Tag: ರೋಡ್ ಶೋ

  • ರೋಡ್ ಶೋ ವೇಳೆ ಮತ್ತೆ ಕೇಜ್ರಿವಾಲ್‍ಗೆ ಕಪಾಳಮೋಕ್ಷ

    ರೋಡ್ ಶೋ ವೇಳೆ ಮತ್ತೆ ಕೇಜ್ರಿವಾಲ್‍ಗೆ ಕಪಾಳಮೋಕ್ಷ

    ನವದೆಹಲಿ: ದೆಹಲಿಯ ಮೋತಿ ನಗರದಲ್ಲಿ ರೋಡ್ ಶೋ ನಡೆಸುತ್ತಿದ್ದ ಎಎಪಿ ಪಕ್ಷದ ಮುಖ್ಯಸ್ಥ, ಸಿಎಂ ಅರವಿಂದ ಕೇಜ್ರಿವಾಲ್ ಅವರಿಗೆ ವ್ಯಕ್ತಿಯೊರ್ವ ಕಪಾಳಮೋಕ್ಷ ಮಾಡಿದ್ದಾನೆ.

    ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸಿ ಕೇಜ್ರಿವಾಲ್ ರೋಡ್ ಶೋ ನಡೆಸಿದ್ದರು. ಈ ಸಂದರ್ಭದಲ್ಲಿ ತೆರೆದ ಕಾರಿನಲ್ಲಿ ತೆರಳುತ್ತಿದ್ದ ಕೇಜ್ರಿವಾಲ್ ಜನರತ್ತ ಕೈ ಬೀಸುತ್ತಾ ಸಾಗಿದ್ದರು. ಇತ್ತ ಏಕಾಏಕಿ ಕೇಜ್ರಿವಾಲ್ ಅವರತ್ತ ನುಗ್ಗಿದ ವ್ಯಕ್ತಿ ಕಾರು ಹತ್ತಿ ಕೇಜ್ರಿವಾಲ್ ಮುಖಕ್ಕೆ ಬಾರಿಸಿದ್ದು, ಈ ಘಟನೆಯಿಂದ ಕೇಜ್ರಿವಾಲ್ ಶಾಕ್‍ಗೆ ಒಳಗಾಗಿದ್ದರು.

    ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ನಿಯೋಜಿಸಿದ್ದ ಸಂದರ್ಭದಲ್ಲೂ ಘಟನೆ ನಡೆದಿದೆ. ಕೇಜ್ರಿವಾಲ್ ಮುಖಕ್ಕೆ ಬಾರಿಸಿದ ವ್ಯಕ್ತಿ ತಕ್ಷಣ ಕಾರು ಇಳಿದು ಪರಾರಿಯಾಗಲು ಯತ್ನಿಸಿದ್ದ, ಈ ಹಂತದಲ್ಲಿ ಎಚ್ಚೆತ್ತ ಕಾರ್ಯಕರ್ತರು ಹಾಗೂ ವ್ಯಕ್ತಿಯನ್ನು ಹಿಡಿದುಕೊಂಡಿದ್ದಾರೆ. ಕೃತ್ಯ ಎಸಗಿದ ವ್ಯಕ್ತಿಯನ್ನು ಸುರೇಶ್ ಎಂದು ಗುರುತಿಸಲಾಗಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆ ಬಗ್ಗೆ ಎಎಪಿ ಮುಖಂಡರು ಬಿಜೆಪಿ ಪಕ್ಷದ ವಿರುದ್ಧ ಆರೋಪ ಮಾಡಿದ್ದಾರೆ. ಈ ದಾಳಿ ವಿರೋಧಿಗಳ ಪ್ರಾಯೋಜಿತದಿಂದ ನಡೆದ ಘಟನೆ ಎಂದು ಎಎಪಿ ಪಕ್ಷದ ವಕ್ತಾರ ಸೌರಭ್ ಭರದ್ವಾಜ್ ದೂರಿದ್ದಾರೆ. ಅಲ್ಲದೇ ತೃಣಮೂಲ ಕಾಂಗ್ರೆಸ್ ಪಕ್ಷ ಕೂಡ ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದೆ.

    ಇದೇ ಮೊದಲಲ್ಲ: 2014ರ ಲೋಕಸಭಾ ಚುನಾವಣೆಯ ಪ್ರಚಾರದ ವೇಳೆಯೂ ಕೂಡ ಕೇಜ್ರಿವಾಲ್ ರನ್ನು ದೆಹಲಿಯ ದಕ್ಷಿಣಪೂರಿ ಪ್ರದೇಶದಲ್ಲಿ ವ್ಯಕ್ತಿಯೊರ್ವ ಕಪಾಳ ಮೋಕ್ಷ ಮಾಡಿದ್ದ. ಈ ಘಟನೆ ನಡೆದ ನಾಲ್ಕು ದಿನಗಳ ಬಳಿಕ ಇಂತಹದ್ದೇ ಘಟನೆ ನಡೆದಿತ್ತು. ಈ ವೇಳೆ ಅವರ ಮುಖಕ್ಕೆ ಗಾಯವಾಗಿತ್ತು. ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿ ಇಂತಹ ಘಟನೆಗಳು ನಡೆಯುತ್ತಿದೆ ಎಂದು ಎಎಪಿ ಪಕ್ಷದ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದರು.

    ಕಳೆದ ವರ್ಷ ಕೇಜ್ರಿವಾಲ್ ಕಚೇರಿ ಬಳಿ ಆಗಮಿಸಿದ್ದ ವ್ಯಕ್ತಿಯೊಬ್ಬರು ಮನವಿ ಪತ್ರ ಸಲ್ಲಿಸಿ ಕಾಲಿಗೆ ನಮಸ್ಕಾರ ಮುಂದಾಗಿದ್ದರು. ಆ ಬಳಿಕ ಏಕಾಏಕಿ ಕೈಯಿಂದ ಖಾರದ ಪುಡಿ ತೆಗೆದು ಅವರ ಮುಖಕ್ಕೆ ಎರಚಲು ಯತ್ನಿಸಿದ್ದರು. ಈ ಘಟನೆ ದೆಹಲಿಯ ಸಚಿವಾಲಯದಲ್ಲೇ ನಡೆದಿತ್ತು. ಉಳಿದಂತೆ ಲೋಕಸಭಾ ಚುನಾವಣೆ ಮತದಾನ ದೆಹಲಿಯಲ್ಲಿ ಮೇ 12 ರಂದು ನಡೆಯಲಿದೆ.

  • ಮೆಗಾ ರೋಡ್‍ಶೋ ಬಳಿಕ ಮೋದಿಯಿಂದ ಗಂಗಾರತಿ

    ಮೆಗಾ ರೋಡ್‍ಶೋ ಬಳಿಕ ಮೋದಿಯಿಂದ ಗಂಗಾರತಿ

    ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಸಂಜೆ ವಾರಣಾಸಿಯಲ್ಲಿ ಮೆಗಾ ರೋಡ್ ಶೋ ನಡೆಸಿದ ಬಳಿಕ ರಾತ್ರಿ 8 ಗಂಟೆಯ ವೇಳೆಗೆ ಕಾಶಿಯ ದಶಾಶ್ವಮೇಧ ಘಾಟ್‍ನಲ್ಲಿ ಗಂಗಾರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಈ ವೇಳೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಉಪಸ್ಥಿತರಿದ್ದರು.

    ಬನಾರಸ್ ಹಿಂದೂ ವಿವಿಗೆ ತೆರಳಿ ಪಂಡಿತ್ ಮದನ್ ಮೋಹನ್ ಮಾಳವೀಯ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಕಾಶಿಯ ಬೀದಿಗಳಲ್ಲಿ ಕೇಸರಿ ಕಹಳೆಯೊಂದಿಗೆ ಮೋದಿ 6 ಕಿ.ಮೀ ಮಹಾ ರೋಡ್ ಶೋ ನಡೆಸಿ ಗಂಗೆಯ ತಟಕ್ಕೆ ಆಗಮಿಸಿದರು.

    ರೋಡ್ ಶೋ ವೇಳೆ ಲಂಕಾ ಘಾಟ್, ಅಸ್ಸಿ ಘಾಟ್, ಸೋನಾರ್‍ಪುರ, ಮದನಪುರ್ ಮಾರ್ಗವಾಗಿ ಸಾಗಿದ ಮೆರವಣಿಗೆಯ ರಸ್ತೆಯ ಇಕ್ಕೆಲ್ಲಗಳಲ್ಲೂ ಪುಷ್ಪವೃಷ್ಟಿ ಆಯಿತು. ಕಣ್ಣು ಹಾಯಿಸಿದ ದೂರವೂ ಜಮಾಯಿಸಿ ತಮ್ಮ ಪ್ರೀತಿ, ಅಭಿಮಾನವನ್ನು ಲಕ್ಷಾಂತರ ಅಭಿಮಾನಿಗಳು ತೋರಿಸಿದರು. ಎಲ್ಲ ಕಡೆ “ಹರ್ ಹರ್ ಮೋದಿ, ಘರ್ ಘರ್ ಮೋದಿ” ಜೈಕಾರ ಕೇಳಿಸುತಿತ್ತು.

    ಗಂಗಾರತಿ ವಿಶೇಷತೆ ಏನು?
    ಭೂಲೋಕದಲ್ಲಿ ಎಲ್ಲಿ ನೆಲೆಸಲು ಬಯಸ್ತೀಯಾ ಎಂದು ಶಿವ ಕೇಳಿದಾಗ, ಪವಿತ್ರ ಪರಿಶುದ್ಧ ಪಾವನೆ ಗಂಗೆಯ ತಟವಾದ ವಾರಾಣಸಿಯನ್ನು ಪಾರ್ವತಿ ಆಯ್ಕೆ ಮಾಡಿಕೊಂಡು ಎಂದು ಪುರಾಣ ಹೇಳುತ್ತದೆ.

    ಮೂರು ಜನ್ಮಗಳ ಪಾಪ ಕಳೆದುಕೊಳ್ಳಲು ಗಂಗಾರತಿ ಪೂಜೆ ಮಾಡಲಾಗುತ್ತದೆ. ಪಂಚಭೂತಗಳ ಸಂಕೇತವಾಗಿ ಈ ಆರತಿ ನಡೆಯುತ್ತದೆ. ಒಂದು ಕಡೆ 5 ಅರ್ಚಕರು, ಇನ್ನೊಂದು ಕಡೆ 7 ಅರ್ಚಕರು ಆರತಿ ಮಾಡುತ್ತಾರೆ. ಸಪ್ತ ಋಷಿಗಳು ಗಂಗಾರತಿ ಮಾಡಿದ್ದರು ಎನ್ನುವುದರ ಪ್ರತೀಕವಾಗಿ 7 ಆರತಿ ಮಾಡಲಾಗುತ್ತದೆ. ಸಾವಿರಾರು ವರ್ಷಗಳಿಂದ ವಂಶಪಾರಂಪರ್ಯವಾಗಿ ನಡೆದುಕೊಂಡು ಬಂದ ಪದ್ಧತಿ ಇದಾಗಿದೆ.

    ಗುರುವಾರ ರಾತ್ರಿ ವಾರಣಾಸಿಯಲ್ಲಿ ವಾಸ್ತವ್ಯ ಹೂಡಲಿರುವ ಪ್ರಧಾನಿ ಮೋದಿ ಶುಕ್ರವಾರ ಬೆಳಗ್ಗೆ ನಾಮಪತ್ರ ಪತ್ರ ಸಲ್ಲಿಸಲ್ಲಿದ್ದಾರೆ. ಬೆಳಗ್ಗೆ 9.30ಕ್ಕೆ ಬೂತ್ ಮಟ್ಟದ ಕಾರ್ಯಕರ್ತರ ಉದ್ದೇಶಿಸಿ ಭಾಷಣ ಮಾಡಿದ ಬಳಿಕ ಬೆಳಗ್ಗೆ 11.30 ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ನಾಮಪತ್ರ ಸಲ್ಲಿಕೆಯ ವೇಳೆ ನಿತಿಶ್ ಕುಮಾರ್, ಉದ್ಧವ್ ಠಾಕ್ರೆ, ಅಣ್ಣಾಡಿಎಂಕೆಯ ನಾಯಕರು ಸೇರಿದಂತೆ ಎನ್‍ಡಿಎ ಮಿತ್ರಪಕ್ಷಗಳ ಮುಖಂಡರು ಸಾಥ್ ನೀಡಲಿದ್ದಾರೆ.

  • ಎಲ್ಲಿ ನೋಡಿದರಲ್ಲಿ ಜನವೋ ಜನ – ಕಾಶಿಯಲ್ಲಿ ಮೋದಿ ಸುನಾಮಿ

    ಎಲ್ಲಿ ನೋಡಿದರಲ್ಲಿ ಜನವೋ ಜನ – ಕಾಶಿಯಲ್ಲಿ ಮೋದಿ ಸುನಾಮಿ

    ವಾರಣಾಸಿ: ಉತ್ತರ ಪ್ರದೇಶದ ಗಂಗೆಯ ಬೀಡು, ದೇಗುಲ ನಗರಿ, ಸ್ವಕ್ಷೇತ್ರ ವಾರಾಣಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಭರ್ಜರಿ ಶಕ್ತಿ ಪ್ರದರ್ಶನ ನಡೆಸಿದ್ದಾರೆ.

    ಬನಾರಸ್ ಹಿಂದೂ ವಿವಿಗೆ ತೆರಳಿ ಪಂಡಿತ್ ಮದನ್ ಮೋಹನ್ ಮಾಳವೀಯ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಕಾಶಿಯ ಬೀದಿಗಳಲ್ಲಿ ಕೇಸರಿ ಕಹಳೆಯೊಂದಿಗೆ ಮೋದಿ 6 ಕಿ.ಮೀ ಮಹಾ ರೋಡ್ ಶೋ ನಡೆಸಿದ್ದಾರೆ.

    ಲಂಕಾ ಘಾಟ್, ಅಸ್ಸಿ ಘಾಟ್, ಸೋನಾರ್‍ಪುರ, ಮದನಪುರ್ ಮಾರ್ಗವಾಗಿ ಸಾಗಿದ ಮೆರವಣಿಗೆಯ ರಸ್ತೆಯ ಇಕ್ಕೆಲ್ಲಗಳಲ್ಲೂ ಪುಷ್ಪವೃಷ್ಟಿ ಆಯಿತು. ಕಣ್ಣು ಹಾಯಿಸಿದ ದೂರವೂ ಜಮಾಯಿಸಿ ತಮ್ಮ ಪ್ರೀತಿ, ಅಭಿಮಾನ ಲಕ್ಷಾಂತರ ಅಭಿಮಾನಿಗಳು ತೋರಿಸಿದರು. ಎಲ್ಲ ಕಡೆ “ಹರ್ ಹರ್ ಮೋದಿ, ಘರ್ ಘರ್ ಮೋದಿ” ಜೈಕಾರ ಕೇಳಿಸುತಿತ್ತು.

    ಮಾಧ್ಯಮ ವರದಿಗಳ ಪ್ರಕಾರ ಅಂದಾಜು 4 ಲಕ್ಷಕ್ಕೂ ಅಧಿಕ ಜನ ಈ ರೋಡ್ ಶೋನಲ್ಲಿ ಭಾಗವಹಿಸಿದ್ದರು. ಹಲವು ಕಿ.ಮೀ ಉದ್ದ ಜನಸಾಗರವೇ ಸೇರಿತ್ತು. ರಸ್ತೆಯ ಇಕ್ಕೆಲದಲ್ಲಿ, ಮಹಡಿಯಲ್ಲಿ ಎಲ್ಲಿ ನೋಡಿದರಲ್ಲಿ ಜನಸಾಗರವೇ ಸೇರಿತ್ತು. ಒಂದು ರೀತಿಯಲ್ಲಿ ಕಾಶಿಯ ವಿಶ್ವನಾಥನ ಸನ್ನಿಧಿ ಕೇಸರಿಮಯವಾಗಿತ್ತು.

    ಬಿಹಾರದ ಧರ್ಬಂಗ್‍ನಲ್ಲಿ ಪ್ರಚಾರ ಮುಗಿಸಿ ಬರುವಲ್ಲಿ ತಡವಾದ ಕಾರಣ ಮಧ್ಯಾಹ್ನ 3 ಗಂಟೆಗೆ ಶುರುವಾಗಬೇಕಿದ್ದ ಈ ಮೆಗಾ ರೋಡ್‍ಶೋ ಸಂಜೆ 5.15ರ ಸುಮಾರಿಗೆ ಆರಂಭವಾಯಿತು.

    ಪ್ರಧಾನಿ ಮೋದಿ ಅವರ ಈ ರ‍್ಯಾಲಿಯಲ್ಲಿ ಭಾಗವಹಿಸುವಂತೆ ವಾರಣಾಸಿಯ ಪ್ರತಿಯೊಂದು ಮನೆಗೂ ತೆರಳಿ ಕಾರ್ಯಕರ್ತರು ಮನವಿ ಮಾಡಿಕೊಂಡಿದ್ದರು. ಮೋದಿ ಮೇಲಿನ ಅಭಿಮಾನ, ಕಾರ್ಯಕರ್ತರ ಮನವಿಗೆ ಸ್ಪಂದಿಸಿದ ಜನತೆ ಪ್ರಧಾನಿಗೆ ಅಭೂತಪೂರ್ವ ಸ್ವಾಗತ ಕೋರಿದರು. ಶುಕ್ರವಾರ ಮೋದಿ ನಾಮಪತ್ರ ಸಲ್ಲಿಸಲಿದ್ದು, ಮೇ 19ಕ್ಕೆ ವಾರಣಾಸಿಯಲ್ಲಿ ಚುನಾವಣೆ ನಡೆಯಲಿದೆ.

  • ಬಿಸಿಲಿಗೆ ಹೆದರಿ 1 ನಿಮಿಷಕ್ಕೆ ರ‍್ಯಾಲಿ ಮುಗಿಸಿದ ನಟ ಉಪೇಂದ್ರ

    ಬಿಸಿಲಿಗೆ ಹೆದರಿ 1 ನಿಮಿಷಕ್ಕೆ ರ‍್ಯಾಲಿ ಮುಗಿಸಿದ ನಟ ಉಪೇಂದ್ರ

    ಚಿತ್ರದುರ್ಗ: ರಿಯಲ್ ಸ್ಟಾರ್ ಉಪೇಂದ್ರ ಕೋಟೆನಾಡು ಚಿತ್ರದುರ್ಗದ ಬಿಸಿಲಿನ ತಾಪಕ್ಕೆ ಹೆದರಿ ಒಂದೇ ನಿಮಿಷದಲ್ಲಿ ತಮ್ಮ ಪ್ರಜಾಕೀಯ ಪಕ್ಷದ ರ‍್ಯಾಲಿಯನ್ನು ಮುಗಿಸಿದರು.

    ಚಿತ್ರದುರ್ಗ ಜಿಲ್ಲೆ ಹೊಸದುರ್ಗ ಪಟ್ಟಣದ ವೀರಭದ್ರಸ್ವಾಮಿ ದೇವಾಲಯದಿಂದ ರೋಡ್ ಶೋ ಆರಂಭವಾಗಬೇಕಿತ್ತು. ವೀರಭದ್ರ ಸ್ವಾಮಿ ದೇವಾಲಯದಲ್ಲಿ ಉಪೇಂದ್ರ ಪೂಜೆ ಸಲ್ಲಿಸಿ ರೋಡ್ ಶೋ ವಾಹನ ಏರಿ ತಕ್ಷಣ ಇಳಿದಿದ್ದಾರೆ. ಬಿಸಿಲಿಗೆ ಹೆದರಿ ಒಂದು ನಿಮಿಷದಲ್ಲೇ ರ‍್ಯಾಲಿ ಮುಗಿಸಿ ಹಿಂದಿರುಗಿದರು.

    ಉಪೇಂದ್ರ ತಮ್ಮ ಉತ್ತಮ ಪ್ರಜಾಕೀಯ ಪಕ್ಷದ ಪ್ರಚಾರಕ್ಕಾಗಿ ಚಿತ್ರದುರ್ಗಕ್ಕೆ ಆಗಮಿಸಿದರು. ಇಂದು ಬೆಳಗ್ಗೆ 9 ಗಂಟೆಗೆ ರೋಡ್ ಶೋ ನಿಗದಿಯಾಗಿತ್ತು. ಆದರೆ ನಟ ಉಪೇಂದ್ರ ಅರ್ಧ ಗಂಟೆ ತಡವಾಗಿ ರ‍್ಯಾಲಿಗೆ ಆಗಮಿಸಿದರು. ಬಳಿಕ ಉಪೇಂದ್ರ 1 ನಿಮಿಷದಲ್ಲಿ ಮಾತನಾಡಿ ರ‍್ಯಾಲಿ ಮುಗಿಸಿದರು.

    https://www.youtube.com/watch?v=_WlVfeGH3sk

  • ಬೆಂಗಳೂರಿನಲ್ಲಿ ಅಮಿತ್ ಶಾ ರೋಡ್ ಶೋ

    ಬೆಂಗಳೂರಿನಲ್ಲಿ ಅಮಿತ್ ಶಾ ರೋಡ್ ಶೋ

    ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬೆಂಗಳೂರಿನ ದಕ್ಷಿಣ ಕ್ಷೇತ್ರದಲ್ಲಿ ರೋಡ್ ಶೋ ನಡೆಸಿ ಮತಯಾಚನೆ ಮಾಡಿದ್ದಾರೆ.

    ನಗರದ  ಬನಶಂಕರಿಗೆ ಅಮಿತ್ ಶಾ ಅವರು ರಾತ್ರಿ 9 ಗಂಟೆಗೆ ಆಗಮಿಸಿದಾಗ ಬಿಜೆಪಿ ಕಾರ್ಯಕರ್ತರು ಮೊಬೈಲ್ ಲೈಟ್ ಆನ್ ಮಾಡಿ ಅವರನ್ನು ಸ್ವಾಗತಿಸಿದರು. ಅಮಿತ್ ಶಾ ಮತಯಾಚನೆಯ ಸಂದರ್ಭದಲ್ಲಿ ಬಿ.ಎಸ್.ಯಡಿಯೂರಪ್ಪ, ಆರ್.ಅಶೋಕ್, ವಿ.ಸೋಮಣ್ಣ, ಅಭ್ಯರ್ಥಿಗಳಾದ ತೇಜಸ್ವಿ ಸೂರ್ಯ ಮತ್ತು ಬೆಂಗಳೂರು ಉತ್ತರ ಕ್ಷೇತ್ರದ ಅಶ್ವಥ್‍ನಾರಾಯಣ ವಾಹನದ ವೇದಿಕೆ ಮೇಲೆ ನಿಂತಿದ್ದರು.

    ತೇಜಸ್ವಿನಿ ಅನಂತ್‍ಕುಮಾರ್ ವಾಹನ ಏರಿದ ಕೂಡಲೇ ಸೋಮಣ್ಣ ಅವರನ್ನು ಹಿಂದಕ್ಕೆ ಕಳುಹಿಸಿ ಯಡಿಯೂರಪ್ಪ ಪಕ್ಕದಲ್ಲೇ ತೇಜಸ್ವಿನಿ ಅನಂತ್‍ಕುಮಾರ್ ಅವರನ್ನು ಅಮಿತ್ ಶಾ ನಿಲ್ಲಿಸಿ ಮತ ಯಾಚನೆ ಮಾಡಿದರು. ತೆರೆದ ವಾಹನದಲ್ಲಿ ಸಂಚರಿಸುತ್ತಿದ್ದಾಗ ಕಾರ್ಯಕರ್ತರು “ಮೋದಿ ಮೋದಿ” ಘೋಷಣೆ ಕೂಗಿ ಬೆಂಬಲಿಸುತ್ತಿದ್ದರು.

    ರೋಡ್ ಶೋ ಹಿನ್ನೆಲೆಯಲ್ಲಿ ಬನಶಂಕರಿ ಬಸ್ ನಿಲ್ದಾಣದಿಂದ ಜೆಪಿ ನಗರ ಸಿಗ್ನಲ್ ವರೆಗಿನ ವಾಹನ ಸಂಚಾರವನ್ನು ಬಂದ್ ಮಾಡಲಾಗಿತ್ತು.

  • ಅಂಬಿ ಅಭಿಮಾನದ ಹೊಳೆಗೆ ಸಾಕ್ಷಿಯಾಯ್ತು ಸಕ್ಕರೆ ನಾಡು!

    ಅಂಬಿ ಅಭಿಮಾನದ ಹೊಳೆಗೆ ಸಾಕ್ಷಿಯಾಯ್ತು ಸಕ್ಕರೆ ನಾಡು!

    ಮಂಡ್ಯ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ಹೀಗಾಗಿ ಇಂದು ನಾಮಪತ್ರ ಸಲ್ಲಿಸಿ ಅಧಿಕೃತವಾಗಿ ಪ್ರಚಾರಕ್ಕೆ ಧುಮುಕಿದ್ದಾರೆ.

    ಮಂಡ್ಯದ ಸಿಲ್ವರ್ ಜ್ಯುಬಿಲಿ ಪಾರ್ಕಿನಲ್ಲಿ ಸುಮಲತಾ ಬೃಹತ್ ಸಮಾವೇಶ ನಡೆಸಿದ್ದು, ಈ ವೇಳೆ ಸುಮಲತಾ ಅವರಿಗೆ ನಟರಾದ ಯಶ್ ಹಾಗೂ ದರ್ಶನ್ ಎಡಬಲ ನಿಂತು ಮತ್ತಷ್ಟು ಬಲ ನೀಡಿದ್ದಾರೆ. ಅಲ್ಲದೆ ಈ ವೇಳೆ ಸಾವಿರಾರು ಮಂದಿ ಅಂಬಿ ಅಭಿಮಾನಿಗಳು ರೋಡ್ ಶೋದಲ್ಲಿ ಭಾಗಿಯಾಗಿದ್ದಾರೆ. ಸಮಲತಾ, ಯಶ್ ಹಾಗೂ ದರ್ಶನ್ ಜನರತ್ತ ಕೈ ಬೀಸುವ ಮೂಲಕ ನಾವು ನಿಮ್ಮೊಂದಿಗೆ ಇದ್ದೇವೆ ಎಂಬ ಸಂದೇಶವನ್ನು ಪಾಸ್ ಮಾಡಿದ್ದಾರೆ.

    ಒಟ್ಟಿನಲ್ಲಿ ಜೆಡಿಎಸ್ ಭದ್ರಕೋಟೆ ಎಂದೇ ಪ್ರಖ್ಯಾತವಾದ ಮಂಡ್ಯದಲ್ಲಿ ಸುಮಲತಾ ಇಂದು ರೋಡ್ ಶೋ ನಡೆಸುವ ಮೂಲಕ ರಣಕಹಳೆ ಮೊಳಗಿಸಿದ್ದಾರೆ.

    ಇಂದು ಬೆಳಗ್ಗೆ ಚಾಮುಂಡಿ ತಾಯಿಯ ದರ್ಶನ ಪಡೆದು, ಪೂಜೆ ಸಲ್ಲಿಸಿದ ಬಳಿಕ ಅಲ್ಲಿಂದ ನೇರವಾಗಿ ಮಂಡ್ಯ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ್ದರು. ಸುಮಾರು 11 ಗಂಟೆಯ ನಂತರ ಸುಮಲತಾ ಅವರು ತಮ್ಮ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಈ ಮೂಲಕ ಲೋಕಸಭಾ ಚುನಾವಣೆಗೆ ಮಂಡ್ಯ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

    ಡಿಸಿ ಕಚೇರಿಯಿಂದ ನಗರದ ವಿಶ್ವಶ್ವರಯ್ಯ ಪ್ರತಿಮೆಯ ಬಳಿ ಬಂದು ಮಾಲಾರ್ಪಣೆ ಮಾಡಿದ್ರು. ಇದಾದ ಬಳಿಕ ರೋಡ್ ಶೋ ಆರಂಭ ಮಾಡಿದ್ರು. ಈ ವೇಳೆ ನಟ ಯಶ್ ಹಾಗೂ ದರ್ಶನ್ ಜೊತೆಯಾದ್ರು. ರೋಡ್ ಶೋ ವೇಳೆ ಸಾವಿರಾರು ಅಂಬಿ ಅಭಿಮಾನಿಗಳು ಹಾಗೂ ಜಾನಪದ ಕಲಾತಂಡಗಳು ಸುಮಲತಾ ಅವರಿಗೆ ಸಾಥ್ ನೀಡಿತ್ತು.

    ರೋಡ್ ಶೋ ವೇಳೆ ಅಭಿಮಾನಿಗಳು ತಮ್ಮ ನೆಚ್ಚಿನ ನಟರನ್ನು ನೋಡಲು ಮರ ಹತ್ತಿದ್ದಾರೆ. ರೋಡ್ ಶೋನಿಂದಾಗಿ ಹೈವೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು. ಹೀಗಾಗಿ ಸಾಲುಗಟ್ಟಿ ನಿಂತ ವಾಹನಗಳ ಮೇಲೆ ನಿಂತು ಅಭಿಮಾನಿಗಳು ಮೆರವಣಿಗೆ ವೀಕ್ಷಿಸಿದ್ದಾರೆ.

  • ರೋಡ್ ಶೋ ವೇಳೆ ಜಾರಿಬಿದ್ದ ಅಮಿತ್ ಶಾ

    ರೋಡ್ ಶೋ ವೇಳೆ ಜಾರಿಬಿದ್ದ ಅಮಿತ್ ಶಾ

    ಭೋಪಾಲ್: ಶನಿವಾರ ಮಧ್ಯಪ್ರದೇಶದಲ್ಲಿ ಚುನಾವಣೆ ಪ್ರಚಾರಕ್ಕಾಗಿ ವಾಹನವೊಂದರ ಮೇಲೆ ನಿಂತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ರೋಡ್ ಶೋ ನಡೆಸುತ್ತಿದ್ದ ವೇಳೆ ಕಾಲು ಜಾರಿ ಬಿದ್ದಿದ್ದಾರೆ.

    ಮಧ್ಯ ಪ್ರದೇಶದ ಚುನಾವಣಾ ಪ್ರಚಾರದಲ್ಲಿ ಅಮೀತ್ ಶಾ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ರೋಡ್ ಶೋ ನಡೆಸುತ್ತಿದ್ದ ವಾಹನದ ಮೇಲೆ ನಿಂತಿದ್ದ ಅಮಿತ್ ಶಾ ಅವರು ಕಾಲು ಜಾರಿ ಬಿದ್ದಿದ್ದಾರೆ. ತಕ್ಷಣ ಜಾಗ್ರತಗೊಂಡ ಭದ್ರತಾ ಸಿಬ್ಬಂದಿ ಅಮಿತ್ ಶಾ ಅವರನ್ನು ಮೇಲೆತ್ತಿ ಅವರನ್ನು ಹೆಚ್ಚಿನ ಅಪಾಯದಿಂದ ಪಾರು ಮಾಡಿದ್ದಾರೆ.

    ಸದ್ಯ ಘಟನೆಯಲ್ಲಿ ಅಮಿತ್ ಶಾ ಅವರಿಗೆ ಯಾವುದೇ ಪೆಟ್ಟಾಗಿಲ್ಲ. ಹೀಗಾಗಿ ರೋಡ್ ಶೋ ಮುಗಿಸಿದ ಬಳಿಕ ಶಿವಪುರಿ ಜಿಲ್ಲೆಯಲ್ಲಿ ನಡೆದ ಸಾರ್ವಜನಿಕರ ಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ವಾಕ್ಸಮರ ಮುಂದುವರಿಸುವ ಮೂಲಕ ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಸಿದ್ದರಾಮಯ್ಯ ಉಚಿತ ಅಕ್ಕಿ ನೀಡಿದ್ರು, ಬಿಎಸ್‍ವೈ ಏನು ಮಾಡಿದ್ದಾರೆ : ರಾಹುಲ್ ಗಾಂಧಿ

    ಸಿದ್ದರಾಮಯ್ಯ ಉಚಿತ ಅಕ್ಕಿ ನೀಡಿದ್ರು, ಬಿಎಸ್‍ವೈ ಏನು ಮಾಡಿದ್ದಾರೆ : ರಾಹುಲ್ ಗಾಂಧಿ

    ತುಮಕೂರು: ರಾಜ್ಯದ ಜನರ ಹಸಿವನ್ನು ನೀಗಿಸಲು ಸಿದ್ದರಾಮಯ್ಯ ಅವರು ಉಚಿತ ಅಕ್ಕಿ ನೀಡಿದ್ದಾರೆ. ಆದರೆ ಬಿಎಸ್‍ವೈ ಅಧಿಕಾರ ಅವಧಿಯಲ್ಲಿದ್ದಾಗ ಏನು ಮಾಡಿದ್ದರು ಎಂದು ಪ್ರಶ್ನಿಸಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ರಾಜ್ಯ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಇಂದು ನಗರದ ಟೌನ್ ಹಾಲ್‍ನಲ್ಲಿ ಸೇರಿದ್ದ ಸಾವಿರಾರು ಜನರನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಕೇಂದ್ರ ನೀತಿಗಳ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಮೋದಿಯವರಿಂದ ಯಾರ ಖಾತೆಗಾದರೂ 15 ಲಕ್ಷ ರೂ. ಪಾವತಿ ಆಗಿದ್ಯಾ ಎಂದು ಕರ್ನಾಟಕದ ಯುವಕರು ಉತ್ತರಿಸಬೇಕು ಎಂದರು. ಅಷ್ಟೇ ಅಲ್ಲದೇ ಹಣಕಾಸು ಸಚಿವ ಅರುಣ್ ಜೇಟ್ಲಿ ನೀರವ್ ಮೋದಿಯ ವಕೀಲರು ಎಂದು ಹೇಳಿ ವಾಗ್ದಾಳಿ ನಡೆಸಿದರು.

    ಇದಕ್ಕೂ ಮುನ್ನ ಸಿದ್ದಗಂಗಾ ಮಠಕ್ಕೆ ಭೇಟಿಕೊಟ್ಟ ರಾಹುಲ್ ಗಾಂಧಿ ಶ್ರೀ ಶಿವಕುಮಾರ ಶ್ರೀಗಳ ಆಶೀರ್ವಾದ ಪಡೆದರು. ಈ ವೇಳೆ ಶ್ರೀಗಳು ರಾಹುಲ್ ಗೆ ಅಕ್ಷತೆ ಹಾಕಿ ಆಶೀರ್ವಾದ ಮಾಡಿದರು. ಈ ವೇಳೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹಾಗೂ ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮಠಕ್ಕೆ ಭೇಟಿ ನೀಡಿದ್ದ ಸಮಯದ ಫೋಟೋಗಳನ್ನು ಕಿರಿಯ ಶ್ರೀಗಳು ರಾಹುಲ್ ಅವರಿಗೆ ತೋರಿಸಿದರು. ಶ್ರೀಗಳ ಜೊತೆ ಸುಮಾರು 15 ನಿಮಿಷ ಕಾಲ ಕಳೆದ ರಾಹುಲ್ ಮಠದಲ್ಲಿ ತಯಾರಿಸಿದ ಚಪಾತಿ ಸಾಗು, ಅನ್ನ ಸಾಂಬಾರ್, ಪಾಯಸ ಹಾಗೂ ಪರಂಗಿ ಹಣ್ಣು ಸೇವಿಸಿದರು.

    ರಾಹುಲ್ ಬಳಿಕ ಕುಣಿಗಲ್ ಪಟ್ಟಣದಲ್ಲಿ ಮಾತನಾಡಿ ಜೆಡಿಎಸ್ ಬಿಜೆಪಿ `ಬಿ’ ಟೀಮ್ ಎಂದು ಪುನರುಚ್ಚರಿಸಿದರು. ನುಡಿದಂತೆ ನಡೆ ಎಂದು ಬಸವಣ್ಣನವರು ಹೇಳಿದ್ದಾರೆ. ಆದರೆ ಮೋದಿ ನುಡಿದಂತೆ ನಡೆಯುತ್ತಿಲ್ಲ ಎಂದು ಕನ್ನಡದಲ್ಲೇ ಭಾಷಣ ಮಾಡಿದರು. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬರುವುದು ಖಚಿತ. ನಾವು ಕರ್ನಾಟಕದಲ್ಲಿ ಗೆಲ್ಲುತ್ತೇವೆ. ಇದು ನಿಮ್ಮ ಸರ್ಕಾರ. ಯುವಕರಿಗಾಗಿ, ಮಹಿಳೆಯರಿಗಾಗಿ ಹಾಗೂ ರೈತರಿಗಾಗಿ ಕಾರ್ಯಮಾಡುತ್ತೇವೆ ಎಂದರು. ಈ ಮಧ್ಯೆ ಹೆಬ್ಬೂರಿನಲ್ಲಿ ಅಭಿಮಾನಿಗಳು ಇಂದಿರಾಗಾಂಧಿ ಫೋಟೋ ಕೊಟ್ಟು ಅಭಿಮಾನ ಮೆರೆದರು.

  • ಸಿದ್ದರಾಮಯ್ಯ ಸರ್ಕಾರದ ಟ್ರಾನ್ಸ್ ಫಾರ್ಮರ್ ಸುಟ್ಟುಹೋಗಿದೆ, ಅದನ್ನು ಬದಲಿಸುವ ಬದಲು ಕಿತ್ತು ಬಿಸಾಕಿ: ಅಮಿತ್ ಶಾ

    ಸಿದ್ದರಾಮಯ್ಯ ಸರ್ಕಾರದ ಟ್ರಾನ್ಸ್ ಫಾರ್ಮರ್ ಸುಟ್ಟುಹೋಗಿದೆ, ಅದನ್ನು ಬದಲಿಸುವ ಬದಲು ಕಿತ್ತು ಬಿಸಾಕಿ: ಅಮಿತ್ ಶಾ

    ಶಿವಮೊಗ್ಗ: ಬೆಂಗಳೂರಿನಲ್ಲಿರುವ ಸಿದ್ದರಾಮಯ್ಯ ಸರ್ಕಾರದ ಟ್ರಾನ್ಸ್ ಫಾರ್ಮರ್ ಸುಟ್ಟುಹೋಗಿದೆ, ಅದನ್ನು ಬದಲಿಸುವ ಬದಲು ಕಿತ್ತು ಬಿಸಾಕಿ ಎಂದು ಬಿಜೆಪಿ ರಾಷ್ಟಾಧ್ಯಕ್ಷ ಅಮಿತ್ ಶಾ ಸಿಎಂ ಸಿದ್ದರಾಮಯ್ಯ ವಿರುದ್ಧ ಕಟುವಾಗಿ ಕಿಡಿಕಾರಿದ್ದಾರೆ.

    ಶಿವಮೊಗ್ಗದಲ್ಲಿ ಗಾಂಧಿ ಬಜಾರ್ ರಸ್ತೆಯಲ್ಲಿ ಭರ್ಜರಿ ರೋಡ್ ಶೋ ನಡೆಸಿ ಮಾತನಾಡಿದ ಅವರು, ಮೋದಿ ದೊಡ್ಡವಿದ್ಯುತ್ ಘಟಕ ಇದ್ದಂತೆ. ಈ ವಿದ್ಯುತ್ ಪಡೆದು ಮನೆಗೆ ಪೂರೈಸುವ ಟ್ರಾನ್ಸ್ ಫಾರ್ಮರ್ ಇದ್ದಂತೆ ಸಿದ್ದರಾಮಯ್ಯ. ಬೆಂಗಳೂರಿನಲ್ಲಿರುವ ಸಿದ್ದರಾಮಯ್ಯ ಟ್ರಾನ್ಸ್ ಫಾರ್ಮರ್ ಸುಟ್ಟು ಹೋಗಿದೆ. ಅದನ್ನು ಕಿತ್ತು ಹಾಕಿ ಹೊಸದಾಗಿ ಯಡಿಯೂರಪ್ಪ ಟ್ರಾನ್ಸ್ ಫಾರ್ಮರ್ ತನ್ನಿ. ಆಗ ಇಡೀ ರಾಜ್ಯಕ್ಕೆ ಸಮರ್ಪಕ ವಿದ್ಯುತ್ ಸರಬರಾಜಗುತ್ತದೆ ಎಂದರು.

    ಯಾವಾಗ ಬಿಎಸ್‍ವೈ ಅಧಿಕಾರಕ್ಕೆ ಬರುತ್ತಾರೋ ಅಂದು ಇಡೀ ರಾಜ್ಯಕ್ಕೆ ಸಮರ್ಪಕ ವಿದ್ಯುತ್ ಸರಬರಾಜು ಆಗುತ್ತದೆ. ಸಿದ್ದರಾಮಯ್ಯ ಅವರ ಸರ್ಕಾರ ಭ್ರಷ್ಟಾಚಾರ ಸರ್ಕಾರ ಎಂಬುದಕ್ಕೆ ಸಿಎಂ 40 ಲಕ್ಷ ರೂ. ಮೌಲ್ಯದ ವಾಚ್ ಹಾಕಿರುವುದೇ ಸಾಕ್ಷಿ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

    ಕೇಂದ್ರ ಸರ್ಕಾರ ಇದುವರೆಗೂ 112 ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳು ಜನರಿಗೆ ತಲುಪಿಸುವಲ್ಲಿ ಸಿದ್ದರಾಮಯ್ಯ ಅಡ್ಡಿಯಾಗಿದ್ದಾರೆ. ಐದು ವರ್ಷದ ಸಿದ್ದರಾಮಯ್ಯ ಅವರ ಆಡಳಿತ ಅವಧಿಯಲ್ಲಿ ಏನೂ ಕೆಲಸ ಮಾಡಿಲ್ಲ. ಕಾಂಗ್ರೆಸ್ ಸರ್ಕಾರದವರು ಕೇವಲ ನಿದ್ದೆ ಮಾಡಿದ್ದಾರೆ. ಸಿದ್ದರಾಮಯ್ಯರಂತ ನಟರನ್ನು ನನ್ನ ಜೀವನದಲ್ಲೇ ನೋಡಿಲ್ಲ. ಒಂದೇ ಒಂದು ಕೆಲಸ ಆಗದಿದ್ದರೂ ದೆಹಲಿಗೆ ಹೋಗಿ ಇಡೀ ರಾಷ್ಟ್ರದಲ್ಲಿ ನಾನೊಬ್ಬನೇ ಅಭಿವೃದ್ಧಿ ಮಾಡುತ್ತಿದ್ದೇನೆ ಎಂದು ಪೋಸ್ ಕೊಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

    ಇದೇ ಮೊದಲ ಬಾರಿಗೆ ಯಡಿಯೂರಪ್ಪ ತವರಲ್ಲಿ ಪಕ್ಷದ ಪರ ಪ್ರಚಾರ ಮಾಡಿದ ಅಮಿತ್ ಶಾ, ಶಿವಮೊಗ್ಗದ ರಾಮಣ್ಣ ಶೆಟ್ಟಿ ಪಾರ್ಕ್ ನಿಂದ ಗೋಪಿ ಸರ್ಕಲ್ ವರೆಗೂ ರೋಡ್ ಶೋ ನಡೆಸಿದರು. ಈ ಸಂದರ್ಭದಲ್ಲಿ ಶಿವಪ್ಪ ನಾಯಕ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

  • 2ನೇ ದಿನಕ್ಕೆ ಕಾಲಿಟ್ಟ ರಾಗಾ ಜನಾಶೀರ್ವಾದ ಯಾತ್ರೆ- ಕೊಪ್ಪಳದಲ್ಲಿಂದು ರೋಡ್ ಶೋ

    2ನೇ ದಿನಕ್ಕೆ ಕಾಲಿಟ್ಟ ರಾಗಾ ಜನಾಶೀರ್ವಾದ ಯಾತ್ರೆ- ಕೊಪ್ಪಳದಲ್ಲಿಂದು ರೋಡ್ ಶೋ

    ಕೊಪ್ಪಳ: ಕರ್ನಾಟಕದಲ್ಲಿ ಮತ್ತೆ ಕಾಂಗ್ರೆಸ್‍ನ್ನು ಅಧಿಕಾರಕ್ಕೆ ತರಬೇಕೆಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಮ್ಮಿಕೊಂಡಿರುವ ಯಾತ್ರೆ 2ನೇ ದಿನಕ್ಕೆ ಕಾಲಿಟ್ಟಿದ್ದು, ಇಂದಿನ ಪ್ರವಾಸವನ್ನು ರೋಡ್ ಶೋ ಮೂಲಕ ಆರಂಭಿಸಲಿದ್ದಾರೆ. ಇದನ್ನೂ ಓದಿ: ಮೋದಿಯವರೇ ಅಭಿವೃದ್ಧಿ ಬಗ್ಗೆ ಸಿದ್ದರಾಮಯ್ಯನವರ ಬಳಿ ಪಾಠ ಕೇಳಿ ತಿಳಿದುಕೊಳ್ಳಿ: ರಾಹುಲ್ ಗಾಂಧಿ

    ಶನಿವಾರ 97 ಕಿಲೋ ಮೀಟರ್ ಯಾತ್ರೆ ಮಾಡಿದ ರಾಹುಲ್, ಇಂದು ಕೊಪ್ಪಳದಲ್ಲಿ ರೋಡ್ ಶೋ ಮೂಲಕ ಯಾತ್ರೆ ಶುರು ಮಾಡಲಿದ್ದಾರೆ. ಇಂದು ಬೆಳಿಗ್ಗೆ 9-30 ಗಂಟೆಗೆ ಕುಕನೂರಿನಿಂದ ಹೊರಟ ರಾಹುಲ್ ಗಾಂಧಿ ಕುಷ್ಟಗಿ ತಾಲೂಕು ಬಂಡಿ ಕ್ರಾಸ್ ನಲ್ಲಿ ರೋಡ್ ಶೋ ನಲ್ಲಿ ನೆಡಸಲಿದ್ದಾರೆ. ನಂತರ ಬೆಳಿಗ್ಗೆ 11 ಗಂಟೆಗೆ ಕುಷ್ಟಗಿಯಲ್ಲಿ, ಮಧ್ಯಾಹ್ನ 01-15 ಗಂಟೆಗೆ ಕನಕಗಿರಿಯಲ್ಲಿ, 2-05 ಗಂಟೆಗೆ ಗಂಗಾವತಿಯಲ್ಲಿ ರೋಡ್ ಶೋ ಮಾಡಲಿದ್ದಾರೆ. ಮಧ್ಯಾಹ್ನ 03 ಗಂಟೆಗೆ ಕಾರಟಗಿಯಲ್ಲಿ ಪಕ್ಷದ ವತಿಯಿಂದ ಆಯೋಜಿಸಲಾಗಿರುವ ಸಾರ್ವಜನಿಕ ಸಭೆಯಲ್ಲಿ ರಾಹುಲ್ ಗಾಂಧಿ ಭಾಗಿಯಾಗಲಿದ್ದಾರೆ. ಇದನ್ನೂ ಓದಿ: ಕರ್ನಾಟಕದ ಗೆಲುವಿನಿಂದ ಕಾಂಗ್ರೆಸ್ಸಿಗೆ ದೇಶದಲ್ಲೇ ಹೊಸ ಶಕ್ತಿ ಬರುತ್ತೆ: ಸಿಎಂ

    ಶನಿವಾರ ಸಾರ್ವಜನಿಕ ಸಭೆಗಳ ಮೂಲಕ ಚುಣಾವಣೆ ಪ್ರಚಾರಕ್ಕೆ ಚಾಲನೆ ನೀಡಿದ ರಾಹುಲ್ ಗಾಂಧಿ ಇಂದು ಭರ್ಜರಿ ರೋಡ್ ಶೋ ನಡೆಸಲಿದ್ದಾರೆ. ಈ ಮೂಲಕ ಜನರಿಗೆ ಹತ್ತಿರವಾಗೋದು ರಾಹುಲ್ ಗಾಂಧಿ ಪ್ಲಾನ್ ಮಾಡಿದ್ದಾರೆ. ಸೋಮವಾರ ಕೊಪ್ಪಳ ವಿಧಾನಸಭಾ ಹೊರತುಪಡಿಸಿ ಉಳಿಸ ನಾಲ್ಕು ವಿಧಾನಸಭೆ ಚುಣಾವಣೆಯಲ್ಲಿ ರೋಡ್ ಶೋ ನೆಡಸಲಿದ್ದಾರೆ. ಇದನ್ನೂ ಓದಿ: ನಿಮ್ಮ ಮುಖ ಕನ್ನಡಿಯಲ್ಲಿ ನೋಡಿ, ಆಮೇಲೆ ಬೇರೆಯವರ ಬಗ್ಗೆ ಮಾತಾಡಿ: ಮೋದಿಗೆ ಅಂಬಿ ಟಾಂಗ್