Tag: ಲಕ್

  • ‘ಲಕ್’ ಚಿತ್ರದಲ್ಲಿ ನಟಿಸುತ್ತಿಲ್ಲ: ಡಾಲಿ ಧನಂಜಯ್

    ‘ಲಕ್’ ಚಿತ್ರದಲ್ಲಿ ನಟಿಸುತ್ತಿಲ್ಲ: ಡಾಲಿ ಧನಂಜಯ್

    ಕ್ಯಾರಾವಾನ್ ಸ್ಟಾರ್ ಮಂಜು (Caravan star Manju) ಅಭಿನಯದ ‘ಲಕ್’ (Luck) ಚಿತ್ರದಲ್ಲಿ ಡಾಲಿ ಧನಂಜಯ್ (Dhananjay) ನಟಿಸುತ್ತಿದ್ದಾರೆ ಎಂದು ಸುದ್ದಿಯಾಗಿತ್ತು. ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ, ತಮ್ಮ  ಚಿತ್ರದಲ್ಲಿ ಧನಂಜಯ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಸ್ವತಃ ಚಿತ್ರ ತಂಡದವರೇ ಘೋಷಿಸಿದ್ದರು. ಆದರೆ, ಈ ಚಿತ್ರದಲ್ಲಿ ನಟಿಸುತ್ತಿಲ್ಲ ಎಂದು ಧನಂಜಯ್ ಸ್ಪಷ್ಟಪಡಿಸಿದ್ದಾರೆ.

    ಈ ಕುರಿತು ಮಾತನಾಡಿರುವ ಧನಂಜಯ್, ‘ಲಕ್’ ಚಿತ್ರದ ನಾಯಕ ಮತ್ತು ನಿರ್ಮಾಪಕ ಸ್ಮೈಲ್ ಮಂಜು ನನಗೆ ಬಹಳ ಒಳ್ಳೆಯ ಸ್ನೇಹಿತರು. ಅವರ ಪ್ರಯತ್ನಗಳಿಗೆ ನನ್ನ ಬೆಂಬಲ ಇರುತ್ತದೆ. ಅದರಂತೆ, ‘ಲಕ್’ ಚಿತ್ರದ ಪ್ರಚಾರದಲ್ಲಿ ತೊಡಗಿಸಿಕೊಂಡು, ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿಕೊಟ್ಟದ್ದೇನೆ. ಆದರೆ, ಕಾರಣಾಂತರಗಳಿಂದ ನನಗೆ ಅವರ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಲು ಸಾಧ್ಯವಾಗುತ್ತಿಲ್ಲ. ಈ ವಿಷಯವನ್ನು ಚಿತ್ರತಂಡದವರಿಗೂ ಮನವರಿಕೆ ಮಾಡಿಕೊಟ್ಟಿದ್ದೇನೆ. ಹಾಗಾಗಿ, ಲಕ್ ಚಿತ್ರದಲ್ಲಿ ನಾನು ನಟಿಸುತ್ತಿಲ್ಲ ಎಂದು ಈ ಮೂಲಕ ಮತ್ತೊಮ್ಮೆ ಸ್ಪಷ್ಟಪಡಿಸುತ್ತಿದ್ದೇನೆ’ ಎನ್ನುತ್ತಾರೆ ಧನಂಜಯ್. ಇದನ್ನೂ ಓದಿ:ಮತ್ತೆ ಹಾಟ್ ಅವತಾರದಲ್ಲಿ ಕಾಣಿಸಿಕೊಂಡ ‘ಸೀತಾರಾಮಂ’ ನಟಿ

    ‘ಲಕ್’ ಚಿತ್ರವನ್ನು ಹರೀಶ್ (Harish) ನಿರ್ದೇಶನ ಮಾಡುತ್ತಿದ್ದು, ವಿಜಯ್ ಹರಿತ್ಸ ಸಂಗೀತ ಸಂಯೋಜಿಸುತ್ತಿದ್ದಾರೆ. ಮೊನ್ನೆಯಷ್ಟೇ ಸಿನಿಮಾದ ಪೋಸ್ಟರ್ ರಿಲೀಸ್ ಆಗಿತ್ತು. ಅಂದು ಧನಂಜಯ್ ಚಿತ್ರದ ಬಗ್ಗೆ ಸಾಕಷ್ಟು ಮೆಚ್ಚುಗೆಯ ಮಾತುಗಳನ್ನು ಆಡಿದ್ದರು. ಇದೀಗ ಆ ಚಿತ್ರದಲ್ಲಿ ನಟಿಸುತ್ತಿಲ್ಲವೆಂದು ಹೇಳಿಕೆ ನೀಡಿದ್ದಾರೆ.

  • ಕ್ಯಾರಾವ್ಯಾನ್ ಡ್ರೈವರ್ ಇದೀಗ ಹೀರೋ : ‘ಲಕ್’ ಮೇಲೆ ಲಕ್

    ಕ್ಯಾರಾವ್ಯಾನ್ ಡ್ರೈವರ್ ಇದೀಗ ಹೀರೋ : ‘ಲಕ್’ ಮೇಲೆ ಲಕ್

    ಜೀವನದಲ್ಲಿ ಯಾರಿಗೆ ಯಾವಾಗ ‘ಲಕ್’ (Luck)  ಬರತ್ತೆ ಹೇಳಲಿಕ್ಕೆ ಆಗಲ್ಲ. ಕಳೆದ ಒಂಭತ್ತು ವರ್ಷಗಳಿಂದ ಕ್ಯಾರಾವ್ಯಾನ್ ಚಾಲಕನಾಗಿ ಕಾರ್ಯನಿರ್ವಹಿಸುತ್ತಿರುವ ಕ್ಯಾರಾವ್ಯಾನ್ ಸ್ಟಾರ್ ಸ್ಮೈಲ್ ಮಂಜು (Smile Manju) ‘ಲಕ್’ ಚಿತ್ರದ ನಾಯಕನಾಗಿ ಅಭಿನಯಿಸಿದ್ದಾರೆ ಜೊತೆಗೆ ನಿರ್ಮಾಣವನ್ನು ಮಾಡಿದ್ದಾರೆ. ಇತ್ತೀಚೆಗೆ ಈ ಚಿತ್ರದ ‘90 ಕುಡಿ ಮಗ ಪಲ್ಟಿ ಹೊಡಿ’ ಎಂಬ ಹಾಡಿನ ಲಿರಿಕಲ್ ವಿಡಿಯೋ (Lyrical Song) ಬಿಡುಗಡೆಯಾಯಿತು. ಅಪ್ಪಿ ಹಾಗೂ ಹರೀಶ್ ಬರೆದಿರುವ ಈ ಹಾಡನ್ನು ನವೀನ್ ಸಜ್ಜು ಹಾಡಿದ್ದಾರೆ. ವಿಜಯ್ ಹರಿತ್ಸ (Vijay Haritsa) ಸಂಗೀತ ನೀಡಿದ್ದಾರೆ. ಈ ಚಿತ್ರದ ಕುರಿತಾದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾಹಿತಿ ನೀಡಿದರು.

    ಚಿತ್ರಕ್ಕೆ ಮೊದಲೊಬ್ಬ ನಿರ್ದೇಶಕರಿದ್ದರು. ಹಾಗೆ ನಾಯಕರೂ ಬೇರೆಯೇ ಇದ್ದರು. ಅನಿವಾರ್ಯ ಕಾರಣದಿಂದ ಅವರು ಚಿತ್ರದಿಂದ ದೂರವಾದಾಗ ಈ ಚಿತ್ರಕ್ಕೆ ನಾನು ನಿರ್ದೇಶಕನಾದೆ. ಮಂಜು ನಾಯಕನಾದರು. ನನ್ನ ಜೀವದಲ್ಲೇ ನಡೆದಿರುವ  ಘಟನೆಯನ್ನು ಸಿನಿಮಾ ರೂಪದಲ್ಲಿ ಆಚೆ ತರುತ್ತಿದ್ದೇನೆ‌. ಈಗಾಗಲೇ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ. ಡಾಲಿ ಧನಂಜಯ್ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆ ಭಾಗದ ಚಿತ್ರೀಕರಣ ಮಾತ್ರ ಬಾಕಿಯಿದೆ. ಇದು ಒಂದು ದಿನ, ಅದರಲ್ಲೂ ಕೆಲವೇ ಗಂಟೆಗಳಲ್ಲಿ ನಡೆಯುವ ಕಥೆಯಾಗಿದೆ. ಪದ್ಮಜಾರಾವ್, ಕಡ್ಡಿಪುಡಿ ಚಂದ್ರು ಮುಂತಾದವರು ತಾರಾಬಳಗದಲ್ಲಿದ್ದಾರೆ. ಇದನ್ನೂ ಓದಿ:ಛತ್ರಪತಿ ಶಿವಾಜಿಯ ಸೊಸೆ ಪಾತ್ರಕ್ಕೆ ರಶ್ಮಿಕಾ ಮಂದಣ್ಣ ಫೈನಲ್?‌

    ನಾನು ಒಂಭತ್ತು ವರ್ಷಗಳಿಂದ ಕ್ಯಾರಾವ್ಯಾನ್ ಓಡಿಸುತ್ತಿದ್ದೇನೆ. ಗೋಲ್ಡನ್ ಸ್ಟಾರ್ ಗಣೇಶ್, ಡಾಲಿ ಅವರ ಕ್ಯಾರಾವ್ಯಾನ್ ಗೆ ನಾನೇ ಚಾಲಕ. ಸಿನಿಮಾ ಮಾಡುವ ಆಸೆಯಿತ್ತು. ದುಡಿದ ಹಣ ಹಾಗೂ ಜಮೀನು ಮಾರಿದ ಹಣ ಎರಡೂ ಸೇರಿಸಿ ಈ ಚಿತ್ರ ನಿರ್ಮಾಣ ಮಾಡಿದ್ದೇನೆ ಜೊತೆಗೆ ನಾಯಕನಾಗೂ ಅಭಿನಯಿಸಿದ್ದೇನೆ. ನನ್ನ ಮೇಲೆ ಪ್ರೀತಿಯಿಟ್ಟು ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅವರು ಸೇರಿದಂತೆ ಚಿತ್ರರಂಗದ ಅನೇಕ ನಾಯಕರು ಪೋಸ್ಟರ್ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ‌. ಚಿತ್ರತಂಡದ ಸಹಕಾರಕ್ಕೆ ಧನ್ಯವಾದ ಎಂದರು ನಾಯಕ ಹಾಗೂ ನಿರ್ಮಾಪಕ ಕ್ಯಾರಾವ್ಯಾನ್ ಸ್ಟಾರ್ ಸ್ಮೈಲ್ ಮಂಜು.

    ಚಿತ್ರದ ಪ್ರಮುಖಪಾತ್ರದಲ್ಲಿ ನಟಿಸಿರುವ ರೇಣು ಹಾಡು ಬರೆದಿರುವ ಅಪ್ಪಿ ಹಾಗೂ ಸಂಗೀತ ನಿರ್ದೇಶಕ ವಿಜಯ್ ಹರಿತ್ಸ ಚಿತ್ರದ ಕುರಿತು ಮಾತನಾಡಿದರು.

  • ತುಂಬಾ ಜನ ನನ್ನ ಮೇಲೆ ದೃಷ್ಟಿ ಹಾಕಿದ್ದಾರೆ ಅಂದ ಶಮಂತ್

    ತುಂಬಾ ಜನ ನನ್ನ ಮೇಲೆ ದೃಷ್ಟಿ ಹಾಕಿದ್ದಾರೆ ಅಂದ ಶಮಂತ್

    ಬೆಂಗಳೂರು: ಇಷ್ಟು ದಿನ ಬಿಗ್‍ಬಾಸ್ ಮನೆಯಲ್ಲಿ ಹಾಡುಗಳನ್ನು ಹೇಳುವ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದ ಬ್ರೋ ಗೌಡ ಶಮಂತ್ ನನ್ನ ಮೇಲೆ ತುಂಬಾ ಜನ ದೃಷ್ಟಿ ಹಾಕಿರುವುದಾಗಿ ಹೇಳಿಕೊಂಡಿದ್ದಾರೆ.

    ವೇದಿಕೆ ಮೇಲೆ ಯೆಲ್ಲೋ ಆ್ಯಂಡ್ ಯೆಲ್ಲೋ ಡ್ರೆಸ್‍ನಲ್ಲಿ ಎಂಟ್ರಿ ಕೊಟ್ಟ ಶಮಂತ್, ಬರುತ್ತಿದ್ದಂತೆ ತುಂಬಾ ಜನ ನನ್ನ ಮೆಲೆ ದೃಷ್ಟಿಂ ಹಾಕಿರುವುದು ಗೊತ್ತಾಗಿದೆ. ಹೀಗಾಗಿ ದೃಷ್ಟಿ ಹೋಗಬೇಕೆಂದು ಈ ಕಲರ್ ಡ್ರೆಸ್ ಚೂಸ್ ಮಾಡಿಕೊಂಡು ಹಾಕಿಕೊಂಡು ಬಂದೆ ಎಂದಿದ್ದಾರೆ. ಆಗ ಸುದೀಪ್ ನನಗೆ ಗೊತ್ತಿರುವಂತೆ ದೃಷ್ಟಿ ಹೋಗುವುದಕ್ಕೆ ಯೂಸ್ ಮಾಡುವುದು ಬ್ಲಾಕ್, ಇದು ಯಾವುದು ಹೊಸ ಕಲರ್, ಹಲೋ ಲಕ್ಕಿ ಸ್ಟಾರ್ ಸ್ವಲ್ಪ ವಿವರಣೆ ಕೊಡಿ ಅರ್ಥವಾಗುತ್ತಿಲ್ಲ ಎಂದು ಕೇಳಿದ್ದಾರೆ.

    ಇದಕ್ಕೆ ಇರೋ ಬರುವ ದೃಷ್ಟಿ ಎಲ್ಲಾ ಕಳೆಯಲಿ ಎಂದು ಬಟ್ಟೆ ಧರಿಸಿದೆ ಎಂದು ಶಮಂತ್ ಹೇಳಿದಾಗ, ನಿಧಿ ಸುಬ್ಬಯ್ಯ ಜಾತ್ರೆಯಂತಿದೆ ಎಂದು ಅಣುಕಿಸುತ್ತಾರೆ. ಹೌದು ಯಾವ ವಿಚಾರಕ್ಕೆ ನಿಮ್ಮ ಮೇಲೆ ದೃಷ್ಟಿ ಬಿದ್ದರುವುದು ಎಂದು ಸುದೀಪ್ ಕೇಳಿದಾಗ, ಶಮಂತ್ ಲಕ್ ವಿಚಾರಕ್ಕೆ ಎಂದು ಉತ್ತರಿಸುತ್ತಾರೆ. ಹಾ ಲಕ್ ವಿಚಾರದಲ್ಲಿ ಬಿದ್ದಿದೆ ಎಂಬುವುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಈಗಲೂ ನಿಮಗೆ ಆ ಲಕ್ ಇದ್ಯಾ ಅಂತ ಪ್ರಶ್ನಿಸುತ್ತಾರೆ.

    ಲಕ್ ನನ್ನ ಹಾರ್ಡ್ ವರ್ಕ್‍ಗೆ ಕನ್ವರ್ಟ್ ಆಗಿದೆ. ಇನ್ನೂ ಒಂದರಿಂದ ಹತ್ತ ಅಂಕಗಳಲ್ಲಿ ನನಗೆ ಇರುವ ಲಕ್‍ಗೆ 8 ಅಂಕ ನೀಡಬಹುದು. ಆದರೆ ಲಾಸ್ಟ್ ನಲ್ಲಿ ಲಕ್ ಹಾಗೂ ಹಾರ್ಡ್ ವರ್ಕ್ ಎರಡು ಬ್ಯಾಲೆನ್ಸ್ ಆಯಿತು. ಎರಡಕ್ಕೂ 5-5 ಅಂಕಗಳನ್ನು ನೀಡಬಹುದು ಎಂದು ಶಮಂತ್ ಹೇಳಿದ್ದಾರೆ. ಇದನ್ನೂ ಓದಿ:ಐ ವಾಂಟೂ ಮ್ಯಾರಿ ಯೂ ಅಂದವರ ಮೇಲೆ ನಿಧಿ ಕೆಂಡ