Tag: ಲಂಡನ್ ಹೈ ಕೋರ್ಟ್

  • ವಿಜಯ್ ಮಲ್ಯ ದಿವಾಳಿ ಎಂದು ಘೋಷಿಸಿದ ಯುಕೆ ಕೋರ್ಟ್

    ವಿಜಯ್ ಮಲ್ಯ ದಿವಾಳಿ ಎಂದು ಘೋಷಿಸಿದ ಯುಕೆ ಕೋರ್ಟ್

    – ಭಾರತೀಯ ಬ್ಯಾಂಕ್‍ಗಳಿಗೆ ಬಹುದೊಡ್ಡ ವಿಜಯ

    ಲಂಡನ್: ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯನನ್ನು ಲಂಡನ್ ಹೈ ಕೋರ್ಟ್ ದಿವಾಳಿ ಎಂದು ಘೋಷಿಸಿದೆ. ಈ ಮೂಲಕ ಭಾರತೀಯ ಬ್ಯಾಂಕ್‍ಗಳಿಗೆ ಜಯ ಸಿಕ್ಕಂತಾಗಿದೆ.

    ಎಸ್‍ಬಿಐ ನೇತೃತ್ವದ ಭಾರತೀಯ ಬ್ಯಾಂಕ್‍ಗಳ ಒಕ್ಕಟವೂ ಇದೀಗ ಸ್ಥಗಿತಗೊಂಡಿರುವ ವಿಜಯ್ ಮಲ್ಯ ಅವರ ಕಿಂಗ್‍ಫಿಶರ್ ಏರ್ ಲೈನ್ಸ್ ಗೆ ನೀಡಿದ ಸಾಲವನ್ನು ವಸೂಲಿ ಮಾಡಲು ಈ ತೀರ್ಪು ಸಹಾಯ ಮಾಡುತ್ತದೆ. ಮಲ್ಯ ಅವರು ಹೈ ಕೋರ್ಟ್ ತೀರ್ಪಿನ ಮೇಲ್ಮನವಿ ಸಲ್ಲಿಸಲು ಪ್ರಯತ್ನಿಸಿದ್ದರು ಆದರೆ ಅನುಮತಿ ನಿರಾಕರಿಸಲಾಗಿದೆ ಎಂದು ವರದಿಯಾಗಿದೆ.

    ಮೇ ತಿಂಗಳಲ್ಲಿ ಯುಕೆ ಕೋರ್ಟ್ ಎಸ್‍ಬಿಐ ನೇತೃತ್ವದ ಸಾಲದಾತ ಒಕ್ಕೂಟದ ದಿವಾಳಿತನದ ಕುರಿತು ಸಲ್ಲಿಸಿದ್ದ ಅರ್ಜಿಯನ್ನು ಎತ್ತಿ ಹಿಡಿದಿತ್ತು. ಭಾರತದಲ್ಲಿ ಮಲ್ಯ ಅವರ ಆಸ್ತಿಗಳ ಮೇಲಿನ ಭದ್ರತೆಯನ್ನು ಮನ್ನಾ ಮಾಡುವ ಪರವಾಗಿ ಅರ್ಜಿಯನ್ನು ಎತ್ತಿಹಿಡಿದಿತ್ತು.

    ಭದ್ರತಾ ಹಕ್ಕುಗಳನ್ನು ಮನ್ನಾ ಮಾಡುವುದನ್ನು ತಡೆಯುವಂತೆ ಮಲ್ಯ ಪರ ವಕೀಲರು ವಾದ ಮಂಡಿಸಿದ್ದರು. ಆದರೆ ಈ ಮನವಿಯಲ್ಲಿ ಯಾವುದೇ ಸಾರ್ವಜನಿಕ ನೀತಿ ಇಲ್ಲ ಎಂದು ಘೋಷಿಸಿ ಬ್ಯಾಂಕ್‍ಗಳ ಪರವಾಗಿ ಚೀಫ್ ಇನ್ಸೋಲ್ವೆನ್ಸೀಸ್ ಆ್ಯಂಡ್ ಕಂಪನೀಸ್ ಕೋರ್ಟ್ (ಐಸಿಸಿ) ಜಡ್ಜ್ ಮೈಕೆಲ್ ಬ್ರಿಗ್ಸ್ ಆದೇಶ ನಿಡಿದ್ದರು.

    ಫೆಬ್ರವರಿಯಲ್ಲಿ ಡೆಪ್ಯೂಟಿ ಐಸಿಸಿ ನ್ಯಾಯಾಧೀಶ ಬರ್ನೆಟ್ ನೀಡಿದ ಆದೇಶವನ್ನು ಪ್ರಶ್ನಿಸಿ ವಿಜಯ್ ಮಲ್ಯ ಹೈ ಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಆರ್ಥಿಕ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದ ಬಾರ್ನೆಟ್ ಅವರು, ಭವಿಷ್ಯದ ಕಾನೂನು ಶುಲ್ಕ ಹಾಗೂ ತನ್ನ ಜೀವನ ಸಾಗಿಸಲು ಮಾಸಿಕ 23 ಲಕ್ಷ ರೂ.ಗಳನ್ನು ಕೋರ್ಟ್ ಫಂಡ್ಸ್ ಆಫೀಸ್‍ನಿಂದ ನೀಡಲು ಅನುಮತಿಸಿದ್ದರು. ಆದರೆ ಇದರಲ್ಲಿ ಭಾರತದಲ್ಲಿನ ವಕೀಲರಿಗೆ ನೀಡುವ ಹಣವನ್ನು ಸೇರಿಸಿರಲಿಲ್ಲ. ಹೀಗಾಗಿ ಇದೀಗ ಭಾರತದಲ್ಲಿನ ವಕೀಲರ ಶುಲ್ಕವನ್ನು ಸಹ ಕೋಟ್ರ್ಸ್ ಫಂಡ್ಸ್ ಆಫೀಸ್‍ನಿಂದ ನೀಡಬೇಕು ಎಂದು ಅರ್ಜಿ ಸಲ್ಲಿಸಿದ್ದಾರೆ. ಒಟ್ಟು 12 ಕೋಟಿ ರೂ. ಆಸ್ತಿಯನ್ನು ಬಳಸಲು ಮಲ್ಯಗೆ ಬರ್ನೆಟ್ ಅವರು ಆಗ ಅನುಮತಿ ನೀಡಿದ್ದರು.

    ಈಗಾಗಲೇ ಮಲ್ಯ ಭಾರತದಲ್ಲಿನ ಕಾನೂನು ಸಂಸ್ಥೆಗಳಿಗೆ ನೀಡುವ 5.7 ಕೋಟಿ ರೂ.ಗಳನ್ನು ಬಾಕಿ ಉಳಿಸಿಕೊಂಡಿದ್ದಾರೆ. ಅಲ್ಲದೆ ಭಾರತದಲ್ಲಿನ ಭವಿಷ್ಯದ ಕಾನೂನು ವೆಚ್ಚಗಳಿಗಾಗಿ ಅವರಿಗೆ ಇನ್ನೂ 2 ಕೋಟಿ ರೂ. ಅಗತ್ಯವಿದೆ ಎಂದು ಬ್ರಿಟಿಷ್ ನ್ಯಾಯಾಲಯಕ್ಕೆ ತಿಳಿಸಲಾಗಿತ್ತು.

    ಮಲ್ಯ ಪರ ವಕೀಲ ಫಿಲಿಪ್ ಮಾರ್ಷಲ್ ಕ್ಯೂಸಿ ಅವರು ಈ ಕುರಿತು ನ್ಯಾಯಾಲಯಕ್ಕೆ ತಿಳಿಸಿದ್ದು, ನನ್ನ ಕಕ್ಷಿದಾರ ಈ ಪ್ರಕರಣಗಳಿಗೆ ಸ್ವತಃ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ಅವರು `ಜೈಲುವಾಸ ಅನುಭವಿಸುತ್ತಿದ್ದಾರೆ’. ವಿಜಯ್ ಮಲ್ಯ ಅವರ ರಾಜಿ ಇತ್ಯರ್ಥದ 3 ಪ್ರೊಸಿಡಿಂಗ್ಸ್‍ಗಳು ಭಾರತದ ಸುಪ್ರೀಂ ಕೋರ್ಟ್ ಮುಂದಿವೆ. ತೀರ್ಪಿನ ಸಾಲದ ಮೇಲೆ ವಿಧಿಸಲಾಗುತ್ತಿರುವ ಶೇ.11.5 ಬಡ್ಡಿ ಹಾಗೂ `ಪರಾರಿಯಾದ ಆರ್ಥಿಕ ಅಪರಾಧಿ’ ಹಣೆಪಟ್ಟಿ ಕುರಿತು ಮೂರು ಸೆಟ್‍ಗಳ ವಿಚಾರಣೆಗಳು ಭಾರತದ ಸುಪ್ರೀಂ ಕೋರ್ಟ್‍ನಲ್ಲಿ ನಡೆಯುತ್ತಿವೆ ಎಂದು ಅವರು ಹೇಳಿದ್ದರು.

    ಬಡ್ಡಿದರ ಪಾವತಿಸುವ ಸವಾಲಿನಲ್ಲಿ ಮಲ್ಯ ಯಶಸ್ವಿಯಾದರೆ, ತೀರ್ಪಿನ ಸಾಲವನ್ನು 5,851 ಕೋಟಿ ರೂ.ಗೆ ಇಳಿಸಲಾಗುತ್ತದೆ. ಉಳಿದ ಹಣವನ್ನು ಆಸ್ತಿಗಳ ಮೂಲಕ ಪೂರೈಸಬಹುದು. ಅವರ ಆಸ್ತಿಗಳು ಮೂರನೇ ವ್ಯಕ್ತಿಗಳ ಕೊಡುಗೆಗಳಾಗಿವೆ. ರಾಜಿ ಇತ್ಯರ್ಥಕ್ಕೆ ಅನುಮೋದನೆ ನೀಡಿದರೆ ತೀರ್ಪಿನ ಸಂಪೂರ್ಣ ಸಾಲವನ್ನು ತೀರಿಸಲಾಗುತ್ತದೆ ಎಂದು ಅವರು ನ್ಯಾಯಾಲಯಕ್ಕೆ ವಿವರಿಸಿದ್ದರು.

    ಭಾರತದಲ್ಲಿನ ವಕೀಲರಿಗೆ ಸೂಚನೆ ನೀಡಲು ಅವಕಾಶ ನೀಡದಿರುವುದು ಆಕ್ರಮಣಕಾರಿ. ಅಲ್ಲದೆ ಭಾರತದಲ್ಲಿ ಈ ಪ್ರಕರಣಗಳು ಪ್ರಗತಿ ಸಾಧಿಸುತ್ತಿಲ್ಲ. ವಿಚಾರಣೆಗಳು ಪ್ರಗತಿ ಸಾಧಿಸದಿರಲು ಹಣದ ಕೊರತೆ ಹಾಗೂ ಕೊರೊನಾ ಪರಿಸ್ಥಿತಿ ಕಾರಣ ಎಂದು ಮಲ್ಯ ಪರ ವಕೀಲ ಮಾರ್ಷಲ್ ಅವರು ಈ ಹಿಂದೆ ಕೋರ್ಟ್‍ಗೆ ತಿಳಿಸಿದ್ದರು.

  • ನ್ಯಾಯಾಲಯ ಶುಲ್ಕ ಭರಿಸಲು ಒಡವೆ ಮಾರಿದೆ- ಲಂಡನ್ ಕೋರ್ಟ್‍ಗೆ ಅನಿಲ್ ಅಂಬಾನಿ ಹೇಳಿಕೆ

    ನ್ಯಾಯಾಲಯ ಶುಲ್ಕ ಭರಿಸಲು ಒಡವೆ ಮಾರಿದೆ- ಲಂಡನ್ ಕೋರ್ಟ್‍ಗೆ ಅನಿಲ್ ಅಂಬಾನಿ ಹೇಳಿಕೆ

    – ನಾನು ಐಶಾರಾಮಿ ಜೀವನ ನಡೆಸುತ್ತಿಲ್ಲ
    – ನನ್ನ ಖರ್ಚನ್ನು ಪತ್ನಿ, ಮಗ, ಕುಟುಂಬಸ್ಥರು ನೋಡಿಕೊಳ್ತಿದ್ದಾರೆ

    ಲಂಡನ್: ನ್ಯಾಯಾಲಯದ ಶುಲ್ಕ ಭರಿಸಲು ನನ್ನ ಬಳಿ ಇದ್ದ ಎಲ್ಲ ಆಭರಣಗಳನ್ನು ಮಾರಿದ್ದೇನೆ. ನನ್ನ ಖರ್ಚು ವೆಚ್ಚಗಳನ್ನು ಕುಟುಂಬಸ್ಥರು ನೋಡಿಕೊಳ್ಳುತ್ತಿದ್ದಾರೆ ಎಂದು ರಿಲಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿ ಹೇಳಿದ್ದಾರೆ.

    ಲಂಡನ್ ಹೈಕೋರ್ಟ್‍ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಅಂಬಾನಿ ಹೇಳಿದ್ದಾರೆ. ಚೀನಾ ಮೂಲದ ಮೂರು ಬ್ಯಾಂಕ್‍ಗಳು ಲಂಡನ್‍ನಲ್ಲಿ ಅನಿಲ್ ಅಂಬಾನಿ ವಿರುದ್ಧ ಮೊಕದ್ದಮೆ ಹೂಡಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲಂಡನ್ ಹೈ ಕೋರ್ಟ್ ವಿಚಾರಣೆ ನಡೆಸಿತು. ಈ ಹಿನ್ನೆಲೆ ಏಷ್ಯಾದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಸಹೋದರ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾದರು.

    ಖರ್ಚು, ವೆಚ್ಚಗಳನ್ನು ನನ್ನ ಪತ್ನಿ ಹಾಗೂ ಕುಟುಂಬಸ್ಥರು ನೋಡಿಕೊಳ್ಳುತ್ತಿದ್ದಾರೆ. ತಾಯಿ ಹಾಗೂ ಮಗನಿಂದ ಸಾಲ ಪಡೆದಿದ್ದೇನೆ. ದುಬಾರಿ ಬೆಲೆಯ ಕಾರಿನಲ್ಲಿ ಓಡಾಡಿದ್ದೇನೆ ಎಂಬ ಸುದ್ದಿ ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ. ಜನವರಿ ಹಾಗೂ ಜೂನ್ 2020ರಲ್ಲಿ ಆಭರಣ ಮಾರಿದ ಬಳಿಕ 9.9 ಕೋಟಿ ಸಿಕ್ಕಿದೆ. ಅಲ್ಲದೆ ಮೂರು ಗಂಟೆಗಳಿಗೂ ಹೆಚ್ಚು ಕಾಲ ಕೋರ್ಟ್ ವಿಚಾರಣೆ ನಡೆಸಿದ್ದು, ಖಾಸಗಿಯಾಗಿ ವಿಚಾರಣೆ ನಡೆಸುವ ಮನವಿಯನ್ನು ತಿರಸ್ಕರಿಸಲಾಗಿದೆ.

    ಇಂಡಸ್ಟ್ರಿಯಲ್ ಆ್ಯಂಡ್ ಕಮರ್ಷಿಯಲ್ ಬ್ಯಾಂಕ್ ಆಫ್ ಚೀನಾ ಲಿ.ನ ಮುಂಬೈ ಶಾಖೆ, ಚೀನಾ ಡೆವಲಪ್‍ಮೆಂಟ್ ಬ್ಯಾಂಕ್ ಹಾಗೂ ಎಕ್ಸಿಮ್ ಬ್ಯಾಂಕ್ ಆಫ್ ಚೀನಾ ದಾಖಲಿಸಿರುವ ಸಾಲದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ 22ರಂದು ವಿಚಾರಣೆ ನಡೆಸಿದ್ದ ಕೋರ್ಟ್, ಜೂನ್ 12ರೊಳಗೆ 5,821 ಕೋಟಿ ರೂ. ಪಾವತಿಸುವಂತೆ ಹಾಗೂ ಹೆಚ್ಚುವರಿಯಾಗಿ ನ್ಯಾಯಾಲಯದ ಶುಲ್ಕ 7 ಸಾವಿರ ಕೋಟಿ ರೂ.ಗಳನ್ನು ಪಾವತಿಸುವಂತೆ ಆದೇಶಿಸಿತ್ತು.

    ಬಾಕಿ ಹಣ ಪಾವತಿಸುವಲ್ಲಿ ವಿಫಲವಾದ ಕಾರಣ ಅಂಬಾನಿಯವರ ಆಸ್ತಿಯನ್ನು ಬಹಿರಂಗಪಡಿಸುವಂತೆ ಚೀನಿ ಬ್ಯಾಂಕ್‍ಗಳು ಕೋರ್ಟ್‍ಗೆ ಮನವಿ ಮಾಡಿವೆ. ಈ ಹಿನ್ನೆಲೆ ಜೂನ್ 29ರಂದು ಲಂಡನ್ ನ್ಯಾಯಾಲಯ ವಿಶ್ವಾದ್ಯಂತ ತಾನು ಹೊಂದಿರುವ ಆಸ್ತಿ ಕುರಿತು 74 ಲಕ್ಷ ರೂ.ಗಳ ಅಫಿಡೆವಿಟ್ ಸಲ್ಲಿಸುವಂತೆ ತಿಳಿಸಿತ್ತು. ಆದರೆ ಇದಕ್ಕೆ ಉತ್ತರಿಸಿರುವ ಅಂಬಾನಿ, ನಾನು ಐಶಾರಾಮಿ ಜೀವನ ನಡೆಸುತ್ತಿಲ್ಲ. ಇದನ್ನು ಸಹ ನನ್ನ ಪತ್ನಿ ಹಾಗೂ ಕುಟುಂಬಸ್ಥರು ಭರಿಸುತ್ತಿದ್ದಾರೆ. ನನ್ನ ಚಿನ್ನಾಭರಣಗಳನ್ನು ಮಾರಿ ನಾನು ಕಾನೂನು ಶುಲ್ಕ ಭರಿಸುತ್ತಿದ್ದೇನೆ ಎಂದು ಅಂಬಾನಿ ಕೋರ್ಟ್‍ಗೆ ತಿಳಿಸಿದ್ದಾರೆ.