Tag: ಲಂಕಾಸುರ

  • ಮಾದೇವ ನಂತರ ಲಂಕಾಸುರನಾಗಿ ಮರಿ ಟೈಗರ್ ಅಬ್ಬರ

    ಮಾದೇವ ನಂತರ ಲಂಕಾಸುರನಾಗಿ ಮರಿ ಟೈಗರ್ ಅಬ್ಬರ

    ರಿ ಟೈಗರ್ ವಿನೋದ್ ಪ್ರಭಾಕರ್ (Vinod Prabhkar) ಅಭಿನಯದ ಮಾದೇವ ಈ ವರ್ಷದ ಬಾಕ್ಸಾಫಿಸ್‌ನಲ್ಲಿ ಸದ್ದು ಮಾಡಿದ ಸಿನಿಮಾ. ಕಮರ್ಷಿಯಲ್ ಎಲಿಮೆಂಟ್ ಜೊತೆಗೆ ಫ್ಯಾಮಿಲಿ ಎಂಟರ್‌ಟೈನ್ಮೆಂಟ್‌ ಉಣಬಡಿಸಿದ ಮಾದೇವ ಸಿನಿಮಾ ಈ ವರ್ಷದ ಸಕ್ಸಸ್ ಲಿಸ್ಟ್‌ನಲ್ಲಿದೆ. ಸಿನಿಮಾದ ನಂತರ ವಿನೋದ್ ಪ್ರಭಾಕರ್ (Vinod Prabhakar) ನಟನೆಯ ಲಂಕಾಸುರ (Lankasura) ಸಿನಿಮಾ ತಂಡ ಫ್ಯಾನ್ಸ್‌ಗೆ ಗುಡ್‌ನ್ಯೂಸ್ ಕೊಟ್ಟಿದೆ.

    ಟೈಗರ್ ಟಾಕೀಸ್ ಬ್ಯಾನರ್‌ ನಡಿಯಲ್ಲಿ ವಿನೋದ್ ಪ್ರಭಾಕರ್ ಪತ್ನಿ ನಿಶಾ ವಿನೋದ್ ಪ್ರಭಾಕರ್ ಬಂಡವಾಳ ಹೂಡಿ ನಿರ್ಮಾಣ ಮಾಡುತ್ತಿದ್ದಾರೆ. ಅಂದಹಾಗೆ ಈ ಸಿನಿಮಾ ಇದೇ ವರ್ಷ ತೆರೆಗೆ ಬರಲು ಸಿದ್ಧತೆಯನ್ನ ಮಾಡುತ್ತಿದೆ. ಮಾದೇವ ಈ ವರ್ಷ ತಂದುಕೊಟ್ಟ ಸಕ್ಸಸ್‌ನ ಸಂಭ್ರಮದಲ್ಲಿರುವ ವಿನೋದ್ ಪ್ರಭಾಕರ್ ಈ ವರ್ಷಾಂತ್ಯಕ್ಕೆ ಲಂಕಾಸುರ ಸಿನಿಮಾ ತೆರೆಗೆ ತರುವ ಪ್ರಯತ್ನದಲ್ಲಿದೆ ಚಿತ್ರತಂಡ. ಈ ಖುಷಿ ವಿಚಾರವನ್ನು ವರಮಹಾಲಕ್ಷ್ಮಿ ಹಬ್ಬದ ದಿನ ಚಿತ್ರತಂಡ ಹಂಚಿಕೊಂಡಿದೆ. ಇದನ್ನೂ ಓದಿ: ಮನೋರಂಜನ್ ರವಿಚಂದ್ರನ್ ಐದನೇ ಸಿನಿಮಾಗೆ ಮುಹೂರ್ತ

    ಶಿವಭಕ್ತನಾಗಿ ಮಾದೇವ ಸಿನಿಮಾದ ಮೂಲಕ ಕರುನಾಡ ಮನಗೆದ್ದ ವಿನೋದ್ ಪ್ರಭಾಕರ್ ಲಂಕಾಸುರನಾಗಿ ಮನರಂಜನೆ ನೀಡಲು 2025ರಲ್ಲಿ ಮುಹೂರ್ತ ಇಡಲಾಗಿದೆ. ಲಂಕಾಸುರ ಸಿನಿಮಾದಲ್ಲಿ ಲೂಸ್ ಮಾದ ಯೋಗಿ, ದೇವರಾಜ್, ರವಿಶಂಕರ್, ಪಾರ್ವತಿ ಅರುಣ್ ಸೇರಿದಂತೆ ಅತಿದೊಡ್ಡ ತಾರಾಗಣ ಈ ಸಿನಿಮಾದಲ್ಲಿದೆ. ಈ ಚಿತ್ರಕ್ಕೆ ಸುಗನ್ ಅವರ ಛಾಯಾಗ್ರಾಹಣವಿದ್ದರೆ, ವಿಜೇತ್ ಕೃಷ್ಣ ಸಂಗೀತ ನಿರ್ದೇಶನವಿದೆ. ಇದನ್ನೂ ಓದಿ:ಕಾಂತಾರ ಚಾಪ್ಟರ್ 1| ಕನಕವತಿಯ ಮೊದಲ ನೋಟ ವರಮಹಾಲಕ್ಷ್ಮಿಯಂದು ಅನಾವರಣ

  • ಟೈಗರ್ ಪ್ರಭಾಕರ್ ಹುಟ್ಟುಹಬ್ಬಕ್ಕೆ  ‘ಲಂಕಾಸುರ’ ಚಿತ್ರದ ವಿಶೇಷ ಟೀಸರ್

    ಟೈಗರ್ ಪ್ರಭಾಕರ್ ಹುಟ್ಟುಹಬ್ಬಕ್ಕೆ ‘ಲಂಕಾಸುರ’ ಚಿತ್ರದ ವಿಶೇಷ ಟೀಸರ್

    ನ್ನಡದ ಹೆಸರಾಂತ ನಟ, ಟೈಗರ್ ಖ್ಯಾತಿಯ ಪ್ರಭಾಕರ್ (Tiger Prabhakar) ಹುಟ್ಟು ಹಬ್ಬದ ದಿನ ಲಂಕಾಸುರ ಸಿನಿಮಾದ ವಿಶೇಷ ಟೀಸರ್ ರಿಲೀಸ್ ಆಗಿದೆ. ತಮ್ಮ ತಂದೆಯ ಹುಟ್ಟು ಹಬ್ಬದ ದಿನದಂದು ಟೀಸರ್ ರಿಲೀಸ್ ಮಾಡುವುದಾಗಿ ಪ್ರಭಾಕರ್ ಪುತ್ರ ವಿನೋದ್ ಟೀಸರ್ ರಿಲೀಸ್ ಮಾಡುವುದಾಗಿ ಘೋಷಿಸಿದ್ದರು. ಇದು ವಿನೋದ್ ಚೊಚ್ಚಲು ನಿರ್ಮಾಣದ ಸಿನಿಮಾವಾಗಿದ್ದರಿಂದ ಸಖತ್ ಪ್ಲ್ಯಾನ್ ಮಾಡಿಯೇ ಸಿನಿಮಾವನ್ನು ಜನರಿಗೆ ಅರ್ಪಿಸುತ್ತಿದ್ದಾರೆ.

    ‘ನಮ್ಮ ನಿರ್ಮಾಣ ಸಂಸ್ಥೆ ಟೈಗರ್ ಟಾಕೀಸ್ ಲಾಂಛನದಿಂದ ನಿರ್ಮಾಣವಾಗಿರುವ ಮೊದಲ ಚಿತ್ರ ಲಂಕಾಸುರದ (Lancasura) ವಿಶೇಷ ಟೀಸರ್ ಬಿಡುಗಡೆ ಆಗಿದೆ. ನಾವು ಈ ಚಿತ್ರ ಪ್ರಾರಂಭಿಸಿದ ದಿನದಿಂದಲೂ ನಮಗೆ ನೀವು ನೀಡುತ್ತಿರುವ ಪ್ರೋತ್ಸಾಹಕ್ಕೆ ನಾವು ಚಿರ ಖುಣಿ. ನಮಗೆ ನಿಮ್ಮ ಬೆಂಬಲ ಸದಾ ಹೀಗೆ ಇರಲಿ’ ಎನ್ನುತ್ತಾರೆ ವಿನೋದ್ ಪ್ರಭಾಕರ್ (Vinod Prabhakar) ಹಾಗೂ ನಿಶಾ ವಿನೋದ್ ಪ್ರಭಾಕರ್. ಇದನ್ನೂ ಓದಿ: ʻಪೊನ್ನಿಯಿನ್ ಸೆಲ್ವನ್-2ʼ ಟ್ರೈಲರ್ ರಿಲೀಸ್: ಚೋಳಾ ಸಾಮ್ರಾಜ್ಯಕ್ಕಾಗಿ ಮುಂದುವರೆದ ಹೋರಾಟ

    ಈಗಾಗಲೇ ಲಂಕಾಸುರ  ಚಿತ್ರದ ಟೀಸರ್, ಟ್ರೇಲರ್ ಹಾಗೂ ಹಾಡುಗಳು ಕನ್ನಡ ಸಿನಿರಸಿಕರ ಮನ ಗೆದ್ದಿದೆ. ಚಿತ್ರ ಯಾವಾಗ ಬಿಡುಗಡೆಯಾಗುತ್ತದೆ?  ಎಂಬ ಕಾತುರ ಅಭಿಮಾನಿಗಳಿಗಿದೆ.  ಅನುಭವಿ ಕಲಾವಿದರ ಅಭಿನಯ ಹಾಗೂ ಉತ್ತಮ ತಂತ್ರಜ್ಞರ ಕಾರ್ಯವೈಖರಿಯಲ್ಲಿ ಲಂಕಾಸುರ ಚಿತ್ರ ಅದ್ದೂರಿಯಾಗಿ ಮೂಡಿಬಂದಿದೆ.

    ಲಂಕಾಸುರ ಪಕ್ಕಾ ಕಮರ್ಷಿಯಲ್ ಸಿನಿಮಾವಾಗಿದ್ದು, ವಿನೋದ್ ಪ್ರಭಾಕರ್ ಹೊಸ ಬಗೆಯ ಪಾತ್ರವನ್ನು ಮಾಡಿದ್ದಾರೆ. ಈ ಚಿತ್ರಕ್ಕಾಗಿಯೇ ಅವರು ವಿಶೇಷ ಗೆಟಪ್ ಕೂಡ ಹಾಕಿದ್ದಾರೆ. ಸಾಹಸ ಪ್ರಧಾನ ಚಿತ್ರವಾಗಿದ್ದು, ವಿಭಿನ್ನ ಕಥೆಯನ್ನು ಹೊತ್ತು ಪ್ರೇಕ್ಷಕರ ಮುಂದೆ ಬರಲಿದೆ.

  • ‘ಲಂಕಾಸುರ’ ಹಾಡು ರಿಲೀಸ್ ಮಾಡಿದ ನಟಿ ಮಾಲಾಶ್ರೀ

    ‘ಲಂಕಾಸುರ’ ಹಾಡು ರಿಲೀಸ್ ಮಾಡಿದ ನಟಿ ಮಾಲಾಶ್ರೀ

    ವಿನೋದ್ ಪ್ರಭಾಕರ್ ನಾಯಕರಾಗಿ ನಟಿಸಿರುವ ಹಾಗೂ ಟೈಗರ್ ಟಾಕೀಸ್ ಮೂಲಕ ನಿಶಾ ವಿನೋದ್ ಪ್ರಭಾಕರ್ (Malashree) ನಿರ್ಮಿಸಿರುವ ‘ಲಂಕಾಸುರ’ (Lancasura) ಚಿತ್ರಕ್ಕಾಗಿ ‘ಬಹದ್ದೂರ್’  ಚೇತನ್ ಕುಮಾರ್ ಬರೆದಿರುವ ‘ಮಾಡರ್ನ್ ಮಹಾಲಕ್ಷ್ಮಿ’ ಹಾಡನ್ನು ಖ್ಯಾತ ನಟಿ ಮಾಲಾಶ್ರೀ ಬಿಡುಗಡೆ ಮಾಡಿದ್ದಾರೆ. ಇತ್ತೀಚಿಗೆ ಅದ್ದೂರಿಯಾಗಿ ನಡೆದ ಈ ಹಾಡು ಬಿಡುಗಡೆ ಸಮಾರಂಭದಲ್ಲಿ ಹಿರಿಯ ನಟಿ ಶೃತಿ, ನಟ ಶ್ರೀನಗರ ಕಿಟ್ಟಿ, ನಿರ್ಮಾಪಕ ಎಂ.ಜಿ.ರಾಮಮೂರ್ತಿ, ನಿರ್ದೇಶಕ ಗುರು ದೇಶಪಾಂಡೆ ಸೇರಿದಂತೆ ಅನೇಕ ಚಿತ್ರರಂಗದ ಗಣ್ಯರು ಉಪಸ್ಥಿತರಿದ್ದರು.

    ನಾನು ವಿನೋದ್ ಪ್ರಭಾಕರ್ ಅವರ ದೊಡ್ಡ ಅಭಿಮಾನಿ. ಅವರು ಮಾಡುವ ಸಾಹಸ ಸನ್ನಿವೇಶಗಳು ನನಗೆ ತುಂಬಾ ಇಷ್ಟ. ಟೈಗರ್ ಟಾಕೀಸ್ ಮೂಲಕ ವಿನೋದ್ ಪ್ರಭಾಕರ್ ಹಾಗೂ ನಿಶಾ ವಿನೋದ್ ಪ್ರಭಾಕರ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಚಿತ್ರ ಭರ್ಜರಿ ಯಶಸ್ಸು ಕಾಣಲಿ ಎಂದು ಮಾಲಾಶ್ರೀ ಹಾರೈಸಿದರು. ನಾನು ಪ್ರಭಾಕರ್ ಅವರ ಜೊತೆ ನಟಿಸಿದ್ದೆ. ಈಗ ‘ಮಾದೇಶ’ ಚಿತ್ರದಲ್ಲಿ ವಿನೋದ್ ಪ್ರಭಾಕರ್ ಅವರ ಜೊತೆ ನಟಿಸಿದ್ದೇನೆ.‌ ‘ಲಂಕಾಸುರ’ ಚಿತ್ರದ ಮೂಲಕ ವಿನೋದ್ ಹಾಗೂ ನಿಶಾ  ನಿರ್ಮಾಪಕರು ಆಗಿದ್ದಾರೆ ಒಳ್ಳೆಯದಾಗಲಿ ಎಂದರು ನಟಿ ಶೃತಿ. ನಟ ಶ್ರೀನಗರ ಕಿಟ್ಟಿ‌, ನಿರ್ಮಾಪಕ ಎಂ.ಜಿ.ರಾಮಮೂರ್ತಿ ಸೇರಿದಂತೆ ಅನೇಕ ಗಣ್ಯರು ತಮ್ಮ ಮಾತುಗಳ ಮೂಲಕ ಶುಭ ಕೋರಿದರು. ಇದನ್ನೂ ಓದಿ:ಐಷಾರಾಮಿ ಅಪಾರ್ಟ್‌ಮೆಂಟ್ ಹೊಂದಿರುವ ವಿಚಾರ ನಿಜಾನಾ? ಸ್ಪಷ್ಟನೆ ನೀಡಿದ ರಶ್ಮಿಕಾ ಮಂದಣ್ಣ

    ಇಡೀ ಚಿತ್ರತಂದ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ ನೋಡಿ ಹಾರೈಸಿ ಎಂದರು ನಿರ್ಮಾಪಕಿ ನಿಶಾ ವಿನೋದ್ ಪ್ರಭಾಕರ್. ಕೊರೋನ ಬರುವ ಮುಂಚೆ ರಾಘವ ಮುನಿಸ್ವಾಮಿ ಅವರು ನನಗೆ ಅಡ್ವಾನ್ಸ್ ನೀಡಿ ‘ಲಂಕಾಸುರ’ ಚಿತ್ರ ಆರಂಭಿಸಿದ್ದರು. ಆನಂತರ ಕಾರಣಾಂತರದಿಂದ ನಾವೇ ಟೈಗರ್ ಟಾಕೀಸ್ ಸಂಸ್ಥೆ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡಿದ್ದೆವು. ಟೀಸರ್ ಬಿಡುಗಡೆ ಮಾಡಿದ ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗೆ, ಲೋಗೊ ಅನಾವರಣ ಮಾಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ನಾನು ಆಭಾರಿ. ನನ್ನ ಇಡೀ ಚಿತ್ರತಂಡದ ಸಹಕಾರ ಮರೆಯಲು ಸಾಧ್ಯವಿಲ್ಲ‌. ಎಲ್ಲರೂ ಇಷ್ಟಪಡುವ ಚಿತ್ರ ಮಾಡಿದ್ದೇವೆ‌. ನೋಡಿ ಪ್ರೋತ್ಸಾಹ ನೀಡಿ ಎಂದರು ನಾಯಕ  ವಿನೋದ್ ಪ್ರಭಾಕರ್.

    ಚಿತ್ರದಲ್ಲಿ ನಾಲ್ಕು ಹಾಡುಗಳಿದೆ. ಎಲ್ಲಾ ಹಾಡುಗಳನ್ನು ಚೇತನ್ ಕುಮಾರ್ ಬರೆದಿದ್ದಾರೆ. ‘ಮಾರ್ಡನ್ ಮಹಾಲಕ್ಷ್ಮಿ’ ಹಾಡನ್ನು ನಾನೇ ಹಾಡಿದ್ದೇನೆ ಎಂದು ಸಂಗೀತ ನಿರ್ದೇಶಕ ವಿಜೇತ್ ಕೃಷ್ಣ ಹೇಳಿದರು. ನಿರ್ದೇಶಕ ಪ್ರಮೋದ್ ಕುಮಾರ್, ಛಾಯಾಗ್ರಾಹಕ ಸುಜ್ಞಾನ್, ನೃತ್ಯ ನಿರ್ದೇಶಕ ಭಜರಂಗಿ ಮೋಹನ್ ಮುಂತಾದವರು ‘ಲಂಕಾಸುರ’ ಚಿತ್ರದ ಕುರಿತು ಮಾತನಾಡಿದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಗೌರಿಹಬ್ಬಕ್ಕೆ ಮರಿ ಟೈಗರ್ ನಟನೆಯ ಲಂಕಾಸುರ ಸಿನಿಮಾದಿಂದ ಹಾಡಿನ ಗಿಫ್ಟ್

    ಗೌರಿಹಬ್ಬಕ್ಕೆ ಮರಿ ಟೈಗರ್ ನಟನೆಯ ಲಂಕಾಸುರ ಸಿನಿಮಾದಿಂದ ಹಾಡಿನ ಗಿಫ್ಟ್

    ದೇ ಮೊದಲ ಬಾರಿಗೆ ಮರಿ ಟೈಗರ್ ವಿನೋದ್ ಪ್ರಭಾಕರ್ ನಟಿಸಿ, ನಿರ್ಮಾಣ ಮಾಡುತ್ತಿರುವ ಲಂಕಾಸುರ ಸಿನಿಮಾದ ಹಾಡೊಂದು ರೆಡಿಯಾಗಿದ್ದು, ಈ ಹಾಡನ್ನು ವಿಶೇಷ ದಿನದಂದು ಬಿಡುಗಡೆ ಮಾಡಲು ಚಿತ್ರತಂಡ ಸಿದ್ದತೆ ಮಾಡಿಕೊಂಡಿದೆ. ನಾಡಿನಲ್ಲೆಡೆ ಗೌರಿ – ಗಣೇಶ ಹಬ್ಬದ ಸಂಭ್ರಮ. ಈ ಶುಭ ಸಂದರ್ಭದಲ್ಲಿ ಟೈಗರ್ ಟಾಕೀಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ “ಲಂಕಾಸುರ” ಚಿತ್ರದ ಹಾಡೊಂದು ಬಿಡುಗಡೆಯಾಗುತ್ತಿದೆ.

    ಚೇತನ್ ಕುಮಾರ್ ಬರೆದಿರುವ “ಲಕ್ ಲಕ್ ಲಕ್ಕು ಪದುಮಿ. ಒಂಚುರು ಪ್ಲೀಸು ಟಚುಮಿ” ಎಂಬ ಹಾಡು ಗೌರಿ ಹಬ್ಬದ ಶುಭ ಸಂದರ್ಭ ದಲ್ಲಿ ಬಿಡುಗಡೆಯಾಗುತ್ತಿದೆ. ವಿಜೇತ್ ಕೃಷ್ಣ ಸಂಗೀತ ನೀಡಿದ್ದಾರೆ. ಸಹನ ಗೌಡ ನರ್ತಿಸಿರುವ ಈ ಹಾಡಿಗೆ ಭಜರಂಗಿ ಮೋಹನ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಇಂದು ನಾಗರಾಜ್ ಇಂಪಾಗಿ ಹಾಡಿದ್ದಾರೆ.  ಈ ಹಿಂದೆ ಬಿಡುಗಡೆಯಾಗಿದ್ದ “ಲಂಕಾಸುರ” ಚಿತ್ರದ ಟೈಟಲ್ ಸಾಂಗ್ ಸಹ ಅಪಾರ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಈಗ ಎರಡನೇ ಹಾಡು ಬಿಡುಗಡೆಯಾಗುತ್ತಿದೆ. ಇದನ್ನೂ ಓದಿ:ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ‘ಗಂಡುಮಗ’ ಎಂದು ಹಾಡಿ ಹೊಗಳಿದ ಜಗ್ಗೇಶ್

    ವಿನೋದ್ ಪ್ರಭಾಕರ್ ನಾಯಕರಾಗಿ ನಟಿಸುತ್ತಿರುವ ಈ ಚಿತ್ರವನ್ನು ನಿಶಾ ವಿನೋದ್ ಪ್ರಭಾಕರ್ ನಿರ್ಮಾಣ ಮಾಡುತ್ತಿದ್ದಾರೆ. ಪ್ರಮೋದ್ ಕುಮಾರ್ ಈ ಚಿತ್ರದ ನಿರ್ದೇಶಕರು. ಸುಜ್ಞಾನ್ ಛಾಯಾಗ್ರಹಣ ಹಾಗೂ ದೀಪು ಎಸ್ ಕುಮಾರ್ ಸಂಕಲನ ಈ ಚಿತ್ರಕ್ಕಿದೆ.

    Live Tv
    [brid partner=56869869 player=32851 video=960834 autoplay=true]

  • ‘ಲಂಕಾಸುರ’ನ ಟೈಟಲ್ ಟ್ರ್ಯಾಕ್ ಗೆ ಕುಣಿದ ಮರಿ ಟೈಗರ್ : ಅಭಿಮಾನಿಗಳು ಫಿದಾ

    ‘ಲಂಕಾಸುರ’ನ ಟೈಟಲ್ ಟ್ರ್ಯಾಕ್ ಗೆ ಕುಣಿದ ಮರಿ ಟೈಗರ್ : ಅಭಿಮಾನಿಗಳು ಫಿದಾ

    ಟ ವಿನೋದ್ ಪ್ರಭಾಕರ್ ತಮ್ಮ ಟೈಗರ್ ಟಾಕೀಸ್ ಸಂಸ್ಥೆಯ ಮೂಲಕ ನಿರ್ಮಿಸಿರುವ ಮೊದಲ ಚಿತ್ರ “ಲಂಕಾಸುರ”. ನಿಶಾ ವಿನೋದ್  ಪ್ರಭಾಕರ್ ಈ ಚಿತ್ರದ ನಿರ್ಮಾಪಕರು. ವಿನೋದ್ ಪ್ರಭಾಕರ್ ಅವರೆ ಈ ಚಿತ್ರದ ನಾಯಕನಾಗೂ ನಟಿಸಿದ್ದಾರೆ. ಈ ಸಿನಿಮಾದ ಮೂಲಕ ವಿನೋದ್ ಪ್ರಭಾಕರ್ ನಿರ್ಮಾಪಕರಾಗಿಯೂ ಗುರುತಿಸಿಕೊಳ್ಳುತ್ತಿದ್ದಾರೆ.

    ಖ್ಯಾತ ಗೀತರಚನೆಕಾರ ಚೇತನ್ ಕುಮಾರ್ ಬರೆದಿರುವ “ಅಣ್ಣ ಗನ್ ಹಿಡ್ದು  ನಿಂತ ಅಂದ್ರೆ ಭಸ್ಮಾಸುರ.  ಲಾಂಗ್ ಹಿಡ್ದು  ನಡ್ಕೊಂಡು ಬಂದ್ರೆ ಲಂಕಾಸುರ. ಲಂಕಾಸುರ   ಲಂಕಾಸುರ ” ಎಂಬ “ಲಂಕಾಸುರ” ಚಿತ್ರದ ಟೈಟಲ್ ಟ್ರ್ಯಾಕ್ ಇತ್ತೀಚೆಗೆ A2 music ಮೂಲಕ ಇತ್ತೀಚೆಗೆ ಬಿಡುಗಡೆಯಾಗಿತ್ತು. ಈ ಟೈಟಲ್ ಟ್ರ್ಯಾಕ್ ಈಗಾಗಲೇ  ಒಂದು ಮಿಲಿಯನ್ ಗೂ ಅಧಿಕ ವೀಕ್ಷಣೆಯಾಗಿದ್ದು, ಅಭಿಮಾನಿಗಳ ಮನ ಗೆದ್ದಿದೆ. ಇದನ್ನೂ ಓದಿ:ಕಿಚ್ಚ ಸುದೀಪ್- ರಕ್ಷಿತ್ ಶೆಟ್ಟಿ ನಡುವೆ ಏನಿದು ಕೋಲ್ಡ್ ವಾರ್!

    ಟೈಟಲ್ ಟ್ರ್ಯಾಕ್ ಗೆ ಅಪಾರ ಜನಮನ್ನಣೆ ದೊರಕುತ್ತಿರುವುದಕ್ಕೆ ವಿನೋದ್ ಪ್ರಭಾಕರ್ ಸಂತಸ ವ್ಯಕ್ತಪಡಿಸಿದ್ದಾರೆ. ಕನ್ನಡ ಕಲಾಭಿಮಾನಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ವಿಜೇತ್ ಕೃಷ್ಣ ಈ ಹಾಡನ್ನು ಹಾಡಿ ಸಂಗೀತವನ್ನು ನೀಡಿದ್ದಾರೆ. ಪ್ರಮೋದ್ ಕುಮಾರ್ ಈ ಚಿತ್ರದ ನಿರ್ದೇಶಕರು.

    Live Tv
    [brid partner=56869869 player=32851 video=960834 autoplay=true]

  • ವಿನೋದ್ ಪ್ರಭಾಕರ್ ನಟನೆಯ ‘ಲಂಕಾಸುರ’ ಸಿನಿಮಾದ ಟೈಟಲ್ ಟ್ರ್ಯಾಕ್ ರಿಲೀಸ್

    ವಿನೋದ್ ಪ್ರಭಾಕರ್ ನಟನೆಯ ‘ಲಂಕಾಸುರ’ ಸಿನಿಮಾದ ಟೈಟಲ್ ಟ್ರ್ಯಾಕ್ ರಿಲೀಸ್

    ವಿನೋದ್ ಪ್ರಭಾಕರ್ ನಾಯಕನಾಗಿ ನಟಿಸುವುದರೊಂದಿಗೆ, ನಿರ್ಮಾಣವನ್ನು ಮಾಡುತ್ತಿರುವ ಚಿತ್ರ “ಲಂಕಾಸುರ”. ಇದು ಟೈಗರ್ ಟಾಕೀಸ್ ಸಂಸ್ಥೆಯ ಮೊದಲ ಚಿತ್ರವೂ ಹೌದು. ನಿಶಾ ವಿನೋದ್ ಪ್ರಭಾಕರ್ ಈ ಚಿತ್ರದ ನಿರ್ಮಾಪಕರು. ಪ್ರಮೋದ್ ಕುಮಾರ್ ನಿರ್ದೇಶಕರು.

    “ಅಣ್ಣ ಗನ್ ಹಿಡ್ದು  ನಿಂತ ಅಂದ್ರೆ ಭಸ್ಮಾಸುರ. ಲಾಂಗ್ ಹಿಡ್ದು  ನಡ್ಕೊಂಡು ಬಂದ್ರೆ ಲಂಕಾಸುರ.  ಲಂಕಾಸುರ   ಲಂಕಾಸುರ  .. ಎಂಬ ಟೈಟಲ್ ಟ್ರ್ಯಾಕ್  ಬಿಡುಗಡೆಯಾಗಿದೆ.  ಸಾಕಷ್ಟು ಸಂಖ್ಯೆಯಲ್ಲಿ  ವೀಕ್ಷಣೆಯಾಗುತ್ತಿದೆ. ಚೇತನ್ ಕುಮಾರ್ ಬರೆದಿರುವ ಈ ಹಾಡನ್ನು ವಿಜೇತ್ ಕೃಷ್ಣ ಅವರೆ ಹಾಡಿದ್ದಾರೆ. ಜೋಯೆಲ್ ಶಾಸ್ತ್ರಿ ಗಿಟಾರ್ ನುಡಿಸಿದ್ದಾರೆ. ಇದನ್ನೂ ಓದಿ: ಶಿವಣ್ಣನನ್ನೇ ಹಿಂದಿಕ್ಕಿದ ಶಿವಣ್ಣನ ಅಭಿಮಾನಿ ಕಾಫಿನಾಡು ಚಂದು!

    ಮೋಹನ್ ಕುಮಾರ್ ನೃತ್ಯ ನಿರ್ದೇಶನ ಮಾಡಿರುವ ಈ ಹಾಡಿನಲ್ಲಿ ನಾಯಕ ವಿನೋದ್ ಪ್ರಭಾಕರ್ ಅಭಿನಯಿಸಿದ್ದಾರೆ. ಹೆಚ್.ಎಂ.ಟಿ, ಟೊರಿನೊ ಫ್ಯಾಕ್ಟರಿ ಹಾಗೂ ಮಲ್ಲೇಶ್ವರಂ  ದೋಬಿ ಘಾಟ್ ನಲ್ಲಿ ನಿರ್ಮಿಸಲಾಗಿದ್ದ ಆರು ಅದ್ದೂರಿ ಸೆಟ್ ಗಳಲ್ಲಿ ಈ ಹಾಡಿನ ಚಿತ್ರೀಕರಣ ನಡೆದಿದೆ.

    Live Tv
    [brid partner=56869869 player=32851 video=960834 autoplay=true]

  • ಸದ್ಯದಲ್ಲೇ ವಿನೋದ್ ಪ್ರಭಾಕರ್ ಅಭಿನಯದ  ‘ಲಂಕಾಸುರ’ ಟೀಸರ್

    ಸದ್ಯದಲ್ಲೇ ವಿನೋದ್ ಪ್ರಭಾಕರ್ ಅಭಿನಯದ ‘ಲಂಕಾಸುರ’ ಟೀಸರ್

    ದೇ ಮೊದಲ ಬಾರಿಗೆ ನಿರ್ಮಾಣದ ಜೊತೆಗೆ ನಟನೆಯನ್ನೂ ಮಾಡಿರುವ ವಿನೋದ್ ಪ್ರಭಾಕರ್ ನಟಿಸಿರುವ ಲಂಕಾಸುರ ಚಿತ್ರದ ಶೂಟಿಂಗ್ ಮುಕ್ತಾಯವಾಗಿದೆ. ಬೆಂಗಳೂರು ಹಾಗೂ ಗೋವಾದಲ್ಲಿ ಸುಮಾರು 65 ದಿನಗಳ ಚಿತ್ರೀಕರಣ ನಡೆದಿದೆ. ಪೋಸ್ಟ್ ಪ್ರೊಡಕ್ಷನ್ಸ್ ಕೆಲಸ ಬಿರುಸಿನಿಂದ ಸಾಗಿದೆ. ಸದ್ಯದಲ್ಲೇ ಟೀಸರ್ ಸಹ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕಿ ನಿಶಾ ವಿನೋದ್ ಪ್ರಭಾಕರ್ ತಿಳಿಸಿದ್ದಾರೆ.

    ವಿನೋದ್ ಪ್ರಭಾಕರ್ ಹಾಗೂ ಲೂಸ್ ಮಾದ ಯೋಗಿ ಮೊದಲ ಬಾರಿಗೆ ಈ ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದಾರೆ.   ನಾಯಕಿಯಾಗಿ ಪಾರ್ವತಿ ಅರುಣ್ ಅಭಿನಯಿಸಿದ್ದಾರೆ.  ಹಿರಿಯ ನಟರಾದ ದೇವರಾಜ್, ರವಿಶಂಕರ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಇದನ್ನೂ ಓದಿ : ಹಾಸ್ಯನಟ ನರಸಿಂಹರಾಜು ಹಿರಿಯ ಪುತ್ರಿ, ನಿರ್ದೇಶಕ ಅರವಿಂದ್ ತಾಯಿ ಧರ್ಮವತಿ ನಿಧನ

    ಈ ಚಿತ್ರದ ಆಕ್ಷನ್ ಸನ್ನಿವೇಶಗಳು ಮೈನವಿರೇಳಿಸುವ ಹಾಗಿದೆ. ಐದು ಸಾಹಸ ಸನ್ನಿವೇಶಗಳಿದ್ದು, ಡಿಫರೆಂಟ್ ಡ್ಯಾನಿ, ವಿನೋದ್, ಚೇತನ್ ಡಿಸೋಜ, ಅರ್ಜುನ್ ರಾಜ್ , ಕುಂಗ್ಫು ಚಂದ್ರು ಸಾಹಸ ನಿರ್ದೇಶನ ಮಾಡಿದ್ದಾರೆ.  ಒಂದು ಸಾಹಸ ಸನ್ನಿವೇಶಕ್ಕಾಗಿ ವಿನೋದ್ ಪ್ರಭಾಕರ್ ಹತ್ತು ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಚಿತ್ರ ಬಿಡುಗಡೆಗಾಗಿ ಮರಿ ಟೈಗರ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇದನ್ನೂ ಓದಿ : Exclusive : ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಮೊದಲ ವರ್ಷದ ಪುಣ್ಯಸ್ಮರಣೆ : ಪುತ್ಥಳಿ ಅನಾವರಣ

    ಪ್ರಮೋದ್ ಕುಮಾರ್ ಈ ಚಿತ್ರದ ನಿರ್ದೇಶಕರು. ವಿಜೇತ್ ಕೃಷ್ಣ ಸಂಗೀತ ನಿರ್ದೇಶನ, ಸುಜ್ಞಾನ್ ಛಾಯಾಗ್ರಹಣ, ಮುರಳಿ, ಮೋಹನ್ ಅವರ ನೃತ್ಯ ನಿರ್ದೇಶನ ಹಾಗೂ ದೀಪು ಎಸ್ ಕುಮಾರ್ ಸಂಕಲನ ಈ ಚಿತ್ರಕ್ಕಿದೆ.