Tag: ರೋಡ್ ಶೋ

  • ದುಡ್ಡು ಕೊಟ್ಟು ಮೋದಿ ರೋಡ್ ಶೋಗೆ ಜನ ಕರೆಸುತ್ತಾರೆ – ಸಿದ್ದರಾಮಯ್ಯ ಕಿಡಿ

    ದುಡ್ಡು ಕೊಟ್ಟು ಮೋದಿ ರೋಡ್ ಶೋಗೆ ಜನ ಕರೆಸುತ್ತಾರೆ – ಸಿದ್ದರಾಮಯ್ಯ ಕಿಡಿ

    ಬೆಳಗಾವಿ: ದುಡ್ಡು ಕೊಟ್ಟು ಮೋದಿ (Narendra Modi) ರೋಡ್ ಶೋಗೆ (Road Show) ಜನ ಕರೆಸುತ್ತಾರೆ. ಪ್ರವಾಹ, ಕೊರೋನ ಇದ್ದಾಗ ಇವರು ಬರಲಿಲ್ಲ. ಈಗ ಚುನಾವಣೆ ಬಂದಿದೆ. ಅದಕ್ಕೆ ಪದೇ ಪದೇ ಬರುತ್ತಾರೆ, ರೋಡ್ ಶೋ ಮಾಡುತ್ತಾರೆ. ಇವರು ಒಂದಿಷ್ಟು ಜನರನ್ನು ಇಟ್ಟುಕೊಂಡಿದ್ದಾರೆ. ಅವರು ಮೋದಿ ಮೋದಿ ಎಂದು ಕೂಗುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮೋದಿ ವಿರುದ್ಧ ಹರಿಹಾಯ್ದರು.

    ಬೆಳಗಾವಿ (Belagavi) ತಾಲೂಕಿನ ಪಂತ ಬಾಳೇಕುಂದ್ರಿಯಲ್ಲಿ ನಡೆದ ಪ್ರಜಾಧ್ವನಿ (Prajadhwani) ಯಾತ್ರೆಯಲ್ಲಿ ಮಾತನಾಡಿದ ಅವರು, ಬೆಳಗಾವಿಗೆ ಮೋದಿ ಬಂದಾಗ ಏನಾದರೂ ಘೋಷಣೆ ಮಾಡಿದ್ದಾರಾ? ಕೃಷ್ಣ ಮೇಲ್ದಂಡೆ, ಮಹದಾಯಿ ಬಗ್ಗೆ ಮಾತನಾಡಲಿಲ್ಲ. ಹೊಸ ಯೋಜನೆಗಳನ್ನು ಘೋಷಿಸಲಿಲ್ಲ. ಮಲ್ಲಿಕಾರ್ಜುನ ಖರ್ಗೆಗೆ ಕಾಂಗ್ರೆಸ್ ಅವಮಾನ ಮಾಡಿದೆ ಎನ್ನುತ್ತಾರೆ. ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ ಜೋಶಿ ಸೈಡ್ ಲೈನ್ ಮಾಡಿದ್ಯಾರು ಮೋದಿಜಿ? ಯಡಿಯೂರಪ್ಪನವರನ್ನು ಕಿತ್ತು ಹಾಕಿದ್ದು ಯಾರು ಎಂದು ಪ್ರಶ್ನಿಸಿದರು.

    ಈ ರಾಜ್ಯ ಉಳಿಯಬೇಕೆಂದರೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ಆದರೆ ಈ ಭಂಡರು ಅದಕ್ಕೂ ಬಿಡುವುದಿಲ್ಲ. ಇವರ ಚರ್ಮ ಘೇಂಡಾಮೃಗದ ಚರ್ಮದ ತರಹ ಆಗಿಬಿಟ್ಟಿದೆ. ದಬ್ಬಣ ತೆಗೆದು ಚುಚ್ಚಿದರೂ ಹೋಗುವುದಿಲ್ಲ. ಚುನಾವಣೆ ಬರುತ್ತಿದ್ದಂತೆ ಮೋದಿ ಈಗ ರೋಡ್ ಶೋ ಮಾಡುತ್ತಿದ್ದಾರೆ. ಇದರ ನಡುವೆ ಕೆಲವರು ಮೋದಿ ಎಂದು ಜೈಕಾರ ಹಾಕುತ್ತಾರೆ. ಈಗ ಅನೇಕರು ಮೋದಿ ಎಂದು ಘೋಷಣೆ ಹಾಕುತ್ತಿಲ್ಲ. ಏಕೆಂದರೆ ಇವರು 2 ಕೋಟಿ ಜನರಿಗೆ ಉದ್ಯೋಗ ನೀಡಲಿಲ್ಲ. ಉದ್ಯೋಗ ಕೊಡುವುದಾಗಿ ಹೇಳಿ ಈಗ ಪಕೋಡ ಮಾರುವುದಕ್ಕೆ ಹೇಳುತ್ತಿದ್ದಾರೆ ಎಂದು ಕಿಡಿ ಕಾರಿದರು.

    ಬಸವಾದಿ ಶರಣರು ನುಡಿದಂತೆ ನಡೆದವರು. ಅವರೇ ನನ್ನ ಪ್ರೇರಣೆ. ನನ್ನ ಅವಧಿಯಲ್ಲಿ ಕೊಟ್ಟ ಭರವಸೆಗಳನ್ನು ಈಡೇರಿಸಿದ್ದೇನೆ. ಬಿಜೆಪಿಯವರು 600 ಭರವಸೆಗಳ ಪೈಕಿ ಕೇವಲ 50 ಭರವಸೆಗಳನ್ನು ಮಾತ್ರ ಈಡೇರಿಸಿದ್ದಾರೆ. ಬಿಜೆಪಿಯವರು ಎಂದೂ ಜನರ ಬಳಿ ಬರುವುದಿಲ್ಲ ಬಿಡಿ. ಬೇಕಿದ್ದರೆ ಹಿಂದಿನ ಚುನಾವಣೆಯಲ್ಲಿ ಸೋತ ಸಂಜಯ್ ಪಾಟೀಲ್ ಅವರನ್ನು ಕೇಳಿ. ಅವರು ಯಾವತ್ತಾದರೂ ನಿಮ್ಮ ಬಳಿ ಬಂದಿದ್ದಾರಾ ಎಂದು ಪ್ರಶ್ನೆ ಮಾಡಿದರು.

    ರಾಜಕೀಯ ಎಂದರೆ ಜನರ ಸೇವೆ ಮಾಡುವುದು. ಅದನ್ನು ಲಕ್ಷ್ಮಿ ಹೆಬ್ಬಾಳ್ಕರ್ ಪಾಲಿಸುತ್ತಿದ್ದಾರೆ. ವಿರೋಧ ಪಕ್ಷದಲ್ಲಿ ಇದ್ದುಕೊಂಡೇ ಹೆಬ್ಬಾಳ್ಕರ್ ಇಷ್ಟೊಂದು ಕೆಲಸಗಳನ್ನು ಮಾಡಿದ್ದಾರೆ. 2012ರಲ್ಲಿ ಶಾಸಕಿ ಆಗಿದ್ದರೆ ಇನ್ನೂ ಅವರು ಸಾಕಷ್ಟು ಕೆಲಸಗಳನ್ನು ಮಾಡುತ್ತಿದ್ದರು. 2023ರಲ್ಲೂ ಹೆಬ್ಬಾಳ್ಕರ್ ಗೆದ್ದು ಸಂಜಯ್ ಅವರ ಠೇವಣಿ ಜಪ್ತಿಯಾಗಬೇಕು. ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ ಈ ಸಲ ಚುನಾವಣೆಯಲ್ಲಿ ಹೆಬ್ಬಾಳ್ಕಾರ್ ಗೆಲ್ಲುವುದು ಅಷ್ಟೇ ಸತ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದನ್ನೂ ಓದಿ: ಜೆಡಿಎಸ್‌ಗೆ ಮತ ಹಾಕಿದ್ರೆ ಬಿಜೆಪಿಗೆ ಮತ ಹಾಕಿದಂತೆ: ಜಮೀರ್ ಅಹ್ಮದ್

    ಬೆಲೆ ಏರಿಕೆಯಿಂದಾಗಿ ದೇಶದ ಹೆಣ್ಣುಮಕ್ಕಳು ಹೈರಾಣಾಗಿದ್ದಾರೆ. ಮಾರ್ಚ್ 1ರಂದು ಸಿಲಿಂಡರ್ ದರ 50 ರೂ. ಹೆಚ್ಚಾಗಿದೆ. ಒಂದು ವರ್ಷಕ್ಕೆ ನಾಲ್ಕೂವರೆ ಲಕ್ಷ ಕೋಟಿ ರೂ. ತೆರಿಗೆ ಕೇಂದ್ರಕ್ಕೆ ಹೋಗುತ್ತದೆ. ಆದರೆ ಕೇಂದ್ರ ಕೇವಲ ನಮಗೆ 50 ಸಾವಿರ ಕೋಟಿ ರೂ. ನೀಡುತ್ತದೆ. ಕೇಂದ್ರ ಸರ್ಕಾರ ನಮ್ಮನ್ನು ಸುಲಿಗೆ ಮಾಡುತ್ತಿದೆ. ಮೋದಿ ಆಡಳಿತಕ್ಕೆ ಬಂದಮೇಲೆ ಅನುದಾನಗಳು ಕಡಿತಗೊಂಡಿವೆ ಎಂದು ವಾಗ್ದಾಳಿ ನಡೆಸಿದರು.

    ಕರ್ನಾಟಕ ಸರ್ಕಾರ 77,750 ಕೋಟಿ ರೂ. ಸಾಲ ಪಡೆದಿದೆ. ಈ ಹಿಂದೆ ಎಂದೂ ಇಷ್ಟು ಸಾಲ ಮಾಡಿರಲಿಲ್ಲ. ನನ್ನ ಕಾಲದಲ್ಲಿ 2,42,000 ಕೋಟಿ ರೂ. ಸಾಲ ಇತ್ತು. ಈಗ ರಾಜ್ಯದ ಸಾಲ 5,54,000 ಕೋಟಿ ರೂ. ಪ್ರತಿಯೊಬ್ಬನ ತಲೆ ಮೇಲೆ 75 ಸಾವಿರ ರೂ. ಸಾಲ ಇದೆ. ಇವತ್ತು ಕರ್ನಾಟಕ ದಿವಾಳಿ ಮಾಡಿದ್ದಾರೆ. ಇವರು ರೈತರ ಸುಲಿಗೆ, ಬಡವರ ಸುಲಿಗೆ, ಮಹಿಳೆಯರು, ಯುವಕರು, ಹಿಂದುಳಿದವರು, ಅಲ್ಪಸಂಖ್ಯಾತರು, ದಲಿತರ ಸುಲಿಗೆ ಮಾಡಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ಎಸ್‍ಪಿ ಶಾಸಕನ 7 ಕೋಟಿ ರೂ ಮೌಲ್ಯದ ಅಕ್ರಮ ಆಸ್ತಿ ವಶ

    ರಾಣಿ ಚೆನ್ನಮ್ಮ ಜಯಂತಿ ಮಾಡಿದ್ದೇ ನಾವು. ರಾಯಣ್ಣ ಸಮಾಧಿ ಸ್ಥಳ ಅಭಿವೃದ್ಧಿ ಮಾಡಿದ್ದೇ ನಾನು ಎಂದು ನುಡಿದರು.

  • ಬೆಳಗಾವಿಯಲ್ಲಿ ಭರ್ಜರಿ ರೋಡ್‌ ಶೋ – ಮೋದಿಯಿಂದ ಮತ ಬೇಟೆ

    ಬೆಳಗಾವಿಯಲ್ಲಿ ಭರ್ಜರಿ ರೋಡ್‌ ಶೋ – ಮೋದಿಯಿಂದ ಮತ ಬೇಟೆ

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (Narendra Modi) ಬೆಳಗಾವಿ ನಗರದಲ್ಲಿ (Belagavi City) ಭರ್ಜರಿ 10.7 ಕಿ.ಮೀ ರೋಡ್‌ ಶೋ (Road Show) ಮಾಡುವ ಮೂಲಕ ಮತಬೇಟೆ ನಡೆಸಿದ್ದಾರೆ.

    ಶಿವಮೊಗ್ಗ ವಿಮಾನ ನಿಲ್ದಾಣ ಸೇರಿದಂತೆ ಹಲವು ಕಾಮಗಾರಿಗಳ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ನಡೆಸಿದ ಮೋದಿ ಮಧ್ಯಾಹ್ನ 2:35ರ ವೇಳೆಗೆ ಬೆಳಗಾವಿ ಪಿಟಿಎಸ್ ಮೈದಾನಕ್ಕೆ ಹೆಲಿಕಾಪ್ಟರ್ ಮೂಲಕ ಆಗಮಿಸಿದರು. ನಂತರ ಮೋದಿ ಕಾರನ್ನು ಏರಿದರು. ಕಾರಿನಲ್ಲಿ ನಿಂತಿದ್ದ ಮೋದಿ ಅವರಿಗೆ ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಅಭಿಮಾನಿಗಳು ಹೂ ಮಳೆ ಸುರಿಸುವ ಮೂಲಕ ಭವ್ಯವಾದ ಸ್ವಾಗತ ನೀಡಲಾಯಿತು.

    ಚನ್ನಮ್ಮ ವೃತ್ತದಿಂದ ಆರಂಭಗೊಂಡಿದ್ದ ರೋಡ್‌ಶೋದಲ್ಲಿ ಮುಖ್ಯ ವೇದಿಕೆವರೆಗಿನ ಪ್ರಮುಖ ಎಂಟು ಸ್ಥಳಗಳಲ್ಲಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ವಿವಿಧ ಸಮುದಾಯಗಳ ಜನರಿಗೆ ಅವಕಾಶ ಮಾಡಿಕೊಡಲಾಗಿತ್ತು.

    ಧರ್ಮವೀರ ಸಂಭಾಜಿ ವೃತ್ತ ಮತ್ತು ರಾಮಲಿಂಗ್‌ ಖಿಂಡ್‌ ಗಲ್ಲಿಯ ಅಶೋಕವೃತ್ತ, ಟಿಳಕ್‌ ವೃತ್ತಗಳಲ್ಲಿ ಮೋದಿ ರೋಡ್‌ ಶೋಗೆ ಹೂಮಳೆಯ ಸ್ವಾಗತ ನೀಡಲಾಯಿತು. ಮೋದಿ ಸಾಗುವ ಮಾರ್ಗದಲ್ಲಿ ರಂಗೋಲಿ ಹಾಕಲಾಗಿತ್ತು. ನಗರ ಕೇಸರಿ ಮಯವಾಗಿದ್ದರೆ, ಅಭಿಮಾನಿಗಳು ಕೇಸರಿ ಶಾಲು ಧರಿಸಿದ್ದರು. ಇದನ್ನೂ ಓದಿ: ಯಡಿಯೂರಪ್ಪರ ಭಾಷಣ, ಜೀವನ ಮುಂದಿನ ಪೀಳಿಗೆಗೆ ಪ್ರೇರಣೆ: ಮೋದಿ

    ರಸ್ತೆಯ ಇಕ್ಕೆಲಗಳಲ್ಲಿ ಜನ ನಿಂತು ಮೋದಿ ಅವರಿಗೆ ಜಯಘೋಷ ಹಾಕುತ್ತಿದ್ದರು. ಎರಡೂ ಬದಿಯ ಕಟ್ಟಡದ ಮೇಲೆ ಜನರು ನಿಂತು ಮೋದಿಗೆ ಜೈಕಾರ ಹಾಕುತ್ತಿದ್ದರು. ಹೂಮಳೆ ಎಷ್ಟು ಬಿದ್ದಿತ್ತು ಅಂದರೆ ಕಾರಿನ ಮೇಲಿನ ಭಾಗ (ಟಾಪ್‌) ಮತ್ತು ಮುಂಭಾಗದ ಬಾನೆಟ್‌ ಪೂರ್ತಿ ಹೂ ಬಿದ್ದಿತ್ತು. ಹೆಣ್ಣಮಕ್ಕಳು ಕೇಸರಿ ಪೇಟಾ ಧರಿಸಿ ಪೂರ್ಣ ಕುಂಭ ಸ್ವಾಗತಿಸಿದರು. ಅಭಿಮಾನಿಗಳ ಉತ್ಸಾಹದಲ್ಲಿದ್ದರೆ ಮೋದಿ ಅಷ್ಟೇ ಉತ್ಸಾಹದಿಂದ ಅಭಿಮಾನಿಗಳಿಗೆ ನಗುಮುಖದಿಂದಲೇ ಕೈ ಬೀಸುತ್ತಿದ್ದರು. ಮೋದಿ ಸರ್ಕಾರಿ ಕಾರ್ಯಕ್ರಮಕ್ಕೆ ಆಗಮಿಸಿದ್ದರೂ ನಗರ ಪೂರ್ತಿ ಕೇಸರಿ ಮಯವಾಗಿತ್ತು. ಬಿಜೆಪಿ ಧ್ವಜಗಳನ್ನು ಅಭಿಮಾನಿಗಳು ಕೈಯಲ್ಲಿ ಹಿಡಿದಿದ್ದರು.

    ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯ 13ನೇ ಕಂತು ಬಿಡುಗಡೆ, ಮೇಲ್ದರ್ಜೆಗೇರಿದ ಬೆಳಗಾವಿ ರೈಲ್ವೇ ನಿಲ್ದಾಣ ಉದ್ಘಾಟನೆ ಸೇರಿದಂತೆ ಹಲವು ಕಾಮಗಾರಿಗಳ ಉದ್ಘಾಟನೆಯನ್ನು ಮೋದಿ ಮಾಡಲಿದ್ದಾರೆ.

    ಸಾಧಾರಣವಾಗಿ ಬಿಜೆಪಿ ಪಕ್ಷದ ಕಾರ್ಯಕ್ರಮ, ಚುನಾವಣೆಯ ಸಮಯದಲ್ಲಿ ಮೋದಿ ರೋಡ್‌ ಶೋ ಮಾಡುವುದು ಸಾಮಾನ್ಯ. ಗುಜರಾತ್‌ ಚುನಾವಣೆಯಲ್ಲಿ ನಡೆಸಿದ ರೋಡ್‌ ಶೋ ಬಿಜೆಪಿಗೆ ನೆರವಾಗಿತ್ತು. ಅದೇ ತಂತ್ರವನ್ನು ಬಿಜೆಪಿ ಈಗ ಕರ್ನಾಟಕ ಚುನಾವಣೆಯಲ್ಲಿ ಮಾಡುತ್ತಿದೆ.

  • ಬೆಳಗಾವಿಯಲ್ಲಿ ಮೋದಿ ರೋಡ್ ಶೋಗೆ ಸಿದ್ಧತೆ ಮಾಡಿಕೊಂಡಿದ್ದೇವೆ: ಶೋಭಾ ಕರಂದಾಜ್ಲೆ

    ಬೆಳಗಾವಿಯಲ್ಲಿ ಮೋದಿ ರೋಡ್ ಶೋಗೆ ಸಿದ್ಧತೆ ಮಾಡಿಕೊಂಡಿದ್ದೇವೆ: ಶೋಭಾ ಕರಂದಾಜ್ಲೆ

    ಬೆಳಗಾವಿ: ಫೆ.27ರಂದು ಬೆಳಗಾವಿಗೆ (Belagavi) ಆಗಮಿಸುವ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ರೋಡ್ ಶೋಗೆ (Road Show) ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಕೇಂದ್ರ ಸಚಿವೆ ಶೋಭಾ ಕರಂದಾಜ್ಲೆ (Shobha Karandlaje) ಹೇಳಿದರು.

    ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಬೆಳಗಾವಿ ಗಂಡುಮೆಟ್ಟಿದ ನೆಲಕ್ಕೆ ಪ್ರಧಾನಮಂತ್ರಿ ಬರುತ್ತಿದ್ದಾರೆ. ಮೊದಲ ಬಾರಿಗೆ ಕರ್ನಾಟಕದಿಂದ ರೈತ ಕಿಸಾನ್ ಸಮ್ಮಾನ್ ಯೋಜನೆ ನಿಧಿ ರೈತ ಖಾತೆಗೆ ಹಾಕಲಿದ್ದಾರೆ. ಕಳೆದ ಬಾರಿ ದೆಹಲಿ ಗ್ರಾಮೀಣ ಪ್ರದೇಶದಿಂದ ರೈತರ ಖಾತೆಗೆ 22 ಸಾವಿರ ಕೋಟಿ ಹಣವನ್ನು ಹಾಕಿದ್ದಾರೆ. ಇವತ್ತು ಕರ್ನಾಟಕದಿಂದ 14 ಕೋಟಿ ರೈತರ ಖಾತೆಗೆ 2 ಲಕ್ಷ 70 ಸಾವಿರ ಕೋಟಿ ಹಣ ಹಾಕಲಿದ್ದಾರೆ. ಪ್ರತಿ ಮೂರು ತಿಂಗಳಿಗೆ 2 ಸಾವಿರದಂತೆ ವರ್ಷಕ್ಕೆ 6 ಸಾವಿರ ರೂ. ಹಾಕುತ್ತಿದ್ದೇವೆ. ಈ ಬಾರಿ ಯಡಿಯೂರಪ್ಪನವರ ಜನ್ಮದಿನದಂದು ರೈತರ ಖಾತೆಗೆ ಹಣ ಹಾಕುತ್ತಿರುವುದು ಖುಷಿ ತಂದಿದೆ ಎಂದರು.

    ಮೋದಿ ಕಾರ್ಯಕ್ರಮ ಯಶಸ್ವಿ ಮಾಡಲು ಶಾಸಕರು, ಸಂಸದರು ಶ್ರಮಿಸುತ್ತಿದ್ದಾರೆ. ಪ್ರಧಾನಿ ಮೋದಿ ಕಾರ್ಯಕ್ರಮದ ಪೂರ್ವ ತಯಾರಿ ನಡೆಯುತ್ತಿದೆ. ಫೆ. 27ರ ಬೆಳಗ್ಗೆ ಶಿವಮೊಗ್ಗ ಏರ್‌ಪೋರ್ಟ್ ದೇಶಕ್ಕೆ ಸಮರ್ಪಿಸಿ ಬೆಳಗಾವಿ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಮೋದಿ ರೋಡ್ ಶೋಗೆ ಸಿದ್ಧತೆ ಮಾಡಿಕೊಂಡಿದ್ದೇವೆ. ಆದರೆ ಎಸ್‌ಪಿಜಿಯವರು ಭದ್ರತೆ ದೃಷ್ಟಿಯಿಂದ ಎಲ್ಲಿ ರೋಡ್ ಶೋ ಮಾಡಬೇಕು ಅಂತಾ ಹೇಳ್ತಾರೆ. ಅದರಂತೆ ರೋಡ್ ಶೋ ವ್ಯವಸ್ಥೆ ಮಾಡುತ್ತೇವೆ ಮಾಹಿತಿ ನೀಡಿದರು. ಇದನ್ನೂ ಓದಿ: ಭ್ರಷ್ಟಾಚಾರ ಆರೋಪ – ಪಂಜಾಬ್ ಆಪ್ ಶಾಸಕ ಬಂಧನ

    ರೋಡ್‌ ಶೋಗೆ ದೊಡ್ಡ ಸಂಖ್ಯೆಯಲ್ಲಿ ರೈತರು, ರೈತ ಮಹಿಳೆಯರು ಬರುತ್ತಾರೆ. ಪಶುಸಂಗೋಪನೆ ಸೇರಿ ಕೃಷಿ ಕೆಲಸವನ್ನು ಮಹಿಳೆಯರು ಹೆಚ್ಚಾಗಿ ಮಾಡ್ತಾರೆ. ಹೆಚ್ಚಿನ ಸಂಖ್ಯೆಯಲ್ಲಿ ರೈತ ಮಹಿಳೆಯರನ್ನು ಸೇರಿಸಲಾಗುತ್ತಿದೆ. ಬೆಳಗಾವಿ ಜಿಲ್ಲೆ ರೈತರನ್ನು ಸೇರಿಸುವುದು ನಮ್ಮ ಮೊದಲ ಟಾರ್ಗೆಟ್ ಆಗಿದೆ. ಅದರೊಂದಿಗೆ ಅಕ್ಕ ಪಕ್ಕದ ಜಿಲ್ಲೆಯಿಂದ ರೈತರು, ಜನರು ಬರ್ತಾರೆ. ವೇದಿಕೆ ಮೇಲೆ ಯಾರು ಇರ್ತಾರೆ ಅನ್ನೋದು ಪಿಎಂ ಕಚೇರಿಯಿಂದ ಅಂತಿಮ ಆಗುತ್ತದೆ. ನನಗೆ ವಿಶ್ವಾಸವಿದೆ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಇರ್ತಾರೆ. ಇದು ಸರ್ಕಾರಿ ಕಾರ್ಯಕ್ರಮ ಆಗಿದ್ದರಿಂದ ಶಾಸಕರು, ಸಂಸದರ ಹೆಸರಿನ ಪಟ್ಟಿ ಕಳುಹಿಸಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: ದೆಹಲಿ ಪಾಲಿಕೆಯಲ್ಲಿ ಹೈಡ್ರಾಮಾ – ಪರಸ್ಪರ ಹೊಡೆದಾಡಿಕೊಂಡ ಬಿಜೆಪಿ, ಆಪ್ ಸದಸ್ಯರು

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬೆಂಗಳೂರಲ್ಲಿ ಮೋದಿ ಮೆಗಾ ರೋಡ್ ಶೋಗೆ ಪ್ಲಾನ್

    ಬೆಂಗಳೂರಲ್ಲಿ ಮೋದಿ ಮೆಗಾ ರೋಡ್ ಶೋಗೆ ಪ್ಲಾನ್

    ಬೆಂಗಳೂರು: ಚುನಾವಣೆ (Election) ಗೆ ಇನ್ನೇನು ಕೆಲವೇ ತಿಂಗಳುಗಳು ಬಾಕಿ ಇದ್ದು, ರಾಜ್ಯ ರಾಜಕೀಯ ಚಟುವಟಿಕೆಗಳು ಗರಿಗೆದರುತ್ತಿವೆ.

    ಬೆಂಗಳೂರಲ್ಲಿ ಮೋದಿ ಮೆಗಾ ರೋಡ್ ಶೋ (Modi Road Show) ಗೆ ಭರ್ಜರಿ ಪ್ಲಾನ್ ಮಾಡಲಾಗುತ್ತಿದೆ. ಫೆಬ್ರವರಿ 6ರಂದು ಹೆಚ್‍ಎಎಲ್ (HAL) ಕಾರ್ಯಕ್ರಮದ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ ಮತ್ತೆ ಬೆಂಗಳೂರಿಗೆ ಆಗಮಿಸಲಿದ್ದಾರೆ. ಆ ಕಾರ್ಯಕ್ರಮದ ಆಗಮನದ ವೇಳೆ ಬೆಂಗಳೂರಲ್ಲಿ ರೋಡ್ ಶೋಗೆ ರಾಜ್ಯ ಬಿಜೆಪಿ (Karnataka BJP) ಮನವಿ ಮಾಡಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಇದನ್ನೂ ಓದಿ: ಬೊಮ್ಮಾಯಿ ಅಂಕಲ್ ನಮ್ಗೆ ಮೇಲ್ಸೇತುವೆ ಬೇಡ- ಸಿಎಂಗೆ 2 ಸಾವಿರ ವಿದ್ಯಾರ್ಥಿಗಳಿಂದ ಪತ್ರ

    ಹುಬ್ಬಳ್ಳಿ ಮಾಡೆಲ್‍ನಲ್ಲೇ ಮೂರು ಕ್ಷೇತ್ರಗಳ ಟಾರ್ಗೆಟ್ ಮಾಡಿ ರೋಡ್ ಶೋಗೆ ತಂತ್ರ ರೂಪಿಸಲಾಗಿದೆ. ಮಹದೇವಪುರ, ಕೆ.ಆರ್.ಪುರಂ, ಸಿ.ವಿ.ರಾಮನ್ ನಗರ ಕೇಂದ್ರೀಕರಿಸಿ ರೋಡ್ ಶೋ ರೂಟ್ ಮ್ಯಾಪ್ ಮಾಡಲಾಗಿದೆ. ಈಗಾಗಲೇ ಹುಬ್ಬಳ್ಳಿ ರೋಡ್ ಶೋನಿಂದ ರಾಜ್ಯ ಬಿಜೆಪಿ ನಾಯಕರು ಉತ್ಸುಕವಾಗಿದ್ದಾರೆ. ಒಂದು ಬಾರಿ ಮೋದಿ ರೋಡ್ ಶೋ ನಡೆದ್ರೆ ವಿರೋಧಿ ಅಲೆ ಸೀಳಲು ಸಹಾಯ ಎಂಬ ಲೆಕ್ಕಚಾರ ಕಮಲನಾಯಕರದ್ದಾಗಿದೆ.

    ಒಂದೆಡೆ ಬೆಂಗಳೂರು ಟ್ರಾಫಿಕ್ (Traffic) ಪರಿಸ್ಥಿತಿ, ಇನ್ನೊಂದೆಡೆ ಎಲೆಕ್ಷನ್ ಬಿಸಿ, ಬಿಜೆಪಿಯಿಂದ ಬ್ಯಾಲೆನ್ಸ್ ಮಾಡಲು ಆಗುತ್ತಾ ಎಂಬ ಪ್ರಶ್ನೆ ಎದ್ದಿದೆ. ಯಾಕಂದ್ರೆ ಮೋದಿ ರೋಡ್ ಶೋ ನಡೆದ್ರೆ ಫೆಬ್ರವರಿ 6ರಂದು ಸೋಮವಾರ ಬೆಂಗಳೂರಿಗೆ ಬಿಸಿ ತಟ್ಟುವ ಸಾಧ್ಯತೆ ಇದೆ. ಆದರೆ ಮೋದಿ ರೋಡ್ ಶೋಗೆ ಪ್ರಧಾನಿ ಕಚೇರಿಯ ಕ್ಲಿಯರೆನ್ಸ್ ಇನ್ನೂ ಸಿಕ್ಕಿಲ್ಲ ಎನ್ನಲಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮೋದಿ ರೋಡ್ ಶೋ ವೇಳೆ ಭದ್ರತಾ ಲೋಪ – ಬ್ಯಾರಿಕೇಡ್ ಹಾರಿ ಕಾರಿನತ್ತ ನುಗ್ಗಿದ ಬಾಲಕ

    ಮೋದಿ ರೋಡ್ ಶೋ ವೇಳೆ ಭದ್ರತಾ ಲೋಪ – ಬ್ಯಾರಿಕೇಡ್ ಹಾರಿ ಕಾರಿನತ್ತ ನುಗ್ಗಿದ ಬಾಲಕ

    ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಹುಬ್ಬಳ್ಳಿಯಲ್ಲಿ (Hubballi) ರೋಡ್ ಶೋ (Road Show) ವೇಳೆ ಭದ್ರತಾ ಲೋಪ (Security Breach) ನಡೆದಿದೆ.

    ಹುಬ್ಬಳ್ಳಿಯಲ್ಲಿ ಮೋದಿ ರೋಡ್ ಶೋ ನಡೆಸುತ್ತಿದ್ದ ವೇಳೆ ಬಾಲಕನೊಬ್ಬ ಬ್ಯಾರಿಕೇಡ್ ಹಾರಿ ಮೋದಿ ಕಾರಿನತ್ತ ನುಗ್ಗಿದ್ದಾನೆ. ಮೋದಿ ಭದ್ರತೆಗೆಂದು ಹಾಕಲಾಗಿದ್ದ ಬ್ಯಾರಿಕೇಡ್ ಅನ್ನು ಹಾರಿದ ಬಾಲಕ ಹೂವಿನ ಹಾರವನ್ನು ಹಿಡಿದುಕೊಂಡು ಮೋದಿಯತ್ತ ಓಡಿದ್ದಾನೆ. ಇದನ್ನೂ ಓದಿ: ವೇದಿಕೆಯಲ್ಲಿ ಒಂದೇ ಹಣ್ಣು ಹಂಚಿಕೊಂಡು ತಿಂದ ಸಿದ್ದರಾಮಯ್ಯ, ಹೆಚ್.ವಿಶ್ವನಾಥ್

    ತನ್ನ ಕೈಯಾರೇ ಹಾರವನ್ನು ಮೋದಿಗೆ ಕೊಡಲು ಆತ ಪ್ರಯತ್ನಿಸಿದ್ದು, ತಕ್ಷಣವೇ ಪೊಲೀಸರು ಆತನನ್ನು ತಡೆದಿದ್ದಾರೆ. ಮಾಧ್ಯಮಗಳ ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯದಲ್ಲಿ ಬಾಲಕ ಹೂವಿನ ಹಾರವನ್ನು ಮೋದಿ ಕಾರಿನ ಬಾನೆಟ್ ಮೇಲೆ ಇರಿಸಲು ಪ್ರಯತ್ನಿಸಿದ್ದಾನೆ. ಆದರೆ ತಕ್ಷಣವೇ ಭದ್ರತಾ ತಂಡ ಆತನನ್ನು ತಡೆದಿದೆ. ಇದನ್ನೂ ಓದಿ: ಮೆಟ್ರೋ ಸುರಂಗ ಕಾಮಗಾರಿ – ಬೈಕಿನಲ್ಲಿ ತೆರಳುತ್ತಿದ್ದಾಗ ದಿಢೀರ್ ಕುಸಿದ ರಸ್ತೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಹುಬ್ಬಳ್ಳಿಯಲ್ಲಿ ಮೋದಿ 9 ಕಿ.ಮೀ ರೋಡ್‌ ಶೋ – ದಾರಿಯುದ್ದಕ್ಕೂ ಹೂ ಮಳೆ

    ಹುಬ್ಬಳ್ಳಿಯಲ್ಲಿ ಮೋದಿ 9 ಕಿ.ಮೀ ರೋಡ್‌ ಶೋ – ದಾರಿಯುದ್ದಕ್ಕೂ ಹೂ ಮಳೆ

    ಹುಬ್ಬಳ್ಳಿ: ರಾಷ್ಟ್ರೀಯ ಯುವಜನೋತ್ಸವ (Yuvajanotsava) ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಆಗಮಿಸಿದ್ದು ಜನರು ಇಕ್ಕೆಲಗಳಲ್ಲಿ ನಿಂತು ಭವ್ಯ ಸ್ವಾಗತ ಕೋರಿದ್ದಾರೆ.

    ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ (Hubballi Airport) ರೈಲ್ವೇ ಮೈದಾನಕ್ಕೆ 9 ಕಿ.ಮೀ ರೋಡ್‌ ಶೋ ನಡೆಸಿ ಆಗಮಿಸಿದರು. ಮೋದಿ ಕಾರು ಬರುತ್ತಿದ್ದಂತೆ ಬಿಸಿನನ್ನು ಲೆಕ್ಕಿಸದೇ ನಿಂತಿದ್ದ ಅಭಿಮಾನಿಗಳು ಹೂ ಮಳೆ ಸುರಿಸಿ “ಜೈ ಮೋದಿ, ಮೋದಿ ಮೋದಿ” ಎಂದು ಘೋಷಣೆ ಕೂಗಿದರು.


    ಮೋದಿ ಅಭಿಮಾನಿಗಳು ಮೋದಿ ಭಾವಚಿತ್ರವನ್ನು ಕೈಯಲ್ಲಿ ಹಿಡಿದಿದ್ದರೆ ಇನ್ನು ಕೆಲವರು ಸ್ವಾಮಿ ವಿವೇಕಾನಂದ, ರಾಮ, ಸೀತೆಯ ಭಾವ ಚಿತ್ರವನ್ನು ಹಿಡಿದು ನಿಂತಿದ್ದರು. ಇನ್ನು ಕೆಲವರು ಕೇಸರಿ ಬಟ್ಟೆಯನ್ನು ಧರಿಸಿದ್ದರು.

    ದಾರಿ ಮಧ್ಯೆ ಕಾರು ನಿಲ್ಲಿಸಿದ ಮೋದಿ ಅಭಿಮಾನಿಗಳಿಗೆ ಕೈ ಬೀಸಿದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • 4 ರಾಜ್ಯಗಳಲ್ಲಿ ಬಿಜೆಪಿ ವಿಜಯ – ಗುಜರಾತ್‍ನಲ್ಲಿ ಮೋದಿ ಭರ್ಜರಿ ರೋಡ್ ಶೋ

    4 ರಾಜ್ಯಗಳಲ್ಲಿ ಬಿಜೆಪಿ ವಿಜಯ – ಗುಜರಾತ್‍ನಲ್ಲಿ ಮೋದಿ ಭರ್ಜರಿ ರೋಡ್ ಶೋ

    ಗಾಂಧೀನಗರ: ವಿಧಾನಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ ಮತ್ತು ಮಣಿಪುರದಲ್ಲಿ ಬಿಜೆಪಿ ಜಯಭೇರಿ ಬಾರಿಸಿದ ಬೆನ್ನೆಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಇದೀಗ ಗುಜರಾತ್ ಚುನಾವಣೆಯತ್ತ ಗಮನ ಹರಿಸಿದ್ದು, ಅಹಮದಾಬಾದ್‍ನಲ್ಲಿ ಇಂದು ರೋಡ್ ಶೋ ನಡೆಸಿದರು.

    ಅಹಮದಾಬಾದ್ ವಿಮಾನ ನಿಲ್ದಾಣದಿಂದ ಗಾಂಧಿನಗರದಲ್ಲಿರುವ ಬಿಜೆಪಿ ರಾಜ್ಯ ಕಚೇರಿವರೆಗೂ ಹೂವಿನಿಂದ ಅಲಂಕರಿಸಲ್ಪಟ್ಟ ತೆರೆದ ಕಾರಿನಲ್ಲಿ ಮೋದಿ ಅವರು ರೋಡ್ ನಡೆಸಿದರು. ಈ ನಡುವೆ ರಸ್ತೆಯ ಬದಿಗಳಲ್ಲಿ ಮೋದಿ ಅವರನ್ನು ನೋಡಲು ಮುಗಿಬಿದ್ದಿದ್ದ ಜನರತ್ತ ಮೋದಿ ಕೈ ಬೀಸಿದರು. ಜೊತೆಗೆ ಬಿಜೆಪಿ ಕಾರ್ಯಕರ್ತರು ಜೈ ಶ್ರೀ ರಾಮ್ ಮತ್ತು ಭಾರತ್ ಮಾತಾ ಕೀ ಜೈ ಎಂಬ ಘೋಷಣೆಗಳನ್ನು ಕೂಗುತ್ತಿದ್ದರು.

    ವಿಮಾನ ನಿಲ್ದಾಣದಿಂದ ಬಿಜೆಪಿ ಕಚೇರಿ ಸುಮಾರು 10ಕಿ.ಮೀ.ವರೆಗೂ ಇದ್ದು, ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ಸಿಆರ್ ಪಾಟೀಲ್ ರೋಡ್ ಶೋ ವೇಳೆ ಮೋದಿ ಅವರಿಗೆ ಸಾಥ್ ನೀಡಿದರು. ಇದನ್ನೂ ಓದಿ: EVMಗಳಲ್ಲಿ ಸಮಸ್ಯೆಯಿಲ್ಲ, ಜನರ ತಲೆಯೊಳಗಿನ ಚಿಪ್ಪಿನಲ್ಲಿ ಸಮಸ್ಯೆಯಿದೆ: ಫಲಿತಾಂಶದ ಬಗ್ಗೆ ಓವೈಸಿ ಪ್ರತಿಕ್ರಿಯೆ

    ಮೋದಿ ಅವರು ಗುಜರಾತ್‍ಗೆ ಎರಡು ದಿನಗಳ ಕಾಲ ಆಗಮಿಸಿದ್ದು, ಪಂಚಾಯತ್ ಸಂಸ್ಥೆಗಳ ಒಂದು ಲಕ್ಷಕ್ಕೂ ಹೆಚ್ಚು ಚುನಾಯಿತ ಪ್ರತಿನಿಧಿಗಳ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ರಾಜ್ಯ ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ.

    ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ಒಂದು ದಿನದ ಬಳಿಕ ಮೋದಿ ಅವರು ತಮ್ಮ ತವರು ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ಈ ವರ್ಷದ ಅಂತ್ಯದಲ್ಲಿ ಗುಜರಾತ್ ಚುನಾವಣೆ ನಡೆಯಲಿದೆ. ಇದನ್ನೂ ಓದಿ: BJPಯ ಬಡವರ ಪರ, ಸಕ್ರಿಯ ಆಡಳಿತಕ್ಕೆ ಜನರ ಬೆಂಬಲ ಅನ್ನೋದು ಫಲಿತಾಂಶದಿಂದ ಸಾಬೀತು: ಮೋದಿ

  • ಆಟೋ ರಿಕ್ಷಾದಲ್ಲಿ ರಾಹುಲ್ ಗಾಂಧಿ ರೋಡ್ ಶೋ

    ಆಟೋ ರಿಕ್ಷಾದಲ್ಲಿ ರಾಹುಲ್ ಗಾಂಧಿ ರೋಡ್ ಶೋ

    ತಿರುವನಂತಪುರಂ: ಬಿಜೆಪಿ ಹಾಗೂ ಎನ್‍ಡಿಎ ಆಡಳಿತ ಸರ್ಕಾರದಲ್ಲಿ ಹೆಚ್ಚುತ್ತಿರುವ ಇಂಧನ ಬೆಲೆಯನ್ನು ಎತ್ತಿ ತೋರಿಸುವ ಸಲುವಾಗಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೇರಳದ ಎರಡು ಪ್ರದೇಶಗಳಿಗೆ ಆಟೋ ರಿಕ್ಷಾದಲ್ಲಿ ಪ್ರಯಾಣಿಸಿದರು.

    ಕೇರಳದಲ್ಲಿ ವಿಧಾನಸಭಾ ಚುನಾವಣಾ ಪ್ರಚಾರ ನಡೆಸಲು ಏಪ್ರಿಲ್ 6 ಕೊನೆಯ ದಿನವಾಗಿದೆ. ಹೀಗಾಗಿ ನಿನ್ನೆ ಸಂಜೆ ತಿರುವನಂತಪುರಂ ನೆಮೊಮ್‍ನಲ್ಲಿ ನಡೆದ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್, ಬಳಿಕ ಆಟೋ ರಿಕ್ಷಾವನ್ನು ಕರೆಸಿ ಪ್ರಯಾಣಿಸುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದರು.

    2016ರ ವಿಧಾನಸಭಾ ಚುನಾವಣೆ ವೇಳೆ ನೆಮೊಮ್‍ನಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅಭ್ಯರ್ಥಿ ಸಂಸದ ಕೆ ಮುರಳೀಧರನ್ ಬಿಜೆಪಿ ವಿರುದ್ಧ ಅತೀ ಹೆಚ್ಚು ಮತಗಳನ್ನು ಗಳಿಸುವ ಮೂಲಕ ಜಯಗಳಿಸಿದ್ದರು. ಇದೀಗ ಈ ಕ್ಷೇತ್ರವು ಎಲ್‍ಡಿಎಫ್, ಯುಡಿಎಫ್ ಮತ್ತು ಬಿಜೆಪಿ ನಡುವೆ ತೀವ್ರ ತ್ರಿಕೋನ ಹೋರಾಟಕ್ಕೆ ಸಾಕ್ಷಿಯಾಗಿದೆ.

    ಭಾನುವಾರ ಸಭೆ ನಂತರ ರಾಹುಲ್ ಗಾಂಧಿ ಆಟೋ ರಿಕ್ಷಾದ ಮೂಲಕ ರೋಡ್ ಶೋ ನಡೆಸಿದರು ಎಂದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹೇಳಿದ್ದಾರೆ. ಅಲ್ಲದೆ ಆಟೋ ಚಾಲಕ ತಮ್ಮ ಸಂಪಾದನೆಯೆಲ್ಲ ಇಂಧನಕ್ಕಾಗಿ ಖರ್ಚು ಮಾಡುವುದರಿಂದ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.

    ಬಿಜೆಪಿ ಪೆಟ್ರೋಲ್ ಡೀಸೆಲ್ ಬೆಲೆಯನ್ನು ಏರಿಸಿ, ಹಣವನ್ನು ತಮ್ಮ ಸ್ನೇಹಿತರಿಗೆ ನೀಡುತ್ತಿದೆ. ಹೀಗಿರುವಾಗ ಇಲ್ಲಿಗೆ ಬಂದು ನಿಮ್ಮ ಮತ ಕೇಳಲು ಅವರಿಗೆ ಎಷ್ಟು ಧೈರ್ಯ ಎಂದು ರಾಹುಲ್ ಕಿಡಿಕಾರಿದರು. ಬಳಿಕ ರಾಹುಲ್ ವಯನಾಡಿನ ಕಲ್ಪೆಟ್ಟದಲ್ಲಿರುವ ಹೆಲಿಪ್ಯಾಡ್‍ಗೆ ಹೋಗಲು ಆಟೋ ರಕ್ಷಾದಲ್ಲಿ ಸವಾರಿ ನಡೆಸಿದರು.

  • ಶುಕ್ರವಾರ ದಿನಪೂರ್ತಿ ಮುನಿರತ್ನ ಪರ ದರ್ಶನ್‌ ಪ್ರಚಾರ, ರೋಡ್‌ ಶೋ

    ಶುಕ್ರವಾರ ದಿನಪೂರ್ತಿ ಮುನಿರತ್ನ ಪರ ದರ್ಶನ್‌ ಪ್ರಚಾರ, ರೋಡ್‌ ಶೋ

    ಬೆಂಗಳೂರು: ರಾಜರಾಜೇಶ್ವರಿ ನಗರ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ಅವರು ಶುಕ್ರವಾರ ಚುನಾವಣಾ ಪ್ರಚಾರ ನಡೆಸಲಿದ್ದಾರೆ.

    ಬೆಳಗ್ಗೆ 10 ಗಂಟೆಗೆ ಯಶವಂತಪುರ ರೈಲು ನಿಲ್ದಾಣದಿಂದ ದರ್ಶನ್‌ ರೋಡ್ ಶೋ ಆರಂಭವಾಗಲಿದ್ದು, ಮುನಿರತ್ನ ಪರ ಇಡೀ ದಿನ ರೋಡ್ ಶೋ‌ ನಡೆಸಿ ದರ್ಶನ್ ಮತಯಾಚಿಸಲಿದ್ದಾರೆ.

     

    ಆರಂಭದಲ್ಲಿ ಜೆಪಿ ಪಾರ್ಕ್, ಜಾಲಹಳ್ಳಿ, ಎಚ್ ಎಂಟಿ ವಾರ್ಡ್, ಪೀಣ್ಯಾ, ಗೊರಗುಂಟೆ ಪಾಳ್ಯಗಳಲ್ಲಿ ರೋಡ್ ಶೋ ನಡೆಸಲಿದ್ದಾರೆ. ಭೋಜನದ ಬಳಿಕ ಲಕ್ಷ್ಮಿದೇವಿನಗರ, ಲಗ್ಗೆರೆ, ಕೊಟ್ಟಿಗೆ ಪಾಳ್ಯ, ಜ್ಞಾನಭಾರತಿ ವಾರ್ಡ್ ಗಳಲ್ಲಿ ದರ್ಶನ್ ರೋಡ್ ಶೋ ಮಾಡಲಿದ್ದಾರೆ.

    ಬುಧವಾರ ದಕ್ಷಿಣ ಭಾರತದ ಪ್ರಖ್ಯಾತ ಚಿತ್ರನಟಿ, ಬಿಜೆಪಿ ನಾಯಕಿ ಖುಷ್ಬೂ ಅಬ್ಬರದ ರೋಡ್ ಶೋ ನಡೆಸಿ ಮುನಿರತ್ನ ಪರ ಮತಯಾಚಿಸಿದ್ದರು.

  • ಕೋಲಾರ ಸಂಸದ ಮುನಿಸ್ವಾಮಿಗೆ ಬಿಸಿ ಮುಟ್ಟಿಸಿದ ಆಯೋಗ

    ಕೋಲಾರ ಸಂಸದ ಮುನಿಸ್ವಾಮಿಗೆ ಬಿಸಿ ಮುಟ್ಟಿಸಿದ ಆಯೋಗ

    ಕೋಲಾರ: ಈ ಬಾರಿ ಲೊಕಸಭಾ ಚುನಾವಣೆಯಲ್ಲಿ ಕೋಲಾರ ಲೋಕಸಭಾ ಕ್ಷೇತ್ರದಿಂದ ನೂತನ ಸಂಸದರಾಗಿ ಆಯ್ಕೆಯಾದ ಎಸ್ ಮುನಿಸ್ವಾಮಿ ಅವರಿಗೆ ಚುನಾವಣಾ ಆಯೋಗ ಬಿಸಿ ಮುಟ್ಟಿಸಿದೆ.

    ಜಿಲ್ಲೆಯಲ್ಲಿ ಲೋಕಸಭಾ ಸಮರ ಮುಗಿದಿದ್ದು, ಈಗ ಪುರಸಭೆ ಚುನಾವಣಾ ಕಾವು ಹೆಚ್ಚಾಗಿದೆ. ಸ್ಥಳೀಯ ಮಟ್ಟದಲ್ಲಿ ಅಧಿಕಾರವನ್ನು ಪಡೆಯಲು ಪ್ರಚಾರಕ್ಕಾಗಿ ಅಭ್ಯರ್ಥಿಗಳು ದೊಡ್ಡ ರಾಜಕಾರಣಿಗಳ ಮೊರೆ ಹೋಗಿದ್ದು, ಹೀಗೆ ಪ್ರಚಾರಕ್ಕೆ ಹೋದ ಎಸ್ ಮುನಿಸ್ವಾಮಿ ಅವರಿಗೆ ಪ್ರಚಾರ ಮಾಡದಂತೆ ಆಯೋಗ ನಿರ್ಬಂಧ ಹೇರಿದೆ.

    ಬಂಗಾರಪೇಟೆ ಪುರಸಭೆ ಚುನಾವಣೆ ಹಿನ್ನೆಲೆಯಲ್ಲಿ ತಮ್ಮ ಪಕ್ಷದ ಅಭ್ಯಥಿ ಪರ ರೋಡ್ ಶೋ ಮಾಡಿ ಪ್ರಚಾರ ಮಾಡಲು ಮುನಿಸ್ವಾಮಿ ಅವರು ಬೆಳಗ್ಗೆ ನಗರಕ್ಕೆ ಬಂದಿದ್ದಾರೆ. ಆದರೆ ಬಹಿರಂಗ ಪ್ರಚಾರಕ್ಕೆ ನೀಡಿದ್ದ ಸಮಯ ಮುಗಿದ ಕಾರಣ ಚುನಾವಣಾ ಅಧಿಕಾರಿ ಚಂದ್ರಮೌಳೀಶ್ವರ ಅವರು ಟಾಟಾ ಏಸ್ ವಾಹನ ಬಳಸಿ ಬಹಿರಂಗ ರೋಡ್ ಶೋ ಮಾಡಲು ಅವಕಾಶ ನೀಡಲಿಲ್ಲ. ಇದರಿಂದ ಸಂಸದರಾಗಿ ಆಯ್ಕೆಯಾದ ಮೊದಲ ಚುನಾವಣಾ ಪ್ರಚಾರದಲ್ಲೇ ಮುನಿಸ್ವಾಮಿ ಅವರಿಗೆ ಇರುಸು ಮುರಿಸು ಆಯ್ತು. ಇದನ್ನು ಓದಿ: ಬಿಎಸ್‍ವೈ ಕ್ಲಾಸ್ ಬೆನ್ನಲ್ಲೇ ಯೂಟರ್ನ್ ಹೊಡೆದ ಮುನಿಸ್ವಾಮಿ

    ಚುನಾವಣಾಧಿಕಾ ಎಚ್ಚರದಿಂದ ಬೇಸರಗೊಂಡ ಸಂಸದ ಎಸ್ ಮುನಿಸ್ವಾಮಿ ಅವರು ವಾಹನದಿಂದ ಇಳಿದು ಮನೆ ಮನೆಗೆ ಹೋಗಿ ತಮ್ಮ ಅಭ್ಯರ್ಥಿ ಪರ ಮತ ನೀಡುವಂತೆ ಜನರಲ್ಲಿ ಮನವಿ ಮಾಡಿಕೊಂಡರು. ಮೇ 29ಕ್ಕೆ ಪುರಸಭೆ ಚುನಾವಣೆ ನಡೆಯಲಿದೆ.