Tag: ಲಖನ್ ಜಾರಕಿಹೊಳಿ

  • MLC ಲಖನ್ ಜಾರಕಿಹೊಳಿಯನ್ನು ಭೇಟಿಯಾದ ಬಿಜೆಪಿ ರೆಬೆಲ್‌ ಟೀಂ

    MLC ಲಖನ್ ಜಾರಕಿಹೊಳಿಯನ್ನು ಭೇಟಿಯಾದ ಬಿಜೆಪಿ ರೆಬೆಲ್‌ ಟೀಂ

    ಬೆಳಗಾವಿ: ದೇವಿ ದರ್ಶನದ ಹೆಸರಿನಲ್ಲಿ ಪರಿಷತ್‌ ಸದಸ್ಯ ಲಖನ್ ಜಾರಕಿಹೊಳಿ‌ಯವರನ್ನು (Lakhan Jarkiholi) ಬಿಜೆಪಿ ರೆಬೆಲ್ ತಂಡ (BJP Rebel Team) ಭೇಟಿ ಮಾಡಿದೆ.

    ಗೋಕಾಕ್‌ ಗ್ರಾಮ ದೇವಿ ಜಾತ್ರೆಗೆ ಆಗಮಿಸಿದ್ದ ರೆಬೆಲ್ ಟೀಂ ನಾಯಕರು ಲಖನ್ ಜಾರಕಿಹೊಳಿ ನಿವಾಸಕ್ಕೆ ತೆರಳಿ ಅವರನ್ನು ಭೇಟಿ ಮಾಡಿದರು. ಸಹೋದರನ ಮನೆಗೆ ತಮ್ಮ ಸಹೋದ್ಯೋಗಿಗಳನ್ನು ಶಾಸಕ ರಮೇಶ್‌ (Ramesh Jarkiholi) ಕರೆದುಕೊಂಡು ಹೋಗಿ ಭೇಟಿ ಮಾಡಿಸಿದ್ದಾರೆ. ಇದನ್ನೂ ಓದಿ: ಅಂಜನಾದ್ರಿಯಲ್ಲಿ ಮತ್ತೆ ವಿವಾದ ಹೊರಗಿನ ಅರ್ಚಕರಿಂದ ಪೂಜೆ ಮಾಡಿಸಿದ ನೂತನ ಡಿಸಿ ಸುರೇಶ್

    ನೀವು ನಮ್ಮ ತಂಡಕ್ಕೆ ಬರುತ್ತೀರಿ ಎಂಬ ಕಾರಣಕ್ಕೆ ನಮ್ಮನ್ನ ಕರೆದುಕೊಂಡು ಬಂದಿದ್ದಾರೆ ಎಂದು ಲಿಂಬಾವಳಿ ಈ ವೇಳೆ ಚಟಾಕಿ ಹಾರಿಸಿದರು. ಇದಕ್ಕೆ ಲಖನ್ ಜಾರಕಿಹೊಳಿ‌, ನಿಮ್ಮ ತಂಡದಲ್ಲಿ ಇದ್ದೇವೆ. ನಾವು ಸುಮ್ಮನೇ ಹೊರಗಿದ್ದೇವೆ ಎಂದು ಪ್ರತ್ಯುತ್ತರ ನೀಡಿದ್ದಾರೆ. ಇದನ್ನೂ ಓದಿ: ನೆಲಮಂಗಲ ಪೊಲೀಸ್ ಠಾಣೆಗೆ ಹಾಜರಾದ ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ

    ಪರಿಷತ್‌ ಚುನಾವಣೆಯಲ್ಲಿ ಸ್ವತಂತ್ರವಾಗಿ ನಿಂತು ಲಖನ್‌ ಜಾರಕಿಹೊಳಿ ಗೆದ್ದ ಬಗ್ಗೆ ರಮೇಶ್‌ ಜಾರಕಿಜೊಳಿ ಕೊಂಡಾಡಿದ್ದಾರೆ. ಶ್ರೀಮಂತ ಪಾಟೀಲ್, ಮಹೇಶ ಕುಮಟಳ್ಳಿ, ಅರವಿಂದ ಲಿಂಬಾವಳಿ, ಕುಮಾರ್ ಬಂಗಾರಪ್ಪ, ಬಿಪಿ ಹರೀಶ್ ರಾಜಕಾರಣದ ಕುರಿತು ಮಾತನಾಡಿದ್ದಾರೆ.

  • ಕರ್ನಾಟಕ ಪ್ರದೇಶ CD ಕಮಿಟಿ ಅಧ್ಯಕ್ಷ ಡಿಕೆಶಿ: ಲಖನ್ ಕಿಡಿ

    ಕರ್ನಾಟಕ ಪ್ರದೇಶ CD ಕಮಿಟಿ ಅಧ್ಯಕ್ಷ ಡಿಕೆಶಿ: ಲಖನ್ ಕಿಡಿ

    ಬೆಳಗಾವಿ: ಕರ್ನಾಟಕ ಪ್ರದೇಶ ಸಿಡಿ ಕಮಿಟಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಎಂದು ರಮೇಶ್ ಜಾರಕಿಹೊಳಿ (Ramesh Jarkiholi) ಸಹೋದರ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ (Lakhan Jarkiholi) ಕಿಡಿಕಾರಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಡಿ ಪ್ರಕರಣ ಸಿಬಿಐಗೆ (CBI) ವಹಿಸುವಂತೆ ರಮೇಶ್ ಜಾರಕಿಹೊಳಿ ಆಗ್ರಹ ವಿಚಾರಕ್ಕೆ ಪ್ರತಿಕ್ರಿಯಿಸಿ, ರಮೇಶ್ ಜಾರಕಿಹೊಳಿ ವಿರುದ್ಧ ಷಡ್ಯಂತ್ರ ನಡೆದಿದೆ. ಸಿಬಿಐ ತನಿಖೆ ಒಂದೇ ಪರಿಹಾರವಾಗಿದೆ ಎಂದರು.

    ಪರಮೇಶ್ವರ್, ಖರ್ಗೆ, ಸಿದ್ದರಾಮಯ್ಯ ಸಾಹೇಬರು ಇದ್ದಾಗ ಕಾಂಗ್ರೆಸ್ ಬೇರೆ ಇತ್ತು. ಇವರ ಕೈಯಲ್ಲಿ ಬೇರೆ ಇದೆ. ಸಿದ್ದರಾಮಯ್ಯ, ಖರ್ಗೆ ಸಾಹೇಬರು ನಮ್ಮ ಗುರುಗಳು ಅಂತಾ ಒಪ್ಪುತ್ತೇವೆ ಎಂದ ಅವರು, ಈಗ ಸ್ಯಾಂಟ್ರೋ ರವಿ ಅಂತಾ ಏನು ತೋರಿಸುತ್ತಿದ್ದಾರಲ್ಲ. ಅಲ್ಟೋ 800ನಿಂದ ಪ್ರಾರಂಭಿಸಿ ಬಿಎಂಡಬ್ಲ್ಯೂ ಎ‌ಕ್ಸ್‌ಯುವಿವರೆಗಿನ ಕಾರು ಇದೆ. ಅವರ ಬಗ್ಗೆ ಕಾಂಗ್ರೆಸ್‍ನಲ್ಲಿ ಯಾರೂ ಮಾತನಾಡಲ್ಲ. ಎಲ್ಲರ ಸಿಡಿ ಇವೆ ಎಂದು ತಿಳಿಸಿದರು.

    ಬೆಳಗಾವಿಯಲ್ಲಿ ಸಿಡಿ ಫ್ಯಾಕ್ಟರಿ ಸ್ಟಾರ್ಟ್ ಆಗಿ ಕನಕಪುರದಲ್ಲಿ ರಿಲೀಸ್ ಆಗಿದೆ. ಓಪನ್ ಆಗಿ ಹೇಳಿದ್ರೆ ನಾನು ಆ ಹೆಣ್ಣುಮಗಳು ಈ ಮಗಳು ಅಂತಾರೆ. ಒಂದು ವರ್ಷದಿಂದ ಸಿಬಿಐಗೆ ಕೊಡಬೇಕೆಂಬ ಒತ್ತಾಯ ಇದೆ. ಸಾಕಷ್ಟು ಜನ ಇದರಲ್ಲಿ ನೊಂದು ಬೆಂದು ಬೇಸತ್ತು ಹೋಗಿದ್ದಾರೆ. ಸಿಬಿಐ ತನಿಖೆ ಆಗಬೇಕು. ನಮಗೆ ಜನ ಬೆಂಬಲ ಇದೆ. ಇಂತಹ ನೂರು ಸಿಡಿ ಬಂದರೂ ಹೆದರಲ್ಲ ಎಂದರು. ಇದನ್ನೂ ಓದಿ: ಕುವೈತ್‍ನಲ್ಲಿ ಗೃಹ ಬಂಧನದಲ್ಲಿದ್ದ ಮಹಿಳೆ ಕೊನೆಗೂ ಬಂಧ ಮುಕ್ತ- ಕೊಡಗು ಜಿಲ್ಲಾಡಳಿತದ ಪ್ರಯತ್ನ ಯಶಸ್ವಿ

    ಒಂಟಿತೋಳ ಅಂದ್ರು ಒಂಟಿತೋಳ ಏನ್ ಮಾಡಿತು. ಕಾಂಗ್ರೆಸ್ ಸರ್ಕಾರ ಬೀಳಲು ಬೆಳಗಾವಿಯವರೇ ಕಾರಣರಾಗಿದ್ದಾರೆ. ನಾವು ಸಿಂಪಲ್ ಆಗಿಯೇ ಇರ್ತೀವಿ, ಜನ ನಮ್ಮ ಜೊತೆ ಇರ್ತಾರೆ. ವಿಷಕನ್ಯೆ, ಮಟಾಷ್ ಲೆಗ್, ರಕ್ತ ಕಣ್ಣೀರು ಅಂತಾ ಜನ ಮಾತನಾಡ್ತಾರೆ. ಮಟಾಷ್ ಲೆಗ್ ಅಂದ್ರೆ ಕುಮಾರಸ್ವಾಮಿ ಸರ್ಕಾರ ಹೋಯ್ತುಣ್ಣ, ಸಮ್ಮಿಶ್ರ ಸರ್ಕಾರ ಆಯ್ತು. ಆಮೇಲೆ ಇದ್ದಿದ್ದು ರಕ್ತ ಕಣ್ಣೀರು ಎಂದು ಪರೋಕ್ಷವಾಗಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧವೂ ಲಖನ್ ಜಾರಕಿಹೊಳಿ ಗುಡುಗಿದರು. ಇದನ್ನೂ ಓದಿ: ವಿಶಾಖಪಟ್ಟಣಂ ಆಂಧ್ರಪ್ರದೇಶದ ಹೊಸ ರಾಜಧಾನಿ: ಜಗನ್ ಮೋಹನ ರೆಡ್ಡಿ ಘೋಷಣೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನಾನು ಜನರಿಗಾಗಿ ಇದ್ರೆ, ಪ್ರಚಾರಕ್ಕೆ ಕೆಲವರು ಇರುತ್ತಾರೆ: ಹೆಬ್ಬಾಳ್ಕರ್ ವಿರುದ್ಧ ಲಖನ್ ವ್ಯಂಗ್ಯ

    ನಾನು ಜನರಿಗಾಗಿ ಇದ್ರೆ, ಪ್ರಚಾರಕ್ಕೆ ಕೆಲವರು ಇರುತ್ತಾರೆ: ಹೆಬ್ಬಾಳ್ಕರ್ ವಿರುದ್ಧ ಲಖನ್ ವ್ಯಂಗ್ಯ

    ಬೆಳಗಾವಿ: ಮಂತಾಂತರ ನಿಷೇಧ ಕಾಯ್ದೆ ಪರಿಷತ್‍ನಲ್ಲಿ ಮಂಡನೆಯಾಗಿಲ್ಲ. ಮಂಡನೆಯಾದ ಬಳಿಕ ಯಾರಿಗೆ ಬೆಂಬಲಿಸಬೇಕು ಎಂದು ನಿರ್ಧರಿಸುತ್ತೇನೆ ಎಂದು ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಹೇಳಿದರು.

    ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನೀಗ ಪಕ್ಷೇತರ ಪರಿಷತ್ ಸದಸ್ಯನಾಗಿದ್ದೇನೆ. ಹಾಗೇ ಇರುತ್ತೇನೆ. ವಿಷಯಾಧಾರಿತವಾಗಿ ನಾನು ಬಿಜೆಪಿಗೆ ಬೆಂಬಲ ಸೂಚಿಸುತ್ತೇನೆ. ಪರಿಷತ್ ನಲ್ಲಿ ಬಿಲ್ ಮಂಡನೆ ಆಗಲಿ, ನಂತರ ಈ ಬಗ್ಗೆ ನೋಡೋಣ. ಈ ಸಂಬಂಧ ನನ್ನನ್ನು ಬಿಜೆಪಿ – ಕಾಂಗ್ರೆಸ್ ನಾಯಕರು ಸಂಪರ್ಕಿಸಿಲ್ಲ. ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಜಿ.ಪರಮೇಶ್ವರ್ ನನ್ನ ಗುರುಗಳು ಎಂದರು. ಇದನ್ನೂ ಓದಿ: ಮಕ್ಕಳ ಹೃದಯ ಚಿಕಿತ್ಸೆಗೆ ನೆರವಾದ ಟಾಲಿವುಡ್ ಹೃದಯವಂತ ಪ್ರಿನ್ಸ್ 

    ಬೆಳಗಾವಿ ನಗರ, ಗ್ರಾಮೀಣ ಕ್ಷೇತ್ರದಲ್ಲಿ ಪ್ರವಾಸದ ವಿಚಾರವಾಗಿ ಮಾತನಾಡಿದ ಅವರು, ನಾನು ಜನರಿಗಾಗಿ, ಅವರ ಸೇವೆಗಾಗಿ ಕೆಲಸ ಮಾಡುತ್ತಿದ್ದೇನೆ. ಆದರೆ ಕೆಲವರು ಪ್ರಚಾರಕ್ಕೆ ಮಾತ್ರ ಕೆಲಸವನ್ನು ಮಾಡುತ್ತಾರೆ ಎಂದು ಪರೋಕ್ಷವಾಗಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಲಖನ್ ವ್ಯಂಗ್ಯವಾಡಿದರು.

    ಮತಾಂತರ ಕುರಿತು ಸಿದ್ದರಾಮಯ್ಯ ಹೇಳಿಕೆ ಕುರಿತು ಮಾತನಾಡಿದ ಅವರು, ಮತಾಂತರ ನಿಷೇಧ ಕಾಯ್ದೆಗೆ ಬೆಂಬಲಿಸಬೇಡಿ ಎಂದು ಸಿದ್ದರಾಮಯ್ಯ ಹೇಳಿದರೆ ನೋಡೋಣ. ಕಾಂಗ್ರೆಸ್ಸಿನಲ್ಲಿ ಕೆಲ ಸ್ವಯಂಘೋಷಿತ ನಾಯಕರಿದ್ದಾರೆ. ಅಂಥ ನಾಯಕರಿಂದಲೇ ಕಾಂಗ್ರೆಸ್ ಬೆಂಬಲಿಸಲು ವಿಚಾರ ಮಾಡಬೇಕಿದೆ ಎಂದು ಪರೋಕ್ಷವಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಲಖನ್ ಪರೋಕ್ಷ ವಾಗ್ದಾಳಿ ನಡೆಸಿದರು.

    ಸಚಿವ ಸಂಪುಟ ವಿಸ್ತರಣೆ ವೇಳೆ ರಮೇಶ್ ಜಾರಕಿಹೊಳಿ ಪರಿಗಣನೆ ವಿಚಾರಕ್ಕೆ, ರಮೇಶ್ ಜಾರಕಿಹೊಳಿ ಸಂಪುಟ ಸೇರುತ್ತಾರೋ? ಇಲ್ಲವೋ ನನಗೆ ಗೊತ್ತಿಲ್ಲ. ಬಿಜೆಪಿ ಸರ್ಕಾರ ರಚನೆಯಲ್ಲಿ ರಮೇಶ್ ಜಾರಕಿಹೊಳಿ ಪಾತ್ರ ಬಹಳಷ್ಟಿದೆ. ರಮೇಶ್ ಜಾರಕಿಹೊಳಿಗೆ ಬಿಜೆಪಿ ಹೈಕಮಾಂಡ್ ಸೂಕ್ತ ಸ್ಥಾನಮಾನ ನೀಡುವ ಭರವಸೆ ಇದೆ ಎಂದರು. ಇದನ್ನೂ ಓದಿ: ದೇಶ ದ್ರೋಹಿಗಳಂದ್ರೆ ಕಾಂಗ್ರೆಸ್ಸಿಗರು, ಕಾಂಗ್ರೆಸ್ ಅಂದ್ರೆನೆ ದೇಶ ದ್ರೋಹ: ಚೈತ್ರಾ ಕುಂದಾಪುರ

  • ಸಿದ್ದರಾಮಯ್ಯ ಒಬ್ರೇ ಕಾಂಗ್ರೆಸ್ ನಾಯಕರು, ಉಳಿದವರು ಸ್ವಯಂಘೋಷಿತ ನಾಯಕರು: ಲಖನ್ ಜಾರಕಿಹೊಳಿ

    ಸಿದ್ದರಾಮಯ್ಯ ಒಬ್ರೇ ಕಾಂಗ್ರೆಸ್ ನಾಯಕರು, ಉಳಿದವರು ಸ್ವಯಂಘೋಷಿತ ನಾಯಕರು: ಲಖನ್ ಜಾರಕಿಹೊಳಿ

    ಬೆಳಗಾವಿ: ಸಿದ್ದರಾಮಯ್ಯ ನಮ್ಮ ಗುರುಗಳು, ಅವರ ಮೇಲೆ ಅಪಾರ ಗೌರವ ಇದೆ. ಅವರೊಬ್ಬರೇ ಕಾಂಗ್ರೆಸ್ ಪಕ್ಷದಲ್ಲಿ ನಾಯಕರು. ಉಳಿದವರು ಸ್ವಯಂ ಘೋಷಿತ ನಾಯಕರು ಎಂದು ಎಂಎಲ್‍ಸಿ ಲಖನ್ ಜಾರಕಿಹೊಳಿ ಪರೋಕ್ಷವಾಗಿ ಡಿ.ಕೆ. ಶಿವಕುಮಾರ್‌ಗೆ ಟಾಂಗ್ ನೀಡಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಆಹ್ವಾನದ ಬಗ್ಗೆ ಯೋಚನೆ ಮಾಡುತ್ತೇನೆ ಎಂದ ಅವರು, ಬಿಜೆಪಿ ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಶಕ್ತಿಯನ್ನು ಬಳಸಿಕೊಳ್ಳಬೇಕು. ಜೊತೆಗೆ 2023ರ ಚುನಾವಣೆ ತಯಾರಿ ಮಾಡಬೇಕು. ಬೆಳಗಾವಿ ಜಿಲ್ಲೆಯಲ್ಲಿ ಸೋತ ನಾಯಕರು ಅಧಿಕಾರಿ ಅನುಭವಿಸಿದ್ದರು. ಮತ್ತೆ ಉನ್ನತ ಹುದ್ದೆ ಪಡೆದು ಡಿಕೆಶಿ ಜೊತೆಗೆ ಸೇರಿ ಕುತಂತ್ರ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಕಾಂಗ್ರೆಸ್‍ಗೆ ಕೊರೊನಾ ಬಂದಿದೆ – ಇಬ್ರಾಹಿಂ ಹೇಳಿಕೆಗೆ ಪ್ರಿಯಾಂಕ್ ಖರ್ಗೆ ಆಕ್ರೋಶ

    ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿಗೆ 16 ಅಲ್ಲ 20 ಶಾಸಕರನ್ನು ಕರೆತರುವ ಶಕ್ತಿ ಇದೆ. ರಮೇಶ್ ಜಾರಕಿಹೊಳಿ, ಬೈಲಹೊಂಗಲ, ಖಾನಾಪುರ, ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಿಸಿದ್ದರು. ನಾನು ಪಕ್ಷೇತರನಾಗಿ ಉಳಿಯಲು ತೀರ್ಮಾನಿಸಿದ್ದೇನೆ ಎಂದರು.

    ಬಿಜೆಪಿ ಸೋಲಿಗೆ ಬಿಜೆಪಿ ನಾಯಕರೇ ಕಾರಣ: ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ಕೊಟ್ಟರೇ ಜಿಲ್ಲೆಯಲ್ಲಿ ಅನುಕೂಲ ಆಗಲಿದೆ. ಒಬ್ಬರು ಅಥಣಿಯಿಂದ ಸೋತು ಡಿಸಿಎಂ ಆದರು. ಈಗ ಅವರೇ ಕುಳಿತು ಕುತಂತ್ರ ಮಾಡುತ್ತಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ಸೇರಿಕೊಂಡು ಕವಟಗಿಮಠ ಸೋಲಿಸಿದ್ದರು. ಮತ್ತೆ ಅವರೇ ಪ್ರತ್ಯೇಕ ಸಭೆಯನ್ನು ಸಹ ಮಾಡಿದ್ದಾರೆ. ಸೋಲಲು ಕಾರಣರಾದವರಿಗೆ ಉನ್ನತ ಹುದ್ದೆ ನೀಡಲಾಗುತ್ತಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

    ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಅಥಣಿ ನಾಯಕರೇ ನೇರ ಕಾರಣ. ಡಿಕೆಶಿ ಜೊತೆಗೂ, ಬಿಜೆಪಿ ಜೊತೆಗೂ ಅವರು ಸಂಪರ್ಕದಲ್ಲಿ ಇದ್ದಾರೆ. ಮಾಜಿ ಡಿಸಿಎಂ ಲಕ್ಷ್ಮಣ ಸವದಿ ವಿರುದ್ಧ ಲಖನ್ ಜಾರಕಿಹೊಳಿ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಪಂಜಾಬ್ ಚುನಾವಣೆ: ನವಜೋತ್ ಸಿಂಗ್ ಸಿಧು ವಿರುದ್ಧ ಬಿಕ್ರಮ್ ಸಿಂಗ್ ಕಣಕ್ಕೆ

    11 ಜನ ಶಾಸಕರು, ಇಬ್ಬರು ಸಂಸದರ ಶಕ್ತಿ ಏನು ಎನ್ನುವುದರ ಕುರಿತು ಹೈಕಮಾಂಡ್ ಚಿಂತನೆ ಮಾಡಬೇಕು. ಈಗಾಗಲೇ ಒಂದು ಕಾಂಗ್ರೆಸ್, ಮತ್ತೊಂದು ಕಾಲು ಬಿಜೆಪಿಯಲ್ಲಿ ಇದ್ದಾರೆ. ಮುಂಜಾನೆ ಒಂದು ಪಾರ್ಟಿ, ಸಂಜೆ ಒಂದು ಪಾರ್ಟಿ. ಪಕ್ಷ ವಿರೋಧಿ ಚಟುವಟಿಕೆ ಮೇಲೆ ಕಣ್ಣು ಇಡಬೇಕು. ರಮೇಶ್ ಜಾರಕಿಹೊಳಿ ವಿರುದ್ಧ ಷಡ್ಯಂತ್ರ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದರು.

  • ತಿರುಪತಿ ತಿಮ್ಮಪ್ಪ ಮೂರು ತರ ಕಾಣೋ ರೀತಿಯಲ್ಲಿ ಜಾರಕಿಹೊಳಿ ಮಾತಾಡ್ತಾರೆ: ಸತೀಶ್

    ತಿರುಪತಿ ತಿಮ್ಮಪ್ಪ ಮೂರು ತರ ಕಾಣೋ ರೀತಿಯಲ್ಲಿ ಜಾರಕಿಹೊಳಿ ಮಾತಾಡ್ತಾರೆ: ಸತೀಶ್

    ಬೆಳಗಾವಿ: ತಿರುಪತಿ ತಿಮ್ಮಪ್ಪ ಮೂರು ತರ ಕಾಣುವ ರೀತಿಯಲ್ಲಿ ರಮೇಶ್ ಜಾರಕಿಹೊಳಿ ಅವರು ಮಾತನಾಡುತ್ತಿದ್ದಾರೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಟಾಂಗ್ ನೀಡಿದರು.

    ಬೆಳಗಾವಿ ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯರಿಗೆ ವೆಸ್ಟ್ ಬಾಡಿ ಎಂದು ರಮೇಶ್ ಜಾರಕಿಹೊಳಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ರಮೇಶ್ ಜಾರಕಿಹೊಳಿ ಅವರು ಸಿದ್ದರಾಮಯ್ಯ ಅವರನ್ನು ಒಂದು ಸರಿ ಗುರು ಎಂದರೆ ಇನ್ನೊಮ್ಮೆ ಬೇರೆ ರೀತಿಯಾಗೆ ಮಾತನಾಡುತ್ತಾರೆ. ಹೀಗೆ ಜಾರಕಿಹೊಳಿ ಬೆಳಗ್ಗೆ ಒಂದು ರೀತಿ, ಸಂಜೆ ಒಂದು ರೀತಿ ಮಾತನಾಡುತ್ತಾರೆ ಎಂದು ವ್ಯಂಗ್ಯವಾಡಿದರು.

    ಅಷ್ಟೇ ಅಲ್ಲದೇ ರಮೇಶ್ ಜಾರಕಿಹೊಳಿ ನಾನು ಬಿಜೆಪಿಯಲ್ಲಿ ಇದ್ದರೂ ಕೂಡ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಮ್ಮ ಗುರು ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸ್ನೇಹಿತ ಅಂತ ಹೇಳುತ್ತಾರೆ. ಈ ಬಗ್ಗೆ ಹೆಚ್ಚೆನೂ ಪ್ರತಿಕ್ರಿಯೆ ನೀಡಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯ ಒಬ್ಬ ವೇಸ್ಟ್‌ ಬಾಡಿ: ರಮೇಶ್‌ ಜಾರಕಿಹೊಳಿ ವಾಗ್ದಾಳಿ

    ಲಖನ್ ಜಾರಕಿಹೊಳಿ ಬಿಜೆಪಿ ಸೇರ್ಪಡೆಯಾಗುತ್ತಾರಾ ಎಂಬ ವಿಚಾರವಾಗಿ ಮಾತನಾಡಿದ ಅವರು, ಅದು ಲಖನ್ ಅವರಿಗೆ ಬಿಟ್ಟ ವಿಚಾರವಾಗಿದೆ. ನಾನು ಆ ಬಗ್ಗೆ ಚರ್ಚೆ ಮಾಡಲ್ಲ ಎಂದು ಪ್ರತಿಕ್ರಿಯಿಸಿದರು. ಇದನ್ನೂ ಓದಿ: ಸುಧಾಕರ್ ನಮ್ಮ ಲೀಡರ್ ಅಲ್ಲ, ಮಂಡ್ಯದ ಬಗ್ಗೆ ಅವರಿಗೇನ್ ಮಾಹಿತಿ ಇದೆ?: ನಾರಾಯಣ ಗೌಡ

    ಬೆಳಗಾವಿ ಪರಿಷತ್ ಫಲಿತಾಂಶ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಜನ ನಮ್ಮ ಪರವಾಗಿದ್ದಾರೆ. 2 ಸ್ಥಾನದಲ್ಲಿ ಕಡಿಮೆ ಅಂತರದಿಂದ ಸೋತಿದ್ದೇವೆ. ಈ ಬಾರಿಯ ಚುನಾವಣೆ ನಮ್ಮ ಪರವಾಗಿದ್ದಾರೆ ಎನ್ನುವುದಕ್ಕೆ ವಿಧಾನ ಪರಿಷತ್ ಚುನಾವಣೆಯೆ ಸಾಕ್ಷಿ. ಬೆಳಗಾವಿ ಚುನಾವಣೆ ಫಲಿತಾಂಶದಿಂದ ನಮಗೆ ಶಕ್ತಿ ಬಂದಿದೆ. ಈ ಚುನಾವಣೆ ವಿಧಾನಸಭೆಗೆ ಒಂದು ಮೆಟ್ಟಿಲು ಎಂದರು.

  • ಲಖನ್ ಜಾರಕಿಹೊಳಿ ಸ್ಪರ್ಧೆಯಿಂದ ಬಿಜೆಪಿಗೆ ಹಿನ್ನಡೆ ಇಲ್ಲ:  ಉಮೇಶ್ ಕತ್ತಿ

    ಲಖನ್ ಜಾರಕಿಹೊಳಿ ಸ್ಪರ್ಧೆಯಿಂದ ಬಿಜೆಪಿಗೆ ಹಿನ್ನಡೆ ಇಲ್ಲ:  ಉಮೇಶ್ ಕತ್ತಿ

    ಚಿಕ್ಕೋಡಿ: ಲಖನ್ ಜಾರಕಿಹೊಳಿ ಸ್ಪರ್ಧೆಯಿಂದ ಬಿಜೆಪಿಗೆ ಹಿನ್ನಡೆ ಇಲ್ಲ. ಗೆದ್ದೆ ಗೆಲ್ಲುತ್ತೇವೆ ಎನ್ನುವ ವಿಶ್ವಾಸವನ್ನು ಅರಣ್ಯ ಹಾಗೂ ಆಹಾರ ಇಲಾಖೆ ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ.

    BJP - CONGRESS

    ಪರಿಷತ್ ಚುನಾವಣೆ ಹಿನ್ನೆಲೆ ಹುಕ್ಕೇರಿ ಪುರಸಭೆ ಕಾರ್ಯಾಲಯದಲ್ಲಿ ಉಮೇಶ್ ಕತ್ತಿ ಮತಚಲಾಯಿಸಿದರು. ಈ ವೇಳೆ ಮಾದ್ಯಮಗಳೊಂದಿಗೆ ಮಾತನಾಡಿ, ಪ್ರಥಮ ಪ್ರಾಶಸ್ತ್ಯದ ಮತವನ್ನ ಬಿಜೆಪಿಗೆ ನೀಡಿ, ಎರಡನೇ ಪ್ರಾಶಸ್ತ್ಯ ಮತವನ್ನ ನಿಮಗೆ ತಿಳಿದವರಿಗೆ ನೀಡಿ, ಎನ್ನುವ ಸೂಚನೆಯನ್ನ ಮತದಾರರಿಗೆ ನೀಡಿದ್ದೇನೆ, ಬೆಳಗಾವಿ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಆಯ್ಕೆ ಬಹುತೇಕ ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಮೊದಲನೇ ಬಾರಿಗೆ ನನ್ನ ಅಣ್ಣನಿಗೆ ವೋಟು ಹಾಕುತ್ತಿರೊದ್ರಿಂದ ಒಳ್ಳೆಯ ನಂಬರ್‌ನಲ್ಲಿ ವೋಟು ಹಾಕ್ದೆ ಅಷ್ಟೇ: ಪ್ರಜ್ವಲ್ ರೇವಣ್ಣ

    ಲಖನ್ ಜಾರಕಿಹೊಳಿ ಸ್ಪರ್ಧೆಯಿಂದ ಬಿಜೆಪಿಗೆ ಯಾವುದೇ ಹಿನ್ನೆಡೆ ಆಗುವದಿಲ್ಲ, ಬಿಜೆಪಿ ಕಾರ್ಯಕರ್ತರಿಗೆ ಬಿಜೆಪಿ ಅಭ್ಯರ್ಥಿ ಯಾರು ಅನ್ನೋದು ಗೊತ್ತು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮಾರ್ಗದರ್ಶನದಂತೆ ಮಹಾಂತೇಶ ಕವಟಗಿಮಠ ಅವರಿಗೆ ಬೆಂಬಲ ನೀಡಿದ್ದೇವೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಹುಕ್ಕೇರಿ ಪುರಸಭೆಯ ಸದಸ್ಯರು, ಬಿಜೆಪಿ ಮುಂಖಡ ಗುರುರಾಜ್ ಸೇರಿದಂತೆ ಹುಕ್ಕೇರಿ ತಾಲೂಕು ಬಿಜೆಪಿ ಮುಖಂಡರು ಉಪಸ್ಥಿತರಿದ್ದರು. ಇದನ್ನೂ ಓದಿ:  ಫೋಟೋ ತೆಗೆಯುವಾಗ ಪುರುಷರು ಯಾಕೆ ತುಂಬಾ ಕಷ್ಟಪಡುತ್ತಾರೆ?: ರಾಧಿಕಾ ಪಂಡಿತ್

  • ಜಾರಕಿಹೊಳಿ ಸಹೋದರರಿಗೆ ಪ್ರತಿಷ್ಠೆಯ ಕಣವಾದ ವಿಧಾನ ಪರಿಷತ್ ಚುನಾವಣೆ

    ಜಾರಕಿಹೊಳಿ ಸಹೋದರರಿಗೆ ಪ್ರತಿಷ್ಠೆಯ ಕಣವಾದ ವಿಧಾನ ಪರಿಷತ್ ಚುನಾವಣೆ

    ಬೆಳಗಾವಿ: ವಿಧಾನ ಪರಿಷತ್ ಚುನಾವಣೆಯು ಜಾರಕಿಹೊಳಿ ಸಹೋದರರಿಗೆ ಪ್ರತಿಷ್ಠೆ ಕಣವಾಗಿ ಪರಿಣಾಮಿಸಿದೆ.

    ಬೆಳಗಾವಿಯ ವಿಧಾನ ಪರಿಷತ್ ಚುನಾವಣೆಯು ರಮೇಶ್ ಜಾರಕಿಹೊಳಿ ಮತ್ತು ಸತೀಶ್ ಜಾರಕಿಹೊಳಿ ನಡುವೆ ಜಿದ್ದಾಜಿದ್ದಿನ ಅಖಾಡಕ್ಕೆ ವೇದಿಕೆಯಾಗಿದೆ. ಲಖನ್ ಜಾರಕಿಹೊಳಿ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಹಿನ್ನೆಲೆ ಜಿಲ್ಲಾ ರಾಜಕಾರಣದಲ್ಲಿ ಸಂಚಲನೆ ಮೂಡಿಸಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿ ಮಹಾಂತೇಶ್ ಕವಟಗಿಮಠ, ಕಾಂಗ್ರೆಸ್ ಅಭ್ಯರ್ಥಿಯಾಗಿ ಚನ್ನರಾಜ ಹಟ್ಟಿಹೊಳಿ ಸ್ಪರ್ಧಿಗಳಾಗಿ ನಿಂತಿದ್ದಾರೆ.

    ಬಿಜೆಪಿ ಅಭ್ಯರ್ಥಿ ಮಹಾಂತೇಶ್ ಕವಟಗಿಮಠ ಅವರನ್ನು ಗೆಲ್ಲಿಸಿ ತರುವ ಜವಾಬ್ದಾರಿ ರಮೇಶ್ ಜಾರಕಿಹೊಳಿ ಅವರ ಹೆಗಲ ಮೇಲೆ ಇದೆ. ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ಗೆಲ್ಲಿಸಿ ತರುವ ಜವಾಬ್ದಾರಿ ಸತೀಶ್ ಅವರದ್ದಾಗಿದೆ. ಈ ಹಿನ್ನೆಲೆ ಇವರಿಬ್ಬರು ಕಾಲಿಗೆ ಚಕ್ರ ಕಟ್ಟಿಕೊಂಡು ಕ್ಷೇತ್ರದ ತುಂಬಾ ಸುತ್ತಾಡುತ್ತಿದ್ದಾರೆ.

    ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ನಾಯಕರು ಬೆಳಗಾವಿ ಕ್ಷೇತ್ರದಲ್ಲಿ ತಮ್ಮ ಅಭ್ಯರ್ಥಿ ಗೆಲ್ಲಿಸುವ ಹೊಣೆ ಕೇವಲ ರಮೇಶ್ ಜಾರಕಿಹೊಳಿ ಹೆಗಲಿಗೆ ಬಿಟ್ರಾ ಎಂಬ ಪ್ರಶ್ನೆ ಎಲ್ಲರ ತಲೆಯಲ್ಲಿಯೂ ಓಡಾಡುತ್ತಿದೆ. ಒಂದು ವೇಳೆ ಬಿಜೆಪಿ ಅಭ್ಯರ್ಥಿ ಸೋತ್ರೆ ಅದಕ್ಕೆ ರಮೇಶ್ ಜಾರಕಿಹೊಳಿ ಒಬ್ಬರೇ ಕಾರಣ ಎಂದು ಬಿಂಬಿಸಲು ವ್ಯವಸ್ಥಿತ ಸಂಚು ನಡೀತಿದ್ಯಾ ಎಂದು ಕೆಲವರು ಆರೋಪವನ್ನು ಮಾಡುತ್ತಿದ್ದಾರೆ. ಈ ರೀತಿ ಹಲವು ಚರ್ಚೆಗಳು ಬೆಳಗಾವಿ ಜಿಲ್ಲಾ ರಾಜಕೀಯ ವಲಯದಲ್ಲಿ ನಡೆಯುತ್ತಿದೆ. ಇದನ್ನೂ ಓದಿ: ಬೆಂಗಳೂರಿನ ಮತ್ತೊಂದು ಕಾಲೇಜಿನಲ್ಲಿ ಕೊರೊನಾ ಬ್ಲಾಸ್ಟ್ – 12 ವಿದ್ಯಾರ್ಥಿಗಳಿಗೆ ಪಾಸಿಟಿವ್

    ಬಹುತೇಕ ಬಿಜೆಪಿ ನಾಯಕರು ಪರಿಷತ್ ಚುನಾವಣೆಯಿಂದ ದೂರ ಉಳಿದುಕೊಂಡಿದ್ದು, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರು ಜನಸ್ವರಾಜ್ ಸಮಾವೇಶ ಬಳಿಕ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಸಚಿವೆ ಶಶಿಕಲಾ ಜೊಲ್ಲೆ ಅವರು ಒಂದೆರಡು ದಿನ ಪ್ರಚಾರ ನಡೆಸಿ ಬೆಂಗಳೂರಿಗೆ ತೆರಳಿದರು. ಇನ್ನೂ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಚುನಾವಣಾ ಅಖಾಡದಿಂದ ದೂರ ಉಳಿದ್ರಾ ಎಂಬ ಪ್ರಶ್ನೆ ಎಲ್ಲರಲ್ಲಿಯೂ ಮೂಡಿದೆ.

    ಸಚಿವ ಉಮೇಶ್ ಕತ್ತಿ ನಾಮಪತ್ರ ಸಲ್ಲಿಕೆ ವೇಳೆ ಉಪಸ್ಥಿತರಿದ್ದು, ಈಗ ಅವರು ಸಹ ಕಾಣಿಸುತ್ತಿಲ್ಲ. ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಸಹ ಚುನಾವಣಾ ಉಸಾಬರಿಯಿಂದ ದೂರ ಉಳಿದ್ರಾ ಎಂಬ ಅನುಮಾನವಿದೆ. ಬೆಳಗಾವಿ ಜಿಲ್ಲೆಯ 18 ಕ್ಷೇತ್ರಗಳ ಪೈಕಿ 13 ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ. ಇಬ್ಬರು ಬಿಜೆಪಿ ಸಂಸದರು, ಓರ್ವ ರಾಜ್ಯಸಭಾ ಸದಸ್ಯ ಇದ್ದರೂ ಬಿಜೆಪಿ ಪಾಳಯದಲ್ಲಿ ಆತಂಕ ಉಂಟಾಗಿದೆ. ಇದನ್ನೂ ಓದಿ:  ಇಂದು 400 ಗಡಿದಾಟಿದ ಕೊರೊನಾ – 6 ಸಾವು

    ಬಿಜೆಪಿ ಅಭ್ಯರ್ಥಿ ಗೆಲ್ಲಿಸಿ, ಕಾಂಗ್ರೆಸ್ ಅಭ್ಯರ್ಥಿ ಸೋಲಿಸಲು ಸಾಹುಕಾರ್ ಪಣ ತೊಟ್ಟಿದ್ರೆ, ಮತ್ತೊಂದೆಡೆ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಲು ಸತೀಶ್ ಜಾರಕಿಹೊಳಿ ಕಸರತ್ತು ಮಾಡುತ್ತಿದ್ದಾರೆ. ಜಾರಕಿಹೊಳಿ ಸಹೋದರರ ಮಧ್ಯೆ ಗೆಲ್ಲೋರು ಯಾರು? ಸೋಲೋರು ಯಾರು? ಅನ್ನೋದೇ ಸಸ್ಪೆನ್ಸ್.

  • ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ, ಒಂದೇ ಮತ, ಒಂದೇ ಅಭ್ಯರ್ಥಿ: ಸತೀಶ್ ಜಾರಕಿಹೊಳಿ

    ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ, ಒಂದೇ ಮತ, ಒಂದೇ ಅಭ್ಯರ್ಥಿ: ಸತೀಶ್ ಜಾರಕಿಹೊಳಿ

    ಬೆಳಗಾವಿ: ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ, ಒಂದೇ ಮತ, ಒಂದೇ ಅಭ್ಯರ್ಥಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

    ಪರಿಷತ್ ಚುನಾವಣೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಯಾಗಿ ಚನ್ನರಾಜ್ ಹಟ್ಟಿಹೊಳಿ ನಾಮಪತ್ರ ಸಲ್ಲಿಸುತ್ತಿದ್ದಾರೆ. ಈಗಾಗಲೇ ಕ್ಷೇತ್ರದಲ್ಲಿ ಅರ್ಧದಷ್ಟು ಪ್ರಚಾರ ಕಾರ್ಯ ಮಾಡಿದ್ದೇವೆ. ಬಿಜೆಪಿಯಿಂದ ಇಬ್ಬರು ಸ್ಪರ್ಧೆ ಮಾಡುತ್ತಿದ್ದಾರೆ. ಅವರಿಗೆ ಚಾಲೆಂಜ್ ಇರೋದು. ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ, ಒಂದೇ ಮತ, ಒಂದೇ ಅಭ್ಯರ್ಥಿ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ:  ಪ್ರಾಣವನ್ನೇ ಪಣಕ್ಕಿಟ್ಟು ಅರ್ಚಕನನ್ನು ರಕ್ಷಿಸಿದ ಟ್ರಾಫಿಕ್ ಪೊಲೀಸ್ – ವೀಡಿಯೋ ವೈರಲ್

    ಪಕ್ಷೇತರ ಅಭ್ಯರ್ಥಿಯಾಗಿ ಲಖನ್ ಜಾರಕಿಹೊಳಿ ಸ್ಪರ್ಧೆ ವಿಚಾರವಾಗಿ ಮಾತನಾಡಿದ ಅವರು, ಚುನಾವಣೆಯನ್ನು ಪಕ್ಷದ ಮೇಲೆ ಮಾಡುತ್ತಿದ್ದೇವೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಚುನಾವಣೆಯಲ್ಲಿ ಗೆಲ್ಲಲೇಬೇಕು. ಲೋಕಸಭಾ ಉಪಚುನಾವಣೆ ನನ್ನ ವಿರುದ್ಧ ಹಣ ಹಂಚಿ ನನ್ನನ್ನು ಸೋಲಿಸಿದ್ದಾರೆ. ಲಖನ್ ಜಾರಕಿಹೊಳಿ, ರಮೇಶ್ ಜಾರಕಿಹೊಳಿ ದುಡ್ಡು ಕೊಟ್ಟು ನನ್ನ ಸೋಲಿಸಿದ್ದಾರೆ. ಆ ನೋವು ನಮಗೆ ಹಾಗೂ ನಮ್ಮ ಕಾರ್ಯಕರ್ತರಿಗೂ ಇದೆ. ಬಹುಶಃ ಲಖನ್ ಜಾರಕಿಹೊಳಿ ಚುನಾವಣೆ ನಿಲ್ತಾರೋ ಇಲ್ವೋ ಅನುಮಾನ. ಪಕ್ಷದ ವರಿಷ್ಠರು ಒಳ್ಳೆಯ ಅವಕಾಶ ಕೊಡ್ತಿವಿ ಅಂದ್ರೆ ವಾಪಸ್ ಪಡಿಯುವ ಅವಕಾಶ ಇದೆ. ಲಖನ್ ಜಾರಕಿಹೊಳಿ ಜೊತೆಗೆ ಮಾತನಾಡುವ ಪ್ರಶ್ನೆ ಇಲ್ಲ ಎಂದು ಕಿಡಿಕಾರಿದರು.

    ಇದು ಪಕ್ಷ ಆಧಾರದ ಮೇಲೆ ಚುನಾವಣೆ. ಕುಟುಂಬ ಆಧಾರದ ಮೇಲೆ ಚುನಾವಣೆ ಅಲ್ಲ. ಜಾರಕಿಹೊಳಿ ಕುಟುಂಬ, ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ಫೈಟ್ ಅಲ್ಲ. ನಾವು ಜಾರಕಿಹೊಳಿ ಈ ಕಡೆ ಇದ್ದೇವೆ. ಸಹೋದರರ ಸವಾಲ್, ರಾಜಕೀಯ ಸವಾಲು ಇದ್ದೇ ಇರುತ್ತೆ. ರಮೇಶ್ ಜಾರಕಿಹೊಳಿ ಎಂದಿಗೂ ಸೀರಿಯಸ್ ಆಗೇ ಇರುತ್ತಾರೆ. ಅವರ ತಂಡ ಇರೋದು ನಾವು, ನೀವು ಎಂದು ನೋಡಿಲ್ಲ ಎಂದು ಟೀಕಿಸಿದರು. ಇದನ್ನೂ ಓದಿ: ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯಲ್ಲಿ ಹೈಟೆಕ್ ವಂಚನೆ

  • ಜಾರಕಿಹೊಳಿ ಬ್ರದರ್ಸ್ ಸವಾಲು- ಹೈಕಮಾಂಡ್ ಮೊರೆ ಹೋದ ಹೆಬ್ಬಾಳ್ಕರ್

    ಜಾರಕಿಹೊಳಿ ಬ್ರದರ್ಸ್ ಸವಾಲು- ಹೈಕಮಾಂಡ್ ಮೊರೆ ಹೋದ ಹೆಬ್ಬಾಳ್ಕರ್

    ಬೆಂಗಳೂರು/ಬೆಳಗಾವಿ: ಸಹೋದರರ ಸವಾಲಿನ ಹಿಂದೆ ಬೇರೆಯದೆ ಕಹಾನಿ ಇದೆಯಾ ಎಂಬ ಪ್ರಶ್ನೆ ಕಾಡುತ್ತಿದ್ದು, ಪರಸ್ಪರ ಸವಾಲು ಹಾಕಿಕೊಂಡು ತೊಡೆ ತಟ್ಟಿರುವ ಸಹೋದರರ ನಡೆಯ ಹಿಂದೆ ಮ್ಯಾಚ್ ಫಿಕ್ಸಿಂಗ್ ನೆರಳಿದೆಯಾ ಎಂಬ ಅನುಮಾನವೊಂದು ಇದೀಗ ಕೈ ನಾಯಕರಲ್ಲಿ ಹುಟ್ಟಿಕೊಂಡಿದೆ.

    ಹೌದು. ಗೋಕಾಕ್ ಅಂಗಳದಲ್ಲಿ ರಮೇಶ್ ಜಾರಕಿಹೊಳಿ ಹಾಗೂ ಲಖನ್ ಜಾರಕಿಹೊಳಿ ನಡುವೆ ನಡೆಯುತ್ತಿರುವ ಫೈಟ್ ಅಸಲಿನಾ ಅಥವಾ ನಕಲಿನಾ ಅನ್ನೋ ಅನುಮಾನವೊಂದು ಕೈ ನಾಯಕರನ್ನ ಕಾಡುತ್ತಿದೆ. ಈ ಬಗ್ಗೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೈಕಮಾಂಡ್ ಗಮನಕ್ಕೆ ತಂದಿದ್ದಾರೆ ಎನ್ನಲಾಗುತ್ತಿದೆ.

    ಆದ್ದರಿಂದ ಗೋಕಾಕ್ ನಲ್ಲಿ ಸಹೋದರರ ನಡುವೆ ಮ್ಯಾಚ್ ಫಿಕ್ಸಿಂಗ್ ಏನಾದರು ನಡೆಯುತ್ತಿದೆಯಾ ಎಂಬ ಬಗ್ಗೆ ತಿಳಿಯಲು ರಾಜ್ಯ ಕಾಂಗ್ರೆಸ್ ಉಸ್ತುವಾರಿ .ಕೆ.ಸಿ ವೇಣುಗೋಪಾಲ್ ಅವರೇ ಇಂದು ಬೆಳಗಾವಿಗೆ ಬರಲಿದ್ದಾರೆ. ಗೋಕಾಕ್ ಗೆ ಭೇಟಿ ನೀಡಲಿರುವ ವೇಣುಗೋಪಾಲ್, ಪಕ್ಷದ ಅಭ್ಯರ್ಥಿ ಲಖನ್ ಪರ ಪ್ರಚಾರ ಅಷ್ಟೆ ಅಲ್ಲದೆ ಗೋಕಾಕ್ ಅಖಾಡದ ಸ್ಥಿತಿಗತಿ ಬಗ್ಗೆ ಅಧ್ಯಯನ ಮಾಡಲಿದ್ದಾರೆ.

    ಹೀಗೆ ಗೋಕಾಕ್ ಅಖಾಡದಲ್ಲಿ ಜಾರಕಿಹೊಳಿ ಸಹೋದರರ ನಡುವೆ ಮ್ಯಾಚ್ ಫಿಕ್ಸಿಂಗ್ ಏನಾದರು ನಡೆದಿದೆಯಾ ಎಂಬುದರ ಬಗ್ಗೆ ಕೈ ಹೈಕಮಾಂಡ್ ಕಣ್ಣಿಟ್ಟಿದ್ದು ಸ್ವತಃ ರಾಜ್ಯ ಕಾಂಗ್ರೆಸ್ ಉಸ್ತುವಾರಿಯೇ ಭೇಟಿಗೆ ಮುಂದಾಗಿದ್ದಾರೆ. ಸಾಹುಕಾರ್ ಸಹೋದರರ ಪಾಲಿಗೆ ಲಕ್ಷ್ಮಿ ದೂರಿನಿಂದ ಏನಾಗುತ್ತೆ ಅನ್ನೋದೇ ಸದ್ಯದ ಕುತೂಹಲವಾಗಿದೆ.

  • ಸತೀಶ್ ಜಾರಕಿಹೊಳಿಗೆ ಆರತಿ ಬೆಳಗಿ, ಕಾಲಿಗೆ ಬಿದ್ದ ಮಹಿಳೆಯರು

    ಸತೀಶ್ ಜಾರಕಿಹೊಳಿಗೆ ಆರತಿ ಬೆಳಗಿ, ಕಾಲಿಗೆ ಬಿದ್ದ ಮಹಿಳೆಯರು

    ಬೆಳಗಾವಿ: ಗೋಕಾಕ್ ಕ್ಷೇತ್ರದಲ್ಲಿ ಉಪಚುನಾವಣಾ ಕಣ ರಂಗೇರಿದ್ದು, ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ಪರ ಪ್ರಚಾರಕ್ಕೆ ತೆರೆಳಿದ್ದ ಸತೀಶ್ ಜಾರಕಿಹೊಳಿ ಅವರಿಗೆ ಅಂಕಲಗಿ ಗ್ರಾಮದಲ್ಲಿ ಅದ್ಧೂರಿ ಸ್ವಾಗತ ಕೋರಲಾಯ್ತು. ಅದರಲ್ಲೂ ಸತೀಶ್ ಅವರಿಗೆ ಮಹಿಳೆಯರು ಆರತಿ ಬೆಳಗಿ, ಕಾಲಿಗೆ ಬಿದ್ದಿರುವ ವಿಡಿಯೋ ಸದ್ಯ ಎಲ್ಲೆಡೆ ವೈರಲ್ ಆಗಿದೆ.

    ಬೆಳಗಾವಿಯ ಅಂಕಲಗಿ ಗ್ರಾಮದಲ್ಲಿ ತಮ್ಮ ಲಖನ್ ಪರ ಉಪಚುನಾವಣಾ ಪ್ರಚಾರಕ್ಕೆ ಸತೀಶ್ ಜಾರಕಿಹೊಳಿ ತೆರೆಳಿದ್ದರು. ಈ ವೇಳೆ ಗ್ರಾಮಕ್ಕೆ ಆಗಮಿಸಿದ್ದ ಸತೀಶ್ ಜಾರಕಿಹೊಳಿಗೆ ಹೂಮಳೆಗೈದು ಜನರು ಸ್ವಾಗತ ಕೋರಿದರು. ಬಳಿಕ ಗ್ರಾಮದ ಮಹಿಳೆಯರು ಸತೀಶ್ ಜಾರಕಿಹೊಳಿ ಅವರಿಗೆ ಆರತಿ ಬೆಳಗಿ, ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ. ಈ ದೃಶ್ಯವನ್ನು ಸ್ಥಳೀಯರು ವಿಡಿಯೋ ಮಾಡಿದ್ದು, ಸಖತ್ ವೈರಲ್ ಆಗಿದೆ.

    ಡಿಸೆಂಬರ್ 5ರಂದು ಗೋಕಾಕ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ನಡೆಯಲಿದ್ದು, ಬಹಿರಂಗ ಪ್ರಚಾರಕ್ಕೆ ಕೇವಲ 10 ದಿನ ಬಾಕಿ ಇದೆ. ಅದರಲ್ಲೂ ಗೋಕಾಕ್ ಕ್ಷೇತ್ರದಲ್ಲಿ ಜಾರಕಿಹೊಳಿ ಸಹೋದರರ ನಡುವೆಯೇ ಸ್ಪರ್ಧೆ ನಡೆಯುತ್ತಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.

    ಕಾಂಗ್ರೆಸ್ಸಿಂದ ಲಖನ್ ಜಾರಕಿಹೊಳಿ ಸ್ಪರ್ಧಿಸುತ್ತಿದ್ದರೆ, ಬಿಜೆಪಿಯಿಂದ ರಮೇಶ್ ಜಾರಕಿಹೊಳಿ ಕಣಕ್ಕಿಳಿದಿದ್ದಾರೆ. ಇತ್ತ ಜೆಡಿಎಸ್‍ನಿಂದ ಅಶೋಕ್ ಪೂಜಾರಿ ಟಕ್ಕರ್ ಕೊಡಲು ಭರ್ಜರಿ ತಯಾರಿ ನಡೆಸುತ್ತಿದ್ದಾರೆ.