Tag: ರೋಹಿತ್ ಚಕ್ರತಿರ್ಥ

  • ಪಠ್ಯ, ಪುಸ್ತಕ ಪರಿಷ್ಕರಣೆಗೆ ಮುಂದುವರಿದ ವಿರೋಧ- ತಮ್ಮ ಕವಿತೆಯನ್ನು ಬಳಸಬೇಡಿ: ರೂಪಾ ಹಾಸನ

    ಪಠ್ಯ, ಪುಸ್ತಕ ಪರಿಷ್ಕರಣೆಗೆ ಮುಂದುವರಿದ ವಿರೋಧ- ತಮ್ಮ ಕವಿತೆಯನ್ನು ಬಳಸಬೇಡಿ: ರೂಪಾ ಹಾಸನ

    ಹಾಸನ: ರೋಹಿತ್ ಚಕ್ರತೀರ್ಥ ಸಮಿತಿಯ ಪಠ್ಯ ಪುಸ್ತಕ ಪರಿಷ್ಕರಣೆಗೆ ಇನ್ನೂ ವಿರೋಧ ಮುಂದುವರಿದಿದ್ದು, ತಮ್ಮ ಕವಿತೆಯನ್ನು ಬೋಧಿಸಲು ಒಪ್ಪಿಗೆ ಇಲ್ಲ ಎಂದು ಸಾಹಿತಿ ರೂಪಾ ಹಾಸನ ಕರ್ನಾಟಕ ಪಠ್ಯ ಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.

    ಪಠ್ಯ ಪರಿಷ್ಕರಣೆ ವಿವಾದ ತಣ್ಣಗಾದ ಹಿನ್ನೆಲೆ ಹಾಗೂ ಈಗಾಗಲೇ ಪಠ್ಯಪುಸ್ತಕ ಮುದ್ರಣ ಆಗಿರುವ ಕಾರಣ ಸಾಹಿತಿ ರೂಪ ಹಾಸನ ರಚಿತ ಅಮ್ಮನಾಗುವುದೆಂದರೆ ಕವಿತೆ ಬೋಧನೆಗೆ ಅನುಮತಿ ನೀಡುವಂತೆ ಕರ್ನಾಟಕ ಪಠ್ಯಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕರು ಸಾಹಿತಿಗೆ ಪತ್ರದ ಮೂಲಕ ಮನವಿ ಮಾಡಿದ್ದರು.

    TEXTBOOK

    ಇದಕ್ಕೆ ರೂಪಾ ಹಾಸನ ಅವರು ತಮ್ಮ ಕವಿತೆಯನ್ನು ಬಳಸದಂತೆ ಮತ್ತೆ ಕರ್ನಾಟಕ ಪಠ್ಯಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆಯುವ ಮೂಲಕ ಅಧಿಕಾರಿಗಳ ಮನವಿಯನ್ನು ಸ್ಪಷ್ಟವಾಗಿ ತಿರಸ್ಕಾರ ಮಾಡಿದ್ದಾರೆ. ಈ ಹಿಂದೆ ಶಿಕ್ಷಣ ಸಚಿವರಿಗೆ ಬರೆದ ಪತ್ರದಲ್ಲಿ ತಮ್ಮ ಕವಿತೆ ಬಳಕೆಗೆ ನೀಡಿದ್ದ ಸಮ್ಮತಿಯನ್ನು ರೂಪಾ ಹಾಸನ ಹಿಂಪಡೆದಿದ್ದರು.

    Live Tv
    [brid partner=56869869 player=32851 video=960834 autoplay=true]

  • ಕುವೆಂಪು ಸಾಕಷ್ಟು ಜನರ ಸಹಕಾರದಿಂದ ಉನ್ನತ ಸ್ಥಾನಕ್ಕೇರಿದರು ಎಂದವನು ಅಯೋಗ್ಯ: ಎಂಎಲ್‍ಸಿ

    ಕುವೆಂಪು ಸಾಕಷ್ಟು ಜನರ ಸಹಕಾರದಿಂದ ಉನ್ನತ ಸ್ಥಾನಕ್ಕೇರಿದರು ಎಂದವನು ಅಯೋಗ್ಯ: ಎಂಎಲ್‍ಸಿ

    ಮಡಿಕೇರಿ: ಕುವೆಂಪು ಸಾಕಷ್ಟು ಜನರ ಸಹಕಾರದಿಂದ ಉನ್ನತ ಸ್ಥಾನಕ್ಕೇರಿದರು ಎಂದು ಪಠ್ಯದಲ್ಲಿ ಸೇರಿಸಿದವನೊಬ್ಬ ಮೂರ್ಖ ಹಾಗೂ ಅಯೋಗ್ಯ ಎಂದು ಎಂಎಲ್‍ಸಿ ಭೋಜೇಗೌಡ ಆಕ್ರೋಶ ವ್ಯಕ್ತಪಡಿಸಿದರು.

    ಕೊಡಗಿನ ಸೋಮವಾರಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುವೆಂಪು ಸರ್ವ ಜನಾಂಗದ ಶಾಂತಿಯನ್ನು ಸಾರಿದವರು. ಅವರು ಈ ನಾಡಿನ ಆಸ್ತಿ ಆಗಿದ್ದಾರೆ. ಪಠ್ಯ ಪರಿಷ್ಕರಣೆ ಸಂದರ್ಭ ಅವರ ಬಗ್ಗೆ ಇನ್ನಷ್ಟು ಹೆಚ್ಚು ಮಾಹಿತಿ ಸಂಗ್ರಹಿಸಿ ಕೊಡಬೇಕಾಗಿತ್ತು ಎಂದು ಅಭಿಪ್ರಾಯಪಟ್ಟರು.

    ಪಠ್ಯ ಪರಿಷ್ಕರಣೆಗೂ ಮುನ್ನ ಸರ್ಕಾರಕ್ಕೆ ಅವನ ಹಿನ್ನೆಲೆ ಗೊತ್ತಿರಲಿಲ್ಲವೇ.? ಎಲ್ಲರೂ ಹೇಳಿದ ಮೇಲೆ ಪಠ್ಯಪುಸ್ತಕ ಸಮಿತಿ ವಿಸರ್ಜನೆ ಮಾಡಿದ ಸರ್ಕಾರಕ್ಕೆ ನಾಚಿಕೆ ಆಗಬೇಕು. ಆದರೆ ಇಷ್ಟೆಲ್ಲಾ ಅಯೋಗ್ಯ ಕೆಲಸ ಮಾಡಿದ್ದಾನೆಂದು ಹೇಳಿದ ಮೇಲೆ ಸಮಿತಿ ವಿಸರ್ಜನೆ ಮಾಡಿದ ನಿಮಗೆ ನಾಚಿಕೆ ಆಗಬೇಕು ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಇದನ್ನೂ ಓದಿ: ಜೆಡಿಎಸ್‍ನಿಂದ ಶಾಸಕ ಗುಬ್ಬಿ ಶ್ರೀನಿವಾಸ್, ಶ್ರೀನಿವಾಸ್ ಗೌಡ ಉಚ್ಚಾಟನೆ

    ರೋಹಿತ್ ಚಕ್ರತಿರ್ಥನನ್ನು ಸಮಿತಿ ಸದಸ್ಯನನ್ನಾಗಿಯೂ ಮಾಡಬೇಕಾಗಿರಲಿಲ್ಲ. ಆದರೂ ಅಧ್ಯಕ್ಷನನ್ನಾಗಿ ಮಾಡಲಾಯಿತು. ಇಂತಹ ಅಯೋಗ್ಯನನ್ನು ಇಡೀ ಸಮಾಜದಿಂದ ದೂರ ಇಡಬೇಕು. ಸಮಾಜದಲ್ಲಿ ಸಾಮರಸ್ಯ ಹಾಳು ಮಾಡಲು ಯತ್ನಿಸಿದ ಅವನ ವಿರುದ್ಧ ಕಾನೂನು ರೀತಿ ಕ್ರಮಕೈಗೊಳ್ಳಬೇಕೆಂದು ಎಂದು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಶೀಘ್ರವೇ ಸಿಡಿಎಸ್‌ ನೇಮಕ: ರಾಜನಾಥ್‌ ಸಿಂಗ್‌ ಮಾಹಿತಿ

  • NEP ಮುಖಾಂತರ ಹಾವಿನಪುರದವರು ಪಠ್ಯ ಪರಿಷ್ಕರಣೆ ಮಾಡಿದ್ದಾರೆ: ಬಿ.ಕೆ.ಹರಿಪ್ರಸಾದ್

    NEP ಮುಖಾಂತರ ಹಾವಿನಪುರದವರು ಪಠ್ಯ ಪರಿಷ್ಕರಣೆ ಮಾಡಿದ್ದಾರೆ: ಬಿ.ಕೆ.ಹರಿಪ್ರಸಾದ್

    ಬೆಂಗಳೂರು: ಎನ್‍ಇಪಿ ಮುಖಾಂತರ ಹಾವಿನಪುರದವರು ಪಠ್ಯ ಪರಿಷ್ಕರಣೆ ಮಾಡಿದ್ದಾರೆ ಎಂದು ಮೇಲ್ಮನೆ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಕಿಡಿಕಾರಿದರು.

    ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ನಾಡಿನ ಹಿರಿಯ ಸಾಹಿತಿಗಳು, ಚಿಂತಕರು, ಪ್ರಗತಿಪರರು, ಸ್ವಾಮೀಜಿಗಳು ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದಾರೆ. ದಾರ್ಶನಿಕರು, ಹೋರಾಟಗಾರರ ಪಠ್ಯ ಕೈಬಿಟ್ಟಿದ್ದಾರೆ. ಸಾಣೆಹಳ್ಳಿ ಶ್ರೀಗಳು, ಆದಿ ಚುಂಚನಗಿರಿ ಶ್ರೀಗಳು ವಿರೋಧ ವ್ಯಕ್ಯಪಡಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

    ಕುವೆಂಪು, ಬಸವಣ್ಣನವರ ಪಾಠ ಕೈಬಿಟ್ಟಿದ್ದು ಸರಿಯಲ್ಲ. ಕೂಡಲೇ ಪಾಠಗಳಲ್ಲಿ ಸೇರಿಸುವಂತೆ ಒತ್ತಾಯಿಸಿದ್ದಾರೆ. ಆರ್‌ಎಸ್‍ಎಸ್ ಅಣತಿಯಂತೆ ಸರ್ಕಾರ ನಡೆದುಕೊಳ್ಳುತ್ತಿದೆ. ನಾಗಪುರ, ಹಾವಿನಪುರದ ಒತ್ತಡಕ್ಕೆ ಸರ್ಕಾರ ಮಣಿದಿದೆ. ಸರ್ಕಾರ ಹಿಡನ್ ಅಜೆಂಡಾ ಜಾರಿಗೆ ತರ್ತಿದೆ. ಇದಕ್ಕೆ ನಮ್ಮದು ತೀವ್ರ ವಿರೋಧವಿದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಪಠ್ಯ ಪುಸ್ತಕಗಳ ಮರು ಪರಿಷ್ಕರಣೆ ಮಾಡುವಂತೆ ಸಿಎಂಗೆ ರಮೇಶ್ ಕುಮಾರ್ ಪತ್ರ

    ಕಾಂಗ್ರೆಸ್ ಅಭ್ಯರ್ಥಿ ಹಾಕಿದ್ದಕ್ಕೆ ಜೆಡಿಎಸ್ ಬೇಸರ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಜಾತ್ಯಾತೀತ ತತ್ವದ ಮೇಲೆ ಅಭ್ಯರ್ಥಿ ಹಾಕಿರಲಿಲ್ಲ. ದೇವೇಗೌಡರ ಹಿರಿತನಕ್ಕೆ ಗೌರವ ಕೊಟ್ಟು ಅವರ ವಿರುದ್ಧ ನಾವು ಇಳಿಸಿರಲಿಲ್ಲ. ಜಾತ್ಯಾತೀತ ತತ್ವದಲ್ಲಿ ಜೆಡಿಎಸ್‍ಗೆ ನಂಬಿಕೆ ಇದ್ದರೆ ಮತ ಹಾಕಲಿ ಎಂದು ಜೆಡಿಎಸ್‍ಗೆ ಪರೋಕ್ಷ ಸವಾಲೆಸೆದರು. ಇದನ್ನೂ ಓದಿ: ನಾನು ಕುವೆಂಪು ನಾಡಗೀತೆಯನ್ನು ಅಪಮಾನ ಮಾಡಿಲ್ಲ: ರೋಹಿತ್‌ ಚಕ್ರತೀರ್ಥ ಸ್ಪಷ್ಟನೆ

  • ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಸ್ಥಾನಕ್ಕೆ ಹಂಪ ನಾಗರಾಜಯ್ಯ ರಾಜೀನಾಮೆ

    ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಸ್ಥಾನಕ್ಕೆ ಹಂಪ ನಾಗರಾಜಯ್ಯ ರಾಜೀನಾಮೆ

    ಬೆಂಗಳೂರು: ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಸದಸ್ಯತ್ವಕ್ಕೆ ನಾಡೋಜ ಹಂಪ ನಾಗರಾಜಯ್ಯ ರಾಜೀನಾಮೆ ನೀಡಿದ್ದು, ಈ ಪತ್ರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ರವಾನಿಸಿದ್ದಾರೆ.

    ರೋಹಿತ್ ಚಕ್ರತೀರ್ಥ ವಿರುದ್ಧ ಸಿಡಿದೆದ್ದ ಅವರು, ಕುವೆಂಪು ಕನ್ನಡ ಜ್ಞಾನಪೀಠ ಪ್ರಶಸ್ತಿ ತಂದ ಮೊದಲಿಗರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನವನ್ನು ಪ್ರಾರಂಭಿಸಿದ್ದರು. ಅಷ್ಟೇ ಅಲ್ಲದೇ ಅತ್ಯುನ್ನತ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಆದರೆ ಕುವೆಂಪು ಹಾಗೂ ಅವರ ಜನಾಂಗವನ್ನು ಅವಾಚ್ಯ ಶಬ್ದದಿಂದ ನಿಂದಿಸಿ, ರಾಷ್ಟ್ರಗೀತೆ ಹಾಗೂ ನಾಡಗೀತೆಯನ್ನು ಲೇವಡಿ ಮಾಡಿದ ವ್ಯಕ್ತಿಯ ವಿರುದ್ಧ ಕ್ರಮಕೈಗೊಂಡಿಲ್ಲ. ಬದಲಾಗಿ ಜವಾಬ್ದಾರಿ ಕೊಟ್ಟಿದ್ದಾರೆ ಎಂದು ಸರ್ಕಾರದ ಆಕ್ರೋಶ ವ್ಯಕ್ತಪಡಿಸಿದರು.

    ಅಮೂಲ್ಯ ಕೃತಿಗಳಿಂದ ಹೊಸಗನ್ನಡ ಸಾಹಿತ್ಯದ ಎಲ್ಲಾ ಪ್ರಕಾರಗಳನ್ನು ಪ್ರಕಟಿಸಿ ಭಾರತೀಯ ಸಾಹಿತ್ಯದಲ್ಲಿ ಕನ್ನಡಕ್ಕೂ ಕರ್ನಾಟಕಕ್ಕೂ ಮಹಾಕವಿ ಕುವೆಂಪು ಅವರು ಗೌರವ ತಂದರು. ಇಂತಹವರನ್ನು ನಿಂದಿಸಿರುವುದು ಅಪಾಯಕಾರಿ ಬೆಳವಣಿಗೆ ಆಗಿದೆ. ಇದರಿಂದ ತಪ್ಪು ಸಂದೇಶಗಳು ರವಾನೆ ಮಾಡಿದಂತಾಗಿದೆ. ವ್ಯಕ್ತಿಗಳ ತೇಜೋವಧೆ ಮಾಡುವುದನ್ನು ಸರ್ಕಾರ ಸಹಿಸುವುದಿಲ್ಲ ಎಂಬ ನಂಬಿಕೆಯೂ ಹುಸಿಯಾಗಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಮಂಗಳೂರಿನಲ್ಲಿ ಹಿಜಬ್ ಹೈಡ್ರಾಮಾ – 12 ಮಂದಿ ಮನೆಗೆ ವಾಪಸ್

    ರಾಷ್ಟ್ರಗೀತೆ, ನಾಡಗೀತೆ, ರಾಷ್ಟ್ರಕವಿ ಕುವೆಂಪು ಅವರನ್ನು ಅಪಮಾನಿಸುತ್ತಿದ್ದರೂ ನೋಡಿಕೊಂಡು ಸುಮ್ಮನಿರುವುದು ಕಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಸುಪ್ರೀಂ ಹಿರಿಯ ವಕೀಲ ಸಂಕೇತ ಏಣಗಿ ಬಿಜೆಪಿಗೆ ಸೆಳೆಯಲು ಲಿಂಗಾಯತ ನಾಯಕರ ಸರ್ಕಸ್