Tag: ಲಂಚ

  • 1 ರೂ. ಲಂಚ ಪಡೆದಿದ್ರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ – ಸುಧಾಕರ್

    1 ರೂ. ಲಂಚ ಪಡೆದಿದ್ರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ – ಸುಧಾಕರ್

    ಚಿಕ್ಕಬಳ್ಳಾಪುರ: ನಾನು ರಾಜಕಾರಣಕ್ಕೆ (Politics) ಬಂದು 15 ವರ್ಷ ಆಗಿದೆ. ಯಾವುದೇ ರೈತ ಹಾಗೂ ಕ್ಷೇತ್ರದ ವ್ಯಕ್ತಿ ನನಗೆ 1 ರೂ. ಲಂಚ (Bribe) ಕೊಟ್ಟಿದ್ದರೆ, ನಾನು ರಾಜಕೀಯ ನಿವೃತ್ತಿ ಆಗುತ್ತೇನೆ ಎಂದು ಸಚಿವ ಕೆ.ಸುಧಾಕರ್ (K.Sudhakar) ಜೆಡಿಎಸ್ (JDS) ಅಭ್ಯರ್ಥಿಗಳ ಆರೋಪಕ್ಕೆ ತಿರುಗೇಟು ನೀಡಿದರು.

    ಚಿಕ್ಕಬಳ್ಳಾಪುರದಲ್ಲಿ (Chikkaballapura) ಬೃಹತ್ ರೋಡ್ ಶೋ (Road Show) ನಡೆಸಿದ ಬಳಿಕ ಸುಧಾಕರ್ ನಾಮಪತ್ರ ಸಲ್ಲಿಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಮಪತ್ರ (Nomination Papers) ಸಲ್ಲಿಕೆಯ ಈ ಮೆರವಣಿಗೆ 2023ರ ಚುನಾವಣೆಯ (Election) ವಿಜಯದ ದಿಕ್ಸೂಚಿ. ನಾನು ಈಗಾಗಲೇ ಗೆದ್ದಿದ್ದೇನೆ. ಈ ಬಾರಿ 50 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇನೆ. ನಾನು ಅಹಂಕಾರದಿಂದ ಈ ಮಾತು ಹೇಳುತ್ತಿಲ್ಲ. ನಿಮ್ಮ ಪ್ರೀತಿ ನೋಡಿ ಹೇಳುತ್ತಿದ್ದೇನೆ ಎಂದು ಕಾಂಗ್ರೆಸ್ (Congress) ಅಭ್ಯರ್ಥಿ ಪ್ರದೀಪ್ ಈಶ್ವರ್‌ಗೆ (Pradeep Eshwar) ಟಾಂಗ್ ಕೊಟ್ಟರು. ಇದನ್ನೂ ಓದಿ: ಕಾಂಗ್ರೆಸ್ ಸಂಸ್ಕೃತಿ ಯೂಸ್ ಆ್ಯಂಡ್ ಥ್ರೋ: ಬಿಜೆಪಿ ತೊರೆದ ನಾಯಕರಿಗೆ ಸಿಎಂ ಟಾಂಗ್ 

    ಕಾಂಗ್ರೆಸ್ ಅಭ್ಯರ್ಥಿ ನನ್ನನ್ನು ಸೋಲಿಸಲು ಬಂದಿರುವ ಸುನಾಮಿ ಎನ್ನುತ್ತಿದ್ದಾರೆ. ಆದರೆ ನಾನು ಸುನಾಮಿಯಾಗಲು ಇಷ್ಟಪಡುವುದಿಲ್ಲ. ಬದಲಿಗೆ ಜನರ ಪಾಲಿನ ಸಂಜೀವಿನಿ ಆಗಿ ಬಂದಿದ್ದೇನೆ ಎಂದರು. ಇದನ್ನೂ ಓದಿ: ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ – ಪೊಲಿಟಿಕಲ್ ಸೂಸೈಡ್ ಎಂದ ಸುಧಾಕರ್

  • ಮಾಡಾಳ್‍ನ ಮೈಂಟೇನ್ ಮಾಡೋದೇ ‘ಲೋಕಾ’ಗೆ ಸವಾಲು- ರಾತ್ರಿಪೂರ್ತಿ ಕಣ್ಣೀರಿಡ್ತಿರೋ ಭ್ರಷ್ಟ ಮಾಡಾಳ್

    ಮಾಡಾಳ್‍ನ ಮೈಂಟೇನ್ ಮಾಡೋದೇ ‘ಲೋಕಾ’ಗೆ ಸವಾಲು- ರಾತ್ರಿಪೂರ್ತಿ ಕಣ್ಣೀರಿಡ್ತಿರೋ ಭ್ರಷ್ಟ ಮಾಡಾಳ್

    ಬೆಂಗಳೂರು: ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ (Madal Virupakshappa) ಲಂಚ ಪಡೆದ ಆರೋಪದಲ್ಲಿ ಲೋಕಾ ಕಸ್ಟಡಿಯಲ್ಲಿದ್ದು, ಇದೀಗ ಅವರನ್ನು ಮೇಂಟೈನ್ ಮಾಡೋದು ಲೋಕಾಯುಕ್ತ (Lokayukta Police) ಪೊಲೀಸರಿಗೆ ದೊಡ್ಡ ಸವಾಲಾಗಿದೆ ಎಂಬ ಮಾಹಿತಿ ಲಭಿಸಿದೆ.

    ಹೌದು. ಚನ್ನಗಿರಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಬೆಡ್ ರೂಂನಲ್ಲಿ ಕೋಟಿ ಕೋಟಿ ಹಣ ಸಿಕ್ಕ ಪ್ರಕರಣದಲ್ಲಿ ಲೋಕಾಯಕ್ತ ಪೊಲೀಸರು ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಬಂಧನ ಮಾಡಿದ್ದಾರೆ. ಕಳೆದ ನಾಲ್ಕು ದಿನದಿಂದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಲೋಕಾಯುಕ್ತ ಪೊಲೀಸರ ಕಸ್ಟಡಿಯಲ್ಲಿದ್ದು, ಕೋಟಿ ಕೋಟಿ ಹಣದ ತನಿಖೆ ಎದುರಿಸುತ್ತಿದ್ದಾರೆ. ದಿನಕ್ಕೆ ನಾಲ್ಕಾರು ಗಂಟೆ ವಿಚಾರಣೆ ಎದುರಿಸುತ್ತಿದ್ದಾರೆ. ಇದನ್ನೂ ಓದಿ: Mood Of Karnataka – `ಪಬ್ಲಿಕ್’ ಸರ್ವೆಯಲ್ಲಿ ಕರ್ನಾಟಕ ಕುರುಕ್ಷೇತ್ರ ಅತಂತ್ರ

    ತನಿಖೆ ಬಳಿಕ ಲೋಕಾಯುಕ್ತ ಕಸ್ಟಡಿಯಲ್ಲಿರೋ ಮಾಡಾಳ್ ವಿರೂಪಾಕ್ಷಪ್ಪ ಲೋಕಾ ಕಚೇರಿಯಲ್ಲಿ ರಾತ್ರಿ ಕಳೆಯಲು ಸಾಕಷ್ಟು ಹೆಣಗಾಡುತ್ತಿದ್ದಾರಂತೆ. ಇದ್ದಕ್ಕಿದ್ದಂತೆ ಮೌನಕ್ಕೆ ಜಾರಿ ಹೋಗೋದು ಗಂಟೆಗಟ್ಟಲೆ ಯಾರ ಜೊತೆ ಮಾತನಾಡದೇ ಸುಮ್ಮನಾಗೋದು. ಕೆಲವು ವೇಳೆ ಗಳಗಳ ಅಳಲು ಶುರು ಮಾಡ್ಕೊಳ್ತಾರಂತೆ. ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಈ ನಡೆ ಲೋಕಾಯುಕ್ತ ಪೊಲೀಸರಿಗೆ ದೊಡ್ಡ ಸವಾಲಾಗಿದೆ ಅಂತೆ.

    ಮಾಡಾಳ್ ವಿರೂಪಾಕ್ಷಕ್ಕೆ ಏಕಾಂಗಿತನ ಕಾಡುತ್ತಿರುಬಹುದೆಂದು ಪೊಲೀಸರೇ ಮಾಡಾಳ್ ವಿರೂಪಾಕ್ಷಪ್ಪಗೆ ಮೋಟಿವೇಷನ್ ಮಾಡಿ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರಂತೆ. ಏನು ಆಗೋದಿಲ್ಲ ನೀವು ಧೈರ್ಯವಾಗಿರಬೇಕು. ಈ ರೀತಿಯ ನಡವಳಿಕೆ ನಿಮ್ಮನ್ನ ಕುಗ್ಗಿಸುತ್ತೆ. ಹಾಗಾಗಿ ಹೆಚ್ಚಾಗಿ ತಲೆಗೆ ಹಾಕಿಕೊಳ್ಳದೆ ಹಾಯಾಗಿ ಇರಿ ಎಂದು ನಿತ್ಯ ಮಾಡಾಳ್ ವಿರೂಪಾಕ್ಷಪ್ಪಗೆ ಲೋಕಾಯುಕ್ತ ಪೊಲೀಸರು ಮೋಟಿವೇಷನ್ ಮಾಡುತ್ತಿದ್ದಾರಂತೆ.

    ಲೋಕಾಯುಕ್ತ ಕಸ್ಟಡಿಯಲ್ಲಿರೋ ಮಾಡಾಳ್ ವಿರೂಪಾಕ್ಷಪ್ಪ ಅವರ ಕಸ್ಟಡಿ ಇಂದಿಗೆ ಅಂತ್ಯವಾಗುತ್ತಿದೆ. ಕಸ್ಟಡಿ ಮುಗಿದ ಬಳಿಕ ಬಹುತೇಕ ಜೈಲಿಗೆ ಕಳಿಸಿಕೊಡುವ ಸಾಧ್ಯತೆ ಹೆಚ್ಚಾಗಿದ್ದರಿಂದ ಹೆಚ್ಚು ಚಿಂತೆಗೆ ಜಾರಿರೋ ಸಾಧ್ಯತೆ ಇದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.

  • ಪಬ್ಲಿಕ್ ಟಿವಿ ವರದಿ ಬೆನ್ನಲ್ಲೇ ನರೇಗಾ ಬಿಲ್ ಪಾವತಿಗೆ ಲಂಚಕ್ಕೆ ಬೇಡಿಕೆಯಿಟ್ಟಿದ್ದ ತಾಂತ್ರಿಕ ಸಹಾಯಕ ವಜಾ

    ಪಬ್ಲಿಕ್ ಟಿವಿ ವರದಿ ಬೆನ್ನಲ್ಲೇ ನರೇಗಾ ಬಿಲ್ ಪಾವತಿಗೆ ಲಂಚಕ್ಕೆ ಬೇಡಿಕೆಯಿಟ್ಟಿದ್ದ ತಾಂತ್ರಿಕ ಸಹಾಯಕ ವಜಾ

    ಬೀದರ್: ಪಬ್ಲಿಕ್ ಟಿವಿ ವರದಿ ಬೆನ್ನಲ್ಲೇ ನರೇಗಾ ಯೋಜನೆಯಡಿ ಕೈಗೊಂಡ ಕಾಮಗಾರಿಯ ಬಿಲ್ ಪಾವತಿಗೆ ಲಂಚಕ್ಕೆ (Bribery) ಬೇಡಿಕೆಯಿಟ್ಟ ತಾಂತ್ರಿಕ ಸಹಾಯಕನನ್ನು (Technical Assistant) ಕೆಲಸದಿಂದ ವಜಾ ಮಾಡಲಾಗಿದೆ.

    ಬಸವಕಲ್ಯಾಣ ತಾ.ಪಂ. ತಾಂತ್ರಿಕ ಸಹಾಯಕ ಸೂರ್ಯಕಾಂತ್ ಪಾಟೀಲ್‌ನನ್ನು ಕೆಲಸದಿಂದ ವಜಾಗೊಳಿಸಿ ಬೀದರ್ (Bidar) ಜಿಲ್ಲಾ ಪಂಚಾಯತ್ ಸಿಇಒ ಶಿಲ್ಪಾ ಎಂ ಆದೇಶ ನೀಡಿದ್ದಾರೆ.

    ನರೇಗಾ ಯೋಜನೆಯಡಿ ಕೈಗೊಂಡ ಕಾಮಗಾರಿಯ ಬಿಲ್ ಪಾವತಿಗೆ ಲಂಚಕ್ಕೆ ಬೇಡಿಕೆಯಿಟ್ಟಿದ್ದಾರೆ ಎಂದು ಎತ್ತುಗಳ ಸಮೇತ ತಾ.ಪಂ.ಗೆ ಬಂದು ರೈತರೊಬ್ಬರು ಆರೋಪ ಮಾಡಿದ್ದರು. ಈ ಸುದ್ದಿ ಪಬ್ಲಿಕ್ ಟಿವಿಯಲ್ಲಿ ಬಿತ್ತರವಾಗಿರುವ ಹಿನ್ನೆಲೆ ಅಧಿಕಾರಿಗಳಿಂದ ವರದಿ ಪರಿಶೀಲನೆ ಮಾಡಲಾಗಿತ್ತು. ರೈತನ ಬಿಲ್ ಪಾವತಿ ಮಾಡದೆ ಮೇಲ್ನೋಟಕ್ಕೆ ಕರ್ತವ್ಯ ನಿರ್ಲಕ್ಷ್ಯ ತೊರಿದ್ದು ಕಂಡುಬಂದಿದೆ. ಹೀಗಾಗೀ ತಾಂತ್ರಿಕ ಸಹಾಯಕ ಸೂರ್ಯಕಾಂತ್ ಪಾಟೀಲ್‌ನನ್ನು ಸೇವೆಯಿಂದ ವಜಾ ಮಾಡಲಾಗದೆ ಎಂದು ಜಿ.ಪಂ. ಸಿಇಒ ಆದೇಶಿಸಿದ್ದಾರೆ. ಇದನ್ನೂ ಓದಿ: ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟ – ಜಿಲ್ಲಾ ಪ್ರವಾಸ ಮೊಟಕುಗೊಳಿಸಿ ಸಿಎಂ ಬೆಂಗಳೂರಿಗೆ ವಾಪಸ್

     

    ನರೇಗಾ ಕಾಮಗಾರಿ ಬಿಲ್ ಪಾವತಿ ಮಾಡಲು ರೈತನ ಬಳಿ ಲಂಚ ಕೇಳಿದ್ದ ತಾಲೂಕು ಪಂಚಾಯತ್ ಅಧಿಕಾರಿಗೆ ಲಂಚ ಕೊಡಲು ಹಣವಿಲ್ಲದೆ ತನ್ನ 2 ಎತ್ತುಗಳನ್ನು ನೀಡಲು ರೈತ ಮುಂದಾಗಿದ್ದ. ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಬಗದುರಿ ಗ್ರಾಮದ ರೈತ ಪ್ರಶಾಂತ್ ಬಿರಾದಾರ ಲಂಚ ರೂಪದಲ್ಲಿ ತನ್ನ 2 ಎತ್ತುಗಳನ್ನು ಕೊಡಲು ತಾ.ಪಂ. ಕಚೇರಿಗೆ ಬಂದಿದ್ದ. ಎತ್ತುಗಳ ಸಮೇತ ಬಂದಿದ್ದ ರೈತನನ್ನು ಕಂಡು ಅಧಿಕಾರಿಗಳು ಶಾಕ್ ಆಗಿದ್ದರು. ಇದನ್ನೂ ಓದಿ: ರಾಜ್ಯ ವಿಧಾನಸಭೆ ಚುನಾವಣೆಗೆ ಇಂದೇ ಮುಹೂರ್ತ ಫಿಕ್ಸ್

  • ನರೇಗಾ ಬಿಲ್ ಪಾವತಿಗೆ ಗ್ರಾ.ಪಂ ಅಧಿಕಾರಿಯಿಂದ ಲಂಚಕ್ಕೆ ಬೇಡಿಕೆ- ಹಣವಿಲ್ಲದೆ ಎತ್ತುಗಳನ್ನು ನೀಡಲು ಮುಂದಾದ ರೈತ

    ನರೇಗಾ ಬಿಲ್ ಪಾವತಿಗೆ ಗ್ರಾ.ಪಂ ಅಧಿಕಾರಿಯಿಂದ ಲಂಚಕ್ಕೆ ಬೇಡಿಕೆ- ಹಣವಿಲ್ಲದೆ ಎತ್ತುಗಳನ್ನು ನೀಡಲು ಮುಂದಾದ ರೈತ

    ಬೀದರ್: ನರೇಗಾ (NREGA) ಬಿಲ್ ಪಾವತಿಸಲು ಲಂಚಕ್ಕೆ (Bribe) ಬೇಡಿಕೆಯನ್ನಿಟ್ಟ ಗ್ರಾಮ ಪಂಚಾಯತಿ ಅಧಿಕಾರಿಗೆ ನೀಡಲು ಹಣವಿಲ್ಲದೆ ತನ್ನ ಎರಡು ಎತ್ತುಗಳನ್ನು (Ox) ಲಂಚದ ರೂಪದಲ್ಲಿ ನೀಡಲು ರೈತ ಮುಂದಾದ ಘಟನೆ ಬೀದರ್ (Bidar) ಜಿಲ್ಲೆಯ ಬಸವಕಲ್ಯಾಣ ಪಟ್ಟಣದ ತಾಲೂಕು ಪಂಚಾಯತ್ ಕಚೇರಿ ಬಳಿ ನಡೆದಿದೆ.

    ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಬಗದೂರಿ ಗ್ರಾಮದ ರೈತ ಪ್ರಶಾಂತ ಬಿರಾದಾರ ತನ್ನ ಎರಡು ಎತ್ತುಗಳನ್ನು ಲಂಚದ ರೂಪದಲ್ಲಿ ನೀಡಲು ಮುಂದಾಗಿ ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ. ಉದ್ಯೋಗ ಖಾತರಿ ಯೋಜನೆಯಲ್ಲಿ ರೈತನ ಜಮೀನಿಗೆ ತಡೆಗೋಡೆ ನಿರ್ಮಾಣ ಮಾಡಲಾಗಿದ್ದು, ಈ ಕಾಮಗಾರಿಗೆ ಒಂದು 1 ಲಕ್ಷ ರೂ. ಅನುದಾನ ಮಂಜೂರಾಗಿತ್ತು. 1 ಲಕ್ಷ ರೂ. ಅನುದಾನದ ಪೈಕಿ 55 ಸಾವಿರ ಹಣ ಮಾತ್ರ ಅಧಿಕಾರಿಗಳು ನೀಡಿದ್ದು, ಉಳಿದ 45 ಸಾವಿರ ಹಣ ನೀಡಲು ಗ್ರಾ.ಪಂ ಅಧಿಕಾರಿ (Grampanchayat Officer) ಲಂಚಕ್ಕೆ ಬೇಡಿಕೆಯಿಟ್ಟಿದ್ದಾರೆ. ಇದರಿಂದ ಬೇಸತ್ತ ರೈತ ತನ್ನ ಎರಡು ಎತ್ತುಗಳನ್ನು ಲಂಚದ ರೂಪದಲ್ಲಿ ನೀಡಲು ಮುಂದಾಗಿದ್ದಾರೆ. ಇದನ್ನೂ ಓದಿ: ಡಿಸ್ನಿಯಲ್ಲೂ ಶುರುವಾಯ್ತು ಜಾಬ್ ಕಟ್ – ಮುಂದಿನ 4 ದಿನದಲ್ಲಿ 7,000 ಉದ್ಯೋಗಿಗಳು ವಜಾ 

    ರೈತ ತನ್ನ ಎರಡು ಎತ್ತುಗಳ ಸಮೇತ ತಾಲೂಕು ಪಂಚಾಯತ್‌ಗೆ ಆಗಮಿಸಿದ್ದು, ಲಂಚದ ರೂಪದಲ್ಲಿ ಈ ಎರಡು ಎತ್ತುಗಳನ್ನು ತೆಗೆದುಕೊಂಡು ಉಳಿದ 45 ಸಾವಿರ ಹಣ ನೀಡಿ ಎಂದು ಪಟ್ಟು ಹಿಡಿದಿದ್ದಾರೆ. ಈ ಘಟನೆಯಿಂದಾಗಿ ಕೆಲ ಕಾಲ ತಾ.ಪಂ ಅಧಿಕಾರಿಗಳಿಗೆ ಮುಜುಗರ ಉಂಟಾಗಿದ್ದು, ಸುದ್ದಿ ತಿಳಿದು ತಾ.ಪಂ ಎಡಿ ಸಂತೋಷ್ ಚವ್ಹಾಣ್ ಸ್ಥಳಕ್ಕೆ ಬಂದು ರೈತನಿಗೆ ಬಿಲ್ ಪಾವತಿಸುವುದಾಗಿ ಭರವಸೆ ನೀಡಿ ರೈತನನ್ನು ಮನೆಗೆ ಕಳುಹಿಸಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ ಪ್ರತಿಷ್ಠಿತ ಉದ್ಯಮಿ ಗಡಿಪಾರು!

  • 40 ಲಕ್ಷ ಲಂಚ ಪ್ರಕರಣ – ಕೆಎಸ್‌ಡಿಎಲ್‌ ಅಧ್ಯಕ್ಷ ಸ್ಥಾನಕ್ಕೆ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ರಾಜೀನಾಮೆ

    40 ಲಕ್ಷ ಲಂಚ ಪ್ರಕರಣ – ಕೆಎಸ್‌ಡಿಎಲ್‌ ಅಧ್ಯಕ್ಷ ಸ್ಥಾನಕ್ಕೆ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ರಾಜೀನಾಮೆ

    ಬೆಂಗಳೂರು: ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ (Madal Virupakshappa) ಅವರು ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ನಿಗಮದ (KSDL) ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರ ಸೂಚನೆ ಮೇರೆಗೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಗುರುವಾರ ರಾತ್ರಿಯೇ ರಾಜೀನಾಮೆಗೆ ಸಿಎಂ ಸೂಚನೆ ನೀಡಿದ್ದರು. ಜೊತೆಗೆ ಕಾನೂನು ಕ್ರಮ ಎದುರಿಸುವಂತೆಯೂ ಸೂಚಿಸಿದ್ದರು. ಇದನ್ನೂ ಓದಿ: ಲೋಕಾಯುಕ್ತ ಸರ್ವ ಸ್ವತಂತ್ರವಾಗಿ ಕೆಲಸ ಮಾಡ್ಲಿ, ತಪ್ಪಿತಸ್ಥರಿಗೆ ಶಿಕ್ಷೆಯಾಗ್ಲಿ: ಸಿಎಂ

    ಮಾಡಾಳ್‌ ವಿರೂಪಾಕ್ಷಪ್ಪ ಅವರ ಪುತ್ರ ಪ್ರಶಾಂತ್‌ ಮಾಡಾಳ್‌ 40 ಲಕ್ಷ ರೂ. ಲಂಚ ಪಡೆಯುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದರು. ಪ್ರಶಾಂತ್‌ ಮತ್ತು ಸಹಚರರನ್ನು ಬಂಧಿಸಲಾಗಿದ್ದು, ನ್ಯಾಯಾಲಯದ ಮುಂದೆ ಹಾಜರು ಪಡಿಸಲು ಲೋಕಾಯುಕ್ತ ಮುಂದಾಗಿದೆ. ಅಲ್ಲದೇ ಬಂಧಿತರನ್ನು ಪೊಲೀಸ್‌ ಕಸ್ಟಡಿಗೆ ವಹಿಸುವಂತೆ ಮನವಿ ಮಾಡಲಿದೆ.

    ಲೋಕಾಯುಕ್ತ ದಾಳಿಗೂ ನನಗೂ ಯಾವುದೇ ಸಂಬಂಧವಿಲ್ಲ. ಇದು ನನ್ನ ಹಾಗೂ ನನ್ನ ಕುಟುಂಬದ ವಿರುದ್ಧದ ಷಡ್ಯಂತ್ರವಾಗಿದೆ. ಆದಾಗ್ಯೂ ನನ್ನ ಮೇಲೆ ಆಪಾದನೆ ಬಂದಿರುವುದರಿಂದ ನಾನು ನೈತಿಕ ಹೊಣೆ ಹೊತ್ತು ಕೆಎಸ್‌ಡಿಎಲ್‌ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ನನ್ನ ರಾಜೀನಾಮೆ ಅಂಗೀಕರಿಸಬೇಕು ಎಂದು ಮುಖ್ಯಮಂತ್ರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.

    ಪ್ರಶಾಂತ್‌ನನ್ನು ಬಂಧಿಸಿದ ಬೆನ್ನಲ್ಲೇ ಅವರ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿ ಒಟ್ಟು 7.72 ಕೋಟಿ ಹಣವನ್ನು ವಶಕ್ಕೆ ಪಡೆಯಲಾಗಿದೆ. ಇದನ್ನೂ ಓದಿ: ಲೋಕಾಯುಕ್ತ ದಾಳಿ ವೇಳೆ ಬಿಜೆಪಿ ಶಾಸಕನ ಪುತ್ರನ ಮನೆಯಲ್ಲಿ ಸಿಕ್ಕಿದ್ದು ಬರೋಬ್ಬರಿ 6 ಕೋಟಿ!

    ರಾಜ್ಯ ಲೆಕ್ಕಪತ್ರ ಇಲಾಖೆಯ ಜಂಟಿ ನಿಯಂತ್ರಕರಾಗಿರುವ ಪ್ರಶಾಂತ್‌, ಬೆಂಗಳೂರು ಜಲ ಮಂಡಳಿಯಲ್ಲಿ ಮುಖ್ಯ ಲೆಕ್ಕಾಧಿಕಾರಿ ಹುದ್ದೆಯಲ್ಲಿದ್ದಾರೆ. ತಂದೆ ಮಾಡಾಳ್‌ ವಿರೂಪಾಕ್ಷಪ್ಪ ಅಧ್ಯಕ್ಷರಾಗಿರುವ ಕೆಎಸ್‌ಡಿಎಲ್‌ ಟೆಂಡರ್‌ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡಿ, ರಾಸಾಯನಿಕ ಸರಬರಾಜು ವೇಳಾಪಟ್ಟಿ ಮತ್ತು ಕಾರ್ಯಾದೇಶ ವಿತರಿಸಲು 81 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಗುತ್ತಿಗೆದಾರ ಶ್ರೇಯಸ್‌ ಕಶ್ಯಪ್‌ ಲೋಕಾಯುಕ್ತಕ್ಕೆ ದೂರು ನೀಡಿದ್ದರು.

  • 40 ಲಕ್ಷ ಲಂಚ ಅಲ್ಲ ಸಿಕ್ಕಿದ್ದು 1.62 ಕೋಟಿ – ಬಿಜೆಪಿ ಶಾಸಕನ ಪುತ್ರನ ಜೊತೆ ಐವರು ಅರೆಸ್ಟ್

    40 ಲಕ್ಷ ಲಂಚ ಅಲ್ಲ ಸಿಕ್ಕಿದ್ದು 1.62 ಕೋಟಿ – ಬಿಜೆಪಿ ಶಾಸಕನ ಪುತ್ರನ ಜೊತೆ ಐವರು ಅರೆಸ್ಟ್

    ಬೆಂಗಳೂರು: ದಾವಣಗೆರೆಯ ಚೆನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ (BJP MLA Madal Virupakshappa) ಪುತ್ರ ಪ್ರಶಾಂತ್ ಮಾಡಾಳ್ (Prashanth Madal) ಲೋಕಾಯುಕ್ತ (Lokayuktha) ಬಲೆಗೆ ಬಿದ್ದಿದ್ದಾರೆ. ಪ್ರಶಾಂತ್ ಸೇರಿದಂತೆ ಐವರನ್ನು ಅಧಿಕಾರಿಗಳು ಬಂಧಿಸಿದ್ದಾರೆ.

    ಈ ಬಗ್ಗೆ ಮಾಹಿತಿ ನೀಡಿರುವ ಲೋಕಾಯುಕ್ತ ಡಿಐಜಿ ಸುಬ್ರಮಣ್ಯ ರಾವ್, ಚೆನ್ನಗಿರಿ ಶಾಸಕ ಮಾಡಾಳ್ ವಿರೋಪಾಕ್ಷಪ್ಪ ಹಾಗೂ ಅವರ ಪುತ್ರ ಪ್ರಶಾಂತ್ ಮಾಡಾಳ್ ಮೇಲೆ ಎಫ್‌ಐಆರ್ ದಾಖಲಿಸಿಕೊಂಡು ದಾಳಿ ಮಾಡಲಾಗಿದೆ. ಜಲಮಂಡಳಿ ಹಾಗೂ ಎಸಿಬಿ ಎರಡಲ್ಲೂ ಅಕೌಂಟೆಂಟ್ ಆಗಿ ಪ್ರಶಾಂತ್‌ ಕಾರ್ಯನಿರ್ವಹಿಸುತ್ತಿದ್ದರು. ಕಚ್ಚಾ ಸಾಮಾಗ್ರಿ ಕಂಪನಿಯನ್ನು ನಡೆಸುತ್ತಿದ್ದ ಶ್ರೇಯಸ್ ಕಶ್ಯಪ್ ದೂರುದಾರರಾಗಿದ್ದು, ಬುಧವಾರ ಪ್ರಶಾಂತ್ ಹಣಕ್ಕೆ ಡಿಮಾಂಡ್ ಮಾಡಿದ್ದರ ಬಗ್ಗೆ ದೂರು ನೀಡಿದ್ದರು ಎಂದು ತಿಳಿಸಿದರು.

    ದೂರಿನ ಆಧಾರದ ಮೇಲೆ ಲೋಕಾಯುಕ್ತದಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ಬಳಿಕ ಗುರುವಾರ ಪ್ರಶಾಂತ್ ಲಂಚ ತೆಗೆದುಕೊಳ್ಳುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಅವರಿಗೆ ಲಂಚ ನೀಡಲು ಮುಂದಾಗಿದ್ದ ಇನ್ನೂ ನಾಲ್ವರನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: 40 ಲಕ್ಷ ಲಂಚ – ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದ ಬಿಜೆಪಿ ಶಾಸಕ ವಿರೂಪಾಕ್ಷಪ್ಪ ಪುತ್ರ

    ಪ್ರಶಾಂತ್ 40 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರೂ ದಾಳಿ ವೇಳೆ ಒಟ್ಟು 1.62 ಕೋಟಿ ರೂ. ಸಿಕ್ಕಿದೆ. ಸದ್ಯ ಪ್ರಶಾಂತ್ ಕಚೇರಿಯಲ್ಲಿ ಸಿಕ್ಕಿರುವ ಹಣದ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಇನ್ನೂ ಹಲವು ಸ್ಥಳಗಳಲ್ಲಿ ದಾಳಿ ಮಾಡಲಾಗುತ್ತಿದೆ ಎಂದು ತಿಳಿಸಿದರು.

    ಆರೋಪ ಏನು?
    ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಯಾಗಿರುವ ಪ್ರಶಾಂತ್, ನಿಯೋಜನೆ ಮೇಲೆ ಬೆಂಗಳೂರು ಜಲಮಂಡಳಿಯಲ್ಲಿ ಮುಖ್ಯ ಲೆಕ್ಕಾಧಿಕಾರಿ ಹುದ್ದೆಯಲ್ಲಿದ್ದಾರೆ. ಕೆಎಸ್‌ಡಿಎಲ್‌ಗೆ ರಾಸಾಯನಿಕ ಪೂರೈಕೆಗೆ ಆಯ್ಕೆಯಾಗಿರುವ ಗುತ್ತಿಗೆದಾರರಿಂದ 80 ಲಕ್ಷ‌ ರೂ. ಲಂಚದ ಬೇಡಿಕೆ ಇಟ್ಟಿದ್ದರು ಎಂಬ ಆರೋಪ ಬಂದಿದೆ. ಖಚಿತ ಮಾಹಿತಿಯ ಮೇರೆಗೆ ಪ್ರಶಾಂತ್‌ ಮಾಡಲ್‌ ಇದ್ದ ಖಾಸಗಿ ಕಚೇರಿ ಮೇಲೆ  ಪೊಲೀಸರು ದಾಳಿ ನಡೆಸಿದ್ದರು. ಮುಂದುವರಿದ ಭಾಗವಾಗಿ ಡಾಲರ್ಸ್‌ ಕಾಲೋನಿ ನಿವಾಸದಲ್ಲೂ ಲೋಕಾ ಪೊಲೀಸರು ದಾಳಿ ನಡೆಸಿ ಶೋಧ ನಡೆಸುತ್ತಿದ್ದಾರೆ. ಮಾಡಾಳ್‌ ವಿರೂಪಾಕ್ಷಪ್ಪ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ಅಧ್ಯಕ್ಷರಾಗಿದ್ದಾರೆ. ಇದನ್ನೂ ಓದಿ: ಉಪಚುನಾವಣೆ – ಮೂರು ಕಡೆ ಗೆದ್ದ ಕಾಂಗ್ರೆಸ್, ಬಿಜೆಪಿಗೆ ಮುಖಭಂಗ

  • ಲಂಚ ಪಡೆಯುತ್ತಿದ್ದ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕಿ – ಲೋಕಾಯುಕ್ತ ಬಲೆಗೆ

    ಲಂಚ ಪಡೆಯುತ್ತಿದ್ದ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕಿ – ಲೋಕಾಯುಕ್ತ ಬಲೆಗೆ

    ಚಿಕ್ಕಬಳ್ಳಾಪುರ: 8,000 ರೂಪಾಯಿ ಲಂಚ (Bribe) ಪಡೆಯುವಾಗ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ (Chikkaballapur) ನಡೆದಿದೆ.

    ಚಿಕ್ಕಬಳ್ಳಾಪುರ ಜಿಲ್ಲಾ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕಿ ಮಾಲಾ ಕಿರಣ್ ಲೋಕಾಯುಕ್ತ (Lokayukta) ಬಲೆಗೆ ಬಿದ್ದಿರುವ ಅಧಿಕಾರಿಯಾಗಿದ್ದಾರೆ. ನಗರದ ಶಿಡ್ಲಘಟ್ಟ ರಸ್ತೆಯಲ್ಲಿರುವ ಬಸವೇಶ್ವರ ಫ್ಯೂಯಲ್ ಸೆಂಟರ್‌ನಲ್ಲಿ ಪೆಟ್ರೋಲ್ ಬಂಕ್ ಮೀಟರ್ ನವೀಕರಣಕ್ಕೆ 8,000 ರೂಪಾಯಿ ಲಂಚಕ್ಕೆ ಮಾಲೀಕ ಜಯಸೂರ್ಯ ಬಳಿ ಬೇಡಿಕೆ ಇಟ್ಟಿದ್ದರು. ಇದನ್ನೂ ಓದಿ: ಮೋದಿ ಭೇಟಿ ಬೆನ್ನಲ್ಲೆ ಶಿರಾದಲ್ಲಿ ಟಿಕೆಟ್ ಫೈಟ್‌ ಜೋರು

    ಹೀಗಾಗಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಲಂಚ ಪಡೆಯುವಾಗ ರೆಡ್ ಹ್ಯಾಂಡಾಗಿ ಸೆರೆ ಹಿಡಿದು, ಬಂಧಿತ ಮಹಿಳೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇನ್ನೂ ಮಾಲಾಕಿರಣ್‌ಗೆ ಸೇರಿದ ಬೆಂಗಳೂರಿನ ನಿವಾಸದ ಮೇಲೂ ದಾಳಿ ಪರಿಶೀಲನೆ ನಡೆಸುತ್ತಿದ್ದಾರೆ. ಮನೆಯಲ್ಲಿ ದೊರೆಕಿದ ದಾಖಲೆಗಳ ಪರಿಶೀಲನೆ ನಡೆಸುತ್ತಿರುವುದಾಗಿ ಎಸ್ಪಿ ಪವನ್ ನೆಜ್ಜೂರು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಗ್ರಾಹಕರಿಗೆ ಮತ್ತೆ ಶಾಕ್: ರೆಪೋ ದರ ಹೆಚ್ಚಿಸಿದ RBI – ಸಾಲದ EMI ಹೆಚ್ಚಳ ಸಾಧ್ಯತೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪಹಣಿ ತಿದ್ದುಪಡಿಗೆ 5,000 ಲಂಚ ಪಡೆದ ಅಧಿಕಾರಿ – ವೀಡಿಯೋ ಮಾಡಿ ಹರಿಬಿಟ್ಟ ರೈತರು

    ಪಹಣಿ ತಿದ್ದುಪಡಿಗೆ 5,000 ಲಂಚ ಪಡೆದ ಅಧಿಕಾರಿ – ವೀಡಿಯೋ ಮಾಡಿ ಹರಿಬಿಟ್ಟ ರೈತರು

    ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ನಾಗರಾಳ ಹೊಬಳಿಯ ಗ್ರಾಮ ಲೆಕ್ಕಾಧಿಕಾರಿ (Village Accountant) ಲಂಚವತಾರಕ್ಕೆ ಬೇಸತ್ತ ಗ್ರಾಮಸ್ಥರು ಅಧಿಕಾರಿ ಲಂಚ (Bribe) ಪಡೆಯುವುದನ್ನು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿದ್ದಾರೆ. ಭ್ರಷ್ಟ ಗ್ರಾಮ ಲೆಕ್ಕಾಧಿಕಾರಿ ವಿರುದ್ಧ ಕ್ರಮ ಜರುಗಬೇಕು ಎಂದು ಆಗ್ರಹಿಸಿದ್ದಾರೆ.

    ಕಂದಾಯ ಇಲಾಖೆ ಅಧಿಕಾರಿಗಳ ಭ್ರಷ್ಟಾಚಾರಕ್ಕೆ ಬೇಸತ್ತ ರೈತರು (Farmers) ಪಹಣಿ ತಿದ್ದುಪಡಿಗೆ 5,000 ರೂ. ಬೇಡಿಕೆಯಿಟ್ಟಿದ್ದ ನಾಗರಾಳ ಹೊಬಳಿಯ ಗ್ರಾಮ ಲೆಕ್ಕಾಧಿಕಾರಿ ಶರಣಗೌಡರಿಗೆ ಲಂಚ ನೀಡುವ ವೀಡಿಯೋ ಹರಿಬಿಟ್ಟಿದ್ದಾರೆ. ಬೊಮ್ಮನಾಳ ಗ್ರಾಮದ ರೈತ ಹೊನ್ನನಗೌಡ ಪಾಟೀಲ್ ಅವರಿಂದ ಗ್ರಾಮ ಲೆಕ್ಕಾಧಿಕಾರಿ ಲಂಚ ಪಡೆದಿದ್ದಾರೆ. ಇದನ್ನೂ ಓದಿ: ಆಸ್ತಿ ವಿಚಾರಕ್ಕೆ ಯುವಕನ ಮೇಲೆ ಗುಂಡೇಟು – ಕ್ಷಣಮಾತ್ರದಲ್ಲಿ ತಪ್ಪಿದ ಅನಾಹುತ

    ಬಹಿರಂಗವಾಗಿ ಟೀ ಅಂಗಡಿಯಲ್ಲಿ ರೈತರ ಬಳಿ ಹಣಕ್ಕೆ ಡಿಮ್ಯಾಂಡ್ ಮಾಡಿ ಯಾವುದೇ ಮುಜುಗರ, ನಾಚಿಕೆಯಿಲ್ಲದೆ ಹಣ ತೆಗೆದುಕೊಂಡಿದ್ದಾರೆ. ನಾಲ್ವರು ಅಣ್ಣ-ತಮ್ಮಂದಿರ ಹೆಸರಿಗೆ ಜಮೀನಿನ ಪಹಣಿ ತಿದ್ದುಪಡಿಗೆ ಹಣ ವಸೂಲಿ ಮಾಡಿದ್ದಾರೆ. ಒಬ್ಬರಿಗೆ 5,000 ರೂ. ನಂತೆ ಒಟ್ಟು ನಾಲ್ವರಿಂದ 20,000 ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದಾರೆ.

    5,000 ರೂ. ಗಿಂತ ಕಡಿಮೆ ಹಣ ಕೊಟ್ಟರೆ ವಾಪಸ್ ಕೊಡುವಂತೆ ತೋರ್ಪಡಿಸಿಕೊಂಡಿರುವ ಶರಣಗೌಡ ಇದರಲ್ಲಿ ನನಗೆ ಏನೂ ಉಳಿಯುವುದಿಲ್ಲ ಎಂದು ರೈತನಿಂದ 5 ಸಾವಿರ ರೂ. ಲಂಚ ಪಡೆದಿದ್ದಾರೆ. ಪಹಣಿ ತಿದ್ದುಪಡಿಗೆ ಹಂತ ಹಂತದಲ್ಲೂ ಲಂಚ ಕೊಡಬೇಕಿರುವುದರಿಂದ ರೈತರು ಬೇಸತ್ತಿದ್ದಾರೆ. ಭ್ರಷ್ಟ ಅಧಿಕಾರಿ ವಿರುದ್ಧ ಕ್ರಮಕ್ಕೆ ರೈತರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ನಿಷೇಧಿತ PFI ನಾಯಕರಿಗೆ ಸಂಬಂಧಿಸಿದ ಕೇರಳದ 56 ಕಡೆ NIA ದಾಳಿ

    Live Tv
    [brid partner=56869869 player=32851 video=960834 autoplay=true]

  • ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳು ಕಾಸ್ ಕೊಟ್ರೆ ಮಾತ್ರ ಚಿಕಿತ್ಸೆ – ಸಿಬ್ಬಂದಿ ಲಂಚಾವತಾರ ಬಯಲು

    ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳು ಕಾಸ್ ಕೊಟ್ರೆ ಮಾತ್ರ ಚಿಕಿತ್ಸೆ – ಸಿಬ್ಬಂದಿ ಲಂಚಾವತಾರ ಬಯಲು

    ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕು ಆಸ್ಪತ್ರೆಯಲ್ಲಿ (Hospital) ಬಡ ರೋಗಿಗಳಿಗೆ ಉಚಿತ ಚಿಕಿತ್ಸೆ ಅನ್ನೋದೆ ಕನಸಿನ ಮಾತಾಗಿದೆ. ಪ್ರತಿಯೊಂದಕ್ಕೂ ಇಲ್ಲಿನ ಸಿಬ್ಬಂದಿ ರಾಜಾರೋಷವಾಗಿ ಹಣ ವಸೂಲಿ ಮಾಡುತ್ತಿದ್ದಾರೆ. ಸಹಜ ಹೆರಿಗೆಗೂ ಇಲ್ಲಿನ ಸಿಬ್ಬಂದಿ 15 ಸಾವಿರ ರೂಪಾಯಿ ಹಣದ ಡಿಮ್ಯಾಂಡ್ ಮಾಡಿದ್ದಾರೆ. ಇದರಿಂದ ಬೇಸತ್ತ ಗರ್ಭಿಣಿ ಕಡೆಯವರು ನರ್ಸ್ ಲಂಚಾವತಾರವನ್ನು (Bribe) ಬಯಲಿಗೆಳೆದಿದ್ದಾರೆ.

    ತಾಲೂಕು ಆಸ್ಪತ್ರೆ ನರ್ಸ್‍ಗಳಾದ ಅಂಜಲಮ್ಮ, ಗೀತಾ ಐದು ಸಾವಿರ ರೂಪಾಯಿ ಲಂಚ ಪಡೆಯುವ ದೃಶ್ಯಗಳು ಎಲ್ಲೆಡೆ ಹರಿದಾಡುತ್ತಿದ್ದು, ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಯ ಧನದಾಹ ಬಯಲಾಗಿದೆ. ಸಹಜ ಹೆರಿಗೆಗೆ ಒಂದು ರೇಟ್ ಮತ್ತು ಸಿಜೇರಿಯನ್ ಹೆರಿಗೆಗೆ ಒಂದು ರೇಟ್‍ನ್ನು ನಿಗದಿ ಮಾಡಿ ಹಣ ವಸೂಲಿ ಮಾಡಲಾಗುತ್ತಿದೆ. ರೋಗಿಗಳು ಮೊದಲು ದುಡ್ಡು ಕೊಟ್ಟರೆ ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯಕೀಯ ಪರೀಕ್ಷೆಗಳು, ಸ್ಕ್ಯಾನಿಂಗ್ ಸೇರಿ ಪ್ರತಿಯೊಂದಕ್ಕೂ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪವಿದೆ. ಇದನ್ನೂ ಓದಿ: ವಿಚ್ಛೇದನ ಪಡೆಯಲು ಪತ್ನಿಗೆ HIV ಸೋಂಕಿತ ರಕ್ತದ ಇಂಜೆಕ್ಷನ್ ಕೊಡಿಸಿದ ಭೂಪ

    ಹಣ ವಸೂಲಿಯಲ್ಲಿ ವೈದ್ಯರ ಪಾತ್ರವೂ ಇರುವುದರಿಂದ ಗ್ರಾಮೀಣ ಭಾಗದಿಂದ ಬರುವ ಬಡರೋಗಿಗಳು ರೋಸಿ ಹೋಗಿದ್ದಾರೆ. ಹೆರಿಗೆ ಮಾಡಲು ಗರ್ಭಿಣಿ ಕಡೆಯವರನ್ನು ಪ್ರತ್ಯೇಕ ಕೊಠಡಿಗೆ ಕರೆದೊಯ್ದು 5 ಸಾವಿರ ರೂಪಾಯಿ ಹಣ ಪಡೆಯುವ ನರ್ಸ್ ಅಂಜಲಮ್ಮ ಚಿಕಿತ್ಸೆ ಬಳಿಕ ಉಳಿದ ಹಣ ಕೊಡುವಂತೆ ತಾಕೀತು ಮಾಡಿರುವ ದೃಶ್ಯಾವಳಿ ಈಗ ವೈರಲ್ ಆಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಲಂಚ ಪಡೆಯುತ್ತಿರುವ ನರ್ಸ್‍ಗಳು ಹಾಗೂ ಇದರಲ್ಲಿ ಭಾಗಿಯಾಗಿರುವ ವೈದ್ಯರನ್ನು ಕೂಡಲೇ ಅಮಾನತು ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಬಾಲಕಿಯನ್ನ ಮನೆಗೆ ಕರೆಸಿ ಊಟ ಹಾಕಿ, ಮಗನಿಂದಲೇ ರೇಪ್ ಮಾಡಿಸಿದ್ಳು

    Live Tv
    [brid partner=56869869 player=32851 video=960834 autoplay=true]

  • ಮಾಜಿ ಸೈನಿಕನ ಬಳಿ 5 ಲಕ್ಷ ಲಂಚಕ್ಕೆ ಬೇಡಿಕೆ- ಮೂವರು ಭ್ರಷ್ಟ ಅಧಿಕಾರಿಗಳು ಜೈಲುಪಾಲು

    ಮಾಜಿ ಸೈನಿಕನ ಬಳಿ 5 ಲಕ್ಷ ಲಂಚಕ್ಕೆ ಬೇಡಿಕೆ- ಮೂವರು ಭ್ರಷ್ಟ ಅಧಿಕಾರಿಗಳು ಜೈಲುಪಾಲು

    ಚಿಕ್ಕಬಳ್ಳಾಪುರ: ಮಾಜಿ ಸೈನಿಕರೊಬ್ಬರ ಬಳಿಯೇ ಲಂಚಕ್ಕೆ ಬೇಡಿಕೆಯಿಟ್ಟು ಮೂವರು ಲೋಕಾಯುಕ್ತ (Lokayukta) ಬಲೆಗೆ ಬಿದ್ದಿರೋ ಪ್ರಸಂಗ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

    ವೈಜಕೂರು ಕಂದಾಯ ವೃತ್ತದ ಗ್ರಾಮ ಸಹಾಯಕ ಎನ್.ಪ್ರಕಾಶ್ ಹಾಗೂ ಚಿಂತಾಮಣಿ ತಾಲೂಕು ಕಚೇರಿಯಲ್ಲಿ ಕೆಲಸ ಮಾಡೋ ಸರ್ಕಾರಿ ಭೂಮಾಪಕ ಪಿ.ಎನ್ ನಾಗರಾಜ್ ಹಾಗೂ ರೈತ ಮುಖಂಡ ಕದಿರೇಗೌಡ ಎಂಬವರೇ ಲೋಕಾಯಕ್ತ ಪೊಲೀಸರ ಟ್ರ್ಯಾಪ್‍ಗೆ ಸಿಕ್ಕಿಬಿದ್ದ ಭ್ರಷ್ಟರು. ಇದನ್ನೂ ಓದಿ: ಕಲಬುರಗಿಯಲ್ಲಿ ಜಂಪಿಂಗ್ ಪಾಲಿಟಿಕ್ಸ್ ಶುರು- ತೆನೆ ಇಳಿಸಿ ಕೈ ಹಿಡಿದ ರೇವು ನಾಯಕ್ ಬೆಳಮಗಿ

    ಚಿಂತಾಮಣಿ ನಗರದ ವೆಂಕಟಗಿರಿಕೋಟೆಯ ವಿನಾಯಕ ಬಡಾವಣೆಯ ನಿವಾಸಿ ಶಿವಾನಂದ ರೆಡ್ಡಿ ಮಾಜಿ ಸೈನಿಕನಾಗಿದ್ದು, ಮಾಜಿ ಸೈನಿಕ ಖೋಟಾದಡಿ ರಾಜ್ಯ ಸರ್ಕಾರಕ್ಕೆ ಜಮೀನು ಮಂಜೂರು ಮಾಡಿಕೊಡುವಂತೆ ಅರ್ಜಿ ಸಲ್ಲಿಸಿದ್ರು. ಹಲವು ವರ್ಷಗಳಿಂದ ಮನವಿ ಸಲ್ಲಿಸಿದ್ದರೂ ಸರ್ಕಾರದಿಂದ ಇದುವರೆಗೂ ಜಮೀನು ಮಂಜೂರಾಗಿಲ್ಲ. ಇದರಿಂದ ಬೇಸತ್ತ ರೈತ ಮುಖಂಡ ಕದಿರೇಗೌಡ ಬಳಿ ಹೋಗಿ ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದು, ಆದರೆ ಈ ಕದಿರೇಗೌಡ (Kadire Gowda) ಗ್ರಾಮ ಸಹಾಯಕ ಪ್ರಕಾಶ್ ಹಾಗೂ ಭೂಮಾಪಕ ನಾಗರಾಜ್ ಜೊತೆ ಡೀಲ್ ಮಾತನಾಡಿ 10 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದಾನೆ. ಇದರಿಂದ ನೊಂದ ಮಾಜಿ ಸೈನಿಕ ಶಿವಾನಂದರೆಡ್ಡಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿ, ಲೋಕಾಯಕ್ತ ಪೊಲೀಸರು ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಶಿವಾನಂದರೆಡ್ಡಿ 1987ರಲ್ಲಿ ಭಾರತೀಯ ಸೈನ್ಯಕ್ಕೆ ಸೇರಿದ್ದು, 1999ರಲ್ಲಿ ಜಮ್ಮು-ಕಾಶ್ಮೀರದ ಪೂಂಚ್ ಸೆಕ್ಟರ್‍ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ರಾತ್ರಿ ಗಸ್ತಿನಲ್ಲಿರುವಾಗ ಅಪಘಾತವಾಗಿ ಬಲಗಾಲಿಗೆ ಗಂಭೀರ ಗಾಯವಾದ ಕಾರಣ ಸೇವೆಯಿಂದ ನಿವೃತ್ತಿಯಾಗಿದ್ರು. ಸ್ವಂತ ಊರಲ್ಲಿ ಕೃಷಿ ಮಾಡ್ಕೊಂಡು ಬದುಕು ಸಾಗಿಸೋಣ ಅಂತ ಜಮೀನು ಮಂಜೂರಾತಿಗೆ ಅರ್ಜಿ ಸಲ್ಲಿಸಿದ್ರೂ ಪ್ರಯೋಜನವಾಗಿಲ್ಲ. ಜಮೀನು ಪಡೆಯಲು ಪ್ರತಿಭಟನೆ, ಪಾದಯಾತ್ರೆ, ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಧರಣಿ ಮಾಡಿದ್ರೂ ಸರ್ಕಾರ ಹಾಗೂ ಆಧಿಕಾರಿಗಳು ಮಾತ್ರ ಜಮೀನು ಮಂಜೂರು ಮಾಡಿಕೊಡಲಿಲ್ಲ, ಬದಲಾಗಿ ಈಗ 10 ಲಕ್ಷಕ್ಕೆ ಲಂಚಕ್ಕೆ ಪೀಡಿಸಿ, 5 ಲಕ್ಷಕ್ಕೆ ಡೀಲ್ ಕುದುರಿಸಿಕೊಂಡಿದ್ದ ಭ್ರಷ್ಟರು ಲೋಕಾ ಬಲೆಗೆ ಬಿದ್ದಿದ್ದು, ಮಾಡಿದ್ದುಣ್ಣೋ ಮಹರಾಯ ಅಂತ ತಕ್ಕಶಾಸ್ತಿ ಆಗಿದೆ.

    ಒಟ್ಟಾರೆ ಮಾಜಿ ಸೈನಿಕ (Ex-soldier) ಅನ್ನೋ ಕನಿಷ್ಟ ಗೌರವ ಕೊಡದೆ ಲಂಚದ ಹಣಕ್ಕಾಗಿ ಹಾತೊರೆದ ಭ್ರಷ್ಟ ಅಧಿಕಾರಿಗಳು ಇದೀಗ ಜೈಲು ಪಾಲಾಗಿದ್ದಾರೆ. ಹೀಗೆ ಲಂಚ ಬಾಕ ಅಧಿಕಾರಿಗಳಿಗೆ ತಕ್ಕ ಶಾಸ್ತಿ ಆಗಿರುವ ಬಗ್ಗೆ ಸಾರ್ವಜನಿಕರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]