Tag: ರೋಸ್

  • ಹೂ ಬೆಲೆಯಲ್ಲಿ ಭಾರೀ ಕುಸಿತ – ಟ್ರ್ಯಾಕ್ಟರ್ ಲೋಡ್ ರೋಸ್ ಬಿಸಾಡಿದ ರೈತ

    ಹೂ ಬೆಲೆಯಲ್ಲಿ ಭಾರೀ ಕುಸಿತ – ಟ್ರ್ಯಾಕ್ಟರ್ ಲೋಡ್ ರೋಸ್ ಬಿಸಾಡಿದ ರೈತ

    ಚಿಕ್ಕಬಳ್ಳಾಪುರ: ಪಿತೃ ಪಕ್ಷದ ಹಿನ್ನಲೆ ಹೂ ಬೆಲೆಯಲ್ಲಿ ಭಾರೀ ಕುಸಿತ ಕಂಡಿದ್ದು, ಚಿಕ್ಕಬಳ್ಳಾಪುರ ನಗರದ ಹೊರವಲಯದಲ್ಲಿ ರೈತರೊಬ್ಬರು ಟ್ರ್ಯಾಕ್ಟರ್ ಲೋಡ್ ರೋಸ್ ಹೂವನ್ನು ಬಿಸಾಡಿ ಹೋಗಿದ್ದಾರೆ.

    rose

    ಮೇರಾಬುಲ್ ರೋಸ್ ಹೂವಿನ ಬೆಲೆ ಒಂದು ಕೆಜಿಗೆ 5 ರೂಪಾಯಿಗೆ ಬಿಕರಿಯಾಗಿದೆ. ಇದರಿಂದ ನೊಂದ ರೈತ ಹೂವನ್ನು ಬಿಸಾಡಿದ್ದಾರೆ. ಅಂದಹಾಗೆ ಪಿತೃಪಕ್ಷ ಆರಂಭವಾದ ನಂತರ ಹೂ ಕೇಳುವವರಿಲ್ಲ. ಮಾರ್ಕೆಟ್ ಗೆ ತೆಗೆದುಕೊಂಡು ಹೋದರೂ ವರ್ತಕರು ಖರೀದಿ ಮಾಡುತ್ತಿಲ್ಲ. ಚಿಕ್ಕಬಳ್ಳಾಪುರ ತಾಲೂಕಿನ ಹಲವೆಡೆ ಸಾವಿರಾರು ಎಕರೆಯಲ್ಲಿ ರೈತರು ಗುಲಾಬಿ, ಚೆಂಡು ಹೂ ಸೇರಿದಂತೆ ಸೇವಂತಿಗೆ ಬೆಳೆಯುತ್ತಾರೆ. ಇದನ್ನೂ ಓದಿ: ರೇಪ್ ಆರೋಪಿಗೆ ಮಹಿಳೆಯರ ಬಟ್ಟೆ ಒಗೆಯುವ ಷರತ್ತು ನೀಡಿ ಜಾಮೀನು

    rose

    ಇಲ್ಲಿನ ಹೂ ದೇಶದ ವಿವಿಧ ರಾಜ್ಯಗಳಿಗೂ ರಫ್ತಾಗುತ್ತದೆ. ಆದರೀಗ ಪಿತೃ ಪಕ್ಷದಿಂದ ಯಾವುದೇ ಶುಭ ಸಮಾರಂಭಗಳಿಲ್ಲ. ಮದುವೆ ಕಾರ್ಯಕ್ರಮಗಳು ಇಲ್ಲದಂತಾಗಿದೆ. ಹೀಗಾಗಿ ಹೂವಿಗೆ ಬೇಡಿಕೆ ಕಡಿಮೆಯಾಗಿದ್ದು, ಬೇರೆ, ಬೇರೆ ರಾಜ್ಯಗಳಿಗೆ ಎಕ್ಸ್‌ಪೋರ್ಟ್‌ ಆಗುತ್ತಿಲ್ಲ. ಚೆಂಡು ಹೂ ಸಹ ಕೆಜಿಗೆ 5 ರೂಪಾಯಿಯಾಗಿದೆ. ಸೇವಂತಿಗೆ 10 ರೂಪಾಯಿಯಾಗಿದೆ. ಹೀಗಾಗಿ ಪಿತೃ ಪಕ್ಷದ ಎಫೆಕ್ಟ್‌ನಿಂದ ಹೂವಿನ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದನ್ನೂ ಓದಿ: ಮತಾಂತರವೇ ಮಾಡಲ್ಲ ಅನ್ನೋ ಬಿಷಪ್‍ಗಳು ಯಾಕೆ ಸಿಎಂ ಬಳಿ ಓಡಿ ಬಂದಿದ್ದಾರೆ: ಪ್ರತಾಪ್ ಸಿಂಹ ಪ್ರಶ್ನೆ

  • ಮಂಡಿಯೂರಿ ಅಜ್ಜಿಗೆ ರೋಸ್ ಜೊತೆ ಕಿಸ್ ಕೊಟ್ಟ ರಣ್‍ವೀರ್ – ವಿಡಿಯೋ ವೈರಲ್

    ಮಂಡಿಯೂರಿ ಅಜ್ಜಿಗೆ ರೋಸ್ ಜೊತೆ ಕಿಸ್ ಕೊಟ್ಟ ರಣ್‍ವೀರ್ – ವಿಡಿಯೋ ವೈರಲ್

    ಲಂಡನ್: ಬಾಲಿವುಡ್ ನಟ ರಣ್‍ವೀರ್ ಸಿಂಗ್ ಭಾರತದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲೂ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಹೀಗಾಗಿ ರಣ್‍ವೀರ್ ತಾವು ಹೋದ ಕಡೆಯಲ್ಲಿ ಅಭಿಮಾನಿಗಳ ಜೊತೆ ಪ್ರೀತಿಯಿಂದ ಮಾತನಾಡುತ್ತಾರೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ವೃದ್ಧೆ ಅಭಿಮಾನಿಯೊಬ್ಬರನ್ನು ಪ್ರೀತಿಯಿಂದ ಮಾತನಾಡಿಸಿ ಅವರಿಗೆ ರೋಸ್ ಜೊತೆಗೆ ಕಿಸ್ ಕೊಟ್ಟಿದ್ದಾರೆ.

    ನಟ ರಣ್‍ವೀರ್ ಸಿಂಗ್ ವೃದ್ಧೆ ಅಭಿಮಾನಿಗೆ ಗೌರವ ಕೊಟ್ಟು ಮಾತನಾಡಿಸಿದ ವಿಡಿಯೋವನ್ನು ಅಭಿಮಾನಿಗಳು ರೆಕಾರ್ಡ್ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದೀಗ ಆ ವಿಡಿಯೋ ವೈರಲ್ ಆಗುತ್ತಿದೆ. ನಟ ರಣ್‍ವೀರ್ ಸಿಂಗ್ ಸದ್ಯಕ್ಕೆ `83′ ಸಿನಿಮಾವನ್ನು ಮಾಡುತ್ತಿದ್ದು, ಈ ಸಿನಿಮಾ ಶೂಟಿಂಗ್ ಲಂಡನ್‍ನಲ್ಲಿ ನಡೆಯುತ್ತಿದೆ. ಇದಕ್ಕಾಗಿ ರಣ್‍ವೀರ್ ಲಂಡನ್ ಪ್ರವಾಸದಲ್ಲಿದ್ದಾರೆ.

    ಸಿನಿಮಾದ ಕೆಲವು ಪ್ರಮುಖ ದೃಶ್ಯವನ್ನು ಲಂಡನ್‍ನ ಸೌತ್‍ಹಾಲ್‍ನಲ್ಲಿ ಶೂಟ್ ಮಾಡಲಾಗಿದೆ. ಇದೇ ವೇಳೆ ರಣ್‍ವೀರ್ ಅಲ್ಲಿಗೆ ಬರುತ್ತಿರುವ ಮಾಹಿತಿ ತಿಳಿದುಕೊಂಡು ಅಪಾರ ಅಭಿಮಾನಿಗಳು ಅಲ್ಲಿ ಜಮಾಯಿಸಿದ್ದರು. ರಣ್‍ವೀರ್ ಬರುತ್ತಿದ್ದಂತೆ ಅಭಿಮಾನಿಗಳು ಬ್ಯಾಂಡ್‍ಗಳನ್ನು ಸ್ಥಳಕ್ಕೆ ತರಿಸಿ ಸ್ಥಳದಲ್ಲಿ ಹಬ್ಬದ ವಾತಾವರಣವನ್ನೇ ಕ್ರಿಯೇಟ್ ಮಾಡಿದ್ದರು.

    ಅಭಿಮಾನಿಗಳ ಅಪಾರ ಅಭಿಮಾನಕ್ಕೆ ಸೋತು ರಣ್‍ವೀರ್ ಕೂಡ ಬ್ಯಾಂಡ್ ಮ್ಯೂಸಿಕ್‍ಗೆ ಸ್ಟೆಪ್ ಹಾಕಿದ್ದಾರೆ. ನಂತರ ಅಲ್ಲಿದ್ದ ಮಕ್ಕಳು, ಯುವಕ-ಯುವತಿಯರು ಮತ್ತು ಹಿರಿಯರು ಸೇರಿದಂತೆ ಎಲ್ಲರಿಗೂ ಕೈ ಬೀಸಿ ಹಾಯ್ ಹೇಳಿದ್ದಾರೆ. ಇದೇ ವೇಳೆ ಅಭಿಮಾನಿಯೊಬ್ಬರು ರೋಸ್ ಕೊಟ್ಟಿದ್ದಾರೆ. ಆ ರೋಸ್ ತೆಗೆದುಕೊಂಡು ಎಲ್ಲರ ಕೈ ಕುಲುಕುತ್ತಿದ್ದರು.

    ಆಗ ರಣ್‍ವೀರ್ ಸುಮಾರು 70 ವರ್ಷದ ಅಜ್ಜಿಯೊಬ್ಬರನ್ನು ನೋಡಿದ್ದಾರೆ. ಅವರು ವ್ಹೀಲ್ ಚೇರ್ ಮೇಲೆ ಸ್ಟಿಕ್ ಹಿಡಿದು ಕುಳಿತುಕೊಂಡಿದ್ದರು. ಅವರ ಮುಂದೆ ರಣ್‍ವೀರ್ ಮಂಡಿಯೂರಿ ರೋಸ್ ಕೊಟ್ಟು ಪ್ರೀತಿಯಿಂದ ಮಾತನಾಡಿಸಿದರು. ಆಗ ಅಜ್ಜಿ ಸಂತಸಗೊಂಡು ರಣ್‍ವೀರ್ ಕೆನ್ನೆಗೆ ಮುತ್ತು ಕೊಟ್ಟರು. ನಂತರ ರಣ್‍ವೀರ್ ಕೂಡ ಅಜ್ಜಿ ಕೈಗೆ ಕಿಸ್ ಕೊಟ್ಟು ಪ್ರೀತಿಯಿಂದ ಮಾತನಾಡಿಸಿದ್ದಾರೆ. ಸದ್ಯ ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

    https://twitter.com/RanveerSinghtbt/status/1157723474611384321