ಚಿಕ್ಕೋಡಿ: ಪೊಲೀಸರ ನಿರ್ಲಕ್ಷ್ಯಕ್ಕೆ ಕಾಂಗ್ರೆಸ್ (Congress) ಹಾಗೂ ಬಿಜೆಪಿ (BJP) ರೋಡ್ ಶೋಗಳು (Road Show) ಮುಖಾಮುಖಿಯಾಗಿ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿರುವ ಘಟನೆ ಹುಕ್ಕೇರಿ ಪಟ್ಟಣದಲ್ಲಿ ನಡೆದಿದೆ.
ಪೊಲೀಸರ ಕಾರ್ಯಕ್ಷಮತೆಯ ಕೊರತೆಯಿಂದ ಎರಡು ಪಕ್ಷಗಳ ರೋಡ್ ಶೋಗಳು ಒಂದೇ ರೋಡಿನಲ್ಲಿ ಎದುರಾದ ಪರಿಣಾಮ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದೆ.
ಹುಕ್ಕೇರಿ (Hukkeri) ಪಟ್ಟಣದಲ್ಲಿ ಮಂಗಳವಾರ ಕಾಂಗ್ರೆಸ್ ಪಕ್ಷದಿಂದ ಎಬಿ ಪಾಟೀಲ್ ಮೊದಲು ನಾಮಪತ್ರ ಸಲ್ಲಿಸಲು ರೋಡ್ ಶೋ ಮೂಲಕ ಆಗಮಿಸಿದ್ದರು. ನಾಮಪತ್ರ ಸಲ್ಲಿಕೆ ಬಳಿಕ ಅವರ ರೋಡ್ ಶೋ ವಾಪಸ್ ಬರುತ್ತಿರುವಾಗಲೇ ಈ ಕಡೆಯಿಂದ ಬಿಜೆಪಿ ರೋಡ್ ಶೋಗೆ ಪೊಲೀಸರು ಅವಕಾಶ ಕೊಟ್ಟರು. ಇದನ್ನೂ ಓದಿ: ಸಿದ್ದು ಕುಟುಂಬದ ಮೂರನೇ ತಲೆಮಾರು ರಾಜಕೀಯ ಫೀಲ್ಡ್‌ಗೆ ಎಂಟ್ರಿ
ಬಿಜೆಪಿ ಅಭ್ಯರ್ಥಿ ನಿಖಿಲ್ ಕತ್ತಿ ಹಾಗೂ ಕಾಂಗ್ರೆಸ್ ಪಕ್ಷದ ಎಬಿ ಪಾಟೀಲ್‌ರ ಎರಡು ರೋಡ್ ಶೋಗಳಲ್ಲಿ ಭಾಗವಹಿಸಿದ್ದ ಸಾವಿರಾರು ಜನರು ಮುಖಾಮುಖಿಯಾದರು. ಒಂದು ಕಡೆ ಕಾಂಗ್ರೆಸ್ ಘೋಷಣೆ ಜೋರಾದರೆ ಮತ್ತೊಂದೆಡೆ ಬಿಜೆಪಿಯವರ ಘೋಷಣೆ ಜೋರಾಗಿತ್ತು.
ಈ ಸಮಯದಲ್ಲಿ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು. ಪೊಲೀಸರಿಗೂ ಜಗ್ಗದ ಎರಡು ಪಕ್ಷಗಳ ಕಾರ್ಯಕರ್ತರನ್ನು ನಿಯಂತ್ರಿಸಲು ಲಾಠಿ ಚಾರ್ಜ್ ಮಾಡಬೇಕು ಎನ್ನುವಷ್ಟರಲ್ಲಿ ಪರಿಸ್ಥಿತಿ ತಿಳಿಗೊಂಡಿತು. ಇದನ್ನೂ ಓದಿ: ಸುಮಲತಾ ದುರಹಂಕಾರದ ಮಾತನ್ನಾಡುತ್ತಿದ್ದಾರೆ: ಹೆಚ್‌ಡಿಕೆ ವಾಗ್ದಾಳಿ
ಚಿಕ್ಕಬಳ್ಳಾಪುರ: ನಾನು ರಾಜಕಾರಣಕ್ಕೆ (Politics) ಬಂದು 15 ವರ್ಷ ಆಗಿದೆ. ಯಾವುದೇ ರೈತ ಹಾಗೂ ಕ್ಷೇತ್ರದ ವ್ಯಕ್ತಿ ನನಗೆ 1 ರೂ. ಲಂಚ (Bribe) ಕೊಟ್ಟಿದ್ದರೆ, ನಾನು ರಾಜಕೀಯ ನಿವೃತ್ತಿ ಆಗುತ್ತೇನೆ ಎಂದು ಸಚಿವ ಕೆ.ಸುಧಾಕರ್ (K.Sudhakar) ಜೆಡಿಎಸ್ (JDS) ಅಭ್ಯರ್ಥಿಗಳ ಆರೋಪಕ್ಕೆ ತಿರುಗೇಟು ನೀಡಿದರು.
ಚಿಕ್ಕಬಳ್ಳಾಪುರದಲ್ಲಿ (Chikkaballapura) ಬೃಹತ್ ರೋಡ್ ಶೋ (Road Show) ನಡೆಸಿದ ಬಳಿಕ ಸುಧಾಕರ್ ನಾಮಪತ್ರ ಸಲ್ಲಿಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಮಪತ್ರ (Nomination Papers) ಸಲ್ಲಿಕೆಯ ಈ ಮೆರವಣಿಗೆ 2023ರ ಚುನಾವಣೆಯ (Election) ವಿಜಯದ ದಿಕ್ಸೂಚಿ. ನಾನು ಈಗಾಗಲೇ ಗೆದ್ದಿದ್ದೇನೆ. ಈ ಬಾರಿ 50 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇನೆ. ನಾನು ಅಹಂಕಾರದಿಂದ ಈ ಮಾತು ಹೇಳುತ್ತಿಲ್ಲ. ನಿಮ್ಮ ಪ್ರೀತಿ ನೋಡಿ ಹೇಳುತ್ತಿದ್ದೇನೆ ಎಂದು ಕಾಂಗ್ರೆಸ್ (Congress) ಅಭ್ಯರ್ಥಿ ಪ್ರದೀಪ್ ಈಶ್ವರ್‌ಗೆ (Pradeep Eshwar) ಟಾಂಗ್ ಕೊಟ್ಟರು. ಇದನ್ನೂ ಓದಿ: ಕಾಂಗ್ರೆಸ್ ಸಂಸ್ಕೃತಿ ಯೂಸ್ ಆ್ಯಂಡ್ ಥ್ರೋ: ಬಿಜೆಪಿ ತೊರೆದ ನಾಯಕರಿಗೆ ಸಿಎಂ ಟಾಂಗ್
ಕೊಪ್ಪಳ: ದಾವಣಗೆರೆಯಲ್ಲಿ ಮೋದಿ (Narendra Modi) ಭದ್ರತೆ ಲೋಪ ವಿಚಾರಕ್ಕೆ ಸಂಬಂಧಿಸಿದಂತೆ ಕೊಪ್ಪಳ ತಾಲೂಕಿನ ಗುಡ್ಲಾನೂರಿನಲ್ಲಿರುವ ಯುವಕನ ಮನೆಗೆ ಬೀಗ ಜಡಿಯಲಾಗಿದೆ.
ಕುಡಿತದ ದಾಸನಾಗಿರೋ ಬಸವರಾಜ (28) ನಿತ್ಯವೂ ಕುಡಿದು ಗಲಾಟೆ ಮಾಡುತ್ತಿದ್ದ. ಸದ್ಯ ಗ್ರಾಮದಲ್ಲಿರುವ ಬಸವರಾಜ್ ಮನೆಗೆ ಬೀಗ ಹಾಕಲಾಗಿದೆ.
ನಡೆದಿದ್ದೇನು..?: ಶನಿವಾರ ಮೋದಿ ಕಾರ್ಯಕ್ರಮ ಹಿನ್ನೆಲೆಯಲ್ಲಿ ಗ್ರಾಮಸ್ಥರ ಜೊತೆ ಬಸ್ಸಿನಲ್ಲಿ ದಾವಣಗೆರೆಗೆ ತೆರಳಿದ್ದ. ಈ ವೇಳೆ ಅಲ್ಲಿ ಮೋದಿ ರೋಡ್ ಶೋ (Road Show) ನಡೆಸುತ್ತಿದ್ದ ಸಂದರ್ಭದಲ್ಲಿ ಮೋದಿ ವಾಹನದ ಬಳಿ ನುಗ್ಗಲು ಯತ್ನಿಸಿದ್ದಾನೆ. ತಕ್ಷಣವೇ ಆತನನ್ನು ಎಡಿಜಿಪಿ ಅಲೋಕ್ ಕುಮಾರ್ (Alok Kumar) ಹಾಗೂ ಎಸ್‍ಪಿಜಿ ಅಧಿಕಾರಿಗಳು ತಡೆದಿದ್ದಾರೆ. ಬಳಿಕ ಆತನನ್ನು ತಡೆದು ವಶಕ್ಕೆ ಪಡೆದು ವಿಚಾರಣೆಗೆ ಕರೆದೊಯ್ದಿದ್ದರು. ಇದನ್ನೂ ಓದಿ: ಪ್ರಧಾನಿ ವಾಹನದ ಬಳಿ ನುಗ್ಗಲು ಯತ್ನಿಸಿದ ಯುವಕ- ಭದ್ರತಾ ಲೋಪವಾಗಿಲ್ಲ ಅಂದ್ರು ಎಸ್‍ಪಿ
ರಿಷ್ಯಂತ್ ಸ್ಪಷ್ಟನೆ: ಮೋದಿ ರೋಡ್ ಶೋ ಭದ್ರತಾ ಲೋಪಾ ಸಂಬಂಧ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಎಸ್ ಪಿ ರಿಷ್ಯಂತ್, ಮೋದಿಯವರ ರೋಡ್ ಶೋ ನಲ್ಲಿ ಯಾವುದೇ ಭದ್ರತಾ ಲೋಪವಾಗಿಲ್ಲ. ಬ್ಯಾರಿಕೇಡ್ ಬಿದ್ದ ಹಿನ್ನೆಲೆ ತಳ್ಳಾಟದಿಂದ ಯುವಕ ಮುಂದೆ ಬಂದಿದ್ದಾನೆ. ಮೋದಿಯವರಿಗೂ ಆ ಯುವಕನಿಗೂ 20 ಅಡಿ ಅಂತರವಿತ್ತು. ಯಾವುದೇ ಭದ್ರತಾ ಲೋಪವಾಗಿಲ್ಲ ಎಂದು ಸ್ಪಷ್ಟೀಕರಣ ನೀಡಿದರು.
ದಾವಣಗೆರೆ: ಪ್ರಧಾನಿ ನರೇಂದ್ರ ಮೋದಿ (Narendra Modi) ರೋಡ್ ಶೋ ವೇಳೆ ಭದ್ರತಾ ಲೋಪ ಉಂಟಾಗಿದೆ ಎಂದು ಹೇಳಲಾಗಿದ್ದು, ಈ ಬಗ್ಗೆ ಎಸ್‍ಪಿ ರಿಷ್ಯಂತ್ ಸ್ಪಷ್ಟನೆ ನೀಡಿದ್ದಾರೆ.
ಹೆಲಿಪ್ಯಾಡ್ ನಿಂದ ಪ್ರಧಾನಿಯವರು ತೆರೆದ ವಾಹನದಲ್ಲಿ ರೋಡ್ ಶೋ (Road Show) ನಡೆಸುತ್ತಿದ್ದ ವೇಳೆ ಯುವಕನೊಬ್ಬ ಮೋದಿ ವಾಹನದ ಬಳಿ ನುಗ್ಗಲು ಯತ್ನಿಸಿದ್ದಾನೆ. ತಕ್ಷಣವೇ ಯುವಕನನ್ನು ಎಡಿಜಿಪಿ ಅಲೋಕ್ ಕುಮಾರ್ (ADGP Alok Kumar) ಹಾಗೂ ಎಸ್‍ಪಿಜಿ ಅಧಿಕಾರಿಗಳು ತಡೆದಿದ್ದಾರೆ. ಬಳಿಕ ಆತನನ್ನು ತಡೆದು ವಶಕ್ಕೆ ಪಡೆದು ವಿಚಾರಣೆಗೆ ಕರೆದೊಯ್ದಿದ್ದಾರೆ. ಮೋದಿ ವಾಹನದ ಬಳಿ ನುಗ್ಗಿದ ಯುವಕ ಕೊಪ್ಪಳ ಭಾಗದ ಬಿಜೆಪಿ ಕಾರ್ಯಕರ್ತ ಎಂಬ ಮಾಹಿತಿ ಲಭಿಸಿತ್ತು.
ರಿಷ್ಯಂತ್ ಸ್ಪಷ್ಟನೆ: ಮೋದಿ ರೋಡ್ ಶೋ ಭದ್ರತಾ ಲೋಪಾ ಸಂಬಂಧ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಎಸ್ ಪಿ ರಿಷ್ಯಂತ್, ಮೋದಿಯವರ ರೋಡ್ ಶೋ ನಲ್ಲಿ ಯಾವುದೇ ಭದ್ರತಾ ಲೋಪವಾಗಿಲ್ಲ. ಬ್ಯಾರಿಕೇಡ್ ಬಿದ್ದ ಹಿನ್ನೆಲೆ ತಳ್ಳಾಟದಿಂದ ಯುವಕ ಮುಂದೆ ಬಂದಿದ್ದಾನೆ. ಮೋದಿಯವರಿಗೂ ಆ ಯುವಕನಿಗೂ 20 ಅಡಿ ಅಂತರವಿತ್ತು. ಯಾವುದೇ ಭದ್ರತಾ ಲೋಪವಾಗಿಲ್ಲ ಎಂದು ಸ್ಪಷ್ಟೀಕರಣ ನೀಡಿದರು. ಇದನ್ನೂ ಓದಿ: ಮುಸ್ಲಿಮರಿಗೆ ತೊಂದರೆಕೊಡುವ ಉದ್ದೇಶದಿಂದ ಮೀಸಲಾತಿಯಲ್ಲಿ ದ್ರೋಹ – ಸಿದ್ದು ಸಿಡಿಮಿಡಿ
As being reported in a section of media, there was no breach in security as such of Hon’ble PM at Davangere today. It was an unsuccessful attempt
He was caught immediately by myself and SPG at a safe distance
ವಿಜಯಸಂಕಲ್ಪ ಮಾಹಸಂಗಮದಲ್ಲಿ ವೇದಿಕೆಯತ್ತ ನುಗ್ಗಲು ಬಂದ ಜನರಿಗೆ ಪೊಲೀಸರು ಲಾಠಿ ರುಚಿ ತೋರಿಸಿದರು. ವೇದಿಕೆಯತ್ತ ಧಾವಿಸಲು ಅಗಮಿಸಿದ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ವೇದಿಕೆ ಸುತ್ತಲು ಎಲ್ಲಾ ದ್ವಾರಬಾಗಿಲು ಬಂದ್ ಮಾಡಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಶೌಚಾಲಯಕ್ಕೆ ತೆರಳಲು ಸಹ ಬಿಡದ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತವಾಯಿತು.
ಬೆಂಗಳೂರು: ಈ ಬಾರಿಯ ವಿಧಾನಸಭಾ ಚುನಾವಣೆಗೆ (Assembly Election) ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಕೋಲಾರ (Kolara) ಹಾಗೂ ವರುಣಾ (Varuna) ಕ್ಷೇತ್ರಗಳ ಪೈಕಿ ಎಲ್ಲಿ ಸ್ಪರ್ಧೆಗೆ ನಿಲ್ಲುತ್ತಾರೆ ಎಂಬುದು ಭಾರೀ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಆದರೆ ಇದರ ಬೆನ್ನಲ್ಲೆ ಸಿದ್ದರಾಮಯ್ಯ ಈ ಎರಡೂ ಕ್ಷೇತ್ರಗಳನ್ನು ಪಕ್ಕಕ್ಕಿಟ್ಟು ಈಗ ಬಾದಾಮಿಯಲ್ಲಿ (Badami) ಸ್ಪರ್ಧೆ ಮಾಡುತ್ತಾರಾ ಎಂಬ ಪ್ರಶ್ನೆ ಎದ್ದಿದೆ.
ಕೋಲಾರ ಹಾಗೂ ವರುಣಾ ಕ್ಷೇತ್ರಗಳಲ್ಲಿ ಗೊಂದಲವಿರುವ ನಡುವೆಯೇ ಸಿದ್ದರಾಮಯ್ಯ ಇದೀಗ ಬಾದಾಮಿ ಪ್ರವಾಸಕ್ಕೆ ಮುಂದಾಗುತ್ತಿದ್ದಾರೆ. ಶುಕ್ರವಾರ ಬಾದಾಮಿಗೆ ತೆರಳಲಿರುವ ಸಿದ್ದರಾಮಯ್ಯ ಅಲ್ಲಿ 500 ಕೋಟಿ ರೂ. ವೆಚ್ಚದ ಬಾದಾಮಿ-ಕೆರೂರು ಶಾಶ್ವತ ಕುಡಿಯವ ನೀರು ಸರಬರಾಜು ಯೋಜನೆಗೆ ಚಾಲನೆ ನೀಡಲಿದ್ದಾರೆ.
ಸ್ವಕ್ಷೇತ್ರದಲ್ಲಿ ನಡೆಯಲಿರಯವ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಬಾಗಿಯಾಗುವುದರಲ್ಲಿ ಯಾವುದೇ ವಿಶೇಷ ಇಲ್ಲ. ಆದರೆ ಈ ಕಾರ್ಯಕ್ರಮದ ಬಳಿಕ ರೋಡ್ ಶೋ (Road Show) ನಡೆಸಲಿದ್ದಾರೆ. ಈ ರೋಡ್ ಶೋ ನಡೆಸಲಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಬಾದಾಮಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲಿದ್ದಾರಾ ಎಂಬ ಪ್ರಶ್ನೆ ಎದ್ದಿದೆ. ಭರ್ಜರಿ ರೋಡ್ ಶೋಗೆ ಸಿದ್ಧತೆಗಳನ್ನು ಮಾಡಲಾಗಿದ್ದು, ಸಿದ್ದರಾಮಯ್ಯ ಅವರ ಈ ನಡೆ ರಾಜಕೀಯದಲ್ಲಿ ಭಾರೀ ಕುತೂಹಲ ಮೂಡಿಸುತ್ತಿದೆ. ಇದನ್ನೂ ಓದಿ: ಪಂಚಮಸಾಲಿ ಮೀಸಲಾತಿಗಿಲ್ಲ ಅಡ್ಡಿ – ಮಧ್ಯಂತರ ಆದೇಶ ತೆರವುಗೊಳಿಸಿದ ಹೈಕೋರ್ಟ್
ಬಾದಾಮಿ ನಗರದ ರಾಮದುರ್ಗ ಕ್ರಾಸ್‌ನಿಂದ ಎಪಿಎಂಸಿ ಆವರಣದ ವರೆಗೆ ರೋಡ್ ಶೋ ನಡೆಸಲಿದ್ದಾರೆ. ಸಿದ್ದರಾಮಯ್ಯನವರ ಈ ನಡೆಯಿಂದ ಪರೋಕ್ಷವಾಗಿ ಬಾದಾಮಿ ಮತದಾರರ ಮನಸ್ಥಿತಿ ಅಳೆಯಲು ಅವರು ಮುಂದಾಗಿದ್ದಾರಾ ಎಂಬ ಪ್ರಶ್ನೆ ಮೂಡುತ್ತಿದೆ.
ಈ ಬಾರಿ ಕೋಲಾರದಿಂದಲೇ ಸ್ಪರ್ಧೆ ಮಾಡುತ್ತೇನೆ ಎಂದು ಬಹಿರಂಗವಾಗಿ ಘೋಷಣೆ ಮಾಡಿದ್ದ ಸಿದ್ದರಾಮಯ್ಯ ಬಳಿಕ ಯು ಟರ್ನ್ ಹೊಡೆದು ವರುಣಾದಲ್ಲಿ ಕಣಕ್ಕಿಳಿಯಲು ಚಿಂತಿಸಿದ್ದರು. ಆದರೆ ಮತ್ತೆ ಸಿಎಂ ಆಗಬೇಕೆಂದು ಕನಸು ಕಾಣುತ್ತಿರುವ ಸಿದ್ದರಾಮಯ್ಯ ಅವರು ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬ ಗೊಂದಲಕ್ಕೆ ಒಳಗಾಗಿದ್ದಾರೆ. ಇದರ ನಡುವೆಯೇ ಹಲವು ಕ್ಷೇತ್ರಗಳಿಂದ ಅವರಿಗೆ ಆಹ್ವಾನಗಳೂ ಬರತೊಡಗಿವೆ. ಇದನ್ನೂ ಓದಿ: ಯಾವುದೇ ಬೌಲಿಂಗ್ ಬಂದರೂ ಉತ್ತಮ ಸ್ಕೋರ್ ಮಾಡ್ತೇನೆ – ಪ್ರೀತಂ ಗೌಡ
ಈ ಬಾರಿ ನಾನು ಬಾದಾಮಿಯಿಂದ ಸ್ಪರ್ಧೆ ಮಾಡುವುದಿಲ್ಲ. ಬೆಂಗಳೂರಿನಿಂದ ಬಾದಾಮಿ ಬಹಳ ದೂರದಲ್ಲಿದೆ. ಬೆಂಗಳೂರು ಹತ್ತಿರದಲ್ಲಿರುವ ಕ್ಷೇತ್ರದಲ್ಲಿ ಈ ಬಾರಿ ನಿಲ್ಲುತ್ತೇನೆ. ಹೀಗಾಗಿ ವರುಣಾ ಇಲ್ಲವೇ ಕೋಲಾರದಿಂದ ಸ್ಪರ್ಧಿಸುವುದಾಗಿ ತಿಳಿಸಿದ್ದರು.
ತುಮಕೂರು: ಕಾಂಗ್ರೆಸ್ (Congress) ಪಾರ್ಟಿಯ ಅರ್ಥ ಕಮಿಷನ್, ಕರಪ್ಷನ್, ಕ್ರಿಮಿನಲೈಸೇಷನ್ ಮತ್ತು ಪರಿವಾರವಾದ. ಆದರೆ ಬಿಜೆಪಿಯ (BJP) ಅರ್ಥ ವಿಕಾಸ್ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ (J.P.Nadda) ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ತಿಪಟೂರಿನಲ್ಲಿ (Tiptur) ನಡೆದ ರೋಡ್ ಶೋನಲ್ಲಿ (Road Show) ಭಾಗವಹಿಸಿ ಮಾತನಾಡಿದ ಅವರು, ರೋಡ್ ಶೋಗೆ ಅಭೂತಪೂರ್ವ ಬೆಂಬಲ ದೊರೆತಿದೆ. ಇದನ್ನು ನೋಡುತ್ತಿದ್ದರೆ ಮುಂದಿನ ದಿನಗಳಲ್ಲಿ ನೀವೆಲ್ಲರು ಎಲ್ಲೆಲ್ಲೂ ಕಮಲ ಅರಳಿಸುತ್ತೀರಿ ಎಂದು ಅನಿಸುತ್ತಿದೆ. ಕಮಲ ಅರಳಿಸಬೇಕು ಎನ್ನುವುದು ಬಿಜೆಪಿಯ ಅವಶ್ಯಕತೆಯಲ್ಲ. ಕರ್ನಾಟಕದ (Karnataka) ಮಣ್ಣಿಗಾಗಿ ಮತ್ತು ಅಭಿವೃದ್ಧಿಗಾಗಿ ಕಮಲ ಅರಳಬೇಕಾದ ಅನಿವಾರ್ಯತೆಯಿದೆ ಎಂದರು. ಇದನ್ನೂ ಓದಿ: ಸುವರ್ಣ ಮಂಡ್ಯ ಪುಸ್ತಕದಲ್ಲಿ ಉರಿಗೌಡ, ನಂಜೇಗೌಡರ ಬಗ್ಗೆ ಉಲ್ಲೇಖ – ರಾಜಕೀಯ ವಾದಕ್ಕೆ ಪುಷ್ಟಿ
ನಾನು ನಿಮ್ಮಲ್ಲಿ ಮನವಿ ಮಾಡುತ್ತೇನೆ. ಮುಂದಿನ ಚುನಾವಣೆ (Election) ಕೇವಲ ಭಾರತೀಯ ಜನತಾ ಪಾರ್ಟಿಗೆ ಮಾತ್ರವಲ್ಲ. ಅದು ಕರ್ನಾಟಕದ ಪ್ರತಿಯೊಬ್ಬ ಜನತೆಯ ಭವಿಷ್ಯದ ಚುನಾವಣೆಯಾಗಿದೆ. ಅದನ್ನು ನಾವು ತಿಳಿದುಕೊಳ್ಳಬೇಕಿದೆ. ಕರ್ನಾಟಕದಲ್ಲಿ ಹೈವೇ, ಎಕ್ಸ್ಪ್ರೆಸ್‌ವೇ, ದೊಡ್ಡ ದೊಡ್ಡ ಚತುಷ್ಪಥ ರಸ್ತೆಗಳು ಆಗುತ್ತಿದೆಯೋ ಇಲ್ವೋ ಗೊತ್ತಿಲ್ಲ. ರೈಲ್ವೆಗಳ ಸಂಖ್ಯೆ ಹೆಚ್ಚಳವಾಗಿದೆಯೋ ಇಲ್ಲವೋ ಗೊತ್ತಿಲ್ಲ. ಹನ್ನೊಂದು ಏರ್‌ಪೋರ್ಟ್ ಜೊತೆಗೆ ಇಂಟರ್ನೆಟ್ ಹಳ್ಳಿ ಹಳ್ಳಿಗಳನ್ನು ತಲುಪಿದೆಯೋ ಇಲ್ವೋ ಗೊತ್ತಿಲ್ಲ. ಮೋದಿಯವರ (Narendra Modi) ಈ ಯೋಜನೆಯನ್ನು ಅನುಷ್ಠಾನಕ್ಕೆ ತರುವ ಕೆಲಸವನ್ನು ಯಡಿಯೂರಪ್ಪನವರು (B.S.Yediyurappa) ಮಾಡಿದರು. ಈಗ ಬೊಮ್ಮಾಯಿ (Basavaraj Bommai) ಅದನ್ನು ಮುಂದುವರೆಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯ ಪಾಕಿಸ್ತಾನ, ಅಫ್ಘಾನಿಸ್ತಾನದಲ್ಲಿ ಸ್ಪರ್ಧಿಸಿದ್ರೆ ಒಳ್ಳೆಯದು – ಅಶೋಕ್ ವ್ಯಂಗ್ಯ
ಇತ್ತೀಚಿಗೆ 3 ಈಶಾನ್ಯ ರಾಜ್ಯಗಳಲ್ಲಿ ಚುನಾವಣೆ ನಡೆಯಿತು. ನಾಗಾಲ್ಯಾಂಡ್, ತ್ರಿಪುರ ಮತ್ತು ಮೇಘಾಲಯ ಮೂರು ಕಡೆಗಳಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿದೆ. ಆದರೆ ಕಾಂಗ್ರೆಸ್ ಪಕ್ಷಕ್ಕೆ ತ್ರಿಪುರದಲ್ಲಿ ಮೂರು ಸೀಟ್, ಮೇಘಾಲಯದಲ್ಲಿ 5 ಸೀಟ್ ಮತ್ತು ನಾಗಾಲ್ಯಾಂಡ್‌ನಲ್ಲಿ ಶೂನ್ಯ ಸೀಟ್ ದೊರಕಿದೆ. ರಾಹುಲ್ ಗಾಂಧಿ (Rahul Gandhi) ಏನು ಹೇಳುತ್ತಾರೆ? ಅವರು ಭಾರತದಲ್ಲಿ ಹೇಳುವುದಿಲ್ಲ, ಬದಲಿಗೆ ಇಂಗ್ಲೆಂಡ್‌ನಲ್ಲಿ (England) ಹೇಳುತ್ತಾರೆ. ಅವರು ಇಂಗ್ಲೆಂಡ್‌ಗೆ ಹೋಗಿ ಪ್ರಜಾಪ್ರಭುತ್ವಕ್ಕೆ (Democracy) ಆಪತ್ತಿದೆ ಎಂದು ಹೇಳುತ್ತಾರೆ. ನೀವೇ ಹೇಳಿ ಪ್ರಜಾತಂತ್ರಕ್ಕೆ ಆಪತ್ತಿದೆಯಾ? ರಾಹುಲ್ ಗಾಂಧಿ ಭಾರತದ ಸಾರ್ವಭೌಮತ್ವವನ್ನು ಇಂಗ್ಲೆಂಡ್‌ನಲ್ಲಿ ಚಾಲೆಂಜ್ ಮಾಡಿದ್ದಾರೆ. ಅಮೆರಿಕ (America) ಮತ್ತು ಯೂರೋಪ್ (Europe) ದೇಶಗಳನ್ನು ಭಾರತದ ವಿರುದ್ಧ ಎತ್ತಿಕಟ್ಟುವ ಕೆಲಸವನ್ನು ರಾಹುಲ್ ಗಾಂಧಿ ಮಾಡಿದ್ದಾರೆ. ಹೀಗಾಗಿ ಚುನಾವಣೆಯಲ್ಲಿ ಅವರನ್ನು ಮನೆಗೆ ಕಳುಹಿಸುವ ಮೂಲಕ ಅವರಿಗೆ ತಕ್ಕ ಪಾಠ ಕಲಿಸಬೇಕಿದೆ ಎಂದು ಕಿಡಿ ಕಾರಿದರು. ಇದನ್ನೂ ಓದಿ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಅಸಲಿಮುಖ ಮತ್ತೊಮ್ಮೆ ಕಳಚಿ ಬಿದ್ದಿದೆ: ಅನಿತಾ ಕುಮಾರಸ್ವಾಮಿ ಕಿಡಿ
ಕಾಂಗ್ರೆಸ್ ಪಕ್ಷದವರು ಮೋದಿ ಮರ್ ಜಾ.. ಮರ್ ಜಾ ಎನ್ನುತ್ತಿದ್ದಾರೆ. ಆದರೆ ಜನರು ಮಾತ್ರ ಮೋದಿ ಮತ್ ಜಾ.. ಮತ್ ಜಾ ಎನ್ನುತ್ತಿದ್ದಾರೆ. ಕರ್ನಾಟಕ ಸದ್ಯ ಇನೋವೇಷನ್‌ನಲ್ಲಿ ಹಾಗೂ ಸ್ಟಾರ್ಟಪ್‌ನಲ್ಲಿ ನಂಬರ್ ಒನ್ ಇದೆ. ಇನ್ಮುಂದೆಯೂ ನಂಬರ್ ಒನ್ ಸ್ಥಾನದಲ್ಲಿ ಇರಬೇಕು ಎಂದರೆ ಕರ್ನಾಟಕದಲ್ಲಿ ಮತ್ತೆ ಕಮಲ ಅರಳಬೇಕು ಎಂದರು. ಇದನ್ನೂ ಓದಿ: ಮಿಸ್ಡ್‌ಕಾಲ್ ಕೊಟ್ಟು ಬಿಜೆಪಿ ಸದಸ್ಯತ್ವ ಪಡೆದಿದ್ದ ಸೈಲೆಂಟ್ ಸುನಿ – ಸದಸ್ಯತ್ವ ರದ್ದುಗೊಳಿಸಿದ ಪಕ್ಷ
ಬೆಂಗಳೂರು: ಮಂಡ್ಯ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಅವರನ್ನು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ (B.L Santhosh) ಹಾಡಿಹೊಗಳಿದ್ದಾರೆ.
ಮಂಡ್ಯದಲ್ಲಿ ದಶಪಥ ಸಮಾವೇಶ ಹಾಗೂ ಮೋದಿ ರೋಡ್ ಶೋ ಸಕ್ಸಸ್ ಹಿನ್ನೆಲೆಯಲ್ಲಿ ಮಂಡ್ಯ ಬಿಜೆಪಿ ಪದಾಧಿಕಾರಿಗಳಿಗೆ ಹಾಗೂ ಮಂಡ್ಯ ಬಿಜೆಪಿ ಕಾರ್ಯಕರ್ತರಿಗೆ ಬಿ.ಎಲ್ ಸಂತೋಷ್ ಪತ್ರ ಬರೆದಿದ್ದಾರೆ. ಈ ಮೂಲಕ ಎಲ್ಲರಿಗೂ ಅಭಿನಂದನೆ ಸಲ್ಲಿಸಿದ್ದಾರೆ.
ಮಂಡ್ಯದಲ್ಲಿ ನಡೆದ ಬೃಹತ್ ರೋಡ್ ಶೋ ಕಾರ್ಯಕ್ರಮದ ಸಂಪೂರ್ಣ ಯಶಸ್ಸು ಮಂಡ್ಯ ಜಿಲ್ಲೆಯ ಕಾರ್ಯಕರ್ತರಿಗೆ ಸಲ್ಲುತ್ತದೆ. ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳು ಮತ್ತು ಇತರ ಅಧಿಕಾರಿಗಳು ಹಗಲು ಇರುಳೆನ್ನದೆ ಶ್ರಮವಹಿಸಿ ಈ ಕಾರ್ಯಕ್ರಮವನ್ನು ಸಾಧ್ಯವಾಗಿಸಿದ್ದಾರೆ. ಇಂತಹ ಬೃಹತ್ ಕಾರ್ಯಕ್ರಮವನ್ನು ಆಯೋಜಿಸುವುದು ಸುಲಭದ ಮಾತೇನಲ್ಲ. 41 ವರ್ಷಗಳ ಬಳಿಕ ದೇಶದ ಪ್ರಧಾನಿಯೊಬ್ಬರು ಮಂಡ್ಯಕ್ಕೆ ಭೇಟಿ ನೀಡುವ ಅಪರೂಪದ ಸಂದರ್ಭ ಇದಾಗಿತ್ತು. ಜಿಲ್ಲೆಗಳಲ್ಲಿ ಬಿಜೆಪಿ ಕಾರ್ಯಕ್ರಮಗಳನ್ನು ಆಯೋಜಿಸುವುದು ಅಪರೂಪದ ವಿಷಯ. ಮಂಡ್ಯ ಬಿಜೆಪಿ ಘಟಕದ ಶಕ್ತಿ ಮತ್ತು ಅಲ್ಲಿಯ ಅವಕಾಶಗಳ ಬಗ್ಗೆ ಅನೇಕ ನಾಯಕರು ಸಂಶಯ ವ್ಯಕ್ತಪಡಿಸುತ್ತಾರೆ. ಬಹಳ ಅಪರೂಪವೇ ಎನ್ನುವಂತೆ ಬಿಜೆಪಿ ಕಛೇರಿಯ ಬಳಿ ನಾಯಕರ ಕಾರುಗಳು ನಿಲ್ಲುತ್ತವೆ ಎಂದಿದ್ದಾರೆ.
ಹೆಚ್ಚಾಗಿ ಎಲ್ಲರ ಗಮನ ಮೈಸೂರು – ಕೊಡಗು ಅಥವಾ ಬೆಂಗಳೂರಿನ ಇನ್ನೊಂದು ಭಾಗದ ಕಡೆಗೆ ಇರುತ್ತದೆ. ಈ ಬಾರಿಯೂ ನಾಯಕರ ಒತ್ತಾಸೆ ಮೈಸೂರು ಅಥವಾ ಕೆಂಗೇರಿ ಕಡೆಗಿತ್ತು. ಅದಲ್ಲದೆ ಎರಡು ತಿಂಗಳು ಹಿಂದೆಯಷ್ಟೇ ಮಂಡ್ಯದಲ್ಲಿ ಗೃಹಸಚಿವ ಅಮಿತ್ ಶಾ ಅವರ ಅದ್ಧೂರಿ ಕಾರ್ಯಕ್ರಮ ನಡೆದಿತ್ತು. ಕೆಲವು ದಿನಗಳ ಹಿಂದೆ ವಿಜಯ ಸಂಕಲ್ಪ ಯಾತ್ರೆಯು ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಹಾದುಹೋಗಿತ್ತು. ಆದರೆ ರಾಜ್ಯಪಕ್ಷದ ದೃಢನಿಲುವು, ಜಿಲ್ಲಾ ಘಟಕದ ದೃಢಸಂಕಲ್ಪವು ಈ ಕಾರ್ಯಕ್ರಮ ಮಂಡ್ಯದಲ್ಲಿಯೇ ನಡೆಯುವಂತೆ ಮಾಡಿತು. ಕಾರ್ಯಕ್ರಮಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ಬಿಜೆಪಿಗೆ ದೊರೆತ ಬೂಸ್ಟರ್ ಎಂದರೆ ಸಂಸದರಾದ ಸುಮಲತಾ ಅವರಿಂದ ದೊರೆತ ಬೆಂಬಲ. ಅವರು ಹೆಚ್ಚಿನ ಜನಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕರೆನೀಡಿದ್ದರು ಎಂದಿದ್ದಾರೆ. ಇದನ್ನೂ ಓದಿ: Bengaluru Mysuru Expressway- ಟೋಲ್ ಸಂಗ್ರಹ ಪ್ರಾರಂಭವಾದ ಮೊದಲ ದಿನವೇ ತಾಂತ್ರಿಕ ದೋಷ
ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರು ಮಂಡ್ಯದ ಜನಸಾಮಾನ್ಯರ ಮನ ಗೆದ್ದಿದ್ದಾರೆ. ಯೋಜನೆಗಳು ಜನರನ್ನು ತಲಪುವುದು ಎಂದಿಗೂ ಅರಿವಿಗೆ ಬಾರದೇ ಇರದು. ಕಾರ್ಯಕ್ರಮ ಮಾಡಲು ತೆಗೆದುಕೊಂಡ ಧೈರ್ಯವೂ ಸಾರ್ಥಕವೆನಿಸಿತು. ಇಂದು ಮಂಡ್ಯದ ಬಿಜೆಪಿಯಲ್ಲಿ ನಗುಮುಖಗಳು ಮಾತ್ರ ಇವೆ. ಈ ರೋಡ್ ಶೋ ಕರ್ನಾಟಕದ ವಿಧಾನಸಭಾ ಚುನಾವಣೆಗೆ ಹೊಸ ತಿರುವನ್ನು ನೀಡಿದೆ. ಮುಂಬರುವ ಚುನಾವಣೆಯಲ್ಲಿ ಮಂಡ್ಯದಲ್ಲಿ ಬಿಜೆಪಿ ಪ್ರಮುಖ ಶಕ್ತಿಯಾಗಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಮಾರ್ಗದರ್ಶನ ಉಲ್ಲೇಖನಾರ್ಹವಾದದ್ದು. ಬಿ.ಎಸ್. ಯಡಿಯೂರಪ್ಪನವರು ತಮ್ಮ ತವರು ಜಿಲ್ಲೆಯಾದ ಮಂಡ್ಯಕ್ಕೆ ಸದಾ ಮಾರ್ಗದರ್ಶಕರಾಗಿದ್ದಾರೆ. ಯೋಜನೆಯನ್ನು ಪೂರ್ಣಗೊಳಿಸುವಲ್ಲಿ ದೊಡ್ಡಪಾತ್ರವನ್ನು ವಹಿಸಿದ ಪ್ರತಾಪ್ ಸಿಂಹ ಅವರು ಯಶಸ್ಸಿಗೆ ಸಾಥ್ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಈ ಮೆಗಾ ಶೋಗಾಗಿ ಮಂಡ್ಯ ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತರನ್ನು ನನ್ನ ಹೃದಯದಾಳದಿಂದ ಅಭಿನಂದಿಸುತ್ತೇನೆ. ಮುಂದಿನ ದಿನಗಳು ಇನ್ನಷ್ಟು ತಾಕತ್ತಿನದ್ದಾಗಿರಲಿದೆ. ಇನ್ನು ಮುಂದೆ ಹೆಚ್ಚಿನ ನಿರೀಕ್ಷೆಯ ಜೊತೆಜೊತೆಗೆ ವಿರೋಧವೂ ಇರಲಿದೆ. ಈ ಹಿಂದೆ ಇದ್ದ ಸಂದೇಹಗಳೆಲ್ಲವೂ ತಪ್ಪು ಎಂದು ಸಾಬೀತಾಗಿರುವುದರಿಂದ ಆರಂಭಿಸಿರುವ ಓಟವನ್ನು ಯಶಸ್ವಿಯಾಗಿ ಮುಗಿಸುವುದು ನಮ್ಮ ಕರ್ತವ್ಯವಾಗಿದೆ. ಸಂಘಟನೆಗೆ ಹೊಸ ರಾಜ್ಯ, ಜಿಲ್ಲೆ, ವಿಧಾನಸಭಾ ಕ್ಷೇತ್ರಗಳ ಗೆಲುವು ಸದಾ ವಿಶೇಷ ವಿಷಯವೇ. ಮಂಡ್ಯವನ್ನು ಗೆಲ್ಲುವುದು ಕರ್ನಾಟಕ ಬಿಜೆಪಿ ಬಹಳ ವಿಶೇಷವಾದದ್ದು. ನಮ್ಮ ಸಮಯವು ಈಗ ಬಂದಿದೆ. ಒಂದೇ ಮನಸ್ಸಿನಿಂದ ಗುರಿಯನ್ನು ಸಾಧಿಸೋಣ. ಮಂಡ್ಯ ಬಿಜೆಪಿಗೆ ಸುಮಲತಾ ಬೂಸ್ಟರ್ ಎಂದು ಬಿ.ಎಲ್ ಸಂತೋಷ್ ಗುಣಗಾನ ಮಾಡಿದ್ದಾರೆ.
ಮಂಡ್ಯ: ನರೇಂದ್ರ ಮೋದಿ (Narendra Modi) ಅವರು ಪ್ರಧಾನಿಯಾದ ನಂತರ ಮೊದಲ ಬಾರಿಗೆ ಮಂಡ್ಯಕ್ಕೆ ಆಗಮಿಸಿದ್ದು, ಸಕ್ಕರೆ ನಾಡಿನಲ್ಲಿ ಭಾನುವಾರ ಭರ್ಜರಿ ರೋಡ್ ಶೋ (Road Show) ನಡೆಸಿದರು.
ಮೈಸೂರು – ಬೆಂಗಳೂರು ದಶಪಥ ಹೆದ್ದಾರಿಯನ್ನು (Mysuru Bengaluru Expressway) ಪ್ರಧಾನಿ ಮೋದಿ ಲೋಕಾರ್ಪಣೆಗೊಳಿಸಲಿದ್ದಾರೆ. ಇದಕ್ಕೂ ಮೊದಲು ಮಂಡ್ಯದ ಪ್ರವಾಸಿಮಂದಿರ ವೃತ್ತದಿಂದ ನಂದಾ ಸರ್ಕಲ್‍ವರೆಗೆ ರೋಡ್ ಶೋ ನಡೆದಿದ್ದು, ಈ ವೇಳೆ ಪ್ರಧಾನಿ ಮೋದಿ ಮೇಲೆ ಹೂವಿನ ಸುರಿಮಳೆಯಾಯಿತು. ಅಷ್ಟೇ ಅಲ್ಲದೇ ಸ್ವಾಗತಿಸಲು ಬಂದಿದ್ದ ಅಭಿಮಾನಿಗಳಿಗೆ ಪ್ರಧಾನಿ ಮೋದಿ ಅವರು ಹೂವುಗಳನ್ನು ಹಾಕಿ ಸಂಭ್ರಮಿಸಿದರು.
ಮಾರ್ಗಮಧ್ಯೆ ಕಾರು ನಿಲ್ಲಿಸಿ ಮೋದಿ ಜನರತ್ತ ಕೈಬೀಸಿದರು. 1.8 ಕಿ.ಮೀ. ದೂರ ಪ್ರಧಾನಮಂತ್ರಿ ನರೇಂದ್ರ ಮೋದಿ ರೋಡ್ ಶೋ ನಡೆಯಿತು. ಮಂಡ್ಯದಲ್ಲಿ (Mandya) ಮೋದಿ ಹವಾ ಜೋರಾಗಿದ್ದು, ಈ ವೇಳೆ ನೆರೆದಿದ್ದ ಜನರು ಮೋದಿ, ಮೋದಿ ಎಂದು ಹಷೋದ್ಘಾರದಿಂದ ಘೋಷಣೆ ಕೂಗಿದರು. ಈ ವೇಳೆ ಸಹಸ್ರಾರು ಜನರು ಸೇರಿದ್ದು, ಅಭಿಮಾನಿಗಳು ಮೋದಿಯನ್ನು ನೋಡಲು ಉತ್ಸುಕರಾಗಿದ್ದು ಕಂಡುಬಂತು.
ಮಂಡ್ಯ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಭಾನುವಾರ ಒಂದು ಮುಕ್ಕಾಲು ಕಿ.ಮೀ ರೋಡ್ ಶೋ (Road Show) ನಡೆಸಲಿದ್ದಾರೆ ಎಂದು ಸಚಿವ ಎಸ್. ಟಿ.ಸೋಮಶೇಖರ್ ಮತ್ತು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಅಂದು ಏನೇನು ಕಾರ್ಯಕ್ರಮ?
ಮಾರ್ಚ್ 12ರಂದು ಬೆಳಿಗ್ಗೆ ಮೈಸೂರು ವಿಮಾನನಿಲ್ದಾಣಕ್ಕೆ ಬರುವ ಪ್ರಧಾನಿಯವರು ಬಳಿಕ ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಪಿಇಎಸ್ ಕಾಲೇಜು ಆವರಣಕ್ಕೆ ಆಗಮಿಸಲಿದ್ದಾರೆ. ಐಬಿ ಸರ್ಕಲ್‍ನಿಂದ ನಂದಾ ಥಿಯೇಟರ್‌ವರೆಗೆ ಒಂದೂ ಮುಕ್ಕಾಲು ಕಿಮೀ ರೋಡ್ ಶೋ ಇರಲಿದೆ. ಬೆಂಗಳೂರು- ಮೈಸೂರು ಹೈವೇ ವೀಕ್ಷಣೆ ಬಳಿಕ ಉದ್ಘಾಟನೆಯಾಗಲಿದೆ.
ಗೆಜ್ಜಲಗೆರೆಯಲ್ಲಿ ಮಧ್ಯಾಹ್ನ 12:05ಕ್ಕೆ ಸಾರ್ವಜನಿಕ ಸಭೆ ನಡೆಯಲಿದೆ. ಫಲಾನುಭವಿಗಳ ಸಭೆಯನ್ನೂ ಆಯೋಜಿಸಲಾಗಿದೆ. ಇದೇ ವೇದಿಕೆಯಲ್ಲಿ ದಶಪಥ ಹೆದ್ದಾರಿ ಲೋಕಾರ್ಪಣೆ ನಡೆಯಲಿದೆ. ಮೈಸೂರು- ಕುಶಾಲನಗರದವರೆಗಿನ (Mysuru Kushalnagar) 3,530 ಕೋಟಿ ರೂ. ಕಾಮಗಾರಿ ವೆಚ್ಚದ 4 ಪಥದ ರಾಷ್ಟ್ರೀಯ ಹೆದ್ದಾರಿಯ ಭೂಮಿಪೂಜೆಯೂ ಇಲ್ಲಿ ನಡೆಯಲಿದೆ. ಇದನ್ನೂ ಓದಿ: ದಶಪಥ ಹೆದ್ದಾರಿಯ ಕ್ರೆಡಿಟ್ ರೇವಣ್ಣಗೆ ಸಲ್ಲಬೇಕು: ಸಿ.ಎಂ ಇಬ್ರಾಹಿಂ
ಮಂಡ್ಯ (Mandya) ನಗರಕ್ಕೆ ಕಾವೇರಿ ನೀರು ಪೂರೈಕೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಮಂಡ್ಯಕ್ಕೆ ತಾಯಿ ಮಗುವಿನ ಆಸ್ಪತ್ರೆಯನ್ನೂ ಕೊಟ್ಟಿದ್ದು, ವಿವಿಧ ಅಭಿವೃದ್ಧಿ ಕಾರ್ಯಗಳ ಕುರಿತು ಮಾತನಾಡಿ ಉದ್ಘಾಟನೆ ನೆರವೇರಿಸುತ್ತಾರೆ. ಅಲ್ಲಿಂದ ಮೈಸೂರು, ಬಳಿಕ ಹುಬ್ಬಳ್ಳಿಗೆ ತೆರಳುವರು ಎಸ್. ಟಿ.ಸೋಮಶೇಖರ್ ಮತ್ತು ಸಂಸದ ಪ್ರತಾಪ್ ಸಿಂಹ ತಿಳಿಸಿದರು.
ಸಚಿವ ಕೆ.ಸಿ.ನಾರಾಯಣಗೌಡ, ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಎಂ.ಜಿ. ಮಹೇಶ್, ಜಿಲ್ಲಾ ಅಧ್ಯಕ್ಷ ಸಿ.ಕೆ.ಉಮೇಶ್, ಮುಖಂಡರಾದ ಸಿದ್ದರಾಮಯ್ಯ, ಚಂದಗಾಲ ಶಿವಣ್ಣ ಮುಂತಾದವರು ಇದ್ದರು.
ಬೆಂಗಳೂರು: ಪಂಚರತ್ನ (Pancha Ratha) ರಥಯಾತ್ರೆಯ ಸಮಾರೋಪ ಕಾರ್ಯಕ್ರಮ ನಡೆಯುವ ಮೊದಲು 100 ಕಿ.ಮೀ ರೋಡ್ ಶೋ ನಡೆಸಲು ಜೆಡಿಎಸ್ (JDS) ಮುಂದಾಗಿದೆ.
ಈ ತಿಂಗಳ 26ರಂದು ಪಂಚರತ್ನ ರಥಯಾತ್ರೆಯ ಸಮಾರೋಪ ಸಮಾರಂಭ ಮೈಸೂರಿನಲ್ಲಿ (Mysuru) ನಡೆಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಅವರು ಹೇಳಿದರು.
ಪಕ್ಷದ ಕಚೇರಿಯಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇದು ನನ್ನ ರಾಜಕೀಯ ಜೀವನದ ಇತಿಹಾಸದಲ್ಲಿಯೇ ಮಹೋನ್ನತ ಸಮಾವೇಶ ಆಗಲಿದೆ. ಈವರೆಗೂ ಯಾರೂ ಮಾಡಿರದಂಥ ಸಮಾವೇಶ ಅದಾಗಿರುತ್ತದೆ ಎಂದರು. ಇದನ್ನೂ ಓದಿ: HDK ಕುಟುಂಬದಿಂದ ದೇವರ ಮೊರೆ – ಚಂಡಿಕಾ ಯಾಗ, ಮಹಾಮೃತ್ಯುಂಜಯ ಜಪ ಆಯೋಜನೆ
ಕುಂಬಳಗೋಡಿನಿಂದ ಪ್ರಾರಂಭವಾಗಿ ಮೈಸೂರಿನವರೆಗೆ ಸುಮಾರು 100 ಕೀ.ಮೀ ದೂರ ಬೃಹತ್ ರೋಡ್ ಶೋ ಮಾಡಲಾಗುವುದು. ಆ ರೋಡ್ ಶೋ ದಲ್ಲಿ ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರನ್ನು (HD Devegowda) ತೆರೆದ ವಾಹನದಲ್ಲಿ ಕರೆದುಕೊಂಡು ಹೋಗಲಾಗುವುದು. ಈ ಸಮಾವೇಶದಲ್ಲಿ ಹತ್ತು ಲಕ್ಷ ಜನ ಸೇರಲಿದ್ದಾರೆ. ಇದೊಂದು ಐತಿಹಾಸಿಕ ಸಮಾವೇಶ ಆಗಲಿದೆ ಎಂದು ಕುಮಾರಸ್ವಾಮಿ ಅವರು ನುಡಿದರು.