Tag: ಲಕ್ಷ್ಮೀ ಹೆಬ್ಬಾಳ್ಕರ್

  • ಮೊಟ್ಟೆ ವಿತರಣೆ ಬಗ್ಗೆ ನಿಗಾವಹಿಸಲು ಸ್ಪೆಷಲ್‌ ಟಾಸ್ಕ್‌ ಫೋರ್ಸ್‌ ರಚನೆ ಮಾಡ್ತೀವಿ – ಲಕ್ಷ್ಮಿ ಹೆಬ್ಬಾಳ್ಕರ್

    ಮೊಟ್ಟೆ ವಿತರಣೆ ಬಗ್ಗೆ ನಿಗಾವಹಿಸಲು ಸ್ಪೆಷಲ್‌ ಟಾಸ್ಕ್‌ ಫೋರ್ಸ್‌ ರಚನೆ ಮಾಡ್ತೀವಿ – ಲಕ್ಷ್ಮಿ ಹೆಬ್ಬಾಳ್ಕರ್

    – ಕಳಪೆ ಮೊಟ್ಟೆ ವಿತರಿಸಿದರನ್ನ ಕಪ್ಪುಪಟ್ಟಿಗೆ ಸೇರಿಸಲು ತೀರ್ಮಾನ ಎಂದ ಸಚಿವೆ

    ಬೆಂಗಳೂರು: ಕಳಪೆ ಮೊಟ್ಟೆ ಪೂರೈಕೆ ಮಾಡಿದವರನ್ನ ಕಪ್ಪು ಪಟ್ಟಿಗೆ ಸೇರಿಸಲು ಸೂಚನೆ ನೀಡಿದ್ದೇನೆ. ಜೊತೆಗೆ ಟಾಸ್ಕ್ ಫೋರ್ಸ್ ರಚನೆ ಮಾಡಿ ಮೊಟ್ಟೆ ವಿತರಣೆ (Egg Distribution) ಕುರಿತು ನಿಗಾವಹಿಸುವುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ (Lakshmi Hebbalkar) ತಿಳಿಸಿದ್ದಾರೆ.

    ಅಂಗನವಾಡಿ ಕೇಂದ್ರಗಳಿಗೆ ಕಳಪೆ ಮೊಟ್ಟೆ ವಿತರಣೆ ಹಿನ್ನೆಲೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ವಿಧಾನಸೌಧದಲ್ಲಿ ಮಾತನಾಡಿ, ಕಳಪೆ ಮೊಟ್ಟೆ ಪೂರೈಕೆ ಮಾಡಿದವರನ್ನ, ಪೂರೈಕೆ ಮಾಡುವವರನ್ನ ಕಪ್ಪು ಪಟ್ಟಿಗೆ ಸೇರಿಸಲು ಸೂಚನೆ ನೀಡಿದ್ದೇನೆ. ಜೊತೆಗೆ ಮೊಟ್ಟೆ ವಿತರಕರ ಪಟ್ಟಿಯಿಂದಲೂ ಅವರನ್ನ ಕೈಬಿಡಲಾಗುವುದು ಎಂದು ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: 4 ದಿನಗಳ ಅಂತರದಲ್ಲಿ 2ನೇ ಪ್ರಕರಣ ಬಯಲಿಗೆ – ಗರ್ಭಿಣಿ, ಮಕ್ಕಳಿಗೆ ಕೊಳೆತ ಮೊಟ್ಟೆ ವಿತರಣೆ

    ಖರೀದಿ ವಿಕೇಂದ್ರೀಕರಣ ಮಾಡಿದ್ದರಿಂದಾಗಿ ಗ್ರಾಮ ಪಂಚಾಯತಿ ಮಟ್ಟದಲ್ಲೂ ಮೊಟ್ಟೆ ಖರೀದಿಯಾಗುತ್ತಿದೆ. ಯಾವುದೇ ಕಂಟ್ರೋಲ್ ಇಲ್ಲದೇ ಖರೀದಿ ನಡೆಯುತ್ತಿದೆ. ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಬೇಕು ಎಂಬುದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮುಖ್ಯ ಉದ್ದೇಶ. ನಮ್ಮ ಇಲಾಖೆಯ ಉದ್ದೇಶವೇ ಎಡವುತ್ತಿರುವುದು ಗಮನಕ್ಕೆ ಬಂದಿದೆ. ಕಳಪೆ ಮೊಟ್ಟೆ ವಿತರಣೆ ವಿಚಾರ ಕ್ಯಾಬಿನೆಟ್ ನಲ್ಲಿ ಪ್ರಸ್ತಾಪ ಮಾಡುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಗರ್ಭಿಣಿ, ಬಾಣಂತಿಯರಿಗೆ ಕೆಟ್ಟಿರುವ ಮೊಟ್ಟೆಗಳ ವಿತರಣೆ

    ವಿಕೇಂದ್ರೀಕರಣ ಮಾದರಿಯ ಖರೀದಿಯಿಂದ ಪ್ರಾಮಾಣಿಕ ಪೂರೈಕೆ ಆಗ್ತಿಲ್ಲ. ಈ ನಿಟ್ಟಿನಲ್ಲಿ ಖರೀದಿ ವ್ಯವಸ್ಥೆ ಕೇಂದ್ರೀಕರಣ ಮಾಡಲು ಕ್ರಮವಹಿಸಲಾಗುವುದು. ಜೊತೆಗೆ ಟಾಸ್ಕ್ ಫೋರ್ಸ್ ರಚನೆ ಮಾಡಿ ಮೊಟ್ಟೆ ವಿತರಣೆ ಕುರಿತು ನಿಗಾವಹಿಸುವುದಾಗಿ ತಿಳಿಸಿದ್ದಾರೆ. ಸರ್ಕಾರಿ ಸಂಸ್ಥೆಗಳಿಂದ ಖರೀದಿಗೆ ಚಿಂತನೆ ನಡೆಯುತ್ತಿದ್ದು, ಎಲ್ಲಾ ಪ್ರಸ್ತಾಪಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Karnataka Budget 2023: ಗೃಹಲಕ್ಷ್ಮಿಗೆ 30 ಸಾವಿರ ಕೋಟಿ – ಮಹಿಳೆಯರಿಗೆ ಸಿಕ್ಕಿದ್ದು ಏನು?

    Karnataka Budget 2023: ಗೃಹಲಕ್ಷ್ಮಿಗೆ 30 ಸಾವಿರ ಕೋಟಿ – ಮಹಿಳೆಯರಿಗೆ ಸಿಕ್ಕಿದ್ದು ಏನು?

    – ಆ್ಯಸಿಡ್ ದಾಳಿಗೊಳಗಾದ ಮಹಿಳಾ ಸಂತ್ರಸ್ತರಿಗೆ 5 ಲಕ್ಷದ ವರೆಗೆ ಬಡ್ಡಿ ರಹಿತ ಸಾಲಕ್ಕೆ ಅಸ್ತು

    ಬೆಂಗಳೂರು: 2023-24ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ (Karnataka Budget 2023) ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ರಾಜ್ಯದ ಮಹಿಳೆಯರಿಗೆ ಬಂಪರ್‌ ಉಡುಗೊರೆ ನೀಡಿದ್ದಾರೆ.

    ತಮ್ಮ ಬಜೆಟ್‌ ಭಾಷಣದಲ್ಲಿ ರಾಜ್ಯದಲ್ಲಿನ ಆ್ಯಸಿಡ್ ದಾಳಿಗೆ ಒಳಗಾದ ಸಂತ್ರಸ್ತರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಉದ್ದೇಶದಿಂದ ಅವರಿಗೆ ಸ್ವಯಂ ಉದ್ಯೋಗಕ್ಕಾಗಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಮೂಲಕ 5 ಲಕ್ಷ ರೂ. ವರೆಗೆ ಬಡ್ಡಿ ರಹಿತ ಸಾಲ ಸೌಲಭ್ಯ ಒದಗಿಸಲು 2 ಕೋಟಿ ರೂ. ಅನುದಾನ ಮತ್ತು ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ವಸತಿ ಸೌಲಭ್ಯವನ್ನು ಒದಗಿಸಲಾಗುವುದು. ಒಟ್ಟಾರೆ ಪ್ರಸಕ್ತ ಸಾಲಿನಲ್ಲಿ ಮಹಿಳಾ ಉದ್ದೇಶಿತ ಯೋಜನೆಗಳಿಗೆ 70,427 ಕೋಟಿ ರೂ., ಮಕ್ಕಳ ಉದ್ದೇಶಿತ ಯೋಜನೆಗಳಿಗೆ 2023-24 ನೇ ಸಾಲಿನಲ್ಲಿ 51,229 ಕೋಟಿ ರೂ. ಅನುದಾನ ಒದಗಿಸಿದ್ದಾರೆ. ಇದನ್ನೂ ಓದಿ: ಮತ್ತಷ್ಟು ದುಬಾರಿಯಾಗಲಿದೆ ಎಣ್ಣೆ – ಈಗ ಎಷ್ಟು ಸುಂಕವಿದೆ? ಎಷ್ಟು ಏರಿಕೆಯಾಗುತ್ತೆ?

    ಕಾಂಗ್ರೆಸ್‌ ಸರ್ಕಾರದ ಪ್ರಮುಖ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ನಮ್ಮ ರಾಜ್ಯದ ಮಹಿಳೆಯರಿಗೆ ಬದುಕಿನ ನಿರ್ವಹಣೆಯನ್ನು ಇನ್ನಷ್ಟು ಸುಗಮಗೊಳಿಸಲು ಮತ್ತು ಆರ್ಥಿಕ ಭದ್ರತೆ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಈ ಯೋಜನೆಗಾಗಿ ನೋಂದಣಿ ಪ್ರಕ್ರಿಯೆ ಶೀಘ್ರವೇ ಪ್ರಾರಂಭವಾಗಲಿದ್ದು, ಮಹಿಳೆಯರ ಖಾತೆಗೆ ನೇರವಾಗಿ ಮಾಸಿಕ 2,000 ರೂ.ಗಳನ್ನು ವರ್ಗಾಯಿಸಲಾಗುವುದು. ಯೋಜನೆಗಾಗಿ ವಾರ್ಷಿಕ ಸುಮಾರು 30,000 ಕೋಟಿ ರೂ. ವೆಚ್ಚವಾಗಲಿದ್ದು, ಇದು ಇಡೀ ದೇಶದಲ್ಲಿಯೇ ಅತೀ ದೊಡ್ಡ ಆರ್ಥಿಕ ಭದ್ರತಾ ಯೋಜನೆಯಾಗಲಿದೆ ಎಂದು ಹೇಳಿದ್ದಾರೆ.

    ಇದರೊಂದಿಗೆ ವಿಶೇಷಚೇತನರಿಗೆ ಆರ್ಥಿಕ ಸದೃಢತೆ ಒದಗಿಸಲು ಸಾಮಾಜಿಕವಾಗಿ ಇಲಾಖೆಯಲ್ಲಿ ನೋಂದಣಿಯಾಗಿರುವ ಸುಮಾರು 4,000 ವಿಶೇಷಚೇತನರಿಗೆ ಯಂತ್ರಚಾಲಿತ ದ್ವಿಚಕ್ರ ವಾಹನಗಳನ್ನ 30 ಕೋಟಿ ರೂ. ವೆಚ್ಚದಲ್ಲಿ ಒದಗಿಸಲಾಗುವುದು. ಅಲ್ಲದೆ, ನೋಂದಣಿಯಾಗದಿರುವ ಅರ್ಹ ಫಲಾನುಭವಿಗಳನ್ನು ಗುರುತಿಸಿ ಸೌಲಭ್ಯ ಒದಗಿಸಲು ಕ್ರಮ ವಹಿಸಲಾಗುವುದು. ಇದನ್ನೂ ಓದಿ: Karnataka Budget 2023: ಡಾ.ರಾಜ್ ಸ್ಮಾರಕದ ಬಳಿ ಸಿನಿ ವಸ್ತು ಸಂಗ್ರಹಾಲಯ

    ಮಹಿಳಾ ಉದ್ಯಮಿಗಳು ಆತಿಥ್ಯ, ಆರೈಕೆ ಮತ್ತು ಪ್ರವಾಸೋದ್ಯಮದಂತಹ ಸೇವಾ ವಲಯದಲ್ಲಿ ಮಹಿಳೆಯರು ಹೆಚ್ಚಿನ ಅವಕಾಶ ಪಡೆಯುತ್ತಿದ್ದಾರೆ. ಆದ್ದರಿಂದ ಸೇವಾ ವಲಯದಲ್ಲಿ ಮಹಿಳಾ ಉದ್ಯಮಿಗಳನ್ನು ಉತ್ತೇಜಿಸಲು ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಮೂಲಕ ಶೇ.4ರ ಬಡ್ಡಿ ದರದಲ್ಲಿ ನೀಡಲಾಗುವ ಸಾಲದ ಮಿತಿಯನ್ನ 2 ಕೋಟಿ ರೂ.ಗಳಿಂದ 5 ಕೋಟಿ ರೂ.ಗಳಿಗೆ ಹೆಚ್ಚಿಸಲಾಗುವುದು. 2023-24ನೇ ಸಾಲಿನಲ್ಲಿ 10 ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಗಳನ್ನ 7 ಜಿಲ್ಲೆಗಳಲ್ಲಿ NGOಗಳ ಸಹಯೋಗದೊಂದಿಗೆ 2 ಕೋಟಿ ರೂ. ವೆಚ್ಚದಲ್ಲಿ ಪ್ರಾರಂಭಿಸಲಾಗುವುದು ಎಂದು ಘೋಷಣೆ ಮಾಡಿದ್ದಾರೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೆಳಗಾವಿಯಲ್ಲಿ ಮೋತಿ ಚೂರು ಲಾಡು ತಿನ್ನಲು ಮುಗಿಬಿದ್ದ ʻಕೈʼ ಕಾರ್ಯಕರ್ತರು

    ಬೆಳಗಾವಿಯಲ್ಲಿ ಮೋತಿ ಚೂರು ಲಾಡು ತಿನ್ನಲು ಮುಗಿಬಿದ್ದ ʻಕೈʼ ಕಾರ್ಯಕರ್ತರು

    ಬೆಳಗಾವಿ: ನೂತನ ಸಚಿವರಾಗಿ ಆಗಮಿಸಿದ್ದ ಸತೀಶ್‌ ಜಾರಕಿಹೊಳಿ‌ (Satish Jarkiholi) ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಅವರಿಗೆ ಜಿಲ್ಲಾ ಕಾಂಗ್ರೆಸ್‌ ಸಮಿತಿ ವತಿಯಿಂದ ಅದ್ಧೂರಿ ಸ್ವಾಗತ ಕೋರಲಾಯಿತು. ಇದೇ ವೇಳೆ ಕಾಂಗ್ರೆಸ್ ವಿಜಯೋತ್ಸವ ಸಂಭ್ರಮಿಸಲು ತಂದಿದ್ದ ಲಾಡು ತಿನ್ನಲು ಕಾಂಗ್ರೆಸ್‌ ಕಾರ್ಯಕರ್ತರು ಮುಗಿಬಿದ್ದರು.

    ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿರುವ ಜಿಲ್ಲಾ ಕಾಂಗ್ರೆಸ್ (Congress) ಕಚೇರಿ ಎದುರು ಕಾರ್ಯಕರ್ತರು ಲಾಡುಗಾಗಿ ಮುಗಿಬಿದ್ದರು. ಸಚಿವರಾದ ಬಳಿಕ ಮೊದಲ ಬಾರಿ ಬೆಳಗಾವಿಗೆ ಆಗಮಿಸಿದ್ದ ಸತೀಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್ ತೆರೆದ ವಾಹನದಲ್ಲಿ ಸಚಿವದ್ವಯರ ಬೃಹತ್ ಮೆರವಣಿಗೆ ನಡೆಸಲಾಯಿತು. ಇದನ್ನೂ ಓದಿ: ಸಚಿವರಾದ ಬಳಿಕ ಮೊದಲ ಬಾರಿಗೆ ಬೆಳಗಾವಿಗೆ ಸಚಿವದ್ವಯರ ಆಗಮನ

    ವಿಮಾನ ನಿಲ್ದಾಣದಿಂದಲೇ ಬೈಕ್ ರ‍್ಯಾಲಿ ಮೂಲಕ ಸಚಿವದ್ವಯರನ್ನು ನಗರಕ್ಕೆ ಕರೆತಂದ ಕಾರ್ಯಕರ್ತರು, ನಂತರ ಕಿತ್ತೂರು ರಾಣಿ ಚೆನ್ನಮ್ಮ, ಛತ್ರಪತಿ ಶಿವಾಜಿ ಮಹಾರಾಜ್‌, ಡಾ.ಬಿ.ಆರ್ ಅಂಬೇಡ್ಕರ್, ಸಂಗೊಳ್ಳಿ ರಾಯಣ್ಣ, ಮಹಾತ್ಮ ಗಾಂಧಿ ಸೇರಿದಂತೆ ಮಹಾನ್ ವ್ಯಕ್ತಿಗಳ ಪುತ್ಥಳಿಗಳಿಗೆ ಸಚಿವರಿಂದ ಮಾಲಾರ್ಪಣೆ ಮಾಡಿಸಲಾಯಿತು. ಇದನ್ನೂ ಓದಿ: ಮನೆಮನೆಗೆ ಗ್ಯಾರಂಟಿ ಕಾರ್ಡ್ ಎಸೆದ ಹಾಗೆ, ಎಲ್ಲರಿಗೂ ಗ್ಯಾರಂಟಿ ಕೊಡಲು ಸಾಧ್ಯವಿಲ್ಲ: ಸತೀಶ್ ಜಾರಕಿಹೊಳಿ

  • ಸಚಿವರಾದ ಬಳಿಕ ಮೊದಲ ಬಾರಿಗೆ ಬೆಳಗಾವಿಗೆ ಸಚಿವದ್ವಯರ ಆಗಮನ

    ಸಚಿವರಾದ ಬಳಿಕ ಮೊದಲ ಬಾರಿಗೆ ಬೆಳಗಾವಿಗೆ ಸಚಿವದ್ವಯರ ಆಗಮನ

    ಬೆಳಗಾವಿ: ಕಾಂಗ್ರೆಸ್ (Congress) ನೇತೃತ್ವದ ಸರ್ಕಾರದ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿರುವ ಸತೀಶ್ ಜಾರಕಿಹೊಳಿ (Satish Jarkiholi) ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಸಚಿವರಾದ ಬಳಿಕ ಮೊದಲ ಬಾರಿಗೆ ಭಾನುವಾರ ಬೆಳಗಾವಿಗೆ (Belagavi) ಆಗಮಿಸಲಿದ್ದಾರೆ.

    ಸಚಿವರಾದ ಮೇಲೆ ಬೆಳಗಾವಿಗೆ ಆಗಮಿಸುತ್ತಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹಾಗೂ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಸ್ವಾಗತಿಸಲು ಇಡೀ ಬೆಳಗಾವಿ ಮಹಾನಗರ ಸಜ್ಜಾಗಿದೆ. ವಿಮಾನ ನಿಲ್ದಾಣದಿಂದಲೇ ಬೃಹತ್ ರ‍್ಯಾಲಿ ಮೂಲಕ ನಗರಕ್ಕೆ ಕರೆತರಲು ಕಾರ್ಯಕರ್ತರು ಹಾಗೂ ಅಭಿಮಾನಿಗಳು ನಿರ್ಧರಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ 135 ಕ್ಷೇತ್ರಗಳ ಮುಖ್ಯಮಂತ್ರಿಯಲ್ಲ: ಯಶ್‌ಪಾಲ್ ಸುವರ್ಣ

    ಮೇ 20ರಂದು ಸತೀಶ್ ಜಾರಕಿಹೊಳಿ ಹಾಗೂ ಮೇ 27ರಂದು ಲಕ್ಷ್ಮೀ ಹೆಬ್ಬಾಳ್ಕರ್ ಸಂಪುಟದರ್ಜೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಕಾಂಗ್ರೆಸ್ ಸರ್ಕಾರದ ಸಚಿವರಾದ ನಂತರ ಇವರು ಮೊದಲ ಬಾರಿಗೆ ಬೆಳಗಾವಿಗೆ ಆಗಮಿಸುತ್ತಿದ್ದಾರೆ. ಭಾನುವಾರ ಬೆಳಗ್ಗೆ 10:30ಕ್ಕೆ ಇಬ್ಬರೂ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ. ಬಳಿಕ ಇಬ್ಬರನ್ನೂ ವಿಮಾನ ನಿಲ್ದಾಣದಲ್ಲೇ ಅದ್ಧೂರಿಯಾಗಿ ಸ್ವಾಗತಿಸಿ ಕರೆತರಲು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಾರ್ವಜನಿಕರು ನಿರ್ಧರಿಸಿದ್ದಾರೆ. ಇದನ್ನೂ ಓದಿ: ಬಾಗಲಕೋಟೆಯಲ್ಲಿದೆ ಸೆಂಗೊಲ್ ರಾಜದಂಡ ಹೋಲುವ ಕಲಾಕೃತಿ – ಏನಿದರ ವಿಶೇಷತೆ?

    ವಿಮಾನ ನಿಲ್ದಾಣದಿಂದಲೇ ಬೈಕ್ ರ‍್ಯಾಲಿ ಮೂಲಕ ಸಚಿವದ್ವಯರನ್ನು ನಗರಕ್ಕೆ ಕರೆತರಲಾಗುತ್ತದೆ. ಬೆಳಗಾವಿಗೆ ಆಗಮಿಸಿದ ನಂತರ ಕಿತ್ತೂರು ರಾಣಿ ಚೆನ್ನಮ್ಮ, ಛತ್ರಪತಿ ಶಿವಾಜಿ ಮಹಾರಾಜ, ಡಾ.ಬಿ.ಆರ್.ಅಂಬೇಡ್ಕರ್, ಸಂಗೊಳ್ಳಿ ರಾಯಣ್ಣ, ಮಹಾತ್ಮ ಗಾಂಧೀಜಿ ಸೇರಿದಂತೆ ಮಹಾನ್ ವ್ಯಕ್ತಿಗಳ ಪುತ್ಥಳಿಗಳಿಗೆ ಸಚಿವರು ಮಾಲಾರ್ಪಣೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಕೇಜ್ರಿವಾಲ್‌, ಮಲ್ಲಿಕಾರ್ಜುನ ಖರ್ಗೆ ವಿರುದ್ಧ ದೂರು ದಾಖಲು

  • ನನಗೆ ಅಧಿಕಾರದ ಆಸೆಯಿಲ್ಲ: ಲಕ್ಷ್ಮಿ ಹೆಬ್ಬಾಳ್ಕರ್

    ನನಗೆ ಅಧಿಕಾರದ ಆಸೆಯಿಲ್ಲ: ಲಕ್ಷ್ಮಿ ಹೆಬ್ಬಾಳ್ಕರ್

    ಬೆಳಗಾವಿ: ರಾಜ್ಯದ ಜನರಿಗೆ ಕೊಟ್ಟ 5 ಭರವಸೆ ಈಡೇರಿಸುವುದು ನಮ್ಮೆಲ್ಲರ ಲಕ್ಷ್ಯವಾಗಿದೆ ಹೊರತಾಗಿ ಅಧಿಕಾರದ ಆಸೆ ಇಲ್ಲ ಎಂದು ಕಾಂಗ್ರೆಸ್‍ನ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ತಿಳಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ಏನು ನಿರ್ಧಾರ ಕೈಗೊಳ್ಳುತ್ತೋ ಆ ಜವಾಬ್ದಾರಿ ನಿಭಾಯಿಸುತ್ತೇನೆ. ನಾನು ಅದರ ಬಗ್ಗೆ ಏನು ಮಾತನಾಡಲ್ಲ. 135 ಜನ ಗೆದ್ದಿದ್ದೇವೆ ಕರ್ನಾಟಕದ ಮಹಾಜನತೆ ಆಶೀರ್ವಾದ ಮಾಡಿದ್ದಾರೆ ಎಂದರು.

    ನನಗೆ ನನ್ನ ಜನ ಸನ್ಮಾನ ಮಾಡಿದ್ದಾರೆ. ಹೈಕಮಾಂಡ್‍ಗೆ, ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ಸಿಎಲ್‍ಪಿ ನಾಯಕ ಸಿದ್ದರಾಮಯ್ಯರಿಗೆ ಭಾಷೆ ಕೊಟ್ಟಿದ್ದೆವು. ಜಿಲ್ಲೆಯ ಎಲ್ಲ ನಾಯಕರು ಸಾಮೂಹಿಕ ನಾಯಕತ್ವದಲ್ಲಿ ಸತೀಶ್ ಜಾರಕಿಹೊಳಿ ನಾಯಕತ್ವದಲ್ಲಿ 12 ಕ್ಷೇತ್ರಗಳಲ್ಲಿ ಗೆಲ್ಲೋದಾಗಿ ಹೇಳಿದ್ವಿ, ಬೆಳಗಾವಿ ಜಿಲ್ಲೆಯ 11 ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದೇವೆ. ಬೆಳಗಾವಿ (Belagavi) ಜಿಲ್ಲಾ ರಾಜಕಾರಣ ಇತಿಹಾಸದಲ್ಲಿ ಇಷ್ಟೊಂದು ಸೀಟ್ ಬಂದಿರಲಿಲ್ಲ, ಬಹಳ ಧೈರ್ಯದಿಂದ ಸಿಎಲ್‍ಪಿ ಸಭೆಯಲ್ಲಿ ಮುಖ ಎತ್ತಿ ಮಾತನಾಡುವ ಧೈರ್ಯ ಇಟ್ಟು ಹೋಗುತ್ತಿದ್ದೇವೆ ಎಂದರು. ಇದನ್ನೂ ಓದಿ: ಕ್ಯಾಬ್‌ ಬುಕ್‌ ಮಾಡಿದ್ರು; ಪಿಕಪ್‌ ಮಾಡಲು ಬಂದ ಚಾಲಕನನ್ನೇ ಎಳೆದು ಹಾಕಿ ಕ್ಯಾಬ್‌ ಕದ್ದೊಯ್ದರು!

    ಖುಷಿಯಿಂದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಹೋಗುತ್ತಿದ್ದೇನೆ. ಕಾಂಗ್ರೆಸ್ (Congress) ಪಕ್ಷದ ಒಗ್ಗಟ್ಟು, ಜಿಲ್ಲೆಯ ನೇತೃತ್ವ ಗೆಲುವಿಗೆ ಪ್ರಮುಖ ಕಾರಣವಾಗಿದೆ. ನಿನ್ನೆ ಸತೀಶ್ ಜಾರಕಿಹೊಳಿ (Satish Jarkiholi) ಹೋಗಿದ್ದಾರೆ. ಇಂದು ಐದಾರು ಶಾಸಕರು ಹೋಗುತ್ತಿದ್ದೇವೆ ಎಂದರು. ಇದನ್ನೂ ಓದಿ: ಮೋದಿ ಅಲೆ ಮುಗಿದಿದೆ, ಬಜರಂಗ ಬಲಿ ಕಾಂಗ್ರೆಸ್ ಜೊತೆಗಿದೆ: ಸಂಜಯ್ ರಾವತ್

  • 2+1 ಬೆಳಗಾವಿ ಜಿದ್ದು: ಎಲೆಕ್ಷನ್ ವೇಳೆ CD, ಆಡಿಯೋ ಬಾಂಬ್ ಸಮರ ಹೆಚ್ಚಾಗುತ್ತಾ?

    2+1 ಬೆಳಗಾವಿ ಜಿದ್ದು: ಎಲೆಕ್ಷನ್ ವೇಳೆ CD, ಆಡಿಯೋ ಬಾಂಬ್ ಸಮರ ಹೆಚ್ಚಾಗುತ್ತಾ?

    ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarkiholi) ವಿರುದ್ಧ ಇನ್ನಷ್ಟು ಅಸ್ತ್ರ ಪ್ರಯೋಗಕ್ಕೆ ಸಿದ್ಧತೆ ನಡೆದಿದ್ಯಾ? ರಮೇಶ್ ಜಾರಕಿಹೊಳಿಯೇ ತನ್ನ ವಿರುದ್ಧ ಆಡಿಯೋ (Audio) ರಿಲೀಸ್ ಆಗುತ್ತೆ ಎಂಬ ಹೇಳಿಕೆಯ ಬಗ್ಗೆ ರಾಜ್ಯ ರಾಜಕೀಯದಲ್ಲಿ ಬಿಸಿ ಬಿಸಿ ಚರ್ಚೆ ಆಗ್ತಿದೆ.

    ಕಿತ್ತೂರು ಚೆನ್ನಮ್ಮ ಬಗ್ಗೆ ನಾನು ಮಾತನಾಡಿರುವುದು ಬೇರೆ, ಆದ್ರೆ ಅದನ್ನೇ ಮುಂದಿಟ್ಟುಕೊಂಡು ನನ್ನ ವಿರುದ್ಧ ಆಡಿಯೋ ಬಿಡುಗಡೆ ಮಾಡ್ತಾರೆ. ಕಟ್ ಆಂಡ್ ಪೇಸ್ಟ್ ಮಾಡಿ ರಿಲೀಸ್ ಮಾಡ್ತಾರೆ. ವಿರೋಧಿ ಪಡೆ ತಂತ್ರ ನನಗೆ ಗೊತ್ತು ಅಂತಾ ರಮೇಶ್ ಜಾರಕಿಹೊಳಿ ಹೇಳಿಕೆ ಕೊಟ್ಟಿರುವುದು ಹಲವು ಕುತೂಹಲಗಳಿಗೆ ಕಾರಣವಾಗಿದೆ. ಇದನ್ನೂ ಓದಿ: ರಮೇಶ್ ಜಾರಕಿಹೊಳಿಗೆ ಕಾಮನ್ ಸೆನ್ಸ್ ಇಲ್ಲ – `ವಿಷಕನ್ಯೆ’ ಪದ ಬಳಕೆಗೆ ಹೆಬ್ಬಾಳ್ಕರ್ ಸಹೋದರ ಖಂಡನೆ

    ಅಂದಹಾಗೆ ಚುನಾವಣೆ ಘೋಷಣೆಗೂ ಮುನ್ನ ಬೆಳಗಾವಿಯಲ್ಲಿ ಸಿಡಿ ಬಾಂಬ್ (CD Bomb), ಆಡಿಯೋ ಬಾಂಬ್ ಶುರುವಾಗುವ ಸುಳಿವು ಸಿಕ್ಕಿದೆ. 129 ಸಿಡಿಗಳು ಇವೆ ಎಂದು ಡಿಕೆಶಿಗೆ (D.K Shivakumar) ಪೊಲಿಟಿಕಲ್ ಬಾಂಬ್ ಫಿಕ್ಸ್ ಮಾಡಿದ್ದಾರೆ ರಮೇಶ್ ಜಾರಕಿಹೊಳಿ. ಡಿಕೆಶಿ, ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ವಿರುದ್ಧ ರಮೇಶ್ ಜಾರಕಿಹೊಳಿಯ ದಾಖಲೆ ಅಸ್ತ್ರ ಸಿಡಿಯುತ್ತಾ? ಠುಸ್ ಆಗುತ್ತಾ ಎಂಬ ಪ್ರಶ್ನೆಗಳು ಎದ್ದಿವೆ. ಇದನ್ನೂ ಓದಿ: ಬಿಜೆಪಿಗೆ ಸಿದ್ದರಾಮಯ್ಯ, ಖರ್ಗೆ, ಡಿಕೆಶಿ ಮಕ್ಕಳು ಬರ್ತಾರೆ: ಕಟೀಲ್

    ಈ ನಡುವೆ ಲಕ್ಷ್ಮೀ ಹೆಬ್ಬಾಳ್ಕರ್, ಡಿಕೆಶಿ ಕೂಡ ರಮೇಶ್ ಜಾರಕಿಹೊಳಿ ವಿರುದ್ಧ ಇನ್ನಷ್ಟು ಆಡಿಯೋ ರಿಲೀಸ್ ಮಾಡಲು ಸಿದ್ಧತೆ ನಡೆಸಿದ್ದು, ಚುನಾವಣೆ ಘೋಷಣೆಗೂ ಮುನ್ನ ಅಥವಾ ಚುನಾವಣೆ ಘೋಷಣೆ ಬಳಿಕ ಆ ಅಸ್ತ್ರಗಳನ್ನು ಪ್ರಯೋಗ ಮಾಡುವ ಸಾಧ್ಯತೆ ಇದೆ. ಹಾಗಾಗಿ ಎರಡು ಬಣಗಳಿಂದ ಸಾಕ್ಷಿ ಗುದ್ದಾಟ, ಮರ್ಯಾದೆ ತೆಗೆಯುವ ಆಟ ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣ್ತಿಲ್ಲ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಲಕ್ಷ್ಮಿ ಹೆಬ್ಬಾಳ್ಕರ್ ಭದ್ರಕೋಟೆಯಲ್ಲಿ ಅಮಿತ್ ಶಾ ಹವಾ- ರಮೇಶ್ ಜಾರಕಿಹೊಳಿ ಶಪಥ ನಡೆಯತ್ತಾ?

    ಲಕ್ಷ್ಮಿ ಹೆಬ್ಬಾಳ್ಕರ್ ಭದ್ರಕೋಟೆಯಲ್ಲಿ ಅಮಿತ್ ಶಾ ಹವಾ- ರಮೇಶ್ ಜಾರಕಿಹೊಳಿ ಶಪಥ ನಡೆಯತ್ತಾ?

    ಬೆಂಗಳೂರು/ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಭದ್ರಕೋಟೆಯಲ್ಲಿ ಕೇಂದ್ರ ಸಚಿವ ಅಮಿತ್ ಶಾ (Amit Shah) ಸವಾರಿ… ಇದು ರಾಜ್ಯ ಬಿಜೆಪಿಯ (BJP) ಹೊಸ ಗುರಿ.

    ಹೌದು. ಇದೇ ತಿಂಗಳ ಜನವರಿ 28ರಂದು ಬೆಳಗಾವಿಯ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ((Belagavi Rural Assembly Constituncy) ಎಂ.ಕೆ ಹುಬ್ಬಳ್ಳಿಯಲ್ಲಿ ಅಮಿತ್ ಶಾ ಸಮಾವೇಶ ನಡೆಯಲಿದೆ. ಇದನ್ನೂ ಓದಿ: ಜನವರಿ 27ಕ್ಕೆ ಮಂಸೋರೆ ನಿರ್ದೇಶನದ ‘19.20.21’ ಚಿತ್ರದ ಟ್ರೈಲರ್ ಬಿಡುಗಡೆ

    ಆ ಸಮಾವೇಶದಲ್ಲೇ ಅಮಿತ್ ಶಾ, ಲಕ್ಷ್ಮಿ ಹೆಬ್ಬಾಳ್ಕರ್ ಸೋಲಿಸುವ ಅಸ್ತ್ರ ಪ್ರಯೋಗಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಮಿತ್ ಶಾ ಸಮಾವೇಶದ ವೇಳೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕಾಣಿಸಿಕೊಳ್ಳಲು ಪ್ಲಾನ್ ಮಾಡಿದ್ದಾರೆ. ಇದೇ ವೇದಿಕೆಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನ ಸೋಲಿಸುವ ಶಪಥ ಮಾಡ್ತಾರಾ ರಮೇಶ್ ಜಾರಕಿಹೊಳಿ (Ramesh Jarkiholi) ಎಂಬ ಕುತೂಹಲ ಸಹ ಕಾದಿದೆ.

    ಈಗಾಗಲೇ ಎರಡ್ಮೂರು ಸಮಾವೇಶಗಳಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಬಹಿರಂಗ ವಾಗ್ದಾಳಿ ನಡೆಸಿರುವ ರಮೇಶ್ ಜಾರಕಿಹೊಳಿ ಎಂ.ಕೆ.ಹುಬ್ಬಳ್ಳಿ ಸಮಾವೇಶದಲ್ಲಿ ಏನು ಹೊಸ ಸವಾಲು ಹಾಕ್ತಾರೆ ಎಂಬ ಬಗ್ಗೆ ಎಲ್ಲರ ಚಿತ್ತ ನೆಟ್ಟಿದೆ. ಇದನ್ನೂ ಓದಿ: ಹೈದರಾಬಾದ್ ವಿವಿ ಕ್ಯಾಂಪಸ್‌ನಲ್ಲಿ ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನ – ತನಿಖೆಗೆ ಆದೇಶ

    ಗೆದ್ದ ಕ್ಷೇತ್ರದಲ್ಲಿ ನಾನು ಮಾಡೋದೇನಿದೆ?: ಇನ್ನು ಬಿಜೆಪಿ ಗೆದ್ದಿರುವ ಕ್ಷೇತ್ರಗಳಲ್ಲಿ ನಾನು ಬಂದು ಮಾಡೋದು ಏನಿದೆ? ಗೆದ್ದಿರುವುದನ್ನ ಉಳಿಸಿಕೊಳ್ಳುವ ಜವಾಬ್ದಾರಿ ನಿಮ್ಮದು, ನನ್ನ ಕರೆಯಬೇಡಿ. ಕಳೆದ ಸಲ ಯಾವ ಕ್ಷೇತ್ರಗಳಲ್ಲಿ ಬಿಜೆಪಿ ಸೋತಿದೆಯೋ ಅಲ್ಲಿಯೇ ನನ್ನ ಯುದ್ಧ ಎಂದು ರಾಜ್ಯ ಬಿಜೆಪಿ ನಾಯಕರಿಗೆ ಶಾ ಖಡಕ್ ಸಂದೇಶ ರವಾನಿಸಿದ್ದಾರೆ. ಆ ತಂತ್ರದ ಮೊದಲ ಭಾಗವಾಗಿ ಮಂಡ್ಯ ಸಮಾವೇಶದ ಬಳಿಕ ಈಗ ಬೆಳಗಾವಿ, ಹುಬ್ಬಳ್ಳಿ ಜಿಲ್ಲೆಗಳನ್ನ ಟಾರ್ಗೆಟ್ ಮಾಡಲಾಗಿದೆ.

    ಜನವರಿ 28ರಂದೇ ಹುಬ್ಬಳ್ಳಿ-ಧಾರವಾಡ ಜಿಲ್ಲೆಯ ಕುಂದಗೋಳದಲ್ಲೂ ಅಮಿತ್ ಶಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಶಾಸಕರಿಲ್ಲದ ಕ್ಷೇತ್ರಗಳಲ್ಲೇ ನನ್ನ ಸಂಚಾರ ಎಂದಿರುವ ಶಾ ಕಳೆದುಕೊಂಡ ಕ್ಷೇತ್ರಗಳನ್ನ ಗೆಲ್ಲುವ ಪ್ಲಾನ್ ಸಕ್ಸಸ್ ಆಗುತ್ತಾ? ಅನ್ನೋದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರಮೇಶ್ ಜಾರಕಿಹೊಳಿ ಹಣ ಹಂಚುತ್ತಿದ್ದ ಫೋಟೋ ಬಿಡುಗಡೆ

    ರಮೇಶ್ ಜಾರಕಿಹೊಳಿ ಹಣ ಹಂಚುತ್ತಿದ್ದ ಫೋಟೋ ಬಿಡುಗಡೆ

    ಬೆಳಗಾವಿ: 2018ರ ಚುನಾವಣೆ (Election) ವೇಳೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarakiholi) ಹಣ ಹಂಚುತ್ತಿದ್ದ ಫೋಟೋ (Photo) ಮತ್ತು ಎಫ್‍ಐಆರ್ (FIR) ಪ್ರತಿಯನ್ನು ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ ರಿಲೀಸ್ ಮಾಡಿದ್ದಾರೆ.

    ನಾನು 6 ಎಲೆಕ್ಷನ್‍ನಲ್ಲಿ ಗೆದ್ದಿದೀನಿ ಆದ್ರೆ ದುಡ್ಡು ಹಂಚಿಲ್ಲ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆ ವಿಚಾರಕ್ಕೆ ಪ್ರತಿಯಾಗಿ, 2018ರಲ್ಲಿ ರಮೇಶ್ ಜಾರಕಿಹೊಳಿ ವಿರುದ್ಧ ಬಿಜೆಪಿ (BJP) ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅಶೋಕ್ ಪೂಜಾರಿ ಸುದ್ದಿಗೋಷ್ಠಿ ನಡೆಸಿ ರಮೇಶ್ ಜಾರಕಿಹೊಳಿ ಹಣ ಹಂಚಿದ ಫೋಟೋ ಮತ್ತು ಎಫ್‍ಐಆರ್ ಪ್ರತಿ ಬಿಡುಗಡೆ ಮಾಡಿದ್ದಾರೆ.

    ಈ ವೇಳೆ ದುರ್ಗಾ ಮಂದಿರದಲ್ಲಿ ಅಂದಿನ ಕಾಂಗ್ರೆಸ್ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಹಣ ಹಂಚಿದ ಆರೋಪ ಇತ್ತು. ಈ ಬಗ್ಗೆ ಗೋಕಾಕ್ ಗ್ರಾಮೀಣ ಠಾಣೆಯಲ್ಲಿ 2018ರ ಮೇ 7ರಂದು ದಾಖಲಾಗಿದ್ದ ಎಫ್‍ಐಆರ್ ಪ್ರತಿ, ಹಣ ಹಂಚುತ್ತಿರುವ ಫೋಟೋ ಬಿಡುಗಡೆ ಮಾಡಿದ್ದು, ರಮೇಶ್ ಜಾರಕಿಹೊಳಿ ವಿರುದ್ಧ ಗೋಕಾಕ್‍ನಲ್ಲಿ ನಿರಂತರವಾಗಿ 4 ಬಾರಿ ಸ್ಪರ್ಧಿಸಿ ಅಶೋಕ ಪೂಜಾರಿ ಸೋತಿದ್ದಾರೆ. ಇದನ್ನೂ ಓದಿ: ಉಚಿತ ಭಾಗ್ಯದ ಗೊಂದಲ ಬಗೆಹರಿಸಲು ಅಖಾಡಕ್ಕೆ ಇಳಿದ್ರಾ ವಿಪಕ್ಷ ನಾಯಕ ಸಿದ್ದರಾಮಯ್ಯ

    ನಿನ್ನೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಸುಳೇಭಾವಿಯಲ್ಲಿ ಸಮಾವೇಶ ನಡೆಸಿದ್ದ ರಮೇಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಹೆಸರೇಳದೆ ವಾಗ್ದಾಳಿ ನಡೆಸಿದ್ದರು. ನಾನು 6 ಚುನಾವಣೆ ಗೆದ್ದಿದ್ದೇನೆ ಎಂದೂ ದುಡ್ಡು ಹಂಚಿಲ್ಲ ಎಂದು ರಮೇಶ್ ಜಾರಕಿಹೊಳಿ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಯಾಗಿ ಇವತ್ತು ಹಣ ಹಂಚಿಕೆ ಫೋಟೋ ಮತ್ತು ಎಫ್‍ಐಆರ್ ಬಿಡುಗಡೆ ಆಗಿದೆ. ಇದನ್ನೂ ಓದಿ: ಅಮಿತ್ ಶಾ ಮತ್ತೊಂದು ಟೂರ್ – ಬೆಂಗಳೂರು, ಮಂಡ್ಯ ಗೇಮ್ ಪ್ಲ್ಯಾನ್?

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಗಿಫ್ಟ್ ಜೊತೆ ಪ್ರಾಮಿಸ್ ಪಾಲಿಟಿಕ್ಸ್

    ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಗಿಫ್ಟ್ ಜೊತೆ ಪ್ರಾಮಿಸ್ ಪಾಲಿಟಿಕ್ಸ್

    ಬೆಳಗಾವಿ: ಜಿಲ್ಲೆಯ ಗ್ರಾಮೀಣ ಕ್ಷೇತ್ರದಲ್ಲಿ ಗಿಫ್ಟ್ (Gift) ಪಾಲಿಟಿಕ್ಸ್ ಆಯ್ತು ಈಗ ಪ್ರಾಮಿಸ್ (Promise) ಪಾಲಿಟಿಕ್ಸ್ ಪ್ರಾರಂಭವಾಗಿದೆ. ಬೆಳಗಾವಿ (Belagavi) ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಕ್ಷೇತ್ರದ ಜನರಿಗೆ ತೆಂಗಿನಕಾಯಿ ಮೇಲೆ ಆಣೆ ಪ್ರಮಾಣ ಮಾಡಿಸಿ ಮಿಕ್ಸರ್ ಗ್ರೈಂಡರ್ ನೀಡುತ್ತಿರುವ ಆರೋಪ ಕೇಳಿಬಂದಿದೆ.

    ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಬಿಜೆಪಿ ಮುಖಂಡ ಧನಂಜಯ ಜಾಧವ್ ಗಂಭೀರ ಆರೋಪ ಮಾಡಿದ್ದು, ಆಣೆ ಪ್ರಮಾಣ ಮಾಡಿಸುವವರ ತರಾಟೆಗೆ ತಗೆದುಕೊಳ್ಳುವ ವೀಡಿಯೋವೊಂದನ್ನು ಧನಂಜಯ ಜಾಧವ್ ಬಿಡುಗಡೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಮಹಿಳೆಯರು ಮಿಕ್ಸರ್ ಗ್ರೈಂಡರ್ ಒಯ್ಯುತ್ತಿರುವ ವೀಡಿಯೋ ರಿಲೀಸ್ ಮಾಡಿದ್ದು ತೆಂಗಿನಕಾಯಿ ಹಿಡಿದು ಆಣೆ ಮಾಡಿಸಿ ಮಿಕ್ಸರ್ ಗ್ರೈಂಡರ್ ನೀಡುತ್ತಿರುವ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ನಿಜವಾದ ಅಭಿವೃದ್ಧಿ ಮಾಡಿದ್ರೆ ಆಣೆ ಪ್ರಮಾಣ ಏಕೆ ಮಾಡಿಸ್ತಿದ್ರಿ ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ದೇವೇಗೌಡರ ಫೋಟೋ ಹಿಡಿದು ಅಯ್ಯಪ್ಪ ಸ್ವಾಮಿ ದರ್ಶನ ಪಡೆದ ಅಭಿಮಾನಿಗಳು

    ಲಕ್ಷ್ಮೀ ಹೆಬ್ಬಾಳ್ಕರ್ ಚೇಲಾಗಳು ಪ್ರತಿ ಮನೆಗೆ ತೆರಳಿ ಆಣೆ ಮಾಡಿಸುತ್ತಿದ್ದಾರೆ. ಇದಕ್ಕೆ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಜನರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ನಮಗೆ ವೋಟ್ ಹಾಕಬೇಕು ಅಂತಾ ಆಣೆ ಮಾಡಿಸುತ್ತಿದ್ದಾರೆ. ಈ ರೀತಿಯ ನೀಚ ರಾಜಕಾರಣ ವಿರೋಧ ಮಾಡುತ್ತಿದ್ದೇನೆ. ಇನ್ನೂರು ರೂ. ವಸ್ತು ನೀಡಿ ವೋಟ್ ಹಾಕಬೇಕೆಂದು ಆಣೆ ಮಾಡಿಸುತ್ತಿದ್ದೀರಾ? ಇಂತಹ ರಾಜಕಾರಣ ಮಾಡಬಾರದು ಎಂದು ಧನಂಜಯ ಜಾಧವ್ ಕಿಡಿಕಾರಿದ್ದಾರೆ. ಇದನ್ನೂ ಓದಿ: ಹೊಸ ಪಕ್ಷದೊಂದಿಗೆ ಫುಲ್ ಆಕ್ಟೀವ್- ಜನಾರ್ದನ ರೆಡ್ಡಿ ಓಡಾಟದಿಂದ ಬಿಜೆಪಿಗೆ ಶುರುವಾಯ್ತು ನಡುಕ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • CBI ದಾಳಿ – ಡಿಕೆಶಿ ಬೆನ್ನಿಗೆ ನಿಂತ ಲಕ್ಷ್ಮೀ ಹೆಬ್ಬಾಳ್ಕರ್

    CBI ದಾಳಿ – ಡಿಕೆಶಿ ಬೆನ್ನಿಗೆ ನಿಂತ ಲಕ್ಷ್ಮೀ ಹೆಬ್ಬಾಳ್ಕರ್

    ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಸಿಬಿಐ (CBI) ದಾಳಿ ಸರ್ವೆ ಸಾಮಾನ್ಯ, ಡಿ.ಕೆ ಶಿವಕುಮಾರ್ (DK Shivakumar) ಅವರು ಕಾನೂನಾತ್ಮಕವಾಗಿ ಹೋರಾಟ ಮಾಡ್ತಾರೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ತಿಳಿಸಿದ್ದಾರೆ.

    ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar) ಮಾಲೀಕತ್ವದ ಶಿಕ್ಷಣ ಸಂಸ್ಥೆ ಮೇಲೆ ಸಿಬಿಐ ಅಧಿಕಾರಿಗಳ ತಂಡ ದಾಳಿ ನಡೆಸಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಇತ್ತಿಚೀನ ದಿನಗಳಲ್ಲಿ ಸಿಬಿಐ ದಾಳಿ ಸರ್ವೇ ಸಾಮಾನ್ಯವಾಗಿದೆ. ವಿರೋಧ ಪಕ್ಷಗಳ ಮೇಲೆ ಸಿಬಿಐ, ಇ.ಡಿ (ED), ಐಟಿ (IT) ದಾಳಿ ಮಾಡ್ತಾ ಇರೋದು ದೇಶದಲ್ಲಿ ಹಾಗೂ ರಾಜ್ಯದಲ್ಲಿ ಜಗಜ್ಜಾಹೀರಾಗಿದೆ. ಅದರಲ್ಲಿ ಹೊಸದೇನು ಇಲ್ಲ. ಡಿ.ಕೆ ಶಿವಕುಮಾರ್ ಅವರು ಕಾನೂನಾತ್ಮಕವಾಗಿ ಹೋರಾಟ ಮಾಡ್ತಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮೈದಾನ ಖಾಲಿ ಇದೆ, ನಾವೂ ತಯಾರಿದ್ದೇವೆ ನೀವು ಅಖಾಡಕ್ಕೆ ಧುಮುಕಿ – ಪರೋಕ್ಷವಾಗಿ ಜಾರಕಿಹೊಳಿಗೆ ಲಕ್ಷ್ಮೀ ಹೆಬ್ಬಾಳ್ಕರ್ ಆಹ್ವಾನ

    ಇದೇ ವೇಳೆ ಪಂಚಮಸಾಲಿ ಸಮುದಾಯ ಮೀಸಲಾತಿ (Reservation) ವಿಚಾರಕ್ಕೆ ಪ್ರತಿಕ್ರಿಯಿಸಿದ ಲಕ್ಷ್ಮೀ ಹೆಬ್ಬಾಳ್ಕರ್, ಮುಖ್ಯಮಂತ್ರಿಗಳು ಮೀಸಲಾತಿ ಕೊಡ್ತೀವಿ ಅಂತಾ 4 ಸಲ ಹೇಳಿದ್ದಾರೆ. ಈಗ ಸಮಿತಿ ರಚಿಸಿ ವರದಿ ಬಂದ ಬಳಿಕ ಮೀಸಲಾತಿ ಕೊಡ್ತೀವಿ ಅಂತಾ ಹೇಳ್ತಿದ್ದಾರೆ. ಹಾಗಾದ್ರೆ ಅವರಿಗೆ ಮೀಸಲಾತಿ ಕೊಡೋಕೆ ಇಷ್ಟ ಇಲ್ವಾ? ಯಾರದಾದ್ರೂ ಒತ್ತಡ ಇದ್ಯಾ ಅನ್ನೋದು ಗೊತ್ತಿಲ್ಲ. ಒಟ್ಟಿನಲ್ಲಿ ಡಿ.22ರ ವರೆಗೂ ಸರ್ಕಾರಕ್ಕೆ ಗಡುವು ಕೊಟ್ಟಿದ್ದೇವೆ. ಆದಾದ ಬಳಿಕ ಮುಂದಿನ ನಡೆ ನಿರ್ಧರಿಸುತ್ತೇವೆ ಎಂದು ತಿಳಿಸಿದ್ದಾರೆ.

    ಡಿಕೆಶಿಗೆ ಸಿಬಿಐ ಶಾಕ್:
    ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾಲೀಕತ್ವದ ಶಿಕ್ಷಣ ಸಂಸ್ಥೆ ಮೇಲೆ ಸಿಬಿಐ ಅಧಿಕಾರಿಗಳ ತಂಡ ನಿನ್ನೆ ದಾಳಿ ನಡೆಸಿತ್ತು. ಇಲ್ಲಿನ ರಾಜರಾಜೇಶ್ವರಿ ನಗರದಲ್ಲಿರುವ ಗ್ಲೋಬಲ್ ಕಾಲೇಜಿನ ಮೇಲೆ ಸಿಬಿಐ ದಾಳಿ ನಡೆಸಿ, ದಾಖಲೆಗಳನ್ನು ಪರಿಶೀಲಿಸಿತ್ತು. ಆಸ್ತಿ ಮೌಲ್ಯಮಾಪನ ಕಾರ್ಯ ನಡೆಸಿತ್ತು. ಅಲ್ಲದೇ ಕಳೆದೆರಡು ತಿಂಗಳ ಹಿಂದೆ ರಾಮನಗರದಲ್ಲಿ ಮೌಲ್ಯಮಾಪನ ಮಾಡಲಾಗಿತ್ತು. ಸಿಬಿಐ ಅಧಿಕಾರಿಗಳು ಈಗ ಅಕ್ರಮ ಆಸ್ತಿಗೆ ಸಂಬಂಧಿಸಿದಂತೆ ಮೌಲ್ಯಮಾಪನ ನಡೆಸಿದ್ದಾರೆ. ಇದನ್ನೂ ಓದಿ: ಬಂಡವಾಳ ಹೂಡಿಕೆ ಸಮಾವೇಶದಿಂದ 6 ಲಕ್ಷ ಹುದ್ದೆ ಸೃಷ್ಟಿ: ಮುರುಗೇಶ್ ನಿರಾಣಿ

    ಗ್ಲೋಬಲ್ ಕಾಲೇಜಿಗೆ (Global College) ಡಿ.ಕೆ.ಶಿವಕುಮಾರ್ ಅಧ್ಯಕ್ಷರಾಗಿದ್ದು, ಅವರ ಪುತ್ರಿ ಐಶ್ವರ್ಯ ಅವರು ಕಾರ್ಯದರ್ಶಿಯಾಗಿದ್ದಾರೆ. 2013 ರಿಂದ 2018ರ ವರೆಗೆ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ್ದ ಹಿನ್ನೆಲೆಯಲ್ಲಿ 2020ರ ಅಕ್ಟೋಬರ್ ತಿಂಗಳಲ್ಲೂ ಸಿಬಿಐ ದಾಳಿ ನಡೆಸಿತ್ತು. 74.92 ಕೋಟಿ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ್ದ ಆರೋಪದಡಿ ಎಫ್‌ಐಆರ್ ದಾಖಲಿಸಿದ್ದ ಸಿಬಿಐ, ಡಿಕೆಶಿ ಮತ್ತು ಡಿ.ಕೆ.ಸುರೇಶ್‌ಗೆ ಸೇರಿದ್ದ 14 ಸ್ಥಳಗಳಲ್ಲಿ ದಾಳಿ ನಡೆಸಿತ್ತು.

    Live Tv
    [brid partner=56869869 player=32851 video=960834 autoplay=true]