Tag: ರೋಹಿತ್ ಶರ್ಮಾ

  • Ind vs Nz Test | ಸೋಲಿನ ಸಂಪೂರ್ಣ ಹೊಣೆ ನನ್ನದೆ – ರೋಹಿತ್‌ ಶರ್ಮಾ ಬೇಸರ

    Ind vs Nz Test | ಸೋಲಿನ ಸಂಪೂರ್ಣ ಹೊಣೆ ನನ್ನದೆ – ರೋಹಿತ್‌ ಶರ್ಮಾ ಬೇಸರ

    ಮುಂಬೈ: ವಿಶ್ವಟೆಸ್ಟ್ ಚಾಂಪಿಯನ್‌ ಶಿಪ್ (WTC) ‌ಭಾಗವಾಗಿ ನ್ಯೂಜಿಲೆಂಡ್‌ (New Zealand) ವಿರುದ್ಧ ನಡೆದ ಮೂರು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಭಾರತ ಕ್ರಿಕೆಟ್‌ ತಂಡ ಹೀನಾಯ ಸೋಲು ಕಂಡಿದೆ. ಈ ಕುರಿತು ಮಾತನಾಡಿರುವ ನಾಯಕ ರೋಹಿತ್‌ ಶರ್ಮಾ (Rohit Sharma), ಸೋಲಿನ ಸಂಪೂರ್ಣ ಹೊಣೆಯನ್ನು ತಾನೆ ಹೊತ್ತುಕೊಳ್ಳುವುದಾಗಿ ಹೇಳಿದ್ದಾರೆ.

    ಕಿವೀಸ್‌ ವಿರುದ್ಧ ಸೋಲಿನ ಬಳಿಕ ಪೋಸ್ಟ್‌ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ ರೋಹಿತ್‌ ಶರ್ಮಾ, ಈ ಸರಣಿಯ ಸೋಲಿನ ಸಂಪೂರ್ಣ ಜವಾಬ್ದಾರಿಯನ್ನು ನಾನೇ ತೆಗೆದುಕೊಳ್ಳುತ್ತೇನೆ. ಏಕೆಂದರೆ ನಾನು ಉತ್ತಮವಾಗಿ ಬ್ಯಾಟ್‌ ಮಾಡಲಿಲ್ಲ, ಕೆಟ್ಟದಾಗಿ ಬ್ಯಾಟಿಂಗ್‌ ಮಾಡಿದೆ. ಬ್ಯಾಟರ್ ಮತ್ತು ನಾಯಕನಾಗಿ ನಾನು ನನ್ನ ಅತ್ಯುತ್ತಮ ಸ್ಥಿತಿಯಲ್ಲಿರಲಿಲ್ಲ. ನಾಯಕನಾಗಿ ತಂಡವನ್ನು ಮುನ್ನಡೆಸದ ಕಾರಣ ನಮ್ಮ ತಂಡ ಕೂಡ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಯಿತು ಎಂದು ಬೇಸರ ವ್ಯಕ್ತಪಡಿಸಿದರು.

    ನ್ಯೂಜಿಲೆಂಡ್ ನಮಗಿಂತ ಉತ್ತಮ ಆಟ ಆಡಿದರು. ಬ್ಯಾಟಿಂಗ್‌, ಬೌಲಿಂಗ್‌ನಲ್ಲಿ ಒಳ್ಳೆಯ ಹಿಡಿತ ಸಾಧಿಸಿದರು. ಇದು ನಮಗೆ ಕಠಿಣ ಸವಾಲು ಆಗಿತ್ತು. ನಾನು ಈ ಸರಣಿಯಲ್ಲಿ ಉತ್ತಮವಾಗಿ ಬ್ಯಾಟಿಂಗ್‌ ಮಾಡದೇ ಇರಬಹುದು. ಆದ್ರೆ ನನ್ನ ರಕ್ಷಣಾತ್ಮಕ ಆಟವನ್ನು ಕಳೆದುಕೊಂಡಿಲ್ಲ ಎಂದು ಹೇಳಿದರು. ಇದನ್ನೂ ಓದಿ: WTC Points Table | ಹೀನಾಯ ಸೋಲಿನ ಬೆನ್ನಲ್ಲೇ ನಂ.1 ಪಟ್ಟ ಕಳೆದುಕೊಂಡ ಭಾರತ – ಆಸೀಸ್‌ಗೆ ಅಗ್ರಸ್ಥಾನ

    24 ವರ್ಷಗಳ ಬಳಿಕ ತವರಿನಲ್ಲಿ ವೈಟ್‌ವಾಶ್‌:
    ನ್ಯೂಜಿಲೆಂಡ್‌ ವಿರುದ್ಧ ನಡೆದ ಮೂರು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಟೀಂ ಇಂಡಿಯಾ ಹೀನಾಯ ಸೋಲು ಕಂಡಿದೆ. ಈ ಸೋಲಿನೊಂದಿಗೆ 24 ವರ್ಷಗಳ ಬಳಿಕ ತವರಿನಲ್ಲಿ ಸರಣಿ ಸೋತ ಅಪಖ್ಯಾತಿಯನ್ನು ಹೆಗಲಿಗೇರಿಸಿಕೊಂಡಿದೆ. ಕೊನೆಯದ್ದಾಗಿ ಭಾರತ 2000 ಇಸವಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ 2 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ವೈಟ್‌ವಾಶ್‌ ಆಗಿತ್ತು.

    ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ 3ನೇ ಟೆಸ್ಟ್‌ ಪಂದ್ಯದಲ್ಲಿ ಕಿವೀಸ್‌ ಭಾರತದ ವಿರುದ್ಧ 26 ರನ್‌ಗಳ ಅಮೋಘ ಜಯ ಸಾಧಿಸಿ, ಮೂರು ಪಂದ್ಯಗಳ ಟೆಸ್ಟ್‌ ಸರಣಿಯನ್ನು ಕ್ಲೀನ್‌ಸ್ವೀಪ್ ಮಾಡಿದೆ. ಈ ಮೂಲಕ ಭಾರತದಲ್ಲಿ 3 ಅಥವಾ ಅದಕ್ಕಿಂತ ಹೆಚ್ಚಿನ ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಭಾರತ ತಂಡವನ್ನು ವೈಟ್‌ವಾಶ್‌ ಮಾಡಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

    147 ರನ್‌ಗಳ ಗುರಿ ಬೆನ್ನಟ್ಟಿದ ಭಾರತ ಆರಂಭದಲ್ಲೇ ಪ್ರಮುಖ ವಿಕೆಟ್‌ ಕಳೆದುಕೊಂಡು ಹಿನ್ನಡೆ ಅನುಭವಿಸಿತು. ನಾಯಕ ರೋಹಿತ್‌ ಶರ್ಮಾ, ಯಶಸ್ವಿ ಜೈಸ್ವಾಲ್‌, ಶುಭಮನ್‌ ಗಿಲ್‌, ವಿರಾಟ್‌ ಕೊಹ್ಲಿ ಅಲ್ಪಮೊತ್ತಕ್ಕೆ ಔಟಾಗಿ ಪೆವಿಲಿಯನ್‌ ಪರೇಡ್‌ ನಡೆಸಿದರು. ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಅಲ್ಪಮೊತ್ತಕ್ಕೆ ಔಟಾಗಿದ್ದು ತಂಡಕ್ಕೆ ಭಾರಿ ಆಘಾತ ನೀಡಿತು. ಇದನ್ನೂ ಓದಿ: 24 ವರ್ಷಗಳ ಬಳಿಕ ತವರಿನಲ್ಲಿ ಭಾರತ ವೈಟ್‌ವಾಶ್‌ – ಸರಣಿ ಗೆದ್ದು ಇತಿಹಾಸ ಸೃಷ್ಟಿಸಿದ ಕಿವೀಸ್‌

    ಪಂತ್‌ ಬಳಿಕ ಟೀಂ ಇಂಡಿಯಾ ಪಥನ:
    ಪ್ರಮುಖ ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ಟೀಂ ಇಂಡಿಯಾಗೆ ರಿಷಭ್‌ ಪಂತ್‌ ಆಸರೆಯಾದರು. ಕ್ರೀಸ್‌ನಲ್ಲಿ ಭದ್ರವಾಗಿ ನೆಲೆಯೂರಿದ ಪಂತ್‌ 57 ಎಸೆತಗಳಲ್ಲಿ 64 ರನ್‌ (9 ಬೌಂಡರಿ, 1 ಸಿಕ್ಸರ್‌) ಗಳಿಸಿದ್ದರು. ಈ ವೇಳೆ ಸುಲಭವಾಗಿ ಕೀಪರ್‌ ಕ್ಯಾಚ್‌ಗೆ ತುತ್ತಾದರು. ಪಂತ್‌ ಔಟಾದ ಬೆನ್ನಲ್ಲೇ ಅಶ್ವಿನ್‌, ಆಕಾಶ್‌ ದೀಪ್‌, ವಾಷಿಂಗ್ಟನ್‌ ಸುಂದರ್‌ ಬ್ಯಾಕ್‌ ಟು ಬ್ಯಾಕ್‌ ವಿಕೆಟ್‌ ಒಪ್ಪಿಸಿದರು. ಇದರೊಂದಿಗೆ ಟೀಂ ಇಂಡಿಯಾ 121 ರನ್‌ಗಳಿಗೆ ಸರ್ವಪತನ ಕಂಡಿತು.

    147 ರನ್‌ ಗುರಿ ನೀಡಿದ್ದ ಕಿವೀಸ್‌:
    2ನೇ ದಿನದ ಅಂತ್ಯಕ್ಕೆ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಕಿವೀಸ್‌ 9 ವಿಕೆಟ್‌ಗೆ 171 ರನ್‌ಗಳಿಸಿತ್ತು. 3ನೇ ದಿನ 143 ರನ್‌ಗಳ ಮುನ್ನಡೆಯೊಂದಿಗೆ ಕ್ರೀಸ್‌ ಆರಂಭಿಸಿದ್ದ ನ್ಯೂಜಿಲೆಂಡ್‌ 2ನೇ ಇನ್ನಿಂಗ್ಸ್‌ನಲ್ಲಿ 174 ರನ್‌ಗಳಿಗೆ ಆಲೌಟ್‌ ಆಯಿತು. ಈ ಮೂಲಕ ಭಾರತಕ್ಕೆ 147 ರನ್‌ಗಳ ಗುರಿ ನೀಡಿತ್ತು. ಇದನ್ನೂ ಓದಿ: 6,6,6,6,6,W,6 – ಒಂದೇ ಓವರ್‌ನಲ್ಲಿ 37 ರನ್‌ ಬಿಟ್ಟುಕೊಟ್ಟ ರಾಬಿನ್ ಉತ್ತಪ್ಪ!

  • WTC Points Table | ಹೀನಾಯ ಸೋಲಿನ ಬೆನ್ನಲ್ಲೇ ನಂ.1 ಪಟ್ಟ ಕಳೆದುಕೊಂಡ ಭಾರತ – ಆಸೀಸ್‌ಗೆ ಅಗ್ರಸ್ಥಾನ

    WTC Points Table | ಹೀನಾಯ ಸೋಲಿನ ಬೆನ್ನಲ್ಲೇ ನಂ.1 ಪಟ್ಟ ಕಳೆದುಕೊಂಡ ಭಾರತ – ಆಸೀಸ್‌ಗೆ ಅಗ್ರಸ್ಥಾನ

    ಮುಂಬೈ: ನ್ಯೂಜಿಲೆಂಡ್‌ (New Zealand) ವಿರುದ್ಧ ನಡೆದ ಟೆಸ್ಟ್‌ ಸರಣಿಯಲ್ಲಿ ಹೀನಾಯ ಸೋಲು ಕಂಡ ಬೆನ್ನಲ್ಲೇ ಟೀಂ ಇಂಡಿಯಾ (Team India) ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ (WTC Points Table) ನಂ.1 ಸ್ಥಾನ ಕಳೆದುಕೊಂಡಿದೆ.

    12 ಪಂದ್ಯಗಳಲ್ಲಿ 62.50 ಪಿಸಿಟಿ (Percentage Of Points Earned) ಪಡೆದಿರುವ ಆಸ್ಟ್ರೇಲಿಯಾ ತಂಡ ಮತ್ತೆ ಅಗ್ರಸ್ಥಾನಕ್ಕೆ ಏರಿದ್ದು, 14 ಪಂದ್ಯಗಳಲ್ಲಿ 58.33 ಪಿಸಿಟಿ ಪಡೆದಿರುವ ಟೀಂ ಇಂಡಿಯಾ 2ನೇ ಸ್ಥಾನಕ್ಕೆ ಕುಸಿದಿದೆ. ಇನ್ನೂ 3, 4 ಮತ್ತು 5ನೇ ಸ್ಥಾನಗಳಲ್ಲಿ ಕ್ರಮವಾಗಿ ಶ್ರೀಲಂಕಾ, ನ್ಯೂಜಿಲೆಂಡ್‌ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಸ್ಥಾನ ಪಡೆದುಕೊಂಡಿವೆ. ಇದನ್ನೂ ಓದಿ: 24 ವರ್ಷಗಳ ಬಳಿಕ ತವರಿನಲ್ಲಿ ಭಾರತ ವೈಟ್‌ವಾಶ್‌ – ಸರಣಿ ಗೆದ್ದು ಇತಿಹಾಸ ಸೃಷ್ಟಿಸಿದ ಕಿವೀಸ್‌

    WTC ಟಾಪ್‌-5 ತಂಡಗಳು:
    ಆಸ್ಟ್ರೇಲಿಯಾ – 12 ಪಂದ್ಯ – 62.50 ಪಿಸಿಟಿ
    ಭಾರತ – 14 ಪಂದ್ಯ – 58.33 ಪಿಸಿಟಿ
    ಶ್ರೀಲಂಕಾ – 9 ಪಂದ್ಯ – 55.56 ಪಿಸಿಟಿ
    ನ್ಯೂಜಿಲೆಂಡ್‌ – 11 ಪಂದ್ಯ – 54.55 ಪಿಸಿಟಿ
    ದಕ್ಷಿಣ ಆಫ್ರಿಕಾ – 8 ಪಂದ್ಯ – 54.17 ಪಿಸಿಟಿ

    24 ವರ್ಷಗಳ ಬಳಿಕ ತವರಿನಲ್ಲಿ ವೈಟ್‌ವಾಶ್‌:
    ನ್ಯೂಜಿಲೆಂಡ್‌ ವಿರುದ್ಧ ನಡೆದ ಮೂರು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಟೀಂ ಇಂಡಿಯಾ ಹೀನಾಯ ಸೋಲು ಕಂಡಿದೆ. ಈ ಸೋಲಿನೊಂದಿಗೆ 24 ವರ್ಷಗಳ ಬಳಿಕ ತವರಿನಲ್ಲಿ ಸರಣಿ ಸೋತ ಅಪಖ್ಯಾತಿಯನ್ನು ಹೆಗಲಿಗೇರಿಸಿಕೊಂಡಿದೆ. ಕೊನೆಯದ್ದಾಗಿ ಭಾರತ 2000 ಇಸವಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ 2 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ವೈಟ್‌ವಾಶ್‌ ಆಗಿತ್ತು. ಇದನ್ನೂ ಓದಿ: 6,6,6,6,6,W,6 – ಒಂದೇ ಓವರ್‌ನಲ್ಲಿ 37 ರನ್‌ ಬಿಟ್ಟುಕೊಟ್ಟ ರಾಬಿನ್ ಉತ್ತಪ್ಪ!



    ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ 3ನೇ ಟೆಸ್ಟ್‌ ಪಂದ್ಯದಲ್ಲಿ ಕಿವೀಸ್‌ ಭಾರತದ ವಿರುದ್ಧ 26 ರನ್‌ಗಳ ಅಮೋಘ ಜಯ ಸಾಧಿಸಿ, ಮೂರು ಪಂದ್ಯಗಳ ಟೆಸ್ಟ್‌ ಸರಣಿಯನ್ನು ಕ್ಲೀನ್‌ಸ್ವೀಪ್ ಮಾಡಿದೆ. ಈ ಮೂಲಕ ಭಾರತದಲ್ಲಿ 3 ಅಥವಾ ಅದಕ್ಕಿಂತ ಹೆಚ್ಚಿನ ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಭಾರತ ತಂಡವನ್ನು ವೈಟ್‌ವಾಶ್‌ ಮಾಡಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

    147 ರನ್‌ಗಳ ಗುರಿ ಬೆನ್ನಟ್ಟಿದ ಭಾರತ ಆರಂಭದಲ್ಲೇ ಪ್ರಮುಖ ವಿಕೆಟ್‌ ಕಳೆದುಕೊಂಡು ಹಿನ್ನಡೆ ಅನುಭವಿಸಿತು. ನಾಯಕ ರೋಹಿತ್‌ ಶರ್ಮಾ, ಯಶಸ್ವಿ ಜೈಸ್ವಾಲ್‌, ಶುಭಮನ್‌ ಗಿಲ್‌, ವಿರಾಟ್‌ ಕೊಹ್ಲಿ ಅಲ್ಪಮೊತ್ತಕ್ಕೆ ಔಟಾಗಿ ಪೆವಿಲಿಯನ್‌ ಪರೇಡ್‌ ನಡೆಸಿದರು. ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಅಲ್ಪಮೊತ್ತಕ್ಕೆ ಔಟಾಗಿದ್ದು ತಂಡಕ್ಕೆ ಭಾರಿ ಆಘಾತ ನೀಡಿತು.

    ಪಂತ್‌ ಬಳಿಕ ಟೀಂ ಇಂಡಿಯಾ ಪಥನ:
    ಪ್ರಮುಖ ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ಟೀಂ ಇಂಡಿಯಾಗೆ ರಿಷಭ್‌ ಪಂತ್‌ ಆಸರೆಯಾದರು. ಕ್ರೀಸ್‌ನಲ್ಲಿ ಭದ್ರವಾಗಿ ನೆಲೆಯೂರಿದ ಪಂತ್‌ 57 ಎಸೆತಗಳಲ್ಲಿ 64 ರನ್‌ (9 ಬೌಂಡರಿ, 1 ಸಿಕ್ಸರ್‌) ಗಳಿಸಿದ್ದರು. ಈ ವೇಳೆ ಸುಲಭವಾಗಿ ಕೀಪರ್‌ ಕ್ಯಾಚ್‌ಗೆ ತುತ್ತಾದರು. ಪಂತ್‌ ಔಟಾದ ಬೆನ್ನಲ್ಲೇ ಅಶ್ವಿನ್‌, ಆಕಾಶ್‌ ದೀಪ್‌, ವಾಷಿಂಗ್ಟನ್‌ ಸುಂದರ್‌ ಬ್ಯಾಕ್‌ ಟು ಬ್ಯಾಕ್‌ ವಿಕೆಟ್‌ ಒಪ್ಪಿಸಿದರು. ಇದರೊಂದಿಗೆ ಟೀಂ ಇಂಡಿಯಾ 121 ರನ್‌ಗಳಿಗೆ ಸರ್ವಪತನ ಕಂಡಿತು.

    ಆಜಾಜ್ ಪಟೇಲ್ ಸ್ಪಿನ್‌ ದಾಳಿಗೆ ತತ್ತರ:
    ಭಾರತೀಯ ಬ್ಯಾಟರ್‌ಗಳ ಎದುರು ಬಿಗಿ ಹಿಡಿತ ಸಾಧಿಸಿದ ಎಡಗೈ ಸ್ಪಿನ್ನರ್‌ ಆಜಾಜ್‌ ಪಟೇಲ್‌ 14.1 ಓವರ್‌ಗಳಲ್ಲಿ 57 ರನ್‌ ಬಿಟ್ಟುಕೊಟ್ಟು 6 ವಿಕೆಟ್‌ ಪಡೆದು ಮಿಂಚಿದರು. ಇದರೊಂದಿಗೆ ಗ್ಲೆನ್‌ ಫಿಲಿಪ್ಸ್‌ 3 ವಿಕೆಟ್‌ ಹಾಗೂ ಮ್ಯಾಟ್‌ ಹೆನ್ರಿ 1 ವಿಕೆಟ್‌ ಕಿತ್ತರು.

    147 ರನ್‌ ಗುರಿ ನೀಡಿದ್ದ ಕಿವೀಸ್‌:
    2ನೇ ದಿನದ ಅಂತ್ಯಕ್ಕೆ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಕಿವೀಸ್‌ 9 ವಿಕೆಟ್‌ಗೆ 171 ರನ್‌ಗಳಿಸಿತ್ತು. 3ನೇ ದಿನ 143 ರನ್‌ಗಳ ಮುನ್ನಡೆಯೊಂದಿಗೆ ಕ್ರೀಸ್‌ ಆರಂಭಿಸಿದ್ದ ನ್ಯೂಜಿಲೆಂಡ್‌ 2ನೇ ಇನ್ನಿಂಗ್ಸ್‌ನಲ್ಲಿ 174 ರನ್‌ಗಳಿಗೆ ಆಲೌಟ್‌ ಆಯಿತು. ಈ ಮೂಲಕ ಭಾರತಕ್ಕೆ 147 ರನ್‌ಗಳ ಗುರಿ ನೀಡಿತ್ತು.

    2ನೇ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ ಪರ ರವೀಂದ್ರ ಜಡೇಜಾ 5 ವಿಕೆಟ್‌, ಅಶ್ವಿನ್‌ 3 ವಿಕೆಟ್‌, ಆಕಾಶ್‌ ದೀಪ್‌ ಮತ್ತು ವಾಷಿಂಗ್ಟನ್‌ ಸುಂದರ್‌ ತಲಾ ಒಂದೊಂದು ವಿಕೆಟ್‌ ಪಡೆದರು.

    ಸಂಕ್ಷಿಪ್ತ ಸ್ಕೋರ್‌:
    ಮೊದಲ ಇನ್ನಿಂಗ್ಸ್‌
    ನ್ಯೂಜಿಲೆಂಡ್‌ – 235/10, ಭಾರತ – 236/10

    2ನೇ ಇನ್ನಿಂಗ್ಸ್‌
    ನ್ಯೂಜಿಲೆಂಡ್‌ – 174/10, ಭಾರತ – 121/10 

  • 24 ವರ್ಷಗಳ ಬಳಿಕ ತವರಿನಲ್ಲಿ ಭಾರತ ವೈಟ್‌ವಾಶ್‌ – ಸರಣಿ ಗೆದ್ದು ಇತಿಹಾಸ ಸೃಷ್ಟಿಸಿದ ಕಿವೀಸ್‌

    24 ವರ್ಷಗಳ ಬಳಿಕ ತವರಿನಲ್ಲಿ ಭಾರತ ವೈಟ್‌ವಾಶ್‌ – ಸರಣಿ ಗೆದ್ದು ಇತಿಹಾಸ ಸೃಷ್ಟಿಸಿದ ಕಿವೀಸ್‌

    ಮುಂಬೈ: ನ್ಯೂಜಿಲೆಂಡ್‌ ವಿರುದ್ಧ ನಡೆದ ಮೂರು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಟೀಂ ಇಂಡಿಯಾ ಹೀನಾಯ ಸೋಲು ಕಂಡಿದೆ. ಈ ಸೋಲಿನೊಂದಿಗೆ 24 ವರ್ಷಗಳ ಬಳಿಕ ತವರಿನಲ್ಲಿ ಸರಣಿ ಸೋತ ಅಪಖ್ಯಾತಿಯನ್ನು ಹೆಗಲಿಗೇರಿಸಿಕೊಂಡಿದೆ. ಕೊನೆಯದ್ದಾಗಿ ಭಾರತ 2000 ಇಸವಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ 2 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ವೈಟ್‌ವಾಶ್‌ ಆಗಿತ್ತು.

    ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ 3ನೇ ಟೆಸ್ಟ್‌ ಪಂದ್ಯದಲ್ಲಿ ಕಿವೀಸ್‌ ಭಾರತದ ವಿರುದ್ಧ 26 ರನ್‌ಗಳ ಅಮೋಘ ಜಯ ಸಾಧಿಸಿ, ಮೂರು ಪಂದ್ಯಗಳ ಟೆಸ್ಟ್‌ ಸರಣಿಯನ್ನು ಕ್ಲೀನ್‌ಸ್ವೀಪ್ ಮಾಡಿದೆ. ಈ ಮೂಲಕ ಭಾರತದಲ್ಲಿ 3 ಅಥವಾ ಅದಕ್ಕಿಂತ ಹೆಚ್ಚಿನ ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಭಾರತ ತಂಡವನ್ನು ವೈಟ್‌ವಾಶ್‌ ಮಾಡಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

    147 ರನ್‌ಗಳ ಗುರಿ ಬೆನ್ನಟ್ಟಿದ ಭಾರತ ಆರಂಭದಲ್ಲೇ ಪ್ರಮುಖ ವಿಕೆಟ್‌ ಕಳೆದುಕೊಂಡು ಹಿನ್ನಡೆ ಅನುಭವಿಸಿತು. ನಾಯಕ ರೋಹಿತ್‌ ಶರ್ಮಾ, ಯಶಸ್ವಿ ಜೈಸ್ವಾಲ್‌, ಶುಭಮನ್‌ ಗಿಲ್‌, ವಿರಾಟ್‌ ಕೊಹ್ಲಿ ಅಲ್ಪಮೊತ್ತಕ್ಕೆ ಔಟಾಗಿ ಪೆವಿಲಿಯನ್‌ ಪರೇಡ್‌ ನಡೆಸಿದರು. ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಅಲ್ಪಮೊತ್ತಕ್ಕೆ ಔಟಾಗಿದ್ದು ತಂಡಕ್ಕೆ ಭಾರಿ ಆಘಾತ ನೀಡಿತು.

    ಪಂತ್‌ ಬಳಿಕ ಟೀಂ ಇಂಡಿಯಾ ಪಥನ:
    ಪ್ರಮುಖ ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ಟೀಂ ಇಂಡಿಯಾಗೆ ರಿಷಭ್‌ ಪಂತ್‌ ಆಸರೆಯಾದರು. ಕ್ರೀಸ್‌ನಲ್ಲಿ ಭದ್ರವಾಗಿ ನೆಲೆಯೂರಿದ ಪಂತ್‌ 57 ಎಸೆತಗಳಲ್ಲಿ 64 ರನ್‌ (9 ಬೌಂಡರಿ, 1 ಸಿಕ್ಸರ್‌) ಗಳಿಸಿದ್ದರು. ಈ ವೇಳೆ ಸುಲಭವಾಗಿ ಕೀಪರ್‌ ಕ್ಯಾಚ್‌ಗೆ ತುತ್ತಾದರು. ಪಂತ್‌ ಔಟಾದ ಬೆನ್ನಲ್ಲೇ ಅಶ್ವಿನ್‌, ಆಕಾಶ್‌ ದೀಪ್‌, ವಾಷಿಂಗ್ಟನ್‌ ಸುಂದರ್‌ ಬ್ಯಾಕ್‌ ಟು ಬ್ಯಾಕ್‌ ವಿಕೆಟ್‌ ಒಪ್ಪಿಸಿದರು. ಇದರೊಂದಿಗೆ ಟೀಂ ಇಂಡಿಯಾ 121 ರನ್‌ಗಳಿಗೆ ಸರ್ವಪತನ ಕಂಡಿತು.

    ಆಜಾಜ್ ಪಟೇಲ್ ಸ್ಪಿನ್‌ ದಾಳಿಗೆ ತತ್ತರ:
    ಭಾರತೀಯ ಬ್ಯಾಟರ್‌ಗಳ ಎದುರು ಬಿಗಿ ಹಿಡಿತ ಸಾಧಿಸಿದ ಎಡಗೈ ಸ್ಪಿನ್ನರ್‌ ಆಜಾಜ್‌ ಪಟೇಲ್‌ 14.1 ಓವರ್‌ಗಳಲ್ಲಿ 57 ರನ್‌ ಬಿಟ್ಟುಕೊಟ್ಟು 6 ವಿಕೆಟ್‌ ಪಡೆದು ಮಿಂಚಿದರು. ಇದರೊಂದಿಗೆ ಗ್ಲೆನ್‌ ಫಿಲಿಪ್ಸ್‌ 3 ವಿಕೆಟ್‌ ಹಾಗೂ ಮ್ಯಾಟ್‌ ಹೆನ್ರಿ 1 ವಿಕೆಟ್‌ ಕಿತ್ತರು.

    147 ರನ್‌ ಗುರಿ ನೀಡಿದ್ದ ಕಿವೀಸ್‌:
    2ನೇ ದಿನದ ಅಂತ್ಯಕ್ಕೆ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಕಿವೀಸ್‌ 9 ವಿಕೆಟ್‌ಗೆ 171 ರನ್‌ಗಳಿಸಿತ್ತು. 3ನೇ ದಿನ 143 ರನ್‌ಗಳ ಮುನ್ನಡೆಯೊಂದಿಗೆ ಕ್ರೀಸ್‌ ಆರಂಭಿಸಿದ್ದ ನ್ಯೂಜಿಲೆಂಡ್‌ 2ನೇ ಇನ್ನಿಂಗ್ಸ್‌ನಲ್ಲಿ 174 ರನ್‌ಗಳಿಗೆ ಆಲೌಟ್‌ ಆಯಿತು. ಈ ಮೂಲಕ ಭಾರತಕ್ಕೆ 147 ರನ್‌ಗಳ ಗುರಿ ನೀಡಿತ್ತು.

    2ನೇ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ ಪರ ರವೀಂದ್ರ ಜಡೇಜಾ 5 ವಿಕೆಟ್‌, ಅಶ್ವಿನ್‌ 3 ವಿಕೆಟ್‌, ಆಕಾಶ್‌ ದೀಪ್‌ ಮತ್ತು ವಾಷಿಂಗ್ಟನ್‌ ಸುಂದರ್‌ ತಲಾ ಒಂದೊಂದು ವಿಕೆಟ್‌ ಪಡೆದರು.

    ಸಂಕ್ಷಿಪ್ತ ಸ್ಕೋರ್‌:
    ಮೊದಲ ಇನ್ನಿಂಗ್ಸ್‌
    ನ್ಯೂಜಿಲೆಂಡ್‌ – 235/10, ಭಾರತ – 236/10

    2ನೇ ಇನ್ನಿಂಗ್ಸ್‌
    ನ್ಯೂಜಿಲೆಂಡ್‌ – 174/10, ಭಾರತ – 121/10 

  • ಇತಿಹಾಸ ಸೃಷ್ಟಿಸಿದ ಕಿವೀಸ್ – 12 ವರ್ಷಗಳ ಬಳಿಕ ಭಾರತದಲ್ಲಿ ಟೆಸ್ಟ್ ಸರಣಿ ಗೆಲುವು

    ಇತಿಹಾಸ ಸೃಷ್ಟಿಸಿದ ಕಿವೀಸ್ – 12 ವರ್ಷಗಳ ಬಳಿಕ ಭಾರತದಲ್ಲಿ ಟೆಸ್ಟ್ ಸರಣಿ ಗೆಲುವು

    – ಕಳಪೆ ಬ್ಯಾಟಿಂಗ್‌ನಿಂದ ಬೆಲೆತೆತ್ತ ಭಾರತ

    ಪುಣೆ: ಅಗ್ರ ಕ್ರಮಾಂಕದ ಬ್ಯಾಟರ್‌ಗಳ ಕಳಪೆ ಪ್ರದರ್ಶನದಿಂದಾಗಿ ಭಾರತ ತಂಡ (Team India) ಬೆಲೆತೆತ್ತಿದೆ. 2ನೇ ಟೆಸ್ಟ್ ಪಂದ್ಯದಲ್ಲೂ ಭಾರತಕ್ಕೆ ಹೀನಾಯ ಸೋಲಾಗಿದ್ದು, ಕಿವೀಸ್ 113 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಇದರೊಂದಿಗೆ 12 ವರ್ಷಗಳ ಬಳಿಕ ಭಾರತದಲ್ಲಿ ಟೆಸ್ಟ್ ಸರಣಿ (Test series) ಗೆದ್ದ ತಂಡ ಎಂಬ ಹೆಗ್ಗಳಿಕೆಗೆ ಕಿವೀಸ್ ಪಾತ್ರವಾಗಿದೆ.

    ಪುಣೆ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ 359 ರನ್‌ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ 245 ರನ್‌ಗಳಿಗೆ ಸರ್ವಪತನ ಕಂಡು ಸೋಲೊಪ್ಪಿಕೊಂಡಿದೆ. ಈ ಮೂಲಕ 1983ರ ಬಳಿಕ ಒಂದೇ ವರ್ಷದಲ್ಲಿ 3 ಟೆಸ್ಟ್ ಪಂದ್ಯ ಸೋತ ಅಪಖ್ಯಾತಿ ಪಡೆದಿದೆ. 1969ರಲ್ಲಿ ಒಂದೇ ವರ್ಷದಲ್ಲಿ 4 ಟೆಸ್ಟ್ ಹಾಗೂ 1983ರಲ್ಲಿ 3 ಟೆಸ್ಟ್ ಸೋತಿದ್ದ ಭಾರತ, 2024ರಲ್ಲಿ 3 ಟೆಸ್ಟ್ ಕಳೆದುಕೊಂಡಿದೆ. ಇದನ್ನೂ ಓದಿ: ಲಕ್ನೋ ತಂಡದಿಂದ ಕೆ.ಎಲ್ ರಾಹುಲ್ ರಿಲೀಸ್ – ಆರ್‌ಸಿಬಿ ಸೇರ್ತಾರಾ ಕನ್ನಡಿಗ?

    301 ರನ್‌ಗಳ ಮುನ್ನಡೆಯೊಂದಿಗೆ ಮೂರನೇ ದಿನದ ಆಟ ಆರಂಭಿಸಿದ ಕಿವೀಸ್ 2ನೇ ಇನ್ನಿಂಗ್ಸ್‌ನಲ್ಲಿ 255 ರನ್ ಗಳಿಸಿ, ಭಾರತಕ್ಕೆ 359 ರನ್‌ಗಳ ಗುರಿ ನೀಡಿತ್ತು. ಬೃಹತ್ ಮೊತ್ತದ ಗುರಿ ಬೆನ್ನಟಿದ ಭಾರತ ಕಿವೀಸ್ ಸ್ಪಿನ್ ದಾಳಿಗೆ ಮಕಾಡೆ ಮಲಗಿತು. ಕಿವೀಸ್ ಸ್ಪಿನ್ ಮಾಂತ್ರಿಕ ಮಿಚೆಲ್ ಸ್ಯಾಂಟ್ನರ್, ಗ್ಲೆನ್ ಫಿಲಿಪ್ಸ್ ಅವರ ದಾಳಿಗೆ ತತ್ತರಿಸಿ ರನ್ ಕದಿಯಲು ತಿಣುಕಾಡಿತ್ತು. ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಹೊರತುಪಡಿಸಿ ಉಳಿದ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಅಲ್ಪಮೊತ್ತಕ್ಕೆ ಪೆವಿಲಿಯನ್ ಸೇರಿಕೊಂಡರು. ಇದು ಟೀಂ ಇಂಡಿಯಾ ಸೋಲಿಗೆ ಕಾರಣವಾಯಿತು.

    ಭಾರತದ ಪರ ಯಶಸ್ವಿ ಜೈಸ್ವಾಲ್ 77 ರನ್ (65 ಎಸೆತ, 3 ಸಿಕ್ಸರ್, 9 ಬೌಂಡರಿ), ಶುಭಮನ್ ಗಿಲ್ 23 ರನ್, ವಿರಾಟ್ ಕೊಹ್ಲಿ 17 ರನ್, ವಾಷಿಂಗ್ಟನ್ ಸುಂದರ್ 21 ರನ್, ಸರ್ಫರಾಜ್ ಖಾನ್ 9 ರನ್, ರವಿಚಂದ್ರನ್ ಅಶ್ವಿನ್ 18 ರನ್, ನಾಯಕ ರೋಹಿತ್ ಶರ್ಮಾ (Rohit Sharma) 8 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಕೊನೆಯವರೆಗೂ ಏಕಾಂಗಿ ಹೋರಾಟ ನಡೆಸಿದ ರವೀಂದ್ರ ಜಡೇಜಾ 84 ಎಸೆತಗಳಲ್ಲಿ 42 ರನ್‌ ಗಳಿಸಿದ್ದರು. ಆದ್ರೆ ಸಿಕ್ಸರ್‌ ಸಿಡಿಸುವ ಭರದಲ್ಲಿ ಬೌಂಡರಿ ಲೈನ್‌ಬಳಿ ಕ್ಯಾಚ್‌ಗೆ ತುತ್ತಾದರು. ಇದನ್ನೂ ಓದಿ: ನಾನು ಅವರ ಹಾಸಿಗೆಯ ಮೇಲೆ ಕುಳಿತಿದ್ದೆ – ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಮತ್ತೆ ಸಾಕ್ಷಿ ಮಲಿಕ್‌ ಆರೋಪ

    ಮಿಂಚಿದ ಮಿಚೆಲ್
    ಮೊದಲ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾ ವಿರುದ್ಧ 19.3 ಓವರ್‌ಗಳಲ್ಲಿ 53 ರನ್ ಬಿಟ್ಟುಕೊಟ್ಟು 7 ವಿಕೆಟ್ ಕಬಳಿಸಿದ್ದ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ 2ನೇ ಇನ್ನಿಂಗ್ಸ್ನಲ್ಲೂ ಭಾರತದ ಬ್ಯಾಟರ್‌ಗಳ ಮೇಲೆ ಹಿಡಿತ ಸಾಧಿಸಿದರು. 29. ಓವರ್‌ಗಳಲ್ಲಿ 104 ರನ್ ಬಿಟ್ಟುಕೊಟ್ಟು 6 ವಿಕೆಟ್ ಪಡೆದು ಮಿಂಚಿದರು. ಇದರೊಂದಿಗೆ ಅಜಾಝ್ ಪಟೇಲ್ 2 ವಿಕೆಟ್, ಗ್ಲೆನ್ ಫಿಲಿಪ್ಸ್ 1 ವಿಕೆಟ್ ಪಡೆದರು.

    2ನೇ ಇನ್ನಿಂಗ್ಸ್‌ನಲ್ಲಿ ಕಿವೀಸ್ ಸವಾಲಿನ ಮೊತ್ತ:
    ದ್ವಿತೀಯ ಇನ್ನಿಂಗ್ಸ್‌ನಲ್ಲಿ ಆರಂಭಿಕ ಸಂಕಷ್ಟದ ಹೊರತಾಗಿಯೂ ಕಿವೀಸ್ 255 ರನ್‌ಗಳ ಸವಾಲಿನ ಮೊತ್ತ ಪೇರಿಸಿತ್ತು. ನಾಯಕ ಲಾಥಮ್ 86 ರನ್ (133 ಎಸೆತ, 10 ಬೌಂಡರಿ) ಗಳಿಸಿದ್ರೆ, ವಿಲ್ ಯಂಗ್ 23 ರನ್, ಡೆವೋನ್ ಕಾನ್ವೆ 17 ರನ್, ಡೇರಿಲ್ ಮಿಚೆಲ್ 18 ರನ್ ಹಾಗೂ ರಚಿನ್ ರವೀಂದ್ರ 9 ರನ್, ಟಾಮ್ ಬ್ಲಂಡೆಲ್ 41 ರನ್, ಗ್ಲೆನ್ ಫಿಲಿಪ್ಸ್ 48 ರನ್‌ಗಳ ಕೊಡುಗೆ ನೀಡಿದರು.

    ಸುಂದರ್ ಸೂಪರ್:
    ಮೊದಲ ಇನ್ನಿಂಗ್ಸ್‌ನಲ್ಲಿ 7 ವಿಕೆಟ್ ಕಬಳಿಸಿ ಟೀಂ ಇಂಡಿಯಾಕ್ಕೆ ಆಧಾರವಾಗಿದ್ದ ಆಫ್ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ 2ನೇ ಇನ್ನಿಂಗ್ಸ್‌ನಲ್ಲೂ ತಮ್ಮ ಬೌಲಿಂಗ್ ದಾಳಿಯಲ್ಲಿ ಹಿಡಿತ ಸಾಧಿಸಿದರು. 19. ಓವರ್‌ಗಳಲ್ಲಿ 56 ರನ್ ಬಿಟ್ಟುಕೊಟ್ಟು 4 ವಿಕೆಟ್ ಪಡೆದರು, ಒದರೊಂದಿಗೆ ರವೀಂದ್ರ ಜಡೇಜಾ 3 ವಿಕೆಟ್ ಹಾಗೂ ಅಶ್ವಿನ್ 1 ವಿಕೆಟ್ ಪಡೆದರು. ಇದನ್ನೂ ಓದಿ: IPLನಲ್ಲಿ ಡೆಲ್ಲಿ ಟೀಂ ಬಿಟ್ಟು ಬೇರೆ ತಂಡದ ಕ್ಯಾಪ್ಟನ್ ಆಗ್ತಾರಾ ರಿಷಬ್ ಪಂತ್?

    ಮೊದಲ ಇನ್ನಿಂಗ್ಸ್‌ನಲ್ಲೂ ಭಾರತ ಕಳಪೆ ಬ್ಯಾಟಿಂಗ್:
    ಮೊದಲ ಇನ್ನಿಂಗ್ಸ್‌ನಲ್ಲಿ ಕಿವೀಸ್ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ ದಾಳಿಗೆ ತತ್ತರಿಸಿದ ಭಾರತದ ಬ್ಯಾರ್ಟ್ಗಳು ರನ್ ಕದಿಯಲು ತಿಣುಕಾಡಿದರು. ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್ ತಲಾ 30 ರನ್ ಗಳಿಸಿದ್ರೆ ರವೀಂದ್ರ ಜಡೇಜಾ 38 ರನ್ ಗಳಿಸಿದ್ರು. ಇನ್ನುಳಿದಂತೆ ರಿಷಭ್ ಪಂತ್ 18 ರನ್, ಸರ್ಫರಾಜ್ ಖಾನ್ 11 ರನ್, ರವಿಚಂದ್ರನ್ ಅಶ್ವಿನ್ 4 ರನ್, ಆಕಾಶ್ ದೀಪ್ 6 ರನ್ ಗಳಿಸಿದ್ರೆ, ವಾಷಿಂಗ್ಟನ್ ಸುಂದರ್ 18 ರನ್ ಗಳಿಸಿ ಅಜೇಯರಾಗುಳಿದರು. ನಾಯಕ ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ ಶೂನ್ಯ ಸುತ್ತಿದರು.

  • ಒಂದೇ ದಿನ 14 ವಿಕೆಟ್‌ ಉಡೀಸ್‌ – ಭಾರತದ ವಿರುದ್ಧ ಕಿವೀಸ್‌ಗೆ 301 ರನ್‌ಗಳ ಭರ್ಜರಿ ಮುನ್ನಡೆ

    ಒಂದೇ ದಿನ 14 ವಿಕೆಟ್‌ ಉಡೀಸ್‌ – ಭಾರತದ ವಿರುದ್ಧ ಕಿವೀಸ್‌ಗೆ 301 ರನ್‌ಗಳ ಭರ್ಜರಿ ಮುನ್ನಡೆ

    – ಮಿಚೆಲ್‌ ಸ್ಯಾಂಟ್ನರ್‌, ಸುಂದರ್‌ ಸೂಪರ್‌

    ಪುಣೆ: ಇಲ್ಲಿನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ (Newzealand) ವಿರುದ್ಧದ 2ನೇ ಟೆಸ್ಟ್ ಪಂದ್ಯದ 2ನೇ ದಿನದಾಟದಲ್ಲಿ ಸ್ಪಿನ್ನರ್‌ಗಳ ಆರ್ಭಟವೇ ಮುಂದುವರಿದಿದ್ದು, ಉಭಯ ತಂಡಗಳ ಒಟ್ಟು 14 ವಿಕೆಟ್‌ ಪತನಗೊಂಡಿದೆ. ಭಾರತದ (Team India) ವಿರುದ್ಧ ತನ್ನ 2ನೇ ಇನ್ನಿಂಗ್ಸ್‌ ಆರಂಭಿಸಿರುವ ನ್ಯೂಜಿಲೆಂಡ್‌ ತಂಡ 2ನೇ ದಿನದ ಅಂತ್ಯಕ್ಕೆ 5 ವಿಕೆಟ್‌ ನಷ್ಟಕ್ಕೆ 198 ರನ್‌ ಗಳಿಸಿದ್ದು, 301 ರನ್‌ಗಳ ಭರ್ಜರಿ ಮುನ್ನಡೆ ಕಾಯ್ದುಕೊಂಡಿದೆ.

    243 ರನ್‌ಗಳ ಹಿನ್ನಡೆಯೊಂದಿಗೆ ಕ್ರೀಸ್‌ ಆರಂಭಿಸಿದ ಟೀಂ ಇಂಡಿಯಾ ಬ್ಯಾಟರ್‌ಗಳ ವೈಫಲ್ಯದಿಂದಾಗಿ ಕೇವಲ 156 ರನ್‌ಗಳಿಗೆ ಆಲೌಟ್‌ ಆಯಿತು. ಬಳಿಕ ಇನ್ನಿಂಗ್ಸ್‌ ಆರಂಭಿಸಿದ ನ್ಯೂಜಿಲೆಂಡ್‌ ಆರಂಭದಲ್ಲೇ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿತು. ಇದರ ಹೊರತಾಗಿಯೂ ನಾಯಕ ಟಾಮ್‌ ಲಾಥಮ್‌ (Tom Latham) ಅವರ ಅಮೋಘ ಅರ್ಧಶತಕದೊಂದಿಗೆ 200 ರನ್‌ಗಳ ಗಡಿ ಸಮೀಪಿಸುವಲ್ಲಿ ಯಶಸ್ವಿಯಾಯಿತು. ಇದನ್ನೂ ಓದಿ: ಲಕ್ನೋ ತಂಡದಿಂದ ಕೆ.ಎಲ್ ರಾಹುಲ್ ರಿಲೀಸ್ – ಆರ್‌ಸಿಬಿ ಸೇರ್ತಾರಾ ಕನ್ನಡಿಗ?

    ದ್ವಿತೀಯ ಇನ್ನಿಂಗ್ಸ್‌ನಲ್ಲಿ ಲಾಥಮ್‌ 86 ರನ್‌ (133 ಎಸೆತ, 10 ಬೌಂಡರಿ) ಗಳಿಸಿದ್ರೆ, ವಿಲ್‌ ಯಂಗ್‌ 23 ರನ್‌, ಡೆವೋನ್‌ ಕಾನ್ವೆ 17 ರನ್‌, ಡೇರಿಲ್‌ ಮಿಚೆಲ್‌ 18 ರನ್‌ ಹಾಗೂ ರಚಿನ್‌ ರವೀಂದ್ರ 9 ರನ್‌ ಗಳಿಸಿ ಪೆವಿಲಿಯನ್‌ ಸೇರಿದರು. ಇನ್ನೂ ಟಾಮ್‌ ಬ್ಲಂಡೆಲ್‌ 30 ರನ್‌ (70 ಎಸೆತ, 2 ಬೌಂಡರಿ), ಗ್ಲೆನ್‌ ಫಿಲಿಪ್ಸ್‌ 9 ರನ್‌ ಗಳಿಸಿ ಅಜೇಯರಾಗುಳಿದಿದ್ದಾರೆ. ಶನಿವಾರ 3ನೇ ದಿನದಾಟ ಆರಂಭಿಸಲಿದ್ದಾರೆ.

    ಸೂಪರ್‌ ʻಸುಂದರ್‌ʼ:
    ಮೊದಲ ಇನ್ನಿಂಗ್ಸ್‌ನಲ್ಲಿ 7 ವಿಕೆಟ್‌ ಕಬಳಿಸಿ ಟೀಂ ಇಂಡಿಯಾಕ್ಕೆ ಆಧಾರವಾಗಿದ್ದ ಆಫ್‌ ಸ್ಪಿನ್ನರ್‌ ವಾಷಿಂಗ್ಟನ್‌ ಸುಂದರ್‌ (Washington Sundar) 2ನೇ ದಿನದಾಟದಲ್ಲೂ 4 ವಿಕೆಟ್‌ ಪಡೆಯುವ ಮೂಲಕ ಭರ್ಜರಿ ಕಮಾಲ್‌ ಮಾಡಿದ್ದಾರೆ. ಇದರೊಂದಿಗೆ ಸಾಥ್‌ ನೀಡಿರುವ ರವಿಚಂದ್ರನ್‌ ಅಶ್ವಿನ್‌ 1 ವಿಕೆಟ್‌ ಪಡೆದಿದ್ದಾರೆ. ಇದನ್ನೂ ಓದಿ: IPLನಲ್ಲಿ ಡೆಲ್ಲಿ ಟೀಂ ಬಿಟ್ಟು ಬೇರೆ ತಂಡದ ಕ್ಯಾಪ್ಟನ್ ಆಗ್ತಾರಾ ರಿಷಬ್ ಪಂತ್?

    ಫ್ಲಾಪ್‌ ಆದ ಬ್ಯಾಟರ್ಸ್‌:
    ಮೊದಲ ಇನ್ನಿಂಗ್ಸ್‌ನಲ್ಲಿ ಕಿವೀಸ್‌ ಸ್ಪಿನ್ನರ್‌ ಮಿಚೆಲ್‌ ಸ್ಯಾಂಟ್ನರ್‌ ದಾಳಿಗೆ ತತ್ತರಿಸಿದ ಭಾರತದ ಬ್ಯಾರ್ಟ್‌ಗಳು ರನ್‌ ಕದಿಯಲು ತಿಣುಕಾಡಿದರು. ಯಶಸ್ವಿ ಜೈಸ್ವಾಲ್‌, ಶುಭಮನ್‌ ಗಿಲ್‌ ತಲಾ 30 ರನ್‌ ಗಳಿಸಿದ್ರೆ ರವೀಂದ್ರ ಜಡೇಜಾ 38 ರನ್‌ ಗಳಿಸಿದ್ರು. ಇನ್ನುಳಿದಂತೆ ರಿಷಭ್‌ ಪಂತ್‌ 18 ರನ್‌, ಸರ್ಫರಾಜ್‌ ಖಾನ್‌ 11 ರನ್‌, ರವಿಚಂದ್ರನ್‌ ಅಶ್ವಿನ್‌ 4 ರನ್‌, ಆಕಾಶ್‌ ದೀಪ್‌ 6 ರನ್‌ ಗಳಿಸಿದ್ರೆ, ವಾಷಿಂಗ್ಟನ್‌ ಸುಂದರ್‌ 18 ರನ್‌ ಗಳಿಸಿ ಅಜೇಯರಾಗುಳಿದರು. ನಾಯಕ ರೋಹಿತ್‌ ಶರ್ಮಾ, ಜಸ್ಪ್ರೀತ್‌ ಬುಮ್ರಾ ಶೂನ್ಯ ಸುತ್ತಿದರು.

    ಸ್ಯಾಂಟ್ನರ್‌ ಸ್ಪಿನ್‌ ಮಿಂಚು:
    ಕಿವೀಸ್‌ ಪರ ಮೊದಲ ಇನ್ನಿಂಗ್ಸ್‌ನಲ್ಲಿ ಮಿಚೆಲ್‌ ಸ್ಯಾಂಟ್ನರ್‌ 19.3 ಓವರ್‌ಗಳಲ್ಲಿ 53 ರನ್‌ ಬಿಟ್ಟುಕೊಟ್ಟು 7 ವಿಕೆಟ್‌ ಕಿತ್ತರೆ, ಗ್ಲೆನ್‌ ಫಿಲಿಪ್ಸ್‌ 2 ವಿಕೆಟ್‌ ಹಾಗೂ ಟಿಮ್‌ ಸೌಥಿ 1 ವಿಕೆಟ್‌ ಕಿತ್ತರು. ಇದನ್ನೂ ಓದಿ: ಮೊದಲ ದಿನ ಸ್ಪಿನ್ನರ್‌ಗಳ ಆಟ – ವಾಷಿಂಗ್ಟನ್‌, ಅಶ್ವಿನ್‌ ಶೈನ್‌; ಕಿವೀಸ್‌ 259ಕ್ಕೆ ಆಲೌಟ್‌

  • ಮೊದಲ ದಿನ ಸ್ಪಿನ್ನರ್‌ಗಳ ಆಟ – ವಾಷಿಂಗ್ಟನ್‌, ಅಶ್ವಿನ್‌ ಶೈನ್‌; ಕಿವೀಸ್‌ 259ಕ್ಕೆ ಆಲೌಟ್‌

    ಮೊದಲ ದಿನ ಸ್ಪಿನ್ನರ್‌ಗಳ ಆಟ – ವಾಷಿಂಗ್ಟನ್‌, ಅಶ್ವಿನ್‌ ಶೈನ್‌; ಕಿವೀಸ್‌ 259ಕ್ಕೆ ಆಲೌಟ್‌

    ಪುಣೆ:‌ ಇಲ್ಲಿನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್‌ ವಿರುದ್ಧದ 2ನೇ ಟೆಸ್ಟ್‌ ಪಂದ್ಯದ ಮೊದಲ ದಿನದಾಟದಲ್ಲಿ ಭಾರತೀಯ ಸ್ಪಿನ್ನರ್‌ಗಳಾದ ವಾಷಿಂಗ್ಟನ್‌ ಸುಂದರ್‌ (Washington Sundar) ಹಾಗೂ ರವಿಚಂದ್ರನ್‌ ಅಶ್ವಿನ್‌ ಭರ್ಜರಿ ಕಮಾಲ್‌ ಮಾಡಿದ್ದಾರೆ.

    45 ತಿಂಗಳ ಬಳಿಕ ಟೆಸ್ಟ್‌ ಕ್ರಿಕೆಟ್‌ ಅಖಾಡಕ್ಕಿಳಿದ ವಾಷಿಂಗ್ಟನ್‌ ಸುಂದರ್‌ 23.1 ಓವರ್‌ಗಳಲ್ಲಿ 59 ರನ್‌ ಬಿಟ್ಟುಕೊಟ್ಟು ಪ್ರಮುಖ 7 ವಿಕೆಟ್‌ ಕಬಳಿಸುವ ಮೂಲಕ ಕಿವೀಸ್‌ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಲು ಸಹಕಾರಿಯಾಗಿದ್ದಾರೆ. ಇದರೊಂದಿಗೆ ಸ್ಪಿನ್‌ ಮಾಂತ್ರಿಕ ಆರ್‌. ಅಶ್ವಿನ್‌ (Ravichandran Ashwin) 3 ವಿಕೆಟ್‌ ಪಡೆದು, ಮೊದಲ ದಿನದಾಟದಲ್ಲಿ ಸ್ಪಿನ್ನರ್‌ಗಳೇ ಮೇಲುಗೈ ಸಾಧಿಸಿದ್ದಾರೆ.

    ಭಾರತದ (Team India) ವಿರುದ್ಧ ನಡೆಯುತ್ತಿರುವ 2ನೇ ಟೆಸ್ಟ್‌ ಪಂದ್ಯದಲ್ಲಿ ಮೊದಲ ದಿನವೇ ಕಿವೀಸ್‌ (Newzealand) 79.1 ಓವರ್‌ಗಳಲ್ಲಿ 259 ರನ್‌ಗಳಿಗೆ ಆಲೌಟ್‌ ಆಗಿದೆ. ಬಳಿಕ ತನ್ನ ಸರದಿಯ ಮೊದಲ ಇನ್ನಿಂಗ್ಸ್‌ ಆರಂಭಿಸಿರುವ ಟೀಂ ಇಂಡಿಯಾ 11 ಓವರ್‌ಗಳಲ್ಲಿ 16 ರನ್‌ಗಳಿಗೆ ಒಂದು ವಿಕೆಟ್‌ ಕಳೆದುಕೊಂಡಿದೆ. ಈ ಮೂಲಕ 243 ರನ್‌ ಹಿನ್ನಡೆಯಲ್ಲಿದೆ. ರೋಹಿತ್‌ ಶರ್ಮಾ (Rohit Sharma) ಡಕೌಟ್‌ ಆಗಿ ಪೆವಿಲಿಯನ್‌ಗೆ ಮರಳಿದ್ದಾರೆ. ಇನ್ನೂ ಯಶಸ್ವಿ ಜೈಸ್ವಾಲ್‌ (6 ರನ್‌), ಶುಭಮನ್‌ ಗಿಲ್‌ (10 ರನ್‌) ಗಳಿಸಿ ಕ್ರೀಸ್‌ನಲ್ಲಿದ್ದು, ಶುಕ್ರವಾರ 2ನೇ ದಿನದ ಇನ್ನಿಂಗ್ಸ್‌ ಆರಂಭಿಸಲಿದ್ದಾರೆ.

    ಸ್ಪಿನ್ನರ್‌ಗಳ ಆಟಕ್ಕೆ ನೆಲಕಚ್ಚಿದ ಕಿವೀಸ್‌:
    ಮೊದಲ ಟೆಸ್ಟ್‌ ಪಂದ್ಯದಲ್ಲಿ ಅಬ್ಬರಿಸಿದ್ದ ಕಿವೀಸ್‌ ಬ್ಯಾಟರ್‌ಗಳು 2ನೇ ಟೆಸ್ಟ್‌ ಪಂದ್ಯದಲ್ಲಿ ನೆಲ ಕಚ್ಚಿದರು. ಡಿವೋನ್‌ ಕಾನ್ವೆ, ರಚಿನ್‌ ರವೀಂದ್ರ, ಮಿಚೆಲ್‌ ಸ್ಯಾಂಟ್ನರ್‌ ಹೊರತುಪಡಿಸಿದ್ರೆ, ಉಳಿದ ಅಗ್ರ ಕ್ರಮಾಂಕದ ಬ್ಯಾರಟ್‌ಗಳು ಅಲ್ಪಮೊತ್ತಕ್ಕೆ ಪೆವಿಲಿಯನ್‌ಗೆ ಮರಳಿದರು.

    ಕಿವೀಸ್‌ ಪರ ಡಿವೋನ್‌ ಕಾನ್ವೆ 76 ರನ್‌ (141 ಎಸೆತ, 11 ಬೌಂಡರಿ), ರಚಿನ್‌ ರವೀಂದ್ರ 65 ರನ್‌ (105 ಎಸೆತ, 5 ಬೌಂಡರಿ, 1 ಸಿಕ್ಸರ್)‌ ಗಳಿಸಿದ್ರೆ, ಮಿಚೆಲ್‌ ಸ್ಯಾಂಟ್ನರ್‌ 33 ರನ್‌, ಟಾಮ್‌ ಲಾಥಮ್‌ 15 ರನ್‌, ವಿಲ್‌ ಯಂಗ್‌, ಡೇರಿಲ್‌ ಮಿಚೆಲ್‌ ತಲಾ 18 ರನ್‌, ಟಾಮ್‌ ಬ್ಲಂಡೆಲ್‌ 3 ರನ್‌, ಗ್ಲೆನ್‌ ಫಿಲಿಪ್ಸ್‌ 9 ರನ್‌, ಟಿಮ್‌ ಸೌಥಿ 5 ರನ್‌ ಆಜಾಝ್‌ ಪಟೇಲ್‌ 4 ರನ್‌ ಗಳಿಸಿ ಔಟಾದರು. ವಿಲಿಯಂ ಒ ರೂರ್ಕಿ ಒಂದು ಎಸೆತವನ್ನೂ ಎದುರಿಸದೇ ಅಜೇಯರಾಗುಳಿದರು.

  • ರತನ್‌ ಟಾಟಾ ಅಂತಿಮ ದರ್ಶನ ಪಡೆದ ಕ್ರಿಕೆಟ್‌ ದೇವರು

    ರತನ್‌ ಟಾಟಾ ಅಂತಿಮ ದರ್ಶನ ಪಡೆದ ಕ್ರಿಕೆಟ್‌ ದೇವರು

    ಮುಂಬೈ: ಖ್ಯಾತ ಕೈಗಾರಿಕೋದ್ಯಮಿ ರತನ್ ಟಾಟಾ (Ratan Tata) ಅವರ ನಿಧನದ ಆಘಾತಕಾರಿ ಸುದ್ದಿಯನ್ನು ಕೇಳಿ ಇಡೀ ಭಾರತ ಕಂಬನಿ ಮಿಡಿದಿದೆ. ಬುಧವಾರ ತಡರಾತ್ರಿ ರತನ್‌ ಟಾಟಾ (86) ಕೊನೆಯುಸಿರೆಳೆದಿದ್ದಾರೆ. ಭಾರತದ ಲಕ್ಷಾಂತರ ಜನ ಸಂತಾಪ ಸೂಚಿಸುತ್ತಿದ್ದಾರೆ. ಇದಕ್ಕೆ ಕ್ರಿಕೆಟ್‌ ದೇವರು ತೆಂಡೂಲ್ಕರ್ ಸಹ ಕಂಬನಿ ಮಿಡಿದ್ದಾರೆ. ಟಾಟಾ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಲು ಟಾಟಾ ನಿವಾಸಕ್ಕೆ ಭೇಟಿ ನೀಡಿದ್ದಾರೆ.

    ಈ ನಡುವೆ ಸಚಿನ್ ( Sachin Tendulkar) ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಇತ್ತೀಚೆಗೆ ರತನ್ ಟಾಟಾ ಅವರೊಂದಿಗಿ ಭೇಟಿಯನ್ನು ನೆನಪು ಮಾಡಿಕೊಂಡಿದ್ದಾರೆ. ಅವರ ಜೊತೆಗಿನ ಫೋಟೋದೊಂದಿಗೆ ಭಾವನಾತ್ಮಕ ಸಂದೇಶವೊಂದನ್ನೂ ಬರೆದುಕೊಂಡಿದ್ದಾರೆ. ಅವರೊಂದಿಗೆ ನಾನು ಸಮಯ ಕಳೆಯುವುದಕ್ಕೆ ಅವಕಾಶ ಸಿಕ್ಕಿದೆ. ಇದರಿಂದ ನಾನು ಅದೃಷ್ಟಶಾಲಿಯಾಗಿದ್ದೇನೆ. ಆದರೆ ಅವರನ್ನ ಭೇಟಿಯಾಗದ ಲಕ್ಷಾಂತರ ಜನರು ಅನುಭವಿಸುವ ದುಃಖವನ್ನು ಇಂದು ನಾನೂ ಅನುಭವಿಸುತ್ತಿದ್ದೇನೆ. ಅಂತಹ ಪ್ರಭಾವಿ ವ್ಯಕ್ತಿ ಅವರು. ಟಾಟಾ ನೀವು ನಿರ್ಮಿಸಿದ ಸಂಸ್ಥೆಗಳು ಮತ್ತು ನೀವು ಸ್ವೀಕರಿಸಿದ ಮೌಲ್ಯಗಳ ಮೂಲಕ ನಿಮ್ಮ ಪರಂಪರೆಯು ಮುಂದುವರಿಯುತ್ತದೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಭ್ರಷ್ಟಾಚಾರ ನಿರ್ಮೂಲನೆ ಮಾಡೋದು ಹೇಗೆ? – ರತನ್ ಟಾಟಾ ನೀಡಿದ ಖಡಕ್‌ ಉತ್ತರ ಇದು

     

    View this post on Instagram

     

    A post shared by Sachin Tendulkar (@sachintendulkar)

    ಭಾರತದ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ (Rohith Sharma) ಕೂಡ ರತನ್ ಟಾಟಾ ಅವರ ಅಗಲಿಕೆಗೆ ತಮ್ಮ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿ ಕಂಬನಿ ಮಿಡಿದಿದ್ದಾರೆ. ಸರ್ ನೀವು ಚಿನ್ನದಂತ ಹೃದಯ ಹೊಂದಿರುವ ವ್ಯಕ್ತಿ. ನೀವು ನಿಜವಾಗಿಯೂ ಕಾಳಜಿವಹಿಸುವ ಮತ್ತು ಎಲ್ಲರ ಜೀವನ ಉತ್ತಮಗೊಳಿಸಲು ತನ್ನ ಜೀವನ ನಡೆಸಿದ ವ್ಯಕ್ತಿಯಾಗಿ ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತೀರಿ ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ಅನೇಕರು ಕೂಡ ಟಾಟಾ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ: ರತನ್‌ ಟಾಟಾರದ್ದು ಸಮಗ್ರ ವ್ಯಕ್ತಿತ್ವ: ಸುಧಾ ಮೂರ್ತಿ

    ಟಾಟಾ ಅವರ ಪಾರ್ಥಿವ ಶರೀರವನ್ನು ದಕ್ಷಿಣ ಮುಂಬೈನ ನ್ಯಾಷನಲ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್‌ನಲ್ಲಿ (ಎನ್‌ಸಿಪಿಎ) ಅಂತಿಮ ದರ್ಶನಕ್ಕಿಡಲಾಗಿದೆ. ಸಂಜೆ 4ರ ವರೆಗೆ ಅಂತಿಮ ದರ್ಶನಕ್ಕೆ ಅವಕಾಶವಿದ್ದು, ಬಳಿಕ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಗುತ್ತದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ತಿಳಿಸಿದ್ದಾರೆ.  ಇದನ್ನೂ ಓದಿ: 10 ವರ್ಷಗಳ ಹಿಂದೆ ಉಡುಪಿಗೆ ಆಗಮಿಸಿದ್ದ ರತನ್‌ ಟಾಟಾ

  • ಭಾರತ-ಬಾಂಗ್ಲಾ 2ನೇ ಟೆಸ್ಟ್ ಪಂದ್ಯಕ್ಕೆ ಮಳೆ ಕಾಟ – ಮೊದಲ ದಿನದಂತ್ಯಕ್ಕೆ ಬಾಂಗ್ಲಾದೇಶ 107ಕ್ಕೆ 3 ವಿಕೆಟ್‌

    ಭಾರತ-ಬಾಂಗ್ಲಾ 2ನೇ ಟೆಸ್ಟ್ ಪಂದ್ಯಕ್ಕೆ ಮಳೆ ಕಾಟ – ಮೊದಲ ದಿನದಂತ್ಯಕ್ಕೆ ಬಾಂಗ್ಲಾದೇಶ 107ಕ್ಕೆ 3 ವಿಕೆಟ್‌

    – ದಿಗ್ಗಜ ಅನಿಲ್‌ ಕುಂಬ್ಳೆ ದಾಖಲೆ ಮುರಿದ ಅಶ್ವಿನ್‌

    ಕಾನ್ಪುರ: ಎರಡನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ಹಾಗೂ ಬಾಂಗ್ಲಾದೇಶ (Ind vs Ban) ತಂಡಗಳು ಕಾದಾಟ ನಡೆಸುತ್ತಿವೆ. ಮಳೆಯ ಕಾಟದಿಂದಾಗಿ ಭಾರತ ಮತ್ತು ಬಾಂಗ್ಲಾದೇಶ ತಂಡಗಳ ನಡುವಿನ 2ನೇ ಟೆಸ್ಟ್‌ ಪಂದ್ಯದ (Test Cricket Match) ಮೊದಲ ದಿನ ಕೇವಲ 35 ಓವರ್‌ಗಳಿಗೆ ಮುಕ್ತಾಯಗೊಂಡಿದೆ. ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಬಾಂಗ್ಲಾದೇಶ ತಂಡ ಮೊದಲ ದಿನದ ಅಂತ್ಯಕ್ಕೆ 3 ವಿಕೆಟ್‌ ಕಳೆದುಕೊಂಡು 107 ರನ್‌ ಗಳಿಸಿದೆ.

    ಕಾನ್ಪುರದ (Kanpur) ಗ್ರೀನ್‌ ಪಾರ್ಕ್‌ನಲ್ಲಿ ನಡೆಯುತ್ತಿರುವ 2ನೇ ಟೆಸ್ಟ್‌ ಪಂದ್ಯಕ್ಕೆ ಮಳೆಯ ಕಾಟದಿಂದಾಗಿ ಟಾಸ್‌ ತಡವಾಯಿತು. ಜೊತೆಗೆ ಮೊದಲ ದಿನದಾಟವನ್ನು ಕೇವಲ 35 ಓವರ್‌ಗಳಿಗೆ ಸೀಮಿತಗೊಳಿಸಲಾಯಿತು. ಮೊದಲು ಬ್ಯಾಟಿಂಗ್‌ ಮಾಡಿದ ಬಾಂಗ್ಲಾ ತಂಡ 26 ರನ್‌ಳಿಗೆ ಮೊದಲ ವಿಕೆಟ್‌ ಪಡೆದರೂ ಬಳಿಕ ಮೊಮಿನುಲ್ ಹಕ್, ನಾಯಕ ನಜ್ಮುಲ್‌ ಹೊಸೈನ್‌ ಸ್ಯಾಂಟೋ (Najmul Hossain Shanto) ಅವರ ಸಾಧಾರಣ ಬ್ಯಾಟಿಂಗ್‌ ಪ್ರದರ್ಶನದಿಂದ 100 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು. ಇದನ್ನೂ ಓದಿ: ವೆಸ್ಟ್ ಇಂಡೀಸ್ ಆಲ್‌ರೌಂಡರ್‌ ಡ್ವೇನ್ ಬ್ರಾವೋ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ

    ಶಾದ್ಮಾನ್‌ ಇಸ್ಲಾಂ 24 ರನ್‌ ಗಳಿಸಿದ್ರೆ, ಸ್ಯಾಂಟೋ 31 ರನ್‌ ಗಳಿಸಿ ಔಟಾದರು. ಮತ್ತೊಬ್ಬ ಆರಂಭಿಕ ಝಾಕಿರ್‌ ಹಸನ್‌ ಶೂನ್ಯ ಸುತ್ತಿದರು. ಇನ್ನೂ 81 ಎಸೆತಗಳಲ್ಲಿ 40 ರನ್‌ ಗಳಿಸಿರುವ ಮೊಮಿನುಲ್ ಹಕ್ ಮತ್ತು ಮುಶ್ಫಿಕರ್ ರಹೀಮ್ 6 ರನ್‌ ಗಳಿಸಿದ್ದು, ಕ್ರೀಸ್‌ನಲ್ಲಿದ್ದಾರೆ. ಶನಿವಾರ 2ನೇ ದಿನದಾಟ ಮುಂದುವರಿಸಲಿದ್ದಾರೆ.

    ಮೊದಲ ಟೆಸ್ಟ್‌ ಪಂದ್ಯದ 2ನೇ ಇನ್ನಿಂಗ್ಸ್‌ನಲ್ಲಿ 6 ವಿಕೆಟ್‌ಪಡೆದು ದಿಗ್ಗಜರ ಎಲೈಟ್‌ ಪಟ್ಟಿ ಸೇರಿದ್ದ ಆರ್‌. ಅಶ್ವಿನ್‌ 2ನೇ ಟೆಸ್ಟ್‌ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಒಂದು ವಿಕೆಟ್‌ ಪಡೆದರೆ, ವೇಗಿ ಆಕಾಶ್‌ ದೀಪ್‌ 2 ವಿಕೆಟ್‌ ಪಡೆದು ಮಿಂಚಿದ್ದಾರೆ. ಇದನ್ನೂ ಓದಿ: IPL 2025 Auction: ಮೆಗಾ ಹರಾಜಿಗೂ ಮುನ್ನ ಬಿಸಿಸಿಐನಿಂದ ಆಗುತ್ತಾ ಪ್ರಮುಖ ಬದಲಾವಣೆ?

    ದಿಗ್ಗಜ ಅನಿಲ್‌ ಕುಂಬ್ಳೆ ದಾಖಲೆ ಮುರಿದ ಅಶ್ವಿನ್‌:
    ಬಾಂಗ್ಲಾ ನಾಯಕ ನಜ್ಮುಲ್‌ ಹುಸೇನ್‌ ಸ್ಯಾಂಟೋ ಅವರ ವಿಕೆಟ್‌ ಔಟ್‌ ಮಾಡಿದ ಭಾರತದ ರವಿಚಂದ್ರನ್‌ ಅಶ್ವಿನ್‌ (Ravichandran Ashwin) ಅವರು ಏಷ್ಯಾದಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಸ್ಪಿನ್‌ ದಿಗ್ಗಜ ಅನಿಲ್‌ ಕಂಬ್ಳೆಯನ್ನು ಹಿಂದಿಕ್ಕಿದ್ದಾರೆ. ಆರ್‌ ಅಶ್ವಿನ್‌ ಎಸೆದ 29ನೇ ಓವರ್‌ನ ಕೊನೆಯ ಎಸೆತವನ್ನು ಅರಿಯುವಲ್ಲಿ ವಿಫಲರಾದ ಸ್ಯಾಂಟೋ ಚೆಂಡನ್ನು ಪ್ಯಾಡ್‌ ಮೇಲೆ ತಾಗಿಸಿಕೊಂಡರು. ಆ ಮೂಲಕ ಎಲ್‌ಬಿಡಬ್ಲ್ಯು ಔಟ್‌ಗೆ ತುತ್ತಾದರು. ಇದರೊಂದಿಗೆ ಅಶ್ವಿನ್‌ ಅವರು ಏಷ್ಯಾ ನೆಲದಲ್ಲಿ 420 ಟೆಸ್ಟ್‌ ವಿಕೆಟ್‌ಗಳನ್ನು ಪೂರ್ಣಗೊಳಿಸಿದರು. ಆ ಮೂಲಕ 419 ವಿಕೆಟ್‌ಗಳನ್ನು ಕಬಳಿಸಿದ್ದ ಸ್ಪಿನ್ ದಿಗ್ಗಜ ಅನಿಲ್‌ ಕುಂಬ್ಳೆ ದಾಖಲೆಯನ್ನು ಮುರಿದಿದ್ದಾರೆ.

  • IPL 2025 | ಮುಂಬೈ, ಆರ್‌ಸಿಬಿಗೆ ಬಿಗ್‌ ಶಾಕ್‌ – ದೈತ್ಯ ಆಟಗಾರರನ್ನೇ ಹೊರದಬ್ಬಿದ ಫ್ರಾಂಚೈಸಿ

    IPL 2025 | ಮುಂಬೈ, ಆರ್‌ಸಿಬಿಗೆ ಬಿಗ್‌ ಶಾಕ್‌ – ದೈತ್ಯ ಆಟಗಾರರನ್ನೇ ಹೊರದಬ್ಬಿದ ಫ್ರಾಂಚೈಸಿ

    ಮುಂಬೈ: 2025ರ ಐಪಿಎಲ್‌ಗೆ (IPL 2025) ನಡೆಯಲಿರುವ ಮೆಗಾ ಹರಾಜಿಗೂ ಮುನ್ನವೇ ಫ್ರಾಂಚೈಸಿಗಳು ತಂಡದಲ್ಲಿ ಉಳಿಸಿಕೊಳ್ಳಬಹುದಾದದ ಮತ್ತು ಬಿಡುಗಡೆ ಮಾಡಬಹುದಾದ ಆಟಗಾರರ ಪಟ್ಟಿಯನ್ನು ಸಿದ್ಧಪಡಿಸಿಕೊಂಡಿವೆ.

    ಮೂಲಗಳ ಪ್ರಕಾರ, ಫ್ರಾಂಚೈಸಿಗಳು ರೈಟ್‌ ಟು ಮ್ಯಾಚ್‌ (RTM Card) ಸೇರಿದಂತೆ ತಂಡದಲ್ಲಿ 6ಕ್ಕಿಂತ ಹೆಚ್ಚು ಆಟಗಾರರನ್ನು ಉಳಿಸಿಕೊಳ್ಳಲು ಅನುಮತಿಸುವುದಿಲ್ಲ ಎಂದು ನಿರೀಕ್ಷಿಸಿವೆ. ಆದಾಗ್ಯೂ ಕೆಲ ಫ್ರಾಂಚೈಸಿಗಳು ಆರ್‌ಟಿಎಂ ಬಳಕೆ ಸೇರಿ 8 ಆಟಗಾರರನ್ನ ಉಳಿಸಿಕೊಳ್ಳಲು ಅನುಮತಿ ಕೇಳಿವೆ. ಏಕೆಂದರೆ ಬಿಸಿಸಿಐ (BCCI) ತೀರ್ಮಾನದ ಮೇಲೆ ಈ ಬಾರಿ ಸಿಎಸ್‌ಕೆ ಪರ ಎಂ.ಎಸ್‌ ಧೋನಿ ಕಣಕ್ಕಿಳಿಯುತ್ತಾರಾ? ಇಲ್ವಾ? ಅನ್ನೋದು ನಿರ್ಧಾರವಾಗಲಿದೆ.

    ಈಗಾಗಲೇ ಚೆನ್ನೈ ಸೂಪರ್‌ ಕಿಂಗ್ಸ್‌ (CSK) ಉಳಿಸಿಕೊಳ್ಳಬಹುದಾದ 5 ಆಟಗಾರರ ಕಿರುಪಟ್ಟಿಯನ್ನು ಸಿದ್ಧಪಡಿಸಿದೆ, ಅದರಲ್ಲಿ ನಾಯಕ ರುತುರಾಜ್ ಗಾಯಕ್ವಾಡ್, ರವೀಂದ್ರ ಜಡೇಜಾ, ಶಿವಂ ದುಬೆ ಅವರ ಸ್ಥಾನ ಖಚಿತವಾಗಿದೆ. ಇದೇ ನಿಟ್ಟಿನಲ್ಲಿ ಮುಂಬೈ, ಆರ್‌ಸಿಬಿ, ಲಕ್ನೋ ಸೂಪರ್‌ ಜೈಂಟ್ಸ್‌ ಹಾಗೂ ಕೋಲ್ಕತ್ತಾ ನೈಟ್‌ರೈಡರ್ಸ್‌ (KKR) ಕೆಲ ಆಟಗಾರರನ್ನು ಬಿಡುಗಡೆ ಮಾಡಲು ಪಟ್ಟಿ ಸಿದ್ಧಪಡಿಸಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: CSK ರಿಟೇನ್‌ ಲಿಸ್ಟ್‌ ಔಟ್‌ – ಮಹಿ ಉಳಿಸಿಕೊಳ್ಳಲು ಸ್ಟಾರ್‌ ಆಟಗಾರರನ್ನೇ ಹೊರದಬ್ಬಿದ ಫ್ರಾಂಚೈಸಿ

    ಯಾವ ಫ್ಯಾಂಚೈಸಿಯಿಂದ ಯಾರ‍್ಯಾರು ಔಟ್‌?
    * ಮುಂಬೈ ಇಂಡಿಯನ್ಸ್‌ – ರೋಹಿತ್‌ ಶರ್ಮಾ
    * ಲಕ್ನೋ ಸೂಪರ್‌ ಜೈಂಟ್ಸ್‌ – ಕೆ.ಎಲ್ ರಾಹುಲ್
    * ರಾಯಲ್ ಚಾಲೆಂಜರ್ಸ್ ಬೆಂಗಳೂರು – ಫಾಫ್ ಡು ಪ್ಲೆಸಿಸ್
    * ರಾಯಲ್ ಚಾಲೆಂಜರ್ಸ್ ಬೆಂಗಳೂರು – ಗ್ಲೆನ್ ಮ್ಯಾಕ್ಸ್‌ವೆಲ್
    * ಕೋಲ್ಕತ್ತಾ ನೈಟ್ ರೈಡರ್ಸ್ – ವೆಂಕಟೇಶ್ ಅಯ್ಯರ್

    ಏನಿದು ಆರ್​ಟಿಎಂ ಕಾರ್ಡ್​ ರೂಲ್ಸ್‌?
    ಆರ್​ಟಿಎಂ ಕಾರ್ಡ್‌ (ರೈಟ್ ಟು ಮ್ಯಾಚ್ ಕಾರ್ಡ್ – RTM Card) ಅನ್ವಯ ಫ್ರಾಂಚೈಸಿಯೊಂದು ತನ್ನ ತಂಡದ ಆಟಗಾರನೊಬ್ಬ ಬೇರೆ ತಂಡಕ್ಕೆ ಹೆಚ್ಚಿನ ಮೊತ್ತಕ್ಕೆ ಮಾರಾಟವಾದಾಗ ಅದೇ ಮೊತ್ತಕ್ಕೆ ಆತನನ್ನು ತನ್ನ ತಂಡದಲ್ಲಿ ಉಳಿಸಿಕೊಳ್ಳಲು ಅವಕಾಶ ನೀಡಲಾಗುತ್ತದೆ, ಇದನ್ನು ಆರ್​ಟಿಎಂ ಎನ್ನಲಾಗುತ್ತದೆ. ಈ ಬಾರಿ ಒಂದೇ ಕಾರ್ಡ್​ ಬಳಕೆಗೆ ಅವಕಾಶ ನೀಡುವುದಾಗಿ ಹೇಳಲಾಗಿದೆ. ಹೆಚ್ಚಿನ ಆರ್​ಟಿಎಂ ಬಳಸಲು ಅವಕಾಶ ನೀಡಿದರೇ ಹರಾಜು ಪ್ರಕ್ರಿಯೆ ಮಹತ್ವ ಕಳೆದುಕೊಳ್ಳುತ್ತದೆ ಎಂದು ಬಿಸಿಸಿಐ ಅಭಿಪ್ರಾಯ ಪಟ್ಟಿದೆ. ಇದನ್ನೂ ಓದಿ: ಚೆಸ್ ಒಲಿಂಪಿಯಾಡ್‌ನಲ್ಲಿ ಮಿಂಚಿದ ಟೀಂ ಇಂಡಿಯಾ; ಪುರುಷರ, ಮಹಿಳೆಯರ ಸ್ಪರ್ಧೆಯಲ್ಲಿ ಭಾರತಕ್ಕೆ ಡಬಲ್ ಚಿನ್ನ 

  • ಇಂದಿನಿಂದ ಭಾರತ v/s ಬಾಂಗ್ಲಾ ಟೆಸ್ಟ್‌ ಸರಣಿ ಶುರು – ವರ್ಕೌಟ್‌ ಆಗುತ್ತಾ ಗಂಭೀರ್‌ ಪ್ಲ್ಯಾನ್‌?

    ಇಂದಿನಿಂದ ಭಾರತ v/s ಬಾಂಗ್ಲಾ ಟೆಸ್ಟ್‌ ಸರಣಿ ಶುರು – ವರ್ಕೌಟ್‌ ಆಗುತ್ತಾ ಗಂಭೀರ್‌ ಪ್ಲ್ಯಾನ್‌?

    ಚೆನ್ನೈ: ಭಾರತ ಮತ್ತು ಬಾಂಗ್ಲಾದೇಶ (Ind vs Ban) ತಂಡಗಳ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿ ಇಂದಿನಿಂದ (ಸೆ.19) ಆರಂಭವಾಗುತ್ತಿದೆ. ಚೆನ್ನೈನ ಎಂ.ಎ ಚಿದಂಬರಂ @ಚೆಪಾಕ್ ಕ್ರೀಡಾಂಗಣದಲ್ಲಿ ಸರಣಿಯ ಮೊದಲ ಟೆಸ್ಟ್‌ ಪಂದ್ಯ ನಡೆಯಲಿದೆ.‌ 2023-25ನೇ ಸಾಲಿನ ವಿಶ್ವಟೆಸ್ಟ್‌ ಚಾಂಪಿಯನ್‌ಶಿಪ್‌ (WTC) ಭಾಗವಾಗಿ ನಡೆಯುತ್ತಿರುವ ಟೆಸ್ಟ್‌ ಪಂದ್ಯ ಉಭಯ ತಂಡಗಳಿಗೆ ಅತ್ಯಂತ ಮಹತ್ವದ್ದಾಗಿದೆ.

    ಪ್ರಸಕ್ತ ವರ್ಷದ ಆರಂಭದಲ್ಲಿ ಭಾರತವು ಆಡಿದ್ದ ಕೊನೆಯ ಟೆಸ್ಟ್‌ ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧ 4-1 ಅಂತರದಿಂದ ಜಯ ಸಾಧಿಸಿತ್ತು. ಅದಾದ ಬಳಿಕ ಟೆಸ್ಟ್‌ ಸರಣಿಯಲ್ಲಿ ತಂಡ ಕಣಕ್ಕಿಳಿದಿಲ್ಲ. ಕೊನೆಯ ಬಾರಿಗೆ ಶ್ರೀಲಂಕಾ ವಿರುದ್ಧ ಟಿ20 ಸರಣಿಯಲ್ಲಿ ಗೆಲುವು ಸಾಧಿಸಿದ್ದ ಭಾರತ, ಏಕದಿನ ಸರಣಿ ಸೋತು ತೀವ್ರ ಮುಖಭಂಗ ಅನುಭವಿಸಿತ್ತು. ಏಕದಿನ ಸರಣಿ ಸೋತಿದ್ದ ನಾಯಕ ರೋಹಿತ್‌ ಶರ್ಮಾ (Rohit Sharma) ಪಡೆ, ಇದೀಗ ನಜ್ಮುಲ್ ಹೊಸೈನ್ ಶಾಂಟೊ ಬಳಗದ ವಿರುದ್ಧ ತವರಿನ ಸರಣಿ ಗೆಲುವಿನ ನಿರೀಕ್ಷೆಯಲ್ಲಿದೆ. ಇದನ್ನೂ ಓದಿ: Asian Champions Trophy| ಅತಿಥೇಯ ಚೀನಾಗೆ ಸೋಲು – 5ನೇ ಬಾರಿ ಭಾರತ ಚಾಂಪಿಯನ್‌

    ನೂತನ ಮುಖ್ಯ ಕೋಚ್‌ ಆಗಿ ನೇಮಕಗೊಂಡ ಬಳಿಕ, ಗೌತಮ್‌ ಗಂಭೀರ್‌ ಅವರಿಗೆ ಇದು ಮೊದಲ ಟೆಸ್ಟ್‌ ಸರಯಾಗಿದ್ದು ಸವಾಲಿನದ್ದು ಸಹ ಆಗಿದೆ. ಭಾರತದ ವಿರುದ್ಧ ಬಾಂಗ್ಲಾದೇಶ ತಂಡ ಇದುವರೆಗೂ ಟೆಸ್ಟ್‌ ಸರಣಿ ಗೆದ್ದಿಲ್ಲ. ಹಾಗಂತ, ಬಾಂಗ್ಲಾ ಹುಲಿಗಳನ್ನು ರೋಹಿತ್ ಶರ್ಮಾ ಪಡೆ ಲಘುವಾಗಿ ಪರಿಗಣಿಸುವಂತಿಲ್ಲ. ಏಕೆಂದರೆ ಇತ್ತೀಚೆಗೆ ಬಾಂಗ್ಲಾದೇಶವು ಎಲ್ಲಾ ಮೂರು ಸ್ವರೂಪಗಳಲ್ಲಿಯೂ ಉತ್ತಮ ಪ್ರದರ್ಶನ ನೀಡುತ್ತಿದೆ. ಈ ತಿಂಗಳ ಆರಂಭದಲ್ಲಿ ಆಡಿದ 2 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಪಾಕಿಸ್ತಾನವನ್ನು ಅವರ ತವರಲ್ಲೇ ಬಗ್ಗು ಬಡಿದು 2-0 ಅಂತರದಲ್ಲಿ ವೈಟ್‌ ವಾಶ್‌ ಮಾಡಿತ್ತು. ಅಲ್ಲಿಂದ ಬಾಂಗ್ಲಾ ಆಟಗಾರರು ಭಾರತ ವಿರುದ್ಧವೂ ಸರಣಿ ಗೆಲುವಿನ ಗುರಿಯೊಂದಿಗೆ ಚೆನ್ನೈಗೆ ಆಗಮಿಸಿದ್ದಾರೆ. ‌

    ಭಾರತವೇನಾದರೂ ಚೆನ್ನೈ ಟೆಸ್ಟ್‌ ಗೆದ್ದರೆ, ಟೆಸ್ಟ್‌ ಸ್ವರೂಪದಲ್ಲಿ ಇದೇ ಮೊದಲ ಬಾರಿಗೆ ಸೋಲಿಗಿಂತ ಹೆಚ್ಚು ಗೆಲುವು ಸಂಪಾದಿಸಿದ ಸಾಧನೆ ಮಾಡಿದಂತಾಗುತ್ತದೆ. ಇದನ್ನೂ ಓದಿ: ಭಾರತ-ಬಾಂಗ್ಲಾ ಟೆಸ್ಟ್ ಸರಣಿ: 5 ದಾಖಲೆಗಳನ್ನು ಮುರಿದು ಹೊಸ ದಾಖಲೆ ನಿರ್ಮಿಸ್ತಾರಾ ಅಶ್ವಿನ್?

    ಚೆನ್ನೈ ಹವಾಮಾನ ವರದಿ ಹೇಗಿದೆ?
    ಇಂದು (ಸೆ.19) ಚೆನ್ನೈನಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇದೆ. 1% ಮಳೆ ಸಾಧ್ಯತೆಯಿದ್ದು, 78%, ಆದ್ರತೆ ಇರಲಿದೆ. 11 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ವಿರಾಟ್‌ ಕೊಹ್ಲಿ ನನ್ನ ನಾಯಕತ್ವದಡಿಯಲ್ಲಿ ಆಡಿದ್ದಾರೆ: ತೇಜಸ್ವಿ ಯಾದವ್‌