Tag: ರೋಹಿತ್

  • ಬಾಲನಟ ರೋಹಿತ್‌ ಆರೋಗ್ಯ ಸ್ಥಿರ – ದವಡೆಗೆ ಶಸ್ತ್ರಚಿಕಿತ್ಸೆ, ಪ್ಲೇಟ್‌ ಅಳವಡಿಕೆ

    ಬಾಲನಟ ರೋಹಿತ್‌ ಆರೋಗ್ಯ ಸ್ಥಿರ – ದವಡೆಗೆ ಶಸ್ತ್ರಚಿಕಿತ್ಸೆ, ಪ್ಲೇಟ್‌ ಅಳವಡಿಕೆ

    ಮೈಸೂರು: ಅಪಘಾತದಲ್ಲಿ (Accident) ಗಂಭೀರವಾಗಿ ಗಾಯಗೊಂಡಿದ್ದ ರಾಷ್ಟ್ರಪ್ರಶಸ್ತಿ ವಿಜೇತ ಬಾಲನಟ ರೋಹಿತ್‌ (Rohith) ಆರೋಗ್ಯವಾಗಿದ್ದಾರೆ. ದವಡೆ ಭಾಗಕ್ಕೆ ಶಸ್ತ್ರ ಚಿಕಿತ್ಸೆ ಮಾಡಿ ಪ್ಲೇಟ್‌ ಅಳವಡಿಸಲಾಗಿದೆ.

    ಪಬ್ಲಿಕ್ ಟಿವಿಗೆ ರೋಹಿತ್ ಅಜ್ಜಿ ಶಕುಂತಲಾ ಪ್ರತಿಕ್ರಿಯಿಸಿ, 8 ತಿಂಗಳು ದ್ರವ ಆಹಾರ ಸೇವಿಸುವಂತೆ ವೈದ್ಯರು ಹೇಳಿದ್ದಾರೆ. ರೋಹಿತ್ ನೋಡಲು ಹೋದಾಗ ಥಂಬ್ಸ್‌ ಆಪ್ ಮಾಡಿ ಹೆದರಬೇಡಿ ಎಂದು ನಮಗೆ ಧೈರ್ಯ ತುಂಬುತ್ತಿದ್ದಾನೆ ಎಂದು ತಿಳಿಸಿದರು.

    ರೋಹಿತ್ ತಾಯಿ ಛಾಯಾಲಕ್ಷ್ಮಿ ಅವರಿಗೆ ಗಂಭೀರ ಗಾಯವಾಗಿದೆ. ಇಂದು ಛಾಯಾಲಕ್ಷ್ಮಿಯನ್ನು ಬೆಂಗಳೂರಿಗೆ (Bengaluru) ಶಿಫ್ಟ್ ಮಾಡುತ್ತೇವೆ‌. ಅಪಘಾತವಾದಾಗ ರಸ್ತೆ ಬಳಿ ಬಂದು ರೋಹಿತ್ ನಿಂತಿದ್ದಾನೆ. ರಕ್ತ ಸುರಿಯುತ್ತಿದ್ದರೂ ಧೃತಿಗೆಡಲಿಲ್ಲ ಎಂದು ಹೇಳಿದರು.

    ಯಶಸ್ ಆರೋಗ್ಯವಾಗಿದ್ದಾನೆ. ರೋಹಿತ್ ಮತ್ತು ಯಶಸ್ ಉತ್ತಮ ಗೆಳೆಯರಾಗಿದ್ದರು. ರೋಹಿತ್ ಥಂಬ್ಸ್‌ ಅಪ್ ಮಾಡುವ ಮೂಲಕ ನಮಗೆ ಧೈರ್ಯ ಹೇಳುತ್ತಿದ್ದಾನೆ ಎಂದು ಯಶಸ್ ತಾಯಿ ವಿನೋದಾ ತಿಳಿಸಿದರು. ಇದನ್ನೂ ಓದಿ: ಜಪಾನ್‌ನಿಂದ ಚೀನಾಗೆ ಶಿಫ್ಟ್ ಆಯ್ತು ಟ್ರಂಪ್ ‘ವಾಣಿಜ್ಯ ಯುದ್ಧ’ ಕಾರ್ಡ್ – ಭಾರತ ಮುಂದಿನ ಟಾರ್ಗೆಟ್?

    ಹೊಸಹಳ್ಳಿ ಸಮೀಪದ ಆರಾಧನಾ ಕಾಲೇಜಿನಲ್ಲಿ ಶನಿವಾರ ಸಂಜೆ ಆಯೋಜನೆಗೊಂಡಿದ್ದ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ರೋಹಿತ್, ತಾಯಿ ಮತ್ತು ಸ್ನೇಹಿತರನ್ನು‌ ಕಾಲೇಜು ಮುಖ್ಯಸ್ಥ ಯೋಗಣ್ಣ ಅವರ ಕಾರಿನಲ್ಲಿ ಪಾಂಡವಪುರದಿಂದ ಕರೆತರುತ್ತಿದ್ದಾಗ ಶ್ರೀರಂಗಪಟ್ಟಣದ ಪಾಲಹಳ್ಳಿ ಬಳಿ ಅವಘಡ ಸಂಭವಿಸಿದೆ. ಕೇರಳದ ಪ್ರವಾಸಿ ಬಸ್ಸೊಂದಕ್ಕೆ ಕಾರು ಮುಖಾಮುಖಿ ಡಿಕ್ಕಿ ಆಗಿದ್ದರಿಂದ ಕಾರಿನಲ್ಲಿದ್ದವರು ಗಂಭೀರ ಗಾಯಗೊಂಡಿದ್ದಾರೆ.

    ಅಪಘಾತದಲ್ಲಿ ರೋಹಿತ್ ಅವರ ತಾಯಿ ಛಾಯಾಲಕ್ಷ್ಮಿ ಅವರ ಒಂದು‌ ಕೈ ಮತ್ತು ಒಂದು ಕಾಲು ಮುರಿದಿದೆ. ಕಾರಿನಲ್ಲಿದ್ದ ಸ್ನೇಹಿತ ಯಶಸ್, ಆರಾಧನಾ ಕಾಲೇಜಿನ ಉಪನ್ಯಾಸಕ ಕೇಶವ್​ ಮತ್ತು ಶ್ರೀಕಾಂತ್​ ಗಾಯಗೊಂಡಿದ್ದಾರೆ. ಶ್ರೀಕಾಂತ್ ಕಾರು ಚಲಾಯಿಸುತ್ತಿದ್ದರು ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ಮೈಸೂರು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಶ್ರೀರಂಗಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

    ಪಾಂಡವಪುರ ನಿವಾಸಿಯಾಗಿರುವ ರೋಹಿತ್ ಅವರಿಗೆ ‘ಒಂದಲ್ಲಾ ಎರಡಲ್ಲಾ’ ಚಿತ್ರದ ನಟನೆಗಾಗಿ ರಾಷ್ಟ್ರಪ್ರಶಸ್ತಿ ಬಂದಿತ್ತು. ‘ಕಾಟೇರಾ’ ಚಿತ್ರದಲ್ಲೂ ಇವರು ಅಭಿನಯಿಸಿದ್ದಾರೆ.

     

  • ‘ಅರೆಸ್ಟ್ ಮಿ ಬೇಬಿ’ ಎಂದು ಹೆಜ್ಜೆ ಹಾಕಿದ ರೋಹಿತ್

    ‘ಅರೆಸ್ಟ್ ಮಿ ಬೇಬಿ’ ಎಂದು ಹೆಜ್ಜೆ ಹಾಕಿದ ರೋಹಿತ್

    ವಾರಿ ಹುಡುಗನ ಜಭರ್ದಸ್ತ್ ಜವಾರಿ ಸಾಂಗ್ ರಿಲೀಸ್ ಆಗಿದೆ. ಅರೆಸ್ಟ್ ಮಿ ಬೇಬಿ ಎನ್ನುತ್ತಾ ಉತ್ತರ ಕರ್ನಾಟಕದ ಪ್ರತಿಭೆ ರೋಹಿತ್ ‘ರಕ್ತಾಕ್ಷ’  (Raktaksha)  ಸಾಂಗ್ ಗೆ ಹೆಜ್ಜೆ ಹಾಕಿದ್ದಾರೆ. ರಕ್ತಾಕ್ಷ ಸಿನಿಮಾ ಮೂಲಕ ನಾಯಕನಾಗಿ ಮೊದಲ ಹೆಜ್ಜೆ ಇಡ್ತಿರುವ ರೋಹಿತ್ ನಿರ್ಮಾಪಕನ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಆಕ್ಷನ್ ಟೀಸರ್ ಮೂಲಕ ಜಭರ್ದಸ್ತ್ ಆಕ್ಷನ್ ಪ್ರದರ್ಶಿಸಿದ್ದ ಈ ಹುಡುಗ ಈ ಜವಾರಿ ಹಾಡಿನ ಮೂಲಕ ಕಿಕ್ ಏರಿಸಿದ್ದಾರೆ.

    ರೋಹಿತ್ (Rohit) ಕುಣಿದಿರುವ ಅರೆಸ್ಟ್ ಮೀ ಬೇಬಿ (Arrest Me Baby) ಹಾಡಿಗೆ ಸುಜಿತ್ ವೆಂಕಟರಾಮಯ್ಯ ಕ್ಯಾಚಿ ಮ್ಯಾಚಿ ಪದ ಪೊಣಿಸಿದ್ದು, ಸುಪ್ರಿಯಾ  ರಾಮ್ ಜೊತೆ ಕಂಠ ಕುಣಿಸುವುದರ ಜೊತೆಗೆ ಡೋಸ್ಮೋಡ್ ಸಂಗೀತ ಒದಗಿಸಿದ್ದಾರೆ. ಪಕ್ಕ ಉತ್ತರ ಕರ್ನಾಟಕದ ಸ್ಟೈಲ್ ನಲ್ಲಿ ಮೂಡಿಬಂದಿರುವ ಹಾಡಿನ ಮಸ್ತಿಗೆ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ. ಇದನ್ನೂ ಓದಿ:ಹುಟ್ಟುಹಬ್ಬಕ್ಕೆ ಬ್ರೇಕ್‌ ಹಾಕಿದ ರಚಿತಾ- ಸೋಶಿಯಲ್‌ ಮೀಡಿಯಾದಲ್ಲಿ ನಟಿ ಮನವಿ

    ರೋಹಿತ್ ಈಗಾಗಲೇ ಮಾಡೆಲಿಂಗ್ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ‘ರಕ್ತಾಕ್ಷ’ ಸಿನಿಮಾ ಮೂಲಕ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ಹೀರೋ ಆಗಿರುವ ಜೊತೆಗೆ ತಮ್ಮದೇ ಸಾಯಿ ಪ್ರೊಡಕ್ಷನ್ ಹೌಸ್ ನಿರ್ಮಾಣ ಸಂಸ್ಥೆಯ ಮೂಲಕ ‘ರಕ್ತಾಕ್ಷ’ ಸಿನಿಮಾವನ್ನು ನಿರ್ಮಾಣ ಸಹ ಮಾಡಿದ್ದಾರೆ. ವಾಸುದೇವ ಎಸ್.ಎನ್ ‘ರಕ್ತಾಕ್ಷ’ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ರೋಹಿತ್ ರೀತಿಯಲ್ಲಿಯೇ ವಾಸುದೇವ್ ಅವರಿಗೂ ಇದು ಮೊದಲ ಸಿನಿಮಾ. ರೋಹಿತ್, ವಾಸುದೇವ್ ಜೊತೆಗೆ ಇನ್ನೊಂದಿಷ್ಟು ಹೊಸ ಪ್ರತಿಭೆಗಳು ಸೇರಿ ಈ ಸಿನಿಮಾವನ್ನು ಮಾಡಿವೆ. ಧೀರೇಂದ್ರ ಡಾಸ್ ಈ ಸಿನಿಮಾಕ್ಕೆ ಸಂಗೀತ ನೀಡಿದ್ದಾರೆ.

    ಚಿತ್ರಕ್ಕೆ ಸುಜಿತ್ ವೆಂಕಟರಾಮಯ್ಯ ಸಾಹಿತ್ಯ ಬರೆದಿದ್ದಾರೆ, ಸಂಗೀತವನ್ನು ಧೀರೇಂದ್ರ ಡಾಸ್ ನೀಡಿದ್ದಾರೆ. ಕೆಜಿಎಫ್ ಸಿನಿಮಾದಲ್ಲಿ ನಟಿಸಿರುವ ರೂಪಾ ರಾಯಪ್ಪ, ಅರ್ಚನಾ ಕೊಟ್ಟಿಗೆ, ರಚನಾ ದಶರತ್, ಗುರುದೇವ್ ನಾಗರಾಜ, ರಾಮಣ್ಣ, ವಿಲಾಸ್, ಪ್ರಭು, ವಿಶ್ವ, ಭದ್ರಿ, ನಾರಾಯಣ, ಬಸವರಾಜ ಆದಾಪುರ್, ಭರತ್ ನಟಿಸಿದ್ದಾರೆ. ಖಳನಾಯಕ ಪಾತ್ರದಲ್ಲಿ ನಟ ಪ್ರಮೋದ್ ಶೆಟ್ಟಿ ನಟಿಸಿದ್ದಾರೆ. ‘ರಕ್ತಾಕ್ಷ’ ಸಿನಿಮಾದ ಟೈಟಲ್ ಟ್ರ್ಯಾಕ್ ಅನ್ನು ವಸಿಷ್ಠ ಸಿಂಹ ಹಾಡಿದ್ದು ಹಾಡು ಬಿಡುಗಡೆ ಆಗಿ ಒಳ್ಳೆಯ ಪ್ರತಿಕ್ರಿಯೆ ಧಕ್ಕಿಸಿಕೊಂಡಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪ್ರಮೋದ್-ರೋಹಿತ್ ಕಾಂಬಿನೇಷನ್ ‘ರಕ್ತಾಕ್ಷ’ ಸಿನಿಮಾದ ಮಾಸ್ ಟೀಸರ್ ರಿಲೀಸ್

    ಪ್ರಮೋದ್-ರೋಹಿತ್ ಕಾಂಬಿನೇಷನ್ ‘ರಕ್ತಾಕ್ಷ’ ಸಿನಿಮಾದ ಮಾಸ್ ಟೀಸರ್ ರಿಲೀಸ್

    ರಂಭದಿಂದಲೂ ನಾನಾ ಬಗೆಯಲ್ಲಿ ಪ್ರೇಕ್ಷಕರನ್ನು ಸೆಳೆಯುತ್ತಿರುವ ರಕ್ತಾಕ್ಷ (Raktaksha) ಸಿನಿಮಾದ ಸಾಹಸಮಯ ಟೀಸರ್ (Teaser) ರಿಲೀಸ್ ಆಗಿದೆ. ಪಂಚಿಂಗ್ ಡೈಲಾಗ್ ಹೊಡೆಯುತ್ತಾ ನಾಯಕ ರೋಹಿತ್ ಭರ್ಜರಿಯಾಗಿ ಎಂಟ್ರಿ ಕೊಟ್ಟಿದ್ದಾರೆ.  ಸಿಕ್ಸ್ ಪ್ಯಾಕ್ ಲುಕ್ ನಲ್ಲಿ ರಗಡ್ ಆಗಿ ಅಬ್ಬರಿಸಿರುವ ಅವರು ಪ್ರಮೋದ್ ಶೆಟ್ಟಿ (Pramod Shetty) ಎದುರು ತೊಡೆ ತಟ್ಟಿ ಅಬ್ಬರಿಸಿದ್ದಾರೆ‌. ಕಿಲ್ಲಿಂಗ್ ಲುಕ್ ಮೂಲಕವೇ ಗಮನಸೆಳೆದಿರುವ ರೋಹಿತ್ ಕನ್ನಡ ಚಿತ್ರರಂಗದ ಭರವಸೆ ನಾಯಕ ಎನಿಸಿಕೊಂಡಿದ್ದಾರೆ. ಟೀಸರ್ ಪ್ರಾಮಿಸಿಂಗ್ ಎನಿಸಿದ್ದು, ಧೀರೇಂದ್ರ ಡಾಸ್ ಸಂಗೀತ ಸಖತ್ ಕಿಕ್ ಕೊಡುತ್ತಿದೆ.

    ಮಾಡೆಲಿಂಗ್ ಲೋಕದಲ್ಲಿ ಛಾಪು ಮೂಡಿಸಿರುವ ರೋಹಿತ್ (Rohit) ರಕ್ತಾಕ್ಷ ಸಿನಿಮಾ ಮೂಲಕ ನಾಯಕನಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ. ತಮ್ಮದೇ ಸಾಯಿ ಪ್ರೊಡಕ್ಷನ್ ಹೌಸ್ ನಡಿ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.  ರಕ್ತಾಕ್ಷ ಸಿನಿಮಾವನ್ನು ವಾಸುದೇವ ಎಸ್.ಎನ್ ನಿರ್ದೇಶನ ಮಾಡುತ್ತಿದ್ದಾರೆ. ಅಂದ್ಹಾಗೆ ವಾಸುದೇವ್ ನಿರ್ದೇಶನ ಮಾಡುತ್ತಿರುವ ಚೊಚ್ಚಲ ಸಿನಿಮಾವಿದು. ರೋಹಿತ್ ಜೊತೆ ಒಂದಷ್ಟು ಉತ್ಸಾಹಿ ಪ್ರತಿಭೆಗಳು ಸೇರಿ ‘ರಕ್ತಾಕ್ಷ’ ಸಿನಿಮಾಗೆ ದುಡಿದಿದ್ದಾರೆ. ಇದನ್ನೂ ಓದಿ:ಕಮ್‌ಬ್ಯಾಕ್ ಆಗ್ತಿರೋ ಅನುಷ್ಕಾ ಶೆಟ್ಟಿ ಸಿನಿಮಾದಿಂದ ದೂರವಾಗಿದ್ಯಾಕೆ? ಇಲ್ಲಿದೆ ಅಪ್‌ಡೇಟ್

    ಚಿತ್ರಕ್ಕೆ ಸುಜಿತ್ ವೆಂಕಟರಾಮಯ್ಯ ಸಾಹಿತ್ಯ, ಧೀರೇಂದ್ರ ಡಾಸ್ ಸಂಗೀತ ನೀಡಿದ್ದಾರೆ. ಕೆಜಿಎಫ್ ನಟಿಸಿರುವ ರೂಪಾ ರಾಯಪ್ಪ (Rupa Rayappa), ಅರ್ಚನಾ ಕೊಟ್ಟಿಗೆ, ರಚನಾ ದಶರತ್,  ಪ್ರಭು, ವಿಶ್ವ, ಭದ್ರಿ ನಾರಾಯಣ, ಗುರುದೇವ  ನಾಗರಾಜ, ಬಸವರಾಜ ಆದಾಪುರ ನಟಿಸಿದ್ದಾರೆ. ಖಳನಾಯಕ ಪಾತ್ರದಲ್ಲಿ ನಟ ಪ್ರಮೋದಶೆಟ್ಟಿ ಅಭಿನಯಿಸಿದ್ದಾರೆ.

     

    ಈಗಾಗಲೇ ವಸಿಷ್ಠ ಸಿಂಹ ಅವರು ಹಾಡಿರುವ ರಕ್ತಾಕ್ಷ ಟೈಟಲ್ ಟ್ರ್ಯಾಕ್ ಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಸದ್ಯ ಟೀಸರ್ ಮೂಲಕ ರಕ್ತಾಕ್ಷ ಸಿನಿಮಾ ನಿರೀಕ್ಷೆ ದುಪ್ಪಟ್ಟು ಮಾಡಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೆಂಗಳೂರು ಬಾಯ್ಸ್ ಕೊಟ್ಟ ನಾಲ್ಕು ಐಕಾನಿಕ್ಸ್ ಕ್ಯಾರೆಕ್ಟರ್ ಝಲಕ್

    ಬೆಂಗಳೂರು ಬಾಯ್ಸ್ ಕೊಟ್ಟ ನಾಲ್ಕು ಐಕಾನಿಕ್ಸ್ ಕ್ಯಾರೆಕ್ಟರ್ ಝಲಕ್

    ವಿ.ಮೇಕರ್ಸ್ ನಿರ್ಮಾಣದಲ್ಲಿ ಮೂಡಿ ಬಂದಿರುವ ‘ಬೆಂಗಳೂರು ಬಾಯ್ಸ್’  (Bangalore Boys) ಸಿನಿಮಾದ ಮೊದಲ ನೋಟ ಬಿಡುಗಡೆಯಾಗಿದೆ. ಎರಡು ನಿಮಿಷ ಐವತ್ತೈದು ಸೆಕೆಂಡ್ ಇರುವ ಟ್ರೈಲರ್ ಫನ್-ಎಮೋಷನ್, ಸೆಂಟಿಮೆಂಟ್, ರೋಮ್ಯಾನ್ಸ್, ಮೋಜು-ಮಸ್ತಿ, ಪಂಚಿಂಗ್ ಡೈಲಾಗ್ ಕಿಕ್ ಗಳಿಂದ ಕೂಡಿದೆ.

    ವೇಸ್ಟ್ ಎನಿಸಿಕೊಳ್ಳುವ ಲಾಸ್ಟ್ ಬೆಂಚ್ ಸ್ಟೂಡೆಂಟ್ ಬದುಕಿನಲ್ಲಿ ಸಾಧನೆಯ ಗುರಿಮುಟ್ಟಿದ ಸಾಕಷ್ಟು ಉದಾಹರಣೆಗಳಿವೆ. ಅಂತಹದ್ದೇ ಕಥಾಹಂದರ ಹೊಂದಿರುವ ಸಿನಿಮಾ ಬೆಂಗಳೂರು ಬಾಯ್ಸ್. ತೊಂಬತ್ತರ ದಶಕದಲ್ಲಿ ಸೂಪರ್ ಹಿಟ್ ಸಿನಿಮಾಗಳಾದ ರಣಧೀರ, ಅಂತ , ಓಂ ಹಾಗೂ ಎ ಚಿತ್ರಗಳ ಪಾತ್ರದಲ್ಲಿ ಅಭಿಷೇಕ್ ದಾಸ್, ಸಚಿನ್ ಚೆಲುವರಾಯಸ್ವಾಮಿ (Sachin Cheluvarayaswamy), ಚಂದನ್ ಆಚಾರ್ (Chandan Achar), ರೋಹಿತ್ ಮಿಂಚಿದ್ದಾರೆ. ಇವರಿಗೆ ಜೋಡಿಯಾಗಿ ಪ್ರಗ್ಯ ನಯನ, ವೈನಿಧಿ ಜಗದೀಶ್, ಜಯಶ್ರೀ ಆಚಾರ್ ಹಾಗೂ ಸೋನಿ ನಟಿಸಿದ್ದಾರೆ. ಇದನ್ನೂ ಓದಿ:ಅಂಬಿ ಪುತ್ರನ ಅದ್ದೂರಿ ಕಲ್ಯಾಣ- ಮದುವೆಯ ಕಲರ್‌ಫುಲ್ ಫೋಟೋಸ್

    ಕಾಮಿಡಿ ಕಿಂಗ್ ಚಿಕ್ಕಣ ಪ್ರಮುಖ ಪಾತ್ರವೊಂದ್ರಲ್ಲಿ ನಟಿಸಿದ್ದು, ಐಟಿಬಿಟಿ ಉದ್ಯೋಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಅರಸು ಸಾಹಿತ್ಯದ ಹಾಡಿಗೆ ಕಂಠ ಕೂಡ ಕುಣಿಸಿದ್ದಾರೆ.  ಉಮೇಶ್, ಪಿಡಿ ಸತೀಶ್, ಮೋಹನ್ ಜೂನೇಜಾ ಸೇರಿದಂತೆ ಹಿರಿಯ ಕಲಾವಿದರ ದಂಡು ಚಿತ್ರದಲ್ಲಿದೆ. ಶೂಟಿಂಗ್ ಮುಗಿಸಿ ಬಿಡುಗಡೆ ರೆಡಿಯಾಗಿರೋ ಬೆಂಗಳೂರು ಬಾಯ್ಸ್ ಸಿನಿಮಾಗೆ ‘ಅಂಬಿ ನಿಂಗೆ ವಯಸ್ಸಾಯ್ತೋ’ ಸಿನಿಮಾ ಖ್ಯಾತಿಯ ಗುರುದತ್‌ ಗಾಣಿಗ  (Gurudutt Ganiga)ಕ್ರಿಯೇಟಿವ್‌ ನಿರ್ದೇಶಕರಾಗಿ ಕೆಲಸ ಮಾಡಿದ್ದು, ರವಿ ಶ್ರೀರಾಮ್ ಕೋ ಡೈರೆಕ್ಟರ್ ಆಗಿ ದುಡಿದಿದ್ದಾರೆ.

    ರಿಜೋ ಪಿ ಜಾನ್ ಛಾಯಾಗ್ರಹಣ, ಧರ್ಮ ವಿಶ್ ಈ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. . ಸಿನಿಮಾ ಆಸಕ್ತಿ ಹೊಂದಿರುವ ತೆಲುಗು ಮೂಲದ ವಿಕ್ರಮ್‌ ಕೆ.ವೈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಪ್ರಶಾಂತ್ ರಾವ್ ಪುರಂ ಸಹ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಸದ್ಯ ಟ್ರೇಲರ್ ಮೂಲಕ ಕಿಕ್ ಕೊಟ್ಟಿರುವ ಬೆಂಗಳೂರು ಬಾಯ್ಸ್ ಆದಷ್ಟು ಬೆಳ್ಳಿತೆರೆಮೇಲೆ ಅಬ್ಬರಿಸಲಿದೆ.

  • ‘ರಕ್ತಾಕ್ಷ’ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟ ಮಾಡೆಲ್

    ‘ರಕ್ತಾಕ್ಷ’ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟ ಮಾಡೆಲ್

    ಕ್ತಾಕ್ಷ (Raktaksha) ಎಂಬ ಸಿನಿಮಾ ಮೂಲಕ ಯುವ ಪ್ರತಿಭೆ ರೋಹಿತ್ ನಟನಾಗಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಕಳೆದ ಆರು ವರ್ಷದಿಂದ ಮಾಡೆಲಿಂಗ್ ನಲ್ಲಿ ಮಿಂಚಿದ್ದ ರೋಹಿತ್(Rohi)  ತಮ್ಮದೇ ಸಾಯಿ ಪ್ರೊಡಕ್ಷನ್ ಸಂಸ್ಥೆಯಡಿ ಚಿತ್ರ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ವಾಸುದೇವ (Vasudev) ಎಸ್ಎನ್ ಎಂಬುವವರು ಈ ಚಿತ್ರದ ಆಕ್ಷನ್ ಕಟ್ ಹೇಳುತ್ತಿದ್ದು, ಇದು ಇವರ ಚೊಚ್ಚಲ ನಿರ್ದೇಶನದ ಸಿನಿಮಾವಾಗಿದೆ. ಒಂದಷ್ಟು ಸಿನಿಮೋತ್ಸಾಹಿ ಪ್ರತಿಭೆಗಳು ಸೇರಿ ತಯಾರಿಸುತ್ತಿರುವ ರಕ್ತಾಕ್ಷ ಸಿನಿಮಾದ ಮೊದಲ ಹಾಡು ರಿಲೀಸ್ ಆಗಿದೆ. ಸುಜಿತ್ ವೆಂಕಟರಾಮಯ್ಯ ಸಾಹಿತ್ಯ, ಧೀರೇಂದರ್ ದಾಸ್ ದಾಸ್ಮೋಡ ಸಂಗೀತದ ಟೈಟಲ್ ಟ್ರ್ಯಾಕ್ ಗೆ  ವಸಿಷ್ಠ ಸಿಂಹ ಧ್ವನಿಯಾಗಿದ್ದಾರೆ. ಸಿನಿಮಾ ಬಗ್ಗೆ ಹಾಗೂ ಹಾಡಿನ ಬಗ್ಗೆ ಚಿತ್ರತಂಡ ಒಂದಷ್ಟು ಮಾಹಿತಿ ಹಂಚಿಕೊಂಡಿದೆ.

    ನಟ ಕಂ ನಿರ್ಮಾಪಕರಾದ ರೋಹಿತ್ ಮಾತನಾಡಿ, ಬಾಲ್ಯದಿಂದಲೂ ಕಲಾವಿದನಾಗಬೇಕು ಎಂಬ ಕನಸಿತ್ತು. ಇದು ಈಗ ನನಸಾಗಿದೆ..3 ತಿಂಗಳಲ್ಲಿ ಲುಕ್, ಫಿಸಿಕ್ಸ್ ಬದಲಾಯಿಸಲು ಹೇಳಿದರೆ ಬದಲಾಯಿಸುತ್ತೇನೆ. ಈ ಚಿತ್ರಕ್ಕಾಗಿ ಎರಡರಿಂದ ಮೂರು ಬಾರಿ ಬಾಡಿ ಟ್ರಾನ್ಸ್ಫರ್ಮೇಶನ್ ಮಾಡಿದ್ದೇನೆ. ನಾನು ರೀಲ್ ಹೀರೋ ಆಗಲು ಬಂದಿಲ್ಲ. ರಿಯಲ್ ಹೀರೋ ಆಗಲು ಬಂದಿದ್ದೇನೆ. ನನ್ನ ಕೆಲಸ ಮುಖಾಂತರ ಎಲ್ಲರಿಗೂ ಪರಿಚಯವಾಗಬೇಕು. ಉತ್ತರಕರ್ನಾಟಕದಲ್ಲಿಯೂ ತುಂಬಾ ಟ್ಯಾಲೆಂಟ್ಸ್ ಇದ್ದಾರೆ. ಅವರಿಗೆಲ್ಲಾ ನನ್ನ ಕೈಯಲ್ಲಾದ ಅವಕಾಶ ಕೊಡುತ್ತೇನೆ. ಈ ಚಿತ್ರದಲ್ಲಿ ಕೆಲವೊಂದು ಸತ್ಯಘಟನೆಯನ್ನು ಉಲ್ಲೇಖ ಮಾಡಲಾಗಿದೆ ಎಂದರು. ಇದನ್ನೂ ಓದಿ:ಚಡ್ಡಿ ಧರಿಸಿ ದೇವಸ್ಥಾನಕ್ಕೆ ಬಂದ ಹುಡುಗಿ: ನೀತಿ ಪಾಠ ಮಾಡಿದ ಕಂಗನಾ

    ನಿರ್ದೇಶಕರಾದ ವಾಸುದೇವ ಎಸ್ಎನ್ ಮಾತನಾಡಿ, ನನ್ನ ಮೊದಲ ಸಿನಿಮಾ, ರಕ್ತಾಕ್ಷ ಅಂದತಕ್ಷಣ ಮಾಸ್ ಟೈಟಲ್ ಎನಿಸುತ್ತದೆ,. ಸಸ್ಪೆನ್ಸ್ ಕ್ರೈಮ್  ಥ್ರಿಲ್ಲರ್ ಎಂದು ಎಲ್ಲಾ ಹೇಳ್ತಿದ್ದಾರೆ. ಮಾಸ್ ಆಗಿಯೂ ಸಸ್ಪೆನ್ಸ್ ಥ್ರಿಲ್ಲರ್ ಆಗಿಯೂ ಎಲ್ಲಾ ರೀತಿಯೂ ಇದೆ. ಸಾಂಗ್ ತುಂಬಾ ಅದ್ಭುತವಾಗಿ ಬಂದಿದೆ. ಸಿನಿಮಾ ಚೆನ್ನಾಗಿ ಬಂದಿದೆ ಎಂದರು. ನಟಿ ರೂಪಾ ರಾಯಪ್ಪ ಮಾತನಾಡಿ, ಈ ಚಿತ್ರದಲ್ಲಿ ನಾನು ಪ್ರಮುಖವಾದ ಪಾತ್ರವೊಂದನ್ನು ಮಾಡಿದ್ದೇನೆ. ಈ ಸಿನಿಮಾ ನಾನು ಆಯ್ಕೆ ಮಾಡಲು ಕಾರಣ ರೋಹಿತ್ ಅವರಲ್ಲಿನ ಪ್ರಾಮಾಣಿಕತೆ. ರೋಹಿತ್ ಎಲ್ಲಾ ಕಲಾವಿದರನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ. ಟೈಟಲ್ ಟ್ರ್ಯಾಕ್ ತುಂಬಾ ಚೆನ್ನಾಗಿ ಮೂಡಿಬಂದಿದೆ. ಪ್ರತಿಯೊಬ್ಬರೂ ಸಿನಿಮಾ ಬೆಂಬಲಿಸಿ ಎಂದರು.

    ಮೂಲತಃ ಉತ್ತರ ಕರ್ನಾಟಕ ಭಾಗದ ರಾಯಚೂರು ಜಿಲ್ಲೆಯ ಮುದ್ಗಲ್ ಎಂಬ ಪುಟ್ಟ ಪಟ್ಟಣದ ರೋಹಿತ್ ಮಾಡಲಿಂಗ್ ಜೊತೆಗೆ ಎರಡು ವರ್ಷಗಳ ರಂಗಭೂಮಿ ಅನುಭವ ಪಡೆದಿದ್ದಾರೆ. ಪ್ರತಿಷ್ಠಿತ ಬ್ರ್ಯಾಂಡ್ ಪ್ರತಿನಿಧಿಸಿರುವ ರೋಹಿತ್ ಎಬಿ ಪಾಸಿಟಿವ್ ಸಿನಿಮಾದಲ್ಲಿ ಖಳನಾಯಕನಾಗಿ ಅಭಿನಯಿಸಿದ್ದರು. ಇದೀಗ ರಕ್ತಾಕ್ಷ ಸಿನಿಮಾ ಮೂಲಕ ಹೀರೋ ಆಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ರೂಪಾ ರಾಯಪ್ಪ, ಅರ್ಚನಾ ಕೊಟ್ಟಿಗೆ, ಪ್ರಮೋದ್ ಶೆಟ್ಟಿ, ರಚನಾ ದಶರತ್,  ಗುರುದೇವ್ ನಾಗರಾಜ, ವಿಲಾಸ್ ಕುಲಕರ್ಣಿ, ಶಿವಮೊಗ್ಗ ರಾಮಣ್ಣ ಸೇರಿದಂತೆ ಹಲವರು ತಾರಾಬಗಳದಲ್ಲಿದ್ದಾರೆ.

  • ತಾರಿಣಿಯಾದ ಮಮತಾ ರಾಹುತ್ : ಇದು ಮಹಿಳಾ ಪ್ರಧಾನ ಸಿನಿಮಾ

    ತಾರಿಣಿಯಾದ ಮಮತಾ ರಾಹುತ್ : ಇದು ಮಹಿಳಾ ಪ್ರಧಾನ ಸಿನಿಮಾ

    ಮತಾ ರಾಹುತ್ (Mamata Rahut) ನಾಯಕಿಯಾಗಿ ನಟಿಸುತ್ತಿರುವ, ಸಿದ್ದು ಪೂರ್ಣಚಂದ್ರ ನಿರ್ದೇಶನದ  ‘ತಾರಿಣಿ’ (Tarini)  ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಶ್ರೀ ನಾಗಬ್ರಹ್ಮ ದೇವಸ್ಥಾನದಲ್ಲಿ ನೆರವೇರಿತು. ಶ್ರೀಗಜನಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸುರೇಶ್ ಕೊಟ್ಯಾನ್ ಚಿತ್ರಾಪು ಅವರು ನಿರ್ಮಿಸುತ್ತಿರುವ ಈ ಚಿತ್ರದ ಮೊದಲ ಸನ್ನಿವೇಶಕ್ಕೆ ಗಂಡಸಿ ಸದಾನಂದಸ್ವಾಮಿ ಆರಂಭಫಲಕ ತೋರಿದರು. ನಟ ಪ್ರಣಯಮೂರ್ತಿ ಕ್ಯಾಮೆರಾ ಚಾಲನೆ ಮಾಡಿದರು.

    ತಾರಿಣಿ ಮಹಿಳಾ ಪ್ರಧಾನ ಚಿತ್ರವಾಗಿದೆ. ಹಲವು ಪ್ರಶಸ್ತಿಗಳನ್ನು ಗಳಿಸಿ, ರಾಷ್ಟ್ರ ಹಾಗೂ ರಾಜ್ಯಮಟ್ಟದಲ್ಲಿ ಖ್ಯಾತಿ ಗಳಿಸಿದ್ದ ‘ದಾರಿ ಯಾವುದಯ್ಯ ವೈಕುಂಠಕೆ’ ಚಿತ್ರ ಸೇರಿದಂತೆ ಅನೇಕ ಸದಭಿರುಚಿ ಚಿತ್ರಗಳನ್ನು ನಿರ್ದೇಶಿಸಿರುವ ಸಿದ್ದು ಪೂರ್ಣಚಂದ್ರ (Siddu Poornchandra) ತಾರಿಣಿ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ನಿರ್ದೇಶಕರೆ ಬರೆದಿದ್ದಾರೆ. ರಾಜು ಹೆಮ್ಮಿಗೆಪುರ ಛಾಯಾಗ್ರಹಣ, ದೀಪಕ್ ಸಿ.ಎಸ್ ಸಂಕಲನ, ಬಸವರಾಜ್ ಆಚಾರ್ಯ ಕಲಾ ನಿರ್ದೇಶನ, ನಾಗರತ್ನ ಕೆ.ಹೆಚ್ ವಸ್ತ್ರಾಲಂಕಾರ ಹಾಗೂ ಎಸ್  ರಘುನಾಥ್ ರಾವ್ ಅವರ ಸ್ಥಿರಚಿತ್ರಣ ಈ ಚಿತ್ರಕ್ಕಿದೆ. ಇದನ್ನೂ ಓದಿ:ಸಲ್ಮಾನ್ ಖಾನ್ ನಂಬರ್ ಬ್ಲಾಕ್ ಮಾಡಿದ್ದರಂತೆ ಸಿದ್ಧಾರ್ಥ್ ಶುಕ್ಲಾ ಪ್ರೇಯಸಿ!

    ಈಗಾಗಲೇ ಚಿತ್ರೀಕರಣ ಆರಂಭವಾಗಿದ್ದು, ಬೆಂಗಳೂರಿನಲ್ಲೇ ಹೆಚ್ಚಿನ ಚಿತ್ರೀಕರಣ ನಡೆಯಲಿದೆ. ತಾರಿಣಿಯಾಗಿ ಮಮತಾ ರಾಹುತ್ ನಟಿಸುತ್ತಿದ್ದು, ನಾಯಕನಾಗಿ ರೋಹಿತ್ (Rohit) ಅಭಿನಯಿಸುತ್ತಿದ್ದಾರೆ. ಭವಾನಿ ಪ್ರಕಾಶ್, ಸುಧಾ ಪ್ರಸನ್ನ, ಸುರೇಶ್ ಚಿತ್ರಾಪು, ಪ್ರಮಿಳಾ ಸುಬ್ರಹ್ಮಣ್ಯಂ, ವಿಜಯಲಕ್ಷ್ಮಿ, ದೀಪಿಕಾಗೌಡ, ಸನ್ನಿ, ಕುಮಾರ ಬೇಂದ್ರೆ, ತೇಜಸ್ವಿನಿ, ರಾಜು ಕಲ್ಕುಣಿ, ಶ್ರೀಸಾಯಿ ಮಂಜು, ಸುಚಿತ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

  • ಅಶ್ವಿನ್‌ ವಿಜಯ್‌ ಮೂರ್ತಿ ನಿರ್ದೇಶನದ ʻಆರʼ ಟೀಸರ್‌ ರಿಲೀಸ್‌

    ಅಶ್ವಿನ್‌ ವಿಜಯ್‌ ಮೂರ್ತಿ ನಿರ್ದೇಶನದ ʻಆರʼ ಟೀಸರ್‌ ರಿಲೀಸ್‌

    ಪ್ರತಿಭಾವಂತ ಹಾಗೂ ಯುವ ಸಿನಿಮೋತ್ಸಾಹಿಗಳ ತಂಡವೊಂದು ಸೇರಿ ಮಾಡಿರುವ `ಆರ’ (Aara Film) ಸಿನಿಮಾ ಟೀಸರ್ ಮೂಲಕ ಎಲ್ಲರ ಗಮನ ಸೆಳೆಯುತ್ತಿದೆ. ಟೈಟಲ್ ಹಾಗೂ ಪೋಸ್ಟರ್ ಮೂಲಕ ಕ್ಯೂರಿಯಾಸಿಟಿ ಹುಟ್ಟು ಹಾಕಿದ್ದ, ಚಿತ್ರತಂಡ ಟೀಸರ್ ಬಿಡುಗಡೆ ಮಾಡಿ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿಸಿದೆ.

    ದೈವ ಹಾಗೂ ದುಷ್ಟ ಶಕ್ತಿಯ ಸಂಘರ್ಷದ ಕಥಾಹಂದರ ಒಳಗೊಂಡ ಸ್ಪಿರಿಚ್ಯುಯಲ್ ಡ್ರಾಮಾ ಮತ್ತು ಥ್ರಿಲ್ಲರ್ ಜಾನರ್ ಸಿನಿಮಾ `ಆರ’. ಬಿಡುಗಡೆಯಾಗಿರುವ ಟೀಸರ್ ತುಣುಕು ಕೂಡ ಅದರ ಝಲಕ್ ಕಟ್ಟಿಕೊಟ್ಟಿದೆ. ಅಶ್ವಿನ್ ವಿಜಯ ಮೂರ್ತಿ (Ashwin Vijay Murthy) ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರ ಸಂಪೂರ್ಣ ಹೊಸ ಪ್ರತಿಭೆಗಳಿಂದ, ಹೊಸತನದಿಂದ ಕೂಡಿದ ಸಿನಿಮಾ ಇದಾಗಿದೆ. ರೋಹಿತ್ ಹಾಗೂ ದೀಪಿಕಾ ಆರಾಧ್ಯ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಚಿತ್ರಕಥೆ, ಸಂಭಾಷಣೆಯನ್ನು ಚಿತ್ರದ ನಟ ರೋಹಿತ್ ಬರೆದಿದ್ದು, ಆನಂದ್ ನೀನಾಸಂ ಸತ್ಯ ರಾಜ್ ನಿಖಿಲ್ ಶ್ರೀಪಾದ್ ಪ್ರತೀಕ್ ಲೋಕೇಶ್ ಚಿತ್ರದ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

     ʻಆರʼ ಎಂಬ ಹುಡುಗನ ಜರ್ನಿ ಸುತ್ತ ಹೆಣೆದ ಕಥೆಯಿದು. ವಿಧಿಯ ಜೊತೆ ಸೇರಿ ಸಂರಕ್ಷಣೆಗಾಗಿ ಹೋರಾಡುವ ಹುಡುಗನ ಕಹಾನಿ ಚಿತ್ರದಲ್ಲಿದೆ. ಚಿತ್ರದ ಬಹುತೇಕ ಚಿತ್ರೀಕರಣ ಉಡುಪಿಯಲ್ಲಿ ಆಗಿದ್ದು, ಚಿತ್ರವು ಉಡುಪಿಯ ಕನ್ನಡ ಹೊಂದಿದೆ. ವಾಸ್ತವ ಅನುಗುಣವಾಗಿ ಸ್ಪಿರಿಚ್ಯುಯಲ್ ಹೊಂದಿದ ಕಥೆ ನಾನತರದ ಆಯಾಮಗಳನ್ನು ಪಡೆದುಕೊಳ್ಳುತ್ತದೆ. ʻಎಆರʼ’ ಫಿಲಂಸ್ ಬ್ಯಾನರ್ ನಡಿ ಸುಜಾತ ಚಡಗ, ಚಂದ್ರಶೇಖರ್ ಸಿ ಜಂಬಿಗಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಯುವ ಪ್ರತಿಭೆ ಶ್ರೀಹರಿ ಛಾಯಾಗ್ರಾಹಣ, ಗಿರೀಶ್ ಹೊತ್ತೂರ್ ಸಂಗೀತ ನಿರ್ದೇಶನ, ಮಾದೇಶ್ ಸಂಕಲನ, ದೇವಿ ಪ್ರಕಾಶ್ ಕಲಾ ನಿರ್ದೇಶನ `ಆರ’ ಚಿತ್ರಕ್ಕಿದೆ. ಜೂನ್‌ನಲ್ಲಿ ಸಿನಿಮಾ ತೆರೆಗೆ ತರಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ.

  • ಡಾಲಿ ಧನಂಜಯ ಹುಟ್ಟು ಹಬ್ಬಕ್ಕೆ ‘ಉತ್ತರಕಾಂಡ’ ಸಿನಿಮಾದ ಖದರ್ ಲುಕ್

    ಡಾಲಿ ಧನಂಜಯ ಹುಟ್ಟು ಹಬ್ಬಕ್ಕೆ ‘ಉತ್ತರಕಾಂಡ’ ಸಿನಿಮಾದ ಖದರ್ ಲುಕ್

    ವಿಜಯ್ ಕಿರಗಂದೂರು ಅರ್ಪಿಸುವ,ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ.  ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು. ಇದೇ ಕಾಂಬಿನೇಶನ್ ನಲ್ಲಿ “ಹೊಯ್ಸಳ” ಚಿತ್ರ ಸಹ ಬರುತ್ತಿದ್ದು, ಮೂರನೇ ಚಿತ್ರವಾಗಿ “ಉತ್ತರಕಾಂಡ” ನಿರ್ಮಾಣವಾಗಲಿದೆ.

    “ದಯವಿಟ್ಟು ಗಮನಿಸಿ”, ” ರತ್ನನ ಪ್ರಪಂಚ” ದಂತಹ ವಿಭಿನ್ನ ಚಿತ್ರಗಳ ನಿರ್ದೇಶಕ ರೋಹಿತ್ ಪದಕಿ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬರುತ್ತಿದೆ. ಕೆಲವು ದಿನಗಳ ಹಿಂದೆ ಈ ಚಿತ್ರದ ಪೋಸ್ಟರ್ ಬಿಡುಗಡೆಯಾಗಿತ್ತು. ಆದರೆ ನಾಯಕ ಯಾರು ? ಎಂಬ ಕುತೂಹಲವಿತ್ತು‌. ಆ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ. ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಧನಂಜಯ ಅವರ ಹುಟ್ಟುಹಬ್ಬದ ದಿನದಂದೇ ಕೆ.ಆರ್.ಜಿ ಸ್ಟುಡಿಯೋಸ್ ಸಂಸ್ಥೆ ಈ ಸುದ್ದಿಯನ್ನು ಹಂಚಿಕೊಂಡು, ನಾಯಕನಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದೆ. ಇದನ್ನೂ ಓದಿ:ಮೂರನೇ ವಾರ ನಾಮಿನೇಷನ್‌ ಸ್ಟಾರ್ಟ್‌: ಉದಯ್‌ ಸೂರ್ಯಗೆ ಮನೆಯಿಂದ ಗೇಟ್‌ ಪಾಸ್?

    “ಉತ್ತರ ಕಾಂಡ” ಉತ್ತರ ಕರ್ನಾಟಕದ ಗ್ಯಾಂಗ್ ಸ್ಟರ್ ಕಥೆ ಆಧರಿಸಿದೆ.‌ ಉತ್ತರ ಕರ್ನಾಟಕದಲ್ಲೇ ಹೆಚ್ಚಿನ ಭಾಗದ ಚಿತ್ರೀಕರಣ ನಡೆಯುತ್ತದೆ. “ಹೊಯ್ಸಳ” ಚಿತ್ರದ ನಂತರ, ಜನವರಿಯಲ್ಲಿ ಈ ಚಿತ್ರದ ಚಿತ್ರೀಕರಣ ಆರಂಭವಾಗುತ್ತದೆ ಎಂದು ನಿರ್ದೇಶಕ ರೋಹಿತ್   ತಿಳಿಸಿದ್ದಾರೆ. ಚರಣ್ ರಾಜ್ “ಉತ್ತರ ಕಾಂಡ” ಚಿತ್ರಕ್ಕೆ ಸಂಗೀತ ನೀಡುತ್ತಿದ್ದು, ಸ್ವಾಮಿ  ಛಾಯಾಗ್ರಹಣ ಹಾಗೂ ದೀಪು ಎಸ್ ಕುಮಾರ್  ಸಂಕಲನ ಹಾಗೂ ವಿಶ್ವಾಸ್ ಅವರ ಕಲಾ ನಿರ್ದೇಶನವಿರುತ್ತದೆ.

    Live Tv
    [brid partner=56869869 player=32851 video=960834 autoplay=true]

  • ಖ್ಯಾತ ನಿರ್ದೇಶಕ ಅರವಿಂದ್ ಕೌಶಿಕ್ ಅರೆಸ್ಟ್

    ಖ್ಯಾತ ನಿರ್ದೇಶಕ ಅರವಿಂದ್ ಕೌಶಿಕ್ ಅರೆಸ್ಟ್

    ನ್ನಡ ಕಿರುತೆರೆ ಮತ್ತು ಹಿರಿತೆರೆ ನಿರ್ದೇಶಕ ಅರವಿಂದ್ ಕೌಶಿಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರೆಸ್ಟ್ ಆಗಿದ್ದಾರೆ. ಕಿರುತೆರೆ ನಿರ್ಮಾಪಕ ರೋಹಿತ್ ಎನ್ನುವವರಿಗೆ 73 ಲಕ್ಷ ರೂಪಾಯಿ ವಂಚಿಸಿದ ಕಾರಣಕ್ಕಾಗಿ ಅವರ ವಿರುದ್ಧ ವೈಯ್ಯಾಲಿ ಕಾವಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿತ್ತು. ನಿನ್ನೆ ರಾತ್ರಿ ನಿರ್ದೇಶಕ ಅರವಿಂದ್ ಕೌಶಿಕ್ ಅವರನ್ನು ವೈಯ್ಯಾಲಿ ಕಾವಲ್ ಪೊಲೀಸ್ ಅಧಿಕಾರಿಗಳು ಬಂಧಿಸಿದ್ದಾರೆ. ಇದನ್ನೂ ಓದಿ : ವಾಮನ ತೆಕ್ಕೆಗೆ ತುಳುನಾಡ ಬೆಡಗಿ ರಚನಾ ರೈ

    2020ರಲ್ಲೇ ಅರವಿಂದ್ ಕೌಶಿಕ್, ಪತ್ನಿ ಶಿಲ್ಪಾ ಸೇರಿದಂತೆ ಹಲವರು ವಿರುದ್ಧ ರೋಹಿತ್ ದೂರು ಸಲ್ಲಿಸಿದ್ದರು. ಈ ದೂರಿಗೆ ಸಂಬಂಧ ಪಟ್ಟಂತೆ ಇದೀಗ ಪೊಲೀಸ್ ನವರು ನಿರ್ದೇಶಕ ಅರವಿಂದ್ ಅವರನ್ನು ಬಂಧಿಸಿದ್ದಾರೆ. ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿದ್ದ ಕಮಲಿ ಧಾರಾವಾಹಿಗೆ ಸಂಬಂಧಿಸಿದ ವಂಚನೆ ಪ್ರಕರಣ ಇದಾಗಿದೆ. ಇದನ್ನೂ ಓದಿ : ಡಾ.ರಾಜ್ ಕುಟುಂಬದೊಂದಿಗೆ ಮತ್ತೊಂದು ಸಿನಿಮಾ ಘೋಷಣೆ ಮಾಡಿದ ಜೇಮ್ಸ್ ನಿರ್ಮಾಪಕ

    ಈ ಕುರಿತು ದೂರಿನಲ್ಲಿ ಉಲ್ಲೇಖಿಸಿರುವ ರೋಹಿತ್, 28 ಮೇ 2018 ರಿಂದ ‘ಕಮಲಿ’ ಧಾರಾವಾಹಿ ಶುರುವಾಯಿತು. ಮೊದ ಮೊದಲು ಧಾರಾವಾಹಿಯಲ್ಲಿ ನಿರ್ಮಾಪಕರು ರೋಹಿತ್ ಎಂದು ತೋರಿಸಲಾಗುತ್ತಿತ್ತು. ಆ ನಂತರ ನನ್ನ ಹೆಸರನ್ನೇ ಕಿತ್ತು ಹಾಕಲಾಯಿತು. ಅಷ್ಟರಲ್ಲಿ ನಾನು ಆ ಧಾರಾವಾಹಿಗಾಗಿ 73 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದೆ. ನನ್ನ ಹೆಸರು ತಗೆದು ಹಾಕಿದ್ದಕ್ಕೆ ಕೇಳಿದೆ. ಅದಕ್ಕೆ ಅವರು ಸಕಾರಣ ಕೊಡಲಿಲ್ಲ. ಈವರೆಗೂ ಲಾಭಾಂಶದಲ್ಲಿ ಒಂದು ಪೈಸೆಯನ್ನೂ ನನಗೆ ಕೊಟ್ಟಿಲ್ಲ. ಹಣ ಕೇಳಿದರೆ ಕೊಡು‍ತ್ತಿಲ್ಲ. ಹೀಗಾಗಿ ನನಗೆ ವಂಚನೆ ಆಗಿದೆ ಎಂದು ದೂರಿನಲ್ಲಿ ಬರೆದಿದ್ದಾರೆ ರೋಹಿತ್. ಇದನ್ನೂ ಓದಿ: ಕೆಜಿಎಫ್-2 ಸಿನಿಮಾ ವೀಕ್ಷಿಸಿದ ಇಳಯರಾಜ, ಕಮಲ್ ಹಾಸನ್

    ಆದರೆ, ಅರವಿಂದ್ ಕೌಶಿಕ್ ಹೇಳುವುದೇ ಬೇರೆ. ಗೆಳೆಯರೊಟ್ಟಿಗೆ ಸೇರಿ ನಾನು ನಮ್ಮದೇ ಸತ್ವ ಮೀಡಿಯಾ ಸಂಸ್ಥೆಯನ್ನು ಹುಟ್ಟು ಹಾಕಿದ್ದೆವು. ಆ ಸಂಸ್ಥೆಗೆ ವಾಹಿನಿಯವರು ಧಾರಾವಾಹಿ ನಿರ್ಮಿಸಲು ಒಪ್ಪಿಗೆ ಕೊಟ್ಟಿದ್ದರು. ಬಂಡವಾಳ ಹೂಡುವವರು ಬೇಕಾಗಿದ್ದರಿಂದ ರೋಹಿತ್ ಅವರೇ ನಮ್ಮನ್ನು ಸಂಪರ್ಕಿಸಿದರು. ಫೈನಾನ್ಸ್ ಮಾಡಿದ್ದರು. ತಮ್ಮ ಹೆಸರಿನ ಮುಂದೆ ನಿರ್ಮಾಪಕರು ಎಂದು ಹಾಕುವಂತೆ ಕೇಳಿದರು. ಅದಕ್ಕೆ ವಾಹಿನಿಯವರು ಒಪ್ಪದೇ ಇರುವ ಕಾರಣಕ್ಕಾಗಿ ನಾವು ಯಾರ ಹೆಸರನ್ನೂ ಹಾಕಲಿಲ್ಲ. ರೋಹಿತ್ ಈ ಧಾರಾವಾಹಿಗೆ ತಾನೇ ನಿರ್ಮಾಪಕ ಎಂದು ಹೇಳಿಕೊಂಡು ಓಡಾಡುತ್ತಿದ್ದರು. ನನ್ನೊಂದಿಗೆ ಹಣ ಹಾಕಿದವರು ನನಗೆ ಪ್ರಶ್ನೆ ಮಾಡಿದರು. ಹಾಗಾಗಿ ಅವರ ಹೆಸರನ್ನು ತಗೆದುಹಾಕಲಾಯಿತು. ನಂತರ ಧಾರಾವಾಹಿ ನಿಂತಿತು. ತಮಗೆ ಹಣ ವಾಪಸ್ಸು ಬರುವುದಿಲ್ಲ ಎಂದು ತಮಗೆ ತಾವೇ ಅಂದುಕೊಂಡು ಹೀಗೆ ದೂರು ನೀಡಿದ್ದಾರೆ. ನಾನು ಹಣ ಕೊಡುವುದಿಲ್ಲ ಎಂದು ಯಾವತ್ತೂ ಹೇಳಿಲ್ಲ ಎಂದಿದ್ದಾರೆ ಅರವಿಂದ ಕೌಶಿಕ್.

  • ಎರಡು ಮಕ್ಕಳ ಜತೆಗೆ ಮತ್ತೊಂದು ಮಗು ಬೇಕು ಎಂದ ಬಿಗ್ ಬಾಸ್ ಬೆಡಗಿ ಡಿಂಪಿ

    ಎರಡು ಮಕ್ಕಳ ಜತೆಗೆ ಮತ್ತೊಂದು ಮಗು ಬೇಕು ಎಂದ ಬಿಗ್ ಬಾಸ್ ಬೆಡಗಿ ಡಿಂಪಿ

    ಹಿಂದಿ ಕಿರುತೆರೆಯ ನಟಿ, ಮಾಡೆಲ್ ಹಾಗೂ ಹಿಂದಿ ಬಿಗ್ ಬಾಸ್ ಸೀಸನ್ 8ರ ಸ್ಪರ್ಧೆ ಡಿಂಪಿ ಗಂಗೂಲಿ ಇದೀಗ ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಅದನ್ನು ಅವರು ಅಭಿಮಾನಿಗಳ ಜತೆ ಸೊಗಸಾಗಿ ಹಂಚಿಕೊಂಡಿದ್ದಾರೆ. ಎರಡೂ ಮಕ್ಕಳ ಜತೆ ತಾವಿರುವ ಫೋಟೋವನ್ನು ಹಾಕಿ, ಗರ್ಭದಲ್ಲಿರುವ ಮಗುವಿಗೆ, ದೊಡ್ಡ ಮಗು ಮುತ್ತಿಡುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಇದನ್ನೂ ಓದಿ : ಗಣೇಶ್ ಮತ್ತು ಪ್ರೀತಂ ಕಾಂಬಿನೇಷನ್ ನಲ್ಲಿ ಮತ್ತೊಂದು ಸಿನಿಮಾ

    ಹದಿಮೂರು ವರ್ಷಗಳ ಹಿಂದೆ ರಾಹುಲ್ ಮಹಾಜನ್ ಅವರ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟವರು ಡಿಂಪಿ. 2010ರಲ್ಲಿ ಆದ ಮದುವೆ ಅನ್ಯೋನ್ಯತೆ ತುಂಬಾ ದಿನಗಳ ಕಾಲ ಉಳಿಲಿಲ್ಲ. ರಾಹುಲ್ ಜತೆ ವಿಚ್ಛೇದನ ಮಾಡಿಕೊಂಡು ರೋಹಿತ್ ಜೊತೆ 2015ರಲ್ಲಿ ಡಿಂಪಿ ಮದುವೆಯಾದರು. ಮೊದಲು ಹೆಣ್ಣು ಮಗುವಿನ ತಾಯಿಯಾದರೆ, ನಂತರ ಈ ದಂಪತಿಗೆ ಗಂಡು ಮಗುವಾಯಿತು. ಮೂರನೇ ಮಗು ಈ ಕುಟುಂಬಕ್ಕೆ ಆಗಮಿಸುತ್ತಿದೆ. ಇದನ್ನೂ ಓದಿ : ದಿ ಕೇರಳ ಸ್ಟೋರಿ ಸಿನಿಮಾ ಶುರು: ಸ್ಫೂರ್ತಿಯಂತೆ ದಿ ಕಾಶ್ಮೀರ್ ಫೈಲ್ಸ್

    ಈ ಸಂದರ್ಭದಲ್ಲಿ ಅವರು ಸುದೀರ್ಘವಾಗಿ ಪತ್ರವೊಂದನ್ನೂ ಬರೆದು ಹಾಕಿದ್ದಾರೆ. ಈ ಮಕ್ಕಳು ನನ್ನ ಬಾಳಿಗೆ ದೇವರಂತೆ ಬಂದಿವೆ. ಕಷ್ಟ, ಸುಖ, ಅಳುವು, ನಗುವು ಎಲ್ಲವೂ ಒಂದು ರೀತಿಯಲ್ಲಿ ದೈವತ್ವದಂತೆ ಕಾಣುತ್ತಿವೆ. ಮಕ್ಕಳೊಂದಿಗೆ ಖುಷಿಯಾಗಿದ್ದೇನೆ. ಜನರು ಏನೇ ಅಂದರೂ, ಅದಕ್ಕೆ ತಲೆ ಕೆಡಿಸಿಕೊಳ್ಳದೇ ಮಕ್ಕಳೊಂದಿಗೆ ಚೆನ್ನಾಗಿ ಇದ್ದೇನೆ. ಮಕ್ಕಳೇ ನನಗೆ ಎಲ್ಲ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.