Tag: ರೋಹಿತ್ ಶರ್ಮಾ

  • ಅಭಿಷೇಕ್‌ ಶತಕದ ಆರ್ಭಟ – ರೋಹಿತ್‌, ವಿರಾಟ್‌, ಗಿಲ್‌ ದಾಖಲೆ ಪುಡಿ ಪುಡಿ

    ಅಭಿಷೇಕ್‌ ಶತಕದ ಆರ್ಭಟ – ರೋಹಿತ್‌, ವಿರಾಟ್‌, ಗಿಲ್‌ ದಾಖಲೆ ಪುಡಿ ಪುಡಿ

    ಮುಂಬೈ: ಇಂಗ್ಲೆಂಡ್‌ ವಿರುದ್ಧ ನಡೆಯುತ್ತಿರುವ ಟಿ20 ಸರಣಿಯ ಕೊನೆಯ ಪಂದ್ಯದಲ್ಲಿ ಟೀಂ ಇಂಡಿಯಾ (Team India) ಸ್ಟಾರ್‌ ಅಭಿಷೇಕ್‌ ಶರ್ಮಾ (Abhishek Sharma) ಹಲವು ದಾಖಲೆಗಳನ್ನ ಪುಡಿ ಪುಡಿ ಮಾಡಿದ್ದಾರೆ.

    ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ ಪರ ಅಭಿಷೇಕ್‌ ಶರ್ಮಾ ಸ್ಫೋಟಕ ಶತಕ ಡಿಸಿದ್ದಾರೆ. 250 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಅಭಿ ಒಟ್ಟು 54 ಎಸೆತಗಳಲ್ಲಿ 135 ರನ್‌ (13 ಸಿಕ್ಸರ್‌, 7 ಬೌಂಡರಿ) ಚಚ್ಚಿದ್ದಾರೆ. ಇದರೊಂದಿಗೆ ದಿಗ್ಗಜರಾದ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ ಸೇರಿ ಶುಭಮನ್‌ ಗಿಲ್‌ ಅವರ ಹೆಸರಿನಲ್ಲಿದ್ದ ವಿಶೇಷ ದಾಖಲೆಯನ್ನು ಪುಡಿಪುಡಿ ಮಾಡಿದ್ದಾರೆ.

    ಈ ಮೂಲಕ ವೇಗದ ಶತಕ ಹಾಗೂ ಅರ್ಧಶತಕ ಸಿಡಿಸಿದ 2ನೇ ಭಾರತೀಯ ಬ್ಯಾಟರ್‌ ಎನಿಸಿಕೊಂಡಿರುವ ಅಭಿ, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಇನ್ನಿಂಗ್ಸ್‌ವೊಂದರಲ್ಲಿ ಅತಿಹೆಚ್ಚು ರನ್‌ ಗಳಿಸಿದ ಆಟಗಾರನಾಗಿ ಎಂಬ ವಿಶೇಷ ಸಾಧನೆಗೆ ಪಾತ್ರರಾಗಿದ್ದಾರೆ. ಅಲ್ಲದೇ ಇನ್ನಿಂಗ್ಸ್‌ವೊಂದರಲ್ಲೇ ಅತಿಹೆಚ್ಚು ಸಿಕ್ಸರ್‌ ಸಿಡಿಸಿದ ಆಟಗಾರನೆಂಬ ಖ್ಯಾತಿಗೂ ಪಾತ್ರರಾಗಿದ್ದಾರೆ. ಇದನ್ನೂ ಓದಿ: ಸ್ಫೋಟಕ ಶತಕ – ಅಭಿಷೇಕ್‌ ಶರ್ಮಾ ಬೆಂಕಿ ಬ್ಯಾಟಿಂಗ್‌ಗೆ ಎರಡೆರಡು ದಾಖಲೆ ಉಡೀಸ್‌

    ಇನ್ನಿಂಗ್ಸ್‌ವೊಂದರಲ್ಲಿ ಅತಿಹೆಚ್ಚು ರನ್‌ ಗಳಿಸಿದ ಭಾರತೀಯರು
    * ಅಭಿಷೇಕ್‌ ಶರ್ಮಾ- 135 ರನ್‌ (54 ಎಸೆತ)
    * ಶುಭಮನ್‌ ಗಿಲ್‌ – 126 (63 ಎಸೆತ)
    * ರುತುರಾಜ್‌ ಗಾಯಕ್ವಾಡ್‌ – 123 ರನ್‌ (57 ಎಸೆತ)
    * ವಿರಾಟ್‌ ಕೊಹ್ಲಿ – 122 ರನ್‌ (61 ಎಸೆತ)
    * ರೋಹಿತ್‌ ಶರ್ಮಾ – 121 ರನ್‌ (69 ಎಸೆತ)

    2ನೇ ವೇಗದ ಅರ್ಧಶತಕ:
    ಮೊದಲ ಓವರ್‌ನಲ್ಲಿ 16 ರನ್‌ ಚಚ್ಚಿ ಸಂಜು ಸ್ಯಾಮ್ಸನ್‌ ಔಟಾಗುತ್ತಿದ್ದಂತೆ ಅಭಿಷೇಕ್‌ ಶರ್ಮಾ ಸ್ಪೋಟಕ ಇನ್ನಿಂಗ್ಸ್‌ ಕಟ್ಟಲು ಮುಂದಾದರು. ಬ್ಯಾಟಿಂಗ್‌ ಸ್ನೇಹಿಯಾದ ವಾಂಖೆಡೆ ಪಿಚ್‌ನಲ್ಲಿ ಸಿಕ್ಸರ್‌, ಬೌಂಡರಿಗಳ ಮಳೆ ಸುರಿಸಿದ ಅಭಿ, ಕೇವಲ 17 ಎಸೆತಗಳಲ್ಲೇ 3 ಬೌಂಡರಿ, 5 ಸಿಕ್ಸರ್‌ಗಳೊಂದಿಗೆ ವೇಗದ ಅರ್ಧಶತಕ ಸಿಡಿಸಿದರು. ಇದು ಟೀಂ ಇಂಡಿಯಾ ಪರ ದಾಖಲಾದ 2ನೇ ವೇಗದ ಅರ್ಧಶತಕವಾಗಿದೆ. 2007ರಲ್ಲಿ ಇಂಗ್ಲೆಂಡ್‌ ವಿರುದ್ಧವೇ ಟೀಂ ಇಂಡಿಯಾ ಮಾಜಿ ಆಟಗಾರ ಯುವರಾಜ್‌ ಸಿಂಗ್‌ ಕೇವಲ 12 ಎಸೆತಗಳಲ್ಲಿ ಸ್ಫೋಟಕ ಅರ್ಧಶತಕ ಸಿಡಿಸಿದ್ದು, ಈವರೆಗಿನ ಸಾರ್ವಕಾಲಿಕ ದಾಖಲೆಯಾಗಿದೆ.

    ಸ್ಫೋಟಕ ಶತಕ ಸಿಡಿಸಿದ 2ನೇ ಭಾರತೀಯ:
    ಇನ್ನೂ ಕೇವಲ 37 ಎಸೆತಗಳಲ್ಲೇ 10 ಸಿಕ್ಸರ್‌, 5 ಬೌಂಡರಿಯೊಂದಿಗೆ ವೇಗದ ಶತಕ ದಾಖಲಿಸಿದ ಅಭಿಷೇಕ್‌ ಶರ್ಮಾ ಟೀಂ ಇಂಡಿಯಾ ಪರ ವೇಗದ ಶತಕ ಸಿಡಿಸಿದ 2ನೇ ಭಾರತೀಯ ಎಂಬ ಖ್ಯಾತಿಗೂ ಪಾತ್ರರಾದರು. 2017ರಲ್ಲಿ ಶ್ರೀಲಂಕಾ ವಿರುದ್ಧ ರೋಹಿತ್‌ ಶರ್ಮಾ ಕೇವಲ 35 ಎಸೆತಗಳಲ್ಲಿ ಶತಕ ಸಿಡಿಸಿದ್ದು, ಭಾರತದ ಪಾಲಿನ ಈವರೆಗಿನ ದಾಖಲೆಯಾಗಿದೆ. ಇದನ್ನೂ ಓದಿ: U19 Women’s T20 World Cup: ಸತತ 2ನೇ ಬಾರಿಗೆ ಟೀಂ ಇಂಡಿಯಾ ಚಾಂಪಿಯನ್‌ 

    248 ರನ್‌ಗಳ ಗುರಿ:
    ಸದ್ಯ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿರುವ ಭಾರತ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 247 ರನ್‌ ಗಳಿಸಿ, ಎದುರಾಳಿ ಇಂಗ್ಲೆಂಡ್‌ ತಂಡಕ್ಕೆ 248 ರನ್‌ಗಳ ಗುರಿ ನೀಡಿದೆ. ಟೀಂ ಇಂಡಿಯಾ ಪರ ಅಭಿಷೇಕ್‌ ಶರ್ಮಾ ಹೊರತುಪಡಿಸಿ ಶಿವಂ ದುಬೆ, 30 ರನ್‌, ತಿಲಕ್‌ ವರ್ಮಾ 24 ರನ್‌, ಸಂಜು ಸ್ಯಾಮ್ಸನ್‌ 16 ರನ್‌, ಅಕ್ಷರ್‌ ಪಟೇಲ್‌ 15 ರನ್‌, ಸೂರ್ಯಕುಮಾರ್‌ ಯಾದವ್‌ 2 ರನ್‌, ಹಾರ್ದಿಕ್‌ ಪಾಂಡ್ಯ ಮತ್ತು ರಿಂಕು ಸಿಂಗ್‌ ತಲಾ 9 ರನ್‌ ಗಳಿಸಿದ್ರು. ಇದನ್ನೂ ಓದಿ: ರಣಜಿ ಟ್ರೋಫಿ ಪಂದ್ಯದ ವೇಳೆ ಮತ್ತೆ ಭದ್ರತಾ ಲೋಪ – ಕೊಹ್ಲಿಯತ್ತ ಧಾವಿಸಿದ ಮೂವರು ಅಭಿಮಾನಿಗಳು

  • ಸ್ಫೋಟಕ ಶತಕ – ಅಭಿಷೇಕ್‌ ಶರ್ಮಾ ಬೆಂಕಿ ಬ್ಯಾಟಿಂಗ್‌ಗೆ ಎರಡೆರಡು ದಾಖಲೆ ಉಡೀಸ್‌

    ಸ್ಫೋಟಕ ಶತಕ – ಅಭಿಷೇಕ್‌ ಶರ್ಮಾ ಬೆಂಕಿ ಬ್ಯಾಟಿಂಗ್‌ಗೆ ಎರಡೆರಡು ದಾಖಲೆ ಉಡೀಸ್‌

    ಮುಂಬೈ: ಇಂಗ್ಲೆಂಡ್‌ ವಿರುದ್ಧ ನಡೆಯುತ್ತಿರುವ 5 ಪಂದ್ಯಗಳ ಟಿ20 ಸರಣಿಯ ಅಂತಿಮ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರ ಅಭಿಷೇಕ್‌ ಶರ್ಮಾ ಸ್ಫೋಟಕ ಶತಕ ಸಿಡಿಸಿ ಎರಡೆರಡು ವಿಶೇಷ ದಾಖಲೆ ಬರೆದಿದ್ದಾರೆ.

    ಟೀಂ ಇಂಡಿಯಾ ಪರ ವೇಗದ ಅರ್ಧಶತಕ ಹಾಗೂ ವೇಗದ ಶತಕ ಸಿಡಿಸಿದ 2ನೇ ಭಾರತೀಯ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಸದ್ಯ 244.89 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್‌ ಮಾಡುತ್ತಿರುವ ಅಭಿಷೇಕ್‌ ಶರ್ಮಾ 49 ಎಸೆತಗಳಲ್ಲಿ 120 ರನ್‌ (10 ಸಿಕ್ಸರ್‌, 6 ಬೌಂಡರಿ) ಸಿಡಿಸಿ ಕ್ರೀಸ್‌ನಲ್ಲಿದ್ದಾರೆ.

    ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ ಆರಂಭದಿಂದಲೇ ಆಂಗ್ಲರ ಪಡೆಯನ್ನು ಹಣ್ಣುಗಾಯಿ ನೀರುಗಾಯಿ ಮಾಡಿತು.

    2ನೇ ವೇಗದ ಅರ್ಧಶತಕ:
    ಮೊದಲ ಓವರ್‌ನಲ್ಲಿ 16 ರನ್‌ ಚಚ್ಚಿ ಸಂಜು ಸ್ಯಾಮ್ಸನ್‌ ಔಟಾಗುತ್ತಿದ್ದಂತೆ ಅಭಿಷೇಕ್‌ ಶರ್ಮಾ ಸ್ಪೋಟಕ ಇನ್ನಿಂಗ್ಸ್‌ ಕಟ್ಟಲು ಮುಂದಾದರು. ಬ್ಯಾಟಿಂಗ್‌ ಸ್ನೇಹಿಯಾದ ವಾಂಖೆಡೆ ಪಿಚ್‌ನಲ್ಲಿ ಸಿಕ್ಸರ್‌, ಬೌಂಡರಿಗಳ ಮಳೆ ಸುರಿಸಿದ ಅಭಿ, ಕೇವಲ 17 ಎಸೆತಗಳಲ್ಲೇ 3 ಬೌಂಡರಿ, 5 ಸಿಕ್ಸರ್‌ಗಳೊಂದಿಗೆ ವೇಗದ ಅರ್ಧಶತಕ ಸಿಡಿಸಿದರು. ಇದು ಟೀಂ ಇಂಡಿಯಾ ಪರ ದಾಖಲಾದ 2ನೇ ವೇಗದ ಅರ್ಧಶತಕವಾಗಿದೆ.

    2007ರಲ್ಲಿ ಇಂಗ್ಲೆಂಡ್‌ ವಿರುದ್ಧವೇ ಟೀಂ ಇಂಡಿಯಾ ಮಾಜಿ ಆಟಗಾರ ಯುವರಾಜ್‌ ಸಿಂಗ್‌ ಕೇವಲ 12 ಎಸೆತಗಳಲ್ಲಿ ಸ್ಫೋಟಕ ಅರ್ಧಶತಕ ಸಿಡಿಸಿದ್ದು, ಈವರೆಗಿನ ಸಾರ್ವಕಾಲಿಕ ದಾಖಲೆಯಾಗಿದೆ.

    ಸ್ಫೋಟಕ ಶತಕ ಸಿಡಿಸಿದ 2ನೇ ಭಾರತೀಯ:
    ಇನ್ನೂ ಕೇವಲ 37 ಎಸೆತಗಳಲ್ಲೇ 10 ಸಿಕ್ಸರ್‌, 5 ಬೌಂಡರಿಯೊಂದಿಗೆ ವೇಗದ ಶತಕ ದಾಖಲಿಸಿದ ಅಭಿಷೇಕ್‌ ಶರ್ಮಾ ಟೀಂ ಇಂಡಿಯಾ ಪರ ವೇಗದ ಶತಕ ಸಿಡಿಸಿದ 2ನೇ ಭಾರತೀಯ ಎಂಬ ಖ್ಯಾತಿಗೂ ಪಾತ್ರರಾದರು. 2017ರಲ್ಲಿ ಶ್ರೀಲಂಕಾ ವಿರುದ್ಧ ರೋಹಿತ್‌ ಶರ್ಮಾ ಕೇವಲ 35 ಎಸೆತಗಳಲ್ಲಿ ಶತಕ ಸಿಡಿಸಿದ್ದು, ಭಾರತದ ಪಾಲಿನ ಈವರೆಗಿನ ದಾಖಲೆಯಾಗಿದೆ.

    ಪವರ್‌ ಪ್ಲೇನಲ್ಲೂ ದಾಖಲೆ:
    ಇಂಗ್ಲೆಂಡ್‌ ಬೌಲರ್‌ಗಳನ್ನು ಹಿಗ್ಗಾಮುಗ್ಗಾ ಚೆಂಡಾಡಿದ ಭಾರತೀಯ ಆಟಗಾರರು ಮೊದಲ 6 ಓವರ್‌ಗಳಲ್ಲಿ 95 ರನ್‌ ಸಿಡಿಸಿದರು. ಈ ಮೂಲಕ ಪವರ್‌ಪ್ಲೇನಲ್ಲಿ ಟೀಂ ಇಂಡಿಯಾ ಪರ ಅತಿಹೆಚ್ಚು ರನ್‌ ಗಳಿಸಿದ ದಾಖಲೆ ಇದಾಯಿತು.

  • Champions Trophy: ರೋಹಿತ್‌ ಶರ್ಮಾ ಪಾಕಿಸ್ತಾನಕ್ಕೆ ಹೋಗಲ್ಲ – ಬಿಸಿಸಿಐ ಸ್ಪಷ್ಟ ಸಂದೇಶ

    Champions Trophy: ರೋಹಿತ್‌ ಶರ್ಮಾ ಪಾಕಿಸ್ತಾನಕ್ಕೆ ಹೋಗಲ್ಲ – ಬಿಸಿಸಿಐ ಸ್ಪಷ್ಟ ಸಂದೇಶ

    ಮುಂಬೈ: ಚಾಂಪಿಯನ್ಸ್‌ ಟ್ರೋಫಿ (Champions Trophy 2025) ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ (Rohit Sharma) ಅವರನ್ನು ಪಾಕಿಸ್ತಾನಕ್ಕೆ ಕಳುಹಿಸದಿರಲು ಬಿಸಿಸಿಐ ನಿರ್ಧರಿಸಿದೆ.

    ರೋಹಿತ್ ಶರ್ಮಾ ಪಾಕಿಸ್ತಾನಕ್ಕೆ ಪ್ರಯಾಣಿಸುತ್ತಾರೋ ಇಲ್ಲವೋ ಎಂಬುದು ದೊಡ್ಡ ಪ್ರಶ್ನೆಯಾಗಿತ್ತು. ಅದಕ್ಕೀಗ ಬಿಸಿಸಿಐ ತೆರೆ ಎಳೆದಿದೆ. ನಾಯಕನ ಭೇಟಿ ಮತ್ತು ಫೋಟೋಶೂಟ್‌ಗಾಗಿ ರೋಹಿತ್ ಶರ್ಮಾ ಅವರನ್ನು ಪಾಕಿಸ್ತಾನಕ್ಕೆ ಕಳುಹಿಸದಿರಲು ಬಿಸಿಸಿಐ ದೃಢ ನಿರ್ಧಾರ ತೆಗೆದುಕೊಂಡಿದೆ ಎಂದು ಗೌರವ್‌ ಗುಪ್ತ ತಿಳಿಸಿದ್ದಾರೆ. ಇದನ್ನೂ ಓದಿ: ಇಂದಿನಿಂದ ಭಾರತ VS ಇಂಗ್ಲೆಂಡ್‌ ಟಿ20 ಕದನ – ಶುಭಾರಂಭದ ನಿರೀಕ್ಷೆಯಲ್ಲಿ ಸೂರ್ಯನ ಸೈನ್ಯ

    ಚಾಂಪಿಯನ್ಸ್ ಟ್ರೋಫಿಗಾಗಿ ಪಾಕಿಸ್ತಾನಕ್ಕೆ ಪ್ರಯಾಣಿಸಲು ಭಾರತ ನಿರಾಕರಿಸಿದ ನಂತರ, ಟೂರ್ನಮೆಂಟ್ ಅನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲಾಗಿದೆ. ರೋಹಿತ್ ಶರ್ಮಾ ಟೂರ್ನಮೆಂಟ್ ಪೂರ್ವ ನಾಯಕರ ಸಭೆಗಾಗಿ ಪಾಕಿಸ್ತಾನಕ್ಕೆ ಪ್ರಯಾಣಿಸುವ ಬಗ್ಗೆ ಕೆಲವು ಪ್ರಶ್ನೆಗಳು ಉದ್ಭವಿಸಿದ್ದವು.

    ಎಲ್ಲಾ ತಂಡಗಳ ನಾಯಕರು ಯಾವುದೇ ಐಸಿಸಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಮೊದಲು ಒಟ್ಟುಗೂಡುತ್ತಾರೆ. ಅವರ ಯೋಜನೆಗಳು ಮತ್ತು ಗುರಿಗಳ ಬಗ್ಗೆ ಮಾತನಾಡುತ್ತಾರೆ. ಆದರೆ, ಸೆಕ್ಯೂರಿಟಿ ದೃಷ್ಟಿಯಿಂದ ಟೀಂ ಇಂಡಿಯಾ ಆಟಗಾರರನ್ನು ಪಾಕಿಸ್ತಾನಕ್ಕೆ ಕಳುಹಿಸಲು ಬಿಸಿಸಿಐ ಒಪ್ಪಿಗೆ ಸೂಚಿಸಿಲ್ಲ. ಇದನ್ನೂ ಓದಿ: ಜ.22ರಿಂದ ಭಾರತ Vs ಇಂಗ್ಲೆಂಡ್‌ ಹೈವೋಲ್ಟೇಜ್‌ ಸರಣಿ – ಇಲ್ಲಿದೆ ಡಿಟೇಲ್ಸ್

  • Champions Trophy 2025 | ಟೀಂ ಇಂಡಿಯಾ ಪ್ರಕಟ – ರೋಹಿತ್‌ ಸಾರಥಿ, 15 ತಿಂಗಳ ಬಳಿಕ ಶಮಿ ಕಂಬ್ಯಾಕ್‌

    Champions Trophy 2025 | ಟೀಂ ಇಂಡಿಯಾ ಪ್ರಕಟ – ರೋಹಿತ್‌ ಸಾರಥಿ, 15 ತಿಂಗಳ ಬಳಿಕ ಶಮಿ ಕಂಬ್ಯಾಕ್‌

    ಮುಂಬೈ: ಮುಂಬರುವ ಚಾಂಪಿಯನ್ಸ್‌ ಟ್ರೋಫಿ-2025 (Champions Trophy 2025) ಟೂರ್ನಿ ಹಾಗೂ ಇಂಗ್ಲೆಂಡ್‌ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಗೆ ಅಜಿತ್‌ ಅಗರ್ಕರ್‌ (Ajit Agarkar) ನೇತೃತ್ವದ ಆಯ್ಕೆ ಸಮಿತಿ ಟೀಂ ಇಂಡಿಯಾ ಬಲಿಷ್ಠ ತಂಡವನ್ನು ಪ್ರಕಟಿಸಿದೆ. ನಿರೀಕ್ಷೆಯಂತೆ ರೋಹಿತ್‌ ಶರ್ಮಾ (Rohit Sharma) ಅವರಿಗೆ ನಾಯಕತ್ವದ ಹೊಣೆ ನೀಡಿದ್ದು, ಉಪನಾಯಕನಾಗಿ ಶುಭಮನ್‌ ಗಿಲ್‌ ಆಯ್ಕೆ ಅಚ್ಚರಿ ಮೂಡಿಸಿದೆ.

    ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧ ನಡೆದ ಬಾರ್ಡರ್‌ ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯಲ್ಲಿ ಕಳಪೆ ಬ್ಯಾಟಿಂಗ್‌ ಪ್ರದರ್ಶನ ನೀಡಿದ ಬಳಿಕ ಕೆ.ಎಲ್‌ ರಾಹುಲ್‌ ಹಾಗೂ ವಿರಾಟ್‌ ಕೊಹ್ಲಿ (Virat Kohli) ಅವರನ್ನು ತಂಡದಿಂದ ಕೈಬಿಡಬಹುದು ಎಂದೇ ಹೇಳಲಾಗಿತ್ತು. ಆದ್ರೆ ಚಾಂಪಿಯನ್ಸ್‌ ಟ್ರೋಫಿ ಹಾಗೂ ಇಂಗ್ಲೆಂಡ್‌ ವಿರುದ್ಧ ಏಕದಿನ ಸರಣಿಯಲ್ಲಿ ಇಬ್ಬರಿಗೂ ಸ್ಥಾನ ನೀಡಲಾಗಿದೆ.

    ಇನ್ನೂ 2023ರ ಏಕದಿನ ವಿಶ್ವಕಪ್‌ ಬಳಿಕ ಎಡ ಪಾದದ ಗಾಯದ ಸಮಸ್ಯೆಯಿಂದ ಲಂಡನ್‌ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮೊಹಮ್ಮದ್‌ ಶಮಿ 15 ತಿಂಗಳ ಬಳಿಕ ಟೀಂ ಇಂಡಿಯಾಕ್ಕೆ ಕಂಬ್ಯಾಕ್‌ ಮಾಡಿದ್ದಾರೆ. ಸದ್ಯ ಶಮಿ ರಣಜಿ ಟ್ರೋಫಿಯಲ್ಲೂ ಫಾರ್ಮ್‌ನಲ್ಲಿದ್ದಾರೆ.

    ಬುಮ್ರಾ ಆಡೋದು ಡೌಟ್‌:
    ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್‌ ಸರಣಿಯ ಕೊನೇ ಪಂದ್ಯದಲ್ಲಿ ಗಾಯದ ಸಮಸ್ಯೆಯಿಂದ ಮೈದಾನ ತೊರೆದಿದ್ದ ಜಸ್ಪ್ರೀತ್‌ ಬುಮ್ರಾ ಅವರು ಚಾಂಪಿಯನ್ಸ್‌ ಟ್ರೋಫಿಗೆ ಕಂಬ್ಯಾಕ್‌ ಮಾಡಿದ್ದಾರೆ. ಆದ್ರೆ ಬುಮ್ರಾ ಆಟದ ಬಗ್ಗೆ ಇನ್ನೂ ಖಚಿತತೆಯಿಲ್ಲ. ಹಾಗಾಗಿ ಬುಮ್ರಾ ಅವರ ಸ್ಥಾನ ತುಂಬಲು ಅರ್ಷ್‌ದೀಪ್‌ ಸಿಂಗ್‌ ಅವರನ್ನ ಆಯ್ಕೆ ಮಾಡಿದ್ದೇವೆ ಎಂದು ನಾಯಕ ರೋಹಿತ್‌ ಶರ್ಮಾ ಹೇಳಿದ್ದಾರೆ.

    ಚಾಂಪಿಯನ್ಸ್ ಟ್ರೋಫಿ & ಇಂಗ್ಲೆಂಡ್ ಏಕದಿನ ಸರಣಿಗೆ ಟೀಂ ಇಂಡಿಯಾ:
    ರೋಹಿತ್ ಶರ್ಮಾ (ನಾಯಕ), ಶುಭಮನ್‌ ಗಿಲ್ (ಉಪನಾಯಕ), ವಿರಾಟ್‌ ಕೊಹ್ಲಿ, ಶ್ರೇಯಸ್‌ ಅಯ್ಯರ್, ಕೆ.ಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ಅಕ್ಷರ್‌ ಪಟೇಲ್‌, ವಾಷಿಂಗ್ಟನ್‌ ಸುಂದರ್, ಕುಲ್ದೀಪ್‌ ಯಾದವ್‌, ಜಸ್ಪ್ರೀತ್‌ ಬುಮ್ರಾ, ಮೊಹಮ್ಮದ್‌ ಶಮಿ, ಅರ್ಷ್‌ದೀಪ್‌ ಸಿಂಗ್‌, ಯಶಸ್ವಿ ಜೈಸ್ವಾಲ್, ರಿಷಬ್‌ ಪಂತ್ ಮತ್ತು ರವೀಂದ್ರ ಜಡೇಜಾ.

    ಫೆ.19ರಿಂದ ಚಾಂಪಿಯನ್ಸ್‌ ಟ್ರೋಫಿ ಆರಂಭ:
    ಈ ಬಾರಿ ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲಾಗುತ್ತಿರುವ ಎಲೈಟ್ ಪಂದ್ಯಾವಳಿಯು ಫೆಬ್ರವರಿ 19 ರಂದು ಕರಾಚಿಯಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯದೊಂದಿಗೆ ಪ್ರಾರಂಭವಾಗಲಿದೆ. ಮಾರ್ಚ್ 9 ರಂದು ಫೈನಲ್ ಪಂದ್ಯ ನಡೆಯಲಿದೆ. ಭಾರತವು ಫೆಬ್ರವರಿ 20 ರಂದು ಬಾಂಗ್ಲಾದೇಶ ತಂಡದ ವಿರುದ್ಧ ಚಾಂಪಿಯನ್ಸ್ ಟ್ರೋಫಿಯ ಅಭಿಯಾನ ಆರಂಭಿಸಲಿದೆ. ಭಾರತ ತನ್ನ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ.

    ಎಂಟು ಸ್ಪರ್ಧಾತ್ಮಕ ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಎ ಗುಂಪಿನಲ್ಲಿ ಪಾಕಿಸ್ತಾನ, ಭಾರತ, ನ್ಯೂಜಿಲೆಂಡ್, ಬಾಂಗ್ಲಾದೇಶ ತಂಡಗಳಿವೆ. ಬಿ ಗುಂಪಿನಲ್ಲಿ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ಇಂಗ್ಲೆಂಡ್ ಸೇರಿವೆ. ಭಾರತವು ಫೆಬ್ರವರಿ 23 ರಂದು ದುಬೈನಲ್ಲಿ ಪಾಕಿಸ್ತಾನ ವಿರುದ್ಧ ಸೆಣಸಲಿದೆ.

  • ಸತತ ಸೋಲಿನ ಬಳಿಕ ಬಿಸಿ ಮುಟ್ಟಿಸಿದ ಬಿಸಿಸಿಐ – ಟೀಂ ಇಂಡಿಯಾ ಆಟಗಾರರಿಗೆ ಮತ್ತೊಂದು ಟಫ್‌ ರೂಲ್ಸ್‌

    ಸತತ ಸೋಲಿನ ಬಳಿಕ ಬಿಸಿ ಮುಟ್ಟಿಸಿದ ಬಿಸಿಸಿಐ – ಟೀಂ ಇಂಡಿಯಾ ಆಟಗಾರರಿಗೆ ಮತ್ತೊಂದು ಟಫ್‌ ರೂಲ್ಸ್‌

    ಮುಂಬೈ: 2024ರ ಟಿ20 ವಿಶ್ವಕಪ್‌ (T20 World Cup) ಟೂರ್ನಿ ಬಳಿಕ ಏಕದಿನ ಹಾಗೂ ಟೆಸ್ಟ್‌ ಕ್ರಿಕೆಟ್‌ ಸರಣಿಗಳಲ್ಲಿ ಟೀಂ ಇಂಡಿಯಾ (Team India) ಕಳಪೆ ಪ್ರದರ್ಶನ ನೀಡುತ್ತಿರುವ ಹಿನ್ನೆಲೆ ಬಿಸಿಸಿಐ (BCCI) ಆಟಗಾರರಿಗೆ ಬಿಸಿಮುಟ್ಟಿಸಲು ಮುಂದಾಗಿದೆ.

    ಇತ್ತೀಚೆಗಷ್ಟೇ ವಿದೇಶ ಪ್ರವಾಸಗಳಿಗೆ ಪತ್ನಿ ಮತ್ತು ಕುಟುಂಬಸ್ಥರನ್ನು ಕರೆದೊಯ್ಯುವಂತಿಲ್ಲ ಎಂಬ ಕಟ್ಟುನಿಟ್ಟಿನ ನಿಯಮವನ್ನ ಬಿಸಿಸಿಐ ಜಾರಿಗೊಳಿಸಿತು. ಇದೀಗ ಆಟಗಾರರು ವಿದೇಶಿ ಪ್ರವಾಸಕ್ಕೆ ತಮ್ಮ ವೈಯಕ್ತಿಕ ಅಡುಗೆಯವರು, ಕೇಶ ವಿನ್ಯಾಸಕರು, ಸ್ಟೈಲಿಸ್ಟ್ ಮತ್ತು ವೈಯಕ್ತಿಕ ಭದ್ರತಾ ಸಿಬ್ಬಂದಿಯನ್ನ ಕರೆದೊಯ್ಯುವಂತಿಲ್ಲ ಎಂಬ ನಿಯಮವನ್ನು ಜಾರಿಗೋಳಿಸಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಇದನ್ನೂ ಓದಿ: IPL 2025: ಮಾರ್ಚ್‌ 23 ರಿಂದ ಐಪಿಎಲ್‌ ಆರಂಭ: ಬಿಸಿಸಿಐ ಉಪಾಧ್ಯಕ್ಷ ಘೋಷಣೆ

    ಮುಂಬರುವ ಐಸಿಸಿ ಚಾಂಪಿಯನ್ಸ್‌ ಟ್ರೋಫಿ (Champions Trophy 2025), ಟಿ20 ವಿಶ್ವಕಪ್‌ ಟೂರ್ನಿಗಳನ್ನು ಗಮನದಲ್ಲಿಟ್ಟುಕೊಂಡು ಆಟಗಾರರಲ್ಲಿ ಶಿಸ್ತು ತರಲು ಹಾಗೂ ಉತ್ತಮ ಪ್ರದರ್ಶನ ನೀಡುವಂತೆ ಮಾಡಲು ಈ ಕಠಿಣ ನಿಯಮ ಜಾರಿಗೊಳಿಸಿದೆ. ಇದರೊಂದಿಗೆ ಆಟಗಾರರ ಫಿಟ್‌ನೆಸ್‌ ಬಗ್ಗೆಯೂ ಬಿಸಿಸಿಐ ನಿಗಾ ವಹಿಸಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಚಾಂಪಿಯನ್ಸ್‌ ಟ್ರೋಫಿಗೂ ಮುನ್ನ ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ ಪಾಕ್‌ಗೆ ಭೇಟಿ – ಯಾಕೆ?

    ಟಿ20 ವಿಶ್ವಕಪ್‌ ಬಳಿಕ ಟೀಂ ಇಂಡಿಯಾಕ್ಕೆ ಗ್ರಹಣ:
    2024ರ ಟಿ20 ವಿಶ್ವಕಪ್‌ ಬಳಿಕ ಟೀಂ ಇಂಡಿಯಾಕ್ಕೆ ಗ್ರಹಣ ಹಿಡಿದಿದೆಯಾ ಅನ್ನೋ ಪ್ರಶ್ನೆಯನ್ನ ಅಭಿಮಾನಿಗಳು ಎತ್ತಿದ್ದಾರೆ. ಇದನ್ನೂ ಓದಿ: ಭಾರತೀಯ ಕ್ರಿಕೆಟ್‌ ಇತಿಹಾಸದಲ್ಲೇ ಗರಿಷ್ಠ ರನ್‌ ದಾಖಲೆ – ಐರ್ಲೆಂಡ್‌ ವಿರುದ್ಧ ಸರಣಿ ಗೆದ್ದ ಸಿಂಹಿಣಿಯರು

    ಏಕೆಂದರೆ ಮುಖ್ಯಕೋಚ್‌ ಆಗಿ ಗೌತಮ್‌ ಗಂಭೀರ್‌ (Gautam Gambhir) ಅಧಿಕಾರ ವಹಿಸಿಕೊಂಡ ಬಳಿಕ ಟಿ20 ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ ಭರ್ಜರಿ ಪ್ರದರ್ಶನ ನೀಡುತ್ತಿದ್ದರೂ ಏಕದಿನ ಮತ್ತು ಟೆಸ್ಟ್‌ ಕ್ರಿಕೆಟ್‌ನಲ್ಲಿ ಪೇಲವ ಪ್ರದರ್ಶನ ತೋರುತ್ತಾ ಬರುತ್ತಿದೆ. ಟಿ20 ವಿಶ್ವಕಪ್‌ ಗೆದ್ದ ಬಳಿಕ ಶ್ರೀಲಂಕಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿ, ನ್ಯೂಜಿಲೆಂಡ್‌ ವಿರುದ್ಧ ನಡೆದ 3 ಪಂದ್ಯಗಳ ಟೆಸ್ಟ್‌ ಸರಣಿ ಹಾಗೂ ಆಸೀಸ್‌ ವಿರುದ್ಧ ನಡೆದ ಬಾರ್ಡರ್‌ ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯಲ್ಲಿ ಭಾರತ ಹೀನಾಯ ಸೋಲು ಕಂಡಿದ್ದು ಇದಕ್ಕೆ ಸಾಕ್ಷಿಯಾಗಿದೆ. ಈ ಹಿನ್ನೆಲೆ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಅಧಿಕಾರಗಳಿಗೆ ಕತ್ತರಿ ಹಾಕಿದ ಬಿಸಿಸಿಐ ಇದೀಗ ಆಟಗಾರರಿಗೂ ಕಠಿಣ ರೂಲ್ಸ್‌ ಜಾರಿಗೊಳಿಸಿದೆ. ‌

  • ಚಾಂಪಿಯನ್ಸ್‌ ಟ್ರೋಫಿಗೂ ಮುನ್ನ ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ ಪಾಕ್‌ಗೆ ಭೇಟಿ – ಯಾಕೆ?

    ಚಾಂಪಿಯನ್ಸ್‌ ಟ್ರೋಫಿಗೂ ಮುನ್ನ ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ ಪಾಕ್‌ಗೆ ಭೇಟಿ – ಯಾಕೆ?

    ಮುಂಬೈ: ಚಾಂಪಿಯನ್ಸ್‌ ಟ್ರೋಫಿಗೂ ಮುನ್ನ ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ (Rohit Sharma) ಪಾಕಿಸ್ತಾನಕ್ಕೆ ಭೇಟಿ ನೀಡಲಿದ್ದಾರೆಂದು ತಿಳಿದುಬಂದಿದೆ.

    ಭಾರತ ತಂಡ ತನ್ನ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ಆಡಲಿದ್ದರೂ, 8 ವರ್ಷಗಳ ಬಳಿಕ ಮತ್ತೆ ನಡೆಯುತ್ತಿರುವ ಪ್ರತಿಷ್ಠಿತ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ತಂಡದ ನಾಯಕ ಆತಿಥೇಯ ರಾಷ್ಟ್ರ ಪಾಕಿಸ್ತಾನಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.

    ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಚಾಂಪಿಯನ್ಸ್ ಟ್ರೋಫಿಯ ಅದ್ಧೂರಿ ಉದ್ಘಾಟನಾ ಸಮಾರಂಭವನ್ನು ಫೆ.16 ಅಥವಾ 17 ರಂದು ತಾತ್ಕಾಲಿಕವಾಗಿ ನಿಗದಿಪಡಿಸಲಾಗಿದ್ದು, ಅಭ್ಯಾಸ ಪಂದ್ಯದ ವೇಳಾಪಟ್ಟಿ ಇದಾಗಿದೆ. ಎಲ್ಲಾ ತಂಡದ ನಾಯಕರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಇದು ಐಸಿಸಿ ಕಾರ್ಯಕ್ರಮಗಳಿಗೆ ಸಾಮಾನ್ಯ ಪದ್ಧತಿಯಾಗಿದೆ.

    29 ವರ್ಷಗಳ ನಂತರ ಪಾಕಿಸ್ತಾನದಲ್ಲಿ ಮೆಗಾ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಯನ್ನು ಪಿಸಿಬಿ ಮತ್ತೆ ಆಯೋಜಿಸುತ್ತಿದೆ. ಈ ಹಿನ್ನೆಲೆಯಲ್ಲಿ ಅದ್ದೂರಿ ಕಾರ್ಯಕ್ರಮ ನಡೆಸಲು ಯೋಜನೆ ರೂಪಿಸಲಾಗಿದೆ. ಚಾಂಪಿಯನ್ಸ್ ಟ್ರೋಫಿಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಭಾರತೀಯ ತಂಡದ ನಾಯಕ ಪಾಕಿಸ್ತಾನಕ್ಕೆ ಭೇಟಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಚಾಂಪಿಯನ್ಸ್‌ ಟ್ರೋಫಿ 2025 ಕ್ಕೆ ಇದೇ ಫೆ.19 ರಂದು ಚಾಲನೆ ಸಿಗಲಿದೆ. 1996 ರ ಕ್ರಿಕೆಟ್ ವಿಶ್ವಕಪ್ ಅನ್ನು ಭಾರತ ಮತ್ತು ಶ್ರೀಲಂಕಾ ಜೊತೆಗೂಡಿ ಆಯೋಜಿಸಿದ ನಂತರ ಪಾಕಿಸ್ತಾನ ಆತಿಥೇಯರಾಗಿ ಆಡುತ್ತಿರುವ ಮೊದಲ ಪ್ರಮುಖ ಐಸಿಸಿ ಟೂರ್ನಿ ಇದಾಗಿದೆ.

    ಈ ಪಂದ್ಯಾವಳಿಯನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸಲು ನಿರ್ಧರಿಸಲಾಗಿದ್ದು, ಪಾಕಿಸ್ತಾನವು ಹೆಚ್ಚಿನ ಪಂದ್ಯಗಳನ್ನು ಆಯೋಜಿಸುತ್ತದೆ. ಆದರೆ, ಭಾರತದ ಎಲ್ಲಾ ಗುಂಪು ಪಂದ್ಯಗಳು ಮತ್ತು ಮೊದಲ ಸೆಮಿಫೈನಲ್ ದುಬೈನಲ್ಲಿ ನಡೆಯಲಿದೆ.

  • ಬಿಸಿಸಿಐ ನೂತನ ಕಾರ್ಯದರ್ಶಿಯಾಗಿ ದೇವಜಿತ್ ಸೈಕಿಯಾ ನೇಮಕ

    ಬಿಸಿಸಿಐ ನೂತನ ಕಾರ್ಯದರ್ಶಿಯಾಗಿ ದೇವಜಿತ್ ಸೈಕಿಯಾ ನೇಮಕ

    ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (BCCI) ನೂತನ ಕಾರ್ಯದರ್ಶಿಯಾಗಿ ಅಸ್ಸಾಂನ ಮಾಜಿ ಕ್ರಿಕೆಟಿಗ ದೇವಜಿತ್‌ ಸೈಕಿಯಾ (Devajit Saikia) ನೇಮಕವಾಗಿದ್ದಾರೆ.

    ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ ಅಧ್ಯಕ್ಷರಾಗಿ ಜಯ್‌ ಶಾ (Jay Shah) ಆಯ್ಕೆಯಾದ ಬಳಿಕ ತೆರವಾಗಿದ್ದ ಸ್ಥಾನಕ್ಕೆ ಒಂದು ತಿಂಗಳ ಬಳಿಕ ಸೈಕಿಯಾ ನೇಮಕಗೊಂಡಿದ್ದಾರೆ ಎಂದು ವರದಿಯಾಗಿದೆ.

    ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಇಂದು ಬಿಸಿಸಿಐ ಅಧ್ಯಕ್ಷ ರೋಜರ್‌ ಬಿನ್ನಿ (Roger Binny), ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ ಹಾಗೂ ಕೋಚ್‌ ಗೌತಮ್‌ ಗಂಭೀರ್‌ (Gautam Gambhir) ಅವರೊಂದಿಗೆ ಸಭೆಯಲ್ಲಿ ಪಾಲ್ಗೊಂಡಿದ್ದರು.

    ಸಭೆಯಲ್ಲಿ ಇತ್ತೀಚಿನ ಬಾರ್ಡರ್‌ ಗವಾಸ್ಕರ್‌ ಟ್ರೋಫಿಯಲ್ಲಿ ಟೀಂ ಇಂಡೀಯಾ ಸೋಲಿಗೆ ಕಾರಣಗಳನ್ನು ಆತ್ಮಾವಲೋಕನ ಮಾಡಿಕೊಳ್ಳಲಾಯಿತು. ಅಲ್ಲದೇ ಇತ್ತೀಚಿನ ದಿನಗಳಲ್ಲಿ ಏಕದಿನ ಮತ್ತು ಟೆಸ್ಟ್‌ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ ಕಳಪೆ ಪ್ರದರ್ಶನಕ್ಕೆ ಕಾರಣಗಳೇನೆಂಬುದನ್ನು ಚರ್ಚಿಸಲಾಯಿತು. ಜೊತೆಗೆ ಮುಂದಿನ ಸವಾಲುಗಳ ಬಗ್ಗೆ ರೂಪುರೇಷೆಗಳನ್ನು ಸಿದ್ಧಪಡಿಸುವ ಬಗ್ಗೆಯೂ ಮಾತುಕತೆ ನಡೆಸಲಾಯಿತು.

    ದೇವಜಿತ್ ಸೈಕಿಯಾ ಯಾರು?
    ಸೈಕಿಯಾ ಅಸ್ಸಾಂ ಮೂಲದ ಮಾಜಿ ಕ್ರಿಕೆಟರ್‌. 1990 – 1991ರ ನಡುವೆ‌ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 4 ಪಂದ್ಯಗಳನ್ನಾಡಿದ್ದ ಸೈಕಿಯಾ ವಿಕೆಟ್‌ ಕೀಪರ್‌ ಆಗಿದ್ದರು. ಈ ಪಂದ್ಯದಲ್ಲಿ 53 ರನ್‌ ಗಳಿಸಿದ್ದ ಅವರು 9 ವಿಕೆಟ್‌ ಪಡೆದಿದ್ದರು. ಬಳಿಕ ಕಾನೂನು ವೃತ್ತಿಯಲ್ಲಿ ಮುಂದುವರಿಯಲು ಪ್ರಾರಂಭಿಸಿದರು. 28ನೇ ವಯಸ್ಸಿನಲ್ಲಿ ಗುವಾಹಟಿ ಹೈಕೋರ್ಟ್‌ ವಕೀಲರಾಗಿ ಅಭ್ಯಾಸ ಆರಂಭಿಸಿದರು. ಇದಕ್ಕೂ ಮುನ್ನ ಸ್ಪೋರ್ಟ್ಸ್‌ ಕೋಟಾ ಮೂಲಕ ಉತ್ತರ ಗಡಿನಾಡು ರೈಲ್ವೆ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ (RBI) ನಲ್ಲಿ ಸೇವೆ ಸಲ್ಲಿಸಿದ್ದರು.

    ನಂತರ 2019ರಲ್ಲಿ ಮತ್ತೆ ಕ್ರೀಡಾಲೋಕಕ್ಕೆ ಮರಳಿದರು. ಅಸ್ಸಾಂ ಕ್ರಿಕೆಟ್ ಅಸೋಸಿಯೇಷನ್ ​​(ACA)ನ ಆರು ಉಪಾಧ್ಯಕ್ಷರಲ್ಲಿ ಒಬ್ಬರಾಗಿದ್ದರು. 2019ರಲ್ಲಿ ಅಸ್ಸಾಂ ಕ್ರಿಕೆಟ್‌ ಅಸೋಸಿಯೇಷನ್‌ ಕಾರ್ಯದರ್ಶಿಯಾಗಿ ಬಳಿಕ 2022ರಲ್ಲಿ ಬಿಸಿಸಿಐ ಹಂಟಿ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸಿದ್ದರು. ಇದೀಗ ಬಿಸಿಸಿಐ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.

  • ಸ್ಟ್ರಾಂಗ್‌ ಆಗಿರಿ – ರೋಹಿತ್‌ ಕ್ರಿಕೆಟ್‌ ಲೋಕದ ಸೂಪರ್‌ ಸ್ಟಾರ್‌ ಎಂದ ಪೋರ್ನ್‌ ಸ್ಟಾರ್‌

    ಸ್ಟ್ರಾಂಗ್‌ ಆಗಿರಿ – ರೋಹಿತ್‌ ಕ್ರಿಕೆಟ್‌ ಲೋಕದ ಸೂಪರ್‌ ಸ್ಟಾರ್‌ ಎಂದ ಪೋರ್ನ್‌ ಸ್ಟಾರ್‌

    ವಾಷಿಂಗ್ಟನ್‌: ಇತ್ತೀಚೆಗೆ ಮುಕ್ತಾಯಗೊಂಡ ಬಾರ್ಡರ್‌ ಗವಾಸ್ಕರ್‌ ಟ್ರೋಫಿ (Border Gavaskar Trophy) ಟೆಸ್ಟ್‌ ಸರಣಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ, ಕಳಪೆ ಬ್ಯಾಟಿಂಗ್‌ನಿಂದಾಗಿ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಈ ನಡುವೆ ಅಮೆರಿಕದ ನೀಲಿ ತಾರೆ ಕೇಂದ್ರ ಲಸ್ಟ್‌ (Kendra Lust) ಹಿಟ್‌ಮ್ಯಾನ್‌ ಪರ ಬ್ಯಾಟ್‌ ಬೀಸಿದ್ದಾರೆ.

    ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ತಮ್ಮ ಫೋಟೋ ಜೊತೆಗೆ ರೋಹಿತ್‌ ಶರ್ಮಾ (Rohit Sharma) ಅವರ ಮಾರ್ಫ್‌ ಮಾಡಿದ ಫೋಟೋವನ್ನ ಹಂಚಿಕೊಂಡಿದ್ದಾರೆ. ಇದರೊಂದಿಗೆ ʻನೀವು ಭಾರತೀಯ ಕ್ರಿಕೆಟ್‌ ಲೋಕದ ಸೂಪರ್‌ ಸ್ಟಾರ್‌… ದೃಢವಾಗಿರಿ ಎಂದು ಬರೆದುಕೊಂಡಿದ್ದಾರೆ. ಕೇಂದ್ರ ಲಸ್ಟ್‌ ಪ್ರತಿಕ್ರಿಯೆಗೆ ಲಕ್ಷಾಂತರ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಡಿವೋರ್ಸ್‌ ಆದ್ರೆ ಚಹಲ್‌ ಧನಶ್ರೀಗೆ ಎಷ್ಟು ಜೀವನಾಂಶ ಕೊಡಬೇಕು? ಇಬ್ಬರ ಸಂಪತ್ತು ಎಷ್ಟಿದೆ?

    ಬಾರ್ಡರ್‌ ಗವಾಸ್ಕರ್‌ ಟ್ರೋಫಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ ಅವರ ಕಳಪೆ ಬ್ಯಾಟಿಂಗ್‌ ಪ್ರದರ್ಶನ ಭಾರೀ ಟೀಕೆಗೆ ಗುರಿಯಾಗಿತ್ತು. ರೋಹಿತ್‌ ಸಿಡ್ನಿಯಲ್ಲಿ ನಡೆಯಲಿರುವ ಅಂತಿಮ ಟೆಸ್ಟ್‌ ಪಂದ್ಯದ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುತ್ತಾರೆ ಅನ್ನೋ ವದಂತಿ ಎದ್ದಿತ್ತು. ಇದನ್ನೂ ಓದಿ: ಬ್ಯಾಟಿಂಗ್‌ನಲ್ಲಿ ಧಮ್‌ ಇಲ್ಲ – ಕೋಚ್‌ಗಳು ಏನ್‌ ಮಾಡ್ತಿದ್ದಾರೆ? – ಗವಾಸ್ಕರ್‌ ತೀವ್ರ ತರಾಟೆ

    ಬಿಜಿಟಿ ಸರಣಿಯಲ್ಲಿ ನಿರಂತರ ವೈಫಲ್ಯ ಕಂಡ ರೋಹಿತ್‌ ಶರ್ಮಾ, ಟೆಸ್ಟ್‌ ನಾಯಕತ್ವ ತ್ಯಜಿಸಬೇಕು ಎಂಬ ಆಗ್ರಹ ಸಹ ಕೇಳಿ ಬಂದಿತ್ತು. ಭಾರತದ ತಂಡದ ಮಾಜಿ ಮುಖ್ಯ ಕೋಚ್‌ ರವಿ ಶಾಸ್ತ್ರಿ, ಕೂಡ ಶರ್ಮಾ ತಮ್ಮ ಟೆಸ್ಟ್‌ ನಾಯಕತ್ವ ತ್ಯಜಿಸುವ ಕುರಿತು ಯೋಚಿಸಬೇಕಾದ ಸಮಯ ಬಂದಿದೆ. ಬಿಜಿಟಿ ಬಳಿಕ ಈ ಕುರಿತು ಅವರು ಸೂಕ್ತ ತೀರ್ಮಾನ ಮಾಡಲಿದ್ದಾರೆ ಎಂದು ಹೇಳಿದ್ದರು. ಇದನ್ನೂ ಓದಿ: ಸಿಡ್ನಿ ಟೆಸ್ಟ್‌ ಬಳಿಕ ರೋಹಿತ್‌ ಗುಡ್‌ಬೈ? – ಹಿಂಟ್‌ ಕೊಟ್ಟ ರವಿ ಶಾಸ್ತ್ರಿ

  • ಸಿಡ್ನಿ ಪಂದ್ಯದಿಂದ ರೋಹಿತ್‌ ಔಟ್‌? – ಗೌತಮ್‌ ಗಂಭೀರ್‌ ಹೇಳಿದ್ದೇನು?

    ಸಿಡ್ನಿ ಪಂದ್ಯದಿಂದ ರೋಹಿತ್‌ ಔಟ್‌? – ಗೌತಮ್‌ ಗಂಭೀರ್‌ ಹೇಳಿದ್ದೇನು?

    ಮುಂಬೈ: ಆಸ್ಟ್ರೇಲಿಯಾದಲ್ಲಿ ನಡೆದ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಕಳಪೆ ಪ್ರದರ್ಶನದ ಬಗ್ಗೆ ಕೋಚ್‌ ಗೌತಮ್‌ ಗಂಭೀರ (Gautam Gambhir) ಮೌನ ಮುರಿದಿದ್ದಾರೆ. ಮುಂದೆ ನಡೆಯಲಿರುವ ಸಿಡ್ನಿ ಟೆಸ್ಟ್‌ (Sydney Test) ಕ್ರಿಕೆಟ್‌ಗೆ ಪ್ರಮುಖ ಆಟಗಾರರ ಕೈಬಿಡುವ ಸಾಧ್ಯತೆ ಬಗ್ಗೆ ಸುಳಿವು ನೀಡಿದ್ದಾರೆ.

    ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಶುಕ್ರವಾರ ನಡೆಯಲಿರುವ ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಟೆಸ್ಟ್ ಪಂದ್ಯವನ್ನು ನಾಯಕ ರೋಹಿತ್ ಶರ್ಮಾ (Rohit Sharma) ಮುನ್ನಡೆಸುತ್ತಾರೆಯೇ ಎಂಬುದನ್ನು ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್ ಖಚಿತಪಡಿಸಿಲ್ಲ. ಇದನ್ನೂ ಓದಿ: ಸಿಡ್ನಿ ಟೆಸ್ಟ್‌ ಬಳಿಕ ರೋಹಿತ್‌ ಗುಡ್‌ಬೈ? – ಹಿಂಟ್‌ ಕೊಟ್ಟ ರವಿ ಶಾಸ್ತ್ರಿ

    ರೋಹಿತ್ ಜೊತೆಯಲ್ಲಿ ಎಲ್ಲವೂ ಚೆನ್ನಾಗಿದೆ. ಪಿಚ್ ನೋಡಿದ ನಂತರ ನಾವು ನಾಳೆ (ಜ.11) ಘೋಷಿಸುತ್ತೇವೆ ಎಂದು ಗಂಭೀರ್ ಹೇಳಿದ್ದಾರೆ. ನಾಳೆ ತಂಡದ ಆಟಗಾರರ ಅಂತಿಮ ಪಟ್ಟಿ ಹೊರಬೀಳಲಿದೆ

    ರೋಹಿತ್ ಆ ತಂಡದಲ್ಲಿ ಇರುತ್ತಾರೆಯೇ ಎಂದು ನಿರ್ದಿಷ್ಟವಾಗಿ ಕೇಳಿದಾಗ, ‘ನಾನು ಹೇಳಿದಂತೆ, ನಾವು ವಿಕೆಟ್ ಅನ್ನು ನೋಡಲಿದ್ದೇವೆ ಎಂದು ಗಂಭೀರ ಪ್ರತಿಕ್ರಿಯೆ ನೀಡಿದ್ದಾರೆ. ರೋಹಿತ್‌ ತಂಡದಲ್ಲಿ ಇರುತ್ತಾರೆಯೇ ಎಂಬ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದನ್ನೂ ಓದಿ: ಭಾರತಕ್ಕೆ ಹೀನಾಯ ಸೋಲು – ಆಸ್ಟ್ರೇಲಿಯಾಗೆ 184 ರನ್‌ಗಳ ಭರ್ಜರಿ ಗೆಲುವು

    ನಾಯಕ ರೋಹಿತ್ ಆಸ್ಟ್ರೇಲಿಯಾ ವಿರುದ್ಧ ನಡೆದ ಐದು ಪಂದ್ಯಗಳ ಸರಣಿಯ ಮೊದಲ ನಾಲ್ಕು ಟೆಸ್ಟ್‌ಗಳಲ್ಲಿ ರನ್‌ಗಾಗಿ ಹೆಣಗಾಡಿದ್ದಾರೆ. ಈ ವಾರದ ಆರಂಭದಲ್ಲಿ ಮೆಲ್ಬರ್ನ್‌ನಲ್ಲಿ ಭಾರತ ಸೋತ ನಂತರ 2-1 ರಿಂದ ಹಿನ್ನಡೆಯಲ್ಲಿದೆ.

  • Year 2024 – ಸೋಲು – ಗೆಲುವಿನ ʻಆಟʼ

    Year 2024 – ಸೋಲು – ಗೆಲುವಿನ ʻಆಟʼ

    2025ರ ಹೊಸವರ್ಷಕ್ಕೆ ಕ್ಷಣಗಣನೆ ಬಾಕಿಯಿದೆ. ಹೊಸ ವರ್ಷ ಅಂದ್ರೆ ಹೊಸ ವಿಷಯಗಳೇ ನೆನಪಿಗೆ ಬರುತ್ತವೆ. ಹೊಸ ಸಂಕಲ್ಪಗಳು, ಹೊಸ ಹವ್ಯಾಸಗಳು, ಹೀಗೆ ಬದುಕನ್ನು ಬದಲಾಯಿಸಲು ಹೊಸ ನಿರ್ಧಾರ ತೆಗೆದುಕೊಳ್ಳಲು ಹೊಸ ವರ್ಷ ಒಳ್ಳೆಯ ಅವಕಾಶ. ಸಕಾರಾತ್ಮಕ ವಿಷಯ ಸಂಕಲ್ಪ ಮಾಡುವುದರಿಂದ ಬದುಕಿನಲ್ಲಿ ಒಳ್ಳೆಯ ಪರಿಣಾಮಗಳನ್ನು ಕಾಣಬಹುದು. ಹಾಗಾಗಿ ಮುಂಬರುವ ಹೊಸವರ್ಷದಲ್ಲಾದರೂ ಭಾರತೀಯ ಕ್ರೀಡಾಪಟುಗಳು ಇನ್ನಷ್ಟು ದಾಖಲೆಗಳನ್ನು ಬರೆದು ಇತಿಹಾಸ ನಿರ್ಮಿಸಲಿ ಎನ್ನುವುದು ಆಶಯ. ಅದಕ್ಕೂ ಮುನ್ನ 2024ರ ವರ್ಷದಲ್ಲಿ ಕಂಡ ಅವಿಸ್ಮರಣೀಯ ದಿನಗಳನ್ನು ನಾವು ನೆನಪಿಸಿಕೊಳ್ಳಲೇಬೇಕು. ಕಹಿ ಘಟನೆಗಳನ್ನು ಮರೆಯುತ್ತಾ, ಸಿಹಿ ನೆನಪುಗಳನ್ನು ಹೊತ್ತು ಮುಂದೆ ಸಾಗಬೇಕು. ಈ ವರ್ಷ ಕ್ರೀಡಾಲೋಕ ಏನೆಲ್ಲಾ ಏಳು-ಬೀಳುಗಳನ್ನು ಕಂಡಿದೆ? ಅವುಗಳಲ್ಲಿ ಇಣುಕುನೋಟ ಇಲ್ಲಿದೆ…..

    ʻವಿಶ್ವಗುರುʼವಾದ ಭಾರತ

    ಕಳೆದ ಜೂನ್‌ ತಿಂಗಳಲ್ಲಿ ಅಮೆರಿಕ ಮತ್ತು ವೆಸ್ಟ್‌ ಇಂಡೀಸ್‌ನ ಆತಿಥ್ಯದಲ್ಲಿ 2024ರ ಟಿ20 ವಿಶ್ವಕಪ್‌ ಟೂರ್ನಿ ನಡೆಯಿತು. ಬಾರ್ಬಡೋಸ್‌ನ ಕೆನ್ಸಿಂಗ್ಟನ್‌ ಓವಲ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಫೈನಲ್‌ ಪಂದ್ಯದಲ್ಲಿ ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾ ವಿರುದ್ಧ 7 ರನ್‌ಗಳಿಂದ ರೋಚಕ ಗೆಲುವು ಸಾಧಿಸಿತು. ಗೆಲುವಿನೊಂದಿಗೆ ಭಾರತ ಚಾಂಪಿಯನ್‌ ಆಗಿ ಹೊರಹೊಮ್ಮಿತು. 11 ವರ್ಷಗಳ ಬಳಿಕ ಐಸಿಸಿ ಟ್ರೋಫಿ ಬರ ನೀಗಿಸಿಕೊಂಡ ಟೀಮ್‌ ಇಂಡಿಯಾ, 2007ರ ಬಳಿಕ 2ನೇ ಟಿ20 ವಿಶ್ವಕಪ್‌ ಅನ್ನು ಮುಡಿಗೇರಿಸಿಕೊಂಡಿತು. ಇದು ಒಂದು ಹೆಮ್ಮೆಯಾದರೆ ಟ್ರೋಫಿ ಎತ್ತಿ ಹಿಡಿಯುತ್ತಿದ್ದಂತೆ ಕ್ರಿಕೆಟ್‌ ದಿಗ್ಗಜರಾದ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿ, ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು.

    ಒಲಿಂಪಿಕ್ಸ್‌ನಲ್ಲಿ ಸೋಲು-ಗೆಲುವು

    2024ರ ಪ್ಯಾರಿಸ್‌ ಒಲಿಂಪಿಕ್ಸ್‌ ಭಾರತೀಯ ಕ್ರೀಡಾಜಗತ್ತಿಗೆ ಅವಿಸ್ಮರಣೀಯವಾಗಿತ್ತು. ಪ್ರವೇಶಿಸಿದ ಚೊಚ್ಚಲ ಒಲಿಂಪಿಕ್ಸ್‌ನಲ್ಲೇ ಶೂಟರ್‌ ಮನು ಭಾಕರ್‌ ಎರಡು ಕಂಚಿನ ಪದಕ ಗೆದ್ದು ಐತಿಹಾಸಿಕ ದಾಖಲೆ ಬರೆದರು. ಮತ್ತೊಂದೆಡೆ ಒಲಿಂಪಿಕ್ಸ್‌ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯರ ಫ್ರೀ ಸ್ಟೈಲ್ ಕುಸ್ತಿ ವಿಭಾಗದಲ್ಲಿ ಫೈನಲ್‌ ಪ್ರವೇಶಿಸಿದ್ದ ವಿನೇಶ್‌ ಫೋಗಟ್‌ ಅಧಿಕ ತೂಕದಿಂದಾಗಿ ಅನರ್ಹಗೊಂಡರು. ಈ ಘಟನೆ ದೇಶಾದ್ಯಂತ ಸದ್ದು ಮಾಡಿತ್ತು. ಅಲ್ಲದೇ ಬ್ಯಾಡ್ಮಿಂಟನ್‌ ಪುರುಷರ ಸಿಂಗಲ್ಸ್‌ನಲ್ಲಿ ಕಂಚುಗೆಲ್ಲುವ ಭರವಸೆ ಮೂಡಿಸಿದ್ದ ಲಕ್ಷ್ಯಸೇನ್‌ ಮೊಣಕೈ ಗಾಯದಿಂದಾಗಿ ಪದಕ ಗೆಲ್ಲುವ ಅವಕಾಶದಿಂದ ವಂಚಿತರಾದರು. ನೀರಜ್‌ ಚೋಪ್ರಾ ಬೆಳ್ಳಿ ಪದಕ್ಕೆ ತೃಪ್ತಿಪಟ್ಟುಕೊಂಡರು.

    ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಅಶ್ವಿನ್‌ ಗುಡ್‌ಬೈ

    ವರ್ಷದ ಕೊನೆಯಲ್ಲಿ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟಿಗೆ 38 ವರ್ಷದ ಹಿರಿಯ ಆಟಗಾರ, ಸ್ಪಿನ್‌ ಮಾಂತ್ರಿಕ ಆರ್‌. ಅಶ್ವಿನ್‌ ನಿವೃತ್ತಿ ಘೋಷಿಸಿದರು. ಭಾರತದ ಪರ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ಎರಡನೇ ಬೌಲರ್‌ ಅಶ್ವಿನ್‌ ಆಗಿದ್ದಾರೆ. ಅನಿಲ್‌ ಕುಂಬ್ಳೆ 619 ವಿಕೆಟ್‌ ಪಡೆದು ಮೊದಲ ಸ್ಥಾನದಲ್ಲಿದ್ದರೆ ಅಶ್ವಿನ್‌ 537 ವಿಕೆಟ್‌ ಪಡೆದಿದ್ದರು.

    ಗುಕೇಶ್ ವಿಶ್ವ ಚೆಸ್ ಚಾಂಪಿಯನ್

    ಇದೇ ಡಿಸೆಂಬರ್‌ 12ರಂದು ಸಿಂಗಾಪುರದಲ್ಲಿ ನಡೆದ ಚೆಸ್‌ ಟೂರ್ನಿಯಲ್ಲಿ ಭಾರತದ ಗುಕೇಶ್ ವಿಶ್ವ ಚೆಸ್ ಚಾಂಪಿಯನ್ ಆಗಿ ಹೊರಹೊಮ್ಮಿದರು. ಚೀನಾದ ಪ್ರಶಸ್ತಿ ವಿಜೇತ ಡಿಂಗ್ ಲಿರೆನ್ ಅವರನ್ನು ಸೋಲಿಸುವ ಮೂಲಕ ಭಾರತದ ಗ್ರ್ಯಾಂಡ್‌ಮಾಸ್ಟರ್ ಡಿ ಗುಕೇಶ್ 18ನೇ ವಯಸ್ಸಿನಲ್ಲೇ ಕಿರಿಯ ವಿಶ್ವ ಚೆಸ್ ಚಾಂಪಿಯನ್ ಆಗಿ ಇತಿಹಾಸ ಸೃಷ್ಟಿಸಿದರು.

    ಕೆಕೆಆರ್‌ಗೆ 3ನೇ ಬಾರಿಗೆ ಚಾಂಪಿಯನ್‌ ಕಿರೀಟ

    2024ರ ಐಪಿಎಲ್‌ ಆವೃತ್ತಿಯಲ್ಲಿ ಕೋಲ್ಕತ್ತಾ ನೈಟ್‌ರೈಡರ್ಸ್‌ ತಂಡವು 3ನೇ ಬಾರಿಗೆ ಚಾಂಪಿಯನ್‌ ಆಗಿ ಹೊರಹೊಮ್ಮಿತು. ಶ್ರೇಯಸ್ ಅಯ್ಯರ್ ನಾಯಕತ್ವ ಮತ್ತು ಗೌತಮ್ ಗಂಭೀರ್ ಮಾರ್ಗದರ್ಶನದ ಕೆಕೆಆರ್ ತಂಡ 2016ರ ಚಾಂಪಿಯನ್ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿ ಟ್ರೋಫಿ ಗೆದ್ದುಕೊಂಡಿತು. 2012-14ರಲ್ಲಿ ಗೌತಮ್‌ ಗಂಭೀರ್‌ ನಾಯಕತ್ವದಲ್ಲಿ ಚಾಂಪಿಯನ್‌ ಆಗಿದ್ದ ಕೆಕೆಆರ್‌ ತಂಡ ಈ ಬಾರಿ ಗಂಭೀರ್‌ ಅವರ ಮಾರ್ಗದರ್ಶನದಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿತು. ಇನ್ನೂ 2025ರ ಐಪಿಎಲ್‌ ಆವೃತ್ತಿಗೆ ಕಳೆದ ನವೆಂಬರ್‌ನಲ್ಲಿ ನಡೆದ ಮೆಗಾಹರಾಜಿನಲ್ಲಿ ರಿಷಭ್‌ ಪಂತ್‌ ದಾಖಲೆಯ 27 ಕೋಟಿ ರೂ.ಗಳಿಗೆ ಲಕ್ನೋ ಸೂಪರ್‌ ಜೈಂಟ್ಸ್‌ ತಂಡಕ್ಕೆ ಬಿಕರಿಯಾದರು.

    ವಿಶ್ವದಾಖಲೆ ಬರೆದ ಜಿಂಬಾಬ್ವೆ

    2026ರ ಟಿ20 ವಿಶ್ವಕಪ್‌ ಟೂರ್ನಿಗೆ ನಡೆದ ಪ್ರಾದೇಶಿಕ ಅರ್ಹತಾ ಸುತ್ತಿನಲ್ಲಿ ಜಿಂಬಾಬ್ವೆ ತಂಡವು ಗ್ಯಾಂಬಿಯಾ ವಿರುದ್ಧ 20 ಓವರ್‌ಗಳಲ್ಲಿ ಬರೋಬ್ಬರಿ 344 ರನ್ ಚಚ್ಚಿತು. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಇನ್ನಿಂಗ್ಸ್‌ವೊಂದರಲ್ಲೇ ಅತ್ಯಧಿಕ ರನ್‌ ಕಲೆಹಾಕಿದ ವಿಶ್ವ ದಾಖಲೆ ಬರೆಯಿತು. ಇದಕ್ಕೂ ಮುನ್ನ ಮಂಗೋಲಿಯಾ ವಿರುದ್ಧ 314 ರನ್ ಗಳಿಸಿದ್ದ ನೇಪಾಳ ಹೆಸರಿನಲ್ಲಿ ಈ ದಾಖಲೆ ದಾಖಲಾಗಿತ್ತು. ಇನ್ನು ಕೆಲವೇ ದಿನಗಳ ಹಿಂದೆ ಬಾಂಗ್ಲಾದೇಶ ವಿರುದ್ಧ ನಡೆದ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 297 ರನ್ ಕಲೆಹಾಕುವ ಮೂಲಕ ಈ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿತ್ತು. ಇದೀಗ ಜಿಂಬಾಬ್ವೆಯ ತ್ರಿಶತಕದ ಇನ್ನಿಂಗ್ಸ್‌ನಿಂದಾಗಿ ಭಾರತ 3ನೇ ಸ್ಥಾನಕ್ಕೆ ಕುಸಿಯಿತು.

    ವರ್ಷದ ಕೊನೆಯಲ್ಲಿ ಒಂದು ಶತಕ, ಹಲವು ದಾಖಲೆ

    ಆಸ್ಟ್ರೇಲಿಯಾ ವಿರುದ್ಧ ನಡೆದ ಬಾಕ್ಸಿಂಗ್‌ ಡೇ ಟೆಸ್ಟ್‌ ಕ್ರಿಕೆಟ್‌ನಲ್ಲಿ ನಿತೀಶ್‌ ರೆಡ್ಡಿ ವರ್ಷದ ಕೊನೆಯಲ್ಲಿ ತಮ್ಮ ಚೊಚ್ಚಲ ಶತಕ ಸಿಡಿಸಿ ಹಲವು ದಾಖಲೆ ಬರೆದರು. ಆಸ್ಟ್ರೇಲಿಯಾದಲ್ಲಿ ಶತಕ ಭಾರಿಸಿದ ಭಾರತದ 3ನೇ ಕಿರಿಯ ಆಟಗಾರ, 2020ರ ಬಳಿಕ ಮೆಲ್ಬೋರ್ನ್‌ನಲ್ಲಿ ಶತಕ ಬಾರಿಸಿದ ಏಕೈಕ ಭಾರತೀಯ ಎಂಬ ಖ್ಯಾತಿ ಪಡೆದರಲ್ಲದೇ 8ನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡುವಾಗ ಅತಿಹೆಚ್ಚು ರನ್‌ ಗಳಿಸಿದ ದಿಗ್ಗಜ ಅನಿಲ್‌ ಕುಂಬ್ಳೆ ಅವರ ದಾಖಲೆಯನ್ನೂ ಉಡೀಸ್‌ ಮಾಡಿದರು.

    ಅತಿಹೆಚ್ಚು ರನ್‌ ಬಾರಿಸಿದ ಭಾರತದ ಟಾಪ್‌-5 ಬ್ಯಾಟರ್ಸ್‌

    ಏಕದಿನ ಹಾಗೂ ಟೆಸ್ಟ್‌ ಕ್ರಿಕೆಟ್‌ನಲ್ಲಿ ನಿರಾಸೆ ಅನುಭವಿಸಿದ ಟೀಂ ಇಂಡಿಯಾ ಟಿ20 ಕ್ರಿಕೆಟ್‌ನಲ್ಲಿ ಅದ್ಭುತ ಸಾಧನೆ ಮಾಡಿತು. ಟೀಂ ಇಂಡಿಯಾ ಪ್ರಸಕ್ತ ವರ್ಷದಲ್ಲಿ ಒಟ್ಟು 26 ಪಂದ್ಯಗಳನ್ನಾಡಿ, 22ರಲ್ಲಿ ಜಯ ಸಾಧಿಸಿತು. ಈ ವರ್ಷ ಹಲವು ಯುವ ಆಟಗಾರರು ಅಮೋಘ ಪ್ರದರ್ಶನ ನೀಡಿದರು. ಈ ಪೈಕಿ ಸಂಜು ಸ್ಯಾಮ್ಸನ್‌ (436 ರನ್‌), ಸೂರ್ಯಕುಮಾರ್‌ ಯಾದವ್‌ (429 ರನ್‌), ರೋಹಿತ್‌ ಶರ್ಮಾ (378 ರಮ್‌), ತಿಲಕ್‌ ವರ್ಮಾ (306 ರನ್‌) ಅತಿಹೆಚ್ಚು ರನ್‌ ಸಿಡಿಸಿದ ಟಾಪ್‌-5 ಬ್ಯಾರ್‌ಗಳಾಗಿ ಹೊರಹೊಮ್ಮಿದರು.

    ಕಿವೀಸ್‌ ವನಿತೆಯರಿಗೆ ಚೊಚ್ಚಲ ಚಾಂಪಿಯನ್‌ ಕಿರೀಟ

    ಅಕ್ಟೋಬರ್‌ ತಿಂಗಳು ದುಬೈನಲ್ಲಿ ನಡೆದ ಐಸಿಸಿ ಮಹಿಳೆಯರ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ನ್ಯೂಜಿಲೆಂಡ್‌ ಮಹಿಳೆಯರ ತಂಡ ಟ್ರೋಫಿ ಮುಡಿಗೇರಿಸಿಕೊಂಡಿತು. 14 ವರ್ಷಗಳ ಬಳಿಕ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ ಫೈನಲ್‌ ತಲುಪಿದ್ದ ನ್ಯೂಜಿಲೆಂಡ್‌ ತಂಡ ಚೊಚ್ಚಲ ಬಾರಿಗೆ ಚಾಂಪಿಯನ್‌ ಆಗಿ ಹೊರಹೊಮ್ಮಿತು. ದಕ್ಷಿಣ ಆಫ್ರಿಕಾ ತಂಡ 2ನೇ ಬಾರಿಗೆ ರನ್ನರ್‌ ಅಪ್‌ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು.

    ಟೀಂ ಇಂಡಿಯಾಕ್ಕೆ ಸೋಲಿನ ಕಹಿ

    2024ರ ವರ್ಷಾರಂಭದಲ್ಲಿ ಟೆಸ್ಟ್‌, ಏಕದಿನ ಹಾಗೂ ಟಿ20 ಕ್ರಿಕೆಟ್‌ ಮಾದರಿಯಲ್ಲಿ ನಂ.1 ಸ್ಥಾನದಲ್ಲಿದ್ದ ಭಾರತ, ವರ್ಷದ ಕೊನೇ ದಿನಗಳಲ್ಲಿ ಸಾಲು-ಸಾಲು ಸೋಲುಗಳನ್ನು ಎದುರಿಸಿತು. 2024ರ ಟಿ20 ವಿಶ್ವಕಪ್‌ ಗೆದ್ದ ಬಳಿಕ ಶ್ರೀಲಂಕಾ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಅಂತರದಲ್ಲಿ ಸೋಲುಕಂಡಿತು. ನ್ಯೂಜಿಲೆಂಡ್‌ ವಿರುದ್ಧ ಮೂರು ಪಂದ್ಯಗಳ ಟೆಸ್ಟ್‌ ಸರಣಿಯಲ್ಲೂ ವೈಟ್‌ವಾಶ್‌ ಆಗಿ ಕೆಟ್ಟ ದಾಖಲೆ ಹೆಗಲಿಗೇರಿಸಿಕೊಂಡಿತು. ಈ ಬೆನ್ನಲ್ಲೇ ಬಾರ್ಡರ್‌ ಗವಾಸ್ಕರ್‌ ಟ್ರೋಫಿಯ 5 ಪಂದ್ಯಗಳ ಸರಣಿಯ ಪೈಕಿ ಮೊದಲ ನಾಲ್ಕು ಪಂದ್ಯಗಳಲ್ಲಿ 2-1 ಹಿನ್ನಡೆ ಅನುಭವಿಸಿತು. ಇದರಿಂದಾಗಿ ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ ಭಾರೀ ಟೀಕೆಗೆ ಗುರಿಯಾದರು.