Tag: ಲಗೋರಿ

  • ನಟ ಸತೀಶ್ ಹತ್ಯೆಯ ಬೆನ್ನಲ್ಲೇ ಇಬ್ಬರು ಬಾಮೈದುನರ ಬಂಧನ

    ನಟ ಸತೀಶ್ ಹತ್ಯೆಯ ಬೆನ್ನಲ್ಲೇ ಇಬ್ಬರು ಬಾಮೈದುನರ ಬಂಧನ

    ಸ್ಯಾಂಡಲ್‌ವುಡ್ ಯುವ ನಟ ಸತೀಶ್ ವಜ್ರ ಅವರನ್ನು ಚಾಕುವಿನಿಂದ ಇರಿದು ಬರ್ಬರ ಹತ್ಯೆ ಮಾಡಿರುವ ಘಟನೆಗೆ ಇದೀಗ ಹೊಸ ಟ್ವಿಸ್ಟ್ ಸಿಕ್ಕಿದೆ. ಸತೀಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ಬಂಧನವಾಗಿದೆ. ಬಾಮೈದರಿಂದಲೇ ಸ್ಯಾಂಡಲ್‌ವುಡ್ ನಟ ಸತೀಶ್ ಹತ್ಯೆಯಾಗಿದೆ.

    ಒಂದಿಷ್ಟು ಶಾರ್ಟ್ ಮೂವಿಯಲ್ಲಿ ಕೆಲಸ ಮಾಡುತ್ತಾ, ಜೊತೆಗೆ `ಲಗೋರಿ’ ಎಂಬ ಚಿತ್ರದಲ್ಲಿ ನಟನಾಗಿ ಬಣ್ಣಹಚ್ಚಿದ ಸತೀಶ್ ವಜ್ರ, ಅವರ ಮನೆಯಲ್ಲಿಯೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ನಿನ್ನೆ ರಾತ್ರಿ ಮನೆಯಲ್ಲಿರುವಾಗ ಆರೋಪಿಗಳಾದ ಸುದರ್ಶನ್ ಹಾಗೂ ನಾಗೇಂದ್ರ ಕೊಲೆ ಮಾಡಿ ಹೋಗಿದ್ದಾರೆ. ಸತೀಶ್‌ ಅವರನ್ನು ಆರ್.ಆರ್ ನಗರದ ನಿವಾಸದಲ್ಲಿ ಹತ್ಯೆ ಮಾಡಲಾಗಿತ್ತು. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಇದೀಗ ಆರ್.ಆರ್ ನಗರದ ಪೊಲೀಸರಿಂದ ಸುದರ್ಶನ್ ಹಾಗೂ ನಾಗೇಂದ್ರ ಬಂಧನವಾಗಿದೆ. ಇದನ್ನೂ ಓದಿ: ಬಾಮೈದನಿಂದಲೇ ಸ್ಯಾಂಡಲ್‌ವುಡ್ ನಟ ಸತೀಶ್ ಬರ್ಬರ ಹತ್ಯೆ?

    ಕೆಲ ತಿಂಗಳ ಹಿಂದಷ್ಟೇ ಓರ್ವ ಯುವತಿಯನ್ನು ಪ್ರೀತಿಸಿ ಸತೀಶ್ ಮದುವೆಯಾಗಿದ್ದ, ಆದರೆ ಮೂರು ತಿಂಗಳ ಹಿಂದಷ್ಟೇ ಸತೀಶ್ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದರು. ತನ್ನ ಅಕ್ಕನಿಗೆ ಭಾವ ಸತೀಶ್‌ ಕಿರುಕುಳ ಕೊಟ್ಟಿದ್ದಾರೆ ಎಂದು ಶಂಕಿಸಿ ಭಾಮೈದನಿಂದಲೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿತ್ತು. ಈ ಬೆನ್ನಲ್ಲೇ ಪೊಲೀಸರು ತನಿಖೆ ನಡೆಸಿದ್ದಾರೆ. ಬಾಮೈದ ಹಾಗೂ ಬಾಮೈದನ ಸಹೋದರ ಸುದರ್ಶನ್ ಹಾಗೂ ನಾಗೇಂದ್ರ ಆರೋಪಿಗಳ ಬಂಧಿಸಿದ್ದಾರೆ.

    Live Tv

  • ಬಾಮೈದನಿಂದಲೇ ಸ್ಯಾಂಡಲ್‌ವುಡ್ ನಟ ಸತೀಶ್ ಬರ್ಬರ ಹತ್ಯೆ?

    ಬಾಮೈದನಿಂದಲೇ ಸ್ಯಾಂಡಲ್‌ವುಡ್ ನಟ ಸತೀಶ್ ಬರ್ಬರ ಹತ್ಯೆ?

    ಸ್ಯಾಂಡಲ್‌ವುಡ್ ಯುವ ನಟ ಸತೀಶ್ ವಜ್ರ ಅವರನ್ನು ಚಾಕುವಿನಿಂದ ಇರಿದು ಬರ್ಬರ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಆರ್.ಆರ್ ನಗರದಲ್ಲಿ ನಡೆದಿದೆ. ಇದೀಗ ಆರ್.ಆರ್ ನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಒಂದಿಷ್ಟು ಶಾರ್ಟ್ ಮೂವಿಯಲ್ಲಿ ಕೆಲಸ ಮಾಡುತ್ತಾ, ಜೊತೆಗೆ `ಲಗೋರಿ’ ಎಂಬ ಚಿತ್ರದಲ್ಲಿ ನಟನಾಗಿ ಬಣ್ಣಹಚ್ಚಿದ ಸತೀಶ್ ವಜ್ರ, ಅವರ ಮನೆಯಲ್ಲಿಯೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ನಿನ್ನೆ ರಾತ್ರಿ ಮನೆಯಲ್ಲಿರುವಾಗ ಕೊಲೆ ಮಾಡಿ ಹೋಗಿರುವ ದುಷ್ಕರ್ಮಿಗಳು,  ಆರ್.ಆರ್ ನಗರದ ನಿವಾಸದಲ್ಲಿ ನಟನ ಹತ್ಯೆ ಮಾಡಲಾಗಿದೆ. ಇದೀಗ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಇದನ್ನೂ ಓದಿ:ನಟಿ ಸಾಯಿ ಪಲ್ಲವಿ ಬಂಧಿಸಿ : ಬಿಜೆಪಿ ಶಾಸಕ ರಾಜಾ ಸಿಂಗ್ ಆಗ್ರಹ

    ಕೆಲ ತಿಂಗಳ ಹಿಂದಷ್ಟೇ ಓರ್ವ ಯುವತಿಯನ್ನು ಪ್ರೀತಿಸಿ ಸತೀಶ್ ಮದುವೆಯಾಗಿದ್ದರು, ಆದರೆ ಮೂರು ತಿಂಗಳ ಹಿಂದಷ್ಟೇ ಸತೀಶ್ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದರು. ತನ್ನ ಅಕ್ಕನಿಗೆ ಸಾವಿಗೆ ಸತೀಶ್‌ ಕಾರಣ ಎಂದು ಶಂಕಿಸಿ ಬಾಮೈದನಿಂದಲೇ ಕೊಲೆ ಮಾಡಿರುವ ಶಂಕೆ ಇದೀಗ ವ್ಯಕ್ತವಾಗಿದೆ.

    Live Tv

  • ಲಗೋರಿ ಆಡಿದ ಸತೀಶ್ ಜಾರಕಿಹೊಳಿ

    ಲಗೋರಿ ಆಡಿದ ಸತೀಶ್ ಜಾರಕಿಹೊಳಿ

    ಬೆಳಗಾವಿ/ಚಿಕ್ಕೋಡಿ: ಉಪ ಚುನಾವಣೆ ಬಳಿಕ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಫುಲ್ ರಿಲ್ಯಾಕ್ಸ್ ಮೂಡ್ ನಲ್ಲಿದ್ದು, ಶಾಲಾ ಮಕ್ಕಳೊಂದಿಗೆ ಲಗೋರಿ ಆಡಿದ್ದಾರೆ.

    ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ತಾವು ಪ್ರತಿನಿಧಿಸುವ ಯಮಕನಮರಡಿ ಕ್ಷೇತ್ರ ವ್ಯಾಪ್ತಿಯ ಮಾವನೂರು ಗ್ರಾಮದ ಸರ್ಕಾರಿ ಪ್ರೌಢ ಶಾಲೆಗೆ ಆಕಸ್ಮಿಕವಾಗಿ ಭೇಟಿ ನೀಡಿದ್ದರು. ಉಪಚುನಾವಣೆಯಲ್ಲಿ ಫೇಲ್ ಆದ್ರೂ ಸತೀಶ್ ಜಾರಕಿಹೊಳಿ ಇಂದು ಕ್ಷೇತ್ರದ ಕಾರ್ಯಕರ್ತರು ಮತ್ತು ಮಕ್ಕಳೊಂದಿಗೆ ಲಗೋರಿ ಆಡಿ ಆಟದಲ್ಲಿ ಸಕ್ಸಸ್ ಆಗಿದ್ದಾರೆ.

    ಗೋಕಾಕ್‍ನ ರಾಜಕೀಯದಲ್ಲಿ ಸಹೋದರ ರಮೇಶ್ ಜಾರಕಿಹೊಳಿ ಅವರಿಗೆ ತೊಡೆ ತಟ್ಟಿ ಇನ್ನೋರ್ವ ಸಹೋದರ ಲಖನ್ ಜಾರಕಿಹೊಳಿ ಅವರನ್ನ ಕಾಂಗ್ರೆಸ್ ನಿಂದ ಕಣಕ್ಕೆ ಇಳಿಸಿದ್ದರು. ಆದ್ರೆ ಲಖನ್ ಜಾರಕಿಹೊಳಿ ಸೋತಿದ್ದರು. ಈ ಹಿಂದೆಯೂ ಉಪ ಚುನಾವಣಾ ಸಂದರ್ಭದಲ್ಲೂ ಸತೀಶ್ ಜಾರಕಿಹೊಳಿ ನದಿಯಲ್ಲಿ ಮಕ್ಕಳ ಜೊತೆ ಮೀನು ಹಿಡಿದು ಫೋಟೋಗಳು ವೈರಲ್ ಆಗಿದ್ದವು.