Tag: ಲಂಚ

  • ಮಗಳ ಶವ ಪರೀಕ್ಷೆಗೆ ಲಂಚ ವಸೂಲಿ; ಕಣ್ಣೀರಿಟ್ಟ ಮಾಜಿ ಸಿಎಫ್‌ಒ – ಎಸ್‌ಐ, ಕಾನ್‌ಸ್ಟೇಬಲ್ ಅಮಾನತು

    ಮಗಳ ಶವ ಪರೀಕ್ಷೆಗೆ ಲಂಚ ವಸೂಲಿ; ಕಣ್ಣೀರಿಟ್ಟ ಮಾಜಿ ಸಿಎಫ್‌ಒ – ಎಸ್‌ಐ, ಕಾನ್‌ಸ್ಟೇಬಲ್ ಅಮಾನತು

    – ಅಂಬುಲೆನ್ಸ್ ಚಾಲಕ, ಪೊಲೀಸ್, ಸ್ಮಶಾನ ಸಿಬ್ಬಂದಿ, ಸರ್ಕಾರಿ ಅಧಿಕಾರಿಗಳಿಗೆ ಲಂಚ ಕೊಟ್ಟ ಆರೋಪ
    – ಮಗಳ ಕಣ್ಣು ದಾನ ಮಾಡಿ, ಲಂಚ ಕೊಟ್ಟು ತಂದೆ ಕಣ್ಣೀರು

    ಬೆಂಗಳೂರು: ಮೃತ ಮಗಳ ಶವ ಪರೀಕ್ಷೆ ಮಾಡಿಸಲು ಹಣ ವಸೂಲಿ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮಗಳ ಸಾವಿನ ನೋವಿನಲ್ಲಿದ್ದ ತಂದೆಗೆ ಲಂಚದ ಕಾಟ ಕೊಟ್ಟಿದ್ದ ವಿಚಾರ ಬೆಳಕಿಗೆ ಬಂದಿದೆ.

    ಅಕ್ಷಯ ಎಂಬ ಯುವತಿ ಮಿದುಳು ರಕ್ತಸ್ರಾವದಿಂದ ಮೃತಪಟ್ಟಿದ್ದರು. ಮಗಳ ಸಾವಿನ ವಿಚಾರ ತಿಳಿದು ತಂದೆ-ತಾಯಿ ಮುಂಬೈನಿಂದ ಬಂದಿದ್ದರು. ಶವ ಪರೀಕ್ಷೆ ಮಾಡಲು ಲಂಚ ಸ್ವೀಕರಿಸಲಾಗಿದೆ. ಇದರಿಂದ ಬೇಸತ್ತು ಯುವತಿ ತಂದೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಪುತ್ರಿ ಸಾವಿನ ಶೋಕದಲ್ಲಿದ್ದ 64 ವಯಸ್ಸಿನ ತಂದೆ ಕರಾಳ ಅನುಭವ ಬಿಚ್ಚಿಟ್ಟಿದ್ದಾರೆ. ಇದನ್ನೂ ಓದಿ: RSS ಪಥಸಂಚಲನದಲ್ಲಿ ಭಾಗಿಯಾಗಿದ್ದ ಪಿಡಿಒ ಅಮಾನತು ಆದೇಶಕ್ಕೆ ಕೆಎಟಿ ತಡೆ

    ಪ್ರಕರಣ ಏನು?
    ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ನಿವೃತ್ತ ಸಿಎಫ್‌ಒ ಶಿವಕುಮಾರ್ ಅವರ ಮಗಳು ಅಕ್ಷಯ ಸೆ.18 ರಂದು ಮಿದುಳು ರಕ್ತಸ್ರಾವದಿಂದ ಮೃತಪಟ್ಟಿದ್ದರು. ಮಗಳ ಸಾವಿನ ವಿಚಾರ ತಿಳಿದು ತಂದೆ-ತಾಯಿ ಮುಂಬೈನಿಂದ ಬೆಂಗಳೂರಿಗೆ ಬಂದಿದ್ದರು. ಶವ ಸಾಗಿಸಲು ಅಂಬುಲೆನ್ಸ್ ಚಾಲಕ ನಿಗದಿತ 5 ಸಾವಿರಕ್ಕಿಂತ 2,000 ರೂ. ಹೆಚ್ಚುವರಿ ಹಣ ಪಡೆದಿದ್ದ. ಕಸುವಿನಹಳ್ಳಿಯಿಂದ ಕೋರಮಂಗಲ ಆಸ್ಪತ್ರೆಗೆ ಶವ ಸಾಗಿಸಲು 5 ಸಾವಿರ ರೂ.. ನಂತರ ಮರಣೋತ್ತರ ಪರೀಕ್ಷೆ ವೇಳೆ ಪೊಲೀಸರು ಹಣಕ್ಕಾಗಿ ಒರಟಾಗಿ ವರ್ತಿಸಿದ್ದಾರೆ. ಆದರೆ, ಶಿವಕುಮಾರ್ ಸ್ನೇಹಿತ ಮಧ್ಯಪ್ರವೇಶಿಸಿದಾಗ ಪೊಲೀಸರು ಸುಮ್ಮನಾಗಿದ್ದಾರೆ ಎನ್ನಲಾಗಿದೆ.

    ಮಗಳ ಕಣ್ಣುಗಳನ್ನ ದಾನ ಮಾಡಿ ಸ್ಮಶಾನದಲ್ಲೂ ಶಿವಕುಮಾರ್ ಹಣ ನೀಡಿದ್ದಾರೆ. ಆದರೆ, ಮರಣೋತ್ತರ ಪರೀಕ್ಷೆ ಬಳಿಕ ಪೊಲೀಸ್ ಠಾಣೆಗೆ ಹೋಗಿದ್ರು. ಈ ವೇಳೆ ಠಾಣೆಯಲ್ಲೇ UDR ಕಾಪಿ ಪಡೆಯಲು ಕೂಡ 5 ಸಾವಿರ ರೂ. ಲಂಚ ಪಡೆದಿದ್ದಾರೆ. ಬಳಿಕ ಮರಣ ಪ್ರಮಾಣ ಪತ್ರ ಪಡೆಯಲು ಸಮೀಕ್ಷೆ ಇದ್ದ ಕಾರಣ 2 ಸಾವಿರ ಲಂಚ ಕೊಟ್ಟಿದ್ದಾರೆ. ಈ ಎಲ್ಲಾ ವಿಚಾರಗಳಿಂದ ಬೇಸತ್ತು ಸೋಷಿಯಲ್ ಮೀಡಿಯಾದಲ್ಲಿ ಶಿವಕುಮಾರ್ ಅವರು ಪೋಸ್ಟ್ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ನೆಲಮಂಗಲ | ಪಂಚಾಯತ್ ಲೈಬ್ರೆರಿಯನ್ ಆತ್ಮಹತ್ಯೆ ಕೇಸ್ – PDO ಅಮಾನತು

    ನನ್ನಲ್ಲಿ ಹಣವಿತ್ತು. ಹಾಗಾಗಿ ನಾನು ಹಣ ಪಾವತಿಸಿದೆ. ಆದರೆ ಬಡವರು ಏನು ಮಾಡುತ್ತಾರೆ ಎಂದು ಶಿವಕುಮಾರ್ ಪ್ರಶ್ನಿಸಿದ್ದಾರೆ. ಅಂಬುಲೆನ್ಸ್ ಚಾಲಕ, ಪೊಲೀಸ್, ಸ್ಮಶಾನ ಸಿಬ್ಬಂದಿ ಮತ್ತು ಸರ್ಕಾರಿ ಅಧಿಕಾರಿಗಳಿಗೆ ಪ್ರತಿ ಹಂತದಲ್ಲೂ ಲಂಚ ನೀಡಿರುವ ಆರೋಪ ಮಾಡಿದ್ದಾರೆ. ಇದಾದ ಕೆಲ ಹೊತ್ತಲ್ಲಿ ಪೋಸ್ಟ್ ಡಿಲೀಟ್ ಮಾಡಿದ್ದಾರೆ. ಶಿವಕುಮಾರ್ ಪೋಸ್ಟ್, ಆರೋಪ ಹಿನ್ನೆಲೆ ಪೊಲೀಸರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಲಾಗಿದೆ. ಹಣ ಪಡೆದಿರುವುದು ತನಿಖೆಯಲ್ಲಿ ಖಾತರಿಯಾಗಿದೆ. ಹೀಗಾಗಿ, ಸಬ್ ಇನ್ಸ್ಪೆಕ್ಟರ್ ಸಂತೋಷ್, ಕಾನ್‌ಸ್ಟೇಬಲ್ ಗೋರಕ್ ನಾಥ್ ಅವರನ್ನು ಅಮಾನತು ಮಾಡಿ ವೈಟ್‌ಫೀಲ್ಡ್ ಡಿಸಿಪಿ ಪರಶುರಾಮ್ ಆದೇಶ ಹೊರಡಿಸಿದ್ದಾರೆ.

  • 1.25 ಲಕ್ಷ ಹಣ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಮಹಿಳಾ ಪಿಎಸ್‌ಐ

    1.25 ಲಕ್ಷ ಹಣ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಮಹಿಳಾ ಪಿಎಸ್‌ಐ

    ಬೆಂಗಳೂರು: ಲಂಚದ ರೂಪದಲ್ಲಿ 1.25 ಲಕ್ಷ ರೂ. ಹಣವನ್ನು ಪಡೆಯುತ್ತಿದ್ದ ವೇಳೆ ಮಹಿಳಾ ಪಿಎಸ್‌ಐ‌ (Lady PSI) ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಬೆಂಗಳೂರಿನ (Bengaluru) ಗೋವಿಂದಪುರ  ಪೊಲೀಸ್ ಠಾಣೆಯಲ್ಲಿ (Govindapura Police Station) ನಡೆದಿದೆ.

    ಸಾವಿತ್ರಿ ಬಾಯಿ ಲೋಕಾಯುಕ್ತ ಬಲೆಗೆ ಬಿದ್ದ ಪಿಎಸ್‌ಐ. ಕೇಸ್ ಒಂದರಲ್ಲಿ ಬಿ ರಿಪೋರ್ಟ್ ಹಾಕಲು ಸಾವಿತ್ರಿ ಬಾಯಿ ಹಣಕ್ಕೆ ಬೇಡಿಕೆಯಿಟ್ಟಿದ್ದರು. ಮೊಹಮ್ಮದ್ ಯೂನಸ್ ಎಂಬವರು ನೀಡಿದ ದೂರಿನ ಮೇರೆಗೆ ಸಾವಿತ್ರಿ ಬಾಯಿಯನ್ನು ಟ್ರ್ಯಾಪ್ ಮಾಡಲಾಗಿದೆ. ಇದನ್ನೂ ಓದಿ: D-CET ಶುಲ್ಕ ಪಾವತಿಗೆ ದಿನಾಂಕ ವಿಸ್ತರಣೆ: KEA

    ಗೊವಿಂದಪುರ ಪೊಲೀಸ್ ಠಾಣೆಯ ಕ್ರೈಂ ನಂಬರ್ 144/25ರ ಕೇಸ್ ಸಂಬಂಧಿಸಿದಂತೆ ಬಿ ರಿಪೋರ್ಟ್ ಸಲ್ಲಿಸಲು ಸಾವಿತ್ರಿ ಬಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಈ ಸಂಬಂಧ 1.25 ಲಕ್ಷ ರೂ. ಹಣ ಪಡೆಯುವಾಗ ಲೋಕಾ ಬಲೆಗೆ ಬಿದ್ದಿದ್ದಾರೆ. ಸದ್ಯ ಲೋಕಾಯುಕ್ತ ಪೊಲೀಸರು ಸಾವಿತ್ರಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: GST ನೋಟಿಸ್; ರಾಜ್ಯ ದಿವಾಳಿಯಾದಾಗ, ಬೇಕರಿ ಎಟಿಎಂ ಆಗುತ್ತದೆ- ನಿಖಿಲ್ ಕುಮಾರಸ್ವಾಮಿ

  • ತೆರಿಗೆ ಸಂಬಂಧ ಲಂಚಕ್ಕೆ ಬೇಡಿಕೆಯಿಟ್ರೆ ಕೂಡಲೇ ಕರೆ ಮಾಡಿ – ಸಹಾಯವಾಣಿ ಬಿಡುಗಡೆ

    ತೆರಿಗೆ ಸಂಬಂಧ ಲಂಚಕ್ಕೆ ಬೇಡಿಕೆಯಿಟ್ರೆ ಕೂಡಲೇ ಕರೆ ಮಾಡಿ – ಸಹಾಯವಾಣಿ ಬಿಡುಗಡೆ

    ಬೆಂಗಳೂರು: ವಾಣಿಜ್ಯ ತೆರಿಗೆ (Commercial Tax) ಅಧಿಕಾರಿ-ಸಿಬ್ಬಂದಿ/ಬ್ರೋಕರ್‌ಗಳು ಯುಪಿಐಗೆ ಸಂಬಂಧಿಸಿದ ವಿಚಾರದಲ್ಲಿ ಲಂಚಕ್ಕಾಗಿ (Bribe) ಬೇಡಿಕೆ ಇಟ್ಟಲ್ಲಿ ತಕ್ಷಣ ಸಹಾಯವಾಣಿ ಸಂಖ್ಯೆಗೆ ಸಂಪರ್ಕಿಸುವಂತೆ ವಾಣಿಜ್ಯ ತೆರಿಗೆ ಇಲಾಖೆ ಸಹಾಯವಾಣಿ ಬಿಡುಗಡೆ ಮಾಡಿದೆ.

    ಈ ಕುರಿತು ಪತ್ರಿಕಾ ಪ್ರಕಟಣೆ ಮಾಡಿದ ವಾಣಿಜ್ಯ ತೆರಿಗೆ ಇಲಾಖೆ, ಕೆಲವು ಮಧ್ಯವರ್ತಿಗಳು ವರ್ತಕರಿಗೆ ಸಹಾಯ ಮಾಡುವ ನೆಪದಲ್ಲಿ ಹಣಕ್ಕೆ ಬೇಡಿಕೆ ಇಡುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿರುತ್ತದೆ. ಇಲಾಖೆಯು ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ತಪ್ಪಿತಸ್ಥ ಅಧಿಕಾರಿ/ಸಿಬ್ಬಂದಿ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳವುದಕ್ಕೆ ವಾಣಿಜ್ಯ ತೆರಿಗೆ ಇಲಾಖೆ ಬದ್ಧವಾಗಿರುತ್ತದೆ ಎಂದಿದೆ. ಇದನ್ನೂ ಓದಿ: ಐಸಿಸ್‌ ಮಾದರಿಯಲ್ಲಿ ಧಾರ್ಮಿಕ ಮತಾಂತರ ದಂಧೆ – 6 ರಾಜ್ಯಗಳಲ್ಲಿ 10 ಮಂದಿ ಅರೆಸ್ಟ್‌, ಬೃಹತ್‌ ಜಾಲ ಭೇದಿಸಿದ UP ಪೊಲೀಸ್‌

    ವ್ಯಾಪಾರಸ್ಥರು ಇಂತಹ ಪ್ರಕರಣಗಳನ್ನು ತಕ್ಷಣ ವಾಣಿಜ್ಯ ತೆರಿಗೆ ಇಲಾಖೆಯ ಗಮನಕ್ಕೆ ತರಲು ಸಹಾಯವಾಣಿ ಸಂಖ್ಯೆ- 1800 425 6300 (ಸಮಯ ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ರಜಾದಿನಗಳನ್ನು ಹೊರತುಪಡಿಸಿ) ಸಂಪರ್ಕಿಸುವಂತೆ ಬೆಂಗಳೂರಿನ ವಾಣಿಜ್ಯ ತೆರಿಗೆ ಇಲಾಖೆ ಕೇಂದ್ರ ಕಚೇರಿ-1ರ ಅಪರ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಯುಜಿನೀಟ್: ಆಪ್ಷನ್ ಎಂಟ್ರಿ ಆರಂಭ, ಜು.22 ಕೊನೆ ದಿನ – ಕೆಇಎ

  • ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಕದ್ರಿ ಸಂಚಾರಿ ಠಾಣೆ ಎಎಸ್‌ಐ

    ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಕದ್ರಿ ಸಂಚಾರಿ ಠಾಣೆ ಎಎಸ್‌ಐ

    – ಎಎಸ್‌ಐ ತಸ್ಲೀಂ ಸೇರಿ ಠಾಣೆಯ ಐವರು ಸಿಬ್ಬಂದಿ ಅಮಾನತು

    ಮಂಗಳೂರು: ಲಂಚ ಸ್ವೀಕರಿಸುತ್ತಿದ್ದ ವೇಳೆ ಕದ್ರಿ ಸಂಚಾರಿ ಠಾಣೆ (Kadri Traffic Police Station) ಎಎಸ್‌ಐ ಲೋಕಾಯುಕ್ತ (Lokayukta) ಬಲೆಗೆ ಬಿದ್ದಿದ್ದಾರೆ. ಕರ್ತವ್ಯಲೋಪ ಹಿನ್ನೆಲೆಯಲ್ಲಿ ಕದ್ರಿ ಸಂಚಾರಿ ಠಾಣೆ ಐವರು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.

    ಲೋಕಾಯುಕ್ತ ಬಲೆಗೆ ಬಿದ್ದ ಎಎಸ್‌ಐ ತಸ್ಲೀಂ ಆರಿಫ್ ಸೇರಿ ಐವರು ಅಮಾನತು ಮಾಡಲಾಗಿದೆ. ತಸ್ಲೀಂಗೆ ಸಹಕರಿಸಿದ ಸಿಬ್ಬಂದಿ ವಿನೋದ್‌, ಇವರಿಬ್ಬರ ಜೊತೆಗೆ ಮತ್ತೆ ಮೂವರು ಪೊಲೀಸ್ ಸಿಬ್ಬಂದಿಯಾದ ರವಿ ಹೆಚ್‌, ದೀಪಕ್‌ ಮತ್ತು ಮಹಾಂತೇಶ್‌ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಇದನ್ನೂ ಓದಿ: 10.5 ಕೋಟಿ ಮೌಲ್ಯದ ಚಿನ್ನಾಭರಣ ದರೋಡೆ ಕೇಸ್ – 12 ಆರೋಪಿಗಳು ಅರೆಸ್ಟ್

    ಭ್ರಷ್ಟಾಚಾರ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದವರ ಬಗ್ಗೆ ಮಾಹಿತಿ ಇದ್ದರೂ ಮೇಲಾಧಿಕಾರಿಗಳಿಗೆ ಮಾಹಿತಿ ನೀಡದ ಆರೋಪ ಕೇಳಿಬಂದಿದೆ. ನಿರ್ಲಕ್ಷ್ಯತನ ತೋರಿದ ಕಾರಣಕ್ಕಾಗಿ ಮೂವರು ಸಿಬ್ಬಂದಿ ಸಸ್ಪೆಂಡ್ ಮಾಡಿ ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಆದೇಶ ಹೊರಡಿಸಿದ್ದಾರೆ.

    ನಿನ್ನೆ ಮಂಗಳೂರಿನ ಕದ್ರಿ ಠಾಣೆಯಲ್ಲಿ ಲೋಕಾಯುಕ್ತ ಪೊಲೀಸರ ಕಾರ್ಯಾಚರಣೆ ನಡೆಸಿದರು. ಲಂಚ ಸ್ವೀಕರಿಸುತ್ತಿದ್ದ ಸಂಚಾರಿ ಪೊಲೀಸ್ ಸಿಬ್ಬಂದಿ ತಸ್ಲೀಂ ಬಂಧಿಸಲಾಗಿತ್ತು. ಅಪಘಾತ ಪ್ರಕರಣ ಒಂದರಲ್ಲಿ ಕಾರು ಬಿಟ್ಟುಕೊಡಲು 50 ಸಾವಿರ ಲಂಚದ ಬೇಡಿಕೆ ಇಟ್ಟಿದ್ದರು. ಬಳಿಕ ಲೈಸೆನ್ಸ್ ಹಿಂದಿರುಗಿಸಲು 5,000 ಲಂಚಕ್ಕೆ ಒತ್ತಾಯಿಸಿದ್ದರು. 5,000 ರೂಪಾಯಿ ಲಂಚದ ಹಣ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಇದನ್ನೂ ಓದಿ: ಮಸಾಲೆ ಪದಾರ್ಥ ತಯಾರಿಕಾ ಘಟಕದ ಮೇಲೆ ದಾಳಿ – 842 ಕೆಜಿ ಕಲಬೆರಕೆ ವಸ್ತುಗಳು ಜಪ್ತಿ

  • ಹಣ ಪಡೆದಿದ್ದು ನಿಜ, ಅದು ಟ್ಯಾಕ್ಸ್, ಅಭಿವೃದ್ಧಿ ಹಣ: ಲಂಚ ಆರೋಪಕ್ಕೆ ಕಮಲನಗರ ಪಿಡಿಓ ಸ್ಪಷ್ಟನೆ

    ಹಣ ಪಡೆದಿದ್ದು ನಿಜ, ಅದು ಟ್ಯಾಕ್ಸ್, ಅಭಿವೃದ್ಧಿ ಹಣ: ಲಂಚ ಆರೋಪಕ್ಕೆ ಕಮಲನಗರ ಪಿಡಿಓ ಸ್ಪಷ್ಟನೆ

    ಬೀದರ್: ಆಸ್ತಿ ನೋಂದಣಿಗಾಗಿ ಪಿಡಿಓ (PDO) ಹಣ ಪಡೆಯುತ್ತಿರುವ ವೈರಲ್ ವೀಡಿಯೋ ಮಾಧ್ಯಮಗಳಲ್ಲಿ ಪ್ರಸಾರವಾದ ಬೆನ್ನಲ್ಲೇ ಕಮಲನಗರ (Kamalanagar) ಪಿಡಿಓ ರಾಜಕುಮಾರ್ ಸ್ಪಷ್ಟನೆ ನೀಡಿದ್ದಾರೆ.

    ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಹಣ ಪಡೆದಿದ್ದು ನಿಜ, ಆದರೆ ಅದು ಟ್ಯಾಕ್ಸ್ ಮತ್ತು ಅಭಿವೃದ್ಧಿ ಹಣವಾಗಿದ್ದು 2024ರ ಅಕ್ಟೋಬರ್ 21ರಂದು ಫಲಾನುಭವಿ ಆಸ್ತಿ ಟ್ಯಾಕ್ಸ್ ಕಟ್ಟಿದ್ದಾರೆ. ಆದರೆ ಇದು ಲಂಚ ಎಂದು ಕೆಲವು ಟಿವಿ ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದು, ಅದು ಪ್ಲಾಟ್ ಆಸ್ತಿ ನೋಂದಣಿಯ ಟ್ಯಾಕ್ಸ್ ಹಣವಾಗಿದೆ. ಸಿಇಓಗೆ ದೂರು ನೀಡಿದವರು 8 ತಿಂಗಳ ಹಿಂದೆಯೇ ಈ ವೀಡಿಯೋ ಮಾಡಿದ್ದು, ಈಗ ವೈರಲ್ ಮಾಡಿ ನನ್ನ ವಿರುದ್ಧ ಪಿತೂರಿ ಮಾಡಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಹೆಲ್ಪ್‌ಲೈನ್‌ ಹೆಸರಲ್ಲಿ ವಂಚನೆ ಆರೋಪ – ಬೆಂಗಳೂರಿನ ಸಂಧ್ಯಾ ಪವಿತ್ರ ವಿರುದ್ಧ ಎಫ್‌ಐಆರ್

    ಪ್ರಕರಣ ಏನು?
    ಬೀದರ್ ಜಿಲ್ಲೆಯ ಕಮಲನಗರ ಗ್ರಾಮ ಪಂಚಾಯತಿ ಕಚೇರಿಯಲ್ಲೇ ಹಣ ಪಡೆದು ಎಣಿಸಿಕೊಳ್ಳುತ್ತಿರುವ ಪಿಡಿಓ ರಾಜಕುಮಾರ್ ವೀಡಿಯೋ ವೈರಲ್ ಆಗಿತ್ತು. ಹಣ ಪಡೆಯುತ್ತಿರುವ ವೀಡಿಯೋದೊಂದಿಗೆ ಜಿ.ಪಂ ಸಿಇಓಗೆ ಹೋರಾಟಗಾರ ದೀಲಿಪ್ ಮುದಾಳೆ ಎಂಬವರು ದೂರು ನೀಡಿದ್ದರು. ಇದನ್ನೂ ಓದಿ: ಬಂಕರ್‌ನಿಂದಲೇ ಸಂಭಾವ್ಯ ಉತ್ತರಾಧಿಕಾರಿಗಳ ಹೆಸರನ್ನು ಸೂಚಿಸಿದ ಖಮೇನಿ

  • ಹೊರಗುತ್ತಿಗೆ ಚಾಲಕನ ಲಂಚಾವತಾರದ ವಿಡಿಯೋ ವೈರಲ್ ಕೇಸ್‌ – ಪನ್ನಗ ಏಜೆನ್ಸಿ ವಿರುದ್ಧ KSRTC ನೋಟಿಸ್!

    ಹೊರಗುತ್ತಿಗೆ ಚಾಲಕನ ಲಂಚಾವತಾರದ ವಿಡಿಯೋ ವೈರಲ್ ಕೇಸ್‌ – ಪನ್ನಗ ಏಜೆನ್ಸಿ ವಿರುದ್ಧ KSRTC ನೋಟಿಸ್!

    – ʻಪಬ್ಲಿಕ್‌ ಟಿವಿʼ ವರದಿ ಬೆನ್ನಲ್ಲೇ ಕೆಎಸ್‌ಆರ್‌ಟಿಸಿ ಸ್ಪಷ್ಟನೆ

    ಚಾಮರಾಜನಗರ: ಕೆಎಸ್‌ಆರ್‌ಟಿಸಿ ಚಾಲಕರ (KSRTC Driver) ಹುದ್ದೆ ಹೊರಗುತ್ತಿಗೆ ನೌಕರಿಯಲ್ಲಿ ಲಂಚ ಕೊಟ್ಟವರಿಗೆ ಕೆಲಸ ಕೊಡುತ್ತಿದ್ದಾರೆ ಎಂಬ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಎಸ್‌ಆರ್‌ಟಿಸಿ ಸ್ಪಷ್ಟನೆ ನೀಡಿದೆ. ಅಲ್ಲದೇ ಪನ್ನಗ ಎಂಟರ್ ಪ್ರೈಸಸ್ (Pannaga Enterprises) ಏಜೆನ್ಸಿ ವಿರುದ್ಧ ನೋಟೀಸ್ ಜಾರಿಗೊಳಿಸಿದ್ದು, ನಿಮ್ಮ ಏಜೆನ್ಸಿ ಅವರೊಂದಿಗೆ ಮಾಡಿಕೊಂಡಿರುವ ಕರಾರು ಒಪ್ಪಂದವನ್ನ ಏಕೆ ರದ್ದುಗೊಳಿಸಬಾರದು? ಈ ಬಗ್ಗೆ ಸೂಕ್ತ ಸಮಜಾಯಿಷಿ ನೀಡುವಂತೆ ಸೂಚಿಸಿದೆ.

    KSRTC ಚಾಲಕರ ಹೊರಗುತ್ತಿಗೆ ನೌಕರಿಯಲ್ಲೂ ಗೋಲ್ಮಾಲ್ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಚಾಮರಾಜನಗರ ಬಸ್ ನಿಲ್ದಾಣದಲ್ಲಿ ಚಾಲಕನೊಬ್ಬ ಮಾತನಾಡಿರುವ ವೀಡಿಯೋ ವೈರಲ್ ಆಗಿತ್ತು. ಈ ಬಗ್ಗೆ ʻಪಬ್ಲಿಕ್‌ ಟಿವಿʼ ವರದಿ ಪ್ರಸಾರ ಮಾಡಿತ್ತು. ವರದಿ ಬೆನ್ನಲ್ಲೇ ಎಚ್ಚೆತ್ತ ಕೆಎಸ್‌ಆರ್‌ಟಿಸಿ ಸ್ಪಷ್ಟನೆ ನೀಡಿದೆ. ಇದನ್ನೂ ಓದಿ: 30,000 ಕೊಟ್ರೆ ಕೆಲಸ, 40,000 ಕೊಟ್ರೆ ಟ್ರ‍್ಯಾಕ್ ಟೆಸ್ಟ್ ಪಾಸ್ – KSRTC ಚಾಲಕರ ಹೊರಗುತ್ತಿಗೆ ನೌಕರಿಯಲ್ಲೂ ಗೋಲ್ಮಾಲ್?

    ನೋಟಿಸ್‌ನಲ್ಲಿ ಏನಿದೆ?
    ಕೆಎಸ್‌ಆರ್‌ಟಿಸಿ ನಿಗಮದ ಚಾಮರಾಜನಗರ ವಿಭಾಗದಲ್ಲಿ ಚಾಲಕರ ಹೊರಗುತ್ತಿಗೆಯ ನಿಯೋಜನೆಯಲ್ಲಿ ಆಕ್ರಮ ವ್ಯವಹಾರ ನಡೆಯುತ್ತಿದೆ ಎಂಬ ಸುದ್ದಿಗೂ ಕೆಎಸ್‌ಆರ್‌ಟಿಸಿಗೂ ಯಾವುದೇ ಸಂಬಂಧವಿರುವುದಿಲ್ಲ.

    KSRTC ಗೆ ಪನ್ನಗ ಏಜೆನ್ಸಿ ಹೊರಗುತ್ತಿಗೆ ಚಾಲಕರ ಸೇವೆ ಒದಗಿಸುತ್ತಿದೆ. ಚಾಮರಾಜನಗರ ಡಿಪೋಗೆ 125 ಸಿಬ್ಬಂದಿಯನ್ನು ಹೊರಗುತ್ತಿಗೆ ಆಧಾರದ ಮೇಲೆ ನಿಯೀಜಿಸಲು ಒಪ್ಪಂದವಾಗಿದೆ. ಆದ್ರೆ ಹೊರಗುತ್ತಿಗೆ ಮೇಲೆ ಚಾಲರನ್ನು ನಿಯೋಜಿಸಲು 30 ರಿಂದ 40,000 ರೂ. ವರೆಗೆ ಹಣ ಪಡೆಯುತ್ತಿದ್ದಾರೆ, ಅಲ್ಲದೇ ಅರ್ಹತಾ ಪರೀಕ್ಷೆಯಲ್ಲಿ ಭಾಗವಹಿಸದೇ ಇರುವವರನ್ನೂ ಹಣ ಪಡೆದು ಹೊರಗುತ್ತಿಗೆ ಮೇಲೆ ಚಾಲಕರಾಗಿ ನಿಯೋಜಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ಬಹು ಅಂಗಾಂಗ, ಕಿಡ್ನಿ ವೈಫಲ್ಯದಿಂದ ಬಾಣಂತಿಯರ ಸಾವು – ದಿನೇಶ್ ಗುಂಡೂರಾವ್ ಉತ್ತರ

    KSRTC ನಿಗಮದ ಕರಾರು ಒಪ್ಪಂದ ಷರತ್ತು ಮತ್ತು ನಿಬಂಧನೆಗಳಲ್ಲಿ ಹೊರಗುತ್ತಿಗೆ ಚಾಲಕರನ್ನು ನಿಯೋಜಿಸುವ ವೇಳೆ ಹಣ ಪಡೆಯುವಂತಿಲ್ಲ. ಅಲ್ಲದೇ ಚಾಲನಾ ಅರ್ಹತಾ ಪರೀಕ್ಷೆಯಲ್ಲಿ ಭಾಗವಹಿಸಿ, ತೇರ್ಗಡೆ ಹೊಂದಿದವರನ್ನು ಮಾತ್ರ ನಿಯೋಜಿಸಲಾಗುತ್ತಿದೆ. ಆದಾಗ್ಯೂ ನಿಮ್ಮದೇ ಹೊರಗುತ್ತಿಗೆ ಚಾಲಕರಿಂದ ಹಣ ಪಡೆದು ನಿಯೋಜಿಸುತ್ತಿರುವ ಬಗ್ಗೆ ವರದಿಯಾಗಿದೆ. ಆರೋಪ ಹಿನ್ನಲೆ ನಿಮ್ಮ ಏಜೆನ್ಸಿಯವರೊಂದಿಗೆ ಮಾಡಿಕೊಂಡಿರುವ ಕರಾರು ಒಪ್ಪಂದವನ್ನು ಏಕೆ ರದ್ದುಗೊಳಿಸಬಾರದು? ಎಂಬುದರ ಬಗ್ಗೆ ಸೂಕ್ತ ಸಮಜಾಯಿಷಿಯನ್ನು ಕೂಡಲೇ ನೀಡಿ, ಕಚೇರಿಗೆ ಕಳುಹಿಸಬೇಕು ಎಂದು ತಿಳಿಸಿದೆ.

    ಮುಂದುವರಿದು ಪ್ರಯಾಣಿಕರ ಸುರಕ್ಷತೆಯಲ್ಲಿ ರಾಜಿ ಇರುವುದಿಲ್ಲ. ನೇಮಕಾತಿ ವೇಳೆ ಅಭ್ಯರ್ಥಿಗೂ, ನಿಗಮಕ್ಕೂ ನೇರವಾಗಿ ಯಾವುದೇ ಪತ್ರ ವ್ಯವಹಾರ ನಡೆಯುದಿಲ್ಲವೆಂದು ಸಾರಿಗೆ ಅಧಿಕಾರಿಗಳು ಸ್ಪಷ್ಟನೆ ಕೊಟ್ಟಿದ್ದಾರೆ. ಡ್ರೈವರ್‌ಗಳು ಪನ್ನಗ ಏಜೆನ್ಸಿ ಮೂಲಕವೇ ನೇಮಕ ಆಗಿದ್ದಾರೆ ಎಂದು ಚಾಮರಾಜನಗರದ ವಿಭಾಗೀಯ ನಿಯಂತ್ರಣಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ.  ಇದನ್ನೂ ಓದಿ: NDA ಸರ್ಕಾರದ ಅವಧಿಯಲ್ಲಿ ಕರ್ನಾಟಕಕ್ಕೆ ಅತಿಹೆಚ್ಚು 2.08 ಲಕ್ಷ ಕೋಟಿ ಅನುದಾನ: ಸಂಸದ ಕೆ.ಸುಧಾಕರ್‌

  • 30,000 ಕೊಟ್ರೆ ಕೆಲಸ, 40,000 ಕೊಟ್ರೆ ಟ್ರ‍್ಯಾಕ್ ಟೆಸ್ಟ್ ಪಾಸ್ – KSRTC ಚಾಲಕರ ಹೊರಗುತ್ತಿಗೆ ನೌಕರಿಯಲ್ಲೂ ಗೋಲ್ಮಾಲ್?

    30,000 ಕೊಟ್ರೆ ಕೆಲಸ, 40,000 ಕೊಟ್ರೆ ಟ್ರ‍್ಯಾಕ್ ಟೆಸ್ಟ್ ಪಾಸ್ – KSRTC ಚಾಲಕರ ಹೊರಗುತ್ತಿಗೆ ನೌಕರಿಯಲ್ಲೂ ಗೋಲ್ಮಾಲ್?

    – ಲಂಚಾವತಾರದ ಬಗ್ಗೆ ಚಾಲಕ ಮಾತನಾಡಿದ ವೀಡಿಯೋ ವೈರಲ್

    ಚಾಮರಾಜನಗರ: ಕೆಎಸ್‌ಆರ್‌ಟಿಸಿ (KSRTC) ಚಾಲಕರ ಹೊರಗುತ್ತಿಗೆ ಹುದ್ದೆಯ ನೇಮಕಾತಿಯಲ್ಲೂ ಕೂಡ ಗೋಲ್ಮಾಲ್ ನಡೆಯುತ್ತಿದ್ಯಾ ಎಂಬ ಪ್ರಶ್ನೆ ಎದ್ದಿದೆ. ಇದಕ್ಕೆ ಪುಷ್ಠಿ ಕೊಡುವಂತೆ ಚಾಲಕನೊಬ್ಬ ಮಾತನಾಡಿರುವ ವೀಡಿಯೋ ವೈರಲ್ ಆಗಿದೆ.

    ಕೆಎಸ್‌ಆರ್‌ಟಿಸಿ ಚಾಲಕರ ಹುದ್ದೆ ಹೊರಗುತ್ತಿಗೆ ನೌಕರಿಯಲ್ಲಿ ಲಂಚ ಕೊಟ್ಟವರಿಗೆ ಕೆಲಸ ಕೊಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದರ ಬಗ್ಗೆ ಚಾಲಕನೊಬ್ಬ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ. ಹಣ ಕೊಟ್ಟರೆ ಟ್ರ‍್ಯಾಕ್ ಪರೀಕ್ಷೆ ಕೂಡ ಪಾಸ್ ಮಾಡುತ್ತಿದ್ದಾರೆ ಎಂದು ಮಾತನಾಡಿದ್ದಾರೆ. ಚಾಮರಾಜನಗರ ಬಸ್ ನಿಲ್ದಾಣದಲ್ಲಿ ಡ್ರೈವರ್ ಒಬ್ಬ ಮಾತನಾಡಿರುವ ವೀಡಿಯೋ ವೈರಲ್ ಆಗಿದೆ. ಟ್ರ‍್ಯಾಕ್ ಪರೀಕ್ಷೆ ಪಾಸ್ ಆದರೆ 30 ಸಾವಿರ ಕೊಟ್ರೆ ಸಾಕು, ಟ್ರ‍್ಯಾಕ್ ಪರೀಕ್ಷೆ ಪಾಸ್ ಆಗಿಲ್ಲ ಅಂದ್ರೆ 40 ಸಾವಿರ ಕೊಡಬೇಕೆಂದು ಮತ್ತೊಬ್ಬ ವ್ಯಕ್ತಿಗೆ ಹೇಳುತ್ತಾನೆ. ನಾನು ಕೂಡ ಹಣ ಕೊಟ್ಟು ಟ್ರ‍್ಯಾಕ್ ಪರೀಕ್ಷೆ ಪಾಸ್ ಆದೆ ಎಂದು ಡ್ರೈವರ್ ತಿಳಿಸಿದ್ದಾನೆ. ಲಂಚ ಪಡೆದು ಪರೀಕ್ಷೆ ಪಾಸ್ ಮಾಡುತ್ತಿದ್ದಾರೆ ಎಂದು ಸಾರಿಗೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಇದನ್ನೂ ಓದಿ: ಕರ್ನಾಟಕ ಪ್ರವಾಸೋದ್ಯಮ ರೋಪ್‌ವೇಗಳ ವಿಧೇಯಕ ಅಂಗೀಕಾರ

    ಇನ್ನೂ ಶಕ್ತಿ ಯೋಜನೆ ಬಳಿಕ ಸಾವಿರಾರು ಪ್ರಯಾಣಿಕರು ಬಸ್‌ನಲ್ಲಿ ಸಂಚಾರ ಮಾಡುತ್ತಿದ್ದಾರೆ. ನೂರಾರು ಜನರನ್ನು ಹೊತ್ತೊಯ್ಯುವ ಬಸ್ ಚಾಲಕನನ್ನು ಹಣ ಪಡೆದು ನೇಮಕಾತಿ ಮಾಡಿದರೆ ಜನರ ಪ್ರಾಣಕ್ಕೆ ಹೊಣೆ ಯಾರೆಂಬ ಪ್ರಶ್ನೆ ಎದ್ದಿದೆ. ಈ ಬಗ್ಗೆ ಸಾರಿಗೆ ಅಧಿಕಾರಿಗಳ ವಿರುದ್ಧ ಕನ್ನಡ ಪರ ಸಂಘಟನೆ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡ್ರೈವಿಂಗ್ ಬಾರದವರನ್ನು ಅಕ್ರಮ ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಅಪಘಾತ ಸಂಭವಿಸಿ ಜನರ ಪ್ರಾಣಕ್ಕೂ ಕೂಡ ಕುತ್ತು ಉಂಟಾಗಲಿದೆಂಬ ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿಲ್ಲ, ಇದು ಪಿಕ್ನಿಕ್‍ನಂತಿದೆ – ಬಿಜೆಪಿಯಿಂದ ಬಾಣಂತಿಯರ ಕುಟುಂಬದ ಪರವಾಗಿ ಧ್ವನಿ ಎತ್ತುವ ಕೆಲಸ: ವಿಜಯೇಂದ್ರ

    ಒಟ್ಟಿನಲ್ಲಿ ಕೆಎಸ್‌ಆರ್‌ಟಿಸಿ ಚಾಲಕರ ಹೊರಗುತ್ತಿಗೆ ನೇಮಕದಲ್ಲೂ ಕೂಡ ಅಕ್ರಮದ ವಾಸನೆ ಬಂದಿದೆ. ಬಸ್ ಸಾರಥಿಯನ್ನು ಹಣದ ಮೂಲಕ ನೇಮಕಾತಿ ಮಾಡಿಕೊಂಡ್ರೆ ಪ್ರಯಾಣಿಕರ ಗತಿಯೇನು? ಅವರ ಪ್ರಾಣಕ್ಕೆ ಗ್ಯಾರಂಟಿ ಯಾರೆಂಬ ಪ್ರಶ್ನೆ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ. ಇದರಲ್ಲಿ ಯಾರೂ ಭಾಗಿ ಆಗಿದ್ದಾರೆಂಬುದು ತನಿಖೆಯ ಮೂಲಕವಷ್ಟೇ ಹೊರಬರಬೇಕಿದೆ. ಇದನ್ನೂ ಓದಿ: ಬೆಂಗಳೂರಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಯತ್ನಿಸಿದ್ದ ವೈದ್ಯ ಸೈಯದ್‌ ದೋಷಿ -‌ NIA ವಿಶೇಷ ನ್ಯಾಯಾಲಯ ಆದೇಶ

  • ಅಧಿಕಾರಿಗಳು ಮತ್ತು ಮುಖಂಡರು ಲಂಚ ಕೇಳಿದರೆ ನನ್ನ ವಿಳಾಸಕ್ಕೆ ಪತ್ರ ಬರೆಯಿರಿ: ಡಿಕೆಶಿ

    ಅಧಿಕಾರಿಗಳು ಮತ್ತು ಮುಖಂಡರು ಲಂಚ ಕೇಳಿದರೆ ನನ್ನ ವಿಳಾಸಕ್ಕೆ ಪತ್ರ ಬರೆಯಿರಿ: ಡಿಕೆಶಿ

    ರಾಮನಗರ: ಸರ್ಕಾರಿ ಸೌಲಭ್ಯ ಕೊಡಿಸುತ್ತೇವೆ, ಕೆಲಸ ಮಾಡಿಕೊಡುತ್ತೇವೆ ಎಂದು ಅಧಿಕಾರಿಗಳು ಮತ್ತು ಮುಖಂಡರು ಜನರ ಬಳಿ ಲಂಚ (Bribe) ಕೇಳಬಾರದು. ಕೇಳಿದರೆ ಬೆಂಗಳೂರಿನ (Bengaluru) ನನ್ನ ವಿಳಾಸಕ್ಕೆ ಅವರ ಹೆಸರು ಸಹಿತ ಪತ್ರ ಬರೆಯಿರಿ ಎಂದು ಸಾರ್ವಜನಿಕರಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ತಿಳಿಸಿದ್ದಾರೆ.

    ಸಾತನೂರಿನ ಗ್ರಾಮಾಂತರ ಪ್ರೌಢಶಾಲೆ ಮೈದಾನದಲ್ಲಿ ನಡೆದ ಜನಸ್ಪಂದನ (Janaspandana) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ತಾಲೂಕಿನಲ್ಲಿ ಪಾರದರ್ಶಕವಾಗಿ ಆಡಳಿತ ನಡೆಯಬೇಕು. ನನ್ನನ್ನು ಗೆಲ್ಲಿಸಿದ ನಿಮ್ಮ ಋಣ ತೀರಿಸಬೇಕು. ಈ ಹಿಂದೆ 8 ಸಾವಿರಕ್ಕೂ ಹೆಚ್ಚು ಜನರಿಗೆ ಬಗರ್ ಹುಕುಂ ಜಮೀನು ನೀಡಿದ್ದೇವೆ. ನಿವೇಶನ, ಮನೆ ಹಂಚಿದ್ದೇವೆ. ಆದರೂ ಲೋಕಸಭಾ ಚುನಾವಣೆಯಲ್ಲಿ ಡಿ.ಕೆ.ಸುರೇಶ್ (DK Suresh) ಅವರಿಗೆ ಜನರು ಆಶೀರ್ವಾದ ಮಾಡಲಿಲ್ಲ. ಈ ಬಗ್ಗೆ ನಾನು ಹೆಚ್ಚು ಚರ್ಚೆ ಮಾಡಲು ಹೋಗುವುದಿಲ್ಲ ಎಂದರು. ಇದನ್ನೂ ಓದಿ: ಮ್ಯಾಪ್‌ ತೋರಿಸಿ ಭಾರತ ವರ, ಇರಾನ್‌ ಶಾಪ ಎಂದ ಇಸ್ರೇಲ್‌ ಪ್ರಧಾನಿ ನೆತನ್ಯಾಹು

    ಈ ಭಾಗವನ್ನು ಅಭಿವೃದ್ಧಿ ಮಾಡಿದ ಪರಿಣಾಮವಾಗಿ ಜಮೀನುಗಳ ಬೆಲೆಯೂ ಹೆಚ್ಚಾಗಿದೆ. ಎರಡು, ಮೂರು ಲಕ್ಷ ಬಾಳುತ್ತಿದ್ದ ಜಮೀನುಗಳ ಬೆಲೆ ದುಪ್ಪಟ್ಟಾಗಿದೆ. ನಾನು ಹಿಂದೆ ಜಮೀನುಗಳನ್ನು ಮಾರಬೇಡಿ ಎಂದು ಸಲಹೆ ನೀಡಿದ್ದೆ. ಆದರೂ ಒಂದಷ್ಟು ಜನ ಜಮೀನುಗಳನ್ನು ಮಾರಿಕೊಂಡಿದ್ದಾರೆ. ಈ ಭಾಗದಲ್ಲಿ 10 ಕೋಟಿ ವೆಚ್ಚದಲ್ಲಿ ಎಂಟು ಎಕರೆಯಲ್ಲಿ ಸಿಎಎಸ್‌ಆರ್ ನಿಧಿಯಿಂದ ದೊಡ್ಡ ಶಾಲೆ ನಿರ್ಮಾಣಕ್ಕೆ ಮುಂದಾಗಿದ್ದೇನೆ. ಜೊತೆಗೆ ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ನೀಡಿ ಜನರನ್ನು ಸಬಲರನ್ನಾಗಿ ಮಾಡಿದೆ ಎಂದು ತಿಳಿಸಿದರು. ಇದನ್ನೂ ಓದಿ: ನಾಲ್ವರು ವಿಕಲ ಚೇತನ ಹೆಣ್ಣು ಮಕ್ಕಳಿಗೆ ಸ್ವೀಟ್‌ನಲ್ಲಿ ವಿಷ ಕೊಟ್ಟು ತಾನೂ ಆತ್ಮಹತ್ಯೆ ಮಾಡಿಕೊಂಡ ತಂದೆ

  • ಬಿಡಿಎ ಅಕ್ರಮ ಕೇಸ್ ಮುಚ್ಚಿಹಾಕಲು ಲಂಚ ಪಡೆದ ಆರೋಪ – ಸಿಸಿಬಿ ಅಧಿಕಾರಿ ಯತೀಶ್ ಅಮಾನತು

    ಬಿಡಿಎ ಅಕ್ರಮ ಕೇಸ್ ಮುಚ್ಚಿಹಾಕಲು ಲಂಚ ಪಡೆದ ಆರೋಪ – ಸಿಸಿಬಿ ಅಧಿಕಾರಿ ಯತೀಶ್ ಅಮಾನತು

    ಬೆಂಗಳೂರು: ಬಿಡಿಎ (BDA) ಅಕ್ರಮ ಪ್ರಕರಣವನ್ನ ಮುಚ್ಚಿಹಾಕಲು ಲಂಚ ಪಡೆದ ಆರೋಪದ ಹಿನ್ನೆಲೆ ಸಿಸಿಬಿ ಪೊಲೀಸ್ (CCB Police) ಸಿಬ್ಬಂದಿ ಯತೀಶ್ ಅವರನ್ನು ಅಮಾನತು (Suspend) ಮಾಡಲಾಗಿದೆ.

    ಸಿಸಿಬಿ ಮುಖ್ಯಸ್ಥರು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದಾರೆ. ಬಿಡಿಎ ಸೈಟ್ ಅಕ್ರಮಕ್ಕೆ ಸಂಬಂಧಿಸಿದಂತೆ ಶೇಷಾದ್ರಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾದ ಬಳಿಕ ಕಮಿಷನರ್ ಗಂಭೀರವಾಗಿ ಪರಿಗಣಿಸಿ ಎಲ್ಲಾ ಕೇಸ್‌ಗಳನ್ನು ಸಿಸಿಬಿ ತನಿಖೆಗೆ ವರ್ಗಾವಣೆ ಮಾಡಿದ್ದರು.  ಇದನ್ನೂ ಓದಿ: ʻಮಹಾʼ ಪರಿಷತ್‌ ಚುನಾವಣೆಯಲ್ಲಿ ಬಿಜೆಪಿ ಮೈತ್ರಿಕೂಟಕ್ಕೆ ಗೆಲುವು; 11ರ ಪೈಕಿ 9 ಸ್ಥಾನಗಳಲ್ಲಿ ಜಯ!

    ಕೇಸ್ ಕ್ಲೋಸ್ ಮಾಡಿಸಲು ಸಿಬ್ಬಂದಿ ಯತೀಶ್ ಬಿಡಿಎ ಕೇಸ್‌ನಲ್ಲಿರುವ ಆರೋಪಿಯಿಂದ 55 ಲಕ್ಷ ರೂ. ಲಂಚ ಪಡೆದಿದ್ದರು. ಈ ಬಗ್ಗೆ ಸಿಸಿಬಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ಬಂದಿತ್ತು.  ಇದನ್ನೂ ಓದಿ: ಕಂಬಳದಲ್ಲಿ ಅಪರ್ಣಾ ಜಾಣ ನಿರೂಪಣೆ – ನೆನಪಿನ ಬುತ್ತಿ ಬಿಚ್ಚಿಟ್ಟ ಸಂಸದ ಕೋಟ

    ವಿಚಾರಣೆ ವೇಳೆ ಆರೋಪಿಯಿಂದ ಸಿಸಿಬಿ ಸಿಬ್ಬಂದಿ ಯತೀಶ್ ಹಣ ಪಡೆದಿರೋದು ಸಾಬೀತಾಗಿದೆ. ಹೀಗಾಗಿ ಸಿಸಿಬಿ ಸಿಬ್ಬಂದಿ ಯತೀಶ್ ಅವರನ್ನು ಅಮಾನತು ಮಾಡಿ ಆದೇಶಿಸಿದೆ. ಸದ್ಯ ಸಿಸಿಬಿ ಹಿರಿಯ ಅಧಿಕಾರಿಗಳು ಇಲಾಖಾ ತನಿಖೆಗೆ ಕೂಡ ಆದೇಶಿಸಿದ್ದಾರೆ. ಇದನ್ನೂ ಓದಿ: Dengue Alert: ರಾಜ್ಯದಲ್ಲಿ ಒಂದೇ ದಿನ 400ಕ್ಕೂ ಹೆಚ್ಚು ಕೇಸ್‌ ಪತ್ತೆ!

     

  • ಕನ್ನಡ ಸಿನಿಮಾ ಸೆನ್ಸಾರ್ ಮಾಡಲು ಲಂಚ ಬೇಡಿಕೆ: ಅಧಿಕಾರಿ ಸಿಬಿಐ ಬಲೆಗೆ

    ಕನ್ನಡ ಸಿನಿಮಾ ಸೆನ್ಸಾರ್ ಮಾಡಲು ಲಂಚ ಬೇಡಿಕೆ: ಅಧಿಕಾರಿ ಸಿಬಿಐ ಬಲೆಗೆ

    ಕೆಲ ತಿಂಗಳ ಹಿಂದೆಯಷ್ಟೇ ಕೇಂದ್ರ ಸೆನ್ಸಾರ್  (Censor) ಮಂಡಳಿಯಲ್ಲಿ ಲಂಚ ತಗೆದುಕೊಂಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ತಮಿಳು ನಟ ವಿಶಾಲ್ ತಮ್ಮ ಚಿತ್ರಕ್ಕೆ ಸೆನ್ಸಾರ್ ಸರ್ಟಿಫಿಕೇಟ್ ಕೊಡಲು ಮೂವರು ಅಧಿಕಾರಿಗಳು ಲಕ್ಷ ಲಕ್ಷ ರೂಪಾಯಿ ಲಂಚ ತೆಗೆದುಕೊಂಡಿದ್ದಾರೆ ಎಂದು ಸಾಕ್ಷಿ ಸಮೇತ ಹಿಡಿದುಕೊಟ್ಟಿದ್ದರು. ಸದ್ಯ ಅಧಿಕಾರಿಗಳ ವಿಚಾರಣೆ ನಡೆಯುತ್ತಿದೆ. ಈ ಘಟನೆ ಮಾಸುವ ಮುನ್ನವೇ ಕನ್ನಡದಲ್ಲೂ ಇಂಥದ್ದೊಂದು ಪ್ರಕರಣ ಬೆಳಕಿಗೆ ಬಂದಿದೆ.

    ಸಂವಿಧಾನ ಸಿನಿ ಕಂಬೈನ್ಸ್ ನಿರ್ಮಾಣದ ಅಡವಿ ಚಿತ್ರಕ್ಕೆ ಸೆನ್ಸಾರ್ ಸರ್ಟಿಫಿಕೇಟ್ ಕೊಡಲು ಪ್ರಾದೇಶಿಕ ಸೆನ್ಸಾರ್ ಅಧಿಕಾರಿ ಪ್ರಶಾಂತ್ ಕುಮಾರ್ (Prashant Kumar) ಎನ್ನುವವರು ಹನ್ನೆರಡು ಸಾವಿರ ರೂಪಾಯಿ ಬೇಡಿಕೆ ಇಟ್ಟಿದ್ದರು ಎಂದು ಹೇಳಲಾಗುತ್ತಿದೆ. ಸಿನಿಮಾದಲ್ಲಿನ ಸಬ್ ಟೈಟಲ್ ವಿಚಾರವಾಗಿ ಕ್ಯಾತೆ ತೆಗೆದಿದ್ದ ಅಧಿಕಾರಿ ಸರ್ಟಿಫಿಕೇಟ್ ನೀಡಲು ನಿರಾಕರಿಸಿದ್ದರು ಎಂದು ಹೇಳಲಾಗುತ್ತಿದ್ದು, ಚಿತ್ರ ನಿರ್ಮಾಪಕ ಟೈಗರ್ ನಾಗ್ (Tiger Naga), ಸಿಬಿಐ (CBI) ಕಚೇರಿಗೆ ತೆರಳಿ ದೂರು ಸಲ್ಲಿಸಿದ್ದರು.

    ಟೈಗರ್ ನಾಗ್ ಕೊಟ್ಟ ದೂರಿನನ್ವಯ ಸಿಬಿಐ ಅಧಿಕಾರಿಗಳು ನವೆಂಬರ್ 28ರ ಸಂಜೆ ಆರು ಗಂಟೆಗೆ ಅಧಿಕಾರಿ ಲಂಚ ಪಡೆಯುವ ಸಂದರ್ಭದಲ್ಲೇ ದಾಳಿ ಮಾಡಿದ್ದಾರೆ. ಹತ್ತಕ್ಕೂ ಹೆಚ್ಚು ಸಿಬಿಐ ಅಧಿಕಾರಿಗಳು ದಾಳಿ ಮಾಡಿ ಅಧಿಕಾರಿಯನ್ನು ವಶಕ್ಕೆ ಪಡೆದಿದ್ದಾರೆ. ನಿನ್ನೆಯಷ್ಟೇ ಮಲ್ಲೇಶ್ವರಂ ಥಿಯೇಟರ್ ವೊಂದರಲ್ಲಿ ಅಧಿಕಾರಿ ಅಡವಿ ಸಿನಿಮಾವನ್ನು ವೀಕ್ಷಿಸುತ್ತಿದ್ದರು ಎಂದು ಹೇಳಲಾಗುತ್ತಿದೆ.