Tag: ರೋಡ್ ಹಂಪ್ಸ್

  • ಸಿಎಂ ಸಂಚರಿಸುವ ಕಡೆ ರೋಡ್ ಹಂಪ್ಸ್ ತೆರವು: ಸಾರ್ವಜನಿಕರ ಆಕ್ರೋಶ

    ಸಿಎಂ ಸಂಚರಿಸುವ ಕಡೆ ರೋಡ್ ಹಂಪ್ಸ್ ತೆರವು: ಸಾರ್ವಜನಿಕರ ಆಕ್ರೋಶ

    ಚಿಕ್ಕೋಡಿ(ಬೆಳಗಾವಿ): ಜಿಲ್ಲೆಗೆ ಇಂದು ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕು ಸ್ಥಾಪನೆಗೆ ಸಿಎಂ ಅಗಮನ ಹಿನ್ನೆಲೆಯಲ್ಲಿ ಬಸವರಾಜ ಬೊಮ್ಮಾಯಿ ಅವರಿಗೆ ಹಂಪ್ಸ್ ರಹಿತ ಸಂಚಾರ ಒದಗಿಸುವ ನಿಟ್ಟಿನಲ್ಲಿ ಸಿಎಂ ಸಂಚರಿಸುವ ಮಾರ್ಗದೆಲ್ಲೆಡೆ ರೋಡ್ ಹಂಪ್ಸ್ ತೆರವುಗೊಳಿಸಲಾಗಿದೆ.

    ಸಿಎಂ ಹಾಗೂ ಸಚಿವರು ಬರುತ್ತಾರೆ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ರಸ್ತೆ ಹಂಪ್ಸ್ ತೆರವುಗೊಳಿಸುವ ಕಾರ್ಯವನ್ನು ಮಾಡಿದ್ದಾರೆ. ಸಂಕೇಶ್ವರ, ಹುಕ್ಕೇರಿ, ಬಡಕುಂದ್ರಿ ಮಾರ್ಗದ 50ಕ್ಕೂ ಹೆಚ್ಚು ಕಡೆ ರೋಡ್ ಹಂಪ್ಸ್ ತೆರವುಗೊಳಿಸಲಾಗಿದೆ. ಇದನ್ನೂ ಓದಿ: ಗದ್ದೆಗೆ ಹೋಗೋ ನೆಪದಲ್ಲಿ ಬಾವಿಗೆ ತಳ್ಳಿ ಹೆಂಡ್ತಿ ಕೊಲೆ – ಅಪರಾಧಿಗೆ ಜೀವಾವಧಿ ಶಿಕ್ಷೆ

    ಶಾಲಾ ಕಾಲೇಜುಗಳ ಬಳಿ ಅಳವಡಿಸಿದ್ದ ರೋಡ್ ಹಂಪ್ಸ್‍ಗಳನ್ನು ಸಹ ತೆರವುಗೊಳಿಸಲಾಗಿದೆ. ಸ್ಪೀಡ್ ಬ್ರೇಕರ್ ತೆರವಿನಿಂದ ಅಪಘಾತಗಳು ಸಂಭವಿಸಿದರೇ ಯಾರು ಹೊಣೆ? ಜನಸಾಮಾನ್ಯರಿಗೆ ಒಂದು ನ್ಯಾಯ ಸಿಎಂ ಹಾಗೂ ಸಚಿವರಿಗೆ ಒಂದು ನ್ಯಾಯನಾ ಎಂದು ಲೋಕೋಪಯೋಗಿ ಇಲಾಖೆ ವಿರುದ್ದ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸುಪ್ರೀಂಕೋರ್ಟ್ ಇಮೇಲ್‍ಗಳಲ್ಲಿ ಪ್ರಧಾನಿ ಮೋದಿ ಭಾವಚಿತ್ರ ಬಳಕೆಗೆ ಬ್ರೇಕ್

    ರಾಜ್ಯದ ಮುಖ್ಯಮಂತ್ರಿಗಳು ಬರುತ್ತಾರೆ ಎಂದು ರಸ್ತೆ ರೀಪೇರಿ ಮಾಡುವುದು. ರೋಡ್ ಹಂಪ್ಸ್ ತೆರುವುಗೊಳಿಸುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಸಾರ್ವಜನಿಕರ ತೆರಿಗೆ ಹಣದಲ್ಲಿ ಜನರಿಗೆ ಸಿಗಬೇಕಾದ ಸೌಲಭ್ಯಗಳು ಸಿಗುತ್ತಿಲ್ಲ. ನಮ್ಮ ಹಣದಲ್ಲಿ ಅಧಿಕಾರಿಗಳು ಹಾಗೂ ಸಚಿವರು ದರ್ಬಾರ್ ನಡೆಸುತ್ತಿದ್ದಾರೆ ಎಂದು ಸ್ಥಳೀಯ ಜನರು ಬೇಸರ ವ್ಯಕ್ತಪಡಿಸಿದ್ದಾರೆ.

  • ರೋಡ್ ಹಂಪ್ಸ್ ಜಂಪ್- ಬೈಕ್ ನಲ್ಲಿ ಹಿಂಬದಿ ಕುಳಿತಿದ್ದ ಮಹಿಳೆ ಸಾವು

    ರೋಡ್ ಹಂಪ್ಸ್ ಜಂಪ್- ಬೈಕ್ ನಲ್ಲಿ ಹಿಂಬದಿ ಕುಳಿತಿದ್ದ ಮಹಿಳೆ ಸಾವು

    ಹುಬ್ಬಳ್ಳಿ: ಬೈಕ್ ಸವಾರ ರೋಡ್ ಹಂಪ್ಸ್ ಜಂಪ್ ಮಾಡಿದ ಪರಿಣಾಮ ಹಿಂಬದಿ ಕುಳಿತಿದ್ದ ಮಹಿಳೆ ಆಯ ತಪ್ಪಿ ಬಿದ್ದು ಸಾವನಪ್ಪಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

    ಹುಬ್ಬಳ್ಳಿ ತಾಲೂಕಿನ ನೂಲ್ವಿ ಗ್ರಾಮದ ದಂಪತಿ ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ರಭಸವಾಗಿ ಹಂಪ್ಸ್ ಜಂಪ್ ಮಾಡಿದ್ದು, 31 ವರ್ಷದ ರೂಪಾ ಮೃತಪಟ್ಟಿದ್ದಾರೆ. ಸಿದ್ದಪ್ಪ ಶರೇವಾಡ ಹಾಗೂ ರೂಪಾ ದಂಪತಿ ಶರೇವಾಡ ಗ್ರಾಮದಿಂದ ಹುಬ್ಬಳ್ಳಿಗೆ ಬರುತ್ತಿದ್ದ ವೇಳೆ ಬೈಕ್ ಸ್ವಲ್ಪ ವೇಗವಾಗಿ ನೂಲ್ವಿ ಗ್ರಾಮದ ಬಳಿಯ ಹಂಪ್ಸ್ ಜಂಪ್ ಮಾಡಿದ್ದು, ಪರಿಣಾಮ ಬೈಕ್ ನಲ್ಲಿ ಹಿಂಬದಿ ಕುಳತಿದ್ದ ರೂಪಾ ಆಯತಪ್ಪಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಅವೈಜ್ಞಾನಿಕವಾಗಿ ಹಂಪ್ಸ್ ಹಾಕಿದ ಪರಿಣಾಮ ಈ ಘಟನೆ ನಡೆದಿದ್ದು, ಹಂಪ್ಸ್ ತೆಗೆಯಬೇಕೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆಯ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.