Tag: ರ್ಯಾಲಿ

  • ಬಿಜೆಪಿ ರ‍್ಯಾಲಿ ಮಾಡಿದ್ದ ಜಾಗವನ್ನು ಗಂಗಾಜಲ ಹಾಕಿ ಶುದ್ಧ ಮಾಡಿದ್ರು!

    ಬಿಜೆಪಿ ರ‍್ಯಾಲಿ ಮಾಡಿದ್ದ ಜಾಗವನ್ನು ಗಂಗಾಜಲ ಹಾಕಿ ಶುದ್ಧ ಮಾಡಿದ್ರು!

    ಕೋಲ್ಕತ್ತ: ಪಶ್ಚಿಮ ಬಂಗಾಳದ ಕೂಚ್ ಬೆಹರ್ ನಲ್ಲಿ ಬಿಜೆಪಿ ನಡೆಸಿದ್ದ ರ‍್ಯಾಲಿಯ ಬಳಿಕ ತೃಣಮೂಲ ಕಾಂಗ್ರೆಸ್(ಟಿಎಂಸಿ) ಕಾರ್ಯಕರ್ತರು ಗಂಗಾಜಲವನ್ನು ಹಾಕಿ ಶುದ್ಧಿಗೊಳಿಸಿದ್ದಾರೆ.

    ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರೋಧದ ನಡುವೆಯೂ ಬಿಜೆಪಿ ಕೂಚ್ ಬೆಹರ್ ನಲ್ಲಿ ಅದ್ಧೂರಿಯಾಗಿ ರ‍್ಯಾಲಿಯನ್ನು ಕೈಗೊಂಡಿತ್ತು. ಆದರೆ ಇಂದು ಟಿಎಂಸಿ ಕಾರ್ಯಕರ್ತರು ಗಂಗಾಜಲವನ್ನು ಸುರಿದು, ಸ್ವಚ್ಛ ಮಾಡುವ ಮೂಲಕ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ಸ್ಥಳಿಯ ಟಿಎಂಸಿ ಮುಖಂಡ ಪಂಕಜ್ ಘೋಷ್, ಬಿಜೆಪಿಯವರು ಇಲ್ಲಿ ಧರ್ಮದ ಸಂದೇಶವನ್ನು ನೀಡಿದ್ದಾರೆ. ಹೀಗಾಗಿ ಈ ಸ್ಥಳವನ್ನು ಶುದ್ಧೀಕರಿಸಿದ್ದೇವೆ. ಇದು ಮದನ್ ಮೋಹನ್‍ರ ದೇವರ ನಾಡು. ಹೀಗಾಗಿ ಹಿಂದೂ ಸಂಪ್ರದಾಯದಂತೆ ನಾವು ಈ ಸ್ಥಳವನ್ನು ಶುದ್ಧ ಮಾಡಿದ್ದೇವೆ. ಇಲ್ಲಿ ಮದನ್ ಮೋಹನ್ ದೇವರ ರಥವನ್ನು ಬಿಟ್ಟು, ಯಾವುದೇ ರಥವನ್ನು ಹೋಗಲು ಬಿಡುವುದಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರತಿಕ್ರಿಯಿಸಿ, ರಥಯಾತ್ರೆ ಸಾಗಿದ ದಾರಿಯನ್ನು ಶುದ್ಧಗೊಳಿಸಿ, ಏಕತಾ ಯಾತ್ರೆ ಕೈಗೊಳ್ಳುವಂತೆ ನನ್ನ ಪಕ್ಷದ ಕಾರ್ಯಕರ್ತರಿಗೆ ಹೇಳಿದ್ದೇನೆ. ಅಲ್ಲದೇ ಫೈವ್ ಸ್ಟಾರ್ ಸೌಲಭ್ಯ ಹೊಂದಿರುವ ರಥ ಯಾತ್ರೆಯಾದರೂ ಏನು? ಅದು ರಾವಣ ಯಾತ್ರೆಯೇ ಹೊರತು ರಥ ಯಾತ್ರೆಯಲ್ಲ ಎಂದು ಕಿಡಿಕಾರಿದ್ದಾರೆ.

    ಟಿಎಂಸಿ ಕಾರ್ಯಕರ್ತರ ವರ್ತನೆಯನ್ನು ಸ್ಥಳೀಯ ಬಿಜೆಪಿ ಮುಖಂಡರು ತೀವ್ರವಾಗಿ ಖಂಡಿಸಿದ್ದಾರೆ. ಅಲ್ಲದೇ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸೋಲುತ್ತೇವೆಂಬ ಭೀತಿಯಿಂದ ಈ ರೀತಿ ಮಾಡಿದ್ದಾರೆಂದು ತಿರುಗೇಟು ನೀಡಿದ್ದಾರೆ.

    ಬಿಜೆಪಿ ರಾಷ್ಟ್ರಾಧ್ಯಕ್ಷ ಅಮೀತ್ ಶಾ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ 42 ಕ್ಷೇತ್ರಗಳಲ್ಲಿಯೂ ರಥಯಾತ್ರೆ ನಡೆಸುವ ಬಗ್ಗೆ ತೀರ್ಮಾನ ಕೈಗೊಂಡಿದ್ದರು. ಪ್ರಮುಖವಾಗಿ ಶನಿವಾರದಂದು ಕೂಚ್ ಬೆಹರ್ ನಲ್ಲಿ ನಡೆಯಬೇಕಿದ್ದ ರಥಯಾತ್ರೆಗೆ ಕೋಲ್ಕತ್ತ ಹೈಕೋರ್ಟ್ ತಡೆ ನೀಡಿತ್ತು. ಹೀಗಾಗಿ ಬಿಜೆಪಿ ಶನಿವಾರ ರ‍್ಯಾಲಿಯನ್ನು ಮಾತ್ರವೇ ಹಮ್ಮಿಕೊಂಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ್ರೆ, ಹೈದರಾಬಾದನ್ನು ಭಾಗ್ಯನಗರವನ್ನಾಗಿ ಮರುನಾಮಕರಣ ಮಾಡ್ತೀವಿ: ಯೋಗಿ ಆದಿತ್ಯನಾಥ್

    ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ್ರೆ, ಹೈದರಾಬಾದನ್ನು ಭಾಗ್ಯನಗರವನ್ನಾಗಿ ಮರುನಾಮಕರಣ ಮಾಡ್ತೀವಿ: ಯೋಗಿ ಆದಿತ್ಯನಾಥ್

    ಹೈದರಾಬಾದ್: ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬಂದರೆ, ಹೈದರಾಬಾದ್ ನಗರದ ಹೆಸರನ್ನು ಭಾಗ್ಯನಗರವನ್ನಾಗಿ ಮರುನಾಮಕರಣ ಮಾಡುತ್ತೇವೆಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

    ಚುನಾವಣಾ ಪ್ರಚಾರ ನಿಮಿತ್ತ ತೆಲಂಗಾಣದ ಘೋಶ್‍ಮಹಲ್ ವಿಧಾನಸಭಾ ಕ್ಷೇತ್ರದಲ್ಲಿ ಭರ್ಜರಿ ರ‍್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಹೈದರಾಬಾದಿಗೆ ಈ ಮೊದಲು ಭಾಗ್ಯನಗರ ಎಂದೇ ಹೆಸರಿತ್ತು. ಸ್ವಾತಂತ್ರ್ಯ ಪೂರ್ವದಲ್ಲಿ  ಭಾರತದ ಮೇಲೆ ದಾಳಿ ನಡೆಸಿದ್ದ ಕಿಲ್ ಕುತುಬ್ ಶಾ ಈ ನಗರವನ್ನು ಹೈದರಾಬಾದ್ ಎಂದು ಬದಲಾಯಿಸಿದ್ದ. ಅಲ್ಲದೇ ಅದೇ ವೇಳೆ ಕುತುಬ್ ಹಿಂದೂಗಳ ಮೇಲೆಯೂ ದಾಳಿ ನಡೆಸಿ, ದೇವಾಲಯಗಳನ್ನೆಲ್ಲಾ ನಾಶ ಮಾಡಿದ್ದ. ಹೀಗಾಗಿ ಹೈದರಾಬಾದ್‍ಗೆ ಪುನಃ ಭಾಗ್ಯನಗರವನ್ನಾಗಿ ಮಾಡುತ್ತೇವೆಂದು ಘೋಷಿಸಿದ್ದಾರೆ.

    ಕಳೆದ ತಿಂಗಳು ಘೋಶ್‍ಮಹಲ್ ಕ್ಷೇತ್ರದ ಬಿಜೆಪಿ ಶಾಸಕ ರಾಜಾಸಿಂಗ್ ಕೂಡ ಇದೇ ಹೇಳಿಕೆ ನೀಡಿದ್ದರು. ಅಲ್ಲದೇ ಸಿಕಂದರಬಾದ್ ಹಾಗೂ ಕರೀಂನಗರ ಜಿಲ್ಲೆಗಳ ಹೆಸರನ್ನು ಸಹ ಬದಲಾಯಿಸುವ ಕುರಿತು ಮಾತನಾಡಿದ್ದರು.

    ಯೋಗಿ ಆದಿತ್ಯನಾಥ್ ಈಗಾಗಲೇ ಉತ್ತರಪ್ರದೇಶದಲ್ಲಿನ ಫೈಜಾಬಾದ್ ನಗರವನ್ನು ಅಯೋಧ್ಯೆಯೆಂದು ಹಾಗೂ ಅಲಹಾಬಾದ್ ಜಿಲ್ಲೆಗೆ ಪ್ರಯಾಗ್‍ರಾಜ್ ಎಂದು ಮರುನಾಮಕರಣ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದೇಶ-ವಿದೇಶಗಳ 22, ಬೆಂಗ್ಳೂರಿನ 16, ರಾಜ್ಯದ 12- ಒಟ್ಟು 50 ವಿಂಟೇಜ್ ಕಾರ್ ಗಳ ರ್‍ಯಾಲಿ

    ದೇಶ-ವಿದೇಶಗಳ 22, ಬೆಂಗ್ಳೂರಿನ 16, ರಾಜ್ಯದ 12- ಒಟ್ಟು 50 ವಿಂಟೇಜ್ ಕಾರ್ ಗಳ ರ್‍ಯಾಲಿ

    ಬೆಂಗಳೂರು: ಸದಾ ಕಾಲ ರಾಜಕೀಯದ ಹಗ್ಗಜಗ್ಗಾಟ ನಡೆಯುವ ವಿಧಾನಸೌಧದಲ್ಲಿ ಭಾನುವಾರ ವಿಂಟೇಜ್ ಕಾರ್ ಗಳ ಮೆರವಣಿಗೆ ನಡೆದಿದೆ.

    ಈ ಮೆರವಣಿಗೆಯಲ್ಲಿ ರಾಜ್ಯದ ನಾಯಕರು ಭಾಗಿಯಾಗಿ ವಿಧಾನಸೌಧ ಸುತ್ತ ವಿಂಟೇಜ್ ಕಾರಿನಲ್ಲಿ ಒಂದು ರೌಂಡ್ ಹಾಕಿದ್ದಾರೆ. ಅಲ್ಲದೇ ವಿದೇಶಿ ಅತಿಥಿಗಳ ಜೊತೆ ಕಾಲ ಕಳೆದು, ದಸರಾದ ಪ್ರಯುಕ್ತ ಆಯೋಜನೆ ಮಾಡಿದ ಅಂತರಾಷ್ಟ್ರೀಯ ಮಟ್ಟದ ವಿಂಟೇಜ್  ರ್‍ಯಾಲಿಗೆ ಅದ್ಧೂರಿ ಚಾಲನೆ ನೀಡಿದ್ದಾರೆ.

    ನಾಡಹಬ್ಬ ದಸರಾ ಪ್ರಯುಕ್ತ ಬೆಂಗಳೂರಿನಿಂದ ಮೈಸೂರಿಗೆ ಆಯೋಜನೆ ಮಾಡಿದ್ದ ವಿಂಟೇಜ್ ಕಾರುಗಳ ರ್‍ಯಾಲಿಗೆ ಸಿಎಂ ಕುಮಾರಸ್ವಾಮಿ ವಿಧಾನಸೌಧದಲ್ಲಿ ಚಾಲನೆ ನೀಡಿದ್ದರು. ಜೊತೆಗೆ ವಿದೇಶಗಳಿಂದ ಬಂದಿದ್ದ ಅತಿಥಿಗಳಿಗೆ ಮೈಸೂರು ಪೇಟ ತೊಡಿಸಿ ಸನ್ಮಾನ ಕೂಡ ಮಾಡಿದ್ದಾರೆ.

    ದೇಶ ವಿದೇಶಗಳ 22 ವಿಂಟೇಜ್ ಕಾರುಗಳು, ಬೆಂಗಳೂರಿನ 16 ಕಾರು, ರಾಜ್ಯದ 12 ಕಾರುಗಳು ಸೇರಿದಂತೆ ಒಟ್ಟು 50 ವಿಂಟೇಜ್ ಕಾರುಗಳು ಈ ರ್‍ಯಾಲಿಯಲ್ಲಿ ಭಾಗವಹಿಸಿದ್ದವು. 1924ರ ಅತ್ಯಂತ ಹಳೆಯ ಲ್ಯಾನ್ಚೆಸ್ಟರ್ ಕಾರು, ಜೊತೆಗೆ ನಮ್ಮ ಮೊದಲ ಪ್ರಧಾನಿ ನೆಹರು ಬಳಸಿದ್ದ ಕಾರು ಎಲ್ಲರ ಗಮನ ಸೆಳೆಯಿತು. ಈ ವಿಂಟೇಜ್ ಕಾರುಗಳು ಎರಡು ದಿನ ಮೈಸೂರಿನ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ವಿಶ್ವ ಪ್ರಸಿದ್ಧ ದಸರಾಗೆ ಮೆರಗು ನೀಡಲಿದೆ ಎಂದು ಆಯೋಜಕರು ಡಾ. ರವಿಪ್ರಕಾಶ್ ಹೇಳಿದ್ದಾರೆ.

    ಸದಾ ರಾಜಕೀಯ ಬೆಳವಣೆಗೆಗಳು ನಡೆಯುವ ವಿಧಾನಸೌಧದಲ್ಲಿ ಭಾನುವಾರ ವಿಂಟೇಜ್ ಕ್ವೀನ್‍ಗಳ ಹಬ್ಬವೇ ನಡೆದಿದೆ. ಹತ್ತಾರು ದೇಶ ವಿದೇಶದ ತರಹೇವಾರಿ ವಿಂಟೇಜ್ ಕ್ವೀನ್‍ಗಳನ್ನ ನೋಡಿದ ಗಾರ್ಡನ್ ಸಿಟಿ ಮಂದಿ ಸಖತ್ ಎಂಜಾಯ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹಬ್ಬಕ್ಕೆ 3 ಸಾವಿರ ಪರಿಸರ ಸ್ನೇಹಿ ಗಣೇಶ ಮೂರ್ತಿ ಹಂಚಿಕೆ: ಸೌಮ್ಯಾ ರೆಡ್ಡಿ

    ಹಬ್ಬಕ್ಕೆ 3 ಸಾವಿರ ಪರಿಸರ ಸ್ನೇಹಿ ಗಣೇಶ ಮೂರ್ತಿ ಹಂಚಿಕೆ: ಸೌಮ್ಯಾ ರೆಡ್ಡಿ

    ಬೆಂಗಳೂರು: ಮಣ್ಣಿನ ಗಣೇಶನನ್ನು ಹಬ್ಬಕ್ಕೆ ಕೂರಿಸುವಂತೆ ಜಯನಗರ ಶಾಸಕಿ ಸೌಮ್ಯರೆಡ್ಡಿ ಮತ್ತು ಬೆಂಬಲಿಗರು ಜೆಪಿ ನಗರದಲ್ಲಿ ರ‍್ಯಾಲಿ ನಡೆಸಿದರು.

    ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಸಿದ ಅವರು, ಬಣ್ಣ ಬಳಿದ ಹಾಗೂ ಪಿಒಪಿ ಗಣೇಶನ ಮೂರ್ತಿಗಳಿಂದ ಪರಿಸರಕ್ಕೆ ಹಾನಿಯಾಗುತ್ತವೆ. ಹೀಗಾಗಿ ಕಳೆದ ವರ್ಷವೇ ಪಿಒಪಿ ಗಣೇಶನ ಮೂರ್ತಿಗಳನ್ನು ರದ್ದುಮಾಡಲಾಗಿದೆ. ನಗರದ ಬಹುತೇಕ ಕೆರೆಗಳು ಮಾಲಿನ್ಯದಿಂದಲೇ ಪ್ರಖ್ಯಾತಿ ಪಡೆದುಕೊಂಡಿವೆ. ಅಲ್ಲದೇ ಗಣೇಶ ಹಬ್ಬದ ಬಳಿಕ ಕೆರೆಗಳ ಮಾಲಿನ್ಯ ಹೆಚ್ಚಾಗುತ್ತವೆ. ಹೀಗಾಗಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

    ಜನರಲ್ಲಿ ಪರಿಸರ ಸ್ನೇಹಿ ಹಾಗೂ ಬಣ್ಣ ರಹಿತ ಗಣೇಶನ ಮೂರ್ತಿಗಳನ್ನು ಬಳಸುವ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಅಲ್ಲದೇ ಹಬ್ಬದ 10 ಹಾಗೂ 11ನೇ ತಾರೀಖಿನಂದು ಮೂರು ಸಾವಿರ ಮಣ್ಣಿನ ಗಣೇಶನ ಮೂರ್ತಿಗಳನ್ನು ಭಕ್ತಾದಿಗಳಿಗೆ ಹಂಚಲಾಗುತ್ತದೆ. ಈಗಾಗಲೇ ಬಿಟಿಎಂ ಹಾಗೂ ಜಯನಗರದಲ್ಲಿ ಇದಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

    ರ‍್ಯಾಲಿಯಲ್ಲಿ ಶಾಸಕಿ ಸೌಮ್ಯಾರೆಡ್ಡಿಯವರಿಗೆ ಬೈರಸಂದ್ರದ ಕಾರ್ಪೋರೇಟರರ್ ನಾಗರಾಜ್ ಹಾಗೂ ಶಾಲಾ ವಿದ್ಯಾರ್ಥಿಗಳು ಸಹ ಸಾಥ್ ನೀಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪ್ರಜಾಪ್ರಭುತ್ವ ಉಳಿಬೇಕಾದ್ರೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು, ರಾಹುಲ್ ಪ್ರಧಾನಿಯಾಗ್ಲೇಬೇಕು: ಖರ್ಗೆ

    ಪ್ರಜಾಪ್ರಭುತ್ವ ಉಳಿಬೇಕಾದ್ರೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು, ರಾಹುಲ್ ಪ್ರಧಾನಿಯಾಗ್ಲೇಬೇಕು: ಖರ್ಗೆ

    ಬೀದರ್: ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಬೇಕಾದರೆ, ಮತ್ತೊಮ್ಮೆ ಕಾಂಗ್ರೆಸ್ ಅಧಿಕಾರಕ್ಕೆ ತರಬೇಕು ಹಾಗೂ ರಾಹುಲ್ ಗಾಂಧಿ ಅವರನ್ನು ಪ್ರಧಾನಿಯಾಗಿ ಮಾಡಬೇಕೆಂದು ಲೋಕಸಭೆಯ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿದ್ದಾರೆ.

    ನಗರದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ಸಿನ ಬೃಹತ್ ಜನಸ್ಪಂದನಾ ರ‍್ಯಾಲಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ಸನ್ನು ಮುಗಿಸೋದು ಹಾಗೂ ಅಳಿಸುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ. ಇಂದು ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಬೇಕಾಗಿದೆ. ಹೀಗಾಗಿ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರಬೇಕು. ನಮ್ಮ ಅಧ್ಯಕ್ಷರಾದ ರಾಹುಲ್ ಗಾಂಧಿಯವರನ್ನು ನಾವು ಪ್ರಧಾನಿಯಾಗಿ ಮಾಡಲೇಬೇಕೆಂದು ತಿಳಿಸಿದರು.

    ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಏನೋ ಹೇಳಿಕೊಂಡು ಹೋಗುತ್ತಿದ್ದಾರೆ. ಅವರ ಮಾತನ್ನು ಕೇಳುವ ಅವಶ್ಯಕತೆ ನಮಗಿಲ್ಲ, ನಾವೆಲ್ಲರೂ ಇಂದು ದೇಶ ಉಳಿಸುವ ಅಗತ್ಯತೆ ಎದುರಾಗಿದೆ. ಈ ಕುರಿತು ಎಲ್ಲರೂ ಹೋರಾಟ ನಡೆಸಬೇಕಾಗಿದೆ. ಕಾರ್ಯಕರ್ತರು ಎಚ್ಚೆತ್ತು ಕಾಂಗ್ರೆಸ್ ಬಲಪಡಿಸಲು ಸಿದ್ದರಾಗಬೇಕು ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ರ‍್ಯಾಲಿಯಲ್ಲಿ ಓವೈಸಿ ಮೇಲೆ ಶೂ ಎಸೆತ

    ರ‍್ಯಾಲಿಯಲ್ಲಿ ಓವೈಸಿ ಮೇಲೆ ಶೂ ಎಸೆತ

    ಮುಂಬೈ: ಅಖಿಲ ಭಾರತ ಮಜ್ಲಿಸ್ ಇ ಇಥೇಹಾದುಲ್ ಮುಸಲ್ಮಿನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿಯ ಮೇಲೆ ಶೂ ಎಸೆದಿರುವ ಘಟನೆ ಮಹಾರಾಷ್ಟ್ರದ ನಾಗ್ಪಾಡಾದಲ್ಲಿ ನಡೆದಿದೆ.

    ಮಂಗಳವಾರ ರಾತ್ರಿ ನಾಗ್ಪಾಡದಲ್ಲಿ ನಡೆದ ರ‍್ಯಾಲಿಯಲ್ಲಿ ಓವೈಸಿ ಅವರು ಮಾತನಾಡುತ್ತಿದ್ದಾಗ ಯಾರೋ ಅವರ ಮೇಲೆ ಶೂ ಎಸೆದಿದ್ದಾರೆ. ಆದರೆ ಈ ಘಟನೆಯಿಂದ ಓವೈಸಿಗೆ ನೋವಾಗಿಲ್ಲ. ಶೂ ಎಸೆದ ವ್ಯಕ್ತಿಯನ್ನು ಗುರುತಿಸಲಾಗಿದ್ದು, ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಓವೈಸಿ ನಾಗ್ಪಾಡದಲ್ಲಿ ಮಂಗಳವಾರ ರಾತ್ರಿ 10 ಗಂಟೆಯ ವೇಳೆ ಭಾಷಣ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಅವರ ಮೇಲೆ ಶೂ ಎಸೆದಿದ್ದಾನೆ. ಈಗಾಗಲೇ ಶೂ ಎಸೆದ ವ್ಯಕ್ತಿಯನ್ನು ಬಂಧಿಸಲಾಗಿದೆ. ಈ ಘಟನೆಯಿಂದ ಓವೈಸಿ ತಮ್ಮ ಭಾಷಣವನ್ನು ನಿಲ್ಲಿಸದೆ ಮುಂದುವರೆಸಿದ್ದು, “ನನ್ನ ಪ್ರಜಾಪ್ರಭುತ್ವದ ಹಕ್ಕುಗಳಿಗಾಗಿ ನನ್ನ ಜೀವವನ್ನು ತ್ಯಜಿಸಲು ನಾನು ಸಿದ್ಧನಿದ್ದೇನೆ. ತ್ರಿವಳಿ ತಲಾಖ್‍ನಲ್ಲಿ ಸರ್ಕಾರದ ನಿರ್ಧಾರದಿಂದ ಜನರು ನಿರಾಶೆಗೊಂಡಿದ್ದು, ಅದನ್ನು ಸಾಮಾನ್ಯ ಜನರ ಅದರಲ್ಲೂ ನಿರ್ದಿಷ್ಟವಾಗಿ ಮುಸ್ಲಿಮರು ಸ್ವೀಕರಿಸಲಿಲ್ಲ” ಎಂದು ಹೇಳಿದರು.

    ಶೂ ಎಸೆದ ವ್ಯಕ್ತಿಯ ಗುರುತನ್ನು ಮುಂಬೈ ಪೊಲೀಸರು ಬಹಿರಂಗಪಡಿಸಿಲ್ಲ. ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಮುಂಬೈನ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

  • ನ.2ರಂದು ನವಕರ್ನಾಟಕ ಪರಿವರ್ತನಾ ರ್ಯಾಲಿಗೆ ಮೋದಿ, ಶಾ ಚಾಲನೆ- ಬಿಜೆಪಿಯವರಿಂದ ಇಂದು ಭೂಮಿ ಪೂಜೆ

    ನ.2ರಂದು ನವಕರ್ನಾಟಕ ಪರಿವರ್ತನಾ ರ್ಯಾಲಿಗೆ ಮೋದಿ, ಶಾ ಚಾಲನೆ- ಬಿಜೆಪಿಯವರಿಂದ ಇಂದು ಭೂಮಿ ಪೂಜೆ

    ಬೆಂಗಳೂರು: ನಗರದಲ್ಲಿ ನವ ಕರ್ನಾಟಕ ಪರಿವರ್ತನಾ ರ್ಯಾಲಿಗೆ ಸಿದ್ಧವಾಗುತ್ತಿರೋ ವೇದಿಕೆಗೆ ಇಂದು ಬಿಜೆಪಿ ನಾಯಕರು ಭೂಮಿ ಪೂಜೆ ನೆರವೇರಿಸಿದ್ದಾರೆ.

    ನವೆಂಬರ್ 2 ರಂದು ನೆಲಮಂಗಲದ ಅಂತರ್ ರಾಷ್ಟ್ರೀಯ ವಸ್ತು ಪ್ರದರ್ಶನ ಆವರಣದಲ್ಲಿ ನವ ಕರ್ನಾಟಕ ಪರಿವರ್ತನಾ ಜಾಥಾಗೆ ಚಾಲನೆ ಸಿಗಲಿದೆ. ಈ ಹಿನ್ನೆಲೆಯಲ್ಲಿ ಇದೀಗ ಸಿದ್ಧವಾಗುತ್ತಿರುವ ವೇದಿಕೆಗೆ ಇಂದು ಭೂಮಿ ಪೂಜೆ ನೆರವೇರಿತು. ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅಂದು ಬೆಂಗಳೂರಿಗೆ ಆಗಮಿಸಲಿದ್ದು, ನವಕರ್ನಾಟಕ ಜಾಥಾಗೆ ಚಾಲನೆ ನೀಡಲಿದ್ದಾರೆ.

    ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ್ ರಾವ್ ಮಾತನಾಡಿ, ನವ ಪರಿವರ್ತನಯಾತ್ರೆ ಕಾರ್ಯಕ್ರಮದ ಉದ್ಘಾಟನಾ ಸ್ಥಳದಲ್ಲಿ ಭೂಮಿ ಪೂಜೆ ಮಾಡಿದ್ದೇವೆ. ರಾಜ್ಯದಲ್ಲಿ ಸರ್ಕಾರ ಬದಲಾವಣೆ ಮಾಡುವ ಕಾರ್ಯಕ್ರಮ ಇದು. ಸಿದ್ದರಾಮಯ್ಯ ಸರ್ಕಾರ ಹಲವು ವಿಚಾರಗಳಲ್ಲಿ ವಿಫಲವಾಗಿದೆ. ಕಮಿಷನ್ ಪಡೆಯುವುದರಲ್ಲಿ ನಿಸ್ಸೀಮರಾಗಿದ್ದಾರೆ. ಒಡೆದು ಆಳುವ ರಾಜಕಾರಣ ಮಾಡಲು ಸಿಎಂ ಮುಂದಾಗಿದ್ದಾರೆ. ಹೊಸ ರಾಜ್ಯ ಕಟ್ಟುವ ನಿಟ್ಟಿನಲ್ಲಿ ಬಿಜೆಪಿ ಕಾರ್ಯ ಮಾಡಲಿದೆ. ನಾವು ಯಾವುದೇ ಒಂದು ವರ್ಗ, ಜಾತಿ ಪರ ಅಲ್ಲ ಅಂತ ತಿಳಿಸಿದ್ದಾರೆ.

    ಪರಿವರ್ತನೆ ಮಾಡುವುದು ಅಂದ್ರೆ ಪ್ಯಾಚ್ ವರ್ಕ್ ಮಾಡುವ ಕಾರ್ಯಕ್ರಮವಲ್ಲ. ಸಂಪೂರ್ಣ ಬದಲಾವಣೆಯೇ ಇದರ ಉದ್ದೇಶ. ಹೊಸದೊಂದು ರಾಜಕಾರಣದ ಪರ್ವ ನಿರ್ಮಿಸಲು ಮುಂದಾಗಿದ್ದೇವೆ. ಯಡಿಯೂರಪ್ಪ ನೇತೃತ್ವದಲ್ಲಿ ಎಲ್ಲರೂ ಒಂದಾಗಿ ಭಾಗವಹಿಸಲಿದ್ದಾರೆಂದು ಮುರಳೀಧರ್ ಹೇಳಿದರು.

    ಭೂಮಿ ಪೂಜೆಯಲ್ಲಿ ಕೇಂದ್ರ ಸಚಿವ ಡಿವಿ ಸದಾನಂದಗೌಡ, ಸಂಸದೆ ಶೋಭಾ ಕರಂದ್ಲಾಜೆ, ಆರ್ ಅಶೋಕ್, ಪರಿಷತ್ ಸದಸ್ಯ ಸೋಮಣ್ಣ, ಶಾಸಕರು ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.

  • ಇಂದು ಗಾಂಧಿನಗರದಲ್ಲಿ ಬೃಹತ್ ರ‍್ಯಾಲಿ ನಡೆಸಲಿರುವ ಮೋದಿ

    ಇಂದು ಗಾಂಧಿನಗರದಲ್ಲಿ ಬೃಹತ್ ರ‍್ಯಾಲಿ ನಡೆಸಲಿರುವ ಮೋದಿ

    ಗಾಂಧಿನಗರ: 1995 ರಿಂದ ಗುಜರಾತ್ ಆಳುತ್ತಿರೋ ಬಿಜೆಪಿ ಈ ವರ್ಷದ ಅಂತ್ಯದೊಳಗೆ ಮತ್ತೊಂದು ಅಗ್ನಿ ಪರೀಕ್ಷೆ ಎದುರಿಸುತ್ತಿದೆ.

    ಮುಂದಿನ ಲೋಕಸಭಾ ಚುನಾವಣೆಯ ದಿಕ್ಸೂಚಿ ಎಂದೇ ಬಿಂಬಿತವಾಗಿರೋ ಗುಜರಾತ್ ವಿಧಾನಸಭಾ ಚುನಾವಣೆ ಯಾವುದೇ ಕ್ಷಣದಲ್ಲಾದ್ದರೂ ಘೋಷಣೆ ಆಗೋ ಸಾಧ್ಯತೆ ಇದ್ದು, ಇದನ್ನ ಗೆಲ್ಲಲ್ಲು ಪ್ರಧಾನಿ ನರೇಂದ್ರ ಮೋದಿ ಶತಾಯ ಗತಾಯ ಪಣತೊಟ್ಟಿದ್ದಾರೆ.

    ಹೀಗಾಗಿ ಗುಜರಾತ್ ಪ್ರವಾಸದಲ್ಲಿರುವ ಮೋದಿ ಇಂದು ಗಾಂಧಿನಗರದಲ್ಲಿ ಬೃಹತ್ ರ‍್ಯಾಲಿ ನಡೆಸುತ್ತಿದ್ದಾರೆ. ಸುಮಾರು 7 ಲಕ್ಷ ಬಿಜೆಪಿ ಕಾರ್ಯಕರ್ತರು ರ‍್ಯಾಲಿಯಲ್ಲಿ ಭಾಗಿಯಾಗಲಿದ್ದಾರೆ. ಈ ವೇಳೆ ಮೋದಿ ಭರವಸೆಗಳ ಮಹಾಪೂರವನ್ನೇ ಹರಿಸುವ ಸಾಧ್ಯತೆ ಇದೆ.

    ರಾಜ್ಯದಲ್ಲಿ `ಗುಜರಾತ್ ಗೌರವ ಯಾತ್ರಾ’ ಎಂಬ ಅಭಿಯಾನವನ್ನು 15 ದಿನಗಳ ಕಾಲ ಹಮ್ಮಿಕೊಳ್ಳಲಾಗಿತ್ತು. ಇಂದು ನಡೆಯುವ `ಗುಜರಾತ್ ಗೌರವ ಮಹಾಸಮ್ಮೇಳನ್’ ಸಮಾರೋಪ ಸಮಾರಂಭವಾಗಿದೆ.

  • ಗೌರಿ ಲಂಕೇಶ್ ಹತ್ಯೆ ಖಂಡಿಸಿ ನವದೆಹಲಿಯಲ್ಲಿಂದು ಬೃಹತ್ ರ‍್ಯಾಲಿ

    ಗೌರಿ ಲಂಕೇಶ್ ಹತ್ಯೆ ಖಂಡಿಸಿ ನವದೆಹಲಿಯಲ್ಲಿಂದು ಬೃಹತ್ ರ‍್ಯಾಲಿ

    ನವದೆಹಲಿ: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯನ್ನು ಖಂಡಿಸಿ ಇಂದು ನವದೆಹಲಿಯಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ.

    ಇಂದಿಗೆ ಗೌರಿ ಲಂಕೇಶ್ ಹತ್ಯೆಯಾಗಿ ಒಂದು ತಿಂಗಳಾದರೂ ಇದುವರೆಗೂ ಹಂತಕರ ಸುಳಿವು ಸಿಕ್ಕಿಲ್ಲ. ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಗೌರಿ ಹತ್ಯೆಯನ್ನು ಸಂಭ್ರಮಿಸಿದ ವ್ಯಕ್ತಿಗಳನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಫಾಲೋ ಮಾಡುತ್ತಿದ್ದು, ಪ್ರಧಾನಿ ನಡೆಯನ್ನು ವಿರೋಧಿಸಿ ದೊಡ್ಡ ಮಟ್ಟದ  ರ‍್ಯಾಲಿ ಮಾಡಲು ಚಿಂತಿಸಲಾಗಿದೆ.

    ಗೌರಿ ಲಂಕೇಶ್ ಹತ್ಯೆ ವಿರೋಧಿ ವೇದಿಕೆಯಿಂದ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಮಧ್ಯಾಹ್ನ ಒಂದು ಗಂಟೆಗೆ ನವದೆಹಲಿಯ ಮಂಡಿ ಹೌಸ್‍ನಲ್ಲಿ ಪ್ರತಿಭಟನೆ ಆರಂಭವಾಗಲಿದೆ. ಮಂಡಿ ಹೌಸ್ ನಿಂದ ಜಂತರ್ ಮಂತರ್ ತನಕ ಪಾದಯಾತ್ರೆ ಮಾಡುವ ಮೂಲಕ ಪ್ರತಿಭಟನಾಕಾರರು ತಮ್ಮ ವಿರೋಧವನ್ನು ವ್ಯಕ್ತಪಡಿಸಲಿದ್ದಾರೆ.

    ಪ್ರತಿಭಟನೆಯಲ್ಲಿ ಸುಪ್ರೀಂ ಕೋರ್ಟ್ ಹಿರಿಯ ವಕೀಲ ಪ್ರಶಾಂತ್ ಭೂಷಣ್, ಹಿರಿಯ ಪತ್ರಕರ್ತ ಕುಲದೀಪ್ ನಾಯರ್, ಮರಿಯಂ ದಾವಳೆ, ರಾಜ್ಯ ಹೈಕೊರ್ಟ್ ನ  ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಸೇರಿದಂತೆ ಹಲವು ರಾಜ್ಯಗಳಿಂದ ವಿವಿಧ ಕ್ಷೇತ್ರಗಳ ಗಣ್ಯರು ಭಾಗಿಯಾಗಲಿದ್ದಾರೆ.

  • ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಕಲಬುರಗಿಯಲ್ಲಿ ಇಂದು ಬೃಹತ್ ರ‍್ಯಾಲಿ

    ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಕಲಬುರಗಿಯಲ್ಲಿ ಇಂದು ಬೃಹತ್ ರ‍್ಯಾಲಿ

    ಕಲಬುರಗಿ: ಪರ ವಿರೋಧದ ಮಧ್ಯೆ ಕಲಬುರಗಿಯಲ್ಲಿಂದು ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಬೃಹತ್ ರ‍್ಯಾಲಿ ನಡೆಸಲಾಗುತ್ತಿದೆ. ಈ ಮೂಲಕ ಬಸವ ತತ್ವದವರು ವೈಧಿಕ ಮಠಾಧೀಶರ ವಿರುದ್ಧ ಮತ್ತೆ ತಿರುಗಿ ಬಿದಿದ್ದಾರೆ. ಇನ್ನು ಈ ರ‍್ಯಾಲಿಯನ್ನು ಯಶಸ್ವಿ ಮಾಡಲು ಸಚಿವ ಎಂ.ಬಿ.ಪಾಟೀಲ್ ಸಂಪೂರ್ಣ ನೇತೃತ್ವವನ್ನು ವಹಿಸಿಕೊಂಡಿದ್ದಾರೆ.

    ಗಡಿ ಜಿಲ್ಲೆ ಬೀದರ್‍ನಿಂದ ಆರಂಭವಾದ ಪ್ರತ್ಯೇಕ ಲಿಂಗಾಯತ ಧರ್ಮ ಚಳುವಳಿ ಇದೀಗ ಕಲಬುರಗಿಗೆ ಕಾಲಿಟ್ಟಿದೆ. ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಇಂದು ನಗರದ ಎನ್‍ವಿ ಮೈದಾನದಲ್ಲಿ ಬೃಹತ್ ರ‍್ಯಾಲಿ ಆಯೋಜಿಸಲು ಸಕಲ ಸಿದ್ಧತೆ ನಡೆದಿದೆ. ರ‍್ಯಾಲಿ ಹಿನ್ನೆಲೆ ನಗರದ ಬಹುತೇಕ ರಸ್ತೆಗಳಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮದ ಬ್ಯಾನರ್ ಮತ್ತು ಕಟೌಟ್‍ಗಳು ರಾರಾಜಿಸುತ್ತಿವೆ.

    ಲಿಂಗಾಯತ ಧರ್ಮಕ್ಕೆ ಕಟಿಬದ್ಧರಾಗಿರೋ ಸಚಿವ ಎಂ.ಬಿ.ಪಾಟೀಲ್ ರ‍್ಯಾಲಿಯ ಸಂಪೂರ್ಣ ಉಸ್ತುವಾರಿ ವಹಿಸಿದ್ದು, ಸಮಾವೇಶದ ಯಶ್ವಸಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ರ‍್ಯಾಲಿ ನಡೆಯುವ ಎನ್‍ವಿ ಮೈದಾನಕ್ಕೆ ತೆರಳಿದ ಸಚಿವ ಎಂಬಿ ಪಾಟೀಲ್ ಎಲ್ಲಾ ಸಿದ್ಧತೆಗಳನ್ನು ತಾವೆ ಖುದ್ದಾಗಿ ನಿಂತು ಪರಿಶೀಲನೆ ನಡೆಸಿದ್ದಾರೆ.

    ಈ ಬೃಹತ್ ಸಮಾವೇಶದಲ್ಲಿ ಲಿಂಗಾತ ಧರ್ಮ ಬೇಕೆಂದು ಪ್ರತಿಪಾದಿಸುವ ಸ್ವಾಮೀಜಿಗಳು, ಮಠಾಧೀಶರು, ರಾಜಕಾರಣಿಗಳು ಪಾಲ್ಗೊಳ್ಳಲಿದ್ದಾರೆ. ಲಿಂಗಾಯತ ಸಮುದಾಯದ ಬರೋಬ್ಬರಿ 2 ಲಕ್ಷ ಮಂದಿ ಈ ಸಮಾವೇಶದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದ್ದು ಪ್ರತ್ಯೇಕ ಧರ್ಮದ ಕಹಳೆ ಮೊಳಗಿಸಲಿದ್ದಾರೆ.

    ಈ ಮಧ್ಯೆ ಲಿಂಗಾಯತ ರ‍್ಯಾಲಿಯಲ್ಲಿ ಯಾರು ಪಾಲ್ಗೊಳ್ಳಬಾರದು ಎಂದು ವೀರಶೈವ ಲಿಂಗಾಯತರು ಜಾಗೃತಿ ಮೂಡಿಸೋ ಕಾರ್ಯದಲ್ಲಿ ನಿರತರಾಗಿದ್ದಾರೆ. ಪ್ರತ್ಯೇಕ ಧರ್ಮ ರ‍್ಯಾಲಿ ಹಿನ್ನೆಲೆಯಲ್ಲಿ ಕಲಬುರಗಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೂಡ ಕೈಗೊಳ್ಳಲಾಗಿದೆ.