Tag: ರೋಲ್ ಕಾಲ್

  • ಕನ್ನಡದ ಹೆಸರಲ್ಲಿ ರೋಲ್‌ಕಾಲ್‌: ಪ್ರೂವ್ ಮಾಡಿದರೆ ನೇಣಿಗೇರುವೆ ಎಂದ ರೂಪೇಶ್ ರಾಜಣ್ಣ

    ಕನ್ನಡದ ಹೆಸರಲ್ಲಿ ರೋಲ್‌ಕಾಲ್‌: ಪ್ರೂವ್ ಮಾಡಿದರೆ ನೇಣಿಗೇರುವೆ ಎಂದ ರೂಪೇಶ್ ರಾಜಣ್ಣ

    ಮಾತಿನ ಚಕಮಕಿಯಿಂದಾಗಿ ‘ಬಿಗ್ ಬಾಸ್’ (Bigg Boss Season 9) ಮನೆ ಕೊತ ಕೊತ ಕುದಿಯುತ್ತಿದೆ. ಮೊದಲ ದಿನದಂದು ಇಲ್ಲಿಯತನಕ ಪ್ರಶಾಂತ್ ಸಂಬರ್ಗಿ ಮತ್ತು ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ(Rupesh Rajanna)  ಮಧ್ಯೆ ಜಗಳವಾಗುತ್ತಲೇ ಇದೆ. ಇಬ್ಬರೂ ಒಂದು ರೀತಿಯಲ್ಲಿ ಹಾವು ಮುಂಗಸಿ ತರಹ ಆಡುತ್ತಿದ್ದಾರೆ. ವೈಯಕ್ತಿಕ ವಿಚಾರವನ್ನು ಕೆದಕಿ, ತಮ್ಮ ಮರ್ಯಾದೆಯನ್ನು ತಾವೇ ಕ್ಯಾಮೆರಾ ಮುಂದೆ ಕಳೆದುಕೊಳ್ಳುತ್ತಿದ್ದಾರೆ. ಕ್ಯಾಪ್ಟೆನ್ಸಿಗಾಗಿ ನಡೆದ ‘ಬಿಗ್ ಬಾಸ್ ಗೋಲ್ಡ್ ಮೈನ್’ ಟಾಸ್ಕ್ ನಲ್ಲಿ ಮತ್ತೆ ಇಬ್ಬರೂ ಗಲಾಟೆ ಮಾಡಿಕೊಂಡಿದ್ದಾರೆ.

    ಈ ವಾರದ ಕ್ಯಾಪ್ಟೆನ್ಸಿಗಾಗಿ ವಿಭಿನ್ನ ರೀತಿಯ ಟಾಸ್ಕ್ ಒಂದನ್ನು ಆಯೋಜನೆ ಮಾಡಿದ್ದಾರೆ ಬಿಗ್ ಬಾಸ್. ಈ ಟಾಸ್ಕ್ ನಲ್ಲಿ ನಿಧಿ ಶೋಧಕರು ಚಿನ್ನವನ್ನು ಹುಡುಕಿ, ಅದನ್ನು ವಿಸರ್ಜಕರ ಬಳಿ ವಿನಿಯೋಗಿಸಿ, ಎದುರಾಳಿಯನ್ನು ಕ್ಯಾಪ್ಟೆನ್ಸಿ ಟಾಸ್ಕ್ ನಿಂದ ಹೊರಗಿಡಬೇಕು.  ಮೊದಲ ಸುತ್ತಿನಲ್ಲಿ ರೂಪೇಶ್ ಶೆಟ್ಟಿ ಜೊತೆ ಒಪ್ಪಂದ ಮಾಡಿಕೊಂಡಿದ್ದ ರೂಪೇಶ್ ರಾಜಣ್ಣ, ಟಾಸ್ಕ್ ಅನುಸಾರ ಪ್ರಶಾಂತ್ ಸಂಬರ್ಗಿಯನ್ನು ಔಟ್ ಮಾಡಿದರು. ಎರಡನೇ ಸುತ್ತಿನಲ್ಲಿ ವಿನೋದ್ ಗೊಬ್ಬರಗಾಲ ಜೊತೆ ಪ್ರಶಾಂತ್ ಸಂಬರ್ಗಿ ಡೀಲ್ ಮಾಡಿಕೊಂಡು ರೂಪೇಶ್ ರಾಜಣ್ಣನನ್ನು ಹೊರ ಹಾಕಿದರು. ಇದೇ ಜಗಳಕ್ಕೆ ಕಾರಣವಾಯಿತು. ಇದನ್ನೂ ಓದಿ:ತಮಿಳು ಬಿಗ್ ಬಾಸ್‌ಗೆ ಕಾಲಿಟ್ಟ ಕನ್ನಡತಿ ರಚಿತಾ ಮಹಾಲಕ್ಷ್ಮಿ

    ಕುತಂತ್ರಿ ಬುದ್ದಿಯಿಂದ ತನ್ನನ್ನು ಔಟ್ ಮಾಡಿದರು ಎಂದು ರೂಪೇಶ್ ರಾಜಣ್ಣ ಕೂಗಾಡಿದರು. ಸಂಬರ್ಗಿ (Prashant Sambargi) ಅವರನ್ನು ‘ಹೇಡಿ, ರಾಜಾ ಇಲಿ’ ಎಂದೆಲ್ಲ ಜರಿದರು. ಮಾತಿಗೆ ಮಾತು ಬೆಳೆದು ‘ಡಬ್ಬಾ ನನ್ ಮಗ, ಹೆದರುಪುಕ್ಲ ರೂಪೇಶ್ ರಾಜಣ್ಣ, ಯಾರ‍್ಯಾರ ಬಳಿ ರೋಲ್ ಮಾಡಿದ್ದಾರೋ, ಏನೋ? ಕನ್ನಡದ ಕಂದ ಹೇಡಿ’ ಅಂತೆಲ್ಲ ಪ್ರಶಾಂತ್ ಸಂಬರಗಿ ಜರಿದರು. ರೋಲ್‌ಕಾಲ್‌ ವಿಚಾರವಾಗಿ ರೂಪೇಶ್ ರಾಜಣ್ಣ ಗರಂ ಆದರು. ಇಬ್ಬರ ನಡುವಿನ ಗಲಾಟೆ ತಾರಕಕ್ಕೇರಿ ಬಿಗ್ ಬಾಸ್ ಮನೆಯ ವಾತಾವರಣವೇ ಬದಲಾಯಿತು.

    ತನಗೆ ರೋಲ್‌ಕಾಲ್‌ (Roll Call) ಅಂದ ಪ್ರಶಾಂತ್ ಸಂಬರ್ಗಿಯನ್ನು ದುರುಗುಟ್ಟಿ ನೋಡಿದ ರೂಪೇಶ್ ರಾಜಣ್ಣ, ‘ನಾನೇನಾದರೂ ರೋಲ್‌ಕಾಲ್ ಮಾಡಿದ್ದರೆ, ಯಾರಿಂದಾದರೂ ನಯಾಪೈಸೆ ಪಡೆದಿದ್ದರೆ, ಅದನ್ನು ಸಂಬರ್ಗಿ ಸಾಬೀತು ಪಡಿಸಲಿ. ನಾನು ರೋಲ್‌ಕಾಲ್ ಮಾಡಿದ್ದೇನೆ ಅಂತ ಪ್ರೂವ್ ಮಾಡಿದರೆ ಹ್ಯಾಂಗ್ ಮಾಡಿಕೊಳ್ಳಲು ಸಿದ್ಧ’ ಎಂದು ಘೋಷಿಸಿದರು. ‘ಹೊರಗಡೆ ಕೋಟಿ ಕೋಟಿ ವ್ಯವಹಾರ ಮಾಡೋ ಕುತಂತ್ರಿಗಳು ನಾವಲ್ಲ’ ಎಂದು ಪರೋಕ್ಷವಾಗಿ ಸಂಬರ್ಗಿಗೆ ಟಾಂಗ್ ಕೂಡ ಕೊಟ್ಟರು.

    ಕನ್ನಡದ (Kannada) ವಿಚಾರದಲ್ಲಿ ಮೊದಲಿನಿಂದಲೂ ರೂಪೇಶ್ ರಾಜಣ್ಣ ಮತ್ತು ಪ್ರಶಾಂತ್ ಸಂಬರ್ಗಿ ಮಧ್ಯೆ ಶೀತಲಸಮರ ನಡೆಯುತ್ತಲೇ ಇದೆ. ಈ ಹಿಂದೆ ‘ಸಂಬರ್ಗಿ ಕನ್ನಡ ವಿರೋಧಿ’ ಎಂದು ರೂಪೇಶ್ ಆರೋಪಿಸಿದ್ದರು. ‘ಕನ್ನಡದ ವಿಚಾರದಲ್ಲಿ ರೂಪೇಶ್ ಏನು ಅಂತ ಎಲ್ಲರಿಗೂ ಗೊತ್ತಿದೆ’ ಎಂದು ಸಂಬರ್ಗಿ ಪ್ರಶ್ನೆ ಮಾಡಿದ್ದರು. ಇದೀಗ ರೋಲ್‌ಕಾಲ್ ವಿಷಯ ಬಿಗ್ ಬಾಸ್ ಮನೆಯಲ್ಲಿ ಮಾತ್ರವಲ್ಲ, ದೊಡ್ಮನೆ ಆಚೆಯೂ ಚರ್ಚೆಗೆ ಕಾರಣವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಕಾರು ಚಾಲಕನನ್ನು 2 ದಿನ ಠಾಣೆಯಲ್ಲೇ ಕೂಡಿ ಹಾಕಿ ಹಲ್ಲೆಗೈದ ಪೊಲೀಸ್ ಪೇದೆ!

    ಕಾರು ಚಾಲಕನನ್ನು 2 ದಿನ ಠಾಣೆಯಲ್ಲೇ ಕೂಡಿ ಹಾಕಿ ಹಲ್ಲೆಗೈದ ಪೊಲೀಸ್ ಪೇದೆ!

    ಕಲಬುರಗಿ: ರೋಲ್ ಕಾಲ್ ಮಾಡುವದನ್ನು ಪ್ರಶ್ನಿಸಿದಕ್ಕೆ ಕಾರ್ ಚಾಲಕನನ್ನು ಪೇದೆಯೋರ್ವ ಅಮಾನವಿಯವಾಗಿ ಹಲ್ಲೆ ಮಾಡಿರುವ ಘಟನೆ ಕಲಬುರಗಿಯ ಮರತೂರ ಗ್ರಾಮದ ಹೊರವಲಯದಲ್ಲಿ ನಡೆದಿದೆ.

    ಕಳೆದ ಎರಡು ದಿನಗಳ ಹಿಂದೆ ಚಾಲಕ ಚಂದ್ರು ಮತ್ತು ಪೇದೆ ರವೀಂದ್ರ ಕುಮಾರ್ ನಡುವೆ ಈ ಜಗಳ ನಡೆದಿದೆ. ಘಟನೆಯ ನಂತರ ಯಾವುದೇ ದೂರು ಇಲ್ಲದೇ ಚಾಲಕನನ್ನು ಪೇದೆ ಹಾಗು ಆತನ ಸ್ನೇಹಿತರು ಎರಡು ದಿನಗಳ ಕಾಲ ಠಾಣೆಯಲ್ಲಿ ಕೂಡಿಸಿ ಅಮಾನವೀಯವಾಗಿ ಹಲ್ಲೆ ಮಾಡಿದ್ದಾರೆ.

     ಆ ಬಳಿಕ ಚಾಲಕನ ಚಿಕ್ಕಪ್ಪನ ಅಂತ್ಯಸಂಸ್ಕಾರ ನಡೆಯುತ್ತಿದ್ದು, ಬಿಡುಗಡೆ ಮಾಡುವಂತೆ ಚಾಲಕನ ಚಿಕ್ಕಪ್ಪ ವಿಶ್ವವಿದ್ಯಾಲಯ ಪಿಎಸ್‍ಐ ಜಗನಾಥ್‍ಗೆ ಕರೆ ಮಾಡಿದ್ದಾರೆ. ಈ ವೇಳೆ ಪೇದೆ ಅವರಿಗೂ ಕೂಡ ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ. ಈ ವಿಷಯ ಗ್ರಾಮಸ್ಥರಿಗೆ ತಿಳಿಯುತ್ತಿದ್ದಂತೆಯೇ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ. ಇದರಿಂದಾಗಿ ಚಾಲಕನನ್ನು ಠಾಣೆಯಿಂದ ಬಿಡುಗಡೆ ಮಾಡಲಾಗಿದೆ.

    ಸದ್ಯ ಪೊಲೀಸರ ಕೈಯಿಂದ ಬಿಡುಗಡೆಯಾದ ಚಂದ್ರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

  • ಖಾಕಿಗಳಿಗಿಂತ ಕ್ರಿಮಿನಲ್ಸೇ ಸ್ಟ್ರಾಂಗ್ – ಜೈಲಿನಿಂದಲೇ ಬೆದರಿಸಿ ರೋಲ್ ಕಾಲ್

    ಖಾಕಿಗಳಿಗಿಂತ ಕ್ರಿಮಿನಲ್ಸೇ ಸ್ಟ್ರಾಂಗ್ – ಜೈಲಿನಿಂದಲೇ ಬೆದರಿಸಿ ರೋಲ್ ಕಾಲ್

    ಬೆಂಗಳೂರು: ಕೈದಿಯೊಬ್ಬ ಜೈಲಿನಲ್ಲೇ ಕುಳಿತುಕೊಂಡು ಹೊರಗಿನವರನ್ನು ಬೆದರಿಸಿ ರೊಲ್ ಕಾಲ್ ಮಾಡುತ್ತಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.

    ಕೊಲೆ ಕೇಸ್ ಒಂದರಲ್ಲಿ ಭಾಗಿಯಾಗಿ ಜೈಲು ಸೇರಿದ್ದ ರವಿ ಅಲಿಯಾಸ್ ಗುಂಡ ಎಂಬಾತ ಜೈಲಿನಲ್ಲಿ ಇದ್ದುಕೊಂಡೆ ಬೆದರಿಸುತ್ತಿರುವ ವಿಚಾರ ಬಯಲಾಗಿದೆ.

    ಬೆಳಕಿಗೆ ಬಂದಿದ್ದು ಹೇಗೆ?: ಗುರುವಾರ ತಡ ರಾತ್ರಿ 12-30ರ ಸುಮಾರಿನಲ್ಲಿ ಬೆಂಗಳೂರಿನ ವಿಜಯನಗರದ ನಗರದ ಅಮರಜ್ಯೋತಿನಗರದಲ್ಲಿ ರವಿ ಸಹಚರರು ಉದ್ಯಮಿಯೊಬ್ಬರ ಬಳಿ 50 ಸಾವಿರ ರೂ. ಹಣ ವಸೂಲಿ ಮಾಡಲು ತೆರಳಿದ್ದರು. ಈ ವೇಳೆ ಉದ್ಯಮಿ ಹಣ ನೀಡಲು ನಿರಾಕರಿಸಿದ್ದಕ್ಕೆ ಉದ್ಯಮಿಗೆ ಜೀವ ಬೆದರಿಕೆ ಹಾಕಿ ಮನೆ ಮುಂದೆ ನಿಲ್ಲಿಸಿದ ಕಾರುಗಳ ಗ್ಲಾಸ್ ಪುಡಿ ಪುಡಿಗೈದಿದ್ದಾರೆ. ಈ ಬಗ್ಗೆ ವಿಜಯನಗರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದು ಆರೋಪಿಗಳ ಪತ್ತೆಗೆ ಬಲೇ ಬೀಸಿದ್ದರು.

    ಇದೀಗ ರವಿ ಅಲಿಯಾಸ್ ಗುಂಡ ಸಹಚರರಾದ ನವೀನ್, ಗುರು, ಆಕಾಶ್ ಹಾಗೂ ಕಿರಣ್ ಎಂಬ ನಾಲ್ವರನ್ನು ಬಂಧಿಸುವಲ್ಲಿ ವಿಜಯನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ನಾಲ್ವರನ್ನು ವಿಚಾರಣೆ ನಡೆಸಿದಾಗ ರವಿ ಜೈಲಿನಲ್ಲಿದುಕೊಂಡೇ ಈ ಹುಡುಗರ ಮೂಲಕ ರೋಲ್ ಕಾಲ್ ಮಾಡುತ್ತಿರೋ ವಿಚಾರ ಬೆಳಕಿಗೆ ಬಂದಿದೆ.

    https://www.youtube.com/watch?v=nOvPZp82cJ8&feature=youtu.be