Tag: ರೋಹ್ಮನ್ ಶಾಲ್

  • ಸುಷ್ಮಿತಾ ಸೇನ್ ಜೊತೆ ಬ್ರೇಕ್ ಅಪ್ ಘೋಷಿಸಿಕೊಂಡ ಐಪಿಎಲ್ ಸಂಸ್ಥಾಪಕ ಲಲಿತ್ ಮೋದಿ

    ಸುಷ್ಮಿತಾ ಸೇನ್ ಜೊತೆ ಬ್ರೇಕ್ ಅಪ್ ಘೋಷಿಸಿಕೊಂಡ ಐಪಿಎಲ್ ಸಂಸ್ಥಾಪಕ ಲಲಿತ್ ಮೋದಿ

    ಪಿಎಲ್ ಸಂಸ್ಥಾಪಕ ಲಲಿತ್ ಮೋದಿ ಕಳೆದ ಒಂದೂವರೆ ತಿಂಗಳ ಹಿಂದೆ, ಮಾಜಿ ವಿಶ್ವಸುಂದರಿ ಸುಷ್ಮಿತಾ ಸೇನ್ ಜೊತೆಗಿನ ತಮ್ಮ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು, ಆಕೆಯೊಂದಿಗೆ ಡೇಟಿಂಗ್ ಮಾಡುತ್ತಿರುವುದಾಗಿ ಘೋಷಿಸಿದ್ದರು. ಸುಷ್ಮಿತಾ ಜೊತೆಗೆ ತಾವು ಅತೀ ಸಲುಗೆಯಿಂದ ಇರುವ ಫೋಟೋಗಳನ್ನು ಹಂಚಿಕೊಂಡಿದ್ದರು. ಆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದವು.

    ಸುಷ್ಮಿತಾ ಜೊತೆ ತಾವು ಡೇಟಿಂಗ್ ಮಾಡುತ್ತಿರುವ ವಿಷಯವನ್ನು ಮೋದಿ ಬಹಿರಂಗ ಪಡಿಸುತ್ತಿದ್ದಂತೆಯೇ ಸುಷ್ಮಿತಾ ವಿದೇಶಕ್ಕೆ ಹಾರಿದರು. ತಮ್ಮ ನಡುವೆ ಅಂಥದ್ದೇನೂ ಇಲ್ಲ ಎಂದು ಬಿಂಬಿಸಲು ಹೊರಟರು. ಆದರೆ, ಮೋದಿ ಪೋಸ್ಟ್ ಮಾಡಿದ್ದ ಫೋಟೋಗಳು ಹಲವು ಅನುಮಾನಗಳಿಗೆ ಕಾರಣವಾಗಿದ್ದವು. ಡೇಟಿಂಗ್ ಮಾಡದೇ ಅಷ್ಟೊಂದು ಕ್ಲೋಸ್ ಆಗಿರಲು ಹೇಗೆ ಸಾಧ್ಯ? ಎಂದು ಹಲವರು ಪ್ರಶ್ನೆ ಮಾಡಿದ್ದರು. ಆದರೂ, ಮೋದಿ ತಮ್ಮ ನಿಲುವಿಗೆ ಬದ್ಧರಾಗಿ ಉಳಿದರು.  ಇದನ್ನೂ ಓದಿ: ಜಶ್ವಂತ್‍ನಿಂದ ನಂದಿನಿ ಅಂತರ ಕಾಯ್ದುಕೊಳ್ಳುತ್ತಿರುವುದ್ಯಾಕೆ..?

    ಈ ನಡುವೆ ಮೊನ್ನೆಯಷ್ಟೇ ಸುಷ್ಮಿತಾ ಸೇನ್ ತಮ್ಮ ಮಾಜಿ ಬಾಯ್ ಫ್ರೆಂಡ್ ರೋಹ್ಮನ್ ಶಾಲ್ ಜೊತೆ ವಿದೇಶದಲ್ಲಿ ಕಾಣಿಸಿಕೊಂಡು ಕುತೂಹಲ ಮೂಡಿಸಿದ್ದರು. ಮಾಜಿ ಬಾಯ್ ಫ್ರೆಂಡ್ ಜೊತೆ ಮತ್ತೆ ಸುಷ್ಮಿತಾ ಒಂದಾದರಾ ಎನ್ನುವ ಪ್ರಶ್ನೆಗಳು ಕೂಡ ಮೂಡಿದವು. ಈ ವಿಷಯ ಲಲಿತ್ ಮೋದಿಗೆ ಭಾರೀ ಮುಜುಗರ ಉಂಟು ಮಾಡಿದೆ ಅನಿಸತ್ತೆ. ಹಾಗಾಗಿಯೇ ಸುಷ್ಮಿತಾ ಅವರಿಂದ ಅಂತರ ಕಾಪಾಡಿಕೊಳ್ಳಲು ಅವರು ಮುಂದಾಗಿದ್ದಾರೆ.

    ತಮ್ಮ ಮಾಜಿ ಬಾಯ್ ಫ್ರೆಂಡ್ ಜೊತೆ ಸುಷ್ಮಿತಾ ವಿದೇಶದಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆಯೇ ಲಲಿತ್ ಮೋದಿ, ಆಕೆಯನ್ನು ಸೋಷಿಯಲ್ ಮೀಡಿಯಾದಿಂದ ಅನ್ ಫ್ರೆಂಡ್ ಮಾಡಿದ್ದಾನೆ. ಇನ್ಸ್ಟಾದಲ್ಲಿ ತಮ್ಮ ಹೆಸರಿನ ಮುಂದೆ ಸುಷ್ಮಿತಾ ಹೆಸರು ಹಾಕಿಕೊಂಡಿದ್ದರು. ಅದನ್ನೂ ಕೂಡ ಅವರು ತಗೆದಿದ್ದಾರೆ. ಅಲ್ಲಿಗೆ ಸುಷ್ಮಿತಾ ಪ್ರೀತಿಗೆ ಎಳ್ಳು ನೀರು ಬಿಟ್ಟಂತಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಲಲಿತ್ ಮೋದಿ ಜೊತೆ ಸುಶ್ಮಿತಾ ಸೇನ್ ಡೇಟಿಂಗ್ : ಸುಶ್ಮಿತಾ ಮಾಜಿ ಬಾಯ್ ಫ್ರೆಂಡ್ ಪ್ರತಿಕ್ರಿಯೆ

    ಲಲಿತ್ ಮೋದಿ ಜೊತೆ ಸುಶ್ಮಿತಾ ಸೇನ್ ಡೇಟಿಂಗ್ : ಸುಶ್ಮಿತಾ ಮಾಜಿ ಬಾಯ್ ಫ್ರೆಂಡ್ ಪ್ರತಿಕ್ರಿಯೆ

    ಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ಮತ್ತು ಮಾಜಿ ಭುವನ ಸುಂದರಿ ಸುಶ್ಮಿತಾ ಸೇನ್ ಡೇಟಿಂಗ್ ವಿಚಾರ ನಿನ್ನೆಯಿಂದ ಭಾರೀ ಸದ್ದು ಮಾಡುತ್ತಿದೆ. ಸುಶ್ಮಿತಾ ಸೇನ್ ಜೊತೆಗಿನ ಫೋಟೋಗಳನ್ನು ಲಲಿತ್ ಮೋದಿ ಹಂಚಿಕೊಳ್ಳುತ್ತಿದ್ದಂತೆಯೇ ಫೋಟೋಗಳು ಸಖತ್ ವೈರಲ್ ಆದವು.  ಇಬ್ಬರ ವಯಸ್ಸಿನ ಅಂತರ ಮತ್ತು ಸುಶ್ಮಿತಾ ಅವರ ಮಾಜಿ ಬಾಯ್ ಫ್ರೆಂಡ್ ಕುರಿತಾಗಿಯೂ ಟ್ರೋಲ್ ಮಾಡಲಾಯಿತು. ಈ ಫೋಟೋಗಳಿಗೆ ಸುಶ್ಮಿತಾ ಬಾಯ್ ಫ್ರೆಂಡ್ ರೋಹ್ಮನ್ ಶಾಲ್ ಯಾವ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಾರೆ ಎಂಬ ಕುತೂಹಲ ಕೂಡ ಹೆಚ್ಚಾಯಿತು.

    ಈ ಕುರಿತಂತೆ ರೋಹ್ಮನ್ ಶಾಲ್ ಕೊನೆಗೂ ಬಾಯ್ಬಿಟ್ಟಿದ್ದಾರೆ. ಸುಶ್ಮಿತಾ ಆಯ್ಕೆ ಯಾವಾಗಲೂ ಸರಿಯಾಗಿ ಇರುತ್ತದೆ. ಅವರು ಎಲ್ಲಿ ಖುಷಿಯಾಗಿ ಇರುತ್ತಾರೋ, ಅಲ್ಲಿ ಖುಷಿ ಪಡಲಿ. ಅವರು ಯಾರಿಗೂ ಕೇಡನ್ನು ಬಯಸಲ್ಲ ಎನ್ನುವುದು ನನ್ನ ಬಲವಾದ ನಂಬಿಕೆ. ಹಾಗಾಗಿ ಈ ಕುರಿತು ನಾನು ನೆಗೆಟಿವ್ ಕಾಮೆಂಟ್ ಮಾಡಲಾರೆ ಎಂದು ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ಮಾಧ್ಯಮಗಳ ಜೊತೆಯೂ ಅವರು ಮಾತನಾಡಿದ್ದಾರೆ. ಇದನ್ನೂ ಓದಿ : ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಡೇಟಿಂಗ್ ಮಾಡುತ್ತಿದ್ದರು : ಸಾರಾ ಅಲಿ ಖಾನ್

    ರೋಹ್ಮನ್ ಶಾಲ್ ಪ್ರತಿಕ್ರಿಯೆ ನೀಡಿದರೂ, ಸುಶ್ಮಿತಾ ಸೇನ್ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಲಲಿತಾ ಮೋದಿ ಕುರಿತು ಯಾವುದೇ ಕಾಮೆಂಟ್ ಕೂಡ ಮಾಡಿಲ್ಲ. ಆದರೆ, ಇದು ಹೇಗೆ ಸಾಧ್ಯ ಎಂಬ ಪ್ರತಿಕ್ರಿಯೆಗಳು ಮಾತ್ರ ಜೋರಾಗಿ ಕೇಳಿ ಬರುತ್ತಿವೆ. ಜೊತೆಗೆ ಇಬ್ಬರ ಆಸ್ತಿಗಳ ಬಗ್ಗೆಯೂ ಸುದ್ದಿ ಆಗುತ್ತಿದೆ. ಮೋದಿ ಮತ್ತು ಸುಶ್ಮಿತಾ ಹೇಗೆ ಪರಿಚಯವಾದರು, ಪ್ರೇಮ ಹೇಗೆ ಬೆಳೆಯಿತು ಎನ್ನುವ ಕುರಿತು ಪ್ರಶ್ನೆಗಳು ಎದ್ದಿವೆ.

    Live Tv
    [brid partner=56869869 player=32851 video=960834 autoplay=true]

  • ಪ್ರಿಯಕರನೊಂದಿಗೆ ಮದುವೆಗೆ ಸುಶ್ಮಿತಾ ಸೇನ್ ರೆಡಿ?

    ಪ್ರಿಯಕರನೊಂದಿಗೆ ಮದುವೆಗೆ ಸುಶ್ಮಿತಾ ಸೇನ್ ರೆಡಿ?

    ಮುಂಬೈ: ಬಾಲಿವುಡ್‍ನ ಖ್ಯಾತ ನಟಿ ಸುಶ್ಮಿತಾ ಸೇನ್ ತಮ್ಮ ಪ್ರಿಯಕರ ರೋಹ್ಮನ್ ಶಾಲ್‍ನನ್ನು ಮದುವೆ ಆಗಲು ಸಿದ್ದರಾಗಿದ್ದಾರಾ ಎನ್ನುವ ಮಾತು ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.

    ಹೌದು, ಇತ್ತೀಚೆಗೆ ಸುಶ್ಮಿತಾ ಸೇನ್ ತಮ್ಮ ಪ್ರಿಯಕರ ರೋಹ್ಮನ್ ಶಾಲ್ ಜೊತೆ ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ಇವರಿಬ್ಬರ ಫೊಟೋಗಳು ಸಹ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದವು. ಇಬ್ಬರೂ ಕಳೆದ ಎರಡು ತಿಂಗಳಿನಿಂದ ಡೇಟಿಂಗ್‍ನಲ್ಲಿದ್ದು, ಮುಂಬರುವ ದಿನಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲು ಜೋಡಿ ನಿರ್ಧರಿಸಿವೆ ಎನ್ನುವ ಮಾತುಗಳು ಬಾಲಿವುಡ್ ನಲ್ಲಿ ಕೇಳಿಬರುತ್ತಿವೆ.

    https://www.instagram.com/p/BpySX8BgD0k/?utm_source=ig_embed

    ಪ್ರೀತಿ ಹುಟ್ಟಿದ್ದು ಹೇಗೆ?
    ಸುಶ್ಮಿತಾ ಹಾಗೂ ರೋಹ್ಮನ್ ಕೆಲವು ತಿಂಗಳ ಹಿಂದೆ ಫ್ಯಾಶನ್ ಗಾಲಾ ಎಂಬ ಕಾರ್ಯಕ್ರಮವೊಂದರಲ್ಲಿ ಭೇಟಿಯಾಗಿದ್ದರು. ಭೇಟಿ ವೇಳೆ ಇಬ್ಬರು ಪರಸ್ಪರ ಸ್ನೇಹ ಬೆಳಸಿದ್ದರು. ದಿನ ಕಳೆದಂತೆ ಸ್ನೇಹ ಪ್ರೀತಿಗೆ ತಿರುಗಿದೆ. ಅಲ್ಲದೇ ಕೆಲವು ವಾರಗಳ ಹಿಂದೆಯಷ್ಟೇ, ರೋಹ್ಮನ್ ಸುಶ್ಮಿತಾಗೆ ಪ್ರಪೋಸ್ ಮಾಡಿದ್ದರು. ಪ್ರಪೋಸಲ್‍ಗೆ ಸುಶ್ಮಿತಾ ಒಪ್ಪಿಗೆ ನೀಡಿ, ಒಟ್ಟಿಗೆ ಓಡಾಡುತ್ತಿದ್ದರು. ಸುಶ್ಮಿತಾ ಹಾಗೂ ರೋಹ್ಮನ್ 2019 ರಲ್ಲಿ ಮದುವೆ ಮಾಡಿಕೊಂಡು ದಾಂಪತ್ಯ ಜೀವನಕ್ಕೆ ಕಾಲಿಡಲು ತೀರ್ಮಾನಿಸಿದ್ದಾರೆ ಎಂದು ಸ್ಥಳೀಯ ಪತ್ರಿಕೆಯೊಂದರಲ್ಲಿ ಸುದ್ದಿ ಬಿತ್ತರವಾಗಿತ್ತು.

    https://www.instagram.com/p/Bp1Avn9ltD-/?utm_source=ig_embed

    ಸುಶ್ಮಿತಾ ಮದುವೆಗೂ ಮುನ್ನವೇ ಇಬ್ಬರು ಹೆಣ್ಣು ಮಕ್ಕಳನ್ನು ದತ್ತು ಪಡೆದು ನೋಡಿಕೊಳ್ಳುತ್ತಿದ್ದಾರೆ. ಮೊದಲನೇ ಮಗುವನ್ನು 2000ರ ಇಸವಿಯಲ್ಲಿ ದತ್ತು ಪಡೆದಿದ್ದರೆ, ಎರಡನೇ ಪುತ್ರಿಯನ್ನು 2010ರಲ್ಲಿ ದತ್ತು ಪಡೆದುಕೊಂಡಿದ್ದರು. ಸದ್ಯ ರೋಹ್ಮನ್ ಜೊತೆ ಸುಶ್ಮಿತಾ ತುಂಬಾ ಸಂತೋಷವಾಗಿದ್ದಾರೆ. ಇಬ್ಬರು ಜೊತೆಯಲ್ಲಿರುವ ಫೋಟೋಗಳು ಸಾಕಷ್ಟು ವೈರಲ್ ಆಗಿವೆ.

    https://www.instagram.com/p/BpztsN_HkxI/?utm_source=ig_embed

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/