Tag: ರೋಹಿಂಗ್ಯಾ

  • ರೊಹಿಂಗ್ಯಾ ನಿರಾಶ್ರಿತರನ್ನು ಹೊತ್ತೊಯ್ಯುತ್ತಿದ್ದ ದೋಣಿ ಮುಳುಗಿ 17 ಮಂದಿ ಸಾವು

    ರೊಹಿಂಗ್ಯಾ ನಿರಾಶ್ರಿತರನ್ನು ಹೊತ್ತೊಯ್ಯುತ್ತಿದ್ದ ದೋಣಿ ಮುಳುಗಿ 17 ಮಂದಿ ಸಾವು

    ನೇಪ್ಯಿಡಾವ್: ಮ್ಯಾನ್ಮಾರ್‌ನ (Myanmar) ರಾಖೈನ್ ಪ್ರಾಂತ್ಯದಿಂದ ರೊಹಿಂಗ್ಯಾ (Rohingya) ವಲಸಿಗರನ್ನು ಮಲೇಷ್ಯಾಕ್ಕೆ ಹೊತ್ತೊಯ್ಯುತ್ತಿದ್ದ ಬೋಟ್ (Boat) ಸಮುದ್ರದಲ್ಲಿ ಮುಳುಗಿ 17 ಜನ ಮೃತಪಟ್ಟ ಘಟನೆ ನಡೆದಿದೆ.

    ಬೋಟ್‍ನಲ್ಲಿ 50 ಕ್ಕೂ ಹೆಚ್ಚು ಜನ ಇದ್ದರು ಎನ್ನಲಾಗಿದೆ. ಹುಡುಕಾಟದ ವೇಳೆ 17 ಶವಗಳನ್ನು ಪತ್ತೆಹಚ್ಚಲಾಗಿದೆ. ಬದುಕುಳಿದವರಲ್ಲಿ ಎಂಟು ಪುರುಷರಿದ್ದಾರೆ. ದುರ್ಘಟನೆಯ ಬಗ್ಗೆ ಪೊಲೀಸರು ಹೆಚ್ಚಿನ ಮಾಹಿತಿ ಕಲೆ ಹಾಕಲು ತನಿಖೆ ನಡೆಸುತ್ತಿದ್ದಾರೆ. ಕಣ್ಮರೆಯಾದ 25 ಮಂದಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಇದನ್ನೂ ಓದಿ: ಕಾರವಾರ ನೌಕಾನೆಲೆಯಲ್ಲಿ ಬೋಟ್ ಇಂಜಿನ್‍ಗೆ ಬೆಂಕಿ – ತಪ್ಪಿದ ಅನಾಹುತ

    ರಾಖೈನ್ ಪ್ರಧಾನವಾಗಿ ಬೌದ್ಧ ಮ್ಯಾನ್ಮಾರ್‍ನ ಪ್ರದೇಶವಾಗಿದ್ದು, ಸುಮಾರು 6 ಲಕ್ಷ ರೊಹಿಂಗ್ಯಾ ಮುಸ್ಲಿಮರನ್ನು ಹೊಂದಿದೆ. ಅವರನ್ನು ನೆರೆಯ ಬಾಂಗ್ಲಾದೇಶದಿಂದ ವಲಸಿಗರು ಎಂದು ವರ್ಗೀಕರಿಸಲಾಗಿದೆ. ಈ ಪ್ರದೇಶದಲ್ಲಿ ಪೌರತ್ವ ನಿರಾಕರಿಸಿರುವುದರಿಂದ ಅವರು ಸಮಸ್ಯೆಗಳನ್ನು ಎದುರಿಸುತ್ತಾರೆ.

    ರೊಹಿಂಗ್ಯಾ ಜನಾಂಗ ರಾಖೈನ್‍ನಿಂದ ಬಾಂಗ್ಲಾದೇಶಕ್ಕೆ ವಲಸೆ ಹೋಗುವುದಕ್ಕೆ ತೀವ್ರವಾದ ಮಿಲಿಟರಿ ಬಿಕ್ಕಟ್ಟು ಕಾರಣವಾಗಿದೆ. ಕೊಲೆ ಹಾಗೂ ಲೈಂಗಿಕ ಹಿಂಸೆ ಸೇರಿದಂತೆ ವ್ಯಾಪಕವಾದ ದೌರ್ಜನ್ಯದಿಂದ ಅವರ ವಲಸೆ ನಿರಂತರವಾಗಿ ಮುಂದುವರೆಯುತ್ತಿದೆ. ಇದನ್ನೂ ಓದಿ: ಬೈಡನ್‌ಗೆ ಕೊಲೆ ಬೆದರಿಕೆ ಒಡ್ಡಿದ ವ್ಯಕ್ತಿಯನ್ನು ಗುಂಡಿಕ್ಕಿ ಕೊಂದ ಎಫ್‌ಬಿಐ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರೋಹಿಂಗ್ಯಾ ಮುಸ್ಲಿಮರಿಗೆ ಫ್ಲ್ಯಾಟ್‌ ನೀಡಲ್ಲ: ಗೊಂದಲಗಳಿಗೆ ತೆರೆ ಎಳೆದ ಕೇಂದ್ರ

    ರೋಹಿಂಗ್ಯಾ ಮುಸ್ಲಿಮರಿಗೆ ಫ್ಲ್ಯಾಟ್‌ ನೀಡಲ್ಲ: ಗೊಂದಲಗಳಿಗೆ ತೆರೆ ಎಳೆದ ಕೇಂದ್ರ

    ನವದೆಹಲಿ: ರೋಹಿಂಗ್ಯಾ ಮುಸ್ಲಿಮರಿಗೆ ವಸತಿ ನೀಡುತ್ತೇವೆ ಎಂದು ಹೇಳಿದ್ದ ಕೇಂದ್ರ ಸರ್ಕಾರ ಈಗ ಯಾವುದೇ ಫ್ಲ್ಯಾಟ್‌ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

    ದೆಹಲಿಯಲ್ಲಿರುವ ರೋಹಿಂಗ್ಯಾ ಮುಸ್ಲಿಮರಿಗೆ ಇಡಬ್ಲ್ಯುಎಸ್ ಫ್ಲಾಟ್‌ಗಳನ್ನು ನೀಡಲು ಯಾವುದೇ ನಿರ್ದೇಶನ ನೀಡಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ. ಅಷ್ಟೇ ಅಲ್ಲದೇ ಅಕ್ರಮ ವಿದೇಶಿಗರು ಅವರು ನೆಲೆಸಿರುವ ಸ್ಥಳದಲ್ಲಿಯೇ ಇರುವುದನ್ನು ಖಚಿತಪಡಿಸಿಕೊಳ್ಳುವಂತೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸರ್ಕಾರಕ್ಕೆ ಸೂಚಿಸಿದೆ.

    ದೆಹಲಿಯ ಬಕ್ಕರ್‌ವಾಲಾ ಪ್ರದೇಶದಲ್ಲಿ ರೋಹಿಂಗ್ಯಾ ಮುಸ್ಲಿಮರಿಗೆ ಫ್ಲ್ಯಾಟ್‌ ನೀಡಲು ಮುಂದಾಗಿದೆ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಸಚಿವ ಹರ್ದೀಪ್‌ ಸಿಂಗ್‌ ಪುರಿ ಟ್ವೀಟ್‌ ಮಾಡಿ ತಿಳಿಸಿದ್ದರು. ಈ ಸುದ್ದಿ ಪ್ರಕಟವಾಗುತ್ತಿದ್ದಂತೆ ಕೇಂದ್ರ ಸರ್ಕಾರದ ವಿರುದ್ಧವೇ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ವ್ಯಕ್ತವಾಗಿತ್ತು. ರೋಹಿಂಗ್ಯಾ ಮುಸ್ಲಿಮರಿಂದ ದೇಶದ ಭದ್ರತೆಗೆ ಸಮಸ್ಯೆ ಎಂದು ಹಿಂದೆ ಹೇಳಿದ್ದ ಕೇಂದ್ರ ಈಗ ಫ್ಲ್ಯಾಟ್‌ ನೀಡುವುದು ಎಷ್ಟು ಸರಿ ಎಂಬ ಪ್ರಶ್ನೆಯನ್ನು ಜನ ಎತ್ತಿದ್ದರು. ಚರ್ಚೆ ಜಾಸ್ತಿ ಆಗುತ್ತಿದ್ದಂತೆ ಕೇಂದ್ರ ಸರ್ಕಾರ ರೋಹಿಂಗ್ಯಾ ಮುಸ್ಲಿಮರಿಗೆ ಯಾವುದೇ ಫ್ಲ್ಯಾಟ್‌ ನೀಡುವುದಿಲ್ಲ ಎಂದು ಸ್ಪಷ್ಟನೆ ನೀಡಿ ಎದ್ದಿದ್ದ ಗೊಂದಲಗಳಿಗೆ ತೆರೆ ಎಳೆದಿದೆ.

    ಹರ್ದೀಪ್‌ ಸಿಂಗ್‌ ಪುರಿ ಹೇಳಿದ್ದೇನು?
    ಗೃಹ ಸಚಿವಾಲಯದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. 1,100 ರೋಹಿಂಗ್ಯಾ ಮುಸ್ಲಿಮರು ಟೆಂಟ್‌ನಲ್ಲಿ ವಾಸಿಸುತ್ತಿದ್ದು ಅವರನ್ನು ಅಪಾರ್ಟ್‌ಮೆಂಟ್‌ಗೆ ಸ್ಥಳಾಂತರ ಮಾಡಲಾಗುತ್ತದೆ. ಈ ಅಪಾರ್ಟ್‌ಮೆಂಟ್‌ಗೆ ಪೊಲೀಸ್ ರಕ್ಷಣೆ ಒದಗಿಸಲಾಗುತ್ತದೆ. ದೇಶದ ನಿರಾಶ್ರಿತರ ಯೋಜನೆಯನ್ನು ಸಿಎಎಗೆ ಜೋಡಿಸಿ ಸುಳ್ಳು ಹಬ್ಬಿಸಿದವರಿಗೆ ಇದು ಕಹಿ ಸುದ್ದಿ.  ಇದನ್ನೂ ಓದಿ:  ರೋಹಿಂಗ್ಯಾ ಮುಸ್ಲಿಂ ಉಗ್ರರಿಂದ 28 ಹಿಂದೂಗಳ ಮಾರಣಹೋಮ

    ದೇಶದಲ್ಲಿ ಆಶ್ರಯ ಪಡೆದವರನ್ನು ಭಾರತ ಯಾವಾಗಲೂ ಸ್ವಾಗತಿಸುತ್ತದೆ. ಎಲ್ಲಾ ರೋಹಿಂಗ್ಯಾ ನಿರಾಶ್ರಿತರನ್ನು ದೆಹಲಿಯ ಬಕ್ಕರ್ವಾಲಾ ಪ್ರದೇಶದ EWS ಫ್ಲಾಟ್‌ಗಳಿಗೆ ಸ್ಥಳಾಂತರಿಸಲಾಗುವುದು. ಅವರಿಗೆ ಮೂಲಭೂತ ಸೌಕರ್ಯಗಳು, ರಾತ್ರಿಯಿಡೀ ದೆಹಲಿ ಪೊಲೀಸರಿಂದ ಭದ್ರತೆ ನೀಡಲಾಗುತ್ತದೆ. ದೇಶದ ಆಶ್ರಯವನ್ನು ಅರಸಿ ಬಂದವರಿಗೆ ಆಶ್ರಯ ಕೊಡಲಿದ್ದೇವೆ. ಭಾರತ 1951 ರ ನಿರಾಶ್ರಿತರ ಸಮಾವೇಶವನ್ನು ಗೌರವಿಸುತ್ತದೆ. ಜನಾಂಗ, ಧರ್ಮವನ್ನು ಲೆಕ್ಕಿಸದೇ ಎಲ್ಲರಿಗೂ ಆಶ್ರಯ ನೀಡುತ್ತದೆ ಎಂದಿದ್ದರು.

    ಕೇಂದ್ರ ಈ ಹಿಂದೆ ಹೇಳಿದ್ದೇನು?
    ಮ್ಯಾನ್ಮಾರ್‌ನಲ್ಲಿ ನೆಲೆಯಿಲ್ಲದೇ ನಿರಾಶ್ರಿತರಾಗಿ ಭಾರತಲ್ಲಿರುವ ರೋಹಿಂಗ್ಯಾ ಮುಸಲ್ಮಾನರಿಗೆ ಆಶ್ರಯ ನೀಡುವುದು ದೇಶದ ಭದ್ರತೆಗೆ ಕಂಟಕವಾಗಲಿದೆ. ಈ ನಿರಾಶ್ರಿತರು ಪಾಕಿಸ್ತಾನದ ಐಎಸ್‌ಐ ಜೊತೆ ಸಂಪರ್ಕ ಹೊಂದಿದ್ದಾರೆ. ಇವರನ್ನು ದೇಶದೊಳಗೆ ಇರಲು ಬಿಡುವುದು ದೇಶಕ್ಕೆ ಕಂಟಕವಾಗಲಿದೆ ಎಂದು ಕೇಂದ್ರ ಗೃಹ ಸಚಿವಾಲಯ ಈ ಹಿಂದೆ ಸುಪ್ರೀಂಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿತ್ತು.

    ಪಾಕ್‌ ಸೇರಿದಂತೆ ಉಗ್ರ ಸಂಘಟನೆ ಜೊತೆ ಈ ಮುಸ್ಲಿಮರು ಸಂಬಂಧ ಹೊಂದಿದ್ದಾರೆ. ದೇಶದಲ್ಲಿ ಕೋಮುವಾದ ಹರಡುತ್ತಿದ್ದಾರೆ. ಭಾರತದಲ್ಲಿ ನಕಲಿ ಗುರುತಿನ ಪತ್ರ ಪಡೆದು ದೇಶದ್ರೋಹಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ.

    ಎಲ್ಲ ದೇಶಗಳಂತೆ ವಲಸೆಗೆಂದು ಬರುವ ಜನರ ಮೇಲೆ ನಮಗೆ ಅನುಕಂಪವಿದೆ. ಆದರೆ ವಿಶೇಷವಾಗಿ ಈ ಪ್ರಕರಣದಲ್ಲಿ ದೇಶದ ಭದ್ರತೆ ವಿಚಾರವೂ ಇರುವ ಕಾರಣ ಈ ಅನುಕಂಪ ದುರ್ಬಳಕೆಯಾಗಬಾರದು.

    ಗುಪ್ತಚರ ವರದಿಗಳು ಅಧಿಕೃತವಾಗಿ ಪಾಕಿಸ್ತಾನ ಮೂಲದ ಉಗ್ರರು ಮತ್ತು ಇತರ ದೇಶಗಳಲ್ಲಿರುವ ಉಗ್ರರ ಜೊತೆ ರೋಹಿಂಗ್ಯಾ ಮುಸ್ಲಿಮರಿಗೆ ಸಂಪರ್ಕವಿದೆ ಎನ್ನುವ ಮಾಹಿತಿಯನ್ನು ನೀಡಿವೆ. ಅಷ್ಟೇ ಅಲ್ಲದೇ ದೇಶದಲ್ಲಿರುವ ಬೌದ್ಧರ ಮೇಲೆ ಹಿಂಸಾಚಾರ ನಡೆಯುವ ಭೀತಿಯೂ ಇದೆ.

    ವಲಸಿಗರ ನೀತಿಗೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯ ನೀತಿಗೆ ಭಾರತ ಬದ್ಧವಾಗಿದೆ. ಆದರೆ ಇದರ ಜೊತೆಗೆ ದೇಶದಲ್ಲಿರುವ ಪ್ರಜೆಗಳ ಮಾನವ ಹಕ್ಕುಗಳ ರಕ್ಷಣೆಯನ್ನು ಕಾಪಾಡುವ ಹೊಣೆಗಾರಿಕೆಯೂ ನಮ್ಮ ಮೇಲಿದೆ ಎಂದು ಅಫಿಡವಿತ್‌ನಲ್ಲಿ ಹೇಳಿತ್ತು.

    ಏನಿದು ಪ್ರಕರಣ?
    ಮ್ಯಾನ್ಮಾರ್‌ ದೇಶದ ದಕ್ಷಿಣದಲ್ಲಿರುಗ ರಾಖೈನ್ ರಾಜ್ಯದಲ್ಲಿ ರೋಹಿಂಗ್ಯಾ ಜನರಿದ್ದಾರೆ. ಬೌದ್ಧರೆ ಹೆಚ್ಚಾಗಿರುವ ಈ ದೇಶದಲ್ಲಿ ಈಗ ರೋಹಿಂಗ್ಯಾ ಮುಸ್ಲಿಮರ ಮೇಲೆ ದೌರ್ಜನ್ಯ ಆಗುತ್ತಿದ್ದು ಭಾರತ, ಬಾಂಗ್ಲಾದೇಶಕ್ಕೆ ವಲಸೆ ಬರುತ್ತಿದ್ದಾರೆ. ಭದ್ರತೆ ವಿಚಾರವನ್ನು ಇಟ್ಟುಕೊಂಡು ಕೇಂದ್ರ ಸರ್ಕಾರ  ವಲಸೆಗಾರರನ್ನು ದೇಶದಿಂದ ಹೊರ ಹಾಕಲು ಮುಂದಾಗುತ್ತಿರುವ ಹಿನ್ನೆಲೆಯಲ್ಲಿ ಇಬ್ಬರು ರೋಹಿಂಗ್ಯ ಮುಸ್ಲಿಮರು ಸುಪ್ರೀಂ ಮೊರೆ ಹೋಗಿ, ನಮಗೆ ಭಾರತದಲ್ಲಿ ನಿರಾಶ್ರಿತರ ಮಾನ್ಯತೆಯನ್ನು ನೀಡಬೇಕು ಎಂದು ಮನವಿ ಮಾಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ರೋಹಿಂಗ್ಯಾ ಮುಸ್ಲಿಮರಿಗೆ ಫ್ಲ್ಯಾಟ್‌ : ಯೂಟರ್ನ್‌ ಹೊಡೆದ ಕೇಂದ್ರ

    ರೋಹಿಂಗ್ಯಾ ಮುಸ್ಲಿಮರಿಗೆ ಫ್ಲ್ಯಾಟ್‌ : ಯೂಟರ್ನ್‌ ಹೊಡೆದ ಕೇಂದ್ರ

    ನವದೆಹಲಿ: ರೋಹಿಂಗ್ಯಾ ನಿರಾಶ್ರಿತರ ವಿಷಯದಲ್ಲಿ ಕೇಂದ್ರ ಸರ್ಕಾರ ಯೂಟರ್ನ್‌ ಹೊಡೆದಿದೆ. ದೆಹಲಿಯ ಬಕ್ಕರ್‌ವಾಲಾ ಪ್ರದೇಶದಲ್ಲಿ ರೋಹಿಂಗ್ಯಾ ಮುಸ್ಲಿಮರಿಗೆ ಫ್ಲ್ಯಾಟ್‌ ನೀಡಲು ಮುಂದಾಗಿದೆ.

    ಗೃಹ ಸಚಿವಾಲಯದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. 1,100 ರೋಹಿಂಗ್ಯಾ ಮುಸ್ಲಿಮರು ಟೆಂಟ್‌ನಲ್ಲಿ ವಾಸಿಸುತ್ತಿದ್ದು ಅವರನ್ನು ಅಪಾರ್ಟ್‌ಮೆಂಟ್‌ಗೆ ಸ್ಥಳಾಂತರ ಮಾಡಲಾಗುತ್ತದೆ.  ಈ ಅಪಾರ್ಟ್‌ಮೆಂಟ್‌ಗೆ ಪೊಲೀಸ್ ರಕ್ಷಣೆ ಒದಗಿಸಲಾಗುತ್ತದೆ.

    ದೇಶದ ನಿರಾಶ್ರಿತರ ಯೋಜನೆಯನ್ನು ಸಿಎಎಗೆ ಜೋಡಿಸಿ ಸುಳ್ಳು ಹಬ್ಬಿಸಿದವರಿಗೆ ಇದು ಕಹಿ ಸುದ್ದಿ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಸಚಿವ ಹರ್ದೀಪ್‌ ಸಿಂಗ್‌ ಪುರಿ ಹೇಳಿದ್ಧಾರೆ.

    ಈ ನಿರ್ಧಾರವನ್ನು ಶ್ಲಾಘಿಸಿದ ಸಚಿವರು, ದೇಶದಲ್ಲಿ ಆಶ್ರಯ ಪಡೆದವರನ್ನು ಭಾರತ ಯಾವಾಗಲೂ ಸ್ವಾಗತಿಸುತ್ತದೆ. ಎಲ್ಲಾ ರೋಹಿಂಗ್ಯಾ ನಿರಾಶ್ರಿತರನ್ನು ದೆಹಲಿಯ ಬಕ್ಕರ್ವಾಲಾ ಪ್ರದೇಶದ EWS ಫ್ಲಾಟ್‌ಗಳಿಗೆ ಸ್ಥಳಾಂತರಿಸಲಾಗುವುದು. ಅವರಿಗೆ ಮೂಲಭೂತ ಸೌಕರ್ಯಗಳು, ರಾತ್ರಿಯಿಡೀ ದೆಹಲಿ ಪೊಲೀಸರಿಂದ ಭದ್ರತೆ ನೀಡಲಾಗುತ್ತದೆ ಎಂದಿದ್ದಾರೆ.

    ಉದ್ದೇಶಪೂರ್ವಕವಾಗಿ ಸಿಎಎ ಮತ್ತು ನಿರಾಶ್ರಿತರ ಯೋಜನೆಯನ್ನು ಜೋಡಿಸಿ ಸುಳ್ಳು ಸುದ್ದಿ ಹಬ್ಬಿಸಲಾಗಿತ್ತು. ದೇಶದ ಆಶ್ರಯವನ್ನು ಅರಸಿ ಬಂದವರಿಗೆ ಆಶ್ರಯ ಕೊಡಲಿದ್ದೇವೆ. ಭಾರತ 1951 ರ ನಿರಾಶ್ರಿತರ ಸಮಾವೇಶವನ್ನು ಗೌರವಿಸುತ್ತದೆ. ಜನಾಂಗ, ಧರ್ಮ ಅಥವಾ ಧರ್ಮವನ್ನು ಲೆಕ್ಕಿಸದೇ ಎಲ್ಲರಿಗೂ ಆಶ್ರಯ ನೀಡುತ್ತದೆ ಎಂದು ಟ್ವೀಟ್‌ ಮಾಡಿದ್ದಾರೆ.

    ಮ್ಯಾನ್ಮಾರ್‌ನಲ್ಲಿ ನೆಲೆಯಿಲ್ಲದೇ ನಿರಾಶ್ರಿತರಾಗಿ ಭಾರತಲ್ಲಿರುವ ರೋಹಿಂಗ್ಯಾ ಮುಸಲ್ಮಾನರಿಗೆ ಆಶ್ರಯ ನೀಡುವುದು ದೇಶದ ಭದ್ರತೆಗೆ ಕಂಟಕವಾಗಲಿದೆ. ಈ ನಿರಾಶ್ರಿತರು ಪಾಕಿಸ್ತಾನದ ಐಎಸ್‌ಐ ಜೊತೆ ಸಂಪರ್ಕ ಹೊಂದಿದ್ದಾರೆ. ಇವರನ್ನು ದೇಶದೊಳಗೆ ಇರಲು ಬಿಡುವುದು ದೇಶಕ್ಕೆ ಕಂಟಕವಾಗಲಿದೆ ಎಂದು ಕೇಂದ್ರ ಗೃಹ ಸಚಿವಾಲಯ ಈ ಹಿಂದೆ ಸುಪ್ರೀಂಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿತ್ತು.

    ಪಾಕ್‌ ಸೇರಿದಂತೆ ಉಗ್ರ ಸಂಘಟನೆ ಜೊತೆ ಈ ಮುಸ್ಲಿಮರು ಸಂಬಂಧ ಹೊಂದಿದ್ದಾರೆ. ದೇಶದಲ್ಲಿ ಕೋಮುವಾದ ಹರಡುತ್ತಿದ್ದಾರೆ. ಭಾರತದಲ್ಲಿ ನಕಲಿ ಗುರುತಿನ ಪತ್ರ ಪಡೆದು ದೇಶದ್ರೋಹಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ಕೇಂದ್ರ ಹೇಳಿತ್ತು.

    Live Tv
    [brid partner=56869869 player=32851 video=960834 autoplay=true]

  • ರೋಹಿಂಗ್ಯಾ ಮುಸ್ಲಿಂ ಉಗ್ರರಿಂದ 28 ಹಿಂದೂಗಳ ಮಾರಣಹೋಮ

    ರೋಹಿಂಗ್ಯಾ ಮುಸ್ಲಿಂ ಉಗ್ರರಿಂದ 28 ಹಿಂದೂಗಳ ಮಾರಣಹೋಮ

    ಯಂಗೂನ್: ರೋಹಿಂಗ್ಯಾ ಮುಸ್ಲಿಂ ಉಗ್ರಗಾಮಿಗಳು ರಾಖಿನೆ ರಾಜ್ಯದಲ್ಲಿ 28 ಹಿಂದೂಗಳನ್ನು ಹತ್ಯೆ ಮಾಡಿದ್ದಾರೆ ಎಂದು ಮ್ಯಾನ್ಮರ್ ಆರ್ಮಿ ಅಧಿಕಾರಿಗಳು ಹೇಳಿದ್ದಾರೆ.

    ಅರಾಕನ್ ರೋಹಿಂಗ್ಯಾ ಸಾಲ್ವೇಶನ್ ಆರ್ಮಿ (ಎಆರ್‍ಎಸ್‍ಎ) ಉಗ್ರಗಾಮಿಗಳು 28 ಹಿಂದೂಗಳನ್ನು ಕ್ರೂರವಾಗಿ ಹತ್ಯೆ ಮಾಡಿದ್ದಾರೆ ಎಂದು ಮ್ಯಾನ್ಮರ್ ಸೇನೆಯ ಮುಖ್ಯಸ್ಥರು ವೆಬ್‍ಸೈಟ್ ಮೂಲಕ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.

    ಉಗ್ರರು 20 ಮಹಿಳೆಯರು, 8 ಪುರುಷರು ಹಾಗೂ 10 ವರ್ಷಕ್ಕಿಂತ ಕೆಳಗಿನ 6 ಮಕ್ಕಳನ್ನು ಹತ್ಯೆ ಮಾಡಿದ ಬಳಿಕ ಶವಗಳನ್ನು ಗುಂಡಿ ತೋಡಿ ಹೂಳಿದ್ದಾರೆ ಎಂದು ಮ್ಯಾನ್ಮಾರ್ ಸೇನೆ ತಿಳಿಸಿದೆ.

    ಈ ಹತ್ಯೆ ಹಿಂದೂ ಹಾಗೂ ಮುಸ್ಲಿಂ ಸಮುದಾಯಗಳು ನೆಲೆಸಿರುವ ರಾಖೈನ್ ಖಾ ಮಾಂಗ್ ಸೆಯ್ಕ್ ಎಂಬ ಹಳ್ಳಿಯಲ್ಲಿ ನಡೆದಿದ್ದು, ಯೆ ಬಾವ್ ಕ್ಯಾ ಎಂಬ ಸ್ಥಳದಲ್ಲಿ ದೇಹಗಳು ದೊರೆತಿದೆ ಎಂದು ಸೇನೆಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

    ಆಗಸ್ಟ್ 25 ರಂದು ರೋಹಿಂಗ್ಯಾ ಮುಸ್ಲಿಂ ಉಗ್ರಗಾಮಿಗಳು ದಾರಿಯಲ್ಲಿ ಕಾಣಿಸಿಕೊಳ್ಳುವ ಪ್ರತಿಯೊಬ್ಬರನ್ನು ಮನಸ್ಸಿಗೆ ಬಂದಂತೆ ಕೊಲ್ಲುತ್ತಾ ಮುಂದೆ ಸಾಗಿದರು. ಅಷ್ಟೇ ಅಲ್ಲದೇ ಕೆಲ ಜನರನ್ನು ಸ್ಥಳೀಯ ಅರಣ್ಯ ಪ್ರದೇಶಕ್ಕೆ ಬಲವಂತವಾಗಿ ಕರೆದುಕೊಂಡು ಹೋಗಿದ್ದಾರೆ ಎಂದು ಪ್ರತ್ಯಕ್ಷದರ್ಶಿ ವ್ಯಕ್ತಿಗಳು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

    ಎಆರ್‍ಎಸ್‍ಎ ಉಗ್ರಗಾಮಿ ಸಂಘಟನೆಗೆ ಸೇರಿದ ಸದಸ್ಯರು ಮ್ಯಾನ್ಮಾರ್ ಸೈನಿಕರ ಮೇಲೆ ದಾಳಿ ನಡೆಸಿದ್ದರು. ಈ ದಾಳಿಯ ನಂತರ ಮ್ಯಾನ್ಮಾರ್ ಸೇನೆ ರೋಹಿಂಗ್ಯಾ ಮುಸ್ಲಿಮರ ದಾಳಿ ನಡೆಸಿತ್ತು. ಮ್ಯಾನ್ಮಾರ್ ಸೇನೆಯ ಹಿಂಸಾಚಾರಕ್ಕೆ ಬೆದರಿ ಸುಮಾರು 4 ಲಕ್ಷಕ್ಕೂ ಅಧಿಕ ರೋಹಿಂಗ್ಯಾ ಮುಸ್ಲಿಮರು ಬಾಂಗ್ಲಾ ದೇಶಕ್ಕೆ ವಲಸೆ ಹೋಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಮ್ಯಾನ್ಮಾರ್ ಸೇನೆಯ ದಬ್ಬಾಳಿಕೆಯನ್ನು ವಿಶ್ವಸಂಸ್ಥೆ ಖಂಡಿಸಿತ್ತು.