Tag: ರೋಷನ್‌

  • ನುಗ್ಗೆಸೊಪ್ಪಿನ ಎಗ್‌ಬುರ್ಜಿ ಜೊತೆಗೆ ದೋಸೆ – ಪತಿ ರೋಶನ್ ಕೈರುಚಿಗೆ ಅನುಶ್ರೀ ಫಿದಾ

    ನುಗ್ಗೆಸೊಪ್ಪಿನ ಎಗ್‌ಬುರ್ಜಿ ಜೊತೆಗೆ ದೋಸೆ – ಪತಿ ರೋಶನ್ ಕೈರುಚಿಗೆ ಅನುಶ್ರೀ ಫಿದಾ

    ತ್ತೀಚೆಗಷ್ಟೇ ರೋಶನ್ (Roshan) ಜೊತೆ ಮದುವೆಯಾದ ಆ್ಯಂಕರ್ ಅನುಶ್ರೀ (Anushree) ದಾಂಪತ್ಯ ಜೀವನದ ಖುಷಿಯಲ್ಲಿದ್ದಾರೆ. ಮದುವೆ ಬಳಿಕ ಪತಿ ಜೊತೆ ಪ್ರವಾಸ ಮಾಡ್ತಿರುವ ಫೋಟೋಗಳನ್ನ ಇತ್ತೀಚೆಗೆ ಅನುಶ್ರೀ ಹಂಚಿಕೊಂಡಿದ್ದರು. ಈಗ ಪತಿ ಅಡುಗೆ ಮಾಡಿ ತಮಗೆ ತಿನ್ನಿಸಿರುವ ವೀಡಿಯೋ ಹಂಚಿಕೊಂಡಿದ್ದಾರೆ.

    ಮದುವೆ ಶಾಸ್ತ್ರದ ಬಳಿಕ ಮಾಧ್ಯಮದ ಜೊತೆ ಅನುಶ್ರೀ ಮಾತನಾಡುತ್ತಾ ಪತಿ ರೋಶನ್ ಚೆನ್ನಾಗಿ ಅಡುಗೆ ಮಾಡ್ತಾರೆ. ನಾನು ಆರಾಮಾಗಿ ತಿನ್ಕೊಂಡ್ ಇರ್ತೀನಿ ಎಂದು ಹೇಳಿ ನಕ್ಕಿದ್ದರು.

    ಇದೀಗ ಅದೇ ಚಿತ್ರಣವನ್ನ ತೋರಿಸಿದ್ದಾರೆ. ರೋಶನ್ ತಮ್ಮ ಕೈಯಾರೇ ನುಗ್ಗೆಸೊಪ್ಪಿನ ಎಗ್‌ಬುರ್ಜಿ ಮಾಡಿ ದೋಸೆ ಜೊತೆ ಅನುಶ್ರೀಗೆ ತಿನ್ನಿಸಿದ್ದಾರೆ. ಈ ವೀಡಿಯೋವನ್ನ ಅನುಶ್ರೀ ಇನ್‌ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ.  ಇದನ್ನೂ ಓದಿ: ಬಿಗ್‌ಬಾಸ್ ಮನೆ ಬೀಗ ಓಪನ್ ಆದ್ರೂ ಶೂಟಿಂಗ್ ಇನ್ನೂ ಶುರುವಾಗಿಲ್ಲ!

    ನಿಮಿಷಕ್ಕೆ ಸಾವಿರಾರು ವೀವ್ಸ್ ಲೈಕ್ಸ್ ಬರುತ್ತಿದೆ. ಅನುಶ್ರೀಯ ಸುಖ ಸಂಸಾರಕ್ಕೆ ಯಾರ ದೃಷ್ಟಿಯೂ ಬೀಳದಿರಲಿ ಎಂದು ಫ್ಯಾನ್ಸ್ ಕಾಮೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ: ಡಿಕೆಶಿ ವೈಲ್ಡ್‌ ಕಾರ್ಡ್‌ಎಂಟ್ರಿ – ಬಿಗ್‌ಬಾಸ್‌ ಮನೆ ಓಪನ್‌ | ರಾತ್ರಿ ಏನೇನಾಯ್ತು? ಇಲ್ಲಿದೆ ಇನ್‌ಸೈಡ್‌ ಸ್ಟೋರಿ

    ಕಳೆದ ಆಗಸ್ಟ್ 28 ರಂದು ಅನುಶ್ರೀ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ರೋಶನ್ ಜೊತೆ ವಿವಾಹವಾಗಿದ್ದರು. ಇದೀಗ ಮದುವೆಯ ನಂತರದ ಸುಖೀ ಜೀವನದ ದರ್ಶನವನ್ನ ಪ್ರಪಂಚದ ಮುಂದೆ ತೆರೆದಿಟ್ಟಿದ್ದಾರೆ.

  • ರೋಷನ್ ಕೋಟಿ ಕೋಟಿ ಒಡೆಯ ಎಂದವರಿಗೆ ಅನುಶ್ರೀ ಕ್ಲ್ಯಾರಿಟಿ ಏನು?

    ರೋಷನ್ ಕೋಟಿ ಕೋಟಿ ಒಡೆಯ ಎಂದವರಿಗೆ ಅನುಶ್ರೀ ಕ್ಲ್ಯಾರಿಟಿ ಏನು?

    – ಅನುಶ್ರೀಗಾಗಿ ಬಿರಿಯಾನಿ, ಫಿಶ್‌ ಫ್ರೈ ಮಾಡ್ತಾರಂತೆ ಪತಿ ರೋಷನ್‌

    ಟಿ ನಿರೂಪಕಿ, ಮಾತಿನ ಮಲ್ಲಿ ಅನುಶ್ರೀ (Anchor Anushree) ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅನುಶ್ರೀ ಮದುವೆಯಾದ ಹುಡುಗ ರೋಷನ್ ಬಗ್ಗೆ ಈ ಹಿಂದೆ ಸಾಕಷ್ಟು ಸುದ್ದಿಗಳು ವೈರಲ್ ಆಗಿದ್ದವು. ಅದರಲ್ಲಿ ಪ್ರಮುಖವಾಗಿ ನಟಿ ಅನುಶ್ರೀ ಮದುವೆಯಾಗಿರುವ ರೋಷನ್ ನೂರಾರು ಕೋಟಿಯ ಒಡೆಯ. ದೊಡ್ಡ ಬ್ಯುಸಿನೆಸ್ ಮ್ಯಾನ್ ಎಂದೆಲ್ಲ ಸುದ್ದಿಯಾಗಿತ್ತು. ಈ ಬಗ್ಗೆ ಅನುಶ್ರಿಜ ಹಾಗೂ ರೋಷನ್ ಕ್ಲ್ಯಾರಿಟಿ ಕೊಟ್ಟಿದ್ದಾರೆ.

    ಇಂದು ಆ.28 ರಂದು ಮದುವೆ ಬಳಿಕ ನವಜೋಡಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದೆ. ಈ ವೇಳೆ 300 ಕೋಟಿ, 600 ಕೋಟಿ ಒಡೆಯ ರೋಷನ್ ಅನ್ನೋ ವಿಚಾರದ ಬಗ್ಗೆ ಕ್ಲ್ಯಾರಿಟಿ ಕೊಟ್ಟಿದ್ದಾರೆ. ರೋಷನ್ ಅವರು ಐಟಿ ಉದ್ಯೋಗಿಯಾಗಿದ್ದು, ಸಾಮಾನ್ಯ ಕುಟುಂಬದಿಂದ ಬಂದವರು ಎಂದು ಹೇಳಿದ್ದಾರೆ. ಇನ್ನು ರೋಷನ್ ಮಾತಾಡಿ ನಿಮ್ಮ ಹರಕೆಯಿಂದ ನಾನು ಕೋಟಿ ಕೋಟಿ ಒಡೆಯ ಆಗಲಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಾತಿನ ಮಲ್ಲಿ ಅನುಶ್ರೀ ಹೊಸ ಗಾಯನ.. ನವಜೋಡಿಗೆ ಹಾರೈಸಿದ ತಾರಾಗಣ..!

    ರೋಷನ್ ಮೂಲತಃ ಕೊಡಗಿನ ಕುಶಾಲನಗರದವರಾಗಿದ್ದು, ಬೆಂಗಳೂರಿನ ಐಟಿಬಿಟಿ ಕಂಪನಿಯ ಉದ್ಯೋಗಿಯಾಗಿದ್ದಾರೆ. ಅನುಶ್ರೀಗಾಗಿ ಬಿರಿಯಾನಿ, ಫಿಶ್ ಪ್ರೈ ಜೊತೆಗೆ ವಿವಿಧ ಖಾದ್ಯಗಳನ್ನ ಮಾಡಿ ಕೊಡ್ತಾರಂತೆ. ಈ ಬಗ್ಗೆ ಅನುಶ್ರೀ ಹೇಳಿಕೊಂಡಿದ್ದಾರೆ. ಏಕಾಂಗಿ ನಿರೂಪಣೆಯ ನಂತರ ಅರ್ಧಾಂಗಿಯಾಗುವ ಹೊಸ ಮನ್ವಂತರಕ್ಕೆ ಅನುಶ್ರೀಯ ಉತ್ತರ ಸಿಕ್ಕಿದೆ. ಬೆಂಗಳೂರಿನ ಹೊರವಲಯದಲ್ಲಿ ಅನುಶ್ರೀ-ರೋಷನ್ ಮದುವೆ ಸರಳವಾಗಿ ನೆರವೇರಿದೆ.

  • ನಮ್ಮಿಬ್ಬರನ್ನು ಒಂದು ಮಾಡಿದ್ದೇ ಅಪ್ಪು ಸರ್‌ – ಲವ್‌ ಸ್ಟೋರಿ ಬಗ್ಗೆ ಅನುಶ್ರೀ ಮಾತು

    ನಮ್ಮಿಬ್ಬರನ್ನು ಒಂದು ಮಾಡಿದ್ದೇ ಅಪ್ಪು ಸರ್‌ – ಲವ್‌ ಸ್ಟೋರಿ ಬಗ್ಗೆ ಅನುಶ್ರೀ ಮಾತು

    ನಮ್ಮಿಬ್ಬರನ್ನು ಒಂದು ಮಾಡಿದ್ದೇ ಅಪ್ಪು ಸರ್‌, ಒಂದು ಲೆಕ್ಕದಲ್ಲಿ ಹೇಳೋದಾದರೆ ಈ ಪ್ರೀತಿಗೆ ಅವರೇ ಕಾರಣ ಎಂದು ನಿರೂಪಕಿ ಅನುಶ್ರೀ (Anchor Anushree) ತಮ್ಮ ಲವ್‌ ಸ್ಟೋರಿ ಬಗ್ಗೆ ಹೇಳಿಕೊಂಡಿದ್ದಾರೆ.

    ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಇಂದು (ಆ.28) ಕೊಡಗು ಮೂಲದ ರೋಷನ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ನಿರೂಪಣೆಯಿಂದ ಹೆಚ್ಚು ಜನಪ್ರಿಯತೆ ಗಳಿಸಿದ ಅನುಶ್ರೀ ತಮ್ಮ ಬಹುಕಾಲದ ಗೆಳೆಯ ರೋಷನ್ ಜೊತೆ ಹಸೆಮಣೆ ಏರಿದ್ದು, 10:56ರ ಶುಭ ಮೂಹೂರ್ತದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.ಇದನ್ನೂ ಓದಿ: ಅನುಶ್ರೀ ಕಲ್ಯಾಣದಲ್ಲಿ ರಾರಾಜಿಸಿದ ಅಪ್ಪು ಫೋಟೋ

    ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮದುವೆ ಸುಂದರ ಹಾಗೂ ಸರಳವಾಗಿ ನಡೆದಿದೆ, ಕಡಿಮೆ ಜನರನ್ನು ಸೇರಿಸಿ ಮದುವೆಯಾಗಬೇಕು ಅನ್ನೋದು ನಮ್ಮಿಬ್ಬರ ಆಸೆಯಾಗಿತ್ತು. ಜೊತೆಗೆ ತುಂಬಾ ಕಡೆಯಿಂದ ಬಹಳ ಜನರು ಬಂದಿದ್ದರು. ‌ಆ ಎಲ್ಲಾ ಪ್ರೀತಿ-ಪಾತ್ರರಿಗೂ ಧನ್ಯವಾದಗಳು ಎಂದಿದ್ದಾರೆ.

    ಇದೇ ವೇಳೆ ತಮ್ಮ ಲವ್‌ ಸ್ಟೋರಿ ಶುರುವಾದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದೊಂದು ಸಿಂಪಲ್‌ ಲವ್ ಸ್ಟೋರಿ. ನಾವಿಬ್ಬರು ಮೊದಲು ಸ್ನೇಹಿತರಾದ್ವಿ. ಆಮೇಲೆ ಒಟ್ಟಿಗೆ ಕಾಫಿ ಕುಡಿದ್ವಿ. ಒಬ್ಬರಿಗೊಬ್ಬರು ಇಷ್ಟ ಆದ್ವಿ, ಲವ್‌ ಆಯ್ತು. ಇವಾಗ ಮದ್ವೆ ಆದ್ವಿ. ರೋಷನ್‌ ಕೂಡ ಅಪ್ಪು ಅವರ ಅಭಿಮಾನಿ. ಅಪ್ಪು ಸರ್‌ ಅವರ ʻಪುನೀತ್‌ ಪರ್ವʼ ಕಾರ್ಯಕ್ರಮದ ಮೂಲಕವೇ ನಮ್ಮಿಬ್ಬರ ಪರಿಚಯವಾಗಿದ್ದು. ಒಂದು ಲೆಕ್ಕದಲ್ಲಿ ಹೇಳೋದಾದರೆ ನಮ್ಮಿಬ್ಬರನ್ನು ಸೇರಿಸಿದ್ದೇ ಅಪ್ಪು ಸರ್‌ ಎಂದು ತಿಳಿಸಿದ್ದಾರೆ.

    ಮದುವೆಗೆ ಶಿವಣ್ಣ, ಗೀತಕ್ಕ ಸೇರಿದಂತೆ ಹಲವರು ಬಂದು ಆಶೀರ್ವಾದ ಮಾಡಿದ್ದಾರೆ. ಶಿವಣ್ಣ ರೋಷನ್ ಅವರನ್ನ ಮುಂಚೆಯೇ ನೋಡಿದ್ರು. ರಚಿತಾ ಅವ್ರು ನಮ್ಮ ಮದುವೆಗೆ ಬಂದಿದ್ದು ಸಾಕಷ್ಟು ಖುಷಿ ಕೊಟ್ಟಿದೆ. ನನಗೆ ಮಂತ್ರ ಮಾಂಗಲ್ಯ ಆಗಬೇಕು ಅಂತ ಬಹಳ ಆಸೆ ಇತ್ತು. ಆದ್ರೆ ಅದರದ್ದು ಕೆಲವೊಂದು ರೂಲ್ಸ್ ಇದೆ ಹಾಗಾಗಿ ಕಷ್ಟ ಆಯ್ತು. ಇನ್ನೂ ಮದುವೆ ಅನ್ನೋದು ಒಂದು ಹೆಣ್ಣಿನ ಬಹು ದೊಡ್ಡ ಕನಸು. ನಾವು ಮದುವೆ ಹೇಗೆ ಆಗ್ತೀವಿ ಅನ್ನೋದು ಮುಖ್ಯ ಅಲ್ಲ, ಮದುವೆ ಬಳಿಕ ಹೇಗೆ ಬದುಕ್ತೀವಿ ಅನ್ನೋದು ಮುಖ್ಯ ಎಂದಿದ್ದಾರೆ.

    ಇದೇ ವೇಳೆ ರೋಷನ್‌ ಮಾತನಾಡಿ, ಕಳೆದ 5 ವರ್ಷಗಳಿಂದ ನನಗೆ ಅನು ಪರಿಚಯವಿದೆ. 3 ವರ್ಷಗಳ ಹಿಂದೆ ನಾವಿಬ್ಬರು ಕ್ಲೋಸ್‌ ಆದ್ವಿ. ಯಾವತ್ತೂ ಆಕೆ ನನಗೆ ಸೆಲಿಬ್ರಿಟಿ ಅಂತ ಅನಿಸಿಲ್ಲ ಎಂದು ಹೇಳಿದ್ದಾರೆ.

    ಇನ್ನೂ ಅಪ್ಪು ಅವರ ಅಪ್ಪಟ ಅಭಿಮಾನಿಯಾಗಿರುವ ಅನುಶ್ರೀ ಮದುವೆ ಮಂಟಪದಲ್ಲಿ ಅಪ್ಪು ಫೋಟೋವೊಂದನ್ನು ಇರಿಸಿ, ಸುತ್ತಲೂ ಹೂವುಗಳಿಂದ ಅಲಂಕಾರ ಮಾಡಿದ್ದಾರೆ. ಈ ಮೂಲಕ ಅಪ್ಪು ಮೇಲಿನ ಪ್ರೀತಿಯನ್ನು ತೋರ್ಪಡಿಸಿದ್ದಾರೆ.ಇದನ್ನೂ ಓದಿ: ಏಕಾಂಗಿ ನಿರೂಪಣೆ ಬಳಿಕ ಹೊಸ ಮನ್ವಂತರಕ್ಕೆ ಕಾಲಿಟ್ಟ ಆ್ಯಂಕರ್ ಅನುಶ್ರೀ

  • ಏಕಾಂಗಿ ನಿರೂಪಣೆ ಬಳಿಕ ಹೊಸ ಮನ್ವಂತರಕ್ಕೆ ಕಾಲಿಟ್ಟ ಆ್ಯಂಕರ್ ಅನುಶ್ರೀ

    ಏಕಾಂಗಿ ನಿರೂಪಣೆ ಬಳಿಕ ಹೊಸ ಮನ್ವಂತರಕ್ಕೆ ಕಾಲಿಟ್ಟ ಆ್ಯಂಕರ್ ಅನುಶ್ರೀ

    ನ್ನಡದ ಖ್ಯಾತ ನಿರೂಪಕಿ ಹಾಗೂ ನಟಿ ಅನುಶ್ರೀ (Anchor Anushree) ಇಂದು (ಆ.28) ಕೊಡಗು ಮೂಲದ ರೋಷನ್ ಹೊಸ ಮನ್ವಂತರಕ್ಕೆ ಕಾಲಿಟ್ಟಿದ್ದಾರೆ.

    ತಮ್ಮ ನಿರೂಪಣೆಯಿಂದ ಹೆಚ್ಚು ಜನಪ್ರಿಯತೆ ಗಳಿಸಿದ ಅನುಶ್ರೀ ತಮ್ಮ ಬಹುಕಾಲದ ಗೆಳೆಯ ರೋಷನ್ ಜೊತೆ ಹಸೆಮಣೆ ಏರಿದ್ದು, 10:56ರ ಶುಭ ಮೂಹೂರ್ತದಲ್ಲಿ ಅನುಶ್ರಿ ಹಾಗೂ ರೋಷನ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.ಇದನ್ನೂ ಓದಿ: ಬಹುಕಾಲದ ಗೆಳೆಯನ ಜೊತೆ ಸಪ್ತಪದಿ ತುಳಿಯಲಿರುವ ಅನುಶ್ರೀ

    ಬೆಂಗಳೂರಿನ (Bengaluru) ಕಗ್ಗಲಿಪುರ (Kaggalipura) ಬಳಿಯ ಹೊರವಲಯದ ರೆಸಾರ್ಟ್‌ನಲ್ಲಿ ಮದುವೆ ನೆರವೇರಿದ್ದು, ಕಿರುತೆರೆ ಕಲಾವಿದರು, ಚಿತ್ರೋದ್ಯಮದ ಗಣ್ಯರು ನವಜೋಡಿಗೆ ಶುಭ ಹಾರೈಸಿದ್ದಾರೆ. ಇನ್ನೂ ವೆಡ್ಡಿಂಗ್ ಕಾರ್ಡ್ ಕೂಡ ಸೋಶಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗಿಬಿಟ್ಟಿದೆ.

    ಮದುವೆಗೂ ಹಿಂದಿನ ದಿನ ಬುಧವಾರ (ಆ.27) ನಡೆದ ಹಳದಿ ಶಾಸ್ತ್ರದ ಫೋಟೋಗಳು ವೈರಲ್ ಆಗಿವೆ. ಹಳದಿ ಶಾಸ್ತ್ರದಲ್ಲಿ ಭಾವಿ ದಂಪತಿಗಳು ಹಳದಿ ಉಡುಗೆಯಲ್ಲೇ ಕಾಣಿಸಿಕೊಂಡಿದ್ದಾರೆ. ಸುತ್ತಲೂ ಸೂರ್ಯಕಾಂತಿ ಹೂವಿನ ಅಲಂಕಾರ ಈ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿದೆ. ಹಳದಿ ಶಾಸ್ತ್ರದ ವೇಳೆ ಅನುಶ್ರೀ – ರೋಷನ್ ಸು ಫ್ರಂ ಸೋ ಚಿತ್ರದ `ಬಂದರೋ ಬಂದರೋ ಬಾವ ಬಂದರೋ’ ಹಾಡಿಗೆ ಕುಣಿದು ಕುಪ್ಪಳಿಸಿದ್ದಾರೆ. ಹಳದಿ ಶಾಸ್ತ್ರದಲ್ಲಿ ಮಿಂಚಿದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.ಇದನ್ನೂ ಓದಿ: ಅಮೆರಿಕದಲ್ಲಿ ಕುಳಿತು ಮುಧೋಳದ ಮನೆ ಕಳ್ಳತನ ತಪ್ಪಿಸಿದ ಟೆಕ್ಕಿ ಪುತ್ರಿ!

  • ಇದೇ 28 ರಂದು ಬೆಂಗಳೂರಿನಲ್ಲಿ ಮದುವೆಯಾಗಲಿದ್ದಾರೆ ಅನುಶ್ರೀ

    ಇದೇ 28 ರಂದು ಬೆಂಗಳೂರಿನಲ್ಲಿ ಮದುವೆಯಾಗಲಿದ್ದಾರೆ ಅನುಶ್ರೀ

    ಬೆಂಗಳೂರು: ನಿರೂಪಕಿ, ನಟಿ ಅನುಶ್ರೀ (Anushree) ಅವರು ಕೊಡಗು ಮೂಲದ ರೋಷನ್ ಜೊತೆ ಆ.28 ರಂದು ಸಪ್ತಪದಿ ತುಳಿಯಲಿದ್ದಾರೆ.

    ಬೆಂಗಳೂರಿನ ಹೊರವಲಯದ ರೆಸಾರ್ಟ್‌ನಲ್ಲಿ ಈ ಮದುವೆ (Marriage) ಕಾರ್ಯಕ್ರಮ ನಡೆಯಲಿದೆ.

     

    ರೋಷನ್ ರಾಮಮೂರ್ತಿ ಅವರ ಪುತ್ರನಾಗಿದ್ದಾರೆ. ಬೆಳಗ್ಗೆ 10:56 ಶುಭ ಮುಹೂರ್ತದಲ್ಲಿ ಅನುಶ್ರಿ ರೋಷನ್‌ ಅವರ ಕೈ ಹಿಡಿಯಲಿದ್ದಾರೆ. ಇದನ್ನೂ ಓದಿ: ಕನ್ನಡಕ್ಕೆ ಅಜಯ್ ದೇವಗನ್ ಜೆಪಿ ತುಮಿನಾಡ್‌ ಸಿನಿಮಾದಲ್ಲಿ ಅಭಿನಯ!

    `ನೀವೆಲ್ಲ ಕೇಳುತ್ತಿದ್ದ ಏಕೈಕ ಪ್ರಶ್ನೆಗೆ ಈಗ ಉತ್ತರ. ಏಕಾಂಗಿ ನಿರೂಪಣೆಯ ನಂತರ ಅರ್ಧಾಂಗಿ ಆಗುವ ಹೊಸ ಮನ್ವಂತರ’ ಎಂದು ಅನುಶ್ರೀ ಆಮಂತ್ರಣ ಪತ್ರಿಕೆಯಲ್ಲಿ ಬರೆಯಿಸಿದ್ದಾರೆ.

  • ‘ಡವ್ ಮಾಸ್ಟರ್’ ಸಿನಿಮಾದ ಟ್ರೇಲರ್ ರಿಲೀಸ್ ಮಾಡಿದ ಮಾಜಿ ಸಿಎಂ ಸಿದ್ದರಾಮಯ್ಯ

    ‘ಡವ್ ಮಾಸ್ಟರ್’ ಸಿನಿಮಾದ ಟ್ರೇಲರ್ ರಿಲೀಸ್ ಮಾಡಿದ ಮಾಜಿ ಸಿಎಂ ಸಿದ್ದರಾಮಯ್ಯ

    ವಿಭಿನ್ನ ಕಥಾಹಂದರ ಹೊಂದಿರುವ “ಡವ್ ಮಾಸ್ಟರ್” ಚಿತ್ರದ ಟ್ರೇಲರ್ ಹಾಗೂ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚಿಗೆ ನಡೆಯಿತು. ಮಾಜಿ‌ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಟ್ರೇಲರ್ ಅನಾವರಣ ಮಾಡಿದರು. ಹಾಡುಗಳನ್ನು ವಿಧಾನ ಪರಿಷತ್ ಸದಸ್ಯ ಹಾಗೂ ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್, ಶಾಸಕ ಭೈರತಿ ಸುರೇಶ್, ನಾರಾಯಣ ಸ್ವಾಮಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷರಾದ ಎಸ್ ಎ ಚಿನ್ನೇಗೌಡ, ಕೆ.ವಿ.ಚಂದ್ರಶೇಖರ್, ಹಾಲಿ ಅಧ್ಯಕ್ಷರಾದ ಭಾ.ಮ.ಹರೀಶ್, ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಉಮೇಶ್ ಬಣಕಾರ್, ನಿರ್ಮಾಪಕರಾದ ಸಿದ್ದರಾಜು, ಭಾ.ಮ.ಗಿರೀಶ್ ಸೇರಿದಂತೆ ಹಲವು ಗಣ್ಯರು ಬಿಡುಗಡೆಗೊಳಿಸಿದರು.

    “ಡವ್ ಮಾಸ್ಟರ್” ಚಿತ್ರ ನಾಯಿ ಹಾಗೂ ಮನುಷ್ಯನ ಸಂಬಂಧದ ನಡುವಿನ ಕಥಾಹಂದರ ಹೊಂದಿರುವ ಚಿತ್ರ ಎಂದು ತಿಳಿದು ಸಂತೋಷವಾಯಿತು. ಪ್ರಾಣಿಗಳಲ್ಲೇ ಹೆಚ್ಚು ನಿಯತ್ತಿನ ಪ್ರಾಣಿ ನಾಯಿ ಎನ್ನುತ್ತೇವೆ. “ರಾಕಿ” ಎಂಬ ಹೆಸರಿನ ನಾಯಿ ಈ ಚಿತ್ರದಲ್ಲಿ ಅಭಿನಯಿಸಿದೆ. ತಬಲನಾಣಿ ಸೇರಿದಂತೆ ಅನೇಕ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ಆತ್ಮೀಯರಾದ ಚಾಂದ್ ಪಾಷ ಅವರ ಮಗ ರೋಷನ್ ಈ ಚಿತ್ರ ನಿರ್ಮಾಣ ಮಾಡಿರುವ ವಿಷಯ ತಿಳಿದು ಖುಷಿಯಾಯಿತು. ಇಡೀ ತಂಡಕ್ಕೆ ಒಳ್ಳೆಯದಾಗಲಿ. ಎಲ್ಲರೂ ಈ ಚಿತ್ರ ನೋಡುವ ಮೂಲಕ ಪ್ರೋತ್ಸಾಹಿಸಿ ಎಂದರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ.

    ನಿರ್ದೇಶಕ ಆರ್ಯ ಹೇಳಿದ ಕಥೆ ಇಷ್ಟವಾಯಿತು. ಹಾಗಾಗಿ ನಿರ್ಮಾಣಕ್ಕೆ ಮುಂದಾದೆವು. ನಾನು ಇಪ್ಪತ್ತೈದು ವರ್ಷಗಳಿಂದ ಚಿತ್ರರಂಗದಲ್ಲಿ ವಿತರಕನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಈಗ ಚಿತ್ರ ನಿರ್ಮಾಣದ ಸಂಪೂರ್ಣ ಜವಾಬ್ದಾರಿ ನನ್ನ ಮಗ ರೋಷನ್ ನೋಡಿಕೊಳ್ಳುತ್ತಿದ್ದಾನೆ. ಈ ಸಮಾರಂಭಕ್ಕೆ ಆಗಮಿಸಿರುವ ಸಿದ್ದರಾಮಯ್ಯ ಅವರು ಸೇರಿದಂತೆ ಎಲ್ಲಾ ಗಣ್ಯರಿಗೆ ನನ್ನ ಧನ್ಯವಾದ ಎಂದರು ಚಾಂದ್ ಪಾಷಾ. ಇದನ್ನೂ ಓದಿ:ಬಳ್ಳಾರಿಗೆ ಬರಲಿದ್ದಾರೆ ವಿಜಯ್ ಮತ್ತು ರಶ್ಮಿಕಾ ಮಂದಣ್ಣ

    ನನ್ನ ಕಥೆ ಇಷ್ಟಪಟ್ಟು ನಿರ್ಮಾಣ ಮಾಡಿದ ನಿರ್ಮಾಪಕರಿಗೆ ಹಾಗೂ ನನ್ನ ಇಡೀ ತಂಡಕ್ಕೆ ಧನ್ಯವಾದ. ಸಿದ್ದರಾಮಯ್ಯ ಅವರಿಂದ ನಮ್ಮ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿಸಬೇಕೆಂಬುದು ನನ್ನ ಆಸೆಯಾಗಿತ್ತು. ಅದು ಈಡೇರಿದೆ. ಅವರಿಗೆ ವಿಶೇಷ ಧನ್ಯವಾದ ಎಂದರು ನಿರ್ದೇಶಕ ಆರ್ಯ. ನನ್ನ ಅಭಿನಯದ ಚಿತ್ರವೊಂದಕ್ಕೆ ಸಹ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದ ಆರ್ಯ ಈ ಚಿತ್ರದ ಕಥೆ ಹೇಳಿದಾಗ ಇಷ್ಟವಾಯಿತು. ನಾಯಿ ಹಾಗೂ ನನ್ನ ನಡುವಿನ ಬಾಂಧವ್ಯದ ಸನ್ನಿವೇಶಗಳನ್ನು ನಿರ್ದೇಶಕರು ಮನಮುಟ್ಟುವಂತೆ ತೋರಿಸಿದ್ದಾರೆ. ರಾಕಿ(ನಾಯಿ) ನನಗಿಂತ ಚೆನ್ನಾಗಿ ನಟಿಸಿದೆ ಅಂತ ಹೇಳಬಹುದು ಎಂದು ತಬಲನಾಣಿ  ತಿಳಿಸಿದರು.

    ನಿರ್ಮಾಪಕ ಸಿ.ರೋಷನ್, ಸಂಗೀತ ನಿರ್ದೇಶಕ ಶಕೀಲ್ ಅಹ್ಮದ್, ಛಾಯಾಗ್ರಾಹಕ ಕಿರಣ್ ಕುಮಾರ್, ನಟಿ ಪಂಕಜ ಹಾಗೂ ಹಾಡು ಬರೆದಿರುವ ಸೌಮ್ಯ ಅವರು ಸೇರಿದಂತೆ ಅನೇಕ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ತಬಲ ನಾಣಿ, ಶಕೀಲ, ಕುರಿ ಪ್ರತಾಪ್, ಮಿತ್ರ, ನವೀನ್ ಪಡೀಲ್, ಪಂಕಜ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ರಾಕಿ(ನಾಯಿ) ಪ್ರಮುಖಪಾತ್ರದಲ್ಲಿ ಕಾಣಿಸಿಕೊಂಡಿದೆ.

    Live Tv
    [brid partner=56869869 player=32851 video=960834 autoplay=true]

  • ಕರ್ನಾಟಕ ಮೂಲದ ತೆಲುಗಿನ ನಟ ಶ್ರೀಕಾಂತ್ ದಾಂಪತ್ಯದಲ್ಲಿ ಬಿರುಕು

    ಕರ್ನಾಟಕ ಮೂಲದ ತೆಲುಗಿನ ನಟ ಶ್ರೀಕಾಂತ್ ದಾಂಪತ್ಯದಲ್ಲಿ ಬಿರುಕು

    ಚಿತ್ರರಂಗದಲ್ಲಿ ಡಿವೋರ್ಸ್ (Divorce) ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಕಳೆದ ವರ್ಷ ಸಮಂತಾ, ನಾಗಚೈತನ್ಯ ನಂತರ ತೆಲುಗಿನ ಖ್ಯಾತ ನಟ ಶ್ರೀಕಾಂತ್ (Srikanth) ದಾಂಪತ್ಯದಲ್ಲಿ ಬಿರುಕಾಗಿದೆ. ಡಿವೋರ್ಸ್ಗೆ ರೆಡಿಯಾಗಿದ್ದಾರೆ ಎನ್ನಲಾಗುತ್ತಿದೆ.

    ತೆಲುಗು(Tollywood) ಮತ್ತು ಕನ್ನಡ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ನಟ ಶ್ರೀಕಾಂತ್ ವೈವಾಹಿಕ ಬದುಕಲ್ಲಿ ಬಿರುಗಾಳಿ ಎದ್ದಿದೆ. 25 ವರ್ಷಗಳಿಂದ ಜೊತೆಯಾಗಿದ್ದ ಈ ಜೋಡಿ, ದಾಂಪತ್ಯಕ್ಕೆ ಫುಲ್ ಸ್ಟಾಪ್ ಇಡಲು ರೆಡಿಯಾಗಿದ್ದಾರಂತೆ. 1997ರಲ್ಲಿ ಶ್ರೀಕಾಂತ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ಜೋಡಿಗೆ ಇಬ್ಬರೂ ಗಂಡು ಮಕ್ಕಳು ರೋಷನ್, ರೋಹನ್ ಮತ್ತು ಮಗಳು ವೇದಾ. ಇನ್ನೂ ಪತ್ನಿ ಊಹಾ ಕೂಡ ನಟಿಯಾಗಿದ್ದು, ಸಾಕಷ್ಟು ಸೌತ್ ಚಿತ್ರಗಳಲ್ಲಿ ನಟಿಸಿದ್ದಾರೆ. ಇದನ್ನೂ ಓದಿ:ಏಕಾಂಗಿಯಾಗಿ ಹನಿಮೂನ್ ಸ್ಪಾಟ್, ಬಾಲಿಗೆ ಹಾರಿದ ನಿವೇದಿತಾ ಗೌಡ

    ಟಾಲಿವುಡ್ ಗಲ್ಲಿಗಳಲ್ಲಿ ಶ್ರೀಕಾಂತ್ ಡಿವೋರ್ಸ್ ವಿಚಾರವೇ ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತಿದೆ. 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಶ್ರೀಕಾಂತ್ ಇದೀಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎನ್ನಲಾಗುತ್ತಿದೆ. ನಟ ಆರ್ಥಿಕ ಸಂಕಷ್ಟವೇ ಡಿವೋರ್ಸ್ಗೆ ಕಾರಣ ಎಂಬ ಸುದ್ದಿ ಹರಿದಾಡುತ್ತಿದೆ.

    ಇನ್ನೂ ಪುತ್ರ ರೋಷನ್ ಕೂಡ ಟಾಲಿವುಡ್‌ಗೆ ಈಗಾಗಲೇ ಎಂಟ್ರಿ ಕೊಟ್ಟಾಗಿದೆ. `ಪೆಲ್ಲಿ ಸಂದಡಿ’ ಚಿತ್ರದ ಮೂಲಕ ಗುರುತಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ನಾಯಕಿಯಾಗಿ ಕನ್ನಡ ಭರಾಟೆ ನಟಿ ಶ್ರೀಲೀಲಾ ನಟಿಸಿದ್ದರು.

    Live Tv
    [brid partner=56869869 player=32851 video=960834 autoplay=true]