Tag: ಲಂಚ

  • ಲಂಚ ಪಡೆಯುತ್ತಿದ್ದ ಅಬಕಾರಿ ಡಿವೈಎಸ್‍ಪಿ ACB ಬಲೆಗೆ

    ಲಂಚ ಪಡೆಯುತ್ತಿದ್ದ ಅಬಕಾರಿ ಡಿವೈಎಸ್‍ಪಿ ACB ಬಲೆಗೆ

    ಚಿತ್ರದುರ್ಗ: ಬಾರ್ ಮಾಲೀಕನಿಂದ ತಿಂಗಳ ಮಾಮೂಲಿ ಪಡೆಯುತ್ತಿದ್ದ ಅಬಕಾರಿ ಡಿವೈಎಸ್‍ಪಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿರುವ ಘಟನೆ ಇಂದು ನಗರದಲ್ಲಿ ನಡೆದಿದೆ.

    ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ನುಲೇನೂರು ಗ್ರಾಮದ ಎಸ್.ಎಲ್.ಎಂ ಬಾರ್ ಮಾಲೀಕ ರಾಜು ದೂರಿನ ಮೇರೆಗೆ ಎಸಿಬಿ ಅಧಿಕಾರಿಗಳು ಇಂದು ಅಬಕಾರಿ ಇಲಾಖೆ ಡಿವೈಎಸ್‍ಪಿ ಹರಳಯ್ಯ 15 ಸಾವಿರ ರೂಪಾಯಿ ಲಂಚ ಸ್ವೀಕರಿಸುವ ವೇಳೆ ನಗರದ ಕೃಷ್ಣ ಭವನ ಹೋಟೆಲ್‍ನಲ್ಲಿ ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಕರ್ತವ್ಯಲೋಪ – ಮೂವರು ಕಾನ್ಸ್ ಟೇಬಲ್‌ಗಳು ಅಮಾನತು

    ಪ್ರತಿದಿನ ಬಾರ್‌ಗೆ ಬರುತ್ತಿದ್ದ ಹರಳಯ್ಯ ಬಾರ್‌ನ ಅಕೌಂಟ್ ಬುಕ್ ಪರಿಶೀಲನೆ ಮಾಡುತ್ತಾ, ಕಿರುಕುಳ ನೀಡುತ್ತಿದ್ದರಂತೆ. ಸರಿಯಾಗಿ ಲೆಕ್ಕ ಪಾಲನೆ ಮಾಡಿಲ್ಲ ಅಂತ ದೌರ್ಜನ್ಯ ಮಾಡುತ್ತಾ ಅವಹೇಳನ ಮಾಡುತ್ತಿದ್ದರು. ಅಲ್ಲದೆ ಹಿಂದೆ ಬಾರ್‌ನಲ್ಲಿ ಕರ್ತವ್ಯ ನಿರ್ವಹಿಸುತಿದ್ದ ಮ್ಯಾನೇಜರ್ ಬಳಿ ಸಹ ಮಾಮೂಲಿ ವಸೂಲಿ ರುಚಿ ಕಂಡುಕೊಂಡಿದ್ದ ಅಬಕಾರಿ ಅಧಿಕಾರಿಗಳಿಗೆ ಮಾಲೀಕರು ಮಾಮೂಲಿ ಕೊಡುವುದನ್ನು ತಡೆದ ಪರಿಣಾಮ ನಿತ್ಯ ಕಿರುಕುಳ ಹೆಚ್ಚಾಗಿತ್ತು. ಹೀಗಾಗಿ ಮನನೊಂದ ಬಾರ್ ಮಾಲೀಕ ರಾಜು ಎಸಿಬಿ ಮೊರೆ ಹೋಗಿದ್ದಾರೆ. ಇದನ್ನೂ ಓದಿ: ಗೋ ಕಳ್ಳರಿಗೆ ಸಹಾಯ ಮಾಡಿದ್ದ ಪೊಲೀಸರ ಬಗ್ಗೆಯಷ್ಟೇ ಮಾತನಾಡಿದ್ದೇನೆ: ಆರಗ ಜ್ಞಾನೇಂದ್ರ

    ಆರೋಪ ಕೇಳಿಬಂದೊಡನೆ ಕಾರ್ಯ ಪ್ರವೃತ್ತರಾದ ಚಿತ್ರದುರ್ಗ ಎಸಿಬಿ ಎಸ್‍ಪಿ ಜಯಪ್ರಕಾಶ್, ಎಸ್‍ಐ ಪ್ರವೀಣ್ ನೇತೃತ್ವದಲ್ಲಿ ರಾಜು ಅವರಿಂದ ಹರಳಯ್ಯ ಹಣ ಪಡೆಯುವ ವೇಳೆ ದಾಳಿ ನಡೆಸಿದ್ದಾರೆ. ಬಳಿಕ ಹರಳಯ್ಯನನ್ನು ವಶಕ್ಕೆ ಪಡೆದು ನಿಯಮಾವಳಿಗ ಪ್ರಕಾರ ತನಿಖೆ ಮುಂದುವರೆಸಿದ್ದಾರೆ.

  • ಎಸಿಬಿ ದಾಳಿಯಿಂದ ತಪ್ಪಿಸಿ ಓಡಿದ ಪಿಎಸ್‍ಐಯನ್ನು ಹಿಡಿಯಲು ಬೆನ್ನತ್ತಿದ ಸಾರ್ವಜನಿಕರು!

    ಎಸಿಬಿ ದಾಳಿಯಿಂದ ತಪ್ಪಿಸಿ ಓಡಿದ ಪಿಎಸ್‍ಐಯನ್ನು ಹಿಡಿಯಲು ಬೆನ್ನತ್ತಿದ ಸಾರ್ವಜನಿಕರು!

    – ಕೊನೆಗೂ ಸೋಮಶೇಖರ್ ಅರೆಸ್ಟ್

    ತುಮಕೂರು: ಎಸಿಬಿ ದಾಳಿಯಿಂದ ತಪ್ಪಿಸಿಕೊಂಡು ಓಡಿ ಹೋದ ಪಿಎಸ್‍ಐಯನ್ನು ಹಿಡಿಯಲು ಸಾರ್ವಜನಿಕರು ಬೆನ್ನತ್ತಿದ ಘಟನೆ ತುಮಕೂರಿನಲ್ಲಿ ನಡೆದಿದೆ. ಗುಬ್ಬಿ ತಾಲೂಕು ಸಿ.ಎಸ್.ಪುರ ಠಾಣೆಯ ಸೋಮಶೇಖರ್.ಎಸ್ ಪರಾರಿಯಾದ ಪಿಎಸ್‍ಐ. ಸದ್ಯ ಓಡಿ ಹೋಗಿದ್ದ ಸೋಮಶೇಖರ್ ಅರೆಸ್ಟ್ ಆಗಿದ್ದಾರೆ.

    ಇಂದು ಮಧ್ಯಾಹ್ನ 1 ಗಂಟೆ ಸಮಯದಲ್ಲಿ ಪೊಲೀಸ್ ಠಾಣೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದರು. ಈ ವೇಳೆ ಎಸಿಬಿ ಬಲೆಗೆ ಪಿಎಸ್‍ಐ ಸೋಮಶೇಖರ್ ಮುಖ್ಯ ಪೇದೆ ನಯಾಜ್ ಅಹಮ್ಮದ್ ಬಿದ್ದಿದ್ದರು. ಆದರೆ ಪಿಎಸ್‍ಐ ಪೊಲೀಸ್ ಠಾಣೆಯಿಂದ ಬೈಕಿನಲ್ಲಿ ಪರಾರಿಯಾಗಿದ್ದರು. ಎಸಿಬಿ ಅಧಿಕಾರಿಗಳು ಊಟ ಮಾಡುತ್ತಿದ್ದ ಸಮಯ ಉಪಯೋಗಿಸಿಕೊಂಡು ಮೊಬೈಲ್ ಫೋನ್ ನೊಂದಿಗೆ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ.

    ದಾಳಿ ಮಾಡಿದ್ದು ಯಾಕೆ..?
    ಕೌಟುಂಬಿಕ ಕಲಹದ ವಿಚಾರವಾಗಿ ಕಳೆದ ತಿಂಗಳು 22ರಂದು ಸಿ.ಎಸ್ ಪುರ ಠಾಣೆಯಲ್ಲಿ ಚಂದ್ರಣ್ಣ ಎಂಬವರ ವಿರುದ್ಧ ದೂರು ದಾಖಲಾಗಿತ್ತು. ಪೊಲೀಸರು ಚಂದ್ರಣ್ಣನ ಕಾರು ವಶಪಡಿಸಿಕೊಂಡಿದ್ದರು. ಹೀಗಾಗಿ ಚಂದ್ರಣ್ಣ ಅವರು ಕೋರ್ಟಿನಲ್ಲಿ ಜಾಮೀನು ಪಡೆದು ಕಾರು ಬಿಡಿಸಿಕೊಳ್ಳಲು ಬಂದಿದ್ದರು. ಆದರೆ ಪಿಎಸ್‍ಐ, ಕಾರು ಬಿಡಲು 28 ಸಾವಿರ ಹಣಕ್ಕೆ ಬೇಡಿಕೆ ಇಟ್ಡಿದ್ದು, ಮುಖ್ಯ ಪೇದೆ ನಯಾಜ್ ಅಹಮದ್ ಮೂಲಕ ಹಣಕ್ಕೆ ಡಿಮ್ಯಾಂಡ್ ಮಾಡಿದ್ದರು. ಇದನ್ನೂ ಓದಿ: ಪೊಲೀಸ್‍ಗೆ ಕಪಾಳಮೋಕ್ಷ ಮಾಡಿದ ಮಾಜಿ ಶಾಸಕ ಎ.ಪಾಪಾರೆಡ್ಡಿ

    ಅಲ್ಲದೆ 12 ಸಾವಿರ ಲಂಚವನ್ನು ಕೂಡ ಪಡೆದಿದ್ದರು. ಉಳಿದ 16 ಸಾವಿರ ಹಣ ಇಂದು ಪಡೆಯುವ ವೇಳೆ ಪಿಎಸ್‍ಐ ಎಸಿಬಿ ಬಲೆಗೆ ಬಿದ್ದಿದ್ದಾರೆ. ಪಿಎಸ್‍ಐ ಲಂಚ ಬೇಡಿಕೆ ಬಗ್ಗೆ ಚಂದ್ರಣ್ಣ ಎಸಿಬಿಗೆ ದೂರು ನೀಡಿದ್ದರು. ಮಾಹಿತಿ ಆಧರಿಸಿದ ಎಸಿಬಿ ಅಧಿಕಾರಿಗಳು ಪಿಎಸ್‍ಐ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ಅಧಿಕಾರಿಗಳನ್ನು ತಪ್ಪಿಸಿಕೊಂಡು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಇದನ್ನೂ ಓದಿ: ಎತ್ತುಗಳ ಜೊತೆಗೆ ಬಂದ ಅಭಿಮಾನಿಗಳನ್ನು ಭೇಟಿ ಮಾಡಿದ ಶಿವಣ್ಣ, ರಾಘಣ್ಣ

    ನಡು ದಾರಿಯಲ್ಲಿ ಯೂನಿಫಾರ್ಮ್ ಬಿಚ್ಚಿ ಪಿಎಸ್ ಐ ಗದ್ದೆಗೆ ಎಸೆದಿದ್ದರು. ಅರೆ ಬೆತ್ತಲಾಗಿ ಓಡುತ್ತಿದ್ದ ಪಿಎಸ್‍ಐಯನ್ನು ಸಿಎಸ್ ಪುರ ಸಮೀಪದ ಜನ್ನೇನಹಳ್ಳಿ ಬಳಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ನಂತರ ಹೊಸ ಬಟ್ಟೆ ಕೊಡಿಸಿ ಎಸಿಬಿ ಅಧಿಕಾರಿಗಳು ಠಾಣೆಗೆ ಕರೆದುತಂದಿದ್ದಾರೆ.

  • 10 ಸಾವಿರ ಲಂಚ ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದ ಪುರಸಭೆ ಮುಖ್ಯಾಧಿಕಾರಿ

    10 ಸಾವಿರ ಲಂಚ ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದ ಪುರಸಭೆ ಮುಖ್ಯಾಧಿಕಾರಿ

    ಚಿಕ್ಕಮಗಳೂರು: ನಿವೇಶನ ಖಾತೆ ಮಾಡಿಕೊಡಲು ಲಂಚ ಪಡೆಯುತ್ತಿದ್ದ ವೇಳೆ ಪುರಸಭೆ ಮುಖ್ಯಾಧಿಕಾರಿ ಎಸಿಬಿ ಬಲೆಗೆ ಬಿದ್ದಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನಲ್ಲಿ ನಡೆದಿದೆ.

    KADURU MUNICIPALITY

    ಕಡೂರಿನ ಪುರಸಭೆ ಮುಖ್ಯಾಧಿಕಾರಿ ಎಚ್.ಎನ್.ಮಂಜುನಾಥ್, ಎಸಿಬಿ ಬಲೆಗೆ ಬಿದ್ದ ಅಧಿಕಾರಿ. ಇದನ್ನೂ ಓದಿ: ಇಂದು ಸಂಜೆಯೇ ನಟ ಪುನೀತ್ ಅಂತ್ಯಕ್ರಿಯೆ

    ಕಡೂರಿನ ವೆಂಕಟೇಶ್ವರ ನಗರದ ನಿವಾಸಿ ರಘು ಎಂಬವರು ತಮ್ಮ ಪತ್ನಿಗೆ ದಾನವಾಗಿ ಬಂದಿದ್ದ ನಿವೇಶನವನ್ನು ಖಾತೆ ಮಾಡಿ ಕೊಡುವಂತೆ ಪುರಸಭೆಗೆ ಅರ್ಜಿ ಹಾಕಿದ್ದರು. ನಿವೇಶನದ ಖಾತೆ ಮಾಡಿಕೊಡಲು ಆರಂಭದಲ್ಲಿ ಮಂಜುನಾಥ್ ಅವರು 25 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಕಡೆಗೆ ರಘು ಗೋಗರೆದಿದ್ದಕ್ಕೆ 10 ಸಾವಿರ ನೀಡುವಂತೆ ಹೇಳಿದ್ದರು. ಆದರೆ, ರಘು ಈ ಮಾಹಿತಿಯನ್ನು ಎಸಿಬಿ ಅಧಿಕಾರಿಗಳ ಗಮನಕ್ಕೆ ತಂದು, ದೂರು ನೀಡಿದ್ದರು.

    BRIBE

    ಶುಕ್ರವಾರ ರಘು ಪುರಸಭಾ ಕಚೇರಿಯಲ್ಲಿ ಮುಖ್ಯಾಧಿಕಾರಿ ಮಂಜುನಾಥ್‍ಗೆ 10 ಸಾವಿರ ರೂ. ಹಣ ನೀಡುತ್ತಿದ್ದರು. ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳು ಹಣದ ಸಮೇತ ಮಂಜುನಾಥ್ ಅವರನ್ನ ವಶಕ್ಕೆ ಪಡೆದಿದ್ದಾರೆ. ಈ ವೇಳೆ ಪುರಸಭೆ ಕಚೇರಿ ಬಾಗಿಲು ಮುಚ್ಚಿ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿತ್ತು. ಪುರಸಭೆ ನೌಕರರನ್ನೂ ಹೊರಬಿಡದ ಎಸಿಬಿ ಅಧಿಕಾರಿಗಳು ಸಂಜೆವರೆಗೂ ಪರಿಶೀಲನೆ ನಡೆಸಿದರು. ನಂತರ ಅವರನ್ನು ಜಿಲ್ಲಾ ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ಇದನ್ನೂ ಓದಿ: ಪತಿ ನಿಧನದ ಸುದ್ದಿ ಕೇಳ್ತಿದ್ದಂತೆ ಕಣ್ಣೀರಿಡುತ್ತಲೇ ಮೌನಕ್ಕೆ ಶರಣಾದ ಪತ್ನಿ ಅಶ್ವಿನಿ

    BRIBE

    ಎಸಿಬಿ ಡಿವೈಎಸ್ಪಿ ಗೀತಾ, ಇನ್‍ಸ್ಪೆಕ್ಟರ್ ಮಂಜುನಾಥ್, ಎಸಿಬಿ ತನಿಖಾಧಿಕಾರಿ ದೇವರಾಜು, ಅರ್ಪಿತಾ, ಸತೀಶ್, ವೇದಾವತಿ, ಪ್ರಸಾದ್, ಜಯಕುಮಾರ್, ರವಿಚಂದ್ರ ಹಾಗೂ ಅನಿಲ್ ಇದ್ದರು.

  • ಹೋಟೆಲ್‍ನಲ್ಲಿ ಲಂಚ ಸ್ವೀಕರಿಸುತ್ತಿದ್ದ ಇನ್ಸ್​ಪೆಕ್ಟರ್ ಎಸಿಬಿ ಬಲೆಗೆ!

    ಹೋಟೆಲ್‍ನಲ್ಲಿ ಲಂಚ ಸ್ವೀಕರಿಸುತ್ತಿದ್ದ ಇನ್ಸ್​ಪೆಕ್ಟರ್ ಎಸಿಬಿ ಬಲೆಗೆ!

    ಹುಬ್ಬಳ್ಳಿ: ರೈತರೊಬ್ಬರಿಂದ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದ ಕಂದಾಯ ನಿರೀಕ್ಷಕ ಎಸಿಬಿ ಬಲೆಗೆ ಬಿದ್ದಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

    ಇನ್ಸ್​ಪೆಕ್ಟರ್ ಹೊಟೇಲ್ ನಲ್ಲಿ ಹಣ ತೆಗೆದುಕೊಳ್ಳುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ರೆಡ್ ಹ್ಯಾಂಡ್ ಆಗಿ ಬಲೆಗೆ ಬಿದ್ದಿದ್ದಾರೆ. ಕುಂದಗೋಳ ತಾಲೂಕಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕಂದಾಯ ನಿರೀಕ್ಷಕ ಸದಾನಂದ ಭೀಮಣ್ಣ ಎನ್ನುವವರು ಶರೇವಾಡ ಗ್ರಾಮದ ರೈತ ಲೋಚನಪ್ಪ ಎಂಬವರ ಜಮೀನಿನ ವಿಷಯ ಬಗೆಹರಿಸುವ ಸಲುವಾಗಿ 50,000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಇದನ್ನೂ ಓದಿ:  ರೈತರೊಂದಿಗೆ ಒಂದು ದಿನ ಕಾರ್ಯಕ್ರಮಕ್ಕೆ ಚಾಲನೆ – ಕಬ್ಬು ನಾಟಿ ಮಾಡಿದ ಕೌರವ

    ಲಂಚಕ್ಕೆ ಬೇಡಿಕೆ ಇಟ್ಟ ಪರಿಣಾಮ ಎಸಿಬಿಗೆ ರೈತರು ದೂರು ನೀಡಿದ್ದರು. ಈ ಪರಿಣಾಮ ರೈತನ ದೂರು ಆಧರಿಸಿ ಎಸಿಬಿ ಅಧಿಕಾರಿಗಳು, ಇಂದು ಹುಬ್ಬಳ್ಳಿಯ ಕಾಮತ್ ಹೊಟೇಲ್ ನಲ್ಲಿ ರೈತ ಲೋಚನಪ್ಪ ಅವರಿಂದ 35,000 ರೂ. ಪಡೆಯುವಾಗ ಎಸಿಬಿ ವಿಭಾಗದ ಡಿವೈಎಸ್‍ಪಿ ವೇಣುಗೋಪಾಲ್ ನೇತೃತ್ವದಲ್ಲಿ ದಾಳಿ ಮಾಡಿ ಸದಾನಂದ ಅವರನ್ನು ಬಂಧಿಸಿದ್ದಾರೆ. ಇದನ್ನೂ ಓದಿ:  ಕೆರೆಯ ಬಳಿ ಮದ್ಯಪಾನ ಮಾಡಿ ಗುಂಡಿನ ದಾಳಿ – FSL ತಂಡದಿಂದ ಪರಿಶೀಲನೆ

    ಡಿವೈಎಸ್‍ಪಿ ವೇಣುಗೋಪಾಲ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇನ್ಸ್​ಪೆಕ್ಟರ್ ಅಧಿಕಾರಿಗಳಾದ ಅಲಿಶೇಖ್, ವಿ.ಎನ್.ಖಡಿ ಇವರೊಂದಿಗೆ ಸಿಬ್ಬಂದಿಗಳಾದ ಲೊಕೇಶ್ ಬೆಂಡಿಕಾಯಿ, ಗಿರೀಶ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಈ ವೇಳೆ ಕಂದಾಯ ನಿರೀಕ್ಷಕರನ್ನು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರಿಸಲಾಗಿದೆ.

  • ಫೋನ್ ಪೇ ಮೂಲಕ ಲಂಚ ಪಡೆದ ಪಿಎಸ್‍ಐ ಅಮಾನತು

    ಫೋನ್ ಪೇ ಮೂಲಕ ಲಂಚ ಪಡೆದ ಪಿಎಸ್‍ಐ ಅಮಾನತು

    ತುಮಕೂರು: ಫೋನ್ ಪೇ ಮೂಲಕ ಲಂಚ ಪಡೆದ ಜಿಲ್ಲೆಯ ಗುಬ್ಬಿ ಟೌನ್ ಠಾಣೆಯ ಪಿಎಸ್ ಐ ಜ್ಞಾನಮೂರ್ತಿಯನ್ನು ಅಮಾನತುಗೊಳಿಸಿ ಎಸ್‍ಪಿ ಆದೇಶಿಸಿದ್ದಾರೆ.

    ಕಳೆದ ವಾರ ವಿನಾಕಾರಣ ಮ್ಯಾಕ್ಸಿಕ್ಯಾಬ್ ವೊಂದನ್ನು ತಡೆದು ಚಾಲಕನಿಗೆ ಕಿರುಕುಳ ನೀಡಿದ ಆರೋಪವನ್ನು ಪಿಎಸ್‍ಐ ಎದುರಿಸುತ್ತಿದ್ದರು. ಕ್ಯಾಬ್ ಚಾಲಕನಿಂದ 7 ಸಾವಿರ ರೂ. ಲಂಚವನ್ನು ಫೋನ್ ಪೇ ಮೂಲಕ ಪಿಎಸ್‍ಐ ಪಡೆದುಕೊಂಡಿದ್ದರು. ಜೀಪ್ ಚಾಲಕ ಕರಿಯಪ್ಪರ ಮೊಬೈಲ್ ನಂಬರಿಗೆ ಪಿಎಸ್‍ಐ ಲಂಚದ ಹಣವನ್ನು ಫೋನ್ ಪೇ ಮಾಡಿಸಿಕೊಂಡದ್ದರು. ಇದನ್ನೂ ಓದಿ: ಅರವಿಂದ್ ವೀಡಿಯೋ ಮಾಡಿ ಅದನ್ನು ಟ್ರೋಲಿಗನಿಗೆ ಸಂಬರ್ಗಿ ಕೊಟ್ಟ: ಚಂದ್ರಚೂಡ್

    ಪಿಎಸ್‍ಐ ದೌರ್ಜನ್ಯ ಖಂಡಿಸಿ ಚಾಲಕರು ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಪಿಎಸ್‍ಐ ಜ್ಞಾನಮೂರ್ತಿಯನ್ನು ಅಮಾನತ್ತು ಮಾಡಿ ತುಮಕೂರು ಎಸ್‍ಪಿ ರಾಹುಲ್ ಕುಮಾರ್ ಶಹಾಪುರ್ ಆದೇಶಿಸಿದ್ದಾರೆ.

  • ರಜೆ ಮಂಜೂರಿಗೆ ಲಂಚ ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದ ಸಾರಿಗೆ ಅಧಿಕಾರಿ

    ರಜೆ ಮಂಜೂರಿಗೆ ಲಂಚ ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದ ಸಾರಿಗೆ ಅಧಿಕಾರಿ

    ಗದಗ: ಕೆಎಸ್.ಆರ್.ಟಿ.ಸಿ ಸಾರಿಗೆ ಸಂಸ್ಥೆ ಚಾಲಕ/ನಿರ್ವಾಹಕರಿಗೆ ರಜೆ ಮಂಜೂರು ಮಾಡಲು ಲಂಚ ಪಡೆಯುತ್ತಿದ್ದ ಡಿಪೋ ಮ್ಯಾನೇಜರ್‌ನನ್ನು ಎಸಿಬಿ ಅಧಿಕಾರಿಗಳು ದಾಳಿ ಮಾಡಿರುವ ಘಟನೆ ಜಿಲ್ಲೆಯ ರೋಣದಲ್ಲಿ ನಡೆದಿದೆ.

    ರೋಣ ಬಸ್ ಡಿಪೋ ಮ್ಯಾನೇಜರ್ ಬಿ.ಎಂ. ಗೆನ್ನೂರ ಎಸಿಬಿ ದಾಳಿಗೆ ಒಳಗಾದ ಅಧಿಕಾರಿಯಾಗಿದ್ದಾರೆ. ಸಂಸ್ಥೆಯ ನಿರ್ವಾಹಕರೊಬ್ಬರು, ತಾಯಿಗೆ ಹುಷಾರಿಲ್ಲದ ಕಾರಣ ರಜೆ ಕೇಳಿದ್ದರು. 20 ದಿನ ರಜೆ ಮಂಜೂರು ಮಾಡಲು 2 ಸಾವಿರ ರೂ. ಲಂಚದ ಬೇಡಿಕೆ ಇಟ್ಟಿದ್ದರು. ಇಂದು ಹಣ ಕೊಡುವಾಗ ದಾಳಿ ನಡೆಸಿದ ಅಧಿಕಾರಿಗಳು, ಡಿಪೋ ಮ್ಯಾನೇಜರನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ. ಇದನ್ನೂ ಓದಿ: ಶಾಸಕರ ಹುಟ್ಟುಹಬ್ಬ – ಹೂಮಳೆಗೆರೆದು ಸಂಭ್ರಮಿಸಿದ ಪೊಲೀಸರು

    ಯಾವುದೇ ಸಿಬ್ಬಂದಿ ರಜೆ ಕೇಳಿದ್ರೆ ಈ ಡಿಪೋ ಮ್ಯಾನೇಜರ್ ಲಂಚ ಪಡೆಯುತ್ತಿದ್ದರು ಎಂಬ ಆರೋಪ ಕೆಳಿಬಂದಿದೆ. ಎಸಿಬಿ ಡಿವೈಎಸ್‌ಪಿ ಎಂ.ವಿ. ಮಲ್ಲಾಪುರ ಮಾರ್ಗದರ್ಶನದಲ್ಲಿ ಗದಗ ಇನ್‍ಸ್ಪೆಕ್ಟರ್ ಆರ್. ದೇಸಾಯಿ, ಈರಣ್ಣ ಹಳ್ಳಿ, ಸಿಬ್ಬಂದಿ ಎಂ.ಎಂ. ಅಯ್ಯನಗೌಡರ, ವೀರೇಶ್ ಜೋಳದ, ಎನ್.ಎಸ್. ತಾಯಣ್ಣವರ, ವೀರೇಶ್ ಬಿಸನಳ್ಳಿ, ಐ.ಸಿ. ಜಾಲಿಹಾಳ, ಮಂಜು ಮುಳಗುಂದ ನೇತೃತ್ವದಲ್ಲಿ ದಾಳಿ ಮಾಡಲಾಯಿತು. ಅರೋಪಿ ಅಧಿಕಾರಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಕುರಿತು ಗದಗ ಎಸಿಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ವಸತಿ ಶಾಲೆ ಸೀಟು ನೀಡಲು ಲಂಚ ಕೇಳಿದ ಪ್ರಾಂಶುಪಾಲ ACB ಬಲೆಗೆ

    ವಸತಿ ಶಾಲೆ ಸೀಟು ನೀಡಲು ಲಂಚ ಕೇಳಿದ ಪ್ರಾಂಶುಪಾಲ ACB ಬಲೆಗೆ

    ಚಿತ್ರದುರ್ಗ: ವಸತಿ ಶಾಲೆಯಲ್ಲಿ ಬಡ ವಿದ್ಯಾರ್ಥಿಗೆ ಸೀಟು ನೀಡಲು ಲಂಚ ಕೇಳಿದ್ದ ಪ್ರಾಂಶುಪಾಲನೋರ್ವ ಹಣ ಪಡೆಯುವ ವೇಳೆ ಎಸಿಬಿ ಬಲೆಗೆ ಸಿಕ್ಕಿಬಿದ್ದಿದ್ದಾನೆ. ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ವಾಣಿ ವಿಲಾಸಪುರ ಮೊರಾರ್ಜಿ ಶಾಲೆಯಲ್ಲಿ ಈ ಘಟನೆ ನಡೆದಿದೆ.

    ಸೈಯದ್ ನಿಜಾಮುದ್ದೀನ್ ಎಸಿಬಿ ಬಲೆಗೆ ಬಿದ್ದ ವಿವಿಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ. ಸೈಯದ್ ನಿಜಾಮುದ್ದೀನ್ ಬಳಿ ಹಿರಿಯೂರು ತಾಲೂಕಿನ ಬೆಳಘಟ್ಟ ಗ್ರಾಮದ ಎಚ್.ಮೂರ್ತಿ ಅವರ ಪುತ್ರ ಎಂ.ಯಲ್ಲಪ್ಪನನ್ನು ವಿವಿಪುರ ಮೊರಾರ್ಜಿ ಶಾಲೆಗೆ ಸೇರ್ಪಡೆ ಮಾಡಲು ಅರ್ಜಿ ಸಲ್ಲಿಸಿದ್ದರು. ನಿಮ್ಮ ಪುತ್ರನಿಗೆ ಮೊರಾರ್ಜಿ ಶಾಲೆ ಸೇರ್ಪಡೆ ಒಂದು ಅಂಕ ಕಡಿಮೆ ಇದ್ದು 10 ಸಾವಿರ ರೂ. ನೀಡಿದರೆ ದಾಖಲು ಮಾಡಿಕೊಳ್ಳಲಾಗುತ್ತದೆ ಎಂದು ಬೇಡಿಕೆ ಇಟ್ಟಿದ್ದನು. ನಿಜಾಮುದ್ದೀನ್ ವರ್ತನೆ ವಿರುದ್ಧ ಎಚ್.ಮೂರ್ತಿ ಚಿತ್ರದುರ್ಗ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ಗೆ ದೂರು ನೀಡಿದ್ದರು. ಉಪಾಯದಿಂದ ಈಗ ಹಣವಿಲ್ಲ. ಸೀಟು ನೀಡಿದ ಬಳಿಕ ಹಣ ನೀಡುವುದಾಗಿ ನಂಬಿಸಿ ಇಂದು ಹಣವನ್ನು ತಂದು ನಿಜಾಮುದ್ದೀನ್ ಗೆ ನೀಡುವ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

    ಮೂರ್ತಿ ಅವರ ದೂರು ಆಧರಿಸಿ ಎಸಿಬಿ ಅಧೀಕ್ಷಕ ಜಯಪ್ರಕಾಶ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಬಸವರಾಜ್ ಮುಗದಮ್ ಹಾಗೂ ಪಿಐ ಪ್ರವೀಣ್ ಕುಮಾರ್ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿ ಪ್ರಾಂಶುಪಾಲ ಸೈಯದ್ ನಿಜಾಮುದ್ದೀನ್ ನನ್ನು ಬಂಧಿಸಿದೆ.

  • ಲಂಚ ಪಡೆಯುವಾಗ ತಗ್ಲಾಕೊಂಡ ಅಧಿಕಾರಿ – ಬನಿಯನ್, ಟವೆಲ್ ನಲ್ಲಿಯೇ ಕರ್ಕೊಂಡು ಬಂದ್ರು!

    ಲಂಚ ಪಡೆಯುವಾಗ ತಗ್ಲಾಕೊಂಡ ಅಧಿಕಾರಿ – ಬನಿಯನ್, ಟವೆಲ್ ನಲ್ಲಿಯೇ ಕರ್ಕೊಂಡು ಬಂದ್ರು!

    – ಮನೆಯಲ್ಲಿಯೇ ನಡೀತಾ ಇತ್ತು ಡೀಲ್

    ಲಕ್ನೋ: ಲಂಚ ಪಡೆಯುತ್ತಿದ್ದ ವೇಳೆ ಅಧಿಕಾರಿಯನ್ನು ಎಸಿಬಿ ಬೇಟೆಯಾಡಿದೆ. ಹಣ ಪಡೆಯುತ್ತಿರುವ ಸಮಯದಲ್ಲಿ ಎಂಟ್ರಿ ಕೊಟ್ಟ ಭ್ರಷ್ಟಾಚರ ನಿಗ್ರಹ ದಳ (ಎಸಿಬಿ) ತಂಡ ಟವೆಲ್, ಬನಿಯನ್ ಮೇಲೆಯೇ ಅಧಿಕಾರಿಯನ್ನು ಕಚೇರಿಗೆ ಕರೆ ತಂದಿದ್ದಾರೆ.

    ಉತ್ತರ ಪ್ರದೇಶದ ಸಂತ ಕಬೀರ್ ನಗರದ ರಾಮ್ ಮಿಲನ್ ಯಾದವ್ 10 ಸಾವಿರ ರೂಪಾಯಿ ಲಂಚ ಪಡೆಯುತ್ತಿರುವಾಗ ತಗ್ಲಾಕೊಂಡ ದ್ವಿತೀಯ ದರ್ಜೆಯ ನೌಕರ. ಅಬ್ದುಲ್ ಖಾನ್ ಎಂಬವರ ವರದಿ ಸಿದ್ಧಪಡಿಸಲು ರಾಮ್ ಮಿಲನ್ 10 ಸಾವಿರ ರೂ. ಲಂಚಕ್ಕೆ ಬೇಡಿಕೆ ಮುಂದಿಟ್ಟಿದ್ದರಿಂದ ಎಸಿಬಿಗೆ ದೂರು ನೀಡಿದ್ದರು. ಇದನ್ನೂ ಓದಿ: ಸವಾಲುಗಳನ್ನು ಮೆಟ್ಟಿಲಾಗಿಸಿಕೊಂಡು ಕೆಲಸ ಮಾಡ್ತೇನೆ: ಸಿಎಂ ಬೊಮ್ಮಾಯಿ

    ಸದ್ಯ ಆರೋಪಿಯನ್ನು ಠಾಣೆಗೆ ಕರೆ ತಂದಿರುವ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆದಿವೆ. ಈ ಕುರಿತು ಪ್ರತಿಕ್ರಿಯಿಸಿರುವ ಎಸಿಬಿ ಅಧಿಕಾರಿ ರಾಮಧಾರಿ ಮಿಶ್ರಾ, ದೂರು ಸಲ್ಲಿಕೆಯಾಗಿದ್ದರಿಂದ ಲಂಚ ಪಡೆಯುವ ವೇಳೆ ನಮ್ಮ ತಂಡ ದಾಳಿ ನಡೆಸಿತ್ತು. ಸದ್ಯ ಆರೋಪಿಯನ್ನು ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಗಡ್ಡ ಬಿಟ್ಟಾಗ ಶಿವಾಜಿ, ಈಗ ಬಸವಣ್ಣ: ಶಾಸಕ ಯತ್ನಾಳ್

    ಉಪ ನಿರೀಕ್ಷಕರಾಗಿರುವ ರಾಮ್ ಯಾದವ್ ಪದೇ ಪದೇ ಹಣಕ್ಕಾಗಿ ಪೀಡಿಸುತ್ತಿದ್ದರು. ಜಮೀನು ವಿಷಯವಾಗಿ ವರದಿ ಸಿದ್ಧಪಡಿಸಲು 10 ಸಾವಿರ ರೂಪಾಯಿ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು. ಆದ್ರೆ ನನಗೆ ಹಣ ನೀಡಲು ಇಷ್ಟವಿರಲಿಲ್ಲ. ಹಾಗಾಗಿ ಎಸಿಬಿಗೆ ದೂರು ನೀಡಿದ್ದೆ ಎಂದು ಅಬ್ದುಲ್ ಖಾನ್ ತಿಳಿಸಿದ್ದಾರೆ. ಇದನ್ನೂ ಓದಿ: ಒಬ್ಬನೊಂದಿಗೆ ತಾಯಿ-ಮಗಳ ಅಕ್ರಮ ಸಂಬಂಧ – ಗೂಢಚಾರಿಕೆ ನಡೆಸ್ತಿದ್ದವನನ್ನ ಕೊಂದೇ ಬಿಟ್ರು!

  • ರೆಡ್ ಹ್ಯಾಂಡಾಗಿ ಎಸಿಬಿ ಬಲೆಗೆ ಬಿದ್ದ ಪಿಡಿಓ

    ರೆಡ್ ಹ್ಯಾಂಡಾಗಿ ಎಸಿಬಿ ಬಲೆಗೆ ಬಿದ್ದ ಪಿಡಿಓ

    ಚಿತ್ರದುರ್ಗ: ಲಂಚ ಪಡೆಯುತ್ತಿದ್ದ ಪಿಡಿಓ ರೆಡ್ ಹ್ಯಾಂಡಾಗಿ ಎಸಿಬಿ ಬಲೆಗೆ ಸಿಕ್ಕಿ ಬಿದ್ದಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.

    ಹೊಳಲ್ಕೆರೆ ತಾಲೂಕಿನ ಟಿ.ನುಲೇನೂರು ಗ್ರಾ.ಪಂ ಪಿಡಿಓ ಶ್ರೀನಿವಾಸ್ ಎಸಿಬಿ ಅಧಿಕಾರಿಗಳ ಬಲೆಗೆ ಸಿಕ್ಕಿ ಬಿದ್ದಿದ್ದಾರೆ. ಮನೆಯ ಇ-ಸ್ವತ್ತು ಹಾಗೂ ಜಾಬ್ ಕಾರ್ಡ್ ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ವೇಳೆ ಎಸಿಬಿ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಇದನ್ನೂ ಓದಿ:  ಕಾಂಗ್ರೆಸ್‍ನ 20 ಜನ ಸಿಎಂ ಸೂಟ್‍ಗೆ ಆರ್ಡರ್ ಮಾಡಿದ್ದಾರೆ: ಬಡಗಲಪೂರ ನಾಗೇಂದ್ರ

    ಗ್ರಾಮದ ಗುರುಶಾಂತಪ್ಪ ಎಂಬುವರ ಬಳಿ ಪಿಡಿಓ ಶ್ರೀನಿವಾಸ್ ಅವರು, 2ಸಾವಿರ ರೂಪಾಯಿ ಲಂಚ ಕೊಟ್ಟರೆ ಮಾತ್ರ, ತಮ್ಮ ಕೆಲಸ ಮಾಡಿಕೊಡುವುದಾಗಿ ಬೇಡಿಕೆ ಇಟ್ಟಿದ್ದರು. ಇಂದು ಪಿಡಿಓ ಸಾಹೇಬ್ರು ಲಂಚ ಸ್ವೀಕರಿಸುವ ವೇಳೆ  ಗ್ರಾಮಪಂಚಾಯ್ತಿ ಕಚೇರಿ ಮೇಲೆ ಎಸಿಬಿ ಎಸ್ ಐ ಪ್ರವೀಣ್ ನೇತೃತ್ವದಲ್ಲಿ ಎಸಿಬಿ ಅಧಿಕಾರಿಗಳು ದಾಳಿನಡೆಸಿದ್ದು, ಶ್ರೀನಿವಾಸ್‍ನನ್ನು ವಶಕ್ಕೆ ಪಡೆದು ತನಿಖೆ ನಡೆಸುತಿದ್ದಾರೆ.

    ಭ್ರಷ್ಟಚಾರಕ್ಕೆ ಬ್ರೇಕ್ ಹಾಕಲು ಸರ್ಕಾರ ಹಲವು ತಂತ್ರಜ್ಞಾನಗಳನ್ನು ಜಾರಿಗೊಳಿಸಿದೆ. ಆದರೂ ಅಧಿಕಾರಿಗಳು ಮಾತ್ರ ಅವರ ಕೈ ಕಸುಬನ್ನು ಬಿಟ್ಟಿಲ್ಲ, ಇದಕ್ಕೆ ತಾಜಾ ಉಧಾಹರಣೆಈ ಘಟನೆಯಾಗಿದೆ.

  • ದುಡ್ಡಿಲ್ಲ ಅಂದ್ರೆ ಫೈಲ್ ಮುಟ್ಟಲ್ಲ – ಬೆಸ್ಕಾಂ ಅಧಿಕಾರಿಯ ಲಂಚಾವತಾರ ವೀಡಿಯೋ ವೈರಲ್

    ದುಡ್ಡಿಲ್ಲ ಅಂದ್ರೆ ಫೈಲ್ ಮುಟ್ಟಲ್ಲ – ಬೆಸ್ಕಾಂ ಅಧಿಕಾರಿಯ ಲಂಚಾವತಾರ ವೀಡಿಯೋ ವೈರಲ್

    – ಪ್ರತಿ ಕೆಲಸಕ್ಕೂ ಒಂದೊಂದು ಅಮೌಂಟ್ ಫಿಕ್ಸ್!

    ಚಿಕ್ಕಬಳ್ಳಾಪುರ: ಬೆಂಗಳೂರು ಗ್ರಾಮಾಂತರ ದೇವನಹಳ್ಳಿಯ ಬೆಸ್ಕಾಂ ಸಹಾಯಕ ಕಾರ್ಯನಿರ್ವಾರ್ಹಕ ಅಧಿಕಾರಿ ಶ್ರೀನಿವಾಸ್ ಮಂತ್ರೋಡಿ ಲಂಚಾವತಾರ ಇದೀಗ ಬಟ ಬಯಲಾಗಿದೆ.

    ಎಇಇ ಶ್ರೀನಿವಾಸ್ ಮಂತ್ರೋಡಿಗೆ ಪ್ರತಿ ಫೈಲ್ ಗೆ ಸಹಿ ಹಾಕಬೇಕಂದ್ರೆ ಲಂಚ ನೀಡಬೇಕು. ಲಂಚ ನೀಡದಿದ್ದರೆ ಕೆಲಸವೇ ಆಗಲ್ಲವಂತೆ. ಇನ್ನೂ ಬಹುಮಟ್ಟಡಿ ಕಟ್ಟಡಕ್ಕೆ ವಿದ್ಯುತ್ ಪಡೆಯಬೇಕಾದರೇ ಕೆಲಸವೇ ಇಲ್ಲಿ ಆಗೋದಿಲ್ಲ. ಎಇಇ ಖಾಸಗಿಯಾಗಿ ನೇಮಕಗೊಂಡಿರೋ ಗುತ್ತಿಗೆದಾರರು ಹೋದರೆ ಮಾತ್ರ ಕೆಲಸ ಆಗುತ್ತಂತೆ. ಮುಖ್ಯವಾಗಿ ಪ್ರತಿಯೊಂದು ಫೈಲ್ ಗೂ ಸಹಿಗೆ ಈತ ಇಂತಿಷ್ಟು ಅಂತ ಲಂಚವನ್ನ ನಿಗದಿಪಡಿಸಿರುವ ಆರೋಪ ಕೇಳಿ ಬಂದಿದೆ.

    ಅಧಿಕಾರಿಯ ಲಂಚದ ಮೆನು
    * 1 ವ್ಯಾಟ್ ವಿದ್ಯುತ್ ಸಂಪರ್ಕಕ್ಕೆ 300 ರೂ.
    * 2 ವ್ಯಾಟ್ ವಿದ್ಯುತ್ ಸಂಪರ್ಕಕ್ಕೆ 600 ರೂ.
    * 3-4 ವ್ಯಾಟ್ ವಿದ್ಯುತ್ ಸಂಪರ್ಕಕ್ಕೆ 1200 ರೂ.
    * ರೈತರ ತೋಟದಲ್ಲಿ ಒಂದು ಕಂಬ ಹಾಕಲು 1,000 ರೂ.
    * ಮೂರು ಕಂಬ ಹಾಕಿದ್ರೆ 3 ಸಾವಿರ ರೂ
    * 25 ವ್ಯಾಟ್ ಟ್ರಾನ್ಸಫಾರ್ಮಾಗೆ 5 ಸಾವಿರ ರೂ.
    * 100 ವ್ಯಾಟ್ ಟ್ರಾನ್ಸಫಾರ್ಮಾಗೆ 15 ಸಾವಿರ ರೂ.

    ಹೀಗೆ ಒಂದೊಂದು ಕೆಲಸಕ್ಕೂ ಲಂಚವನ್ನ ನಿಗದಿ ಮಾಡಿದ್ದು, ಹಣ ಕೊಟ್ಟರೆ ಮಾತ್ರ ಆ ಫೈಲ್ ಗಳಿಗೆ ಸೈನ್ ಮಾಡ್ತಾರೆ. 11 ತಿಂಗಳ ಹಿಂದೆ ದೇವನಹಳ್ಳಿ ಎಇಇ ಆಗಿ ನೇಮಕಗೊಂಡ ಶ್ರೀನಿವಾಸ್, ಯಾರೇ ಮನೆಗೆ ಮೀಟರ್ ಸೇರಿದಂತೆ ಟ್ರಾನ್ಸ್ ಪಾರ್ಮ್ ಪಡೆಯಬೇಕಂದ್ರು ಪರಿಶೀಲನೆಗೆ ಅವರ ಹಿಂಬಾಲಕರನ್ನ ಕಳಿಸೋದು. ಮನೆಗಳ ಬಳಿ ಹೋಗುವ ಖಾಸಗಿ ಗುತ್ತಿಗೆದಾರರು ಅದು ಸರಿ ಇಲ್ಲ, ಇದು ಸರಿಯಲ್ಲ ಅಂತಾ ಹೇಳಿ ವಾಪಸ್ ಬರುತ್ತಾರೆ. ಆಗ ಎಇಇ ಬಳಿ ಬಂದು ಹಣವನ್ನ ಕೊಟ್ಟು ಫೈಲ್‍ಗೆ ಸಹಿ ಮಾಡಸಬೇಕು ಎಂಬ ಆರೋಪಗಳಿವೆ.

    ವೀಡಿಯೋದಲ್ಲಿ ಏನಿದೆ?:
    ಅಧಿಕಾರಿ ಸರ್ಕಾರಿ ಕೆಲಸ ಮಾಡೋದು ಬಿಟ್ಟು, ಗುತ್ತಿಗೆ ಕೆಲಸ ಮಾಡಿಕೊಂಡು ಹಣ ಮಾಡಿಕೊಳ್ಳುತ್ತಿರೋದನ್ನು ರೈತರು ಹಾಗೂ ಕೆಲವರು ವೀಡಿಯೋ ಮಾಡಿ ವೈರಲ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಫೈಲ್ ಅಧಿಕಾರಿ ಮುಂದೆ ಇಟ್ಟು, ಲಂಚದ ಹಣ ಪಕ್ಕದ ಡ್ರಾಯರ್ ನಲ್ಲಿ ಹಾಕಬೇಕು. ನಂತರ ಡ್ರಾಯರ್ ನಲ್ಲಿ ಹಣ ಎತ್ತಿಕೊಂಡು ಎಣಿಸಿ, ಜೇಬಿನಲ್ಲಿ ಇಟ್ಟುಕೊಂಡು ಎಇಇ ಸಹಿ ಮಾಡುತ್ತಿರೋ ದೃಶ್ಯಗಳು ಸೆರೆಯಾಗಿದೆ. ಇದನ್ನೂ ಓದಿ: ದುಬಾರಿಯಾದ ಪೆಟ್ರೋಲ್ – ಕಳ್ಳತನಕ್ಕಿಳಿದ ಯುವಕರು

    ಹೀಗಾಗಿ ಇಂತಹ ಅಧಿಕಾರಿಯನ್ನ ಕೂಡಲೇ ಅಮಾನತು ಮಾಡುವಂತೆ ರೈತರು ಆಗ್ರಹಿಸಿದ್ದಾರೆ. ದೇವನಹಳ್ಳಿ ಬೆಸ್ಕಾಂನಲ್ಲಿರೋ ಎಇಇ ಶ್ರೀನಿವಾಸ್ ಮಂತ್ರೋಡಿಯ ಲಂಚವತಾರ ಎಲ್ಲೆಡೆ ವೈರಲ್ ಆಗಿದ್ದು, ಭ್ರಷ್ಟ ಅಧಿಕಾರಿಯ ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ಇದನ್ನೂ ಓದಿ: ಪುಲ್ವಾಮಾದಲ್ಲಿ ವಿಜಯಪುರದ ಯೋಧ ಹುತಾತ್ಮ