Tag: ಲಕ್ಷ ಲಿಂಗ

  • 250ಕ್ಕೂ ಹೆಚ್ಚು ಮಹಿಳೆಯರಿಂದ ಸ್ಫಟಿಕಲಿಂಗ, ಲಕ್ಷ ಲಿಂಗ ವಿಶೇಷ ಪೂಜೆ!

    250ಕ್ಕೂ ಹೆಚ್ಚು ಮಹಿಳೆಯರಿಂದ ಸ್ಫಟಿಕಲಿಂಗ, ಲಕ್ಷ ಲಿಂಗ ವಿಶೇಷ ಪೂಜೆ!

    ತುಮಕೂರು: ಜಿಲ್ಲೆಯ ಮಧುಗಿರಿಯಲ್ಲಿ ವಾಸವಿ ಕ್ಲಬ್ ಹಾಗೂ ಆರ್ಯ ವೈಶ್ಯ ಮಂಡಳಿ ಲೋಕ ಕಲ್ಯಾಣಾರ್ಥವಾಗಿ ಸ್ಫಟಿಕ ಲಿಂಗ ಹಾಗೂ ಲಕ್ಷ ಲಿಂಗ ಪೂಜಾ ಕಾರ್ಯಕ್ರಮ ನೆರವೇರಿಸಿದೆ.

    ನೂರಾರು ಮಹಿಳೆಯರು ಮೂರು ತಿಂಗಳುಗಳ ಕಾಲ ಶ್ರಮ ಹಾಕಿ ಲಕ್ಷ ಲಿಂಗಗಳನ್ನು ಸ್ಥಾಪಿಸಿದ್ದರು. ನಾಡಿನಲ್ಲಿ ಉತ್ತಮ ಮಳೆ ಬೆಳೆಯಾಗಲಿ ಎನ್ನುವ ಉದ್ದೇಶದಿಂದ ಸ್ಫಟಿಕ ಲಿಂಗಗಳಿಗೆ ಮಂಗಳಾರತಿ, ಪಂಚಾಮೃತ ಅಭಿಷೇಕ, ಶಿವ ಸಹಸ್ರನಾಮ ಸೇರಿದಂತೆ ವಿವಿಧ ಪೂಜೆಗಳನ್ನು ನೆರವೇರಿಸಲಾಯಿತು.

    ಪೂಜಾ ಕಾರ್ಯಕ್ರಮದಲ್ಲಿ ಆರ್ಯ ವೈಶ್ಯ ಸಮಾಜದ 250ಕ್ಕೂ ಹೆಚ್ಚು ಮಹಿಳೆಯರು ಪೂಜೆ ಹಾಗೂ ಅರ್ಚನೆ ನಡೆಸಿದ್ದರು. ಇನ್ನೂ ಲಕ್ಷ ಲಿಂಗಕ್ಕೆ ಮಹಿಳೆಯರು ಸರತಿ ಸಾಲಿನಲ್ಲಿ ಕುಳಿತು ವಿಶೇಷ ಪೂಜಾ ಕೈಂಕರ್ಯಗಳನ್ನ ನೆರವೇರಿಸಿದ್ದರು.

    ಇಲ್ಲಿ ನಿರ್ಮಿಸಲಾಗಿದ್ದ ಲಿಂಗಗಳು ಹಲವು ವೈಶಿಷ್ಟ್ಯಗಳನ್ನು ಹೊಂದಿದ್ದು, ಜನಾಕರ್ಷಣೀಯವಾಗಿದೆ. ಒಟ್ಟಾರೆಯಾಗಿ ಸಿನಿಮಾದಲ್ಲಿ ಮಾತ್ರ ಇಂತಹ ದೃಶ್ಯಗಳನ್ನ ನೋಡುತ್ತಿದ್ದ ಜನರು ಇಲ್ಲಿನ ದೃಶ್ಯಗಳನ್ನು ನೋಡಿ ಪುಳಕಿತಗೊಂಡರು.