Tag: ರೌಡಿ ತಂಗಂ

  • ‘ಕೆಜಿಎಫ್’ ರೌಡಿ ತಂಗಂ ಕುಟುಂಬದವರಿಂದ ಗಾಂಜಾ ದಂಧೆ

    ‘ಕೆಜಿಎಫ್’ ರೌಡಿ ತಂಗಂ ಕುಟುಂಬದವರಿಂದ ಗಾಂಜಾ ದಂಧೆ

    – 1.5 ಕೋಟಿ ಮೌಲ್ಯದ ಗಾಂಜಾ ವಶ, ಇಬ್ಬರ ಬಂಧನ

    ಕೋಲಾರ: ಅವರೆಲ್ಲಾ ಒಂದು ಕಾಲದಲ್ಲಿ ಚಿನ್ನದ ನೆಲದಲ್ಲಿ ರೌಡಿಸಂ ಹೆಸರಲ್ಲಿ ನೆತ್ತರು ಹಸಿದ್ದವರು, ಆದರೆ ಕಳೆದ ಎರಡು ದಶಕಳಿಂದ ರೌಡಿಸಂನಿಂದ ದೂರ ಉಳಿದಿದ್ದವರು ಏನು ಮಾಡುತ್ತಿದ್ದರು ಅನ್ನೋ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ರೌಡಿಸಂನಿಂದ ಮೆರೆದಿದ್ದ ಕುಟುಂಬ ಈಗ ಗಾಂಜಾ ಘಾಟಿನಲ್ಲಿ ಮುಳುಗಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

    ಜಿಲ್ಲೆ ಕೆಜಿಎಫ್ ನಗರದ ಕೃಷ್ಣಗಿರಿ ಲೈನ್‍ನಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಸುಮಾರು 186 ಕೆ.ಜಿ.ಯಷ್ಟು ಗಾಂಜಾವನ್ನ ವಶಕ್ಕೆ ಪಡೆದಿದ್ದಾರೆ. ಕೆಜಿಎಫ್ ಎಸ್‍ಪಿ ಇಲಕ್ಕಿಯಾ ಕರುಣಾಗರನ್ ಅವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ರಾಬರ್ಟ್‍ಸನ್ ಪೇಟೆ ಪೊಲೀಸರು ಕಾರ್ಯಾಚರಣೆ ನಡೆಸಿದ ಸಂದರ್ಭದಲ್ಲಿ ಸುಮಾರು ಒಂದು ಕೋಟಿ ಮೌಲ್ಯದ 186 ಕೆಜಿಯಷ್ಟು ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಈ ವೇಳೆ ಆಘಾತಕಾರಿ ಅಂಶವೊಂದು ಬೆಳಕಿಗೆ ಬಂದಿದೆ.

    ಒಂದು ಕಾಲದಲ್ಲಿ ಕೆಜಿಎಫ್‍ನ್ನು ರೌಡಿಸಂ ಹೆಸರಲ್ಲಿ ನಡುಗಿಸಿದ್ದ ರೌಡಿ ತಂಗಂ ಸೋದರರಾದ ಜೋಸೆಫ್ ಹಾಗೂ ಪಲ್ಲರಾಜ್ ಈ ಪ್ರಕರಣದ ಮುಖ್ಯ ಆರೋಪಿಗಳಾಗಿದ್ದು, ಸದ್ಯ ಪೊಲೀಸರಿಗೆ ಜೋಸೆಫ್ ಸಿಕ್ಕಿಬಿದ್ದಿದ್ದು ಮತ್ತೊಬ್ಬರ ಆರೋಪಿ ರಾಜ ಆಲಿಯಾಸ್ ಪಲ್ಲರಾಜ್ ತಲೆಮರೆಸಿಕೊಂಡಿದ್ದಾನೆ. ಆತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಕಳೆದ ಎರಡುವರೆ ದಶಕಗಳಿಂದ ಹಲವಾರು ಪ್ರಕರಣಗಳಲ್ಲಿ ಆರೋಪಿಗಳಾಗಿರುವ ಇವರುಗಳು ಈಗ ಮತ್ತೆ ಡ್ರಗ್ಸ್ ಗಾಂಜಾ ದಂಧೆಯಲ್ಲಿ ತೊಡಗಿರುವುದು ಬೆಳಕಿಗೆ ಬಂದಿದೆ. ಇವರು ಕರ್ನಾಟಕ ಸೇರಿ ನಾಲ್ಕು ರಾಜ್ಯಗಳಲ್ಲಿ ಗಾಂಜಾ ಸರಬರಾಜು ಮಾಡುತ್ತಿದ್ದ ಮಾಹಿತಿ ಸಿಕ್ಕಿದ್ದು ಪೊಲೀಸರು ಈ ಬಗ್ಗೆ ತನಿಖೆ ನಡೆಸಿದ್ದಾರೆ.

    ಗಾಂಜಾ ವಿರುದ್ಧ ತೀವ್ರ ಕಾರ್ಯಾಚರಣೆ ನಡೆಸುತ್ತಿರುವ ಕೆಜಿಎಫ್ ಪೊಲೀಸರು ಅಂತರರಾಜ್ಯ ಗಾಂಜಾ ಮುಠಾವನ್ನ ಭೇಧಿಸಿದ್ದಾರೆ. ಕಳೆದೊಂದು ವಾರದಿಂದ ರಾಜ್ಯದಲ್ಲಿ ಡ್ರಗ್ಸ್ ಹಾಗೂ ಗಾಂಜಾ ದಂಧೆ ಜೋರಾಗಿ ಸದ್ದು ಮಾಡುತ್ತಿದೆ. ಈ ನಡುವೆಯೇ ಕೆಜಿಎಫ್‍ನಲ್ಲಿ ಇಷ್ಟು ದೊಡ್ಡ ಮಟ್ಟದ ಗಾಂಜಾ ಸಿಕ್ಕಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ಸಂಬಂಧ ಕೇಂದ್ರ ವಲಯ ಐಜಿಪಿ ಸೀಮಂತ್ ಕುಮಾರ್ ಸಿಂಗ್ ಮಾತನಾಡಿ ಇದರಲ್ಲಿ ಯಾರೇ ಭಾಗಿಯಾಗಿದರೂ ಸರಿಯೇ ಕಾನೂನು ಕ್ರಮ ಕೈಗೊಳ್ಳಲಾಗುವುದು.

    ಜೊತೆಗೆ ಕೆಜಿಎಫ್‍ನಲ್ಲಿ ಇತ್ತೀಚಿಗೆ ಆರಂಭವಾಗಿರುವ ರೌಡಿಸಂಗೆ ಕಡಿವಾಣ ಹಾಕಲು ರೌಡಿಶೀಟರ್ ಗಳಿಗೆ ಎಚ್ಚರಿಕೆ ನೀಡಲಾಗಿದೆ. ಕಾನೂನು ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗುವ ರೌಡಿಗಳ ಮೇಲೆ ಗೂಂಡಾ ಕಾಯ್ದೆ ಪ್ರಯೋಗ ಮಾಡುವ ಎಚ್ಚರಿಕೆ ನೀಡಿದ್ದಾರೆ. ಈ ನಡುವೆ ಹಲವು ವರ್ಷಗಳಿಂದ ರೌಡಿಸಂ ನಿಂದ ಹೆಸರು ಮಾಡಿದ್ದ ರೌಡಿ ತಂಗಂ ಕುಟುಂಬದ ಗಾಂಜಾ ದಂಧೆಯಲ್ಲಿ ತೊಡಗಿದ್ದು ಅವರ ಹೆಡೆಮುರಿ ಕಟ್ಟಿ ಸದ್ಯ ಆರೋಪಿಗಳನ್ನು ಬಂಧಿಸಿರುವ ಪೊಲೀಸರ ಕ್ರಮಕ್ಕೆ ಸ್ಥಳೀಯರಿಂದ ಪ್ರಶಂಸೆಯ ಮಾತುಗಳು ಕೇಳಿ ಬರುತ್ತಿವೆ.

  • ದಕ್ಷಿಣ ಭಾರತದ ಸೆನ್ಸೇಷನ್ ಕೆಜಿಎಫ್-2ಗೆ ವಿಘ್ನಗಳ ಮೇಲೆ ವಿಘ್ನ

    ದಕ್ಷಿಣ ಭಾರತದ ಸೆನ್ಸೇಷನ್ ಕೆಜಿಎಫ್-2ಗೆ ವಿಘ್ನಗಳ ಮೇಲೆ ವಿಘ್ನ

    – ಕೋರ್ಟ್ ಖಟ್ಲೆ ಬೆನ್ನಲ್ಲೇ ಈಗ ಪ್ರಕೃತಿಯ ಸವಾಲು
    – 2 ತಿಂಗಳಿನಿಂದ ಶೂಟಿಂಗ್ ಸ್ಥಗಿತ ಹಾಳಾಯ್ತು ಸಂಪೂರ್ಣ ಸೆಟ್

    ಕೋಲಾರ: ಕನ್ನಡದ ಬಹು ನಿರೀಕ್ಷಿತ, ಬಹು ಭಾಷಾ ಕೆಜಿಎಫ್-2 ಸಿನಿಮಾ ಸೆಟ್‍ಗೆ ಗಂಡಾಂತರ ಎದುರಾಗಿದೆ. ಕೋಟಿ ನಿರ್ಮಾಪಕ ವಿಜಯ್ ಕಿರಗಂದೂರು ಅವರ ಹಣ, ನಿರ್ದೇಶಕ ಪ್ರಶಾಂತ್ ನೀಲ್ ಕ್ರಿಯೇಟಿವಿಟಿ, ನಟ ಯಶ್ ಜೋಷ್ ಜೊತೆ ನೂರಾರು ಕಾರ್ಮಿಕರ ಶ್ರಮದಿಂದ ಕೋಲಾರದ ಕೆಜಿಎಫ್‍ನ ಕೆನಡೀಸ್ ಸೈನೈಡ್ ಗುಡ್ಡದ ಮೇಲೆ ನಿರ್ಮಾಣಗೊಂಡಿದ್ದ ಸೆಟ್ ಸಂಪೂರ್ಣ ಹಾಳಾಗಿದೆ.

    ದಕ್ಷಿಣ ಭಾರತದಲ್ಲೇ ಹೊಸ ಸಂಚಲನ ಸೃಷ್ಟಿಸಿದ್ದ ನಾಯಕ ನಟ ಯಶ್ ಅಭಿನಯಿಸಿರುವ ಕೆಜಿಎಫ್-2 ಸಿನಿಮಾದ ಶೂಟಿಂಗ್ ಕಳೆದ 2 ತಿಂಗಳಿನಿಂದ ಸ್ಥಗಿತಗೊಂಡಿದೆ.

    ಕೋಲಾರದ ಕೆಜಿಎಫ್‍ನ ಕೆನಡೀಸ್ ಸೈನೈಡ್ ಗುಡ್ಡದ ಮೇಲೆ ನಟ ಯಶ್ ಸೇರಿದಂತೆ ಪ್ರಶಾಂತ್ ನೀಲ್ ನೇತೃತ್ವದಲ್ಲಿ ನೂರಾರು ಕಾರ್ಮಿಕರು ದುಬಾರಿ ಸೆಟ್ ನಿರ್ಮಾಣ ಮಾಡಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಆದರೆ ಸೈನೈಡ್ ಗುಡ್ಡದ ಮೇಲೆ ಬೃಹತ್, ದುಬಾರಿ ಸೆಟ್ ನಿರ್ಮಾಣ ಮಾಡಿದ್ದರಿಂದ ಪರಿಸರ ಹಾನಿ ಹಾಗೂ ಚಿತ್ರೀಕರಣದಿಂದ ಸ್ಥಳೀಯರಿಗೆ ತೊಂದರೆಯಾದ ಹಿನ್ನೆಲೆ ಸಾಮಾಜಿಕ ಹೋರಾಟಗಾರ ಶ್ರೀನಿವಾಸ್ ಆಗಸ್ಟ್ ತಿಂಗಳಲ್ಲಿ ಕೋರ್ಟ್ ಮೊರೆ ಹೋಗಿದ್ದರು.

    ಅರ್ಜಿಯನ್ನು ಮಾನ್ಯ ಮಾಡಿದ ಕೆಜಿಎಫ್‍ನ ಜೆಎಂಎಫ್‍ಸಿ ನ್ಯಾಯಾಲಯ ಚಿತ್ರೀಕರಣ ಮಾಡದಂತೆ ತಡೆಯಾಜ್ಞೆ ನೀಡಿತ್ತು. ಬಳಿಕ ಹೈಕೋರ್ಟ್ ತಡೆಯಾಜ್ಞೆ ತೆರವುಗೊಳಿಸಿ ಚಿತ್ರೀಕರಣ ಮಾಡುವಂತೆ ಅನುಮತಿ ನೀಡಿದೆ. ಆದರೆ ರೌಡಿ ತಂಗಂ ಕುಟುಂಬ ಚಿತ್ರ ಕಥೆ ನಮ್ಮ ಕುಟುಂಬದ್ದೆ ಆಗಿದ್ದು, ನಮ್ಮ ಅನುಮತಿ ಇಲ್ಲದೆ ಚಿತ್ರೀಕರಣ ಮಾಡುತ್ತಿರುವುದಾಗಿ ಕೆಜಿಎಫ್ ನ್ಯಾಯಾಲಯದಲ್ಲಿ ದಾವೆ ಸಲ್ಲಿಸಿದೆ. 2 ತಿಂಗಳಿನಿಂದ ಚಿತ್ರೀಕರಣ ನಿಲ್ಲಿಸಿರುವ ಚಿತ್ರ ತಂಡ ಕಾನೂನು ಹೋರಾಟದಲ್ಲಿ ಗೆಲುವು ಸಾಧಿಸಿಯಾದರೂ ದುಬಾರಿ ಸೆಟ್ ಸಂಪೂರ್ಣ ಹಾಳಾಗಿದೆ. ನರಾಚಿ ಲೋಕ ಮಳೆ ಗಾಳಿಗೆ ಹಾಳಾಗಿದ್ದು, ಚಿತ್ರೀಕರಣ ನಡೆದಿದ್ದೆ ಆದಲ್ಲಿ ಮತ್ತೆ ಹೊಸದಾಗಿ ಸೆಟ್ ನಿರ್ಮಾಣ ಮಾಡಬೇಕಾದ ಸನ್ನಿವೇಶ ಚಿತ್ರ ತಂಡಕ್ಕೆ ಎದುರಾಗಿದೆ. ಇದನ್ನೂ ಓದಿ: ಇರ್ಫಾನ್ ಪಠಾಣ್ ಚಿತ್ರದಲ್ಲಿ ಕೆಜಿಎಫ್ ನಟಿ ಶ್ರೀನಿಧಿ ನಾಯಕಿ

    ತಂಗಂ ತಾಯಿ ಆರೋಪ ಏನು?
    ಕೆಜಿಎಫ್ ಚಾಪ್ಟರ್-1 ಚಿತ್ರದಲ್ಲಿ ಬರುವ ಯಶ್ ಪಾತ್ರ ತಮ್ಮ ಮಗನ ನಿಜ ಜೀವನದ ಪಾತ್ರ ಹೋಲುತ್ತದೆ ಎಂದು ತಂಗಂ ತಾಯಿ ಪೌಳಿ ಕೋರ್ಟ್‍ನಲ್ಲಿ ದಾವೆ ಹೂಡಿದ್ದಾರೆ. ನಮ್ಮ ಕುಟುಂಬದ ಅನುಮತಿ ಪಡೆಯದೆ ಚಿತ್ರದಲ್ಲಿ ನಮ್ಮ ಮಗನ ನಿಜ ಜೀವನದ ಪಾತ್ರ ಬಳಸಿಕೊಳ್ಳಲಾಗಿದೆ. ಕೆಜಿಎಫ್‍ನಲ್ಲಿ ಚಿನ್ನದ ಗಣಿಗಾರಿಕೆ ನಡೆಯುತ್ತಿದ್ದ 1990 ರ ದಶಕದಲ್ಲಿ ರೌಡಿಯಾಗಿದ್ದ ತಂಗಂ ನೈಜ ಕಥೆ ಇದಾಗಿದೆ ಎಂಬುದು ತಂಗಂ ಕುಟುಂಬದ ಆರೋಪ.

    ಕೆಜಿಎಫ್ ಚಿತ್ರದಲ್ಲಿ ನಾಯಕ ಯಶ್ ಮುಂಬೈನಲ್ಲಿ ರೌಡಿಯಾಗಿದ್ದು ಸುಪಾರಿ ಪಡೆದು ಕೆಜಿಎಫ್‍ಗೆ ಬರುತ್ತಾನೆ. ತಂಗಂ ಕೆಜಿಎಫ್‍ನಲ್ಲಿ ಕಿಲ್ಲರ್ ರೌಡಿಯಾಗಿದ್ದು ಪೊಲೀಸರ ಕಾಟ ಜಾಸ್ತಿಯಾದ ಮೇಲೆ ಮುಂಬೈನಲ್ಲಿ ತಲೆ ಮರೆಸಿಕೊಳ್ಳುತ್ತಾನೆ. ಮುಂಬೈನಲ್ಲಿ ಕೊಲೆ, ದರೋಡೆ ಇನ್ನಿತರ ಅಪರಾಧ ಚಟುವಟಿಕೆಗಳಲ್ಲಿ ತೊಡಗಿ ಮತ್ತೆ ಕೆಜಿಎಫ್‍ಗೆ ಬರುತ್ತಾನೆ. ಇದು ಕೆಜಿಎಫ್ ಚಿತ್ರದಲ್ಲಿ ಬರುವ ಯಶ್ ಹಲವು ಸನ್ನಿವೇಶಗಳು ನಮ್ಮ ಮಗನನ್ನೇ ಹೋಲುತ್ತವೆ ಎನ್ನುವುದು ತಂಗಂ ತಾಯಿ ಪೌಳಿ ಆರೋಪ.

    ಚಿತ್ರದಲ್ಲಿ ಯಶ್ ಪೊಲೀಸರಿಗೆ ಬಿಯರ್ ಬಾಟಲ್ ಹೊಡೆಯುವ ಸನ್ನಿವೇಶ ಸೇರಿದಂತೆ ಹಲವು ನೈಜ ಕಥೆಯನ್ನು ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಕೆಜಿಎಫ್ ಚಾಪ್ಟರ್-2 ಚಿತ್ರದಲ್ಲಿ ಕೂಡ ತಂಗಂ ಜೀವನದ ಪಾತ್ರ ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಿ ತಂಗಂ ತಾಯಿ ಪೌಳಿ ಕೋರ್ಟ್ ಮೊರೆ ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 23ಕ್ಕೆ ವಿಚಾರಣೆಗೆ ಹಾಜರಾಗುವಂತೆ ಚಿತ್ರ ತಂಡಕ್ಕೆ ಕೋರ್ಟ್ ಸಮನ್ಸ್ ನೀಡಿದೆ.

    ಕೆಜಿಎಫ್‍ನಲ್ಲಿ ದರೋಡೆ ಮಾಡಿದ ಚಿನ್ನವನ್ನು ಮುಂಬೈ, ಕೇರಳದಲ್ಲಿ ಮಾರಾಟ ಮಾಡುತ್ತಿದ್ದ ತಂಗಂ ಕುರಿತು 2016ರಲ್ಲಿ ಕೋಲಾರ ತಂಗಂ ಹೆಸರಿನಲ್ಲಿ ಸಿನಿಮಾ ಕೂಡ ಬಂದಿದೆ.

    https://www.youtube.com/watch?v=0ksoizu9lIQ