Tag: ರೋಹಿತ್ ಶೆಟ್ಟಿ

  • ಬರ್ತ್ ಡೇಗೂ ಮುನ್ನವೇ ರಣ್‍ವೀರ್ ಗೆ ಸಿಕ್ತು ಸೆಕ್ಸಿ ಗಿಫ್ಟ್

    ಬರ್ತ್ ಡೇಗೂ ಮುನ್ನವೇ ರಣ್‍ವೀರ್ ಗೆ ಸಿಕ್ತು ಸೆಕ್ಸಿ ಗಿಫ್ಟ್

    ಮುಂಬೈ: ಬಾಲಿವುಡ್‍ನ ಮೋಸ್ಟ್ ಸೆಕ್ಸಿ ಮ್ಯಾನ್ ಅಂತಾ ಕರೆಸಿಕೊಳ್ಳುವ ನಟ ರಣ್‍ವೀರ್ ಸಿಂಗ್ ಇದೇ ತಿಂಗಳು ಜುಲೈ 6ರಂದು ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ಈಗಾಗಲೇ ರಣ್‍ವೀರ್ ಆಪ್ತರು ಮತ್ತು ಅಭಿಮಾನಿಗಳು ಹುಟ್ಟು ಹಬ್ಬ ಆಚರಣೆಗೆ ಸಿದ್ಧತೆ ನಡೆಸಿದ್ದಾರೆ.

    ಬರ್ತ್ ಡೇ ಮುನ್ನವೇ ರಣ್‍ವೀರ್ ಸಿಂಗ್ ಅತ್ಯಂತ ಅಮೂಲ್ಯವಾದ ಗಿಫ್ಟ್ ಸಿಕ್ಕಿದೆ. ಹೌದು, ಈ ಬಗ್ಗೆ ಖುದ್ದು ರಣ್‍ವೀರ್ ತಮ್ಮ ಟ್ವಿಟ್ಟರ್ ನಲ್ಲಿ ಫೋಟೋ ಹಾಕಿ ಬರೆದುಕೊಂಡಿದ್ದಾರೆ. ನಿರ್ದೇಶಕ ರೋಹಿತ್ ಶೆಟ್ಟಿ ಸುಮಾರು 8 ಲಕ್ಷ ರೂ. ಬೆಲೆ ಬಾಳುವ ದುಬಾರಿ ವಾಚ್ ಬರ್ತ್ ಡೇ ಗಿಫ್ಟ್ ಆಗಿ ನೀಡಿದ್ದಾರೆ.

    ರಣ್‍ವೀರ್ ಸಿಂಗ್ ಪದ್ಮಾವತ್ ಚಿತ್ರದ ಬಳಿಕ ಸಿಂಬಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿಂಬಾ ಸಿನಿಮಾ ರೋಹಿತ್ ಶೆಟ್ಟಿ ಮತ್ತು ಕರಣ್ ಜೋಹರ್ ಸಾರಥ್ಯದಲ್ಲಿ ಮೂಡಿ ಬರುತ್ತಿದೆ. ಈಗಾಗಲೇ ಸಿಂಬಾ ಚಿತ್ರೀಕರಣ ಆರಂಭವಾಗಿದ್ದು, ರೋಹಿತ್ ಶೆಟ್ಟಿ ತನ್ನ ಸಿನಿಮಾದ ನಟನಾದ ರಣ್‍ವೀರ್ ಸಿಂಗ್‍ಗೆ ಎಲ್ಲರಿಗಿಂತಲೂ ಮೊದಲೇ ಗಿಫ್ಟ್ ನೀಡುವುದು ಮೂಲಕ ಸರ್ಪ್ರೈಸ್ ನೀಡಿದ್ದಾರೆ.

    ಇದು ನನ್ನ ಬಾಸ್ ಕಡೆಯಿಂದ ಸಿಕ್ಕ ಬರ್ತ್ ಡೇ ಗಿಫ್ಟ್. ಎಲ್ಲರಿಗಿಂತ ಮೊದಲ ವಿಶ್ ಮಾಡಿದ್ದಾರೆ. ನನ್ನ ಬಳಿಯಿರುವ ವಾಚ್‍ಗಳಲ್ಲಿ ಇದು ಸೆಕ್ಸಿಯಾಗಿದೆ ಅಂತಾ ರಣ್‍ವೀರ್ ಟ್ವಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

    ಸಿಂಬಾ ಸಿನಿಮಾದಲ್ಲಿ ರಣ್‍ವೀರ್‍ಗೆ ಜೊತೆಯಾಗಿ ಸೈಫ್ ಅಲಿ ಖಾನ್ ಪುತ್ರಿ ಸಾರಾ ಖಾನ್ ನಟಿಸುತ್ತಿದ್ದಾರೆ. ಇತ್ತ ರಣ್‍ವೀರ್ ಗಲ್ಲಿ ಭಾಯ್ ಸಿನಿಮಾದ ಚಿತ್ರೀಕರಣದಲ್ಲಿಯೂ ಭಾಗಿಯಾಗುತ್ತಿದ್ದಾರೆ.