Tag: ಲಂಡನ್‌ ಪೊಲೀಸ್‌

  • ಬೃಹತ್‌ ಗಾತ್ರದ ಕಡಿದ ಮರ ತಬ್ಬಿಕೊಂಡು ಸೆಕ್ಸ್‌ – ವಿಕೃತ ಕಾಮಿ ಅರೆಸ್ಟ್‌

    ಬೃಹತ್‌ ಗಾತ್ರದ ಕಡಿದ ಮರ ತಬ್ಬಿಕೊಂಡು ಸೆಕ್ಸ್‌ – ವಿಕೃತ ಕಾಮಿ ಅರೆಸ್ಟ್‌

    ಲಂಡನ್‌: ಇತ್ತೀಚಿನ ದಿನಗಳಲ್ಲಿ ಚಿತ್ರವಿಚಿತ್ರ ಘಟನೆಗಳು ಬೆಳಕಿಗೆ ಬರುತ್ತಿದ್ದು, ವಿಕೃತಿ ಮೆರೆಯುವವರ ಸಂಖ್ಯೆ ಹೆಚ್ಚಾಗ್ತಿದೆ. ಅದೇ ರೀತಿ ವಿಕೃತ ಕಾಮಿಯೊಬ್ಬ ಮರ ತಬ್ಬಿಕೊಂಡು ಬೆತ್ತಲಾಗಿ ಹಗಲಿನಲ್ಲೇ ಸೆಕ್ಸ್‌ ಮಾಡುತ್ತಿದ್ದ ಘಟನೆ ಲಂಡನ್ನಿನ (London) ಕ್ವೀನ್ ಎಲಿಜಬೆತ್ ಗಾರ್ಡನ್ಸ್‌ನಲ್ಲಿ (Queen Elizabeth Gardens) ನಡೆದಿದೆ.

    ಗಾರ್ಡನ್‌ನಲ್ಲಿ ಸಂಪೂರ್ಣ ಬೆತ್ತಲಾಗಿ ನಿಂತ ವ್ಯಕ್ತಿ ಮರ ತಬ್ಬಿಕೊಂಡು ಮುತ್ತಿಡುತ್ತಾ, ಮರದ ತೊಗಟೆಯನ್ನು ತನ್ನ ಮೈನಿಂದ ಉಜ್ಜಲು ಶುರು ಮಾಡಿದ್ದಾನೆ. ಮರದೊಂದಿಗೆ ಲೈಂಗಿಕ ಕ್ರಿಯೆಯನ್ನೂ ನಡೆಸಿದ್ದಾನೆ. ಸ್ಥಳೀಯರು ಹಾಗೂ ಪ್ರವಾಸಿಗರು ದೂರು ನೀಡಿದ ನಂತರ ಪೊಲೀಸರು (London Police) ಆತನನ್ನ ಬಂಧಿಸಿ ಕರೆದೊಯ್ದಿದ್ದಾರೆ. ಇದನ್ನೂ ಓದಿ: ದೆಹಲಿಯ ಕೋಚಿಂಗ್ ಸೆಂಟರ್‌ನಲ್ಲಿ ಭಾರೀ ಬೆಂಕಿ – ಕಿಟಕಿಯಿಂದ ಹಾರಿ ಜೀವ ಉಳಿಸಿಕೊಂಡ ವಿದ್ಯಾರ್ಥಿಗಳು

    ಗಾರ್ಡನ್‌ನಲ್ಲಿ ನಡೆದಿದ್ದೇನು?
    ವ್ಯಕ್ತಿಯೊಬ್ಬರು ತನ್ನ ಸಂಗಾತಿಯೊಂದಿಗೆ ವಾಕಿಂಗ್‌ ಮಾಡುತ್ತಿದ್ದಾಗ ವ್ಯಕ್ತಿಯೊಬ್ಬ ಕಡಿದಿದ್ದ ಭಾರೀ ಗಾತ್ರದ ಮರ ತಬ್ಬಿಕೊಳ್ಳುವುದನ್ನ ನೋಡಿದ್ದಾರೆ. ಆತನಿಗೆ ಮರವೆಂದರೆ ಇಷ್ಟವಿರಬಹುದೇನೋ ಎಂದು ಸುಮ್ಮನಾಗಿದ್ದಾರೆ. ಇದನ್ನೂ ಓದಿ: ಕೈಕೊಟ್ಟ ಪ್ರಿಯತಮ – ನೇಣು ಬಿಗಿದುಕೊಂಡು MBBS ವಿದ್ಯಾರ್ಥಿನಿ ಆತ್ಮಹತ್ಯೆ

    ಸ್ವಲ್ಪ ಸಮಯ ಕಳೆದ ಮೇಲೆ ಹತ್ತಿರ ಹೋಗಿ ನೋಡಿದಾಗ ಮರದ ಬಳಿ ನಿಂತಿದ್ದವನ ಪ್ಯಾಂಟ್‌ ಕಳಚಿತ್ತು, ಇದನ್ನು ಕಂಡ ದಂಪತಿ ಒಂದು ಕ್ಷಣ ತಬ್ಬಿಬ್ಬಾಗಿದ್ದಾರೆ. ತಕ್ಷಣ ಅವನ ನಡವಳಿಕೆಯನ್ನ ವೀಡಿಯೋ ರೆಕಾರ್ಡ್‌ ಮಾಡಿದ್ದಾರೆ. ಇದಾದ ಕೆಲವೇ ಕ್ಷಣಗಳಲ್ಲಿ ಪೊಲೀಸರು ಬಂದು ವಿಕೃತ ಕಾಮಿಯನ್ನ ಬಂಧಿಸಿದ್ದಾರೆ. ಪೊಲೀಸರು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸುತ್ತಿದ್ದಾಗಲೇ ಆತನಿಗೆ ಜಾಮೀನು ಸಿಕ್ಕಿ ಬಿಡುಗಡೆಯಾಗಿದ್ದಾನೆ ಎಂದು ಹೇಳಲಾಗಿದೆ.