Tag: ಲತಾಮಂಗೇಶ್ಕರ್

  • ಲತಾಮಂಗೇಶ್ಕರ್ ಆಸ್ಪತ್ರೆಗೆ ದಾಖಲು – ಆರೋಗ್ಯ ಸ್ಥಿತಿ ಗಂಭೀರ

    ಲತಾಮಂಗೇಶ್ಕರ್ ಆಸ್ಪತ್ರೆಗೆ ದಾಖಲು – ಆರೋಗ್ಯ ಸ್ಥಿತಿ ಗಂಭೀರ

    ಮುಂಬೈ: ಖ್ಯಾತ ಗಾಯಕಿ ಲತಾಮಂಗೇಶ್ಕರ್ ಅವರು ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದು, ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ಸೆ.28ಕ್ಕೆ 90ನೇ ವರ್ಷ ವಸಂತಕ್ಕೆ ಕಾಲಿಟ್ಟಿದ್ದ ಲತಾಮಂಗೇಶ್ಕರ್ ಅವರಿಗೆ ಇಂದು ನಸುಕಿನ ಜಾವ 2 ಗಂಟೆ ಸಮಯದಲ್ಲಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು, ಕೂಡಲೇ ಕುಟುಂಸ್ಥರು ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸದ್ಯ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿರುವುದಾಗಿ ವೈದ್ಯರು ತಿಳಿಸಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.

    ಹಿಂದಿ ಭಾಷೆಯೊಂದರಲ್ಲೇ ಸುಮಾರು 1 ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ಲತಾಮಂಗೇಶ್ವರ್ ಅವರು ಧ್ವನಿ ನೀಡಿದ್ದು, ಭಾರತದ ಅತ್ಯುನ್ನತ ‘ಭಾರತ ರತ್ನ’ ಪ್ರಶಸ್ತಿಯನ್ನು 2001 ರಲ್ಲಿ ಪಡೆದಿದ್ದಾರೆ. ಒಟ್ಟಾರೆ ವಿವಿಧ ಭಾಷೆಯಲ್ಲಿ ಲತಾಮಂಗೇಶ್ಕರ್ ಅವರು 36 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಅವರಿಗೆ 3 ರಾಷ್ಟ್ರೀಯ ಪ್ರಶಸ್ತಿ, 6 ಫಿಲ್ಮ ಫೇರ್ ಪ್ರಶಸ್ತಿ, ಪದ್ಮವಿಭೂಷಣ್, ಪದ್ಮಭೂಷಣ್, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗಳು ಲಭಿಸಿದೆ.

    ಲತಾ ಮಂಗೇಶ್ಕರ್ ಅವರ ತಂದೆ ದೀನಾನಾಥ್ ಮಂಗೇಶ್ಕರ್ ಅವರು ಕೂಡ ಗಾಯಕರಾಗಿದ್ದು, ತಾಯಿ ಅವರು ಕೂಡ ಸಂಗೀತದಲ್ಲಿ ಆಸಕ್ತಿ ಹೊಂದಿದ್ದರು. ಪರಿಣಾಮ ಅವರಿಗೆ ಗಾಯನ ಸಹಜವಾಗಿ ಒಲಿದು ಬಂದಿತ್ತು. 60 ದಶಕದಲ್ಲಿ ಲತಾಮಂಗೇಶ್ಕರ್ ಅವರು ಯಶಸ್ಸಿನ ಉತ್ತುಂಗದಲ್ಲಿದ್ದರು. ಇವರು ಹಾಡಿರುವ ಹಲವು ಡ್ಯುಯೆಟ್ ಹಾಡುಗಳು ಇಂದಿಗೂ ಸೂಪರ್ ಹಿಟ್ ಸಾಲಿನಲ್ಲಿ ನಿಂತಿವೆ.

  • ನಿರ್ದೇಶಕ ಕರಣ್ ಜೋಹರ್ ವಿರುದ್ಧ ಲತಾ ಮಂಗೇಶ್ಕರ್ ಕುಟುಂಬ ಅಸಮಾಧಾನ

    ನಿರ್ದೇಶಕ ಕರಣ್ ಜೋಹರ್ ವಿರುದ್ಧ ಲತಾ ಮಂಗೇಶ್ಕರ್ ಕುಟುಂಬ ಅಸಮಾಧಾನ

    ಮುಂಬೈ: ಕರಣ್ ಜೋಹರ್ ನಿರ್ದೇಶನದ ಲಸ್ಟ್ ಸ್ಟೋರಿಸ್ ಕಿರುಚಿತ್ರದಲ್ಲಿ ಕಬಿ ಖುಷಿ ಕಬಿ ಗಮ್ ಚಿತ್ರದ ಹಾಡನ್ನು ಬಳಸಿಕೊಂಡಿದ್ದಕ್ಕೆ ಲತಾಮಂಗೇಶ್ಕರ್ ಅವರ ಕುಟುಂಬದ ಸದಸ್ಯರು ಅಸಮಾಧಾನ ಹೊರಹಾಕಿದ್ದಾರೆ.

    ಲಸ್ಟ್ ಸ್ಟೋರಿ ಕಿರುಚಿತ್ರದ ನಟಿ ಕೈರಾ ಅಡ್ವಾಣಿ ಕಾಣಿಸಿಕೊಂಡಿದ್ದು, ಹೊಸದಾಗಿ ಮದುವೆಯಾದ ಮಹಿಳೆ ತನ್ನ ಹಸ್ತಗಳಿಂದ ಲೈಂಗಿಕ ತೃಪ್ತಿ ಪಡೆದುಕೊಳ್ಳುತ್ತಾಳೆ. ಈ ದೃಶ್ಯಕ್ಕೆ ಲತಾಮಂಗೇಶ್ಕರ್ ಹಾಡಿರುವ ಕಬಿ ಖುಷಿ ಕಬಿ ಗಮ್ ಹಾಡನ್ನು ಸೇರಿಸಲಾಗಿದೆ. ಈ ದೃಶ್ಯಕ್ಕೆ ಹಾಡನ್ನು ಬಳಸಿದ್ದಕ್ಕೆ ಲತಾ ಮಂಗೇಶ್ಕರ್ ಕುಟುಂಬದವರು ವಿರೋಧ ವ್ಯಕ್ತಪಡೆಸಿದ್ದಾರೆ.

    ಮಧುರ ಸಂಬಂಧ ಸಾರುವ ಹಾಡನ್ನು ಕರಣ್ ಜೋಹರ್ ಅವರು ಇಂತಹ ಮುಜುಗರದ ಸನ್ನಿವೇಶದಲ್ಲಿ ಬಳಕೆ ಮಾಡಿದ್ದು ಯಾಕೆ? ಕಬಿ ಖುಷಿ ಕಬಿ ಗಮ್ ಹಾಡಿನ ಧ್ವನಮುದ್ರಿಸಿಕೊಂಡ ಉದ್ದೇಶ ಈಗ ಈಡೇರಿತು ಅನಿಸುತ್ತದೆ. ತಮ್ಮ ಕನಸಿನ ಹಾಡನ್ನು ದುಃಸ್ವಪ್ನವಾಗಿ ಏಕೆ ತಿರುಗಿಸಿದರು ಎಂದು ಪ್ರಶ್ನಿಸಿ ಲತಾ ಮಂಗೇಶ್ಕರ್ ಕುಟುಂಬದ ಸದಸ್ಯರೊಬ್ಬರು ಕಿಡಿ ಕಾರಿದ್ದಾರೆ.

    ಕಬಿ ಖುಷಿ ಕಬಿ ಗಮ್ ಚಿತ್ರದಲ್ಲಿ ವಿಭಜನೆಯಾದ ಕುಟುಂಬ ಒಂದಾದ ಸಂದರ್ಭದಲ್ಲಿ ಈ ಹಾಡನ್ನು ಬಳಸಲಾಗಿತ್ತು. ಅಲ್ಲದೇ ಚಿತ್ರದ ಅನೇಕ ಸನ್ನಿವೇಶದಲ್ಲಿ ಹಾಡಿನ ಸಂಗೀತ ನೋಡುಗರನ್ನು ಹಿಡಿದಿಡುತ್ತದೆ. ಆದರೆ ಇಂತಹ ಸನ್ನಿವೇಶಕ್ಕೆ ಈ ಹಾಡನ್ನು ಬಳಕ್ಕೆ ಮಾಡಿಕೊಂಡಿದ್ದು, ಲತಾ ಮಂಗೇಶ್ಕರ್ ಅಭಿಮಾನಿಗಳ ಆಕ್ಷೇಪಕ್ಕೆ ಕಾರಣವಾಗಿದೆ.