Tag: ರೋಲರ್ ಕೋಸ್ಟರ್

  • ಹಸೆಮಣೆ ಏರಬೇಕಿದ್ದ ಮಹಿಳೆ ರೋಲರ್‌ ಕೋಸ್ಟರ್‌ ಆಡುವಾಗ ಕೆಳಗೆ ಬಿದ್ದು ಸಾವು

    ಹಸೆಮಣೆ ಏರಬೇಕಿದ್ದ ಮಹಿಳೆ ರೋಲರ್‌ ಕೋಸ್ಟರ್‌ ಆಡುವಾಗ ಕೆಳಗೆ ಬಿದ್ದು ಸಾವು

    ನವದೆಹಲಿ: ಹಸೆಮಣೆ ಏರಬೇಕಿದ್ದ ಮಹಿಳೆಯೊಬ್ಬರು ರೋಲರ್‌ ಕೋಸ್ಟರ್‌ ಅವಘಡದಲ್ಲಿ ದಾರುಣ ಅಂತ್ಯ ಕಂಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

    ದೆಹಲಿಯ ಹೊರವಲಯದಲ್ಲಿರುವ ಜನಪ್ರಿಯ ಮನೋರಂಜನಾ ಉದ್ಯಾನವನದಲ್ಲಿ 24 ವರ್ಷದ ಪ್ರಿಯಾಂಕಾ ಎಂಬಾಕೆ ತಮ್ಮ ಮದುವೆಗೆ ಕೆಲವೇ ತಿಂಗಳುಗಳ ಮೊದಲು ರೋಲರ್ ಕೋಸ್ಟರ್ ಅವಘಡದಲ್ಲಿ ಸಾವನ್ನಪ್ಪಿದ್ದಾರೆ.

    ನಿಶ್ಚಿತಾರ್ಥವಾದ ವರನೊಂದಿಗೆ ನೈಋತ್ಯ ದೆಹಲಿಯ ಕಪಶೇರಾ ಬಳಿಯ ಫನ್ ಎನ್ ಫುಡ್ ವಾಟರ್ ಪಾರ್ಕ್‌ಗೆ ಭೇಟಿ ನೀಡಿದ್ದರು. ರೋಲರ್‌ ಕೋಸ್ಟರ್‌ ಆಡುವಾಗ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ.

    ಪ್ರಿಯಾಂಕಾ ತನ್ನ ನಿಶ್ಚಿತ ವರ ನಿಖಿಲ್ ಜೊತೆ ವಾಟರ್ & ಅಮ್ಯೂಸ್‌ಮೆಂಟ್ ಪಾರ್ಕ್‌ಗೆ ಹೋಗಿದ್ದರು. ಸ್ವಿಂಗ್ ತರಹದ ರೈಡ್‌ನಲ್ಲಿ ಕುಳಿತಿದ್ದ ಪ್ರಿಯಾಂಕಾ, ಸ್ಟ್ಯಾಂಡ್ ಮುರಿದಾಗ ಎತ್ತರದಿಂದ ಕೆಳಗೆ ಬಿದ್ದರು. ಗಂಭೀರ ಗಾಯಗೊಂಡಿದ್ದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

    ಪ್ರಿಯಾಂಕಾ 2023ರ ಜನವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. 2026 ರ ಫೆಬ್ರವರಿಗೆ ಮದುವೆ ನಿಗದಿಯಾಗಿತ್ತು. ಪ್ರಿಯಾಂಕಾ ನೆರೆಯ ನೋಯ್ಡಾದ ಖಾಸಗಿ ಟೆಲಿಕಾಂ ಕಂಪನಿಯಲ್ಲಿ ಸೇಲ್ಸ್‌ ಮ್ಯಾನೇಜರ್‌ ಆಗಿ ಕೆಲಸ ಮಾಡುತ್ತಿದ್ದರು.

  • ಮೂಳೆ ಮುರಿತ – ಆಟ ನಿಲ್ಲಿಸಿದ ವಿಶ್ವದ ವೇಗದ ರೋಲರ್ ಕೋಸ್ಟರ್

    ಮೂಳೆ ಮುರಿತ – ಆಟ ನಿಲ್ಲಿಸಿದ ವಿಶ್ವದ ವೇಗದ ರೋಲರ್ ಕೋಸ್ಟರ್

    ಟೋಕಿಯೋ: ವಿಶ್ವದ ವೇಗದ ರೋಲರ್ ಕೋಸ್ಟರ್ ತನ್ನ ಆಟವನ್ನು ನಿಲ್ಲಿಸಿದೆ. ಪ್ರವಾಸಿಗರ ಮೂಳೆಗಳು ಮುರಿದ ಪ್ರಕರಣ ವರದಿಯಾದ ಹಿನ್ನೆಲೆಯಲ್ಲಿ ಜಪಾನ್ ಪ್ರವಾಸಿ ತಾಣ ರೋಲರ್ ಕೋಸ್ಟರ್ ಸೇವೆಯನ್ನು ನಿಲ್ಲಿಸಿದೆ.

    ಜಪಾನ್‍ನ ಯಮನಶಿಯ ಫುಜಿಯೊಶಿಡಾದ ದೋ-ಡೋಡೊನ್ಪಾ ಥೀಮ್ ಪಾರ್ಕಿನಲ್ಲಿದ್ದ ರೋಲರ್ ಕೋಸ್ಟರ್ 1.8 ಸೆಕೆಂಡಿನಲ್ಲಿ 172 ಕಿ.ಮೀ/ಗಂಟೆ ವೇಗ ಪಡೆದುಕೊಳ್ಳುತ್ತಿದ್ದರಿಂದ ವಿಶ್ವದ ಅತಿ ವೇಗದ ರೋಲರ್ ಕೋಸ್ಟರ್ ಎಂಬ ಪಟ್ಟ ಸಿಕ್ಕಿತ್ತು. ಈ ರೋಲರ್ ಕೋಸ್ಟರ್ ನಲ್ಲಿ ಕುಳಿತುಕೊಳ್ಳಲೆಂದೇ ವಿಶ್ವದಿಂದ ಪ್ರವಾಸಿಗರು ಈ ಥೀಮ್ ಪಾರ್ಕ್ ವೀಕ್ಷಣೆಗೆ ಆಗಮಿಸುತ್ತಿದ್ದರು. ಇದನ್ನೂ ಓದಿ: ನಟ ಕೋಮಲ್ ವಿರುದ್ಧ ಸ್ವೆಟರ್ ಹಗರಣ ಆರೋಪ 

    2001ರಲ್ಲಿ ಈ ಸೇವೆ ಆರಂಭಗೊಂಡಿದ್ದು ಈಗ ಮೂಳೆ ಮುರಿತ ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಡಿಸೆಂಬರ್ 2020 ರಿಂದ ಇಲ್ಲಿಯವರೆಗೆ 6 ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ರೋಲರ್ ಕೋಸ್ಟರ್ ಆಟವನ್ನು ಬಂದ್ ಮಾಡಲಾಗಿದೆ. ಇದಕ್ಕೂ ಮೊದಲು 2007ರಲ್ಲಿ ಒಂದು ಪ್ರಕರಣ ವರದಿಯಾಗಿತ್ತು.

    ಈ ಪ್ರಕರಣದ ಬಳಿಕ ಇತ್ತೀಚಿನ ಪ್ರಕರಣಗಳು ಹೆಚ್ಚು ಗಂಭೀರವಾಗಿದ್ದ ಕಾರಣ ಥೀಮ್ ಪಾರ್ಕ್ ಆಡಳಿತ ಮಂಡಳಿ ಈ ಸೇವೆಯನ್ನು ನಿಲ್ಲಿಸುವ ನಿರ್ಧಾರಕ್ಕೆ ಬಂದಿದ್ದಾರೆ. ರೋಲರ್ ಕೋಸ್ಟರ್ ನಲ್ಲಿ  ಯಾವುದೇ ತಾಂತ್ರಿಕ ದೋಷ ಇಲ್ಲದಿರುವ ವಿಚಾರ ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಇದನ್ನೂ ಓದಿ: ತಟ್ಟೆಯಲ್ಲಿ ಪೌಡರ್ ಹಾಕಿ ಎಟಿಎಂ ಕಾರ್ಡ್‍ನಿಂದ ಉಜ್ಜಿ ಕೊಕೇನ್ ಸೇವಿಸಿದ್ದ ರಾಗಿಣಿ 

    ರೋಲರ್ ಕೋಸ್ಟರ್ ವಿನ್ಯಾಸಗಳಲ್ಲಿ ಪರಿಣತಿ ಹೊಂದಿರುವ ನಿಹಾನ್ ವಿಶ್ವವಿದ್ಯಾನಿಲಯದ ವಾಸ್ತುಶಿಲ್ಪ ಪ್ರಾಧ್ಯಾಪಕರಾದ ನಯೋಯಾ ಮಿಯಾಸಾಟೊ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ರೋಲರ್ ಕೋಸ್ಟರ್ ನಲ್ಲಿ ವೇಗ ಜಾಸ್ತಿ ಇದ್ದು, ಸರಿಯಾಗಿ ಕುಳಿತುಕೊಳ್ಳದ ಕಾರಣ ಮೂಳೆಗಳು ಮುರಿದಿರಬಹುದು. ಹೀಗಾಗಿ ಪಾರ್ಕ್ ಸಿಬ್ಬಂದಿ ವ್ಯಕ್ತಿಗಳು ಸರಿಯಾಗಿ ಕುಳಿತುಕೊಂಡಿದ್ದಾರೋ ಇಲ್ಲವೋ ಎಂಬುದನ್ನು ಪರೀಕ್ಷಿಸಬೇಕು. ಇದು ಸಿಬ್ಬಂದಿಯ ಜವಾಬ್ದಾರಿ ಎಂದು ಹೇಳಿದ್ದಾರೆ.