Tag: ರೌಡಿ ಶೀಟರ್

  • ಮೈಸೂರಲ್ಲಿ ನಡುರಸ್ತೆಯಲ್ಲೇ ಕೊಲೆ ಪ್ರಕರಣ; ಡಾನ್ ಪಟ್ಟಕ್ಕಾಗಿ ನಡೀತು ರೌಡಿಶೀಟರ್ ಆಪ್ತನ ಹತ್ಯೆ

    ಮೈಸೂರಲ್ಲಿ ನಡುರಸ್ತೆಯಲ್ಲೇ ಕೊಲೆ ಪ್ರಕರಣ; ಡಾನ್ ಪಟ್ಟಕ್ಕಾಗಿ ನಡೀತು ರೌಡಿಶೀಟರ್ ಆಪ್ತನ ಹತ್ಯೆ

    – ಪೊಲೀಸರಿಗೆ ಶರಣಾಗಿ ತಪ್ಪೊಪ್ಪಿಕೊಂಡ ಐವರು ಆರೋಪಿಗಳು

    ಮೈಸೂರು: ನಗರದ ಅರಮನೆ ಬಳಿ ನಿನ್ನೆ ಮಧ್ಯಾಹ್ನ ರೌಡಿ ಶೀಟರ್ (Rowdy Sheeter) ಸಹವರ್ತಿಯ ಬರ್ಬರ ಕೊಲೆಯಾಗಿತ್ತು. ಕೊಲೆಗೆ ಡಾನ್ ಪಟ್ಟಕ್ಕಾಗಿ ಶುರುವಾದ ಪೈಪೋಟಿಯೆ ಕಾರಣ ಅನ್ನೋದು ಈಗ ಸ್ಪಷ್ಟವಾಗಿದೆ. ಅಲ್ಲದೇ ಆರೋಪಿಗಳೇ ಪೊಲೀಸರಿಗೆ ಶರಣಾಗಿರೋದು ಅಚ್ಚರಿ.

    ಹೌದು.. ನಿನ್ನೆ ಮಧ್ಯಾಹ್ನ ಮೈಸೂರಿನ ಅರಮನೆ (Mysuru Palace) ಬಳಿಯೇ ನಡುರಸ್ತೆಯಲ್ಲಿ ರೌಡಿ ಶೀಟರ್ ಕಾರ್ತಿಕ ಸಹವರ್ತಿ ಗಿಲಿ ಗಿಲಿ ವೆಂಕಟೇಶ್‌ನನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಆಟೋ ಮತ್ತು ದ್ವಿಚಕ್ರ ವಾಹನದಲ್ಲಿ ಬಂದ ಆರು ಜನರು ಸ್ವಿಫ್ಟ್ ಕಾರಿನಲ್ಲಿ ಬರುತ್ತಿದ್ದ ವೆಂಕಟೇಶ್‌ನನ್ನು ನಿಲ್ಲಿಸಿ ಕಣ್ಣಿಗೆ ಖಾರದ ಪುಡಿ ಎರಚಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ರು. ಈ ಘಟನೆ ಮೈಸೂರನ್ನ ಬೆಚ್ಚಿಬೀಳಿಸಿತ್ತು. ಈ ಹಿಂದೆ ಹತ್ಯೆ ಆಗಿದ್ದ ರೌಡಿಶೀಟರ್ ಕಾರ್ತಿಕ್ ಜೊತೆ ಹಣಕಾಸು ವ್ಯವಹಾರ ನಡೆಸುತ್ತಿದ್ದ ವೆಂಕಟೇಶ್‌ನನ್ನು ಹತ್ಯೆ ಮಾಡಲಾಗಿತ್ತು. ಕೊಲೆ ಮಾಡಿ ಪರಾರಿ ಆಗಿದ್ದ ಆರೋಪಿಗಳು ಇದೀಗ ತಡರಾತ್ರಿ ಪೊಲೀಸರಿಗೆ ಶರಣಾಗಿದ್ದಾರೆ.

    ಪೊಲೀಸರಿಗೆ ಶರಣಾದ ಆರೋಪಿಗಳು ಯಾತಕ್ಕಾಗಿ ಕೊಲೆ ಮಾಡಿದ್ದು ಎಂದು ತಪ್ಪೊಪ್ಪಿಕೊಂಡಿದ್ದು.. ರೌಡಿ ಫೀಲ್ಡ್‌ನಲ್ಲಿ ಡಾನ್ ಪಟ್ಟಕ್ಕಾಗಿ ನಡೆದ ಪೈಪೋಟಿಯಿಂದಲೇ ಕೊಲೆ ಎಂಬುದು ಬಯಲಾಗಿದೆ.

    ಒಂದೇ ಗ್ಯಾಂಗ್‌ನಲ್ಲಿದ್ದವರ ಮಧ್ಯೆ ಪಟ್ಟಕ್ಕಾಗಿ ಪೈಪೋಟಿ
    ಐದು ತಿಂಗಳ ಹಿಂದೆ ಮೈಸೂರಿನ ಕ್ಯಾತಮಾರನಹಳ್ಳಿಯ ರೌಡಿಶೀಟರ್ ಕಾರ್ತಿಕ್‌ನ ಮರ್ಡರ್ ಆಗಿತ್ತು. ಹೀಗಾಗಿ ಕಾರ್ತಿಕ್‌ಗೆ ಇದ್ದ ಡಾನ್ ಪಟ್ಟದಲ್ಲಿ ಯಾರು ಕೂರಬೇಕು ಎಂಬ ಬಗ್ಗೆ ಕಾರ್ತಿಕ್ ಗುಂಪಿನಲ್ಲೇ ಪೈಪೋಟಿ ಶುರುವಾಗಿತ್ತು. ಡಾನ್ ಪಟ್ಟಕ್ಕಾಗಿ ಕೊಲೆಯಾದ ವೆಂಕಟೇಶ್ ಹಾಗೂ ಕೊಲೆಯ ರೂವಾರಿ ಹಾಲಪ್ಪ ನಡುವೆ ಒಳ ಜಗಳ ನಡೆಯುತ್ತಿತ್ತು. ಕಾರ್ತಿಕ್ ಕೊಲೆಗೂ ಮುನ್ನ ಮನಃಸ್ತಾಪವಾಗಿ ವೆಂಕಟೇಶ್ ಈ ಗುಂಪಿನಿಂದ ಬೇರೆ ಆಗಿದ್ದ. ಕಾರ್ತಿಕ್ ಕೊಲೆ ನಂತರ ಫೀಲ್ಡ್‌ನಲ್ಲಿ ಮತ್ತೆ ಮೆರೆಯಲು ವೆಂಕಟೇಶ್ ಶುರು ಮಾಡಿದ್ದ. ಇದನ್ನು ಸಹಿಸದ ಹಾಲಪ್ಪ ಹಾಗೂ ಸಹಚರರು ಜಗಳ ಶುರು ಮಾಡಿದ್ದರು.

    ಹಾಲಪ್ಪ ತನ್ನ ಡಾನ್ ಪಟ್ಟಕ್ಕೆ ಅಡ್ಡಿಯಾಗಿದ್ದಾನೆ ಎಂದು ಗಿಲಿ ಗಿಲಿ ವೆಂಕಟೇಶ ಹಾಲಪ್ಪನ ಕೊಲೆಗೆ ಸ್ಕೆಚ್ ಹಾಕಿದ್ದ. ಹಾಲಪ್ಪನನ್ನು ಕೊಲ್ಲಲು ವೆಂಕಟೇಶ್ ಹಾಗೂ ಅವನ ಶಿಷ್ಯಂದಿರು ಹುಡುಕಾಟ ನಡೆಸಿದ್ದರು. ವಾರದ ಹಿಂದೆ ಹಾಲಪ್ಪ ಸ್ನೇಹಿತ ಮಂಜುನಾಥ್ ಮನೆ ಮುಂದೆ ಹಾಲಪ್ಪ ಎಲ್ಲಿ ಅಂತಾ ಜಗಳವಾಡಿದ್ದರು. ಈ ಸಂಬಂಧ ನಜರಬಾದ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು.

    ಗಿಲಿಗಿಲಿ ವೆಂಕಟೇಶ್ ಗ್ಯಾಂಗ್ ಈ ನಡೆಗೆ ಬೆಚ್ಚಿದ್ದ ಹಾಲಪ್ಪ, ಪ್ರತಿಯಾಗಿ ಗಿಲಿಗಿಲಿ ವೆಂಕಟೇಶ್ ಕೊಲೆಗೆ ಸ್ಕೆಚ್ ಹಾಕಿದ್ದ. ತನ್ನ ಐವರು ಸಹಚರರನ್ನು ಬಿಟ್ಟು ವೆಂಕಟೇಶ್‌ನನ್ನ ನಡು ರಸ್ತೆಯಲ್ಲೇ ಅಡ್ಡಗಟ್ಟಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿಸಿದ್ದಾನೆ. ಕೊಲೆಯಾದ ಬಳಿಕ ಹಾಲಪ್ಪ ಎಸ್ಕೇಪ್ ಆಗಿದ್ದಾನೆ. ಸಹಚರರು ಪೊಲೀಸರಿಗೆ ಶರಣಾಗಿದ್ದಾರೆ.

    ಈ ಕೊಲೆ ಮೂಲಕ ಮೈಸೂರಲ್ಲಿ ರೌಡಿಸಂ ಮತ್ತೆ ಗರಿ ಬಿಚ್ಚಿ ಕೊಂಡಿರುವುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಪೊಲೀಸರು ಈಗಲೇ ಈ ಗರಿಗಳ ಕತ್ತರಿ ಹಾಕಬೇಕಿದೆ.

  • ರಾಮನಗರ | ಹಾಡಹಗಲೇ ರೌಡಿಶೀಟರ್‌ನ ಬರ್ಬರ ಹತ್ಯೆ!

    ರಾಮನಗರ | ಹಾಡಹಗಲೇ ರೌಡಿಶೀಟರ್‌ನ ಬರ್ಬರ ಹತ್ಯೆ!

    ರಾಮನಗರ: ಹಾಡಹಗಲೇ ರೌಡಿಶೀಟರ್‌ವೊಬ್ಬನನ್ನ (Rowdy Sheeter) ಲಾಂಗು, ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಹಾರೋಹಳ್ಳಿ (Harohalli) ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ಡಿಪೋ ಬಳಿ ನಡೆದಿದೆ.

    ಬೆಂಗಳೂರಿನ (Bengaluru) ಕೋಣನಕುಂಟೆ ನಿವಾಸಿ ರೌಡಿಶೀಟರ್ ಸಂತೋಷ್ (33) ಅಲಿಯಾಸ್ ಕರಡಿ ಹತ್ಯೆಯಾದ ವ್ಯಕ್ತಿ. ಬೆಂಗಳೂರಿನ ಹಲವು ಠಾಣೆಗಳಲ್ಲಿ ಮೃತ ವ್ಯಕ್ತಿ ಮೇಲೆ ಕ್ರಿಮಿನಲ್ ಕೇಸ್ ಗಳಿದ್ದು, ಹಳೇ ವೈಷಮ್ಯಕ್ಕೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಹಿಂದೂ ಕಾರ್ಯಕರ್ತ ಸುಹಾಸ್ ಹತ್ಯೆ ಪ್ರಕರಣ – 8 ಆರೋಪಿಗಳ ಬಂಧನ

    ಕಾರಿನಿಂದ ಬೈಕ್‌ಗೆ ಗುದ್ದಿ ಆತ ಕೆಳಗೆ ಬಿದ್ದ ಬಳಿಕ ಲಾಂಗು ಮಚ್ಚು ಹಿಡಿದು ಅಟ್ಟಾಡಿಸಿರೋ ನಾಲ್ವರು ದುಷ್ಕರ್ಮಿಗಳು ಬರ್ಬರವಾಗಗಿ ಹತ್ಯೆ ಮಾಡಿದ್ದಾರೆ. ಹತ್ಯೆ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಪಾಕಿಸ್ತಾನದ ಬೇಹುಗಾರಿಕಾ ಏಜೆನ್ಸಿಯಿಂದ ಕದಂಬ ನೌಕಾ ನೆಲೆಯ ಯುದ್ಧ ಹಡಗುಗಳ ಮಾಹಿತಿ ಪಡೆಯಲು ಯತ್ನ!

    ಸ್ಥಳಕ್ಕೆ ಎಸ್ಪಿ ಶ್ರೀನಿವಾಸ್ ಗೌಡ ಭೇಟಿ, ಪರಿಶೀಲನೆ ನಡೆಸಿದ್ದು, ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಸಿಟಿವಿ ವೀಡಿಯೋ ಆಧರಿಸಿ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆಬೀಸಿದ್ದಾರೆ. ಇದನ್ನೂ ಓದಿ: ಎಲ್ಲಾ ಸಮುದಾಯಗಳಿಗೆ ನ್ಯಾಯ ಕೊಡಲು ಕೇಂದ್ರದಿಂದ ಜಾತಿಗಣತಿ: ಸದಾನಂದಗೌಡ

  • ಮಂಡ್ಯದ ಪಾಲಹಳ್ಳಿಯಲ್ಲಿ ಮತ್ತೆ ಹರಿದ ನೆತ್ತರು – ರೌಡಿಶೀಟರ್‌ನ ಬರ್ಬರ ಹತ್ಯೆ

    ಮಂಡ್ಯದ ಪಾಲಹಳ್ಳಿಯಲ್ಲಿ ಮತ್ತೆ ಹರಿದ ನೆತ್ತರು – ರೌಡಿಶೀಟರ್‌ನ ಬರ್ಬರ ಹತ್ಯೆ

    ಮಂಡ್ಯ: ಇಲ್ಲಿನ ಪಾಲಹಳ್ಳಿಯಲ್ಲಿ (Palahalli) ಮತ್ತೆ ನೆತ್ತರು ಹರಿದಿದೆ. ಹಳೇ ದ್ವೇಷದ ಹಿನ್ನೆಲೆ ರೌಡಿಶೀಟರ್‌ಒಬ್ಬನ ಬರ್ಬರ ಹತ್ಯೆಯಾದ ಘಟನೆ ಶ್ರೀರಂಗಪಟ್ಟಣದ (Srirangapatna) ಪಾಲಹಳ್ಳಿಯಲ್ಲಿ ನಡೆದಿದೆ.

    ಪಾಲಹಳ್ಳಿಯ ಸುಪ್ರಿತ್ ಅಲಿಯಾಸ್ ಸುಪ್ಪಿ ಹತ್ಯೆಯಾದ ವ್ಯಕ್ತಿ. ನಿನ್ನೆ ತಡರಾತ್ರಿ ತೋಟದ ಮನೆಯಲ್ಲಿ ಸುಪ್ರಿತ್ ಹಾಗೂ ಆತನ ಸ್ನೇಹಿತ ಅರ್ಜುನ್ ಇದ್ದರು. ಈ ವೇಳೆ ಆಟೋ, ಬೈಕ್‌ನಲ್ಲಿ ಬಂದ ಗುಂಪೊಂದು ಸುಪ್ಪಿ ಮೇಲೆ ಅಟ್ಯಾಕ್ ಮಾಡಿ, ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದೆ. ಸುಪ್ಪಿ ಸ್ನೇಹಿತ ಅರ್ಜುನ್‌ ಮೇಲೂ ಆ ಗುಂಪು ಮಾರಣಾಂತಿಕ ಹಲ್ಲೆ ನಡೆಸಿದೆ.

    ಈ ಹಿಂದೆ ಕುಂಟ ವಿನೋದ್ ಹತ್ಯೆಯಲ್ಲಿ ಸುಪ್ಪಿ ಭಾಗಿಯಾಗಿದ್ದ ಎನ್ನಲಾಗಿತ್ತು. ಅದೇ ದ್ವೇಷದ ಹಿನ್ನೆಲೆ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಸುಪ್ರಿತ್‌ನ ಮೃತದೇಹ ಮೈಸೂರಿನ ಕೆ.ಆರ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಗಂಭೀರವಾಗಿ ಗಾಯಗೊಂಡ ಅರ್ಜುನ್‌ಗೆ ಮೈಸೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

    2 ತಿಂಗಳ ಹಿಂದೆಯಷ್ಟೇ ರಿಲೀಸ್‌ ಆಗಿದ್ದ ಸುಪ್ಪಿ:
    ಕೊಲೆಗೆ ಯತ್ನಿಸಿದ್ದ ಪ್ರಕರಣವೊಂದರಲ್ಲಿ ಜೈಲು ಸೇರಿದ್ದ ಸುಪ್ಪಿ, 2 ತಿಂಗಳ ಹಿಂದೆಯಷ್ಟೇ (ನ.14) ಬೇಲ್‌ ಮೇಲೆ ರಿಲೀಸ್‌ ಆಗಿದ್ದ. ತೋಟದ ಮನೆಯಲ್ಲೇ ಹೆಚ್ಚು ಕಾಲ ಕಳೆಯುತ್ತಿದ್ದ. ಆದ್ರೆ 2023ರ ಅಕ್ಟೋಬರ್‌ 2ರಂದು ನಡೆದಿದ್ದ ರೌಡಿ ಶೀಟರ್‌ ವಿನೋದ್‌ ಅಲಿಯಾಸ್‌ ಕುಂಟ ವಿನು ಪ್ರಕರಣದಲ್ಲಿ ಸುಪ್ಪಿ ಎ10 ಆರೋಪಿಯಾಗಿದ್ದ. ಅದಾದ 6 ತಿಂಗಳಲ್ಲೇ ಬೇಲ್‌ ಮೇಲೆ ಬಿಡುಗಡೆಯಾಗಿದ್ದ. ಆದರೂ ಬುದ್ಧಿ ಕಲಿಯದ ಸುಪ್ಪಿ ಮತ್ತೆ ಕೊಲೆ ಯತ್ನ ಕೇಸ್‌ನಲ್ಲಿ ಭಾಗಿಯಾಗಿದ್ದ. ಹೀಗಾಗಿ ಹತ್ಯೆಯಾದ ಕುಂಟ ವಿನು ಅನ್ಣ ಪ್ರಮೋದ್‌ ಹಾಗೂ ಆತನ ಸಹಚರ ಕೋಳಿ ಅಭಿ ಜೈಲಿನಲ್ಲಿದ್ದುಕೊಂಡೇ ಸ್ಕೆಚ್‌ ಹಾಕಿ ಕೊಲೆ ಮಾಡಿಸಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಕೊಲೆ ಆರೋಪಿಗಳಿಗಾಗಿ ಶ್ರೀರಂಗಪಟ್ಟಣ ಟೌನ್ ಪೊಲೀಸರಿಂದ ಶೋಧಕಾರ್ಯ ನಡೆಯುತ್ತಿದೆ.

  • ಬೆಂಗಳೂರಲ್ಲಿ ಪೊಲೀಸರ ಗುಂಡಿನ ಸದ್ದು – ವಿವಸ್ತ್ರಗೊಳಿಸಿ ವಿಕೃತಿ ಮೆರೆದಿದ್ದ ರೌಡಿಶೀಟರ್ ಕಾಲಿಗೆ ಗುಂಡೇಟು

    ಬೆಂಗಳೂರಲ್ಲಿ ಪೊಲೀಸರ ಗುಂಡಿನ ಸದ್ದು – ವಿವಸ್ತ್ರಗೊಳಿಸಿ ವಿಕೃತಿ ಮೆರೆದಿದ್ದ ರೌಡಿಶೀಟರ್ ಕಾಲಿಗೆ ಗುಂಡೇಟು

    ಬೆಂಗಳೂರು: ಬೆಳ್ಳಂಬೆಳಗ್ಗೆ ರೌಡಿಶೀಟರ್ (Rowdy Sheeter) ಕಾಲಿಗೆ ಪೊಲೀಸರು ಗುಂಡೇಟು ನೀಡಿದ ಘಟನೆ ನಗರದ ಜ್ಞಾನಭಾರತಿಯ ಉಲ್ಲಾಳದ ಬಳಿ ನಡೆದಿದೆ.

    ಇತ್ತೀಚಿಗಷ್ಟೇ ಯುವಕನೊಬ್ಬನನ್ನು ವಿವಸ್ತ್ರಗೊಳಿಸಿ ವಿಕೃತಿ ಮೆರೆದಿದ್ದ ರೌಡಿಶೀಟರ್ ಪವನ್ ಅಲಿಯಾಸ್ ಕಡುಬು ಕಾಲಿಗೆ ಪೊಲೀಸರು ಬೆಳ್ಳಂಬೆಳಗ್ಗೆ ಗುಂಡೇಟು ನೀಡಿದ್ದಾರೆ. ಬಂಧನದ ವೇಳೆ ಪೊಲೀಸರ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದ ಕಡುಬು ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿ, ಆತನ ಬಲಗಾಲಿಗೆ ಗುಂಡು ಹಾರಿಸಿದ್ದಾರೆ.ಇದನ್ನೂ ಓದಿ: ಪ್ರತಿಭಟನಾನಿರತ ವೈದ್ಯರ ಬೇಡಿಕೆಗೆ ಒಪ್ಪಿಗೆ – ಕೋಲ್ಕತ್ತಾದ ಉನ್ನತ ಪೊಲೀಸ್‌, ಇಬ್ಬರು ಆರೋಗ್ಯಾಧಿಕಾರಿಗಳ ತಲೆದಂಡ

    ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ (Kamakshipalya Police Station) ಕೃತ್ಯ ಎಸಗಿದ್ದ ಕಡುಬು ಮೇಲೆ ವಾರಂಟ್ ಇದ್ದರೂ ತಲೆಮರೆಸಿಕೊಂಡು ಓಡಾಡುತ್ತಿದ್ದ. ಈ ನಡುವೆ ಯುವಕನನ್ನು ಬೆತ್ತಲೆ ಮಾಡಿ ಹಲ್ಲೆ ಮಾಡಿದ್ದ. ಬಳಿಕ ಆತನ ವಿಡಿಯೋ ಹರಿಬಿಟ್ಟಿದ್ದ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ಉಲ್ಲಾಳದ ಹಿಲ್‌ರಾಕ್ ಸ್ಕೂಲ್ ಬಳಿ ಬಂಧನಕ್ಕೆ ತೆರಳಿದ್ದರು.

    ಬಂಧನಕ್ಕೆ ತೆರಳಿದ್ದ ವೇಳೆ ಕಡುಬು ಹೆಡ್ ಕಾನ್‌ಸ್ಟೇಬಲ್ ವೆಂಕಟೇಶ್ ಮೇಲೆ ಲಾಂಗ್‌ನಿಂದ ಹಲ್ಲೆ ನಡೆಸಿದ್ದಾನೆ. ಆತ್ಮರಕ್ಷಣೆಗಾಗಿ ರೌಡಿಯ ಬಲಗಾಲಿಗೆ ಗೋವಿಂದರಾಜ ನಗರದ ಇನ್ಸ್ಪೆಕ್ಟರ್ (Govindraj Nagar Inspector) ಸರ್ವಿಸ್ ರಿವಾಲ್ವರ್‌ನಿಂದ ಗುಂಡು ಹೊಡೆದಿದ್ದಾರೆ. ಬಳಿಕ ಕಾಮಾಕ್ಷಿಪಾಳ್ಯ ಪೊಲೀಸರು ಕಡುಬುನನ್ನು ಬಂಧಿಸಿದ್ದಾರೆ.ಇದನ್ನೂ ಓದಿ: ರಾಜ್ಯದ ಹವಾಮಾನ ವರದಿ: 17-09-2024

     

  • ನಡುರಸ್ತೆಯಲ್ಲೇ ಯುವಕನ ಬಟ್ಟೆ ಬಿಚ್ಚಿಸಿ ಹಲ್ಲೆ – ಬೆಂಗಳೂರಲ್ಲಿ ಇದೆಂತಹ ಅಮಾನವೀಯ ಕೃತ್ಯ!

    ನಡುರಸ್ತೆಯಲ್ಲೇ ಯುವಕನ ಬಟ್ಟೆ ಬಿಚ್ಚಿಸಿ ಹಲ್ಲೆ – ಬೆಂಗಳೂರಲ್ಲಿ ಇದೆಂತಹ ಅಮಾನವೀಯ ಕೃತ್ಯ!

    – ಪ್ರಾಣ ಉಳಿಸಿಕೊಳ್ಳಲು ಬೆತ್ತಲಾಗಿಯೇ ಓಡಿದ ಯುವಕ

    ಬೆಂಗಳೂರು: ಒಂಡೆದೆ ಸರ್ಕಾರ ಕಾನೂನುಗಳನ್ನು ಬಿಗಿಗೊಳಿಸುತ್ತಿದ್ದರೆ ಮತ್ತೊಂದೆಡೆ ಪುಡಿರೌಡಿಗಳ ಅಟ್ಟಹಾಸಕ್ಕೆ ಕೊನೆಯೇ ಇಲ್ಲದಂತಾಗಿದೆ. ಇದರಿಂದ ಸಾರ್ವಜನಿಕರು ರಸ್ತೆಯಲ್ಲಿ ಓಡಾಡುವುದಕ್ಕೂ ಭಯ ಪಡುವ ವಾತಾವರಣ ಸೃಷ್ಟಿಯಾದಂತೆ ಕಾಣುತ್ತಿದೆ. ನಡುರಸ್ತೆಯಲ್ಲೇ ಯುವಕನ ಬಟ್ಟೆ ಬಿಚ್ಚಿಸಿ ರೌಡಿ ಪಟಾಲಂ ವಿಕೃತಿ ಮೆರೆದಿರುವ ಬೆಂಗಳೂರಿನ (Bengaluru) ಘಟನೆ ಇದಕ್ಕೆ ತಾಜಾ ಉದಾಹರಣೆಯಾಗಿದೆ.

    ಹೌದು. ರೌಡಿಶೀಟರ್‌ (Rowdy Sheeter) ಪವನ್‌ ಅಲಿಯಾಸ್‌ ಕಡುಬು ಎಂಬಾತ ಕಳೆದ 10-12 ದಿನಗಳ ಹಿಂದೆ ಯುವಕನ ಬಟ್ಟೆ ಬಿಚ್ಚಿಸಿ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಕೈಯಲ್ಲಿ ಮಾರಕಾಸ್ತ್ರ ಹಿಡಿದು ಮುಖದಲ್ಲಿ ರಕ್ತ ಬರುವಂತೆ ಹೊಡೆದು, ಆವಾಜ್‌ ಹಾಕಿ ಬಟ್ಟೆ ಬಿಚ್ಚಿಸಿದ್ದಾನೆ. ಈ ವೀಡಿಯೋ ‌ʻಪಬ್ಲಿಕ್ ಟಿವಿʼಗೆ ಲಭ್ಯವಾಗಿದೆ. ಇದನ್ನೂ ಓದಿ: ಈದ್‌ ಮೆರವಣಿಗೆಗೆ ಪ್ರತಿಯಾಗಿ ಬಜರಂಗದಳ-ವಿಹೆಚ್‌ಪಿಯಿಂದ ಬಿ.ಸಿ ರೋಡ್ ಚಲೋಗೆ ಕರೆ

    ಕಾಮಾಕ್ಷಿಪಾಳ್ಯ ಠಾಣಾ (kamakshipalya Police Station) ವ್ಯಾಪ್ತಿಯ ಸುಂಕದಕಟ್ಟೆ ಬಳಿ ಕೃತ್ಯ ನಡೆದಿದೆ. ಪವನ ಅಲಿಯಾಸ್‌ ಕಡುಬು ರಾಜಗೋಪಲನಗರ ರೌಡಿ ಶೀಟರ್ ಎಂದು ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಮುಂಬೈ ಮೂಲದ ಮಾಡೆಲ್‍ಗೆ ಕಿರುಕುಳ – ಆಂಧ್ರದ ಮೂವರು ಐಪಿಎಸ್ ಅಧಿಕಾರಿಗಳು ಸಸ್ಪೆಂಡ್

    ಸಾರ್ವಜನಿಕರಿಂದ ಇಡೀ ಶಾಪ:
    ನಡುರಸ್ತೆಯಲ್ಲೇ ಬಟ್ಟೆ ಬಿಚ್ಚಿಸಿ ಪುಡಿರೌಡಿಯೊಬ್ಬ ಹಲ್ಲೆ ಮಾಡಿದ್ದಾನೆ. ಈ ವೇಳೆ ಯುವಕ ಪ್ರಾಣ ಉಳಿಸಿಕೊಳ್ಳಲು ಬೆತ್ತಲಾಗಿಯೇ ಓಡಿದ್ದಾನೆ. ರೌಡಿಗಳ ಕಾಟದಿಂದ ಜನ ನೆಮ್ಮದಿಯಾಗಿ ಓಡಾಡೋದು ಬೇಡ್ವಾ..? ಇಂತಹವರನ್ನ ಕೇಳೋರು ಯಾರೂ ಇಲ್ವಾ? ಅಂತಾ ಸಾರ್ವಜನಿಕರು ಇಡೀ ಶಾಪ ಹಾಕಿದ್ದಾರೆ. ಇದನ್ನೂ ಓದಿ:  ಹದಿಹರೆಯದ ಹುಡುಗಿಯರ ಮಿದುಳಿಗೆ ಬೇಗ ವಯಸ್ಸಾಗ್ತಿದೆಯಂತೆ; ಯಾಕೆ ಗೊತ್ತಾ? – ಅಧ್ಯಯನ ಹೇಳೋದೇನು?

     

  • ನಿನ್ ಹೆಂಡ್ತಿ ನಂಬರ್ ಕೊಡು ಎಂದವನ ಮೇಲೆ ರೌಡಿಯಿಂದ ಹಲ್ಲೆ – ಒದೆ ತಿಂದವನ ಕಡೆಯವರಿಂದ ಮನೆ ಮುರಿದು ದಾಂಧಲೆ

    ನಿನ್ ಹೆಂಡ್ತಿ ನಂಬರ್ ಕೊಡು ಎಂದವನ ಮೇಲೆ ರೌಡಿಯಿಂದ ಹಲ್ಲೆ – ಒದೆ ತಿಂದವನ ಕಡೆಯವರಿಂದ ಮನೆ ಮುರಿದು ದಾಂಧಲೆ

    ಬೆಂಗಳೂರು: ಕುಡಿದ ಮತ್ತಿನಲ್ಲಿ‌ ಶುರುವಾಗಿದ್ದ ಜಗಳ ಮನೆಯನ್ನೆ ಧ್ವಂಸ ಮಾಡುವ ಹಂತಕ್ಕೆ ಬಂದಿದೆ.‌ ಹೆಂಡತಿ ನಂಬರ್ ಕೊಡು ಎಂದಿದ್ದಕ್ಕೆ ರೊಚ್ಚಿಗೆದ್ದ ರೌಡಿಶೀಟರ್ (Rowdy Sheeter) ರಸ್ತೆಯಲ್ಲಿಯೇ ಹಿಗ್ಗಾ ಮುಗ್ಗಾ ಥಳಿಸಿರುವ ಘಟನೆ ಚಂದ್ರಲೇಔಟ್ ಠಾಣಾ (Chandra Layout Police Station) ವ್ಯಾಪ್ತಿಯಲ್ಲಿ ನಡೆದಿದೆ.

    ರೌಡಿಶೀಟರ್ ಕೆಂಪೇಗೌಡ ಅಲಿಯಾಸ್‌ ಕೆಂಪ, ಸ್ನೇಹಿತ ರಮೇಶ್‌ನನ್ನೇ ಥಳಿಸಿದ್ದಾನೆ. ಸ್ನೇಹಿತರಾಗಿದ್ದ ಇಬ್ಬರೂ ಬಾರ್ ನಲ್ಲಿ‌ ಕುಡಿದು ಅಂಗಡಿ ಮುಂದೆ ಬಂದು ನಿಂತಿದ್ದಾರೆ.‌‌ ಈ‌‌ ವೇಳೆ ಕೆಂಪೇಗೌಡನಿಗೆ ನಿನ್ನ ಪತ್ನಿ ನಂಬರ್ ಕೊಡು ಎಂದು ರಮೇಶ್‌ ಕೇಳಿದ್ದಾನೆ. ಇದರಿಂದ ರೊಚ್ಚಿಗೆದ್ದ ಕೆಂಪೇಗೌಡ, ರಮೇಶ್‌ಗೆ ಕಪಾಳಕ್ಕೆ‌ ಹೊಡೆದು ಹೋಗಿದ್ದ. ನಂತರ ಹೊಯ್ಸಳ ನಗರದಲ್ಲಿರುವ ತನ್ನ ಮನೆಗೆ ವಾಪಸ್ ಆಗಿದ್ದ. ಇದನ್ನೂ ಓದಿ: ನಿಫಾ ವೈರಸ್ ಭೀತಿ – ರಾಜ್ಯದ ಗಡಿಯಲ್ಲಿ ಹೈ ಅಲರ್ಟ್, ಕಟ್ಟುನಿಟ್ಟಿನ ತಪಾಸಣೆಗೆ ಸರ್ಕಾರ ಸೂಚನೆ

    ರಾತ್ರಿ 11 ಗಂಟೆಗೆ ಹಲ್ಲೆ ವಿಚಾರವಾಗಿ ಪ್ರಶ್ನೆ ಮಾಡಲು ರಮೇಶ್ ಸಂಬಂಧಿಕರು ಮತ್ತು ಸ್ನೇಹಿತರು ಕೆಂಪನ ಮನೆ ಬಳಿ ಹೋಗಿದ್ದರು. ಮಂಜುನಾಥ್, ಜವರೇಗೌಡ, ಕೃಷ್ಣಮೂರ್ತಿ ಸೇರಿದಂತೆ 10ಕ್ಕೂ ಹೆಚ್ಚು ಜನರನ್ನ ಗುಂಪು ಕಟ್ಟಿಕೊಂಡು ರಮೇಶ್‌ ಹೋಗಿದ್ದಾನೆ. ಮನೆ ಬಳಿ ಬಂದು ಕಿರಿಕ್ ತೆಗೆದಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದು ಮತ್ತೆ ಗಲಾಟೆಯಾಗಿದೆ. ಗಲಾಟೆಯಲ್ಲಿ ಮಂಜುನಾಥ್, ಜವರೇಗೌಡ, ಕೃಷ್ಣಮೂರ್ತಿಗೆ ರೌಡಿ ಕೆಂಪ ಚಾಕುವಿನಿಂದ ಇರಿದಿದ್ದಾನೆ. ಇದರಿಂದ ರೊಚ್ಚಿಗೆದ್ದ ಗುಂಪಿನವರು ಕೆಂಪೇಗೌಡ ಮನೆ ಮೇಲೆ ಕಲ್ಲು ಎಸೆದು ಕಿಟಕಿ ಗಾಜುಗಳನ್ನ ಪುಡಿ‌-ಪುಡಿ ಮಾಡಿ, ಬಾಗಿಲು, ಗೇಟ್ ಮುರಿದು ಹಾಕಿದ್ದಾರೆ.

    ಘಟನೆ ಸಂಬಂಧ ಚಂದ್ರಲೇಔಟ್ ಪೊಲೀಸರು ರೌಡಿ ಕೆಂಪನನ್ನ ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ವಿಶ್ವನಾಥ್ ಜೀ ಅಲಿಯಾಸ್ ಚನ್ನನಾಯ್ಕ್ ಪತ್ನಿಗೆ ಬೆದರಿಕೆ ಹಾಕಿದ್ದ ಚೈತ್ರಾ ಕುಂದಾಪುರ!

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 530 ಜನರಿಗೆ ರೌಡಿ ಶೀಟರ್ ಪಟ್ಟದಿಂದ ಮುಕ್ತಿ ನೀಡಿದ ಹು-ಧಾ ಪೊಲೀಸ್ ಇಲಾಖೆ

    530 ಜನರಿಗೆ ರೌಡಿ ಶೀಟರ್ ಪಟ್ಟದಿಂದ ಮುಕ್ತಿ ನೀಡಿದ ಹು-ಧಾ ಪೊಲೀಸ್ ಇಲಾಖೆ

    ಹುಬ್ಬಳ್ಳಿ: ವಾಣಿಜ್ಯ ನಗರಿಯಲ್ಲಿ ಬೆಚ್ಚಿ ಬೀಳಿಸುವಂತಹ ಘಟನೆಗಳಿಗೆ ಕಾರಣವಾಗುವ ರೌಡಿ ಶೀಟರ್‌ಗಳನ್ನು (Rowdy Sheeter) ಸನ್ನಡತೆ ಸೇರಿ ಇತರ ಆಧಾರದ ಮೇಲೆ ಪಟ್ಟಿಯಿಂದ ಕೈಬಿಡಲಾಗಿದೆ. ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತಾಲಯ (Hubballi – Dharwad Police Department) ವ್ಯಾಪ್ತಿಯಲ್ಲಿ ಒಟ್ಟು 530 ಮಂದಿಯ ಹೆಸರನ್ನು ರೌಡಿ ಶೀಟರ್ ಪಟ್ಟಿಯಿಂದ ಹೊರಹಾಕಲಾಗಿದೆ.

    ಕೆಲ ಮಾಹಿತಿಗಳನ್ನು ಆಧರಿಸಿ ರೌಡಿಗಳ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗುತ್ತದೆ. ಹು-ಧಾ ವ್ಯಾಪ್ತಿಯಲ್ಲಿ 2018ರಿಂದ 2023ರವರೆಗೆ ಬಹಳಷ್ಟು ರೌಡಿಗಳನ್ನು ಪಟ್ಟಿಯಿಂದ ಹೊರಗಿಡಲಾಗಿದೆ. ಹು-ಧಾ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯಲ್ಲಿ 2 ಸಾವಿರಕ್ಕೂ ಹೆಚ್ಚು ರೌಡಿಗಳಿದ್ದಾರೆ. ಪ್ರತಿ ರೌಡಿ ಪಟ್ಟಿಯಲ್ಲಿ ಹಲವರ ಹೆಸರು ಸೇರ್ಪಡೆಯಾಗುತ್ತ ಹೋಗುತ್ತದೆ. ಕೊಲೆ, ಸುಲಿಗೆ, ಕಳ್ಳತನ, ದರೋಡೆ ಸೇರಿ ಹಲವು ಪ್ರಕರಣಗಳಲ್ಲಿ ಭಾಗಿಯಾದವರು ರೌಡಿ ಶೀಟರ್‌ಗೆ ಸರ್ಪಡೆಯಾಗುತ್ತಾರೆ. ಅದೂ ಒಬ್ಬರ ಮೇಲೆ ಒಂದಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾದರೆ ಮಾತ್ರ. ಇದನ್ನೂ ಓದಿ: ತಳ್ಳಾಟ ನೂಕಾಟದಲ್ಲಿ ಅಸ್ವಸ್ಥರಾಗಿ ಕುಸಿದು ಬಿದ್ದ ಯತ್ನಾಳ್ – ಆಸ್ಪತ್ರೆಗೆ ರವಾನೆ

    ಇದೇ ಆಧಾರದಲ್ಲಿ ಪ್ರತಿ ರೌಡಿಗಳ ಹೊಸ ಪಟ್ಟಿ ಸನ್ನಡತೆ ಆಧರಿಸಿ ಬಿಡುಗಡೆ ಪ್ರಕ್ರಿಯೆ ನಡೆಯುತ್ತದೆ. ಹು-ಧಾ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯಲ್ಲಿ 2018ರಲ್ಲಿ 13, 2019ರಲ್ಲಿ 20, 2020ರಲ್ಲಿ 11, 2021ರಲ್ಲಿ 17, 2022ರಲ್ಲಿ 9 ಹಾಗೂ 2023ರಲ್ಲಿ 480 ರೌಡಿಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಎಲ್ಲ ವರ್ಷಗಳಿಗಿಂತ 2023ರಲ್ಲಿಯೇ ಅತಿ ಹೆಚ್ಚು ರೌಡಿಗಳನ್ನು ಪಟ್ಟಿಯಿಂದ ವಿಮುಕ್ತಗೊಳಿಸಲಾಗಿದೆ. ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆಗೆ ಸರ್ಕಾರದಿಂದ ಕೊನೆಗೂ ಚಾಲನೆ – ಆ್ಯಪ್ ಬಿಡುಗಡೆ ಮಾಡಿದ ಸಿದ್ದರಾಮಯ್ಯ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಿಸ್ಡ್‌ಕಾಲ್ ಕೊಟ್ಟು ಬಿಜೆಪಿ ಸದಸ್ಯತ್ವ ಪಡೆದಿದ್ದ ಸೈಲೆಂಟ್ ಸುನಿ – ಸದಸ್ಯತ್ವ ರದ್ದುಗೊಳಿಸಿದ ಪಕ್ಷ

    ಮಿಸ್ಡ್‌ಕಾಲ್ ಕೊಟ್ಟು ಬಿಜೆಪಿ ಸದಸ್ಯತ್ವ ಪಡೆದಿದ್ದ ಸೈಲೆಂಟ್ ಸುನಿ – ಸದಸ್ಯತ್ವ ರದ್ದುಗೊಳಿಸಿದ ಪಕ್ಷ

    ಬೆಂಗಳೂರು: ಮಿಸ್ಡ್‌ಕಾಲ್ ಕೊಟ್ಟು ಬಿಜೆಪಿ ಸದಸ್ಯತ್ವ ಪಡೆದುಕೊಂಡಿದ್ದ ರೌಡಿಶೀಟರ್ ಸೈಲೆಂಟ್ ಸುನೀಲನ (Silent Sunila) ಸದಸ್ಯತ್ವವನ್ನು ಕೆಲವೇ ಗಂಟೆಗಳಲ್ಲಿ ರದ್ದುಮಾಡಲಾಗಿದೆ.

    ರೌಡಿಶೀಟರ್ ಸೈಲೆಂಟ್ ಸುನೀಲ ಬಿಜೆಪಿ ಸದಸ್ಯತ್ವ (BJP MemberShip) ಪಡೆದು ಸಂಭ್ರಮಿಸುತ್ತಿದ್ದ ವಿಚಾರದ ಬೆಳಕಿಗೆ ಬರುತ್ತಿದ್ದಂತೆ, ಬಿಜೆಪಿ ಡ್ಯಾಮೇಜ್ ಕಂಟ್ರೋಲ್ ಮಾಡಲು ಮುಂದಾಗಿದ್ದು, ಕೆಲವೇ ಗಂಟೆಗಳಲ್ಲಿ ಸದಸ್ಯತ್ವ ರದ್ದುಪಡಿಸಿದೆ. ಇದನ್ನೂ ಓದಿ: ಅಂಧ ಜೋಡಿಗೆ ಬೆಳಕಾದ 400 ಆಟೋ ಚಾಲಕರು

    ಈ ಬಗ್ಗೆ ಬೆಂಗಳೂರು (Bengaluru) ಕೇಂದ್ರದ ಅಧ್ಯಕ್ಷ ಮಂಜುನಾಥ್ `ಪಬ್ಲಿಕ್ ಟಿವಿ’ಗೆ ಸ್ಪಷ್ಟನೆ ನೀಡಿದ್ದಾರೆ. ಬಿಜೆಪಿ ಪಕ್ಷಕ್ಕೆ ಜನರನ್ನು ಸೇರಿಸಿಕೊಳ್ಳಲು ಮಿಸ್ಡ್ಕಾಲ್ ಅಭಿಯಾನ ಶುರು ಮಾಡಿದೆ. ಈ ಸಂಖ್ಯೆಗೆ ಮಿಸ್ಡ್ಕಾಲ್ ಕೊಟ್ಟು ಸೈಲೆಂಟ್ ಸುನೀಲ ಬಿಜೆಪಿ ಸದಸ್ಯತ್ವ ಪಡೆದಿದ್ದಾನೆ. ಈ ವಿಷಯ ತಿಳಿದ ಕೂಡಲೇ ಬೆಂಗಳೂರು ಕೇಂದ್ರ ಜಿಲ್ಲಾ ಘಟಕದಿಂದ ಸೈಲೆಂಟ್ ಸುನೀಲನ ಬಿಜೆಪಿ ಸದಸ್ಯತ್ವ ರದ್ದು ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕದ ಇತಿಹಾಸದಲ್ಲಿ ಬಂದು ಹೋದವ್ರು 25 ಸಿಎಂ; ಪೂರ್ಣಾವಧಿ ಆಡಳಿತ ಮಾಡಿದವ್ರು ಮೂರೇ ಮಂದಿ

    ಕೆಲ ದಿನಗಳ ಹಿಂದೆಯಷ್ಟೇ ಸೈಲೆಂಟ್ ಸುನೀಲ ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ ಎನ್ನುವ ಬಗ್ಗೆ ವಿವಾದ ಎದ್ದಿತ್ತು. ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (NalinKumar Kateel), ಯಾವುದೇ ಕಾರಣಕ್ಕೂ ಬಿಜೆಪಿಗೆ ಸೇರಿಸಿಕೊಳ್ಳಲ್ಲ ಎಂದು ಹೇಳಿದ್ದರು. ಉಗ್ರಗಾಮಿಗಳು, ಭಯೋತ್ಪಾದನಾ ಚಟುವಟಿಕೆಗೆ ಬೆಂಬಲ ಕೊಡುವವರು ಮತ್ತು ಅಪರಾಧ ಹಿನ್ನೆಲೆ ಉಳ್ಳವರನ್ನ ಪಕ್ಷಕ್ಕೆ ಯಾವುದೇ ಕಾರಣಕ್ಕೂ ಸೇರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಶನಿವಾರ ಸುನೀಲ ಪಕ್ಷ ಸೇರ್ಪಡೆಯಾಗಿರುವ ವಿಚಾರ ತಿಳಿಯುತ್ತಿದ್ದಂತೆ ಬಿಜೆಪಿ ಆತನ ಸದಸ್ಯತ್ವವನ್ನು ರದ್ದುಮಾಡಿದೆ.

  • ರಾಜ್ಯಾದ್ಯಂತ ಒಂದೂವರೆ ತಿಂಗಳಲ್ಲಿ 7361 ರೌಡಿಗಳು ರೌಡಿ ಪಟ್ಟಿಯಿಂದ ಔಟ್

    ರಾಜ್ಯಾದ್ಯಂತ ಒಂದೂವರೆ ತಿಂಗಳಲ್ಲಿ 7361 ರೌಡಿಗಳು ರೌಡಿ ಪಟ್ಟಿಯಿಂದ ಔಟ್

    ಬೆಂಗಳೂರು: ಚುನಾವಣೆ (Election)  ಸಮೀಪದಲ್ಲಿ ಈ ವರ್ಷದ ಮೊದಲ 45 ದಿನಗಳಲ್ಲಿ ದಾಖಲೆ ಪ್ರಮಾಣದ ರೌಡಿಶೀಟರ್‌ಗಳನ್ನು ರೌಡಿಶೀಟ್ ಪಟ್ಟಿಯಿಂದ ಕೈಬಿಟ್ಟಿರುವುದು ಅನುಮಾನಕ್ಕೆ ಮತ್ತು ಆತಂಕಕ್ಕೆ ಕಾರಣವಾಗಿದೆ.

    ರಾಜ್ಯದ ವಿವಿಧೆಡೆ ಬರೋಬ್ಬರಿ 7,361 ರೌಡಿಶೀಟರ್‌ಗಳನ್ನು ರೌಡಿ ಪಟ್ಟಿಯಿಂದ ಕೈಬಿಡಲಾಗಿದೆ. ಕಳೆದ ಐದು ವರ್ಷದಲ್ಲಿ 26 ಸಾವಿರಕ್ಕೂ ಹೆಚ್ಚು ರೌಡಿಶೀಟರ್‌ಗಳನ್ನು ಪಟ್ಟಿಯಿಂದ ತೆಗೆಯಲಾಗಿದೆ. ಇದನ್ನೂ ಓದಿ: ಪೊಲೀಸ್‌ ಸರ್ಪಗಾವಲು – ಆಳಂದ ದರ್ಗಾದಲ್ಲಿ ನಡೆಯಿತು ಉರುಸ್, ಶಿವಲಿಂಗ ಪೂಜೆ

    2018ರಲ್ಲಿ 3,489, 2019ರಲ್ಲಿ 2,195, 2020ರಲ್ಲಿ 1,718, 2021ರಲ್ಲಿ 8,062, 2022ರಲ್ಲಿ 3,314 ಮತ್ತು 2023ರ ಆರಂಭದಲ್ಲಿ 7,361 ರೌಡಿಶೀಟರ್‌ಗಳನ್ನು ರೌಡಿ ಪಟ್ಟಿಯಿಂದ ತೆಗೆಯಲಾಗಿದೆ ಎಂದು ಗೃಹ ಮಂತ್ರಿಗಳು ಲಿಖಿತ ಉತ್ತರ ನೀಡಿದ್ದಾರೆ.

    2023 ರಲ್ಲಿ ಬೆಂಗಳೂರು ನಗರದಲ್ಲಿ 17 ರೌಡಿಗಳನ್ನ ಪಟ್ಟಿಯಿಂದ ಕೈ ಬಿಡಲಾಗಿದೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬೆಂಗ್ಳೂರು ಹೊರವಲಯದಲ್ಲಿ ಆಂಧ್ರ ಬಿಲ್ಡರ್‌ಗೆ ಗುಂಡೇಟು

    ಬೆಂಗ್ಳೂರು ಹೊರವಲಯದಲ್ಲಿ ಆಂಧ್ರ ಬಿಲ್ಡರ್‌ಗೆ ಗುಂಡೇಟು

    ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಪಾತಕ ಲೋಕ ಹೆಡೆ ಎತ್ತಿದಂತಿದೆ. ಕೆಆರ್‌ಪುರಂನ ಸೀಗೆಹಳ್ಳಿಯಲ್ಲಿ ರಸ್ತೆ ಬದಿ ನಿಂತಿದ್ದ ಆಂಧ್ರ ಮೂಲದ ಬಿಲ್ಡರ್ (Builder) ಕಮ್ ರೌಡಿಶೀಟರ್ ಮೇಲೆ ದುಷ್ಕರ್ಮಿಗಳು ನಾಲ್ಕೈದು ಸುತ್ತು ಗುಂಡಿನ ಮಳೆಗರೆದು ಎಸ್ಕೇಪ್‌ ಆಗಿದ್ದಾರೆ.

    ಬೆಂಗಳೂರಿನ (Bengaluru) ಕೆ.ಆರ್.ಪುರಂ ಠಾಣಾ ವ್ಯಾಪ್ತಿಯ ಕುರುಡುಸೊಣ್ಣೇನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಶಿವಶಂಕರ್ ರೆಡ್ಡಿ ಮದನಪಲ್ಲಿಯಲ್ಲಿ ಹಲವಾರು ಕ್ರೈಂಗಳಲ್ಲಿ ಭಾಗಿಯಾಗಿದ್ದಾನೆ. ಘಟನೆಯಲ್ಲಿ ಆಂಧ್ರಪ್ರದೇಶದ (Andhra Pradesh) ಮದನಪಲ್ಲಿಯ ರೌಡಿಶೀಟರ್ ಕಮ್ ಬಿಲ್ಡರ್ ಶಿವಶಂಕರರೆಡ್ಡಿ ಮತ್ತು ಆತನ ಕಾರು ಚಾಲಕ ಅಶೋಕ್ ರೆಡ್ಡಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ಟಿಆರ್‌ಎಸ್‌ ಅಲ್ಲ, ಇನ್ಮುಂದೆ ಬಿಆರ್‌ಎಸ್‌ – ಕೆಸಿಆರ್‌ ಪಕ್ಷದ ಹೆಸರು ಬದಲಾವಣೆಗೆ ಚುನಾವಣಾ ಆಯೋಗ ಒಪ್ಪಿಗೆ

    crime

    ಗುಂಡಿನ ದಾಳಿ ನಡೆಸಿದ ದುಷ್ಕರ್ಮಿಗಳು ಆಂಧ್ರ ಮೂಲದವರೆಂಬ ಶಂಕೆ ವ್ಯಕ್ತವಾಗಿದ್ದು, ಹಳೆದ್ವೇಷದ ಹಿನ್ನೆಲೆಯಲ್ಲಿ ಹತ್ಯೆಗೆ ಯತ್ನಿಸಿರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಆರೋಪಿಗಳ ಪತ್ತೆಗೆ ವೈಟ್ ಫೀಲ್ಡ್ ಡಿಸಿಪಿ ಮೂರು ತಂಡ ರಚನೆ ಮಾಡಿದ್ದು, ಪೊಲೀಸರು ಶೋಧ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿ ಕೆ ಆರ್ ಪುರಂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಪ್ರತಿಭಟನೆ ವೇಳೆ ಬಂದ ಮಹಾರಾಷ್ಟ್ರ ಲಾರಿಗೆ ಮಸಿ ಬಳಿದ ಕರವೇ ಕಾರ್ಯಕರ್ತರು

    Live Tv
    [brid partner=56869869 player=32851 video=960834 autoplay=true]