Tag: ರೋಶನ್ ಅಬ್ದುಲ್ ರಹೂಫ್

  • ಕಣ್ಸನ್ನೆ ನಂತ್ರ ಪ್ರಿಯಾ ವಾರಿಯರ್ ಕಿಸ್ಸಿಂಗ್ ವಿಡಿಯೋ ವೈರಲ್

    ಕಣ್ಸನ್ನೆ ನಂತ್ರ ಪ್ರಿಯಾ ವಾರಿಯರ್ ಕಿಸ್ಸಿಂಗ್ ವಿಡಿಯೋ ವೈರಲ್

    ತಿರುವನಂತಪುರಂ: ಕಣ್ಸನ್ನೆ ಮೂಲಕ ರಾತ್ರೋರಾತ್ರಿ ನ್ಯಾಷನಲ್ ಸ್ಟಾರ್ ಆದ ಮಲಯಾಳಂ ನಟಿ ಪ್ರಿಯಾ ವಾರಿಯರ್ ಅವರ ಲಿಪ್ ಲಾಕ್ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಪ್ರಿಯಾ ತಮ್ಮ ಮುಂಬರುವ ‘ಒರು ಅಡಾರ್ ಲವ್’ ಚಿತ್ರದಲ್ಲಿ ನಟ ರೋಶನ್ ಅಬ್ದುಲ್ ರಹೂಫ್ ಅವರಿಗೆ ಕಣ್ಣು ಹೊಡೆದ ವಿಡಿಯೋ ವೈರಲ್ ಆಗಿತ್ತು. ಈಗ ಇದೇ ಚಿತ್ರದ ಪ್ರೋಮೋವೊಂದು ಬಿಡುಗಡೆ ಆಗಿದೆ. ಈ ಪ್ರೋಮೋದಲ್ಲಿ ರೋಶನ್ ಹಾಗೂ ಪ್ರಿಯಾ ಲಿಪ್ ಲಾಕ್ ಮಾಡಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗುತ್ತಿದೆ.

    ವೈರಲ್ ಆಗಿರುವ ಹೊಸ ವಿಡಿಯೋದಲ್ಲಿ ನಟ ರೋಶನ್ ಅಬ್ದುಲ್ ಅವರು ಪ್ರಿಯಾ ವಾರಿಯರ್ ಅವರ ತುಟಿಗೆ ಮುತ್ತು ನೀಡಿದ್ದಾರೆ. ಈ ವಿಡಿಯೋ ಕೇವಲ 10 ಸೆಕೆಂಡ್ ಇದ್ದು, ಚಿತ್ರದಲ್ಲಿ ಇಬ್ಬರು ಸ್ಕೂಲ್ ಯೂನಿಫಾರ್ಮ್‍ನಲ್ಲಿ ಕಾಣಿಸಿಕೊಂಡಿದ್ದಾರೆ.

    ಒರು ಅಡಾರ್ ಲವ್ ಚಿತ್ರ ಹೈಸ್ಕೂಲ್ ರೋಮ್ಯಾಂಟಿಕ್ ಚಿತ್ರವಾಗಿದ್ದು, ಫೆ. 14ರಂದು ಬಿಡುಗಡೆ ಆಗುತ್ತಿದೆ. ಈ ಚಿತ್ರವನ್ನು ಓಮರ್ ಲುಲು ನಿರ್ದೇಶನ ಮಾಡಿದ್ದಾರೆ. ಮಲಯಾಳಂ ಭಾಷೆಯಲ್ಲಿ ಸೇರಿದಂತೆ ಕನ್ನಡ ಹಾಗೂ ತೆಲುಗು ಭಾಷೆಯಲ್ಲೂ ಈ ಚಿತ್ರ ಬಿಡುಗಡೆ ಆಗುತ್ತಿದೆ. ಕನ್ನಡದಲ್ಲಿ ‘ಕಿರಿಕ್ ಲವ್ ಸ್ಟೋರಿ’ ಎಂಬ ಹೆಸರಿನಲ್ಲಿ ಚಿತ್ರ ತೆರೆ ಕಾಣಲಿದೆ.

    https://www.youtube.com/watch?time_continue=10&v=eewLv2yZAtg

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರಿಯಾ ಕಣ್ ಸನ್ನೆಗೆ ಸೋತ ರೋಶನ್ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ

    ಪ್ರಿಯಾ ಕಣ್ ಸನ್ನೆಗೆ ಸೋತ ರೋಶನ್ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ

    ತಿರುವನಂತಪುರಂ: ಮಲಯಾಳಂ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಕಣ್ ಸನ್ನೆ ಮಾಡಿದ ವಿಡಿಯೋ ರಾತ್ರೋರಾತ್ರಿ ನ್ಯಾಷನಲ್ ಸನ್ಸೆಷನ್ ಆಗಿದೆ.

    ಒರು ಅಡಾರ್ ಲವ್ ಚಿತ್ರದ ಈ ವಿಡಿಯೋ ಆಗಿದ್ದು, ಇದರಲ್ಲಿ ನಟಿ ಪ್ರಿಯಾ ಹಾಗೂ ನಟ ರೋಶನ್ ಅಬ್ದುಲ್ ರಹೂಫ್ ತಮ್ಮ ಕಣ್ಣಸನ್ನೆ ಮೂಲಕವೇ ಸಾಮಾಜಿಕ ಜಾಲತಾಣದಲ್ಲಿ ಹೊಸ ಸೆನ್ಸೆಷನ್ ಹುಟ್ಟಿಸಿದ್ದಾರೆ.

    19 ವರ್ಷದ ರೋಶನ್, ತ್ರಿಶ್ಯೂರ್ ನಗರದ ವಿಮಲ ಕಾಲೇಜಿನಲ್ಲಿ ಬಿಸಿಎ ವ್ಯಾಸಂಗ ಮಾಡುತ್ತಿದ್ದಾರೆ. ರೋಶನ್ ಕೇರಳದ ಪೆರುವಂತನಮ್ ನಿವಾಸಿಯಾಗಿದ್ದಾರೆ. ಈ ಹಿಂದೆ ಖಾಸಗಿ ವಾಹಿನಿಯೊಂದರ ರಿಯಾಲಿಟಿ ಶೋದಲ್ಲಿ ಸ್ಪರ್ಧಿಸಿದ್ದ ರೋಶನ್ ತೀರ್ಪುಗಾರರಾಗಿದ್ದ ನಟಿ ಪ್ರಿಯಾಮಣಿ ಅವರಿಂದ ಮೆಚ್ಚುಗೆಯನ್ನು ಪಡೆದುಕೊಂಡಿದ್ದರು.

    ರೋಶನ್ ಒರು ಅಡಾರ್ ಲವ್ ಎರಡನೇ ಸಿನಿಮಾ ಆಗಿದ್ದು, ಮೊದಲ ಸಿನಿಮಾ ‘ನಾನ್ ಸೆನ್ಸ್’ ಫೆಬ್ರವರಿ 16ರಂದು ತೆರೆಕಾಣಲಿದೆ. ನಾನ್ ಸೆನ್ಸ್ ಸಿನಿಮಾದಲ್ಲಿ ವಿನಯ್ ಪೋರ್ಟ್ ಮತ್ತು ಶೃತಿ ರಾಮಚಂದ್ರನ್ ಲೀಡ್ ರೋಲ್‍ನಲ್ಲಿ ನಟಿಸಿದ್ದಾರೆ. ಪದವಿ ವ್ಯಾಸಂಗ ಮಾಡುತ್ತಿರುವ ರೋಶನ್ ಸ್ನಾತಕೋತ್ತರ ಪದವಿಯನ್ನು ಪಡೆಯುವ ಇಚ್ಛೆಯನ್ನು ಹೊಂದಿದ್ದಾರೆ.

    ಡ್ಯಾನ್ಸರ್ ಆಗಿರುವ ರೋಶನ್ ಮುಂದಿನ ದಿನಗಳಲ್ಲಿ ಸಕ್ರೀಯವಾಗಿ ಸಿನಿಮಾದಲ್ಲಿ ತೊಡಗಿಕೊಳ್ಳಲಿದ್ದೇನೆ ಎಂದು ತಿಳಿಸಿದ್ದಾರೆ. ಒರು ಅಡಾರ್ ಲವ್ ಚಿತ್ರದಲ್ಲಿ ಪ್ರಿಯಾ ವಾರಿಯರ್, ರೋಶನ್ ಅಬ್ದುಲ್, ನುರೀನ್ ಶರೀಫ್, ಸಿಯಾದ್ ಶಹಜಾನ್ ಸೇರಿದಂತೆ ನವಕಲಾವಿದರನ್ನು ಚಿತ್ರತಂಡ ಹೊಂದಿದೆ. ಒರು ಅಡಾರ್ ಲವ್ ಇದೇ ವರ್ಷ ಏಪ್ರಿಲ್ ನಲ್ಲಿ ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ತಿಳಿಸಿದೆ.