಕಗಳನ್ನ ಗೆದ್ದಿದ್ದಾರೆ. 2020ರ ಟೋಕಿಯೊ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಭಾರತದ ಕೀರ್ತಿ ಪತಾಕೆ ಹಾರಿಸಿದ್ದಾರೆ. ಬಾಕ್ಸರ್ ವಿಜೇಂದರ್ ಕುಮಾರ್ (2008) ಮತ್ತು ಎಂ.ಸಿ.ಮೇರಿ ಕೋಮ್ (2012) ನಂತರ ಬಾಕ್ಸಿಂಗ್‌ನಲ್ಲಿ ಒಲಿಂಪಿಕ್ಸ್ ಪದಕ ಗೆದ್ದ 3ನೇ ಭಾರತೀಯ ಮಹಿಳೆ ಎಂಬ ಹೆಗ್ಗಳಿಗೆಯನ್ನೂ ಹೊಂದಿದ್ದಾರೆ.

    Live Tv
    [brid partner=56869869 player=32851 video=960834 autoplay=true]