Tag: ಲಕ್ಷಣ

  • ಬಿಗ್ ಬಾಸ್ ಮನೆಗೆ ‘ಲಕ್ಷಣ’ ನಟಿ ಸುಕೃತಾ ನಾಗ್?

    ಬಿಗ್ ಬಾಸ್ ಮನೆಗೆ ‘ಲಕ್ಷಣ’ ನಟಿ ಸುಕೃತಾ ನಾಗ್?

    ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ (Bigg Boss Kannada) ಶುರುವಾಗಲು ಕೆಲವೇ ದಿನಗಳು ಬಾಕಿಯಿದೆ. ಈ ಬೆನ್ನಲ್ಲೇ ಸಾಕಷ್ಟು ಕಲಾವಿದರ ಹೆಸರು ಚಾಲ್ತಿಯಲ್ಲಿದೆ. ಇದೀಗ ಅಗ್ನಿಸಾಕ್ಷಿ, ಲಕ್ಷಣ (Lakshana) ಸೀರಿಯಲ್ ನಟಿ ಸುಕೃತಾ ನಾಗ್ (Sukrutha Nag) ದೊಡ್ಮನೆಗೆ ಕಾಲಿಡಲಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಚರ್ಚೆಯಾಗುತ್ತಿದೆ.

    ಪ್ರಸ್ತುತ ಸುಕೃತಾ ನಾಗ್, ಲಕ್ಷಣ ಸೀರಿಯಲ್ ವಿಲನ್ ಆಗಿ ಅಬ್ಬರಿಸುತ್ತಿದ್ದಾರೆ. ಕಪ್ಪು-ಬಿಳಿ ಬಣ್ಣದ ಕುರಿತ ಇಬ್ಬರು ಹುಡುಗಿಯರ ಮೇಲೆ ಹೆಣೆದಿರುವ ಕಥೆಯಾಗಿದೆ. ಸದ್ಯ ನಾಯಕನ ಕುಟುಂಬವನ್ನು ಸುಕೃತಾ ಅಲಿಯಾಸ್ ಶ್ವೇತಾ ಬೀದಿಗೆ ತಳ್ಳಿದ್ದಾರೆ. ಶ್ವೇತಾ ವಿರುದ್ಧ ನಾಯಕ ಕುಟುಂಬ ಸೇಡು ಸೇರಿಸಿಕೊಳ್ಳುತ್ತಾರಾ ಎಂಬುದನ್ನ ಕಾಯಬೇಕಿದೆ. ಇದನ್ನೂ ಓದಿ:ಬಾಲಿವುಡ್‌ಗೆ ಸಾಯಿ ಪಲ್ಲವಿ- ಸ್ಟಾರ್‌ ನಟನ ಪುತ್ರನಿಗೆ ‘ಫಿದಾ’ ಬ್ಯೂಟಿ ನಾಯಕಿ

    ಇದರ ನಡುವೆ ಬಿಗ್ ಬಾಸ್ ಶೋಗೆ ಕೌಂಟ್ ಡೌನ್ ಶುರುವಾಗಿರುವ ಕಾರಣ, ಲಕ್ಷಣ ಸೀರಿಯಲ್‌ಗೆ ಬ್ರೇಕ್ ಬೀಳಲಿದೆ ಎನ್ನಲಾಗುತ್ತಿದೆ. ಹಾಗಾಗಿ ಬಿಗ್ ಬಾಸ್‌ಗೆ ಸುಕೃತಾ ಸ್ಪರ್ಧಿಯಾಗಿ ಎಂಟ್ರಿ ಕೊಡುತ್ತಾರೆ ಎಂದು ಹೇಳಲಾಗುತ್ತಿದೆ. ಇಷ್ಟಕ್ಕೂ ಈ ಸುದ್ದಿ ನಿಜಾನಾ? ಕಾಯಬೇಕಿದೆ. ವಾಹಿನಿ ಕಡೆಯಿಂದ ಈ ಬಗ್ಗೆ ಅಧಿಕೃತ ಸ್ಪಷ್ಟನೆ ಸಿಕ್ಕಿಲ್ಲ.

    ಬಾಲನಟಿಯಾಗಿ ಸುಕೃತಾ 25ಕ್ಕೂ ಹೆಚ್ಚು ಸೀರಿಯಲ್ ಮಾಡಿದ್ದಾರೆ. ಕಾದಂಬರಿ, ಅಗ್ನಿಸಾಕ್ಷಿ, ಡ್ಯಾನ್ಸಿಂಗ್ ಸ್ಟಾರ್ ಶೋನಲ್ಲಿ ನಟಿ ಕಾಣಿಸಿಕೊಂಡಿದ್ದಾರೆ. ಸದ್ಯ ಬಿಗ್ ಬಾಸ್‌ಗೆ ಗ್ಲ್ಯಾಮರ್ ಗೊಂಬೆ ಸುಕೃತಾ ನಾಗ್ ಕಾಲಿಡುವ ಮೂಲಕ ಮನೆಯ ರಂಗನ್ನ ಹೆಚ್ಚಿಸುತ್ತಾರಾ? ಕಾದುನೋಡಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Bigg Boss Kannada 10 ಆರಂಭ- ಈ 3 ಸೀರಿಯಲ್‌ಗೆ ಗೇಟ್ ಪಾಸ್

    Bigg Boss Kannada 10 ಆರಂಭ- ಈ 3 ಸೀರಿಯಲ್‌ಗೆ ಗೇಟ್ ಪಾಸ್

    ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ (Bigg Boss Kannada) ಕಾರ್ಯಕ್ರಮ ಕನ್ನಡದಲ್ಲೂ ಶುರುವಾಗುತ್ತಿದೆ. ದೊಡ್ಮನೆ ಆಟಕ್ಕೆ ವೇದಿಕೆ ಸಜ್ಜಾಗುತ್ತಿದೆ. ಸೀಸನ್ 10 ಬರುತ್ತಿರುವ ಕಾರಣ ವಾಹಿನಿಯ ಜನಪ್ರಿಯ 3 ಸೀರಿಯಲ್‌ನ ಅಂತ್ಯ ಹಾಡ್ತಿದ್ದಾರೆ.

    ಅನುಬಂಧ ಅವಾರ್ಡ್ ಕಾರ್ಯಕ್ರಮ ಮುಗಿದ ಮೇಲೆ ಬಿಗ್ ಬಾಸ್ ಸೀಸನ್ 10ರ ಶೋ ಚಾಲನೆ ಎನ್ನಲಾಗಿತ್ತು. ಅದರಂತೆ ಅನುಬಂಧ ಕಾರ್ಯಕ್ರಮ ಮುಗಿದಿದೆ. ಟಿವಿಯಲ್ಲಿ ಪ್ರಸಾರವಾಗಬೇಕಿದೆ. ದೊಡ್ಮನೆ ಆಟ ಅಕ್ಟೋಬರ್ ಮೊದಲ ವಾರದಲ್ಲಿ ಶುರುವಾಗುತ್ತಿದೆ. ಈ ಹಿನ್ನಲೆ ಜಗನ್, ವಿಜಯಲಕ್ಷ್ಮಿ ನಟನೆಯ ಲಕ್ಷಣ(Lakshna), ದಿವ್ಯಾ ಸುರೇಶ್ (Divya Suresh) ನಟನೆಯ ತ್ರಿಪುರ ಸುಂದರಿ, ಪುಣ್ಯವತಿ ಸೀರಿಯಲ್ ಅಂತ್ಯವಾಗಲಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ಹೃದಯಾಘಾತದಿಂದ ‘ಜೈಲರ್’ ನಟ ಮಾರಿಮುತ್ತು ನಿಧನ

    ವಾಹಿನಿಯ ಜನಪ್ರಿಯ ಸೀರಿಯಲ್‌ಗಳಾದ ಲಕ್ಷಣ, ತ್ರಿಪುರ ಸುಂದರಿ, ಪುಣ್ಯವತಿ ಧಾರಾವಾಹಿ ಅಂತ್ಯವಾಗುತ್ತಿರುವ ಬಗ್ಗೆ ವಾಹಿನಿ ಕಡೆಯಿಂದ ಅಧಿಕೃತ ಮಾಹಿತಿ ಸಿಗುವವರೆಗೂ ಕಾಯಬೇಕಿದೆ.

    ಈ ಬಾರಿ ಬಿಗ್ ಬಾಸ್ ಶೋನಲ್ಲಿ ಸ್ಪರ್ಧಿಗಳಾಗಿ ನಮ್ರತಾ ಗೌಡ(Namratha Gowda), ಸುನೀಲ್ ರಾವ್, ಮೇಘಾ ಶೆಟ್ಟಿ(Megha Shetty), ಭೂಮಿಕಾ ಬಸವರಾಜ್, ಬಿಂದು ಗೌಡ ಸೇರಿದಂತೆ ಹಲವರು ಭಾಗಿಯಾಗುತ್ತಾರೆ ಎನ್ನಲಾಗ್ತಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಿಡ್ನಿ ವರನ ಜೊತೆ ನಟಿ ಸುಕೃತಾ ನಾಗ್ ಮದುವೆ ಫಿಕ್ಸ್

    ಸಿಡ್ನಿ ವರನ ಜೊತೆ ನಟಿ ಸುಕೃತಾ ನಾಗ್ ಮದುವೆ ಫಿಕ್ಸ್

    ‘ಲಕ್ಷಣ’ ಸೀರಿಯಲ್ ಕೆಡಿ ಶ್ವೇತಾ ಅಲಿಯಾಸ್ ಸುಕೃತಾ ನಾಗ್ (Sukrutha Nag) ಅವರು ದಾಂಪತ್ಯ (Wedding) ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಕುಟುಂಬಸ್ಥರು ನೋಡಿರುವ ಸಿಡ್ನಿ (Sydney) ಹುಡುಗನ ಜೊತೆ ಹೊಸ ಬಾಳಿಗೆ ಕಾಲಿಡಲು ರೆಡಿಯಾಗಿದ್ದಾರೆ. ಇದನ್ನೂ ಓದಿ: ಅನುಷ್ಕಾ ಕೆರಿಯರ್ ಹಾಳು ಮಾಡಲು ಹೊರಟಿದ್ರಾ ಕರಣ್ ಜೋಹರ್?

    ಕಿರುತೆರೆ Lakshana ಸೀರಿಯಲ್‌ನಲ್ಲಿ ಹೀರೋ ಭೂಪತಿಗೆ ನಕ್ಷತ್ರಾ ಜೊತೆ ಮದುವೆಯಾಗಿದೆ ಆದ್ರೂ ಅವನೇ ಬೇಕು ಅಂತಾ ಭೂಪತಿ ಹಿಂದೆ ಬಿದ್ದಿರುವ ಕೆಡಿ ಶ್ವೇತಾ ಅಲಿಯಾಸ್ ಸುಕೃತಾ ನಾಗ್ ರಿಯಲ್ ಲೈಫ್‌ನಲ್ಲಿ ಮದುವೆಗೆ ತಯಾರಿ ಮಾಡ್ತಿದ್ದಾರೆ. ಈ ಬಗ್ಗೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ತಮ್ಮ ಸ್ನೇಹಿತರಿಗೆ ಕರೆ ಮಾಡಿ ರಿವೀಲ್ ಮಾಡಿದ್ದಾರೆ.

    ತನ್ನ ಸೀರಿಯಲ್ ಫ್ರೆಂಡ್ಸ್, ಬೆಸ್ಟ್ ಫ್ರೆಂಡ್‌ಗೆ ಕಾಲ್ ಮಾಡಿ, ತಾನು ಸಿಡ್ನಿ ಹುಡುಗನನ್ನು ಮದುವೆ ಆಗ್ತಿದ್ದೀನಿ. ಈ ವರ್ಷದ ಕೊನೆಯಲ್ಲಿ ಮದುವೆ. ಅಮ್ಮನೆ ನೋಡಿರೋ ಹುಡುಗ. ಅರೇಂಜ್ಡ್ ಮ್ಯಾರೇಜ್ ಅನ್ನೋ ಸಂಗತಿಯನ್ನು ಸುಕೃತಾ ಹೇಳಿದ್ದಾರೆ. ಅದನ್ನು ಕೇಳಿ ಫ್ರೆಂಡ್ಸ್ ಎಲ್ಲ ಸಖತ್ ಖುಷಿಯಾಗಿ ವಿಶ್ ಮಾಡಿದ್ದಾರೆ. ಈ ವಿಷ್ಯಾ ಈಗ ಹೇಳಿದ್ಯಾ ಅಂತಾ ಫ್ರೆಂಡ್ಸ್ ಚೆನ್ನಾಗಿಯೇ ಚೆನ್ನಾಗಿಯೇ ಕ್ಲಾಸ್ ತಗೊಂಡಿದ್ದಾರೆ.

    ಸುಕೃತಾ ಕಾಲ್ ಮಾಡಿ ತನ್ನ ಮದುವೆ ವಿಚಾರ ತಿಳಿಸಿದ್ದು ‘ಲಕ್ಷಣ’ ಸೀರಿಯಲ್‌ನಲ್ಲಿ ಡೆವಿಲ್ ಭಾರ್ಗವಿ ಪಾತ್ರದಲ್ಲಿ ಮಿಂಚುತ್ತಿರುವ ಪ್ರಿಯಾ, ವಿಜಯಲಕ್ಷ್ಮಿ ಹಾಗೂ ಆಕೆಯ ಸ್ನೇಹಿತರಿಗೆ. ಮೊದಲಿಗೆ ಪ್ರಿಯಾಗೆ ಕಾಲ್ ಮಾಡಿ ವಿಷಯ ತಿಳಿಸಿದಾಗ ಅವರು ಸಖತ್ ಥ್ರಿಲ್ ಆದ್ರು. ತನ್ನ ಬೆಸ್ಟ್ ಫ್ರೆಂಡ್‌ಗೆ ಅಭಿನಂದನೆಯನ್ನು ತನ್ನದೇ ಸ್ಟೈಲಲ್ಲಿ ತಿಳಿಸಿದ್ರು. ಆಮೇಲೆ ಸೀರಿಯಲ್‌ ಸಹನಟಿ(Nakshatra)  ವಿಜಯಲಕ್ಷ್ಮಿಗೆ ಕಾಲ್ ಮಾಡಿ ಹೇಳಿದಾಗಲೂ ಆಕೆ ಇದನ್ನು ಕೇಳಿ ಖುಷಿಪಟ್ಟರು.

    ಅಂದಹಾಗೆ ವೀಡಿಯೋ ಮಾಡಿರೋದು ಏಪ್ರಿಲ್ 1ಕ್ಕೆ, ತನ್ನ ಮದುವೆ ಅಂತಾ ಹೇಳಿ ನಟಿ ಸುಕೃತಾ ನಾಗ್ ಸಖತ್ ಆಗಿ ಎಲ್ಲರಿಗೂ ಬಕ್ರಾ ಮಾಡಿದ್ದಾರೆ. ಸಖತ್ ಆಗಿ ಆಕ್ಟ್ ಮಾಡಿ, ಎಲ್ಲರಿಗೂ ಫೂಲ್ ಮಾಡಿದ್ದಾರೆ.

  • ಸುಕೃತ ನಾಗ್ ಜೊತೆಗಿನ ಮದುವೆಯ ಸುದ್ದಿಗೆ ಸ್ಪಷ್ಟನೆ ನೀಡಿದ ಶೈನ್ ಶೆಟ್ಟಿ

    ಸುಕೃತ ನಾಗ್ ಜೊತೆಗಿನ ಮದುವೆಯ ಸುದ್ದಿಗೆ ಸ್ಪಷ್ಟನೆ ನೀಡಿದ ಶೈನ್ ಶೆಟ್ಟಿ

    ಕಿರುತೆರೆಯ ನಂಬರ್ ಒನ್ ಶೋ ಬಿಗ್ ಬಾಸ್(Bigg Boss Kannada) ಸೀಸನ್ 7ರ ವಿನ್ನರ್ ಆಗಿದ್ದ ಶೈನ್ ಶೆಟ್ಟಿ (Shine Shetty) ಮತ್ತೆ ಸುದ್ದಿಯಲ್ಲಿದ್ದಾರೆ. ಸುಕೃತ ನಾಗ್ (Sukrutha Nag) ಜೊತೆಗಿನ ಮದುವೆಯ (Wedding) ಬಗ್ಗೆ ಗಾಂಧಿನಗರದಲ್ಲಿ ಹಾಟ್ ಟಾಪಿಕ್ ಆಗಿದ್ದರು. ಇದೀಗ ಈ ಮದುವೆಯ ವದಂತಿಯ ಬಗ್ಗೆ ಶೈನ್ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.

     

    View this post on Instagram

     

    A post shared by Rohith Raju k (@rohith_k_raju)

    ಜೇಮ್ಸ್, ಕಾಂತಾರ ಚಿತ್ರದ ನಂತರ ಮತ್ತೆ ಸಾಕಷ್ಟು ಸಿನಿಮಾಗಳಲ್ಲಿ ಶೈನ್ ಆಕ್ಟೀವ್ ಆಗಿದ್ದಾರೆ. ಇದರ ಮಧ್ಯೆ ಶೈನ್ ಶೆಟ್ಟಿ ಹೆಸರು ಸುಕೃತ ನಾಗ್ ಜೊತೆ ಕೇಳಿ ಬರುತ್ತಿದೆ. `ಲಕ್ಷಣ’ ನಟಿ ಸುಕೃತ ಜೊತೆ ಶೈನ್ ಶೆಟ್ಟಿ ಮದುವೆ ಅಂತಾ ಸಾಕಷ್ಟು ಸಮಯದಿಂದ ಈ ಸುದ್ದಿ ಸದ್ದು ಮಾಡುತ್ತಿದೆ. ಅಷ್ಟಕ್ಕೂ ಈ ಸುದ್ದಿ ನಿಜಾನಾ ಎಂಬುದನ್ನ ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ ಪಬ್ಲಿಕ್ ಟಿವಿ ಡಿಜಿಟಲ್‌ಗೆ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ:ದೀಪಿಕಾ ದಾಸ್ ಆಟಕ್ಕೆ ಬ್ರೇಕ್ ಹಾಕಿದ ಬಿಗ್ ಬಾಸ್ – ದೊಡ್ಮನೆಯಿಂದ ಔಟ್

     

    View this post on Instagram

     

    A post shared by SHINE SHETTY (@shineshettyofficial)

    ಕಲಾವಿದರು ಆಗಿರುವ ಕಾರಣ ನನಗೂ ಸುಕೃತ ಅವರಿಗೂ ಪರಿಚಯವಿದೆ ಆದರೆ ಯಾವುದೇ ರೀತಿಯ ಸಂಪರ್ಕವಿಲ್ಲ. ನಾವು ಇದುವರೆಗೂ ಭೇಟಿಯಾಗಿಲ್ಲ. ಯಾವುದೇ ಮಾತುಕತೆಯಿಲ್ಲ. ಈ ಮದುವೆ ಸುದ್ದಿ ಎಲ್ಲಾ ಸುಳ್ಳು, ಆ ತರಹ ಏನು ವಿಚಾರವಿಲ್ಲ ಎಂದಿದ್ದಾರೆ. ದಯವಿಟ್ಟು ಈ ರೀತಿಯ ಸುಳ್ಳು ಸುದ್ದಿಯನ್ನು ಹಬ್ಬಿಸಬೇಡಿ, ಮತ್ತು ಇದನ್ನೂ ಯಾರು ನಂಬಬೇಡಿ ಎಂದು ಶೈನ್ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ. ಸದ್ಯ ನಾನು ನನ್ನ ಕೆರಿಯರ್‌ನತ್ತ ಗಮನ ಹರಿಸುತ್ತಿದ್ದೇನೆ. ಮದುವೆಯ ಬಗ್ಗೆ ನಾನು ಆಲೋಚನೆ ಮಾಡಿಲ್ಲ ಎಂದು ಮಾತನಾಡಿದ್ದಾರೆ. ಈ ಮೂಲಕ ಸುಕೃತ ನಾಗ್ ಜೊತೆಗಿನ ಮದುವೆ ವದಂತಿಗೆ ಶೈನ್ ಬ್ರೇಕ್ ಹಾಕಿದ್ದಾರೆ.

    ಶೈನ್ ಶೆಟ್ಟಿ ಸದ್ಯ `ಗಲ್ಲಿ ಕಿಚನ್’ ಬುಸಿನೆಸ್ ಮತ್ತು ಸಿನಿಮಾಗಳಲ್ಲಿ ಬ್ಯುಸಿಯಿದ್ದರೆ, ಸುಕೃತ ನಾಗ್ ಪ್ರಸ್ತುತ `ಲಕ್ಷಣ’ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕೊರೊನಾ ಹಾಸನ ಜಿಲ್ಲೆಯಲ್ಲಿ ಸಮುದಾಯಕ್ಕೆ ಹರಡಿರುವ ಲಕ್ಷಣ ಕಾಣಿಸುತ್ತಿದೆ: ಡಿಸಿ

    ಕೊರೊನಾ ಹಾಸನ ಜಿಲ್ಲೆಯಲ್ಲಿ ಸಮುದಾಯಕ್ಕೆ ಹರಡಿರುವ ಲಕ್ಷಣ ಕಾಣಿಸುತ್ತಿದೆ: ಡಿಸಿ

    – ಇಂದು ಓರ್ವ ಸಾವು, 28 ಸೋಂಕಿತರು ಪತ್ತೆ

    ಹಾಸನ: ಕೊರೊನಾ ಹಾಸನ ಜಿಲ್ಲೆಯಲ್ಲಿ ಸಮುದಾಯಕ್ಕೆ ಹರಡಿರುವ ಲಕ್ಷಣಗಳು ಕಾಣಿಸುತ್ತಿವೆ ಎಂದು ಹಾಸನ ಜಿಲ್ಲಾಧಿಕಾರಿ ಆರ್.ಗಿರೀಶ್ ಕಳವಳ ವ್ಯಕ್ತಪಡಿಸಿದ್ದಾರೆ.

    ಇಂದು ಕೊರೊನಾ ವಿಚಾರವಾಗಿ ಸುದ್ದಿಗಾರರರೊಂದಿಗೆ ಮಾತಾನಾಡಿದ ಅವರು, ಇಂದು ಹಾಸನ ಜಿಲ್ಲೆಯಲ್ಲಿ 28 ಹೊಸ ಕೋವಿಡ್ ಪ್ರಕರಣ ಬೆಳಕಿಗೆ ಬಂದಿದೆ. ಜೊತೆಗೆ ಹಾಸನ ತಾಲೂಕಿನ 30 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾನೆ. ಈತ ಬೆಂಗಳೂರಿನಿಂದ ಬಂದಿದ್ದು, ಉಸಿರಾಟದ ತೊಂದರೆ ಮತ್ತು ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ಎಂದು ಮಾಹಿತಿ ನೀಡಿದ್ದಾರೆ.

    ಇದುವರೆಗೂ ಹಾಸನದಲ್ಲಿ 58 ಕಂಟೋನ್ಮೆಂಟ್ ಜೋನ್ ಇದೆ. ಅದರ ಜೊತೆಗೆ ಇಂದು 13 ಹೊಸ ಕಂಟೋನ್ಮೆಂಟ್ ಜೋನ್ ಮಾಡಬೇಕಿದೆ. ಇದರಲ್ಲಿ 11 ಕಂಟೋನ್ಮೆಂಟ್ ಜೋನ್‍ಗಳ ನಿಗದಿತ ದಿನ ಈಗಾಗಲೇ ಮುಗಿದಿದೆ. ನಮ್ಮ ನಿಮ್ಮ ಸುತ್ತಮುತ್ತ ಪಾಸಿಟಿವ್ ಇರುವವರು ಇರಬಹುದು ಎಚ್ಚರದಿಂದಿರಿ. ಹೆಚ್ಚು ಹೆಚ್ಚು ಪರೀಕ್ಷೆ ಮಾಡಿದಾಗ ಕೊರೊನಾ ಪಾಸಿಟಿವ್ ಬರುತ್ತಿರುವುದು ಇದಕ್ಕೆ ಉತ್ತಮ ಉದಾಹರಣೆ ಎಂದು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಇಡೀ ರಾಜ್ಯದಲ್ಲಿ ಕೊರೊನಾ ಸೋಂಕು ಜಾಸ್ತಿಯಾಗುತ್ತಿರುವ ಕಾರಣ, ನಾವೇ ಎಲ್ಲರಿಂದ ದೂರ ಇರಬೇಕಾಗುತ್ತೆ. ಜಿಲ್ಲೆಯಲ್ಲಿ ನಿಯಮ ಮೀರಿದರೆ ಮುಲಾಜಿಲ್ಲದೆ ದಂಡ ವಿಧಿಸಲಾಗುತ್ತದೆ. ಇದರ ಜೊತೆಗೆ ಕೋವಿಡ್ ಪ್ರಕರಣ ಹಾಸನದಲ್ಲಿ ಕೊರೊನಾ ಸಮುದಾಯಕ್ಕೆ ಹರಡಿರುವ ಲಕ್ಷಣ ಕಾಣಿಸುತ್ತಿದೆ ಎಂದು ಹೇಳಿದರು.

  • ಮಹಾಮಳೆ ತಂದ ಆಪತ್ತು- ಇಲಿ ಜ್ವರಕ್ಕೆ 25 ಮಂದಿ ಸಾವು

    ಮಹಾಮಳೆ ತಂದ ಆಪತ್ತು- ಇಲಿ ಜ್ವರಕ್ಕೆ 25 ಮಂದಿ ಸಾವು

    ತಿರುವನಂತಪುರಂ: ಮಹಾಮಳೆಯ ಪ್ರವಾಹದಿಂದ ತತ್ತರಿಸಿದ್ದ ಕೇರಳ ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದು, ಈ ವೇಳೆಯೇ ಇಲಿ ಜ್ವರದ ಭೀತಿ ಶುರುವಾಗಿದೆ. ಕಳೆದ 1 ತಿಂಗಳಿನಲ್ಲಿ ಇಲಿ ಜ್ವರಕ್ಕೆ 28 ಮಂದಿ ಸಾವನ್ನಪ್ಪಿದ್ದು, 1 ವಾರದಲ್ಲೇ 9 ಮಂದಿ ಶಂಕಿತ ಜ್ವರಕ್ಕೆ ಬಲಿಯಾಗಿದ್ದಾರೆ.

    ಕೇರಳದ ಕೊಯಿಕ್ಕೋಡ್ ಜಿಲ್ಲೆಯಲ್ಲಿ ಇಲಿ ಜ್ವರಕ್ಕೆ ಶನಿವಾರ ಮೂವರು ಬಲಿಯಾಗಿದ್ದು, ಪ್ರವಾಹ ರಕ್ಷಣಾ ಪರಿಹಾರ ಕಾರ್ಯದಲ್ಲಿ ತೊಡಗಿದ್ದ ಆಂಡಿ, ಶಿವದಾಸನ್ ಹಾಗೂ ಕೃಷ್ಣನ್ ಎಂಬವರು ಕೋಯಿಕ್ಕೋಡ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಸೋಕಿನಿಂದ ಸಾವನ್ನಪ್ಪಿದ್ದಾರೆ. ಇನ್ನು ಜಿಲ್ಲೆಯೊಂದರಲ್ಲೇ ಮಹಾಮಾರಿಗೆ ಬಲಿಯಾದವರ ಸಂಖ್ಯೆ 20ಕ್ಕೆ ತಲುಪಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

    ಕಳೆದ ಮೂರು ದಿನಗಳಲ್ಲಿ 300 ಶಂಕಿತ ಇಲಿ ಜ್ವರ ಪ್ರಕರಣಗಳು ಪತ್ತೆಯಾಗಿದೆ ಎಂದು ಜಿಲ್ಲಾ ಹಿರಿಯ ಆರೋಗ್ಯ ಅಧಿಕಾರಿ ತಿಳಿಸಿದ್ದಾರೆ. ಕೇರಳ ಆರೋಗ್ಯ ಇಲಾಖೆ ಇಲಿ ಜ್ವರದ ಬಗ್ಗೆ ಕೋಯಿಕ್ಕೋಡ್, ಪಾಲಕ್ಕಾಡ್, ತ್ರಿಶ್ಶೂರ್, ಮಲಪ್ಪುರಂ, ಎರ್ನಾಕುಲಂ ಜಿಲ್ಲೆಗಳಲ್ಲಿ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದೆ. ಅಲ್ಲದೇ ಹೆಚ್ಚುವರಿ ಔಷಧ ಹಾಗೂ ವೈದ್ಯಕೀಯ ನೆರವಿಗಾಗಿ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಮನವಿ ಸಲ್ಲಿಸಿದೆ.

    ಇಲಿ ಜ್ವರ ಹೇಗೆ ಬರುತ್ತೆ?
    ಮನುಷ್ಯನ ಸಂಪರ್ಕಕ್ಕೆ ಸಮೀಪವಿರುವ ಪ್ರದೇಶದಲ್ಲಿ ವಾಸಿಸುವ ಇಲಿ, ಹೆಗ್ಗಣ, ಬೆಕ್ಕು, ನಾಯಿ, ಹಸು ಸೇರಿದಂತೆ ಕೆಲ ಕಾಡು ಪ್ರಾಣಿಗಳ ದೇಹದಲ್ಲಿರುವ ವೈರಸ್ ಮೂತ್ರದ ಮೂಲಕ ನೀರಿನಲ್ಲಿ ಸೇರುತ್ತದೆ. ಇಂಥ ಕಲುಷಿತ ನೀರು ಮನುಷ್ಯರ ದೇಹದ ಸಂಪರ್ಕಕ್ಕೆ ಬಂದಾಗ ವೈರಸ್ ಶರೀರದಲ್ಲಿ ಸೇರ್ಪಡೆಯಾಗಿ 4 ರಿಂದ 19 ದಿನಗಳಲ್ಲಿ ವ್ಯಕ್ತಿ ಆನಾರೋಗ್ಯಕ್ಕೆ ಒಳಗಾಗುತ್ತಾರೆ. ಈ ಜ್ವರಕ್ಕೆ ಮೂಲ ಕಾರಣ ಝೂನೋಟಿಕ್ ವೈರಸ್ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

    ಲಕ್ಷಣಗಳು: ಜ್ವರ, ಮೈಕೈ ನೋವು ಹಾಗೂ ತಲೆನೋವು ಕೆಲವರಲ್ಲಿ ಜಾಂಡೀಸ್ ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಅಲ್ಲದೇ ಬಾಯಿ, ಮೂಗು ಭಾಗಗಳಲ್ಲಿ ರಕ್ತಸ್ರಾವವಾಗುವ ಸಾಧ್ಯತೆಗಳು ಇದೆ. ಈ ಸೋಂಕು ಮೂತ್ರ ಪಿಂಡಕ್ಕೂ ವಿಸ್ತರಿಸಿ ಮೂತ್ರ ವಿಸರ್ಜನೆ ಪ್ರಮಾಣ ಕಡಿಮೆಯಾಗಬಹುದಾಗಿದೆ.

    ಲಕ್ಷಣ ಕಾಣಿಸಿಕೊಂಡ್ರೆ ಏನು ಮಾಡಬೇಕು?
    ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೆ ಬಹುಬೇಗ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದು ಸಂಪೂರ್ಣವಾಗಿ ಗುಣಮುಖರಾಗಬಹುದು. ಇಲಿ ಜ್ವರ ದೃಢವಾದ ಬಳಿಕ ತಜ್ಞ ವೈದ್ಯರಿಂದ ಕ್ರಮಬದ್ಧ ಚಿಕಿತ್ಸೆ ಪಡೆಯುವುದು ಅಗತ್ಯವಾಗಿರುತ್ತದೆ. ಮುಖ್ಯವಾಗಿ ಸೋಂಕಿಗೆ ಒಳಗಾಗಿರುವ ವ್ಯಕ್ತಿಯಿಂದ ಆರೋಗ್ಯವಂತ ವ್ಯಕ್ತಿಗೆ ಸೋಂಕು ಹರಡುವುದಿಲ್ಲ.

    ಮುನ್ನೆಚ್ಚರಿಕೆ ಕ್ರಮ: ಕುಡಿಯಲು, ಸ್ನಾನ ಮಾಡಲು ಹಾಗೂ ದಿನನಿತ್ಯದ ಬಳಕೆಗೆ ಶುದ್ಧ ನೀರಿನ ಬಳಕೆ. ಸೋಂಕು ಕಾಣಿಸಿಕೊಂಡ ಪ್ರದೇಶದಲ್ಲಿ ಸಾಕು ಪ್ರಾಣಿಗಳನ್ನು ಕೊಳ, ಹೊಂಡ ಇನ್ನಿತರ ಸಾರ್ವಜನಿಕರ ಪ್ರದೇಶಗಳಲ್ಲಿ ಅವುಗಳ ಮೈ ತೊಳೆಯಬಾರದು. ಆಹಾರ ಪದಾರ್ಥಗಳ ರಕ್ಷಣೆ, ಮನೆಯ ಸುತ್ತಲು ನೈರ್ಮಲ್ಯ ಕಾಪಾಡಿಕೊಳ್ಳುವುದು. ಸೋಂಕು ಉಂಟಾದ ಪ್ರದೇಶದಲ್ಲಿ ಚಪ್ಪಲಿ ಧರಿಸಿ ಓಡಾಡುವುದು. ಜ್ವರದ ಬಂದ ಕೂಡಲೇ ನಿರ್ಲಕ್ಷ್ಯ ಮಾಡದೆ ತಜ್ಞ ವೈದ್ಯರಿಂದ ಚಿಕಿತ್ಸೆ ಪಡೆದುಕೊಳ್ಳುವುದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv