ಬೆಂಗಳೂರು : ಕರ್ನಾಟಕ (Karnataka) ಮತ್ತು ಲಕ್ಷದ್ವೀಪ (Lakshadweepa) ನಡುವಿನ ಐತಿಹಾಸಿಕ ವ್ಯಾಪಾರ ಮಾರ್ಗಗಳನ್ನು ಪುನರುಜ್ಜೀವನಗೊಳಿಸಲು ಕರ್ನಾಟಕ ಜಲಸಾರಿಗೆ ಮಂಡಳಿ (KMB) ಪೂರ್ವಭಾವಿಯಾಗಿ ಕೆಲಸ ಮಾಡುತ್ತದೆ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಮಂಕಾಳ್ ಎಸ್. ವೈದ್ಯ (Mankal Vaidya) ತಿಳಿಸಿದರು.
ಲಕ್ಷದ್ವೀಪದ ಕವರತ್ತಿಗೆ (Kavaratti) ಭೇಟಿ ನೀಡಿದ ಸಚಿವ ಮಂಕಾಳ್ ಎಸ್. ವೈದ್ಯ ಅವರು, ಕಡಲ ವಲಯದಲ್ಲಿ ಕಾರ್ಯತಂತ್ರದ ಪಾಲುದಾರಿಕೆ ಮತ್ತು ಮೂಲಸೌಕರ್ಯ ಯೋಜನೆಗಳ ಬಗ್ಗೆ ಲಕ್ಷದ್ವೀಪ ಆಡಳಿತದ ಕೇಂದ್ರಾಡಳಿತ ಪ್ರದೇಶದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸುದೀರ್ಘವಾಗಿ ಚರ್ಚಿಸಿ, ಮಾತನಾಡಿದರು.
ಮಂಗಳೂರಿನಲ್ಲಿ ಲಕ್ಷದ್ವೀಪಕ್ಕೆ ಮೀಸಲಾದ ಜೆಟ್ಟಿಯನ್ನು ಅಭಿವೃದ್ಧಿಪಡಿಸುವ ಯೋಜನೆಯ ಪ್ರಗತಿಯನ್ನು ವೇಗಗೊಳಿಸಲಾಗುತ್ತಿದ್ದು, ಈ ಯೋಜನೆಯನ್ನು ಕೇಂದ್ರ ಸರ್ಕಾರದ ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯದ ಸಾಗರಮಾಲಾ ಯೋಜನೆಯಡಿ ಕೈಗೊಳ್ಳಲಾಗುತ್ತದೆ ಎಂದರು. ಇದನ್ನೂ ಓದಿ: ಸಿದ್ದರಾಮಯ್ಯ ರಾಜಕೀಯ ಬಿಡುವ ಮಾತೇ ಇಲ್ಲ: ಎಸ್ಎನ್ ನಾರಾಯಣಸ್ವಾಮಿ
ಸಾಗಾರಮಾಲಾ ಯೋಜನೆಯಿಂದ ಲಕ್ಷದ್ವೀಪ ದ್ವೀಪಗಳ ಮುಖ್ಯ ಭೂಭಾಗಕ್ಕೆ ಸಂಪರ್ಕ ಕಲ್ಪಿಸಲಾಗುತ್ತಿದೆ ಎಂದು ಲಕ್ಷದ್ವೀಪ ಆಡಳಿತದ ಕೇಂದ್ರಾಡಳಿತ ಪ್ರದೇಶದ ಅಧಿಕಾರಿಗಳು ಅಭಿಪ್ರಾಯ ತಿಳಿಸಿದ್ದಾರೆ.
ತರುವಾಯ, ಲಕ್ಷದ್ವೀಪ ಆಡಳಿತದ ಕೇಂದ್ರಾಡಳಿತ ಪ್ರದೇಶದ ಎದುರಿಸುತ್ತಿರುವ ಪ್ರಸ್ತುತ ನಿರ್ಬಂಧಗಳು ಮತ್ತು ಸವಾಲುಗಳನ್ನು ಲಕ್ಷದ್ವೀಪ ಆಡಳಿತದ ಕೇಂದ್ರಾಡಳಿತ ಪ್ರದೇಶದ ಅಧಿಕಾರಿಗಳು ಸಭೆಯಲ್ಲಿ ತಿಳಿಸಿದರು. ಈ ಸವಾಲುಗಳನ್ನು ಪರಿಹರಿಸಲು, ರಾಜ್ಯ ಸಚಿವರಾದ ಮಂಕಾಳ್ ಎಸ್. ವೈದ್ಯ ಅವರು ಮಾತನಾಡಿ, ಕರ್ನಾಟಕ ರಾಜ್ಯದಿಂದ ಲಕ್ಷದ್ವೀಪ ದ್ವೀಪಗಳಿಗೆ ಹಾಲು ಉತ್ಪನ್ನಗಳು, ಔಷಧಿಗಳು ಮತ್ತು ತಾಜಾ ಉತ್ಪನ್ನಗಳಂತಹ ಅಗತ್ಯ ಸರಕುಗಳ ಸಾಗಣೆಯನ್ನು ಹೆಚ್ಚಿಸಲು ಕರ್ನಾಟಕ ಪ್ರಬಲ್ಯವಾಗಿದೆ ಎಂದು ತಿಳಿಸಿದರು.
ಹೆಚ್ಚುವರಿಯಾಗಿ, ವ್ಯಾಪಾರ ಮಾರ್ಗಗಳನ್ನು ಮತ್ತಷ್ಟು ಸುಗಮಗೊಳಿಸಲು ಹಳೆಯ ಮಂಗಳೂರು ಬಂದರು ಸಮೀಪದಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಸ್ಥಾಪಿಸಲು ಯುಟಿಎಲ್ಎಗೆ ನೆರವು ನೀಡುವಂತೆ ಸಚಿವ ಮಂಕಾಳ್ ಎಸ್ ವೈದ್ಯ ಅವರು ಮನವಿ ಮಾಡಿಕೊಂಡರು.
ಈ ಸಭೆಯಲ್ಲಿ ರಾಜ್ಯ ಮೂಲಸೌಕರ್ಯ ಅಭಿವೃದ್ಧಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಕಾರ್ಯದರ್ಶಿ ಡಾ.ಎನ್.ಮಂಜುಳಾ, ಕರ್ನಾಟಕ ಜಲಸಾರಿಗೆ ಮಂಡಳಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಯರಾಮ್ ರಾಯ್ ಪುರ ಹಾಗೂ ಲಕ್ಷದ್ವೀಪ ಆಡಳಿತದ ಕೇಂದ್ರಾಡಳಿತ ಪ್ರದೇಶದ ಅಧಿಕಾರಿಗಳು, ರಾಜ್ಯ ಸರ್ಕಾರದ ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದರು.
ಮಂಗಳೂರು: ಮಂಗಳೂರು ಹಾಗೂ ಲಕ್ಷದ್ವೀಪದ (Mangaluru-Lakshadweep) ನಡುವೆ ಪ್ರವಾಸಿ ಹಡಗು ಸಂಚಾರ ಮತ್ತೆ ಆರಂಭವಾಗಿದೆ. ಲಕ್ಷದ್ವೀಪದಿಂದ 150 ಮಂದಿ ಪ್ರವಾಸಿಗರನ್ನು ಹೊತ್ತ ಮೊದಲು ಹೈಸ್ಪೀಡ್ ಪ್ರವಾಸಿ ಹಡಗು, ಕಡಲೂರು ತಲುಪಿದ್ದು, ಮಂಗಳೂರಿನ ಹಳೆ ಬಂದರಿನಲ್ಲಿ ಸ್ವಾಗತಿಸಲಾಯಿತು.
ಪ್ರಧಾನಿ ಮೋದಿ ಲಕ್ಷದ್ವೀಪ ಭೇಟಿ ಬಳಿಕ ಲಕ್ಷದ್ವೀಪದ ಬಗ್ಗೆ ಪ್ರವಾಸಿಗರಿಗೆ ಆಸಕ್ತಿ ಮೂಡಿದೆ. ಆದರೆ ಕರ್ನಾಟಕದಿಂದ ಲಕ್ಷದ್ವೀಪಕ್ಕೆ ತೆರಳಲು ವ್ಯವಸ್ಥೆ ಇರಲಿಲ್ಲ. ಸದ್ಯ ಕರ್ನಾಟಕದಿಂದ ಲಕ್ಷದ್ವೀಪಕ್ಕೆ ತೆರಳುವ ಪ್ರವಾಸಿಗರಿಗೆ ಸಿಹಿ ಸುದ್ದಿ ಸಿಕ್ಕಿದ್ದು, ಮಂಗಳೂರು ಹಾಗೂ ಲಕ್ಷದ್ವೀಪದ ನಡುವೆ ಪ್ರವಾಸಿ ಹಡಗು ಸಂಚಾರ ಮತ್ತೆ ಆರಂಭವಾಗಿದೆ. ಲಕ್ಷದ್ವೀಪದಿಂದ ಪ್ರವಾಸಿಗರನ್ನು ಹೊತ್ತ ಮೊದಲ ಹಡಗು ಪರೇಲಿ ಮಂಗಳೂರು ತಲುಪಿದೆ. ಇದನ್ನೂ ಓದಿ: ಅನ್ಯಕೋಮಿನ ಯುವಕನಿಂದ ಅಪ್ರಾಪ್ತೆ ಗರ್ಭಿಣಿ ಕೇಸ್ – ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಕಾಲಿಗೆ ಗುಂಡೇಟು
ಕೋವಿಡ್ ಸಂಕಷ್ಟಕ್ಕಿಂತ ಮೊದಲು ಮಂಗಳೂರು-ಲಕ್ಷದ್ವೀಪದ ನಡುವೆ ಪ್ರಯಾಣಿಕರ ಹಡಗು ಸಂಚಾರ ನಡೆಸುತ್ತಿತ್ತು. ಆದರೆ ಕೆಲ ವರ್ಷಗಳಿಂದ ಇದು ಕಾರಣಾಂತರದಿಂದ ಸ್ಥಗಿತಗೊಂಡಿತ್ತು. ಹೀಗಾಗಿ ಲಕ್ಷದ್ವೀಪಕ್ಕೆ ಹೋಗಬೇಕಾದರೆ, ಕೇರಳದ ಕೊಚ್ಚಿಗೆ ಹೋಗಿ ಅಲ್ಲಿಂದ ಲಕ್ಷದ್ವೀಪಕ್ಕೆ ತೆರಳಬೇಕಾಗಿತ್ತು. ಸದ್ಯ ಪ್ರವಾಸಿ ಹಡಗು ಸಂಚಾರ ಆರಂಭ ಆಗಿದ್ದು, ಮೊದಲ ಹೈಸ್ಪೀಡ್ ಹಡಗು ಪರೇಲಿ ಲಕ್ಷದ್ವೀಪದಿಂದ ಮಂಗಳೂರಿಗೆ ಆಗಮಿಸಿದೆ. ಹಡಗಿನಲ್ಲಿ ಬಂದ ಪ್ರವಾಸಿಗರು ಸಂತಸ ವ್ಯಕ್ತಪಡಿಸಿದ್ದಾರೆ.
ಸಾಮಾನ್ಯ ಹಡಗಿನಲ್ಲಿ ಲಕ್ಷದ್ವೀಪದಿಂದ ಮಂಗಳೂರು ತಲುಪಲು ಸರಾಸರಿ 13 ಗಂಟೆ ಬೇಕಾಗಿತ್ತು. ಆದರೆ ಪರೇಲಿ ಎಂಬ ಈ ಹೈಸ್ಪೀಡ್ ಹಡಗು ಏಳು ತಾಸಿನಲ್ಲಿ ಮಂಗಳೂರು ತಲುಪಿದೆ. ಮಂಗಳೂರಿನಿಂದ ಲಕ್ಷದ್ವೀಪಕ್ಕೆ ತೆರಳುವವರಿಗೆ ಮತ್ತೆ ಪ್ರವಾಸಿ ಹಡಗು ಸಂಚಾರ ಆರಂಭವಾಗಿರುವುದು ಖುಷಿ ತಂದಿದೆ. ಇದನ್ನೂ ಓದಿ: ಖಲಿಸ್ತಾನಿ ಉಗ್ರ ನಿಜ್ಜರ್ ಹತ್ಯೆ ಕೇಸ್ – ಹಿಟ್ ಸ್ಕ್ವಾಡ್‌ನ ಪ್ರಮುಖ ಆರೋಪಿ ಅರೆಸ್ಟ್!
ಮಂಗಳೂರು ಹಾಗೂ ಲಕ್ಷದ್ವೀಪ ನಡುವಿನ ಬಾಂಧವ್ಯವನ್ನು ಬೆಸೆಯುವ ಆಶಾದಾಯಕ ಬೆಳವಣಿಗೆ ಇದಾಗಿದ್ದು, ಇದರಿಂದ ಮಂಗಳೂರು ಹಾಗೂ ಲಕ್ಷದ್ವೀಪದ ಪ್ರವಾಸೋದ್ಯಮ ಅಭಿವೃದ್ಧಿಗೂ ಅನುಕೂಲವಾಗಲಿದೆ.
ಮಾಲೆ: ಕಳೆದ ವರ್ಷಕ್ಕೆ ಹೋಲಿಸಿದರೆ ಮಾಲ್ಡೀವ್ಸ್‌ಗೆ (Maldives) ಭೇಟಿ ನೀಡುವ ಭಾರತೀಯ (India) ಪ್ರವಾಸಿಗರ ಸಂಖ್ಯೆ 33% ರಷ್ಟು ಕಡಿಮೆಯಾಗಿದೆ ಎಂದು ಮಾಲ್ಡೀವ್ಸ್ ಪ್ರವಾಸೋದ್ಯಮ ಸಚಿವಾಲಯದ ವೆಬ್‍ಸೈಟ್‍ನಲ್ಲಿ ಪ್ರಕಟಿಸಿದೆ.
ಭಾರತ ಮತ್ತು ಮಾಲ್ಡೀವ್ಸ್ ನಡುವಿನ ರಾಜತಾಂತ್ರಿಕ ಕಲಹದಿಂದ ಎರಡೂ ದೇಶಗಳ ಸಂಬಂಧ ಹದಗೆಡುತ್ತಲೇ ಇದೆ. ಇದರಿಂದ ಮಾಲ್ಡೀವ್ಸ್‌ಗೆ ತೆರಳುವ ಪ್ರವಾಸಿಗರ ಸಂಖ್ಯೆಯಲ್ಲಿ ಭಾರೀ ಇಳಿಕೆಯಾಗಿದೆ. 2023ರ ಅಂಕಿಅಂಶಗಳ ಪ್ರಕಾರ, ಕಳೆದ ವರ್ಷ ಮಾ.4ರ ವೇಳೆಗೆ 41,054 ಭಾರತೀಯ ಪ್ರವಾಸಿಗರು ಮಾಲ್ಡೀವ್ಸ್‌ಗೆ ಭೇಟಿ ನೀಡಿದ್ದರು. ಈ ವರ್ಷದ ಮಾ.2ರ ಹೊತ್ತಿಗೆ ಭಾರತೀಯ ಪ್ರವಾಸಿಗರ ಸಂಖ್ಯೆ 27,224 ದಾಖಲಾಗಿದೆ. ಕಳೆದ ವರ್ಷಕ್ಕಿಂತ 13,830 ಕಡಿಮೆಯಾಗಿದೆ. ಇದನ್ನೂ ಓದಿ: ಬಿಜೆಪಿಗೆ ಅಭಿವೃದ್ಧಿಯೇ ಮಾನದಂಡ, 10 ವರ್ಷಗಳ ಅಭಿವೃದ್ಧಿ ಆಧಾರದ ಮೇಲೆ ಮತ ಕೇಳ್ತಿವಿ: ಶೋಭಾ ಕರಂದಾಜ್ಲೆ
ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಲಕ್ಷದ್ವೀಪ (Lakshadweep) ಭೇಟಿಯ ಚಿತ್ರಗಳ ಕುರಿತು ಮಾಲ್ಡೀವ್ಸ್‌ನ ಮೂವರು ಸಂಸದರು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ ನಂತರ ಭಾರತೀಯರು ಮಾಲ್ಡೀವ್ಸ್ ಪ್ರವಾಸವನ್ನು ಬಾಯ್ಕಾಟ್ ಮಾಡಲು ಆರಂಭಿಸಿದ್ದರು. ಬಳಿಕ ಭಾರತೀಯ ದ್ವೀಪ ಸಮೂಹವನ್ನು ಬೀಚ್ ಪ್ರವಾಸೋದ್ಯಮ ಮತ್ತು ದೇಶೀಯ ಪ್ರವಾಸೋದ್ಯಮವನ್ನು ಉತ್ತೇಜಿಸುವ ತಾಣವಾಗಿ ಅಭಿವೃದ್ಧಿಪಡಿಸಲು ಪ್ರಧಾನಿ ಮೋದಿ ಕರೆ ನೀಡಿದ್ದರು. ಇದಾದ ಬಳಿಕ ಮಾಲ್ಡೀವ್ಸ್‌ನ ಮೂವರು ಸಂಸದರನ್ನು ಅಮಾನತುಗೊಳಿಸಲಾಗಿತ್ತು.
ನವದೆಹಲಿ: ಚೀನಾದತ್ತ ವಾಲುತ್ತಿರುವ ಮಾಲ್ಡೀವ್ಸ್‌ಗೆ (Maldives) ತಿರುಗೇಟು ಎಂಬಂತೆ ಕೇಂದ್ರ ಸರ್ಕಾರ ತನ್ನ ಬಜೆಟ್‌ನಲ್ಲಿ ಲಕ್ಷದ್ವೀಪವನ್ನು (Lakshadweep) ಅಭಿವೃದ್ಧಿ ಮಾಡುವುದಾಗಿ ಘೋಷಣೆ ಮಾಡಿದೆ.
ದೇಶೀಯ ಪ್ರವಾಸೋದ್ಯಮದ ಉತ್ಸಾಹವನ್ನು ಹೆಚ್ಚಿಸಲು ಲಕ್ಷದ್ವೀಪ ಸೇರಿದಂತೆ ಹಲವು ದ್ವೀಪಗಳಲ್ಲಿ ಬಂದರು ಸಂಪರ್ಕ, ಮೂಲಸೌಕರ್ಯ ಯೋಜನೆಗಳನ್ನು ಆರಂಭಿಸಲಾಗುವುದು ಎಂದು ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್ (Niramala Sitharaman) ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ.
ನಿರ್ಮಲಾ ಸೀತಾರಾಮನ್ ಅವರು ಇಂದು ನೂತನ ಲೋಕಸಭೆಯಲ್ಲಿ (Loksabha) ಬಜೆಟ್ ಮಂಡಿಸಿದ ಅವರು, ವಿಕಸಿತ್ ಭಾರತ್‌ನ ದೃಷ್ಟಿಯನ್ನು ಸಾಕಾರಗೊಳಿಸಲು ರಾಜ್ಯದಲ್ಲಿ ಅನೇಕ ಬೆಳವಣಿಗೆ ಮತ್ತು ಅಭಿವೃದ್ಧಿ-ಶಕ್ತಗೊಳಿಸುವ ಸುಧಾರಣೆಗಳ ಅಗತ್ಯವಿದೆ ಎಂದು ಹೇಳಿದರು. ಇದನ್ನೂ ಓದಿ: ಮಧ್ಯಂತರ ಬಜೆಟ್‌ನಲ್ಲಿ ನಾರಿಶಕ್ತಿಗೆ ಹೆಚ್ಚಿನ ಒತ್ತು
ಜುಲೈನಲ್ಲಿ ಪೂರ್ಣ ಪ್ರಮಾಣದ ಬಜೆಟ್‌ನಲ್ಲಿ (Union Budget 2024) ನಮ್ಮ ಸರ್ಕಾರವು ವಿಕಸಿತ್ ಭಾರತ್‌ನ ನಮ್ಮ ಅನ್ವೇಷಣೆಗಾಗಿ ವಿವರವಾದ ಮಾರ್ಗಸೂಚಿಯನ್ನು ಪ್ರಸ್ತುತಪಡಿಸುತ್ತದೆ. ನಮ್ಮ ಸರ್ಕಾರವು ವಿವಿಧ ಇಲಾಖೆಗಳ ಅಡಿಯಲ್ಲಿ ಅಸ್ತಿತ್ವದಲ್ಲಿರುವ ಆಸ್ಪತ್ರೆ ಮೂಲಸೌಕರ್ಯಗಳನ್ನು ಬಳಸಿಕೊಂಡು ಹೆಚ್ಚಿನ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲು ಯೋಜಿಸಿದೆ ಎಂದರು.
ಮಾಲೆ: ಪ್ರಧಾನಿ ನರೇಂದ್ರ ಮೋದಿ (Narendra Modi) ಭೇಟಿ, ಮಾಲ್ಡೀವ್ಸ್ (Maldvies) ಉದ್ಧಟತನದ ಹೇಳಿಕೆ ನಂತ್ರ ಎಲ್ಲರ ಚಿತ್ತ ಲಕ್ಷದ್ವೀಪದತ್ತ ಹೊರಳಿದೆ. ಸಾಕಷ್ಟು ಮಂದಿ ಈ ಲಕ್ಷದ್ವೀಪದ ಬಗ್ಗೆ ಗೂಗಲ್ ಮಾಡಿದ್ದಾರೆ. ಹಾಗಿದ್ರೆ ಈ ಲಕ್ಷದ್ವೀಪದ ಇತಿಹಾಸ ಏನು ಎಂಬುದನ್ನು ಸರಳವಾಗಿ ನೋಡೋಣ.
ಲಕ್ಷದ್ವೀಪದ (Lakshadweep) ಇತಿಹಾಸ ಬಲು ರೋಚಕವಾಗಿದೆ. ಮುಸ್ಲಿಂ ಬಾಹುಳ್ಯದ ಈ ದ್ವೀಪ ಸಮೂಹವನ್ನು ವಶಕ್ಕೆ ಪಡೆಯಲು ಪಾಕಿಸ್ತಾನ ಯತ್ನಿಸಿತ್ತು. ಅರ್ಧ ಗಂಟೆ ತಡವಾಗಿದ್ದರೂ ಲಕ್ಷದ್ವೀಪ ನಮ್ಮದಾಗಿರುತ್ತಿರಲಿಲ್ಲ. ಪಾಕಿಸ್ತಾನದ ಈ ಸಂಚನ್ನು ಭಾರತ ವಿಫಲಗೊಳಿಸಿದೆ. ಇದನ್ನೂ ಓದಿ: ಲಕ್ಷದ್ವೀಪದಲ್ಲಿ ಮೋದಿ ಸ್ನಾರ್ಕ್ಲಿಂಗ್ – ಫೋಟೋಗಳು ಸಿಕ್ಕಾಪಟ್ಟೆ ವೈರಲ್!
ಪಾಕ್ ಸಂಚನ್ನು ಭಾರತ ವಿಫಲಗೊಳಿಸಿದ್ದು ಹೇಗೆ..?: 1947ರಲ್ಲಿ ಸ್ವಾತಂತ್ರ್ಯ ನಂತರ ಲಕ್ಷದ್ವೀಪ ಭಾರತದ ಭಾಗವಾಯ್ತು. ಆರಂಭದಲ್ಲಿ ಲಕ್ಷದ್ವೀಪವನ್ನು ನಿರ್ಲಕ್ಷಿಸಲಾಗಿತ್ತು. ಹೀಗಾಗಿ ಲಕ್ಷದ್ವೀಪದ ಮೇಲೆ ಪಾಕಿಸ್ತಾನದ (Pakistan) ಪ್ರಧಾನಿ ಲಿಯಾಖತ್ ಕಣ್ಣು ಹಾಕಿದ್ದ. ಇದೇ ವೇಳೆ ಸರ್ದಾರ್ ವಲ್ಲಭಾಯ್ ಪಟೇಲ್ ಚಿತ್ತವೂ ಹರಿದಿತ್ತು. ಇದನ್ನರಿತ ಪಾಕಿಸ್ತಾನ ಕೂಡಲೇ ಲಕ್ಷದ್ವೀಪದತ್ತ ಯುದ್ಧ ನೌಕೆ ಕಳುಹಿಸಿತ್ತು. ಆದರೆ ಇದಕ್ಕೂ ಮೊದಲೇ ಭಾರತೀಯ ಸೇನೆ ಲಕ್ಷದ್ವೀಪ ತಲುಪಿತ್ತು. ಭಾರತದ ತ್ರಿವರ್ಣ ಪತಾಕೆ ಕಂಡು ಸದ್ದಿಲ್ಲದೇ ಪಾಕ್ ಸೇನೆ ವಾಪಸ್ ಆಗಿತ್ತು. ಆ ಕ್ಷಣದಿಂದಲೂ ಲಕ್ಷದ್ವೀಪ ಭಾರತದ ಭಾಗವಾಗಿದೆ.
ವಿಸ್ತೀರ್ಣ, ಜನಸಂಖ್ಯೆ ಎಷ್ಟು..?: ಭಾರತಕ್ಕೆ ಸೇರಿದ ಅತಿ ಚಿಕ್ಕ ಕೇಂದ್ರಾಡಳಿತ ಪ್ರದೇಶವಾಗಿರುವ ಲಕ್ಷದ್ವೀಪದ ವಿಸ್ತೀರ್ಣ 32.62 ಚದರ ಕಿ.ಮೀ. ಇನ್ನು 36 ಚಿಕ್ಕ ಚಿಕ್ಕ ದ್ವೀಪಗಳ ಸಮೂಹ ಇದೆ. ಇದರಲ್ಲಿ 10 ದ್ವೀಪಗಳಲ್ಲಿ ಮಾತ್ರ ಜನ ವಾಸ ಮಾಡುತ್ತಾರೆ. 2011ರ ಜನಗಣತಿ ಪ್ರಕಾರ, ಇಲ್ಲಿ 64,473 ಮಂದಿ ಇದ್ದಾರೆ. ಇಲ್ಲಿನ ಜನಸಂಖ್ಯೆಯಲ್ಲಿ 96% ಮಂದಿ ಮುಸ್ಲಿಮರು ಇದ್ದಾರೆ. ಸಾಕ್ಷರತೆ ಪ್ರಮಾಣ 91.82% ರಷ್ಟಿದೆ. ಇದನ್ನೂ ಓದಿ: ಲಕ್ಷದ್ವೀಪಕ್ಕೆ ಮೋದಿ ಭೇಟಿ: ಮಾಲ್ಡೀವ್ಸ್‌ಗೆ ಬಿಗ್ ಶಾಕ್
ಮೋದಿ ಭೇಟಿ ಬಳಿಕ ಟ್ರೆಂಡ್: ಪ್ರಧಾನಿ ನರೇಂದ್ರ ಮೋದಿ (Narendra Modi) ಭೇಟಿ ಬಳಿಕ ಸೋಷಿಯಲ್ ಮೀಡಿಯಾಗಳಲ್ಲಿ ಲಕ್ಷದ್ವೀಪದ ಪ್ರವಾಸಿ ತಾಣಗಳ ಬಗ್ಗೆ ಹುಡುಕಾಟ ನಡೆದಿದೆ. ಶುಕ್ರವಾರವೊಂದೇ ದಿನ 50ಸಾವಿರಕ್ಕೂ ಹೆಚ್ಚು ಜನ ಲಕ್ಷದ್ವೀಪದ ಬಗ್ಗೆ ಜಾಲಾಡಿದ್ದಾರೆ. ಇದು 20 ವರ್ಷದಲ್ಲೇ ಗರಿಷ್ಠ.. ಮೇಕ್ ಮೈ ಟ್ರಿಪ್‍ನಲ್ಲಿ ಲಕ್ಷದ್ವೀಪಕ್ಕಾಗಿ ಹುಡುಕುವರರ ಪ್ರಮಾಣ 3,400 ಪಟ್ಟು ಜಾಸ್ತಿಯಾಗಿದೆ. ಇದನ್ನೂ ಓದಿ: ಮೋದಿ ಭೇಟಿ ಬಳಿಕ ಲಕ್ಷದ್ವೀಪ ಪ್ರವಾಸದತ್ತ ಭಾರತೀಯರ ಚಿತ್ತ – #BoycottMaldives ಫುಲ್ ಟ್ರೆಂಡ್
ಲಕ್ಷದ್ವೀಪದಲ್ಲಿ ನೋಡಲೇಬೇಕಾದ ಪ್ರವಾಸಿ ತಾಣಗಳು ಯಾವುವು..?: * ಕವರಟ್ಟಿ ದ್ವೀಪ: ಇದು ಲಕ್ಷದ್ವೀಪದ ರಾಜಧಾನಿಯಾಗಿದ್ದು, ಕವರಟ್ಟಿ ಸಮುದ್ರ ತೀರದಲ್ಲಿ ಸೂರ್ಯೋದಯ, ಸೂರ್ಯಾಸ್ತ ಕಣ್ತುಂಬಿಕೊಳ್ಳುವುದು ಒಂದು ಸೌಭಾಗ್ಯವೇ ಸರಿ. * ಮಿನಿಕಾಯ್ ದ್ವೀಪ: ತಿಳಿ ನೀಲಿ ಅಕಾಶ ನೋಡುತ್ತಾ ತಿಳಿಯಂತೆ ಕಾಣುವ ಸಮುದ್ರದಲ್ಲಿ ಬೋಟಿಂಗ್ ಹೋಗಲು ಹೇಳಿ ಮಾಡಿಸಿದ ತಾಣ ಈ ಮಿನಿಕಾಯ್ ದ್ವೀಪವಾಗಿದೆ. * ಅಮಿನಿ ಬೀಚ್: ಸ್ಕೂಬಾ ಡೈವಿಂಗ್ ಮಾಡುವವರು ಈ ದ್ವೀಪಕ್ಕೆ ತಪ್ಪದೇ ಹೋಗುತ್ತಾರೆ. ಅಪಾರ ಜಲಚರ, ಹವಳದ ದಿಬ್ಬಗಳನ್ನು ಇಲ್ಲಿ ಕಾಣಬಹುದಾಗಿದೆ.
* ಅಗಟ್ಟಿ ಐಲ್ಯಾಂಡ್: ಸುಂದರ ಸಮುದ್ರ ತೀರದಲ್ಲಿ ವಿಹಾರ ಕೈಗೊಳ್ಳಬಹುದು. ಜೊತೆಗೆ ರುಚಿಕಟ್ಟಾದ ಮೀನೂಟಕ್ಕೆ ಈ ಜಾಗ ಫೇಮಸ್ ಆಗಿದೆ. ಆಹಾರ ಪ್ರಿಯರಿಗೆ ಹೇಳಿ ಮಾಡಿಸಿದ ತಾಣ ಈ ಐಲ್ಯಾಂಡ್. * ಮರಿನ್ ಮ್ಯೂಸಿಯಂ: ಸಮುದ್ರದ ಜಲಚರ ಮ್ಯೂಸಿಯಂ ಇದು. ಚಿತ್ರವಿಚಿತ್ರ ಸಮುದ್ರ ಜೀವಿಗಳ ಪಳಯಳಿಕೆಗಳನ್ನು ಇಲ್ಲಿ ಸಂರಕ್ಷಿಸಿ ಇಡಲಾಗಿದೆ. ಅಧ್ಯಯನ ಪ್ರಿಯರ ಮೆಚ್ಚಿನ ತಾಣ ಈ ಮೂಸಿಯಂ. * ಪಿಟ್ಟಿ ಪಕ್ಷಿಧಾಮ: ಲಕ್ಷದ್ವೀಪ ಎಂದ್ರೆ ಬರೀ ದ್ವೀಪಗಳು ಎಂಬ ಕಲ್ಪನೆ ಇದೆ. ಆದರೆ ಇಲ್ಲಿನ ಪಿಟ್ಟಿ ಪಕ್ಷಿಧಾಮ ಅಸಂಖ್ಯಾತ ವಿದೇಶಿ ಹಕ್ಕಿಗಳ ಗೂಡಾಗಿದೆ.
ನವದೆಹಲಿ/ಮಾಲೆ: #BoycottMaldives ಅಭಿಯಾನ ಯಶಸ್ವಿಯಾಗಿದ್ದು EaseMyTrip ಮಾಲ್ಡೀವ್ಸ್ ಫ್ಲೈಟ್ ಬುಕ್ಕಿಂಗ್ ರದ್ದು ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು ಟೀಕಿಸಿದ್ದಕ್ಕೆ ಭಾರತೀಯ ನೆಟ್ಟಿಗರು ಮಾಲ್ಡೀವ್ಸ್ ಪ್ರವಾಸವನ್ನು ರದ್ದು ಮಾಡಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಸೃಷ್ಟಿಸಿದ್ದರು. ಇದಕ್ಕೆ ಬೆಂಬಲ ವ್ಯಕ್ತಪಡಿಸಿದ EaseMyTrip ಫ್ಲೈಟ್ ಬುಕ್ಕಿಂಗ್ ರದ್ದು ಮಾಡಿದೆ.
ಭಾರತದ ಆನ್‌ಲೈನ್ ಟ್ರಾವೆಲ್ ಕಂಪನಿ EaseMyTrip ಸಿಇಒ ನಿಶಾಂತ್ ಪಿಟ್ಟಿ ಸಾಮಾಜಿಕ ಜಾಲತಾಣದಲ್ಲಿ ಭಾರತೀಯರಿಗೆ ಬೆಂಬಲ ವ್ಯಕ್ತಪಡಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿ ಭಾರತೀಯ ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದ್ದ ಮೂವರು ಸಚಿವರನ್ನು ಮಾಲ್ಡೀವ್ಸ್ ಸರ್ಕಾರ (Maldives govt) ಅಮಾನುತು ಮಾಡಿದೆ. ಮೋದಿ ವಿರುದ್ಧ ಕೀಳು ಅಭಿರುಚಿಯುಳ್ಳ ಹೇಳಿಕೆ ನೀಡಿದ್ದ ಮಾರಿಯಂ ಶಿಯುನಾ, ಮಲ್ಲಾ ಷರೀಫ್ ಹಾಗೂ ಮಝೂಂ ಮಜೀದ್ ಅವರನ್ನು ಅಮಾನತು ಮಾಡಲಾಗಿದೆ. ಇದನ್ನೂ ಓದಿ: ಮೋದಿ ಭೇಟಿ ಬಳಿಕ ಲಕ್ಷದ್ವೀಪ ಪ್ರವಾಸದತ್ತ ಭಾರತೀಯರ ಚಿತ್ತ – #BoycottMaldives ಫುಲ್ ಟ್ರೆಂಡ್
ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮಿಜು
ಪ್ರಧಾನಿ ಮೋದಿ ಕುರಿತಾಗಿ ಎರಡು ದೇಶಗಳ ಮಧ್ಯೆ ಬಿಕಟ್ಟು ಸೃಷ್ಟಿಯಾಗಿತ್ತು. ಸ್ವತ: ಮಾಲ್ಡೀವ್ಸ್ ಜನರೇ ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಅಧ್ಯಕ್ಷ ಮೊಹಮ್ಮದ್ ಮಿಜು (Mohamed Muizzu) ನೇತೃತ್ವದ ಸರ್ಕಾರ ಅಮಾನತು ಮಾಡುವ ಮೂಲಕ ಶಿಸ್ತು ಕ್ರಮ ಜರುಗಿಸಿದೆ.
ಅಮಾನತು ಯಾಕೆ?
ಲಕ್ಷದ್ವೀಪಕ್ಕೆ ಪ್ರವಾಸ ಕೈಗೊಂಡಿದ್ದ ಪ್ರಧಾನಿ ಮೋದಿ ಸ್ನಾರ್ಕಲಿಂಗ್ ಮಾಡಿ ಅಲ್ಲಿನ ಸಮುದ್ರ ತೀರದ ಫೋಟೋ ಹಾಕಿ ಮಾಲ್ಡೀವ್ಸ್‌ಗೆ ಲಕ್ಷದ್ವೀಪ ಪರ್ಯಾಯ ಪ್ರವಾಸಿ ತಾಣವಾಗಬಹುದು ಎಂಬ ಅಭಿಪ್ರಾಯ ಸೃಷ್ಟಿಸಿದ್ದರು. ಅಷ್ಟೇ ಅಲ್ಲದೇ ಸಾಹಸಪ್ರಿಯರೆಲ್ಲ ಲಕ್ಷದ್ವೀಪಕ್ಕೆ (Lakshadweep) ಭೇಟಿ ನೀಡಿ ಎಂದು ಕರೆ ನೀಡುವ ಮೂಲಕ ಭಾರತ ವಿರೋಧಿ ಧೋರಣೆ ಬೆಳೆಸಿಕೊಳ್ಳುತ್ತಿರುವ ಮಾಲ್ಡೀವ್ಸ್‌ಗೆ ಹೋಗಬೇಡಿ ಎಂದು ಪರೋಕ್ಷವಾಗಿ ಸಂದೇಶ ರವಾನಿಸಿದ್ದರು.
The president of #Maldives used to wear "India out" t-shirt during election campaign.
Imagine the impact if PM Modi just rt any tweet having #MaldivesOut hashtag in it.
Not to forget no Indian gvt official has spoken anything against them yet. Only twitter bashing till now.. pic.twitter.com/qIIWGhA2VL
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಮಾಲ್ಡೀವ್ಸ್ ಸರ್ಕಾರದ ಸಚಿವರು ಲಕ್ಷದ್ವೀಪ ಮತ್ತು ಮೋದಿಯನ್ನು ಟೀಕಿಸಿ ಅಭಿಪ್ರಾಯ ಹಂಚಿಕೊಂಡಿದ್ದರು. ಇದರಿಂದ ಕೆರಳಿದ ನೆಟ್ಟಿಗರು #BoycottMaldives ಅಭಿಯಾನ ಆರಂಭಿಸಿದ್ದರು. ಇದರ ಜೊತೆ #ExploreIndianIslands ಬಳಸಿ ಭಾರತದ ಸುಂದರ ದ್ವೀಪಗಳನ್ನು ಪರಿಚಯ ಮಾಡಿಸುವ ಟ್ರೆಂಡ್ ಸೃಷ್ಟಿಸಿದ್ದರು. ಇದನ್ನೂ ಓದಿ: ಲಕ್ಷದ್ವೀಪಕ್ಕೆ ಮೋದಿ ಭೇಟಿ: ಮಾಲ್ಡೀವ್ಸ್‌ಗೆ ಬಿಗ್ ಶಾಕ್
Had a 3 week booking worth ₹5 lacs from 1st Feb 2024 at Palms Retreat, Fulhadhoo, Maldives. Cancelled it immediately after their Ministers being racists.
ಸಾಮಾಜಿಕ ಜಾಲತಾಣದಲ್ಲಿ ಆರಂಭವಾದ ಈ ಟ್ರೆಂಡ್ ನಿಜವಾಗಿ ಫಲ ನೀಡಲು ಆರಂಭಿಸಿತು. 8 ಸಾವಿರ ಹೋಟೆಲ್ ಬುಕ್ಕಿಂಗ್, 2,500 ವಿಮಾನ ಪ್ರಯಾಣದ ಟಿಕೆಟ್ ರದ್ದು ಮಾಡಿ ಭಾರತೀಯ ಪ್ರವಾಸಿಗರು ಬಿಸಿ ಮುಟ್ಟಿಸಿದ್ದರು. ರದ್ದು ಮಾಡಿದ್ದು ಮಾತ್ರವಲ್ಲದೇ ರದ್ದು ಮಾಡಿದ ಟಿಕೆಟ್ ವಿವರಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕಿ ಮತ್ತಷ್ಟು ಟ್ರೆಂಡ್ ಸೃಷ್ಟಿಸಿದರು. ಇದರ ಮಾಲ್ಡೀವ್ಸ್ ಪ್ರವಾಸಿ ವೆಬ್‌ಸೈಟ್‌ಗಳಲ್ಲಿ ಸರ್ಕಾರದ ಸಚಿವರ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದಲ್ಲೆದರ ಪರಿಣಾಮ ಭಾರತೀಯ ಪ್ರವಾಸಿಗರ ಆಕ್ರೋಶಕ್ಕೆ ಮಣಿದ ಮಾಲ್ಡೀವ್ಸ್ ಈಗ ಸಚಿವರನ್ನು ಅಮಾನತು ಮಾಡಿದೆ.
ಭಾರತ ವಿರೋಧಿ ಸರ್ಕಾರ:
ಮಾಲ್ಡೀವ್ಸ್‌ಗೆ ಪ್ರವಾಸೋದ್ಯಮವೇ ಮುಖ್ಯ ಅದಾಯವಾಗಿದ್ದು, ಹೆಚ್ಚಿನ ಸಂಖ್ಯೆಯ ಭಾರತೀಯರು ಭೇಟಿ ನೀಡುತ್ತಾರೆ. ಇಲ್ಲಿಯವರೆಗೆ ಭಾರತದ ಸ್ನೇಹಿತನಾಗಿದ್ದ ಮಾಲ್ಡಿವ್ಸ್‌ನಲ್ಲಿ ಈಗ ಹೊಸ ಸರ್ಕಾರ ರಚನೆಯಾಗಿದ್ದು ಈಗ ಚೀನಾದತ್ತ ವಾಲಿದೆ. ಹೊಸ ಸರ್ಕಾರ ಅಲ್ಲಿರುವ ಸೇನೆಯನ್ನು ಹಿಂದಕ್ಕೆ ಪಡೆಯುವಂತೆ ಭಾರತಕ್ಕೆ ಸೂಚಿಸಿದೆ.
2021ರಲ್ಲಿ 2.91 ಲಕ್ಷ, 2022ರಲ್ಲಿ 2.41 ಲಕ್ಷ ಮಂದಿ ಭಾರತೀಯರು ಮಾಲ್ಡೀವ್ಸ್‌ಗೆ ಭೇಟಿ ನೀಡಿದ್ದಾರೆ. ಮಾಲ್ಡೀವ್ಸ್‌ಗೆ ಅತಿ ಹೆಚ್ಚು ವಿದೇಶಿಗರು ಭೇಟಿ ನೀಡುವ ದೇಶಗಳ ಪೈಕಿ ಭಾರತ ಮೊದಲ ಸ್ಥಾನದಲ್ಲಿದೆ. 2023ರ ಜೂನ್‌ವರೆಗೆ 1 ಲಕ್ಷ ಮಂದಿ ಮಾಲ್ಡೀವ್ಸ್‌ಗೆ ಭೇಟಿ ನೀಡಿದ್ದಾರೆ.
ಬಿಳಿ ಮರಳು, ಸ್ವಚ್ಛ ಬೀಚ್ ಹಾಗೂ ಹವಳದ ದಂಡೆಗಳು ಹೀಗೆ ಮಾಲ್ಡೀವ್ಸ್ ಮತ್ತು ಲಕ್ಷದ್ವೀಪದ ನಡುವೆ ಸಾಕಷ್ಟು ಸಾಮ್ಯತೆಗಳಿವೆ. ಈಗ ಲಕ್ಷದ್ವೀಪದಲ್ಲಿ ಮೂಲಸೌಕರ್ಯ ಸಾಕಷ್ಟು ಅಭಿವೃದ್ಧಿಯಾಗಿದ್ದು ಭಾರೀ ಸಂಖ್ಯೆಯಲ್ಲಿ ವಿದೇಶಿಗರು ಭೇಟಿ ನೀಡುತ್ತಿದ್ದಾರೆ. 2021 ರಲ್ಲಿ ಕೇವಲ 4 ಸಾವಿರ ಮಂದಿ ಭೇಟಿ ನೀಡಿದ್ದರೆ 2022ರಲ್ಲಿ ಈ ಸಂಖ್ಯೆ 1 ಲಕ್ಷಕ್ಕೆ ಏರಿಕೆಯಾಗಿದೆ.
ಮಲೆ: ಪ್ರಧಾನಿ ಮೋದಿ ಅವರ ಲಕ್ಷದ್ವೀಪ ಭೇಟಿ ಕುರಿತು ಮಾಲ್ಡೀವ್ಸ್ (Maldives) ಸಚಿವರು ನೀಡಿದ್ದ ಹೇಳಿಕೆ ಉಭಯ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಸಂಬಂಧವನ್ನು ಮತ್ತಷ್ಟು ಹದಗೆಡಿಸಿದೆ. ಸಚಿವರ ಹೇಳಿಕೆ ವಿವಾದದ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಅವರನ್ನು ಅಮಾನತುಗೊಳಿಸಿ ಮಾಲ್ಡೀವ್ಸ್ ಸರ್ಕಾರ ಆದೇಶ ಹೊರಡಿಸಿದೆ.
ಸರ್ಕಾರಿ ಹುದ್ದೆಗಳಲ್ಲಿದ್ದಾಗ ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಪೋಸ್ಟ್ ಮಾಡಿದವರನ್ನು ಈಗ ಅಮಾನತುಗೊಳಿಸಲಾಗಿದೆ ಎಂದು ಅಮಾನತುಗೊಂಡವರ ಹೆಸರನ್ನು ಬಹಿರಂಗಪಡಿಸದೆ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ (Narendra Modi ) ಅವರು ಲಕ್ಷದ್ವೀಪಕ್ಕೆ (Lakshadweep) ಭೇಟಿ ನೀಡಿದ್ದರು. ಬೀಚ್‌ನಲ್ಲಿ ತಾವು ಕಳೆದ ಸುಂದರ ಕ್ಷಣಗಳ ವೀಡಿಯೋ ಹಾಗೂ ಫೋಟೋಗಳನ್ನು ಹಂಚಿಕೊಂಡಿದ್ದರು. ಮೋದಿ ಭೇಟಿ ಕುರಿತಂತೆ ಎಕ್ಸ್‌ನಲ್ಲಿ ಪೋಸ್ಟ್ ಹಾಕಿದ್ದ ಮಾಲ್ಡೀವ್ಸ್ ಸಚಿವರು, ಭಾರತ ಮಾಲ್ಡೀವ್ಸ್ ಅನ್ನು ಗುರಿಯಾಗಿಸಿಕೊಂಡಿದೆ ಎಂದು ಬರೆದುಕೊಂಡಿದ್ದರು. ಇದನ್ನೂ ಓದಿ: ಲಕ್ಷದ್ವೀಪಕ್ಕೆ ಮೋದಿ ಭೇಟಿ: ಮಾಲ್ಡೀವ್ಸ್‌ಗೆ ಬಿಗ್ ಶಾಕ್
ಮಾಲ್ಡೀವ್ಸ್ ಸಚಿವರ ಈ ಹೇಳಿಕೆಗಳಿಗೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಮಾಲ್ಡೀವ್ಸ್‌ಗೆ ಹೋಗುವ ತಮ್ಮ ಪ್ರವಾಸವನ್ನು ರದ್ದುಗೊಳಿಸುವುದಾಗಿ ಭಾರತೀಯ ಪ್ರವಾಸಿಗರು ಹೇಳಿಕೊಂಡಿದ್ದಾರೆ. ಮಾಲ್ಡೀವ್ಸ್ ಪ್ರವಾಸದ ವಿಮಾನದ ಟಿಕೆಟ್ ರದ್ದುಗೊಳಿಸಿರುವ ಸ್ಕ್ರೀನ್ ಶಾಟ್ ತೆಗೆದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡು ‘#BoycottMaldives’ ಅಭಿಯಾನ ನಡೆಸುತ್ತಿದ್ದಾರೆ.
ಕವರಟ್ಟಿ: ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪ (Lakshadweep) ಸಮುದ್ರತೀರಕ್ಕೆ ಭೇಟಿ ನೀಡಿದ್ದರು. ಪ್ರಧಾನಿ ಮೋದಿ ಭೇಟಿ ಬಳಿಕ ಪ್ರವಾಸಿಗರ ಚಿತ್ತ ಲಕ್ಷದ್ವೀಪದತ್ತ ಹರಿದಿದ್ದು, ಮಾಲ್ಡೀವ್ಸ್‌ನಲ್ಲಿ ಕಿಚ್ಚು ಹೊತ್ತಿಸಿದೆ.
Was planning to go to Maldives for my birthday which falls on 2nd of feb. Had almost finalised the deal with my travel agent (adding proofs below????)
But immediately cancelled it after seeing this tweet of deputy minister of Maldives. #boycottmaldivespic.twitter.com/hd2R534bjY
ಮೋದಿ ಅವರು ಲಕ್ಷದ್ವೀಪಕ್ಕೆ ಭೇಟಿ ನೀಡಿದ ಕೆಲವು ದಿನಗಳ ಬಳಿಕ ಮಾಲ್ಡೀವ್ಸ್ (Maldives) ಸಚಿವರೊಬ್ಬರು, ಭಾರತವು ಮಾಲ್ಡೀವ್ಸ್ ದೇಶವನ್ನು ಗುರಿಯಾಗಿಸಿಕೊಂಡಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಸಚಿವ ಅಬ್ದುಲ್ಲಾ ಮಹಜೂಮ್ ಮಜೀದ್, ಭಾರತವು ಮಾಲ್ಡೀವ್ಸ್ ಅನ್ನು ಟಾರ್ಗೆಟ್ ಮಾಡುತ್ತಿದೆ. ಮಾಲ್ಡೀವ್ಸ್‌ನ ಬೀಚ್ ಪ್ರವಾಸೋದ್ಯಮದ (Maldives Beach Tourism) ಜೊತೆಗೆ ಸ್ಪರ್ಧಿಸಲು ಭಾರತಕ್ಕೆ ಸಾಕಷ್ಟು ಸವಾಲುಗಳಿವೆ. ಭಾರತದ ಬೀಚ್‌ಗಳು ಕೊಳಕಾಗಿವೆ ಎಂಬುದಾಗಿ ವ್ಯಂಗ್ಯವಾಡಿದ್ದಾರೆ. ಆದ್ರೆ ಸಚಿವರು ಮಾಡಿರುವ ಅವಹೇಳನಾಕಾರಿ ಟ್ವೀಟ್‌ಗೆ ಮಾಲ್ಡೀವ್ಸ್‌ನ ಮಾಜಿ ಅಧ್ಯಕ್ಷರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದೇಶದ ಕೇಂದ್ರಾಡಳಿತ ಪ್ರದೇಶಕ್ಕೆ ಮೋದಿ ಅವರು ಭೇಟಿ ನೀಡಿದ್ದಾಗ, ಅಲ್ಲಿನ ವಿಹಂಗಮ ಸಮುದ್ರ ತೀರದಲ್ಲಿ ಫೋಟೋ ಶೂಟ್ ಹಾಗೂ ವಿಡಿಯೋಗಳನ್ನು ತೆಗೆಸಿಕೊಂಡಿದ್ದರು. ಸ್ನಾರ್ಕ್ಲಿಂಗ್ ಮಾಡುವ ಜೊತೆಗೆ ದ್ವೀಪ ರಾಷ್ಟ್ರದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿದ್ದರು. ಅಲ್ಲದೇ ಸಾಹಸಪ್ರಿಯರೆಲ್ಲ ಲಕ್ಷದ್ವೀಪಕ್ಕೆ ಭೇಟಿ ನೀಡಿ, ಪ್ರವಾಸ ಇಷ್ಟಪಡುವ ಜನರು ಖಂಡಿತವಾಗಿಯೂ ಈ ಸ್ಥಳಕ್ಕೆ ಭೇಟಿ ನೀಡಬೇಕು ಎಂದು ಕರೆ ಕೊಟ್ಟಿದ್ದರು. ಈ ಬೆನ್ನಲ್ಲೇ ಮಾಲ್ಡೀವ್ಸ್ ಪ್ರವಾಸಕ್ಕೆ ಪ್ಲ್ಯಾನ್ ಮಾಡಿದ್ದ ಬಹುತೇಕ ಭಾರತೀಯರು ತಮ್ಮ ಪ್ರವಾಸವನ್ನು ಸ್ಥಗಿತಗೊಳಿಸಿದ್ದು, ಲಕ್ಷದ್ವೀಪದತ್ತ ಚಿತ್ತ ಹರಿಸಿದ್ದಾರೆ. ಟ್ವಿಟ್ಟರ್‌ನಲ್ಲೂ ಇದರ ಅಲೆಗಳು ಜೋರಾಗಿವೆ.
ಮಾಲ್ಡೀವ್ಸ್ ಬದಲು ಲಕ್ಷದ್ವೀಪಕ್ಕೆ ಹೋಗಿ: ಮಾಲ್ಡೀವ್ಸ್‌ನ ಭಾರತ ವಿರೋಧಿ ನೀತಿ ಬಹಿರಂಗವಾಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಶುರುವಾಗಿದೆ. ತಮ್ಮ ನೆಚ್ಚಿನ ಪ್ರವಾಸಕ್ಕಾಗಿ ಮಾಲ್ಡೀವ್ಸ್ ತಾಣವನ್ನು ಆಯ್ಕೆ ಮಾಡಿಕೊಂಡಿದ್ದ ಹೆಚ್ಚಿನ ಭಾರತೀಯರು ಪ್ರವಾಸವನ್ನು ತಮ್ಮ ಪಟ್ಟಿಯಿಂದ ಕೈಬಿಟ್ಟು, ಲಕ್ಷದ್ವೀಪವನ್ನು ಆಯ್ಕೆ ಮಾಡಿಕೊಳ್ಳುವಂತೆ ಮನವಿ ಮಾಡಲಾಗುತ್ತಿದೆ. ʻ#ಬಾಯ್ಕಾಟ್ ಮಾಲ್ಡೀವ್ಸ್ʼ ಎಂಬ ಹ್ಯಾಷ್‌ಟ್ಯಾಗ್ ಎಕ್ಸ್ ತಾಣದಲ್ಲಿ ಟ್ರೆಂಡ್ ಆಗಿದೆ.
ಬಾಲಿವುಡ್ ಸ್ಟಾರ್‌ಗಳ ಬೆಂಬಲ: ಲಕ್ಷದ್ವೀಪ ಪ್ರವಾಸಕ್ಕೆ ಹೋಗುವಂತೆ ಶುರುವಾಗಿರುವ ಸೋಶಿಯಲ್ ಮೀಡಿಯಾ ಅಭಿಯಾನಕ್ಕೆ ಖ್ಯಾತ ಬಾಲಿವುಡ್ ನಟರಾದ ಅಕ್ಷಯ್ ಕುಮಾರ್, ಜಾನ್ ಅಬ್ರಹಾಂ ಹಾಗೂ ಸಚಿನ್ ತೆಂಡೂಲ್ಕರ್ ಸೇರಿದಂತೆ ಅನೇಕರು ಬೆಂಬಲ ನೀಡಿದ್ದಾರೆ. ಲಕ್ಷದ್ವೀಪ ಮತ್ತು ಮಹಾರಾಷ್ಟ್ರದ ಸಿಂಧುದುರ್ಗದಂತಹ ತಾಣಗಳಿಗೆ ಪ್ರವಾಸ ಕೈಗೊಳ್ಳುವಂತೆ ಕರೆ ನೀಡಿದ್ದಾರೆ. ಇದನ್ನೂ ಓದಿ: ರಾಮಮಂದಿರ ಲೋಕಾರ್ಪಣೆ- ತಯಾರಾಗುತ್ತೆ 7 ಸಾವಿರ ಕೆ.ಜಿಯ ರಾಮ ಹಲ್ವಾ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಲಕ್ಷದ್ವೀಪಕ್ಕೆ (Lakshadweep) ತೆರಳಿ ಚೀನಾದ ಆಪ್ತ ರಾಷ್ಟ್ರ ಮಾಲ್ಡಿವ್ಸ್‌ಗೆ (Maldives) ಶಾಕ್ ನೀಡಿದ್ದಾರೆ.
ಲಕ್ಷದ್ವೀಪಕ್ಕೆ ತೆರಳಿದ್ದ ಮೋದಿ ಸ್ನಾರ್ಕಲಿಂಗ್ ಮಾಡಿದ್ದರು. ಈ ಪೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಭಾರತೀಯರು ಗೂಗಲ್‌ನಲ್ಲಿ (Google) ಲಕ್ಷದ್ವೀಪದ ಬಗ್ಗೆ ಸರ್ಚ್ ಮಾಡುವುದು ಭಾರೀ ಏರಿಕೆಯಾಗಿದೆ.
ಫೋಟೋ ಹಾಕುವುದರ ಜೊತೆ ಇಷ್ಟೇ ಅಲ್ಲದೇ ಸಾಹಸಪ್ರಿಯರೆಲ್ಲ ಲಕ್ಷದ್ವೀಪಕ್ಕೆ ಭೇಟಿ ನೀಡಿ ಎಂದು ಕರೆ ನೀಡುವ ಮೂಲಕ ಭಾರತ ವಿರೋಧಿ ಧೋರಣೆ ಬೆಳೆಸಿಕೊಳ್ಳುತ್ತಿರುವ ಮಾಲ್ಡೀವ್ಸ್‌ಗೆ ಹೋಗಬೇಡಿ ಎಂದು ಪರೋಕ್ಷವಾಗಿ ಮೋದಿ ಸೂಚಿಸಿದ್ದಾರೆ.
ಭಾರತದಲ್ಲಿ ಬುಧವಾರ ಅತಿಹೆಚ್ಚು ಗೂಗಲ್ ಸರ್ಚ್ ಆದ 9ನೇ ಪದ ಲಕ್ಷ ದ್ವೀಪವಾಗಿದ್ದು, 50 ಸಾವಿರಕ್ಕೂ ಹೆಚ್ಚು ಜನರು ಇದರ ಬಗ್ಗೆ ಇಂಟರ್ನೆಟ್‌ನಲ್ಲಿ ಹುಡುಕಾಡಿದ್ದಾರೆ. ಒಂದು ವೇಳೆ ಭಾರೀ ಸಂಖ್ಯೆಯಲ್ಲಿ ಲಕ್ಷದ್ವೀಪಕ್ಕೆ ಭಾರತೀಯರು ಭೇಟಿ ನೀಡಿದರೆ ಮಾಲ್ಡೀವ್ಸ್ ಆರ್ಥಿಕತೆಗೆ ಬಿಗ್ ಶಾಕ್ ನೀಡಬಹುದು ಎಂದೇ ವಿಶ್ಲೇಷಿಸಲಾಗುತ್ತದೆ. ಇದನ್ನೂ ಓದಿ: ಮೋದಿ ನಾಯಕತ್ವದಲ್ಲಿ ಭಾರತ ಅಭಿವೃದ್ಧಿ- ಹೊಗಳಿದ ಚೀನಾ
ಲಕ್ಷದ್ವೀಪದ ಸಮುದ್ರ ತೀರದಲ್ಲಿ ಕೂಲ್ ಆಗಿ ಸಮಯ ಕಳೆದ ಮೋದಿ.
ಮಾಲ್ಡೀವ್ಸ್‌ಗೆ ಪ್ರವಾಸೋದ್ಯಮವೇ ಮುಖ್ಯ ಅದಾಯವಾಗಿದ್ದು, ಹೆಚ್ಚಿನ ಸಂಖ್ಯೆಯ ಭಾರತೀಯರು ಭೇಟಿ ನೀಡುತ್ತಾರೆ. ಇಲ್ಲಿಯವರೆಗೆ ಭಾರತದ ಸ್ನೇಹಿತನಾಗಿದ್ದ ಮಾಲ್ಡಿವ್ಸ್‌ನಲ್ಲಿ ಈಗ ಹೊಸ ಸರ್ಕಾರ ರಚನೆಯಾಗಿದ್ದು ಈಗ ಚೀನಾದತ್ತ ವಾಲಿದೆ. ಹೊಸ ಸರ್ಕಾರ ಅಲ್ಲಿರುವ ಸೇನೆಯನ್ನು ಹಿಂದಕ್ಕೆ ಪಡೆಯುವಂತೆ ಭಾರತಕ್ಕೆ ಸೂಚಿಸಿದೆ.
2021ರಲ್ಲಿ 2.91 ಲಕ್ಷ, 2022ರಲ್ಲಿ 2.41 ಲಕ್ಷ ಮಂದಿ ಭಾರತೀಯರು ಮಾಲ್ಡೀವ್ಸ್‌ಗೆ ಭೇಟಿ ನೀಡಿದ್ದಾರೆ. ಮಾಲ್ಡೀವ್ಸ್‌ಗೆ ಅತಿ ಹೆಚ್ಚು ವಿದೇಶಿಗರು ಭೇಟಿ ನೀಡುವ ದೇಶಗಳ ಪೈಕಿ ಭಾರತ ಮೊದಲ ಸ್ಥಾನದಲ್ಲಿದೆ. 2023ರ ಜೂನ್‌ವರೆಗೆ 1 ಲಕ್ಷ ಮಂದಿ ಮಾಲ್ಡೀವ್ಸ್‌ಗೆ ಭೇಟಿ ನೀಡಿದ್ದಾರೆ.
ಭಾರೀ ಸಂಖ್ಯೆಯಲ್ಲಿ ಭಾರತೀಯರು ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಮಾಲ್ಡೀವ್ಸ್‌ಗೆ ಪಾಠ ಕಲಿಸಲು ಮೋದಿ ಅವರು ಲಕ್ಷದ್ವೀಪಕ್ಕೆ ತೆರಳುವಂತೆ ಕರೆ ನೀಡಿದ್ದಾರೆ. ಈ ಮೂಲಕ ಭಾರತದ ಪ್ರವಾಸಿಗರು ವಿದೇಶದಲ್ಲಿ ಮಾಡುವ ಖರ್ಚನ್ನು ಭಾರತದತ್ತ ತಿರುಗಿಸಿ ದೇಶದ ಪ್ರವಾಸೋದ್ಯಮ ಬೆಳೆಸಲು ಪ್ರೋತ್ಸಾಹ ನೀಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತದೆ.
ಬಿಳಿ ಮರಳು, ಸ್ವಚ್ಛಬೀಚ್ ಹಾಗೂ ಹವಳದ ದಂಡೆಗಳು ಹೀಗೆ ಮಾಲ್ಡೀವ್ಸ್ ಮತ್ತು ಲಕ್ಷದ್ವೀಪದ ನಡುವೆ ಸಾಕಷ್ಟು ಸಾಮ್ಯತೆಗಳಿವೆ. ಈಗ ಲಕ್ಷದ್ವೀಪದಲ್ಲಿ ಮೂಲಸೌಕರ್ಯ ಸಾಕಷ್ಟು ಅಭಿವೃದ್ಧಿಯಾಗಿದ್ದು ಭಾರೀ ಸಂಖ್ಯೆಯಲ್ಲಿ ವಿದೇಶಿಗರು ಭೇಟಿ ನೀಡುತ್ತಿದ್ದಾರೆ. 2021 ರಲ್ಲಿ ಕೇವಲ 4 ಸಾವಿರ ಮಂದಿ ಭೇಟಿ ನೀಡಿದ್ದರೆ 2022ರಲ್ಲಿ ಈ ಸಂಖ್ಯೆ 1 ಲಕ್ಷಕ್ಕೆ ಏರಿಕೆಯಾಗಿದೆ.