Tag: ಲಂಚ

  • ಅಬಕಾರಿ ಕಚೇರಿಯಲ್ಲೇ ಲಂಚ ಕೇಳಿದ ಅಧಿಕಾರಿ – ವೀಡಿಯೋ ವೈರಲ್

    ಅಬಕಾರಿ ಕಚೇರಿಯಲ್ಲೇ ಲಂಚ ಕೇಳಿದ ಅಧಿಕಾರಿ – ವೀಡಿಯೋ ವೈರಲ್

    ವಿಜಯಪುರ: ಯಾರ ಪಾಲನ್ನು ಕೊಡುತ್ತಿರೋ ಬಿಡುತ್ತಿರೋ ಗೊತ್ತಿಲ್ಲ. ನನ್ನದಂತೂ ಬೇಕು ಎಂದು ಅಬಕಾರಿ ಅಧಿಕಾರಿಯೊಬ್ಬರು ಬಾರ್ ಮಾಲೀಕರಿಗೆ ಲಂಚ (Bribe) ಕೇಳುತ್ತಿರುವ ವೀಡಿಯೋವೊಂದು ಇದೀಗ ವೈರಲ್ ಆಗುತ್ತಿದೆ.

    ವಿಜಯಪುರ (Vijayapura) ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಅಬಕಾರಿ ಕಚೇರಿಯಲ್ಲಿ (Excise Department) ಈ ಘಟನೆ ನಡೆದಿದೆ. ಅಬಕಾರಿ ಅಧಿಕಾರಿ ಜ್ಯೋತಿ ಮೇತ್ರಿ, ಬಾರ್ ಮಾಲೀಕನ ಬಳಿ ತಿಂಗಳ ಪಾವತಿ ಬಗ್ಗೆ ಮಾತನಾಡುತ್ತಾ ಗರಂ ಆಗಿರುವ ಘಟನೆ ಇದಾಗಿದೆ.

    ವೀಡಿಯೋದಲ್ಲಿ ಏನಿದೆ?: ಡಿಸಿ ಸರ್‌ಗೆ ಕೊಟ್ಟು ಬಂದ್ದಿದ್ದೀರಿ. ಅವರೇ ಜೆಸಿ ಸರ್ ಮುಂದೆ ತಗೊಂಡಿದ್ದೇನೆ ಎಂದು ಓಪನ್ ಆಗಿ ಹೇಳುತ್ತಾರೆ. 4 ತಾಲೂಕಿನಿಂದ ತಗೊಂಡಿದ್ದೀನಿ, ವಿಜಯಪುರ ಒಂದೇ ಬಾಕಿ ಇದೆ ಅಂತಾ ಹೇಳಿದ್ದಾರೆ. ಜೆಸಿಗೂ ಆಯಿತು. ಎಲ್ಲರದೂ ಅಪಡೇಟ್ ಮುಗೀತು. ರಿನಿವಲ್ ಮುಗೀತು. ನನ್ನದೊಂದೇ ಏಕೆ ಕಾಡುತ್ತಿದ್ದೀರಿ ಹೇಳಿ ಎಂದು ಅಬಕಾರಿ ಅಧಿಕಾರಿ ಜ್ಯೋತಿ ಮೇತ್ರಿ ಗರಂ ಆಗಿದ್ದಾರೆ.

    ನನಗೆ ಜುಲೈದು 15 ಸಾವಿರ ಮಂತ್ಲಿ ಬೇಕೆಬೇಕು. ಹಳ್ಳಿ, ಹಳ್ಳಿದು 20, 30 ಕೊಡ್ತಾರೆ. ನಾನೇ ಸಬ್ ಇನ್ಸ್‍ಪೆಕ್ಟರ್ ಆಗಿದ್ದಾಗ ನಾಗೇಶ್ ಹತ್ತಿರ ಹತ್ತು ಸಾವಿರ ತಗೆದುಕೊಂಡು ಬಂದಿದ್ದೇನೆ ಎಂದು ಜ್ಯೋತಿ ಹೇಳಿದ್ದಕ್ಕೆ ಜುಲೈದು ಬಿಟ್ಟು ಬಿಡಿ ಮೇಡಂ ತೊಂದರೆ ಇದೆ. ಇನ್ನು ಮುಂದೆ ತಪ್ಪದೇ ಮಂತ್ಲಿ ಕೊಡ್ತೇವೆ. ಪ್ರತಿ ತಿಂಗಳು 20ಕ್ಕೆ ಕೊಡೋದು ನನ್ನ ಜವಾಬ್ದಾರಿ ಎಂದ ಬಾರ್ ಮಾಲೀಕ ಗಣೇಶ ಹೇಳಿದಾಗ ಅದಕ್ಕೆ ಒಪ್ಪದೆ ಜುಲೈ ತಿಂಗಳಿನದ್ದು ಕೊಡಲೇಬೇಕು ಎಂದ ಜ್ಯೋತಿ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ನನ್ನ ಮಗನನ್ನು ಹುಡುಕಿ ಕೊಟ್ಟವರಿಗೆ ಸೂಕ್ತ ಬಹುಮಾನ ನೀಡುತ್ತೇವೆ: ರೇಣುಕಾಚಾರ್ಯ

    ಒಟ್ಟಿನಲ್ಲಿ ಅಬಕಾರಿ ಕಚೇರಿಯಲ್ಲೇ ಕುಳಿತು ಅಬಕಾರಿ ಅಧಿಕಾರಿ ಮಂತ್ಲಿ ಡೀಲ್ ಮಾಡಿದ್ದು, ಅಲ್ಲದೆ ಮೇಲಿನ ಬರಿಗೆ ಯಾರ್ಯಾರಿಗೆ ಹಫ್ತಾ ಮುಟ್ಟುತ್ತೆಯಂತಾ ವಿವರವಾಗಿ ಹೇಳಿ ತಗಾಲಕೊಂಡಿದ್ದಾರೆ. ಜ್ಯೋತಿಯ ಭಂಡತನ ಕಂಡು ಸಾರ್ವಜನಿಕರು ಛೀಮಾರಿ ಹಾಕುತ್ತಿದ್ದಾರೆ. ಇದರ ಬಗ್ಗೆ ಅಬಕಾರಿ ಇಲಾಖೆ ಹಿರಿಯ ಅಧಿಕಾರಿಗಳು ಯಾವ ಕ್ರಮ ಜರುಗಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಇದನ್ನೂ ಓದಿ: ಜಾರಕಿಹೊಳಿ ಯಾವಾಗ ಸರ್ಕಾರ ಕೆಡವುತ್ತಾರೋ? ಯಾವಾಗ ಸರ್ಕಾರ ತರುತ್ತಾರೋ?: ಜಯಮೃತ್ಯುಂಜಯ ಸ್ವಾಮೀಜಿ

    Live Tv
    [brid partner=56869869 player=32851 video=960834 autoplay=true]

  • ಬಿಗ್ ಬಾಸ್ ಖ್ಯಾತಿಯ ಮಂಜು ಪಾವಗಡ ಸಹೋದರನಿಂದ ಬ್ಲಾಕ್ ಮೇಲ್- ಜನರಿಂದ ಬಿತ್ತು ಗೂಸಾ

    ಬಿಗ್ ಬಾಸ್ ಖ್ಯಾತಿಯ ಮಂಜು ಪಾವಗಡ ಸಹೋದರನಿಂದ ಬ್ಲಾಕ್ ಮೇಲ್- ಜನರಿಂದ ಬಿತ್ತು ಗೂಸಾ

    ತುಮಕೂರು: ಮಹಾನಗರ ಪಾಲಿಕೆ ಸಿಬ್ಬಂದಿಗೆ ಬ್ಲಾಕ್ ಮೇಲ್ ಮಾಡಿದ್ದ ಆರೋಪದ ಮೇರೆಗೆ ಬಿಗ್ ಬಾಸ್ ಖ್ಯಾತಿಯ ಮಂಜು ಪಾವಗಡ (Manju Pavagada) ಸಹೋದರ ಪ್ರದೀಪ್‍ಗೆ ಧರ್ಮದೇಟು ಹಾಕಿದ್ದಾರೆ.

    ಪ್ರದೀಪ್ ಸದ್ಯಕ್ಕೆ ವಾರಪತ್ರಿಕೆಯೊಂದರ ಸಂಪಾದಕನಾಗಿ ಕೆಲಸ ಮಾಡುತ್ತಿದ್ದಾನೆ. ಈತ ಸಬ್ಸಿಡಿ ಸಾಲ (Subsidized Loan) ಮಂಜೂರು ಮಾಡಿಕೊಡುವಂತೆ ನಗರ ಜೀವನೋಪಾಯ ಕೇಂದ್ರಕ್ಕೆ ಹೋಗಿದ್ದ. ಈ ವೇಳೆ ಲಂಚದಾಸೆ ತೋರಿಸಿ ವೀಡಿಯೋ ಮಾಡಿಕೊಂಡಿದ್ದ. ಬಳಿಕ ಈ ವೀಡಿಯೋ ತೋರಿಸಿ ನಗರ ಜೀವನೋಪಾಯ ಕೇಂದ್ರದಲ್ಲಿ ಸಿಆರ್‌ಸಿ ಆಗಿ ಕೆಲಸ ಮಾಡುತ್ತಿದ್ದ ಯುವತಿಗೆ ನಿರಂತರ ಬ್ಲಾಕ್ ಮೇಲ್ ಮಾಡುತ್ತಿದ್ದ ಆರೋಪ ಕೇಳಿ ಬಂದಿದೆ. ಇದನ್ನೂ ಓದಿ: PFIನಿಂದ ಬೆದರಿಕೆ – ಐವರು RSS ನಾಯಕರಿಗೆ Y ಭದ್ರತೆ

    ಘಟನೆ ಕುರಿತು ನಿನ್ನೆ ಸಂಜೆ ಆ ಯುವತಿ ಕೆಲಸ ಮಾಡುವ ಜಾಗಕ್ಕೆ ಬಂದು ಬೆದರಿಕೆ ಹಾಕುತ್ತಿದ್ದಾಗ ಅಲ್ಲಿದ್ದವರು ಧರ್ಮದೇಟು ಹಾಕಿದ್ದಾರೆ. ಅಷ್ಟೇ ಅಲ್ಲದೇ ಮಹಾನಗರ ಪಾಲಿಕೆ ಆವರಣದಲ್ಲಿ ಪ್ರದೀಪ್‍ನ ಜೊತೆ ಬಂದಿದ್ದ ನಕಲಿ ಪತ್ರಕರ್ತರು ಸೇರಿ ಹ್ಯೂಮನ್ ರೈಟ್ಸ್ ಎಂದು ಹೇಳಿಕೊಂಡು ಬಂದವರಿಗೂ ಗೂಸಾ ಬಿದ್ದಿದೆ. ಘಟನೆಗೆ ಸಂಬಂಧಿಸಿ ಬ್ಲಾಕ್ ಮೇಲ್‍ಗೆ ಮುಂದಾಗಿದ್ದ ನಾಲ್ವರು ತುಮಕೂರು ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ತುಮಕೂರು (Tumkur) ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಕರ್ನಾಟಕದ ಜನರಿಗೆ ಪವರ್ ಸ್ಟ್ರೋಕ್ – ನವರಾತ್ರಿ ಹಬ್ಬಕ್ಕೆ ಕರೆಂಟ್ ಶಾಕ್ ಗಿಫ್ಟ್

    Live Tv
    [brid partner=56869869 player=32851 video=960834 autoplay=true]

  • ಸರ್ಕಾರಿ ಕಚೇರಿಗಳಲ್ಲಿ ಲಂಚ ಕೊಡ್ಬೇಡಿ ಬೋರ್ಡ್‍ಗೆ ಆದೇಶ

    ಸರ್ಕಾರಿ ಕಚೇರಿಗಳಲ್ಲಿ ಲಂಚ ಕೊಡ್ಬೇಡಿ ಬೋರ್ಡ್‍ಗೆ ಆದೇಶ

    ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷಗಳು, ಗುತ್ತಿಗೆದಾರರ ಸಂಘಗಳು ಭ್ರಷ್ಟಾಚಾರ ಆರೋಪ ಮಾಡುತ್ತಿರುವ ಸಂದರ್ಭದಲ್ಲಿಯೇ, ನನಗೆ ಯಾರು ಲಂಚ (Bribe) ಕೊಡಬೇಡಿ. ನಾನು ಭ್ರಷ್ಟ ಅಧಿಕಾರಿಯಾಗಲಾರೆ ಎಂಬ ನಾಮಫಲಕವನ್ನು ಸರ್ಕಾರಿ ಕಚೇರಿ (Government Office) ಗಳಲ್ಲಿ ಅಳವಡಿಸುವಂತೆ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಸುತ್ತೋಲೆ ಹೊರಡಿಸಿದ್ದಾರೆ.

    ಸಿಟಿಜನ್ ಎನ್‍ಕ್ವೈರಿ ಕೌನ್ಸಿಲ್ ಎಂಬ ಸಂಸ್ಥೆ ನಡೆಸಿರುವ ಭ್ರಷ್ಟಾಚಾರ (Corruption) ನಿರ್ಮೂಲನಾ ಅಭಿಯಾನದ ಅಂಗವಾಗಿ ಬೋರ್ಡ್ ಅಳವಡಿಸಿಕೊಳ್ಳಿ ಎಂದು ಆದೇಶ ನೀಡಿದ್ದಾರೆ. ಅಕ್ಟೋಬರ್ 2ರಿಂದ 20ರವರೆಗೆ ಈ ಕ್ಯಾಂಪೇನ್ ನಡೆಯಲಿದೆ. ಈ ಬಗ್ಗೆ ಕಾಂಗ್ರೆಸ್ (Congress) ಕಿಡಿಕಾರಿದೆ. ಸರ್ಕಾರದ ಮೇಲಿನ ಭ್ರಷ್ಟಾಚಾರದ ಆರೋಪಗಳನ್ನು ಡೈವರ್ಟ್ ಮಾಡಲು ಖಾಸಗಿ ಸಂಸ್ಥೆ ನಡೆಸಿರುವ ಅಭಿಯಾನವನ್ನು ಸರ್ಕಾರ ಒಪ್ಪಿಕೊಂಡಿದೆ. ಇದು ಎಷ್ಟು ದಿನ ನಡೆಯುತ್ತೋ ನೋಡ್ಬೇಕು ಎಂದು ಕೈ ನಾಯಕರು ಹೇಳಿದ್ದಾರೆ. ಇದನ್ನೂ ಓದಿ: ಮೋದಿ ಹೋದ ಕಡೆಯಲ್ಲಿ ಬಿಜೆಪಿ ಸೋತಿದೆ: ಸಿದ್ದರಾಮಯ್ಯ

    ಸಿದ್ದರಾಮಯ್ಯ (Siddaramaiah) ಟ್ವೀಟ್ ಮಾಡಿ, ಮುಖ್ಯಮಂತ್ರಿ ಬೊಮ್ಮಾಯಿ ಅವರೇ, ಮೊದಲು ನಿಮ್ಮ ಮತ್ತು ಸಚಿವರ ಕಚೇರಿಗಳು, ಹಾಗೂ ಮನೆ ಮುಂದೆ ಈ ಬೋರ್ಡ್ ಹಾಕಿಸಿ. ಸರ್ಕಾರಿ ಗುತ್ತಿಗೆದಾರರು ಲಂಚದ ಆರೋಪ ಮಾಡಿರುವುದು ಸಚಿವರ ಮೇಲೆ, ಅಧಿಕಾರಿಗಳ ಮೇಲೆ ಅಲ್ಲ. ಅಧಿಕಾರಿಗಳನ್ನು ತೋರಿಸಿ ಕಮಿಷನ್ ಆರೋಪದಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಬೇಡ. ಲಂಚಾವತಾರ ನಾಟಕದಲ್ಲಿ ಅಧಿಕಾರಿಗಳದ್ದು ಪೋಷಕ ಪಾತ್ರ, ಬಿಜೆಪಿ ಸರ್ಕಾರದ ಇಲಾಖಾ ಸಚಿವರದ್ದೇ ಮುಖ್ಯ ಪಾತ್ರ. ಈ ಬೋರ್ಡ್ ಬರೆಸಿ ಹಾಕುವ ನಾಟಕಗಳನ್ನೆಲ್ಲ ನಿಲ್ಲಿಸಿ ಎಂದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪಹಣಿ ಬದಲಾವಣೆಗೆ 50 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟ ಗ್ರಾಮ ಲೆಕ್ಕಿಗ!

    ಪಹಣಿ ಬದಲಾವಣೆಗೆ 50 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟ ಗ್ರಾಮ ಲೆಕ್ಕಿಗ!

    ಬೆಂಗಳೂರು: ರಾಜ್ಯ ಸರ್ಕಾರವನ್ನ 40% ಕಮಿಷನ್ ಸರ್ಕಾರ ಅಂತಾ ಕಾಂಗ್ರೆಸ್ ಪಕ್ಷ ಟೀಕೆಗಳ ಮೇಲೆ ಟೀಕೆ ಮಾಡ್ತಿರೋದು ಎಲ್ಲರಿಗೂ ಗೊತ್ತಿದೆ. ಈ ಸರ್ಕಾರ (BJP Government) ಭ್ರಷ್ಟಾಚಾರದ ಸರ್ಕಾರ ಅಂತಾ ವಿಪಕ್ಷಗಳು ಆರೋಪ ಮಾಡ್ತಾನೆ ಬಂದಿದೆ. ಒಂದು ಪಹಣಿಯ ಬದಲಾವಣೆ ಮಾಡಿಸಲು ಲಕ್ಷ ಲಕ್ಷ ಹಣಕೊಟ್ಟು ಕೆಲಸವೂ ಆಗದೇ ನಮಗೆ ನಮ್ಮ ಹಣ (Money) ಕೊಡಿಸಿ ಅಂತಾ ಪೊಲೀಸ್ ಠಾಣೆಗೆ ದೂರು ನೀಡಿರೋ ಘಟನೆ ಬೆಳಕಿಗೆ ಬಂದಿದೆ.

    ಹೌದು. ಬೆಂಗಳೂರಿನ ಕಾಟನ್ ಪೇಟೆಯಲ್ಲಿ ವಾಸವಾಗಿರೋ ಶ್ರೀನಿವಾಸ್, ಮೂಲತಃ ಕಗಲ್ಲಿಪುರ ಪೊಲೀಸ್ ಠಾಣಾ ವ್ಯಾಪ್ತಿಯ ಉದೀಪಾಳ್ಯದ ನಿವಾಸಿ. ತಮ್ಮ ಮುತ್ತಾತನ ಹೆಸರಿನಲ್ಲಿರೋ 4 ಎಕರೆ ಜಾಗ (Property) ವನ್ನ ತಂದೆಯ ಹೆಸರಿಗೆ ಮಾಡಿಸಿ ಕುಟುಂಬದವರಿಗೆ ಹಂಚಿಕೆ ಮಾಡೋ ಪ್ಲಾನ್ ಮಾಡಿಕೊಂಡಿದ್ರು. ಶ್ರೀನಿವಾಸ್ ಅವರು ಕಗ್ಗಲಿಪುರದ ವಿಲೇಜ್ ಅಕೌಂಟೆಂಟ್ (Village Accountant) ಬಳಿ ಪಹಣಿ ಬದಲಾವಣೆ ಮಾಡಿಸಿಕೊಂಡುವಂತೆ ಕೇಳಿಕೊಂಡಿದ್ರು. ಆದರೆ ಪಹಣಿ ಬದಲಾವಣೆ ಮಾಡಿಕೊಡಲು ವಿಲೇಜ್ ಅಕೌಂಟೆಂಟ್ ಆಗಿರೋ ಮಿಸ್ಟರ್ ಶಾಂತೇಗೌಡ ಬರೋಬ್ಬರಿ 50ಲಕ್ಷ ಕೇಳಿದ್ದಾನೆ.

    ಪಹಣಿ ಬದಲಾವಣೆ ಆದರೆ ಸಾಕು ಅಂತಾ ಶ್ರೀನಿವಾಸ್ ಅವರು ತಮ್ಮ ಹೆಸರಿನಲ್ಲಿದ್ದ ಜಮೀನು (Land) ಮಾರಿ 30 ಲಕ್ಷ ಅಡ್ವಾನ್ಸ್ ಅಂತಾ 2018ರಲ್ಲಿ ನೀಡಿದ್ದಾರೆ. ಆದರೆ ಇಲ್ಲಿಯವರೆಗೆ ಹಣವನ್ನು ವಾಪಸ್ ನೀಡದೇ ಪಹಣಿ ಕೆಲಸವೂ ಮಾಡಿಸದೇ ಮೋಸ ಮಾಡ್ತಿದ್ದಾರೆ ಎಂದು ಕಗ್ಗಲಿಪುರ ಪೊಲೀಸರಿಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಪಾಲಿಕೆಯ ಹೊಸ ಪಾರ್ಕಿಂಗ್ ರೂಲ್ಸ್ – ಲೂಟಿ ಯೋಜನೆಯೆಂದು ಜನಾಕ್ರೋಶ

    ಹಣ ಕೊಡಿ ಇಲ್ವಾ ಕೆಲಸ ಮಾಡಿಕೊಡಿ ಅಂತಾ ಕೇಳಲು ಹೋದ್ರೆ ಶಾಂತೇಗೌಡ ಏನ್ ಮಾಡ್ತಿರೋ ಮಾಡ್ಕೋಳಿ ನಿಮ್ಮನ್ನ ಜೀವಂತವಾಗಿ ಉಳಿಸೋಲ್ಲ ಅಂತಾ ದಮ್ಕಿ ಕೂಡ ಹಾಕಿದ್ದರಂತೆ. ಹೇಗೋ ನಮ್ಮ ತಾತನ ಆಸ್ತಿ ಬರುತ್ತೆ ಅಂತಾ ಹಣ ಕೊಟ್ಟು ಈಗ ಜಮೀನು ಕೂಡ ಬದಲಾವಣೆ ಆಗಿದೆ ಕೊಟ್ಟ ಹಣವೂ ಇಲ್ಲದೇ ಹೇಗಪ್ಪ ಜೀವನ ಅಂತಾ ಕಷ್ಟದಲ್ಲೇ ಕಾಲ ಕಳೆಯುವಂತೆ ಆಗಿದೆ ಶ್ರೀನಿವಾಸ್ ಪತ್ನಿ ಹೇಳುತ್ತಾರೆ.

    ಒಟ್ಟಿನಲ್ಲಿ ಒಬ್ಬ ಸಾಮಾನ್ಯ ವಿಲೇಜ್ ಅಕೌಂಟೆಂಟ್ ಹೀಗೆ ಲಕ್ಷ ಲಕ್ಷ ಹಣ ಪಡೆಯುತ್ತಿದ್ದಾನೆ ಅಂದ್ರೇ ಹೇಗಿದೆ ನಮ್ಮ ವ್ಯವಸ್ಥೆ ಅನ್ನೋದು ಗೊತ್ತಾಗ್ತಿದೆ. ಸದ್ಯ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಮಾಡ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅಕ್ರಮ ಆಸ್ತಿ ಗಳಿಕೆ – ನಿವೃತ್ತ ಸಾರಿಗೆ ಅಧಿಕಾರಿಗೆ 4 ವರ್ಷ ಕಠಿಣ ಶಿಕ್ಷೆ, 63 ಲಕ್ಷ ರೂ. ದಂಡ

    ಅಕ್ರಮ ಆಸ್ತಿ ಗಳಿಕೆ – ನಿವೃತ್ತ ಸಾರಿಗೆ ಅಧಿಕಾರಿಗೆ 4 ವರ್ಷ ಕಠಿಣ ಶಿಕ್ಷೆ, 63 ಲಕ್ಷ ರೂ. ದಂಡ

    ಬೆಳಗಾವಿ: ಅಕ್ರಮ ಆಸ್ತಿ ಗಳಿಕೆ ಮಾಡಿದ್ದ ನಿವೃತ್ತ ಸಾರಿಗೆ ಅಧಿಕಾರಿಗೆ 4 ವರ್ಷ ಕಠಿಣ ಶಿಕ್ಷೆ ಹಾಗೂ 63 ಲಕ್ಷ ರೂ. ದಂಡವನ್ನು ವಿಧಿಸಿ ಬೆಳಗಾವಿಯ (Belagavi) ಲೋಕಾಯುಕ್ತ (Lokayukta) ಕೋರ್ಟ್ ತೀರ್ಪು ನೀಡಿದೆ.

    ಕೋಲಾರ (Kolar) ಮೂಲದ ಬೆಳಗಾವಿಯ ಆಂಜನೇಯ ನಗರ ನಿವಾಸಿ ಪಿ. ಶಾಂತಕುಮಾರ್ ಶಿಕ್ಷೆಗೆ ಒಳಗಾದವರು. ಬೀದರ್ (Bidar) ಜಿಲ್ಲೆಯ ಹುಮನಾಬಾದ್ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಆಗಿದ್ದಾಗ ಅಕ್ರಮವಾಗಿ ಅಪಾರ ಆಸ್ತಿ ಸಂಪಾದಿಸಿದ್ದರು. ಈ ಬಗ್ಗೆ ಮಾಹಿತಿ ಕಲೆಹಾಕಿದ್ದ ಅಂದಿನ ಬೆಳಗಾವಿ ಲೋಕಾಯುಕ್ತ ಇನ್ಸ್‌ಪೆಕ್ಟರ್ ಆರ್. ಕೆ ಪಾಟೀಲ್ 2010ರ ಮೇ 3 ರಂದು ಪ್ರಕರಣ ದಾಖಲಿಸಿದ್ದರು.

    ಖಚಿತ ಮಾಹಿತಿ ಮೇರೆಗೆ ಬೆಳಗಾವಿಯ ಆಂಜನೇಯ ನಗರದಲ್ಲಿದ್ದ ಶಾಂತಕುಮಾರ್ ಮನೆ ಹಾಗೂ ಹುಮನಾಬಾದ್ ಕಚೇರಿ ಮೇಲೆ ಅಧಿಕಾರಿಗಳು ನಡೆಸಿದ್ದ ದಾಳಿ ವೇಳೆ 1.14 ಕೋಟಿ ಆಸ್ತಿ ಸಿಕ್ಕಿತ್ತು. ಘಟನೆಗೆ ಸಂಬಂಧಿಸಿ ಲೋಕಾಯುಕ್ತ ಇನ್ಸ್‌ಪೆಕ್ಟರ್ ಆಗಿದ್ದ ಆರ್.ಬಿ. ಹವಾಲ್ದಾರ ಅವರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

    ಪ್ರಕರಣಕ್ಕೆ ಸಂಬಂಧಿಸಿದಂತೆ ವಾದ-ಪ್ರತಿವಾದವನ್ನು ನ್ಯಾಯಾಧೀಶ ಮೋಹನ ಪ್ರಭು ಆಲಿಸಿದ್ದರು. ಇದರಲ್ಲಿ 63 ಲಕ್ಷ ರೂ. ಹಣವನ್ನು ಭ್ರಷ್ಟಾಚಾರದ ಹಾಗೂ ಅಕ್ರಮವಾಗಿ ಸಂಪಾದಿಸಿದ್ದಾರೆ ಎನ್ನುವುದು ಸಾಬೀತಾಗಿತ್ತು. ಈ ಹಿನ್ನೆಲೆಯಲ್ಲಿ ಶಾಂತಕುಮಾರ್‌ಗೆ 4 ವರ್ಷ ಕಠಿಣ ಶಿಕ್ಷೆ ಹಾಗೂ 63 ಲಕ್ಷ ದಂಡ ವಿಧಿಸಿ ಕೋರ್ಟ್ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದೆ. ಇದನ್ನೂ ಓದಿ: 40 ಪರ್ಸೆಂಟ್‌ ಸರ್ಕಾರ ಅಣಕ – ಪೇಟಿಎಂ ಮಾದರಿಯಲ್ಲಿ ʻಪೇ ಸಿಎಂʼ ಪೋಸ್ಟರ್‌ ವೈರಲ್‌

    ಒಂದು ವೇಳೆ ದಂಡ ಭರಿಸಲು ಸಾಧ್ಯವಾಗದಿದ್ದರೆ, ಆತನ ಪತ್ನಿಯ ಹೆಸರಿನಲ್ಲಿರುವ ಚರ ಮತ್ತು ಚಿರಾಸ್ತಿಗಳನ್ನು ಮುಟ್ಟುಗೋಲು ಹಾಕಲು ಆದೇಶದಲ್ಲಿ ತಿಳಿಸಿದ್ದಾರೆ. ಸರ್ಕಾರದ ಪರ ವಿಶೇಷ ಸರ್ಕಾರಿ ಅಭಿಯೋಜಕ ಪ್ರವೀಣ್ ಅಗಸಗಿ ವಾದ ಮಂಡಿಸಿದ್ದರು. ಇದನ್ನೂ ಓದಿ: ಸೆ.27 ರಿಂದ ಸುಪ್ರೀಂ ಸಾಂವಿಧಾನಿಕ ಪೀಠದ ಕಲಾಪಗಳನ್ನು ಲೈವ್‌ ನೋಡಿ

    Live Tv
    [brid partner=56869869 player=32851 video=960834 autoplay=true]

  • ಹಣ ಕೊಡದಿದ್ರೆ ಗನ್‍ನಲ್ಲಿ ಶೂಟ್ ಮಾಡೋ ಬೆದರಿಕೆ- 100 ರೂ. ಕೊಡುವಂತೆ ಲಾರಿ ಚಾಲಕನಿಗೆ ಡಿಮ್ಯಾಂಡ್

    ಹಣ ಕೊಡದಿದ್ರೆ ಗನ್‍ನಲ್ಲಿ ಶೂಟ್ ಮಾಡೋ ಬೆದರಿಕೆ- 100 ರೂ. ಕೊಡುವಂತೆ ಲಾರಿ ಚಾಲಕನಿಗೆ ಡಿಮ್ಯಾಂಡ್

    ಚಾಮರಾಜನಗರ: ಸರ್ಕಾರಿ ಅಧಿಕಾರಿಗಳು ಕದ್ದುಮುಚ್ಚಿ ಲಂಚ ಪಡೆಯುವುದು ಕಾಮನ್ ಆಗಿದೆ. ಆದರೆ ಇಲ್ಲೊಬ್ಬ ಸರ್ಕಾರಿ ನೌಕರ ಬಹಿರಂಗವಾಗಿ ಲಂಚ ಕೇಳಿದ್ದು, ಅಲ್ಲದೇ ಲಂಚ ಕೊಡದೇ ಹೋದರೆ ಶೂಟ್ ಮಾಡುವುದಾಗಿ ಬೆದರಿಸಿರುವ ಘಟನೆ ನಡೆದಿದೆ.

    ಚೆಕ್‍ಪೋಸ್ಟ್ ಮುಖಾಂತರ ಓಡಾಡುವ ವಾಹನಗಳನ್ನು ಪರಿಶೀಲನೆ ನಡೆಸುವುದು. ವಾಹನಗಳಲ್ಲಿ ಅಕ್ರಮ ಸಾಗಾಟ ಕಂಡರೇ ಕೂಡಲೇ ಮೇಲಾಧಿಕಾರಿಗಳಿಗೆ ತಿಳಿಸುವುದು ಚೆಕ್‌ಪೋಸ್ಟ್‌ನಲ್ಲಿರುವ ಸಿಬ್ಬಂದಿ ಕೆಲಸವಾಗಿತ್ತು. ಆದರೆ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನಲ್ಲಿರುವ ಕರ್ನಾಟಕ ಮತ್ತು ತಮಿಳುನಾಡು ಗಡಿ ಪಾಲಾರ್‌ನಲ್ಲಿ ಚೆಕ್‍ಪೋಸ್ಟ್‌ವೊಂದರಲ್ಲಿ ಕರ್ತವ್ಯ ನಿರ್ವಹಿಸುವ ಕೆಲವು ಸಿಬ್ಬಂದಿ ಇಲ್ಲಿ ಓಡಾಡುವ ವಾಹನಗಳನ್ನು ತಪಾಸಣೆ ಮಾಡುವುದು ಬಿಟ್ಟು ಲಂಚ ವಸೂಲಿ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಇದಕ್ಕೆ ಸಾಕ್ಷಿ ಎನ್ನುವಂತೆ ಚೆಕ್‍ಪೋಸ್ಟ್ ಸಿಬ್ಬಂದಿಯೋರ್ವ ಲಂಚ ಕೇಳುವುದನ್ನು ಲಾರಿ ಚಾಲಕರೊಬ್ಬರು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ.

    ಪಾಲಾರ್ ಚೆಕ್‍ಪೋಸ್ಟ್‌ನಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಮೋಹನ್ ಎಂಬಾತ ಲಾರಿಗಳನ್ನು ಪರಿಶೀಲನೆ ಮಾಡುವ ನೆಪದಲ್ಲಿ ಚಾಲಕರಿಂದ ಹಣ ಕೇಳಿದ್ದಾನೆ. 30 ರೂಪಾಯಿ ನೀಡಿದರೂ, 100 ರೂಪಾಯಿ ಕೊಡುವಂತೆ ಒತ್ತಾಯ ಮಾಡಿದ್ದಾನೆ. ಈ ವೇಳೆ ಲಾರಿ ಚಾಲಕ ಹಾಗೂ ಮೋಹನ್ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಹಣ ಕೊಡದೇ ಹೋದಲ್ಲಿ ಸಿಬ್ಬಂದಿ ಮೋಹನ್ ಗನ್‍ನಿಂದ ಶೂಟ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಈ ದೃಶ್ಯವನ್ನು ಮೊಬೈಲ್‍ನಲ್ಲಿ ಸೆರೆ ಹಿಡಿಯಲಾಗಿದೆ. ಇದನ್ನೂ ಓದಿ: ಕಂಡಲ್ಲಿ ಗುಂಡು ಹಾರಿಸಲು ಅನುಮತಿ ಕೊಟ್ಟರಷ್ಟೇ ಹಿಂದೂಗಳು ಸೇಫ್: ಸಿದ್ದಲಿಂಗ ಸ್ವಾಮೀಜಿ

    POLICE JEEP

    ಘಟನೆ ಸಂಬಂಧಿಸಿ ಮಲೆಮಹದೇಶ್ವರ ವನ್ಯಜೀವಿ ವಿಭಾಗದ ಡಿಸಿಎಫ್ ಸಂತೋಷ್‍ಕುಮಾರ್ ಪ್ರತಿಕ್ರಿಯೆ ನೀಡಿದ್ದು, ಮೋಹನ್‌ ಕಾವೇರಿ ವನ್ಯಜೀವಿ ವಿಭಾಗದ ಸಿಬ್ಬಂದಿ. ಪ್ರಭಾರಿಯಾಗಿ ಪಾಲಾರ್ ಚೆಕ್‍ಪೋಸ್ಟ್‌ನಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದ. ವಿಷಯ ತಿಳಿದ ಕೂಡಲೇ ಆತನನ್ನು ಅಲ್ಲಿಂದ ತೆಗೆಯಲಾಗಿದೆ. ಮತ್ತು ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾವೇರಿ ವನ್ಯಜೀವಿ ವಿಭಾಗದ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಹೇಳಿದರು. ಸದ್ಯ ಲಂಚ ಕೇಳಿದ ಮೋಹನ್‍ನನ್ನು ಚೆಕ್‍ಪೋಸ್ಟ್ ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿದೆ. ಇದನ್ನೂ ಓದಿ: ಹೈಕೋರ್ಟ್‌ನ ಐವರು ಹೆಚ್ಚುವರಿ ನ್ಯಾಯಾಧೀಶರಿಗೆ ಪ್ರಮಾಣವಚನ ಬೋಧಿಸಿದ ರಾಜ್ಯಪಾಲರು

    Live Tv
    [brid partner=56869869 player=32851 video=960834 autoplay=true]

  • ಲಂಚಕೊಟ್ಟು ‘ನಂಬರ್ 1’ ನಟಿಯಾದರಂತೆ ನಟಿ ಸಮಂತಾ

    ಲಂಚಕೊಟ್ಟು ‘ನಂಬರ್ 1’ ನಟಿಯಾದರಂತೆ ನಟಿ ಸಮಂತಾ

    ದಕ್ಷಿಣದ ಹೆಸರಾಂತ ನಟಿ ಸಮಂತಾ ಇತ್ತೀಚಿನ ದಿನಗಳಲ್ಲಿ ಅನೇಕ ಶಾಕಿಂಗ್ ಸುದ್ದಿಗಳನ್ನು ಅಭಿಮಾನಿಗಳಿಗೆ ಕೊಡುತ್ತಿದ್ದಾರೆ. ಅದರಲ್ಲೂ ಕಾಫಿ ವಿತ್ ಕರಣ್ ಶೋನಲ್ಲಿ ಅವರು ಸಾಕಷ್ಟು ಖಾಸಗಿ ಸಂಗತಿಗಳನ್ನು ಹಂಚಿಕೊಂಡಿದ್ದು, ಬಹುತೇಕ ವಿಷಯಗಳು ವಿವಾದಕ್ಕೆ ಕಾರಣವಾಗಿವೆ. ಅದರ‍ಲ್ಲೂ ತಮ್ಮ ಡಿವೋರ್ಸ್ ಕುರಿತು ಈ ನಟಿ ಮುಚ್ಚುಮರೆಯಿಲ್ಲದೇ ಎಲ್ಲವನ್ನೂ ಹಂಚಿಕೊಂಡು ಅಚ್ಚರಿಗೆ ಕಾರಣವಾಗಿದ್ದಾರೆ.

    ಮೊನ್ನೆ ಮೊನ್ನೆಯಷ್ಟೇ ಡಿವೋರ್ಸ್ ಕುರಿತಾಗಿ ಹಲವು ಅಚ್ಚರಿಯ ವಿಷಯಗಳನ್ನು ಶೋನಲ್ಲಿ ಹಂಚಿಕೊಂಡಿದ್ದ ಸಮಂತಾ, ಇದೀಗ ನಂಬರ್ 1 ತಾರೆಯಾಗಲು ಖಾಸಗಿ ಕಂಪೆನಿಯೊಂದಕ್ಕೆ ಲಂಚ ಕೊಟ್ಟಿರುವ ವಿಷಯವನ್ನು ಬಾಯ್ಬಿಟ್ಟಿದ್ದಾರೆ. ನಾನು ನಂಬರ್ 1 ಆಗಲು ಅವರಿಗೆ ದುಡ್ಡು ಕೊಡಬೇಕಾಯಿತು. ದುಡ್ಡು ಕೊಟ್ಟು ನಂಬರ್ 1 ತಾರೆಯಾದೆ ಎಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ.  ಇದನ್ನೂ ಓದಿ:ಬನ್ಸಾಲಿ ನಿರ್ದೇಶನದಲ್ಲಿ ಬಹುಭಾಷಾ ನಟಿ ಅದಿತಿ ರಾವ್

    ಸಮಂತಾ ಈ ಕುರಿತು ಮಾತನಾಡುತ್ತಿದ್ದಂತೆಯೇ ನಂಬರ್ 1 ತಾರೆಯರ ನಿಜ ಬಣ್ಣ ಒಂದೊಂದೇ ಬಯಲಾಗುತ್ತಿವೆ. ನಂಬರ್ ಸ್ಥಾನಕ್ಕೆ ಲಂಚ ಬೇರೆ ಕೊಡಬೇಕು ಎನ್ನುವ ಚರ್ಚೆ ಕೂಡ ಸಿನಿಮಾ ರಂಗದಲ್ಲಿ ಶುರುವಾಗಿದೆ. ಅಲ್ಲದೇ, ಸಮಂತಾ ಪ್ರಾಮಾಣಿಕವಾಗಿ ಈ ಕುರಿತು ಒಪ್ಪಿಕೊಂಡಿದ್ದಕ್ಕೆ ಮೆಚ್ಚುಗೆಯನ್ನೂ ಸೂಚಿಸಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • 1 ಕೋಟಿ ರಸ್ತೆ ಕಾಮಗಾರಿ ಬಿಲ್ ಮಾಡಲು ಗುತ್ತಿಗೆದಾರನಿಂದ ಚಿಂಚೋಳಿ ಎಇ ಹಣ ವಸೂಲಿ

    1 ಕೋಟಿ ರಸ್ತೆ ಕಾಮಗಾರಿ ಬಿಲ್ ಮಾಡಲು ಗುತ್ತಿಗೆದಾರನಿಂದ ಚಿಂಚೋಳಿ ಎಇ ಹಣ ವಸೂಲಿ

    ಕಲಬುರಗಿ: ರಸ್ತೆ ಕಾಮಗಾರಿ ಬಿಲ್ ಸಂಬಂಧ ಗುತ್ತಿಗೆದಾರನಿಂದ ಚಿಂಚೋಳಿ ತಾಲೂಕಿನ ಪಿಡಬ್ಲುಡಿ ಎಇ ವೇಂಕಟೇಶ್ ಬಿರಾದಾರ 30 ಸಾವಿರ ಲಂಚ ಪಡೆದಿರುವ ಘಟನೆ ನಡೆದಿದೆ.

    ಕಲಬುರಗಿಯ ಜಿಲ್ಲಾಧಿಕಾರಿ ಆವರಣದಲ್ಲಿಯೇ ಗುತ್ತಿಗೆದಾರನಿಗೆ ಭೇಟಿಯಾದ ಚಿಂಚೋಳಿ ಪಿಡಬ್ಲುಡಿ ಎಇ ವೆಂಕಟೇಶ್ ಬಿರಾದಾರ್, ತಾಲೂಕಿನ ಪೋತಂಗಲ ಗ್ರಾಮದಲ್ಲಿ ನಡೆದ 1 ಕೋಟಿ ರಸ್ತೆ ಕಾಮಗಾರಿ ಕುರಿತು ಗುತ್ತಿಗೆದಾರನಿಂದ ಹಣ ಪಡೆದಿದ್ದಾನೆ. ಇದನ್ನೂ ಓದಿ: ನನ್ನೊಂದಿಗೆ ಮಲಗದಿದ್ದರೆ ಇನ್ನೂ 20 ಪುರುಷರನ್ನು ಕರೆತರುವೆ: ರೇಪ್‌ಗೂ ಮುನ್ನ ರಷ್ಯಾ ಸೈನಿಕನ ಮಾತು

    ಹಣ ನೀಡುವಾಗ ನನ್ನ ಬಳಿ ಅಷ್ಟೊಂದು ಹಣ ಇಲ್ಲ, ನಾನು ಆತ್ಮಹತ್ಯೆ ಮಾಡಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣ ಅಂತಾ ಅಳಲು ತೋಡಿಕೊಂಡರೂ ಅದಕ್ಕೆ ಎಇ ಬಿರಾದಾರ ಸೊಪ್ಪು ಹಾಕದೇ, ಎಇಇ, ಥರ್ಡ್ ಪಾರ್ಟಿ, ಹಣ ಕೊಡಬೇಕು ಅಂತಾ ಹೇಳಿ ಹಣ ವಸೂಲಿ ಮಾಡಿದ್ದಾನೆ. ಇದೀಗ ಆಪ್ ಪಕ್ಷದ ಕಾರ್ಯಕರ್ತರು ಅಧಿಕಾರಿಯ ಲಂಚಬಾಕತನದ ವೀಡಿಯೋ ಮಾಧ್ಯಮಗಳಿಗೆ ನೀಡಿದ್ದಾರೆ. ಇದನ್ನೂ ಓದಿ: ಕ್ಯಾನ್ಸರ್ ಚಿಕಿತ್ಸೆಯಲ್ಲಿರುವಾಗಲೇ ಇಂಟರ್ವ್ಯೂ ಅಟೆಂಡ್ ಮಾಡಿದ ಹಠವಾದಿ

  • 20 ಸಾವಿರ ಲಂಚ – ಬಿಬಿಎಂಪಿ ಟ್ಯಾಕ್ಸ್ ಇನ್ಸ್‌ಪೆಕ್ಟರ್‌ಗೆ 5 ವರ್ಷ ಜೈಲು ಶಿಕ್ಷೆ

    20 ಸಾವಿರ ಲಂಚ – ಬಿಬಿಎಂಪಿ ಟ್ಯಾಕ್ಸ್ ಇನ್ಸ್‌ಪೆಕ್ಟರ್‌ಗೆ 5 ವರ್ಷ ಜೈಲು ಶಿಕ್ಷೆ

    ಬೆಂಗಳೂರು: ಬಿಬಿಎಂಪಿ ಟ್ಯಾಕ್ಸ್ ಇನ್ಸ್‌ಪೆಕ್ಟರ್‌ಗೆ 5 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

    ಚಿಕ್ಕಪೇಟೆ ವಾರ್ಡ್ ಟ್ಯಾಕ್ಸ್ ಇನ್ಸ್‌ಪೆಕ್ಟರ್ ನಾಗೇಂದ್ರ ಜೈಲು ಶಿಕ್ಷೆಗೆ ಒಳಗಾದ ಅಧಿಕಾರಿ. 2017 ರಲ್ಲಿ 20 ಸಾವಿರ ರೂ. ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿದ್ದ. ಇದನ್ನೂ ಓದಿ: ಭಾರತದೊಂದಿಗೆ ಶಾಂತಿಯುತ, ಸಹಕಾರಿ ಬಾಂಧವ್ಯ ಬಯಸುತ್ತೇವೆ: ಮೋದಿಗೆ ಪಾಕ್ ಪ್ರಧಾನಿ ಪ್ರತಿಕ್ರಿಯೆ

    BRIBE

    ನಾಗೇಂದ್ರ ಬೇಗೂರಿನಲ್ಲಿ ಕರ್ತವ್ಯ ನಿರ್ವಹಿಸುವಾಗ ಎಸಿಬಿ ಬಲೆಗೆ ಬಿದ್ದಿದ್ದನು. ಬಿಬಿಎಂಪಿ ಖಾತೆ ಮಾಡಿಸಲು ವ್ಯಕ್ತಿಯೊಬ್ಬರಿಂದ ಲಂಚಕ್ಕೆ ಬೇಡಿಕೆಯಿಟ್ಟಿದ್ದ. ಈ ಹಿನ್ನೆಲೆ ವ್ಯಕ್ತಿ ಎಸಿಬಿಗೆ ದೂರು ನೀಡಿದ್ದರು.

    20 ಸಾವಿರ ಲಂಚ ಪಡೆಯುವಾಗ ಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸಿಬಿ ಚಾರ್ಜ್‍ಶೀಟ್ ಸಲ್ಲಿಕೆ ಮಾಡಿತ್ತು. ಆರೋಪ ಸಾಬೀತಾದ ಹಿನ್ನಲೆ ನ್ಯಾಯಾಲಯವು ನಾಗೇಂದ್ರನಿಗೆ ಐದು ವರ್ಷ ಜೈಲು ಶಿಕ್ಷೆ ಹಾಗೂ 40 ಸಾವಿರ ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ. ಇದನ್ನೂ ಓದಿ: ಪಾಕಿಸ್ತಾನದ ನೂತನ ಪ್ರಧಾನಿಗೆ ಮೋದಿ ಅಭಿನಂದನೆ

  • ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದ ನಗರಾಭಿವೃದ್ಧಿ ಪ್ರಾಧಿಕಾರದ ಸಹಾಯಕ ಯೋಜನಾಧಿಕಾರಿ

    ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದ ನಗರಾಭಿವೃದ್ಧಿ ಪ್ರಾಧಿಕಾರದ ಸಹಾಯಕ ಯೋಜನಾಧಿಕಾರಿ

    ಚಿಕ್ಕಮಗಳೂರು: ಎರಡು ಲಕ್ಷ ರೂಪಾಯಿ ಲಂಚ ಪಡೆಯುವ ವೇಳೆ ನಗರಾಭಿವೃದ್ಧಿ ಪ್ರಾಧಿಕಾರದ ಸಹಾಯಕ ಯೋಜನಾಧಿಕಾರಿ ಎಸಿಬಿ ಬಲೆಗೆ ಬಿದ್ದಿರೋ ಘಟನೆ ನಗರದಲ್ಲಿ ನಡೆದಿದೆ.

    ಎಸಿಬಿ ಬಲೆಗೆ ಬಿದ್ದ ಅಧಿಕಾರಿಯನ್ನ ಎಂ.ಸಿ.ಶಿವಕುಮಾರ್ ಎಂದು ಗುರುತಿಸಲಾಗಿದೆ. ಲೇಔಟ್ ನಿರ್ಮಾಣ ವಿಚಾರ ಸಂಬಂಧ ಕಚೇರಿ ಪಕ್ಕದಲ್ಲೇ ಗೋಪಿನಾಥ್ ಅವರಿಂದ ಎರಡು ಲಕ್ಷ ಹಣ ಪಡೆದುಕೊಳ್ಳುವಾಗ ಎಸಿಬಿ ಅಧಿಕಾರಿಗಳಿಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ. ಇದನ್ನೂ ಓದಿ: ಈ ನಡುವೆ ಸರ್ಕಾರಗಳು ನ್ಯಾಯಾಂಗವನ್ನು ನಿಂದಿಸುವ ಪ್ರವೃತ್ತಿ ಆರಂಭಿಸಿವೆ: ಸಿಜೆಐ ಆಕ್ರೋಶ

    ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಲೇಔಟ್ ನಿರ್ಮಾಣದ ಸಂಬಂಧ ಎಂಟು ಲಕ್ಷಕ್ಕೆ ಮಾತುಕತೆ ಮಾಡಿಕೊಂಡು ಮುಂಗಡವಾಗಿ 2 ಲಕ್ಷ ಹಣ ಪಡೆದುಕೊಳ್ಳುವಾಗ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ದೂರುದಾರ ಗೋಪಿನಾಥ್ ಬ್ರೋಕರ್ ರಮೇಶ್ ಮೂಲಕ ಶಿವಕುಮಾರ್‌ನನ್ನು ಭೇಟಿ ಮಾಡಿದ್ದರು. ಎರಡು ಲಕ್ಷ ಹಣ ನೀಡುವಾಗ ನೇರವಾಗಿ ಸಿಕ್ಕಿಬಿದ್ದಿದ್ದು, ಎಸಿಬಿ ಅಧಿಕಾರಿಗಳು ಬ್ರೋಕರ್ ರಮೇಶ್ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಸಹಾಯಕ ಯೋಜನಾ ಅಧಿಕಾರಿ ಶಿವಕುಮಾರ್ ಇಬ್ಬರನ್ನೂ ಅರೆಸ್ಟ್ ಮಾಡಿದ್ದಾರೆ. ಎಸಿಬಿ ಇನ್ಸ್‌ಪೆಕ್ಟರ್ ಅನಿಲ್ ರಾಥೋಡ್ ನೇತೃತ್ವದ ತಂಡ ದಾಳಿ ನಡೆಸಿತ್ತು.