Tag: ರೋಬೋಟ್

  • ಮಗುವಿಗೆ ಜನ್ಮನೀಡಲಿದೆ ರೊಬೋಟ್‌ – ಅಚ್ಚರಿಯ ಸಂಶೋಧನೆಯತ್ತ ಚೀನಾ

    ಮಗುವಿಗೆ ಜನ್ಮನೀಡಲಿದೆ ರೊಬೋಟ್‌ – ಅಚ್ಚರಿಯ ಸಂಶೋಧನೆಯತ್ತ ಚೀನಾ

    ದಿನಗಳೆದಂತೆ ಪ್ರತಿ ದಿನವೂ ಹೊಸ ರೀತಿಯ ಆವಿಷ್ಕಾರಗಳು ನಡೆಯುತ್ತಲೇ ಇವೆ. ಈ ಹಿಂದೆ ಮೊಬೈಲ್ ಇಲ್ಲದೆ ಕುಟುಂಬದವರೊಂದಿಗೆ, ಸ್ನೇಹಿತರು ಹಾಗೂ ನೆರೆಹೊರೆಯವರೊಂದಿಗೆ ಕಾಲ ಕಳೆಯುತ್ತಾ ಜೀವನ ನಡೆಸುತ್ತಿದ್ದರು. ಇದೀಗ ಆವಿಷ್ಕಾರವಾಗುತ್ತಾ ಜನರುಮೊಬೈಲ್‌ನಲ್ಲಿಯೇ ಜೀವನ ಕಳೆಯುತ್ತಿದ್ದಾರೆ. ಹಾಗೆ ಇದೀಗ ಚೀನಾ (China) ಹೊಸ ಆವಿಷ್ಕಾರವೊಂದು ನಡೆಸಿದ್ದು, ಮನುಕುಲವೇ ಅಚ್ಚರಿಪಡುವಂತಿದೆ. ನೈಸರ್ಗಿಕ ಸೃಷ್ಟಿಗೆ ಸವಾಲು ಹಾಕಿ ಈ ಸಂಶೋಧನೆಯನ್ನು ನಡೆಸಿದೆ.

    ಹೌದು, ವಿಶ್ವದಲ್ಲೇ ಮೊದಲ ಬಾರಿಗೆ ಮಗುವಿಗೆ ಜನ್ಮ ನೀಡುವ ರೊಬೋಟ್‌ ಒಂದು ಆವಿಷ್ಕಾರವಾಗುತ್ತಿದೆ. ತಂತ್ರಜ್ಞಾನವನ್ನ ಬಳಸಿ ಕೃತಕ ಗರ್ಭಧಾರಣೆ ಮಾಡಿಸುವ ಮೂಲಕ ಈ ರೊಬೋಟ್‌ (Robot) ಮಗುವಿಗೆ ಜನ್ಮ ನೀಡಲಿದೆ. ತಾಯಿಯ ಗರ್ಭದಲ್ಲಿ ಮಗು (Baby) ಬೆಳೆಯುವ ರೀತಿಯಲ್ಲಿಯೇ ಈ ಕೃತಕ ಗರ್ಭಧಾರಣೆ ನಡೆಯಲಿದೆ.

    ಸಿಂಗಾಪುರದ (Singapura) ನಾನ್ಯಾಂಗ್ ತಾಂತ್ರಿಕ ವಿಶ್ವವಿದ್ಯಾಲಯದ ವಿಜ್ಞಾನಿಯಾಗಿರುವ ಡಾಕ್ಟರ್ ಜಾಂಗ್ ಕಿಫೆಂಗ್ ನೇತೃತ್ವದಲ್ಲಿ ಗುವಾಂಗ್ ಝೌ ಮೂಲದ ಕೈವಾ ಟೆಕ್ನಾಲಜಿ (Kaiva Technology) ಈ ರೊಬೋಟ್‌ ಅನ್ನು ಅಭಿವೃದ್ಧಿಪಡಿಸುತ್ತಿದೆ. ಮೂಲಗಳ ಪ್ರಕಾರ, ಸತ್ಯ ಈ ಸಂಶೋಧನೆ ಅಂತಿಮ ಹಂತದಲ್ಲಿದ್ದು, ಯಶಸ್ವಿಯಾದರೆ ಗರ್ಭಧಾರಣೆ ಮಾಡಬಹುದು ಎಂದು ತಿಳಿಸಿದೆ.

    ಪ್ರಕ್ರಿಯೆ ಹೇಗೆ?
    ತಾಯಿಯೊಬ್ಬಳು ಗರ್ಭಧರಿಸುವ ಹಾಗೆ ಈ ಪ್ರಕ್ರಿಯೆ ನಡೆಯುತ್ತದೆ. ಈ ರೊಬೋಟ್‌ ನ ಭ್ರೂಣದೊಳಗೆ ಅಮ್ನಿಯೋಟಿಕ್ ಎಂಬ ದ್ರವ ಇರುತ್ತದೆ. ಇದು ತಾಯಿಯ ಗರ್ಭದಲ್ಲಿರುವ ನೈಸರ್ಗಿಕ ದ್ರವದಂತೆ ವರ್ತಿಸುತ್ತದೆ.

    ಮೊದಲಿಗೆ ಐವಿಎಫ್ (In vitro fertilization) ರೀತಿಯಲ್ಲಿ ಲ್ಯಾಬ್ ನಲ್ಲಿ ಅಂಡಾಣು ಮತ್ತು ವೀರ್ಯಾಣುಗಳ ಸಂಯೋಜನೆ ಮಾಡಲಾಗುತ್ತದೆ. ನಂತರ ಈ ಸಂಯೋಜನೆಯನ್ನ ಕೃತಕ ಗರ್ಭಾಶಯಕ್ಕೆ ಸ್ಥಳಾಂತರಿಸಲಾಗುತ್ತದೆ. ಈ ಗರ್ಭಕ್ಕೆ ಪೋಷಕಾಂಶವನ್ನು ಪೂರೈಕೆ ಮಾಡಲಾಗುತ್ತದೆ. ಫೀಡಿಂಗ್ ಟ್ಯೂಬ್ ಮೂಲಕ ಭ್ರೂಣಕ್ಕೆ ಅಗತ್ಯವಾದ ಪೋಷಕಾಂಶ, ಆಮ್ಲಜನಕ ಮತ್ತು ಹಾರ್ಮೋನುಗಳನ್ನು ಒದಗಿಸಲಾಗುತ್ತದೆ. ಈ ಪ್ರಕ್ರಿಯೆ ಸಂಪೂರ್ಣವಾಗಿ ಎಐ ನಿಯಂತ್ರಿತ ವ್ಯವಸ್ಥೆಯಾಗಿರುತ್ತದೆ.

    ಇನ್ನು ರೊಬೋಟ್‌ ನಲ್ಲಿ ಸೆನ್ಸರ್ ಹಾಗೂ ಕ್ಯಾಮರಾಗಳು ಇರುತ್ತವೆ. ಇವುಗಳು ಭ್ರೂಣದ ಬೆಳವಣಿಗೆ, ತಾಪಮಾನ, ಹೃದಯಬಡಿತ ಮತ್ತು ಇತ್ಯಾದಿ ಚಟುವಟಿಕೆಗಳನ್ನು ದಿನದ 24 ಗಂಟೆಯೂ ಗಮನಿಸುತ್ತಿರುತ್ತವೆ. ಒಂದು ವೇಳೆ ಮಗುವಿನ ಬೆಳವಣಿಗೆಯಲ್ಲಿ ಏನಾದರೂ ಹೆಚ್ಚು ಕಡಿಮೆಯಾದರೆ ತಕ್ಷಣವೇ ಪತ್ತೆ ಹಚ್ಚಿ ಎಚ್ಚರಿಕೆ ನೀಡುತ್ತದೆ.

    ಸುಮಾರು 9 ರಿಂದ 10 ತಿಂಗಳವರೆಗೆ ಗರ್ಭದಲ್ಲಿ ಮಗು ಬೆಳೆಯುತ್ತದೆ. ಮಗು ಸಂಪೂರ್ಣವಾಗಿ ಬೆಳೆದ ಮೇಲೆ ಅಥವಾ ಗರ್ಭಾವಧಿ ಮುಗಿದ ಮೇಲೆ ಸರ್ಜರಿ ಮಾದರಿಯಲ್ಲಿ ಮಗುವನ್ನು ಹೊರತೆಗೆಯಲಾಗುತ್ತದೆ. ಮಗು ಜನಿಸಿದ ತಕ್ಷಣ ಮಗುವನ್ನು ನವಜಾತ ಶಿಶುಗಳ ಆರೈಕೆ ಕೇಂದ್ರಕ್ಕೆ ಕಳಿಸಲಾಗುತ್ತದೆ.

    ತಾಯಿಯೊಬ್ಬಳು ಯಾವುದೇ ನೋವಿಲ್ಲದೆ, ಸರ್ಜರಿ ಇಲ್ಲದೆ ಮಗುವನ್ನು ಪಡೆಯಬಹುದು. ಈ ರೊಬೋಟ್‌ ಅನ್ನು 20206ರೊಳಗೆ ಬಿಡುಗಡೆ ಮಾಡಲಾಗುತ್ತಿದ್ದು, ಇದರ ವೆಚ್ಚ 12 ರಿಂದ 13 ಲಕ್ಷ ಆಗಿರಲಿದೆ ಎಂದು ಮೂಲಗಳು ತಿಳಿಸಿದೆ.

    ರೊಬೋಟ್‌ ಸಂಶೋಧನೆಯ ಉದ್ದೇಶ:
    ಸಂತಾನ ಸಮಸ್ಯೆಯನ್ನು ಎದುರಿಸುತ್ತಿರುವ ದಂಪತಿಗಳಿಗೆ ಇದೊಂದು ಆಯ್ಕೆ. ಗರ್ಭಧರಿಸಲು ಭಯಪಡುವ ಮಹಿಳೆಗೆ ಇದೊಂದು ಸರಳ ಮಾರ್ಗ ಎನ್ನಬಹುದು. ಅನಿಕ ದಂಪತಿಗೆ ಗರ್ಭಧಾರಣೆಯಲ್ಲಿ ಕೆಲವು ತೊಂದರೆಗಳಿರುತ್ತವೆ. ಅದಲ್ಲದೆ ಚೀನಾದಲ್ಲಿ ಜನನ ಪ್ರಮಾಣ ಕಡಿಮೆ ಇರುವುದು ಈ ಸಂಶೋಧನೆಗೆ ಮೂಲ ಕಾರಣ. ಇನ್ನು ಗರ್ಭಾವಸ್ಥೆಯ ಸಂದರ್ಭದಲ್ಲಿ ತಾಯಿಗೆ ಆರೋಗ್ಯ ಸಮಸ್ಯೆ, ಪ್ರಸವ ವೇದನೆ ಹಾಗೂ ಇನ್ನಿತರೆ ಅಪಾಯಗಳನ್ನು ತಪ್ಪಿಸಲು ಈ ಯಂತ್ರ ಸಹಾಯ ಮಾಡುತ್ತದೆ. ಕೆಲವು ಸಂದರ್ಭಗಳಲ್ಲಿ ಪ್ರಸವ ವೇದನೆಯಾಗುವಾಗ ತಾಯಿಯು ಸಾವನ್ನಪ್ಪುವ ಸಂಭವವಿರುತ್ತದೆ. ಅದಕ್ಕೆ ಸಾವಿನ ಅಪಾಯ ಹಾಗೂ ಅವಧಿಗೂ ಮುನ್ನ ಹೆರಿಗೆಯಾಗುವಾಗ ಉಂಟಾಗುವ ಅಪಾಯವನ್ನು ತಪ್ಪಿಸಬಹುದು ಎಂಬ ಉದ್ದೇಶದಿಂದ ಈ ಯಂತ್ರವನ್ನು ತಯಾರಿಸಲಾಗಿದೆ.

    ಈ ರೊಬೋಟ್‌ ಸಂಶೋಧನೆಗೆ ಕೆಲವು ವಿರೋಧ ವ್ಯಕ್ತವಾಗಿದೆ:
    ಈ ಕೃತಕ ಗರ್ಭಶದಲ್ಲಿ ಹುಟ್ಟುವ ಮಗು ನೈಸರ್ಗಿಕವಾಗಿ ಜನಿಸುವ ಮಗುವಿನಂತೆ ಇರುತ್ತದೆಯಾ? ಎಂಬ ಪ್ರಶ್ನೆ ಎಲ್ಲರಲ್ಲಿ ಮೂಡಿದೆ. ಜೊತೆಗೆ ಮಗು ಹಾಗೂ ತಾಯಿಯ ನಡುವಿನ ನೈಸರ್ಗಿಕ ಸಂಬಂಧ ಕಡಿಮೆಯಾಗುತ್ತದೆ. ಕಾನೂನು ಪ್ರಕಾರ ಮಗುವಿನ ತಾಯಿ ಯಾರಾಗುತ್ತಾರೆ? ಅದಲ್ಲದೆ ಮಗು ನೈಸರ್ಗಿಕ ಗರ್ಭಶಯದಲ್ಲಿ ಬೆಳೆಯದೆ ಯಾಂತ್ರಿಕ ವಾತಾವರಣದಲ್ಲಿ ಬೆಳೆಯುವುದರಿಂದ ಮಗುವಿನ ಮಾನಸಿಕ ಗುಣಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಇನ್ನು ಕೆಲವರಿಗೆ ಸಂತಾನ ಸಮಸ್ಯೆ ಇದ್ದರೂ ಕೂಡ 12 ಲಕ್ಷ ರೂ. ಖರ್ಚು ಮಾಡಿ ಈ ರೊಬೋಟ್‌ ಅನ್ನು ಖರೀದಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಈ ರೊಬೋಟ್‌ ಕೇವಲ ಆರ್ಥಿಕವಾಗಿ ಸಬಲರಾದವರಿಗೆ ಮಾತ್ರ ಸಹಾಯ ಮಾಡುತ್ತದೆ. ಜೊತೆಗೆ ಸಮಾಜದಲ್ಲಿ ಈ ರೀತಿ ಮಗು ಜನಿಸುವುದರಿಂದ ತಾಯಿಯ ಬೆಲೆ ಹಾಗೂ ನೈಸರ್ಗಿಕ ಜನನದ ಅನುಭವ ತಾಯಿಗೆ ಇರುವುದಿಲ್ಲ. ಹೆಚ್ಚೆಂದರೆ ಸಂಪ್ರದಾಯ ಬದ್ಧ ಜನರು ಈ ತಂತ್ರಜ್ಞಾನವನ್ನು ಒಪ್ಪಿಕೊಳ್ಳುವುದಿಲ್ಲ. ಹೀಗಾಗಿ ಈ ರೊಬೋಟ್‌ ಹಲವು ಅನುಕೂಲತೆ ಹಾಗೂ ಅನಾನುಕೂಲತೆಯನ್ನು ಹೊಂದಿದೆ.

    ಚೀನಾದ ಕೈವಾ ಟೆಕ್ನಾಲಜಿ ಅಭಿವೃದ್ಧಿ ಪಡಿಸುತ್ತಿರುವ ಈ ಕೃತಕ ಗರ್ಭಧಾರಣ ರೊಬೋಟ್‌ ವೈದ್ಯಕೀಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ಹೆಜ್ಜೆಯಾಗಲಿದೆ. ಮುಂದಿನ ದಿನಗಳಲ್ಲಿ ಸಂತಾನೋತ್ಪತ್ತಿ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆಯನ್ನು ತರುವ ಸಾಧ್ಯತೆ ಇದೆ.

  • 47 ಭಾಷೆ ಮಾತನಾಡುವ ರೋಬೋಟ್ ತಯಾರಿಸಿದ ಮುಂಬೈ ವ್ಯಕ್ತಿ

    47 ಭಾಷೆ ಮಾತನಾಡುವ ರೋಬೋಟ್ ತಯಾರಿಸಿದ ಮುಂಬೈ ವ್ಯಕ್ತಿ

    ಮುಂಬೈ: ಐಐಟಿ ಬಾಂಬೆಯ ಕೇಂದ್ರಿಯ ವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಶಿಕ್ಷಕರೊಬ್ಬರು ಮನುಷ್ಯ ಮಾದರಿಯ ರೋಬೋಟ್‍ನನ್ನು ತಯಾರಿಸಿದ್ದಾರೆ.

    ಹೌದು ಶಿಕ್ಷಕ ದಿನೇಶ್ ಪಟೇಲ್ ತಯಾರಿಸಿರುವ ಈ ರೋಬೋಟ್ ಒಂಬತ್ತು ಸ್ಥಳೀಯ ಭಾಷೆಗಳನ್ನು ಮತ್ತು 38 ವಿದೇಶಿ ಭಾಷೆಗಳನ್ನು ಮಾತನಾಡುತ್ತದೆ. ಅಂದರೆ ಇಂಗ್ಲಿಷ್, ಹಿಂದಿ, ಭೋಜ್‍ಪುರಿ, ಮರಾಠಿ, ಬಾಂಗ್ಲಾ, ಗುಜರಾತಿ, ತಮಿಳು, ತೆಲುಗು ಮತ್ತು ಮಲಯಾಳಂ ಹೀಗೆ 9 ಭಾರತೀಯ ಭಾಷೆಯನ್ನು ಮಾತನಾಡುತ್ತದೆ ಎಂದು ಹೇಳಿದ್ದಾರೆ.

    ಬಾಲಿವುಡ್‍ನ ರೋಬೋಟ್ ಸಿನಿಮಾ ನೋಡಿ ಪ್ರೇರಿತರಾದ ದಿನೇಶ್ ಪಟೇಲ್ ರೋಬೋಟ್‍ನನ್ನು ತಯಾರಿಸಿ ಅದಕ್ಕೆ ಶಾಲು ಎಂದು ಹೆಸರಿಟ್ಟಿದ್ದಾರೆ. ಈ ರೋಬೋಟ್ ನೋಡಲು ಮಹಿಳೆ ಮಾದರಿಯೇ ಇದ್ದು ಮನುಷ್ಯರಂತೆ ಮಾತನಾಡುತ್ತದೆ. ಈ ರೋಬೋಟ್‍ನನ್ನು ತಯಾರಿಸಲು ಪ್ಲಾಸ್ಟಿಕ್, ರಟ್ಟು, ಮರ, ಅಲ್ಯೂಮಿನಿಯಂ ಮುಂತಾದ ತ್ಯಾಜ್ಯ ವಸ್ತುಗಳನ್ನು ಬಳಸಿ ಸುಮಾರು 50,000 ರೂ. ಖರ್ಚು ಮಾಡಿ ಅಭಿವೃದ್ಧಿ ಪಡಿಸಲಾಗಿದೆ. ಅಲ್ಲದೆ ಇದನ್ನು ಸಿದ್ಧಪಡಿಸಲು ಮೂರು ವರ್ಷಗಳ ಕಾಲ ಬೇಕಾಯಿತು ಎಂದು ತಿಳಿಸಿದ್ದಾರೆ.

    ಪಟೇಲ್‍ರವರು ಶಾಲು ವಿಷಯಗಳನ್ನು ಕಂಠ ಪಾಠ ಮಾಡುತ್ತದೆ ಹಾಗೂ ಸಾಮಾನ್ಯ ಜ್ಞಾನ, ಗಣಿತ ಇತ್ಯಾದಿಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸುತ್ತದೆ. ಅಲ್ಲದೆ ಶಾಲು ಸ್ವಾಗತವನ್ನು ಕೋರುತ್ತದೆ. ಭಾವನೆಗಳನ್ನು ತೋರಿಸುತ್ತದೆ. ನ್ಯೂಸ್ ಪೇಪರ್, ರೆಸಿಪಿ ಹೀಗೆ ಹಲವು ರೀತಿಯ ಚಟುವಟಿಕೆಗಳನ್ನು ಮಾಡುತ್ತದೆ. ಅಲ್ಲದೆ ರೋಬೋಟ್ ಮುಖವನ್ನು ಸುಂದರವಾಗಿ ಕಾಣುವಂತೆ ಮಾಡಲು ಪ್ಲ್ಯಾಸ್ಟರ್ ಆಫ್ ಪ್ಯಾರಿಸ್ ಅನ್ನು ಬಳಸಿರುವುದಾಗಿ ಹೇಳಿಕೊಂಡಿದ್ದಾರೆ.

    ಇದೀಗ ಐಐಟಿ ಬಾಂಬೆಯ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಸುಪ್ರಸಿತ್ ಚಕ್ರವರ್ತಿಯವರು ರೋಬೋಟ್ ತಯಾರಿಸಿದ ವಿಚಾರವಾಗಿ ದಿನೇಶ್ ಪಟೇಲ್‍ರವರಿಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

    ರೋಬೋಟ್ ಕುರಿತಂತೆ ಇದು ನಿಜಕ್ಕೂ ಒಂದು ದೊಡ್ಡ ಬೆಳವಣಿಗೆಯಾಗಿದ್ದು, ರೋಬೋಟ್‍ನನ್ನು ಶಿಕ್ಷಣ, ಮನರಂಜನೆ ಮತ್ತು ಇತರ ಕ್ಷೇತ್ರಗಳಲ್ಲಿ ಕೂಡ ಬಳಸಬಹುದು ಶಾಲು ಮುಂದಿನ ವಿಜ್ಞಾನಿಗಳಿಗೆ ಸ್ಫೂರ್ತಿಯಾಗಬಹುದು ಎಂದು ಹೇಳಿದ್ದಾರೆ.

  • ವಿಶ್ವದ ಮೊದಲ ನಾಗರಿಕ ರೋಬೋ- ರೋಬೋ ಹುಡುಗಿ ಮಾತಾಡುವ ವಿಡಿಯೋ ನೋಡಿ

    ವಿಶ್ವದ ಮೊದಲ ನಾಗರಿಕ ರೋಬೋ- ರೋಬೋ ಹುಡುಗಿ ಮಾತಾಡುವ ವಿಡಿಯೋ ನೋಡಿ

    ಭೋಪಾಲ್: ವಿಶ್ವದ ಮೊದಲ ರೋಬೋಟ್ ಸಿಟಿಜನ್ ‘ಸೋಫಿಯಾ’ ಮೊದಲ ಬಾರಿಗೆ ಭಾರತಕ್ಕೆ ಆಗಮಿದ್ದು, ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಹವಾಮಾನ ವೈಪರಿತ್ಯ ಹಾಗೂ ಇಂಧನ ಸಂರಕ್ಷಣೆ ಕುರಿತು ಭಾಷಣ ಮಾಡಿದೆ.

    ಈ ಕಾರ್ಯಕ್ರಮವನ್ನು ಎಮರಾಲ್ಡ್ ಹೈಟ್ಸ್ ಇಂಟರ್ ನ್ಯಾಷನಲ್ ಶಾಲೆ ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ ಹಲವು ಗಣ್ಯರು ಹಾಗೂ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಸೋಫಿಯಾ ಭಾಷಣ ಮಾಡಿದ್ದು, ಹಲವರು ಟ್ವಿಟ್ಟರ್ ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.

    ಹವಾಮಾನ ವೈಪರಿತ್ಯ ಹಾಗೂ ಇಂಧನ ಸಂರಕ್ಷಣೆ ಕುರಿತ ಭಾಷಣ ವೇಳೆ ವಿಶ್ವದ ಎಲ್ಲ ದೇಶಗಳ ಸರ್ಕಾರಗಳು ತಮ್ಮ ನೀತಿ ಮತ್ತು ಆಲೋಚನೆಗಳನ್ನು ಬದಲಾಯಿಸಿಕೊಳ್ಳಬೇಕಾಗಿದೆ ಸೋಫಿಯಾ ತಿಳಿಸಿದೆ.

    ಚಲನಚಿತ್ರ ನಿರ್ಮಾಪಕ ಉತ್ತರಾ ಸಿಂಗ್ ಈ ಕಾರ್ಯಕ್ರಮದ ನಿರೂಪಣೆ ಮಾಡಿದರು. ಈ ವೇಳೆ ನೀವು ಯಾವ ರೀತಿಯ ನೃತ್ಯವನ್ನು ಇಷ್ಟಪಡುತ್ತೀರಿ, ದೇಶದ ಯಾವ ಆದರ್ಶವನ್ನು ಇಷ್ಟಪಡುತ್ತೀರಿ ಎಂದು ಸೋಫಿಯಾಗೆ ಪ್ರಶ್ನಿಸಿದರು. ಇದಕ್ಕೆ ಸೋಫಿಯಾ ಉತ್ತರಿಸುವುದು ಮಾತ್ರವಲ್ಲದೆ, ಹಾವ-ಭಾವದ ಮೂಲಕವೂ ಸಹ ಜನರನ್ನು ಸೆಳೆಯಿತು.

    ಪ್ರಪಂಚದ ಯಾವ ದೇಶದ ಆದರ್ಶ ನಿಮಗೆ ಇಷ್ಟವಾಗುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸೋಫಿಯಾ, ಎಲ್ಲಿ ಮನುಷ್ಯರಿಗೆ ಸಮಯದ ಕುರಿತು ಹೆಚ್ಚು ಅರಿವಿರುತ್ತದೆಯೋ ಅಲ್ಲಿ ಎಂದು ಉತ್ತರಿಸಿದೆ. ಆದರ್ಶ ಜಗತ್ತು ಸಮಯದ ಕುರಿತು ಹೆಚ್ಚು ತಿಳುವಳಿಕೆ ಹಾಗೂ ಅರಿವು ಹೊಂದಿರುತ್ತದೆ. ಹಿಂದಿನದನ್ನು ನೆನಪಿರುತ್ತದೆ, ಹೀಗಾಗಿಯೇ ಮಾನವರು ಇನ್ನೊಮ್ಮೆ ಅದನ್ನು ಮಾಡುವುದಿಲ್ಲ. ಅಲ್ಲದೆ, ಏಕಕಾಲದಲ್ಲಿ ಒಬ್ಬರನ್ನೊಬ್ಬರು ಮಕ್ಕಳು ಹಾಗೂ ವೃದ್ಧರಂತೆ ಕಾಣಬಹುದು ಎಂದು ಸೋಫಿಯಾ ಉತ್ತರಿಸಿದೆ.

    ಮಾನವರು ತಮ್ಮ ಪ್ರಸ್ತುತ ಹಾಗೂ ಭವಿಷ್ಯದ ಕೆಲಸಗಳ ಪ್ರಭಾವವನ್ನು ಅರ್ಥಮಾಡಿಕೊಳ್ಳಬೇಕು. ರಾಜಕಾರಣಿಗಳು ಮತ್ತು ವ್ಯಾಪಾರಸ್ಥರು, ಉದ್ಯಮಿಗಳು ಕ್ರಮ ಕೈಗೊಳ್ಳುವ ಹಾಗೂ ಕೃತಕ ಬುದ್ಧಿಮತ್ತೆ(ಆರ್ಟಿಫಿಶಿಯಲ್ ಇಂಟಲಿಜೆನ್ಸ್) ಕುರಿತು ಜವಾಬ್ದಾರಿ ಹೊಂದಿರಬೇಕು ಎಂದು ಸಲಹೆ ನೀಡಿದೆ.

    ಸೋಫಿಯಾ ನಿರ್ಮಾಣ
    ಸೋಫಿಯಾ ರೋಬೋಟ್‍ನ್ನು ಹಾಂಗ್ ಕಾಂಗ್ ಮೂಲದ ಹ್ಯಾನ್ಸನ್ ರೋಬೋಟಿಕ್ಸ್ ಕಂಪನಿ ಅಭಿವೃದ್ಧಿ ಪಡಿಸಿದ್ದು, ಇದನ್ನು ಫೆಬ್ರವರಿ 14, 2016ರಂದು ಸಕ್ರಿಯಗೊಳಿಸಲಾಗಿದೆ. ಅಭಿವೃದ್ಧಿ ಪಡಿಸಿದ ಒಂದು ತಿಂಗಳ ನಂತರ ಟೆಕ್ಸಾಸ್‍ನ ಆಸ್ಟಿನ್‍ನಲ್ಲಿ ನಡೆದ ಸೌತ್‍ವೆಸ್ಟ್ ಫೆಸ್ಟಿವಲ್‍ನಲ್ಲಿ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿತು. 2017ರಲ್ಲಿ ಸೋಫಿಯಾ ಯಾವುದೇ ದೇಶದ ಪೌರತ್ವ ಪಡೆದ ಮೊದಲ ರೋಬೋಟ್ ಎನಿಸಿಕೊಂಡಿತು. ಅಲ್ಲದೆ, ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ ಮೊದಲ ಇನೋವೇಶನ್ ಚಾಂಪಿಯನ್ ಎನಿಸಿಕೊಂಡಿತು.

    ಸೋಫಿಯಾ 50ಕ್ಕೂ ಹೆಚ್ಚು ಮುಖಭಾವ(ಎಕ್ಸ್‍ಪ್ರೆಷನ್ಸ್)ವನ್ನು ಪ್ರದರ್ಶಿಸುತ್ತದೆ. ಅಲ್ಲದೆ ವ್ಯಕ್ತಿಗಳನ್ನು ಸಹ ಸುಲಭವಾಗಿ ಗುರುತಿಸುತ್ತದೆ. ಸರಳ ಭಾಷೆ ಬಳಸಿ ಭಾಷಣವನ್ನು ಸಹ ಮಾಡಬಲ್ಲದು. ಸೋಫಿಯಾ ಕ್ರಿಯಾತ್ಮಕ ಕಾಲುಗಳನ್ನು ಸಹ ಹೊಂದಿದೆ. ಇವುಗಳನ್ನು 2018ರಲ್ಲಿ ಅಳವಡಿಸಲಾಗಿದೆ.

  • ವಿಶ್ವದ ಮೊದಲ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ನ್ಯೂಸ್ ಆಂಕರ್ ಅನಾವರಣ- ವಿಡಿಯೋ ನೋಡಿ

    ವಿಶ್ವದ ಮೊದಲ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ನ್ಯೂಸ್ ಆಂಕರ್ ಅನಾವರಣ- ವಿಡಿಯೋ ನೋಡಿ

    ಬೀಜಿಂಗ್: ಜಗತ್ತಿನ ಮೊದಲ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್(ಎಐ ಅಥವಾ ಕೃತಕ ಬುದ್ಧಿಮತ್ತೆ) ನ್ಯೂಸ್ ಆಂಕರ್ ಚೀನಾದಲ್ಲಿ ಅನಾವರಣಗೊಂಡಿದೆ.

    ವಿಶ್ವ ಅಂತರ್ಜಾಲದ ಸಮ್ಮೇಳನದಲ್ಲಿ ಚೀನಾ ಝಿನುವಾ ಸುದ್ದಿ ಸಂಸ್ಥೆ ಮೊದಲ ಬಾರಿಗೆ ಎಐ ನ್ಯೂಸ್ ಅಂಕರ್ ಪರಿಚಯಿಸಿದೆ.

    ಇಂಗ್ಲಿಷ್ ಭಾಷೆಯನ್ನು ಮಾತನಾಡುವ ಈ ಕೃತಕ ಆಂಕರ್, ತಾನು ಬರವಣಿಗೆಯಲ್ಲಿ ಕೊಟ್ಟಿರುವುದನ್ನ ಕ್ಯಾಮೆರಾ ಮುಂದೆ ಓದಲಿದ್ದೇನೆ ಎಂದು ಹೇಳಿದೆ. ಈ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ರೂಪವನ್ನ ಝಿನುವಾದ ಜಾಂಗ್ ಜಾಹೋ ಎಂಬ ಆಂಕರ್ ನ ಪ್ರತಿರೂಪವಾಗಿದೆ.

    ನ್ಯೂಸ್ ಚಾನೆಲ್‍ನಲ್ಲಿ ತನ್ನನ್ನ ಪರಿಚಯಿಸಿಕೊಂಡ ರೊಬೋಟ್ “ಎಲ್ಲರಿಗೂ ನಮಸ್ಕಾರ, ನಾನು ಕೃತಕ ಬುದ್ಧಿಮತ್ತೆಯ ಆಂಕರ್. ಈ ಚಾನೆಲ್‍ನಲ್ಲಿ ಇದು ನನ್ನ ಮೊದಲ ದಿನ. ನನ್ನ ಧ್ವನಿಯು ಜಾಂಗ್ ಜಾಹೋ ಅವರ ಪ್ರತಿರೂಪವಾಗಿದೆ. ಇವರು ಝಿನುವಾದಲ್ಲಿ ನಿಜವಾದ ನ್ಯೂಸ್ ಆಂಕರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ” ಎಂದು ಹೇಳಿದೆ.

    “ಮಾಧ್ಯಮ ಕ್ಷೇತ್ರದ ಅಭಿವೃದ್ಧಿಗೆ ನಿರಂತರವಾಗಿ ನವೀನ ಆವಿಷ್ಕಾರ ಮತ್ತು ಆಳವಾದ ಏಕೀಕರಣ ನಡೆಯುತ್ತಿದೆ. ನನ್ನ ಸಿಸ್ಟಂನಲ್ಲಿ ಟೈಪ್ ಮಾಡಿದ ಎಲ್ಲಾ ಮಹಿತಿಗಳನ್ನ ದಣಿವಿಲ್ಲದೆ ನಿಮಗೆ ಸದಾ ತಿಳಿಸುತ್ತೇನೆ. ನಾನು ಹೊಸ-ಹೊಸ ಅನುಭವಗಳನ್ನ ನಿಮ್ಮ ಮುಂದೆ ತರಲು ಬಯಸುತ್ತೇನೆ” ಎಂದು ಆಂಕರ್ ಸುದ್ದಿ ವಾಹಿನಿಯಲ್ಲಿ ಮಾತನಾಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews