Tag: ಲಂಚ

  • ಲಂಚಬಾಕ ಮಹಿಳಾ ಅಧಿಕಾರಿ ಎಸಿಬಿ ಬಲೆಗೆ

    ಲಂಚಬಾಕ ಮಹಿಳಾ ಅಧಿಕಾರಿ ಎಸಿಬಿ ಬಲೆಗೆ

    ಮಡಿಕೇರಿ: ಆಕೆ ಇಲಾಖೆಯೊಂದರ ಅತ್ಯುನ್ನತ ಅಧಿಕಾರಿ. ತನ್ನ ದಕ್ಷ ಕರ್ತವ್ಯದಿಂದ ಆ ಇಲಾಖೆಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕಾದ ಆ ಮಹಿಳಾ ಅಧಿಕಾರಿ ಬಿದ್ದಿದ್ದು ಮಾತ್ರ ದುಡ್ಡಿನ ಹಿಂದೆ. ಹಣ ಕೊಟ್ರೆ ಮಾತ್ರ ಕೆಲಸ ಅನ್ನೋ ಗುರಿ ಇಟ್ಕೊಂಡಿದ್ದ ಆ ಲಂಚಬಾಕ ಮೇಡಂ ಕೊನೆಗೂ ಲಾಕ್ ಆಗಿದ್ದಾಳೆ.

    ಕೊಡಗು ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಮಾಯಾದೇವಿ ಗಲಗಲಿ ವಿರುದ್ಧ ಲಂಚಬಾಕತನ ಅಲ್ಲದೇ ಅನೇಕ ದೂರುಗಳಿದ್ರೂ ಎಲ್ಲೂ ಸಿಕ್ಕಿಬಿದ್ದಿರಲಿಲ್ಲ. ಆದ್ರೆ ಶನಿವಾರ 20 ಸಾವಿರ ರೂಪಾಯಿ ಲಂಚ ಪಡೆಯೋವಾಗ ಎಸಿಬಿ ಖೆಡ್ಡಾಕ್ಕೆ ಬಿದ್ದಿದ್ದಾಳೆ.

    ನಳಿನಿ ಎಂಬವರ ಪತಿ 8 ತಿಂಗಳ ಹಿಂದೆ ಅನುಮಾನಾಸ್ಪದವಾಗಿ ಕೊಲೆಯಾಗಿದ್ರು. ನಳಿನಿ ಪತಿ ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ರಿಂದ ಮಾನವೀಯ ನೆಲೆಯಲ್ಲಿ ಇಲಾಖೆಯಿಂದ 4.25 ಲಕ್ಷ ಪರಿಹಾರ ಘೋಷಣೆಯಾಗಿತ್ತು. ಆದ್ರೆ ಇಲಾಖೆಯ ಅಧಿಕಾರಿಯಾದ ಮಾಯಾದೇವಿ ಗಲಗಲಿ ಈ ಹಣ ಕೊಡದೇ ಸತಾಯಿಸುತ್ತಿದ್ದಳು. ಕೊನೆಗೆ ಡೀಲ್ ಕುದುರಿಸಿ 30 ಸಾವಿರಕ್ಕೆ ಬೇಡಿಕೆ ಇಟ್ಟಿದ್ದಳು. ಅದ್ರ ಮೊದಲ ಕಂತಾಗಿ 20 ಸಾವಿರ ಪಡೆಯೋವಾಗ ಮಾಯಾದೇವಿ ಸಿಕ್ಕಿಬಿದ್ದಿದ್ದಾಳೆ. ಪ್ರಕರಣದ ಮಾಹಿತಿ ಪಡೆದ ಸಚಿವ ಸಾ.ರಾ.ಮಹೇಶ್ ಕೂಡಲೇ ಅಮಾನತಿಗೆ ಸೂಚಿಸಿದ್ದಾರೆ.

    ಈ ಮಧ್ಯೆ ಲಂಚಕೋರ ಅಧಿಕಾರಿ ಮಾಯಾದೇವಿ ಅನಾರೋಗ್ಯ ಕಾರಣ ನೀಡಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೊಸ ಡ್ರಾಮ ನಡೆಸಿದ್ದಾಳೆ. ಒಟ್ಟಿನಲ್ಲಿ ಇಂತಹ ಲಂಚಬಾಕ ಅಧಿಕಾರಿಗಳಿಗೆ ಸರ್ಕಾರ ತಕ್ಕ ಶಿಕ್ಷೆ ಕೊಡಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಗಂಡನನ್ನು ಬಿಡಿಸಲು ಲಂಚ ಕೇಳಿದ್ದರಂತೆ ಪೊಲೀಸರು

    ಗಂಡನನ್ನು ಬಿಡಿಸಲು ಲಂಚ ಕೇಳಿದ್ದರಂತೆ ಪೊಲೀಸರು

    ಬೆಂಗಳೂರು: ವಿಚಾರಣೆಗೆಂದು ನನ್ನ ಗಂಡನನ್ನ ಠಾಣೆಗೆ ಕರೆಸಿ ಏಕಾಏಕಿ ಬಂಧಿಸಿಟ್ಟು, ಈಗ ಆತನನ್ನು ಬಿಡುಗಡೆಗೊಳಿಸಲು ಪೊಲೀಸರು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಸಂತ್ರಸ್ತ ಮಹಿಳೆಯೊಬ್ಬರು ಗಂಭೀರ ಆರೋಪ ಮಾಡುತ್ತಿದ್ದಾರೆ.

    ಬೆಂಗಳೂರು ಹೊರವಲಯ ಬಾಗಲಗುಂಟೆ ಪೊಲೀಸರ ವಿರುದ್ಧ ಈ ಆರೋಪ ಕೇಳಿ ಬಂದಿದ್ದು, ಕಳೆದ ಮೂರು ದಿನಗಳ ಹಿಂದೆ ನಿಮ್ಮ ಮೇಲೆ ದೂರು ಬಂದಿದೆ ವಿಚಾರಣೆ ನಡೆಸಬೇಕು ಎಂದು ಸಂತ್ರಸ್ತೆ ಲಕ್ಷ್ಮೀಯ ಗಂಡ ಮಂಜುನಾಥ್ ಎಂಬವರನ್ನು ಪೊಲೀಸ್ ಠಾಣೆಗೆ ಕರೆಸಿದ್ದರಂತೆ. ವಿಚಾರಣೆಯ ನೆಪವೊಡ್ಡಿ ಬಂಧಿಸಿದ್ದಾರೆ ಎನ್ನಲಾಗಿದೆ. ಈ ಕುರಿತು ಮರುದಿನ ಪೊಲೀಸ್ ಠಾಣೆಯಲ್ಲಿ ವಿಚಾರಿಸಿದಾಗ ನಿನ್ನ ಗಂಡನನ್ನು ಕಳುಹಿಸಬೇಕೆಂದರೆ ಬರೋಬ್ಬರಿ 25,000 ಹಣ ಕೇಳಿದರಂತೆ ಇಲ್ಲ ಅಂದದಕ್ಕೆ, ಎಷ್ಟಾಗುತ್ತೋ ಅಷ್ಟು ಕೊಟ್ಟು, ಎಲ್ಲಾ ಸೆಟ್ಲು ಮಾಡಿಕೊಂಡು ಹೋಗಿ ಎನ್ನುವುದರೊಂದಿಗೆ, 5,000 ರೂ. ಹಣ ಕೊಡು ಎಂದು ಬೇಡಿಕೆ ಇಟ್ಟಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ.

    ಠಾಣೆಗೆ ಹೋದ ವೇಳೆ ಮಹಿಳೆ ಎನ್ನುವುದನ್ನು ನೋಡದೆ ಅವಾಚ್ಯ ಶಬ್ಧಗಳಿಂದ ನಿಂದಿನೆ ಮಾಡಿದ್ದಾರೆ. ಅಲ್ಲದೆ ಮೂರು ದಿನಗಳ ನಂತರ ಕೇಳಿದಾಗ, ನಿನ್ನ ಗಂಡನ ಮೇಲೆ ಎಫ್‍ಐಆರ್ ದಾಖಲಿಸಿಕೊಂಡು ಜೈಲಿಗೆ ಕಳಿಸಿದ್ದೇವೆ ಎಂದು ಹೇಳುತ್ತಾರೆ. ಮೂರು ದಿನಗಳಿಂದ ಗಂಡನನ್ನು ಕಾಣದ ಮಹಿಳೆ, ಪೊಲೀಸರು ತೋರಿರುವ ನಡೆಯಿಂದ ಬೇಸತ್ತು ನನ್ನ ಗಂಡನನ್ನು ಕೊಡಿಸಿ ಎಂದು ಅಂಗಲಾಚಿದ್ದಾರೆ.

    ಮಂಜುನಾಥನಿಗೆ ದೂರುದಾರೆ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಇತ್ತು ಎನ್ನಲಾಗಿದೆ. ಅವಳು ಈತನನ್ನು ಬಿಟ್ಟು ಮತ್ತೊಬ್ಬನ ಜೊತೆ ಸಂಸಾರ ಮಾಡುವುದಾಗಿ ತಿಳಿಸಿದ್ದು, ಈತ ಅದನ್ನು ನಿರಾಕರಿಸಿದ್ದಾನೆ. ಹೀಗಾಗಿ ದೂರುದಾರೆ ಮಹಿಳೆ ತನ್ನ ಮತ್ತೊಂದು ಹೊಸ ಸಂಬಂಧಕ್ಕೆ ಧಕ್ಕೆ ಉಂಟಾಗಬಾರದು ಎಂದು ಮಂಜುನಾಥನ ವಿರುದ್ಧ ದೂರು ನೀಡಿ ಠಾಣೆಗೆ ಕಳುಹಿಸಿದ್ದಾರೆ ಎನ್ನಲಾಗಿದೆ. ದೂರುದಾರೆ ದೂರು ನೀಡುವ ಮೊದಲು ಮಂಜುನಾಥನಿಗೆ ಫೋನ್ ಮಾಡಿ, ತನ್ನ ಮತ್ತೊಂದು ಸಂಬಂಧದ ಬಗ್ಗೆ ನಿವೇದನೆ ಮಾಡಿಕೊಂಡಿರುವ ಆಡಿಯೋ ಸಹ ಲಭಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸೂರು ಕಳೆದುಕೊಂಡಿರೋ ಕೊಡಗು ಸಂತ್ರಸ್ತರಿಂದ ಲಂಚ ಪೀಕಿದ ಅಧಿಕಾರಿ – ವಿಡಿಯೋ ನೋಡಿ

    ಸೂರು ಕಳೆದುಕೊಂಡಿರೋ ಕೊಡಗು ಸಂತ್ರಸ್ತರಿಂದ ಲಂಚ ಪೀಕಿದ ಅಧಿಕಾರಿ – ವಿಡಿಯೋ ನೋಡಿ

    ಕೊಡಗು: ಪ್ರವಾಹದಿಂದ ಮನೆ-ಮಠ ಕಳೆದುಕೊಂಡು ನಿರಾಶ್ರಿತರಾಗಿರುವ ಜನರು ಹೊಸದಾಗಿ ಪಡಿತರ ಚೀಟಿ ನೀಡುವ ವಿಚಾರದಲ್ಲಿಯೂ ಅಧಿಕಾರಿಗಳು ಲಂಚ ಪಡೆಯುತ್ತಿರುವ ಶೋಚನೀಯ ಘಟನೆ ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕುಶಾಲನಗರದಲ್ಲಿ ನಡೆದಿದೆ.

    ಮಹಾಮಳೆಗೆ ಕೊಡಗಿನ ಜನ ತತ್ತರಿಸಿ ಹೋಗಿದ್ದು, ಅನೇಕರು ತಮ್ಮ ವಾಸಸ್ಥಳಗಳನ್ನು ಕಳೆದುಕೊಂಡು ನಿರಾಶ್ರಿತ ಕೇಂದ್ರಗಳನ್ನು ತಲುಪಿದ್ದಾರೆ. ಜಿಲ್ಲೆಯಲ್ಲಿ ಉಂಟಾದ ಪ್ರವಾಹಕ್ಕೆ ನಾಡಿನ ಜನ ಸಹಾಯಹಸ್ತವನ್ನೇ ಚಾಚಿದ್ದರು. ಇಷ್ಟೆಲ್ಲ ಸಮಸ್ಯೆಗಳ ನಡುವೆಯೂ ಮತ್ತೊಮ್ಮೆ ಜೀವನ ಕಟ್ಟಿಕೊಳ್ಳಲು ಮುಂದಾಗಿರುವ ಜನತೆಗೆ ಅಧಿಕಾರಿಗಳು ಅಡ್ಡಗಾಲು ಹಾಕುತ್ತಿದ್ದಾರೆ.

    ಪ್ರವಾಹದಿಂದ ಎಲ್ಲಾ ದಾಖಲೆಗಳನ್ನು ಕಳೆದುಕೊಂಡಿರುವ ಜನ ಹೊಸದಾಗಿ ಪಡಿತರ ಚೀಟಿಯನ್ನು ಪಡೆಯಲು ಮುಂದಾದಾಗ ಅಧಿಕಾರಿಗಳು ಲಂಚ ಕೇಳಿ ತಮ್ಮ ಲಂಚಬಾಕತವನ್ನು ಮೆರೆದಿದ್ದಾರೆ. ಸೋಮವಾರಪೇಟೆ ತಾಲೂಕಿನ ಕುಶಾಲನಗರದಲ್ಲಿ ಹೊಸದಾಗಿ ಪಡಿತರ ಚೀಟಿ ನೀಡುವ ವಿಚಾರದಲ್ಲಿ ಆಹಾರ ಇಲಾಖೆಯ ಆಹಾರ ನಿರೀಕ್ಷಕ ಅಧಿಕಾರಿ ರಾಜಣ್ಣ ಹಾಗೂ ಕಂಪ್ಯೂಟರ್ ಆಪರೇಟರ್ ಮದ್ದು ಎಂಬಾತ ಪ್ರತಿ ಪಡಿತರ ಚೀಟಿ 500 ರೂಪಾಯಿ ಲಂಚ ಪಡೆಯುವ ಮೂಲಕ ವಸೂಲಿ ದಂಧೆಗೆ ಇಳಿದಿದ್ದಾರೆ.

    ಸೂರು ಕಳೆದುಕೊಂಡ ಸಂತ್ರಸ್ತರ ಬಳಿ ಹಣವನ್ನು ಪೀಕುತ್ತಿರುವ ದೃಶ್ಯವನ್ನು ಸ್ಥಳೀಯರಾದ ಸಂತೋಷ್ ಎಂಬವರು ಸೆರೆ ಹಿಡಿದಿದ್ದಾರೆ. ಅಲ್ಲದೇ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರೂ, ಆ ಅಧಿಕಾರಿಗಳು ತಮ್ಮ ಪಾಡಿಗೆ ತಾವು ಹಣ ವಸೂಲಿಗೆ ಮುಂದಾಗಿದ್ದಾರೆ. ಇದರಿಂದ ಬೇಸತ್ತ ಸಂತೋಷ್ ಹಾಗೂ ಸಂತ್ರಸ್ತರು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=TNRm6px6mtw

  • ಪಾರ್ಕ್ ನಲ್ಲಿ ಲಂಚ ಪಡೆಯುತ್ತಿದ್ದ ಪಿಡಿಒ- ಸಿಕ್ಕಿಬಿದ್ದ ಎಸಿಬಿ ಬಲೆಗೆ

    ಪಾರ್ಕ್ ನಲ್ಲಿ ಲಂಚ ಪಡೆಯುತ್ತಿದ್ದ ಪಿಡಿಒ- ಸಿಕ್ಕಿಬಿದ್ದ ಎಸಿಬಿ ಬಲೆಗೆ

    ದಾವಣಗೆರೆ: ಮೆಕ್ಕೆಜೋಳ ಇಂಡಸ್ಟ್ರಿ ಲೈಸೆನ್ಸ್ ನೀಡಲು 30 ಸಾವಿರ ರೂ. ಬೇಡಿಕೆ ಇಟ್ಟ ಪಿಡಿಒ ಒಬ್ಬರು ನಗರದ ಪಾರ್ಕ್ ವೊಂದರಲ್ಲಿ ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದಾರೆ.

    ತಾಲೂಕಿನ ಹೆಬ್ಬಾಳು ಗ್ರಾಮ ಪಂಚಾಯಿತಿ ಪಿಡಿಒ ಸ್ವಾಮಿಲಿಂಗಪ್ಪ ಎಸಿಬಿ ಬಲೆಗೆ ಸಿಕ್ಕಿಬಿದ್ದ ಅಧಿಕಾರಿ. ಇಂದು ಸ್ವಾಮಿಲಿಂಗಪ್ಪ ಅವರು ನಿಜಲಿಂಗಪ್ಪ ಬಡಾವಣೆಯ ಪಾರ್ಕ್ ನಲ್ಲಿ ಬಸವರಾಜ್ ಎಂಬವರಿಂದ 30 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದರು. ಖಚಿತ ಮಾಹಿತಿ ಪಡೆದ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.

    ಜಿಲ್ಲೆಯಲ್ಲಿಯೇ ಅತಿ ಭ್ರಷ್ಟ ಪಿಡಿಒ ಅಂತ ಸ್ವಾಮಿಲಿಂಗಪ್ಪ ವಿರುದ್ಧ ಎಸಿಬಿಗೆ ಸಾರ್ವಜನಿಕರು ದೂರು ನೀಡಿದ್ದರು. ಹೀಗಾಗಿ ಸ್ವಾಮಿಲಿಂಗಪ್ಪ ಲಂಚ ಪಡೆಯುವಾಗಲೇ ಬಂಧನ ಮಾಡಲು ಪ್ಲಾನ್ ರೂಪಿಸಿದ್ದರು. ಇಂದು ಎಸಿಬಿ ಇನ್ಸ್‍ಪೆಕ್ಟರ್ ಪ್ರಕಾಶ್ ಗೌಡ ಪಾಟೀಲ್ ನೇತೃತ್ವದಲ್ಲಿ ದಾಳಿ ನಡೆಸಿ, ಬಂಧಿಸಿದ್ದಾರೆ. ಬಳಿಕ ಪಿಡಿಒ ಸ್ವಾಮಿಲಿಂಗಪ್ಪ ಅವರಿಂದ ಹಣ ವಶಕ್ಕೆ ಪಡೆದು, ವಿಚಾರಣೆಗೆ ಒಳಪಡಿಸಿದ್ದಾರೆ.

    ಇದೇ ತಿಂಗಳ 11ರಂದು ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರಸಭೆಯ ಸಿಬ್ಬಂದಿ ಉಲ್ಲಾಸ್ ನಾಯ್ಕ್ ಹಾಗೂ ಸುರೇಶ್ ಖಾತಾ ಉತಾರ ಹಾಗೂ ಫಾರಂ ನಂಬರ್ 3 ನೀಡಲು ಲಂಚ ಕೇಳಿ, ಹಣ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳ ಕೈಗೆ ಸಿಕ್ಕಿದ್ದರು. ಇಬ್ಬರು ಸೇರಿ ಕಚೇರಿಯಲ್ಲಿ ಸಂದೇಶ್ ನಾಯ್ಕ್ ಎಂಬವರಿಂದ ಲಂಚ ಪಡೆಯುತ್ತಿದ್ದರು. ಖಚಿತ ಮಾಹಿತಿ ಆಧಾರದ ಮೇಲೆ ಎಸಿಬಿ ಡಿವೈಎಸ್‍ಪಿ ಗಿರೀಶ್ ನೇತೃತ್ವದ ತಂಡವು ದಾಳಿ ನಡೆಸಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಖಾತಾ ಉತಾರ ನೀಡಲು ಲಂಚ ಕೇಳಿದ್ದ ನಗರಸಭೆ ಸಿಬ್ಬಂದಿ ಬಿದ್ರು ಎಸಿಬಿ ಬಲೆಗೆ!

    ಖಾತಾ ಉತಾರ ನೀಡಲು ಲಂಚ ಕೇಳಿದ್ದ ನಗರಸಭೆ ಸಿಬ್ಬಂದಿ ಬಿದ್ರು ಎಸಿಬಿ ಬಲೆಗೆ!

    ಕಾರವಾರ: ಖಾತಾ ಉತಾರ ಹಾಗೂ ಫಾರಂ ನಂಬರ್ 3 ನೀಡಲು ಲಂಚ ಕೇಳಿ, ಇಂದು ಹಣ ಸ್ವೀಕರಿಸುತ್ತಿದ್ದ ವೇಳೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ನಗರಸಭೆಯ ಇಬ್ಬರು ಸಿಬ್ಬಂದಿ ಎಸಿಬಿ ಅಧಿಕಾರಿಗಳ ಕೈಗೆ ಸಿಕ್ಕಿದ್ದಾರೆ.

    ಕಾರವಾರದ ನಗರಸಭೆ ತೆರಿಗೆ ವಸೂಲಿ ಸಹಾಯಕಾರಗಿ ಕೆಲಸ ಮಾಡುತ್ತಿರುವ ಉಲ್ಲಾಸ್ ನಾಯ್ಕ್ ಹಾಗೂ ಸುರೇಶ್ ಎಂಬುವರೇ ಎಸಿಬಿ ದಾಳಿಗೆ ಸಿಕ್ಕಿಬಿದ್ದವರು. ಇಬ್ಬರು ಖಾತಾ ಉತ್ತರ ಹಾಗೂ ಫಾರಂ ನಂಬರ್ 3 ನೀಡಲು 4 ಸಾವಿರ ರೂ. ಕೊಡಬೇಕು ಅಂತಾ ಸಂದೇಶ್ ನಾಯ್ಕ್ ಎನ್ನುವವರಿಗೆ ಹೇಳಿದ್ದರು.

    ಇಂದು ಕಚೇರಿಯಲ್ಲಿ ಸಂದೇಶ್ ನಾಯ್ಕ್ ಅವರಿಂದ ಉಲ್ಲಾಸ್ ಹಾಗೂ ಸುರೇಶ್ ಲಂಚ ಪಡೆಯುತ್ತಿದ್ದರು. ಖಚಿತ ಮಾಹಿತಿ ಆಧಾರದ ಮೇಲೆ ಎಸಿಬಿ ಡಿವೈಎಸ್ ಪಿ.ಗಿರೀಶ್ ನೇತೃತ್ವದ ತಂಡವು ದಾಳಿ ನಡೆಸಿದೆ. ಈ ವೇಳೆ ಇಬ್ಬರು ಸಿಕ್ಕಿಬಿದ್ದಿದ್ದು, ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಠಾಣೆಯಲ್ಲೇ ಲಂಚ ಪಡೆಯುತ್ತಿದ್ದ ಇನ್ಸ್‌ಪೆಕ್ಟರ್, ಪೇದೆ ಎಸಿಬಿ ಬಲೆಗೆ

    ಠಾಣೆಯಲ್ಲೇ ಲಂಚ ಪಡೆಯುತ್ತಿದ್ದ ಇನ್ಸ್‌ಪೆಕ್ಟರ್, ಪೇದೆ ಎಸಿಬಿ ಬಲೆಗೆ

    ಬೆಂಗಳೂರು: ಪೊಲೀಸ್ ಠಾಣೆಯಲ್ಲಿಯೇ 30 ಸಾವಿರ ರೂ. ಲಂಚ ಪಡೆಯುತ್ತಿದ್ದ ಇನ್ಸ್‌ಪೆಕ್ಟರ್ ಹಾಗೂ ಪೇದೆ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಬಲೆಗೆ ಬಿದ್ದಿದ್ದಾರೆ.

    ಬಾಣಸವಾಡಿ ಠಾಣೆಯ ಇನ್ಸ್‌ಪೆಕ್ಟರ್ ಡಿ.ಎಚ್. ಮುನಿಕೃಷ್ಣ ಮತ್ತು ಪೇದೆ ಎಚ್.ಸಿ.ಉಮೇಶ್ ಎಸಿಬಿ ಬಲೆಗೆ ಸಿಕ್ಕಿಬಿದ್ದ ಪೊಲೀಸರು. ಸ್ನೂಕರ್ ಆಟ ನಡೆಸುತ್ತಿದ್ದ ಬಾಲರಾಜ್ ಲಂಚ ನೀಡಿದ ಆರೋಪಿ.

    ನಡೆದದ್ದು ಏನು?
    ಬಾಣಸವಾಡಿಯ ಹೆಚ್‍ಬಿಆರ್ ಲೇಔಟ್‍ನಲ್ಲಿ ಬಾಲರಾಜ್ ಎಂಬವರು ಸ್ನೂಕರ್ ನಡೆಸುತ್ತಿದ್ದರು. ಇದಕ್ಕೆ ಅವಕಾಶ ನೀಡಲು ಪ್ರತಿ ತಿಂಗಳು 1 ಲಕ್ಷ ರೂ. ಕೊಡಬೇಕೆಂದು ಡಿ.ಎಚ್.ಮುನಿಕೃಷ್ಣ ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಅಡ್ವಾನ್ಸ್ ಹಣವಾಗಿ ಬಾಲರಾಜ್ 30 ಸಾವಿರ ರೂ. ನೀಡಲು ಠಾಣೆಗೆ ಬಂದಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ. ಹಣ ಪಡೆಯುವಾಗ ಮುನಿಕೃಷ್ಣನ ಜೊತೆಗಿದ್ದ ಎಚ್.ಸಿ.ಉಮೇಶ್ ಕೂಡ ಇದ್ದರು.

    ಬೆಂಗಳೂರು ಎಸಿಬಿ ವಿಭಾಗದ ಅಧಿಕಾರಿಗಳಾದ ಲಕ್ಷ್ಮೀನಾರಾಯಣ ಹಾಗೂ ಬಾಲಕೃಷ್ಣ ನೇತೃತ್ವದ ತಂಡವು ಖಚಿತ ಮಾಹಿತಿ ಪಡೆದು, ಬಾಣಸವಾಡಿ ಠಾಣೆ ಮೇಲೆ ದಾಳಿ ನಡೆಸಿತ್ತು. ಲಂಚ ಪಡೆಯುತ್ತಿರುವಾಗಲೇ ಆರೋಪಿಗಳನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಅವರನ್ನು ಎರಡು ಗಂಟೆಗಳ ಕಾಲ ತೀವ್ರ ವಿಚಾರಣೆಗೆ ಒಳಪಡಿಸಿದ್ದು, ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶಿರಾಡಿ ಘಾಟ್ ಸಂಚಾರ ನಿಷೇಧವಿದ್ದರೂ ಹಣ ಪಡೆದು ಲಾರಿ ಬಿಡುತ್ತಿರುವ ಪೊಲೀಸರು

    ಶಿರಾಡಿ ಘಾಟ್ ಸಂಚಾರ ನಿಷೇಧವಿದ್ದರೂ ಹಣ ಪಡೆದು ಲಾರಿ ಬಿಡುತ್ತಿರುವ ಪೊಲೀಸರು

    ಹಾಸನ: ಅನಿರ್ಧಿಷ್ಟಾವಧಿಗೆ ಶಿರಾಡಿ ಘಾಟ್ ನಲ್ಲಿ ವಾಹನ ಸಂಚಾರ ನಿಷೇಧವಿದ್ದರೂ, ಪೊಲೀಸರು ಹಣ ಪಡೆದು ಲಾರಿಗಳನ್ನು ಬಿಡುತ್ತಿದ್ದಾರೆ. ಇನ್ನು ಇದನ್ನು ಪ್ರಶ್ನಿಸಲು ಹೋದ ಪಂಜಾಬ್ ಚಾಲಕನ ಮೇಲೆಯೇ ಪೊಲೀಸರು ದರ್ಪ ಮೆರೆದಿದ್ದಾರೆ.

    ಸಕಲೇಶಪುರದ ಗುಂಡ್ಯ ಚೆಕ್‍ಪೋಸ್ಟ್ ಬಳಿ ಶಿರಾಡಿ ಘಾಟ್ ಮೂಲಕ 12 ಚಕ್ರದ ಲಾರಿಗಳ ಸಂಚಾರಕ್ಕೆ ಪೊಲೀಸರು ಬಿಡುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಪಂಜಾಬ್ ಮೂಲದ ಲಾರಿ ಚಾಲಕ, ಪೊಲೀಸರು 500 ರೂ. ಪಡೆದ ನಿಷೇಧ ಇದ್ದರೂ ವಾಹನ ಬಿಡುತ್ತಿದ್ದಾರೆ. ನಾವು ಕಳೆದ ಹತ್ತು ದಿನಗಳಿಂದ ಇಲ್ಲಿ ಕಾದು ಕುಳಿತರೂ ಸಂಚಾರಕ್ಕೆ ಬಿಟ್ಟಿಲ್ಲ. ಆದರೆ ಈಗ ಹಣ ಪಡೆದು ಪೊಲೀಸರು ಬಿಡುತ್ತಿದ್ದಾರೆ ಎಂದು ಆರೋಪಿಸುತ್ತಾ ಮೊಬೈಲ್‍ನಲ್ಲಿ ವಿಡಿಯೋ ಮಾಡುತ್ತಿದ್ದರು. ಇದನ್ನು ಓದಿ: ಮಂಗಳೂರು-ಶಿರಾಡಿ-ಬೆಂಗಳೂರು ಸಂಚಾರಕ್ಕೆ ಸದ್ಯಕ್ಕೆ ಶುರುವಾಗಲ್ಲ!

    ಪೊಲೀಸರು ಚಾಲಕನಿಂದ ಮೊಬೈಲ್ ಕಿತ್ತುಕೊಳ್ಳಲು ಯತ್ನಿಸಿದ್ದು. ಆದರೆ ಆತ ಮೊಬೈಲ್ ನೀಡದೆ, ನಾನು ಜಿಲ್ಲಾಧಿಕಾರಿಗೆ ದೂರು ನೀಡುತ್ತೇನೆ ಎಂದು ಹೇಳಿದರು. ಆದರೆ ಯಾವುದಕ್ಕೂ ಕ್ಯಾರೆ ಅನ್ನದ ಪೊಲೀಸರು, ಜಿಲ್ಲಾಧಿಕಾರಿ ಅಲ್ಲ ನಿಮ್ಮಪ್ಪಗೂ ಹೇಳು ಎಂದು ಅವಾಚ್ಯ ಪದಗಳಿಂದ ಬೈದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://youtu.be/veR3b6PZiZ0

  • ದೂರು ನೀಡಲು ಬಂದವನ ಬಳಿ ಲಂಚ ಪಡೆದ ಪೊಲೀಸ್ ಪೇದೆ! -ವಿಡಿಯೋ ನೋಡಿ

    ದೂರು ನೀಡಲು ಬಂದವನ ಬಳಿ ಲಂಚ ಪಡೆದ ಪೊಲೀಸ್ ಪೇದೆ! -ವಿಡಿಯೋ ನೋಡಿ

    ವಿಜಯಪುರ: ಠಾಣೆಗೆ ದೂರು ನೀಡಲು ಆಗಮಿಸಿದ್ದ ದೂರುದಾರನಿಂದಲೇ ಮುಖ್ಯ ಪೊಲೀಸ್ ಪೇದೆಯೋರ್ವ ಲಂಚ ವಸೂಲಿ ಮಾಡಿದ್ದು ಇದೀಗ ಆ ವಿಡಿಯೋ ವೈರಲ್ ಆಗಿದೆ.

    ಬಸವನಬಾಗೇವಾಡಿ ಪೊಲೀಸ್ ಠಾಣೆಯ ಪೇದೆ ಪರಶುರಾಮ್ ಕಟಬರ್ ವಾಹನ ಬಾಡಿಗೆಗೆ ಎಂದು ಹೇಳಿ ಲಂಚವನ್ನು ಪಡೆದಿದ್ದಾನೆ.

    ಕೆಲ ದಿನಗಳ ಹಿಂದೆ ತಳೇವಾಡ ಗ್ರಾಮದ ಅಶೋಕ ಎಂಬುವವರು ಗುತ್ತಿಗೆದಾರನೋರ್ವನ ಮೇಲೆ ದೂರು ನೀಡಲು ಆಗಮಿಸಿದ್ದರು. ದೂರನ್ನು ಸ್ವೀಕರಿಸಿದ ನಂತರ ಆರೋಪಿಯನ್ನು ಬಂಧಿಸಿ ಕರೆ ತಂದು ವಿಚಾರಣೆ ಮಾಡಲು ವಾಹನ ತೆಗೆದುಕೊಂಡು ಹೋಗಬೇಕು. ಹೀಗಾಗಿ ಮುಖ್ಯ ಪೇದೆ ಪರಶುರಾಮ್ ವಾಹನದ ಬಾಡಿಗೆಗೆ ಹಣ ನೀಡಬೇಕೆಂದು ಸಪೀಡಿಸಿದ್ದಾನೆ. ಇಲ್ಲವಾದರೆ ತನಿಖೆ ವಿಳಂಬವಾಗುತ್ತದೆ. ನಾವು ಕೈಯಿಂದ ಹಣ ಹಾಕಿ ವಾಹನ ಬಾಡಿಗೆ ಮಾಡಿಕೊಂಡು ಹೋಗಿ ಆರೋಪಿಯನ್ನು ಕರೆ ತರಲು ಆಗುವುದಿಲ್ಲವೆಂದು ಬೆದರಿಸಿ ಹಣ ಪಡೆದಿದ್ದಾನೆ.

    ಗುತ್ತಿಗೆದಾರನ ಕಾಮಗಾರಿಯ ವಾಹನಗಳನ್ನು ತನ್ನ ಜಮೀನಿನಲ್ಲಿ ಹೋಗಲು ಅಶೋಕ ಅನುಮತಿ ನೀಡಿದ್ದರು. ಆದರೆ ಗುತ್ತಿಗೆದಾರ ಕಾಮಗಾರಿ ಮುಗಿದ ಬಳಿಕ ಪರಿಹಾರದ ಹಣ ನೀಡದೇ ಸತಾಯಿಸಿದ್ದನು. ಇದನ್ನು ಪ್ರಶ್ನಿಸಿ ಗುತ್ತಿಗೆದಾರನ ಮೇಲೆ ದೂರು ನೀಡಲು ಆಗಮಿಸಿದ್ದ ವೇಳೆ ಮುಖ್ಯ ಪೇದೆಯ ಧನದಾಹ ಬಯಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=Tw2RFpT6AJk

  • ಕೋರ್ಟ್ ಆವರಣದಲ್ಲಿಯೇ ಖಾಕಿಯ ಲಂಚಾವತಾರ

    ಕೋರ್ಟ್ ಆವರಣದಲ್ಲಿಯೇ ಖಾಕಿಯ ಲಂಚಾವತಾರ

    -ವಾರೆಂಟ್ ಜಾರಿಯಾದ ಆರೋಪಿಯಿಂದ ಲಂಚ

    ಬಳ್ಳಾರಿ: ವಾರೆಂಟ್ ಜಾರಿಯಾಗಿದ್ದ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಬೇಕಾದ ಪೊಲೀಸರೇ ಆತನಿಂದಲೇ ಹಣ ಪಡೆದು ನ್ಯಾಯಾಲಯಕ್ಕೆ ಮೋಸ ಮಾಡಿದ ಘಟನೆ ಬಳ್ಳಾರಿಯಲ್ಲಿ ನಡೆದಿದೆ.

    ನಗರದ ಹನುಮಂತ ಎನ್ನುವ ಆರೋಪಿಗೆ ಮಟ್ಕಾ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ನ್ಯಾಯಾಲಯ ವಾರೆಂಟ್ ಜಾರಿ ಮಾಡಿತ್ತು. ಆದರೆ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಬೇಕಾದ ಪೊಲೀಸರು ಆರೋಪಿ ಹನುಮಂತ ಊರಿನಲ್ಲಿ ಇಲ್ಲ ಅಂತಾ ನ್ಯಾಯಾಲಯಕ್ಕೆ ಹೇಳಲು ಆತನಿಂದ ಹಣ ಪಡೆದಿದ್ದಾರೆ ಎಂಬ ಆರೋಪ ಕೇಳಿ ಬಂದಿವೆ.

    ನ್ಯಾಯಾಲಯದ ಆವರಣದಲ್ಲೆ ಬಳ್ಳಾರಿಯ ಗಾಂಧಿನಗರ ಪೊಲೀಸ್ ಠಾಣೆಯ ಪೇದೆಗಳಾದ ಶ್ರೀನಿವಾಸ್ ಹಾಗೂ ಮುಜೀಬ್ ಎಂಬವರು ಆರೋಪಿಯಿಂದ ನ್ಯಾಯಾಲಯದ ಆವರಣದಲ್ಲೆ ಹಣ ಪಡೆದಿದ್ದಾರೆ. ಈ ಎಲ್ಲ ದೃಶ್ಯಗಳು ಮೊಬೈಲಿನಲ್ಲಿ ಸೆರೆಯಾಗಿವೆ.

    ಆರೋಪಿ ಹನುಮಂತ ನಿಂದ ನ್ಯಾಯಲಯದ ಆವರಣದಲ್ಲಿ ಎರಡು ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಪೊಲೀಸ್ ಪೇದೆಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಪೇದೆಗಳ ವಿರುದ್ಧ ಹಿರಿಯ ಅಧಿಕಾರಿಗಳು ಎನೂ ಕ್ರಮ ಕೈಗೊಳ್ಳುತ್ತಾರೆ ಅನ್ನೋದು ಇದೀಗ ಕುತೂಹಲ ಮೂಡಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಚಿಕ್ಕಬಳ್ಳಾಪುರದಲ್ಲಿ ಎಸಿಬಿ ಬಲೆಗೆ ಬಿದ್ದ ಪೊಲೀಸ್ ಪೇದೆ!

    ಚಿಕ್ಕಬಳ್ಳಾಪುರದಲ್ಲಿ ಎಸಿಬಿ ಬಲೆಗೆ ಬಿದ್ದ ಪೊಲೀಸ್ ಪೇದೆ!

    ಚಿಕ್ಕಬಳ್ಳಾಪುರ: ಗ್ರಾನೈಟ್ ಫ್ಯಾಕ್ಟರಿ ಮ್ಯಾನೇಜರ್ ಬಳಿಯಿಂದ ಲಂಚ ಪಡೆಯುತ್ತಿದ್ದ ಪೊಲೀಸ್ ಪೇದೆಯೋರ್ವರು ಎಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.

    ಚಂದ್ರಶೇಖರ್ ಎಸಿಬಿ ಬಲೆಗೆ ಬಿದ್ದ ಪೊಲೀಸ್ ಪೇದೆ. ಇವರು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

    ದಿಬ್ಬೂರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ದಿಬ್ಬೂರಹಳ್ಳಿ- ಸಾದಲಿ ಮಾರ್ಗದ ನಡುವೆ ಇರುವ ವಿಶಾಲಾಕ್ಷಿ ಸ್ಟೋನ್ ಆರ್ಟ್ ಗ್ರಾನೈಟ್ ಫ್ಯಾಕ್ಟರಿ ಮ್ಯಾನೇಜರ್ ಶಂಕರ್ ಎಂಬವರ ಬಳಿ 40,000 ಹಣಕ್ಕೆ ಪೇದೆ ಚಂದ್ರಶೇಖರ್ ಬೇಡಿಕೆ ಇಟ್ಟಿದ್ದರು. ಹೀಗಾಗಿ ಪೇದೆ ಫ್ಯಾಕ್ಟರಿ ಮುಂಭಾಗ ಹಣ ಪಡೆಯುವಾಗ ರೆಡ್ ಹ್ಯಾಂಡಾಗಿ ಚಿಕ್ಕಬಳ್ಳಾಪುರ ಎಸಿಬಿ ಅಧಿಕಾರಿಗಳ ಬಲೆಗೆ ಸಿಕ್ಕಿ ಬಿದ್ದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv