ಬೆಂಗಳೂರು: ಪಠ್ಯಪುಸ್ತಕ ಪರಿಷ್ಕರಣೆ ವಿವಾದದ ಬೆನ್ನಲ್ಲೇ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಅವರಿಗೆ ಕೆಲ ಸಂಘಟನೆಗಳಿಂದ ಬೆದರಿಕೆ ಕರೆಗಳು ಬಂದಿದ್ದು, ಪೊಲೀಸ್ ಬಿಗಿ ಭದ್ರತೆ ನೀಡಲಾಗಿದೆ.
ಪಠ್ಯಗಳ ಪರಿಷ್ಕರಣೆ ವಿವಾದದ ಹಿನ್ನೆಲೆಯಲ್ಲಿ ಅನೇಕ ಸಂಘಟನೆಗಳು ರೋಹಿತ್ ಚಕ್ರತೀರ್ಥರಿಗೆ ಬೆದರಿಕೆ ಹಾಕಿವೆ. ಸಂಘಟನಾಕಾರರು ಫೋನ್ ಕರೆ ಮಾಡಿ ಧಮ್ಕಿ ಹಾಕಿದ್ದಾರೆ ಎನ್ನಲಾಗಿದೆ. ಇದರಿಂದ ಮುಂಜಾಗ್ರತಾ ಕ್ರಮವಾಗಿ ರೋಹಿತ್ ಚಕ್ರತೀರ್ಥ ನಿವಾಸಕ್ಕೆ ಬಿಗಿ ಭದ್ರತೆ ನೀಡಲಾಗಿದೆ. ಇದನ್ನೂ ಓದಿ: ಅಂಬೇಡ್ಕರ್ ಮರೆತಿದ್ದು ಕಾಂಗ್ರೆಸ್ ಹೊರತು ನಾವಲ್ಲ: ಬಿಜೆಪಿ ತಿರುಗೇಟು
ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ಪರಿಷ್ಕರಿಸಿದ ಪಠ್ಯ ಪುಸ್ತಕದಲ್ಲಿ 7ನೇ ತರಗತಿ ಸಮಾಜ ವಿಜ್ಞಾನ ಪುಸ್ತಕದಲ್ಲಿ ಅಂಬೇಡ್ಕರ್ ಅವರ ಬಗ್ಗೆ ಮಾಹಿತಿ ತೆಗೆದಿದ್ದಾರೆ. 9ನೇ ತರಗತಿ ಪುಸ್ತಕದಲ್ಲಿ `ಸಂವಿಧಾನ ಶಿಲ್ಪಿ’ ಎಂಬ ಬಿರುದನ್ನು ತೆಗೆದುಹಾಕಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಇದಕ್ಕೆ ತಿರುಗೇಟು ನೀಡಿದ್ದ ಬಿಜೆಪಿ 10ನೇ ತರಗತಿಯಲ್ಲಿ ಅಂಬೇಡ್ಕರ್ ಪಠ್ಯ ಇರುವುದಾಗಿ ಫೋಟೋವನ್ನು ಟ್ವೀಟ್ ಮಾಡಿತ್ತು.
ಹತ್ತನೇ ತರಗತಿಯ ಕನ್ನಡ ಪುಸ್ತಕದಲ್ಲಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಪಠ್ಯವೇ ಇರಲಿಲ್ಲ.
ನಮ್ಮ ಸರ್ಕಾರ ಅಂಬೇಡ್ಕರ್ ಅವರ ಪಠ್ಯವನ್ನು ಸೇರಿಸಿ ಕಾಂಗ್ರೆಸ್ ಮಾಡಿದ ತಪ್ಪನ್ನು ಅಳಿಸಿ ಹಾಕಿದೆ.
ಬೆಂಗಳೂರು: ಪಠ್ಯಪುಸ್ತಕ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ಪರಿಷ್ಕರಿಸಿರುವ ಪಠ್ಯಪುಸ್ತಕದಲ್ಲಿ ಅಂಬೇಡ್ಕರ್ `ಸಂವಿಧಾನ ಶಿಲ್ಪಿ’ ಬಿರುದನ್ನು ಕೈ ಬಿಡಲಾಗಿದೆ ಹಾಗೂ ಅಂಬೇಡ್ಕರ್ ಪಠ್ಯವನ್ನು ಕೈಬಿಡಲಾಗಿದೆ ಎಂದು ಬಿಜೆಪಿ ವಿರುದ್ಧ ಪ್ರತಿಪಕ್ಷದ ನಾಯಕರು ಹಾಗೂ ಸಾಹಿತಿಗಳು ಮುಗಿಬಿದ್ದಿದ್ದರು.
ಇದಕ್ಕೆ ಸಾಕ್ಷಿಯೊಂದಿಗೆ ಸ್ಪಷ್ಟನೆ ನೀಡಿರುವ ಬಿಜೆಪಿ 10ನೇ ತರಗತಿಯ ಪಠ್ಯಪುಸ್ತಕದಲ್ಲಿರುವ ಅಂಬೇಡ್ಕರ್ ಪಾಠದ ಚಿತ್ರವನ್ನು ಟ್ವೀಟ್ ಮಾಡಿದೆ. `ಉದಾತ್ತ ಚಿಂತನೆಗಳು’ ಮೊದಲ ಅಧ್ಯಾಯದಲ್ಲಿ ಅಂಬೇಡ್ಕರ್ ಎನ್ನುವ ಒಂದು ಪುಟದ ಮಾಹಿತಿಯನ್ನು ದಲಿತ ವಿರೋಧಿ ಕಾಂಗ್ರೆಸ್ ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಟ್ವೀಟ್ ಮಾಡಿದೆ. ಇದನ್ನೂ ಓದಿ: ಪಠ್ಯ ಪುಸ್ತಕ ಪರಿಷ್ಕರಣೆ ಆಕ್ರೋಶ ಹೊರ ಹಾಕಿದ ನಟ ಚೇತನ್ : ಗಾಂಧಿ, ನೆಹರು ನಮ್ ವಿರೋಧಿಗಳು ಎಂದ ನಟ
ಹತ್ತನೇ ತರಗತಿಯ ಕನ್ನಡ ಪುಸ್ತಕದಲ್ಲಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಪಠ್ಯವೇ ಇರಲಿಲ್ಲ.
ನಮ್ಮ ಸರ್ಕಾರ ಅಂಬೇಡ್ಕರ್ ಅವರ ಪಠ್ಯವನ್ನು ಸೇರಿಸಿ ಕಾಂಗ್ರೆಸ್ ಮಾಡಿದ ತಪ್ಪನ್ನು ಅಳಿಸಿ ಹಾಕಿದೆ.
`ಹತ್ತನೇ ತರಗತಿಯ ಕನ್ನಡ ಪುಸ್ತಕದಲ್ಲಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಪಠ್ಯವೇ ಇರಲಿಲ್ಲ. ನಮ್ಮ ಸರ್ಕಾರ ಅಂಬೇಡ್ಕರ್ ಅವರ ಪಠ್ಯವನ್ನು ಸೇರಿಸಿ ಕಾಂಗ್ರೆಸ್ ಮಾಡಿದ ತಪ್ಪನ್ನು ಅಳಿಸಿ ಹಾಕಿದೆ. ಸಂವಿಧಾನ ಪಿತಾಮಹರನ್ನು ಕಾಂಗ್ರೆಸ್ ಮರೆತಿತ್ತೇ ಹೊರತು, ನಾವಲ್ಲ ಎಂದೂ ಬರೆದುಕೊಂಡಿದೆ. ಇದನ್ನೂ ಓದಿ: ರಸ್ತೆ ಬದಿಗೆ ಉರುಳಿ ಬಿದ್ದ ಕೆಎಸ್‌ಆರ್‌ಟಿಸಿ ಬಸ್ – ಐವರಿಗೆ ಗಾಯ
ಏನಿದು ವಿವಾದ?
7ನೇ ತರಗತಿ ಸಮಾಜ ವಿಜ್ಞಾನ ಪುಸ್ತಕದಲ್ಲಿ ಅಂಬೇಡ್ಕರ್ ಅವರ ಬಗ್ಗೆ ಮಾಹಿತಿ ತೆಗೆದಿದ್ದಾರೆ. 9ನೇ ತರಗತಿ ಪುಸ್ತಕದಲ್ಲಿ `ಸಂವಿಧಾನ ಶಿಲ್ಪಿ’ ಎಂಬ ಬಿರುದನ್ನು ತೆಗೆದುಹಾಕಲಾಗಿದೆ ಎಂದು ಕಾಂಗ್ರೆಸ್ ನಿನ್ನೆ ಆರೋಪಿಸಿತ್ತು. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹಾಗೂ ಪ್ರಿಯಾಂಕ್ ಖರ್ಗೆ ಬಿಜೆಪಿ ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದರು. ಅದಕ್ಕೆ ಸ್ಪಷ್ಟ ಉತ್ತರ ನೀಡಿರುವ ಬಿಜೆಪಿ ಅಂಬೇಡ್ಕರ್‌ಗೆ 1 ಪುಟದ ಮಾಹಿತಿಯನ್ನು ಮೀಸಲಿಟ್ಟಿರುವುದಾಗಿ ತಿಳಿಸಿದೆ.
ಪಠ್ಯ ಪುಸ್ತಕ ಪರಿಷ್ಕರಣೆಗೆ ಸಂಬಂಧಪಟ್ಟಂತೆ ಪರ ವಿರೋಧದ ಅಲೆ ಜೋರಾಗುತ್ತಿದೆ. ಪಠ್ಯ ಪರಿಷ್ಕರಣೆ ಕುರಿತಂತೆ ಈವರೆಗೂ ಸಾಹಿತಿಗಳು ಮತ್ತು ರಾಜಕಾರಣಿಗಳ ಪ್ರವೇಶ ಮಾತ್ರ ಆಗಿತ್ತು. ಇದೀಗ ಸಿನಿಮಾ ನಟ, ಸಾಮಾಜಿಕ ಹೋರಾಟಗಾರ ಚೇತನ್ ಪ್ರವೇಶ ಮಾಡಿದ್ದಾರೆ. ಪಠ್ಯ ಪುಸ್ತಕ ಪರಿಷ್ಕರಣೆಗೆ ಸಂಬಂಧ ಪಟ್ಟಂತೆ ಅವರು ತಮ್ಮ ಆಕ್ರೋಶವನ್ನು ವಿಭಿನ್ನವಾಗಿ ಹೊರ ಹಾಕಿದ್ದಾರೆ. ಇದನ್ನೂ ಓದಿ: ಎರಡೇ ದಿನಕ್ಕೆ 100 ಕೋಟಿ ಕ್ಲಬ್ ಸೇರಿದ ಕಮಲ್ ಹಾಸನ್ ನಟನೆಯ `ವಿಕ್ರಮ್’ ಚಿತ್ರ
ಈವರೆಗೂ ರೋಹಿತ್ ಚಕ್ರತೀರ್ಥ ಮತ್ತು ಬಿಜೆಪಿ ಬಗ್ಗೆಯೇ ಕಟುವಾಗಿ ಟೀಕೆ ಮಾಡುತ್ತಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಕ್ಕೂ ಚೇತನ್ ಕಿವಿ ಹಿಂಡಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ವಿಡಿಯೋದಲ್ಲಿ ಅವರು, “ಗಾಂಧಿ – ನೆಹರು ನಮ್ಮ ವಿರೋಧಿಗಳು . ಆರ್ ಎಸ್ ಎಸ್, ಹೆಗೆಡೆವಾರ್ ನಮ್ಮ ವಿರೋಧಿಗಳು. ಅಂಬೇಡ್ಕರ್ , ಕುವೆಂಪು ,ದರಾ ಬೇಂದ್ರೆ ಪರ ನಮ್ಮ ನಿಲುವು” ಎಂದು ಹೇಳಿದ್ದಾರೆ. ಇದನ್ನೂ ಓದಿ: ಬೇಬಿ ಶವರ್‌ನಲ್ಲಿ ಮಿಂಚಿದ ಪ್ರಣೀತಾ ಸುಭಾಷ್
ಕಾಂಗ್ರೆಸ್ ಕಾಲ ಬಂದರೆ ಗಾಂಧಿ , ನೆಹರು ಕುರಿತಾದ ಪಾಠವನ್ನು ಮಕ್ಕಳಿಗೆ ಹೊರೆಸುತ್ತಾರೆ. ಈಗ ಬಿಜೆಪಿಯು ಸಂಘದ ಪಟ್ಟಿ ಹಚ್ಚಲು ಮುಂದಾಗಿದೆ ಎಂದಿರುವ ಚೇತನ್, ಈ ಕುರಿತು ನಾವೆಲ್ಲ ಸಾಮೂಹಿ ಚಳವಳಿಗೆ ಧುಮುಕಬೇಕು. ಸಮಸಮಾಜಕ್ಕಾಗಿ – ಸೈದ್ಧಾಂತಿಕ ನಿಲುವಿಗಾಗಿ ಹೋರಾಡಿದವರು ಪಠ್ಯದಲ್ಲಿರಲಿ. ಕಾಂಗ್ರೆಸ್ , ಜೆಡಿಎಸ್ , ಬಿಜೆಪಿ ಎಲ್ಲರದ್ದೂ ಒಂದೇ ಕಥೆ. ಪಠ್ಯ ಪುಸಕ್ತ ಪರಿಷ್ಕರಣಾ ಸಮಿತಿ ಏಜೆನ್ಸಿಯು ಪಾರ್ಟಿಗಳ ಹಿಡಿತದಲ್ಲಿ ಇರಬಾರದು ಎಂದಿದ್ದಾರೆ ಚೇತನ್.
ಮಧ್ಯದಲ್ಲಿ ಎಲ್ಲಿಡಲಿ ಅಂತಾರೆ ಸಿದ್ದರಾಮಯ್ಯ: ಹೆಡ್ಗೆವಾರ್ ಕಂಡರೆ ಇವರಿಗೆ ಯಾಕೆ ಸಂಕಟ. ಹೆಡ್ಗೆವಾರ್ ಭಾರತ್ ಮಾತಾ ಕಿ ಜೈ ಅನ್ನೋ ಶಿಕ್ಷಣವನ್ನ ಕಲಿಸಿದ್ದಾರೆಯೇ ಹೊರತು ಭಾರತಕ್ಕೆ ಬಾಂಬ್ ಹಾಕುವುದನ್ನು ಕಲಿಸಿಲ್ಲ. ಭಾರತಕ್ಕೆ ಬಾಂಬ್ ಹಾಕುವವರು ಸಿದ್ದರಾಮಯ್ಯಗೆ ಬಹಳ ಬೇಕಾದವರು. ಭಾರತ್ ಮಾತಾ ಕೀ ಜೈ ಅಂದರೆ ಇವರಿಗೆ ಉರಿ ಹತ್ತುತ್ತೆ ಎಂದು ಪ್ರಶ್ನಿಸಿದ್ದಾರೆ.
ಪಠ್ಯ ಪುಸ್ತಕದಲ್ಲಿ ಹೆಡ್ಗೆವಾರ್ ಭಾಷಣ ಇರಬೇಕೋ, ಬೇಡ್ವೋ ಅನ್ನೋದನ್ನ ಕೇಳೋಕೆ ಸಿದ್ದರಾಮಯ್ಯ ಯಾರು? ಪಠ್ಯಪುಸ್ತಕ ಪರಿಷ್ಕರಣ ಸಮಿತಿ ತೀರ್ಮಾನ ಮಾಡಿದೆ. ಸರ್ಕಾರ ಅದನ್ನ ಒಪ್ಪಿದೆ. ಮಧ್ಯದಲ್ಲಿ ನಂದು ಎಲ್ಲಿಡಲಿ ಅಂತ ಕೇಳೋಕೆ ಇವರ್ಯಾರು? ಎಂದು ಕುಟುಕಿದ್ದಾರೆ. ಇದನ್ನೂ ಓದಿ: ನಡು ರಸ್ತೆಯಲ್ಲೇ ಮಾರಕಾಸ್ತ್ರದಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ
ಚಡ್ಡಿ ವಿಚಾರಕ್ಕೆ ಕಿಡಿ ಕಾರಿದ ಸಿಟಿ ರವಿ ಅವರು, ಇದೇ ಚಡ್ಡಿ, ಸಂಘಿ ನರೇಂದ್ರ ಮೋದಿಯವರೇ ಅಂಬೇಡ್ಕರ್ ಹುಟ್ಟೂರನ್ನ ಅಭಿವೃದ್ಧಿ ಮಾಡಿದ್ದು. ಭೀಮ್ ಆಪ್ ತಂದಿದ್ದು. 2 ಬಾರಿ ಅನಕ್ಷರಸ್ಥ ವ್ಯಕ್ತಿಯನ್ನ ಅಂಬೇಡ್ಕರ್ ಎದುರು ನಿಲ್ಲಿಸಿ ಸೋಲಿಸಿದ್ದು ಇದೇ ಕಾಂಗ್ರೆಸ್. ಇಂದು ಅಂಬೇಡ್ಕರ್ ಬಗ್ಗೆ ನಮಗೆ ಹೇಳುತ್ತಾರೆ. ಅಂಬೇಡ್ಕರ್ ಬಗ್ಗೆ ನಮಗಿರೋ ಅಭಿಮಾನಕ್ಕೆ ಇವರ ಸರ್ಟಿಫಿಕೇಟ್ ಬೇಕಾಗಿಲ್ಲ ಎಂದು ಲೇವಡಿ ಮಾಡಿದ್ದಾರೆ.
ಜವಾಹರ್‌ಲಾಲ್ ನೆಹರೂ ಭಾರತರತ್ನವನ್ನ ತಮಗೆ ತಾವೇ ಕೊಟ್ಕೊಂಡ್ರು. ಆದರೆ ಅಂಬೇಡ್ಕರ್ ಅವರಿಗೆ ಭಾರತರತ್ನ ಕೊಡುವಂತೆ ಶಿಫಾರಸ್ಸು ಮಾಡಿದ್ದು ಬಿಜೆಪಿ ಸರ್ಕಾರದಲ್ಲಿದ್ದ ಅಟಲ್ ಬಿಹಾರಿ ವಾಜಪೇಯಿ. ಸಿದ್ದರಾಮಯ್ಯನೂ ಅಲ್ಲ, ಕಾಂಗ್ರೆಸ್ ಪಾರ್ಟಿಯೂ ಅಲ್ಲ. ಕಾಂಗ್ರೆಸ್ ಹೆಜ್ಜೆ-ಹೆಜ್ಜೆಗೂ ಅಂಬೇಡ್ಕರ್ ಅವರನ್ನು ತುಳಿಯುತ್ತಲೇ ಬಂದಿದೆ. ಇಂಥವರು ಅಂಬೇಡ್ಕರ್ ಬಗ್ಗೆ ಉದ್ದುದ್ದ ಭಾಷಣ ಮಾಡುತ್ತಾರೆ ಎಂದು ಪಂಚ್ ಕೊಟ್ಟಿದ್ದಾರೆ.
ದುರಹಂಕಾರ ಹಾಗೂ ಓಲೈಕೆ ರಾಜಕಾರಣವನ್ನ ರಾಜ್ಯದ ಜನ ಒಪ್ಪಲ್ಲ, ಕ್ಷಮಿಸಲ್ಲ ಎಂದು ಹೇಳಿದ್ದಾರೆ. ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿ ಬಿದ್ದಾಗ ಡಿಕೆಶಿ-ಸಿದ್ದು ಬಾಯಿ ಬಂದ್ ಆಗಿತ್ತು. ಬೆಂಕಿ ಹಾಕಿದವರೆಲ್ಲಾ ಇದೆ ಸಿದ್ದು ಅಂಡ್ ಡಿಕೆಶಿ ಬ್ರದರ್ಸ್ ಅದಕ್ಕೆ ಬಾಯಿ ಬಂದ್ ಆಗಿತ್ತು. ಈಗ ಡಿಜೆ ಹಳ್ಳಿ – ಕೆಜೆ ಹಳ್ಳಿಯಲ್ಲಿ ನಡೆದ ಘಟನೆಯಂತೆ ಇಡೀ ರಾಜ್ಯದಲ್ಲಿ ಮಾಡಲು ಹೊರಟಿದ್ದಾರೆ. ಮತಾಂದತೆ ಬೆಳೆಸೋದೆ ಇವರ ಗುರಿ ಇದ್ದಂತೆ ಕಾಣುತ್ತದೆ ಎಂದು ಕಿಡಿ ಕಾರಿದ್ದಾರೆ.
ಬೆಂಗಳೂರು: ಪಠ್ಯಪುಸ್ತಕ ಸಮಿತಿಯ ನೂತನ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಸಮಿತಿ ಪರಿಷ್ಕರಿಸಿರುವ ಪಠ್ಯಪುಸ್ತಕದಲ್ಲಿ ಅಂಬೇಡ್ಕರ್ `ಸಂವಿಧಾನ ಶಿಲ್ಪಿ’ ಎಂಬ ಬಿರುದನ್ನು ಕೈ ಬಿಡಲಾಗಿದೆ. ಇದರಿಂದ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ಕಾಂಗ್ರೆಸ್ ದಿಗ್ಗಜರೂ ಬಿಜೆಪಿ ಸರ್ಕಾರ ವಿರುದ್ಧ ಮುಗಿಬಿದ್ದಿದ್ದಾರೆ.
ಈ ಸಂಬಂಧ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ನಮ್ಮ ಭಾರತ ನಿಂತಿರೋದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನದ ಮೇಲೆ. ಅದರಲ್ಲೇ ನಮಗೆ ಎಲ್ಲ ಹಕ್ಕು ಕೊಟ್ಟಿದ್ದಾರೆ. ಅದಕ್ಕಾಗಿ ಇಡೀ ದೇಶದಲ್ಲಿ ಅಂಬೇಡ್ಕರ್ ಅವರ ಪುತ್ಥಳಿ ಇರುವಷ್ಟು ಯಾರದ್ದೂ ಇಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಡು ರಸ್ತೆಯಲ್ಲೇ ಮಾರಕಾಸ್ತ್ರದಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ
ಕಳೆದ 75 ವರ್ಷದಿಂದ ಸಂವಿಧಾನವನ್ನು ಒಪ್ಪಿದ್ದೇವೆ. ಈಗ 6ನೇ ತರಗತಿ ಪಠ್ಯದಲ್ಲಿ ಅಂಬೇಡ್ಕರ್ ಬಗ್ಗೆ ಯಿದ್ದ ಪಠ್ಯವನ್ನು ತೆಗೆದಿದ್ದಾರೆ. 7ನೇ ತರಗತಿ ಸಮಾಜ ವಿಜ್ಞಾನ ಪುಸ್ತಕದಲ್ಲಿ ಅಂಬೇಡ್ಕರ್ ಅವರ ಬಗ್ಗೆ ಮಾಹಿತಿಯನ್ನೇ ತೆಗೆದಿದ್ದಾರೆ. 9ನೇ ತರಗತಿ ಪುಸ್ತಕದಲ್ಲಿ `ಸಂವಿಧಾನ ಶಿಲ್ಪಿ’ ಎಂಬ ಬಿರುದನ್ನೇ ತೆಗೆದುಹಾಕಿದ್ದಾರೆ. ಇಂತಹ ಬೇಜವಾಬ್ದಾರಿ ಸರ್ಕಾರವನ್ನು ನಾನು ನೋಡಿಯೇ ಇಲ್ಲ. ರೋಹಿತ್ ಚಕ್ರತೀರ್ಥ ಬಗ್ಗೆ ಮಾತನಾಡುವುದರಲ್ಲಿಯೂ ಅರ್ಥವಿಲ್ಲ. ಏಕೆಂದರೆ ಇದು ಸರ್ಕಾರದ ಬೇಜಾಬ್ದಾರಿ ಎಂದು ಕಿಡಿ ಕಾರಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ಅಂಬೇಡ್ಕರ್ ಬಗ್ಗೆ ಸಂವಿಧಾನ ಶಿಲ್ಪಿ ಎಂಬ ಸಾಲು ತೆಗೆದಿದ್ದಾರೆ. ಇದರಲ್ಲಿ ಪರಿಷ್ಕರಣೆ ಮಾಡಿರುವುದನ್ನು ಕೈಬಿಡಬೇಕು. ಈ ಹಿಂದೆ ಅಂಬೇಡ್ಕರ್ ಅವರನ್ನು ಸಂವಿಧಾನ ಶಿಲ್ಪಿ ಎಂದು ಉಲ್ಲೇಖಿಸಿದ್ದನ್ನೇ ಮುಂದುವರೆಸಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಯಚೂರು ಅಬಕಾರಿ ಪೊಲೀಸರ ದಾಳಿ – 2.77 ಲಕ್ಷ ಮೌಲ್ಯದ ಮದ್ಯ ಜಪ್ತಿ
ಬಿಜೆಪಿ ಅವರಿಗೆ ಕೋಮು ನಶೆ ತಲೆಗೆ ಹತ್ತಿದೆ. ಅದರಿಂದ ಅವರು ಹೊರಗೆ ಬರಬೇಕು. ಸಂವಿಧಾನ ವಿರೋಧಿಗಳಿಗೆ ಅಧಿಕಾರ ಕೊಟ್ಟದ್ದೇ ತಪ್ಪು ಎನ್ನುವಂತಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಸಹ ಕಿಡಿ ಕಾರಿದ್ದಾರೆ. ಈಗಾಗಲೇ ಬಿಜೆಪಿ ತತ್ವಜ್ಞಾನಿಗಳ ಬರಹಗಳನ್ನ ಪಠ್ಯದಲ್ಲಿ ಕೈಬಿಟ್ಟಿದ್ದಾರೆ. ನಂತರ ದಲಿತ ಸಾಹಿತಿಗಳಿಗೆ ಅಪಮಾನ ಮಾಡಿ, ಇದೀಗ ಅಂಬೇಡ್ಕರ್ ಅವರಿಗೂ ಅಪಮಾನ ಮಾಡಿದ್ದಾರೆ. ಸಂವಿಧಾನ ಶಿಲ್ಪಿ ಅನ್ನೋದನ್ನೇ ಕೈಬಿಟ್ಟಿದ್ದು, ರಚನಾ ಸಮಿತಿ ಅಧ್ಯಕ್ಷರು ಅಂತ ಪುಸ್ತಕದಲ್ಲಿ ಸೇರಿಸಿದ್ದಾರೆ. ಇವರ ಐಡಿಯಾಲಜಿಗೆ ತಕ್ಕಂತೆ ಪುಸ್ತಕಗಳಲ್ಲಿ ಪಾಠ ಇಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಸಂವಿಧಾನ ರಚನೆ ಹೇಗಾಯ್ತು ಅಂತಾ ಇವರಿಗೆ ಗೊತ್ತೇ ಇಲ್ವಾ? ಆದರೂ ಮನುಸ್ಮೃತಿಯನ್ನೇ ಸಂವಿಧಾನ ಅಂತಾರೆ. ಮೊದಲು ಅವರು ಇತಿಹಾಸ ಓದಿಕೊಳ್ಳಲಿ ಎಂದು ಕುಟಕಿದ್ದಾರೆ.
ದಾವಣಗೆರೆ: ಕಾಂಗ್ರೆಸ್‍ನವರು ಚಡ್ಡಿಗಳನ್ನು ಇಡೀ ದೇಶದಿಂದಲೇ ಸುಟ್ಟು ಹಾಕಬೇಕು ಎಂದು ಹೇಳುತ್ತಿದ್ದಾರೆ. ಆರ್‌ಎಸ್‍ಎಸ್ ಚಡ್ಡಿ ವಿಚಾರಕ್ಕೆ ಬಂದ್ರೆ ಕಾಂಗ್ರೆಸ್‍ನವರು ಸರ್ವನಾಶ ಆಗುತ್ತಾರೆ ಎಂದು ದಾವಣಗೆರೆಯಲ್ಲಿ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಕಾಂಗ್ರೆಸ್ ವಿರುದ್ದ ಕಿಡಿಕಾರಿದರು.
ದಾವಣಗೆರೆಯಲ್ಲಿ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆರ್‌ಎಸ್‍ಎಸ್ ಚಡ್ಡಿ ಸುಟ್ಟರೇ ನಾವೇನು ಸುಮ್ಮನೇ ಇರಲ್ಲ. ದೇಶದಲ್ಲಿ ಈಗ ಕಾಂಗ್ರೆಸ್ ಯಾವ ಸ್ಥಿತಿ ಇದೆ. ಅದೇ ರೀತಿಯಾಗಿ ಇಡೀ ದೇಶದಿಂದಲೇ ಸರ್ವನಾಶ ಆಗುತ್ತದೆ. ಅಲ್ಲದೆ ಚಡ್ಡಿ ಅಭಿಯಾನದ ಬಗ್ಗೆ ಮಾತಾಡುವ ಸಿದ್ದರಾಮಯ್ಯ ಅವರಿಗೆ ಬುದ್ಧಿಯಿಲ್ಲ ಎಂದು ಟೀಕಿಸಿದರು.
ಆರ್‌ಎಸ್‍ಎಸ್ ದೇಶ ಸೇವೆಗೆ ಹೆಸರಾದ ಸಂಸ್ಥೆ. ಇಂತಹ ಸಂಘಟನೆ ಬಗ್ಗೆ ಮಾತಾಡುವುದು ನೋಡಿದರೆ ಕಾಂಗ್ರೆಸ್ ನವರಿಗೆ ಬುದ್ಧಿ ಭ್ರಮಣೆಯಾಗಿದೆ. ಅಲ್ಲದೆ ಸಿದ್ದರಾಮಯ್ಯ ಈ ರಾಜ್ಯದ ಮುಖ್ಯಮಂತ್ರಿ ಆಗಿದ್ದವರು, ಈ ರೀತಿ ಹೇಳಿಕೆ ನೀಡುವುದು, ಅವರ ವ್ಯಕ್ತಿತ್ವ ಸರಿಯಾದಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಲೋಕಲ್ ಅಲ್ಲ ಫಾರೀನ್ ಹೆಂಡವೇ ಬೇಕು – ಎಣ್ಣೆಯಿಲ್ಲದೆ ನೀರು ಮುಟ್ಟಲ್ಲ ಈ ಹುಂಜ
ಪಠ್ಯ ಪುಸ್ತಕ ಸಮಿತಿ ಅಧ್ಯಕ್ಷರಾದ ರೋಹಿತ್ ಚಕ್ರತೀರ್ಥ ಅವರ ಬಗ್ಗೆ ಮಾತನಾಡಿದ ಅವರು, ಈಗಾಗಲೇ ರೋಹಿತ್ ಚಕ್ರತೀರ್ಥ ಅವರು ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ಸಿಎಂ ಸ್ಪಷ್ಟಪಡಿಸಿದ್ದಾರೆ. ಕೆಲ ತಿದ್ದುಪಡಿ ಮಾಡಕೊಂಡು ಮಕ್ಕಳಿಗೆ ಪುಸ್ತಕ ನೀಡಲಾಗುತ್ತದೆ. ಆದರೆ ಇದೇ ಚಕ್ರತೀರ್ಥರನ್ನು ಪಿಯುಸಿ ಪಠ್ಯ ಪರಿಷ್ಕರಣೆ ಜವಾಬ್ದಾರಿ ನೀಡಿದ್ದು, ನನ್ನ ಗಮನಕ್ಕೆ ಬಂದಿಲ್ಲ ಎಂದರು. ಇದನ್ನೂ ಓದಿ: ನೆಚ್ಚಿನ ನಟ ಪವನ್ ಕಲ್ಯಾಣ್ ಭೇಟಿಗಾಗಿ 400 ಕಿ.ಮೀ ಪಾದಯಾತ್ರೆ!
ಬೆಂಗಳೂರು: ಕನ್ನಡ ನುಡಿ, ಸಾಹಿತ್ಯ ಮತ್ತು ಸಾಹಿತಿಗಳನ್ನು ಗೇಲಿ ಮಾಡುತ್ತಾ ಬಂದಿರುವ ರೋಹಿತ್ ಚಕ್ರತೀರ್ಥ ಅವರು, ಸಾಮಾಜಿಕ ಜಾಲತಾಣಗಳಲ್ಲಿ ವಿಕೃತಿಯ ಅಭಿಪ್ರಾಯಗಳನ್ನು ಹಂಚಿಕೊಂಡು ಸಾಮಾಜಿಕ ಆರೋಗ್ಯವನ್ನು ಹಾಳು ಮಾಡುತ್ತಿದ್ದಾರೆ. ರೋಹಿತ್ ಚಕ್ರತೀರ್ಥ ಎಂಬ ಕಿಡಿಗೇಡಿಯ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಕನ್ನಡ ಅಭಿವೃದ್ದಿ ಪ್ರಾಧಿಕಾರದಿಂದಲೂ ರೋಹಿತ್ ಚಕ್ರತೀರ್ಥರನ್ನ ಕಿತ್ತುಹಾಕಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗ್ರಹಿಸಿದ್ದಾರೆ.
ಪರಿಷ್ಕೃತ ಪಠ್ಯ ರದ್ದತಿಗೆ ಸಂಬಂಧಿಸಿದಂತೆ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅವರು, ನಾಡದ್ರೋಹಿ ಅಧ್ಯಕ್ಷನ ಸಮಿತಿ ಪರಿಷ್ಕರಿಸಿರುವ ಪಠ್ಯವನ್ನು ರದ್ದುಮಾಡಿ, ನೂತನ ಪರಿಷ್ಕೃತ ಪಠ್ಯ ರಚನೆಯಾಗುವ ವರೆಗೆ ಹಳೆಯ ಪಠ್ಯವನ್ನೇ ಮುಂದುವರಿಸುವುದು. ಸರ್ಕಾರ ಜಿದ್ದಿಗೆ ಬೀಳದೆ ಈ ನಿರ್ಧಾರ ಕೈಗೊಳ್ಳಬೇಕು. ಪಠ್ಯ ಪರಿಷ್ಕರಣಾ ಸಮಿತಿಗೆ ಅನರ್ಹರ ನೇಮಕ ಮತ್ತು ಅದರಿಂದ ಸೃಷ್ಟಿಯಾಗಿರುವ ವಿವಾದಕ್ಕೆ ವಿದ್ಯಾರ್ಥಿಗಳು ಬಲಿಯಾಗಿದ್ದಾರೆ. ಯಾವ ಪಠ್ಯವನ್ನು ಓದಬೇಕೆಂಬ ಬಗ್ಗೆ ವಿದ್ಯಾರ್ಥಿಗಳು, ಯಾವುದನ್ನು ಬೋಧಿಸಬೇಕೆಂದು ಶಿಕ್ಷಕರು ಗೊಂದಲಕ್ಕೀಡಾಗಿದ್ದಾರೆ. ಇದಕ್ಕೆ ಏನು ಪರಿಹಾರ ಎಂದು ಪ್ರಶ್ನಿಸುವ ಮೂಲಕ ಕಿಡಿಕಾರಿದ್ದಾರೆ.
ಕಳೆದ ಹತ್ತು ವರ್ಷಗಳಿಂದ ಕನ್ನಡ ನುಡಿ, ಸಾಹಿತ್ಯ ಮತ್ತು ಸಾಹಿತಿಗಳನ್ನು ಗೇಲಿ ಮಾಡುತ್ತಾ ಬಂದಿರುವ, ಸಾಮಾಜಿಕ ಜಾಲತಾಣಗಳಲ್ಲಿ ವಿಕೃತಿಯ ಅಭಿಪ್ರಾಯಗಳನ್ನು ಹಂಚಿಕೊಂಡು ಸಾಮಾಜಿಕ ಆರೋಗ್ಯವನ್ನು ಹಾಳುಗೆಡಹುತ್ತಾ ಬಂದಿರುವ ರೋಹಿತ್ ಚಕ್ರತೀರ್ಥ ಎಂಬ ಕಿಡಿಗೇಡಿಯ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಕಳೆದ ಹತ್ತು ವರ್ಷಗಳಿಂದ ಕನ್ನಡ ನುಡಿ, ಸಾಹಿತ್ಯ ಮತ್ತು ಸಾಹಿತಿಗಳನ್ನು ಗೇಲಿ ಮಾಡುತ್ತಾ ಬಂದಿರುವ, ಸಾಮಾಜಿಕ ಜಾಲತಾಣಗಳಲ್ಲಿ ವಿಕೃತಿಯ ಅಭಿಪ್ರಾಯಗಳನ್ನು ಹಂಚಿಕೊಂಡು ಸಾಮಾಜಿಕ ಆರೋಗ್ಯವನ್ನು ಹಾಳುಗೆಡಹುತ್ತಾ ಬಂದಿರುವ ರೋಹಿತ್ ಚಕ್ರತೀರ್ಥ ಎಂಬ ಕಿಡಿಗೇಡಿಯ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. 8/8#SaveKarnataka
ನಾಡಗೀತೆ ಮತ್ತು ರಾಷ್ಟ್ರಕವಿ ಕುವೆಂಪು ಅವರನ್ನು ಗೇಲಿಮಾಡಿರುವ, ಸಮಾಜ ಸುಧಾರಕರಾದ ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಬಸವಣ್ಣನವರನ್ನು ಅವಮಾನಿಸಿರುವ ರೋಹಿತ್ ಚಕ್ರತೀರ್ಥ ಅವರನ್ನು ಪಠ್ಯಪರಿಷ್ಕರಣಾ ಸಮಿತಿ ಅಧ್ಯಕ್ಷ ಸ್ಥಾನದಿಂದ ಮಾತ್ರವಲ್ಲ ಕನ್ನಡ ಅಭಿವೃದ್ದಿ ಪ್ರಾಧಿಕಾರದಿಂದಲೂ ಕಿತ್ತುಹಾಕಬೇಕು ಎಂದಿದ್ದಾರೆ. ಇದನ್ನೂ ಓದಿ: ಬೀದರ್ ಪ್ರವೇಶಕ್ಕೆ ಪ್ರಮೋದ್ ಮುತಾಲಿಕ್, ಆಂದೋಲನ ಶ್ರೀಗಳಿಗೆ ಬ್ಯಾನ್
ನಾಡಗೀತೆ ಮತ್ತು ರಾಷ್ಟ್ರಕವಿ ಕುವೆಂಪು ಅವರನ್ನು ಗೇಲಿಮಾಡಿರುವ, ಸಮಾಜ ಸುಧಾರಕರಾದ ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಬಸವಣ್ಣನವರನ್ನು ಅವಮಾನಿಸಿರುವ ರೋಹಿತ್ ಚಕ್ರತೀರ್ಥ ಅವರನ್ನು ಪಠ್ಯಪರಿಷ್ಕರಣಾ ಸಮಿತಿ ಅಧ್ಯಕ್ಷ ಸ್ಥಾನದಿಂದ ಮಾತ್ರವಲ್ಲ ಕನ್ನಡ ಅಭಿವೃದ್ದಿ ಪ್ರಾಧಿಕಾರದಿಂದಲೂ ಕಿತ್ತುಹಾಕಬೇಕು. 7/8#SaveKarnataka
ನಾಡಿನ ಹಲವಾರು ಹಿರಿಯ ಸಾಹಿತಿಗಳು ಪರಿಷ್ಕೃತ ಪಠ್ಯಪುಸ್ತಕಗಳಲ್ಲಿ ಸೇರಿಸಲಾಗಿರುವ ತಮ್ಮ ಕೃತಿಗಳನ್ನು ವಾಪಸ್ಸು ಪಡೆದಿದ್ದಾರೆ. ಸರ್ಕಾರ ತಮ್ಮ ಅಭಿಪ್ರಾಯವನ್ನು ಧಿಕ್ಕರಿಸಿದರೆ ಕಾನೂನು ಹೋರಾಟ ಮಾಡುವುದಾಗಿ ಈ ಸಾಹಿತಿಗಳು ಎಚ್ಚರಿಕೆ ನೀಡಿದ್ದಾರೆ. ಇಂತಹ ವಿವಾದಾತ್ಮಕ ಪಠ್ಯವನ್ನು ಬೋಧಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ನಾಡಿನ ಹಲವಾರು ಹಿರಿಯ ಸಾಹಿತಿಗಳು ಪರಿಷ್ಕೃತ ಪಠ್ಯಪುಸ್ತಕಗಳಲ್ಲಿ ಸೇರಿಸಲಾಗಿರುವ ತಮ್ಮ ಕೃತಿಗಳನ್ನು ವಾಪಸು ಪಡೆದಿದ್ದಾರೆ. @BJP4Karnataka ಸರ್ಕಾರ ತಮ್ಮ ಅಭಿಪ್ರಾಯವನ್ನು ಧಿಕ್ಕರಿಸಿದರೆ ಕಾನೂನು ಹೋರಾಟ ಮಾಡುವುದಾಗಿ ಈ ಸಾಹಿತಿಗಳು ಎಚ್ಚರಿಕೆ ನೀಡಿದ್ದಾರೆ. ಇಂತಹ ವಿವಾದಾತ್ಮಕ ಪಠ್ಯವನ್ನು ಬೋಧಿಸಲು ಹೇಗೆ ಸಾಧ್ಯ? 4/8#SaveKarnataka
ಬಸವಣ್ಣನವರ ವಿಚಾರವೂ ಸೇರಿದಂತೆ ಆಕ್ಷೇಪ ವ್ಯಕ್ತವಾಗಿರುವ ಅಂಶಗಳನ್ನು ಪರಿಷ್ಕರಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ಅವರು ಹೇಳಿದ್ದಾರೆ. ಹಾಗಿದ್ದರೆ ಈಗಿನ ಪರಿಷ್ಕೃತ ಪಠ್ಯವನ್ನು ಕೈಬಿಡಲಾಗುವುದೇ? ಇದನ್ನು ಮುಖ್ಯಮಂತ್ರಿ ಬೊಮ್ಮಾಯಿ ಅವರು ಸ್ಪಷ್ಟಪಡಿಸಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹಿಂದೂಗಳ ರಕ್ಷಣೆ ಹೆಸರಲ್ಲಿ ಅಧಿಕಾರಕ್ಕೇರಿ, ಹಿಂದೂ ವಿರೋಧಿ ವರ್ತನೆ ಸರಿಯಲ್ಲ: ಮುತಾಲಿಕ್
ಬಸವಣ್ಣನವರ ವಿಚಾರವೂ ಸೇರಿದಂತೆ ಆಕ್ಷೇಪ ವ್ಯಕ್ತವಾಗಿರುವ ಅಂಶಗಳನ್ನು ಪರಿಷ್ಕರಿಸಲಾಗುವುದು ಎಂದು @CMofKarnataka ಅವರು ಹೇಳಿದ್ದಾರೆ. ಹಾಗಿದ್ದರೆ ಈಗಿನ ಪರಿಷ್ಕೃತ ಪಠ್ಯವನ್ನು ಕೈಬಿಡಲಾಗುವುದೇ? ಇದನ್ನು ಮುಖ್ಯಮಂತ್ರಿ @BSBommai ಅವರು ಸ್ಪಷ್ಟಪಡಿಸಬೇಕು. 3/8#SaveKarnataka
ಜನತೆಯಲ್ಲಿ ಮೂಡಿರುವ ಗೊಂದಲವನ್ನು ಪರಿಹರಿಸುವಂತಹ ಸ್ಪಷ್ಟತೆ ರಾಜ್ಯದ ಬೊಮ್ಮಾಯಿ ಅವರ ಮಾತಿನಲ್ಲಿ ಇರಬೇಕು. ಇವರ ಮಾತು ಇನ್ನಷ್ಟು ಗೊಂದಲಗಳನ್ನು ಸೃಷ್ಟಿಸಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶಿಕ್ಷಕರು ಬೋಧಿಸಲಿರುವುದು ಹಳೆಯ ಪಠ್ಯವೇ? ಪರಿಷ್ಕೃತ ಪಠ್ಯವೇ ಎಂದು ಎಂದಿದ್ದಾರೆ.
ಜನತೆಯಲ್ಲಿ ಮೂಡಿರುವ ಗೊಂದಲವನ್ನು ಪರಿಹರಿಸುವಂತಹ ಸ್ಪಷ್ಟತೆ ರಾಜ್ಯದ @CMofKarnataka ಅವರ ಮಾತಿನಲ್ಲಿ ಇರಬೇಕು. ಇವರ ಮಾತು ಇನ್ನಷ್ಟು ಗೊಂದಲಗಳನ್ನು ಸೃಷ್ಟಿಸಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶಿಕ್ಷಕರು ಬೋಧಿಸಲಿರುವುದು ಹಳೆಯ ಪಠ್ಯವೇ? ಪರಿಷ್ಕೃತ ಪಠ್ಯವೇ? 2/8#SaveKarnataka
ವಿಸರ್ಜನೆ ಮಾಡಬೇಕಾಗಿರುವು ಪರಿಷ್ಕೃತ ಪಠ್ಯವನ್ನು, ಈಗಾಗಲೇ ಅವಧಿ ಮುಗಿದಿರುವ ಪಠ್ಯಪುಸ್ತಕ ಪರಿಶೀಲನಾ ಸಮಿತಿಯನ್ನಲ್ಲ. ಪೂರ್ವಗ್ರಹ ಪೀಡಿತ ಅಧ್ಯಕ್ಷನನ್ನು ಕಿತ್ತುಹಾಕಿದ ಮೇಲೆ ಆ ಸಮಿತಿ ಶಿಫಾರಸು ಮಾಡಿರುವ ಪಠ್ಯವನ್ನು ಹೇಗೆ ಒಪ್ಪಿಕೊಳ್ಳಲು ಸಾಧ್ಯ ಎಂದು ಹೇಳಿದ್ದಾರೆ.
ಬೆಂಗಳೂರು: ನಾಡಗೀತೆ, ಕುವೆಂಪು, ನಾಡಧ್ವಜಕ್ಕೆ ಅಪಮಾನ ಎಸಗಿದ ಚಕ್ರತೀರ್ಥನನ್ನು ಬಂಧಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣಗೌಡ.ಟಿ.ಎ ಆಕ್ರೋಶ ಹೊರಹಾಕಿದ್ದಾರೆ.
ಇತ್ತೀಚೆಗೆ ಪಠ್ಯಪುಸ್ತಕ ಪುಸ್ತಕ ಪರಿಶೀಲನಾ ಸಮಿತಿ ವಿರುದ್ಧ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಪಠ್ಯ ಸಂಘರ್ಷಕ್ಕಿಂತ ಇದು ಜಾತಿ ಸಂಘರ್ಷವಾಗಿ ಮಾರ್ಪಡುತ್ತಿತ್ತು. ಈ ಹಿನ್ನೆಲೆ ಎಚ್ಚೆತ್ತ ಸಿಎಂ ಬೊಮ್ಮಾಯಿ ನಿನ್ನೆ ಸಮಿತಿಯನ್ನು ವಿಸರ್ಜಿಸಿದ್ದೇವೆ ಎಂದು ತಿಳಿಸಿದ್ದರು.
ಪಠ್ಯಪುಸ್ತಕ ಪುನರ್ ಪರಿಶೀಲನಾ ಸಮಿತಿಯನ್ನು ವಿಸರ್ಜಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು @BSBommai ಹೇಳಿಕೆ ನೀಡಿರುವುದು ಸ್ವಾಗತಾರ್ಹ. ಕೂಡಲೇ ಪರಿಷ್ಕೃತ ಪಠ್ಯವನ್ನು ಸಂಪೂರ್ಣ ಹಿಂದಕ್ಕೆ ಪಡೆದು ಹಳೆಯ ಪಠ್ಯವನ್ನೇ ಮುಂದುವರೆಸಬೇಕು, ನಾಡಗೀತೆ, ಕುವೆಂಪು, ನಾಡಧ್ವಜಕ್ಕೆ ಅಪಮಾನ ಎಸಗಿದ ಚಕ್ರತೀರ್ಥನನ್ನು ಬಂಧಿಸಬೇಕು.
— ನಾರಾಯಣಗೌಡ್ರು.ಟಿ.ಎ | Narayanagowdru T.A. (@narayanagowdru) June 4, 2022
ಈ ಹಿನ್ನೆಲೆ ಟ್ವೀಟ್ ಮಾಡಿದ ನಾರಾಯಣಗೌಡ ಅವರು, ಪಠ್ಯಪುಸ್ತಕ ಪುನರ್ ಪರಿಶೀಲನಾ ಸಮಿತಿಯನ್ನು ವಿಸರ್ಜಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು@BSBommai ಹೇಳಿಕೆ ನೀಡಿರುವುದು ಸ್ವಾಗತಾರ್ಹ. ಕೂಡಲೇ ಪರಿಷ್ಕೃತ ಪಠ್ಯವನ್ನು ಸಂಪೂರ್ಣ ಹಿಂದಕ್ಕೆ ಪಡೆದು ಹಳೆಯ ಪಠ್ಯವನ್ನೇ ಮುಂದುವರೆಸಬೇಕು. ನಾಡಗೀತೆ, ಕುವೆಂಪು, ನಾಡಧ್ವಜಕ್ಕೆ ಅಪಮಾನ ಎಸಗಿದ ಚಕ್ರತೀರ್ಥನನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
ಬೆಂಗಳೂರು: ನಾನು ಐಐಟಿ ಪ್ರೊಫೆಸರ್ ಅಲ್ಲ. ಸಚಿವ ಬಿ.ಸಿ ನಾಗೇಶ್ ಅವರು ಬಾಯಿ ತಪ್ಪಿ ಹೇಳಿದ್ದಾರೆ ಎಂದು ಪಠ್ಯ ಪರಿಷ್ಕರಣೆ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಸ್ಪಷ್ಟನೆ ನೀಡಿದ್ದಾರೆ.
ಪಠ್ಯ ಪರಿಷ್ಕರಣೆ ವಿವಾದ ಸಂಬಂಧ ಪಬ್ಲಿಕ್ ಟಿವಿ ಜೊತೆ ಎಕ್ಸ್ ಕ್ಲೂಸಿವ್ ಆಗಿ ಮಾತನಾಡಿದ ಅವರು, ಉಪನ್ಯಾಸಕನಾಗಿ ನಾನು ನನ್ನ ವೃತ್ತಿ ಜೀವನ ಆರಂಭಿಸಿದ್ದೇನೆ. ಕಳೆದ 10-15 ವರ್ಷಗಳಿಂದ ನಾನು ಶಿಕ್ಷಣ ಕ್ಷೇತ್ರದಲ್ಲಿಯೇ ಇದ್ದೇನೆ. ಶಿಕ್ಷಣ ಸಚಿವರು ಮಾತಿನ ಭರದಲ್ಲಿ ಬಾಯಿ ತಪ್ಪಿ ಹೇಳಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ವೀಸಾ ಹಗರಣ – ಕಾರ್ತಿ ಚಿದಂಬರಂಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ ಕೋರ್ಟ್
ನಾನು ನನ್ನ ವೃತ್ತಿ ಜೀವನ ಪ್ರಾರಂಭಿಸಿದಾಗಿನಿಂದ ಐಐಟಿ ಪ್ರವೇಶ ಪರೀಕ್ಷೆಗಳಿಗೆ ತರಬೇತಿ ಕೊಡುತ್ತಿದ್ದೆ. ಮಕ್ಕಳಿಗೆ ಐಐಟಿ, ಜೆಇಇಗೆ ಬೇಕಾದ ಶಿಕ್ಷಣವನ್ನು ನೀಡುತ್ತಿದ್ದೆ ಎಂದು ಹೇಳಿದರು.
ನನ್ನ ಕೆಲಸ ನಾನು ಮಾಡಿದ್ದೇನೆ. ನನ್ನನ್ನು ಸಮಿತಿಯಿಂದ ವಜಾ ಮಾಡಿದ್ರೂ ಸರಿ. ನನ್ನ ಕೆಲಸ ನನಗೆ ತೃಪ್ತಿ ನೀಡಿದೆ. ನಾನು ಎಲ್ಲದಕ್ಕೂ ಸಿದ್ಧನಿದ್ದೇನೆ ಎಂದು ರೋಹಿತ್ ಚಕ್ರತೀರ್ಥ ಸ್ಪಷ್ಟನೆ ಕೊಟ್ಟರು.
– ಪಠ್ಯ ಪುಸ್ತಕ ಪರಿಷ್ಕರಣೆ ಗೊಂದಲ
– ಇಂದು ಅಥವಾ ನಾಳೆ ಸಿಎಂಗೆ ನಾಗೇಶ್ ವರದಿ ಸಲ್ಲಿಕೆ ಸಾಧ್ಯತೆ
ಬೆಂಗಳೂರು: ಪಠ್ಯ ಪುಸ್ತಕ ಪರಿಷ್ಕರಣೆ ಗೊಂದಲ ವಿಚಾರವಾಗಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರು ಇಂದು ಸಂಜೆ ಅಥವಾ ನಾಳೆ ಸಿಎಂಗೆ ವರದಿ ಸಲ್ಲಿಸುವ ಸಾಧ್ಯತೆಯಿದೆ.
ಗುರುವಾರ ರಾತ್ರಿ ಗುಜರಾತ್‍ನಿಂದ ವಾಪಸ್ ಆಗಿರುವ ಸಚಿವರು, ಪಠ್ಯ ಪುಸ್ತಕ ಗೊಂದಲಕ್ಕೆ ತೆರೆ ಎಳೆಯುವ ಸಾಧ್ಯತೆಯಿದೆ. ಈಗಾಗಲೇ ಪಠ್ಯಪುಸ್ತಕ ಗೊಂದಲದ ಬಗ್ಗೆ ಶಿಕ್ಷಣ ಇಲಾಖೆ ವರದಿ ಸಿದ್ಧ ಮಾಡಿದ್ದು, ಇದನ್ನು ನೋಡಿದ ಬಳಿಕ ಸಿಎಂಗೆ ಆ ವರದಿಯನ್ನು ಸಲ್ಲಿಸುತ್ತಾರೆ. ಸಾಹಿತಿಗಳ ಆರೋಪಕ್ಕೆ ಶಿಕ್ಷಣ ಇಲಾಖೆ ದಾಖಲಾತಿ ಸಮೇತ ವರದಿ ಸಿದ್ಧ ಮಾಡಿದೆ. ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಿ ಏನಾಗಿದೆ? ಯಾವ ಪಠ್ಯ ಸೇರ್ಪಡೆ ಮಾಡಲಾಗಿದೆ? ಯಾವ ಪಠ್ಯ ಕೈಬಿಡಲಾಗಿದೆ ಎಂಬ ಸಂಪೂರ್ಣ ಮಾಹಿತಿ ವರದಿಯಲ್ಲಿ ಉಲ್ಲೇಖ ಮಾಡಿದ್ದು, ಈಗ ಕೇಳಿ ಬಂದಿರುವ ಆರೋಪಗಳ ಬಗ್ಗೆ ದಾಖಲಾತಿ ಸಮೇತ ವಿವರಣೆ ನೀಡಲಿದೆ.
ಪರಿಷ್ಕರಣೆ ಸಮಿತಿ ಅಧ್ಯಕ್ಷರ ವಿವರ ಒಳಗೊಂಡು, ಟಿಪ್ಪು, ಭಗತ್ ಸಿಂಗ್, ನಾರಾಯಣ ಗುರು, ಕುವೆಂಪು, ಬಸವಣ್ಣ, ಅಂಬೇಡ್ಕರ್ ಸೇರಿದಂತೆ ವಿವಾದಿತ ಪಠ್ಯಗಳ ಬಗ್ಗೆ ಸಂಪೂರ್ಣ ದಾಖಲಾತಿ ಸಮೇತ ವಿವರಣೆ ನೀಡಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ವರದಿಯಲ್ಲಿ ಏನಿದೆ?:
ಪರಿಷ್ಕರಣೆ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಕನ್ನಡ ಕಾವ್ಯ, ಇತಿಹಾಸವನ್ನು ಅಳವಾಗಿ ಅಭ್ಯಾಸ ಮಾಡಿದ್ದಾರೆ. ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಗೆ ಅವರು ಅರ್ಹರಾಗಿದ್ದಾರೆ ಎನ್ನುವ ಬಗ್ಗೆ ಮಾಹಿತಿ ನೀಡಿದೆ. ಇದರ ಜೊತೆಗೆ ನಾಡಿಗೀತೆಗೆ ಅಪಮಾನ ಮಾಡಿದ್ದಾರೆ ಎಂಬ ಆರೋಪದ ಬಗ್ಗೆ ಮತ್ತು ಆರೋಪದ ವಿಚಾರವಾಗಿ 2017ರಲ್ಲಿ ಬಿ ರಿಪೋರ್ಟ್ ಸಲ್ಲಿಕೆ ಆಗಿರುವ ಬಗ್ಗೆ ಮಾಹಿತಿ ನೀಡಲಾಗಿದೆ.
ಕುವೆಂಪು ಪಠ್ಯದ ಬಗ್ಗೆ ಗೊಂದಲ ಬಗ್ಗೆ ದಾಖಲಾತಿ ಸಮೇತ ವಿವರ ನೀಡಿದ್ದು, 2015-16 ಡಾ. ಮುಡಂಬಡಿತ್ತಾಯ ಸಮಿತಿ ಕುವೆಂಪು ಅವರ 8 ಪಠ್ಯವನ್ನು ಇಟ್ಟಿದ್ದರು. ಆದರೆ ಬರಗೂರು ಸಮಿತಿ ಕುವೆಂಪು ಅವರು ಒಂದು ಪಠ್ಯ ಕಡಿತ ಮಾಡಿ 7 ಪಠ್ಯ ಅಳವಡಿಕೆ ಮಾಡಿತ್ತು. ರೋಹಿತ್ ಚಕ್ರತೀರ್ಥ ಸಮಿತಿ ಹೊಸದಾಗಿ ಮತ್ತೆ ಕುವೆಂಪು ಅವರ 3 ಪಠ್ಯ ಸೇರ್ಪಡೆ ಮಾಡಿದೆ ಎಂಬುದರ ಬಗ್ಗೆ ಪಠ್ಯದ ಸಮೇತ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.
4ನೇ ತರಗತಿಯಲ್ಲಿ ಪರಿಸರ ಅಧ್ಯಯನದಲ್ಲಿ ಕುವೆಂಪುರಿಗೆ ಅಪಮಾನ ಮಾಡಿದೆ ಎಂಬ ಆರೋಪ ಮಾಡಲಾಗಿದೆ. ಆದರೆ ರೋಹಿತ್ ಸಮಿತಿ 6ರಿಂದ 10ನೇ ತರಗತಿ ಪಠ್ಯ ಮಾತ್ರ ಪರಿಷ್ಕರಣೆ ಮಾಡಿದೆ. 4ನೇ ತರಗತಿ ಪಠ್ಯ ಬರಗೂರು ರಾಮಚಂದ್ರಪ್ಪ ಸಮಿತಿಯದ್ದೇ ಉಳಿಸಿಕೊಳ್ಳಲಾಗಿದೆ. ಇದರ ಜೊತೆಗೆ ಮೈಸೂರು ಒಡೆಯರ್ ಪಠ್ಯಕ್ಕೆ ಬರಗೂರು ಸಮಿತಿ ಕತ್ತರಿ ಹಾಕಿತ್ತು. ಈಗ ಅದನ್ನು ಸರಿ ಮಾಡಲಾಗಿದೆ. ಮೈಸೂರು ಒಡೆಯರ್ ಪೂರ್ಣ ಇತಿಹಾಸ ಅಳವಡಿಕೆ ಮಾಡಲಾಗಿದೆ.
ಬರಗೂರು ಸಮಿತಿಯೂ 6ನೇ ತರಗತಿ ಸಮಾಜ ವಿಜ್ಞಾನ ಪಠ್ಯದಲ್ಲಿ ಒಡೆಯರ್ ಪಠ್ಯವನ್ನು ಸಂಕ್ಷಿಪ್ತ ಮಾಡಿ ಟಿಪ್ಪು ಪಠ್ಯವನ್ನು ಹೆಚ್ಚಾಗಿ ಸೇರ್ಪಡೆ ಮಾಡಿತ್ತು. ಈಗ ಇದನ್ನು ಸರಿ ಮಾಡಲಾಗಿದೆ. ಅದರ ಜೊತೆಗೆ ಬರಗೂರು ಸಮಿತಿಯೂ ಟಿಪ್ಪು ಸುಲ್ತಾನ್ ವೈಭವೀಕರಣ ಮಾಡಲಾಗಿತ್ತು. ಅದನ್ನು ಪರಿಷ್ಕರಣೆ ಮಾಡಿ ಟಿಪ್ಪುವಿನ ಇತಿಹಾಸ ಸಂಪೂರ್ಣವಾಗಿ ಸೇರ್ಪಡೆ ಮಾಡಲಾಗಿದೆ. ಆದರೆ ಟಿಪ್ಪು ಪಠ್ಯವನ್ನು ಕೈಬಿಟ್ಟಿದ್ದಾರೆ ಅನ್ನೋದು ಶುದ್ಧ ಸುಳ್ಳಾಗಿದೆ.
ರೋಹಿತ್ ಚಕ್ರತೀರ್ಥ ಸಮಿತಿಯೂ ಎಲ್ಲಾ ಪಠ್ಯವನ್ನು ಪರಿಷ್ಕರಣೆ ಮಾಡಿಲ್ಲ. 1 ರಿಂದ 10 ಕನ್ನಡ ಭಾಷಾ ಪುಸ್ತಕ ಮತ್ತು 6 ರಿಂದ 10ನೇ ತರಗತಿ ಸಮಾಜ ವಿಜ್ಞಾನ ಪಠ್ಯ ಮಾತ್ರ ಪರಿಷ್ಕರಣೆ ಮಾಡಿದೆ. ಈಗಾಗಲೇ 76.87% ಪಠ್ಯ ಮುದ್ರಣ ಆಗಿದೆ. ಇದರಲ್ಲಿ 63.01% ಪಠ್ಯ ಶಾಲೆಗಳಿಗೆ ಸರಬರಾಜು ಆಗಿದೆ. ಬರಗೂರು ಸಮಿತಿ ಪರಿಷ್ಕರಣೆಯಲ್ಲಿ ಹೆಚ್ಚು ಲೋಪಗಳು ಇದ್ದವು. ಇದನ್ನು ಸರಿ ಮಾಡಲಾಗಿದೆ. ಇದನ್ನೂ ಓದಿ:ಪ್ರತಿ ಮಸೀದಿಯಲ್ಲಿ ಶಿವಲಿಂಗ ಹುಡುಕಬೇಕಿಲ್ಲ, ಇನ್ಮುಂದೆ ಮಂದಿರ ಹೋರಾಟದಲ್ಲಿ ನಾವಿಲ್ಲ: ಮೋಹನ್ ಭಾಗವತ್
ಹೊಸ ಧರ್ಮಗಳ ಉದಯ ಪಠ್ಯದಲ್ಲಿ ವೈದಿಕ ಧರ್ಮ ಹಾಗೂ ಬ್ರಾಹ್ಮಣರನ್ನು ನಿಂದಿಸಲಾಗಿತ್ತು. ಇಂದ್ರ ದೇವನು ವಿಪರೀತ ಸೋಮ ರಸ ಕುಡಿಯುತ್ತಿದ್ದನು ಅಂತ ಸೇರಿಸಲಾಗಿತ್ತು. ಅಷ್ಟೇ ಅಲ್ಲದೇ 1857 ಸ್ವಾತಂತ್ರ್ಯ ಸಂಗ್ರಾಮವನ್ನ ದಂಗೆ ಅಂತ ಕರೆಯಲಾಗಿತ್ತು. ಹಿಂದೂ ಮಹಾಸಾಗರವನ್ನ ಹಿಂದು ಅಂತ ಹೆಸರು ಇತ್ತು ಅಂತ ಇಂಡಿಯನ್ ಓಷನ್ ಅಂತ ಬದಲಾವಣೆ ಮಾಡಲಾಗಿತ್ತು. ಇದನ್ನ ಪರಿಷ್ಕರಣೆ ಮಾಡಿದ್ದೇವೆ.
ಬರಗೂರು ಸಮಿತಿಯು 6ನೇ ತರಗತಿಯಲ್ಲಿ ಇತಿಹಾಸ ಪರಿಚಯ ಪಾಠ ಸೇರಿಸಿತ್ತು. ಇದು 6ನೇ ತರಗತಿ ವಯೋಮಾನದ ಮಕ್ಕಳಿಗೆ ಮೀರಿದ ಪಠ್ಯ ಆಗಿತ್ತು. ಇದರಲ್ಲಿ ಪಾಶ್ಚಾತ್ಯ ಇತಿಹಾಸಕಾರರ ಬಗ್ಗೆ ಮಾತ್ರ ಉಲ್ಲೇಖ ಇತ್ತು. ಈಗ ಅದನ್ನು ಬಿಟ್ಟು ಭಾರತ ನಮ್ಮ ಹೆಮ್ಮೆ ಎಂಬ ಪಾಠ ಸೇರ್ಪಡೆ ಮಾಡಲಾಗಿದೆ.
ಟಿಪ್ಪು, ತುಘಲಕ್, ಮೊಘಲ್ ದೊರೆಗಳ ಬಗ್ಗೆ ಪುಟಗಟ್ಟಲೆ ಉಲ್ಲೇಖ ಬರಗೂರು ಸಮಿತಿ ಮಾಡಿತ್ತು. ಭಾರತೀಯ ರಾಜರ ಸಾಹಸ, ಶೌರ್ಯದ ಪಠ್ಯ ಇರಲಿಲ್ಲ. ಇದನ್ನು ಸರಿ ಮಾಡಲಾಗಿದೆ. ಟಿಪ್ಪುವಿನ ವೈಭವೀಕರಣಕ್ಕೆ ಕಡಿವಾಣ ಹಾಕಲಾಗಿದೆ. ಟಿಪ್ಪು ಬಗ್ಗೆ ಸತ್ಯದ ಮಾಹಿತಿ ನೀಡಲಾಗಿದೆ. ಸಂಗೊಳ್ಳಿ ರಾಯಣ್ಣ, ಕಿತ್ತೂರು ಚೆನ್ನಮ್ಮ, ಮದಕರಿ ನಾಯಕರ ಪಠ್ಯ ಇರಲಿಲ್ಲ. ಸಮಿತಿ ಈಗ ಅವರ ಪಠ್ಯ ಸೇರ್ಪಡೆ ಮಾಡಿದೆ. ಬರಗೂರು ಸಮಿತಿ 10ನೇ ತರಗತಿ ಪಠ್ಯದಲ್ಲಿ ಅಂಬೇಡ್ಕರ್, ಗಾಂಧಿಯವರ ಕುರಿತು ಮಾಹಿತಿ ಹೊಂದಿದ ಉದಾತ್ತ ಚಿಂತನೆಗಳು ಪಾಠ ತೆಗೆಯಲಾಗಿತ್ತು. ಈಗ ಅದನ್ನು ಮರು ಸೇರ್ಪಡೆ ಮಾಡಲಾಗಿದೆ.
ಭಗತ್ ಸಿಂಗ್, ನಾರಾಯಣ ಗುರು, ಪೆರಿಯಾರ್ ಪಠ್ಯವನ್ನು ಹೊಸ ಸಮಿತಿ ಕೈಬಿಟ್ಟಿಲ್ಲ. ಸುಮ್ಮನೆ ವಿವಾದ ಮಾಡಿದ್ದಾರೆ. ಭಗತ್ ಸಿಂಗ್‍ರ ಒಂದು ಹೆಚ್ಚುವರಿ ಪಠ್ಯ ತಾಯಿ ಭಾರತೀಯ ಅಮರ ಯೋಧರು ಎನ್ನುವ ಪಠ್ಯ ಸೇರ್ಪಡೆ ಮಾಡಲಾಗಿದೆ. ನಾರಾಯಣ ಗುರುಗಳ ಪಠ್ಯವನ್ನು 10ನೇ ತರಗತಿ ಕನ್ನಡ ಪಠ್ಯದಲ್ಲಿ ಸೇರ್ಪಡೆ ಮಾಡಿದ್ದೇವೆ.
ಬರಗೂರು ಸಮಿತಿ 8ನೇ ತರಗತಿಯಲ್ಲಿ ಸಿಂಧೂ ಸಂಸ್ಕೃತಿ ಪಾಠ ತೆಗೆದು ನೆಹರು ಅವರ ಪತ್ರಗಳ ಪಾಠ ಸೇರಿಸಿದ್ದರು. ಹೊಸ ಸಮಿತಿಯೂ ಸಿಂಧೂ ಸಂಸ್ಕೃತಿಯ ನಾಗರೀಕತೆ ಪಠ್ಯ ಸೇರ್ಪಡೆ ಮಾಡಿದೆ. ಬರಗೂರು ಸಮಿತಿ ಚರ್ಚ್, ಮಸೀದಿಗಳ ಫೋಟೋವನ್ನು ಪಠ್ಯದಲ್ಲಿ ಬಳಸಿ ದೇವಾಲಯ ಫೋಟೋವನ್ನು ಕೈಬಿಟ್ಟಿತ್ತು. ಇದನ್ನ ಈಗ ಸರಿ ಮಾಡಲಾಗಿದೆ.
ಮೊಘಲರ ದಾಳಿ ತಡೆದ ಭಾರತೀಯ ಅಹೋಮ್ ರಾಜಯ ಪರಿಚಯ ಮಾಡಿಕೊಡಲಾಗಿದೆ. ಕಾಶ್ಮೀರದ ಕಾರ್ಕೋಟ ರಾಜರ ಪಠ್ಯ ಸೇರ್ಪಡೆ ಮಾಡಲಾಗಿದೆ. ಮೈಸೂರಿನ ಲ್ಯಾನ್ಸರ್ ರೆಜಿಮೆಂಟ್ ಕುರಿತು ಮಾಹಿತಿ ಸೇರಿಸಲಾಗಿದೆ. ಭಾರತದ ನಾಗಬುಡಕಟ್ಟು ಮಹಿಳೆಯ ಸಾಹಸ ಕಥೆ ಗಾಯಿಡಿನ್ ಲೂ ಅವರ ಮಾಹಿತಿ ನೀಡಲಾಗಿದೆ. ಇದನ್ನೂ ಓದಿ: ತಿಂಗಳ ಅಂತ್ಯದಲ್ಲಿ ಸೌದಿಗೆ ಭೇಟಿ ನೀಡಲಿದ್ದಾರೆ ಬೈಡನ್
ಕ್ರೈಸ್ತ, ಇಸ್ಲಾಂ, ಜೈನ, ಮತಗಳ ಬಗ್ಗೆ ಉಲ್ಲೇಖ ಇತ್ತು. ಆದರೆ ಸನಾತನ ಧರ್ಮದ ಪಠ್ಯ ಇರಲಿಲ್ಲ. ಈಗ ಸನಾತನ ಧರ್ಮದ ಪಠ್ಯ ಸೇರ್ಪಡೆ ಮಾಡಲಾಗಿದೆ. ಕೇರಳ ರಾಜ ಮಾರ್ತಾಂಡ ವರ್ಮನ ವಿವರ ನೀಡಲಾಗಿದೆ. ತಮಿಳುನಾಡಿನ ವೀರ ಪಾಂಡೆ ಕಟ್ಟಾ ಬೊಮ್ಮರವರ ಮಾಹಿತಿ ಕನ್ನಡದಲ್ಲಿ ಸೇರ್ಪಡೆ ಮಾಡಲಾಗಿದೆ.
ಸಮಾಜ ವಿಜ್ಞಾನ ಹೊರ ಇಳಿಸಲು 6 ಮತ್ತು 7ನೇ ತರಗತಿಯಲ್ಲಿ 1 ಅಧ್ಯಾಯ, 8ನೇ ತರಗತಿಯಲ್ಲಿ 2 ಅಧ್ಯಾಯ, 9ನೇ ತರಗತಿಯಲ್ಲಿ 4 ಮತ್ತು 10ನೇ ತರಗತಿಯಲ್ಲಿ 4 ಅಧ್ಯಾಯ ಕೈಬಿಟ್ಟು ಪಠ್ಯದ ಹೊರೆ ಇಳಿಸಲಾಗಿದೆ. ವಿವೇಕಾನಂದರ ಜನ್ಮದಿನ ಕುರಿತು ಪಠ್ಯ ಸೇರ್ಪಡೆ ಮಾಡಲಾಗಿದ್ದು, ನೇತಾಜಿ ಸುಭಾಷ್ ಚಂದ್ರ ಬೋಸ್‍ರ ಇಂಡಿಯನ್ ನ್ಯಾಷನಲ್ ಆರ್ಮಿ ಕಟ್ಟಿದ ಬಗ್ಗೆ ಮಾಹಿತಿ ನೀಡಲಾಗಿದೆ.
ಚನ್ನಭೈರಾದೇವಿ, ನಿಟ್ಟೂರು ಶ್ರೀನಿವಾಸರಾಯರು, ಕೆ.ಟಿ.ಗಟ್ಟಿಯವರ ಪಾಠ ಸೇರ್ಪಡೆ ಮಾಡಲಾಗಿದೆ. ಬರಗೂರು ಸಮಿತಿ ಏಣಗಿ ಬಾಳಪ್ಪ ಜೀವನ ಪರಿಚಯ ಕೈಬಿಟ್ಟಿತ್ತು. ಕೆ.ಎಸ್. ನರಸಿಂಹಸ್ವಾಮಿಯವರ ಭಾರತೀಯತೆ ಕವನ ಕೈ ಬಿಡಲಾಗಿತ್ತು. ಅದನ್ನ ಸೇರ್ಪಡೆ ಮಾಡಲಾಗಿದೆ. ಇದರ ಜೊತೆಗೆ ಕಯ್ಯಾರ ಕಿಞ್ಞಣ್ಣ ರೈ ಅವರ ಏರುತಿಹುದು ಹಾರುತಿಹುದು ನೋಡು ನಮ್ಮ ಬಾವುಟ ಬರಗೂರು ಸಮಿತಿ ಕೈ ಬಿಟ್ಟಿತ್ತು ಜೊತೆಗೆ ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಮಾಹಿತಿಯನ್ನು ತೆಗೆದಿತ್ತು. ಹೊಸ ಸಮಿತಿ ಕೆಂಪೇಗೌಡರ ಪಠ್ಯ ಸೇರ್ಪಡೆ ಮಾಡಿದೆ.
ಹುಬ್ಬಳ್ಳಿಯ ಸಿದ್ದರೂಢ ಜಾತ್ರೆ, ಮಂಜೇಶ್ವರ ಗೋವಿಂದ್ ಪೈ, ಪಂಜೆ ಮಂಗೇಶರಾಯರು ಪಠ್ಯ ಸೇರ್ಪಡೆ ಮಾಡಲಾಗಿದೆ. ಬಸವಣ್ಣನವರ ಪಠ್ಯವನ್ನು ರೋಹಿತ್ ಸಮಿತಿ ಪರಿಷ್ಕರಣೆ ಮಾಡಿಲ್ಲ. 2015-16ರಲ್ಲಿ ಡಾ. ಮುಡಂಬಡಿತ್ತಾಯ ಸಮಿತಿ ನೀಡಿದ್ದ ಪಠ್ಯವನ್ನು ಯಥಾವತ್ತಾಗಿ ಉಳಿಸಿಕೊಳ್ಳಲಾಗಿದೆ.
ಬರಗೂರು ಸಮಿತಿ ಪರಿಷ್ಕರಣೆ ವಿವಾದ ಆಗಿದ್ದರಿಂದ ಬರಗೂರು ಸಮಿತಿ ಪರಿಷ್ಕರಣೆ ಕೈಬಿಡಲಾಗಿದೆ. ಚಿಂತಕ ಹೆಡ್ಗೆವಾರ್ ಅವರ ಭಾಷಣದ ಒಂದು ಭಾಗವನ್ನು ಪಠ್ಯದಲ್ಲಿ ಸೇರ್ಪಡೆ ಮಾಡಲಾಗಿದೆ. ಇದರಲ್ಲಿ ಆರ್‍ಎಸ್‍ಎಸ್ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಕೇವಲ ರಾಷ್ಟ್ರೀಯ ಭಾವನೆಯ ಪಠ್ಯ ಇದಾಗಿದೆ. ಬರಗೂರು ರಾಮಚಂದ್ರಪ್ಪ ಸಮಿತಿಯ 107 ಪಾಠಗಳನ್ನು ಹಾಗೇ ಉಳಿಸಿಕೊಳ್ಳಲಾಗಿದೆ.
ಕನ್ನಡ ಪ್ರಥಮ ಭಾಷೆಯಲ್ಲಿ 2021-22ರಲ್ಲಿ 195 ಪಾಠ ಇತ್ತು. 2022-23ರಲ್ಲಿ 198 ಪಠ್ಯ ಆಗಿದೆ. ಇದರಲ್ಲಿ 33 ಪಠ್ಯ ಮಾತ್ರ ಬದಲಾವಣೆ ಆಗಿದೆ. ಹೊಸದಾಗಿ 3 ಪಾಠ ಮಾತ್ರ ಸೇರಿಸಲಾಗಿದೆ. 165 ಪಾಠ ಹಾಗೇ ಉಳಿಸಿಕೊಳ್ಳಲಾಗಿದೆ. ಕನ್ನಡ ದ್ವೀತಿಯ ಭಾಷೆಯಲ್ಲಿ 170 ಪಾಠಗಳ ಪೈಕಿ 8 ಪಾಠ ಮಾತ್ರ ಬದಲಾವಣೆ ಮಾಡಲಾಗಿದೆ. 162 ಪಾಠ ಹಳೆ ಸಮಿತಿಯದ್ದೇ ಉಳಿಸಿಕೊಳ್ಳಲಾಗಿದೆ ಎಂಬ ಸಂಪೂರ್ಣ ದಾಖಲಾತಿಗಳ ಸಮೇತ ಇಲಾಖೆ ವರದಿ ಸಿದ್ಧ ಮಾಡಿದೆ.