Tag: ರೌಡಿ ಲಕ್ಷ್ಮಣ್

  • ರೌಡಿ ಲಕ್ಷ್ಮಣ್ ಕೊಲೆ ಆರೋಪಿ ವರ್ಷಿಣಿ ಮೇಲೆ ಕೋಕಾ ಕಾಯ್ದೆ ಪ್ರಯೋಗ!

    ರೌಡಿ ಲಕ್ಷ್ಮಣ್ ಕೊಲೆ ಆರೋಪಿ ವರ್ಷಿಣಿ ಮೇಲೆ ಕೋಕಾ ಕಾಯ್ದೆ ಪ್ರಯೋಗ!

    ಬೆಂಗಳೂರು: ಮೃತ ರೌಡಿ ಲಕ್ಷ್ಮಣ್ ಪ್ರೇಯಸಿ, ಜೈಲಿನಲ್ಲಿರುವ ವರ್ಷಣಿ ವಿರುದ್ಧ ಕೋಕಾ ಕಾಯ್ದೆಯ ಅಡಿ ಪ್ರಕರಣ ದಾಖಲಿಸಲು ಸಿಸಿಬಿ ಪೊಲೀಸರು ಮುಂದಾಗಿದ್ದಾರೆ.

    ಹೌದು. ವರ್ಷಿಣಿ ಅಪರಾಧ ಚಟುವಟಿಕೆಯಲ್ಲಿ ಹಾಗೂ ನಟೋರಿಯಸ್ ರೌಡಿ ಶೀಟರ್ ಹತ್ಯೆಯ ಪ್ರಮುಖ ಆರೋಪಿಯಾಗಿ ಜೈಲಿನಲ್ಲಿದ್ದಾಳೆ. ಇದೀಗ ಈಕೆಯ ಮೇಲೆ ಸಿಸಿಬಿ ಅಧಿಕಾರಿಗಳು ಕಾಯ್ದೆ ಅಡಿ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಕೋಕಾ ಅಂದ್ರೆ ಏನು?:
    ಕೋಕಾ ಅಂದ್ರೆ ಸಂಘಟಿತ ಅಪರಾಧಗಳ ತಡೆ ಕಾಯ್ದೆ (ಕರ್ನಾಟಕ ಕಂಟ್ರೋಲ್ ಆಫ್ ಆರ್ಗನೈಜಿಸ್ಡ್ ಕ್ರೈಮ್ಸ್ ಆಕ್ಟ್). ಸಂಘಟಿತರಾಗಿ ಅಪರಾಧ ಕೃತ್ಯ ಎಸಗಿ, ವ್ಯಕ್ತಿಯ ಸಾವಿಗೆ ಕಾರಣರಾಗುವವರಿಗೆ ಗರಿಷ್ಠ ಗಲ್ಲು ಶಿಕ್ಷೆ ಅಥವಾ ಜೀವನ ಪರ್ಯಂತ ಜೈಲು ಶಿಕ್ಷೆ ಜತೆಗೆ 1 ಲಕ್ಷ ರೂ.ಗೆ ಕಡಿಮೆ ಇಲ್ಲದಂತೆ 5 ಲಕ್ಷ ರೂ.ವರೆಗೂ ದಂಡ ವಿಧಿಸಲು ಈ ಕಾಯ್ದೆಯ ಅಡಿ ಅವಕಾಶವಿದೆ. ಆರೋಪಿಗಳಿಗೆ ಕನಿಷ್ಠ 5 ವರ್ಷ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ವ್ಯಕ್ತಿಯ ಸಾವಿಗೆ ಕಾರಣರಾಗುವವರಿಗೆ ಗರಿಷ್ಠ ಗಲ್ಲು ಶಿಕ್ಷೆಯನ್ನೂ ವಿಧಿಸಬಹುದು.

    ಗೌರಿ ಹತ್ಯೆ ಪ್ರಕರಣವನ್ನು ನಡೆಸಿದ್ದ ವಿಶೇಷ ತನಿಖಾ ತಂಡ ಆರೋಪಿಗಳ ಮೇಲೆ ಕೋಕಾ ಕಾಯ್ದೆಯನ್ನು ಪ್ರಯೋಗಿಸಿದೆ. ಈ ಹಿಂದೆ ಪಿಯುಸಿ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾದ ಹಿನ್ನೆಲೆಯಲ್ಲಿ 2019ರ ಪರೀಕ್ಷೆಯ ವೇಳೆ ಯಾರಾದರೂ ಪ್ರಶ್ನೆ ಪತ್ರಿಕೆಯನ್ನು ಸೋರಿಕೆ ಮಾಡಿದ್ದಲ್ಲಿ ಅವರ ವಿರುದ್ಧ ಕೋಕಾ ಕಾಯ್ದೆಯನ್ನು ಹಾಕಲಾಗುವುದು ಎಂದು ಪ್ರಾಥಮಿಕ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಸುದ್ದಿಗೋಷ್ಠಿ ನಡೆಸಿ ಎಚ್ಚರಿಕೆ ನೀಡಿದ್ದರು. ಇದನ್ನೂ ಓದಿ: ಕೊನೆಗೂ ರೌಡಿ ಲಕ್ಷ್ಮಣ್ ಕೊಲೆ ಹಿಂದಿನ ರಹಸ್ಯ ಬಯಲು – ಮೂರು ಕಾರಣಕ್ಕೆ ಹತ್ಯೆಯ ಸ್ಕೆಚ್

    ಅಸಲಿಗೆ ಶೋರೂಂ ಫೋಟೋವನ್ನು ಪ್ರಿಯಕರ ರೂಪೇಶ್ ವರ್ಷಿಣಿಗೆ ಕಳುಹಿಸಿ ಕೊಲೆ ಮಾಡಲು ಸಿದ್ಧವಾಗಿದ್ದನು. ಗೆಳತಿ ಶೋರೂಂ ಬಳಿ ತನಗಾಗಿ ಕಾಯುತ್ತಿದ್ದಾಳೆ ಎಂದು ತಿಳಿದು ಲಕ್ಷ್ಮಣ್ ವರ್ಷಿಣಿ ತಿಳಿಸಿದ ಸ್ಥಳಕ್ಕೆ ಬಂದಿದ್ದನು. ಶೋರೂಂ ಬಳಿ ಲಕ್ಷ್ಮಣ್ ಬಂದ ಕೂಡಲೇ ರೌಡಿಗಳು ಆತನ ಮೇಲೆ ಮುಗಿಬಿದ್ದು ಹತ್ಯೆ ಮಾಡಿದ್ದರು. ಈ ಪ್ರಕರಣಕ್ಕೆ ಹಲವು ಟ್ವಿಸ್ಟ್ ಸಿಕ್ಕಿದ್ದು, ಸದ್ಯ ಪ್ರಮುಖ ಆರೋಪಿಯಾಗಿರುವ ವರ್ಷಿಣಿ ಜೈಲಿನಲ್ಲಿದ್ದಾಳೆ.

  • ಕೊನೆಗೂ ರೌಡಿ ಲಕ್ಷ್ಮಣ್ ಕೊಲೆ ಹಿಂದಿನ ರಹಸ್ಯ ಬಯಲು – ಮೂರು ಕಾರಣಕ್ಕೆ ಹತ್ಯೆಯ ಸ್ಕೆಚ್

    ಕೊನೆಗೂ ರೌಡಿ ಲಕ್ಷ್ಮಣ್ ಕೊಲೆ ಹಿಂದಿನ ರಹಸ್ಯ ಬಯಲು – ಮೂರು ಕಾರಣಕ್ಕೆ ಹತ್ಯೆಯ ಸ್ಕೆಚ್

    – ಪ್ರೀತಿಗೆ ಅಡ್ಡಿಯಾಗಿದ್ದಕ್ಕೆ ವರ್ಷಿಣಿ, ರೂಪೇಶ್ ಸ್ಕೆಚ್
    – ಗುರುವಿನ ಕೊಲೆಗೆ ಹೇಮಿ ಸೇಡು
    – ಹೆಸರು ಮಾಡೋ ಹುಚ್ಚಿನಲ್ಲಿ ಕ್ಯಾಟ್ ರಾಜನಿಂದ ಕೃತ್ಯ

    ಬೆಂಗಳೂರು: ಒಂದು ವಾರದಿಂದ ರೌಡಿ ಲಕ್ಷ್ಮಣ್ ಕೊಲೆ ಪ್ರಕರಣದ ತನಿಖೆಯನ್ನು ಸಿಸಿಬಿ ಪೊಲೀಸರು ನಡೆಸುತ್ತಿದ್ದು, ಈಗ ಈ ಕೊಲೆಯ ರಹಸ್ಯ ಬೆಳಕಿಗೆ ಬಂದಿದೆ.

    ರಾಜಕರಣದ ಜೊತೆ ತಳಕು ಹಾಕಿದ್ದ ಕಾರಣ ಖುದ್ದು ಅಲೋಕ್ ಕುಮಾರ್ ಅವರೇ ಆರೋಪಿಗಳನ್ನು ವಿಚಾರಣೆ ನಡೆಸಿದ್ದು, ಈ ವೇಳೆ ಪಾತಕಿಗಳು ಮೂರು ಕಾರಣಕ್ಕಾಗಿ ಕೊಲೆ ಮಾಡಿದ್ದಾರೆ ಎನ್ನುವ ವಿಚಾರ ತನಿಖೆಯ ವೇಳೆ ಗೊತ್ತಾಗಿದೆ. ಇದನ್ನೂ ಓದಿ: ಫೋನಿಗೆ ಬಂದಿದ್ದ ಫೋಟೋ ನೋಡಿ ಹೊರಗೆ ಬಂದ ಲಕ್ಷ್ಮಣ್ – ಕ್ಷಣಾರ್ಧದಲ್ಲಿ ಹತ್ಯೆ

    ಪ್ರೀತಿಗೆ ಅಡ್ಡಿ:
    ಮೊದಲೆಯದಾಗಿ ವರ್ಷಿಣಿ ಮತ್ತು ರೂಪೇಶನ ಪ್ರೀತಿಗೆ ಲಕ್ಷ್ಮಣ್ ಅಡ್ಡವಾಗಿದ್ದನು. ಇನ್ನೂ ನಾಲ್ಕು ವರ್ಷಗಳಿಂದ ಲಕ್ಷ್ಮಣ್, ವರ್ಷಿಣಿ ಜೊತೆ ಅಕ್ರಮ ಸಂಬಂಧ ಹೊಂದಿದ್ದನು. ವರ್ಷಿಣಿ ರೂಪೇಶನನ್ನು ಇಷ್ಟ ಪಟ್ಟಿದ್ದು ಆತನನ್ನು ಮದುವೆಯಾಗಲು ಬಯಸಿದ್ದಳು. ಲಕ್ಷ್ಮಣ್ ಜೊತೆ ಇದ್ದರೆ ತನ್ನ ಮುಂದಿನ ಬದುಕು ಕಷ್ಟವಾಗಲಿದೆ ಎನ್ನುವುದು ವರ್ಷಿಣಿಗೆ ಗೊತ್ತಿತ್ತು. ಹೀಗಾಗಿ ತಮ್ಮ ಪ್ರೀತಿಗೆ ಲಕ್ಷ್ಮಣ್ ಅಡ್ಡ ಬರುತ್ತಾನೆ ಎಂದು ತಿಳಿದು ಇಬ್ಬರು ಲಕ್ಷ್ಮಣ್ ಕೊಲೆಗೆ ಸ್ಕೆಚ್ ಹಾಕಿದ್ದರು.

    ಗುರುವಿನ ಕೊಲೆಗೆ ಹೇಮಿ ಸೇಡು:
    ಆರೋಪಿ ಹೇಮಂತ ಅಲಿಯಾಸ್ ಹೇಮಿಗೆ ಲಕ್ಷ್ಮಣ್ ಮೇಲೆ ಕೋಪ ಇತ್ತು. ಹೇಮಿಯ ಗುರು ಟಿ.ಸಿ.ರಾಜನನ್ನು ಲಕ್ಷ್ಮಣ್ 2015ರ ಜೂನ್ 5 ರಂದು ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೊಲೆ ಮಾಡಿಸಿದ್ದನು. ಅಂದಿನಿಂದ ಕೊಲೆಯಾದ ಟಿ.ಸಿ ರಾಜನ ಮಚ್ಚು ಇಟ್ಟುಕೊಂಡು ಲಕ್ಷ್ಮಣನ ಕೊಲೆಗೆ ಸ್ಕೆಚ್ ಹಾಕಿದ್ದನು. ಇದಕ್ಕಾಗಿ ಲಕ್ಷ್ಮಣ್ ಒಂಟಿಯಾಗಿರುವ ಬಗ್ಗೆ ಮಾಹಿತಿ ಕೊಟ್ಟರೆ ಸಾಕು ತಾನೇ ಐದು ಲಕ್ಷ ಹಣ ಕೊಡುತ್ತೀನಿ ಎಂದು ಕಾಯುತ್ತಿದ್ದನು. ಇದೇ ಸಮಯದಲ್ಲಿ ಸರಿಯಾಗಿ ಜೈಲಿನಲ್ಲಿ ರೂಪೇಶ್ ಹೇಮಿಗೆ ಪರಿಚಯವಾಗಿದ್ದನು. ಶತ್ರುವಿನ ಶತ್ರು ಮಿತ್ರ ಎಂಬಂತೆ ರೂಪೇಶನ ಮಾತಿಗೆ ಖುಷಿಯಿಂದ ಆರೋಪಿ ಹೇಮಿ ಕೊಲೆಗೆ ಒಪ್ಪಿಕೊಂಡಿದ್ದನು. ಈಗಾಗಲೇ ಅಂಬೋಡ ಕೊಲೆ ಕೇಸಿನಲ್ಲಿ ಹೇಮಿಗೆ ಜೀವಾವಧಿ ಶಿಕ್ಷೆಯಾಗುವ ಹಂತದಲ್ಲಿ ಇತ್ತು. ಶಿಕ್ಷೆ ಪ್ರಕಟವಾಗುವಷ್ಟರಲ್ಲಿ ಮತ್ತೊಂದು ಕೊಲೆ ಮಾಡಿಯೇ ಜೈಲು ಸೇರಲು ಹೇಮಿ ನಿರ್ಧರಿಸಿದ್ದನು.

    ಹೆಸ್ರು ಮಾಡೋ ಹುಚ್ಚಿನಲ್ಲಿ ಕ್ಯಾಟ್ ರಾಜ:
    ಇನ್ನೂ ಆರೋಪಿ ಕ್ಯಾಟ್ ರಾಜ ಒಬ್ಬ ಸುಪಾರಿ ಕಿಲ್ಲರ್ ಕೆಲಸ ಮಾಡುತ್ತಿದ್ದನು. ಕ್ಯಾಟ್ ಗೆ ಫೀಲ್ಡ್ ನಲ್ಲಿ ದೊಡ್ಡ ಹೆಸರು ಮಾಡುವ ಹುಚ್ಚಿತ್ತು. ಹೀಗಾಗಿ ಲಕ್ಷ್ಮಣನನ್ನು ಕೊಂದರೆ ತನ್ನ ಹವಾ ಏರುತ್ತೆ ಎನ್ನುವ ಲೆಕ್ಕಾಚಾರ ಹಾಕಿದ್ದನು. ಇತ್ತ ಹೇಮಿ ಲಕ್ಷ್ಮಣ್ ಕೊಂದರೆ ಹಣ ಕೊಡುತ್ತೇನೆ ಎಂದು ಹೇಳಿದ್ದನು. ಹೀಗಾಗಿ ಹಣದ ಆಸೆಗೆ ಕ್ಯಾಟ್ ರಾಜ ಕೊಲೆಗೆ ಒಪ್ಪಿದ್ದನು. ಮೂವರು ಪ್ಲಾನ್ ಮಾಡಿದಂತೆ ಕೊಲೆ ಮಾಡಿ ಮುಗಿಸಿದ್ದಾರೆ.

    ಕೊಲೆ ನಂತರ ಎಲ್ಲರೂ ಬೇರೆ ಬೇರೆ ಹಾದಿಯಲ್ಲಿ ಪರಾರಿಯಾಗಿದ್ದರು. ಹೆಣ್ಣು, ಹಳೆ ದ್ವೇಷ, ಮತ್ತು ರೌಡಿಸಂನಲ್ಲಿ ಹೆಸರು ಮಾಡುವ ಕಾರಣಕ್ಕೆ ಲಕ್ಷ್ಮಣ್ ಕೊಲೆಯಾಗಿರುವುದು ಸಿಸಿಬಿ ತನಿಖೆಯಿಂದ ಸ್ಪಷ್ಟವಾಗಿದೆ. ಹೇಮಿ ಗುರು ಟಿಸಿ ರಾಜನ ಬಳಿ ಇರುವ ಲಾಂಗ್ ಇಟ್ಟುಕೊಂಡು ದಾಳಿಗೆ ಇಳಿಯುತ್ತಿದ್ದನು. ಗುರು ಲಾಂಗ್ ಇಟ್ಟುಕೊಂಡ ದಿನದಿಂದ ಕೈ ಹಾಕಿದ ಯಾವುದೇ ಕೆಲಸ ಫೇಲ್ ಆಗುತ್ತಿರಲಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಾಯುವ ಕೊನೆ ಘಳಿಗೆಯಲ್ಲಿ ಮಾಸ್ಟರ್ ಪ್ಲಾನ್ ಮಾಡಿದ್ದ ರೌಡಿ ಲಕ್ಷ್ಮಣ್

    ಸಾಯುವ ಕೊನೆ ಘಳಿಗೆಯಲ್ಲಿ ಮಾಸ್ಟರ್ ಪ್ಲಾನ್ ಮಾಡಿದ್ದ ರೌಡಿ ಲಕ್ಷ್ಮಣ್

    – ಪೊಲೀಸರಿಂದ ಹೋಟೆಲ್ ಸಿಬ್ಬಂದಿಗೆ ಕ್ಲಾಸ್

    ಬೆಂಗಳೂರು: ರೌಡಿ ಲಕ್ಷ್ಮಣನ ಕೊಲೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಸಾಯುವ ಮುನ್ನ ಲಕ್ಷ್ಮಣ ಮಾಸ್ಟರ್ ಪ್ಲಾನ್ ಮಾಡಿದ್ದನು ಎಂದು ತನಿಖೆ ವೇಳೆ ತಿಳಿದು ಬಂದಿದೆ.

    ಮೃತ ರೌಡಿಶೀಟರ್ ಲಕ್ಷ್ಮಣನ ಮೇಲೆ ಅಟ್ಯಾಕ್ ಮಾಡಿ ಆರೋಪಿಗಳು ಒಂದೆರಡು ಮಚ್ಚಿನೇಟು ಹಾಕಿದ್ದರು. ಈ ವೇಳೆ ಹಂತಕರಿಂದ ಬಚಾವಾಗಲು ಲಕ್ಷ್ಮಣ್ ಪ್ಲಾನ್ ಮಾಡಿದ್ದು, ಸ್ಟೇರಿಂಗ್ ಮೇಲೆ ಬಿದ್ದು ಸತ್ತಂತೆ ನಟಿಸಿದ್ದಾನೆ. ಮಚ್ಚಿನ ಏಟಿಗೆ ಲಕ್ಷ್ಮಣ್ ಮೃತಪಟ್ಟಿದ್ದಾನೆ ಎಂದು ತಿಳಿದು ಆರೋಪಿಗಳು ಕಾರು ಹತ್ತಿ ಕುಳಿತಿದ್ದಾರೆ. ಇನ್ನೇನು ಹಂತಕರು ಹೊರಡಬೇಕು ಎನ್ನುವಷ್ಟರಲ್ಲಿ ಲಕ್ಷ್ಮಣ್ ಸ್ಟೇರಿಂಗ್ ನಿಂದ ಎದ್ದಿದ್ದನು. ಇದನ್ನೂ ಓದಿ:   ಜೆಡಿಎಸ್ ನಾಯಕಿಯ ಮಗಳಿಗಾಗಿ ರೌಡಿ ಲಕ್ಷ್ಮಣ್ ಬರ್ಬರ ಕೊಲೆ

    ಕಾರಿನಲ್ಲಿ ಲಕ್ಷ್ಮಣ್ ಕುಳಿತಿದ್ದನ್ನು ನೋಡಿದ ರೌಡಿಗಳು, “ಲಕ್ಷ್ಮಣ್ ಬದುಕಿದ್ದಾನೆ. ಲಕ್ಷ್ಮಣ್ ಬದುಕಿದ್ದಾನೆ” ಎಂದು ಕಿರುಚಾಡಿದ್ದಾರೆ. ಕೂಡಲೇ ಎಲ್ಲ ಆರೋಪಿಗಳು ತಮ್ಮ ಕಾರಿನಿಂದ ಇಳಿದು ಲಕ್ಷ್ಮಣ್ ನನ್ನು  ಕಾರಿನಿಂದ ಎಳೆದು ಕೊಲೆ ಮಾಡಿದ್ದಾರೆ. ಲಕ್ಷ್ಮಣನ ಕೊಲೆಗೆ ಎರಡು ಕಾರುಗಳನ್ನ ಬಳಸಲಾಗಿತ್ತು. ಮುಂದಿನಿಂದ ಸ್ಕಾರ್ಪಿಯೊ, ಹಿಂದಿನಿಂದ ಇಂಡಿಕಾ ಕಾರಿನಲ್ಲಿ ರೌಡಿಗಳು ಸ್ಥಳಕ್ಕೆ ಆಗಮಿಸಿದ್ದರು.

    ಹೋಟೆಲ್ ಸಿಬ್ಬಂದಿಗೆ ಕ್ಲಾಸ್: ರೌಡಿ ಲಕ್ಷ್ಮಣ್ ಪ್ರಭಾವಿ ಶಾಸಕರ ಹೆಸರು ಹೇಳಿ ರೂಮ್ ಬುಕ್ ಮಾಡುತ್ತಿದ್ದನು. ಪ್ರತೀ ಬಾರಿಯೂ ಹೀಗೆ ಶಾಸಕರ ಹೆಸರು ಹೇಳಿ ರೂಮ್ ಪಡೆಯುತ್ತಿದ್ದನು. ಹೋಟೆಲ್ ಸಿಬ್ಬಂದಿ ಕೂಡ ಯಾವುದೇ ಐಡಿ ಪಡೆಯದೇ ಕಮಕ್ ಕಿಮಿಕ್ ಅನ್ನದೇ ರೂಮ್ ನೀಡುತ್ತಿದ್ದರು. ಈಗ ಸಿಸಿಬಿ ಪೊಲೀಸರು ಒಬ್ಬ ರೌಡಿಶೀಟರ್ ಗೆ ಐಡಿ ಪಡೆಯದೇ ಹೇಗೆ ರೂಮ್ ನೀಡುತ್ತೀರಾ ಎಂದು ಹೋಟೆಲ್ ಸಿಬ್ಬಂದಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಜೆಡಿಎಸ್ ನಾಯಕಿಯ ಮಗಳಿಗಾಗಿ ರೌಡಿ ಲಕ್ಷ್ಮಣ್ ಬರ್ಬರ ಕೊಲೆ

    ಜೆಡಿಎಸ್ ನಾಯಕಿಯ ಮಗಳಿಗಾಗಿ ರೌಡಿ ಲಕ್ಷ್ಮಣ್ ಬರ್ಬರ ಕೊಲೆ

    ಬೆಂಗಳೂರು: ರೌಡಿ ಲಕ್ಷ್ಮಣ್ ಕೊಲೆ ಹಿಂದೆ ಹೆಣ್ಣಿನ ನೆರಳು ಇದೆ ಎಂದು ಸಿಸಿಬಿ ಪೊಲೀಸರು ಆರೋಪಿಸಿದ್ದರು. ಈಗ ಜೆಡಿಎಸ್ ಅಧ್ಯಕ್ಷೆಯ ಮಗಳಿಗಾಗಿ ರೌಡಿಯನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರ ಪ್ರಾಥಮಿಕ ತನಿಖೆ ವೇಳೆ ಬೆಳಕಿಗೆ ಬಂದಿದೆ.

    ಕೊಲೆಯಾದ ದಿನ ಲಕ್ಷ್ಮಣನಿಗೆ ಹುಡುಗಿಯೊಬ್ಬಳು ವಾಟ್ಸಪ್ ಕಾಲ್ ಮಾಡಿದ್ದಳು. ಈ ಬಗ್ಗೆ ಲಕ್ಷ್ಮಣ್ ಪತ್ನಿ ಚೈತ್ರಾ ಎಫ್‍ಐಆರ್ ನಲ್ಲೂ ಉಲ್ಲೇಖಿಸಿದ್ದರು. ರೌಡಿ ಲಕ್ಷ್ಮಣನ ಮನೆ ಹತ್ತಿರವೇ ಜೆಡಿಎಸ್ ಅಧ್ಯಕ್ಷೆ ಮತ್ತು ಆಕೆಯ ಮಗಳು ಇದ್ದರು. ಹೀಗಾಗಿ ಸುಮಾರು ವರ್ಷದಿಂದ ಪರಿಚಯವಿತ್ತು ಎಂದು ಹೇಳಲಾಗುತ್ತಿದೆ.

    ಕೊಲೆಗೆ ಕಾರಣ?
    ಜೆಡಿಎಸ್ ಅಧ್ಯಕ್ಷೆಯ ಮಗಳಿಗೂ ರೂಪೇಶ್‍ಗೂ ಸಲುಗೆ ಇತ್ತು. ಜೆಡಿಎಸ್ ಮಗಳ ಡ್ಯಾನ್ಸ್ ಕ್ಲಾಸ್‍ನಲ್ಲಿ ರೂಪೇಶ್ ಮತ್ತು ಆಕೆಗೂ ಪರಿಚಯವಾಗಿತ್ತು. ದಿನಕಳೆದಂತೆ ತನ್ನನ್ನ ಪ್ರೀತಿಸುವಂತೆ ಜೆಡಿಎಸ್ ನಾಯಕಿಯ ಮಗಳ ಹಿಂದೆ ರೂಪೇಶ್ ಬಿದ್ದಿದ್ದನು. ಈ ಬಗ್ಗೆ ತಿಳಿದ ಜೆಡಿಎಸ್ ಮುಖಂಡೆ ತನ್ನ ಮಗಳಿಂದ ದೂರ ಇರುವಂತೆ ರೂಪೇಶ್‍ಗೆ ವಾರ್ನ್ ಮಾಡುವಂತೆ ರೌಡಿ ಲಕ್ಷ್ಮಣ್‍ಗೆ ಹೇಳಿದ್ದರು.

    ಹೀಗಾಗಿ ರೌಡಿ ಲಕ್ಷ್ಮಣ್ ಎರಡು-ಮೂರು ಬಾರಿ ರೂಪೇಶ್‍ಗೆ ವಾರ್ನ್ ಮಾಡಿದ್ದನು. ಇದರಿಂದ ತನ್ನ ಪ್ರೀತಿಗೆ ಅಡ್ಡಿ ಆಗಿದ್ದ ರೌಡಿ ಲಕ್ಷ್ಮಣ್ ನನ್ನು ಕೊಲೆ ಮಾಡಲು ರೂಪೇಶ್ ಸ್ಕೆಚ್ ಹಾಕಿದ್ದನು. ಅದರಂತೆಯೇ ಇಂದು ಬಂಧಿಸಿರುವ ರೌಡಿ ಹೇಮಿಯನ್ನು ಭೇಟಿಯಾಗಿ ಅವನ ಜೊತೆ ಸೇರಿಕೊಂಡು ಜೈಲಿನಿಂದ ಬಿಡುಗಡೆಯಾದ ಎರಡು ದಿನಗಳಲ್ಲಿ ಇಸ್ಕಾನ್ ದೇವಾಲಯದ ಬಳಿ ಮಧ್ಯಾಹ್ನದ ವೇಳೆಯೇ ರೌಡಿ ಲಕ್ಷ್ಮಣ್‍ನನ್ನು ಕೊಲೆ ಮಾಡಿದ್ದಾರೆ ಎಂದು ಸಿಸಿಬಿ ಪೊಲೀಸರಿಗೆ ಪ್ರಾಥಮಿಕ ತನಿಖೆ ವೇಳೆ ಮಾಹಿತಿ ಸಿಕ್ಕಿದೆ.

    ರೂಪೇಶ್ ಯಾರು?
    ರೂಪೇಶ್ ಮೂಲತಃ ಮಂಡ್ಯ-ಮದ್ದೂರಿನವಾಗಿದ್ದು, ಈ ಹಿಂದೆ 2018 ಮೇ ತಿಂಗಳಲ್ಲಿ ಮಂಡ್ಯ ಶಾಸಕರಾಗಿರುವ ಅನ್ನದಾನಿ ಅವರ ಮನೆಯಲ್ಲಿ ಕಳ್ಳತನ ಮಾಡಿದ್ದನು. ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು.

    ಈ ಪ್ರಕರಣ ದಿನದಿಂದ ದಿನಕ್ಕೆ ತಿರುವು ಪಡೆದುಕೊಳ್ಳುತ್ತಿದೆ. ಇದುವರೆಗೂ ನಾವು ಐದು ಆರೋಪಿಗಳನ್ನು ಬಂಧಿಸಿದ್ದೇವೆ. ಅಲೋಕ್, ದೇವರಾಜು, ಮಧು, ವರುಣ್ ಮತ್ತು ರೂಪೇಶ್ ನನ್ನು ಬಂಧಿಸಲಾಗಿದೆ. ಕೊಲೆ ದಿನ ವಾಟ್ಸಪ್, ಮೆಸೇಜ್ ಕಾಲ್ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ರೂಪೇಶ್ ಮತ್ತು ಜೆಡಿಎಸ್ ನಾಯಕಿಯ ಮಗಳನ್ನು ವಶಕ್ಕೆ ಪಡೆದು ತನಿಖೆ ಮಾಡುತ್ತಿದ್ದೇವೆ. ಸದ್ಯಕ್ಕೆ ಇನ್ನೂ ಎರಡು-ಮೂರು ದಿನಗಳಲ್ಲಿ ಸಂಪೂರ್ಣ ತನಿಖೆ ಮುಗಿಯಲಿದೆ ಎಂದು ಡಿಸಿಪಿ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv