Tag: ಲಂಬಾಣಿ

  • ಎಕ್ಸ್‌ಪ್ರೆಸ್‌ ಹೈವೆಯಲ್ಲಿ 3 ಕಾರುಗಳ ನಡುವೆ ಸರಣಿ ಅಪಘಾತ – ಓರ್ವ ಸಾವು, 10 ಮಂದಿಗೆ ಗಾಯ

    ಎಕ್ಸ್‌ಪ್ರೆಸ್‌ ಹೈವೆಯಲ್ಲಿ 3 ಕಾರುಗಳ ನಡುವೆ ಸರಣಿ ಅಪಘಾತ – ಓರ್ವ ಸಾವು, 10 ಮಂದಿಗೆ ಗಾಯ

    ರಾಮನಗರ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೈವೆಯಲ್ಲಿ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ ಓರ್ವ ಸಾವನ್ನಪ್ಪಿದ್ದು, 10 ಮಂದಿಗೆ ಗಂಭೀರ ಗಾಯಗೊಂಡ ಘಟನೆ ಚನ್ನಪಟ್ಟಣ (Channapatna) ತಾಲೂಕಿನ ಲಂಬಾಣಿ (Lambani) ತಾಂಡ್ಯದ ಬಳಿ ನಡೆದಿದೆ.

    ಬೆಂಗಳೂರಿನಿಂದ (Bengaluru) ಮೈಸೂರು ಕಡೆಗೆ ವೇಗವಾಗಿ ಬರುತ್ತಿದ್ದ ಹೋಂಡಾ ಸಿವಿಕ್ ಕಾರಿನ ಚಾಲಕ, ಲಂಬಾಣಿ ತಾಂಡ್ಯದ ಬಳಿ ನಿಯಂತ್ರಣ ಕಳೆದುಕೊಂಡು ರಸ್ತೆ ವಿಭಜಕದ ಮೇಲೆ ಕಾರು ಹತ್ತಿಸಿದ್ದಾನೆ. ವೇಗದ ತೀವ್ರತೆಗೆ ಕಾರು ಪಲ್ಟಿಯಾಗಿ ಪಕ್ಕದ ರಸ್ತೆಗೆ ಜಿಗಿದು, ಬೆಂಗಳೂರು ಕಡೆಗೆ ಹೋಗುತ್ತಿದ್ದ ಮಾರುತಿ ಡಿಸೈರ್ ಮತ್ತು ವ್ಯಾಗನರ್ ಕಾರಿಗೆ ಡಿಕ್ಕಿ ಹೊಡೆದಿದೆ. ಇದನ್ನೂ ಓದಿ: ಕುಷ್ಟಗಿ ರೈಲು ಸಂಚಾರ ಶೀಘ್ರವೇ ಆರಂಭ: ಬಸವರಾಜ ರಾಯರೆಡ್ಡಿ

    ಡಿಕ್ಕಿಯ ರಭಸಕ್ಕೆ ವ್ಯಾಗನರ್ ಕಾರಿನಲ್ಲಿದ್ದ ವ್ಯಕ್ತಿ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಮೂರೂ ಕಾರುಗಳಲ್ಲಿದ್ದ 10 ಮಂದಿಗೆ ಗಾಯವಾಗಿದೆ. ಕೂಡಲೇ ಸ್ಥಳೀಯರ ನೆರವಿನಿಂದ ಅಂಬುಲೆನ್ಸ್‌ನಲ್ಲಿ ಗಾಯಾಳುಗಳನ್ನು ಚನ್ನಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಬೌಲರ್‌ಗಳ ಆಟಕ್ಕೆ 20 ವಿಕೆಟ್‌ ಪತನ – ಪಂಜಾಬ್‌ಗೆ ರೋಚಕ 16 ರನ್‌ಗಳ ಜಯ

    ಸ್ಥಳಕ್ಕೆ ಚನ್ನಪಟ್ಟಣ ಸಂಚಾರಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಘಟನೆಯಿಂದಾಗಿ ಹೆದ್ದಾರಿಯಲ್ಲಿ ಕೆಲ ಕಾಲ ಟ್ರಾಫಿಕ್ ಸಮಸ್ಯೆ ಉಂಟಾಗಿದ್ದು, ನಂತರ ಕಾರುಗಳನ್ನು ಕ್ರೇನ್ ಮೂಲಕ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಚನ್ನಪಟ್ಟಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಲಂಬಾಣಿ ಮಹಿಳೆಯರೊಂದಿಗೆ ಸಿದ್ದರಾಮಯ್ಯ ಸಾಂಪ್ರದಾಯಿಕ ನೃತ್ಯ

    ಲಂಬಾಣಿ ಮಹಿಳೆಯರೊಂದಿಗೆ ಸಿದ್ದರಾಮಯ್ಯ ಸಾಂಪ್ರದಾಯಿಕ ನೃತ್ಯ

    ಕಲಬುರಗಿ: ಜಿಲ್ಲೆಯ ಚಿತ್ತಾಪುರ ತಾಲೂಕಿನಲ್ಲಿ ಕಾಂಗ್ರೆಸ್ (Congress) ಪಕ್ಷದ ಪ್ರಜಾಧ್ವನಿ ಸಮಾವೇಶದಲ್ಲಿ ಪಾಲ್ಗೊಳ್ಳಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಆಗಮಿಸಿದ್ದು, ಈ ವೇಳೆ ಲಂಬಾಣಿ (Lambani) ಮಹಿಳೆಯರ ಜೊತೆಗೆ ಸಿದ್ದರಾಮಯ್ಯ ಅವರು ಸಾಂಪ್ರದಾಯಿಕ ನೃತ್ಯವನ್ನು (Dance) ಮಾಡಿದ್ದಾರೆ.

    ಪ್ರಜಾಧ್ವನಿ ಸಮಾವೇಶದಲ್ಲಿ ಭಾಗವಹಿಸಲು ಸಿದ್ದರಾಮಯ್ಯ ಮೆರವಣಿಗೆ ಮೂಲಕ ವೇದಿಕೆ ಬಳಿ ಬಂದಾಗ, ಲಂಬಾಣಿ ಮಹಿಳೆಯರ ಜೊತೆ ಅವರು ನೃತ್ಯ ಮಾಡಿದ್ದಾರೆ. ಮಾಜಿ ಮುಖ್ಯಮಂತ್ರಿ ಅವರ ನೃತ್ಯ ನೋಡಿ ಇಡೀ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸಂತೋಷಪಟ್ಟಿದ್ದಾರೆ. ಇದನ್ನೂ ಓದಿ:  ಹಸಿವಿನಿಂದ ಬಳಲಿದವರನ್ನು ರಕ್ಷಣೆ ಮಾಡಿದ್ದು ಸಿದ್ದರಾಮಯ್ಯ ಸರ್ಕಾರ: ಜಮೀರ್

    ಇದಕ್ಕೂ ಮುನ್ನ ಬೆಳಗ್ಗೆ ನಗರದ ಪ್ರಸಿದ್ಧ ಖಾಜಾ ಬಂದೇ ನವಾಜ್ ದರ್ಗಾಕ್ಕೆ ತೆರಳಿ ಸಿದ್ದರಾಮಯ್ಯ ಅವರು ದರ್ಗಾದ ಗೋರಿಗೆ ಚಾದರ್ ಹೊದಿಸಿ ನಮಸ್ಕರಿಸಿದರು.

    ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರಿಗೆ ಸ್ಥಳೀಯ ಶಾಸಕಿ ಖನೀಜ್ ಫಾತೀಮಾ, ಶಾಸಕ ಜಮೀರ್ ಅಹ್ಮದ್, ರಹೀಂ ಖಾನ್ ಸೇರಿದಂತೆ ಇತರ ನಾಯಕರು ಸಾಥ್ ನೀಡಿದರು. ಇದನ್ನೂ ಓದಿ: ಮಂಡ್ಯ ಮೈಶುಗರ್ ಸ್ಥಗಿತ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬಿಜೆಪಿಗೇ ಪ್ರಧಾನಿಯೇ ಬಂಡವಾಳ, ಮೋದಿ ತೋರಿಸಿ ಮತ ಕೇಳ್ತಿದ್ದಾರೆ: ಸಿದ್ದರಾಮಯ್ಯ ಕಿಡಿ

    ಬಿಜೆಪಿಗೇ ಪ್ರಧಾನಿಯೇ ಬಂಡವಾಳ, ಮೋದಿ ತೋರಿಸಿ ಮತ ಕೇಳ್ತಿದ್ದಾರೆ: ಸಿದ್ದರಾಮಯ್ಯ ಕಿಡಿ

    ಹಾವೇರಿ: ಲಂಬಾಣಿಗರಿಗೆ ಹಕ್ಕು ಪತ್ರ ಕೊಡಲು ಪ್ರಧಾನಿ ಬಂದಿದ್ದಾರೆ. ಲಂಬಾಣಿಗರೇ ಹಕ್ಕು ಪತ್ರ ಕೊಟ್ಟಿದ್ದು ಯಾರು..? ಕಾಗೋಡು ತಿಮ್ಮಪ್ಪ (Kagodu Thimmappa) ಕಂದಾಯ ಮಂತ್ರಿ, ಕೋಳಿವಾಡರು ಸ್ಪೀಕರ್ ಆಗಿದ್ದರು. ಆಗ ಲಂಬಾಣಿ ತಾಂಡಾಗಳಿಗೆ ನ್ಯಾಯ ಕೊಟ್ಟಿದ್ದೆವು. ಗೊಲ್ಲರಹಟ್ಟಿ, ತಾಂಡಾಗಳು, ನಾಯಕರ ಹಟ್ಟಿಗಳಿಗೆ ಕಂದಾಯ ಗ್ರಾಮ ಮಾಡಿದ್ದೆವು. ಈಗ ಲಂಬಾಣಿ ಜನರ ವೋಟಿಗಾಗಿ ಬಂದಿದ್ದಾರೆ ಎಂದು ಮಾಜಿ ಸಿ.ಎಂ ಸಿದ್ದರಾಮಯ್ಯ (Siddaramaiah) ಪ್ರಧಾನಿ ನರೇಂದ್ರ ಮೋದಿ (Narendra Modi) ವಿರುದ್ಧ ಹಾಗೂ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಹಾವೇರಿ ಮುನ್ಸಿಪಲ್ ಮೈದಾನದಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಯ ಬಹಿರಂಗ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸೇವಾಲಾಲ್ ಲಂಬಾಣಿ ಜನರ ಆರಾಧ್ಯ ದೈವ. ಅವರ ಜಯಂತಿ ಮಾಡಿದ್ದು ನಮ್ಮ ಸರ್ಕಾರ. ಸೂರಗೊಂಡನಕೊಪ್ಪ ಅಭಿವೃದ್ಧಿಗೆ 130 ಕೋಟಿ ಕೊಟ್ಟಿದ್ದು ನಮ್ಮ ಸರ್ಕಾರ. ಬೊಮ್ಮಾಯಿಯವರ ಡೋಂಗಿತನ ನಡೆಯೋದಿಲ್ಲ. ಈಶ್ವರಪ್ಪ ಪೆದ್ದ ಬಿಡಪ್ಪ, ಮೆದುಳು, ನಾಲಿಗೆಗೆ ಲಿಂಕ್ ತಪ್ಪಿದೆ. ಅವನ ಬಗ್ಗೆ ಏನು ಮಾತಾಡ್ತೀಯಾ ಬಿಡಪ್ಪ. ಸಂತೋಷ್ ಪಾಟೀಲ್ (santhosh Patil) ಲಂಚ ಕೊಡಲು ಆಗದೆ ಸಾಲಗಾರರ ಕಾಟ ಜಾಸ್ತಿಯಾದಾಗ ಆತ್ಮಹತ್ಯೆ ಮಾಡಿಕೊಂಡರು. ಆಗ ನನ್ನ ಸಾವಿಗೆ ಈಶ್ವರಪ್ಪ ಕಾರಣ ಅಂದರು. ಇದಕ್ಕಿಂತ ಸಾಕ್ಷ್ಯ ಬೇಕಾ ಬೊಮ್ಮಾಯಿ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಸಿದ್ದುಗಾಗಿ ಕೋಲಾರದಲ್ಲಿ ಮನೆ, ಕಚೇರಿ ಹುಡುಕಾಟದಲ್ಲಿ ಕಾಂಗ್ರೆಸ್ ನಾಯಕರು

    ಮೂರೇ ತಿಂಗಳಲ್ಲಿ ಬಿ ರಿಪೋರ್ಟ್ ಹಾಕಿಸಿದರು. ವಿವಿಧ ಕಾಮಾಗಾರಿ ಮಾಡಿದ ಗುತ್ತಿಗೆದಾರಿಗೆ ನೀಡುವ ರಾಜ್ಯ ಸರ್ಕಾರ 25 ಸಾವಿರ ಕೋಟಿ ಬಿಲ್ ಪೆಂಡಿಂಗ್ ಇಟ್ಟುಕೊಂಡಿದ್ದಾರೆ. ನನ್ನ ಪ್ರಕಾರ ಇನ್ನೂ ಅದಕ್ಕಿಂತ ಜಾಸ್ತಿ ಇದೆ. ಲಂಚ..ಲಂಚ…ಲಂಚ ಈ ಸರ್ಕಾರ ಇರಬೇಕೋ ಬೇಡ್ವೋ ಅನ್ನೋ ತೀರ್ಮಾನ ಮಾಡಿ. ಬಿಜೆಪಿ ಸರ್ಕಾರ ಇದ್ದರೆ, ಮತ್ತೆ ಬಂದರೆ ರಾಜ್ಯ ಉಳಿಯೋದಿಲ್ಲ. ಬಿಜೆಪಿ ಕಿತ್ತೊಗೆದು ಕಾಂಗ್ರೆಸ್ ತನ್ನಿರಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • 20 ಕೆಜಿ ಭಾರದ ಲಂಬಾಣಿ ಉಡುಗೆ ತೊಟ್ಟ ಶುಭಾ ಪೂಂಜಾ

    20 ಕೆಜಿ ಭಾರದ ಲಂಬಾಣಿ ಉಡುಗೆ ತೊಟ್ಟ ಶುಭಾ ಪೂಂಜಾ

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಶೂಭಾ ಪೂಂಜಾ ವಿಶೇಷವಾದ ಗೆಟಪ್‍ನಲ್ಲಿ ತೆರೆ ಮೇಲೆ ಬರಲು ಸಿದ್ಧರಾಗಿದ್ದಾರೆ. ಇದೀಗ ಅವರು ತೊಟ್ಟಿರುವ ಲಂಬಾಣಿ ಉಡುಗೆಯ ಮೂಲಕವಾಗಿ ಸಖತ್ ಸುದ್ದಿಯಲ್ಲಿದ್ದಾರೆ.

    ಬಿಗ್‍ಬಾಸ್ ನಂತರ ಸಿನಿಮಾ ಕೆಲಸಗಳಿಗೆ ಮರಳಿರುವ ನಟಿ ಶುಭಾ ಪೂಂಜಾ ‘ಅಂಬುಜ’ ಸಿನಿಮಾ ಮೂಲಕವಾಗಿ ಮತ್ತೆ ಬಿಗ್ ಸ್ಕ್ರೀನ್‍ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಥೇಟ್ ಲಂಬಾಣಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಪಾತ್ರದ ಕಾಸ್ಟ್ಯೂಮ್ ಕೂಡ ಅತ್ಯಂತ ವಿಶೇಷವಾಗಿದೆ. ಶ್ರೀನಿ ಹನುಮಂತರಾಜು ನಿರ್ದೇಶನ ಮಾಡುತ್ತಿರುವ ಈ ಮಹಿಳಾ ಪ್ರಧಾನ ಚಿತ್ರದಲ್ಲಿ ಶುಭಾ ಎರಡು ಶೇಡ್‍ನ ಪಾತ್ರದಲ್ಲಿದ್ದಾರೆ. ಅವರನ್ನು ಲಂಬಾಣಿ ಹುಡುಗಿಯಾಗಿ ಮತ್ತು ಪತ್ರಕರ್ತೆಯಾಗಿ ಈ ಸಿನಿಮಾದಲ್ಲಿ ನೋಡಬಹುದಾಗಿದೆ. ಇದನ್ನೂ ಓದಿ:  ಪ್ರಜ್ವಲ್ ರೇವಣ್ಣ Vs ಪ್ರೀತಂ ಗೌಡ – ಫೋಟೋ ಪಾಲಿಟಿಕ್ಸ್ ಜಟಾಪಟಿ ತಾರಕಕ್ಕೆ

    ಶುಭಾ ಪೂಂಜಾ ಅವರು ಲಂಬಾಣಿಗಳ ಸಾಂಪ್ರದಾಯಿಕ ಉಡುಗೆಯಲ್ಲಿದ್ದಾರೆ. ಕುಸುರಿ ಕಲೆಗೆ ಹೆಸರಾದ ಲಂಬಾಣಿಗಳು ತಮ್ಮ ತಾಂಡಾದಲ್ಲಿ ಸತತ ನಾಲ್ಕು ತಿಂಗಳ ಕಾಲ ಈ ವಿಶೇಷ ಉಡುಪನ್ನು ಸಿದ್ಧಪಡಿಸಿದ್ದಾರೆ. ಗದಗ ಜಿಲ್ಲೆಯ ಲಂಬಾಣಿಗಳು ಈ ಉಡುಪನ್ನು ತಯಾರಿಸಿದ್ದಾರೆ. ಇದರ ತೂಕ 20 ಕೆ.ಜಿ ಇದೆ. ಆಭರಣಗಳು, ಕುಸುರಿ ಕೆಲಸ ಇತ್ಯಾದಿಗಳನ್ನು ಬಹಳ ವಿಶೇಷವಾಗಿ ಮಾಡಲಾಗಿದೆ. ಇದು ಸಿನಿಮಾದ ಹೈಲೆಟ್ ಆಗಿದೆ ಎಂದು ನಿರ್ದೆಶಕ ಶ್ರೀನಿ ಹೇಳಿದ್ದಾರೆ.

     

    View this post on Instagram

     

    A post shared by shubha Poonja . (@shubhapoonja)

    ಈ ಸಿನಿಮಾ ನೈಜ ಘಟನೆಯಾಧಾರಿತ ಕಥಾಹಂದರವನ್ನು ಹೊಂದಿದೆ. ಚಿತ್ರಕ್ಕೆ ಕಾಶೀನಾಥ್ ಮಡಿವಾಳರ್ ಅವರು ಕಥೆ ಬರೆಯುವುದರ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಮುರುಳಿಧರ್ ಕ್ಯಾಮೆರಾ ಹಾಗೂ ಸಂಗೀತವನ್ನು ಪ್ರಸ್ನ್ ಕುಮಾರ್ ಸಂಯೋಜನೆ ಮಾಡಲಿದ್ದಾರೆ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ರಿಯಾಲಿಟಿ ಶೋನ ನಟರಾದ ಗೋವಿಂದೇ ಗೌಡ, ಪ್ರಿಯಾಂಕಾ ಕಾಮತ್ ಮತ್ತಿತರರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

  • ಮೋದಿ ಚಪ್ಪಾಳೆ, ತಟ್ಟೆ ಹೊಡೆಯೋದು ಬಿಟ್ಟು ಅಭಿವೃದ್ಧಿ ಕೆಲಸ ಮಾಡಿಲ್ಲ: ಡಿಕೆಶಿ

    ಮೋದಿ ಚಪ್ಪಾಳೆ, ತಟ್ಟೆ ಹೊಡೆಯೋದು ಬಿಟ್ಟು ಅಭಿವೃದ್ಧಿ ಕೆಲಸ ಮಾಡಿಲ್ಲ: ಡಿಕೆಶಿ

    – ಲಂಬಾಣಿ ಸಮುದಾಯದ ಜೊತೆ ಸಂವಾದ

    ವಿಜಯಪುರ: ಕೋವಿಡ್ ಸಂದರ್ಭದಲ್ಲಿ ಮೋದಿ ಚಪ್ಪಾಳೆ, ತಟ್ಟೆ ಹೊಡೆಯೊದು ಬಿಟ್ಟು ಅಭಿವೃದ್ಧಿ ಕೆಲಸ ಮಾಡಿಲ್ಲ. ಅಲ್ಲದೆ ನಾನು ಕೋವಿಡ್ ಸಂದರ್ಭದಲ್ಲಿ ವಲಸೆ ಕಾರ್ಮಿಕ ಸಹಾಯ ಮಾಡಲು ಸಿಎಂ ಬಿಎಸ್‍ವೈ ಗೆ ಚೆಕ್ ಕೊಟ್ಟೆ ಅದನ್ನು ಅವರು ಉಪಯೋಗ ಮಾಡಿಕೊಂಡಿಲ್ಲ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.

    ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಪಡಗಾನೂರ ತಾಂಡಾದಲ್ಲಿ ಸಂವಾದ ಕಾರ್ಯಕ್ರಮ ನಡೆಸಿದ ಬಳಿಕ ಮಾತನಾಡಿದ ಡಿಕೆಶಿ, ನಾನು ಕೋವಿಡ್ ಸಂದರ್ಭ ಸಿಎಂ ಜೊತೆ ವಲಸೆ ಕಾರ್ಮಿಕರ ಸಹಾಯಕ್ಕಾಗಿ ವೀಡಿಯೋ ಮೂಲಕ ಕೇಳಿಕೊಂಡಿದ್ದೆ. ಕೊರೊನಾದಿಂದಾಗಿ ಲಕ್ಷಾಂತರ ಮಂದಿ ವ್ಯಾಪಾರ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಅವರಿಗೂ ಸರ್ಕಾರ ಸೂಕ್ತ ಪರಿಹಾರ ನೀಡಿಲ್ಲ. ನಾನು ಮೀನುಗಾರರನ್ನು ಭೇಟಿಯಾಗಿದ್ದೇನೆ. ಒಬ್ಬ ಮೀನುಗಾರನ ಹಿಂದೆ ಇಡಿ ಕುಟುಂಬ ಇರುತ್ತದೆ. ಅಲ್ಲದೇ ತಾಂಡಾಗಳಿಗೆ ಹೆಚ್ಚಿನ ಆದ್ಯತೆ ನೀಡಿ ಎಂದು ಕೇಳಿಕೊಂಡರು ಏನು ಕ್ರಮ ಕೈಗೊಂಡಿಲ್ಲ ಎಂದು ಯಡಿಯೂರಪ್ಪ ಸರ್ಕಾರದ ವಿರುದ್ಧ ಕಿಡಿಕಾರಿದರು.

    ಈ ಮೊದಲು ಲಂಬಾಣಿ ಸಮುದಾಯದ ಜೊತೆ ಡಿ.ಕೆ ಶಿವಕುಮಾರ್ ಸಂವಾದ ನಡೆಸಿದರು. ತಾಂಡಾದ ಜನರೊಂದಿಗೆ ಸಂವಾದ ನಡೆಸಿ ಅವರ ಸಮಸ್ಯೆ ಆಲಿಸಿದರು. ವೇದಿಕೆಯ ಕೆಳ ಭಾಗದಲ್ಲೇ ಕುಳಿತು ಡಿಕೆಶಿ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾದರು. ಇದನ್ನೂ ಓದಿ: ಬಿಜೆಪಿಯವರು ಲಿಂಗಾಯತ ಸಮುದಾಯವನ್ನು ತಮ್ಮ ಆಸ್ತಿ ಅಂತ ತಿಳಿದುಕೊಂಡಿದ್ದಾರೆ: ಡಿಕೆಶಿ

    ಎಂ.ಬಿ ಪಾಟೀಲ್, ಶಿವಾನಂದ ಪಾಟೀಲ್, ಯಶವಂತ ರಾಯಗೌಡಾ ಪಾಟೀಲ್ ಸೇರಿದಂತೆ ಕಾಂಗ್ರೆಸ್ ನಾಯಕರು ಡಿಕೆಶಿ ಅವರಿಗೆ ಸಾಥ್ ನೀಡಿದರು. ಕಾರ್ಯಕ್ರಮದಲ್ಲಿ ಭಾಗಿಯಾದ ಬಹುತೇಕರು ಮಾಸ್ಕ್ ಇಲ್ಲದೆ ಪಾಲ್ಗೊಂಡಿದ್ದರು.

  • ಬಂಜಾರಾ ಮಹಿಳೆಯರ ಕಾಳಜಿಯಿಂದ ಲಂಬಾಣಿ ಕಸೂತಿಗೆ ಮೆರಗು

    ಬಂಜಾರಾ ಮಹಿಳೆಯರ ಕಾಳಜಿಯಿಂದ ಲಂಬಾಣಿ ಕಸೂತಿಗೆ ಮೆರಗು

    -ಫ್ಯಾಶನ್ ಜಗತ್ತಿನಲ್ಲಿ ಲಂಬಾಣಿಗರ ಕಸೂತಿಗೆ ಡಿಮ್ಯಾಂಡ್

    ಹಾವೇರಿ: ಜಾಗತಿಕ ಮಾರುಕಟ್ಟೆಯ ಬಹು ಬೇಡಿಕೆಯ ಭಾರತೀಯ ಪರಂಪರೆಯ ಕಸೂತಿ ಕಲೆಗಳ ಪೈಕಿ ಲಂಬಾಣಿ ಜನಾಂಗದ ಕಲೆಗಳು ವಿಶೇಷ ಬೇಡಿಕ ಸೃಷ್ಟಿಸಿವೆ. ಲಂಬಾಣಿ ಮಹಿಳೆಯರು ಧರಿಸುವ ಸಾಂಪ್ರದಾಯಕ ಉಡುಗೆ, ಆಭರಣಗಳು, ಇಂದಿನ ಫ್ಯಾಷನ್ ಜಗತ್ತಿನಲ್ಲಿ ಯುವ ಸಮೂಹವನ್ನು ಸೆಳೆದಿವೆ. ಲಂಬಾಣಿಗರ ಕಸೂತಿ, ಆಭರಣ, ಉಡುಗೆ-ತೊಡುಗೆಗಳಿಗೆ ಮನಸೋಲದವರು ವಿರಳ.

    ವಂಶಪಾರಂಪರ್ಯವಾಗಿ ತಮ್ಮ ಬದುಕಿನೊಂದಿಗೆ ಬೆಸೆದುಕೊಂಡು ಬಂದಿರುವ ಕಸೂತಿ ಕಲೆಯು ಯುವ ಪರಂಪರೆಯಲ್ಲಿ ಮರೀಚಿಕೆಯಾದರೂ ಜಿಲ್ಲೆಯ ತಾಂಡಾಗಳ ಹಿರಿಯ ಮಹಿಳೆಯರಲ್ಲಿ ಸುಯ್ -ದೋರಾ ಕಾಮ್ (ಸೂಜಿ ದಾರದಿಂದ ಮಾಡುವ ಗಂಟು ಹೆಣಿಕೆಯ ಕಸೂತಿ ಕಲೆ) ಉಳಿದುಕೊಂಡಿದೆ. ಹಾವೇರಿ ಜಿಲ್ಲೆಯಲ್ಲಿ ಲಂಬಾಣಿ ಸಮೂಹದ ಕೆಲ ಮಹಿಳೆಯರು ಪರಂಪರೆಯ ಈ ಕಲೆಯನ್ನು ತಮ್ಮ ಸಮೂಹದ ಯುವ ಜನಾಂಗಕ್ಕೆ ಕಲಿಸುವ ಕಾಯಕದಲ್ಲಿ ಶ್ರಮಿಸುತ್ತಿದ್ದಾರೆ.

    ಹಿರೇಕೆರೂರು ತಾಲೂಕಿ ಬನ್ನಿಹಟ್ಟಿ, ನಿಡನೇಗಿಲು, ಚನ್ನಹಳ್ಳಿ ತಾಂಡಾ, ಹಾವೇರಿಯ ಗುತ್ತಲ, ನೆಲೊಗಲ್, ಹಾಗೂ ರಾಣೇಬೆನ್ನೂರಿನ ಗಂಗಾಜಲ, ವೆಂಕಟಾಪುರ, ಬಸಲಕಟ್ಟಿ ತಾಂಡಾ ಶಿಗ್ಗಾಂವಿ ತಾಲೂಕಿನ ಮಮದಾಪೂರ, ಕಮಲಾನಗರ, ತಡಸ, ದುಂಡಸಿ, ಹೋಸುರು ಸವಣೂರಿನ ಶಿರಬಡಗಿ ತಾಂಡಾ ಒಳಗೊಂಡಂತೆ ನೂರಾರು ತಾಂಡಾಗಳಲ್ಲಿ ದಿನ ಬೆಳಗಾದರೆ ಕೆಲ ವಯೋವೃದ್ಧ ಮಹಿಳೆಯರು ಕಸೂತಿ ಕಾಯಕದಲ್ಲಿ ತೊಡಗಿರುವ ದೃಶ್ಯ ಸಾಮಾನ್ಯವಾಗಿರುತ್ತವೆ. ಕೆಲ ಮಹಿಳೆಯರು ಹೊಲ, ಮನೆ ಕೆಲಸದ ಬಿಡುವಿನ ವೇಳೆ ಮೇಕೆ ಮೇಯಿಸಲು ಹೋಗುವ ಕಾಡು-ಮೇಡುಗಳಲ್ಲಿ ತಮ್ಮ ಬೇಸರ ಮರೆಯಲು ಹೆಣಿಗೆ ಕಾಯಕದಲ್ಲಿ ನಿರತರಾಗುವುದು ಕಾಣಬಹುದು. ಇದನ್ನೂ ಓದಿ: ಲಂಬಾಣಿ ಮಹಿಳೆಯರ ಉಡುಪಿನಲ್ಲಿ ಕನ್ನಡಿಗಳು ಯಾಕಿರುತ್ತೆ? ಹಂಸಲೇಖ ನೀಡಿದ್ರು ಉತ್ತರ

    ಮಾರಾಟಕ್ಕಲ್ಲದಿದ್ದರೂ ಸಾಂಪ್ರದಾಯಕವಾಗಿ ಕೌಟುಂಬಿಕ ಸಭೆ, ಸಮಾರಂಭಗಳಲ್ಲಿ ಧರಿಸಲು ತಾವೇ ತಯಾರಿಸುವ ಅನಿವಾರ್ಯತೆಗೆ ಈ ಕಾಯಕದಲ್ಲಿ ತೊಡಗಿರುವುದು ಕಾಣಬಹುದು. ಲಂಬಾಣಿ ಮದುವೆ, ಗೋದಿ ಹಬ್ಬ, ಹೋಳಿ ಹಬ್ಬದ ಸಂಭ್ರಮದಲ್ಲಿ ಸಾಂಪ್ರದಾಯಿಕ ಉಡುಗೆ ತೊಡುವುದು ಈ ಸಮೂಹದ ರೂಢಿಗತವಾಗಿದೆ. ಈ ಸಮೂಹದ ಹಿರಿಯ ಮಹಿಳೆಯರು ಸೀರೆ ಬದಲು ಸಾಂಪ್ರದಾಯಕವಾದ ಫೇಟಿಯಾ(ಲೆಹೆಂಗಾ), ಕಾಂಚಳಿ(ರವಿಕೆ), ಛಾಂಟಿಯಾ(ವೇಲ್) ಹಾಕಲು ಇಷ್ಟಪಡುತ್ತಾರೆ. ಮಾರುಕಟ್ಟೆಯಲ್ಲಿ ಈ ಉಡುಪುಗಳು ದೊರೆಯದ ಕಾರಣ ತಾವೇ ಈ ಉಡುಪು, ಆಭರಣಗಳ ತಯಾರಿಕೆಯಲ್ಲಿ ತೊಡಗಬೇಕಾಗಿದೆ ಎಂಬುದು ಹಿರೇಕೆರೂರಿನ ಬನಹಟ್ಟಿ ತಾಂಡಾದ ಸಕ್ರಿಬಾಯಿ, ಸುಸಲಿಬಾಯಿ, ಪ್ರೇಮಾಬಾಯಿ, ರೇಣುಕಾಬಾಯಿ ಹಾಗೂ ಸರೋಜಿಬಾಯಿ ಅವರ ಅಭಿಪ್ರಾಯ. ಇದನ್ನೂ ಓದಿ: ಲಂಬಾಣಿ ಡ್ರೆಸ್ ಧರಿಸಿ ಮಿಂಚಿದ ಸಂಸದೆ ಕರಂದ್ಲಾಜೆ

    ಗೋರ್ಮಾಟಿ, ಗೋರ್ಭಾಯಿ, ಲಮಾಣಿ, ಲಂಬಾಣಿ, ಬಂಜಾರಾ ಹೀಗೆ ಹಲವು ಹೆಸರುಗಳಿಂದ ಕರೆಯಿಸಿಕೊಳ್ಳುವ ಇವರು ಕರ್ನಾಟಕ ಗುಜರಾತ, ಮಾಹಾರಾಷ್ಟ್ರ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಹರಿದು ಹಂಚಿಹೋಗಿದ್ದಾರೆ. ಪ್ರಾದೇಶಿಕ ಭಿನ್ನತೆಗನುಣವಾಗಿ ಈ ಸಮೂಹ ಧರಿಸುವ ಉಡುಪು ಆಭರಣಗಳಲ್ಲೂ ವ್ಯತ್ಯಾಸಗಳಿವೆ. ಇದನ್ನೂ ಓದಿ: ದೀಪಾವಳಿಯಂದು ಯಾದಗಿರಿಯಲ್ಲಿ ಲಂಬಾಣಿ ಯುವತಿಯರಿಂದ ವಿಶೇಷ ಡ್ಯಾನ್ಸ್

    ಮಹಿಳೆಯರ ಉಡುಗೆಗಳಾದ, ಫೆಟಿಯಾ( ಲೆಹೆಂಗಾ), ಕಾಂಚಳಿ(ರವಿಕೆ), ಛಾಂಟಿಯಾ(ವೇಲ್) ಹಾಗೂ ಆಭರಣಗಳಾದ, ಮುತೈದೆಯರು ತೋಳಿಗೆ, ಕೈಗೆ ಭಲ್ಯ (ಪ್ಲಾಸ್ಟಿಕ್ ಅಥವಾ ಜಿಂಕೆ, ಸಾರಂಗ ಸೇರಿದಂತೆ ಇತರೆ ಪ್ರಾಣಿಯ ಕೊಂಬಿನಿಂದ ಮಾಡಿದ ಬಳೆ), ತಲೆಗೆ ಘುಗ್ರಿ (ಬೆಳ್ಳಿಯ ಜಡೆಕಟ್ಟು) ಟೊಪಳಿ, ಮತ್ತು ಹಾಸ್ಲೊ ಭೂರಿಯಾ( ಮೂಗುತಿ) ಹಾಗೂ ಕೊರಳಿಗೆ ಪಾವಲಾರ್ಹಾರ( ಬೆಳ್ಳಿಯ ನಾಲ್ಕಾಣೆ, ಎಂಟಾಣೆಗಳ ಹಾರ), ಕೈ ಮತ್ತು ಕಾಲಿನ ಬೆರಳುಗಳಿಗೆ ಕಸ್, ಅಂಗುತ್ತಾ, ಚಟಕಿ( ಹಿತ್ತಾಳೆಯ ಉಂಗುರಗಳು) ಹೀಗೆ ಅಡಿಯಿಂದ ಮುಡಿಯವರೆಗೂ ಬಗೆಬಗೆಯ ಆಭರಣಗಳನ್ನು ಧರಿಸಿರುವುದು ಸಂಪ್ರದಾಯ.

  • ಲಂಬಾಣಿ ಡ್ರೆಸ್ ಧರಿಸಿ ಮಿಂಚಿದ ಸಂಸದೆ ಕರಂದ್ಲಾಜೆ

    ಲಂಬಾಣಿ ಡ್ರೆಸ್ ಧರಿಸಿ ಮಿಂಚಿದ ಸಂಸದೆ ಕರಂದ್ಲಾಜೆ

    ಬೆಂಗಳೂರು: ಚಿಕ್ಕಮಗಳೂರು ಮತ್ತು ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಮತ್ತು ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಅವರು ಲಂಬಾಣಿ ಡ್ರೆಸ್ ಧರಿಸಿ ಮಿಂಚಿದ್ದಾರೆ.

    ರಾಜ್ಯ ಬಿಜೆಪಿ ಕಚೇರಿಯಲ್ಲಿ ಸಂತ ಸೇವಾಲಾಲ್ ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಲಂಬಾಣಿ ಸಮುದಾಯದ ಮಹಿಳೆಯರು ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯ ಮುಂಭಾಗ ನೃತ್ಯ ಮಾಡಿದ್ದರು. ಶೋಭಾ ಕರಂದ್ಲಾಜೆ ಮತ್ತು ಮತ್ತು ಭಾರತಿ ಶೆಟ್ಟಿ ಅವರು ನೃತ್ಯ ಮಾಡಿ ಸಾಥ್ ನೀಡಿದ್ದರು.

    ಈ ವೇಳೆ ಲಂಬಾಣಿ ನೃತ್ಯದ ಮೂಲಕ ಬಿಎಸ್ ಯಡಿಯೂರಪ್ಪನವರಿಗೆ ಲಂಬಾಣಿ ಸಮುದಾಯದ ಮಹಿಳೆಯರು ಸ್ವಾಗತ ನೀಡಿದರು. ಬಿಎಸ್‍ವೈ ಅವರ ಕಾಲಿಗೆ ಲಂಬಾಣಿ ಸಮುದಾಯದ ಮಹಿಳೆಯರು ನಮಸ್ಕರಿಸಿದರು. ಲಂಬಾಣಿ ನ್ಯತ್ಯ ಮಾಡಿದ ಮಹಿಳೆಯರಿಗೆ ಬಿಎಸ್‍ವೈ 2 ಸಾವಿರ ರೂ. ನೀಡಿ ಪ್ರೋತ್ಸಾಹಿಸಿದರು.