Tag: ರೌಡಿ ಲಕ್ಷ್ಮಣ

  • ಅಪರಾಧ ಲೋಕಕ್ಕೆ ನಾನೇ ಅಧಿಪತಿ ಎಂದಿದ್ದ ಸ್ಲಂ ಭರತ ಅರೆಸ್ಟ್

    ಅಪರಾಧ ಲೋಕಕ್ಕೆ ನಾನೇ ಅಧಿಪತಿ ಎಂದಿದ್ದ ಸ್ಲಂ ಭರತ ಅರೆಸ್ಟ್

    ಬೆಂಗಳೂರು: ರೌಡಿಶೀಟರ್ ಲಕ್ಷ್ಮಣನ ಕೊಲೆ ನಂತರ ಅಪರಾಧ ಲೋಕಕ್ಕೆ ನಾನೇ ಅಧಿಪತಿ ಎಂದು ಮೆರೆಯುತ್ತಿದ್ದ ರೌಡಿಶೀಟರ್ ಸ್ಲಂ ಭರತನನ್ನು ಬೆಂಗಳೂರು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

    ರೌಡಿ ಲಕ್ಷ್ಮಣ ಕೊಲೆಯಾದ ನಂತರ ಎಲ್ಲ ಡೀಲ್ ಗಳು ನನಗೇ ಬರಬೇಕು, ನಾನೇ ಎಲ್ಲ ಡೀಲ್ ಗಳನ್ನು ಮಾಡುತ್ತೇನೆ ಎಂದು ಲಕ್ಷ್ಮಣ ಮಾಡುತ್ತಿದ್ದ ವ್ಯವಹಾರಗಳಿಗೆ ಭರತ ಕೈ ಹಾಕಿದ್ದ. ಅಲ್ಲದೆ ಹಫ್ತಾ ವಸೂಲಿಗೆ ಇಳಿದಿದ್ದ, ಅಲ್ಲದೆ ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ಪೊಲೀಸರ ಮೇಲೆಯೇ ವಾಹನ ಹತ್ತಿಸೋಕೆ ಬಂದು ಎಸ್ಕೇಪ್ ಆಗಿದ್ದ. ಇದೀಗ ಸ್ಲಂ ಭರತನನ್ನು ಉತ್ತರ ಪ್ರದೇಶದ ಮುರದಾಬಾದ್‍ನಲ್ಲಿ ಬಂಧಿಸಲಾಗಿದೆ.

    ಸ್ಲಂ ಭರತ ತನ್ನ ಗೆಳತಿಯೊಂದಿಗೆ ಮುರದಾಬಾದ್ ನಲ್ಲಿ ಇರುವ ವಿಚಾರ ತಿಳಿದ ಬೆಂಗಳೂರು ಪೊಲೀಸರು ಉತ್ತರ ಪ್ರದೇಶದ ಮುರದಾಬಾದ್ ಗೆ ತೆರಳಿದ್ದರು. ಈ ವೇಳೆ ಪೊಲೀಸರನ್ನು ರೌಡಿಗಳು ಎಂದು ಬಿಂಬಿಸಿದ ಸ್ಲಂ ಭರತ ಸುಮಾರು 300ಕ್ಕೂ ಹೆಚ್ಚು ರೌಡಿಗಳನ್ನು ಬಳಸಿಕೊಂಡು ಪೊಲೀಸರ ಮೇಲೆ ಅಟ್ಯಾಕ್ ಮಾಡಿಸಿದ್ದ. ಈ ವೇಳೆ ಸ್ಥಳೀಯ ಪೊಲೀಸರ ನೆರವು ಪಡೆದ ಪೊಲೀಸರು ಸ್ಲಂ ಭರತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಬೆಂಗಳೂರಿನಲ್ಲೇ ಸ್ಲಂ ಭರತನ ಮೇಲೆ 50ಕ್ಕೂ ಹೆಚ್ಚು ಕೇಸುಗಳು ದಾಖಲಾಗಿದ್ದು, ಕಳೆದ ತಿಂಗಳಲ್ಲಿ ರಾಜಗೋಪಾಲ ನಗರದ ಶ್ರೀನಿವಾಸ ಅವರು ಹಫ್ತಾ ಕೊಟ್ಟಿಲ್ಲ ಎನ್ನುವ ಕಾರಣಕ್ಕೆ ಮನೆ ಮುಂದೆ ನಿಲ್ಲಿಸಿದ್ದ ಮೂರು ಕಾರುಗಳನ್ನು ಜಖಂ ಮಾಡಿಸಿದ್ದ. ಈ ಸಂಬಂಧ ರಾಜಗೋಪಾಲ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಸ್ಲಂ ಭರತನಿಗಾಗಿ ಹುಡುಕಾಟ ನಡೆದಿತ್ತು.

  • ರೌಡಿ ಲಕ್ಷ್ಮಣನ ಕೊಲೆಗೂ ಮುನ್ನ ಗೋರಿ ಬಳಿ ನಡೆದಿತ್ತು ಮಹಾಪೂಜೆ!

    ರೌಡಿ ಲಕ್ಷ್ಮಣನ ಕೊಲೆಗೂ ಮುನ್ನ ಗೋರಿ ಬಳಿ ನಡೆದಿತ್ತು ಮಹಾಪೂಜೆ!

    ಬೆಂಗಳೂರು: ನಗರದ ಕುಖ್ಯಾತ ರೌಡಿ ರೌಡಿ ಲಕ್ಷ್ಮಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಇದರ ಬೆನ್ನಲ್ಲೇ ಲಕ್ಷ್ಮಣ ಕೊಲೆಗೆ ಮೊದಲೇ ಸ್ಕೆಚ್ ರೂಪಿಸಿ ಗೋರಿ ಬಳಿ ಆರೋಪಿಗಳು ಮಹಾಪೂಜೆ ನಡೆಸಿದ್ದರು ಎಂಬ ಮಾಹಿತಿ ಲಭಿಸಿದೆ.

    ಲಕ್ಷ್ಮಣ ಕೊಲೆಯ ಹಿಂದಿನ ದಿನವೇ ಮಹಾಪೂಜೆ ನಡೆಸಿದ್ದ ಆರೋಪಿಗಳು, ಮಚ್ ಮಂಜನ ಗೋರಿ ಬಳಿ ಆತನ ಕೊಲೆಗೆ ಪ್ರತಿಕಾರ ತೀರಿಸಿಕೊಳ್ಳುವ ಪ್ರತಿಜ್ಞೆ ಮಾಡಿದ್ದರು ಎನ್ನಲಾಗಿದೆ. ಹಲವು ವರ್ಷಗಳ ಹಿಂದೆ ನಡೆದಿದ್ದ ಮಚ್ ಮಂಜನ ಕೊಲೆಗೆ ಪ್ರತಿಕಾರವಾಗಿಯೇ ಲಕ್ಷ್ಮಣ ಕೊಲೆ ನಡೆಸಿದ್ದಾರೆ. ನಗರದ ಸೋಲೂರು ಬಳಿಯಿ ಮಚ್ ಮಂಜುನ ಗೋರಿ ಇದ್ದು, ಈ ಸ್ಥಳದಲ್ಲೇ ಆರೋಪಿಗಳು ಪ್ರತಿಜ್ಞೆ ಮಾಡಿದ್ದರು ಎಂದು ಹೇಳಲಾಗುತ್ತಿದೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಯಾಟ್ ರಾಜನ ಕಾಲಿಗೆ ಗುಂಡಿಟ್ಟ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದು, ಇನ್ನುಳಿದ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಅಲ್ಲದೇ ಎಲ್ಲಾ ಆಯಾಮಗಳಲ್ಲೂ ತನಿಖೆ ಮುಂದುವರಿಸಿದ್ದಾರೆ. ಅಲ್ಲದೇ ಕೊಲೆ ಪ್ರಕರಣದಲ್ಲಿ ಮಹಿಳೆಯ ಸಹಾಯ ಪಡೆದಿದ್ದಾರೆ ಎಂಬ ಶಂಕೆಯೂ ಮೂಡಿದ್ದು, ಆ ಬಗ್ಗೆಯೂ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

    ಇತ್ತ ಲಕ್ಷ್ಮಣ ಕೊಲೆ ಮಾಡಿದ್ದ ದಿನವೇ 6 ಜನ ಆರೋಪಿಗಳು ಕೂಡ ಪೊಲೀಸರ ಮುಂದೇ ಶರಣಾಗಲು ನಿರ್ಧರಿಸಿದ್ದರು ಎನ್ನಲಾಗಿದ್ದು, ಆದರೆ ಆರೋಪಿಗಳ ಗ್ಯಾಂಗ್‍ನಲ್ಲಿ ಅಂದು ಒಬ್ಬನ ಬರ್ತ್ ಡೇ ಇದ್ದ ಕಾರಣ ಸ್ಥಳದಿಂದ ಪರಾರಿಯಾಗಿದ್ದರು. ಬರ್ತ್ ಡೇ ಆಚರಿಸಿಕೊಂಡ ಬಳಿಕ ಪೊಲೀಸರ ಮುಂದೇ ಶರಣಾಗಲು ನಿರ್ಧರಿಸಿದ್ದರು ಎನ್ನಲಾಗಿದೆ. ಇನ್ನು ಪ್ರಕರಣದಲ್ಲಿ ಗುಂಡೇಟು ತಿಂದಿರುವ ಕ್ಯಾಟ್ ರಾಜನ ವಿರುದ್ಧವೂ ಕೊಲೆ, ದರೋಡೆ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರೌಡಿ ಲಕ್ಷ್ಮಣನ ಕೊಲೆ ಪ್ರಕರಣ – ಆರೋಪಿ ಕ್ಯಾಟ್‍ರಾಜನ ಕಾಲಿಗೆ ಪೊಲೀಸ್ ಗುಂಡು

    ರೌಡಿ ಲಕ್ಷ್ಮಣನ ಕೊಲೆ ಪ್ರಕರಣ – ಆರೋಪಿ ಕ್ಯಾಟ್‍ರಾಜನ ಕಾಲಿಗೆ ಪೊಲೀಸ್ ಗುಂಡು

    ಬೆಂಗಳೂರು: ಕುಖ್ಯಾತ ಪಾತಕಿ ರೌಡಿ ಲಕ್ಷ್ಮಣ ಕೊಲೆ ಪ್ರಕರಣ ಸಂಬಂಧ ಆರೋಪಿ ಕ್ಯಾಟ್ ರಾಜನ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ.

    ಪ್ರಕರಣದಲ್ಲಿ ರೌಡಿ ಲಕ್ಷ್ಮಣ ಕೊಲೆ ಮಾಡಲು ಬಳಸಿದ್ದ ಮಚ್ಚನ್ನು ರಿಕವರಿ ಮಾಡಲು ಕರೀಂ ಸಾಬ್ ಪಾಳ್ಯಕ್ಕೆ ಹೋದಾಗ ಕ್ಯಾಟ್ ರಾಜ ತಿರುಗಿಬಿದ್ದಿದ್ದ. ಈ ವೇಳೆ ಪೊಲೀಸರ ಮೇಲೆ ಕಲ್ಲು ಎಸೆದಿದ್ದ. ಈ ಮೂಲಕ ಪೊಲೀಸರ ಮೇಲೆಯೇ ಹಲ್ಲೆ ಮಾಡಿ ಎಸ್ಕೇಪ್ ಆಗಲು ಮುಂದಾಗಿದ್ದನು.

    ಕ್ಯಾಟ್‍ರಾಜ ಪೊಲೀಸರ ಮೇಲೆ ಹಲ್ಲೆ ನಡೆಸಲು ಮುಂದಾಗುತ್ತಿದಂತೆ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಆತ್ಮರಕ್ಷಣೆಗಾಗಿ ಆರೋಪಿಯ ಎರಡೂ ಕಾಲುಗಳಿಗೆ ಗುಂಡು ಹಾರಿಸಿದ್ದಾರೆ. ಸದ್ಯ ಕ್ಯಾಟ್ ರಾಜನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಕ್ಯಾಟ್‍ರಾಜ ಕೊಲೆ, ದರೋಡೆ ಸೇರಿ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂಬ ಮಾಹಿತಿ ಲಭಿಸಿದೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ ಸಿಸಿಬಿ ವಶಕ್ಕೆ ನೀಡಿದ್ದು, ಸೋಲದೇವನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಇಬ್ಬರ ಬಂಧನ ಮಾಡಲಾಗಿದೆ. ಉಳಿದವರಿಗಾಗಿ ಶೋಧಕಾರ್ಯ ಮುಂದುವರಿದಿದೆ. ಕ್ಯಾಟ್ ರಾಜ ಬಿಟ್ಟರೆ ಸದ್ಯ ಶ್ರೀಕಂಠ ಎಂಬವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಂದಹಾಗೇ ಲಕ್ಷ್ಮಣ ಹತ್ಯೆಯಲ್ಲಿ 6 ಜನರ ಆರೋಪಿಗಳು ಭಾಗಿಯಾಗಿದ್ದರು. ಹತ್ಯೆ ನಡೆದ ದಿನವೇ ಎಲ್ಲಾ ಆರೋಪಿಗಳು ಪೊಲೀಸರ ಮುಂದೇ ಶರಣಾಗಬೇಕೆಂದು ತೀರ್ಮಾನಿಸಿದ್ದರು. ಆದರೆ ಗ್ಯಾಂಗ್‍ನಲ್ಲಿ ಒಬ್ಬನ ಬರ್ತ್ ಡೇ ಇದ್ದ ಕಾರಣ ಪಾರ್ಟಿ ಮಾಡಲು ಸ್ಥಳದಿಂದ ಪರಾರಿಯಾಗಿದ್ದರು.

    ಲಕ್ಷ್ಮಣನನ್ನು ಹತ್ಯೆ ಮಾಡಲು ಆರೋಪಿಗಳು ಮಹಿಳೆಯ ಸಹಾಯ ಪಡೆದಿದ್ದಾರೆ ಎಂಬ ಶಂಕೆಯೂ ವ್ಯಕ್ತವಾಗಿದ್ದು, ಲಕ್ಷ್ಮಣ ಅಂದು ಎಷ್ಟೊತ್ತಿಗೆ ಆಗಮಿಸುತ್ತಾನೆ ಎಂಬುವುದು ಆಕೆಗೆ ಮಾತ್ರ ತಿಳಿದಿತ್ತು ಎನ್ನಲಾಗಿದೆ. ಈ ಸಂಬಂಧ ಲಕ್ಷ್ಮಣ ಬಳಿ ಲಾಡ್ಜ್ ರೂಮ್ ಒಂದರ ಕೀ ಪತ್ತೆಯಾಗಿದೆ ಎನ್ನಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿಸಿಬಿ ಅಲೋಕ್ ಕುಮಾರ್ ಹೆಗಲಿಗೆ ರೌಡಿ ಲಕ್ಷ್ಮಣ ಕೊಲೆ ಕೇಸ್

    ಸಿಸಿಬಿ ಅಲೋಕ್ ಕುಮಾರ್ ಹೆಗಲಿಗೆ ರೌಡಿ ಲಕ್ಷ್ಮಣ ಕೊಲೆ ಕೇಸ್

    ಬೆಂಗಳೂರು: ಹಾಡಗಲೇ ನಡುರಸ್ತೆಯಲ್ಲಿ ರೌಡಿ ಲಕ್ಷ್ಮಣನನ್ನು ಕೊಚ್ಚಿ ಕೊಲೆ ಮಾಡಿದ್ದ ಪ್ರಕರಣವನ್ನು ಪೊಲೀಸ್ ಕಮಿಷನರ್ ಸುನಿಲ ಕುಮಾರ್ ಸಿಸಿಬಿಗೆ ವರ್ಗಾಯಿಸಿದ್ದಾರೆ.

    ಸದ್ಯ ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿರುವ ಅಲೋಕ್ ಕುಮಾರ್ ಪ್ರಕರಣವನ್ನು ಕೈಗೆತ್ತಿಕೊಳ್ಳಲಿದ್ದಾರೆ. ಪ್ರಕರಣದ ವರ್ಗಾವಣೆ ಹಿನ್ನೆಲೆಯಲ್ಲಿ ಇಂದಿನಿಂದ ಸಿಸಿಬಿ ತಂಡ ಹಂತಕರ ಬೇಟೆಗೆ ಅಖಾಡಕ್ಕಿಳಿದಿದೆ.

    ನಗರದ ಸೋಪ್ ಫ್ಯಾಕ್ಟರಿ ಬಳಿ ರೌಡಿ ಲಕ್ಷ್ಮಣ ತೆರಳುತ್ತಿದ್ದ ಕಾರನ್ನು ತಡೆದ ದುಷ್ಕರ್ಮಿಗಳ ಗುಂಪು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿತ್ತು. ಘಟನೆ ಬಗ್ಗೆ ದೂರು ದಾಖಲಿಸಿಕೊಂಡಿದ್ದ ಮಹಾಲಕ್ಷ್ಮೀ ಲೇಔಟ್ ಪೊಲೀಸರು ತನಿಖೆ ಆರಂಭಿಸಿದ್ದರು.

    ಘಟನಾ ಸ್ಥಳದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ದೃಶ್ಯಗಳ ಆಧಾರದಿಂದ ದುಷ್ಕರ್ಮಿಗಳು ಬ್ಲಾಕ್ ಸ್ಕಾರ್ಪಿಯೋ ಕಾರು ಬಳಕೆ ಮಾಡಿದ್ದರು ಎಂಬುವುದು ಖಚಿತವಾಗಿತ್ತು. ಆದರೆ ಕಾರಿನ ನಂಬರ್ ಪ್ಲೇಟಿನ ಅಕ್ಷರಗಳು ಕಡಿಮೆ ಗಾತ್ರ ಹೊಂದಿದ್ದ ಕಾರಣ ನಂಬರ್ ಪತ್ತೆ ಮಾಡುವುದು ಕಷ್ಟ ಸಾಧ್ಯವಾಗಿದೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.

    ರೌಡಿಶೀಟರ್ ಲಕ್ಷ್ಮಣ ಇನ್ನೋವಾ ಕಾರಲ್ಲಿ ಹೋಗುತ್ತಿದ್ದನು. ಈ ವೇಳೆ ಮತ್ತೊಂದು ಕಾರಿನಲ್ಲಿ ದುಷ್ಕರ್ಮಿಗಳ ಗ್ಯಾಂಗ್ ಬಂದು ಲಕ್ಷ್ಮಣನ ಇನ್ನೋವಾ ಕಾರಿಗೆ ಡಿಕ್ಕಿ ಹೊಡೆದಿತ್ತು. ಬಳಿಕ ಮಚ್ಚು, ಲಾಂಗ್‍ಗಳಿಂದ ಲಕ್ಷ್ಮಣನ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ತಕ್ಷಣ ಗಾಯಗೊಂಡಿದ್ದ ಲಕ್ಷ್ಮಣನನ್ನು ಸ್ಥಳೀಯರು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು. ಆದರೆ ಆಸ್ಪತ್ರೆಗೆ ಹೋಗುವ ಮಾರ್ಗ ಮಧ್ಯೆಯೇ ಲಕ್ಷ್ಮಣ ಕೊನೆಯುಸಿರೆಳೆದಿದ್ದ. ಕಳೆದ ಎರಡು ದಿನಗಳ ಹಿಂದೆಯಷ್ಟೇ ಜೈಲಿನಿಂದ ಬಿಡುಗಡೆ ಆಗಿದ್ದ ಲಕ್ಷ್ಮಣ್ ಕೊಲೆ ಮಾಡಲು ಪೂರ್ವ ಸಿದ್ಧತೆ ನಡೆಸಿಯೇ ದುಷ್ಕರ್ಮಿಗಳು ಆಗಮಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv