Tag: ರ್ಯಾಲಿ

  • ಅಂದು ರಾಹುಲ್‌ ಗಾಂಧಿ, ಇಂದು ದೀದಿ – ಜೋರು ಮಳೆಯಲ್ಲೂ ಅಬ್ಬರದ ಭಾಷಣ

    ಅಂದು ರಾಹುಲ್‌ ಗಾಂಧಿ, ಇಂದು ದೀದಿ – ಜೋರು ಮಳೆಯಲ್ಲೂ ಅಬ್ಬರದ ಭಾಷಣ

    ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಸದ್ಯ ಸುದ್ದಿಯಲ್ಲಿದ್ದಾರೆ. ಕೋಲ್ಕತ್ತಾದ ಧರ್ಮತಾಲಾದಲ್ಲಿ ನಡೆದ ತೃಣಮೂಲ ಕಾಂಗ್ರೆಸ್ (TMC)ನ ಶಹೀದ್ ದಿವಾಸ್ ರ‍್ಯಾಲಿಯಲ್ಲಿ (Dharmatala Rally) ಜೋರು ಮಳೆಯಲ್ಲಿ ಅಬ್ಬರದ ಭಾಷಣ ಮಾಡುವ ಮೂಲಕ ಸುದ್ದಿಯಾಗಿದ್ದಾರೆ.

    ಮಮತಾ ಬ್ಯಾನರ್ಜಿ ಅವರು ಜಡಿ ಮಳೆಯಲ್ಲೂ ಭಾಷಣ ಮಾಡುತ್ತಿರುವ ವೀಡಿಯೋ ಸದ್ಯ ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಸದ್ದು ಮಾಡುತ್ತಿದ್ದು, ಕೆಲವರು ಇದನ್ನು ರಾಹುಲ್‌ ಗಾಂಧಿ (Rahul Gandhi) ಅವರಿಗೆ ಹೋಲಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಒಂಟಿ, ದ್ವೇಷದಿಂದ ಬಿಜೆಪಿ ವಿರುದ್ಧ ಹಗರಣ ಆರೋಪ: ಕಾರಜೋಳ ಕಿಡಿ

    ಹೌದು. ಈ ಹಿಂದೆ ರಾಹುಲ್‌ ಗಾಂಧಿ ಅವರು ಭಾರತ್‌ ಜೋಡೋ ಯಾತ್ರೆಯಲ್ಲಿ ಮೈಸೂರು ಜಿಲ್ಲೆಯಲ್ಲಿ ಸಮಾರಂಭ ನಡೆಯುತ್ತಿದ್ದ ವೇಳೆ ಭಾರೀ ಮಳೆ ಸುರಿಯುತ್ತಿತ್ತು. ಆದ್ರೆ ಮಳೆಯಲ್ಲೂ ಜಗ್ಗದ ರಾಗಾ ಭಾಷಣ ಮಾಡಿ ಎಲ್ಲರ ಗಮನ ಸೆಳೆದಿದ್ದರು. ಕಾಂಗ್ರೆಸ್​ ನಾಯಕರು ಸಹ ಮಳೆಯಲ್ಲಿ ನೆನೆಯುತ್ತಾ ವೇದಿಕೆ ಮೇಲೆಯೇ ಕುಳಿತುಕೊಂಡಿದ್ದರು. ಯಾವ ಕಾರಣಕ್ಕೂ ಯಾತ್ರೆ ನಿಲ್ಲುವುದಿಲ್ಲ. ಈಗ ಮಳೆ ಬರುತ್ತಿದೆ, ಹಾಗೆಂದು ಪಾದಯಾತ್ರೆ ನಿಲ್ಲಿಸಿದ್ದೇವೆಯೇ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದರು. ಇದೀಗ ಮಮತಾ ಬ್ಯಾನರ್ಜಿ ಅವರೂ ಸಹ ಮಳೆಯಲ್ಲಿ ಭಾಷಣ ಮಾಡಿ ಗಮನ ಸೆಳೆದಿದ್ದಾರೆ.

    ಇದೇ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಹೆಚ್ಚು ದಿನ ಉಳಿಯಲ್ಲ ಎಂದು ಭವಿಷ್ಯ ನುಡಿದಿದ್ದಾರೆ. ಇದನ್ನೂ ಓದಿ: ಹೆಚ್ಚಿದ ತುಂಗಭದ್ರಾ ನೀರಿನ ಮಟ್ಟ – ಜಾನುವಾರು ಮೈತೊಳೆಯಲು ತೆರಳಿದ್ದ ಯುವಕ ನೀರುಪಾಲು

    ಬಾಂಗ್ಲಾದಲ್ಲಿರುವ ಬಂಗಾಳಿಗಳಿಗೆ ಆಶ್ರಯ ಕೊಡ್ತೀವಿ:
    ಬಾಂಗ್ಲಾದೇಶದಲ್ಲಿ ಸರ್ಕಾರಿ ನೇಮಕಾತಿಯಲ್ಲಿ ಮೀಸಲಾತಿ ವಿರೋಧಿ ನಡೆಯುತ್ತಿರುವ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಹಿಂಸಾಚಾರ ಪೀಡಿತ ಬಾಂಗ್ಲಾದೇಶದಲ್ಲಿ ಸಿಲುಕಿರುವ ಎಲ್ಲಾ ಬಂಗಾಳ ನಿವಾಸಿಗಳಿಗೆ ನಮ್ಮ ಸರ್ಕಾರ ಸಹಕಾರ ನೀಡಲು ಬದ್ಧವಾಗಿದೆ. ತಮ್ಮ ಬಳಿಗೆ ಬರುವವರಿಗೆ ಸರ್ಕಾರ ಆಶ್ರಯ ನೀಡಲಿದೆ ಎಂದೂ ಭರವಸೆ ನೀಡಿದರು. ಇದನ್ನೂ ಓದಿ: ಬಾಂಗ್ಲಾದಲ್ಲಿ ನಿಯಂತ್ರಣಕ್ಕೆ ಬಾರದ ಹಿಂಸಾಚಾರ – ಕಂಡಲ್ಲಿ ಗುಂಡು ಹಾರಿಸಲು ಸೂಚನೆ

  • ಲೋಕಸಭಾ ಚುನಾವಣೆ: 80 ಸಂದರ್ಶನ, 200ಕ್ಕೂ ಹೆಚ್ಚು ರ್‍ಯಾಲಿಗಳಲ್ಲಿ ಮೋದಿ ಭಾಗಿ

    ಲೋಕಸಭಾ ಚುನಾವಣೆ: 80 ಸಂದರ್ಶನ, 200ಕ್ಕೂ ಹೆಚ್ಚು ರ್‍ಯಾಲಿಗಳಲ್ಲಿ ಮೋದಿ ಭಾಗಿ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇಂದು (ಗುರುವಾರ) ಪಂಜಾಬ್‌ನ ಹೋಶಿಯಾರ್‌ಪುರದಲ್ಲಿ ಚುನಾವಣಾ ಭಾಷಣದೊಂದಿಗೆ ಲೋಕಸಭಾ ಚುನಾವಣೆಯ ಪ್ರಚಾರವನ್ನು ಕೊನೆಗೊಳಿಸಿದರು.

    ಪ್ರಧಾನಿಯವರು ಈಗ ತಮಿಳುನಾಡಿನ ಕನ್ಯಾಕುಮಾರಿಯಲ್ಲಿರುವ ವಿವೇಕಾನಂದ ರಾಕ್ ಸ್ಮಾರಕದಲ್ಲಿ (Vivekananda Rock Memorial) ಇಂದಿನಿಂದ ಜೂನ್ 1 ರವರೆಗೆ ಅಂದರೆ ಎರಡು ದಿನಗಳ ಕಾಲ (45 ಗಂಟೆಗಳ) ಧ್ಯಾನ ಮಾಡಲಿದ್ದಾರೆ.

    ಮಾರ್ಚ್ 16 ರಂದು ಚುನಾವಣಾ ಆಯೋಗವು (EC) ಚುನಾವಣಾ ವೇಳಾಪಟ್ಟಿಯನ್ನು ಘೋಷಿಸಿದಾಗಿನಿಂದ ಇಂದಿನವರೆಗೆ ಪ್ರಧಾನಿಯವರು ಒಟ್ಟು 206 ಸಾರ್ವಜನಿಕ ಸಭೆಗಳು ಮತ್ತು ರೋಡ್ ಶೋಗಳನ್ನು ನಡೆಸಿದ್ದಾರೆ. ಅಲ್ಲದೇ ಒಟ್ಟು 80 ಸಂದರ್ಶನಗಳನ್ನು ನೀಡಿದ್ದಾರೆ. ಮತದಾನ ಆರಂಭವಾದಾಗಿನಿಂದ ಸರಾಸರಿ ದಿನಕ್ಕೆ ಒಂದಕ್ಕಿಂತ ಹೆಚ್ಚು ಸಂದರ್ಶನಗಳನ್ನು ನೀಡಿದ್ದಾರೆ. ಇದನ್ನೂ ಓದಿ: ಕನ್ಯಾಕುಮಾರಿಯಲ್ಲಿ ಪ್ರಧಾನಿ ಮೋದಿ ಧ್ಯಾನ; 33 ವರ್ಷಗಳ ಹಿಂದಿನ ಫೋಟೊ ವೈರಲ್‌

    2019 ರ ಚುನಾವಣೆಯ ಸಂದರ್ಭದಲ್ಲಿ ಪ್ರಧಾನಿಯವರು ಸುಮಾರು 145 ರ್‍ಯಾಲಿಗಳಲ್ಲಿ ಭಾಗವಹಿಸಿದ್ದರು. ಹೀಗಾಗಿ ಕಳೆದ ಬಾರಿಗಿಂತ ಈ ಬಾರಿ ಅವರು ಹೆಚ್ಚು ಚುನಾವಣಾ ಪ್ರಚಾರ ಹಾಗೂ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಐದು ವರ್ಷಗಳ ಹಿಂದೆ ನಡೆದ ಚುನಾವಣೆಯಲ್ಲಿ ಪ್ರಚಾರದ ಅವಧಿ 68 ದಿನಗಳಿದ್ದರೆ, ಈ ಬಾರಿ 76 ದಿನಗಳು ಇದ್ದವು.

    ಚುನಾವಣೆಯಲ್ಲಿ ತಮಿಳುನಾಡು, ಕೇರಳ ಮತ್ತು ಆಂಧ್ರಪ್ರದೇಶದಲ್ಲಿ ಬಿಜೆಪಿ ತನ್ನ ಸ್ಥಾನವನ್ನು ಬಲಪಡಿಸಲು ಪ್ರಯತ್ನಿಸುತ್ತಿದೆ. ಈ ಮೂರು ರಾಜ್ಯಗಳಲ್ಲಿ 2019 ರ ಚುನಾವಣೆಯಲ್ಲಿ ಬಿಜೆಪಿ ಒಂದೇ ಒಂದು ಸ್ಥಾನವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಈ ಬಾರಿಯ ಚುನಾವಣೆಯಲ್ಲಿ ಕರ್ನಾಟಕದಲ್ಲಿ ತನ್ನ ಬಲವನ್ನು ಉಳಿಸಿಕೊಳ್ಳಲು ಮತ್ತು ತೆಲಂಗಾಣದಲ್ಲಿ ತನ್ನ ಬಲವನ್ನು ಹೆಚ್ಚಿಸಿಕೊಳ್ಳಲು ಪಕ್ಷವು ಪ್ರಯತ್ನಿಸುತ್ತಿದೆ. 2019 ರಲ್ಲಿ ಕರ್ನಾಟಕದಲ್ಲಿ 28 ಸ್ಥಾನಗಳಲ್ಲಿ 25 ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿದ್ದರೆ, ತೆಲಂಗಾಣದಲ್ಲಿ ನಾಲ್ಕು ಸ್ಥಾನಗಳಲ್ಲಿ ಗೆಲುವು ಕಂಡಿತ್ತು.

  • ರ‍್ಯಾಲಿಗೆ ಅನುಮತಿ ನಿರಾಕರಣೆ:  ಸ್ವಲ್ಪ ದಿನ ಕಾಯಿರಿ, ಮತ್ತೆ ಬರ್ತೀವಿ ಅಂತಿದ್ದಾರೆ ದರ್ಶನ್ ಫ್ಯಾನ್ಸ್

    ರ‍್ಯಾಲಿಗೆ ಅನುಮತಿ ನಿರಾಕರಣೆ: ಸ್ವಲ್ಪ ದಿನ ಕಾಯಿರಿ, ಮತ್ತೆ ಬರ್ತೀವಿ ಅಂತಿದ್ದಾರೆ ದರ್ಶನ್ ಫ್ಯಾನ್ಸ್

    ಇಂದು ಬೊಮ್ಮನಹಳ್ಳಿಯಲ್ಲಿ ನಡೆಯಬೇಕಿದ್ದ ಬೈಕ್ ರ‍್ಯಾಲಿಗೆ ಪೊಲೀಸರು ಅನುಮತಿ ನೀಡಲಿಲ್ಲ ಎನ್ನುವ ಕಾರಣಕ್ಕಾಗಿ ರದ್ದು ಮಾಡಲಾಗಿದೆ. ಆದರೆ, ಈ ರ‍್ಯಾಲಿ ನಡೆಯದೇ ಬಿಡಲಿಲ್ಲ. ಮುಂದಿನ ದಿನಾಂಕವನ್ನು ತಿಳಿಸುವುದಾಗಿ ದರ್ಶನ್ ಫ್ಯಾನ್ಸ್ ಪೋಸ್ಟ್ ಮಾಡಿಕೊಂಡಿದ್ದಾರೆ. ಈ ಮೂಲಕ ತಾವು ಯಾರಿಗೆ ಠಕ್ಕರ್ ಕೊಡಬೇಕು ಎಂದುಕೊಂಡಿದ್ದರೋ ಕೊಟ್ಟೇ ಕೊಡುತ್ತೇವೆ ಎಂದು ಮತ್ತೊಮ್ಮೆ ಸಂದೇಶ ರವಾನಿಸಿದ್ದಾರೆ.

    ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ವಿರುದ್ಧ ಠಕ್ಕರ್ ಕೊಡುವುದಕ್ಕಾಗಿ ನಟ ದರ್ಶನ್ (Darshan) ಅಭಿಮಾನಿಗಳು (Fans) ಇಂದು ಬೈಕ್ ರ‍್ಯಾಲಿ (Bike rally) ಏರ್ಪಡಿಸಿದ್ದರು. ಈ ರ‍್ಯಾಲಿಗೆ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಹಾಗಾಗಿ ಇಂದು ಬೈಕ್ ರ‍್ಯಾಲಿ ನಡೆದಿಲ್ಲ.

    ಇಂದು (ಫೆ.26) `ಡಿ ಬಾಸ್ ಜಿಂದಾಬಾದ್’ ಹೆಸರಲ್ಲಿ ದರ್ಶನ್ ಅಭಿಮಾನಿಗಳಿಂದ ಬೃಹತ್ ಬೈಕ್ ರ‍್ಯಾಲಿ ಏರ್ಪಡಿಸಿದ್ದರು. ಹಾಗಾಗಿ ದರ್ಶನ್- ಉಮಾಪತಿ ಸಮರ ನಿಲ್ಲುತ್ತಿಲ್ಲ. ಉಮಾಪತಿಗೆ (Umapathy) ಪಾಠ ಕಲಿಸಲೆಂದೇ ‘ಒಂಟಿ ಸಲಗ’ ಹೆಸರಲ್ಲಿ ಬೃಹತ್ ರ‍್ಯಾಲಿ ನಡೆಸಲು ದರ್ಶನ್ ಫ್ಯಾನ್ಸ್ ತಯಾರಿ ನಡೆಸಿದ್ದರು. ಡಿಬಾಸ್ ಫ್ಯಾನ್ಸ್ ಟೀಮ್‌ಗೆ ಒಂಟಿ ಸಲಗ ಎಂದು ಹೆಸರಿಟ್ಟಿದ್ದರು.

    ರ‍್ಯಾಲಿ ಮಾಡ್ತಿರೋ ಜಾಗವೇ ಗಮನಾರ್ಹವಾಗಿದ್ದು, ಬೊಮ್ಮನಹಳ್ಳಿಯಲ್ಲಿ ಬೃಹತ್ ರ‍್ಯಾಲಿಯಲ್ಲಿ ದರ್ಶನ್ ಸಾವಿರಾರು ಅಭಿಮಾನಿಗಳು ಒಗ್ಗಟ್ಟು ಪ್ರದರ್ಶಿಸಲಿದ್ದರು. ಬೊಮ್ಮನಹಳ್ಳಿ ಮಹಾ ಗಣಪತಿ ದೇವಸ್ಥಾನದಿಂದ ಹೆಚ್‌ಎಸ್‌ಆರ್ ಲೇಔಟ್ ಬಿಡಿಎ ಕಾಂಪ್ಲೆಕ್ಸ್‌ವರೆಗೆ ರ‍್ಯಾಲಿ ನಡೆಯಬೇಕಿತ್ತು. ಉಮಾಪತಿಗೆ ಠಕ್ಕರ್ ಕೊಡಲು ಅವರದ್ದೇ ಕ್ಷೇತ್ರದಲ್ಲಿ ಇಂದು ಸಂಜೆ 6 ಗಂಟೆಗೆ ಡಿಬಾಸ್ ಫ್ಯಾನ್ಸ್ ರ‍್ಯಾಲಿ ಮಾಡಲು ಹೊರಟಿದ್ದರು.

    ಇತ್ತೀಚೆಗೆ ಉಮಾಪತಿ ಅವರು ದರ್ಶನ್ ನಟನೆಯ ‘ಕಾಟೇರ’ ಸಿನಿಮಾಗೆ ಟೈಟಲ್ ಕೊಟ್ಟಿದ್ದೇ ನಾನು ಎಂದು ಸಂದರ್ಶನಗಳಲ್ಲಿ ಮಾತನಾಡಿದ್ದರು. ಈ ವಿಚಾರಕ್ಕೆ ಕಾಟೇರ ಸಕ್ಸಸ್ ಮೀಟ್‌ನಲ್ಲಿ ದರ್ಶನ್ ಪ್ರತಿಕ್ರಿಯೆ ನೀಡಿದ್ದರು. ಹೇ ತಗಡು ಚಿತ್ರಕ್ಕೆ ‘ಕಾಟೇರ’ ಎಂದು ಟೈಟಲ್ ಇಟ್ಟಿದ್ದೇ ನಾನು ಎಂದು ದರ್ಶನ್ ಉಮಾಪತಿಗೆ ತಿರುಗೇಟು ನೀಡಿದ್ದರು.

  • ಒಂದು ಲಕ್ಷ ಮತಗಳೊಂದಿಗೆ ಗೆಲುವು ಸಾಧಿಸುವೆ: ಪ್ರೀತಂ ಗೌಡ

    ಒಂದು ಲಕ್ಷ ಮತಗಳೊಂದಿಗೆ ಗೆಲುವು ಸಾಧಿಸುವೆ: ಪ್ರೀತಂ ಗೌಡ

    ಹಾಸನ: ನಮ್ಮ ನಾಯಕರು ಈ ಬಾರಿಯ ಚುನಾವಣೆಯಲ್ಲಿ (Election) ಒಂದು ಲಕ್ಷ ಮತ ಪಡೆದು ಗೆಲ್ಲಬೇಕು ಎಂದು ಹೇಳಿದ್ದಾರೆ. ಆ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಗುರಿ ನಿಶ್ಚಯವಾಗಿದೆ. ದಾರಿ ಸೊಗಸಾಗಿದೆ. ಆ ನಿಟ್ಟಿನಲ್ಲಿ ಸಾಗುವೆ ಎಂದು ಶಾಸಕ ಪ್ರೀತಂ ಗೌಡ (Preetham Gowda) ಹೇಳಿದ್ದಾರೆ.

    ಹಾಸನದಲ್ಲಿ (Hassan) ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಒಂದು ಲಕ್ಷ ಮತಗಳೊಂದಿಗೆ ಗೆಲುವು ಸಾಧಿಸಬೇಕೆಂಬುದು ಜನರ ಹಾಗೂ ಕಾರ್ಯಕರ್ತರ ಅಪೇಕ್ಷೆಯಾಗಿದೆ. ಈ ನಿಟ್ಟಿನಲ್ಲಿ ಪ್ರತೀ ಕಾರ್ಯಕರ್ತ ನಾನೇ ಮತದಾರ ಎಂದು ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಏನಾದರೂ ಆಕ್ಷೇಪ ಇದ್ದರೆ ಈಗಲೇ ಇವಿಎಂ (EVM) ಚೆಕ್ ಮಾಡಿಕೊಳ್ಳಲಿ. ಅಲ್ಲದೇ ಕೋವಿಡ್ ಸಂದರ್ಭ ಸೇರಿದಂತೆ ಎಲ್ಲಾ ಹಂತದಲ್ಲೂ ನಮ್ಮ ಶಾಸಕರು ಎಂಬ ಭಾವನೆಯಿಂದ ಎಲ್ಲರೂ ಸೇರಿ ಕೆಲಸ ಮಾಡಿ ಅಭಿವೃದ್ಧಿ ಮಾಡಿದ್ದಾರೆ. ಎಲ್ಲರೂ ಸೇರಿ ನನ್ನನ್ನು ಗೆಲ್ಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು. ಇದನ್ನೂ ಓದಿ: ವರುಣಾ, ಚಾಮರಾಜನಗರ ಎರಡೂ ಕ್ಷೇತ್ರದಲ್ಲಿ ಗೆಲ್ಲುತ್ತೇವೆ: ಪುಟ್ಟರಂಗಶೆಟ್ಟಿ 

    ಜೆಡಿಎಸ್ (JDS) ಅಭ್ಯರ್ಥಿ ಕಿತ್ತಾಟ ನಿಮಗೆ ಪ್ಲಸ್ ಆಗಲಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾರೇ ಅಭ್ಯರ್ಥಿಯಾದರೂ ಪ್ರೀತಂ ಗೌಡ ಒಂದು ಲಕ್ಷ ಮತ ಪಡೆಯಬೇಕು ಎಂದು ಜನತೆ ಸಂಕಲ್ಪ ಮಾಡಿದ್ದಾರೆ. ನನಗೆ ನನ್ನದೇ ಆದ ಬಳಗವಿದೆ. ವೋಟು ಹಾಕಿಸುವ ಶಕ್ತಿ ಇದೆ. ನಾನು ವಿಪಕ್ಷಗಳ ಬಗ್ಗೆ ವಿಶ್ಲೇಷಣೆ ಮಾಡಲು ಹೋಗುವುದಿಲ್ಲ. ಐವತ್ತು ಸಾವಿರ ಲೀಡ್‌ನಿಂದ ಗೆಲ್ಲುವೆ ಎಂದು ಹದಿನೆಂಟು ತಿಂಗಳ ಹಿಂದೆ ಹೇಳಿದ್ದೆ. ಆಗಲೇ ಉತ್ತರ ಕೊಟ್ಟಿದ್ದರೆ ಅಸ್ತಿತ್ವ ಇರುತ್ತಿತ್ತು. ಈಗ ಸಮಯ ಮೀರಿದೆ. ಆದರೆ ನನ್ನ ಹೇಳಿಕೆಗೆ ಈಗಲೂ, ಮುಂದೆಯೂ ಬದ್ಧವಾಗಿರುತ್ತೇನೆ ಎಂದು ಹೇಳಿದರು.

    ಮಾಜಿ ಸಚಿವ ಹೆಚ್.ಡಿ.ರೇವಣ್ಣ (H.D.Revanna) ಹಿರಿಯರು. ಅವರಿಗೆ ಶಕ್ತಿ ಇಲ್ಲ ಎನ್ನುವುದಿಲ್ಲ. ಇಡೀ ರಾಜ್ಯದಲ್ಲಿ ಜೆಡಿಎಸ್ ಎಂಪಿ (MP) ಚುನಾವಣೆಯಲ್ಲಿ ಸೋತಾಗ ಹಾಸನದಲ್ಲಿ ಗೆಲ್ಲಿಸಿದರು. ಅವರು ಜಿಲ್ಲೆಯ ಜೆಡಿಎಸ್ ಶಕ್ತಿ. ಆ ಬಗ್ಗೆ ಯಾರೂ ಪ್ರಶ್ನೆ ಮಾಡುವಂತಿಲ್ಲ. ಹಾಸನ ಕ್ಷೇತ್ರದಲ್ಲಿ ನನ್ನ ಶಕ್ತಿ ಇದೆ. ಆದರೆ ರೇವಣ್ಣನವರ ಆಶೀರ್ವಾದ ಇಲ್ಲದೆ ಹಾಸನ ಅಭ್ಯರ್ಥಿ ಡೆಪಾಸಿಟ್ ಪಡೆಯಲು ಸಾಧ್ಯವಿಲ್ಲ. ರೇವಣ್ಣ ಒಂದು ಶಕ್ತಿ. ಅವರ ಮುಖ ನೋಡಿಯೇ ಜನ ವೋಟ್ ಹಾಕೋದು. ಅವರ ಧೋರಣೆ ಒಪ್ಪದಿರಬಹುದು ಆದರೆ ಅವರಲ್ಲಿ ಶಕ್ತಿ ಇದೆ ಎಂದು ರೇವಣ್ಣ ಪರ ಬ್ಯಾಟಿಂಗ್ ಮಾಡಿದರು. ಇದನ್ನೂ ಓದಿ: ಡಿಕೆಶಿ ಆಥಿತ್ಯ ಸ್ವೀಕರಿಸ್ತೀವಿ, ಮಿಲ್ಟ್ರಿ ಹೋಟೆಲ್ ಊಟಾನೂ ಮಾಡ್ತೀವಿ – ಅಶ್ವಥ್‌ ನಾರಾಯಣ್‌  

    ಹೊಳೆನರಸೀಪುರದಲ್ಲಿ ದೇವೇಗೌಡರ (H.D.Deve Gowda) ಕುಟುಂಬ ಹಾಗೂ ಹಾಸನದಲ್ಲಿ ಹೆಚ್.ಎಸ್.ಪ್ರಕಾಶ್ (H.S.Prakash) ಅವರ ಕುಟುಂಬದ ಹಿಡಿತದಲ್ಲೇ ಎಲ್ಲವೂ ನಡೆಯುತ್ತಿತ್ತು. ಈಗ ಜನ ಸಾಮಾನ್ಯ ಕುಟುಂಬದ ಪ್ರೀತಂ ಅವರನ್ನು ಬೆಂಬಲಿಸಿ ಬದಲಾವಣೆ ತರಬೇಕು ಎಂದು ಜನ ಬಯಸಿದ್ದಾರೆ. ಹಾಸನ ಜಿಲ್ಲೆಯಲ್ಲಿ ಏಳು ಕ್ಷೇತ್ರಗಳ ಟಿಕೆಟ್ ನೀಡುವಾಗ ವರಿಷ್ಠರು ನನ್ನ ಫೀಡ್‌ಬ್ಯಾಕ್ (Feedback) ಕೇಳಿದ್ದರು. ಈಗ ಹೋರಾಟ ಮಾಡುತ್ತೇವೆ. ಜಿಲ್ಲೆಯಲ್ಲಿ ಹೆಚ್ಚು ಸ್ಥಾನ ಗೆದ್ದು ನಾನೇ ಮೊದಲಾಗುತ್ತೇನೆ. ಎರಡನೇ ಸ್ಥಾನಕ್ಕೆ ಜೆಡಿಎಸ್-ಕಾಂಗ್ರೆಸ್ (Congress) ಪೈಪೋಟಿ ನಡೆಸಬೇಕು ಎಂದರು.

    ನಾನು ಐದು ದಿನ ರಾಜ್ಯದ ವಿವಿಧೆಡೆ ಪ್ರವಾಸ ಮಾಡಿ ಮೂರು ದಿನ ಜಿಲ್ಲೆಯಲ್ಲಿ ಸುತ್ತಾಡುತ್ತೇನೆ. ಉಳಿದ ಅವಧಿಯಲ್ಲಿ ನನ್ನ ಕ್ಷೇತ್ರದಲ್ಲಿ ಕೆಲಸ ಮಾಡುತ್ತೇನೆ. ಪ್ರಧಾನಿ ಮೋದಿಯವರು (Narendra Modi) ಹಾಸನಕ್ಕೆ ಬರುವ ವಿಶ್ವಾಸವಿದೆ. ಪ್ರೀತಂ ಸಚಿವರಾಗಬೇಕು, ಅವರಿಗೆ ಮತ ಹಾಕುತ್ತೇವೆ ಎಂದು ಜನರು ಹೇಳುವುದಕ್ಕೆ ನನ್ನ ಸಹಮತವಿದೆ. ನಾನೇನು ಸನ್ಯಾಸಿಯಲ್ಲ. ಕಾರ್ಯಕರ್ತರ ಬಯಕೆ ತಪ್ಪಲ್ಲ ಎಂದು ಹೇಳಿದರು. ಇದನ್ನೂ ಓದಿ: ಕಡೂರು ಕ್ಷೇತ್ರದಿಂದ ವೈಎಸ್‌ವಿ ದತ್ತ ಸ್ಪರ್ಧೆ: ರೇವಣ್ಣ ಘೋಷಣೆ 

    ಶುಕ್ರವಾರ ಹಾಸನದಲ್ಲಿ ನಾಮಪತ್ರ (Nomination Papers) ರ‍್ಯಾಲಿ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 10 ಗಂಟೆಗೆ ಜಿಲ್ಲಾ ಕ್ರೀಡಾಂಗಣದಿಂದ ರ‍್ಯಾಲಿ (Rally) ಹೊರಡಲಿದ್ದು, ಸಾಲಗಾಮೆ ರಸ್ತೆ, ಸಹ್ಯಾದ್ರಿ ಸರ್ಕಲ್, ಹೇಮಾವತಿ ಪ್ರತಿಮೆ, ಎನ್‌ಆರ್ ವೃತ್ತದ ಮೂಲಕ ಡಿಸಿ ಕಚೇರಿ ತಲುಪಲಿದೆ. ಪಕ್ಷ ಎರಡನೇ ಬಾರಿಗೆ ಶಾಸಕರಾಗಲು ಅವಕಾಶ ಮಾಡಿಕೊಟ್ಟದ್ದಕ್ಕಾಗಿ ನಾವೆಲ್ಲರೂ ಬೃಹತ್ ರ‍್ಯಾಲಿ ಮೂಲಕ ಬೆಂಬಲ ವ್ಯಕ್ತಪಡಿಸುತ್ತೇವೆ ಎಂದು ಗ್ರಾಮಾಂತರ ಮಂಡಲದ ಅಧ್ಯಕ್ಷರು, ಮುಖಂಡರು, ಕಾರ್ಯಕರ್ತರು ಮತ್ತು ಅಭಿಮಾನಿಗಳು ನಿರ್ಧರಿಸಿದ್ದಾರೆ. ರ‍್ಯಾಲಿಯ ಮತ್ತೊಂದು ವಿಶೇಷವೆಂದರೆ ಏಪ್ರಿಲ್ 14ರಂದು ಅಂಬೇಡ್ಕರ್ ಜಯಂತಿ, ರಂಜಾನ್ ಹಾಗೂ ಲಕ್ಷ್ಮಿವಾರ. ಸರ್ವಧರ್ಮ ಸಮನ್ವಯ ಹಾಗೂ ಎಲ್ಲರಿಗೂ ಒಳಿತಾಗಲಿ ಎಂದು ಈ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ. ಶುಕ್ರವಾರ ನಾಮಪತ್ರ ಸಲ್ಲಿಸುವುದಿಲ್ಲ. ನಾಮಪತ್ರ ಸಲ್ಲಿಕೆ ದಿನಾಂಕ ನಂತರ ತಿಳಿಸಲಾಗುವುದು ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಬಿಜೆಪಿಯಿಂದ ಟಿಕೆಟ್‌ ಸಿಗ್ಲಿಲ್ಲ ಅಂತಾ ಬೆಂಬಲಿಗರ ಸಭೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ಟಿಕೆಟ್‌ ವಂಚಿತೆ ನಾಗಶ್ರೀ

  • ಮಾಜಿ ಸಿಎಂ ರ‍್ಯಾಲಿಯಲ್ಲಿ ಕಾಲ್ತುಳಿತಕ್ಕೆ 11 ಸಾವು- ರ‍್ಯಾಲಿ, ಸಾರ್ವಜನಿಕ ಸಭೆಗೆ ಆಂಧ್ರ ಸರ್ಕಾರ ನಿಷೇಧ

    ಮಾಜಿ ಸಿಎಂ ರ‍್ಯಾಲಿಯಲ್ಲಿ ಕಾಲ್ತುಳಿತಕ್ಕೆ 11 ಸಾವು- ರ‍್ಯಾಲಿ, ಸಾರ್ವಜನಿಕ ಸಭೆಗೆ ಆಂಧ್ರ ಸರ್ಕಾರ ನಿಷೇಧ

    ಅಮರಾವತಿ: ಸಾರ್ವಜನಿಕ ಸುರಕ್ಷತೆಯ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಸರ್ಕಾರವು ಹೆದ್ದಾರಿ ಸೇರಿದಂತೆ ರಸ್ತೆಗಳಲ್ಲಿ ಸಾರ್ವಜನಿಕ ಸಭೆಗಳನ್ನು (Public Meetings) ಹಾಗೂ ರ‍್ಯಾಲಿಗಳನ್ನು (Rallies) ನಡೆಸುವುದನ್ನು ನಿಷೇಧಿಸಿದೆ.

    ಕಳೆದ ವಾರ ಕಂದುಕೂರಿನಲ್ಲಿ ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ನಡೆಸಿದ್ದ ರ‍್ಯಾಲಿ ವೇಳೆ ನೂಕುನುಗ್ಗಲು ಉಂಟಾಗಿತ್ತು. ಈ ವೇಳೆ ಕಾಲ್ತುಳಿತಕ್ಕೆ 11 ಮಂದಿ ಸಾವನ್ನಪ್ಪಿದ್ದರು. ಈ ಬೆನ್ನಲ್ಲೇ ಆಂಧ್ರ ಸರ್ಕಾರ ನಿಷೇಧಾಜ್ಞೆಯನ್ನು ಜಾರಿಗೆ ತಂದಿದೆ.

    ಈ ಬಗ್ಗೆ ರಾಜ್ಯ ಗೃಹ ಸಚಿವಾಲಯದ ಪ್ರಧಾನ ಕಾರ್ಯದರ್ಶಿ ಹರೀಶ್ ಕುಮಾರ್ ಗುಪ್ತಾ ಮಾತನಾಡಿ, ಸಾರ್ವಜನಿಕ ಸಂಚಾರ, ತುರ್ತು ಸೇವೆ, ಅಗತ್ಯ ವಸ್ತುಗಳ ಚಲನೆಗೆ ಅಡ್ಡಿಯಾಗದ ರೀತಿಯಲ್ಲಿ ಸಾರ್ವಜನಿಕ ಸಭೆಗಳನ್ನು ನಡೆಸಲು ಆಯಾ ಜಿಲ್ಲಾಡಳಿತ ಹಾಗೂ ಪೊಲೀಸರು ಅನುವು ಮಾಡಿಕೊಡಬೇಕು ಎಂದು ತಿಳಿಸಿದರು.

    ಅಧಿಕಾರಿಗಳು ರಸ್ತೆಗಳಲ್ಲಿ ಸಭೆಗಳಿಗೆ ಅನುಮತಿ ನೀಡುವುದನ್ನು ತಪ್ಪಿಸಬೇಕು. ಅಪರೂಪದ ಸಂದರ್ಭದಲ್ಲಿ ಮಾತ್ರ ಸಾರ್ವಜನಿಕ ಸಭೆಗಳಿಗೆ ಅನುಮತಿಯನ್ನು ನೀಡಬೇಕು ಎಂದು ಸೂಚಿಸಿದರು. ಇದನ್ನೂ ಓದಿ: ಆಂಧ್ರದ ಮಾಜಿ ಸಿಎಂ ರ‍್ಯಾಲಿ ವೇಳೆ ಕಾಲ್ತುಳಿತಕ್ಕೆ ಮತ್ತೆ 3 ಬಲಿ

    ಆಂಧ್ರಪ್ರದೇಶದ (Andhra Pradesh) ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು (Chandrababu Naidu) ಅವರು ನಡೆಸುತ್ತಿರುವ ರ‍್ಯಾಲಿ ವೇಳೆ ನೂಕುನುಗ್ಗಲಿನಿಂದ ಕಾಲ್ತುಳಿತಕ್ಕೆ (Stampede) ಇತ್ತೀಚೆಗಷ್ಟೇ 8 ಮಂದಿ ದಾರುಣ ಸಾವಿಗೀಡಾದ ಘಟನೆ ಮಾಸುವ ಮುನ್ನವೇ ಮತ್ತೊಂದು ದುರಂತ ಇತ್ತೀಚೆಗಷ್ಟೇ ಸಂಭವಿಸಿತ್ತು. ನಾಯ್ಡು ಅವರ ರ‍್ಯಾಲಿ ವೇಳೆ ಗುಂಟೂರು (Guntur) ಜಿಲ್ಲೆಯಲ್ಲಿ ಕಾಲ್ತುಳಿತಕ್ಕೆ ಮತ್ತೆ 3 ಮಂದಿ ಬಲಿಯಾಗಿದ್ದಾರೆ. ಇದನ್ನೂ ಓದಿ: ಲಾರಿ ಟೈರ್‌ ಸ್ಫೋಟಿಸಿ ಚಾಲಕ ಸ್ಥಳದಲ್ಲೇ ಸಾವು

    Live Tv
    [brid partner=56869869 player=32851 video=960834 autoplay=true]

  • ಆಂಧ್ರದ ಮಾಜಿ ಸಿಎಂ ರ‍್ಯಾಲಿ ವೇಳೆ ಕಾಲ್ತುಳಿತಕ್ಕೆ ಮತ್ತೆ 3 ಬಲಿ

    ಆಂಧ್ರದ ಮಾಜಿ ಸಿಎಂ ರ‍್ಯಾಲಿ ವೇಳೆ ಕಾಲ್ತುಳಿತಕ್ಕೆ ಮತ್ತೆ 3 ಬಲಿ

    ಅಮರಾವತಿ: ಆಂಧ್ರಪ್ರದೇಶದ (Andhra Pradesh) ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು (Chandrababu Naidu) ಅವರು ನಡೆಸುತ್ತಿರುವ ರ‍್ಯಾಲಿ ವೇಳೆ ನೂಕುನುಗ್ಗಲಿನಿಂದ ಕಾಲ್ತುಳಿತಕ್ಕೆ (Stampede) ಇತ್ತೀಚೆಗಷ್ಟೇ 8 ಮಂದಿ ದಾರುಣ ಸಾವಿಗೀಡಾದ ಘಟನೆ ಮಾಸುವ ಮುನ್ನವೇ ಮತ್ತೊಂದು ದುರಂತ ಸಂಭವಿಸಿದೆ. ನಾಯ್ಡು ಅವರ ರ‍್ಯಾಲಿ ವೇಳೆ ಗುಂಟೂರು (Guntur) ಜಿಲ್ಲೆಯಲ್ಲಿ ಕಾಲ್ತುಳಿತಕ್ಕೆ ಮತ್ತೆ 3 ಮಂದಿ ಬಲಿಯಾಗಿದ್ದಾರೆ.

    ರಾಜ್ಯದಲ್ಲಿ 2024ರ ವಿಧಾನಸಭಾ ಚುನಾವಣೆಯ ತಯಾರಿಗಾಗಿ ರಾಜ್ಯಾದ್ಯಂತ ನಾಯ್ಡು ಅವರು ಸರಣಿ ರಾಜಕೀಯ ಸಭೆಗಳನ್ನು ನಡೆಸುತ್ತಿದ್ದಾರೆ. ರ‍್ಯಾಲಿ ವೇಳೆ ಸಾವಿರಾರು ಸಂಖ್ಯೆಯಲ್ಲಿ ಜನರು ನೆರೆದಿದ್ದರು. ಈ ವೇಳೆ ತಳ್ಳಾಟ-ನೂಕಾಟ ಜೋರಾಗಿತ್ತು. ಕಾಲ್ತುಳಿತದಿಂದಾಗಿ ಮೂವರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಶಂಕಿತ ಉಗ್ರರ ದಾಳಿ- ಮೂವರು ನಾಗರಿಕರು ಸಾವು

    ಗುಂಟೂರಿನಲ್ಲಾದ ಕಾಲ್ತುಳಿತ ದುರಂತದ ಬಗ್ಗೆ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ (Jagan Mohan Reddy) ಆಘಾತ ವ್ಯಕ್ತಪಡಿಸಿದ್ದಾರೆ. ಗಾಯಾಳುಗಳಿಗೆ ಎಲ್ಲ ರೀತಿಯ ವೈದ್ಯಕೀಯ ನೆರವು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಲ್ಲದೇ ಮೃತರ ಕುಟುಂಬಕ್ಕೆ ಸರ್ಕಾರದ ನೆರವಿನ ಭರವಸೆ ನೀಡಿದ್ದಾರೆ.

    ಮೂರು ದಿನಗಳ ಹಿಂದೆ, ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ಮಾಜಿ ಸಿಎಂ ನಾಯ್ಡು ಅವರ ರೋಡ್‌ ಶೋ ವೇಳೆ ಕಾಲ್ತುಳಿತಕ್ಕೆ 8 ಮಂದಿ ಬಲಿಯಾಗಿದ್ದರು. ಘಟನೆಗೆ ವಿಷಾದ ವ್ಯಕ್ತಪಡಿಸಿದ್ದ ನಾಯ್ಡು ಅವರು ತಮ್ಮ ಸಭೆಗಳನ್ನು ರದ್ದುಗೊಳಿಸಿ, ಮೃತರ ಕುಟುಂಬಕ್ಕೆ 24 ಲಕ್ಷ ರೂ. ಪರಿಹಾರ ಘೋಷಿಸಿದ್ದರು. ಇದನ್ನೂ ಓದಿ: ಭೀಕರ ಅಪಘಾತ- ಡಿಕ್ಕಿ ಹೊಡೆದು 12 ಕಿ.ಮೀ ಎಳೆದೊಯ್ದ ಕಾರು, ಯುವತಿ ದುರ್ಮರಣ

    ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು, ದುರಂತಕ್ಕೆ ತೆಲುಗು ದೇಶಂ ಪಕ್ಷದ ಮುಖ್ಯಸ್ಥರ ವಿರುದ್ಧ ಹರಿಹಾಯ್ದಿದ್ದರು. ಪ್ರಚಾರದ ಉನ್ಮಾದವೇ ಈ ದುರಂತಕ್ಕೆ ಕಾರಣ ಎಂದು ನಾಯ್ಡು ವಿರುದ್ಧ ಕಿಡಿಕಾರಿದ್ದರು.

    Live Tv
    [brid partner=56869869 player=32851 video=960834 autoplay=true]

  • ಬಾವ್ಲಾ ರ‍್ಯಾಲಿ ವೇಳೆ ಮೋದಿಗೆ ಭದ್ರತಾ ಲೋಪ – ನಿಯಮ ಉಲ್ಲಂಘಿಸಿ ಡ್ರೋನ್ ಹಾರಿಸಿದ ಮೂವರು ವಶಕ್ಕೆ

    ಬಾವ್ಲಾ ರ‍್ಯಾಲಿ ವೇಳೆ ಮೋದಿಗೆ ಭದ್ರತಾ ಲೋಪ – ನಿಯಮ ಉಲ್ಲಂಘಿಸಿ ಡ್ರೋನ್ ಹಾರಿಸಿದ ಮೂವರು ವಶಕ್ಕೆ

    ಗಾಂಧೀನಗರ: ಗುಜರಾತ್ ಚುನಾವಣೆ (Gujarat Assembly Election) ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಬ್ಯುಸಿ ಇದ್ದಾರೆ. ಈ ಹೊತ್ತಲ್ಲೇ ಅವರ ಭದ್ರತೆ ವಿಚಾರದಲ್ಲಿ ಲೋಪ ಉಂಟಾಗಿದೆ.

    ಅಹಮದಾಬಾದ್ ಜಿಲ್ಲೆಯ ಬಾವ್ಲಾದಲ್ಲಿ ಇಂದು ಸಂಜೆ ನಡೆದ ರ‍್ಯಾಲಿಯಲ್ಲಿ ಮೋದಿ ಭಾಷಣದ ವೇಳೆಯೇ, ನಿಷೇಧಿತ ಪ್ರದೇಶದಲ್ಲಿ ಹಾರಿದ ಡ್ರೋನ್ (Drone) ಕ್ಯಾಮೆರಾ ಕೆಲ ಕಾಲ ಆತಂಕಕ್ಕೆ ಕಾರಣವಾಗಿತ್ತು. ಕೂಡಲೇ ಎಚ್ಚೆತ್ತ ಎನ್‍ಎಸ್‍ಜಿ, ಡ್ರೋನ್ ಕ್ಯಾಮೆರಾವನ್ನು ಹೊಡೆದುರುಳಿಸಿದೆ. ಇದನ್ನೂ ಓದಿ: ಮಿಂಚಿನ ವೇಗದಲ್ಲಿ ಅರುಣ್ ಗೋಯೆಲ್‍ರನ್ನು ಏಕೆ ನೇಮಕ ಮಾಡಿದ್ರಿ? – ಸರ್ಕಾರಕ್ಕೆ ಸುಪ್ರೀಂ ಪ್ರಶ್ನೆಗಳ ಸುರಿಮಳೆ

    ಈ ಸಂಬಂಧ ಮೂವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. ಆರೋಪಿಗಳನ್ನು ನಿಖಿಲ್ ಪಾರ್ಮರ್, ರಾಕೇಶ್ ಭಾರ್ವಾದ್, ರಾಕೇಶ್ ಕುಮಾರ್ ಪ್ರಜಾಪತಿ ಎಂದು ಗುರುತಿಸಲಾಗಿದೆ. ಮೂವರು ಅಹಮದಾಬಾದ್‍ನ ಓಧವ್ ನಿವಾಸಿಗಳಾಗಿದ್ದಾರೆ. ಐಪಿಸಿ ಸೆಕ್ಷನ್ 188ರ ಅನ್ವಯ ಪೊಲೀಸರು ಎಫ್‍ಐಆರ್ ದಾಖಲಿಸಲು ಮುಂದಾಗಿದ್ದಾರೆ. ಈ ಸಂಬಂಧ ಹಲವು ಸಂಸ್ಥೆಗಳು ಏಕಕಾಲದಲ್ಲಿ ಸಮಗ್ರ ತನಿಖೆ ನಡೆಸಿವೆ. ಇದನ್ನೂ ಓದಿ: 225 ಮೀ. ಆಳದ ಕಲ್ಲಿದ್ದಲು ಗಣಿ ಝಾಂಜ್ರಾ ಒಳಗೆ ಪ್ರವೇಶಿಸಿ ಪರಿಶೀಲಿಸಿದ ಮೊದಲ ಸಚಿವ ಪ್ರಹ್ಲಾದ್ ಜೋಶಿ

    ಪ್ರಧಾನಿ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದ ಪ್ರದೇಶ ಡ್ರೋನ್ ನಿಷೇಧಿತ ಪ್ರದೇಶವಾಗಿತ್ತು. ಆದರೂ ನಿಷೇಧಿತ ಪ್ರದೇಶದಲ್ಲೇ ಡ್ರೋನ್ ಹಾರಾಟ ನಡೆಸಿ ಮೂವರು 2 ಕಿ.ಮೀ ವರೆಗೆ ವೀಡಿಯೋ ಚಿತ್ರೀಕರಣ ನಡೆಸಿದ್ದಾರೆ. ಬಳಿಕ ಕೂಡಲೇ ಪೊಲೀಸರು ಡ್ರೋನ್ ಹಾರಿಸದಂತೆ ತಿಳಿಸಿದ್ದಾರೆ. ಬಳಿಕ ಕೆಳಗಿಳಿಸಿ ಪರಿಶೀಲಿಸಿದಾಗ ಯಾವುದೇ ನಿಷೇಧಿತ ವಸ್ತು ಪತ್ತೆಯಾಗಿಲ್ಲ. ಹೆಚ್ಚಿನ ತನಿಖೆ ಮುಂದುವರಿದಿದೆ.

    Live Tv
    [brid partner=56869869 player=32851 video=960834 autoplay=true]

  • ಗುಜರಾತ್ ವಿಧಾನಸಭೆ ಚುನಾವಣೆ – 15 ದಿನಗಳಲ್ಲಿ 40 ರ‍್ಯಾಲಿ ನಡೆಸಲಿದ್ದಾರೆ ಮೋದಿ

    ಗುಜರಾತ್ ವಿಧಾನಸಭೆ ಚುನಾವಣೆ – 15 ದಿನಗಳಲ್ಲಿ 40 ರ‍್ಯಾಲಿ ನಡೆಸಲಿದ್ದಾರೆ ಮೋದಿ

    ಗಾಂಧಿನಗರ: ಗುಜರಾತ್ ವಿಧಾನಸಭೆ ಚುನಾವಣೆ (Gujarat Assembly Election) ಅಖಾಡಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಇಳಿಯಲಿದ್ದಾರೆ. ಸರಿ ಸುಮಾರು 15 ದಿನಗಳಲ್ಲಿ ಅವರು 40ಕ್ಕೂ ಅಧಿಕ ಬೃಹತ್ ರ‍್ಯಾಲಿಗಳನ್ನು (Rallie) ನಡೆಸಲಿದ್ದಾರೆ. ಈ ಮೂಲಕ ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ಬಿಜೆಪಿ ಪ್ರಧಾನಿ ನರೇಂದ್ರ ಮೋದಿ ಮೂಲಕ ಗೆಲುವಿನ ದಡ ಸೇರುವ ನಿರೀಕ್ಷೆಯಲ್ಲಿದೆ.

    ಪಕ್ಷದ ಮೂಲಗಳ ಪ್ರಕಾರ, ನವೆಂಬರ್ 15 ರಿಂದ ರ‍್ಯಾಲಿಗಳನ್ನು ಆರಂಭಿಸಲಿದ್ದಾರೆ. 12-15 ದಿನಗಳಲ್ಲಿ ಮೋದಿ 40 ರ‍್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಪಕ್ಷದ ರಾಷ್ಟ್ರೀಯ ನಾಯಕರು, ಟಿವಿ, ಸಿನಿಮಾ ನಟರು, ಸ್ಟಾರ್ ಪ್ರಚಾರಕರ ದಂಡು ಬಿಜೆಪಿ (BJP) ಪರ ಮತಯಾಚನೆ ಮಾಡಲಿದೆ. ಇದನ್ನೂ ಓದಿ: ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ – ಮತದಾರರ ಕೈಯಲ್ಲಿ 412 ಅಭ್ಯರ್ಥಿಗಳ ಭವಿಷ್ಯ

    ಬಹುತೇಕ ಟಿಕೆಟ್ ಹಂಚಿಕೆ ಕಾರ್ಯ ಮಕ್ತಾಯಗೊಂಡಿದ್ದು, ಕಡೆಯ 22 ಕ್ಷೇತ್ರಗಳಿಗೆ ಮಾತ್ರ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಿದೆ. ಭಾನುವಾರದೊಳಗೆ ಅಂತಿಮ ಪಟ್ಟಿಯೂ ಬಿಡುಗಡೆಯಾಗಬಹುದು ಎಂದು ಮೂಲಗಳು ಹೇಳಿವೆ. ದುರ್ಬಲ ಕ್ಷೇತ್ರಗಳ ಪಟ್ಟಿಯನ್ನು ಸಿದ್ಧಪಡಿಸಿದ್ದು, ಗೆಲುವುಗಾಗಿ ಇಲ್ಲಿ ಪ್ರಚಾರ ಕಾರ್ಯ ಹೆಚ್ಚಲಿದೆ. ಇದನ್ನೂ ಓದಿ: ರಾಜೀವ್ ಗಾಂಧಿ ಹತ್ಯೆ ಕೇಸ್ – ಸುಪ್ರೀಂ ತೀರ್ಪು ಸ್ವಾಗತಿಸಿದ ಸ್ಟಾಲಿನ್

    ದುರ್ಬಲ ಕ್ಷೇತ್ರಗಳ ಮೇಲೆ ಗೃಹ ಸಚಿವ ಅಮಿತ್ ಶಾ (Amit Shah) ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಕೇಂದ್ರಿಕರಿಸಿದ್ದಾರೆ. ಜಾತಿ ಮತ್ತು ಸಮುದಾಯ ಸಮೀಕರಣಗಳ ಲೆಕ್ಕಾಚಾರದಲ್ಲಿ ಚುನಾವಣೆ ನಡೆಸುತ್ತಿರುವ ಬಿಜೆಪಿ ನರೇಂದ್ರ ಮೋದಿ ಪ್ರತಿ ರ‍್ಯಾಲಿಯಲ್ಲಿ 4-5 ವಿಧಾನಸಭೆ ಕ್ಷೇತ್ರಗಳು ಒಳಗೊಳ್ಳುವಂತೆ ಕಾರ್ಯಕ್ರಮ ರೂಪಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ನಾನು ಇಮ್ರಾನ್ ಖಾನ್‍ರನ್ನು ಕೊಲ್ಲಲು ಬಂದಿದ್ದು ಆ ಒಂದು ಕಾರಣಕ್ಕಾಗಿ: ಆರೋಪಿ

    ನಾನು ಇಮ್ರಾನ್ ಖಾನ್‍ರನ್ನು ಕೊಲ್ಲಲು ಬಂದಿದ್ದು ಆ ಒಂದು ಕಾರಣಕ್ಕಾಗಿ: ಆರೋಪಿ

    ಇಸ್ಲಾಮಾಬಾದ್: ಜನರನ್ನು ದಾರಿತಪ್ಪಿಸುತ್ತಿರುವ ಕಾರಣಕ್ಕಾಗಿ ನಾನು ಮಾಜಿ ಪ್ರಧಾನಿ ಇಮ್ರಾನ್ ಖಾನ್‍ರನ್ನು (Imran Khan) ಕೊಲೆ ಮಾಡಲು ಗುಂಡುಹಾರಿಸಿದ್ದೇನೆ ಎಂದು ಬಂದೂಕುಧಾರಿ ಆರೋಪಿ ಪೊಲೀಸರೊಂದಿಗೆ (Police) ತಿಳಿಸಿದ್ದಾನೆ.

    ಪಾಕಿಸ್ತಾನದ (Pakistan) ಪಂಜಾಬ್‍ನಲ್ಲಿ ಪ್ರತಿಭಟನಾ ರ‍್ಯಾಲಿ ನಡೆಸುತ್ತಿದ್ದ ವೇಳೆ ಬಂದೂಕುಧಾರಿಯೊಬ್ಬ ಇಮ್ರಾನ್ ಖಾನ್ ಅವರನ್ನು ಗುರಿಯಾಗಿಸಿಕೊಂಡು ಗುಂಡು ಹಾರಿಸಿದ್ದ. ಬಳಿಕ ಆರೋಪಿಯನ್ನು ಬಂಧಿಸಿ ವಿಚಾರಿಸಿದಾಗ, ನಾನು ಇಮ್ರಾನ್ ಖಾನ್‍ರನ್ನು ಕೊಲ್ಲಲೆಂದು ಬಂದಿದ್ದೆ. ಇಮ್ರಾನ್ ಖಾನ್ ಪಾಕಿಸ್ತಾನದ ಜನರರನ್ನು ದಾರಿ ತಪ್ಪಿಸುತ್ತಿದ್ದಾರೆ. ಹಾಗಾಗಿ ಇಮ್ರಾನ್ ಖಾನ್‍ರನ್ನು ಗುಂಡು ಹಾರಿಸಿ ಕೊಲ್ಲಲು ಯತ್ನಿಸಿದ್ದೇನೆ. ನಾನು ಒಬ್ಬನೇ ಬಂದಿದ್ದೇನೆ. ನನ್ನ ಹಿಂದೆ ಯಾರು ಇಲ್ಲ ಎಂದಿದ್ದಾನೆ. ಇದನ್ನೂ ಓದಿ: ಇಮ್ರಾನ್ ಖಾನ್ ಮೇಲೆ ಗುಂಡಿನ ದಾಳಿ – ಗ್ರೇಟ್ ಎಸ್ಕೇಪ್

    ಇಂದು ಜಫರಾಲಿ ಖಾನ್ ಚೌಕ್‍ನಲ್ಲಿ ಘಟನೆ ನಡೆದಿದ್ದು, ಇಮ್ರಾನ್ ಖಾನ್ ಅವರ ಕಾಲಿಗೆ ಗಾಯಗಳಾಗಿವೆ. ದುಷ್ಕರ್ಮಿ 3-4 ಬಾರಿ ಗುಂಡು ಹಾರಿಸಿದ್ದಾನೆ. ಘಟನೆಯಲ್ಲಿ ಇಮ್ರಾನ್ ಖಾನ್ ಅವರ ಸಹಾಯಕ ಸೇರಿದಂತೆ ಒಟ್ಟು 15 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ. ಒಬ್ಬಾತ ಮೃತಪಟ್ಟಿರುವುದಾಗಿ ವರದಿಯಾಗಿದೆ. ಇದನ್ನೂ ಓದಿ: ಅಲ್ಲ ನನಗೆ ಮತ್ತೊಂದು ಜನ್ಮ ನೀಡಿದ್ದಾನೆ: ಗುಂಡು ತಗುಲಿದ ಬಳಿಕ ಇಮ್ರಾನ್ ಖಾನ್ ಮಾತು

    ಇಮ್ರಾನ್ ಖಾನ್ ಅವರು ರ‍್ಯಾಲಿಯ ವೇಳೆ ತೆರೆದ ಕಂಟೇನರ್‌ನಲ್ಲಿ ಪ್ರಯಾಣಿಸುತ್ತಿದ್ದರು. ಗುಂಡಿನ ದಾಳಿ ನಡೆದ ಬಳಿಕ ಅವರನ್ನು ಬುಲೆಟ್ ಪ್ರೂಫ್ ವಾಹನಕ್ಕೆ ವರ್ಗಾಯಿಸಲಾಯಿತು. ಇಮ್ರಾನ್ ಖಾನ್ ಅವರ ಸಹಾಯಕ ಪಿಟಿಐ ಮುಖಂಡ ಫೈಸಲ್ ಜಾವೇದ್ ಕೂಡಾ ಗಾಯಗೊಂಡಿದ್ದಾರೆ. ಘಟನೆಯ ಬಳಿಕ ಬಂದೂಕುಧಾರಿಯನ್ನು ಬಂಧಿಸಲಾಗಿದೆ. ಇಮ್ರಾನ್ ಖಾನ್‍ನ ಬೆಂಬಲಿಗರೊಬ್ಬರು ಆತನನ್ನು ದಾಳಿ ನಡೆಸದಂತೆ ತಡೆದಿದ್ದಾರೆ. ಆತ ಎಕೆ-47 ನಿಂದ ಗುಂಡು ಹಾರಿಸಿದ್ದು, ಇದು ಉದ್ದೇಶ ಪೂರಕ ದಾಳಿ ಎಂದು ಪಿಟಿಐ ಮುಖಂಡ ಫವಾದ್ ಚೌಧರಿ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಇಮ್ರಾನ್ ಖಾನ್ ಪ್ರತಿಭಟನಾ ರ‍್ಯಾಲಿಯ ಟ್ರಕ್ ಅಡಿಗೆ ಸಿಲುಕಿ ಪತ್ರಕರ್ತೆ ಸಾವು

    ಇಮ್ರಾನ್ ಖಾನ್ ಪ್ರತಿಭಟನಾ ರ‍್ಯಾಲಿಯ ಟ್ರಕ್ ಅಡಿಗೆ ಸಿಲುಕಿ ಪತ್ರಕರ್ತೆ ಸಾವು

    ಇಸ್ಲಾಮಾಬಾದ್: ಪಾಕಿಸ್ತಾನದ (Pakistan) ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಅವರ ನೇತೃತ್ವದಲ್ಲಿ ಪ್ರತಿಭಟನಾ ರ‍್ಯಾಲಿಯನ್ನು (Rally) ನಡೆಸಲಾಗುತ್ತಿದ್ದ ಟ್ರಕ್‌ನ (Truck) ಅಡಿಗೆ ಪತ್ರಕರ್ತೆಯೊಬ್ಬಳು (Journalist) ಸಿಲುಕಿ ಸಾವನ್ನಪ್ಪಿರುವ ಘಟನೆ ಭಾನುವಾರ ನಡೆದಿದೆ. ಪತ್ರಕರ್ತೆ ಟ್ರಕ್ ಅಡಿಗೆ ಸಿಲುಕುತ್ತಿದ್ದಂತೆ ರ‍್ಯಾಲಿಯನ್ನು ನಿಲ್ಲಿಸಲಾಗಿದೆ.

    ಮೃತ ಪತ್ರಕರ್ತೆಯನ್ನು ಸ್ಥಳೀಯ ಸುದ್ದಿ ಚಾನೆಲ್ ಫೈವ್‌ನ ವರದಿಗಾರ್ತಿ ಸದಾಫ್ ನಯೀಮ್ ಎಂದು ಗುರುತಿಸಲಾಗಿದೆ. ಇಮ್ರಾನ್ ಖಾನ್ ಅವರ ರ‍್ಯಾಲಿ ಸಾಧೋಕೆ ಬಳಿ ಸಾಗುತ್ತಿದ್ದ ವೇಳೆ ವರದಿಗಾರ್ತಿ ನೆಲದ ಮೇಲೆ ಬಿದ್ದಿದ್ದಾಳೆ. ಈ ವೇಳೆ ಟ್ರಕ್ ಆಕೆಯ ಮೇಲೆ ಹರಿದಿದೆ.

    ಘಟನೆಯ ಬಗ್ಗೆ ಟ್ವೀಟ್ ಮಾಡಿದ ಇಮ್ರಾನ್ ಖಾನ್, ಇಂದು ನಮ್ಮ ರ‍್ಯಾಲಿಯ ವೇಳೆ ವರದಿಗಾರ್ತಿ ಸದಾಫ್ ನಯೀಮ್ ಅವರ ಭೀಕರ ಅಪಘಾತ ನಮಗೆ ಆಘಾತ ತಂದಿದೆ ಎಂದು ಶೋಕ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸೇನೆಯನ್ನು ಬಲಪಡಿಸುವುದೇ ನಮ್ಮ ಉದ್ದೇಶ: ಇಮ್ರಾನ್ ಖಾನ್

    ಘಟನೆಯ ಬಗ್ಗೆ ಪಂಜಾಬ್ ಮುಖ್ಯಮಂತ್ರಿ ಪರ್ವೇಜ್ ಇಲಾಹಿ ದುಃಖ ವ್ಯಕ್ತಪಡಿಸಿದ್ದು, ಮೃತಳ ಕುಟುಂಬಕ್ಕೆ 25 ಲಕ್ಷ ರೂ. ಮೌಲ್ಯದ ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದ್ದಾರೆ. ಆಕೆಯ ಕುಟುಂಬದ ಸಂಪೂರ್ಣ ಕಾಳಜಿ ವಹಿಸುವುದಾಗಿ ಪಂಜಾಬ್ ಸರ್ಕಾರ ತಿಳಿಸಿದೆ. ಇದನ್ನೂ ಓದಿ: ತೂಗು ಸೇತುವೆ ದುರಂತ- ಸಾವಿನ ಸಂಖ್ಯೆ 132ಕ್ಕೆ ಏರಿಕೆ; ಸ್ಥಳಕ್ಕೆ ಮೋದಿ ಭೇಟಿ ನೀಡುವ ಸಾಧ್ಯತೆ

    Live Tv
    [brid partner=56869869 player=32851 video=960834 autoplay=true]