Tag: ರ್ಯಾಲಿ

  • ಹಿಮಾಚಲ ಪ್ರದೇಶದಲ್ಲಿ 8 ಬೃಹತ್ ಚುನಾವಣಾ ರ‍್ಯಾಲಿ ನಡೆಸಲಿದ್ದಾರೆ ಪ್ರಿಯಾಂಕಾ ಗಾಂಧಿ

    ಹಿಮಾಚಲ ಪ್ರದೇಶದಲ್ಲಿ 8 ಬೃಹತ್ ಚುನಾವಣಾ ರ‍್ಯಾಲಿ ನಡೆಸಲಿದ್ದಾರೆ ಪ್ರಿಯಾಂಕಾ ಗಾಂಧಿ

    ನವದೆಹಲಿ: ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ (Himachal Pradesh Election) ದಿನಾಂಕ ನಿಗದಿಯಾಗಿದ್ದು ಕಾಂಗ್ರೆಸ್ (Congress), ಬಿಜೆಪಿ (BJP) ಸೇರಿ ಎಲ್ಲ ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತಿವೆ. ಈ ನಡುವೆ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ (Rahul Gandhi)  ತೊಡಗಿರುವ ಹಿನ್ನೆಲೆ ಕಾಂಗ್ರೆಸ್‍ನಿಂದ ಸ್ಟಾರ್ ಪ್ರಚಾರಕರು ಯಾರು ಎನ್ನುವ ಪ್ರಶ್ನೆ ಕೇಳಿ ಬಂದಿತ್ತು. ಇದಕ್ಕೆ ಉತ್ತರ ಸಿಕ್ಕಿದ್ದು ಹಿಮಾಚಲ ಪ್ರದೇಶದಲ್ಲಿ ಪ್ರಿಯಾಂಕಾ ಗಾಂಧಿ (Priyanka Gandhi) ಅತಿ ಹೆಚ್ಚು ರ‍್ಯಾಲಿ (Rallie) ನಡೆಸುವ ಸಾಧ್ಯತೆಗಳಿದೆ.

    ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ನವೆಂಬರ್ 10 ರವರೆಗೆ ಹಿಮಾಚಲ ಪ್ರದೇಶದ ಮಂಡಿ, ಕುಲು, ಕಂಗ್ರಾ, ಚಂಬಾ ಹಮೀರ್‌ಪುರ್‌, ಉನಾ, ಶಿಮ್ಲಾ ಮತ್ತು ಸಿರ್ಮೌರ್‌ನಲ್ಲಿ ಎಂಟು ರ‍್ಯಾಲಿಗಳು ಮತ್ತು ರೋಡ್‍ಶೋಗಳನ್ನು (Road shows) ನಡೆಸಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ. ಇದನ್ನೂ ಓದಿ: ಅರುಣಾಚಲ ಪ್ರದೇಶದಲ್ಲಿ ಸೇನಾ ಹೆಲಿಕಾಪ್ಟರ್ ಪತನ

    ನವೆಂಬರ್ 3 ರಂದು ಕಾಂಗ್ರಾ ಮತ್ತು ಚಂಬಾ ಮತ್ತು ನವೆಂಬರ್ 7 ರಂದು ಹಮೀರ್‌ಪುರ್‌ ಮತ್ತು ಉನಾಗೆ ಭೇಟಿ ನೀಡಲಿದ್ದಾರೆ. ಇದಕ್ಕೂ ಮೊದಲು ಅವರು ಅಕ್ಟೋಬರ್ 31 ರಂದು ಮಂಡಿ ಮತ್ತು ಕುಲಗಳಲ್ಲಿ ರ‍್ಯಾಲಿ ನಡೆಸಲಿದ್ದಾರೆ. ನವೆಂಬರ್ 10 ರಂದು ಶಿಮ್ಲಾ ಮತ್ತು ಸಿರ್ಮೌರ್‌ನಲ್ಲಿ ರ‍್ಯಾಲಿಗಳು ಮತ್ತು ರೋಡ್‍ಶೋಗಳನ್ನು ನಡೆಸಲಿದ್ದಾರೆ. ಇದನ್ನೂ ಓದಿ: ದೇಶದಲ್ಲಿ ಸರ್ವರಿಗೂ ಸೌಹಾರ್ದತೆ, ಸಾಮರಸ್ಯ ಅತ್ಯಗತ್ಯ: ಯು.ಟಿ ಖಾದರ್

    ನವೆಂಬರ್ 12 ರಂದು ಹಿಮಾಚಲ ಪ್ರದೇಶದಲ್ಲಿ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿದೆ. ಡಿಸೆಂಬರ್ 8 ರಂದು ರಾಜ್ಯದಲ್ಲಿ ಮತ ಎಣಿಕೆ ನಡೆಯಲಿದೆ. ಭಾರತೀಯ ಜನತಾ ಪಕ್ಷ ಅಧಿಕಾರವನ್ನು ಉಳಿಸಿಕೊಳ್ಳಲು ಹವಣಿಸುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ‘ಹರ್ ಘರ್ ತಿರಂಗ’ ರ‍್ಯಾಲಿ ವೇಳೆ ಮಾಜಿ ಸಿಎಂ ನಿತಿನ್ ಪಟೇಲ್‍ಗೆ ತಿವಿದ ಹಸು

    ‘ಹರ್ ಘರ್ ತಿರಂಗ’ ರ‍್ಯಾಲಿ ವೇಳೆ ಮಾಜಿ ಸಿಎಂ ನಿತಿನ್ ಪಟೇಲ್‍ಗೆ ತಿವಿದ ಹಸು

    ಗಾಂಧೀನಗರ: ‘ಹರ್ ಘರ್ ತಿರಂಗ’ ಯಾತ್ರೆಯ ರ‍್ಯಾಲಿ ವೇಳೆ ಗುಜರಾತ್‍ನ ಮಾಜಿ ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಅವರ ಮೇಲೆ ರಸ್ತೆಯಲ್ಲಿ ಬಿಡಾಡುತ್ತಿದ್ದ ಹಸುಗಳು ದಾಳಿ ನಡೆಸಿರುವ ಘಟನೆ ಮೆಹ್ಸಾನಾ ಜಿಲ್ಲೆಯ ಕಡಿ ಪ್ರದೇಶದಲ್ಲಿ ನಡೆದಿದೆ.

    ಕಡಿಯಲ್ಲಿ ನಡೆದ ತ್ರಿವರ್ಣ ಧ್ವಜಾರೋಹಣದ ವೇಳೆ ಈ ಘಟನೆ ನಡೆದಿದೆ. ಕಾರನ್‍ಪುರ ತರಕಾರಿ ಮಾರುಕಟ್ಟೆಯಲ್ಲಿ ಓಡಾಡುತ್ತಿದ್ದ ಹಸು ನಿತಿನ್ ಪಟೇಲ್ ಅವರಿಗೆ ತಿವಿದಿದೆ. ಇದರಿಂದಾಗಿ ನಿತಿನ್ ಪಟೇಲ್ ಅವರ ಕಾಲಿಗೆ ಗಾಯವಾಗಿದ್ದು, ನಂತರ ಅವರನ್ನು ಸ್ಥಳೀಯರ ನೆರವಿನಿಂದ ತಕ್ಷಣ ಭಾಗ್ಯೋದಯ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಲಾಯಿತು. ಇದನ್ನೂ ಓದಿ: ಎಣ್ಣೆ ಏಟಲ್ಲಿ ರೆಸ್ಟೋರೆಂಟ್‍ನಲ್ಲಿ ರಂಪಾಟ – ಗಗನಸಖಿ ಸೇರಿ ಮೂವರು ಅರೆಸ್ಟ್

    ಚಿಕಿತ್ಸೆ ನಂತರ ನಿತಿನ್ ಪಟೇಲ್ ಅವರು ಅಹಮದಾಬಾದ್‍ನಲ್ಲಿರುವ ತಮ್ಮ ನಿವಾಸಕ್ಕೆ ತೆರಳಲಿದ್ದಾರೆ. ಇದೀಗ ನಿತಿನ್ ಪಟೇಲ್ ಅವರು ವೀಲ್ ಚೇರ್ ಮೇಲೆ ಕುಳಿತುಕೊಂಡಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಜೈಲಿನ ಕೈದಿಗೆ ಚಿಕನ್ ಪೀಸ್‍ನಲ್ಲಿ ಗಾಂಜಾ ಸಾಗಾಟ- ಪೊಲೀಸರಿಂದ ಜಪ್ತಿ

    Live Tv
    [brid partner=56869869 player=32851 video=960834 autoplay=true]

  • 75ನೇ ಸ್ವಾತಂತ್ರ್ಯ ಸಂಭ್ರಮಕ್ಕೆ 75 ಮೀ. ತಿರಂಗಾದೊಂದಿಗೆ 75 ಕಿ.ಮೀ ರ‍್ಯಾಲಿ

    75ನೇ ಸ್ವಾತಂತ್ರ್ಯ ಸಂಭ್ರಮಕ್ಕೆ 75 ಮೀ. ತಿರಂಗಾದೊಂದಿಗೆ 75 ಕಿ.ಮೀ ರ‍್ಯಾಲಿ

    ಬೆಂಗಳೂರು: ಭಾರತಕ್ಕೆ ಸ್ವಾತಂತ್ರ‍್ಯ ಬಂದು 75 ನೇ ವರ್ಷದ ಸಂಭ್ರಮಕ್ಕೆ ದಿನಗಣನೆ ಶುರುವಾಗಿದೆ. ಆಗಸ್ಟ್ 15ಕ್ಕೆ ಭಾರತಕ್ಕೆ ಬ್ರಿಟಿಷರಿಂದ ಸ್ವಾತಂತ್ರ‍್ಯ ಸಿಕ್ಕಿ 75 ವರ್ಷಗಳು ತುಂಬುತ್ತಿದೆ. ಈ ಅಮೃತ ಸ್ವಾತಂತ್ರ‍್ಯ ಉತ್ಸವವನ್ನು ಮತ್ತಷ್ಟು ಸಂಭ್ರಮದಿಂದ ಆಚರಣೆ ಮಾಡಲು ಎಲ್ಲರೂ ಸಿದ್ಧರಾಗುತ್ತಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಮನೆ ಅವರು ಮನೆಯಲ್ಲೂ ರಾಷ್ಟ್ರ ಧ್ವಜವನ್ನು ಹಾರಿಸಲು ಕರೆ ನೀಡಿರುವುದು ಗೊತ್ತೇ ಇದೆ. ಭಾರತದ ಸ್ವಾತಂತ್ರ‍್ಯ ಹೋರಾಟದಲ್ಲಿ ಭಾಗಿಯಾಗಿದ್ದ ಕಾಂಗ್ರೆಸ್ ಪಕ್ಷ ಸಹ ಭಾರತದ 75ನೇ ಸ್ವಾತಂತ್ರ‍್ಯ ದಿನಚಾರಣೆಯ ಪ್ರಯುಕ್ತ ಫ್ರೀಡಂ ರ‍್ಯಾಲಿಗೆ ಕರೆ ನೀಡಿದೆ. ಇದನ್ನೂ ಓದಿ: ಹೈಕಮಾಂಡ್ ಅವಕಾಶ ಕೊಟ್ಟರೇ ನಾವು ಸಿದ್ದರಾಮೋತ್ಸವಕ್ಕಿಂತಲೂ ಹೆಚ್ಚು ಜನರನ್ನು ಸೇರಿಸುತ್ತೇವೆ: ಕೆ.ಪಿ.ನಂಜುಂಡಿ

    ಫ್ರೀಡಂ ಮಾರ್ಚ್ ಪ್ರಯುಕ್ತ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 75 ಕಿ.ಮೀ ನಡಿಗೆ ಮಾಡುವ ಕಾರ್ಯಕ್ರಮಕ್ಕೆ ಕೆಪಿಸಿಸಿ ಕರೆ ನೀಡಿದ್ದು, ಅದರ ಪ್ರಯುಕ್ತ ಇಂದು ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರದ ಗೋವಿಂದಪುರ ವಾರ್ಡ್ನ ಕಾಂಗ್ರೆಸ್ ಕಾರ್ಯಕರ್ತರು ರ‍್ಯಾಲಿಗೆ ಚಾಲನೆ ನೀಡಿದರು.

    ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಸೈಯದ್ ಆಲಿ ನೇತೃತ್ವದಲ್ಲಿ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಗೋವಿಂದಪುರ ವಾರ್ಡ್‌ನಲ್ಲಿ 9 ಕಿ.ಮೀ ಫ್ರೀಡಂ ಮಾರ್ಚ್ ಮಾಡಿದರು. 75 ಮೀ. ಉದ್ದದ ತ್ರಿವರ್ಣ ಧ್ವಜವನ್ನು ಇಡೀ ವಾರ್ಡ್‌ನಲ್ಲಿ ಪ್ರದರ್ಶನ ಮಾಡಿದ್ದು ವಿಶೇಷವಾಗಿತ್ತು. 75 ಮೀ. ಉದ್ದದ ತ್ರಿವರ್ಣ ಧ್ವಜವನ್ನು 500 ಜನ ಹಿಡಿದುಕೊಂಡು ನಡಿಗೆಯಲ್ಲಿ ಭಾಗಿಯಾಗಿದ್ದರು. ಇದನ್ನೂ ಓದಿ: ಪ್ರಧಾನಿ ಬಂದಾಗ ಮಾತ್ರ ರಸ್ತೆ ಮಾಡಿಸ್ತೀರಾ; ನಮ್ಮ ಮಕ್ಕಳು ಒಳ್ಳೆ ರಸ್ತೆಯಲ್ಲಿ ಓಡಾಡಬಾರದಾ – ಪ್ರಕಾಶ್‌ ರಾಜ್‌ ಪ್ರಶ್ನೆ

    Live Tv
    [brid partner=56869869 player=32851 video=960834 autoplay=true]

  • PFI ರ‍್ಯಾಲಿಯಲ್ಲಿ ಬಾಲಕನಿಂದ ಹಿಂದೂ-ಕ್ರಿಶ್ಚಿಯನ್ನರ ವಿರುದ್ಧ ಘೋಷಣೆ – ಪೊಲೀಸರಿಂದ ತನಿಖೆ

    PFI ರ‍್ಯಾಲಿಯಲ್ಲಿ ಬಾಲಕನಿಂದ ಹಿಂದೂ-ಕ್ರಿಶ್ಚಿಯನ್ನರ ವಿರುದ್ಧ ಘೋಷಣೆ – ಪೊಲೀಸರಿಂದ ತನಿಖೆ

    ತಿರುವನಂತಪುರಂ: ಕೇರಳದ ಅಲಪ್ಪುಳದಲ್ಲಿ `ಗಣರಾಜ್ಯವನ್ನು ರಕ್ಷಿಸಿ’ ಎಂಬ ಘೋಷ ವಾಕ್ಯದಡಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಸಂಘಟನೆಯಿಂದ ಈಚೆಗೆ ನಡೆದ ರ‍್ಯಾಲಿಯಲ್ಲಿ ಬಾಲಕನೊಬ್ಬ ಹಿಂದೂ ಹಾಗೂ ಕ್ರಿಶ್ಚಿಯನ್ನರ ವಿರುದ್ಧ ಘೋಷಣೆ ಕೂಗಿರುವ ವೀಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದೆ.

    ವೀಡಿಯೋನಲ್ಲಿ ವ್ಯಕ್ತಿಯೊಬ್ಬರ ಹೆಗಲ ಮೇಲೆ ಕುಳಿತಿರುವ ಹುಡುಗ, ಅಕ್ಕಿಯನ್ನು ಸಿದ್ಧವಾಗಿಡಿ, ಯಮ ನಿಮ್ಮ ಮನೆಗೆ ಬರ್ತಾನೆ, ನಾವು ಗೌರವಯುತವಾಗಿ ಬದುಕಿದರೆ ನಮ್ಮ ಜಾಗದಲ್ಲಿ ಬದುಕಬಹುದು. ಇಲ್ಲದಿದ್ದರೆ ಏನಾಗುತ್ತದೆ ಎನ್ನುವುದು ನಮಗೆ ಗೊತ್ತಿಲ್ಲ ಎಂದೂ ಘೋಷಣೆ ಕೂಗಿದ್ದಾನೆ. ಇದನ್ನೂ ಓದಿ: ದಲಿತ ಯುವತಿಯ ಮೇಲೆ ಗ್ಯಾಂಗ್ ರೇಪ್ – ಡಿಎಂಕೆ ಯುವ ನಾಯಕ ಅರೆಸ್ಟ್

    rally (1)

    ಈ ಕುರಿತು ಪ್ರತಿಕ್ರಿಯಿಸಿರುವ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮುಖ್ಯಸ್ಥ ಪ್ರಿಯಾಂಕ್ ಕನೂಂಗೊ, ಇಂತಹ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸುವುದು ಬಾಲಾಪರಾಧಿ ಕಾಯ್ದೆಯ ಅನ್ವಯ ಶಿಕ್ಷಾರ್ಹವಾಗಿದೆ. ನಾವು ಎಫ್‌ಐಆರ್ ದಾಖಲಿಸಲು ಸಂಬಂಧಿಸಿದ ಜಿಲ್ಲೆಯ ಅಧಿಕಾರಿಗಳಿಗೆ ಪತ್ರ ಬರೆಯುತ್ತೇವೆ. ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸುತ್ತೇವೆ ಎಂದಿದ್ದಾರೆ.

    ಸಾಂದರ್ಭಿಕ ಚಿತ್ರ

    ಪಿಎಫ್‌ಐ ವಕ್ತಾರ ರೌಫ್ ಪಟ್ಟಾಂಬಿ ಸಹ ಈ ಬಗ್ಗೆ ಮಾತನಾಡಿದ್ದು, ಸಂಘಟನೆಯು ಆಯೋಜಿಸಿದ್ದ ಸಮಾವೇಶದಲ್ಲಿ ಘೋಷಣೆ ಕೂಗಿಲ್ಲ. ಅದಕ್ಕೂ ಮುನ್ನ ಸಾವಿರಾರು ಜನರು ಭಾಗವಹಿಸಿದ್ದ ರ‍್ಯಾಲಿಯಲ್ಲಿ ಘೋಷಣೆ ಕೂಗಿರಬಹುದು. ಆದರೆ ಹಿಂದೂಗಳ ವಿರುದ್ಧ ಘೋಷಣೆ ಕೂಗಿಲ್ಲ, ಹಿಂದುತ್ವ ವಿರೋಧಿ ಹಾಗೂ ಫ್ಯಾಸಿಸ್ಟ್ಗಳ ವಿರುದ್ಧ ಕೂಗಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೆಲವು ಐಫೋನ್‌ಗಳಲ್ಲಿ ಸ್ಥಗಿತವಾಗಲಿದೆ ವಾಟ್ಸಪ್

    ರ‍್ಯಾಲಿಯಲ್ಲಿ ಅನೇಕರು ಹಿಂದುತ್ವ ಭಯೋತ್ಪಾದನೆಯ ವಿರುದ್ಧ ಘೋಷಣೆಗಳನ್ನು ಕೂಗಿದರು. ಹಾಗೆಯೇ ಈ ಹುಡುಗನೂ ಘೋಷಣೆ ಕುಗಿದ್ದಾನೆ. ಹೊರತಾಗಿ ಹುಡುಗನ ಕೆಲ ಘೋಷಣೆಗಾಗಿ ನಾವು ವಿಷಾದಿಸುತ್ತೇವೆ. ಈ ಬಗ್ಗೆ ಪರಿಶೀಲಿಸುತ್ತೇವೆ ಎಂದು ತಿಳಿಸಿದ್ದಾರೆ. ಅಲಪ್ಪುಳ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

  • ಅಗೌರವ ತೋರಿದ ಅಧಿಕಾರಿಗಳಿಗೆ ನಡುರಸ್ತೆಯಲ್ಲೇ ತರಾಟೆ ತೆಗೆದುಕೊಂಡ ಮೇಯರ್

    ಅಗೌರವ ತೋರಿದ ಅಧಿಕಾರಿಗಳಿಗೆ ನಡುರಸ್ತೆಯಲ್ಲೇ ತರಾಟೆ ತೆಗೆದುಕೊಂಡ ಮೇಯರ್

    ಮೈಸೂರು: ಸಮಯಕ್ಕೆ ಸರಿಯಾಗಿ ಕಾರ್ಯಕ್ರಮಕ್ಕೆ ಬಂದ ಮೈಸೂರು ಮೇಯರ್‌ಗೆ, ಕಾರ್ಯಕ್ರಮವನ್ನು ನೀವು ಬರುವುದಕ್ಕೂ ಮುಂಚಿತವಾಗಿ ಮುಗಿಸಿದ್ದೇವೆ ಎಂದು ಆಯೋಜಕರು ತಿಳಿಸಿದ್ದಾರೆ. ಈ ಹಿನ್ನೆಲೆ ಕಾರ್ಯಕ್ರಮ ಆಯೋಜಕರನ್ನು ಮೇಯರ್ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.

    ಅಗ್ನಿಶಾಮಕ ಸೇವಾ ಸಪ್ತಾಹ ಅಂಗವಾಗಿ ಸೈಕಲ್ ಹಾಗೂ ಬೈಕ್ ರ‍್ಯಾಲಿಯಲ್ಲಿ ಮೈಸೂರು ಮೇಯರ್‍ಗೆ ಅಗೌರವ ಸೂಚಿಸಿಲಾಗಿದೆ. ಹೀಗಾಗಿ ಮೇಯರ್ ಸುನಂದಾ ಪಾಲನೇತ್ರ ಅಗ್ನಿಶಾಮಕ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿ ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ನನ್ನನ್ನು ಪದಚ್ಯುತಿಗೊಳಿಸಲು ವಿದೇಶಿ ಸಂಚು ನಡೆದಿದೆ: ಇಮ್ರಾನ್ ಆರೋಪ

    ನಡೆದಿದ್ದೇನು?
    ಜಾಥಾ ಕಾರ್ಯಕ್ರಮ ಬೆಳಗ್ಗೆ 7ಕ್ಕೆ ನಿಗದಿಯಾಗಿತ್ತು. ಮೇಯರ್‍ಗೆ ಕರೆ ಮಾಡಿದ ಆಯೋಜಕರು 7.30ಕ್ಕೆ ಕಾರ್ಯಕ್ರಮ ಆರಂಭವಾಗುತ್ತೆ. ಅರ್ಧಗಂಟೆ ತಡವಾಗಿ ಬನ್ನಿ ಎಂದು ಹೇಳಿದ್ದಾರೆ. ಮೇಯರ್ ಸರಿಯಾಗಿ 7.30ಕ್ಕೆ ಕಾರ್ಯಕ್ರಮದ ಸ್ಥಳಕ್ಕೆ ಬಂದಾಗ ಶಾಕ್ ಆಗಿದ್ದಾರೆ. ಏಕೆಂದರೆ ಜಾಥಾ ಆಗಲೇ ಮುಂದೆ ಸಾಗಿತ್ತು. ಇದರಿಂದ ಸಿಡಿಮಿಡಿಗೊಂಡ ಮೇಯರ್ ಅಧಿಕಾರಿಗೆ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡರು.

  • ನಾನು ಅಧಿಕಾರದಲ್ಲಿದ್ದಾಗ ಅಪಾಯಕಾರಿಯಾಗಿರಲಿಲ್ಲ, ಆದ್ರೆ ಈಗ ಆಗಿದ್ದೇನೆ: ಇಮ್ರಾನ್ ಖಾನ್

    ನಾನು ಅಧಿಕಾರದಲ್ಲಿದ್ದಾಗ ಅಪಾಯಕಾರಿಯಾಗಿರಲಿಲ್ಲ, ಆದ್ರೆ ಈಗ ಆಗಿದ್ದೇನೆ: ಇಮ್ರಾನ್ ಖಾನ್

    ಇಸ್ಲಾಮಾಬಾದ್: ಅಧಿಕಾರದಲ್ಲಿದ್ದಾಗ ನಾನು ಅಪಾಯಕಾರಿ ಆಗಿರಲಿಲ್ಲ. ಆದರೆ ಈಗ ನಾನು ಅಪಾಯಕಾರಿಯಾಗಿದ್ದೇನೆ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ತಿಳಿಸಿದರು.

    ಪಾಕಿಸ್ತಾನದ ಪೇಶಾವರದಲ್ಲಿ ನಡೆದ ರ‍್ಯಾಲಿಯಲ್ಲಿ ಮಾತನಾಡಿದ ಅವರು, ಕಳೆದ ವಾರ ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿ ತನ್ನ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಅಂಗೀಕರಿಸುವ ಮೊದಲು ಮಧ್ಯರಾತ್ರಿಯಲ್ಲಿ ನ್ಯಾಯಾಲಯಗಳನ್ನು ಏಕೆ ತೆರೆಯಲಾಯಿತು, ನಾನು ಯಾವುದಾದರೂ ಕಾನೂನು ಉಲಂಘಿಸಿದ್ದೇನೆಯೇ ಎಂದು ಪ್ರಶ್ನಿಸಿದ ಅವರು, ನ್ಯಾಯಾಗವು ಸ್ವತಂತ್ರ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

    ದೇಶದಲ್ಲಿ ಪ್ರತಿ ಬಾರಿ ನಾಯಕರನ್ನು ಪದಚ್ಯುತಗೊಳಿಸಿದಾಗ ಜನರು ಸಂಭ್ರಮಾಚರಣೆ ಮಾಡುತ್ತಿದ್ದರು. ಆದರೆ ಈ ಬಾರಿ ಬೃಹತ್ ಪ್ರತಿಭಟನೆಗಳು ನಡೆದಿವೆ ಎಂದು ಹೇಳಿದರು. ಇದನ್ನೂ ಓದಿ: ಗಿಫ್ಟ್‌ ಆಗಿ ಬಂದ ನೆಕ್ಲೆಸ್‌ನ್ನು 18 ಕೋಟಿಗೆ ಮಾರಿದ್ದಕ್ಕೆ ಇಮ್ರಾನ್‌ ಖಾನ್‌ ವಿರುದ್ಧ ತನಿಖೆ

    ಪಾಕಿಸ್ತಾನದಲ್ಲಿ ತನ್ನ ಸರ್ಕಾರವನ್ನು ತೆಗೆದುಹಾಕುವಲ್ಲಿ ವಿದೇಶಿ ರಾಷ್ಟ್ರಗಳು ಭಾಗಿಯಾಗಿದ್ದು, ಅಮೆರಿಕವು ಈ ಡಕಾಯಿತರನ್ನು (ಹೊಸ ಸರ್ಕಾರ) ನಮ್ಮ ಮೇಲೆ ಹೇರುವ ಮೂಲಕ ಪಾಕಿಸ್ತಾನವನ್ನು ಅವಮಾನಿಸಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಪಾಕ್ ಸೇನಾ ಮುಖ್ಯಸ್ಥರಿಗೆ ಅವಮಾನ – ಇಮ್ರಾನ್ ಖಾನ್ ಸಾಮಾಜಿಕ ಮಾಧ್ಯಮ ತಂಡ ಅರೆಸ್ಟ್

  • ಮಹಿಳೆಯರಿಗೆ 33% ಸರ್ಕಾರಿ ಉದ್ಯೋಗ, 200 ಕೋಟಿ ವೆಚ್ಚದಲ್ಲಿ ವಿಶ್ವವಿದ್ಯಾಲಯ ನಿರ್ಮಾಣ: ಅಮಿತ್ ಶಾ

    ಮಹಿಳೆಯರಿಗೆ 33% ಸರ್ಕಾರಿ ಉದ್ಯೋಗ, 200 ಕೋಟಿ ವೆಚ್ಚದಲ್ಲಿ ವಿಶ್ವವಿದ್ಯಾಲಯ ನಿರ್ಮಾಣ: ಅಮಿತ್ ಶಾ

    ಅಗರ್ತಲಾ: ತ್ರಿಪುರಾದಲ್ಲಿ ಮಹಿಳೆಯರಿಗಾಗಿ 33% ಸರ್ಕಾರಿ ಉದ್ಯೋಗಗಳು, 200 ಕೋಟಿ ವೆಚ್ಚದಲ್ಲಿ ವಿಶ್ವವಿದ್ಯಾಲಯವನ್ನು ನಿರ್ಮಿಸುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭರವಸೆ ನೀಡಿದರು.

    ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಅವರು ತ್ರಿಪುರಾದಲ್ಲಿ ಶೇ. 33ರಷ್ಟು ಸರ್ಕಾರಿ ಉದ್ಯೋಗಗಳನ್ನು ಮಹಿಳೆಯರಿಗೆ ಮೀಸಲಿಡಲಾಗುವುದು ಎಂದು ಘೋಷಿಸಿದರು. ಇದನ್ನೂ ಓದಿ: ಕೊರೊನಾದಿಂದ ಮೃತಪಟ್ಟ ರೈತರ ಸಾಲಮನ್ನಾ ಅಸಾಧ್ಯ: ಎಸ್.ಟಿ. ಸೋಮಶೇಖರ್

    ಈಶಾನ್ಯ ರಾಜ್ಯದಲ್ಲಿ ಬಿಜೆಪಿ-ಐಪಿಎಫ್‍ಟಿ ಸರ್ಕಾರದ ನಾಲ್ಕನೇ ವಾರ್ಷಿಕೋತ್ಸವದ ಅಂಗವಾಗಿ ಅಗರ್ತಲಾದಲ್ಲಿ ನಡೆದ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಪ್ಲಬ್ ದೇಬ್ ಅವರ ಆಡಳಿತವು ರಾಜಕೀಯ ಹಿಂಸಾಚಾರಕ್ಕೆ ಪೂರ್ಣ ವಿರಾಮ ಹಾಕಿದೆ. ನಾವು 200 ಕೋಟಿ ರೂಪಾಯಿ ವೆಚ್ಚದಲ್ಲಿ ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯವನ್ನು ಸ್ಥಾಪಿಸುತ್ತೇವೆ. ರಾಜ್ಯದ ಯುವಜನರಿಗಾಗಿ ಕೇವಲ 4 ವರ್ಷಗಳಲ್ಲಿ ಪ್ರತಿ ವ್ಯಕ್ತಿಯ ಆದಾಯವು 13% ರಿಂದ 1.30 ಲಕ್ಷಕ್ಕೆ ಏರಿದೆ ಎಂದು ಹೇಳಿದರು. ಇದನ್ನೂ ಓದಿ: ಬಿಜೆಪಿಯದ್ದು ಸಬ್ ಕಾ ವಿಕಾಸ್ ನಹೀ ಹೇ, ಸಬ್ ಕಾ ಸರ್ವ ನಾಶ್ ಹೇ: ಸಿದ್ದರಾಮಯ್ಯ

    ಪ್ರಸ್ತುತ ನಮ್ಮ ಸರ್ಕಾರದ ಅಡಿಯಲ್ಲಿ ರೈತರ ಆದಾಯವು ದ್ವಿಗುಣಗೊಂಡಿದೆ. ತಲಾ ಆದಾಯವು ರೂ 1.3 ಲಕ್ಷಕ್ಕೆ ಏರಿದೆ. ರೈಲಿನ ಮೂಲಕ ಅಗರ್ತಲಾವನ್ನು ದೇಶದ ಇತರ ಭಾಗಗಳೊಂದಿಗೆ ಸಂಪರ್ಕಿಸಲಾಗಿದೆ. ಒಟ್ಟು 542 ಕಿಮೀ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸಲಾಗಿದೆ. ತ್ರಿಪುರಾದಲ್ಲಿ ನಡೆಯುವ ಘೋರ ಅಪರಾಧಗಳಲ್ಲಿ ಶೇ. 30ರಷ್ಟು ಇಳಿಕೆಯಾಗಿದೆ. ಶಿಕ್ಷೆಯ ಪ್ರಮಾಣವು ಶೇ.5 ರಿಂದ ಶೇ.53ಕ್ಕೆ ಏರಿದೆ ಎಂದು ತಿಳಿಸಿದರು.

    ಹಿಂದಿನ ಪ್ರಣಾಳಿಕೆಯಲ್ಲಿ ನೀಡಿದ ಎಲ್ಲಾ ಭರವಸೆಗಳನ್ನು ಆಡಳಿತ ವ್ಯವಸ್ಥೆಯು ಈಡೇರಿಸುತ್ತದೆ. ಮುಂದಿನ ವರ್ಷದ ಆರಂಭದಲ್ಲಿ ಈಶಾನ್ಯ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಹೀಗಾಗಿ ಮತ ಕೇಳಲು ತ್ರಿಪುರಾಕ್ಕೆ ಮತ್ತೆ ಹಿಂದಿರುಗುತ್ತೇನೆ ಎಂದರು.

  • ಗೋವಾದಲ್ಲಿ ಇಂದು ಮೆಗಾ ರ್‍ಯಾಲಿ ನಡೆಸಲಿರುವ ಮೋದಿ

    ಗೋವಾದಲ್ಲಿ ಇಂದು ಮೆಗಾ ರ್‍ಯಾಲಿ ನಡೆಸಲಿರುವ ಮೋದಿ

    ಪಣಜಿ: ಗೋವಾ ವಿಧಾನಸಭಾ ಚುನಾವಣೆ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಾಪುಸಾದಲ್ಲಿ ಬೃಹತ್ ರ್‍ಯಾಲಿ ನಡೆಸಲಿದ್ದಾರೆ.

    ಗೋವಾದಲ್ಲಿ ಚುನಾವಣಾ ಪ್ರಚಾರ ಮುಗಿಯುವ ಒಂದು ದಿನದ ಮುನ್ನ ಮೋದಿ ಅವರು ಸಂಜೆ 5 ಗಂಟೆಗೆ ಬೋಡ್ಗೇಶ್ವರ ಮೈದಾನದಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಸಭೆಯಲ್ಲಿ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದು, ಈಗಾಗಲೇ ವೇದಿಕೆ ಸಜ್ಜುಗೊಳಿಸಲಾಗುತ್ತಿದೆ. ಇದನ್ನೂ ಓದಿ: ಶಿಕ್ಷಣ ಸಂಸ್ಥೆಗಳ 200 ಮೀಟರ್ ವ್ಯಾಪ್ತಿಯಲ್ಲಿ ಪ್ರತಿಭಟನೆಗೆ ನಿಷೇಧ: ಕಮಲ್ ಪಂತ್

    ಸುಂದರವಾದ ದೀಪಾಲಂಕಾರ ಮತ್ತು ಬೃಹತ್ ಪೆಂಡಾಲ್ ಜನರಿಗೆ ಪ್ರಮುಖ ಆಕರ್ಷಣೆಯಾಗಲಿದೆ ಮತ್ತು ದೊಡ್ಡ ಸ್ವಾಗತ ಫಲಕಗಳನ್ನು ನಿರ್ಮಿಸಲಾಗಿದೆ. ಮೋದಿ ಅವರು ನಡೆಸಲಿರುವ ರ್‍ಯಾಲಿಯು ಸಾರ್ವಜನಿಕರ, ರಾಷ್ಟ್ರೀಯ ಮತ್ತು ರಾಜ್ಯ ಮಾಧ್ಯಮಗಳ ಗಮನ ಸೆಳೆಯಲಿದೆ. ಇದನ್ನೂ ಓದಿ: ನಿಮ್ಮ ಮತವೇ ಉಜ್ವಲ ಭವಿಷ್ಯಕ್ಕೆ ಆಧಾರ: ಯುಪಿ ಮತದಾರರಿಗೆ ಅಮಿತ್ ಶಾ ಕರೆ

    ಭಾರತೀಯ ಚುನಾವಣಾ ಆಯೋಗದ ಮಾರ್ಗಸೂಚಿಗಳಿಗೆ ಬದ್ಧವಾಗಿ ಪಕ್ಷವು ಎಲ್ಲಾ ಕ್ರಮಗಳನ್ನು ಕೈಗೊಂಡಿದೆ ಎಂದು ಬಿಜೆಪಿ ತಿಳಿಸಿದೆ. ಕೋವಿಡ್-19 ನಿಯಮಗಳ ಅನುಸಾರವಾಗಿ ಕ್ರಮ ಕೈಗೊಳ್ಳಲಾಗಿದ್ದು, ಕೋವಿಡ್-19 ಪ್ರೋಟೋಕಾಲ್‍ಗಳನ್ನು ಅನುಸರಿಸಲು ನಾವು ಪ್ರತಿಯೊಬ್ಬರನ್ನು ಒತ್ತಾಯಿಸುತ್ತೇವೆ ಎಂದು ತಿಳಿಸಲಾಗಿದೆ. ಗೋವಾ ವಿಧಾನಸಭಾ ಚುನಾವಣೆ ಫೆಬ್ರವರಿ 14 ರಂದು ನಡೆಯಲಿದ್ದು, ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.

  • ಮೋದಿಗೆ ಕೇವಲ 15 ನಿಮಿಷ ಸಮಸ್ಯೆಯಾಗಿದೆ, ರೈತರು 1 ವರ್ಷ ಪ್ರತಿಭಟಿಸಿದ್ದಾರೆ: ಸಿಧು

    ಮೋದಿಗೆ ಕೇವಲ 15 ನಿಮಿಷ ಸಮಸ್ಯೆಯಾಗಿದೆ, ರೈತರು 1 ವರ್ಷ ಪ್ರತಿಭಟಿಸಿದ್ದಾರೆ: ಸಿಧು

    ಚಂಡೀಗಢ: ಮೋದಿ ಸಮಸ್ಯೆ ಅನುಭವಿಸಿದ್ದು ಕೇವಲ 15 ನಿಮಿಷಗಳಷ್ಟೇ, ರೈತರು ಒಂದು ವರ್ಷ ಪ್ರತಿಭಟಿಸಿದ್ದಾರೆ ಎಂದು ಪಂಜಾಬ್ ರಾಜ್ಯದ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ವ್ಯಂಗ್ಯವಾಡಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ರೈತ ಸಹೋದರರು ದೆಹಲಿ ಗಡಿಯಲ್ಲಿ ಒಂದು ವರ್ಷದಿಂದ ಪ್ರತಿಭಟನೆ ನಡೆಸಿದ್ದರು. ಒಂದೂವರೆ ವರ್ಷ ಅಲ್ಲಿಯೇ ಮೊಕ್ಕಾಂ ಹೂಡಿದ್ದರು. ಈ ಬಗ್ಗೆ ನಿಮ್ಮ ಮಾಧ್ಯಮಗಳು ಏನನ್ನೂ ಹೇಳಲಿಲ್ಲ, ಆದರೆ ನೀವು 15 ನಿಮಿಷ ಅನುಭವಿಸಿದ್ದ ಸಂಕಷ್ಟ ದೊಡ್ಡ ಸುದ್ದಿಯಾಗಿದೆ. ಈ ರೀತಿಯ ದ್ವಿಮುಖ ಧೋರಣೆ ಏಕೆ ಎಂದು ಮೋದಿ ಅವರನ್ನು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಭಾರೀ ಭದ್ರತಾ ಲೋಪ – ಪಂಜಾಬ್ ಫ್ಲೈ ಓವರ್‌ನಲ್ಲಿ 20 ನಿಮಿಷ ಸಿಲುಕಿದ ಮೋದಿ

    ಫಿರೋಜ್‍ಪುರದಲ್ಲಿ ಮೋದಿ ಭಾಷಣ ಮಾಡಲಿದ್ದ ಬಿಜೆಪಿ ರ‍್ಯಾಲಿಗೆ ಕೇವಲ 500 ಮಂದಿ ಮಾತ್ರ ಬಂದಿದ್ದರು. ನಾಚಿಕೆಯಿಲ್ಲದೆ ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರು ಖಾಲಿ ಖುರ್ಚಿಗಳ ನಡುವೆಯೂ ಭಾಷಣ ಮಾಡಿದ್ದಾರೆ. ಆದರೆ ಪ್ರಧಾನಿ ಮೋದಿ ಅವರು ಹಾಗಲ್ಲ. ರ‍್ಯಾಲಿಯಿಂದ ದೂರ ಉಳಿಯಲು, ಮಾಧ್ಯಮಗಳ ಗಮನ ಸೆಳೆಯಲು ಭದ್ರತಾ ಲೋಪ ಆರೋಪ ಮಾಡಿದ್ದಾರೆ. ಈ ಬೆಳವಣಿಗೆಯು ಪಂಜಾಬ್‍ನಲ್ಲಿ ಬಿಜೆಪಿಯ ವೈಫಲ್ಯತೆಯನ್ನು ತೋರಿಸುತ್ತಿದೆ. ಬಿಜೆಪಿ ಒಡೆದ ಬಲೂನ್ ನಂತಾಗಿದೆ ಎಂದು ಬಿಜೆಪಿ ವಿರುದ್ಧವಾಗಿ ಕಿಡಿಕಾರಿದ್ದಾರೆ. ಇದನ್ನೂ ಓದಿ: ಭದ್ರತಾ ಲೋಪವಾಗಿಲ್ಲ, ಜನರಿಲ್ಲದೇ ಖಾಲಿ ಕುರ್ಚಿಗಳಿದ್ದ ಕಾರಣ ಪಿಎಂ ರ‍್ಯಾಲಿ ರದ್ದು: ಪಂಜಾಬ್‌ ಸಿಎಂ

    ಭದ್ರತಾ  ಲೋಪದಿಂದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬ್‌ನ ಫ್ಲೈ ಓವರ್‌ನಲ್ಲಿ ಸುಮಾರು 20 ನಿಮಿಷಗಳ ಕಾಲ ಸಿಲುಕಿಕೊಂಡ ಘಟನೆ ನಡೆದಿತ್ತು. ಪ್ರತಿಭಟನೆ ಕಾರಣದಿಂದಾಗಿ ಪಿಎಂ ಮೋದಿ ಅವರ ಸುಗಮ ಸಂಚಾರಕ್ಕೆ ಅವಕಾಶ ಸಿಕ್ಕಿಲ್ಲ. ಹೀಗಾಗಿ ಅವರ ಕಾರ್ಯಕ್ರಮವನ್ನು ರದ್ದುಗೊಳಿಸಿ  ಬಟಿಂಡಾ ವಿಮಾನ ನಿಲ್ದಾಣಕ್ಕೆ ಮರಳಿದ್ದರು.

  • ಪಂಜಾಬ್‍ನಲ್ಲಿ ಮೋದಿಗೆ ಆದ ಅವಮಾನ ಖಂಡಿಸಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

    ಪಂಜಾಬ್‍ನಲ್ಲಿ ಮೋದಿಗೆ ಆದ ಅವಮಾನ ಖಂಡಿಸಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

    ಧಾರವಾಡ: ಪಂಜಾಬ್‍ನಲ್ಲಿ ಪ್ರಧಾನಿ ಮಂತ್ರಿ ನರೇಂದ್ರ ಮೋದಿಯವರಿಗಾದ ಅವಮಾನ ಖಂಡಿಸಿ ನಗರದ ಜಿಲ್ಲಾ ಬಿಜೆಪಿ ಕಾರ್ಯಕರ್ತರ ವತಿಯಿಂದ ಪ್ರತಿಭಟನೆ ನಡೆಸಿದ್ದಾರೆ.

    ನಗರದ ಸುಭಾಸ ರಸ್ತೆಯ ಬಿಜೆಪಿ ಕಚೇರಿಯಿಂದ ರಿಗಲ್ ವೃತದ ಕಾಂಗ್ರೆಸ್ ಕಚೇರಿವರೆಗೆ ರ್ಯಾಲಿ ನಡೆಸಿದ್ದು, ಕಾಂಗ್ರೆಸ್ ಪಕ್ಷದ ವಿರುದ್ಧ ಘೋಷಣೆ ಕೂಗಿದ್ದಾರೆ. ಕೈಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಪ್ರತಿಭಟನೆ ನಡೆಸಿದ್ದು, ಪಂಜಾಬ್ ಸಿಎಂ ಭಾವಚಿತ್ರ ಸುಟ್ಟು ರ್ಯಾಲಿ ಮಾಡಿ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನನ್ನ ಹೆಸರು Kovid, ಆದ್ರೆ ನಾನು ವೈರಸ್ ಅಲ್ಲ: ಬೆಂಗಳೂರು ಉದ್ಯಮಿ

    ಪ್ರತಿಭಟನೆ ವೇಳೆ ಕೆಲ ಬಿಜೆಪಿ ಕಾರ್ಯಕರ್ತರು ಮಾಸ್ಕ್ ಇಲ್ಲದೇ ಬಂದಿದ್ದು, ಇನ್ನೂ ಸಾಮಾಜಿಕ ಅಂತರ ಕೂಡಾ ಇಲ್ಲದೇ ಪ್ರತಿಭಟನೆ ನಡೆಸಿರುವುದು ಕಂಡುಬಂತು. ಪ್ರತಿಭಟನೆ ವೇಳೆ ಕಾರ್ಯಕರ್ತರು ಟಯರ್ ಸುಟ್ಟು ಆಕ್ರೋಶ ವ್ಯಕ್ತಪಡಿಸುತ್ತಿದ್ದ ಸಂದರ್ಭದಲ್ಲಿ ನಗರದ ಇನ್ಸ್ ಪೆಕ್ಟರ್‍ರೊಬ್ಬರು ಟಯರ್‍ಗೆ ನೀರು ಹಾಕಿದ್ದು, ಬಿಜೆಪಿ ಮಾಜಿ ಶಾಸಕಿ ಸೀಮಾ ಮಸೂತಿ ಇನ್ಸ್ ಪೆಕ್ಟರ್‍ನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನೀವು ಕಾಂಗ್ರೆಸ್‍ಗೆ ಬೆಂಬಲ ಕೊಡುತ್ತೀರಾ ಎಂದು ಅವಾಜ್ ಹಾಕಿದ್ದಾರೆ. ಇದನ್ನೂ ಓದಿ: ವಯೋಮಿತಿ ಏರಿಕೆ ಭೀತಿ- ಮುಸ್ಲಿಮರು ತರಾತುರಿ ಲಗ್ನ

    ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲು ಪಂಜಾಬ್‍ಗೆ ಪ್ರಧಾನಿ ನರೇಂದ್ರ ಮೋದಿ ತೆರಳಿದ್ದ ವೇಳೆ ಭದ್ರತಾ ಲೋಪದಿಂದ ಫೈಓವರ್‍ನಲ್ಲಿ ಸುಮಾರು 20 ನಿಮಿಷಗಳ ಕಾಲ ಸಿಲುಕಿಕೊಂಡಿದ್ದರು. ಈ ಘಟನೆಗೆ ಪಂಜಾಬ್ ಪೊಲೀಸ್ ಇಲಾಖೆ ನೇರ ಕಾರಣ ಎಂದು ಕೇಂದ್ರ ಗೃಹ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಆರೋಪಿಸಿದ್ದರು.